Friday, September 6, 2013

ಪ್ರೊ.. ಶ್ರೀನಿವಾಸ ರಿತ್ತಿ - ಇತಿಹಾಸದ ಕೊಂಡಿ

ಎಚ್‌ಶೇಷಗಿರಿರಾವ್




ಪ್ರೊ. ಶ್ರೀನಿವಾಸ ರಿತ್ತಿ.
ಭಾರತದಲ್ಲಿ ಐತಿಹಾಸಿಕ ಘಟನೆಗಳನ್ನು ದಾಖಲಿಸುವ ಪದ್ದತಿ ಹಿಂದೆ ಹೆಚ್ಚು ಪ್ರಚಲಿತವಾಗಿಲಿಲ್ಲ.ಮುಘಲರ ಕಾಲದಿಂದ ಚಾರಿತ್ರಿಕ ದಾಖಲೆಇಡುವುದು ಪ್ರಾರಂಭವಾಗಿ  ಇಂಗ್ಲಿಷರ ಆಳ್ವಿಕೆಯಲ್ಲೂ ಮುಂದುವರಿದವು. ಆದರೆ ಅವು ಬಹುತೇಕ ಆಳುವ ಅರಸರ ಮರ್ಜಿಗೆ  ಅನುಗುಣವಾದ ಇತಿಹಾಸ ರಚನೆಯಾಗಿವೆ.. ಅಲ್ಲದೆ ಭಾರತ ಒಂದು ಉಪಖಂಡ.ನೂರಾರು ರಾಜವಂಶಗಳು, ಸಹಸ್ರಾರು ಸಣ್ಣಪುಟ್ಟ ರಾಜ್ಯಗಳನ್ನು ಒಳಗೊಂಡ ಬೃಹತ್‌ಪ್ರದೇಶ. ಹೀಗಾಗಿ ಅಖಂಡ ಭಾರತದ ಚರಿತ್ರೆ ಎಂದರೆ ಹಲವಾರು ಐತಿಹಾಸಿ ಘಟನೆಗಳ ಸರಮಾಲೆ. . ಇದರಿಂದಾಗಿ ಇತಿಹಾಸ ಪುನಾರಚನೆಯು ಬಲು ಪ್ರಯಾಸದ ಕೆಲಸ. ಅದರಲ್ಲೂ ದಕ್ಷೀನ ಬಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಪ್ರಾಚೀನ ಇತಿಹಾಸದ ಪುನಾರಚನೆ ಎಂದರೆ ಅತಿ ಪ್ರಯಾಸದ ಕೆಲಸ.  ಅದಕ್ಕೆ ಮೂಲಭೂತ ಆಧಾರ ಎಂದರೆ ಎಂದರೆ ಆಗಿನ ಕಾಲದ ಶಿಲಾಶಾಸನಗಳು ಮತ್ತು ತಾಮ್ರಪಟಗಳು ತಕ್ಕ ಮಟ್ಟಿಗೆ ಹಸ್ತಪ್ರತಿಗಳು. ಅದೃಷ್ಟ ವಶಾತ್‌ ಕೆಲ ಪಾಶ್ಚ್ಯಾತ  ವಿದ್ವಾಂಸರು ಕಳೆದ ಶತಮಾನದ ಆದಿಯಿಂದಲೇ ಬ್ರಿಟಿಷರ ಆಡಳಿತವಿದ್ದಾಗಲೇ  ಪ್ರಾರಂಭವಾದ ಶಾಸನಗಳ ಶೋಧನೆ , ಅಧ್ಯಯನ ಮತ್ತು ಪುನರ್ವಿಮರ್ಶೆ ಈಗಲೂ ಮುಂದುವರಿದಿದೆ. ಈ ನಿಟ್ಟಿನಲ್ಲಿ ಹಲವು ವಿದ್ವಾಂಸರು ಶ್ರಮಿಸಿರುವರು. ಅವರಲ್ಲಿ ಇಂದೂ ನಮ್ಮೊಡನೆರುವ ಜಾಗತಿಕ ಖ್ಯಾತಿಯ  ವಿದ್ವಾಂಸ ಡಾ. ಶ್ರೀನಿವಾಸ ರಿತ್ತಿಯವರು ಪ್ರಮುಖರು.

ಶ್ರೀನಿವಾಸ ರಿತ್ತಿಯವರ ಜನನ ಹಿಂದಿನ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ. ವೈದಿಕಮನೆತನದ ಲ್ಲಿ ಜೂನ್‌ ೮, ೧೯೨೯ ರಲ್ಲಿ ಜನಿಸಿದರು. ತಂದೆ ಹನುಮಂತಾಚಾರ್ಯರು ವಕೀಲರು,  ತಾಯಿ ಭಾರತಿ ಸುಸಂಸ್ಕೃತರು. ಮನೆಯಿಂದ ಅನುಕೂಲಸ್ಥರು. ಅವರ ಪ್ರಾಥಮಿಕ  ಮತ್ತು ಮಾಧ್ಯಮಿಕ ಶಿಕ್ಷಣ ಹಾವೇರಿಯಲ್ಲಿಯೇ ಆಯಿತು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದರು ಅವರ ಅಧ್ಯಯನದ ವಿಷಯ ಸಂಸ್ಕೃತ ಮತ್ತು ಪ್ರಾಕೃತ.. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಮೊದಲ ತಂಡದ ಅಭ್ಯರ್ಥಿ. ಎಂ ಎ ಅನ್ನು ಪ್ರಥಮ ದರ್ಜೆಯಲ್ಲಿ ಪಾಸಾದರು. ಸಹಜವಾಗಿ ಕನ್ನಡ ಸಂಶೋಧನ ಸಂಸ್ಥೆಯ ವಿದ್ಯಾರ್ಥಿ ವೇತನ ಲಭ್ಯ ವಾಯಿತು.   ಡಾ.ಆರ್‌.ಎಸ್‌.ಪಂಚಮುಖಿಯವರ ಮಾರ್ಗದರ್ಶನದಲ್ಲಿ ಶಾಸನ, ಹಸ್ತಪ್ರತಿಯ ಅಧ್ಯಯನದಲ್ಲಿ ಪಳಗಿದರು. ಅದೇ ಅವಧಿಯಲ್ಲಿ ಅವರ ಮೊದಲ ಸಂಶೋಧನ ನ ಲೇಖನ ಪ್ರಕಟವಾಯಿತು.
ಅವರಿಗೆ ೧೯೫೩ ರಲ್ಲಿ ಬೊಂಬಾಯಿಯ ಕಾನೂನು ಇಲಾಖೆಯಲ್ಲಿ ಅನುವಾದಕನ ಕೆಲಸ ದೊರೆಯಿತು ಅಲ್ಲಿ ಗುಜರಾತಿ ಮತ್ತು ಮರಾಠಿ ಭಾಷೆಗಳ ಪರಿಚಯವಾಯಿತು. ಉದ್ಯೋಗದೊಂದಿಗೆ ಅಧ್ಯಯನವೂ ಸಾಗಿತ್ತು.ಅವರ ಲೇಖನಗಳನ್ನು ಗಮನಿಸಿದ ಡಾ. ಪಿ.ಬಿ ದೇಸಾಯಿಯವರು  ಉದಕಮಂಡಲದಲ್ಲಿ ಖಾಲಿಇದ್ದ ಭಾರತೀಯ ಪ್ರಾಚ್ಯ ಕಚೇರಿಯಲ್ಲಿ ಶಾಸನ ಶಾಸ್ತ್ರ  ಸಹಾಯಕನ ಹುದ್ದೆಗೆ ಅರ್ಜಿಹಾಕಲು ಸೂಚಿಸಿದರು. ಅಲ್ಲಿ ಆಯ್ಕೆಯಾದುದು ಅವರ ಜೀವನದಲ್ಲಿ ಮಹತ್ವ ತಿರುವು ಸಿಕ್ಕಿತು.ಅಲ್ಲಿ ಅವರಿಗೆ ಲಕ್ಷ್ಮಿನಾರಾಯಣರಾಯರು, ಡಿ.ಸಿ. ಸರ್ಕಾರ್, ಬಿ.ಸಿ.ಎಚ್ ಛಾಬ್ರಾ ಮೊದಲಾದ ವಿದ್ವಾಂಸರ ಮಾರ್ಗದರ್ಶನ ಲಭ್ಯವಾಯಿತು. ಜೊತೆಯಲ್ಲಿ ತೆಲುಗು ತಮಿಳು ಭಾಷೆಗಳ ಪರಿಚಯವೂ ಆಯಿತು. ಎಪಿಗ್ರಾಫಿಕಾ ಇಂಡಿಯಾ ಮೊದಲಾದ ವಿದ್ವತ್‌ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗ ತೊಡಗಿದವು. ಹಸ್ತಪ್ರತಿ ಸಂಪಾದನೆಯಲ್ಲಿ ಎತ್ತಿದ ಕೈ ಎಂದು ಹೆಸರು ಗಳಿಸಿದರು  ಉದಕಮಂಡಲದ ಭಾರತ  ಸರ್ಕಾರದ ಲಿಪಿಶಾಸ್ತ್ರಜ್ಞರ ಕಚೇರಿ.ಭಾರತದ ಪುರಾತತ್ತ್ವ ಇಲಾಖೆ ಯಲ್ಲಿ ೯ವರ್ಷ ಅಂದರೆ 1955 ರಿಂದ   1964  ವರೆಗೆ  ಸೇವೆ ಸಲ್ಲಿಸಿದರು ಡಾ.ಎಸ್‌.ಆರ್‌.ರಾವ್‌,ಡಾ. ಜಿಎಸ್‌ ಗಾಯಿ,ಡಾ.ಎಚ್‌.ಕೆ  ನರಸಿಂಹ ಸ್ವಾಮಿ ಹಿರಿಯ ಸಹೋದ್ಯೋಗಿಗಳು ಡಾ. ಕೆ.ವಿ. ರಮೇಶ್ ,ಡಾ.ಬಿ ಆರ್‌ ಗೋಪಾಲ್, ಡಾ.ಎಸ್‌ ಶಂಕರನಾರಾಯಣ  ಮತ್ತು ಡಾ, ಅಜಯ್‌ ಮಿತ್ರ ಸಹೋದ್ಯೋಗಿಗಳು
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ೧೯೬೪ ರಲ್ಲಿ ಸೇರಿದರು. ಆಗಲೇ ಡಾ. ರಿತ್ತಿಯವರು  ಡಾ. ಪಿ.ಬಿ ದೇಸಾಯಿಯವರ ಮಾರ್ಗದರ್ಶನದಲ್ಲಿ  “ಸೆವುಣರು’ ವಿಷಯದಲ್ಲಿ ಡಾಕ್ಟರೇಟ್‌ ಮಾಡಿ ಪದವಿ ಪಡೆದರು.   ಅವರು ಭಾರತ ಸರ್ಕಾರದ ಪ್ರಾಚ್ಯ ಇಲಾಖೆಯ ಸೇವೆಯಲ್ಲಿ ಶಾಸನ ಶಾಸ್ತ್ರ ಸಹಾಯಕರಾಗಿದ್ದಾಗ ಸೇವುಣರಿಗೆ ಸಂಬಂಧಿಸಿದ ಅನೇಕ ಅಪ್ರಕಟಿತ ಶಾನಸನಗಳ ಮೂಲಪಠ್ಯವನ್ನು ಪರಿಶೀಲಿಸುವ ಅವಕಾಶ ದೊರಕಿತ್ತು ಇದರಿಂದ ಅವರಿಗೆ ಅನೇಕ ಹೊಸ ವಿಷಯಗಳನ್ನು ತಮ್ಮ ಸಂಪ್ರಬಂಧದಲ್ಲಿ ಮಂಡಿಸುವ ವಿರಳ ಅವಕಾಶ ದೊರಕಿತು.. ಅದರಿಂದಾಗಿ ಅವರ ಸಂಪ್ರಬಂಧವು ಆದಿಮ ಮಧ್ಯಯುಗೀನ ದಕ್ಷಿಣ ಭಾರತದ  ಇತಿಹಾಸಕ್ಕೆ ಅಮೂಲ್ಯ ಸೇರ್ಪಡೆಯಾಯಿತು.   
ಅವರು   ಕ್ರಮವಾಗಿ ಪ್ರವಾಚಕರು/ ಪ್ರಾಧ್ಯಾಪಕರು-ವಿಭಾಗ ಮುಖ್ಯಸ್ಥರು ಆಗಿ ೨೫ ವರ್ಷ ಸೇವೆಸಲ್ಲಿಸಿ   ೧೯೮೯ ರಲ್ಲಿ ನಿವೃತ್ತರಾದರು.ಅವರ ಮಾರ್ಗದರ್ಶನದಲ್ಲಿ ಸುಮಾರು ದೇಶದ ವಿವಿಧ ಭಾಗದ ಇಪ್ಪತ್ತು ಜನ ವಿದ್ಯಾರ್ಥಿಗಳು ಪಿಎಚ್‌..ಡಿ ಪದವಿ ಪಡೆದಿದ್ದಾರೆ. ಅದರಲ್ಲಿ ಒಬ್ಬರು ಜಪಾನಿನವರು.
ಉದಕಮಂಡಲದಲ್ಲಿ ಉದ್ಯೋಗಕ್ಕೆ ಸೇರಿದಾಗಿನಿಂದ ಮಾಡಿದ  ಲಿಪಿಶಾಸ್ತ್ರದಲ್ಲಿ  ಕೃಷಿ. ಶಾಸನಗಳ ಪ್ರತಿ ಮಾಡುವುದು, ಸಂಗ್ರಹ , ಸಂಪಾದನೆ ಇದು ನಿವೃತ್ತಿಯ ನಂತರವೂ ಮುಂದುವರಿದಿದೆ.. ಶಾಸನಗಳ ಸಂಪಾದನೆ, ಅಧ್ಯಯನ, ವ್ಯಾಖ್ಯಾನ  ಮತ್ತು ಲೇಖನಗಳನ್ನು ಎಪಿಗ್ರಾಫಿಯಾ ಇಂಡಿಕಾ, ಜರ್ನಲ್‌ ಅಫ್‌ ಓರಿಯಂಟಲ್‌ ರಿಸರ್ಚ, ಮಿಥಿಕ್‌ಸೊಸೈಟಿ ಜರ್ನಲ್‌ , ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ, ಕನ್ನಡಸಾಹಿತ್ಯ ಪರಿಷತ್‌ ಪತ್ರಿಕೆ, ಪ್ರಬುದ್ಧ ಕರ್ನಾಟಕ, ಮತ್ತು ಅನೇಕ ಅಭಿನಂದನ  ಮತ್ತು ಸ್ಮರಣ ಗ್ರಂಥಗಳಲ್ಲಿ ಸತತ ಪ್ರಕಟವಾಗಿವೆ.
ನಾಂದೇಡ್‌ ಜಿಲ್ಲಾ ಶಾಸನಗಳು ,ಷೊಲ್ಲಾಪುರ ಜಿಲ್ಲಾ ಶಾಸನಗಳು, ಕೊಲ್ಲಾಪುರ ಜಿಲ್ಲಾ ಶಾಸನಗಳನ್ನು ಇತರೆ ವಿದ್ವಾಂಸರ ಸಹಕಾರದಿಂದ ಸಂಪಾದಿಸಿರುವರು
ಇತಿಹಾಸಮತ್ತು ಸಂಶೋಧನೆಗೆ ಸಂಬಂಧಿಸಿದ ಅಅನೇಕ ಸಂಸ್ಥೆಗಳಿಗೆ ಅವರ ಸೇವೆ ಸಂದಿದೆ. ಐ ಸಿ ಎಚ್‌ಆರ್ ಹೊಸ ದೆಹಲಿ , ಸದಸ್ಯರಾಗಿ ೮ ವರ್ಷ,ಕೆ;ಲಸ ಮಾಡಿರುವುರು.  (1980-87)  ವಿಜಯನಗರ ಶಾಸನ ಯೋಜನೆ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವರು.
ಇನ್ನೊಂದು ವೈಶಿಷ್ಟ್ಯವೆಂದರೆ ಸಹೋದ್ಯೋಗಿಗಳೊಡಗಿನ ಸುಮಧರ ಬಾಂಧವ್ಯ. ಒಟ್ಟಿಗೆ ಸೇರಿ ಕೆಲಸ ಮಾಡುವ ಗುಣ.
ಡಾ. ಪಿ.ಬಿ. ದೇಸಾಯಿ ಮತ್ತು ಡಾ. ಬಾರಾ ಗೋಪಾಲರ ಸಹಯೋಗದಲ್ಲಿ ರಚಿಸಿದ History of Karnataka ಒಂದು ಮಹತ್ವದ ಕೃತಿ. ಪ್ರಾಗ್ಯಾತಿಹಾಸ ಕಾಲದಿಂದ ಹಿಡಿದು ಕರ್ನಾಟಕದ ಏಕೀಕರಣದವರೆಗ ಇತಿಹಾಸ  ಅಡಕವಾಗಿದೆ.ಇದು ಕರ್ನಾಟಕ ಇತಿಹಾಸದ ಪ್ರೌಢವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಉತ್ತಮ ಆಕರ ಗ್ರಂಥವಾಗಿದೆ. ಈ ಮೂವರ ಸಹಯೋಗದ ಪ್ರಾಚೀನ ಭಾರತದ ಚರಿತ್ರೆಯೂ  ಬಹಳ ಉಪಯುಕ್ತ ಕೃತಿ..
ಇದೇರೀತಿಯಲ್ಲಿ ಅನೇಕ ಪ್ರಮುಖ ಸಂಪುಟಗಳ ಸಂಪಾದಕತ್ವ ವಹಿಸಿರುವುರು ಪ್ರೊಫೆಸರ್‌ ಪಿ.ಬಿ ದೇಸಾಯಿ ಅವರ ಸ್ಮರಣ ಸಂಪುಟ ಡಾ. ಬಾ.ರಾ ಗೋಪಾಲರ ಗೌರವ ಸಂಪುಟ. ಭಾರತೀಯ ಪುರಾಭಿಲೇಖ ಪರಿಷತ್ತಿನ ಹಲವು ವಾರ್ಷಿಕ ಸಂಪುಟಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಅದರಿಂದ ತುಂಬ ಮಹತ್ವದ ಸಂಶೋಧನ ಲೇಖನಗಳು ಬೆಳಕು ಕಂಡಿವೆ..
ಡಾ.ಬಾ ರಾ ಗೋಪಾಲ್‌ ಜೊತೆ ಕನ್ನಡ ಶಾಸನಗಳ ಮೂರು ಸಂಪುಟ ಪ್ರಕಟಣೆ, ಒಂದು ತೆಲುಗು ಸಂಪುಟ ಇದೇ ಯೋಜನೆಯ ಅಡಿಯಲ್ಲಿ ಸಂಸ್ಕೃತ ಶಾಸನಗಳ ಸಂಪುಟಗಳ ಸಂಪಾದನೆಯ ಕೆಲಸ ಸಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಮಹತ್ವದ ಯೋಜನೆಯಾದ  ಡಾ. ಬಿ.ಎಲ್‌.ರೈಸ್‌ರ ಎಪಿಇಗ್ರಾಫಿಯಾ ಕರ್ನಾಟಕದ ಪರಿಷ್ಕರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವರು ತಮ್ಮ ಪಾಲಿಗೆ ಬಂದ ತುಮುಕೂರು ಜಿಲ್ಲೆಯ ಶಾಸನಗಳನ್ನು ಯಶಸ್ವಿಯಾಗು ಪರಿಷ್ಕರಿಸಿರುವರು..ಇದರಲ್ಲಿ  18  ನೆಯ ಶತಮಾನದಿಂದ ಕನ್ನಡ ಮತ್ತು ಸಂಸ್ಕೃತದ 423  ಶಾಸನಗಳು  ಮುದ್ರಿತವಾಗುತ್ತಿವೆ. ದಾವಣಗೆರೆ ಜಿಲ್ಲೆಯ ಶಾಸನ ಸಂಪುಟದ ಕೆಲಸ ಸಾಗಿದೆ.
ಶ್ರೀನಿವಾಸ ರಿತ್ತಿಯವರ ಸಂಶೋಧನೆ ಲೇಖನಗಳ ಸಂಖ್ಯೆ ಅಪಾರ. ಅವರು ಇಂಗ್ಲಿಷ್‌ ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಬರೆದಿರುವರು.  ಇನ್ನು ವಿಷಯದ ಆಯ್ಕೆಯಂತೂ ಬಹಳ ವೈವಿದ್ಯಮಯ.ಶಿಲಾಶಾಸನಗಳ ಕನ್ನಡ ಕವಿಗಳು. ಕನ್ನಡ ಮತ್ತು ಸಂಸ್ಕೃತ ಕವಿಯತ್ರಿಗಳು,  ಪ್ರಾಚೀನ ಕರ್ನಾಟಕದ ಪ್ರಮುಖ ಪಟ್ಟಣಗಳು, ಶಾಸನಗಳಲ್ಲಿ ಬೌದ್ಧ ಧರ್ಮ, ಕನ್ನಡದಲ್ಲಿ ಸಂಶೋಧನೆಯ ಪ್ರಗತಿ, ಸಿಂಧೂಲಿಪಿಯ ಓದುವಿಕೆ. ಭಾರತೀಯ ರಾಜ ನೀತಿ ಹೀಗೆ ಅವರು ವಿಶ್ಲೇಷದ ವಿಷಯವೇ ಇಲ್ಲವೆನ್ನಬಹುದು. ಅವರ ಬರಹ ಬರಿ ಸಂಶೋಧನೆಗ ಮಾತ್ರ ಮೀಸಲಾಗಿಲ್ಲ. ಜನ ಸಾಮಾನ್ಯರಿಗೆ ಇತಿಹಾಸ ತಲುಪಿಸುವ ನಿಟ್ಟಿನಲ್ಲೂ ಅವರ ಪ್ರಯತ್ನ ಹಿರಿದು..ಆಡಳಿತ ಬಾಷೆಕನ್ನಡವಾಗಿಸುವ ಪ್ರಯತ್ನದಲ್ಲೂ ಅವರ ಕಾಣಿಕೆ ಸಂದಿದೆ. ಪ್ರಾಚೀನ ಭಾರತದ ಆಡಳಿ ಪಾರಿಭಾಷಿಕ ಕೋಶವನ್ನು  ಸಹವಿದ್ವಾಂಸರಳ ಸಹಕಾರದಿಂದ ಸಿದ್ಧಪಡಿಸಿರುವರು..ಇದಕ್ಕಾಗಿ ಲಭ್ಯವಿರುವ ಶಾಸನ ಮತ್ತು ಸಾಹಿತ್ಯ ಗ್ರಂಥಗಳನ್ನು ಬಳಸಿಕೊಂಡಿರುವರು.  ಪದಗಳ ವ್ಯುತ್ಪತ್ತಿ, ಪ್ರಯೋಗ ಕನ್ನಡ ಮತ್ತುಇಂಗ್ಕಿಷ್‌ಭಾಷೆಗಳಲ್ಲಿ ಅರ್ಥ  ಮತ್ತು ವಾಕ್ಯದಲ್ಲಿ ಪ್ರೋಗವನ್ನು ಒಳಗೊಂಡಿದೆ.ಇದು ಆಡಳಿತಕೋಶಮಾತ್ರ ಆಗಿರದೆ ಇತಿಹಾಸ ತಜ್ಞರು ಮತ್ತು ಸಂಶೋಧಕರಿಗೆ ಅತ್ಯಮೂಲ್ಯ ಆಕರ ಗ್ರಂಥವಾಗಿದೆ.ಬೃಹತ್‌ಯೋಜನೆಗಳನ್ನು ನಿರ್ವಹಿಸಲು ಅನೇಕ ಸಹವಿದ್ವಾಂಸರ ಸಹಯೋಗ ಪಡೆದಿರುವರು.ಅವರಲ್ಲಿ ಪ್ರಮುಖರು ಡಾ.ಜಿ.ಎಸ.ದೀಕ್ಷಿತ್‌, ಹುಚ್ಚುರಾವ್‌ಬೆಂಗೇರಿ, ಸದಾನಂದ ನಾಯಕ,  ಜಿಸಿ ಶೆಲ್ಕೆ,  ಆನಂದ ಕುಂಬಾರ, ಡಾ.ಅ. ಸುಂದರ, ಬಿ.ಕೆ ಗುರುರಾಜರಾವ್‌ ಎಸ್‌.ಎಲ್‌ ಶಾಂತಕುಮಾರಿ ಮೊದಲಾದ ವಿದ್ವಾಂಸರು ಸೇರಿರುವರು. ಅವರ ಈ ಸಾಮೂಹಿಕ ಪ್ರಜ್ಞೆಯ ಫಲವಾಗಿ ಅನೇಕ ವಿದ್ವಾಂಸರು ಬೆಳಕಿಗೆ ಬಂದರು ಮತ್ತು ಅನೇಕ ಬೃಹತ್‌ ಯೋಜನೆಗಳು ಸಫಲವಾದವು.
ಇದುವರೆಗೆ ಇಂಗ್ಲಿಷ್‌ನಲ್ಲಿ ೮ ಕೃತಿಗಳು ಮತ್ತು ಕನ್ನಡದಲ್ಲಿ ಐದು ಕೃತಿಗಳು ಬೆಳಕು ಕಂಡಿವೆ. ಶಾಸನಶಾಸ್ತ್ರ  ನಿರ್ದೇಶಕರ ಕಚೇರಿಯು ದಕ್ಷಿಣ ಭಾರತದ ಶಾಸನಗಳ ಸಂಪುಟಗಳ ಸರಣಿಯ ಕಾರ್ಯ ಒಪ್ಪಿಸಿರುವರು.
ಶ್ರೀ ಸತ್ಯ ಸಾಯಿ ವಿಶ್ವವಿದ್ಯಾಲುದ ಸಂದರ್ಶಕಪ್ರಾಧ್ಯಾಪಕರಾಗಿದ್ದರು ಇನ್ನೂ ಹಲವು ವಿಶ್ವ ವಿದ್ಯಾನಿಲಯಗಳಲ್ಲಿ  ವಿಶೇಷ ಆಹ್ವಾನಿತರು.. ರಾಷ್ಟ್ರ ಮಟ್ಟದ ಕಾರ್ಯಶಿಬಿರ, ಸೆಮಿನಾರುಗಳ ಮುಖ್ಯ ಉಪನ್ಯಾಸ ಮಾಡಿರುವರು
ಮೂರು ಸಲ ಜಪಾನಿಗೆ ಹೋಗಿ ಟೊಕಿಯೋ ವಿಶ್ವ ವಿದ್ಯಾಲಯದಲ್ಲಿ ವಿಚಾರ ಸಂಕಿರಣದಲ್ಲಿ ಭಾಗಿಯಾಗಿರುವರು.ಜರ್ಮನಿಗೂ ಭೇಟಿ ನೀಡಿರುವರು.
ಇಂಡಿಯನ್‌ ಹಿಸ್ಟರಿ ಕಾಂಗ್ರೆಸ್  ಲಿಪಿಶಾಸ್ತ್ರ ಮತ್ತು ನಾಣ್ಯಶಾಸ್ತ್ರ, ಸಮಾವೇಶ, ಸ್ಥಳನಾಮ ಸೊಸೈಟಿ, ಮರಾಠವಾಡ,   ಅದ್ಯಕ್ಷತೆ ಹಿಸ್ಟರಿ ಅಫ್‌ ಕಾಂಗ್ರೆಸ್‌ನಿಂದ  ತಾಮ್ರಪಟ ಪ್ರದಾನ  , ಕೊಂಕಣ ಇತಿಹಾಸ ಸಮಾವೇಶ ೨೦೧೩ ,ಕನ್ನಡ ಅಧ್ಯಯನ ಪೀಠ, ಎಸ್‌.ಆರ್‌.ರಾವ್ ಕುರಿತು  ಮಿಥಿಕ್‌ಸೊಸೈಟಿಯಲ್ಲಿ ೧೯೧೩ರಲ್ಲಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಯಶಸ್ವಿಯಾಗಿ.ನಡೆಸಿಕೊಟ್ಟರು.
ಇವರ ಸಾಧನೆ ಗುರುತಿಸಿ ಬಂದ ಪ್ರಶಸ್ತಿಗಳು ಹಲವು: ಚಿದಾನಂದ ಪ್ರಶಸ್ತಿ, ಬಿ.ಆರ್‌ಗೋಪಾಲ್‌ ಪ್ರಶಸ್ತಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ಡಿ ಲಿಟ್ , ರಾಜ್ಯ ಸರ್ಕಾರದ  ಸುವರ್ಣ ಕರ್ನಾಟಕ ಪ್ರಶಸ್ತಿ, ಭಾರತ ಪ್ರಾಚ್ಯ ಇಲಾಖೆಯ ಪ್ರಶಸ್ತಿ ಹೀಗೆ ೨೦೦೧ ರಿಂದ ಈವರಗೆ ಸುಮಾರು ವಿವಿಧ ಸಂಘ ಸಂಸ್ಥೆಗಳಿಂದ  ಡಜನ್‌ಗೂ ಹೆಚ್ಚು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂರು ಸಲ ಜಪಾನ್‌ನ ಟೊಕಿಯೋವಿಶ್ವ ವಿದ್ಯಾಲಯ ಮತ್ತು ಒಂದು ಸಾರಿ ಪೂರ್ವ, ಜರ್ಮನಿಗಳಲ್ಲಿ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ತಮ್ಮ ವಿಚಾರ ಮಂಡಿಸಿರವರು. ಅವರಿಗೆ ೨೦೧೨ ರಲ್ಲಿ ಅಭಿನಂದನ ಗ್ರಂಥ ಸಮರ್ಪಿಸಲಾಗಿದೆ.
ಅದೂ ಅಲ್ಲದೆ ಅವರು ಸಂಶೋಧನಾತ್ಮಕ ಕೃತಿಗಳನ್ನು ಉತ್ತೇಜಿಸಲು ತಮ್ಮದೇ ಆದ “ಶ್ರೀ ಹರಿ ಪ್ರಕಾಶನವನ್ನು ಪ್ರಾಂಭಿಸಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ,  ವೃತ್ತಿಯಿಂದ ನಿವೃತ್ತರಾದರೂ ತಮ್ಮ ಸಂಶೋಧನೆಯ ಕೆಲಸ ಮುಂದುವರಿಸಿರುವರು.
ಇತಿಹಾಸ ಮತ್ತು ಸಂಶೋಧನೆಯ ಎಲ್ಲ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಅವರ ಸಹಯೋಗ, ಸಹಕಾರ ಮತ್ತು ಮಾರ್ಗದರ್ಶನ ನೀಡಿ ಯುವಪೀಳಿಗೆಯ ವಿದ್ವಾಂಸರಿಗೆ ದಾರಿ ತೋರುತ್ತಿರುವರು.  ತಾವು ಬೆಳಗಿಸಿದ ಜ್ನಾನಜ್ಯೋತಿಯು ಮುಂದೂ ಪ್ರಖರವಾಗಿ ಬೆಳಗಲು  ಕಾರಣರಾಗಿರುವುರು.ಅವರ ಈ ಕಾರ್ಯಕ್ಕೆ ಇತ್ತೀಚೆಗೆ ಗೋವಿಂದಪೈ ಸ್ಮಾರಕ
 ಪ್ರಶಸ್ತಿಯು  ಸಂದಿದೆ.


.

.


No comments:

Post a Comment