Wednesday, July 31, 2013

ಫಾವಗಡ ತಾಲೂಕಿನ ಪ್ರಾಗೈತಿಹಾಸಿಕ ನೆಲೆಗಳು

 ¥ÁªÀUÀqÀ vÁ®ÆQ£À°è EwÛZÉUÉ zÉÆgÉvÀ PÉ®ªÀÅ ¥ÁæUÉÊwºÁ¹PÀ £É¯ÉUÀ¼ÀÄ
   v

ತುಮಕೂರು ಜಿಲ್ಲೆಯಲ್ಲಿ ಆನಾದಿ ಕಾಲದಿಂದಲೂ ಮಾನವನ ಚಟುವಟಿಕೆಗಳು ನಡೆಯುತ್ತಿರುವುದನ್ನು ಇಲ್ಲಿ ದೊರೆತಿರುವ ಅವಶೇಷಗಳಿಂದ ಗುರುತಿಸಬಹುದಾಗಿದೆ. ಈ ಪರಿಸರದಲ್ಲಿ ಪ್ರಾಗಿತಿಹಾಸ ಮಾನವನ ವಿಕಾಸವನ್ನು ತಿಳಿಯಲು ಆತ ಬಳಿಸಿ ಬಿಟ್ಟುಹೊದ ಭೌತಿಕ ವಸ್ತುಗಳನ್ನು ವಿಶ್ಲೇಷಿಸಿದಾಗ ಮಾತ್ರ ಆಕಾಲದ ಆದಿಮ ಸಂಸ್ಕೃತಿ ಹೇಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.
   ಪಾವಗಡ ತಾಲೂಕಿನಲ್ಲಿ ಈಗಾಗಲೇ ಕೆಲವು ಪ್ರಾಗಿತಿಹಾಸ ನೆಲೆಗಳನ್ನು ಪತ್ತೆಮಾಡಲಾಗಿದ್ದು, ಪ್ರಮುಖವಾಗಿ ಯಲ್ಲಪ್ಪನಾಯಕನಹಳ್ಳಿಯಲ್ಲಿ ಆದಿ ಹಳೆಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮಶಿಲಾಯುಗ, ಬೂದಿಬೆಟ್ಟದಲ್ಲಿ ನವಶಿಲಾಯುಗ, ಕಣಿಕಲಬಂಡ್ಡೆಯಲ್ಲಿ ಬೃಹತ್‌ಶಿಲಾಯುಗ, ಪಾವಗಡದಲ್ಲಿ ಇತಿಹಾಸ ಆರಂಭ ಕಾಲವೆಂದು ಹಲವು ನೆಲೆಗಳನ್ನು ಪತ್ತೆಮಾಡಲಾಗಿದೆ. ನಾನು ಕ್ಷೇತ್ರಕಾರ್ಯ ಕೈಗೊಂಡಾಗ ಕನ್ನಮೇಡಿ ಮತ್ತು ನಲಿಗಾನಹಳ್ಳಿಯಲ್ಲಿ ಪ್ರಾಗಿತಿಹಾಸದ ಕುರುಹುಗಳು ಕಂಡುಬಂದಿವೆ.
ಕನ್ನಮೇಡಿ
   ಇದು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಹಿಂದೆ ಈ ಗ್ರಾಮದಲ್ಲಿ ಗೊಲ್ಲ ಜನಾಂಗವು ಚಿನ್ನದ ಹಿಡಿಕೆಯುಳ್ಳ ನೊಗದೊಂದಿಗೆ ಮಡಿಕೆ ಹೊಡೆಯುತ್ತಿದ್ದರಂತೆ, ಒಮ್ಮೆ ಇವರಿಗೆ ದಣಿವಾದಾಗ ವಿಶ್ರಾಂತಿ ಪಡೆಯಲು ಹೋದಾಗ ಪಾಲುಕುಂಟೆ ಕಳ್ಳರು ಚಿನ್ನದ ಹಿಡಿಕೆಯುಳ್ಳ ಮಡಿಕೆಯನ್ನು ಕನ್ನ ಮಾಡಿದ್ದರಿಂದ, ಕನ್ನವಾದ ಮೇಡಿ ಕನ್ನಮೇಡಿ ಎಂದಾಗಿದೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದಿಗೂ ಇಲ್ಲಿಯವರ ಮೂಲ ಕಸುಬಾಗಿರುವ ಕೃಷಿ ಮತ್ತು ಪಶುಪಾಲನೆಯು ಪ್ರಾಗಿತಿಹಾಸ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿತ್ತೆಂದು, ಈ ಗ್ರಾಮದ ವೆಂಕಾವದೂತ ಗುಹೆಯ ಬಳಿಯಿರುವ ನವಶಿಲಾಯುಗ ಮತ್ತು ಬೃಹತ್‌ಶಿಲಾಯುಗದ ಕೆಂಪು ಮತ್ತು ಬಿಳಿ ಬಣ್ಣದ ಗೀರುಚಿತ್ರಗಳಿಂದ ತಿಳಿಯಬಹುದಾಗಿದೆ. ಈ ಗೀರುಚಿತ್ರಗಳು ೪.೯೦ಮೀ. ಉದ್ದ ೨.೫೦ಮೀ. ಅಗಲವಿರುವ ಬೃಹತ್ ಹೆಬ್ಬಂಡೆಯಲ್ಲಿ ಹರಡಿಕೊಂಡಿವೆ. ಇದರಲ್ಲಿ ಗೂಳಿ, ಜಿಂಕೆ, ಕಾಡುಹಂದಿ, ಮನುಷ್ಯ ಕೋಲು ಹಿಡಿದು ನಿಂತಿರುವ, ಕೋತಿ ಚೆಳು, ನೃತ್ಯ ಮಾಡುತ್ತಿರುವ ವ್ಯಕ್ತಿ ಮೊದಲಾದ ಚಿತ್ರಗಳಿವೆ. ಹಾಗೆಯೇ ಈ ಗುಹೆಯ ಬಳಿ ಬೇಡರ ಕಣ್ಣಪ್ಪ ಮತ್ತು ದುರ್ಗಮ್ಮ ದೇವಾಲಯಗಳಿದ್ದು, ಇವುಗಳಲ್ಲಿ ನವಶಿಲಾಯುಗದ ಕೈಗೊಡಲಿಗಳನ್ನು ಪೂಜೆಗೈಯ್ಯುತ್ತಿರುವುದು ಇಂದಿಗೂ ಪ್ರಾಗಿತಿಹಾಸ ಕಾಲದ ಸಂಸ್ಕೃತಿಯ ಜೀವಂತಿಕೆಯನ್ನು ತೋರ್ಪಡಿಸುತ್ತದೆ. ಈ ಗುಹೆಯ ಪಶ್ಚಿಮಕ್ಕೆ ನವಶಿಲಾಯುಗದ ಬೂದಿ ದಿನ್ನೆಯಿದ್ದು, ಇಲ್ಲಿ ನವಶಿಲಾಯುಗದ ಬೂದು, ಚಾಕೊಲೇಟ್ ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕೈಗೊಡಲಿ, ಕವಣೆಕಲ್ಲು ಮೊದಲಾದ ಉಪಕರಣಗಳು, ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಯ ಅವಶೇಷಗಳಿವೆ.
ನಲಿಗಾನಹಳ್ಳಿ
   ಈ ಗ್ರಾಮ ತಾಲೂಕು ಕೇಂದ್ರದಿಂದ ಪೂರ್ವಕ್ಕೆ ೬ ಕಿ.ಮೀ. ದೂರದಲ್ಲಿದ್ದು. ಹಿಂದೆ ಈ ಗ್ರಾಮವನ್ನು ಸಂಕಾಪುರವೆಂದು ಕರೆಯುತ್ತಿದ್ದರಂತೆ. ಗ್ರಾಮದ ಈಶನ್ಯಕ್ಕೆ ಭತ್ತದಗುಂಡು ಎಂಬ ಹೆಬ್ಬಂಡೆಯಲ್ಲಿ ನವಶಿಲಾಯುಗದ ಕೈಗೊಡಲಿ, ಕವಣೆಕಲ್ಲು, ಪೌಂಡರ‍್ಸ್, ಸ್ಕ್ರಾಪರ್ ಮೊದಲಾದ ಉಪಕರಣಗಳು ಹಾಗೂ ಬೃಹತ್‌ಶಿಲಾಯುಗದ ಸ್ವಸ್ತಿಕ್ (೨.೭೦ಮೀ.=೨.೦೫ಮೀ.ವ್ಯಾಸ), ವೃತ್ತಾಕಾರ(೬ಮೀ.=೬ಮೀ.ವ್ಯಾಸ), ಚಪ್ಪಟೆಯಾಕಾರದ ಕಲ್ಲುಬಂಡೆ(೪ಮೀ.=೪ಮೀ.ವ್ಯಾಸ), ನಿಲುವುಗಲ್ಲು (೪ಮೀ.ಉದ್ದ) ಎಂಬ ನಾಲ್ಕು ಮಾದರಿಯ ಸಮಾಧಿಗಳಿರುವುದು ವಿಶೇಷವಗಿದ್ದು. ಪಾವಗಡ ತಾಲೂಕಿನಲ್ಲಿ ಈ ಮಾದರಿಯ ಸಮಾಧಿಗಳು ಮತ್ತೆಲ್ಲೂ ಕಂಡುಬರದಿರುವುದು ಈ ಪ್ರದೇಶದಲ್ಲಿನ ಬೃಹತ್‌ಶಿಲಾಯುಗದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರ್ಪಡಿಸುತ್ತದೆ. ಈ ಸಮಾಧಿಗಳ ಬಳಿ ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಹಾಗೂ ಆರಂಭ ಇತಿಹಾಸ ಕಾಲದ ನಯಗೊಳಿಸಿದ ಕೆಂಪು ಬಣ್ಣದ ಮೃತ್‌ಪಾತ್ರೆಗಳ ಅವಶೇಷಗಳು ದೊರೆಯುತ್ತವೆ.

    ಕನ್ನಮೇಡಿ ನವಶಿಲಾಯುಗದ ಕೈಗೊಡಲಿ

                          ಕನ್ನಮೇಡಿಗೀರುಚಿತ್ರಗಳು  

(೪ಮೀ.=೪ಮೀ. ವ್ಯಾಸ)  

ನಲಿಗಾನಹಳ್ಳಿ ಚಪ್ಪಟೆಯಾಕಾರದ ಕಲ್ಲುಬಂಡೆ ಸಮಾಧಿ

ರವೀಶ್ ಜಿ.ಎನ್.
ಗುಂಡಾರ‍್ಲಹಳ್ಳಿ, ಬ್ಯಾಡನೂರು ( ಪೊಸ್ಟ್.),
ಪಾವಗಡ (ತಾಲೂಕು),
ತುಮಕೂರು (ಜಿಲ್ಲೆ) - ೬೫೧೨೦೨
ಪೋನ್ ನಂಬರ್ : ೯೭೪೧೯೪೧೭೧೪

ಇಮೇಲ್: ravishsurya@gmail.com

ಶ್ರೀಕೃಷ್ಣದೇವರಾಯನ ಪಟ್ಟದ ರಾಣಿಯರು-Dr. Gopalkrisnarao‌

ಶ್ರೀ ಕೃಷ್ಣ ದೇವರಾಯನ ರಾಣಿಯರ ಕುರಿತು ಹೊಸ ಬೆಳಕು

    ಚಕ್ರವರ್ತಿ ಕೃಷ್ಣ ದೇವರಾಯ ಮತ್ತು ಅವನ ಸಾಮ್ರಾಜ್ಯ ಕುರಿತಾದ ಸಂಶೋಧನೆಯಲ್ಲಿ ಅವನ ವೈಯುಕ್ತಿಕ  ವಿವರಗಳು ಹಿನ್ನೆಲೆಗೆ ಸರಿದಿವೆ. ಆದರೂ ಅವು ಮುಖ್ಯವಾಗಿವೆ.. ಈ ಲೇಖನದಲ್ಲಿ ಸಾಕಷ್ಟು ಗಮನ ಹರಿದಿಲ್ಲದ ಮತ್ತು ಸೂಕ್ತವಾಗಿ ವ್ಯಾಖ್ಯಾನವಾಗಿಲ್ಲದ ಅವನ ರಾಣಿಯರ ಕುರಿತು  ಆ ಇತಿಹಾಸ ಪರಿಷ್ಕರಿಸಿ  ಅದರ ಮೇಲೆ ಹೊಸ  ಸಂಶೋಧನೆಗಳ ಬೆಳಕಿನಲ್ಲಿ ಹೊಸ ಅಂಶಗಳನ್ನು ಗಮನಿಸಬೇಕಿದೆ.   ಮೊದಲು ರಾಯನು ಶ್ರೀರಂಗಪಟ್ಟಣದ ರಾಜಕುಮಾರಿಯನ್ನು ಮದುವೆಯಾದ     ಆಸಕ್ತಿದಾಯಕ ಘಟನೆ ಪರಿಶೀಲಿಸೋಣ..

                           ವಿಜಯ ನಗರ ಇತಿಹಾಸಕಾರ ಪ್ರಕಾರ ಸಾಮಾನ್ಯವಾಗಿ ರಾಯನು ಉಮ್ಮತ್ತೂರನ್ನು ಜಯಿಸಿ ಅವರ ಶರಣಾಗತಿಯನ್ನು  ಒಪ್ಪಿ ವೀರಪ್ಪಒಡೆಯರ ಪುತ್ರಿಯನ್ನು  ಮದುವೆಯಾದ.ನಂತರ ಕೆಲ ದಿನಗಳ ತರುವಾಯ ಇನ್ನೊಬ್ಬ ಮಗಳನ್ನೂ ಮದುವೆಯಾದನು. ನೂನಿಜ್‌ನು  ಕುಮಾರವೀರಯ್ಯ  ಅಥವ ವೀರೊಪ್ಪೊಡೆಯನು ರಾಯನ ಮಾವ ಎಂದು ಬರೆದಿರುವನು. ಇಬ್ಬರು ಪುತ್ರಿಯರ ಹೆಸರುಗಳನ್ನು  ಎಲ್ಲಿಯೂ ಬರೆದಿಲ್ಲ.  ಆದರೆ ತಿರುಮಲಾದೇವಿಯು ವೀರಪ್ಪೊಡೆಯನ ದೊಡ್ಡ ಮಗಳು ಎಂದು ಸರಿಯಾಗಿಯೇ ಅಂದುಕೊಳ್ಳಲಾಗಿದೆ ಮತ್ತು ರಾಯನನ್ನು ಮದುವೆಯಾದ ಚಿಕ್ಕ ಮಗಳ ಹೆಸರು ಎಲ್ಲೂ ಈ ತನಕ ಗೊತ್ತಾಗಿಲ್ಲ.
          ಪಯಾಸ್‌  ಹೇಳುವಂತೆ  ರಾಜನಿಗೆ ಮೂವರು ಪಟ್ಟದರಾಣಿಯರು ಇದ್ದರು. ಶಾಸನಗಳು ಯಾವಾಗಲೂ ಇಬ್ಬರ ಹೆಸರನ್ನು ಮಾತ್ರ ದಾಖಲಿಸುತ್ತವೆ.. ಸಾಹಿತ್ಯ ಕೃತಿಗಳು ಇನ್ನೆರಡು ಹೆಸರು ಹೇಳುತ್ತವೆ. ಆದರೆ ಅದರಲ್ಲಿ  ಗೊಂದಲವಿದೆ.ಆದರೆ ಸಾಮಾನ್ಯವಾಗಿ  ಮೂವರು ಪಟ್ಟದ ರಾಣಿಯರು ಇದ್ದರು ಎಂಬ ಅಂಶ ಖಚಿತವಾಗಿದೆ. : , ಶಾಸನಗಳಲ್ಲಿರುವ  ತಿರುಮಲದೇವಿ ಮತ್ತು ಚಿನ್ನಾದೇವಿ  ಮತ್ತು ಪಯಾಸ್‌ ತಿಳಿಸಿರುವ ಕಳಿಂಗ ರಾಜಕುಮಾರಿ  ಜಗನ್ಮೋಹಿನಿ , ಮೂವರು ಪಟ್ಟದರಾಣಿಯರು ಎಂದುಒಪ್ಪಲಾಗಿದೆ..ಇಬ್ಬರು ರಾಜಕುಮಾರು ಅಲ್ಲದೆ ,ಚಿನ್ನಾದೇವಿಯು,  ನೂನಿಜ್‌ನು ಧೃಡಪಡಿಸಿರುವಂತೆ ಆಸ್ಥಾನ ನರ್ತಕಿ ಅಥವ ದೇವದಾಸಿ  , ಅರಸನಿಗೆ ಅವಳ ಮೇಲೆ ಅಪಾರ ಪ್ರೇಮವಿದ್ದುದರಿಂದ ಅವಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮದುವೆಯಾದನು. ನಾವು ವಿಜಯನಗರ ಇತಿಹಾಸಕಾರರು ಶತಮಾನಗಳಿಂದ ರಾಯನು ಸಾಮಾನ್ಯ ನರ್ತಕಿಯನ್ನು ಮದುವೆಯಾಗಿ ತನ್ನ ಪಟ್ಟದ ರಾಣಿಯನ್ನಾಗಿ ಮಾಡಿದ, ಅವಳನ್ನು ರಾಜವಂಶದ ಇತರ ರಾಣಿಯರೊಂದಿಗೆ ಸಮನಾಗಿ ಪರಿಗಣಿಸಿದ  ಉದಾರ ಹೃದಯಿ ಎಂದು ಹೊಗಳಿಕೆಯ ಮಾತುಗಳನ್ನಾಡುತ್ತೇವೆ. ಆದರೆ ಚಿನ್ನಾದೇವಿ ನಿಜವಾಗಿಯೂ ದೇವ ದಾಸಿಯೇ?    ಅಂದಿನ ೧೬ನೆಯ ಸಂಪ್ರದಾಯಿಕ ಸಮಾಜವು ದೇವದಾಸಿಯನ್ನು  ತಮ್ಮ ರಾಣಿಯಾಗಿ ಒಪ್ಪಿಕೊಂಡಿತೇ ಅಥವ ಇಬ್ಬರು ಪಟ್ಟದ ರಾಣಿಯರು ಪವಿತ್ರ ಸಿಂಹಾಸನವನ್ನು ಅರಸನೊಡನೆ ಅಲಂಕರಿಸಲು ಹಂಚಿಕೊಂಡರೆ ? ಎಂಬ ಪ್ರಶ್ನೆಗಳಿಗೆ ಇತಿಹಾಸಕಾರು  ಸಾಧ್ಯತೆ ಇಲ್ಲ ಎಂದು ಅಭಿಪ್ರಾಯ ಪಡುವರು.   ಕೆಳಗಿನ ವಾಸ್ತವಾಂಶಗಳನ್ನು ದಯವಿಟ್ಟು ಗಮನಿಸಿ.
ಪಯಾಸ್‌ ಹೇಳುವನು ,”....ಅರಸನಿಗೆ ಮೂವರು ಪಟ್ಟದ ರಾಣಿಯರಿದ್ದರು, ಒಬ್ಬಳು ಒರಿಸ್ಸಾದ ರಾಜಕುವರಿ ಇತರರು ಶ್ರೀರಂಗಪಟ್ಟಣದ ಅರಸನ ಮಕ್ಕಳು ಮತ್ತು ಒಬ್ಬಳು ರಾಜನರ್ತಕಿ.ಶ್ರೀರಂಗಪಟ್ಟಣದ ವಿಷಯದಲ್ಲಿ ಬಹುವಚನ ಬಳಸಿರುವುದು ಸ್ಪಷ್ಠವಾಗಿ ಪಟ್ಟದ ರಾಣಿಯರಲ್ಲಿ ಇಬ್ಬರು ಶ್ರೀರಂಗ ಪಟ್ಟಣದ ರಾಜಕುವರಿಯರು   ಮೂರನೆಯವಳು ಒರಿಸ್ಸಾದ ರಾಜಕುವರಿಎಂದು ಸೂಚಿಸುತ್ತದೆ    ಪಯಾಸ್‌ನ ಪ್ರಕಾರ ಹೆಸರು ಹೇಳದ ನಾಲ್ಕನೆಯವಳು ರಾಜನರ್ತಕಿ ಅರಮನೆಯಲ್ಲಿದ್ದಳು ,ಆದರೆ ಅವಳು ಪಟ್ಟದ ರಾಣಿಯಲ್ಲ ನಮಗೆ  ಖಚಿತವಾಗಿ ಅನೇಕ ಶಾಸನಗಳು, ಸಾಹಿತ್ಯ ಕೃತಿಗಳು ಮತ್ತು ಪ್ರತಿಮೆಗಳಿಂದ  ರಾಯನ ಪಟ್ಟಮಹಿಷಿಯರು ತಿರುಮಲಾದೇವಿ, ಚಿನ್ನಾದೇವಿ ಮತ್ತು ಪಯಸ್‌ನ ಮಾತಿನಂತೆ ಮತ್ತು ಸಾಮಾನ್ಯ ತರ್ಕದಂತೆ ಕಳಿಂಗದ ರಾಜಕುವರಿ ಜಗನ್ಮೋಹಿನಿ ಮೂರನೆಯ ಪಟ್ಟದ ರಾಣಿ. ಆಗ ಈ ರಾಜನರ್ತಕಿಯು ಅರಸನ ಅಂತಃಪುರದಲ್ಲಿನ ನಾಲ್ಕನೆಯ ರಾಣಿ. ಹಾಗಿದ್ದರೆ ಚಿನ್ನಾದೇವಿಯು ಶ್ರೀರಂಗ ಪಟ್ಟಣದ ರಾಜಕುಮಾರಿ ಮತ್ತು ಅವಳು ರಾಜನರ್ತಕಿ ಅಲ್ಲವೇ? ನ್ಯೂಯಿಜ್‌ನು ಚಿನ್ನಾದೇವಿಯು ರಾಜನರ್ತಕಿ ಎಂದು ಹೇಳಿರುವುದು ತಪ್ಪೇ? ಈಗ ಅದು ಸತ್ಯ ಎನಿಸುವುದು. ಕಾರಣ ಈಗ ನಮಗೆ  ದೊರಕಿರುವ. ಪ್ರಮುಖ ಆಧಾರದಿಂದ  ಅದು ನಿಜ ಎನಿಸಿದೆ.
                        ಹಂಪೆ ವಿಶ್ವ ವಿದ್ಯಾನಿಲಯದ  ಪ್ರೊ. ಪರಮಶಿವಮೂರ್ತಿಯವರು 2009 ರಲ್ಲಿ ಮಂಡ್ಯ ಜಿಲ್ಲೆಯ ಕಮಿಡಿ ಹಳ್ಳಿಯಲ್ಲಿ ಒಂದು ಶಿಲಾಶಾಸನ ಶೋಧಿಸಿದರು. ಅದು ಚಿನ್ನಾದೇವಿಯು ಸಾಧು ಒಬ್ಬರಿಗೆ ನೀಡಿದ ದಾನ ಶಾಸನ .ಅದರ ಕಾ;ಲ ಏಪ್ರಿಲ್‌,, 1521 .ಅದರಲ್ಲಿ  ಚಿನ್ನಾದೇವಿಯು ಶ್ರೀರಂಗಪಟ್ಟಣದ ವೀರಪ್ಪ ಒಡೆಯರ ಪುತ್ರಿ ಎಂದು ಸ್ಪಷ್ಟವಾಗಿ  ಲಿಖಿತವಾಗಿದೆ.. ಆದ್ದರಿಂದ ನ್ಯೂನಿಜ್‌ ಹೇಳಿದಂತೆ ಚಿನ್ನಾದೇವಿಯು ರಾಜ ನರ್ತಕಿ ಅಥವ ದೇವದಾಸಿ ಅಲ್ಲ ಮತ್ತು ರಾಜಕುವರಿ ಎಂಬುದ ಖಚಿತ.. ಹಾಗಿದ್ದರೆ ದೋಷವು ನ್ಯೂನಿಜ್‌ನದು ಅಥವ ಅವನ ಮಾಹಿತಿದಾರನದು ಅಥವ ಆಸ್ಥಾನದ ಅನುವಾದಕನದು ಅಥವ ಪ್ರತಿಕಾರನದು..
                                                                                ಕಠಿನ ಸಂಪ್ರದಾಯಸ್ಥ ಮಧ್ಯಕಾಲೀನ ಸಮಾಜದಲ್ಲಿ ದೇವದಾಸಿಗೆ     ಕಾನೂನುಬದ್ದ ಹೆಂಡತಿಯಾಗುವ ಅವಕಾಶ ಇರಲಿಲ್ಲ. ಇನ್ನು ರಾಣಿಯಾಗುವ ಮಾತು ದೂರ ಉಳಿಯಿತು.   ಅಥವ  ಡಾ.ನೆಲತುರು ಹೇಳುವಂತೆ ಅದೂ ಚಕ್ರವರ್ತಿಯ ಪಟ್ಟದ ರಾಣಿಯಾಗುವುದಂತೂ  ಆಗದ ಮಾತು.  ಪಯಾಸ್‌ ದಾಖಲಿಸಿದಂತೆ ರಾಯನು ನರ್ತಕಿಯನ್ನು ಮದುವೆಯಾಗುವ ಆಶೆಯ  ಸುದ್ದಿ ಕೇಳಿದ ಸಾಳ್ವ  ತಿಮ್ಮರಸು ನರಸಿಂಗ ಕುಟುಂಬದ ಸುಂದರ ಕನ್ಯೆಯನ್ನು ತಂದು ಮದುವೆ ಮಾಡಿದ ನಂತರ  ಮತ್ತು ಅವಳನ್ನು ಮತ್ತು ನರ್ತಕಿಯನ್ನು ಪ್ರತ್ಯೇಕ ಅರಮನೆಯಲ್ಲಿ ಇರಿಸಿದ . ಅದಕ್ಕೆ ದೊಡ್ಡ ಗೋಪುರವನ್ನೂ ಕಟ್ಟಿಸಿದ. ಅಲ್ಲಿ ರಾಜನರ್ತಕಿಯನ್ನು ಮದುವೆಯಾದ ಯಾವ ಮಾಹಿತಿಯೂ ಲಭ್ಯವಿಲ್ಲ.. ಅವಳು ಅಂತಃ ಪುರವನ್ನು ಸೇರಿದಳು ಮತ್ತು ಬಹುಶಃ ಉಪಪತ್ನಿಯಾಗಿಯೇ ಇದ್ದಳು  ಮತ್ತು ಅರಸನಿಗೆ ಅತ್ಯಂತ ಪ್ರೀತಿ ಪಾತ್ರಳಾಗಿದ್ದಳು.
                   ಇದು ಚಿನ್ನಾದೇವಿಯ ಕುರಿತಾದ ತಪ್ಪು ಅಭಿಪ್ರಾ ನಿವಾರಿಸಲು    ಸೂಕ್ತವಾದ ಸಮಯ.. ಆಂಧ್ರದ ಬಹುತೇಕ ಇತಿಹಾಸ ತಜ್ಞರ  ನಂಬಿಕೆಯ ಪ್ರಕಾರ ಚಿನ್ನಾದೇವಿ ಮೃತಳಾದುದು  1521 ರಲ್ಲಿ. ಕಾರಣ ಸರಳ , ತಿರುಮಲಾದೇವಿಯ ಹೆಸರು ಮಾತ್ರ ತಿರುಪತಿಯ ಫೆಬ್ರವರಿ  1521.ಶಾಸನದಲ್ಲಿದೆ.  ಆದರೆ ಕಮಿಡಿಹಳ್ಳಿ ಶಾಸನ ಈಗ ತಾನೆ ನಾನು ಉಲ್ಲೇಖಿಸಿದ ಶಾಸನವು ಏಪ್ರಿಲ್‌ 1521 ರದು ಮತ್ತು  ರಾಯಚೂರು ಜಿಲ್ಲೆಯ ಚಿಕ್ಕಲಪರವಿಯಲ್ಲಿ ಇರುವ ಶಾಸನ ಚಿನ್ನಾದೇವಿಯನ್ನು  1522   ಹೆಸರಿಸುವುದು. ಇನ್ನೊಂದು ಹಾಸನ ಜಿಲ್ಲೆಯಶಾಸನ.,  ಹಂಡೆ ಅನಂತಪುರಮ ಚರಿತ್ರೆ  ಎಂಬ ಕೈಫಿಯತ್ತು ತಿಳಿಸುವಂತೆ ಚಿನ್ನಾದೇವಿ ಮತ್ತು ತಿರುಮಲದೇವಿಯರ ನಡುವೆ ಅಧಿಕಾರಕ್ಕಾಗಿ 1542ಸಂಘರ್ಷ ನಡೆಯಿತು. ತಿರುಮಲಾದೇವಿ ಅಳಿಯರಾಮರಾಯನನ್ನು ಬೆಂಬಲಿಸಿದಳು. ಅವಳು 1521 ರಲ್ಲಿ ತಿರುಪತಿಯಲ್ಲಿ ಗೈರು ಹಾಜರಾಗಿರುವುದರ ಕಾರಣ  ಅದರ ಉತ್ತರ ಭಾಗದಲ್ಲಿ ನಮೂದಿತ ವಾಗಿದೆ.
                 ನಾವು ಈಗ ಕೃಷ್ಣರಾಯನ ಕಳಿಂಗ ರಾಜಕುಮಾರಿ ಜಗನ್ಮೋಹಿನಿ ವಿವಾಹದ ರಹಸ್ಯಕುರಿತು ವಿವೇಚಿಸೋಣ. ಇತಿಹಾಸಕಾರರು ಸಾಮಾನ್ಯವಾಗಿ ಕೃಷ್ಣರಾಯನು ಗಜಪತಿಯನ್ನು ಅನೇಕ ಕದನಗಳಲ್ಲಿ ಸೋಲಿಸಿರುವುದನ್ನು ಒಪ್ಪುವರು. ಪ್ರತಾಪರುದ್ರನು ಶಾಂತಿಯ ಮಾತುಕತೆಗೆ ಬಂದಾಗ ರಾಯನು  ಕೃಷ್ಣಾ ನದಿಯ ಉತ್ತರಭಾಗದ ಭೂಪ್ರದೇಶವನ್ನು ಅವನಿಗೆ ಬಿಟ್ಟುಕೊಡುವನು   ಅದರ ಬದಲಾಗಿ ಅವನ ಮಗಳು ಜಗನ್ಮೋಹಿನಿಯನ್ನು  ಮದುವೆಯಾಗಿ ಹೊಸವಧುವಿನೊಂದಿಗೆ ರಾಜಧಾನಿಗೆ ಹಿಂದಿರುಗಿದನು..ಜಗನ್ಮೋಹಿನಿ ಕೆಲವೇ ಸಮಯದಲ್ಲಿ ಅಸಮಧಾನಗೊಂಡು ಕರ್ನೂಲು ಜಿಲ್ಲೆಯ ಖಮ್ಮಂಗೆ ಹೋಗುವಳು.ಅಲ್ಲಿ ಅವಳು ದಾನಧರ್ಮದ ಕಾರ್ಯದಲ್ಲಿ ತನ್ನ ಜೀವನ ಕಳೆಯುವಳು.. ಆದರೆ ಈ ವಿಷಯ ಮೇಲುನೋಟಕ್ಕೆ ಕಾಣುವಷ್ಟು ನೇರವಾಗಿಲ್ಲ.  ಅದರಲ್ಲಿನ ಕೆಲವು ಕುತೂಹಲಕಾರಿ ಅಂಶಗಳು ಗಮನಾರ್ಹವಾಗಿವೆ   ಕರ್ನಾಟಕ, ಒರಿಯಾ ಮತ್ತು ಆಂಧ್ರದ ಶಾಸನಗಳಲ್ಲಿ ಈ ಮದುವೆಯ ಉಲ್ಲೇಖವೇಇಲ್ಲ.     .
                                         ಒರಿಯ ಮತ್ತು ಕನ್ನಡ ಸಮಕಾಲೀನ  ಮತ್ತು ನಂತರದ ಸಾಹಿತ್ಯದಲ್ಲಿ ಈ ಮದುವೆಯ ಉಲ್ಲೇಖ ಇಲ್ಲ.ಪ್ರತಾಪ ರುದ್ರನ  ಕೃತಿ ,ಸರಸ್ವತಿ ವಿಲಾಸಂ ಮತ್ತು ಪುರಿದೇವಸ್ಥಾನದ ದಾಖಲೆಗಳು,ಮದಲಪಂಜಿ  ಯಲ್ಲೂ ಈ ಘಟನೆಯ ದಾಖಲು ಆಗಿಲ್ಲ  ಕೃಷ್ಣರಾಯನ ಶಾಸನಗಳು ಯಾವಾಗಲೂ ಇಬ್ಬರು ರಾಣಿಯರನ್ನೇ  ಹೆಸರಿಸುವುದು ಕಲಿಂಗದ ರಾಜಕುಮಾರಿಯನ್ನು ಎಲ್ಲೂ ಹೆಸರಿಸಿಲ್ಲ..
                                         ತಿರುಪತಿಯಲ್ಲಿರುವ ತಾಮ್ರದ ವಿಗ್ರಹವು ಕೂಡಾ  ರಾಯನ ಜೊತೆ   ಕೇವಲ ಇಬ್ಬರು  ರಾಣಿಯರನ್ನು ಮಾತ್ರ ಹೊಂದಿದೆ..
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಒರಿಯಾದ ಇತಿಹಾಸಕಾರ ಹರೇ ಕೃಷ್ಣಮೆಹತಾಬ್ ಮದುವೆ ನಡದೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವರು! ಆದರೆ ಕೆಲವು ಸಾಹಿತ್ಯ ಕೃತಿಗಳು ಈ ಮದುವೆಯ ಉಲ್ಲೇಖ ಮಾಡುತ್ತವೆ. ಉದಾಹರಣೆಗೆ , ಪಾರಿಜಾತ ಅಪಹರಣಮು, ಕೃಷ್ಣದೇವರಾಯರ ದಿನಚರಿ, ರಾಯಕವಚಮು, ನವಲರು ಚರಿತ್ರ, ಪಯಾಸ್‌ ಮತ್ತು ನೂನಿಜ್‌ ವರದಿಗಳು ಇತ್ಯಾದಿ. ಆದರೆ ನಾವು ಕಳಿಂಗರಾಜಕುಮಾರಿಯ ಹೆಸರು ಖಚಿತ ಪಡಿಸಿಕೊಳ್ಳುವುದು ಇನ್ನೂಆಗುತ್ತಿಲ್ಲ. ತೆಲುಗು ಕೃತಿನರಪತಿರಾಜುಲ ಚರಿತ್ರ ಅವಳಹೆಸರನ್ನುಲುಖ  ಎಂದು ಉಲ್ಲೇಖಿಸುವುದು.ರೆವರೆಂಡ್‌ ಟೇಲರ್‌ ತನ್ನ ರಿಯೊಸೊನ್ನೀ ( Raisonnee)ಯಲ್ಲಿ  ಅವಳನ್ನುರುಚಿ ದೇವಿ ಎನ್ನುವನು  ಮೋಹನಾಂಗಿ ರಾಯನ ದೊಡ್ಡ ಮಗಳು ಅವಳನ್ನುಲಕ್ಷ್ಮಿ   ಎನ್ನುವಳು.
                          ‘ಭದ್ರಎಂದು ಅವಳ ಹೆಸರು ನಾದಿಂಡ್ಲ ಗೋಪನ “ ಪ್ರಬೋಧ ಚಂದ್ರೋದಯಕಾವ್ಯ” ದಲ್ಲಿದೆ.                            ಕುಮಾರ ದೂರ್ಜಟಿಯು  ಅವಳನ್ನು ತನ್ನ ಕೃತಿ “ ಕೃಷ್ಣರಾಜವಿಜಯಂ’ ನಲ್ಲಿ –“ ತುಕ್ಕ” ಎಂದು ಹೆಸರಿಸಿರುವನು .   “ವಿಜಯನಗರ ಸಾಮ್ರಾಜ್ಯಗ್ರಂಥದಲ್ಲಿ ಅವಳ ಹೆಸರು  “ಲಕ್ಷ್ಮಿದೇವಮ್ಮ, ಕೆಲವು ಕೈಫಿಯತ್‌ಗಳು ಅವಳನ್ನು ವರದರಾಜಮ್ಮ ಎನ್ನುವವು      ಗುರುಜಡ ತನ್ನ  “ಕವಿಜೀವಿತಮುಕೃತಿಯಲ್ಲಿ ಅವಳನ್ನು “ತಿರುಮಲಮ್ಮ”ಎಂದು ಹೆಸರಿಸುವನು.
ಕೊನೆಯದಾಗಿ , 17ನೆಯ ಶತಮಾನದ ಕೊನೆಯಲ್ಲಿನ ಕೃತಿಯಲ್ಲಿ ರಾಯವಾಚಕಮುಅವಳನ್ನುಈಗ ಜನಪ್ರಿಯವಾಗಿರುವ “ಜಗನ್ಮೋಹಿನಿ “  ಎಂದು ಕರೆಯುವುದು..                   
           ಅಂತಿಮವಾಗಿ  ನಮಗೆ ಕಳಿಂಗ ರಾಜಕುಮಾರಿಯ ಹೆಸರು ಗೊತ್ತಿಲ್ಲ, ಅವರ ಮದುವೆಯ ಖಚಿತ ದಿನಾಂಕ ಮತ್ತು ಸ್ಥಳದ ಮಾಹಿತಿಯೂ ಇಲ್ಲ. ಆದ್ದರಿಂದ ಮದುವೆಯು ಒಂದು ಅಸಹಜ ಘಟನೆ  ಎನಿಸುವುದು. ಕಾರಣ ಅದರ ಉಲ್ಲೇಖವಿರುವ ಯಾವುದೇ ಶಾಸನವೂ  ಇಲ್ಲ. ಸಮಕಾಲೀನ ಸಾಹಿತ್ಯದಲ್ಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಧುವಿನ ಹೆಸರಿನ ಬಗ್ಗೆ ಒಮ್ಮತವಿಲ್ಲ.  ಎರಡು ಹಿಂದು ರಾಜವಂಶಗಳ ನಡುವಿನ ಮದುವೆ ದಾಖಲಾಗದೇ ಹೋಗಿರುವುದು ಸಾಧ್ಯವೇ ?  ಚಚ್ಚರದ ಸಂಶೋಧನೆಯಿಂದ  ಈ ಘಟನೆ ಕುರಿತ ಈವರೆಗೂ ನಿರ್ಲಕ್ಷ್ಯಕ್ಕೆ ಒಳಗಾದ ಹಲವು ಕುತೂಹಲಕಾರಿ ಸತ್ಯಾಂಶಗಳು ಲಭ್ಯವಾಗಿವೆ.
            ಮೊದಲನೆಯದಾಗಿ ಅಲ್ಲಸಾನಿ ಪೆದ್ದನ ಬರೆದ ಮನುಚರಿತ್ರೆ ಗಮನಿಸೋಣ.ಮೂರನೆಯ ಅಧ್ಯಾಯದ  142ನೆಯ   ಪದ್ಯದಲ್ಲಿ ಅವನು ಬರೆಯುವನು. ಮುಖ್ಯವಾದ ಪದಗಳು ಹೀಗಿವೆ‘Yasakrunmadyat Kalingangana bandigraha……….’ ಇದನ್ನು “ ರಾಯನು ಕಳಿಂಗದ ಗರ್ವಿತ ಮಹಿಳೆಯನ್ನು ಬಂಧಿಸಿದನು ಮತ್ತು  ಬಂಧನದಲ್ಲಿ ಇರಿಸಿದನು” ಎಂದು ಸಂಪ್ರದಾಯಿಕವಾಗಿ ವ್ಯಾಖ್ಯಾನ ಮಾಡಲಾಗಿದೆ ಇನ್ನೊಂದು ವ್ಯಾಖ್ಯಾನ ಅವನು ಕಳಿಂಗ ದೇಶವನ್ನು ಆಕ್ರಿಮಿಸಿದ. ಎಂದಿರುವರು.
                   “ ಬಂದಿ ಗೃಹ” ಎಂಬುದು ರಾಜ್ಯವನ್ನು ಆಕ್ರಮಿಸುವುದಕ್ಕೆ ಸರಿಯಾದ ಪದವಲ್ಲ ಆದ್ದರಿಂದ  ಆ ವ್ಯಾಖ್ಯಾನವನ್ನು ಕೈಬಿಡಬಹುದು.ಮತ್ತು ನೂನಿಜ್‌ ಖಚಿತ ಪಡಿಸುವಂತೆ ಗಜಪತಿಯ ರಾಣಿಯಯು ಕೊಂಡ ವೀಡುವಿನಲ್ಲಿ  ಸೆರೆಸಿಕ್ಕಳು. ಆದರೆ ಇದಕ್ಕೆ ಶಾಸನ ಮತ್ತು ಸಾಹಿತ್ಯದ ಆಧಾರ ಇಲ್ಲ.ಆದಕ್ಕೆ ನೂನಿಜ್‌ ಸಿಂಹಾಚಲದ ಕುಪ್ರಸಿದ್ಧ ಶಾಸನವನ್ನು ಉಲ್ಲೇಖಿಸಿರುವನು. ಆದ್ದಾಗ್ಯೂ   ಅಮುಕ್ತ ಮಾಲ್ಯ ಮತ್ತು ಮನುಚರಿತ್ರೆಯ ಸಂಬಂಧಿತ ಪದ್ಯ (1:39 &1:40) ಗಳನ್ನು ವಿದ್ವಾಂಸರು  ಕಲಿಂಗರಾಜ್ಯ ವಶವಾದುದರ ಆಧಾರವಾಗಿ  ಬಳಸಿರುವರು. ಕಲಿಂಗದ ರಾಣಿಯೇ ಕೊಂಡವೀಡುವಿಲ್ಲಿ ಸೆರೆ ಸಿಕ್ಕಿದಳು ಎಂದು ಒಪ್ಪಿಕೊಂಡರೂo ಆ ಪದ್ಯವು ರಾಣಿಯನ್ನು ಕುರಿತು ಹೇಳುವುದಿಲ್ಲ ಕಾರಣ ಸರಳ ಕಾರಣ , ನಿಘಂಟುವಿನ ವಿವರಣೆಯ “ ಅಂಗನ”  ಎಂದರೆ ಅವಿವಾಹಿತ ಯುವತಿ ಆದ್ದರಿಂದ ಈ ಕಳಿಗಂಗನ ಎಂದರೆ ಗಜಪತಿಯ ರಾಣಿ ಎನ್ನಲಾಗದು. ಈ ಎಲ್ಲ ಅಂಶಗಳಿಂದ ಒಂದು ಸ್ಪಷ್ಟ .  ಕೃಷ್ಣರಾಯ ವಶಪಡಿಸಿಕೊಂಡಿದ್ದು ”(bandigraha)   ಕಳಿಂಗದ ರಾಣಿಯನ್ನೂ ಅಲ್ಲ ಅಥವ ಕಳಿಂಗರಾಜ್ಯವನ್ನೂ ಅಲ್ಲ.ಹಾಗಿದ್ರೆ ಅವಳು ಕಳಿಂಗದ ಯುವರಾಣಿ ಜಗನ್ಮೋಹಿನಿಯಾಗಿರಬಹುದೇ ಎಂಬ ಊಹೆ ಸಾಧ್ಯವೇ?. ಎರಡನೆ ಉದಾಹರಣೆಯಾಗಿ ನಾವು  ಅದೇ ಕೃತಿಯ ಷಷ್ಟ್ಯಾಯಂತಮುಲ 46ನೆಯ ಪದ್ಯ ಗಮನಿಸೋಣ.

 ‘ನಿಮಿಷಾರ್ಧ ಗೃಹಿತ ಕಲಿಂಗರಾಜತನಯ ಗ್ರನಿಕಿಂ’ ಎಂಬುದು ಈ ಚರ್ಚೆಗೆ ಸುಸಂಬದ್ದವಾಗಿದೆ. ಅದನ್ನು ಸಾಮಾನ್ಯವಾಗಿ  ‘ಕಳಿಂಗ ತನಯ  +ಅಗ್ರನಿಕಿಂ  ನ ಅರ್ಥಕಲಿಂಗರಾಜನ ಮಗ , ಅರ್ಧ ನಿಮಷದಲ್ಲಿ ಸೆರೆಯಾದ “ , ಅದು ವೀರಭದ್ರ ಗಜಪತಿಯು ಕೊಂಡವೀಡು ದಾಳಿಯಲ್ಲಿ ಸೆರೆಯಾದುದನ್ನು ತೋರಿಸುತ್ತದೆ. ಕಾವ್ಯ ಸ್ವಾತಂತ್ರ್ಯವಿದ್ದರೂ ಕೊಂಡವೀಡು ವಶವಾದುದನ್ನು ಅರ್ಧನಿಮಿಷದ ಕೆಲಸ’ ಎಂದು ವರ್ಣಿಸುವುದು ಅಸಾಧ್ಯದ ಮಾತು., ಏಕೆಂದರೆ ಉದಯಗಿರಿಯು 9-6-1514 ರಲ್ಲಿ ವಶವಾದರೆ ಮತ್ತು ಕೊಂಡವೀಡು 23-6-1515ರಲ್ಲಿ ಶರಣಾಯಿತು. ಅಂದರೆ ಸುಮಾರು ಒಂದುವರ್ಷ ಬೇಕಾಯಿತುಆದರಿಂದ ಉಲ್ಲೇಕವು ಕೊಂಡವೀಡು ಕುರಿತು ಅಲ್ಲ, ತೆಲುಗುವಿನಲ್ಲಿ ’ ತನಯ’ ಎಂದರೆಗಳು ಎಂದು ಅರ್ಥ ಮಗ ಎಂದು ಅಲ್ಲ ಮತ್ತು ಮನುಚರಿತ್ರೆಯು ತೆಲುಗು ಕೃತಿ.ಗೃಹಿತ ಕಲಿಂಗರಾಜತನಯ ಗ್ರನಿಕಿಂ’ ಸಂಸ್ಕೃತ ಕೃತಿ ಎಂದು ವಾದಿಸಿದರೂ , ಆಗಲೂ ಕಳಿಂಗ ತನಯ  +ಅಗ್ರನಿಕಿಂ  ’ ಯ ಅರ್ಥವು ಕಳಿಂಗರಾಜನ ಮಗಳು ಎಂದೇ ಆಗುವುದು. ಹಾಗಿದ್ದರೆ ಪೆದ್ದನಾರ್ಯನು ಕಳಿಂಗ ರಾಜ್ಯ ಮತ್ತು ರಾಜಕುಮಾರಿ ವಶವಾದುದರ  ಬಗ್ಗೆ ಹೇಳಿರುವನೇ ?
                             ನಾದೆಂಡ್ಲ ಗೋಪ ತನ್ನ ಪ್ರಬೋಧ ಚಂದ್ರೋದಯ ವ್ಯಾಖ್ಯೆಯಲ್ಲಿ ರಾಯನು ಕಲಿಂಗದ ರಾಜಕುಮಾರಿಯನ್ನು ಮದುವೆಯಾದುದನ್ನು ಉಲ್ಲೇಖಿಸಿರುವನು.
  ಭದ್ರಂ ಸುಭದ್ರಮಿವ ಪಾಂಡವೇಯ”  ಅನುವಾದ ರಾಯನು ಕಳಿಂಗ ರಾಜಕುಮಾರಿಯನ್ನು ಅರ್ಜುನನು ಸುಭದ್ರಳನ್ನು ಪಡೆದಂತೆ ಪಡೆದನು’.ಮಹಾಭಾರತದ ಪರಿಚಯವಿರುವ ಪ್ರತಿಯೊಬ್ಬರೂ ಅರ್ಜುನ ಮತ್ತು ಸುಭದ್ರರ ವಿವಾಹವು ನೇರಮಾರ್ಗದಲ್ಲಿ ಆದುದಲ್ಲ ಎಂದು ತಿಳಿದಿರುವರು ಮತ್ತು ಹಿರಿಯರ ಸಮ್ಮತಿಇಲ್ಲದೇ ಆದುದು ಎಂದು ಗೊತ್ತಿದೆ.ಅರ್ಜುನನು ಸುಭದ್ರಳನ್ನು ಅಪಹರಿಸಿ ತನ್ನರಾಜಧಾನಿಯಲ್ಲಿ ಮದುವೆಯಾದನು.ನಾದೆಂಡ್ಲ ಗೋಪನು ಮದುವೆಯಲ್ಲಿರುವ ಬಲವಂತದ  ಅಂಶವನ್ನು ಹೇಳುತ್ತಿರುವನೇ?
                                         ಬಂಡಾರು ಲಕ್ಷ್ಮಣ ಸಂಗಿತಗಾರ, ಸಂಗೀತಜ್ಞನೂ ಮತ್ತು “ ಸಂಗಿತ ಸೂರ್ಯೋದಯ” ಎಂಬ ಕೃತಿರಚಿಸಿದ್ದ,, ಅವತಾರಿಕಾದ ಆರನೆಯ ಪದ್ಯದಲ್ಲಿ  ಅವನು ಹೇಳುವುದು ::
   ಉದುಹ್ಯ ಪದವು ’ ವಹ್ ಮೂಲದಿಂದ ಬಂದಿದೆ”. ಅದು ನಂತರ ಉದುಹ್ಯವಾಗಿದೆಅದರ ಅರ್ಥ ಮದುವೆಯಾಗುವುದು . ಆದಾಗ್ಯೂ ಸರ್‌.ವಿಲಿಯಂನ  ನಿಘಂಟು  ಮುಂದಿನ ಅರ್ಥ ನೀಡುವುದು: ತಳ್ಳು, ಮುಂದೆನೂಕು, ಮುಂದೆ ಚಲಿಸುಎಸೆ,ಗುಡಿಸಿಹಾಕು ಮೊದಲಾದವು. ಈ ಪದಗಳಲ್ಲಿ ಖಂಡಿತವಾಗಿ ಒತ್ತಾಯ  ಅಥವ ಬಲವಂತದ  ಅಂಶವು ಒಳಗೊಂಡಿರುವುದು ಕಂಡು ಬರುವುದು.. ಈ ನಿಧಿಷ್ಟವಾದ ಪದವನ್ನು ಸರಳವಾದ ಪದದ ಬದಲು ಕವಿಯು ಉದ್ದೇಶಪೂರ್ವಕವಾಗಿ ಬಳಸಿರುವನು ಆದ್ದರಿಂದ ಕಾವ್ಯದಲ್ಲಿ ಬಲವಂತದ ಅಂಶದ ಸೂಚನೆ ಬಂಡಾರು ಲಕ್ಷ್ಮಮಿನಾರಾಯಣನ ಕಾವ್ಯದಲ್ಲಿ ಬಂದಿದೆ. ನಾವು ಕೂಡಾ ನೆನಪಿಡಬೇಕು ಲಕ್ಷ್ಮಿನಾರಾಯಣನು ಕಲಿಂಗದ ಆಸ್ಥಾನ ಕವಿಯಾಗಿದ್ದ ,ಬಹುಶಃ ಕೃಷ್ಣರಾಯನನ್ನುವಿಜಯಗನರಕ್ಕೆ ಅನುಸರಿಸಲು ಒತ್ತಾಯ ಬಂದಿರಬಹುದು. ಆದ್ದರಿಂದ  ಅವನಲ್ಲಿತನ್ನ ಮುಂಚಿನ ಆಶ್ರಯದಾತ ಮತ್ತು ಅವನ ಮಗಳನ್ನು ಕುರಿತು ನ್ಯಾಯ ಸಲ್ಲಿಸಲು ಮನಸ್ಸು ಮಾಡಿರಬಹುದು.   

                                            ಕೊಂಡವೀಡು ಕೈಫಿಯತ್‌ ಅನ್ನು ಪರಿಶೀಲಿಸದರೆ ನಮಗೆ ನೇರವಾದ ಆಧಾರ ದೊರಕುವುದು. ಅದರ ಪ್ರಕಾರ  ‘…..ಈ ಪ್ರಕಾರಂಗಾ ರಾಯಲು ದೇಸಮುಲು ಸಾಂಧಿಂಚಿ ಕಟಕ ಮೂಲವರೆಕು ವೆಳ್ಳಿ ಗಜಪತಿ ಕುಮಾರ್ತೆನು ಬಲತ್ಕಾರಮು ಚೇತನು ವಿವಾಹಮು ಚೆಸ್ಕೊನಿ....” ಇಲ್ಲಿ ಬಲತ್ಕಾರ ಎಂಬ ಪದವು ಬಲವಂತದ ಮದುವೆಯನ್ನು ಎತ್ತಿ ಹೇಳುತ್ತದೆ.                     
ಮತ್ತೆ  ಇತಿಹಾಸ ಕೃತಿ ವಿಜಯನಗರ ಸಾಮ್ರಾಜ್ಯಮು    ಇನ್ನೊಂದು ಆದಾರವನ್ನು ಒದಗಿಸುತ್ತದೆ.ಅದು ಹೇಳುವುದು ,” ...ರಾಯಲು ಗಜಪತಿಮಿದಿಕಿ ದಂಡೆತ್ತಿಕರ್ಲಿಪೋಯಿ ಗಜಪತ ಕುಮಾರ್ತೆ ಲಕ್ಷ್ಮಿದೇವಿಯಮ್ಮವಾರಿನಿ ಹವಾಲಾ ಚೇಸಿಕೊನಿ....”  ಹವಾಲಾ ಪದವು ಖಂಡಿತವಾಗಿ ಬಲವಂತವನ್ನು ಸೂಚಿಸುತ್ತದೆ.
                    ಮೇಲಿನ ಅಂಶಗಳಿಂದ  ಕೃಷ್ಣರಾಯ ಮತ್ತು ಜಗನ್ಮೋಹಿನಿಯ ವಿವಾಹವು ಬಲವಂತದ್ದಾಗಿತ್ತೆಂಬುದು ಗೊತ್ತಾಗುತ್ತದೆ..
                                                      ಕೃಷ್ಣದೇವರಾಯನು ಸತ್ಯಸಂಧ, ನೇರ,ವಿಶಾಲಹೃದಯಿ,ಆತ್ಮ ಸಾಕ್ಷಿಯುಳ್ಳ ಅರಸನೆಂದು ಹೆಸರಾಗಿದ್ದನು . ಅಂಥವನು ಏಕೆ ತನಗೆ ಅಪಕೀರ್ತಿ ತರುವ ಈಕಾರ್ಯಕ್ಕೆ ಎಳಸಿದನು.. ಈಗಲೂ ಒಡಿಸ್ಸಾದ ಇತಿಹಾಕಾರರು ಅವನನ್ನು ಕ್ಷಮಿಸಿಲ್ಲ.  ಅದಕ್ಕೆ ಉತ್ತರ ಎಂದರೆ ಸೇಡು. ಅವನು ಪುರುಷೋತ್ತಮ ಗಜಪತಿಯ ಹೀನ ಕೃತ್ಯದ ಸೇಡು ತೀರಿಸ ಕೊಂಡನು.ಗಜಪತಿಯ ಸಾಲ್ವ ನರಸಿಂಹನ ಮಗಳನ್ನು ಅಪಹರಿಸಿದನು ಮತ್ತು ಆರುತಿಂಗಳ ಕಾಲ  ಅವಳಿಗೆ ಹಿಂಸೆ ಕೊಟ್ಟು ನಂತರ ಮದುವೆಯಾದನು ಎಂದು ಕಂಚಿ-ಕಾವೇರಿ ಎಂಬ ಒರಿಸ್ಸಾದ ಐತಿಹ್ಯ ಹೇಳುತ್ತದೆ..                                 
                         ಈಗ ನಾವು ರಾಯನ ಪಟ್ಟದರಾಣಿಯ ಕಡೆಗಮನ ಹರಿಸೋಣ.ಪಟ್ಟದರಾಣಿ ತಿರುಮಲಾದೇವಿಯೋ ಅಥವ ಚಿನ್ನಾದೇವಿಯೋ ಎಂಬುದರ ಕುರಿತು ಅನುಮಾನಗಳಿವೆ.ಆದರೆ ಸಾಮಾನ್ಯ ಅಭಿಪ್ರಾಯದಂತೆ ತಿರುಮಲದೇವಿಯೇ ಪಟ್ಟದರಾಣಿ ಅನೇಕ ಇತಿಹಾಸಕಾರರಾದ ನೆಲತುರು ವೆಂಕಟರಾಮಯ್ಯ ಹೇಳುವಂತೆ ಚಿನ್ನಾದೇವಿಯು ಪಟ್ಟಮಹಿಷಿ ಮತ್ತು ಅವಳು ಮತ್ತು ಅವಳ ಮರಣದ ತರುವಾಯ 1521 ರಲ್ಲಿ ತಿರುಮಲಾದೇವಿ ಪಟ್ಟದ ರಾಣಿಯಾದಳು. ನಾನು ಈಗಾಗಲೇ ಚಿನ್ನಾದೇವಿಯು 1521 ಮೃತಳಾಗಿಲ್ಲ ಎಂದು ತೋರಿಸಿರುವೆ.ಮತ್ತು ಅದರಿಂದ ಅವರ ಅಭಿಪ್ರಾಯ ಒಪ್ಪಲು ಅರ್ಹವಲ್ಲ. ಅದಲ್ಲದೇ  ಚೋಳಸಮುದ್ರದ ರಾಯಸಂ ಕೊಂಡಮರಸಯ್ಯನ ಶಾಸನದಂತೆ ರಾಯನು ಕರ್ನಾಟಕ ಸಿಂಹಾನವನ್ನು  ತನ್ನಲಕ್ಷ್ಮಿಯಾದ. ತಿರುಮಾಲದೇವಿಯ ಸಮೇತ ಏರಿದನು.ನಾವು ಈಗ ಅವನ ರಾಜಕುಮಾರ  ತಿರುಮಲನ ಕುತೂಹಲಕಾರಿ ಜನನ ಮತ್ತು ಮರಣ ಕುರಿತು ನೋಡೋಣ ನಮಗೆಲ್ಲ ಗೊತ್ತಿದೆ ರಾಜಕುಮಾರ ತಿರುಮಲನು ತಿರುಮಲಾದೇವಿಯ ಮಗ. ನುಂಜಿಯು ಇದರ ಸವಿವರ ಚಿತ್ರ ನೀಡಿರುವನು ಮತ್ತು ರಾಯನು ಆರು ವರ್ಷದ ಮಗನಿಗೆ ಪಟ್ಟ ಕಟ್ಟಿದನು ಮತ್ತು ಸಂಭ್ರಮಾಚರಣೆಯನ್ನು ಎಂಟು ತಿಂಗಳ ಕಾಲ ನಡೆಸಿದ.  ಆ ಅವಧಿಯ ಕೊನೆಯಲ್ಲಿ ತಿರುಮಲನು ಮೃತನಾದ. ಈ ಸಾವಿಗೆ ತಿಮ್ಮರಸನು ಕಾರಣ ಎಂದು ರಾಯನು ತಿರಮ್ಮರಸ ಮತ್ತು ಅವನ  ಬಂಧು ವರ್ಗವನ್ನು ಬಂಧಿಸಿದ. ತಿಮ್ಮರಸನ ಹಿರಿಯ ಮಗ ತಿಮ್ಮಣ್ಣ  ನಾಯಕ ನಾಂದೇಡ್ಲ ಗೊಪನ ಸಹಾಯದಿಂದ ತಪ್ಪಿಸಿಕೊಂಡು  ರಾಯನ ವಿರುದ್ಧ ಯುದ್ಧಸಾರಿದ.ಆದರೆ ಅವನು ಸೆರೆ ಸಿಕ್ಕ. ಅವನ ಜೊತೆ ಎಲ್ಲರ ಕಣ್ಣು ಕೀಳಲಾಯಿತು. ತಿಮ್ಮರಸನು  ಸಾವಿಗೆ ನಿಜವಾಗಿಯೂ ಕಾರಣನೇ? ಸಾವಿನ ನಿಜವಾದ ಕಾರಣ ಯಾವದು ? ಕೆಳಗಿನ ವಾಸ್ತವಾಂಶಗಳನ್ನು ಗಮನಿಸಿ::
                                                ಚೋಳಸಮುದ್ರದ ೧ನೆಯ ಡಿಸೆಂಬರ್‌ ೧೫೧೭ ರಾಯಸಂ ಕೊಂಡಮರಸಯ್ಯನ  ದಾನ ಮತ್ತು ಪ್ರಾರ್ಥನಾ ಶಾಸನದಲ್ಲಿ “ ತನ್ನ ದೊರೆ ಕೃಷ್ಣದೇವರಾಯನಿಗೆ ಸಂತಾನ ಅಥವ ವಂಶೋದ್ಧಾರಕನ ಕೊಡಲು ಕೋರಿದೆ. ರಾಯನಿಗೆ 15 ವರ್ಷಗಳವರೆಗೆ ಮಕ್ಕಳೇ ಆಗಿರಲಿಲ್ಲ ಮತ್ತು  ಉತ್ತರಾಧಿಕಾರಿ  ಇರಲಿಲ್ಲ. ಹಾಗಿರುವಾಗ ಜನಪ್ರಿಯ ಅರಸನ ಪರವಾಗಿ ಪ್ರಾರ್ಥನೆ ಮಾಡುವುದು ಅಸಹಜವಲ್ಲ/ ಒಂದು ಮಾತು ಒಪ್ಪಲೇ ಬೇಕು. ದಾನಿಗೆ ಅರಸನಿಗೆ ಈಗಾಗಲೇ ತಿರುಮಲಾದೇವಿಯು ಗರ್ಭಿಣಿಯಾಗಿರುವಳು ಎಂದು ತಿಳಿದಿದ್ದರೆ  ಅರಸನಿಗೆ  ಸಂತಾನ ಭಾಗ್ಯಕ್ಕಾಗಿ ಬೇಡುವ ಅಗತ್ಯವೇ ಇರುವುದಿಲ್ಲ..ಆ ವೇಳೆಗೆ ತಿರುಮಲಾದೇವಿಯು ಗರ್ಭವತಿಯಾಗಿದ್ದುದು ತಿಳಿದಿದ್ದರೆ ಅವನು ಪುತ್ರೋತ್ಸವಕ್ಕಾಗಿ ಪ್ರಾರ್ಥಿಸುತಿದ್ದನು ಶಾಸನ ಹೇಳುವಂತೆ ಬರಿ ಸಂತಾನ ಭಾಗ್ಯಕ್ಕಾಗಿ ಅಲ್ಲ.ಆದ್ದರಿಂದ ರಾಣಿ ತಿರುಮಲಾದೇವಿಯು ಶಾಸನ ಕಂಡರಿಸಿದ ಸಮಯದಲ್ಲಿ ಅಂದರೆ ಡಿಸೆಂಬರ್.1.1517  ರ ಹೊತ್ತಿಗೆ  ಗರ್ಭಿಣಿಯಾಗಿದ್ದಿಲ್ಲ ಎನ್ನುವುದುನ್ನು ತಾರ್ಕಿಕವಾಗಿ ನಿರ್ಧರಿಸಬಹುದು..
ಅಲ್ಲದೆ ಮೈಸೂರಿನ ಒಂದು ಶಾಸನದಲ್ಲಿ ಬ್ರಾಹ್ಮಣನಿಗೆ ಅರಸನಮಗನ ಜನನ ಸಂದರ್ಭದಲ್ಲಿ ನೀಡಿದ ದಾನದ ಉಲ್ಲೇಖವಿರುವ ಶಾಸನವಿದೆ.ಅದರಲ್ಲಿ ಕಾಲವನ್ನು 19-7-1518 ಎಂಬ ಉಲ್ಲೇಖಿಸಿದೆ. .ಅಂದರೆ ರಾಜಕುಮಾರ ತಿರುಮಲನ ಜನ್ಮ ದಿನಾಂಕ19-7-1518 ಎಂದಾಯಿತು. ಈ ಎರಡು ಶಾಸನಗಳ ನಡುವಿನ ಅವಧಿ ಎಷ್ಟು? ಎಂಬುದು ಗಣನೀಯ, ಎರಡರ ನಡುವಿನ ಸಮಯವು ಏಳುತಿಂಗಳು ಇಪ್ಪತ್ತು ದಿನ. ಅಂದರೆ ತಿರುಮಲನು ತಾಯಿಗೆ ಪೂರ್ಣ ದಿನ ತುಂಬುವುದಕ್ಕೆ ಐದು ವಾರ ಮೊದಲೆ ಜನಿಸಿದನು.ಅಂದರೆ ಒಂಬತ್ತು ತಿಂಗಳಿಗೂ ಮೊದಲೇ ಜನಿಸದ ಅವಧಿ ಪೂರ್ವ ಮಗು. ಅದರ ಸಾಧ್ಯತೆಯು ಹೆಚ್ಚಿದೆ ವೈದ್ಯಕೀಯವಾಗಿ ಹೇಳ ಬೇಕೆಂದರೆ ರಾಣಿತಿರುಮಲಾದೇವಿಯು ಆ ಹೊತ್ತಿಗೆ ಅಂದರೆ 1517  ರಹೊತ್ತಿಗೆ ವಯಸ್ಸು 37 ವರ್ಷಕ್ಕೆ ಕಡಿಮೆ ಇರಲಿಲ್ಲ.ಅಲ್ಲದೆ ಅವಳ ಫಲವತ್ತತೆ ಕಡಿಮೆ ಇದ್ದಿತು ಕಾರಣ ಅವಳಿಗೆ 17  ವರ್ಷವಾದರೂ ಮಕ್ಕಳಾಗಿರಲಿಲ್ಲ.ಅವಳ ವಯಸ್ಸು ಮತ್ತು ಫಲವತ್ತತೆಯ ಕೊರತೆಯ ಕಾರಣ ಅವಧಿಪೂರ್ವ ಮಗು ಹುಟ್ಟಿತು ಆಯಿತು . ಸ್ತ್ರೀ ರೋಗತಜ್ಞರು ಇದನ್ನುಅನುಮೋದಿಸುವರು. ಅವಧಿಗೆ ಮುಂಚೆ ಹುಟ್ಟಿದ ಮಗುವಿಗೆ ಸಾಕಷ್ಟು ಆರೋಗ್ಯದ ಕೊರತೆ ಇದ್ದವು .ರೋಗ ನಿರೋಧಕಶಕ್ತಿ ಕಡಿಮೆ ಮತ್ತು ಅಂಗಾಂಗಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿರಲಿಲ್ಲ.ಅದಕ್ಕಾಗಿ ಅವನು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತಿದ್ದನು.  ಬೆಳವಣಿಗೆ ಕುಂಠಿತವಾದ  ದುರ್ಬಲ ಮಗು.ಆದ್ದರಿಂದ ಅವನ ಹೆಸರನ್ನು ತಿಳಿಸುವ ಸುಮಾರು 15 ಶಾಸನಗಳಿವೆ ಆದರೆ ಅವನೇ ಹೊರಡಿಸಿದ ಶಾಸನ ಒಂದೂ ಇಲ್ಲ . ತಿರುಮಲನು ಎಲ್ಲಿಗಾದರು ಭೇಟಿ ನೀಡಿದ ರಾಜ್ಯದ ಒಳಗೆ ಮತ್ತು ಹೊರಗೆ ದಾಖಲೆ ಇಲ್ಲ.ಅವನನ್ನು ಒಂದು ಸಲವೂ ಮನೆದೇವರ ಹೆಸರೇ ಇಟ್ಟಿದ್ದರೂ ಮನೆದೇವರ ದರ್ಶನಕ್ಕೆ ತಿರುಪತಿಗೆ ಕೂಡಾ ಕರೆದೊಯ್ದಿಲ್ಲ. ಆದ್ದರಿಂದ ಈ ರೋಗಿಷ್ಠ ದುರ್ಬಲ ಹುಡುಗ ಯುವರಾಜ ತನ್ನ ಸೀಂಹಾಸನಾರೋಹಣದ ಎಂಟು ತಿಂಗಳು ಅವಧಿಯ ಸಂಭ್ರಮಾಚರಣೆಯ ಒತ್ತಡವನ್ನು ಸಹಿಸಲು ಆಗಿಲ್ಲ. ಈ ವಿಷಯವು ಎಲ್ಲ ಇತಿಹಾಸಕರರಿಗೂ ಸಮಾಧಾನ ತರುವುದು ಕಾರಣ ಚಕ್ರವರ್ತಿಯ ಮಗನಿಗೆ ಸಾಳುವ ತಿಮ್ಮರಸನು ಮಹಾಮಂತ್ರಿಯಾಗಿ ವಿಷಪ್ರಾಶನ ಮಾಡಿಸಿದ ಎಂದು ನಂಬಲು ಹಿಂದು ಮುಂದು ನೋಡಿರುವರಿಗೆ ಹೊಸಸಾಧ್ಯತೆ ಬಗ್ಗೆ  ಯೊಚಿಸಬೇಕಿದೆ.                                           
       ರಾಯನಿಗೆ ಎಷ್ಟು ಜನ ಹೆಂಡದಿರಿದ್ದರು? ಪಯಾಸ್‌ನ ಪ್ರಕಾರ ರಾಯನಿಗೆ 12 ಜನ ಅಧಿಕೃತ ಪತ್ನಿಯರಿದ್ದರು..ನಮಗೆ ೩ ಮಹಾರಾಣಿಯರ ಹೆಸರು ಗೊತ್ತಿದೆ.ಆದರೆ ಗುರುತಿಸಬಹುದಾದ ಇತರೆ ರಾಣಿಯರು ಯಾರು?  ಹೌದು,ಕನಿಷ್ಟ ಒಬ್ಬ ಹೆಸರು ಗೊತ್ತಾಗದ ರಾಣಿಯು- ರಾಜ್ಯದಲ್ಲಿ ಬಹಳ ಗೌರವಾನ್ವಿತ ಸಾಳ್ವ ವಂಶಕ್ಕೆ ಸೇರಿದವಳು ಇದ್ದಳು. ಮೊದಲು ಸತ್ಯಾಂಶವನ್ನು ಪರಿಶೀಲಿಸೋಣ:
:
                                 ನಮಗೆ ಕೃಷ್ಣದೇವರಾಯನ ಖಚಿತ ಜನ್ಮ ದಿನಾಂಕ ಗೊತ್ತಿದೆ ಅದು 17-1-1471.  ಕೃಷ್ಣ ರಾಜತನಯೆ ಮೋಹನಾಂಗಿ ರಚಿಸಿದ “ಮರಿಸಿ ಪರಿಣಯಮು“ ಪ್ರೊ.ಸಿ.ವಿ ರಾಮಚಂದ್ರರಾವ್ ತುಂಬ ಚೆನ್ನಾಗಿ ಸಂಪಾದಿರುವರು ಅವರು ಈ ಮಾಹಿತಿ ಕೊಡುವರು.ಮೋಹನಾಂಗಿಯು ಈ ಕೃತಿಯನ್ನು  1517-18 ರಚಿಸಿದಳು ಮತ್ತು ಆ ಹೊತ್ತಿಗೆ ಅಳಿಯ ರಾಮರಾಯನನ್ನು ಮದುವೆಯಾಗಿದ್ದಳು ಅವಳುತನ್ನ ಸೋದರನ ಜನನದ ಬಗ್ಗೆ ಮತ್ತು ಪತಿಯ ಸಾಹಸದ ಬಗ್ಗೆ ಕೃತಿಯಲ್ಲಿ ಬರೆದಿರುವಳು. ನಾವು ಅವಳು 1515 ರಲ್ಲಿ ಮದುವೆಯಾದಳು ಎಂದುಕೊಂಡರೂ ಆ ಹೊತ್ತಿಗೆ ಅವಳಿಗೆ 15 ವರ್ಷ ವಯಸ್ಸು..ಅದರಿಂದ ಅವಳ ಜನ್ಮದಿನಾಂಕ 1500  ಆಗಿರಬಹುದು. ಅಲ್ಲದೆ ನಾವು ರಾಯನ ತಿರುಮಲಾಂಬಳ ಜೊತೆವಿವಾಹವು. ಕಡೆಪಕ್ಷ 1496-98 ನಡುವೆ ಆಗಿರಬಹುದು ಎಂದು ಕೊಳ್ಳಬಹುದು ಹಾಗಿದ್ದರೆ ಕೃಷ್ಣರಾಯನ ವಯಸ್ಸು   1498 ರಲ್ಲಿ ತಿರುಮಲಾಂಬೆಯನ್ನು ಮದುವೆಯಾದಾಗ ಎಷ್ಟು?   27 ವರ್ಷಗಳು!  ಆಕಾಲದಲ್ಲಿ ಸಾಮಾನ್ಯವಾಗಿ ಹೆಂಗಸರು  15 ವರ್ಷದವರಾದಾಗ ಮತ್ತು ಗಂಡಸರು 18 ವರ್ಷದರಾದಾಗ ಮದುವೆಯಾಗುತಿದ್ದರು.ಹಾಗಿದ್ದಾಗ ರಾಯನು 27.ವರ್ಷದನಾಗುವವರೆಗ ಅವಿವಾಹಿತನಾಗಿದ್ದನು ಎಂದುಕೊಳ್ಳುವುದು ಅಸಹಜ. ಅಥವ ಅವನಿಗೆ ಆ ಮೊದಲೇ ಮದುವೆಯಾಗಿತ್ತೇ? ಎಂಬ ಪ್ರಶ್ನೆಗೆ ಬರುವ ಉತ್ತರ “ ಹೌದು:  ಬೆಂಗಳೂರಿನಲ್ಲಿ ದೊರೆತ ನಿರ್ಲಕ್ಷ್ಯಕ್ಕೆ ಒಳಗಾದ ಶಾಸನ ಒಂದು ರಾಯನ ಮುಂಚಿನ ಮದುವೆ ಕುರಿತು ತಿಳಿಸುವುದು. ಬೆಂಗಳೂರು ಕೋಲಾರ ರಸ್ತೆಯಲ್ಲಿರುವ ವಾಗಟ ಎಂಬ ಚಿಕ್ಕ ಹಳ್ಳಿಯಲ್ಲಿದೊರಕಿದ ಶಾಸನದಲ್ಲಿ “ ಇಮ್ಮಡಿ ನರಸಿಂಗರಾಯರ ಅಳಿಯ ( ಅಲ್ಲುಡು)ಕೃಷ್ಣರಾಯ ಒಡೆಯರು...” ಮತ್ತು ಅದರ ಕಾಲ 1494.  ಅದು ಬಹಳ ಮುಂಚಿನದಾಗಿರುವುದರಿಂದ “ತುಳುವ” ಪೂರ್ವಪ್ರತ್ಯಯ ಇನ್ನೂ ಹೆಸರಿಗೆ ಸೇರಿರಲಿಲ್ಲ.  ವೀರನರಸಿಂಹ ನ ಕಾಲದಲ್ಲಿ ಮತ್ತು ಶಾಸನ ಮತ್ತು ವರಾಹ ಪುರಾಣಮು ಮೊದಲಾದ ಸಾಹಿತ್ಯದಲ್ಲಿ  ಬಂದಿದೆ. ಕೃಷ್ಣದೇವರಾಯ ಎಂಬ ಹೆಸರು ವಿಜಯನಗರದ ರಾಯನದೇ. ಅದಕ್ಕೆ  ಕಾರಣ ಎರಡಿವೆ. ಮೊದಲನೆಯದಾಗಿ ಅದು ನರಸನಾಯಕನ ಪುತ್ರನದು ಮಾತ್ರಾಕಾದಲ್ಲಿ ಅವನನ್ನು ಬಿಟ್ಟರೆ ಆ ಹೆಸರಿನ ಯಾವುದೇ ಪ್ರಮುಖ ವ್ಯಕ್ತಿ ಇರಲಿಲ್ಲ. ಅದೂ ಚಕ್ರವರ್ತಿ ಇಮ್ಮಡಿ ನರಸಿಂಹನ ಅಳಿಯ ಅದು ನರಸನಾಯಕನ ಮಗನಾದೇ ಮುಖ್ಯವಾದುದು., ಕೃಷ್ಣರಾಯ.ನಮಗೆ ತಿಳಿದಿರುವಂತೆ ಪಯಾಸ್‌ ತಿಳಿಸಿದಂತೆ ಸಾಲ್ವ ತಿಮ್ಮರಸನು, ರಾಯನು ಆಸ್ಥಾನ ನರ್ತಕಿ ಚಿನ್ನಾಸಾನಿಯನ್ನು ಮದುವೆಯಾಗಲು ಬಯಸಿರುವನು ಎಮದು ತಿಳಿದೊಡನೆ , ಅವನಿಗಾಗಿ  ನರಸಿಂಗವಂಶದ  ಸುಂದರ ಹುಡುಗಿಯನ್ನುತಂದು ಮದುವೆ ಮಾಡಿದರು ಇದು ಪಯಾಸ್‌ನ ಹೇಳಿಕೆಗೆ ಆಧಾರ ಮತ್ತು ಅವನ ಮಾತು ಸತ್ಯ ಎಂದು ತೋರಿಸುವುದು.ಆದರೆ ಇದರಿಂದ ಇನ್ನೊಂದು ಪ್ರಶ್ನೆ ಏಳುವುದು, ರಾಯನು ಪಟ್ಟಕ್ಕೆ ಏರಿದಾಗ ಮದುವೆಯಾಗಿದ್ದನೆ ? ಹಾಗಿದ್ದರೆ ಸಾಳುವ ತಿಮ್ಮರಸನು ರಾಯನ ಮದುವೆಗೆ ಪಟ್ಟಾಭಿಷೇಕದ ಮುನ್ನವೇ ಅವಸರ ಮಾಡಿದುದು ಏಕೆ ? ಇದಕ್ಕೆ ಕಾರಣ ಪಯಾಸ್‌ ಕಾಲಗಣನೆಯಲ್ಲಿ ಎಡವಿರುವನು ಅದ 1490 ರಲ್ಲಿ ನಡೆದಿರಬೇಕು, 1510 ರಲ್ಲಿ ಅಲ್ಲ.ಅದು ಅಲ್ಲದೆ ಈ ಸಾಳುವ ಯುವರಾಣಿ  1494 ನಂತರ ಮೃತಳಾಗಿರಬಹುದು.ಮತ್ತು ಅದಕ್ಕೆ ತಿಮ್ಮರಸನು ಅವಸರದಿಂದ ಪಟ್ಟಾಭಿಷೇಕದ ಮೊದಲೇ ಮದುವೆ ಮಾಡಿಸಿದ.ಆದರೆ ಪಯಸ್‌ನ ಆಧಾರದ ಹೊರತಾಗಿಯೂ ಈ ಸಾಲ್ವ ವಂಶದ ಮದುವೆ ಸಂಬಂಧವು ಪ್ರಶ್ನೆಯೊಂದನ್ನು ಹುಟ್ಟು ಹಾಕುವುದು. “ಮರಿಸಿ ಪರಿಣಯಮು” ಕೃತಿಯಲ್ಲಿ ಮೋಹನಾಂಗಿಯು ತಿಳಿಸಿರುವಳು ,ತುಳುವರು ಗುಂಡನ ಕಿರಿಯ ಮಗನಾದ ತಿಮ್ಮನ  ಮಕ್ಕಳು , ಸಾಳುವರು ಹಿರಿಯ ಮಗ ನರಸಿಂಹನ ವಂಶಜರು.  ಅಂದರೆ ಸಾಳುವರು ಮತ್ತು ತುಳುವರು ತಂದೆಯ ಕಡೆಯ ಸೋದರಸಂಬಂಧಿಗಳು ಮತ್ತು ಒಂದೇ ಗೋತ್ರಕ್ಕೆ ಸೇರಿದವರು ಆದ್ದರಿಂದ ಅವರ ನಡುವೆ ಮದುವೆ ಯಾಗುವುದ ಅಸಾಧ್ಯ. ಈ ವಿಷಯದಲ್ಲಿ ಸದ್ಯಕ್ಕೆ ನಾನು ಯಾವುದೇ ವಿವರಣೆ ಕೊಡುವುದು ಆಗದು. ಆದರೆ ಸಗೋತ್ರವಿವಾಹವು  ಹಲವು ಸಂದರ್ಭದಲ್ಲಿ ಅನುಮೋದಿಸಲಾಗುತಿತ್ತು.
                                       (  ಡಾ. ಗೋಪಾಲಕೃಷ್ರರಾವ್‌ ಇಂಗ್ಲಿಷ್‌ಲೇಖನದ ಅನುವಾದ)..