Tuesday, February 26, 2013

ಈಜಿಪ್ಷಿಯನ್‌ ಲಿಪಿ




ವಿಶೇಷ ಸೂಚನೆ.-ಇತಿಹಾಸವೆಂದರೆ ಕಾಲಗರ್ಭದಲ್ಲಿ ಅಡಗಿರುವ ಮಾಹಿತಿ. ಅದರ ಪರಿಚಯ ಶಾಸನ , ಸ್ಮಾರಕ ,ನಾಣ್ಯ, ಮಡಿಕೆ ಕುಡಿಕೆ, ಮಣ್ಣಿನಫಲಕ,  ಚಿತ್ರ  ಮತ್ತು ಹಸ್ತಪ್ರತಿಗಳಮೂಲಕ ಸಾಧ್ಯ. ಇತಿಹಾಸಕ್ಕೆ ಕಾಲದೇಶದ ಎಲ್ಲೆ ಕಟ್ಟು ಇಲ್ಲ. ಪುರಾತನ ನಾಗರೀಕತೆಗಳ ಪರಿಚಯವನ್ನು ಅಲ್ಲಿನ ಲಿಪಿಗಳ ಮೂಲಕ ಅರಿಯುವ ಕಿರು ಪ್ರಯತ್ನ ಮಾಡಿದೆ.ಇದರಲ್ಲಿ ಸಂಶೋಧನೆ ಎನ್ನುವ ಮಾತೇ ಇಲ್ಲ. ಅಂತರ್ ಜಾಲದಿಂದ ಪಡೆದ  ಮಾಹಿತಿಯನ್ನು ಸಂಗ್ರಹ ಮಾಡಿ ಅದನ್ನು ಕನ್ನಡದ  ಓದುಗರಿಗೆ ಪರಿಚಯಿಸುವ ಕಿರು ಪ್ರಯತ್ನ ಇದು.ಇದರಲ್ಲಿ  ಯಾವುದೂ ಸ್ವಂತದ್ದು  ಇಲ್ಲ.ಎಲ್ಲ ಹಲವು ಮೂಲಗಳಿಂದ ಪಡೆದಿದೆ. ದೋಷಗಳುಇದ್ದರೆ ಮಾತ್ರ ಅವು ಲೇಖಕನದು. ಪ್ರಾಜ್ಞರು ತಿದ್ದಿದರೆ ಸ್ವಾಗತ.ವಿಷಯ ಮತ್ತು ಚಿತ್ರಗಳು ಅನೇಕ ಅಂತರ್‌ಜಾಲದಲ್ಲಿ ಬರೆದ ಲೇಖಕರಿಂದ ಪಡೆದಿದೆ. ಅವರಿಗೆಲ್ಲ ಋಣಿ.ಕರ್ನಾಟಕ ಇತಿಹಾಸ ಅಕಾದೆಮಿಯ ಅಧ್ಯಕ್ಷ ವಿದ್ವಾಂಸ  ಡಾ. ದೇವರ ಕೊಂಡಾರೆಡ್ಡಿಯವರು  ಉತ್ತೇಜನದಿಂದ ಇದು  ಸಾಧ್ಯವಾಗಿದೆ. ಅವರಿಗೆ ನಮನ.ಇದರ ಹಿಂದಿನ ಸ್ಪೂರ್ತಿಶಾಸನ ತಜ್ಞ ಡಾ. ಪಿ.ವಿ.ಕೃಷ್ಣ ಮೂರ್ತಿಯವರು. ಅವರಿಗೆ ವಂದನೆಗಳು-   ---  ಎಚ್‌...ಶೇಷಗಿರಿರಾವ್‌

 ಈಜಿಪ್ಟಿನ ಪವಿತ್ರ ಲಿಪಿ(Hieroglyp)ಪ್ರಪಂಚದ ಅತಿ ಪ್ರಾಚೀನ ಲಿಪಿಗಳಲ್ಲಿ ಒಂದು. ಸಮಕಾಲೀನ ಸುಮೇರಿಯನ್‌ ಕ್ಯೂನಿಫಾರಂ ಲಿಪಿಯಂತೆ ಪವಿತ್ರ ಲಿಪಿಗಳ ಮೂಲ  ಬಹಳ ನಿಗೂಢವಾಗಿದೆ,ಅದಕ್ಕೆ ಗುರುತಿಸ ಬಹುದಾದ ಹಿಂದಿನ ಲಿಪಿ ಇಲ್ಲ. ಈಜಿಪ್ಟಿನ ಪ್ರಾಚೀನ ದೇವಾಲಯದ ಗೋಡೆಗಳ ಮೇಲೆ,ಬಂಡೆ ಮತ್ತು ಶಿಲೆಗಳಲ್ಲಿಕಂಡರಿಸಿದ , ಪಿರಮಿಡ್ಡುಗಳಲ್ಲಿ, ಸಮಾಧಿಯಒಳಗೆ ಮತ್ತು ಪೆಪ್ರಸ್‌ ಸುರಳಿಗಳ ಮೇಲೆ ಪ್ರಾಚೀನ ಬರಹವು ಕಂಡುಬರುತ್ತದೆ. ಒಂದು ಕಾಲದಲ್ಲಿ ಪವಿತ್ರ ಲಿಪಿಯ ಮೂಲ ಧಾರ್ಮಿಕ ಮತ್ತು ಐತಿಹಾಸಿಕ ಬರವಣಿಗೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಈ ಲಿಪಿಯು ಹಣಕಾಸಿನ ವ್ಯವಹಾರಕ್ಕೂ ಬಳಕೆಯಾಗಿರುವುದು ಕಂಡು ಬಂದಿದೆ. ಅದರಿಂದ ಈ ಲಿಪಿಯಕಾಲವು ಇನ್ನೂ ಹಿಂದಿನದಾಗಿರಬಹುದು ಎನ್ನಲಾಗಿದೆ.

ಈಜಿಪ್ಟಿನ ಬರಹ ಪದ್ದತಿಯು ಬಹಳ ಸಂಕೀರ್ಣವಾಗಿರುವುದು. ಆದರೆ ತುಲನಾತ್ಮಕವಾಗಿ ಈ ಸಂಕೇತಗಳ ಪಟ್ಟಿಯನ್ನು ಮೂರು  ಪ್ರಮುಖ ಭಾಗಗಳಾಗಿ ವಿಂಗಡಿಸುವರು. i(1) ಚಿತ್ರ ಲಿಪಿಗಳು,ಪದಾಂಶವನ್ನು ಪ್ರತಿನಿಧಿಸುವ ಸಂಕೇತಗಳು; (2)ಧ್ವನಿ ಚಿತ್ರಗಳು, ಒಂದು ಅಥವ ಹೆಚ್ಚು ಧ್ವನಿಗಳನ್ನು ಪ್ರತಿನಿಧಿಸುವ ಸಂಕೇತಗಳು ; ಮತ್ತು (3) ನಿರ್ಧಾರಕಗಳು,ಅವು ಪದಾಂಶ  ಅಥವ ಧ್ವನಿಯ ಸಂಕೇತಗಳಲ್ಲ . ಆದರೆಅವು ತಮ್ಮ ಹಿಂದೆ ಬರೆದಿರುವ ಸಂಕೇತಗಳ ಗುಂಪಿನ ಅರ್ಥವನ್ನು ಸ್ಪಷ್ಷ್ಗಳಿಸುತ್ತವೆ

                                                            ಚಿತ್ರ ಲಿಪಿಗಳ ಉದಾಹರಣೆಗಳು



 


ಸಿಮಾಟಿಕ್‌ ಪೂರ್ವ ನಿಷ್ಪನ್ನ ಲಿಪಿಗಳಂತೆ ಇಜಿಪ್ಷಿಯನರು ಬರಿ ವ್ಯಂಜನಗಳನ್ನು ಮಾತ್ರ ಬಳಕೆ ಮಾಡುತಿದ್ದರು. ಅವರಲ್ಲಿ ಸ್ವರಗಳಿಗೆ ಸಂಕೇತಗಳಿರಲಿಲ್ಲ ಅದರಿಂದಾಗಿ ಧ್ವನಿ ಚಿತ್ರಗಳು ಏಕ ವ್ಯಂಜನ, ದ್ವಿ ವ್ಯಂಜನ, ಮತ್ತು  ತ್ರಿವ್ಯಂಜನಗಳಾಗಿರುತ್ತವೆ.
                                                                     ಏಕವ್ಯಂಜನೀಯ ಗಳು:























                                     


ಇಜಿಪ್ಷಿಯನ್‌ ಪವಿತ್ರ ಲಿಪಿಗಳ ಉಚ್ಚಾರ 
ಪ್ರತಿ ವ್ಯಂಜನಗಳ ಮಧ್ಯದಲ್ಲಿ ಯಾವ ಸ್ವರಗಳು ಬರುತ್ತವೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ.  ವ್ಯಂಜನಗಳ ಸರಣಿಯನ್ನು ಮಧ್ಯದಲ್ಲಿ ಸ್ವರವಿಲ್ಲದೆ ಉಚ್ಚರಿಸುವುದು ಕಷ್ಟ.. ಪುರಾತತ್ವಪರಿಣಿತರು ಪವಿತ್ರ ಲಿಪಿಗಳ ಮಧ್ಯದಲ್ಲಿ ಸ್ವರಗಳನ್ನು ಸೇರಿಸುವ  ಶಿಷ್ಟಾಚಾರವನ್ನು ಪಾಲಿಸಿದರು.. ವ್ಯಂಜನಗಳ ನಡುವೆ A /e/  ಇಡಲಾಗುವುದು , /y/  ಅನ್ನು  i /i/ ಎಂದೂ  , /w/  ಅನ್ನು /u/, ಮತ್ತು   /3/ ಮತ್ತು /‘>/ ಗಳನ್ನು /a/  ಎಂದೂ ಬರೆಯಲಾಗುವುದು.ಹೇಗೋ ಏನೋ ಈ ಪದ್ದತಿಯು ಬಳಕೆಯಲ್ಲಿ ಬಂದಿದೆ,ಈಜಿಪ್ಟಿನ ಪದಗಳ ಉಚ್ಚಾರವು ಹೇಗೆ ಎಂಬುದು ಅನೇಕರಿಗೆ ತಿಳಿಯದು.,  19ನೆಯ ವಂಶದ ಅರಸ R‘-mss ನನ್ನು ರಮಸೆಸ್‌ ಅಥವ ರೈಮೆಸೆಸ ಎಂದು ಕರೆಬಹುದೆಂದು ಕ್ಯೂನಿಫಾರಂ ಬರಹಗಳಿಂದ ತಿಳಿಯುವುದು. ಮೆಸಪಟೋಮಿಯಾ ಮತ್ತು ಈಜಿಪ್ಟಿನ ನಡುವಿನ ರಾಜತಾಂತ್ರಿಕ ಪತ್ರ ವ್ಯವಹಾರದಲ್ಲಿ ಈ ಉಲ್ಲೇಖ ಕಾಣಬಹುದು
ನಿರ್ಣಾಯಕಗಳು ಪದಾಂಶಗಳು. ಆದರೆ ತಮ್ಮದೆ ಆದ ಧ್ವನ್ಯಾತ್ಮಕ ಮೌಲ್ಯ ಹೊಂದಿಲ್ಲ. ಯಾವದೇ ಪದದ ಮುಂದೆ ಅವನ್ನು ಬರೆದರೆ ಆ ಶಬ್ದದ ಅರ್ಥವನ್ನು ಸ್ಪಷ್ಟ ಪಡಿಸುವುದು.ಅದಕ್ಕೆ ಕಾರಣ ಈ ಬರಹ ಪದ್ದತಿಯಲ್ಲಿ ಸ್ವರಗಳ ದಾಖಲೆಯೇ ಇಲ್ಲ. ಆದ್ದರಿಂದ ಅನೇಕ ಪದಗಳು ಒಂದೇ ರೀತಿಯ ಸಂಕೇತಗಳನ್ನು ಹೊಂದಿವೆ. ವಿವಿಧ ಸಂಕೇತ ಸಮೂಹಗಳು(ವಿಭಿನ್ನ ಸ್ವರಗಳಿಂದಾಗಿ) ವಿಭಿನ್ನಪದವಾಗುತ್ತವೆ.ಆದ್ದರಿಂದ ಬೇರೆ ಬೇರೆ ಪದಗಳನ್ನುಒಂದೆರೀತಿಯ ಸಂಕೇತಗಳ ಗುಂಪುಗಳ ಪದಾಂಶಗಳ ಸರಣಿಯಲ್ಲಿ ( ಬೇರೆ ಬೇರೆ ಸ್ವರ ಸೇರಿಸಿ) ಬರೆಯಬಹುದು. ಹೀಗಾಗಿ ನಿರ್ಧಾರಕಗಳು ಪದಾಂಶಗಳ ಸರಣಿಯ ಅರ್ಥವಿವರಣೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತ್ವವೆ.


ಸೂಚನೆ : ಚಿತ್ರ ಲಿಪಿ ಸೂಚಕಗಳು  ನಿರ್ಧಾರಕಗಳಾಗಿವೆ.ಅವು ಪದಾಂಶವನ್ನುಚಿತ್ರಲಿಪಿಯಾಗಿ ಮಾರ್ಪಡಿಸುತ್ತವೆ.. ಅನೇಕ ಚಿತ್ರಲಿಪಿಗಳು ಧ್ವನಿ ಲಿಪಿಗಳಾಗಿಯೂ ಬಳಕೆಯಾಗುತ್ತವೆ


ಚಿತ್ರಲಿಪಿ, ಪವಿತ್ರಲಿಪಿ ಮತ್ತು ಸಾಮಾನ್ಯ ಲಿಪಿ
ಈಜಿಪ್ಟ ತಜ್ಞರು ಸಂಪ್ರದಾಯಿಕವಾಗಿ ಪವಿತ್ರಲಿಪಿಯನ್ನು ಅವುಗಳ ಆಕಾರಕ್ಕನುಗುಣವಾಗಿ ಮೂರು ಭಾಗವಾಗಿ ವಿಂಗಡಿಸಿರುವರು(Hieroglyphs) : ಚಿತ್ರಲಿಪಿ(Hieroglyph),ಪವಿತ್ರಲಿಪಿ( hieratic), ಮತ್ತುಸಾಮಾನ್ಯ ಲಿಪಿ( demotic). ಚಿತ್ರಲಿಪಿಯನ್ನು ಬಹುತೇಕ ಬಂಡೆ ಅಥವ ಬೃಹತ್‌ಸ್ಮಾರಕಗಳ ಮೇಲೆ ಕಂಡರಸಿರುವರು ಪವಿತ್ರಲಿಪಿಯು “ ಅರ್ಚಕರ ಲಿಪಿ"  .ವ್ಯಾಪಕವಾಗಿ ಹಸ್ತಪ್ರತಿಗಳಲ್ಲಿ ಮತ್ತು ಚಿತ್ರಗಳಲ್ಲಿ ಬಳಕೆಯಾಗಿದೆ.ಅದು ವಾಸ್ತವವಾಗಿ ಸ್ಮಾರಕಗಳಲ್ಲಿಯ ಚಿತ್ರಲಿಪಿಯ ಕೂಡು ಬರಹವಾಗಿದೆ.ಸಾಮಾನ್ಯ ಲಿಪಿಯನ್ನು ದೈನಂದಿನ  ಬಳಕೆಯಲ್ಲಿ ಉಪಯೋಗಿಸಲಾಗುತಿತ್ತು. ಅದೂ ಕೂಡಾ ಬಹುವಾಗಿ ಕೂಡುಲಿಪಿಯೇ.ಅದು ಪವಿತ್ರಲಿಪಿಯ ಬದಲಾಗಿ ಕ್ರ. ಪೂ. 600  ಇಸ್ವಿಯಿಂ ದೈನಂದಿನ ಬಳಕೆಯಲ್ಲಿತ್ತು.ವಾಸ್ತವವಾಗಿ ಒಂದು ಸಾಮಾನ್ಯ ಲಿಪಿಯನ್ನು ಒಂದಕ್ಕಿಂತ ಹೆಚ್ಚಾದ ಚಿತ್ರ ಲಿಪಿ ಅಥವ ಪವಿತ್ರಲಿಪಿಯಾಗಿ ಅನುವಾದಿಸಬಹುದು. ಆದ್ದರಿಂದ ಸಾಮಾನ್ಯ ಲಿಪಿಗೂ ಉಳಿದವಕ್ಕೂ ಸಂವಾದಿಯಾಗಿ ಒಂದೇ ಸಂಕೇತವಿದೆ ಎನ್ನುವ ಹಾಗಿಲ್ಲ.
ಈಗಾಗಲೇ ತಿಳಿಸಿರುವಂತೆ ಚಿತ್ರಲಿಪಿ ಮತ್ತು ಪವಿತ್ರ ಲಿಪಿಗಳನ್ನು ಪ್ರತಿನಿಧಿಸುವ ಸಂಕೇತಗಳು ಒಂದೇ ರೀತಿಯಲ್ಲಿರುತ್ತವೆ. ವಾಸ್ತವವಾಗಿಈಎರಡೂ ಪದ್ದತಿಗಳೂ ಈಜಿಪ್ಟಿನ ನಾಗರೀಕತೆಯ ಕ್ರಿ.ಪೂ.ಮೂರನೆಯ ಸಹಸ್ರಮಾನದ ಕೊನೆಯ ಅರ್ಧ ಭಾಗದಲ್ಲಿ ವಂಶಪೂರ್ವಯುಗದಲ್ಲಿ ಉಗಮವಾದವು.ಇತ್ತೀಚೆಗೆ ವಂಶಪೂರ್ವ ಅವಧಿಯ ಸ್ಕಾರ್ಪಿಯನ್ I ಅನ್ನು ಕುರಿತ ವಿವರ ಸಿಕ್ಕಿವೆ. ಅವನ ಸಮಾಧಿಯಲ್ಲಿ ( Abydos) ಅತಿ ಹೆಚ್ಚಿ ಸಂಖ್ಯೆಯ ಮುದ್ರೆಗಳು ದೊರೆತಿವ. ಅವುಗಳ ಕಾಲ ಕ್ರಿ. ಫೂ. 3400 ನಿಂದ 3200 ಆಗಿರುವುದರಿಂದ ಅವು ಈಜಿಪ್ಟಿನ ಅತ್ಯಂತ ಪುರಾತನ ಲಿಪಿಗಳಾಗಿವೆ.
ಅತಿಪುರಾತನ  ಚಿತ್ರಲಿಪಿ ಕಂಡರಿಕೆಗಳ ಉದಾಹರಣೆ ಸಿಕ್ಕಿರುವುದು. ನಾರ್ಮರ್‌ನ  ವರ್ಣಫಲಕದಲ್ಲಿದೆ. . ನಾರ್ಮರ್  ಒಬ್ಬ ಪ್ರಾಚೀನ ಅರಸ.. ಅವನು ಸಾಂಪ್ರದಾಯಿಕ ಈಜಿಪ್ಟಿನ ಅರಸರ ಪಟ್ಟಿಯಲ್ಲಿ ಇಲ್ಲದಿದ್ದರೂ  ( ಸೆತಿ ಅರಸನ ಕಾಲದಲ್ಲಿ ತಯಾರಾದ ಅಬ್ಯದಾಸನ ರಾಜರ ಪಟ್ಟಿ). ಆದರೂ, ಅವನ ವರ್ಣಫಲಕದ 
ಮೇಲಿನ ಚಿತ್ರ ಲಿಪಿ ಯಪ್ರಕಾರ ಅವನು ಏಕೀಕೃತ ಈಜಿಪ್ಟಿನನ್ನು  ಕ್ರಿ. ಫೂ.3000 ಆಳಿದ. ಅವನು ಮೇಲ್‌ ಮತ್ತು ಕೆಳ ಈಜಿಪ್ಟನ ಎರಡೂ ಕಿರೀಟ ಧರಿಸಿದ್ದ.. ಅನೇಕ ಈಜಿಪ್ಟನ ತಜ್ಞರು ಅವನನ್ನು ಆ ವಂಶದ ಪ್ರಥಮ ಅರಸ ಮೆಮನೆಸನ ಸಮಕಾಲೀನ ಎನ್ನುವರು, ಇನ್ನೂ ಕೆಲವರು ಅದಕ್ಕೂ ಮೊದಲಿದ್ದ ಎನ್ನುವರು ಸ್ಕಾರ್ಪಿಯನ್‌ ಅರಸ II , ಮತ್ತು  ಕಾ(ಝೆ ಖೆನ್‌ )  ಅರಸರಿಧ್ದ “ಝಿರೋ ವಂಶ” ದವನು ಎನ್ನುವರು..

                                               "Narmer"

ನಾರ್ಮರ್ ಹೆಸರಿನ ಚಿತ್ರಲಿಪಿ ಯಲ್ಲಿ 2  ಪದಾಂಶಗಳಿವೆ. ನೇಮ್ (name,) ಮತ್ತು ಅದ್ನುಆವರಿಸಿದ ಸೆರಖ್. ಹೆಸರಿನ ಬರಹದ  ಮೇಲುಭಾಗವು ಕ್ಯಾಟ್‌ಫಿಷ್  ಕೆಳಭಾಗವು ಉಳಿ(serekh) , ಈಜಿಪ್ಟ್ ಭಾಷೆಯಲ್ಲಿ. ರಾಜರ ಹೆಸರಿನ ಸುತ್ತ ಆವರ ಇರುವುದು. ಆ ಭಾಷೆಯಲ್ಲಿ  ಕ್ಯಾಟ್‌ ಫಿಷ್‌  /n‘>r/, ಮತ್ತು ಉಳಿ /mr/. ಒಟ್ಟಾಗಿ ಸೇರಿಸಿ ಬರೆದರೆ ಅದರ ಉಚ್ಚಾರ /nrmr/. ಅದನ್ನು ನಾರ್ಮರ್( Narmer) ಎಂದುನಾವು ಕರೆದರೂ,ನಮಗೆ /nrmr/. ನಲ್ಲಿರುವ ವ್ಯಂಜನಗಳ ಮಧ್ಯದ ಸ್ವರಯಾವುದು ಎಂಬುದು ತಿಳಿಯದು.
ಸ್ಮಾರಕಗಳ ಚಿತ್ರಲಿಪಿಯ ಜೊತೆಗೆ ಕೂಡುಬರಹದ ಪವಿತ್ರಲಿಪಿಯೂ ಕೂಡಾ “ಕಾ”  ಅರಸನ ಆಳ್ವಿಕೆಯ ಅವಧಿಯಲ್ಲಿದ್ದಿತು.ಅದನ್ನು ಆ ಕಾಲದ ಮಡಕೆಯ ಮೇಲೆ ಕಾಣಬಹುದು. ತುಸು ಸಮಯದ ನಂತರದ ಉದಾಹರಣೆಗಳೆಂದರೆ “ಆಹ “   ಅರಸ ಮತ್ತು “ಡೆನ್”  ಅರಸರಕಾಲದ ಪ್ರಥಮವಂಶದವರ ಅವಧಿಯದು.ಆದರೆ 4ನೆಯ ವಂಶದವರ ಅವಧಿಯಲ್ಲಿ ಸಾಕಷ್ಟು ಪವಿತ್ರಲಿಪಿಗಳ ದಾಖಲೆಗಳು ಲಭ್ಯವಾಗಿವೆ.


ಚಿತ್ರಲಿಪಿ ಬದಲಾಗದೇ ಇದ್ದರೂ, ಅವುಗಳನ್ನು ಕೂಡಿಸಿ ಬರೆಯಲಾಯಿತು. ಅದರಿಂದ ಹೆಚ್ಚಿನ ಸಂಖ್ಯೆಯ ಲಿಗೇಚರ್‌ಗಳ (ಸಂಲಗ್ನ) ಬಳಕೆಯಾಯಿತು ಕೆಳಗಿರುವ  ಚಿತ್ರಲಿಪಿ ಮತ್ತು ಪವಿತ್ರ ಲಿಪಿಗಳನ್ನು ಹೋಲಿಸಿ(ಕಾಲ ಸುಮಾರು ಕ್ರಿ. ಪೂ. 1200 ):

ಮೊದಲ ಮತ್ತು ಎರಡನೆ ಸಾಲಿನ ನಡುವೆ ತುಸು ಹೋಲಿಕೆ ಗುರುತಿಸ ಬಹುದು, ನೀವು ಪವಿತ್ರ ಲಿಪಿಯೂ ಒಂದೆ ಸಂಕೇತವಾಗಿ ಬದಲಾಗಿರುವುದನ್ನೂ ಗುರುತಿಸ ಬಹುದು.ಪದೇಪದೇ ಬಳಸಿದ ಅನೇಕ ಸಂಕೇತಗಳು ಸೇರಿ  ಲಿಗೇಚರ್‌ಗಳಾಗಿರುವವು. ನಾವು 'a' ಮತ್ತು 'e' ಗಳನ್ನು ಸೇರಿಸಿ  'æ'  ಎಂದು ಬರೆಯುವ ಹಾಗೆ..
ಅಂತಿಮವಾಗಿ ಪವಿತ್ರಲಿಪಿಯನ್ನುಅತಿಹೆಚ್ಚು ಸೇರಿಸಿಬರೆದ  ಲಿಪಿಯು ಸಾಮಾನ್ಯ ಬರಹವಾಯಿತು. ಅದು ಚಿತ್ರ ಲಿಪಿಯ ಮೂಲದಿಂದ ಬಂದಿದೆ ಎಂಬ ಸುಳಿವೂ ಸಿಗುವುದಿಲ್ಲ.. ಕ್ರಿ. ಪೂ. 600  , ಪೆಪ್ರಿಯ ಮೇಲೆ ದಾಖಲೆಗಳನ್ನು ಬರೆಯಲು ಬಳಸಲಾಗುತಿದ್ದ ಪವಿತ್ರ ಲಿಪಿಯು  ಧಾರ್ಮಿಕ ಬರಹಗಳಿಗಾಗಿ ಸೀಮಿತವಾಯಿತು.ಸಾಮಾನ್ಯ ಲಿಪಿಯು ದೈನಂದಿನ ಲಿಪಿಯಾಯಿತು. ಅದನ್ನು ಲೆಕ್ಕವಿಡಲು, ಸಾಹಿತ್ಯದಲ್ಲಿ ಇತರೆ ಬರಹಗಳಿಗೆ ಬಳಕೆಮಾಡಿದರು. ಕೆಳಗಿನದು ರೊಜೆಟ್ಟಾ ಶಿಲೆಯ ಮೇಲಿನ ಬರಹ.ಇದಕ್ಕೂ ಚಿತ್ರ ಲಿಪಿಗೂ ಯಾವುದೇ ಹೋಲಿಕೆ ಇಲ್ಲ. ಎಷ್ಟು ಕೂಡಿಸಿ ಬರೆಯಲಾಗಿದೆ ಎಂದರೆ  ಅದು ಅರಾಮಿಕ್‌ಲಿಪಿಯನ್ನು ಹೋಲುವುದು




                  ಕ್ರಿ ಶ.5ನೆಯ ಶತಮಾನದ ಈಜಿಪ್ಟಿನ ಕೊನೆಯ ಶಾಸನ. ಇದು ಕಾಪ್ಟಿಕ್‌ ಲಿಪಿಯಲ್ಲಿದೆ
 ಗ್ರೀಕ್‌ ಆಧಾರಿತ ವರ್ಣಗಳು ಮತ್ತು   ಕೆಲವು ಸಾಮಾನ್ಯ ಸಂಕೇತಗಳ ಸಹಾಯದಿಂದ  ಈಜಿಪ್ಟಿನ ಪ್ರಾಥಮಿಕ ಬರಹ ಪದ್ದತಿಯು  ಗ್ರೀಕ್‌ ಆಧಾರಿತ ವರ್ಣಗಳು ಮತ್ತು   ಕೆಲವು ಸಾಮಾನ್ಯ ಸಂಕೇತಗಳ ಸಹಾಯದಿಂದ ಉಗಮವಾಯಿತು. 

Monday, February 25, 2013

ಅರಟಾಳದ ಅಪ್ರಕಟಿತಶಾಸನ


ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಮ್ಮಿಗಿಯ ಮತ್ತು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ
ಅರಟಾಳದ ಅಪ್ರಕಟಿತ ಶಾಸನಗಳು
ಹನುಮಾಕ್ಷಿ ಗೋಗಿ?

ಮುಂಡರಗಿ ತಾಲೂಕಿನ ತುಂಗಭದ್ರಾ ನದೀ ತೀರದಲ್ಲಿರುವ ಚಿಕ್ಕಹಳ್ಳಿ ಹಮ್ಮಿಗಿ. ಊರಿನಲ್ಲಿ ಬಸದಿಯೊಂದಿದ್ದು, ಅದರಲ್ಲಿ ಸಂಗಮರವರಿ ಕಲ್ಲಿನಲ್ಲಿ ಕೆತ್ತಿದ ಚಂದ್ರಪ್ರಭ ತೀರ್ಥಂಕರ ವಿಗ್ರಹವಿದೆ. ಅದರೊಂದಿಗೆ ಸುಮಾರು ಎರಡು ಅಡಿ ಎತ್ತರದ ಚೌವ್ವೀಸ ತೀರ್ಥಂಕರರ ಲೋಹದ ವಿಗ್ರಹವಿದ್ದು, ಅದರ ಪಾದಪೀಠದಲ್ಲಿ ಪ್ರಸ್ತುತ ಶಾಸನವಿದೆ.
ಶಾಸನವು ಕಾಳುಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಮಹಾಮಂಡಲೇಶ್ವರ ಚಂನಭೈರಾದೇವಿಯ ಮಹಾಪ್ರಧಾನನಾದ ಹೈವಣನಾಯ್ಕರ ಪತ್ನಿಯೂ ಪಾರಿಸದೇವನಾಯ್ಕರ ಮಗಳೂ ಮಳ್ಕಿಯಲ್ಲಿ ಹುಟ್ಟಿಕೊಂಡ ಆನೆವಳಿಯ ಪದುಮರಸಿ ನಾಯ್ಕತಿಯು ಆಣತಿನೋ[ಂ]ಪಿಯನ್ನು ಕೈಕೊಂಡು, ವ್ರತದ ಉದ್ಯಾಪನೆಯ ಸಮಯದಲ್ಲಿ ತಮಗೆ ಪುಣ್ಯಪ್ರಾಪ್ತಿ ಆಗಬೇಕೆಂದು, ಶಾಸನವನ್ನು ಕೆತ್ತಿಸಿ ಈ ಚೌವ್ವೀಸ ತೀರ್ಥಂಕರ ವಿಗ್ರಹವನ್ನು ಮಾಡಿಸಿದಳೆಂದು ತಿಳಿಸುತ್ತದೆ.
ಇಲ್ಲಿ ಬರುವ ಆಣತಿ ನೋಂಪಿ ಎಂದರೆ ಜೈನ ಶ್ರಾವಕರು ತಮ್ಮ ಗುರುಗಳಾದ ಜೈನಾಚಾರ್ಯರ ಆದೇಶದಂತೆ ಆಚರಿಸುವ ಒಂದು ಪ್ರಕಾರದ ವ್ರತ. ಇಲ್ಲಿ ಯಾವ ರೀತಿಯ ಆಣತಿ ಇದಾಗಿತ್ತು ಎಂಬುದರ ವಿವರವಿಲ್ಲ. ಇದನ್ನು ಜಾತಿ/ಆಣಂತಿ ನೋಂಪಿ ಎಂದೂ ಕರೆಯಲಾಗುತ್ತದೆ. ಭಗವತೀದಾಸನೆಂಬ (೧೭ನೆಯ ಶತಮಾನ) ಹಿಂದಿಯ ಕವಿ ‘ಆದತ್ತಿ ವ್ರತರಾಸ ಎಂಬ ಕೃತಿಯನ್ನು ರಚಿಸಿದ್ದಾನೆ. ಆಣತಿ ವ್ರತವು ಅಭಕ್ಷಣಕ್ಕೆ ಸಂವಾದಿಯಾದುದು. (ಮಹಾಪುರಾಣ, ಪರ್ವ ೭೧, ಶ್ಲೋಕ ೯೪೫) ‘ದೇಮಪಾಯಗಳು ಆಣಂತಿಯ ನೋಂಪಿ ನಿಮಿತ್ತವಾಗಿ ಮಾಡಿಸಿದ ಪ್ರತಿಷ್ಠೆ ಎಂಬ ಉಲ್ಲೇಖ ಶಾಸನದಲ್ಲಿ ಬಂದಿದೆ. (ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್, ೧೯೪೧, ಪು. ೫೧, ಕಾಲ ಕ್ರಿ.ಶ.೧೨೦೦, ನೋಂಪಿಯ ಕಥೆಗಳು, ಡಾ. ಹಂಪ ನಾಗರಾಜಯ್ಯ, ಹಂಪಿ ವಿವಿ, ೨೦೦೧.)
ಸಾಮಾನ್ಯವಾಗಿ ನೋಂಪಿ ಪಾಲನೆ ಮಂಡಲಗಳಂತೆ ಬೆಸ ಸಂಖ್ಯೆಯಲ್ಲಿ ಇರುತ್ತದೆ. ಆದರೆ ಆಣತಿ ನೋಂಪಿಯು ಒಂದು ದಿನ ಮಾತ್ರ ನಡೆಸುವ ನೋಂಪಿಯೋ ಅಥವಾ ಚಾತುರ್ಮಾಸದುದ್ದಕ್ಕೂ ನಡೆಸುವದೋ ತಿಳಿದುಬರುವುದಿಲ್ಲ. ಹಲವಾರು ರೀತಿಯ ನೋಂಪಿಗಳ ಪಾಲನೆಯ ಕುರಿತು ಡಾ. ಹಂಪನಾ ಅವರು ನೋಂಪಿಯ ಕಥೆಗಳು ಕೃತಿಯಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ. ‘ನೋಂಪಿಯನ್ನು ಪ್ರಾರಂಭಿಸುವುದಕ್ಕೆ ಹೇಗೆ ಒಂದು ಶಾಸ್ತ್ರೋಕ್ತ ವಿಧಿ ಇದೆಯೋ ಹಾಗೇ ನೋಂಪಿಯನ್ನು ಪೂರ್ಣಗೊಳಿಸುವುದಕ್ಕೂ ಒಂದು ಕ್ರಮವಿದೆ. ಇದನ್ನು ಉದ್ಯಾಪನ ಎನ್ನುವರು. ವ್ರತ ಸಮಾಪ್ತಿ ಎಂದು ಇದರ ರೂಢಿಯ ಅರ್ಥವಾದರೂ, ವ್ರತವನ್ನು ಪೂರ್ಣಗೊಳಿಸುವ ಕ್ರಮವೇ ಉದ್ಯಾಪನೆ ಎನ್ನುತ್ತಾರೆ ಅವರು*. ಆ ಸಂದರ್ಭದಲ್ಲಿ ಬಹುತೇಕ ಶ್ರೀಮಂತ ಶ್ರಾವಕರು ತೀರ್ಥಂಕರ ಪ್ರತಿಮೆಗಳನ್ನು ಮಾಡಿಸಿ ಬಸದಿಗಳಿಗೆ ನೀಡುತ್ತಿದ್ದರು. ಇಂತಹ ಹಲವಾರು ವ್ರತಗಳು, ಅವುಗಳ ಉದ್ಯಾಪನೆ ಹಾಗೂ ಆ ಸಂದರ್ಭದಲ್ಲಿ ನೋಂಪಿಯ ಸ್ಮರಣಾರ್ಥವಾಗಿ ಬಸದಿಗೆ ನೀಡಿದ ವಿಗ್ರಹಗಳ ಕುರಿತು ಶಾಸನಗಳಲ್ಲಿ ಸಾಕಷ್ಟು ವಿವರಗಳಿವೆ. ಇಂತಹ ೮೪ ವ್ರತಗಳು ಮತ್ತು ಅವುಗಳ ಬಗ್ಗೆ ಇರುವ ಕಥೆಗಳನ್ನು ನಾಡೋಜ ಡಾ. ಹಂಪನಾ ಅವರು ತಮ್ಮ ಕೃತಿ ನೋಂಪಿಯ ಕಥೆಗಳಲ್ಲಿ ನೀಡಿದ್ದಾರೆ.
ಹಾಡುವಳ್ಳಿಯ ಮಹಾಮಂಡಲೇಶ್ವರ ಎನಿಸಿಕೊಂಡ, ಸ್ವತಃ ಜೈನಧರ್ಮೀಯಳೂ ಆದ ಚನ್ನಭೈರಾದೇವಿಯ ಕಾಲದಲ್ಲಿ ರಚಿತಗೊಂಡ ಈ ಶಾಸನ ಸಹಿತ ಚೌವ್ವೀಸ (೨೪) ತೀರ್ಥಂಕರರ ವಿಗ್ರಹವನ್ನು ಯಾವುದೋ ಕಾಲದಲ್ಲಿ ಕರಾವಳಿಯ ತೀರದಿಂದ ಹಮ್ಮಿಗೆಗೆ ಸಾಗಿಸಲಾಗಿದೆಯೆಂದು ಊಹಿಸಬಹುದಾಗಿದೆ. ಇದರ ಮೂಲಸ್ಥಾನ ಯಾವ ಊರಾಗಿತ್ತೆಂದು ತಿಳಿಯದು.
ಹಾಡುವಳ್ಳಿ (ಸಂಗೀತಪುರ) ಅರಸರ ಮೂಲಪುರುಷರ ಹೆಸರೂ ಹೈವಣರಸ/ಹೈವಭೂಪ/ಹೈವರಾಜ ಆಗಿತ್ತೆಂದು ಗಮನಿಸಿದಾಗ, ಈ ಅರಸರಲ್ಲಿ ಕೆಲವರು ಹೈವೆ ದೇಶವನ್ನು (ಪ್ರಾಂತ) ಆಳುತ್ತಿದ್ದುದರಿಂದ ಈ ಹೆಸರು ಬಂದಿತ್ತೆಂದು, ಅದೇ ಹೆಸರು ಚನ್ನಭೈರಾದೇವಿಯ ಪ್ರಧಾನನಿಗೂ ಇತ್ತೆಂದು ಗ್ರಹಿಸಬಹುದು. ಪಾರಿಸದೇವ ಎನ್ನುವ ಹೆಸರು ೨೪ನೆಯ ತೀರ್ಥಂಕರ ಪಾರ್ಶ್ವನಾಥ ಹೆಸರಿನ ರೂಪವೇ ಆಗಿದೆ. ವರದೇವತೆ ಪದ್ಮಾವತಿಯು ಪಾರ್ಶ್ವನಾಥನ ಯಕ್ಷಿಯಾಗಿದ್ದು, ಆ ಹೆಸರಿನ ಆಡುನುಡಿಯ ರೂಪವೇ ಪದುಮರಸಿ (ಪದುಮ+ಅರಸಿ) ಆಗಿದ್ದು, ನಾಯಕನೊಬ್ಬನ ಪತ್ನಿಯಾಗಿದ್ದರಿಂದ ನಾಯ್ಕತಿ ಎನ್ನುವ ಉತ್ತರಪದ ಅಂಟಿಕೊಂಡಿದೆಯೆಂದು ಹೇಳಬಹುದು.
ಮಳ್ಕಿ (ಮಕ್ಕಿ-ವಿಜಾತೀಯ ದ್ವಿತ್ವವು ಸಜಾತೀಯ ದ್ವಿತ್ವವಾಗಿದೆ.) ಮತ್ತು ಆನೆವಳಿ (ಆನೆ+ಪಳ್ಳಿ=ಆನೆಪಳ್ಳಿ> ಆನೆವಳ್ಳಿ. ಇಲ್ಲಿ ಪ>ವ ಆಗಿದೆ.) ಇವು ಸ್ಥಳನಾಮಗಳಾಗಿವೆ. ಹಾಗೆಯೇ ಚಂನಭೈರಾದೇವಿ, ಹೈವಣನಾಯ್ಕ, ಪಾರಿಸದೇವ ನಾಯ್ಕ, ಪದುಮರಸಿನಾಯ್ಕತಿ ಇವು ವ್ಯಕ್ತಿನಾಮಗಳಾಗಿವೆ. ಪುಲ್ಲಿಂಗ ರೂಪವಾದ ನಾಯ್ಕ (ನಾಯಕ) ಇದಕ್ಕೆ ಸ್ತ್ರೀಲಿಂಗವಾಚಿ ಇತಿ ಸೇರಿಕೊಂಡು ನಾಯ್ಕತಿ (ನಾಯ್ಕ+ಇತಿ) ಆಗಿದೆ.
ಶಾಸನದ ಕಾಲವನ್ನು ‘ಶ್ರೀಮುಖ ಸಂವತ್ಸರದ ಚೈತ್ರ ಶು ೫ಲು ಎಂದು ಶಾಸನವು ಉಲ್ಲೇಖಿಸುತ್ತಿದ್ದು, ಚೆನ್ನಭೈರಾದೇವಿಯ ಕಾಲವು ಕ್ರಿ.ಶ.೧೫೪೯-೧೬೦೫ ಆಗಿರುವುದರಿಂದ, ಪ್ರಸ್ತುತ ಶಾಸನದ ಕಾಲವನ್ನು ಕ್ರಿ.ಶ.ಮಾರ್ಚ್ ೮, ೧೫೭೩ ಭಾನುವಾರವಾಗಿದೆಯೆಂದು ಗುರುತಿಸಬಹುದು.

ಶಾಸನದ ಪೂರ್ಣಪಾಠವು ಕೆಳಗಿನಂತಿದೆ
೧        ಶ್ರೀಮುಖ ಸಂವತ್ಸರದ ಚೈತ್ರ ಶು ೫ಲು ಶ್ರೀಮನ್ಮಹಾಮಂಡಲೇಶ್ವರ ಚೆಂ-
೨        ನಭೈರಾದೇವಿ ಅಮ್ಮನವರ ಮಹಾಪ್ರಧಾನ ಹೈವಣನಾಯ್ಕರ ಮ-
೩        ದವಳಿಗೆ ಪಾರಿಸದೇವನಾಯ್ಕರ ಮಗಳು ಮಳ್ಕಿಯಲ್ಲಿ ಹುಟ್ಟಿಕೊಂಡ
೪        ಆನೆವಳಿಯ ಪದುಮರಸಿನಾಯ್ಕತಿಯರು ಆಣತಿ ನೋ[ಂ]ಪಿಯ ವುದ್ಯಾಪ-
೫        ನೆಗೆ ತಮಗೆ ಪುಣ್ಯಾರ್ಥಕೆ ಮಾಡಿಸಿದ ಚವೀಸ ತೀರ್ಥಕ[ಂಕರ]ರಿಗೆ ಮಂಗಲಮಸ್ತು ಶ್ರೀ [||*]

ಅರಟಾಳದ ಅಪ್ರಕಟಿತ ಶಾಸನಗಳು
ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಒಂದು ಹಳ್ಳಿ ಅರಟಾಳ. ಶಿಗ್ಗಾಂವಿಯಿಂದ ದಕ್ಷಿಣಕ್ಕೆ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಈಗ ದೊರೆಯುವಂತೆ ಕಲ್ಯಾಣಚಾಲುಕ್ಯರ ಪ್ರಾರಂಭಿಕ ಕಾಲದಲ್ಲಿ ನಿರ್ಮಾಣಗೊಂಡ ಗರ್ಭಗೃಹ, ನಾಲ್ಕು ಕಂಬಗಳುಳ್ಳ ನವರಂಗಗಳಿಂದ ಕೂಡಿದ ಬಸದಿಯೊಂದಿದೆ. ಅದರ ನವರಂಗದ ಬಲಮೂಲೆಯಲ್ಲಿ ಶಾಸನದ ಫಲಕವೊಂದು ನಿಂತಿದೆ. ನವರಂಗದಲ್ಲಿಯ ಪಾರ್ಶ್ವನಾಥ ತೀರ್ಥಂಕರನ ವಿಗ್ರಹದ ಪಾದಪೀಠದಲ್ಲಿ ಶಾಸನವಿದೆ. ಶಾಂತಿನಾಥ ತೀರ್ಥಂಕರನ ವಿಗ್ರಹವೊಂದು ಗರ್ಭಗುಡಿಯಲ್ಲಿದ್ದು, ಅದರ ಮೇಲೆಯೂ ಶಾಸನದ ಸಾಲುಗಳನ್ನು ಕೆತ್ತಲಾಗಿದೆ.
ಊರ ಪ್ರಾರಂಭದಲ್ಲಿಯೇ ವೀರಭದ್ರನ ಗುಡಿಯೆಂದು ಕರೆಯಿಸಿಕೊಳ್ಳುವ ಇತ್ತೀಚಿನ ಗುಡಿಯೊಂದಿದ್ದು, ಅದರ ಎದುರಿಗೆ ಶಾಸನದ ಫಲಕವೊಂದು ಬಿದ್ದಿದೆ. ಕಲ್ಮೇಶ್ವರ ಗುಡಿಯೆಂದು ಕರೆಯಿಸಿಕೊಳ್ಳುವ ಪುರಾತನ ದೇಗುಲ ಜೀರ್ಣಾವಸ್ಥೆಯಲ್ಲಿದ್ದು ಅದರ ಮುಂದೆ ದೊಡ್ಡ ಹೊಂಡವೊಂದಿದೆ. ಅದರ ದಂಡೆಯಲ್ಲಿ ಮೂರು ವೀರಗಲ್ಲುಗಳನ್ನು ನಿಲ್ಲಿಸಿದ್ದು, ಎರಡರ ಮೇಲೆ ಲಿಪಿ ಇದೆ. ವೀರಭದ್ರನ ಗುಡಿ ಎದುರಿನ ಎರಡು ಗಾಲಿಗಳ ಮೇಲೆಯೂ ಅಕ್ಷರಗಳಿವೆ.
ಹೀಗೆ ಇಡೀ ಊರಲ್ಲಿ ದೊರೆಯುವ ಶಾಸನಗಳ ಸಂಖ್ಯೆ ಏಳು. ಆದರೆ ಧಾರವಾಡ ಜಿಲ್ಲೆಯ ಶಾಸನ ಸೂಚಿಯಲ್ಲಿ ಗುರುತಿಸಿರುವಂತೆ ಕೇವಲ ನಾಲ್ಕು ಶಾಸನಗಳ ಕುರಿತು ರಿಪೋರ್ಟಗಳಲ್ಲಿ ವರದಿಯಾಗಿದೆ. ಇನ್ನುಳಿದ ೩ ಶಾಸನಗಳನ್ನು ಗುರುತಿಸಿಲ್ಲ. ಡಾ|| ಹಂಪನಾ ಅವರ ಸೂಚನೆಯಂತೆ, ಇತ್ತೀಚೆಗೆ ನಾನು ನಡೆಸಿದ ಪರಿವೀಕ್ಷಣೆಯಲ್ಲಿ ಪಡಿಯಚ್ಚು ಮಾಡಿಕೊಂಡ ಈ ಏಳು ಶಾಸನಗಳ ಪಠ್ಯವನ್ನು ಹೊರತರುತ್ತಿದ್ದೇನೆ.
ಬಸದಿಯ ಹಿಂಬದಿಯ ದಿಬ್ಬದಲ್ಲಿ ಹೂತಿರುವ ಶಾಸನ
ಕ್ರಿ.ಶ. ೧೦೬೧
ಶಾಸನದ ಮೇಲಿನ ೧ ಭಾಗದಲ್ಲಿ ಮುಕ್ಕೊಡೆ ಸಹಿತ ಪರ್ಯಂಕಾಸನಸ್ಥ ತೀರ್ಥಂಕರ ಶಿಲ್ಪವಿದ್ದು, ಎಡ-ಬಲಗಳಲ್ಲಿ ಚಾಮರಧಾರಿಗಳಿದ್ದಾರೆ. ತೀರ್ಥಂಕರನ ಎಡಪಕ್ಕದಲ್ಲಿ ಕರುವಿಗೆ ಹಾಲೂಡುತ್ತಿರುವ ಆಕಳಿನ ಉಬ್ಬುಶಿಲ್ಪವಿದ್ದು, ಅದರ ಮೇಲೆ ಚಂದ್ರನಿದ್ದಾನೆ. ಶಾಸನದ ಬಲಭಾಗ ಅಂದಾಜು ೮’’ ರಿಂದ ೧೦’’ ಗಾತ್ರದ ಕಲ್ಲು ಒಡೆದು ಕಳೆದಿದೆ. ಈಗ ಲಭ್ಯವಿರುವ ಶಾಸನವೂ ಮಧ್ಯದಲ್ಲಿ ಎರಡು ತುಂಡುಗಳಾಗಿ ಒಡೆದಿದೆ. ೧’’ ಗಾತ್ರದ ಅಕ್ಷರಗಳನ್ನು ಆಳವಾಗಿ ಕೆತ್ತಲಾಗಿದೆ.
೫೦’’ ಉದ್ದ ೨೪’’ ಅಗಲದ ಕರಿಕಲ್ಲಿನ ಮೇಲೆ ಶಾಸನವನ್ನು ಕೆತ್ತಿದ್ದು, ೩೮ ಸಾಲುಗಳನ್ನು ಹೊಂದಿದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರೈಳೋಕ್ಯಮಲ್ಲ ಮೊದಲನೆಯ ಸೋಮೇಶ್ವರನ ಕಾಲದ ಶಾಸನವಿದಾಗಿದ್ದು, ಶಾಸನದಲ್ಲಿರುವ ಮಿತಿಯು ಕ್ರಿ.ಶ.೧೦೬೧ರ ಜನೆವರಿ ೧೪ಕ್ಕೆ ಸರಿಹೊಂದುತ್ತದೆ.
ಗಂಗ ಪೆರ್ಮಾಡಿದೇವರು ಗಂಗವಾಡಿ ತೊಂಬತ್ತಾರು ಸಾವಿರ ಬನವಸೆ ಪನ್ನಿರ್ಚ್ಛಾಸಿರಗಳನ್ನು ಆಳುತ್ತಿರುವಾಗ, ಪಾನುಂಗಲ್ಲು ಐನೂರಿನಲ್ಲಿ ಮಯೂರವರ್ಮನ ಮಗ ಕಾದಂಬ ಚಕ್ರೇಶ್ವರನಾದ ಹರಿಕೇಸರಿ ಮಹಾಮಂಡಳೇಶ್ವರನಾಗಿ ರಾಜ್ಯಭಾರ ಮಾಡುತ್ತಿದ್ದ. ಆತನ ಪತ್ನಿ ದಾನಚಿಂತಾಮಣಿ ಎನಿಸಿದ ಲಚ್ಚಲದೇವಿ ಮಲ್ಲವುರ, ಬಂಕಾಪುರ, ಪುಲ್ಲಣಿಗಳಲ್ಲಿ ಶಿವದೇವಾಲಯಗಳನ್ನು ನಿರ್ಮಿಸಿದಳಂತೆ. ಹಾಗೆಯೇ ಹರಿಯಬ್ಬೆಯ ಬಸದಿ ಹೆಸರಿನ ಜಿನಾಲಯಕ್ಕೆ ದಾನ ಕೊಟ್ಟ ಉಲ್ಲೇಖ ಪ್ರಸ್ತುತ ಶಾಸನದಲ್ಲಿದೆ. ಬಹುಶಃ ಇಲ್ಲಿ ಉಲ್ಲೇಖಿತಳಾದ ಹರಿಯಬ್ಬೆ ಹರಿಕೇಸರಿಯ ಅಜ್ಜಿ ಮತ್ತು ಅಜ್ಜ ಹರಿಕಾಂತದೇವನ ಹೆಂಡತಿಯಾಗಿರಬಹುದೆಂದು ಊಹಿಸಬಹುದಾಗಿದೆ, ಶಾಸನವು ತ್ರುಟಿತಗೊಂಡಿರುವುದರಿಂದ ಅವರಿಬ್ಬರ ನಡುವಣ ಸಂಬಂಧ ಸ್ಪಷ್ಟವಾಗುವುದಿಲ್ಲ.
ಮೂಲಸಂಘ, ಸೇನಗಣ, ಚಂದ್ರಿಕಾವಾಟ ಗಚ್ಛದ ಅಜಿತಸೇನ ಭಟ್ಟಾರಕದೇವರ ನಂತರದ ಆಚಾರ್ಯ ಪರಂಪರೆಯಲ್ಲಿದ್ದ ನರೇಂದ್ರಸೇನಮುನಿ, ಸಮನ್ತಭದ್ರದೇವರು, ಅಷ್ಟೋಪವಾಸಿ, ದೇವಸೇನ ಎಂಬವರನ್ನು ಈ ಶಾಸನ ಬಣ್ಣಿಸುತ್ತದೆ.
ಕದಂಬ ಮಹಾಮಂಡಳೇಶ್ವರ ಹರಿಕೇಸರಿದೇವರು ಹಾಗೂ ಆತನ ಮಡದಿ ಲಚ್ಚದೇವಿಯರು ಸೇರಿ ಹರಿಯಬ್ಬೆಯ ಬಸದಿಯ ಖಣ್ಡಸ್ಫುಟಿತ ಜೀರ್ಣೋದ್ಧಾರಗಳಿಗಾಗಿ ಕೆರೆಯ ಕೆಳಗೆ ಎರಡು ಮತ್ತರು ಭೂಮಿ ದಾನವಾಗಿ ಕೊಟ್ಟುದನ್ನು ಶಾಸನ ದಾಖಲಿಸುತ್ತದೆ.
ಈ ಶಾಸನದಲ್ಲಿ ಉಲ್ಲೇಖಿತನಾದ ಮಹಾಮಂಡಳೇಶ್ವರ ಹರಿಕೇಸರಿದೇವ ಹಾನಗಲ್ಲು ಕದಂಬ ಮಹಾಮಂಡಳೇಶ್ವರ ಮಯೂರವರ್ಮ ಹಾಗೂ ಕಲ್ಯಾಣ ಚಾಲುಕ್ಯ ಚಕ್ರವರ್ತಿಗಳಾಗಿದ್ದ ಐದನೆಯ ವಿಕ್ರಮಾದಿತ್ಯ ಹಾಗೂ ಜಗದೇಕಮಲ್ಲ ಇಮ್ಮಡಿ ಜಯಸಿಂಹರ ಸೋದರಿ ರಣಭೈರವಿ ಎನಿಸಿದ ಅಕ್ಕಾದೇವಿಯರ ಹಿರಿಯ ಮಗ ಎನ್ನುವುದು ಗಮನಾರ್ಹ.
ಈಗಾಗಲೇ ಅರಟಾಳದಲ್ಲಿ ದೊರೆತಿರುವ ಶಾಸನವೊಂದು ಪಯಿಠ್ಠಣದ ಬೆಟ್ಟಕೇರಿಯ ಗಂಗರ ಬಮ್ಮಿಸೆಟ್ಟಿ ಮಾಡಿಸಿದ ಬಸದಿಯೊಂದನ್ನು ಹೆಸರಿಸುತ್ತಿದ್ದು, ಈ ಶಾಸನ ಹರಿಯಬ್ಬೆಯ ಬಸದಿ ಎಂಬ ಹೆಸರಿನ ಇನ್ನೊಂದು ಬಸದಿ ಅಲ್ಲಿದ್ದುದನ್ನು ಸೂಚಿಸುತ್ತದೆ. ಈ ಶಾಸನ ದೊರೆತ ಸ್ಥಳದಲ್ಲಿ ಉತ್ಖನನ ನಡೆಸಿದರೆ ಶಾಸನದ ಇನ್ನೊಂದು ತುಣುಕು ಹಾಗೂ ಬಸದಿಯ ಅವಶೇಷಗಳು ದೊರೆಯಬಹುದಾಗಿದೆ.
ಹರಿಕೇಸರಿಯ ಠಾಣ ಅಥವಾ ಹರಿಯಬ್ಬೆಯ ಠಾಣ ಎಂದು ಪ್ರಾರಂಭದಲ್ಲಿ ಕರೆಸಿಕೊಂಡ ಈ ಊರು, ಹರಿಠಾಣ ಎಂದು ಇಲ್ಲಿಯ ಇನ್ನುಳಿದ ಶಾಸನಗಳಲ್ಲಿಯೂ ಉಲ್ಲೇಖಗೊಂಡು, ಹರಿಠಾಣ>ಅರಿಠಾಣ>ಅರಠಾಣ>ಅರಟಾಣ>ಅರಟಾಳ ಎಂದು ಕಾಲಾಂತರದಲ್ಲಿ ಹೆಸರು ಬದಲಿಸಿಕೊಂಡಿದೆ ಎಂದು ಹೇಳಬಹುದು. ಹ>ಅ ಆಗುವುದು, >ಟ ಆಗುವುದು, >ಳ ಆಗುವುದು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಹಜ ಕ್ರಿಯೆಯಾಗಿದೆ.
ಕಲ್ಯಾಣ ಚಾಲುಕ್ಯರ ಮಹಾಮಂಡಳೇಶ್ವರರಾಗಿ ಸುಮಾರು ಇನ್ನೂರು ವರ್ಷಗಳವರೆಗೆ ಆಳಿದ ಹಾನುಗಲ್ಲು ಕದಂಬರ ಒಂದು ಪ್ರಮುಖ ಶಾಖೆ ಬಂಕಾಪುರವನ್ನು ಕೇಂದ್ರವಾಗಿಟ್ಟುಕೊಂಡು ಆಳಿದೆ. ಈ ವಂಶದ ಪ್ರಮುಖ ಅರಸರ ವಂಶಾವಳಿಯನ್ನು ಹೀಗೆ ನೀಡಬಹುದು.
ಹರಿಕಾಂತದೇವ + ಹರಿಯಬ್ಬೆ
|
ಮಯೂರವರ್ಮ + ಅಕ್ಕಾದೇವಿ
|
------------------------------------------
                         |                      |                                   |
ಹರಿಕೇಸರಿ+ಲಚ್ಚಲದೇವಿ          ತೋಯಿಮದೇವ+ಮಾಳಲದೇವಿ           ಹರಿಕಾಂತದೇವ
ಈ ಮನೆತನದ ಇವರೆಲ್ಲರ ವ್ಯಕ್ತಿತ್ವ, ಸಾಧನೆ, ದಾನ-ಧರ್ಮಗಳ ಕುರಿತಾಗಿ ಹಾವಣಗಿ, ಬೆಳವತ್ತಿ, ಗುಡಗುಡಿ, ಬೈಚವಳ್ಳಿ, ಹೊಟ್ಟೂರು, ಶಿಗ್ಗಾಂವ, ಆಡೂರು, ಹಾನಗಲ್ಲು, ಬಂಕಾಪುರ, ನೀರಲಗಿ, ಕಾಗಿನೆಲ್ಲಿ, ಮಂತಗಿ, ಸೂಡಿ, ಹಿರೆಕಣಗಿ, ಉಪ್ಪುಣಸಿ, ಮಲಗುಂದ, ಹಿರೇಬಾಸೂರು, ಅಕ್ಕಿವಳ್ಳಿ, ಅರಳೇಶ್ವರ, ನರೇಗಲ್ಲು ಶಾಸನಗಳು ಸುಂದರವಾಗಿ, ಸುದೀರ್ಘವಾಗಿ ವರ್ಣಿಸುತ್ತವೆ.
ಶಾಸನದ ಪಾಠ
೧          [ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘ ಲಾಂಛ*]ನಂ ಜೀಯಾ ತ್ರೆ ಳೋಕ್ಯನಾಥಸ್ಯ ಶಾಸನಂ ಜಿನಶಾಸನಂ ||
೨          [ಸ್ವಸ್ತಿ ಸಮಸ್ತ ಭುವನಾಶ್ರಯ*] ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರಂ ಪರಮ
೩          [ಭಟ್ಟಾರಕಂ ಸತ್ಯಾ*]ಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ರೈಳೋಕ್ಯ-
೪          [ಮಲ್ಲದೇವರ ವಿಜಯ*]ರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾಚಂದ್ರಾ-
೫          [ರ್ಕ್ಕತಾರಂಬರಂ ಸಲು*]ತ್ತಮಿರೆ ತತ್ಪುತ್ರಂ ಸ್ವಸ್ತಿ ಸತ್ಯವಾಕ್ಯ ಕೊಂಗುಣಿವರ್ಮ್ಮ ಧರ್ಮ್ಮ
೬          [ಮಹಾರಾಜಾಧಿರಾಜ ಕೋ*]ಳಾಳ ಪುರವರೇಶ್ವರಂ ಪದ್ಮಾವತೀಲಬ್ಧ ವರಪ್ರಸಾದಂ ಶ್ರೀಮಚ್ಚಾಳುಕ್ಯ ಗಂಗ ಪೆ-
೭          [ರ್ಮ್ಮಾಡಿದೇ*]ವರ್ಗ್ಗಂಗವಾಡಿ ತೊಬತ್ತಱುಸಾಸಿರಮುಂ ಬನವಸೆ ಪನ್ನಿರ್ಚ್ಛಾಸಿರಮುಮಂ
೮          [ದುಷ್ಟನಿಗ್ರಹದಿಂ ಶಿಷ್ಟ ಪ್ರತಿ*]ಪಾಳನದಿಂ ಸುಖಸಂಕಥಾ ವಿನೋದದಿನರಸುಗೆಯ್ಯುತ್ತಮಿರೆ || ಸ್ವಸ್ತಿ ಸಮಧಿಗ-
೯          [ತ ಪಂಚಮಹಾಸಬ್ದ ಮಹಾ*]ಮಣ್ಡಳೇಶ್ವರಂ ಬನವಾಸೀ ಪುರವರೇಶ್ವರಂ ಧರಣೀದೇವತಾ ರುದ್ರ ಒರಸಾದೋತ್ಪಾ-
೧೦       . . . . . . . . . ಮಯೂರವರ್ಮ್ಮ ವಂಸೋದ್ಭವ ಅಷ್ಟಾದಸಾಸ್ವಮೇಧ ದೀಕ್ಷಿತ ಸತ್ಯ ನಿತ್ಯ
೧೧       [. . . . ರಿಪುರಾಜ ಕುಂಜರ ಪ್ರ*]ತಿಪನ್ನ ಮೇರು ಸರಣಾಗತ ವಜ್ರಪಂಜರ ಕಡಂಬರಾಭರಣಂ ಶ್ರೀಮನ್ಮಹಾಮಣ್ಡ-
೧೨       [ಳೇಶ್ವರಂ ಹರಿಕೇಸರಿದೇವರ್ಬ್ಬ]ನವಸೆ ಪನ್ನಿರ್ಚ್ಛಾಸಿರಮುಮಂ ಪಾನುಂಗಲ್ಲಯ್ನೂಱುಮಂ ದುಷ್ಟನಿಗ್ರಹ ವಿಶಿಷ್ಟ ಪ್ರ-
೧೩       [ತಿಪಾಳನದಿಂ ಸುಖಸಂಕಥಾ ವಿನೋದದಿಂ*] ರಾಜ್ಯಂಗೆಯ್ಯುತ್ತಮಿರೆ || ವೃ || ಜಳಧಿವಳಯ ಮಧ್ಯೇ ಕ್ಷತ್ರಿಯಾನ್ವಯಾ
೧೪       . . . . . . . . . . . ತತ್ಸೂರ್ಯೃ ಸೋಮಾಂಸುಜಾತಾನ್ ಅ . ಶಿರಶಿಚ ತೇಷಾಂ ಬದ್ಧತೇ ರಾಜಪಟ್ಟಂ ತ-
೧೫       . . . . . . . . . . . ತರಂ ಕುಳನ || ಹರಿರಾಜ ಧ್ವಜ ಸಪ್ತಸಪ್ತತಿ ಕದಂಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯ-
೧೬       [ರವಾಷ್ಟಾದಶ ವಾಜಿಮೇಧ*]ಚತುರಗ್ರಾಶೀತಿ ಸಂಖ್ಯಾ ಪುರೇಶ್ವರ ರುದ್ರಾನ್ವಯ ಸಿಂಹಲಕ್ಷ್ಮ ಹಿಮಸೈಳೇಂದ್ರೋ
೧೭       [ಪರಿಸ್ಥಾಪಿತ ಸ್ಥಿರಶಕ್ತು ಧ್ವ*] ಹಿರಣ್ಯಗರ್ಭ್ಭಮಹಿಮಂ ಕಾದಂಬ ಚಕ್ರೇಶ್ವರ || ವಚನ || ಆ ಕಾದಂಬ ಚಕ್ರೇಶ್ವರ
೧೮       . . . . . . . . . . . . ಸ್ವಸ್ತ್ಯನವರತ ಪರಮ ಕಲ್ಲ್ಯಾಣಾಭ್ಯುದಯ ಸಹಶ್ರ ಫಳಭೋಗಭಾಗಿನಿ ದ್ವಿತೀಯ
೧೯       [ಲಕ್ಷ್ಮೀ ಸಮಾನೆ ತ್ಯಾಗನಿಧಾ*]ನೆ ಶ್ರಿಂಗಾರ ಗಂಗಾತರಂಗಿಣಿ | ದಾನ ಚಿನ್ತಾಮಣಿ | ಗೌರೀಲಬ್ಧವರಪ್ರಸಾದೆ | ಚಂಪ-
೨೦       [ಕಾಮೋದೆ ವಿವೇಕ ವಿದ್ಯಾಧ*]ರಿ | ಸಕಳ ಕಳಾಧರಿ | ಗೋತ್ರ ಪವಿತ್ರೆ ಶೃಮದರಿಕೇಸರಿದೇವ ಮನಸ್ಸ-
೨೧       [ರೋವರ ರಾಜಹಂಸೆಯರ*]ಪ್ಪ ಶ್ರೀಮಲ್ಲಚ್ಚಲದೇವಿಯರ್ || ವೃತ್ತ || ಸಾ(?)ಸ ಸಿರಿಯೊಳ್ಮಲಂಗುವಳಿವೆಣ್ಡಿರೊಳೇಂ
೨೨       . . . . . . . . . . . ಮೆ ತಂನ್ನ ಮಾಂತನಮೆ ತಂನ್ನಡಗುಂತಿಯೆ ತಂನ್ನ ಪೆಂಪೆ ತಂನೆಸೆವ ಪತಿ
೨೩       . . . . . . . . . . . ಯೆ ಮೂಱು ಲೋಕಮಂ ಪಸರಿಸಿ . . ದಿಸಿತ್ತೆನಿಸೆ ಲಚ್ಚಲದೇವಿಯಿಂದೇಂ ಕೃತಾರ್ಸ್ಥೆಯೋ ||
೨೪       . . . . . . . . . . . ಳ್ವಿಜರಾಜ ಮಲ್ಲವುರದೊಳೆ ಬಂಕಾಪುರದೊಳ್ಪುಲ್ಲಣಿಯೊಳ್ಪುರಹರಾಲಯಂ ಸತ್ರಮಂ
೨೫       . . . . . . . . . . ಪ್ಪ ಶ್ರೀ ಮನ್ಮಹಾಮಂಡಳೇಶ್ವರಂ ಹರಿಕೇಸರಿದೇವರುಂ ಶ್ರೀಮಲ್ಲಚ್ಚಲದೇವಿಯರುಂ
೨೬       . . . . . . . . . . . ಯ ಸಾರ್ವ್ವರಿ ಸಂವತ್ಸರದುತ್ತರಾಯಣ ಶಂಕ್ರಾನ್ತಿಯುಮಾದಿತೃವಾರಂ-
೨೭       . . . . . . . . . . ಮೂಳಸಂಘದ ಸೇನಗಣ ಚಂದ್ರಕಾವಾಟಗಚ್ಚದ ಶ್ರೀ ಮದಜಿತಸೇ-
೨೮       [ನಭಟ್ಟಾರಕರ್ತ್ತದನ್ತೇವಾಸಿಗಳ್ ಕನಕಸೇನ] ಭಟ್ಟಾರಕದೇವರ ಶಿಶ್ಯರ್ || ಕನ್ದ || ಚಾಂದ್ರಂ ಕಾತಂತ್ರಂ ಜೈನೇಂದ್ರಂ ಶಬ್ದಾನುಸಾಸನಂ ಪಾ-
೨೯       [ಣಿನಿ ಮತ್ತೈಂದ್ರಂ ನರೇನ್ದ್ರ*]ಸೇನ ಮುನೀಂದ್ರಂಗೇಕಾಕ್ಷರಂ ಪೆಱಂಗಿವು ಮೊಗ್ಗೇ || ಅನ್ತೆನಿಸಿದ ನರೇಂ-
೩೦       [ದ್ರಸೇನ. . . . . .ಶಿಷ್ಯರ*]ಪ್ಪ ಸಮನ್ತಭದ್ರದೇವರ ವರಶಿಷ್ಯರಷ್ಟೋಪವಾಸಿದೇವಸೇನ
೩೧       . . . . . . . . . . .ಹರಿಯಬ್ಬೆಯ ಬಸದಿಗೆ ಖಣ್ಡಸ್ಫುಟಿತ ಜೀರ್ಣೋದ್ಧರಣಂ[ಕ್ಕಂ*]
೩೨       . . . . . . . . . ಗೆಱೆಯ ಕೆಳಗೆ ಬಿಟ್ಟ ಗಱ್ದೆಯ ಮತ್ತರೆರಡು ಅದಕ್ಕೆ ಸೀ[ಮೆ*]
೩೩       . . . . . . . . ಡುವಲುಂ ಕೆಱೆಯೇರಿ ಪಡುವಲ್ನಟ್ಟ ಕಲ್ಲು ವಾಯಾವ್ಯದ ಆ . .
೩೪       . . . . . . . ದಲು ಸವಣ್ಗಲ್ಲ ಧಂರ್ಮ್ಮಮಂ ಪ್ರತಿಪಾಳಿಸಿದಾತಂಗೆ ವಾರ[ಣಾಸಿ*]
೩೫       . . . . . . . . . . . . . . . . . . . ಸಾಸಿರ್ವ್ವರು ಬ್ರಾಹ್ಮಣರಿರ್ಗ್ಗೆ ಕೊಟ್ಟ ಫಳವೀ . .
೩೬       . . . . . . . . . . . . . . . . . . [ಕ*]ವಿಲೆಯುಮುಮಂ ಸಾಸಿರ್ವ್ವ ಬ್ರಾಹ್ಮಣರುಮನ[ಳಿದ*]
೩೭       [ದೋಷಂ ಸಾರ್ಗ್ಗುಂ || ಸ್ವದತ್ತಾಂ ವಾಯೋ ಹರೇತಿ] ವಸುನ್ಧರಾಃ ಸಷ್ಟಿರ್ವ್ವರ್ಶ ಸಹಶ್ರಾಣಿ[ವಿಷ್ಟಾಯಾಂ*]
೩೮       [ಜಾಯತೇ ಕ್ರಿಮಿಃ ||*]
ವೀರಭದ್ರಗುಡಿ ಹಿಂದೆ ಕೆರೆದಂಡೆಯಲ್ಲಿರುವ ವೀರಗಲ್ಲು
ಂಖSIಇ ೧೯೪೩-೪೪ ಓಔ.೩
ಕ್ರಿ.ಶ. ೧೦೭೯
ವೀರಗಲ್ಲಿನ ಮೊದಲ ಪಟ್ಟಿಕೆಯಲ್ಲಿ ಕುದುರೆಯ ಮೇಲೇರಿದ ನಾಲ್ವರು ವೀರರೊಡನೆ ಧನುರ್ಧಾರಿಯಾದ ವೀರನೊಬ್ಬ ಹೋರಾಡುತ್ತಿದ್ದಾನೆ. ಅವನ ಹಿಂದೆ ತುಱುಗಳು, ಬಾರಿಸುವ ಊದುವ ಮೇಳದವರಿದ್ದಾರೆ. ಎರಡನೆಯ ಪಟ್ಟಿಕೆಯಲ್ಲಿ ೫ ಸಾಲುಗಳ ಶಾಸನವಿದೆ. ಮೂರನೆಯ ಪಟ್ಟಿಕೆಯಲ್ಲಿ ಪಲ್ಲಕ್ಕಿಯಲ್ಲಿ ವೀರನೊಬ್ಬನನ್ನು ಕೂಡಿಸಿಕೊಂಡು ಇಬ್ಬಿಬ್ಬರು ಅಪ್ಸರೆಯರು ಹೊತ್ತೊಯ್ಯುತ್ತಿದ್ದಾರೆ. ನಾಲ್ಕನೆಯ ಪಟ್ಟಿಕೆಯಲ್ಲಿ ೫ ಸಾಲುಗಳ ಶಾಸನ ಮುಂದುವರಿದಿದ್ದು, ಅದರ ಮೇಲೆ ಶಿವಲಿಂಗ-ಪೂಜಾರಿ-ನಂದಿಯರಿದ್ದು, ಹಿಂದೆ ವೀರನೊಬ್ಬ ಕುಳಿತಿದ್ದಾನೆ. ಶಾಸನ ಇಬ್ಭಾಗವಾಗಿ ಸೀಳಿ ಉರುಳಿ ಬಿದ್ದಿದೆ.
ಕದಂಬ ಮಹಾಮಂಡಳೇಶ್ವರ ತೇಲಪದೇವರು ಆಳುತ್ತಿರುವಾಗ, ಕೇಸವಗಾವುಂಡ ಮಗ ಸಾತಗಾವುಂಡ ತುಱುಗೊಳ್ ಕದನದಲ್ಲಿ ಕಾದಿ ವೀರಮರಣವನ್ನಪ್ಪಿದುದನ್ನು, ಆತನ ತಮ್ಮ ನಾಕಗಾವುಂಡ ಶಾಸನಕ್ಕೆ ಮತ್ತು ಕುಂದಗೋಳದ ಕೇಶವ ಕ್ರಮಿತರಿಗೆ ಬಿಟ್ಟ ಭೂದಾನವನ್ನು ತಿಳಿಸುತ್ತದೆ.
೪ನೆಯ ಸಾಲಿನಲ್ಲಿ, ಶ್ರೀಮತು ಚಾಳುಕ್ಯ ವಿಕ್ರಮವಂಶದ ೧೩ನೆಯ ಕಾಳಯುಕ್ತ ಸಂವತ್ಸರದ ಮಾಘ . . .
ವಾರ ಎಂಬ ಮಿತಿಯಿದ್ದು, ಆರನೆಯ ವಿಕ್ರಮಾದಿತ್ಯನ ೩ನೆಯ ಆಳ್ವಿಕೆಯ ವರ್ಷ ಕಾಳಯುಕ್ತ ಸಂವತ್ಸರವಾಗಿದ್ದು ಜನೆವರಿ ೧೦೭೯ ಆಗುತ್ತದೆ.
ಶಾಸನದ ಪಾಠ
೧          . . . . . . . || ಹರಿರಾಜದ್ವಜ ಸಪ್ತಸಪ್ತತಿ ಕಡಂಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯರವಾಷ್ಪಾದಶ ವಾಜಿಮೇಧ
            ಚತುರಾ-
೨          ಸೀತಿ ಸಂಖ್ಯಾಪುರೇಶ್ವರ ರುಂದ್ರಾನ್ವಯ ಸಿಂಘಲಕ್ಷ್ಮ ಹಿಮಶೈಳೇಂದ್ರ ಪರಿಸ್ಥಾಪಿತ ಸ್ಥಿರ ಶಕ್ತು ದ್ಘ
೩          ಮಹಿಮಾಭಿರಾಮಂ ಕಾಡಂಬ ಚಕ್ರೇಶ್ವರ || ಅನ್ತು ವಂಶೋದ್ಭವನೆನಿಸಿದ ಶ್ರೀ ಮನ್ಮಹಾಮಂಡಳೇಶ್ವರಂ
            ತೈಲಪದೇವರು
೪          . . ಗಾವುಂಡ ಶ್ರೀಮತು ಚಾಳುಕ್ಯ ವಿಕ್ರಮ ವರಿಶದ ೧೩ನೆಯ ಕಾಳಯುಕ್ತ ಸಂವತ್ಸರದ ಮಾಘ . . .
೫          ವಾರದಂದು ಶ್ರೀಮತು ವಾಟಂ ಹರಿಟಾಣದ ತುಱುವಂ ಕೊಳುವಲ್ಲಿ ಕೇಸವಗಾವುಂಡರ ಮಗ ಸಾತಗಾ-
೬          ವುಂಡ ತುಱುಗೋಳ ಕಡು ಕಡೆಗಣಿಸ ಪೋಗದೆಂದು ಕಾದಿ ತುಱುವಂ ಮಗುರ್ಚ್ಚಿ ಸುರಲೋಕಕ್ಕೆ ಸಂದನಾತನ
            ಗಂಡವಾ-
೭          ತಂ ಮೆಚ್ಚಿ || ಎಸೆದವು ದೇವದುಂದುಭಿಗಳಂಬರದೊಳು | ಸುರಕನ್ನಯರ್ಕ್ಕಳುಂ ಪಸರಿ ಪರ್ಬ್ಬಿ ಬಂದು ಪ್ರಭು ಸಾತಯ-
೮          ನೊಳ್ಕಿದನೆಂದು ರಾಜಗಿಂದೊಸೆದಮಳ್ದಪ್ಪಿಯುಯ್ದರಮರಾವತಿಯ ಸಾಂಕನ್ನೆಯರ್ಕ್ಕಳು || @
೯          ಸಾತಗಾವುಡಂನ ತಮ್ಮ ನಾಕಗಾವುಂಡ ಸಾಸನಕ್ಕೆ ಬಿಟ್ಟ ಗದ್ದೆ ತಮ್ಮ ಮೂವತ್ತು | ಕುಂದಗೋಳದ ಕೇಶವಕ್ರಮಿತ
೧೦       ರಿಗೆ ಬಿಟ್ ಗಱ್ದೆ  ಕಮ್ಮವಿಪ್ಪತ್ತು | ಮಾಗೆ ಸವಾಸಿ ಅಂಬವಗೆ ಕಮ್ಮ ೧೦.
ಬಸದಿಯ ನವರಂಗದಲ್ಲಿ ಶಾಸನ
ಂಖSIಇ ೧೯೪೩-೪೪ ಓಔ.೧
ಕ್ರಿ.ಶ. ೧೧೨೨
೧೬೩ ಸೆ.ಮೀ. ಎತ್ತರ  ೯೪ ಸೆ.ಮಿ. ಅಗಲವಿರುವ ಬೆಣಚುಕಲ್ಲಿನ ಶೀಲಾಫಲಕವಿದ್ದು, ನುಣುಪಾಗಿ ಮಾಡಿಕೊಂಡನು ೧೨]’’ ಗಾತ್ರದ ಅಕ್ಷರಗಳಲ್ಲಿ ಶಾಸನವನ್ನು ಕಂಡಸರಿಸಲಾಗಿದೆ. ಮೇಲಿನ ೩ ಭಾಗದಲ್ಲಿ ಉಬ್ದಬುಶಿಲ್ಪಗಳಿವೆ. ಆಕಳು, ಕರು, ಖಡ್ಗ, ಪೀಠದ ಮೇಲೆ ಕುಳಿತ ಸುಖಾಸನಸ್ಥ ಜಿನಬಿಂಬವಿದೆ. ಪಿಂಭ ಕಮಂಡಲಗಳು ಇದ್ದು, ಪ್ರಭಾವಳಿಯ ಮೇಲೆ ಮುಕ್ಕೊಡೆಯಿದೆ. ಎಡಬಲಗಳಲ್ಲಿ ಸೂರ್ಯಚಂದ್ರರಿದ್ದಾರೆ. ಜಿನ ಮಂಗಲಪದ್ಮದೊಂದಿಗೆ ಪ್ರಾರಂಭಗೊಳ್ಳುವ ಶಾಸನ ಕನಕಚಂದ್ರಸಿದ್ದಾಂತದೇವರ ಗುಡ್ಕ ಗಂಗರ ಬಮ್ಮಿಸೆಟ್ಟಿ ಈ ಬಸದಿಯನ್ನು ಮಾಡಿಸಿದನೆಂದು ತಿಳಿಸುತ್ತದೆ. ಕಲ್ಯಾಣಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ ೬ನೆಯ ವಿಕ್ರಮಾದಿತ್ಯ ವಿಕ್ರಮಾದಿತ್ಯ ಆಳುತ್ತಿರುವಾಗ, ಕದಂಬ ತೈಲಪದೇವರು ಬನವಸೆ ಪನ್ನಿರ್ಚ್ಚಾಸಿರ ಪಾನುಂಗಲ್ ಐನೂರನ್ನು ಅಳುತ್ತಿದ್ದರೆಂದು ತಿಳಿಸುತ್ತದೆ.
ಮೂರುಕೇರಿಯ ಪ್ರಭುಗಾಮುಂಡುಗಳು, ಅರುವತ್ತೊಕ್ಕಲು, ಐನೂರ್ವರು ಸೇರಿ ಕೊನ್ತಕುಳಿಯ ಮೊದಲ ಹಳ್ಳಿ ಪಯಿಟ್ಟಣದ ಬೆಟ್ಟಕೇರಿಯ ಗಂಗರ ಬಮ್ಮಿಸೆಟ್ಟಿಯರು ಮಾಡಿಸಿದ ಬಸದಿಗೆ ಮೂಲಸಂಘದ ಕಾಣೂರ್ಗಣದ ಮೇಷಪಾಷಾಣಗಚ್ಛದ ಕನಕಚಂದ್ರಸಿದ್ಧಾಂತದೇವರ ಕಾಲ್ತೊಳೆದು, ದೇವರ ಅಷ್ಟವಿಧಾರ್ಚನೆಗೆ, ರಿಷಿಯರ ಆಹಾರದಾನಕ್ಕೆಂದು ಬಿಟ್ಟ ಭೂದಾನವನ್ನು ತಿಳಿಸುತ್ತದೆ. ಮುಂದುವರೆದು ಸುಂಕದಾನ ಮತ್ತು ನಂದಾದೀವಿಗೆಗೆ ಬಿಟ್ಟ ಎಣ್ಣೆದಾನವನ್ನು ವಿವರಿಸುತ್ತದೆ.
ಶಾಸನದ ೧೬ನೆಯ ಸಾಲಿನಲ್ಲಿ ಬರುವ “ಸಕವರ್ಷ ೧೦೪೫ನೆಯ ಶುಭ್ರಕ್ರಿತ್ಸರದ ಪುಷ್ಯಮಾಸಮವಾಸೆ ಆದಿತ್ಯವಾರ ಸೂರ್ಯ ಗ್ರಹಣದಂದು’’ ಎನ್ನುವ ಮಿತಿಯಲ್ಲಿ, ೧೦೪೫ನೆಯ ಶಕವರ್ಷ ಕ್ರಿ.ಶ.೧೧೨೩ರಲ್ಲಿ ಬರುತ್ತಿದ್ದು ಶೋಭನ ಸಂವತ್ಸರವಾಗಿದೆ. ಶುಭಕ್ರಿತ್ ಸಂವತ್ಸರವು ೧೦೪೪ರಲ್ಲಿ ಬರುತ್ತಿದ್ದು ಕ್ರಿ.ಶ.೧೧೨೨ ಎಂದು ಪರಿಗಣಿಸಿದರೆ ೨೦-೧೨-೧೧೨೨ಕ್ಕೆ ಹೊಂದುತ್ತಿದ್ದು, ವಾರ ಶಾಸನದಲ್ಲಿ ಸೂಚಿಸಿದಂತೆ ಆದಿತ್ಯವಾರವಾಗಿರದೆ ಶನಿವಾರವಾಗಿದೆ ಎಂಬುದನ್ನು ಗಮನಿಸಬೇಕು.
ಶಾಸನದ ಪಾಠ
೧          @ ಶ್ರೀಮತ್ಪರ ಗಂಭೀರ ಸ್ಯಾಧ್ವಾದಮೋಘ ಲಾಂಛನಂ ಜೀಯಾ ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ ||
೨          ಸ್ವಸ್ತಿ ಯಮನಿಯಮ ಸ್ವಾಧ್ಯಾಯ ಧ್ಯಾನಧಾರಣ ಮೋನಾನುಷ್ಠಾಣ ಸಮಾಧಿಶೀಳ ಸಂಪನ್ನ-
೩          ರಪ್ಪ ಕನಕಚಂದ್ರಾಸಿದ್ಧಾನ್ತದೇವರ ಗುಡ್ಡಂ ಗಂಗರ ಬಮ್ಮಿಸೆಟ್ಟಿ ಮಾಡಿಸಿದ ಬಸದಿ || ಮಂಗಳ ಮಹಾ ಶ್ರೀಶ್ರೀ
೪          @ ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀ ಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾಶ್ರಯ ಕು-
೫          ಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ತ್ರಿವನಮಲ್ಲದೇವರ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ದಿ ಪ್ರವರ್ಧಮಾನ-
೬          ಮಾಚಂದ್ರಾರ್ಕ್ಕು ತಾರಂಬರಂ ಸಲುತ್ತಮಿರೆ || ತತ್ಪಾದ ಪದ್ಮೋಪಜೀವಿ || ಸ್ವಸ್ತಿ ಸಮಧಿಗತ ಪಂಚಮಹಾಸಬ್ದ ಮಹಾಮಂಡಳೇಶ್ವರ
೭          ಬನವಾಸಿ ಪುರವರಾಧೀಶ್ವರಂ ಜಯನ್ತೀ ಮಧುಕೇಶ್ವರ ಲಬ್ಧವರಪ್ರಸಾದಂ ಮ್ರಿಗಮದಾಮೋದಂ ತ್ರ್ಯಕ್ಷಯಕ್ಷ[ಷಾ*]ಸಂಭ-
೮          ವಂ ಚತುರಾಶೀತಿ ನಗರಾಧಿಷ್ಠಿತಂ ಲಲಾಟಲೋಚನಂ ಚತುರ್ಬ್ಭುಜ ಜಗದ್ವಿದಿತಾಷ್ಟಾದಶಾಶ್ವಮೇಧ ದೀಕ್ಷಾದೀಕ್ಷಿತಂ
೯          ಹಿಮವದ್ಗಿರೀಂದ್ರ ರುದ್ರ ಶಿಖರೀಶಿಖರ ಸಂಸ್ಥಾಪಿತ ಸ್ಫಟಿಕ ಶಿಲಾಬದ್ಧ ಮದಗಜ ಮಹಾಮಹಿಮಾಭಿರಾಮಂ ಕಾ-
೧೦       ದಂಬಚಕ್ರಿ ಮಯೂರವರ್ಮ್ಮ ಮಹಾಮಹೀಪಾಳಕುಳಭೂಷಣಂ ಪೆರ್ಮ್ಮಟ್ಟಿ ತೂರ್ಯ್ಯ ನಿಗ್ಘೋಷಣಂ ಶಾಖಾಚರೇಂದ್ರ ಧ್ವ-
೧೧       ಜವಿರಾಜಮಾನ ಮಾನೋತ್ತುಂಗ ಸಿಂಹಲಾಂಛನಂ ದತ್ತಾರ್ತ್ಥಿಕಾಂಚನಂ ಸಮರ ಜಯಕಾರಣಂ ಕಡಂಬರಾಭರಣಂ ಮಾರ್ಕ್ಕೊಳ್ವರ ಗಂ
೧೨       ಡಂ ಪ್ರತಾಪಮಾರ್ತ್ತಂಡಂ ಮಂಡಳಿಕ ಗಂಡ ಬಂಗಾಱಂ ಶ್ರೀಮನ್ಮಹಾಮಂಡಳೇಶ್ವರಂ ತೈಲಪದೇವರ್ಬ್ಬನವಾಸೆ ಪಂನ್ನಿರ್ಚ್ಚಾಸಿರಮಂ ಪಾನುಂ-
೧೩       ಗಲ್ಗೈನೂಱಮನುಭಯ ಸಾಂಮ್ಯಮಾಳುತ್ತ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರೆ || ವ್ರಿತ್ತ || ಹರಿರಾಜದ್ವಜ
೧೪       ಸಪ್ತಸಪ್ತತಿ ಕಡಂಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯರವಾಷ್ಟಾದಶವಾಜಿಮೇಧ ಚತುರಗ್ರಾಶೀತಿ ಸಂಖ್ಯಾಪುರೇಶ್ವರ ರುದ್ರಾ-
೧೫       ನ್ವಯ ಸಿಂಹಲಕ್ಷ್ಮ ಹಿಮಶೈಳೇಂದ್ರೋ ಪರಿಸ್ಥಾಪಿತ ಸ್ಥಿರಶಕ್ತ್ಯುದ್ಘ ಹಿರಣ್ಯಗರ್ಭ ಮಹಿಮಂ ಕಾದಂಬಚಕ್ರೇಶ್ವರಂ || ||
೧೬       ಅನ್ತು ಪೆಂರ್ಮ್ಮೆಯನಾನ್ತ ತೈಲಪದೇವರಸರ್ಗ್ಗೆ || ಸಕವರ್ಷ ೧೦೪೫ನೆಯ ಶುಭಕ್ರಿತ್ಸಂವತ್ಸರದ ಪು-
೧೭       ಸ್ಯಮಾಸದಮದಾಸ್ಯೆ ಆದಿತ್ಯವಾರ ಸೂರ್ಯಗ್ರಹಣದಂದು ಕೊನ್ತಕುಳಿಯ ಮೊದಲ ಬಾಡಂ ಪಯಿಟ್ಟಣದ ಬೆಟ್ಟ-
೧೮       ಕೇರಿಯ ಗಂಗರ ಬಮ್ಮಿಸೆಟ್ಟಿಯರು ಮಾಡಿಸಿದ ಬಸದಿಗೆ ಮೂಱುಂಕೇರಿಯ ಪ್ರಭುಗಾಮುಂಡುಗಳುಂ ಅಱುವತ್ತೊಕ್ಕ-
೧೯       ಲು ಅಯಿನೂರ್ವ್ವರುಂ ಕಡಂಬ ಕುಳತಿಳಕಮೆಂದು ಪೆಸರಿಟ್ಟು ಬಿನ್ನಪಂಗೆಯ್ದು ಧರ್ಮ್ಮಪ್ರತಿಪಾಳನಾರ್ತ್ಥಂ || ನತ ಭೂಪಾ-
೨೦       ಳಕ ಮೌಳಿಸ್ಥಿತ ರತ್ನದ್ಯುತಿಗಳಿಂ ಪದದ್ಯುತಿಯೆಸೆಗುಂ ಸತತಂ ಸದ್ಯಾರುಚಿಯವೊಲ ತನ್ನ ಮದೇಭಾರಿ ಕನ-
೨೧       ಕಚಂದ್ರಬ್ರತಿಯ || ವ್ರಿ || ಅನುಪಮರೆಂದು ಬಣ್ಣಿಪುದನಾನಱಯೆಂ ತನು ಕಲ್ಲಕಂಭದನ್ತೆನಿತುಂ
೨೨       ಪರೀಷಹ ಪ್ರಬಳಭಾರಮನಾನ್ತುದು ಚಿತ್ತವಾತ್ಮಭಾವನೆಯೊಡಗೂಡಿತೀ ಕನಕಚಂದ್ರ ಮಹಾಮುನಿಪಂಗೆ ಕಾಲವ-
೨೩       ರ್ತ್ತನದವಸರ್ಪ್ಪಣಂ ನೆಗಳದಿರ್ದ್ದಡೆ ನೆಟ್ಟನೆ ರಿದ್ಧಿ ಪುಟ್ಟದೇ | ವೀರ ಮನೋಭವ ಪ್ರಬಳದರ್ಪ್ಪ ವಿಭಂಜನರುದ್ಧತ ತ್ತ್ರಿದಂಡಾ-
೨೪       ರಿ ಕುಳಾಚಳೇಂದ್ರ ಕುಳಿಶರ್ಕ್ಕಲಿಕಾಲ ವಿಮೋಹ ರಾಜನಿರ್ಧಾರಕರನ್ಯ ಶೂನ್ಯಮತಸನ್ತಮಸೋದಯ ಚಂ-
೨೫       ದ್ರರೆಂದು ವಿಸ್ತಾರದೆ ಬಣ್ಣಿಕುಂ ಕನಕಚಂದ್ರ ಮುನೀಂದ್ರನ ನಿಜಗರ್ಜ್ಜಮಂ || ಮುನಿಯೆ ಜಂಗಮ ಜೈನಬಿಬನನ ವದ್ಯಾ-
೨೬       ಭಾರನೆ ಜೈನಶಾಸನ ರಕ್ಷಾಮಣಿ ಶಾಂತನೆ ಸಕಳರಾಗ ದ್ವೇಷ ದೋಷ ಪ್ರಭಂಜನನುರ್ವ್ವೀ ನುತನೆ ಗುಣಪ್ರಣಯಿ
೨೭       ತಾನೆಂಬಿನಂ ವಿಶ್ವಮೇದಿನಿಯೊಳು || ಮಾಧವಚಂದ್ರದೇವನೆಸೆದಂ ಚಾರಿತ್ರ ಚಕ್ರೇಶ್ವರಂ || ಜಿನಮತ ಲಕ್ಷ್ಮಿಗಭ್ಯುದ-
೨೮       ಯಮಾದುದು ಭವ್ಯಜನಾನುರಾಗವರ್ತ್ತನೆಗೆ ವಿಶುದ್ಧ ಮಾರ್ಗ್ಗಮಳವಟ್ಟುದು ಸತ್ಯತಪೋನಿಧಾನ ನನ್ದನವನಿ ರಾ-
೨೯       ಜಿ ಪಲ್ಲವಿಸುತಿರ್ದ್ದುದು ಮಾಧವಚಂದ್ರದೇವನೆಂಬನುಪಮ ಯೋಗಿ ಪುಟ್ಟುಮದುವೀ ವಸುಧಾವಳಯಾಂತರಾಳ-
೩೦       ದೊಳು || ಇನ್ತು ನೆಗರ್ತ್ತೆವೆತ್ತ ಶ್ರೀ ಮೂಲಸಂಘದ ಕಾಣೂರ್ಗ್ಗಣದ ಮೇಷ ಪಾಷಾಣಗಚ್ಛದ ಕನಕಚಂದ್ರ ಸಿಧ್ಧಾನ್ತದೇವರ ಪಾ-
೩೧       ದ ಪ್ರಕ್ಷಾಳನಂಗೆಯ್ದು ಧಾರಾಪೂರ್ವ್ವಕಂ ಮಾಡಿ ದೇವರಷ್ಟವಿಧಾರ್ಚನೆಗಂ ರಿಷಿಯರಾಹಾರ ದಾನಕ್ಕಮೆಂದು ಬಿಟ್ಟ ಕೆಯ್ಯ ಸೀಮಾ
೩೨       ಸಮ್ಮಂಧಂ ಬೆಳ್ವಾವಿಯಿಂ ಮೂಡಲು ಗೋಗೆಱೆಯಿಂ ತೆಂಕಲು ಮಲ್ಲಿಗಾಮುಂಡಗೆಱೆಯ ಮೂಡಣ ಕೋಡಿಯಿಂ ಕೆಳಗೆ ಗರ್ದೆ ಪಿರಿಯ ಕೋ-
೩೩       ಲಲು ಮತ್ತರೊಂದು ೧ ಊರಿಂ ಪಡುವಣ ಬೆಂಡೆಕೆಱೆಯ ಕೆಳಗೆ ಗರ್ದ್ದೆ ಕಂಮ್ಮಂ ಇಪ್ಪತ್ತು ೨೦ ಅಲ್ಲಿ ಪೂದೋಂಟವೊಂದು ೧ ಬಸ-
೩೪       ದಿಯುತ್ತರದ ಬೀಡಿಯಿಂ ಬಡಗಲು ಪದಿನಯ್ದು ಕೈ ೧೫ ನಿವೇಶಣ ದಾನಶಾಲೆ ಅಯಿನೂರ್ವ್ವರು ಬಿಟ್ಟ ಧರ್ಮ್ಮ ಅಂಗಡಿ-
೩೫       ಯೊಳು ಸೊಂಟಿಗೆ ಹೊಱಗಣ ಬನ್ದ ಭಂಡಕ್ಕೆ ಹೊಂಗೆ ಸೊಂಟಿಗೆ ಯೊಂದು ೧ ಅಯ್ವತ್ತೊಕ್ಕಲು ದೇವರ ಸೊಡರೆಣ್ನೆಗೆ ಗಾಣದೊಳು ಕೊ-
೩೬       ಟ್ಟ ಸೊಂಟಿಗೆಯೊಂದು ೧ ಇನ್ತಿನಿತುಮಂ ಸರ್ವ್ವನಮಶ್ಯಮಾಗೆ ಪ್ರತಿಪಾಳಿಸಿದವರ್ಗ್ಗೆ ವಾರಣಾಸಿಯೊಳಂ ಅರ್ಗ್ಛ ತೀರ್ತ್ಥದೊಳಂ
೩೭       ಸಹಸ್ರ ಕಪಿಲೆಯಂ ಸಹಸ್ರ ಬ್ರಾಹ್ಮಣರಂ ಕೊಟ್ಟ ಫಲಮಕ್ಕು || ಇನ್ತೀ ಧರ್ಮ್ಮಮನಳಿದಾತನಾ ಕಪಿಲೆಯುಮನಾ ಬ್ರಾಹ್ಮ-
೩೮       ಣರುಮನಾ ತೀರ್ತ್ಥ[ದೊಳು ವಧಿಸಿದ ಮಹಾಪಾತಕನಕ್ಕುಂ*] || ಸ್ವದತ್ತಾ ಪರದತ್ತಾಂ ವಾಯೋ ಹರೇತಿ ವಸುಂಧರಾಂ ಷಷ್ಠಿರ್ವ್ವ-
೩೯       ರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ ||
ವೀರಭದ್ರ ದೇವಸ್ಥಾನದ ಎದುರಿಗೆ ಬಿದ್ದ ಶಾಸನ
ಂಖSIಇ ೧೯೪೩-೪೪ ಓo.
ಕ್ರಿ.ಶ. ೧೧೨೫
ಅಗಲ ೪ ಎತ್ತರದ ಕರಿಕಲ್ಲಿನಲ್ಲಿ ಶಿಲಾಫಲಕವಿದಾಗಿದ್ದು, ಮೇಲೆ ಅರ್ಧ ವೃತ್ತಾಕಾರವಿದೆ. ಮೇಲ್ಬಾಗದ ೧೦’’ ಭಾಗದಲ್ಲಿ ಖಡ್ಗ, ಪೂಜಾರಿ, ಸೂರ್ಯ, ಶಿವಲಿಂಗ, ಚಂದ್ರ, ಆಕಳು ಹಾಗೂ ಕರುಗಳಿವೆ. ಕೆಳಗಿನ ೨’’ ಭಾಗದ ಪಟ್ಟಿಕೆಯಲ್ಲಿ ೨ ಸಾಲುಗಳ ಶಾಸನವಿದೆ. ನಂತರದ ೨ ಭಾಗದ ಫಲಕದಲ್ಲಿ ೨/೪’’ ಗಾತ್ರದ ಅಕ್ಷರಗಳಲ್ಲಿ ಶಾಸನವನ್ನು ೧೨ನೆಯ ಶತಮಾನದ ಅಕ್ಷರಗಳಲ್ಲಿ ಕೆತ್ತಲಾಗಿದೆ. ಸಾಲುಗಳ ಅಕ್ಷರಗಳು ಅಲ್ಲಲ್ಲಿ ಚಕ್ಕಳೆ ಹಾರಿದ್ದರಿಂದ ತ್ರುಟಿತಗೊಂಡಿದೆ.
ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ ಆಳುತ್ತಿರುವಾಗ, ಹಾನಗಲ್ಲ ಕದಂಬ ಮಹಾಮಂಡಲೇಶ್ವರ ತೈಲಪ ದೇವರು ಬನವಾಸಿ ಪನ್ನಿರ್ಚ್ಛಾಸಿರ ಪಾನುಂಗಲ್ಲೈನೂರನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಹಾನಗಲ್ ಕದಂಬರ ಸಕಲ ಬಿರುದುಗಳನ್ನು ನೀಡುತ್ತದೆ. ನಂತರ ಹರಿಟಾಣದ ಮೂಲಸ್ಥಾನ ಕೇತೇಶ್ವರದೇವರಿಗೆ ಮಲ್ಲಗಾವುಡಗೆಱೆಯ ಎರಡು ಮತ್ತರು ಗದ್ದೆಯನ್ನು ದತ್ತಿಯಾಗಿ ಬಿಟ್ಟದ್ದನ್ನು ವಿವರಿಸಿ, ಕನ್ನಡ ಮತ್ತು ಸಂಸ್ಕೃತದಲ್ಲಿ ಫಲಶ್ರುತಿಯನ್ನು ಅರಹುತ್ತದೆ. ೨೧ನೇ ಸಾಲಿನಿಂದ ಶಿವಮಂಗಲ ಪದ್ಯದೊಂದಿಗೆ ಪ್ರಾರಂಭವಾಗಿ ಇನ್ನೊಂದು ದತ್ತಿಯನ್ನು ದಾಖಲಿಸುತ್ತದೆ. ಕಡಂಬ ಚಕ್ರೇಶ್ವರನ ಆಣತಿಯಂತೆ ಸಾತಗಾವುಂಡ ಕಣಗಿಲೆ ಬಯಲಲ್ಲಿ ೫೦ ಕಮ್ಮ ಕಾಳಗದ್ದೆ ಬಿಟ್ಟರೆ, ಅರುವತ್ತೊಕ್ಕಲು ಗಾಣದಲ್ಲಿ ಸೊಂಟಿಗೆ ಎಣ್ಣೆಯನ್ನು ದಾನವಾಗಿ ನೀಡಿದ್ದನ್ನು ತಿಳಿಸುತ್ತದೆ.
ಶಾಸನದ ೧೪-೧೫ನೆಯ ಸಾಲುಗಳಲ್ಲಿ ಬರುವ “ಸಕವರಿಷ ೧೦೪೭ನೆಯ ಕ್ರೋಧಿ ಸಂವತ್ಸರದ ಮಾಘ ಸುದ್ಧ . . . . ವಾರ ಸಂಕ್ರಾನ್ತಿಯುಂ ವೃತಿಪಾತಮುಂ’’ ಎಂಬ ಮಿತಿಯು ಕ್ರಿ.ಶ.೧೧೨೫ರ ಜನವರಿ ೨ ರಿಂದ ೨೦ರ ವರೆಗಿನ ಯಾವುದೋ ದಿನಕ್ಕೆ ಸಂಬಂಧಿಸಿದೆ.
ಶಾಸನದ ಪಾಠ
೧          ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ
೨          ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮ-
೩          ತ್ರಿಭುವನಮಲ್ಲದೇವ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾ-
೪          ಚಂದ್ರಾರ್ಕ್ಕತಾರಂಬರಂ ಸಲುತ್ತಮಿರೆ ಇರೆ || ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಮಂ-
೫          ಡಳೇಶ್ವರಂ ಬನವಾಸೀಪುರವರಾಧೀಶ್ವರಂ ಜಯಂತೀ ಮಧುಕೇಶ್ವರದೇವ ಲಬ್ಧವರಪ್ರಸಾದಂ ಮೃಗ-
೬          ಮದಾಮೋದಂ ತ್ರಿಯಕ್ಷಯಕ್ಷಾ ಸಂಭವಂ ಚತುರಾಶೀತಿ ನಗರಾಧಿಷ್ಟಿತ . .
೭          ಚತುರರ್ಬ್ಭುಜಂ ಜಗದ್ವಿದತಾಷ್ಟಾದಸಾಸ್ವಮೇಧ ದೀಕ್ಷಾದೀಕ್ಷಿತಂ ಹಿಮವದು ಗಿರೀಂದ್ರ
೮          ರುಂದ್ರಸಿಕರಸಂಸ್ಥಾಪಿತ ಸ್ಫಟಿಕ ಶಿಲಸ್ತಂಭಂ ಮದಗಜ ಮಹಾಮಹಿಮಾಭಿರಾಮಂ
೯          ಕದಂಬಚಕ್ರಿ ಮಯೂರವರ್ಮ್ಮ ಮಹಾಮಹೀ | ಪಾಳಕುಳಭೂಶಣಂ ಪೆರ್ಮ್ಮಟ್ಟಿ ತೂರ್ಯ್ಯ
೧೦       ನಿರ್ಗ್ಘೋಶಣಂ ಶಾಖಾಚರೇಂದ್ರ ಧ್ವಜ ವಿರಾಜಮಾನ ಮಾನೋತ್ತುಂಗ ಸಿಂಗಲಾಂಚನ ದತ್ತಾರ್ತ್ಥಿ-
೧೧       ಕಾಂಚನಂ ಸಮರಜಯಕಾರಣಂ ಕಡಂಬರಾಭರಣಂ ಮಾರ್ಕ್ಕೊಳ್ವರ ಗಂಡ ಪ್ರತಾಪ ಮಾರ್ತ್ತಂಡ
೧೨       ಮಂಡಳಿಕರ ಗಂಡ ಬಂಗಾಱನಿತ್ಯಖಿಳ ನಾಮಾವಳೀ ವಿರಾಜಿತರಪ್ಪ ಶ್ರೀಮನ್ಮಮಹಾಮಂಡಳೇಶ್ವರ
೧೩       ತೈಲಪದೇವರು ಬನವಾಸಿ ಪನ್ನಿರ್ಚ್ಚಾಸಿರಮುಮಂ ಪಾನುಂಗಲ್ಲೈನೂಱುಮಂ ದುಷ್ಟನಿಗ್ರಹ ಶಿ-
೧೪       ಷ್ಟ ಪ್ರತಿಪಾಳನದಿಂ ಸುಕಸಂಖತಾ ವಿನೋದದಿಂ ರಾಜ್ಯಂಗೆಯ್ಯುತ್ತಮಿಱ್ದು ಸಕವರಿಷ ೧೦೪೭-
೧೫       ನೆಯ ಕೋಧಿ ಸಂವತ್ಸರದ ಮಾಘ ಸುದ್ಧ . . . . ವರ ಸಂಕ್ರಾನ್ತಿಯುಂ ವ್ಯತಿಪಾತಮುಂ
೧೬       ಸೇರಿದಂದು ಸೀವಟಂ ಹರಿಟಾನದ ಮೂಲಸ್ಥಾನ ಶ್ರೀ ಕೇತೇಶ್ವರದೇವರ್ಗ್ಗೆ ಮಲ್ಲಗವುಡಗೆಱೆಯೊಳ-
೧೭       ಗೆ ಕೊಟ್ಟ ಗೆಱ್ದೆ ಮತ್ತ ೨ ಈ ಧರ್ಮ್ಮಮಂ ಪ್ರತಿಪಾಳಿಸಿದಾತಂ ವಾರಣಾಸಿಯಲುಂ ಗುರುಕ್ಷೇತ್ರ-
೧೮       ದೊಳಂ ಸಾಸಿರ ಕವಿಲೆಯಂ ಸಾಸಿರ್ವ್ವ ಬ್ರಾಹ್ಮಣರ್ಗ್ಗೆಯುಭಯಮುಖಿಯಂ ಕೊಟ್ಟ ಫಳಮಿದು
೧೯       ಧರ್ಮ್ಮವನಳಿದಾತಂ ವಾರಣಾಸಿಯಲು ಗುರುಕ್ಷೇತ್ರದಲುಂ ಸಾಸಿರ ಕವಿಲೆಯುಮಂ ಸಾ-
೨೦       ಸಿರ ಬ್ರಾಹ್ಮಣರು ಕೊಂದ ಫಳ @ ಸ್ವದತ್ತಂ ಪರದತ್ತಂ ವಾಯೋ ಹರೇತಿ ವಸುಂಧರಾ ಶಷ್ಟಿರ್ವ್ವರ್ಶ
೨೧       ಸಹಸ್ರಾಣಿ ಮ್ರಿಷ್ಟಾಷ್ಟಾಂ ಕ್ರಿಮಿಃ ಜಾಯತೇ || ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ
೨೨       ತ್ರೈಳೋಕ್ಯ ನಗರಾರಂಭಂ ಮೂಲಸ್ಥಂಭಾಯ ಶಂಭವೇ @ ಫನಿರಾಜೀದ್ವಜ ಸಪ್ತನಸಪ್ತತಿ ಕಡಂ-
೨೩       ಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯರವಷ್ಟಾದಶ ವಾಜಿಮೇಧ ಚತುರಗ್ರಾಸೀತಿ ಸಂಖ್ಯಾ ಪುರೇಶ್ವರ ರುದ್ರಾ
೨೪       . ಯನಿಂಹಲಕ || ಹಿಮಶೈಳೇಂದ್ರ ಪರಿಸ್ತಾಪಿತ ಸೀತರಶಕ್ತ್ಯುದ್ಘ ಹಿರಣ್ಯಗರ್ಬ್ಭಮಹಿ-
೨೫       ಮಾ ಕಾಡಂಬ ಚಕ್ರೇಶ್ವರಂ ಆ ಕಡಂಬ ಚಕ್ರೇಶ್ವರನಾ ಬೆಸದಿ ಮತ್ತ ಸಾತಗಾವುಂಡಂ ಕಣಗಿಲೆ ಬ-
೨೬       ಯಲಲು ಬಿಟ್ಟ ಕಾಳಗದ್ದೆ ಕಮ್ಮವಯ್ವತ್ತು ಗಾಣದಲು ಮೂಱುಂ . . ಯೋ ಅರ‍್ವತ್ತೊಕ್ಕಲು
೨೭       ಬಿಟ್ಟ ಸೊಂಟಿಗೆ ಎಣ್ನೆ ಈ ಧರ್ಮ್ಮವಂ ಪ್ರತಿಪಾಳಿಸಿದರ್ಗ್ಗೆ ಮಂಗಳಮಹಾ ಶ್ರೀ ಶ್ರೀ @ @
೨೮       ಶ್ರೀ ಸರಸ್ವತ್ಯಾಯ ನಮಃ | ಗಣಪತ್ಯಾಯ ನಮಃ | @ @
ಪಾರ್ಶ್ವನಾಥ ಬಸದಿಯ ಶಾಂತಿನಾಥ ತೀರ್ಥಂಕರ ವಿಗ್ರಹದ ಪಾದಪೀಠದಲ್ಲಿರುವ ಶಾಸನ
ಸು. ೧೨ನೆಯ ಶತಮಾನ
’’ ಎತ್ತರದ ಕಾಯೋತ್ಸರ್ಗ ಭಂಗಿಯಲ್ಲಿ ನಿಂತ ತೀರ್ಥಂಕರ ವಿಗ್ರಹವಿದು. ಮೇಲೆ ಕೀರ್ತಿಮುಖವಿದ್ದು, ಮುಕೊಡೆಯಿದೆ, ಶಿರದ ಎಡ ಬಲಗಳಲ್ಲಿ ಚಾಮರಗಳಿವೆ. ಪಾದದ ಎಡಬಲಗಳಲ್ಲಿ ಯಕ್ಷ ಯಕ್ಷಿಗಳಿದ್ದಾರೆ. ಪಾದದ ಕೆಳಗೆ ಹರಿಣಿಯ ಲಾಂಛನವಿದೆ.
ಶ್ರೀ ಮೂಲಸಂಘದ ಕಾಣೂರ್ಗಣದ ಮೇಷಪಾಷಾಣ ಗಚ್ಚಕ್ಕೆ ಸೇರಿದ ಶ್ರೀ ಕನಕಚಂದ್ರಸಿದ್ಧಾಂತದೇವರ ಶಿಷ್ಯನಾದ ಹುಲ್ಲುಂಗೂರ ಕೇತಿಸೆಟ್ಟಿ ಎನ್ನುವವನ ಮಗ ಪಾರಿಸಯ್ಯ ಹರಿಠಾಣದ ಬಸದಿಗೆ ಶಾಂತಿನಾಥ ತೀರ್ಥಂಕರನ ಪ್ರತಿಮೆಯನ್ನು ಮಾಡಿಕೊಟ್ಟನೆಂದು ತಿಳಿಸುತ್ತಿದ್ದು, ಲಿಪಿ ಸ್ವರೂಪದಿಂದ ಸುಮಾರು ೧೨ ಶತಮಾನದ ಶಾಸನವಿದಾಗಿದೆಯೆಂದು ಹೇಳಬಹುದು.
೧          @ ಸ್ವಸ್ತಿ ಶ್ರೀ ಮೂಲಸಂಘದ ಕಾನೂರ್ಗ್ಗಣದ ಮೇಶಪಾ[ಷಾ*]
೨          ಣ ಗಛ್ಛದ ಶ್ರೀ ಕನಕಚಂದ್ರಸಿದ್ಧಾಂತದೇವರ ಗುಡಂ(ಡ್ಡ*)
೩          ಹುಲ್ಲುಂಗೂರ ಕೇತಿಸೆಟ್ಟಿ ಮಗ ಪಾರಿಸಯ್ಯ
೪          ಹರಿಠಾಣದ ಬಸದಿಗೆ ಮಾಡಿಸಿಕೊಟ್ಟ ಶಾನ್ತಿನಾಥದೇ
೫          ವರು @ @ @
ಬಸದಿಯ ಗರ್ಭಗೃಹದ ಪಾರ್ಶ್ವನಾಥ ವಿಗ್ರಹದ ಪಾದಪೀಠದಲ್ಲಿರುವ ಶಾಸನ
ಸು. ೧೨ನೆಯ ಶತಮಾನ
೧೬೫ ಸೆ.ಮಿ. ಎತ್ತರ ೬೩ ಸೆ.ಮಿ. ಅಗಲದ ಕರಿಕಲ್ಲಿನ ಕಾಯೋತ್ಸರ್ಗ ಭಂಗಿಯ ವಿಗ್ರಹವಿದಾಗಿದೆ. ಹಿಂದೆ ಏಳು ಹೆಡೆಯ ಸರ್ಪವಿದೆ ಮೇಲೆ ಮುಕ್ಕೊಡೆಯಿದ್ದು, ಪಾರ್ಶ್ವದಲ್ಲಿ ಚಾಮರಧಾರಿಯರಿದ್ದು, ಪಾದಗಳ ಇಕ್ಕೆಲಗಳಲ್ಲಿ ಧರಣೇಂದ್ರ ಮತ್ತು ಪದ್ಮಾವತಿ ಯಕ್ಷಿಯರಿದ್ದಾರೆ. ಸು. ಹತ್ತನೆಯ ಶತಮಾನದ ಸುಂದರ ಅಕ್ಷರಗಳಲ್ಲಿ ಶಾಸನ ಕೆತ್ತಲಾಗಿದ್ದು, ಎಡಭಾಗದ ಕಲ್ಲಿನ ಚಕ್ಕಳ ಹಾರಿದೆ.
ಶ್ರೀ ಮೂಲಸಂಘದ ಸೂರಸ್ಥಗಣದ ವ್ಯಕ್ತಿಯೊಬ್ಬ ಪಾರ್ಶ್ವನಾಥ ತೀರ್ಥಂಕರನ ವಿಗ್ರಹ ಮಾಡಿಸಿದನೆಂದು, ಕೀರ್ತಿಯನ್ನು ಹೊಂದಲು ಮುಮುಕ್ಷಗಳಿಗಾಗಿ ಪ್ರತಿಷ್ಠಾಪಿಸಿದನೆಂದು ತಿಳಿಸುತ್ತದೆ. ಪ್ರತಿಮೆಯನ್ನು ಮಾಡಿದಾತ ರೂವಾರಿ ದೇವದಾಸಿ ಎಂದು ಹೆಸರಿಸುತ್ತದೆ. ಲಿಪಿ ಸಾದೃಶ್ಯದ ಸುಮಾರು ೧೨ನೆಯ ಶತಮಾನದ ಶಾಸನವಿದೆಂದು ಗುರುತಿಸಬಹುದು.
೧          ಸಿಧಂ ಮೂಲಸಂಘಾನ್ವಯೇ. . . . . . .
೨          ನ್ವಯೇ ಮಾಂ ಯುಧ್ಧಾ . . . . . . .
೩          ಸೂರಸ್ಥ ನಾಮ್ನಾ ಗಣೇ . . . . . . ಲ್ಗ್ರ . . .
೪          ಲಯೇ ನಗರಭೃಚ್ವ್ರಿ ಪಾರ್ಶ್ವನಾಥ . . . .
೫          ಪ್ರಾತಿಷ್ಠಾಮಕರೋನ್ಮು ಮುಷು ತಿಳ . . .
೬          ಕೀರ್ತ್ಯಜ್ಞಯಾ || ರೂವಾರಿ ದೇವರಾ[ಸಿ*]
ವೀರಭದ್ರದೇವರ ಗುಡಿ ಪಕ್ಕದಲ್ಲಿರುವ ಗಾಲಿಗಳು
ಸು. ೨೦ನೆಯ ಶತಮಾನ
ಸುಮಾರು ೫ ವ್ಯಾಸದ ಕಲ್ಲಿನ ಗಾಲಿಗಳ ಮೇಲೆ ಕೆಳಗಿನಂತೆ ಬರೆಯಲಾಗಿದೆ. ಬೆಳಗಾಂವಿಯ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅರಟಾಳ ರುದ್ರಗೌಡರು ತಮ್ಮ ಊರಿನ ವೀರಭದ್ರದೇವರಿಗೆ ಮಾಡಿಸಿದ ರಥದ ಗಾಲಿಗಳಿವು.
ಒಂದನೆಯ ಗಾಲಿ
    ಓಂ
೧          ಶ್ರೀ ವೀರಭದ್ರದೇವರ ಪ್ರೀತ್ಯಾರ್ಥ                      ೧          ಶ್ರೀ ವೀರಭದ್ರದೇವರ
೨          ರಾ.ಬ. ರುದ್ರಗವುಡ ಚನ್ನವೀರ             ೨          ಪ್ರೀತ್ಯರ್ಥ ರಾ.ಬ. ರುದ್ರ
೩          ಗವಡ ಅರಟಾಳ ಇವರ ಕಾ                 ೩          ಗವಡ ಚನ್ನವೀರಗವಡ
೪          ಣಿಕೆಯು               ೪          ಅರಟಾಳ ಇವರ ಕಾಣಿಕೆ
               ಎರಡನೆಯ ಗಾಲಿ
          ಓಂ

? ‘ಕಾರ್ತೀಕ ಶ್ರೀ, ಎಚ್.ಐ.ಜಿ. ೨೭, ನವನಗರ, ಹುಬ್ಬಳ್ಳಿ, ಧಾರವಾಡ ಜಿಲ್ಲೆ - ೫೮೦೦೨೫.