Sunday, June 30, 2013

ಇತಿಹಾಸಕಾರರು-ಸರಣಿ. ಡಾ.ಬಾ.ರಾ. ಗೋಪಾಲ್









ಡಾ.ಬಾ.ರಾ ಗೋಪಾಲ್‌
http://kendasampige.com/images/trans.gif
http://kendasampige.com/images/trans.gif
ಕನ್ನಡ ಮತ್ತು ತೆಲುಗುಭಾಷೆ ಎರಡರಲ್ಲೂ ಶಾಸನ ಕ್ಷೇತ್ರದಲ್ಲಿ ಸಮಾನ ಗೌರವ ಪಡೆದಿರುವ   ವಿರಳ ವ್ಯಕ್ತಿಗಳಲ್ಲಿ ಎದ್ದುಕಾಣುವ ಹೆಸರು ಬಿ.ಆರ್‌. ಗೋಪಾಲ್‌ ಅವರದು. ಅತ್ಯುನ್ನತ ಮಟ್ಟದ ವಿದ್ವತ್‌ಅಧ್ಯಯನಕ್ಕಾಗಿಯೇ ಮುಡಿಪಿರಿಸಿದ ಜೀವನಬಹುಭಾಷಾ ಪಾಂಡಿತ್ಯಶಾಸನಶಾಸ್ತ್ರದಲ್ಲಿ ಆಳವಾದ ಪರಿಣಿತಿ ಮತ್ತು ತಲಸ್ಪರ್ಶಿ ಇತಿಹಾಸ ಪ್ರಜ್ಞೆಯಿಂದ ಬಾ.ರಾ. ಗೋಪಾಲ್‌ ಅವರು ಇತಿಹಾಸಕ್ಕೆ ನೀಡಿದ ಕೊಡುಗೆ ಅಮೂಲ್ಯ. ಕರ್ನಾಟಕದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ೧೯೩೦ರಲ್ಲಿ ಶ್ರೀ ವೈಷ್ಣವ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ಬಾಲಕೃಷ್ಣ ವೃತ್ತಿಯಿಂದ ವಕೀಲರು. ತಾಯಿ ಜಾನಕಮ್ಮ. ಅವರ ಹುಟ್ಟು ಹೆಸರು ಬಾಲಕೃಷ್ಣ ರಾಜಗೋಪಾಲ. ಆದರೆ ಅವರು ವಿದ್ವತ್‌ಲೋಕದಲ್ಲಿ  ಬಾ.ರಾ. ಗೋಪಾಲ್‌ಎಂದೇ ಪ್ರಸಿದ್ಧರು.   ಅವರು ಬೆಳೆದುದು ಗಡಿ ಪ್ರದೇಶವಾದ್ದರಿಂದ ನಾಡನುಡಿ ಕನ್ನಡಗಡಿಭಾಷೆ ತೆಲುಗುಮನೆಮಾತು ತಮಿಳು ಮತ್ತು ಹಿರಿಯರಿಂದ ಸಂಸ್ಕೃತ ಅವರಿಗೆ ಬಾಲ್ಯದಲ್ಲೆ ಸರಾಗವಾಗಿ ಬಂದವು. ಅದರಿಂದ ಅವರಿಗೆ ಬಹುಭಾಷಾ ಪ್ರವೀಣತೆ ಸಹಜವಾಗಿ ದೊರೆಯಿತು. ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಆಯಿತು. ಇಂಟರ್‌ಮಿಡಿಯಟ್‌ವರೆಗೆ  ತುಮುಕೂರಿನಲ್ಲಿ ಶಿಕ್ಷಣ ದೊರೆಯಿತುಕಾಲೇಜು ಹಂತದಲ್ಲಿ ಇಂಗ್ಲಿಷ್‌ ಭಾಷೆಯ ದೀಕ್ಷೆ ಸಿಕ್ಕಿತು. ನಂತರ ಮೈಸೂರಿನ ಮಹಾರಾಜ ಕಾಲೇಜು ಪದವಿ ಶಿಕ್ಷಣಕ್ಕೆ ಅನುವು ನೀಡಿತು. ವಸತಿ ಮತ್ತು ಊಟ ಪರಕಾಲ ಮಠದ ಉಚಿತ ವಿದ್ಯಾರ್ಥಿನಿಲಯದಲ್ಲಿ


ಡಿ.ಎಲ್‌.ನರಸಿಂಹಾಚಾರ್ಯ,ಎಂ.ಯಮುನಾಚಾರ್ಯರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮತ್ತು ಎಸ್. ಶ್ರೀಕಂಠಶಾಸ್ತ್ರಿಗಳಂಥಹ         ವಿದ್ವಾಂಸರ ಮಾರ್ಗದರ್ಶನದಿಂದ ವಿದ್ವತ್‌ ಲೋಕಕ್ಕೆ ಪ್ರವೇಶ ದೊರೆಯಿತುಮತ್ತು ಪರಿಣಾಮವಾಗಿ  ಇತಿಹಾಸ ಮತ್ತು ಇಂಡಾಲಜಿ ವಿಷಯದಲ್ಲಿ ಆಸಕ್ತಿ ಕುದುರಿತು.  ಅವರ ಬಹುಭಾಷಾಜ್ಞಾನ ಅಧ್ಯಯನಕ್ಕೆ ಪೂರಕವಾಯಿತು. ಮೈಸೂರಿನಲ್ಲೆ ಸ್ನಾತಕೋತ್ತರ ಪದವಿ. ಶಾಸನ ಶಾಸ್ತ್ರದಲ್ಲಿ ಆಸಕ್ತಿ ಹೆಚ್ಚಿತು,ಅದಕ್ಕೆ ಅವರು ಆರಿಸಿದ ವಿಷಯಗಳಾದ ಇಂಡಾಲಜಿ ಮತ್ತು ಇತಿಹಾಸ ಪೂರಕವಾದವು.ಇಷ್ಟವಾದ ವಿಷಯವನ್ನೇ ಕಷ್ಟವಿಲ್ಲದೆ ಕಲಿಯುವ ಅವಕಾಶ ಅವರಿಗೆ ದಕ್ಕಿತು.
ಅದೃಷ್ಟವೆಂದರೆ ಅವರ ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದವು.ಅವರಿಗೆ ದಕ್ಷಿಣ ಭಾರತದಲ್ಲೇ ಪ್ರಖ್ಯಾತವಾದ ಉದಕಮಂಡದಲ್ಲಿನ ಶಾಸನಶಾಸ್ತ್ರ ಅಧ್ಯಯನ ಸಂಸ್ಥೆಯಲ್ಲಿ  ಶಾಸನ ತಜ್ಞರಾಗಿ ಕೇಂದ್ರಸರ್ಕಾರದ ಉದ್ಯೋಗ ದೊರೆಯಿತು.ಅವರ ಶಿಕ್ಷಣ ಮುಗಿದೊಡನೆಯೇ ೧೯೫೫ರಲ್ಲಿ ಉದ್ಯೋಗ ಪಡೆದರು.
ಅವರಿಗೆ ದೊರೆತ ಹುದ್ದೆ ತೆಲಗು ಸಂಶೋಧನಾ ಸಹಾಯಕರದು. ಅವರ ಬಹುಭಾಷಾ ಜ್ಞಾನವು ತೆಲುಗು ಮತ್ತು ಕನ್ನಡ ಎರಡೂ ಭಾಷೆಯ ಶಾಸನ ಅಧ್ಯಯನಕ್ಕೆ ಅನುಕೂಲವಾಯಿತು.
ಅದರ ಫಲವಾಗಿ ಎರಡೂ ಭಾಷೆಯ ಶಾಸನ ಸಂಪಾದನೆಯ ಕೆಲಸ ನಿರಾಯಾಸ. ಅಲ್ಲಿ ಕಳೆದ ಒಂದು ದಶಕವು ಅವರ ವೃತ್ತಿಜೀವನಕ್ಕೆ ಭದ್ರಅಡಿಪಾಯ ಹಾಕಿತು. ಅವರ ಕಚೇರಿಯಲ್ಲಿ ಓದಬೇಕಾದ ಸಾವಿರಾರು ಶಾಸನಗಳು ಎಲ್ಲೆಂದರಲ್ಲಿ ಹರಡಿದ್ದವು,  ಅವುಗಳ,ಅಧ್ಯಯನಕ್ಕೆ ಅತ್ಯಗತ್ಯವಾದ  ಗ್ರಂಥಾಲಯ  ಸೌಲಭ್ಯವೂ ಇತ್ತು,  ಜೊತೆಗೆ ಡಾ.ಡಿ,ಸಿ ಸರ್ಕಾರ್‌ಶ್ರೀಲಕ್ಷ್ಮಿನಾರಾಯಣರಾವ್‌ಡಾ. ಪಿ.ಬಿ ದೇಸಾಯಿ ಮತ್ತು ಶ್ರೀ ಎಚ್ ಕೆ ನರಸಿಂಹಸ್ವಾಮಿಯಂತಹ ತಜ್ಞರ ಮಾರ್ಗದರ್ಶನ ಲಭ್ಯವಿತ್ತು. ಅದರ ಪರಿಣಾಮವಾಗಿ ಗೋಪಾಲ್‌ ಇತಿಹಾಸ ಸಂಶೋಧನೆ ಮತ್ತು ಶಾಸನಶಾಸ್ತ್ರದಲ್ಲಿ ಉನ್ನತ ಸ್ಥಾಯಿಗೆ ಏರಲೂ ಅನುಕೂಲವಾಯಿತು. ತಮ್ಮ ಕೆಲಸದ ಅಂಗವಾಗಿ ಹೊಸ ಶಾಸನಗಳನ್ನು ಹುಡುಕಲು ಹಳ್ಳಿಹಳ್ಳಿಗೆ ಓಡಾಟಅವುಗಳ ಸಮೀಕ್ಷೆವಾರ್ಷಿಕ ವರದಿ ತಯಾರಿ,ಶಾಸನ ಗ್ರಂಥಗಳ ಸಂಪಾದನೆಪ್ರಕಟನೆಗೆ ಪೂರ್ವಸಿದ್ಧತೆಯ ತರಬೇತಿ ದೊರಕಿತು. ಅದರಲ್ಲೂ ತೆಲುಗು ಮತ್ತು ಕನ್ನಡ ಶಾಸನ ಸಂಗ್ರಹ ಮತ್ತು ಪ್ರಕಟನೆಯಲ್ಲಿ ಅವರ ಕಾಣಿಕೆಯು ದಕ್ಷಿಣ ಭಾರತದಲ್ಲೇ ಗಣನೀಯ ಎಂದು ಗುರುತಿಸಲಾಗಿದೆ. ತಮ್ಮಲ್ಲಿ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕಲ್ಯಾಣ ಚಾಲುಕ್ಯರ ಕುರಿತು ಮಾಡಿದ ಅವರ ಸಂಶೋಧನೆಯ ಪ್ರೌಢಪ್ರಬಂಧಕ್ಕೆ  ಮೈಸೂರುವಿಶ್ವವಿದ್ಯಾಲಯದಿಂದ ಪಿಎಚ್‌.ಡಿ
ದೊರಕಿತು

 .ಶಾಸನ ಪರಿಣತಿಯು ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪುರಾತನ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುವ ಅವಕಾಶ ಒದಗಿಸಿತು. ಅಲ್ಲಿಯೂ ಅವರ ವೃತ್ತಿಮಾರ್ಗದರ್ಶಕರಾಗಿದ್ದ ಡಾ.ಪಿ.ಬಿ ದೇಸಾಯಿಯವರೇ ವಿಭಾಗದ ಮುಖ್ಯಸ್ಥರು.ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಮಾಡುವ ಬೋಧನೆಯು ಅವರ ಜ್ಞಾನ ದಿಗಂತದ ವಿಸ್ತರಣೆಗೆ ಸಹಾಯ ಮಾಡಿತು. ಶೈಕ್ಷಣಿಕ ಪ್ರಪಂಚದ ಅನುಭವವಿಚಾರ ಸಂಕಿರಣಗಳುಸಮಾವೇಶಗಳು ಅವರ ಅಧ್ಯಯನಕ್ಕೆ ಹೊಸ ಆಯಾಮ ಒದಗಿಸಿದವು.ಆಗಲೇ ಅವರು ಭುವನೇಶ್ವರದಲ್ಲಿ ನಡೆದ ಭಾರತೀಯ ಇತಿಹಾಸ ಕಾಂಗ್ರೆಸ್ಸಿನ ಶಾಸನ ಮತ್ತು ನಾಣ್ಯಶಾಸ್ತ್ರ ವಿಭಾಗಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು.ಪಿ.ಬಿ.ದೇಸಾಯಿಯವರ ಸಂಪಾದಕತ್ವದಲ್ಲಿ ಹೊರಬಂದ “ಕರ್ನಾಟಕ ಇತಿಹಾಸ” ಉದ್ಗ್ರಂಥ ಬೆಳಕುಕಾಣಲು ಇವರ ಕೊಡುಗೆಯೂ ಇದೆ.ಕನ್ನಡಸಂಶೋಧನ ಸಂಸ್ಥೆಯು “ಕರ್ನಾಟಕ ಶಾಸನಗಳ ಸರಣಿ” ಪ್ರಕಟಿಸಿದ ಎರಡು ಸಂಪುಟಗಳ ಸಂಪಾದಕ ಮಂಡಳಿಯಲ್ಲೂ ಇವರ ಪಾಲು ಗಣನೀಯ. ಜೊತೆ ಜೊತೆಗೆ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಅನೇಕ ಸಂಶೋಧನ ಲೇಖನಗಳನ್ನು ಪ್ರಕಟಿಸಿದರು. ಅವರಿಗೆ ಪ್ರವಾಚಕ ಹುದ್ದೆಯೂ ಲಭಿಸಿತು.
ತಮಗೆ ಶಿಕ್ಷಣ ನೀಡಿದ ಮಾತೃಸಂಸ್ಥೆ ಮೈಸೂರು ವಿಶ್ವವಿದ್ಯಾಲಯದ ಮಹತ್ವದ ಯೋಜನೆಯಾದ ಕಳೆದ ಶತಮಾನದ ಕೊನೆಯಲ್ಲಿ ಬಿ.ಎಲ್‌ರೈಸ್‌ ಸಂಪಾದಿಸಿದ “ಎಪಿಗ್ರಾಫೀಯಾ ಕರ್ನಾಟಿಕ “ ಸಂಪುಟಗಳ  ಪರಿಷ್ಕರಣೆ ಮತ್ತು ಪುನರ್‌ಮುದ್ರಣದ ಹೊಣೆ ಹೊರಲು ಕರೆ ಬಂದಿತು. ಅವರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶಾಸನ ತಜ್ಞರಾಗಿಸೇರಿದರು.ಮೂಲದ ಐದು ಸಂಪುಟಗಳನ್ನು ಪರಿಷ್ಕರಣೆ ಮಾಡಿ ವಿಸ್ತರಿಸಿಒಂಬತ್ತು ಸಂಪುಟಗಳ ಸಂಪಾದನೆ ಮಾಡುವ ಬೃಹತ್‌ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವುಗಳಲ್ಲಿ ಹೊಸದಾಗಿ ದೊರೆತ ಶಾಸನಗಳನ್ನೂ ಸೇರಿಸಿ,ಸ್ಖಾಲಿತ್ಯವಾಗಿದ್ದ ಅನೇಕ ಹಳೆಯ ಶಾಸನಗಳ ಪಠ್ಯವನ್ನು ಲಭ್ಯವಿದ್ದ ಮೂಲಶಾಸನ ಪರಿಶೀಲಿಸಿ ಪರಿಷ್ಕರಿಸಿದರು. ಈ ಸಂಪುಟಗಳಿಗೆ ಅವರು ರಚಿಸಿದ ಸವಿವರವಾದ ಪೀಠಿಕೆಯೇ ಅತ್ಯಮೂಲ್ಯ ಮಾಹಿತಿಯ ಆಕರವಾಗಿವೆ. ಕರ್ನಾಟಕ  ಇತಿಹಾಸದ ಸಮಗ್ರ ಚಿತ್ರಣ ಕೊಡುವ ಅಧ್ಯಾಯಗಳಾಗಿವೆ.ಅವುಗಳಿಂದಾಗಿಯೇ ಈ ಕ್ಷೇತ್ರದಲ್ಲಿನ ವಿದ್ವಾಂಸರು ಬಿ.ಎಲ್‌ರೈಸ್‌ ಜೊತೆ ಜೊತೆಯಾಗಿ ಬಾ.ರಾ. ಗೋಪಾಲರನ್ನೂ ನೆನೆಯುವಂತಾಗಿದೆ.

ಶಾಸನ ಮತ್ತು ಇತಿಹಾಸ ಕ್ಷೇತ್ರಗಳಲ್ಲಿಅವರ ಕೊಡುಗೆ ಅಪಾರ ಮತ್ತು ವೈವಿಧ್ಯಪೂರ್ಣ.  ಅವರ ಕಾರ್ಯಗಳನ್ನು ಮುಖ್ಯವಾಗಿ ಮೂರು ಭಾಗಮಾಡಬಹುದು. ಶಾಸನ ಸಂಬಂಧಿ ಸಂಪುಟಗಳು ಇತಿಹಾಸ ಗ್ರಂಥಗಳು ಮತ್ತು ಲೇಖನವಿಮರ್ಶೆ ಉಪನ್ಯಾಸ ಇತ್ಯಾದಿ. ವೃತ್ತಿಗೆ ಸೇರಿದ ಮೊದಲೇ ದಕ್ಷಿಣ ಭಾರತದ ಶಾಸನಗಳ ಸಂಪುಟ ೧೫  ಮತ್ತು ೧೭ ರ ಸಂಪಾದನಾ ಕೆಲಸದಲ್ಲಿ ಡಾ. ಪಿ ಬಿ.ದೇಸಾಯಿಯವರ ಜೊತೆ ದುಡಿಯುವ ಅವಕಾಶ ಸಿಕ್ಕಿತು.ಸುಮಾರು ೭೭೧ ಕನ್ನಡ ಶಾಸನಗಳ ಸಂಪೂರ್ಣಪಾಠ , ಅವುಗಳ ಇಂಗ್ಲಿಷ್‌ ಸಾರಾಂಶ ಮತ್ತು ಅವುಗಳ ಮಹತ್ವ ವಿವರಿಸುವ ಸುದೀರ್ಘ ಪ್ರಸ್ತಾವನೆಗಳೊಡನೆ  ಪ್ರಕಟಿಸಿದರು. ಸಂಕೀರ್ಣ ಶಾಸನಗಳು ಎಂಬ ಹೆಸರಿನ ೧೭ನೆಯ ಸಂಪುಟದಲ್ಲಿ ಅನ್ಯಭಾಷೆಗಳ ಶಾಸನಗಳನ್ನೂ ಹೊರತಂದ ಸಂಪಾದಕ ಮಂಡಳಿಯಲ್ಲಿ ಸಹ ಸಂಪಾದಕರಾಗಿದ್ದರು. ಅದೇ ರೀತಿಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯ  “ಕರ್ನಾಟಕ ಇನ್ಸ್ ಕ್ರಿಪ್ಷನ್ಸ್‌”, “Corpus of  Kannada inscriptions” ನಲ್ಲಿ ಪ್ರಾಚೀನ ಕದಂಬರ ಎಲ್ಲ ಶಾಸನಗಳ ವ್ಯವಸ್ಥಿತ ಅಧ್ಯಯನವಿದೆ. 
ವಿಜಯನಗರಕಾಲದ ದಕ್ಷಿಣ ಭಾರತದಲ್ಲಿ ದೊರೆತ ಎಲ್ಲ ಶಾಸನಗಳನ್ನು ರಾಜ್ಯವಾರುಜಿಲ್ಲಾವಾರು ಮತ್ತು ತಾಲೂಕುವಾರು ಅಕಾರಾದಿಯಾಗಿ ವಿಂಗಡಣೆ ಮಾಡಿ ಮೊದಲ ಮೂರು ಸಂಪುಟಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ 2287 ಶಾಸನಗಳ ವಿವರನೀಡಿರುವರು. ನಾಲ್ಕನೆಯ ಸಂಪುಟವು ಆಂಧ್ರಪ್ರದೇಶ ಅನಂತಪುರ ಮತ್ತು ಕರ್ನೂಲು ಜಿಲ್ಲೆಯಲ್ಲಿ ದೊರೆತ 1066 ಶಾಸನಗಳ ಮಾಹಿತಿ ಒಳಗೊಂಡಿದೆ.  ಇನ್ನುಳಿದ ಆಂಧ್ರ ಪ್ರದೇಶದ ಭಾಗದಲ್ಲಿ ಮತ್ತು ತಮಿಳುನಾಡಿನಲ್ಲಿ ದೊರೆತ ಶಾಸನಗಳ ಸಂಗ್ರಹವೂ ಹೊರಬರಲಿದೆ.
ಅವರ ಸಂಶೋಧನ ಗ್ರಂಥಗಳಲ್ಲಿ ಮೊದಲನೆಯದು  “ The chalukyas of Kalyana and Kalachuries (1981) ಎಂಬ ಅವರ ಪಿಎಚ್‌ಡಿಯ ಸಂಪ್ರಬಂಧ’. “ Minor Dynasties of South India” ಕರ್ನಾಟಕದಲ್ಲಿ ಹೆಚ್ಚು ಪರಿಚಿತವಲ್ಲದ ಸಾಮಂತ ಮನೆತನಗಳಾದ ಚೆಂಗಳ್ವರುಕೊಂಗಾಳ್ವರುಹಾನಗಲ್‌ಮತ್ತು ಗೋವೆಯ ಕದಂಬರು ,ಶಿಲಾಹರರುಸಿಂಧರು ಮೊದಲಾದವರ ವಂಶಾವಳಿಯ ಬಗೆಗ ಶಾಸನಾಧಾರಿತವಾಗಿ  ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುವ ಬರಹಗಳಿವೆ..
ಸಮಕಾಲೀನ ಇತಿಹಾಸಕಾರರೊಡನೆ ‘A History of Karnatalak’,  ‘History of Andhrapradesh’  ಗ್ರಂಥಗಳನ್ನು ರಚಿಸಿದರು. ‘Sri Ramanuja in Karnataka’  ಒಂದು ಮಾಹಿತಿಪೂರ್ಣ ಸಮಗ್ರ ಗ್ರಂಥವಾಗಿದೆ.
ಕರ್ನಾಟಕದ ಪ್ರಾಚೀನ ಭಾರತದ ಚರಿತ್ರೆಕರ್ನಾಟಕ ಇತಿಹಾಸಕರ್ನಾಟಕದಲ್ಲಿ ರಾಮಾನುಜರುಕದಂಬರುಕರ್ನಾಟಕದಲ್ಲಿ ಕಲೆಗಳು ಮತ್ತು ವಾಸ್ತು ಕೃತಿಗಳ ಜೊತೆಗೆ ಜನಸಾಮಾನ್ಯರಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ ಜಾಗೃತಿ ಮೂಡಿಸಲು ಚಿಕ್ಕ ಚಿಕ್ಕ ಪುಸ್ತಕಗಳನ್ನೂ ರಚಿಸಿರುವರು.
ಇತಿಹಾಸಭಾಷೆಸಂಸ್ಕೃತಿ ಮತ್ತು ಸಾಹಿತ್ಯ ಕುರಿತಾದ ಹಲವಾರು ಲೇಖನಗಲು ವಿದ್ವತ್‌ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಇಷ್ಟೆಲ್ಲ ಮಹತ್ವ ಪೂರ್ಣ ಬರವಣಿಗೆಯ ಜೊತೆಗೆ ಹಾಸ್ಯ ಸಾಹಿತ್ಯ ಮತ್ತು ಲಿಲತಪ್ರಬಂಧಗಳನ್ನೂ ಅವರ ಅಮೇರಿಕಾಮ್ಪ್ರವಾಸ ಕಥನವಾದ “ ಅಮೇರಿಕಾದಲ್ಲೊಂದು ಇಣುಕುನೋಟ “ ಕೃತಿಯೂ ಅವರ ಬಹು ಮುಖ ಪ್ರತಿಭೆಗೆ ಸಾಕ್ಷಿ.
ವಿದ್ವತ್ತಿನಿಂದಾಗಿ ಟೋಕಿಯೋದಲ್ಲಿ ಮತ್ತು ಜರ್ಮನಿಯ ಹ್ಯಾಂಬರ್ಗನಲ್ಲಿ ನಡೆದ ಏಷಿಯಾ ಮತ್ತು ಉತ್ತರ ಆಫ್ರಿಕಾ ಅಧ್ಯಯನ ಕಾಂಗ್ರೆಸ್‌ನ ಸಮ್ಮೇಳನಗಳಿಗೆ ಆಹ್ವಾನಿತರಾಗಿದ್ದರು.
ಬಾ.ರಾ. ಗೋಪಾಲ್‌ ಅವರ ಅಂತಿಮ ಹಂತದ ಸೇವೆಯ ಸೌಭಾಗ್ಯ ಸಂದಿದ್ದು ಆಂಧ್ರಪ್ರದೇಶದ ಅನಂತಪುರದ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯಕ್ಕೆ. ಅಲ್ಲಿ೧೯೮೭ರಿಂದ ನಿವೃತ್ತರಾಗುವವರೆಗೆ ಇತಿಹಾಸ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಮೂರುವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಆಂಧ್ರಪ್ರದೇಶದ ಇತಿಹಾಸ ಅಧ್ಯಯನಕ್ಕೆ ಅವರಿಂದ ಹೊಸ ಆಯಾಮ ದೊರಕಿತು. ಆಂಧ್ರ ಇತಿಹಾಸದ ಎರಡು ಸಂಪುಟಗಳುನ್ನು ಸಂಪಾದನೆಮಾಡಿ ಪ್ರಕಟಿಸಿದರು.ಅವರ ವಿದ್ವತ್‌ಪೂರ್ಣ ಮಾರ್ಗದರ್ಶನದಲ್ಲಿ ಅನೇಕವಿದ್ಯಾರ್ಥಿಗಳು ಆಂಧ್ರ ಇತಿಹಾಸದಲ್ಲಿ ಡಾಕ್ಟರೇಟ್‌ಗಳಿಸಿದರು. ನೆಲ್ಲೂರಿನಲ್ಲಿ ಜರುಗಿದ “ಮೆಡಿವಿಯಲ್‌ ಹಿಸ್ಟರಿ ಕಾಂಗ್ರೆಸ್‌” ಮತ್ತು ಗುಂಟೂರಿನಲ್ಲಿ ಜರುಗಿದ “ಎಪಿಗ್ರಾಫಿಕಲ್‌ ಸೊಸೈಟಿ ಅಫ್ ಇಂಡಿಯಾ" ದ ವಾರ್ಷಿಕ ಸಮ್ಮೇಳನ ಮತ್ತು ಚಿತ್ರದುರ್ಗದಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಸಮ್ಮೇಳನದ  ಅಧ್ಯಕ್ಷತೆ  ಇವರದಾಗಿತ್ತು.
ಅವರ ವಿದ್ವತ್‌ಪೂರ್ಣ ವ್ಯಕ್ತಿತ್ವಕ್ಕೆ ಸಂದ ಪ್ರಶಸ್ತಿ ಗೌರವಗಳು ಅನೇಕ. ಮಿಥಿಕ್‌ಸೊಸೈಟಿಕನ್ನಡ ಸಾಹಿತ್ಯ ಪರಿಷತ್‌ಶ್ರೀ ಶೃಂಗೇರಿ ಮಠ ಹಾಗೂ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಸಾರ್ಥಕತೆ ಪಡೆದವು.
ನಿವೃತ್ತರಾದ ಮೇಲೂ ಅವರ ಉತ್ಸಾಹ ಕುಂದಲಿಲ್ಲ. ಮೈಸೂರಿನಲ್ಲಿ ನೆಲಸಿದ ಅವರು ತಮ್ಮಧರ್ಮ ಪತ್ನಿ ಶ್ರೀಮತಿ ಪದ್ಮ ಮತ್ತು ಮೂವರು ಪುತ್ರಿಯರ ತುಂಬು ಸಹಕಾರದಿಂದ ಮೈಮರೆತು ಸೇವೆ ಸಲ್ಲಿಸಲು ಅನುವಾಯಿತು. ಕದಂಬ ಮತ್ತು ರಾಷ್ಟ್ರಕೂಟರ ಕುರಿತಾದ ವಿಚಾರ ಸಂಕಿರಣಗಳಲ್ಲಿನ ಸಂಪ್ರಬಂಧಗಳ ಎರಡು ಸಂಪುಟಗಳುಕರ್ನಾಟಕಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದೊರೆತಿರುವ ವಿಜಯನಗರದ ಅರಸರ ಶಾಸನಗಳ ಸಾರಾಂಶಗಳ ಆರು ಸಂಪುಟಗಳುತಮ್ಮ ಗುರುಗಳಾದ ಶ್ರೀ. ಎನ್‌. ಲಕ್ಷ್ಮಿನಾರಾಯಣರಾವ್‌ ಅವರ ಸಮಗ್ರಕೃತಿಗಳ ಸಂಪುಟದ ಸಂಪಾದಕರಾಗಿ ನಿವೃತ್ತಜೀವನದ ಏಳು ವರ್ಷಗಳನ್ನು ಸಾರ್ಥಕವಾಗಿ ಕಳೆದರು. ಮಡದಿ,ಮಕ್ಕಳುಮೊಮ್ಮಕ್ಕಳ ತುಂಬು ಕುಟುಂಬದ ನೆಮ್ಮದಿಯ ನಿವೃತ್ತ ಜೀವನದಲ್ಲೂ  ಅವರು ಅಕ್ಷರಶಃ ತಮ್ಮ ಕೊನೆಯುಸಿರಿನ ತನಕ ವಿದ್ವತ್‌ಪೂರ್ಣ ಕಾರ್ಯಗಳಿಗಾಗಿಯೇ ಜೀವನವನ್ನುಮೀಸಲಿರಿಸಿ೧೯೯೭ರ ಜೂನ್‌ನಲ್ಲಿ ಇತಿಹಾಸದ ಭಾಗವಾದರು

. ಉದಕಮಂಡಲದ ಶಾಸನಶಾಸ್ತ್ರ ಕಚೇರಿಯ ತ್ರಿಮೂರ್ತಿಗಳೆಂದೇ ಡಾ.ಕೆ.ವಿ.ರಮೇಶ್ಡಾ. ಶ್ರೀನಿವಾಸ ರಿತ್ತಿ ಮತ್ತು ಬಾ.ರಾ.ಗೋಪಾಲ್‌ ಹೆಸರಾಗಿದ್ದರು.ಅವರ ಮರಣಾನಂತರ ತ್ರಿಮೂರ್ತಿಗಳಲ್ಲಿ ಉಳಿದ ಇಬ್ಬರ ಸಂಪಾದಕತ್ವದಲ್ಲಿ ಸುದರ್ಶನ ಎಂಬ ವಿದ್ವತ್‌ಪೂರ್ಣ  ಸಂಸ್ಮರಣ ಸಂಪುಟವನ್ನು ಗೌರಾವಾದರಗಳಿಂದ  ಅವರಿಗೆ ಸಮರ್ಪಿಸಲಾಯಿತು. ಡಾ. ಶ್ರೀನಿವಾಸ ರಿತ್ತಿಯವರ ಪ್ರಕಾರ,”ಬಾ ರಾ ಗೋಪಾಲರದು ದಣಿವರಿಯದ ದುಡಿಮೆ.ನಾಳೆ ಮಾಡಿದರಾಯಿತು ನಂತರ ಮಾಡಿದರಾಯಿತು ಎಂಬ ಮಾತೇ ಇಲ್ಲ” . ಅದೇ ಕಾರಣದಿಂದ ಪ್ರಾಗೈತಿಹಾಸ ರಂಗಕ್ಕೆ ಅವರ ಕಾಣಿಕೆ ಕಣ್ಣುಕುಕ್ಕಿಸುವ ಪ್ರಮಾಣದ್ದು. ಕರ್ನಾಟಕ ಇತಿಹಾಸ ಲೋಕದಲ್ಲಂತೂ ಅವರ ಹೆಸರು ಸದಾ ಹಸಿರಾಗಿರುವಂತೆ ‘ ಬಾ.ರಾಗೋಪಾಲ್‌ ದತ್ತಿ ಪ್ರಶಸ್ತಿಯನ್ನು ಕಳೆದ ಹನ್ನೆರಡು ವರ್ಷಗಳಿಂದ  ಕರ್ನಾಟಕ ಇತಿಹಾಸ ಸಮ್ಮೇಳನದಲ್ಲಿ ಪ್ರತಿವರ್ಷ ಯುವ ಸಂಶೋಧಕರಿಗೆ ನೀಡಲಾಗುತ್ತಿದೆ.ಇದರಿಂದ ಸಂಶೋಧನೆಯ ಜ್ಯೋತಿಯು ಅನವರತ ಬೆಳಗಲು ಅವಕಾಶವಾಗಿದೆ.
ಎಚ್‌ಶೇಷಗಿರಿರಾವ್

(


Friday, June 28, 2013

ಮಹಾ ಮಂತ್ರಿ ತಿಮ್ಮರಸು

ಕೃಷ್ಣದೇವರಾಯನ ಸಚಿವ ಸಂಪುಟದ ಪ್ರಭಾವಿ
ಸಾಳುವ ತಿಮ್ಮರಸು
ಡಾ. ಡಿ.ಎನ್. ಯೋಗೀಶ್ವರಪ್ಪ
ಕೃಷ್ಣದೇವರಾಯ (ಕ್ರಿ.ಶ.೧೫೦೯-೧೫೨೯) ತನ್ನ ಮನಸ್ಸನೇ ಕಾವ್ಯಪುಟಗಳಾಗಿ ಪರಿವರ್ತಿಸಿದ ಸ್ಮೃತಿ ಸಂಕಲನ ಎನ್ನುವ ಆಮುಕ್ತಮೌಲ್ಯದ ಕಾವ್ಯದಲ್ಲಿ ರಾಜ್ಯಾಂಗದಲ್ಲಿ ಕೇವಲ ಧನರಾಶಿ ಸೈನ್ಯಗಳೇ ಅಲ್ಲದೆ ಜನರ ಸಹಾಯವೂ ಬೇಕಾಗುತ್ತದೆ. ಎಲ್ಲ ವಿಧದಲ್ಲೂ ಯಾವಾಗಲೂ ಬ್ರಾಹ್ಮಣರನ್ನೇ ದೊಡ್ಡ ದೊಡ್ಡ ಅಧಿಕಾರಗಳಲ್ಲಿರಿಸುವುದು ಒಳ್ಳೆಯದು ಹಾಗೆ ಮಾಡಿದಲ್ಲಿ ಆತ ಚತುರತೆಯಿಂದ ರಾಜ್ಯಾಂಗದ ವ್ಯವಹಾರಗಳನ್ನು ಸರಿಪಡಿಸುತ್ತಾನೆ.ದುರ್ಗದ ಅಧಿಕಾರವನ್ನು ಬ್ರಾಹ್ಮಣೇತರರಿಗೆ ಕೊಟ್ಟರೆ ಅವರು ಸಮಯ ಬಂದಾಗ ರಾಜನ ಮೇಲೆ ತಿರುಗಿ ಬೀಳುವರು ಆದುದರಿಂದ ಬ್ರಾಹ್ಮಣರಿಗೇ ಕೊಡಬೇಕು ವಿದ್ಯೆ ಪಾಪಭೀತಿ ರಾಜನೀತಿ ಶಾಸ್ತ್ರಜ್ಞಾನವು ಪ್ರಕಾಶಿಸುವ ರೂಪವುಳ್ಳ ಬ್ರಾಹ್ಮಣನನ್ನು ೫೦ಕ್ಕೆ ಮೇಲ್ಪಟ್ಟು ೭೦ರ ಒಳಗಿರುವ ವಯಸ್ಸಿನವರನ್ನು ಪ್ರಾರ್ಥಿಸಿಕೊಂಡು ಮಂತ್ರಿ ಪದವಿ ಕೊಡಬೇಕು
ಈ ವಾಕ್ಯಗಳನ್ನು ಗಮನಿಸಿದಾಗ ಕೃಷ್ಣದೇವರಾಯನ ಮನಸ್ಸಿನ ಭಾವನೆಗಳು ಅರ್ಥವಾಗುತ್ತವೆ. ಆದ್ದರಿಂದಲೇ ಅವನು ತನ್ನ ಆಡಳಿತದಲ್ಲಿ ಉನ್ನತ ಹುದ್ದೆಗಳನ್ನೆಲ್ಲಾ ಬ್ರಾಹ್ಮಣರಿಗೇ ವಿಸಲಾಗಿಟ್ಟಿದ್ದುದು. ಅವನಿಗೆ ಬ್ರಾಹ್ಮಣರ ಮೇಲೆ ಇನ್ನಿತರೆ ಸಮುದಾಯಗಳಿಗಿಂತ ಹೆಚ್ಚು ಅಚಲ ವಿಶ್ವಾಸವಿತ್ತು. ಆದ್ದರಿಂದಲೇ ಅವನು ಬ್ರಾಹ್ಮಣೇತರರು ಸಮಯ ಬಂದಾಗ ರಾಜನ ಮೇಲೆ ತಿರುಗಿ ಬೀಳುವರು ಎಂದಿರುವುದು ಉದಾ: ಕೃಷ್ಣದೇವರಾಯ ತನ್ನ ಆಳ್ವಿಕೆಯ ೨೦ ವರ್ಷಗಳ ಅವಧಿಯಲ್ಲಿ ನಾಯಕತನಕ್ಕೆ ನೀಡಿದ ೫೫ ಸೀಮೆಗಳಲ್ಲಿ ೨೨ ಸೀಮೆಗಳ ಒಡೆತನ ಬ್ರಾಹ್ಮಣರದಾಗಿತ್ತು. ಇದು ಇನ್ನು ಹೆಚ್ಚಾಗಿರಬಹುದು ನಾಯಕತನ ಪಡೆದ ಬ್ರಾಹ್ಮಣರು ಮತ್ತು ಅವರ ಗೋತ್ರಗಳ ಪಟ್ಟಿಯನ್ನೇ ಡಿ.ಎನ್. ಯೋಗೀಶ್ವರಪ್ಪ ತಯಾರಿಸಿದ್ದಾರೆ. ಇದರಿಂದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಬ್ರಾಹ್ಮಣರೇ ಮೇಲುಗೈ ಸಾಧಿಸಿದ್ದರು. ಇವರಲ್ಲಿ ಕೆಲವರು ತಮ್ಮ ಪ್ರಭಾವದಿಂದ ಇಡೀ ಕುಟುಂಬಕ್ಕೇ ಅಧಿಕಾರ ದಕ್ಕಿಸಿಕೊಟ್ಟಿರುವುದೂ ಉಂಟು ಅವರಲ್ಲಿ ಸಾಳುವ ತಿಮ್ಮರಸನ ಕುಟುಂಬ ಅತ್ಯಂತ ಪ್ರಭಾವಶಾಲಿಯಾದುದು. ಇವನು ವಿಜಯನಗರದಲ್ಲಿ ಪ್ರಧಾನಿಯಾಗಿದ್ದವನು, ಇವನಂತೆ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಪ್ರಧಾನಿ ಮಲ್ಲರಸ, ಪ್ರಧಾನಿ ಬಸವಪ್ಪಯ್ಯ, ಪ್ರಧಾನಿ ಸರ್ವರಸಯ್ಯ, ಪ್ರಧಾನಿ ಇಮ್ಮಡಿಯಲ್ಲಪ್ಪ ಒಡೆಯ ಎಂಬುವರು ಇದ್ದರೂ ಇವರ‍್ಯಾರು ಸಾಳ್ವ ತಿಮ್ಮರಸನಂತೆ ತಮ್ಮ ಕುಟುಂಬದ ಸದಸ್ಯರಿಗೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇಂಥಹವನ್ನು ಕುರಿತಂತೆ ತೆಲುಗು ಭಾಷೆಯಲ್ಲಿ ಚಲನಚಿತ್ರಗಳೂ ಹೊರಬಂದಿವೆ ಮತ್ತು ಸಾಹಿತ್ಯವೂ ರಚನೆಯಾಗಿದೆ. ಅದರಲ್ಲಿ ಚಿಲಕೂರಿ ವೀರಭದ್ರರಾವು ತೆಲುಗಿನಲ್ಲಿ ರಚಿಸಿರುವ ತಿಮ್ಮರಸು ಮಂತ್ರಿ ಎಂಬ ಸ್ವತಂತ್ರ ಕೃತಿಯೂ ಒಂದಾಗಿದೆ. ಆದರೆ ಕನ್ನಡ ಭಾಷೆಯಲ್ಲಿ ಇವನ ಮತ್ತು ಇವನ ಕುಟುಂಬ ಸದಸ್ಯರು ವಿವರಗಳನ್ನು ಸಾಂದರ್ಭಿಕವಾಗಿ ಅಲ್ಲಲ್ಲಿ ಉಲ್ಲೇಖಿಸಿದ್ದರೂ ಸ್ವತಂತ್ರವಾದ ಶೋಧ ಪ್ರಬಂಧವಾಗಲೀ ಅಥವಾ ಕೃತಿಯಾಗಲೀ ನನ್ನ ಗಮನಕ್ಕೆ ಬಂದಂತೆ ರಚನೆಯಾಗಿಲ್ಲ. ಆದುದರಿಂದ ನಾನು ಇಂಥಹ ಕಾರ್ಯವೊಂದನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಏಕೆಂದರೆ ಚಕ್ರವರ್ತಿ ಕೃಷ್ಣದೇವರಾಯನಿಂದ ಪ್ರೀತಿಯಿಂದ ಅಪ್ಪಾಜಿ ಎಂದು ಕರೆಸಿಕೊಳ್ಳುತ್ತಿದ್ದ ತಿಮ್ಮರಸು ಮತ್ತು ಅವನ ಕುಟುಂಬದ ಸದಸ್ಯರು ವಿಜಯನಗರದ ಅಭಿವೃದ್ಧಿಗೆ ಹೇಗೆ ಕಾರಣರಾದರು ಎಂಬುದುನ್ನು ದಾಖಲಿಸುವ ಉದ್ದೇಶ ಈ ಪ್ರಬಂಧದ್ದಾಗಿದೆ. ಇದಕ್ಕಾಗಿ ನಾನು ಪ್ರಮುಖವಾಗಿ I.ಅ.ಊ.ಖ. ಪ್ರಕಟಿಸಿರುವ Iಟಿsಛಿಡಿiಠಿಣioಟಿs oಜಿ ಣhe ಗಿiರಿಚಿಥಿಚಿಟಿಚಿgಚಿಡಿ ಡಿueಡಿs, ಗಿo Iಗಿ, ಹಂಪೆಯ ಕನ್ನಡ ವಿ.ವಿ. ಪ್ರಕಟಿಸಿರುವ ಕೃಷ್ಣದೇವರಾಯನ ಶಾಸನಗಳು ಸಂಪುಟ-೧, ಕೃಷ್ಣದೇವರಾಯನೇ ರಚಿಸಿರುವ ಆಮುಕ್ತಮಾಲ್ಯದ ಎಂಬ ಕೃತಿಯನ್ನೂ ಪ್ರೊ. ಲಕ್ಷ್ಮಣ್ ತೆಲಗಾವಿ ಸಂಪಾದಿಸಿರುವ ಜೀರ್ಣವಿಜಯನಗರಾದರ್ಶಂ ವಿದೇಶಿಯರಾದ ನ್ಯೂನಿಜ್, ಪಯಸ್‌ರ ಬರವಣಿಗೆಗಳು ರಾಬರ್ಟ್ ಸಿವೆಲ್‌ರ oಡಿgoಣಣeಟಿ emಠಿiಡಿe ಎಂಬ ಮೂಲ ಆಕರಗಳ ಜೊತೆಗೆ ಅನೇಕ ಮಾಧ್ಯಮಿಕ ಆಕರಗಳನ್ನು ಬಳಸಿಕೊಂಡಿದ್ದೇನೆ.
ಸಾಳ್ವ ತಿಮ್ಮರಸು
ಸಾಳುವ ತಿಂಮರಸ ವೊಡೆಯರ ತಂಮಂದಿರಾದ ಸಾಳುವ ಗೋವಿಂದರಾಜ ವೊಡೆಯರು ಮತ್ತು ಸಾಳುವ ತಿಂಮರಸವರ್ಮನುಮತದಿಂತದನುಜ ಸಾಳುವ ಗೋವಿಂದ ರಾಜಗಳು ಎಂಬ ಶಾಸನೋಕ್ತ ದಾಖಲೆಯಿಂದ ತಿಮ್ಮರಸನ ತಮ್ಮ ಸಾಳುವ ಗೋವಿಂದರಾಜನೆಂದು ತಿಳಿಯುತ್ತದೆ. ಸಾಳುವಗೋವಿಂದರಾಜನ ತಂದೆ ರಾಚಿರಾಜು ಎಂದು ಹಲವಾರು ಶಾಸನಗಳಲ್ಲಿ ಉಲ್ಲೇಖಿತವಾಗಿದೆ. ಆದುದರಿಂದ ಸಾಳುವ ತಿಮ್ಮರಸುವಿನ ತಂದೆ ರಾಚಿರಾಜನೆಂದು ಖಚಿತವಾಗುತ್ತದೆ. ಈ ರಾಚಿರಾಜನು ಮಹಾಮಂಡಲೇಶ್ವರನಾಗಿದ್ದ ಯರ್ರಗದ್ದಮಯ್ಯದೇವರ ಮಹಾರಾಜರ ಮಗನಾಗಿದ್ದನು. ಇನ್ನೊಂದು ಶಾಸನದಲ್ಲಿ ವೇಮಯ್ಯ ಅಮಾತ್ಯನ ಮಗ ರಾಚಿರಾಜ ಅಮಾತ್ಯ ಎಂದು ದಾಖಲಾಗಿದೆ೭ಎ. ಒಟ್ಟಾರೆ ಇವನು ಅಮಾತ್ಯ ಕುಟುಂಬಕ್ಕೆ ಸೇರಿದವನು. ಇವರು ಮೂಲತಃ ಬ್ರಾಹ್ಮಣರೆಂದು ಅವರ ಗೋತ್ರಸೂತ್ರಗಳಿಂದ ಹೇಳಬಹುದು. ರಾಚಿರಾಜ ಕೌಂಡಿಣ್ಯಗೋತ್ರದ ಆಪಸ್ತಂಭ ಸೂತ್ರದ ಯಜುಶ್ಯಾಖೆಗೆ ಸೇರಿದವರು ಆದುದರಿಂದ ಇವನ ಮಕ್ಕಳೂ ಇದೇ ಗೋತ್ರ-ಸೂತ್ರಗಳನ್ನು ಹೊಂದಿದ್ದವರೆನ್ನಬಹುದು. ರಾಚಿರಾಜನು ಮಹಾಮಂಡಲೇಶ್ವರನಾಗಿದ್ದು ಕ್ರಿ.ಶ.೧೫೧೩ರಲ್ಲಿ ಕೃಷ್ಣದೇವರಾಯನಿಂದ ಆಂಧ್ರದ ಕಡಪಜಿಲ್ಲೆಯಲ್ಲಿರುವ ಪಟ್ಲದುರ್ತಿ ಸೀಮೆಯನ್ನು ನಾಯಕತನಕ್ಕೆ ಪಡೆದುಕೊಂಡಿರುವುದು ಶಾಸನದಲ್ಲಿ ದಾಖಲಾಗಿದೆ. ಇದರಿಂದ ಸಾಳುವ ತಿಮ್ಮರಸನು ಮಹಾಮಂಡಲೇಶ್ವರ ಯರ್ರಗದ್ದಮಯ್ಯದೇವ ಮಹಾರಾಜರ ಮೊಮ್ಮಗನಾಗಿದ್ದು ಚಿಕ್ಕವಯಸ್ಸಿನಿಂದಲೂ ಅವನಿಗೆ ರಾಜಕೀಯ ಸಂಪರ್ಕದ ಜೊತೆಗೆ ಉತ್ತಮ ಶಿಕ್ಷಣವೂ ಲಭಿಸಿತ್ತು ಎಂದು ಹೇಳಬಹುದು. ಆದ್ದರಿಂದಲೇ ಅವನು ತುಳುವ ಸಂತತಿಯ ಆರಂಭದ ಕಾಲದಲ್ಲೇ ವಿಜಯನಗರದಲ್ಲಿ ಮಹಾಪ್ರಧಾನಿಯ ಪಟ್ಟವನ್ನಲಂಕರಿಸಿದ್ದನು. ಆದರೂ ತಿಮ್ಮರಸನು ದಣ್ಣಾಯಕನಾಗಿ ಪ್ರಧಾನಿಯಾಗಿ ಆನಂತರ ಮಹಾಪ್ರಧಾನಿಯಾದನೆಂದು ಈ ಪದೋನ್ನತಿಯು ಎರಡು ವರ್ಷಗಳ ಅವಧಿಯಲ್ಲೇ ಜರುಗಿದೆ೧೦ ಎಂದು ಡಿ.ವಿ.ಪರಮಶಿವಮೂರ್ತಿಯವರು ಹೇಳಿರುವುದನ್ನು ಒಪ್ಪಲು ಸಾಧ್ಯವಾಗದು. ಏಕೆಂದರೆ ಶಾಸನಗಳು ತತ್ಪಾದ ಪದ್ಮಾರಾಧಕುಂದೈನ ಶ್ರೀಮನ್ ಮಹಾಪ್ರಧಾನ ಸಾಳುವ ತಿಮ್ಮಯ್ಯಗಾರು (ಕ್ರಿ.ಶ.೧೫೦೮ ಜನವರಿ ೧೭) ಎಂದು ದಾಖಲಿಸಿರುವುದರಿಂದ೧೧ ಕ್ರಿ.ಶ.೧೫೧೨ರ ಮಾರ್ಚಿಯಲ್ಲಿ ಹಾಕಿಸಲಾದ ಶಾಸನದಲ್ಲಿ ತಿಮ್ಮಪ್ಪಯ್ಯನ ಪ್ರಧಾನಿಕೆಯಲ್ಲಿ,೧೨ ಅದೇ ವರ್ಷದ ಜೂನ್ ತಿಂಗಳಲ್ಲಿ ಹಾಕಿಸಲಾದ ಶಾಸನದಲ್ಲಿ ಸಾಳ್ವತಿಮ್ಮಯ್ಯ ದಂಣಾಯಕರು೧೩ ಎಂದಿದ್ದರೂ ಮಹಾಪ್ರಧಾನಿಯಾದವನಿಗೆ ಆಡಳಿತದ ಎಲ್ಲಾ ಜವಾಬ್ದಾರಿಯೂ ಇರುತ್ತಿದ್ದುದರಿಂದ ಅಲ್ಲದೆ ಕೆಲವು ಬಾರಿ ಸೇನೆಯ ನಾಯಕತ್ವವನ್ನು ವಹಿಸುತ್ತಿದ್ದುದರಿಂದ ಈ ವಿಶೇಷಣಗಳು ಶಾಸನದಲ್ಲಿ ಸೇರ್ಪಡೆಗೊಂಡಿರಬಹುದು ಎಂದು ಹೇಳಬಹುದು. ಒಟ್ಟಾರೆ ಹೇಳುವುದಾದರೆ ಇಲ್ಲಿಯವರೆಗೆ ದೊರಕಿರುವ ದಾಖಲೆಗಳ ಆಧಾರದ ಮೇಲೆ ಸಾಳ್ವ ತಿಮ್ಮರಸನು ಜನವರಿ ೧೫೦೮ರಲ್ಲೇ ತುಳುವ ಮನೆತನದ ವೀರನರಸಿಂಹರಾಯನ ಮಹಾಪ್ರಧಾನಿಯಾಗಿದ್ದನು ಎಂದು ಖಚಿತವಾಗಿ ಹೇಳಬಹುದು.
ಕೃಷ್ಣದೇವರಾಯನ ಸೋದರ ವೀರನರಸಿಂಹ ವಿಜಯನಗರದ ಚಕ್ರವರ್ತಿಯಾಗಿದ್ದಾಗ ಸಾಳುವ ತಿಮ್ಮರಸನು ಮಹಾಪ್ರಧಾನಿಯ ಹುದ್ದೆಯಲ್ಲಿದ್ದರೂ ಅವನಿಗೆ ಇಡೀ ಗುತ್ತಿ ರಾಜ್ಯದ ನಾಯಕತನವನ್ನು ಕ್ರಿ.ಶ.೧೫೦೮ರಲ್ಲಿ ನೀಡಿ ಗೌರವಿಸಿದ್ದನು.೧೪ ಆ ಸಂದರ್ಭದಲ್ಲಿ ಅವನು ಗುತ್ತಿರಾಜ್ಯ ಮತ್ತು ಪೆನ್ನಬಾಡಿ ಸೀಮೆಯಲ್ಲಿನ ವಿವಾಹ ಸುಂಕವನ್ನು ವೀರನರಸಿಂಹರಾಯರಿಗೆ ಪುಣ್ಯವಾಗಲಿ ಎಂದು ರದ್ದುಮಾಡಿದನು೧೫ ಅಲ್ಲದೆ ಕ್ರಿ.ಶ.೧೫೦೯ರ ಮೇನಲ್ಲಿ ನೆಲದಾಲಪಾಡು ಗ್ರಾಮವನ್ನು ತಾಡಪತ್ರಿಯ ರಾಮೇಶ್ವರದೇವರ ಪೂಜಾಕಾರ್ಯಗಳಿಗೆ, ಪ್ರಾಕಾರ, ಗೋಪುರ, ಭೋಗಮಂಟಪದ ನಿರ್ಮಾಣದ ಚಟುವಟಿಕೆಗೆ ವೀರನರಸಿಂಹನಿಗೆ ಪುಣ್ಯವಾಗಲಿ ಎಂದು ದಾನ ಬಿಟ್ಟಿದ್ದಾನೆ೧೬ ಪ್ರಾಯಶಃ ಈ ಗುತ್ತಿ ರಾಜ್ಯವನ್ನು ಸಾಳುವ ತಿಮ್ಮರಸನ ತಮ್ಮ ಸಾಳುವ ಗೋವಿಂದನಿಗೆ ಕೃಷ್ಣದೇವರಾಯನು ನಾಯಕತನಕ್ಕೆ (ಕ್ರಿ.ಶ.೧೫೧೪) ನೀಡುವವರೆಗೆ ಅದು ತಿಮ್ಮರಸನ ಅಧೀನದಲ್ಲಿಯೇ ಇದ್ದಿರಬೇಕು. ಹೀಗೆ ಒಟ್ಟು ೬ ವರ್ಷಗಳ ಕಾಲ ಅಂದರೆ ಕ್ರಿ.ಶ.೧೫೦೮ರಿಂದ ಕ್ರಿ.ಶ.೧೫೧೪ರವರೆಗೆ ಗುತ್ತಿರಾಜ್ಯವನ್ನು ನಾಯಕತನದಿಂದ ಸಾಳ್ವತಿಮ್ಮರಸನು ಆಳುತ್ತಿದ್ದನು.
ವೀರನರಸಿಂಹನ ಕಾಲದಿಂದಲೂ ಅರಮನೆಯ ಎಲ್ಲಾ ವ್ಯವಹಾರಗಳನ್ನು ಅರಿತಿದ್ದ ಸಾಳುವ ತಿಮ್ಮರಸು, ವೀರ ನರಸಿಂಹರಾಯನ ಮರಣದ ಕಾಲಕ್ಕೆ ವಿಜಯನಗರ ರಾಜ್ಯದ ಸುತ್ತಲಿನ ರಾಜ್ಯಗಳಲ್ಲಿ ಅಶಾಂತಿ ಹೆಚ್ಚುತ್ತಿದ್ದುದನ್ನು ಮನಗಂಡಿದ್ದನು. ಆ ವೇಳೆಗಾಗಲೇ ಬಹಮನಿ ರಾಜ್ಯ ಒಡೆದು ೫ ಭಾಗವಾಗಿತ್ತು. ಒರಿಸ್ಸಾದ ಗಜಪತಿ ವಿಜಯನಗರಕ್ಕೆ ಸೇರಿದ್ದ ಕೆಲಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದನು. ಆಂತರಿಕವಾಗಿಯೂ ಉಮ್ಮತ್ತೂರಿನ ಗಂಗರಾಜು, ಕಂಚಿಯ ಸಾಂಬುವರಾಯನ ದ್ವೇಷವನ್ನು ಎದುರಿಸಬೇಕಾಗಿತ್ತು. ಇಂತಹ ಸನ್ನಿವೇಶದಲ್ಲಿ ವೀರನರಸಿಂಹನ ಇಷ್ಟಕ್ಕೆ ವಿರುದ್ದವಾಗಿ ಅವನ ಚಿಕ್ಕ ಮಗುವನ್ನು ಸಿಂಹಾಸನಕ್ಕೆ ತರದೆ ಅವನ ಸೋದರ ಕೃಷ್ಣದೇವರಾಯನನ್ನು ಸಿಂಹಾಸನಕ್ಕೆ ತರುವಲ್ಲಿ ತಿಮ್ಮರಸನು ಯಶಸ್ವಿಯಾದನು. ಏಕೆಂದರೆ ಹಲವಾರು ವರ್ಷಗಳಿಂದಲೂ ವೀರ ನರಸಿಂಹನ ಕುಟುಂಬದೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಸಾಳ್ವ ತಿಮ್ಮರಸನಿಗೆ ಕೃಷ್ಣದೇವರಾಯನ ಮೇಲೆ ಅಪಾರ ಪ್ರೇಮವಿತ್ತು. ಡಾಮಿಂಗೋ ಪಯಸ್‌ನು ಇವನನ್ನು ಕುರಿತು ಕೃಷ್ಣದೇವರಾಯನಿಗೆ ಎಲ್ಲರಿಗಿಂತಲೂ ಪ್ರಿಯನಾದವನೆಂದರೆ ತಿಮ್ಮರಸು ಎಂಬ ಹಿರಿಯ ಅವನು ಇಡೀ ಮನೆಯನ್ನು ನಿಯಂತ್ರಿಸುತ್ತಾನೆ ಮತ್ತು ಮಹಾಪ್ರಭುಗಳು ಅವನೊಂದಿಗೆ ರಾಜನೊಂದಿಗೆ ನಡೆದುಕೊಂಡಂತೆಯೇ ನಡೆದುಕೊಳ್ಳುತ್ತಾರೆ೧೭ ಸಾಳ್ವತಿಮ್ಮ ಅರಮನೆ ಪ್ರವೇಶಿಸುವ ಪ್ರಧಾನ ವ್ಯಕ್ತಿಯಾಗಿದ್ದು ಎಲ್ಲದರ ಮೇಲ್ವಿಚಾರಣೆ ಮಾಡುತ್ತಾನೆ. ಏಕೆಂದರೆ ಅವನೇ ರಾಜನನ್ನು ಬೆಳೆಸಿ ರಾಜನನ್ನಾಗಿ ಮಾಡಿದವ ಮತ್ತು ರಾಜ ಅವನನ್ನು ತಂದೆಯಂತೆ ಕಾಣುತ್ತಾನೆ. ರಾಜ ಅವನನ್ನು ಯಾವಾಗ ಕರೆದರೂ ದೊರೆ ಸಾಲ್ಪಟಿನಿಕ (ಸಾಳ್ವತಿಮ್ಮ) ಎಂದು ಸಂಬೋಧಿಸುತ್ತಾನೆ೧೮ ಈ ದಾಖಲೆಗಳಿಂದ ಕೃಷ್ಣದೇವರಾಯನನ್ನು ಚಿಕ್ಕ ವಯಸ್ಸಿನಿಂದಲೂ ಪ್ರೀತಿಯಿಂದ ಬೆಳಸಿದವನು ಸಾಳ್ವತಿಮ್ಮರಸನೇ ಆಗಿದ್ದುದರಿಂದ ಚಕ್ರವರ್ತಿ ಅವನಿಗೆ ಹೆಚ್ಚು ಗೌರವವನ್ನು ನೀಡುತ್ತಿದ್ದನು. ಈ ಕೃತಜ್ಞತೆಗಾಗಿ ತಿಮ್ಮರಸನಿಗೆ ಕೃಷ್ಣದೇವರಾಯ ಕನಕಾಭಿಷೇಕ ಮಾಡಿ ಅದರ ಸ್ಮರಣೆಗೋಸ್ಕರ ತಾಮ್ರನಾಣ್ಯಗಳನ್ನು ಅಚ್ಚು ಹಾಕಿಸಿ ಅದರ ಒಂದು ಕಡೆ ತನ್ನ ಹಾಗೂ ಮತ್ತೊಂದು ಮುಖದಲ್ಲಿ ತಿಮ್ಮರಸುಗಾರು ಎಂಬ ಹೆಸರನ್ನು ಬರೆಸಿದನು. ಇದು ಪ್ರಧಾನಿ ಮತ್ತು ಚಕ್ರವರ್ತಿಯ ಹೆಸರು ಜೊತೆಗಿರುವುದು ಅಪೂರ್ವವಾಗಿದೆ. ಆದ್ದರಿಂದಲೋ ಏನೋ ಬಾಪಟ್ಟ ತಾಲ್ಲೂಕಿನ ಒಂದು ಶಾಸನವು ತಿಮ್ಮರಸು ಮತ್ತು ಕೃಷ್ಣದೇವರಾಯರು ಏಕಶರೀರದಂತಿದ್ದರು ಎಂದು ದಾಖಲಿಸಿದೆ.೧೯
ಕೃಷ್ಣದೇವರಾಯನು ವಿಜಯನಗರ ಚಕ್ರವರ್ತಿಯಾದ ನಂತರ ಸಾಳುವ ತಿಮ್ಮರಸು ಕ್ರಿ.ಶ.೧೫೧೦ ಅಕ್ಟೋಬರ್‌ನಲ್ಲಿ ಕೊಂಡವೀಡು ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದನೆಂದು ಹೇಳಲಾಗಿದೆ.೨೦ ಆಗ ಅವನು ಅಬ್ಬಾನಾಯಕ ಎಂಬುವನನ್ನು ತನಗೆ ಸೇರಿದ ರಾಜ್ಯದ ಅಮ್ಮನಬ್ರೋಲು ಸೀಮೆಯ ಕೊಚ್ಲೆರಕೋಟೆ ಕಟ್ಟಕದ ನಾಯಕನನ್ನಾಗಿ ಮಾಡಿದನು. ಆದ್ದರಿಂದ ಅಬ್ಬಾನಾಯಕನು ಗೋಣಗುಂಟ ಅಮರೇಶ್ವರದೇವರಿಗೆ ತಿಮ್ಮರಸುವಿಗೆ ಪುಣ್ಯವಾಗಲಿ ಎಂದು ಗೋಣಗುಂಟ ಗ್ರಾಮದಲ್ಲಿ ಭೂದಾನ ಮಾಡಿದ್ದನ್ನು ಅದೇ ಶಾಸನವು ತಿಳಿಸುತ್ತದೆ. ಆದರೆ ಈ ಶಾಸನದಲ್ಲಿ ತಿಮ್ಮರಸುವನ್ನು ಪ್ರಧಾನಿ ಎಂದು ಹೇಳಿರದಿದ್ದರೂ ಅದೇ ವರ್ಷದ ಅದೇ ತಿಂಗಳಿನ ಶಾಸನವು ಅವನನ್ನು ಪ್ರಧಾನಿ ಎಂದು ಹೇಳುತ್ತದೆ.೨೧ ಇದರಿಂದ ಸಾಳುವ ತಿಮ್ಮರಸನು ಕೃಷ್ಣದೇವರಾಯನ ಆಳ್ವಿಕೆಯ ಆರಂಭದಲ್ಲೇ (ವೀರನರಸಿಂಹನ ಕಾಲದಿಂದಲೂ ಪ್ರಧಾನಿಯಾಗಿದ್ದನು) ಪ್ರಧಾನಿ ಹುದ್ದೆಯಲ್ಲಿಯೇ ಮುಂದುವರಿದನೆಂದು ಖಚಿತಪಡಿಸಬಹುದು.
ಕೃಷ್ಣದೇವರಾಯನನ್ನು ಸಿಂಹಾಸನಕ್ಕೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ ಸಾಳ್ವತಿಮ್ಮರಸನು ತುಂಬಾ ಅನುಭವಿ. ಇವನನ್ನು ಶಾಸನವು ಉದಯಗಿರಿ ಕಂನಡಿಗ ಕುಲತಿಲಕಂ ವಿಪ್ರಾಗ್ರಗಣ್ಯಂ ಸತ್ಕುಲ ಪ್ರಸೂತಂ ಶಿವಪೂಜಾ ಧುರಂಧರ ಸರ್ವಗುಣ ಸಂಪನ್ನ೨೨ ಎಂದು ಹೊಗಳಿದೆ. ಆದ್ದರಿಂದ ಇವನು ಸ್ಮಾರ್ತಬ್ರಾಹ್ಮಣನಾಗಿದ್ದು ಉದಯಗಿರಿ ಕನ್ನಡಿಗರಿಗೆ ತಿಲಕಪ್ರಾಯನಾಗಿದ್ದನು ಎಂದು ಅಭಿಪ್ರಾಯ ಪಡಬಹುದು. ಇಂಥಹ ವ್ಯಕ್ತಿ ಕೃಷ್ಣದೇವರಾಯನಿಗೆ ದಕ್ಷಿಣ ಭಾರತದಾದ್ಯಂತ ಸಾಮ್ರಾಜ್ಯ ವಿಸ್ತರಿಸಲು ನೆರವಾಗಿದ್ದನು. ಒರಿಸ್ಸಾ ದಂಡಯಾತ್ರೆಯಲ್ಲಿ ಕೃಷ್ಣದೇವರಾಯನು
ಸೈನ್ಯವನ್ನು ಎರಡು ಭಾಗ ಮಾಡಿ ಒಂದರ ನೇತೃತ್ವವನ್ನು ಸಾಳ್ವತಿಮ್ಮರಸನೇ ವಹಿಸಿಕೊಂಡಿದ್ದನು. ಇವನು ಕಂದಕೂರು, ವಿನುಕೊಂಡ, ನಾಗಾರ್ಜುನಕೊಂಡ, ಕೊಂಡವೀಡು ಮೊದಲಾದ ಕೋಟೆಗಳನ್ನು ಜಯಿಸಿ ರಾಯನೊಂದಿಗೆ ಕೊಂಡವೀಡು ಬಳಿ ಸೇರಿಕೊಂಡನು. ಈ ಕೃತಜ್ಞತೆಗೋ ಏನೋ ಕ್ರಿ.ಶ.೧೫೧೪ರಲ್ಲಿ ಸಾಳ್ವತಿಮ್ಮರಸನ ಮಗನಾದ ರಾಯಸ್ತ ಕೊಂಡಮರಸಯ್ಯನಿಗೆ ಉದಯಗಿರಿ ದುರ್ಗದ ದುರ್ಗಾಧಿಪತಿಯನ್ನಾಗಿ ಮಾಡಿದನೆಂದು ತೋರುತ್ತದೆ. ೨೩
ಸಾಳುವ ತಿಮ್ಮರಸರು ನೀಡಿರುವ ಶಾಸನೋಕ್ತ ದತ್ತಿಗಳು
ತಿಮ್ಮರಸರು ವೀರನರಸಿಂಹರ ಮಹಾಪ್ರಧಾನಿಯಾಗಿದ್ದಾಗಲೇ ಚಕ್ರವರ್ತಿಗಳ ಮನ ಒಲಿಸಿ ಅನೇಕ ಸಾರ್ವಜನಿಕ ಕೆಲಸಗಳನ್ನು ಕೂಡಾ ಮಾಡಿದ್ದಾರೆ.
೧. ಕ್ರಿ.ಶ.೧೫೦೮ರಲ್ಲಿ ತಮ್ಮ ನಾಯಕತನಕ್ಕೆ ಸೇರಿದ್ದ ಗುತ್ತಿರಾಜ್ಯದ ಪೆನ್ನಾಡಿ ಸೀಮೆಯ ವಿವಾಹ ಸುಂಕವನ್ನು ರದ್ದುಮಾಡಿ ವೀರನರಸಿಂಹರಾಯರಿಗೆ ಪುಣ್ಯವಾಗಲಿ ಎಂದು ಶಾಸನ ಹಾಕಿಸಿದ್ದಾರೆ (Iಟಿsಛಿಡಿiಠಿಣioಟಿ oಜಿ ಗಿiರಿಚಿಥಿಚಿಟಿಚಿgಚಿಡಿಚಿ ಡಿueಡಿs, voಟ. Iಗಿ ಓo - ೭೦, I.ಅ.ಊ.ಖ. ಃಚಿಟಿgಚಿಟoಡಿe - ೨೦೦೯).
೨. ಕ್ರಿ.ಶ.೧೫೦೯ರಲ್ಲಿ ಗುತ್ತಿರಾಜ್ಯದ ಪೆನ್ನಬಾಡಿ ಸೀಮೆಯ ನೆಲದಾಲಪಾಡು ಗ್ರಾಮವನ್ನು ವೀರನರಸಿಂಹ ರಾಯರಿಗೆ ಪುಣ್ಯವಾಗಲಿ ಎಂದು ತಾಡಪತ್ರಿಯ ರಾಮೇಶ್ವರದೇವರ ಪೂಜಾಕಾರ್ಯ ಮತ್ತು ಪ್ರಾಕಾರ, ಗೋಪುರ, ಭೋಗಮಂಟಪದ ನಿರ್ಮಾಣ ಚಟುವಟಿಕೆಗೆ ಸರ್ವಮಾನ್ಯವಾಗಿ ನೀಡಿದ್ದಾನೆ (I.ಗಿ.ಖ. ಗಿoಟ - Iಗಿ ಓo. ೭೨).
೩. ಕ್ರಿ.ಶ.೧೫೧೨ರಲ್ಲಿ ಪೊತ್ತಪ್ಪಿ ನಾಡಿನ ಪರಾಂತಲೂರ್ ಗ್ರಾಮವನ್ನು ತಿರುಪತಿಯ ವೆಂಕಟೇಶ್ವರನಿಗೆ ದತ್ತಿಯಾಗಿ ನೀಡಿದನು. ಮತ್ತು ದೇವರ ನೈವೇದ್ಯಕ್ಕಾಗಿ ಆ ಗ್ರಾಮದ ಆದಾಯವನ್ನು ಸಂಗ್ರಹಿಸಲು ಸ್ಥಾನಿಕರಿಗೆ ಅಧಿಕಾರ ನೀಡಿದೆ. ಅಲ್ಲದೆ ಅಗತ್ಯವಾದ ವಸ್ತುಗಳನ್ನು ಪೂರೈಸಲು ಶ್ರೀಭಂಡಾರದಲ್ಲಿ ಪಡೆದುಕೊಳ್ಳಬೇಕೆಂದು ಆದೇಶಿಸಲಾಗಿದೆ (ಗಿiರಿಚಿಥಿಚಿಟಿಚಿgಚಿಡಿ ಚಿಟಿಜ ಏಡಿishಚಿಟಿಜevಚಿಡಿಚಿಥಿಚಿ - ಠಿಚಿge ೬೪, Iಅಊಖ ಃoಡಿe ೨೦೧೦).
೪. ಕ್ರಿ.ಶ.೧೫೧೪ರಲ್ಲಿ ತಲಕಾಡಿನ ಕೀರ್ತಿನಾರಾಯಣ ದೇವರಿಗೆ ಥಾಯೂರು ಸ್ಥಳದ ಕಾವಾಹಳ್ಳಿ ಒಳಗಣ ಆದಾಯದ ಬಾಬ್ತು ೧೩೨ ಗದ್ಯಾಣವನ್ನು ದತ್ತಿ ಬಿಟ್ಟಿದ್ದಾನೆ. (ಕೃಷ್ಣದೇವರಾಯನ ಶಾಸನಗಳು, ಸಂಪುಟ ೧. ನಂ. ೫೨).
೫. ಕ್ರಿ.ಶ.೧೫೧೭ರಲ್ಲಿ ಮುಲಕಿನಾಡು ಸೀಮೆಯ ಕಡಪ ಗ್ರಾಮದ ತಿರುವೆಂಗಳನಾಥ ದೇವರ ನಿತ್ಯಪೂಜಾ ಕಾರ್ಯಗಳಿಗೆ ೨ ಖಂಡುಗ ಭೂಮಿಯನ್ನು ೩ ಸ್ಥಳಗಳಲ್ಲಿ ದಾನ ನೀಡಿದ್ದಾನೆ (I.ಗಿ.ಖ. voಟ - Iಗಿ ಓo - ೧೦೮)
೬. ಕ್ರಿ.ಶ.೧೫೧೭ರಲ್ಲಿ ತನ್ನ ಕುಟುಂಬ ವರ್ಗದವರಿಗೆಲ್ಲಾ ಪುಣ್ಯವಾಗಲಿ ಎಂದು ಚೆಜಾರ್ಲಗ್ರಾಮದ ಕಪತೇಶ್ವರ ದೇವಾಲಯಕ್ಕೆ ಪೆದ್ದಪಾಡು ಎಂಬ ಗ್ರಾಮದ ಆದಾಯದಲ್ಲಿ ೧೨ ವರಹವನ್ನು ದತ್ತಿಯಾಗಿ ನೀಡಿದ್ದಾನೆ. (I.ಗಿ.ಖ. voಟ - Iಗಿ ಓo - ೧೦೭).
೭. ಕ್ರಿ.ಶ.೧೫೧೮ರಲ್ಲಿ ಕಟ್ಟಮಲ್ಲಯ್ಯನ ಮೂಲಕ ಮದನೂರು ಗ್ರಾಮದ ರಾಮೇಶ್ವರದೇವರ ಗುಡಿಯ ಶಿಖರ ಗರ್ಭಗೃಹ ಮತ್ತು ಅರ್ಧಮಂಟಪ ಶಿಥಿಲವಾದುದರಿಂದ ಅದನ್ನು ಜೀರ್ಣೋದ್ದಾರ ಮಾಡಿಸಿ, ಹೊಸದಾಗಿ ಭೋಗಮಂಟಪ ಪರಿವಾರದೇವತೆಗೆ ಪ್ರಕಾರ ಕಟ್ಟಿಸಿ, ದೇವರ ಪೂಜಾಕಾರ್ಯಗಳಿಗೆ ಇಡೀ ಮದನೂರು ಗ್ರಾಮವನ್ನು ಕೃಷ್ಣದೇವರಾಯನಿಗೆ ಪುಣ್ಯವಾಗಲಿ ಎಂದು ದತ್ತಿ ಬಿಟ್ಟಿದ್ದಾನೆ. (I.ಗಿ.ಖ. voಟ - Iಗಿ ಓo - ೧೧೨)
ಸಾಳ್ವ ತಿಮ್ಮರಸ ತನ್ನ ಒಡೆಯನಾದ ಚಕ್ರವರ್ತಿ ಕೃಷ್ಣದೇವರಾಯನಿಗೆ ಪುಣ್ಯವಾಗಲಿ ಎಂದು ದೇವಾಲಯಗಳಿಗೆ ದಾನ ದತ್ತಿಗಳನ್ನೂ ನೀಡಿದ್ದರೂ, ಅದೇ ರೀತಿ ಸಾಳ್ವತಿಮ್ಮರಸನ ಅಧೀನದಲ್ಲಿನ ಅಧಿಕಾರಿ ವರ್ಗದವರೂ ಕೂಡಾ ಅವನ ಹೆಸರಿನಲ್ಲಿ ಪುಣ್ಯವಾಗಲೆಂದು ನೀಡಿದ್ದಾರೆ.
ಉದಾ: (೧) ಸಾಳ್ವತಿಮ್ಮರಸು ಮತ್ತು ಆತನ ಪತ್ನಿಗೆ ಪುಣ್ಯವಾಗಲಿ ಎಂದು ದಳವಾಯಿ ಆಹೋಬಲಯ್ಯನ ಕಾರ‍್ಯಕೆಕರ್ತನಾದ ವಾವಿಲಪತಿದೇವರಾಜು ನಾಗಯ್ಯನು ಪೆನುಗೊಂಡೆ ಮಾರ್ಜ್ವಾಡ ಸೀಮೆಯಲ್ಲಿನ ವಾವಿಲಪಾಡು ಎಂಬ ಗ್ರಾಮದ ಶಿವ ದೇವಾಲಯಕ್ಕೆ ಭೂದತ್ತಿಯನ್ನು ಅದೇ ಗ್ರಾಮದಲ್ಲಿ ನೀಡಿದ್ದಾನೆ.೨೪
(೨) ತಿಮ್ಮರಸನಿಗೆ ಪುಣ್ಯವಾಗಲಿ ಎಂದು ತಿರುವೆಂಗಳನಾಥನ ತಿರುನಾಳ ದಿನಗಳಲ್ಲಿ ತಿರುಮಲಕ್ಕೆ ಹೋಗಿ ಬರುವ ಸತಾನಿ ವೈಷ್ಣವ ಮತ್ತು ಬ್ರಾಹ್ಮಣ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿ ಎಂದು ಚಿದ್ದಿರಪಾಲ ಎಂಬ ಗ್ರಾಮದಲ್ಲಿ ಧರ್ಮಛತ್ರವನ್ನು ಗುರುಜಪಳ್ಳಿ ಚನ್ನಯ್ಯ ಎಂಬುವನು ನಿರ್ಮಿಸಿದನು.೨೫
ಸಾಳ್ವ ತಿಮ್ಮರಸನು ಉದಯಗಿರಿ ದುರ್ಗದ ನಿರ್ವಹಣೆಯೇ ಅಲ್ಲದೆ ಕೊಂಡವೀಡು ದುರ್ಗಾಧಿಪತಿಯಾಗಿಯೂ ಕೃಷ್ಣದೇವರಾಯನು ಅವನನ್ನು ನೇಮಕ ಮಾಡಿದ್ದನೆಂದು ಹೇಳಲಾಗಿದೆ. ಈ ಕೊಂಡವೀಡು ಪ್ರದೇಶವನ್ನು ಕೃಷ್ಣದೇವರಾಯನು ತನ್ನ ಪೂರ್ವದ ದಂಡಯಾತ್ರೆಯ ಸಮಯದಲ್ಲಿ ಗೆದ್ದುಕೊಳ್ಳಲು ಸಾಳುವ ತಿಮ್ಮನ ಯೋಜನೆಗಳು ಕಾರಣವಾಗಿದ್ದವು. ಆದ್ದರಿಂದ ಈ ಹೊಸ ಪ್ರದೇಶವನ್ನು ಕೃಷ್ಣದೇವರಾಯ ಕೊಂಡವೀಡು ರಾಜ್ಯ ಎಂದು ಸೃಷ್ಟಿಸಿ, ಅದಕ್ಕೆ ಕೊಂಡವೀಡು ಸ್ಥಳವನ್ನು ಪ್ರಧಾನಕೇಂದ್ರವನ್ನಾಗಿ ಮಾಡಿದನು. ಅದರ ಆಡಳಿತದ ನಿರ್ವಹಣೆಯನ್ನು ಅನುಭವಿ ಸಾಳುವ ತಿಮ್ಮರಸನಿಗೆ ನೀಡಿದನು.೨೬
ಕ್ರಿ.ಶ.೧೫೧೦ರಲ್ಲೇ ಕೊಂಡವೀಡನ್ನು ಸಾಳುವ ತಿಮ್ಮರಸನು ಆಳ್ವಿಕೆ ಮಾಡುತ್ತಿದ್ದಾನೆಂಬ ಸೂಚನೆ ಶಾಸನದಲ್ಲಿ ಇರುವುದರಿಂದ೨೭ ಅಲ್ಲಿಂದ ತನ್ನ ಮಗನಾದ ರಾಯಸ್ತ ಕೊಂಡಮರಸಯ್ಯನಿಗೆ ಕೊಡುವವರೆಗೆ ಸಾಳ್ವತಿಮ್ಮರಸನೇ ಆಡಳಿತ ನಡೆಸುತ್ತಿದ್ದನು. ಕ್ರಿ.ಶ.೧೫೧೬ ಫೆಬ್ರವರಿ ತಿಂಗಳ ಶಾಸನದಲ್ಲಿ ಕೊಂಡಪಲ್ಲಿ, ಕೊಂಡವೀಡು ರಾಜ್ಯಗಳ ಅಧಿಪತಿಯಾಗಿ ರಾಯಸ್ತ ಕೊಂಡಮರಸಯ್ಯನು ಆಳ್ವಿಕೆ ಮಾಡುತ್ತಿದ್ದನೆಂಬ೨೮ ವಿಚಾರ ಶಾಸನದಲ್ಲಿ ಇರುವುದರಿಂದ ೧೫೧೬ರ ವೇಳೆಗೆ ತಿಮ್ಮರಸನು ತನ್ನ ಮಗನನ್ನು ಕೊಂಡವೀಡು ದುರ್ಗದ ಅಧಿಪತಿಯಾಗಿ ಮಾಡಿದ್ದನೆಂದು ಹೇಳಬಹುದು. ಕ್ರಿ.ಶ.೧೫೨೦ರ ಮೇ ತಿಂಗಳ ಶಾಸನದಲ್ಲಿ ಸಾಳ್ವತಿಮ್ಮರಸನ ಕಿರಿಯ ಅಳಿಯ ಕೊಂಡವೀಡನ್ನು ಆಳ್ವಿಕೆ ಮಾಡುತ್ತಿದ್ದನೆಂಬ೨೯ ಉಲ್ಲೇಖ ಇರುವುದರಿಂದ ಆ ವೇಳೆಗೆ ಕೊಂಡವೀಡು ತನ್ನ ಮಗನಿಂದ ಬಿಡಿಸಿಕೊಂಡು ಅದನ್ನು ತನ್ನ ಅಳಿಯನಿಗೆ ನೀಡಿದ್ದನೆಂದು ಹೇಳಬಹುದು. ನಂತರ ಕೊಂಡಮರಸಯ್ಯನನ್ನು ಉದಯಗಿರಿ ದುರ್ಗಕ್ಕೆ ಕ್ರಿ.ಶ.೧೫೨೦ ಮೇನಲ್ಲಿ೩೦ ಬದಲಾಯಿಸಿದರು. ಕೊಂಡಮರಸಯ್ಯನಿಗೆ ಪುಣ್ಯಲೋಕ ಪ್ರಾಪ್ತಿಯಾಗಲೆಂದು ಅವನ ಮಗ ರಾಯಸ್ತ ಅಯ್ಯಪ್ಪರಸ ಕುಂದುರ್ಪೆರಾಜ್ಯದ ಜಾಲುವಟ್ಟಿ ಗ್ರಾಮವನ್ನು ಕಂಭದೂತ ಮಲ್ಲಿಕಾರ್ಜುನ ದೇವರಿಗೆ ದತ್ತಿ ಬಿಟ್ಟನು ಎಂಬ ಶಾಸನದ ೩೧ ಆಧಾರದ ಮೇಲೆ ೧೫೨೫ರ ವೇಳೆಗೆ ರಾಯಸ್ತ ಕೊಂಡಮರಸಯ್ಯನು ಮರಣ ಹೊಂದಿದನೆಂಬ ಅಂಶ ಸ್ವಷ್ಟವಾಗುತ್ತದೆ. ನಂತರ ಉದಯಗಿರಿಯು ಅವನ ಮಗ ರಾಯಸಂ ಅಯ್ಯಪ್ಪರಸನ ಅಧೀನದಲ್ಲಿತ್ತೆಂದು ಕ್ರಿ.ಶ.೧೫೨೭ ಆಗಸ್ಟ್‌ನಲ್ಲಿ ಹಾಕಿಸಲಾದ ಶಾಸನದಲ್ಲಿ ಉಲ್ಲೇಖವಾಗಿದೆ೩೨.
ಸಾಳುವ ತಿಮ್ಮರಸನಿಗೆ ಸಾಳ್ವ ಗೋವಿಂದರಾಜು ಎಂಬ ತಮ್ಮನಿದ್ದನು. ಇವನು ಕ್ರಿ.ಶ.೧೫೧೩ರಲ್ಲಿ ತೆರಕಣಾಂಬಿ ಸೀಮೆಯನ್ನು ಆಳುತ್ತಿದ್ದ೩೩. ಅವನ ಅಣ್ಣ ಸಾಳುವ ತಿಮ್ಮರಸ ಗುತ್ತಿ ಸೀಮೆಯಿಂದ ಕೊಂಡವೀಡು ರಾಜ್ಯಕ್ಕೆ ಬದಲಾದಾಗ ಕ್ರಿ.ಶ.೧೫೧೪ರಲ್ಲಿ ಗುತ್ತಿ ಸೀಮೆಯನ್ನು ನಾಯಕತನದಿಂದ ಆಳುತ್ತಿದ್ದನು.೩೪ ಇದರ ಜೊತೆಗೆ ಕ್ರಿ.ಶ.೧೫೧೬ರ ವೇಳೆಗೆ ಉಮ್ಮತ್ತೂರು ರಾಜ್ಯವನ್ನು ಆಡಳಿತ ಮಾಡುತ್ತಿದ್ದುದು೩೫ ಹೀಗೆ ಸಾಳುವ ಗೋವಿಂದರಾಜು ಆಂಧ್ರದ ಗುತ್ತಿ ಕರ್ನಾಟಕದ ತೆರಕಣಾಂಬಿ ಮತ್ತು ಉಮ್ಮತ್ತೂರು ರಾಜ್ಯಗಳ ಆಡಳಿತ ಮಾಡುತ್ತಿದ್ದುದು ಸ್ಪಷ್ಟವಾಗುತ್ತದೆ. ತೆರಕಣಾಂಬಿ ಮತ್ತು ಉಮ್ಮತ್ತೂರು ರಾಜ್ಯಗಳು ಕಾವೇರಿ ನದಿಯ ಮುಖ್ಯ ಭೂಮಿಯಲ್ಲಿದ್ದು ಫಲವತ್ತಾದ ಪ್ರದೇಶಗಳಾಗಿದ್ದವು. ಗುತ್ತಿಯು ಗಣಿಗಾರಿಕೆಯಳ್ಳ ಪ್ರದೇಶವಾಗಿತ್ತು. ಈ ಪ್ರದೇಶಗಳು ಅಧಿಕ ಆದಾಯ ತರುವ ಆಯಕಟ್ಟಿನ ಪ್ರದೇಶಗಳಾಗಿದ್ದವು. ಇಂಥಹ ಸ್ಥಳಗಳನ್ನು ಪ್ರಭಾವಶಾಲಿಯಾಗಿದ್ದ ಇವರು ಕೃಷ್ಣದೇವರಾಯನ ಕಾಲದಲ್ಲಿ ಅವುಗಳನ್ನು ಯಾರಿಗೂ ಬಿಟ್ಟುಕೊಡದೆ ತಮ್ಮ ಅಧೀನದಲ್ಲಿರಿಸಿಕೊಂಡಿದ್ದುದು ಸ್ಪಷ್ಟವಾಗುತ್ತದೆ.
ಸಾಳುವ ಗೋವಿಂದರಾಜನ ಅಣ್ಣ ಸಾಳುವ ತಿಮ್ಮರಸು ಮಹಾಪ್ರಧಾನಿಯಾಗಿದ್ದರೂ ಮೊದಲು ಗುತ್ತಿ ಉದಯಗಿರಿ ಕೊಂಡವೀಡು ಮುಲುಕಿನಾಡು ಸೀಮೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದನು. ಕಾರ್ಯಭಾರದ ಒತ್ತಡದಿಂದಲೋ ಅಥವಾ ಬೇರಿನ್ನಾವ ಕಾರಣದಿಂದಲೋ ಏನೋ ಗುತ್ತಿಗೆ ತನ್ನ ಸೋದರ ಗೋವಿಂದರಾಜನನ್ನು ನೇಮಿಸಿದನು. ಉದಯಗಿರಿಗೆ ತನ್ನ ಮಗ ಕೊಂಡಮರಸನನ್ನು ನೇಮಕ ಮಾಡಿ ಕೊಂಡವೀಡನ್ನು ತನ್ನ ಅಳಿಯನಾದ ನಾದೆಂಡ್ಲಗೋಪನಿಗೆ ನೀಡಿದನು. ಹೀಗೆ ಈ ರಾಜ್ಯಗಳನ್ನು ತನ್ನ ಕುಟುಂಬದವರಿಗೆ ಹಂಚಿಕೆ ಮಾಡಿದ್ದಲ್ಲದೆ ತನ್ನ ಮಗನಿಗೆ ಹೆಚ್ಚುವರಿಯಾಗಿ ಪದ್ದಿಲಸೀಮೆ, ಕೊಂಡಪಲ್ಲಿಯನ್ನು ಕೊಡಿಸಿದನು. ತನ್ನ ಮೊಮ್ಮಗನಾದ ರಾಯಸದ ಅಯ್ಯಪ್ಪರಸುವಿಗೆ ಗಂಡಿಕೋಟೆ ಅಡ್ಡಂಕಿ ಸೀಮೆಯನ್ನು ಕೊಡಿಸಿದನು. ರಾಯಸದ ಕೊಂಡಮರಸ ೧೫೨೫ರಲ್ಲಿ ಮರಣ ಹೊಂದಿದ ಮೇಲೆ ಮೊದಲ ದುರ್ಗವಾದ ಉದಯಗಿರಿಯನ್ನು ರಾಯಸದ ಅಯ್ಯಪ್ಪರಸು ಪಡೆದುಕೊಂಡನು. ಒಟ್ಟಾರೆ ಹೇಳುವುದಾದರೆ ವಿಜಯನಗರದ ಇಡೀ ಆಂಧ್ರಪ್ರದೇಶದ ಬಹುಪಾಲು ಭಾಗಗಳು ಸಾಳ್ವತಿಮ್ಮನ ಕುಟುಂಬದ ಅಧೀನದಲ್ಲಿದುದು ಸ್ಪಷ್ಟವಾಗುತ್ತದೆ. ಈ ಭಾಗಗಳಿಗೆ ಬೇರೆಯವರನ್ನು ನೇಮಕ ಮಾಡದೆ ಇರಲು ಏನಾದರೂ ಕಾರಣವಿತ್ತೇ ಎಂಬುದನ್ನು ವಿಶ್ಲೇಷಿಸಿದಾಗ ಕೆಲವು ಅಂಶಗಳನ್ನು ಊಹಿಸಬಹುದು.
ಮೊದಲನೆಯದಾಗಿ ಈ ಕುಟುಂಬ ವಿಜಯನಗರಕ್ಕೆ ಅತ್ಯಂತ ನಿಷ್ಠೆಯಿಂದಿದ್ದು ಮತ್ತು ಸಾಳ್ವತಿಮ್ಮರಸು ಕೃಷ್ಣದೇವರಾಯನನ್ನು ಪಟ್ಟಕ್ಕೆ ತರಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದುದು, ಚಕ್ರವರ್ತಿ ಸಾಳ್ವತಿಮ್ಮನ ಮತ್ತು ಅವನ ಕುಟುಂಬದ ಬಗೆಗೆ ಅಪಾರ ವಿಶ್ವಾಸವಿಡಲು ಕಾರಣವಾಗಿದೆ. ಎರಡನೆಯದಾಗಿ ಇವರ ಅಧೀನದಲ್ಲಿದ್ದ ಪ್ರದೇಶಗಳಾದ ಉದಯಗಿರಿ, ಕೊಂಡವೀಡು, ಗಂಡಿಕೋಟೆ ಮತ್ತು ಗುತ್ತಿ ಪ್ರಮುಖ ಪಟ್ಟಣಗಳಾಗಿದ್ದವು. ಇವು ಕೋರಮಂಡಲ ಮತ್ತು ಆಂಧ್ರ ಕರಾವಳಿತೀರವನ್ನು ವಿಜಯನಗರಕ್ಕೆ ಸಂಪರ್ಕಿಸುವ ಪ್ರಮುಖ ವ್ಯಾಪಾರಿ ಹೆದ್ದಾರಿಯಾಗಿದ್ದವು. (ಕೊಂಡವೀಡು ಮುಖಾಂತರ ಒಂದು ಮಾರ್ಗವಾದರೆ ಪೆನುಗೊಂಡೆ ಮೂಲಕ ಮತ್ತೊಂದು ಮಾರ್ಗವಾಗಿತ್ತು.) ಅಲ್ಲದೆ ಗುತ್ತಿಯಲ್ಲಿನ ವಜ್ರದ ಗಣಿಗಳಿಂದ ಅಧಿಕ ಆದಾಯ ಲಭ್ಯವಾಗುತ್ತಿತ್ತು. ಈ ಆದಾಯವೇ ಈ ಪ್ರದೇಶಗಳನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ಪ್ರೇರಣೆ ನೀಡಿರಬಹುದೇ?
ಮೂರನೆಯದಾಗಿ ಒರಿಸ್ಸಾದ ಗಜಪತಿಯ ದಾಳಿಯನ್ನು ತಡೆಗಟ್ಟಲು ಚಕ್ರವರ್ತಿಗೆ ನಿಷ್ಠೆಯಿಂದ ಇದ್ದವರು ಬೇಕಾಗಿತ್ತು. ಆದ್ದರಿಂದಲೋ ಏನೋ ಕೃಷ್ಣದೇವರಾಯ ಮರುಮಾತಿಲ್ಲದೆ ಸಾಳ್ವತಿಮ್ಮರಸನ ಕುಟುಂಬ ವರ್ಗದವರ ಮೇಲೆ ಅಪಾರ ವಿಶ್ವಾಸವಿದ್ದುದರಿಂದ ಆ ಪ್ರದೇಶಗಳನ್ನು ನೀಡಿರಬಹುದೇ?
ಒಟ್ಟಾರೆ ಯಾವುದೇ ಕಾರಣಗಳಿದ್ದರೂ ಇಷ್ಟೊಂದು ಸುದೀರ್ಘ ಅವಧಿಗೆ ಸಾಮ್ರಾಜ್ಯದ ಬಹುಪಾಲು ಭಾಗದಲ್ಲಿ ಸಾಳ್ವತಿಮ್ಮರಸನ ಕುಟುಂಬ ವರ್ಗದವರ ಅಧಿಕಾರವಿದ್ದುದು ಸ್ಪಷ್ಟವಾಗುವುದಲ್ಲದೆ. ರಾಜ್ಯದಲ್ಲಿ ಅವರೆಷ್ಟು ಪ್ರಭಾವಶಾಲಿಗಳು ಎಂಬುದನ್ನು ತೋರಿಸುತ್ತದೆ. ಸಾಳ್ವತಿಮ್ಮರಸುವಿನ ತಂದೆ ರಾಚಿರಾಜ ಕುಟುಂಬದ ಹಿರಿಯ ಅವನು ಮಹಾಮಂಡಲೇಶ್ವರನಾಗಿದ್ದು ಪಟ್ಟದುರ್ತಿಸೀಮೆಯನ್ನು ಆಡಳಿತ ಮಾಡುತ್ತಿದ್ದನು. ಸ್ವತಃ ತಾನು ಸಾಮ್ರಾಜ್ಯದ ಮಹಾಪ್ರಧಾನಿಯ ಹುದ್ದೆಯಲ್ಲಿದ್ದು ತಮ್ಮನಾದ ಸಾಳ್ವ ಗೋವಿಂದರಾಜನನ್ನೂ ಕ್ರಿ.ಶ.೧೫೧೯ರ ವೇಳೆಗೆ ಮಹಾಪ್ರಧಾನಿಯ೩೬ ಮಟ್ಟಕ್ಕೆ ತಂದನು. ಅಲ್ಲದೆ ಅವನು ೧೫೨೯ರಲ್ಲಿ ಬಾಗಿಲ ಪ್ರಧಾನಿಯ ಹುದ್ದೆಯಲ್ಲಿದ್ದನು.೩೭ ಸಾಳ್ವ ತಿಮ್ಮರಸನ ಮಗ ಕೊಂಡಮರಸಯ್ಯ ಮತ್ತು ನಾರಾಣಪ್ಪ ಹಾಗೂ ಮೊಮ್ಮಗ ಅಯ್ಯಪ್ಪರಸ ರಾಯಸ ಕಛೇರಿಯ ಹಿರಿಯ ಅಧಿಕಾರಿಗಳು. ಇವನ ಅಳಿಯ ನಾದೆಂಡ್ಲೆಗೋಪ ಕೊಂಡವೀಡು ದುರ್ಗಾಧಿಪತಿ. ಹೀಗೆ ಇವನ ಕುಟುಂಬದವರು ರಾಜ್ಯದ ಆಯಕಟ್ಟಿನ ಹುದ್ದೆಗಳಲ್ಲಿದ್ದು ಇಡೀ ರಾಜ್ಯದ ಆಡಳಿತವನ್ನು ನಿಯಂತ್ರಿಸುತ್ತಿದ್ದುದು ಸ್ಪಷ್ಟವಾಗುತ್ತದೆ. ಇದು ಅನೇಕರ ಅಸೂಯೆಗೆ ಕಾರಣವಾಯಿತೆಂದು ತೋರುತ್ತದೆ. ಅದಕ್ಕಾಗಿ ಅವರು ಸಾಳ್ವತಿಮ್ಮನ ವಿರುದ್ದ ಅವಕಾಶಕ್ಕಾಗಿ ಕಾಯುತ್ತಿದ್ದರು. ಕೃಷ್ಣದೇವರಾಯನ ಆರು ವರ್ಷದ ಬಾಲಕ ತಿರುಮಲನ ಅಕಾಲಮರಣದ ಆಪಾದನೆಯನ್ನು ಸಾಳ್ವತಿಮ್ಮರಸನ ಮೇಲೆ ಹೊರಿಸಲಾಯಿತು. ಇದನ್ನು ನಂಬಿದ ಕೃಷ್ಣದೇವರಾಯ ಸಾಳ್ವತಿಮ್ಮನ ಕಣ್ಣುಗಳನ್ನು ಕೀಳಿಸಿದನೆಂದು ಹೇಳಲಾಗಿದೆ. ಆದರೆ ಇದನ್ನು ಆಧಾರ ಸಮೇತವಾಗಿ ಇತ್ತೀಚೆಗೆ ವಿದ್ವಾಂಸರು ತಳ್ಳಿಹಾಕಿದ್ದಾರೆ. ಆದರೂ ಸಾಳ್ವತಿಮ್ಮರಸನ ಪ್ರಾಬಲ್ಯವನ್ನು ಸಹಿಸಲಾಗದವರು ಈ ಘಟನೆಯನ್ನು ಹಬ್ಬಿಸಿರಬಹುದು. ಇದರಿಂದ ಪೂರ್ವಾಪರ ಆಲೋಚನೆ ಮಾಡದ ಕೃಷ್ಣದೇವರಾಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಸಾಳ್ವತಿಮ್ಮನಿಗೆ ನೀಡುತ್ತಿದ್ದ ಪ್ರಾಮುಖ್ಯತೆ ಕಡಿಮೆ ಮಾಡಿರಬಹುದು. ಇದಕ್ಕೆ ಪೂರಕವೇನೋ ಎಂಬಂತೆ ಕ್ರಿ.ಶ.೧೫೨೪ರ ನಂತರ ಸಾಳ್ವತಿಮ್ಮರಸನ ಶಾಸನಗಳಾವುವೂ ಇಲ್ಲವಾಗಿರುವುದು ಮತ್ತು ಅವನ ಕುಟುಂಬ ವರ್ಗಕ್ಕೆ ಸೇರಿದವರ ಶಾಸನಗಳು ಇಲ್ಲದೆ ಇರುವುದು ಪರೋಕ್ಷವಾಗಿ ಧೃಢೀಕರಿಸುತ್ತವೆ. ಆದರೆ ೧೫೨೭ ಆಗಸ್ಟನಲ್ಲಿ ಹಾಕಿಸಲಾದ ಶಾಸನದಲ್ಲಿ ರಾಯಸ ಅಯ್ಯಪ್ಪರಸು ಉದಯಗಿರಿಯಲ್ಲಿ ಆಳುತ್ತಿದ್ದನೆಂದು ಉಲ್ಲೇಖ ಇದೆ೩೮ ಮತ್ತು ೧೫೨೫ ಅಕ್ಟೋಬರ್‌ನಲ್ಲಿ ಅಯ್ಯಪ್ಪರಸು ಕುಂದುರ್ಪಿ ರಾಜ್ಯದ ಒಡೆತನವನ್ನು ಹೊಂದಿದ್ದನೆಂದು ಅಂಶ ಇದೆ೩೯. ಇದರಿಂದ ತನ್ನ ಮಗ ತಿರುಮಲರಾಯ ಸತ್ತುಹೋದ ಒಂದೇ ವರ್ಷದಲ್ಲಿ ಕೃಷ್ಣದೇವರಾಯನಿಗೆ ತನ್ನ ತಪ್ಪಿನ ಅರಿವಾದಂತೆ ತೋರಿ, ಪುನಃ ಸಾಳ್ವತಿಮ್ಮನ ಕುಟುಂಬ ವರ್ಗದವರಿಗೆ ಪ್ರಾಮುಖ್ಯತೆ ನೀಡಿದ್ದುದು ಕಂಡುಬರುತ್ತದೆ. ಇದಕ್ಕೆ ಪೂರಕವಾಗಿ ಸಾಳ್ವ ಗೋವಿಂದರಾಜನನ್ನು ೧೫೨೮ರಲ್ಲಿ ಬಾಗಿಲ ಪ್ರಧಾನಿಯನ್ನಾಗಿ ನೇಮಕ ಮಾಡಿಕೊಂಡು ತನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿರಬಹುದು ಎಂದು ಹೇಳಬಹುದು. ಕ್ರಿ.ಶ.೧೫೨೪ರ ನಂತರ ಸುಮಾರು ೫ ವರ್ಷಗಳ ಕಾಲ ಶಾಸನಗಳಲ್ಲಿ ಉಲ್ಲೇಖವಾಗದಿದ್ದ ತಿಮ್ಮರಸನು ೧೫೨೯ರ ಏಪ್ರಿಲ್‌ನಲ್ಲಿ ಅಮರನಾಯಕರಾದ ದೀಕ್ಷಿತಯ್ಯನವರು ಹಾಕಿಸಿದ ಶಾಸನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೃಷ್ಣದೇವರಾಯನ ಜೊತೆ ತಿಮ್ಮರಸುವಿಗೆ ಪುಣ್ಯವಾಗಲಿ ಎಂದು ಭೂದಾನ ಮಾಡಿದ್ದಾರೆ೪೦. ಕ್ರಿ.ಶ.೧೫೨೫ರ ವೇಳೆಗೆ ತನ್ನ ಮಗನಾದ ರಾಯಸ್ತ ಕೊಂಡಮರಸನನ್ನು ಕಳೆದುಕೊಂಡು ತನ್ನ ಮೇಲೆ ಬಂದ ಕೊಲೆಯ ಆಪಾದನೆಯಿಂದ ನೊಂದಿದ್ದ ತಿಮ್ಮರಸು ಕ್ರಿ.ಶ.೧೫೨೯ ಏಪ್ರಿಲ್‌ವರೆಗೂ ಬದುಕಿರಬಹುದು. ಆ ನಂತರ ಇವನ ಯಾವ ಶಾಸನಗಳೂ ಇಲ್ಲದಿರುವುದು ಅವನ ಮೊಮ್ಮಗ ರಾಯಸ್ತ ಅಯ್ಯಪ್ಪರಸ ಅಚ್ಯುತರಾಯನ ಕಾಲದಲ್ಲಿ ಮುಂದುವರಿದಿದ್ದರೂ ಅವನ ಶಾಸನಗಳಲ್ಲಿಯೂ ಉಲ್ಲೇಖವಾಗದೆ ಇದ್ದುದರಿಂದ ಪ್ರಾಯಶಃ ಅದೇ ಅವಧಿಯಲ್ಲಿ ಅವನು ಮರಣ ಹೊಂದಿರಬಹುದು.
ಸಾಳ್ವತಿಮ್ಮರಸರಿಗೆ ಕೃಷ್ಣಾಂಬಿಕೆ ಎಂಬ ಸೋದರಿಯೂ ತಿರುಮಲಾಂಬ ಎಂಬ ಮಗಳೂ ಇದ್ದಳು. ತನ್ನ ಸೋದರಿಯನ್ನು ನಾಂದಿಂಡ್ಲ ಕೋನ ಮಂತ್ರಿ ಎಂಬುವನಿಗೆ ವಿವಾಹ ಮಾಡಿಕೊಟ್ಟಿದ್ದನು. ಇವರ ಮಗನಾದ ಅಪ್ಪಾಮಾತ್ಯನಿಗೆ ತಿಮ್ಮರಸರು ತನ್ನ ಮಗಳಾದ ತಿರುಮಲಾಂಬನನ್ನು ಕೊಟ್ಟು ವಿವಾಹ ಮಾಡಿದರು. ಈ ಅಪ್ಪಾಮಾತ್ಯನ ತಮ್ಮ ಗೋಪ ಮಂತ್ರಿ ಇವರಿಬ್ಬರನ್ನು ತಿಮ್ಮರಸರು ಕೊಂಡವೀಡು ದುರ್ಗಕ್ಕೆ ಅಧಿಪತಿಗಳನ್ನಾಗಿ ಮಾಡಿದರು. ಗೋಪ ಮಂತ್ರಿ ಪ್ರಭೋಧ ಚಂದ್ರೋದಯಕ್ಕೆ ವ್ಯಾಖ್ಯಾನವನ್ನು ಕೃಷ್ಣಾರ್ಜುನ ಸಂವಾದ ಎಂಬ ಕಾವ್ಯವನ್ನು ಬರೆದಿದ್ದಾರೆ. ಈ ಎರಡೂ ಕೃತಿಗಳಲ್ಲೂ ತಾನು ತಿಮ್ಮರಸರ ಕೃಪೆಯಿಂದ ಕೊಂಡವೀಡು ದುರ್ಗಾಧ್ಯಕ್ಷನಾಗಿ ನೇಮಕಗೊಂಡೆನೆಂದು ಹೇಳಿಕೊಂಡಿದ್ದಾನೆ. ಸಾಳ್ವ ತಿಮ್ಮರಸ ಆಡಳಿತಗಾರನೆ ಅಲ್ಲದೆ ಪಂಡಿತನೂ ಆಗಿದ್ದನು. ಇವನು ಅಗಸ್ತ್ಯಕೃತ ಚಂಪೂಭಾರತಕ್ಕೆ ವ್ಯಾಖ್ಯಾನ ಬರೆದಿದ್ದಾನೆ ಎಂದು ಹೇಳಲಾಗಿದೆ.
ಇತಿ ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಕರ್ನಾಟೇಶ್ವರ ಶ್ರೀ ಕೃಷ್ಣರಾಯ ಶಿರಃ ಪ್ರಧಾನ ಸಕಲಾಗಮ ವಾರಂಪಾರಪರೀತ ಸಾಳ್ವತಿಮ್ಮಯ ದಂಡನಾಥ ವಿರಚಿತಾಯಾಂ ಬಾಲ ಭಾರತ ವ್ಯಾಖ್ಯಾಯ ಮನೋಹರಾಖ್ಯಾಯಾಂ ಪಂಚಮಸ್ಸರ್ಗಂ೪೧
ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕೃಷ್ಣದೇವರಾಯನ ಆಮುಕ್ತ ಮಾಲ್ಯದ (ಕನ್ನಡಕ್ಕೆ) ಡಾ|| ನಿರುಪಮಾ, ಪುಟ ೪೩, ಪ್ರಸಾರಾಂಗ ಕನ್ನಡ ವಿ.ವಿ. ಹಂಪೆ ೨೦೧೦.
೨.         ಅದೇ, ಪು ೪೬.
೩.         ಅದೇ, ಪು ೬೪.
೪.         ಡಾ. ಡಿ.ಎನ್. ಯೋಗೀಶ್ವರಪ್ಪ, ಕೃಷ್ಣದೇವರಾಯನ ಆಳ್ವಿಕೆಯಲ್ಲಿ ನಾಯಕತನಗಳು, (ಅಪ್ರಕಟಿತ ಪ್ರಬಂಧ) ೨೦೧೧ ಜನವರಿ ೨೭
            ಮತ್ತು ೨೮ರಂದು ಹಂಪೆಯಲ್ಲಿ ನಡೆದ ವಿಜಯನಗರ ಅಧ್ಯಯನ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿತ್ತು.
೫.         ಚಿಲಕೂರಿ ವೀರಭದ್ರರಾವು ತಿಮ್ಮರಸು ಮಂತ್ರಿ, (ತೆಲುಗು ಭಾಷೆ) ಆರ‍್ಯ ಪುಸ್ತಕಾಲಯ, ರಾಜಮಹೇಂದ್ರಿ ೧೯೫೦.
೬.         ಡಿ.ವಿ. ಪರಮಶಿವಮೂರ್ತಿ, ಕೃಷ್ಣದೇವರಾಯನ ಶಾಸನಗಳು, ಸಂಖ್ಯೆ ೫೫, ೪೭, ತಗರಪುರ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ.
೭.         Iಟಿsಛಿಡಿioiಠಿಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs,, ಗಿoಟ. Iಗಿ, o. ೬೯, ೮೫,೧೧೦,೧೦೯ Iಅಊಖ, ಃಚಿಟಿgಚಿಟoಡಿe ೨೦೦೯.
            ಕೃಷ್ಣದೇವರಾಯನ ಶಾಸನಗಳು, ಸಂಪುಟ ೧, ಸಂಖ್ಯೆ ೪೮, ೧೨೪, ೧೪೮, ೧೫೨.
೭ಎ.      ಅದೇ ನಂ. ೧೨೮.
೮.         ಅದೇ ನಂ. ೪೮, ೮೫, ೧೨೪, ೧೫೨.
೯.         ಅದೇ ನಂ. ೮೫, ೧೦೯.
೯.         Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿoಟ. Iಗಿ ಓo-೮೪.
೧೦.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧, ಪ್ರಸ್ತಾವನೆ ಪುಟ ೬೦.
೧೧.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿ, ಗಿoಟ. Iಗಿ, o. ೭೦, ೭೨.
೧೨.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧, ಸಂಖ್ಯೆ ೨೧.
೧೩.      ಅದೇ ಸಂಖ್ಯೆ ೨೩.
೧೪.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿoಟ. Iಗಿ, o. ೭೦,೭೨.
೧೫.      ಅದೇ ೭೦.
೧೬.      ಅದೇ ೭೨.
೧೭.      ಪ್ರವಾಸಿ ಕಂಡ ವಿಜಯನಗg, (ಸಂ) ವಿವೇಕ ರೈ, ಪುಟ ೬೫, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ ೨೦೦೫.
೧೮.      ಅದೇ ಪುಟ ೭೮ ಮತ್ತು ೭೯.
೧೯.      ಂಖI, ೧೮೯೭, o. ೧೮೬
೨೦.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿoಟ. Iಗಿ, o. ೭೫, Iಅಊಖ. ಃಚಿಟಿgಚಿಟoಡಿe ೨೦೦೯.
೨೧.      ಅದೇ ಸಂಖ್ಯೆ ೭೬.
೨೨.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧, ಸಂ. ೩೩೧, ಜೋಳಸಮುದ್ರಂ.
೨೩.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿoಟ. Iಗಿ, o. ೯೩, Iಅಊಖ, ಃಚಿಟಿgಚಿಟoಡಿe ೨೦೦೯.
೨೪.      ಅದೇ ನಂ. ೧೨೯.
೨೫.      ಅದೇ ನಂ. ೧೨೩.
೨೬.      ಅದೇ ನಂ. ೧೨೮.
೨೭.      ಅದೇ ನಂ. ೭೫.
೨೮.      ಅದೇ ನಂ. ೯೯.
೨೯.      ಅದೇ ನಂ. ೧೨೮.
೩೦.      ಅದೇ ನಂ. ೧೩೦.
೩೧.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧, ನಂ. ೩೪೧.
೩೨.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿoಟ. Iಗಿ, o. ೧೫೬.
೩೩.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧. ನಂ. ೪೮.
೩೪.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿoಟ. Iಗಿ, o. ೮೫.
೩೫.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧, ನಂ. ೮೬.
೩೬.      ಅದೇ ನಂ. ೧೧೮.
೩೭.      ಅದೇ ನಂ. ೨೪೨.
೩೮.      Iಟಿsಛಿಡಿiಠಿಣioಟಿs oಜಿ ಗಿiರಿಚಿಥಿಚಿಟಿಚಿgಚಿಡಿಚಿ ಖueಡಿs, ಗಿo, Iಗಿ. ಓo. ೧೫೬.
೩೯.      ಕೃಷ್ಣದೇವರಾಯನ ಶಾಸನಗಳು, ಸಂಪುಟ ೧. ನಂ. ೩೪೧.
೪೦.      ಅದೇ ನಂ. ೩೪೯.
೪೧.      Souಡಿಛಿes oಜಿ ಗಿiರಿಚಿಥಿಚಿಟಿಚಿgಚಿಡಿಚಿ ಊisoಡಿಥಿ, P. ೧೪೩.

 ಸಹ ಪ್ರಾಧ್ಯಾಪಕ, ಇತಿಹಾಸ ವಿಭಾಗ ಮುಖ್ಯಸ್ಥರು, ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜು, ತುಮಕೂರು-೫೭೨೨೦೧.