Sunday, February 10, 2013

ಪ್ರಪಂಚದ ಅತಿಪುರಾತನ ಲಿಪಿ

ಎಚ್‌..ಶೇಷಗಿರಿರಾವ್‌

ಪ್ರಪಂಚದ ಅತ್ಯಂತ ಪ್ರಾಚೀನ ಲಿಪಿ ಆಗ್ನೇಯ ಯುರೋಪಿನಲ್ಲಿ !

ಪ್ರಾಚೀನ ನಾಗರೀಕತೆಗಳು ನದಿ ದಡದಲ್ಲಿ ತಲೆಎತ್ತಿರುವುದು ಎಲ್ಲರೂ ಬಲ್ಲ ಸಂಗತಿ. ಈಜಿಪ್ಟ,ಮೆಸಪಟೋಮಿಯಾ  ಹರಪ್ಪ ಮತ್ತು ಮೆಹಂಜದಾರೋ ಮತ್ತು  ಚೀನಾನಾಗರೀಕತೆಗಳು ನದೀ ತೀರದ ಪುರಾತನ ಮಾನವನ ಸಾಧನೆಯ ಪುರಾವೆಗಳನ್ನು ಸಾಕಷ್ಟು ಒದಗಿಸಿವೆ.ನಾಗರೀಕ ಸಮಾಜದ ಮೊದಲ ಸಾಧನೆಎಂದರೆ ಭಾಷೆಯಬಳಕೆ ನಂತರದ್ದು ಲಿಪಿ. ಅವಿಷ್ಕಾರ. ಉತ್ಖನನದಿಂದ   ಪೂರ್ಣ ಮಾಹಿತಿ ತಿಳಿದಿಲ್ಲವಾದರೂ ಸಾಕಷ್ಟು ಮಾಹಿತಿ ದೊರಕಿದೆ.ಅಲ್ಲಿಯೇ ಒಂದೆ ಸಮಯದಲ್ಲಿ ಆದಿಮ ಲಿಪಿಗಳ ಬಳಕೆ  ಮೊದಲಾದುದ್ದು..  ಅನುಕರಣೆ  ಅಥವ ಅನುಸರಣೆ ಮಾಡದೆ  ಸುಮಾರು ಕ್ರಿ. ಪೂ. ೩ನೆಯ ಸಹಸ್ರಮಾನದಿಂದ ೨ನೆಯ ಸಹಸ್ರಮಾನದ ಅವಧಿಯಲ್ಲಿ ಲಿಪಿಗಳ ಬಳಕೆ ದಾಖಲಾಗಿದೆ.
 ಇವಕ್ಕಿಂತಲೂ ಸಹಸ್ರಮಾನದಷ್ಟು ಪುರಾತನ ಸಂಸ್ಕೃತಿಯೊಂದು ಯುರೋಪಿನಲ್ಲಿದ್ದು ಕೆಲವು ದಶಕಗಳ ಹಿಂದಿನ ಡ್ಯೂನಬ್‌ ನದಿ  ದಡದ ಪ್ರದೇಶದ ಉತ್ಖನನದಿಂದ ಕಂಡುಬಂದಿದೆ. ಅಲ್ಲಿ ದೊರಕಿದ ಪುರಾತತ್ವ ವಸ್ತುಗಳ ಮೇಲೆ ಲಿಪಿ ಎನ್ನ ಬಹುದಾದ ಬರಹಗಳೂ ದೊರಕಿವೆ.ಆಗ್ನೇಯ ಯುರೋಪಿನಲ್ಲಿ ಡೆನ್ಯೂಬ್‌ ನದಿ ದಡದಲ್ಲಿ ನೂರಾರು ಮೈಲು ವ್ಯಾಪ್ತಿಯಲ್ಲಿ ದೊರೆತ ಪ್ರಾಚ್ಯ ಅವಶೇಷಗಳು ಹೊಸ ಚರ್ಚೆ ಹುಟ್ಟು ಹಾಕಿವೆ.ಈಪ್ರಾಚೀನ ಯುರೋಪು ಸಂಸ್ಕೃತಿಯನ್ನು ವಿಂಕಾ ಸಂಸ್ಕೃತಿ ಎನ್ನಲಾಗಿದೆ.ಅಲ್ಲಿ ಬರಹಗಳೇ ವಿಂಕಾ/ ಡೆನ್ಯೂಬ್‌ಬರಹಗಳು
ಮೂಲ
ಆಗ್ನೇಯ ಯುರೋಪಿನಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ಪುರಾತತ್ವ ವಸ್ತುಗಳ ಮೇಲೆ ಬರಹಗಳು ಅದರಲ್ಲೂ ವಿಶೇಷವಾಗಿ ಬೆಲ್‌ಗ್ರೇಡ್‌  ಸಮೀಪದ ವಿಂಕಾದಲ್ಲಿ ದೊರಕಿದ ಪ್ರಾಚ್ಯಮಾನವ ನಿರ್ಮಿತ  ವಸ್ತುಗಳ ಮೇಲೆ ಅತಿಪ್ರಾಚೀನ ಸಂಕೇತಗಳು ಕಂಡು ಬಂದಿದೆ. ಅದಲ್ಲದೆ ಗ್ರೀಸ್‌, ಬಲ್ಗೇರಿಯಾ ,ರೊಮಾನಿಯಾ, ಪೂರ್ವ ಹಂಗರಿ,ಮೊಲ್ಡೊವಾ, ದಕ್ಷಿಣ ಉಕ್ರೇನ್‌  ಮತ್ತು ಹಿಂದಿನ ಯುಗೊಸ್ಲೋವಿಯಾಗಳ ಅನೇಕ ತಾಣಗಳಲ್ಲಿ ಅವುಗಳು ಲಭ್ಯವಾಗಿವೆ. ಆ ಪುರಾತತ್ವ ವಸ್ತುಗಳ ಕಾಲ ಸುಮಾರು ಕ್ರಿ.ಪೂ ೭ನೇ ಸಹಸ್ರ ಮಾನದಿಂದ ೬ ನೆಯ ಸಹಸ್ರ ಮಾನದ ವರೆಗ ಎಂದು ನಿರ್ಧರಿಸಲಾಗಿದೆ.  ಅಲ್ಲದೊರೆತ ಬಹುತೇಕ ವಸ್ತುಗಳ ಮೇಲಿನ ಅಲಂಕಾರಿಕ ಗುರುತುಗಳು 8,000 ದಿಂದ  6,500 ವರ್ಷದಷ್ಟು ಪುರಾತನವಾದವು ..
ಕೆಲವು ವಿದ್ವಾಂಸರ ಪ್ರಕಾರ  ಇಲ್ಲಿ ದೊರೆತ ವಸ್ತುಗಳ ಮೇಲಿನ ಬರಹಗಳೇ  ಜಗತ್ತಿನಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಲಿಪಿಗಳುಅವು ಈಗ ಅತ್ಯಂತ ಹಳೆಯ ಲಿಪಿಗಳು ಎಂದು ನಿರ್ಧರಿತವಾಗಿರುವ ಪ್ರಾಚೀನ ಸುಮೇರಿಯನ್‌ ಮತ್ತು ಈಜಿಪ್ಷಿಯನ್‌ ಲಿಪಿಗಳಿಗಿಂತ ಸಾವಿರ ವರ್ಷಕ್ಕೂ ಹೆಚ್ಚು  ಪುರಾತನವಾದವು ಎನ್ನಬಹುದು.. ಈ ಎಲ್ಲ ವಸ್ತುಗಳೂ ಸಮಾಧಿಗಳಲ್ಲಿ ದೊರೆತಿವೆ. ಅವುಗಳ ಮೇಲಿನ ಬರಹಗಳು ಚಿಕ್ಕದಾಗಿವೆ.ಈ ವರೆಗೂ ಅವು ಯಾವ ಭಾಷೆಯಲ್ಲಿ ಬರೆದ ಲಿಪಿಗಳು ಎಂಬುದನ್ನು ತಿಳಿಯಲಾಗಿಲ್ಲ.ಇದರಿಂದ ಅವುಗಳನ್ನು ಅರ್ಥೈಸುವ ಸಂಭವ ಬಹಳ ಕಡಿಮೆ .
ಪ್ರಾಚೀನ ವಿಂಕ ಸಂಸ್ಕೃತಿಯ ಕಾಲದಿಂದ ಬಂದ ಸಂಕೇತಗಳು


ಇತ್ತೀಚಿನ ವರ್ಷಗಳಲ್ಲಿ ವಿಂಕಾ ಸಂಸ್ಕೃತಿ  ಕೊರೆದ ಲಿಪಿಗಳಂತಿರುವ ಸಂಕೇತಗಳಲ್ಲಿ (((( (ಈಗ ಅವುಗಳನ್ನು ಪುರಾತನ ಯುರೋಪಿಯನ್‌ ಲಿಪಿಗಳು ಎನ್ನಲಾಗಿದೆ) ಆಸಕ್ತಿ   ಹೆಚ್ಚಿದೆ. ಆ ಪ್ರಾಚ್ಯ ವಸ್ತುಗಳು ಯುಗೊಸ್ಲೋವಿಯಾ ಮತ್ತು ಪಶ್ಚಿಮರೊಮಾನಿಯಾಗಳಲ್ಲಿನ ಮಧ್ಯಕಾಲೀನ ಶಿಲಾಯುಗದ ವಿಂಕಾ –ಟೊರ‍್ಡೋಸ  ಸಂಸ್ಕೃತಿಯ ಅವಶೇಷಗಳು.  ಈ ಸಂಕೇತಗಳು ಪುರಾವೆಗಳು ೧೯ನೇ ಶತಮಾನದಲ್ಲಿ  ಟ್ರಾನ್ಸಲ್ವೇನೀಯದ ಟರ್ದೋಸ್‌ ತಾಣದಲ್ಲಿ ನಡೆಸಿದ  ಉತ್ಖನನದಲ್ಲಿಯೇ  ದೊರೆತರೂ, ಸಮೀಪದಲ್ಲಿಯ ಆರ್ಟರಿಯಾದಲ್ಲಿ ೧೯೬೪ ನ ಉತ್ಖನನದಲ್ಲಿ ೩ ಇಸ್ವಿಯಲ್ಲಿದೊರೆತ ಮಣ್ಣಿನ ಫಲಕಗಳು  ಆ ಪ್ರಾಚ್ಯ ವಸ್ತುಗಳ ಮೇಲಿನ ಸಂಕೇತಗಳಮೂಲ ಮತ್ತು ಕಾಲದ ಬಗ್ಗೆ ವಿವಾದದ ಅಲೆಯನ್ನೇಎಬ್ಬಿಸಿದವು.
ಕೆಲ ವಿದ್ವಾಂಸರು ಈ ಸಂಕೇತಗಳು ಪ್ರಾಂಭದ ಮೆಸಪೊಟೋಮಿಯಾ ಲಿಪಿಗಳಿಂದ ಪ್ರಭಾವಿತವಾಗಿವೆ (ಕ್ರಿ. ಪೂ 3000 ) ಎಂದುಕೊಂಡು ಯುರೋಪಿಯನ್‌ ಸ್ವತಂತ್ರ ಚಿತ್ರ ಲಿಪಿಯ ಬಳಕೆಯ ಸಾಧ್ಯತೆಯನ್ನು ತಳ್ಳಿ ಹಾಕಿರುವರು.ಅವರು ಇದರ ಮೂಲ ಮೆಸಪಟೋಮಿಯಾ ಎಂದೇ ವಾದಿಸುವರು.ಅವರು ಆಗ್ನೇಯ ಯುರೋಪಿನ ರೇಡಿಯೋ ಡೇಟಿಂಗ್‌ ಆಧಾರಿತ  ನವಶಿಲಾಯುಗದ ಘಟನಾ ಕಾಲುನುಕ್ರಮವನ್ನು ಮರೆತಿರುವರು
ಬೆಲ್‌ಗ್ರೇಡ್‌ ಸಮೀಪದ ಡೇನ್ಯುಬ್‌ ನದಿ ತಟದಲ್ಲಿನ ವಿಂಕಾ ಮತ್ತು ಅದಕ್ಕೆ ಸಂಬಂಧಿಸಿದ ಸುಮಾರು 50 ತಾಣಗಳಿಗೆ ವಿಂಕಾ ಸಂಸ್ಕೃತಿ ಎಂದೇ ಹೆಸರಿಸಲಾಯಿತು.ಇವುಗಳ ಕಾಲ ಮಾನವನ್ನುಟ್ರಾನ್ಸಿಲ್‌ವೇನಿಯಾದ ಟೊರೊಡೊಸನಲ್ಲಿ ದೊರೆತವಸ್ತುಗಳಿಂದಕಾರ್ಬನ್‌ಡೇಟಿಂಗ್‌ನಿಂದ ನಿಖರಗೊಳಿಸಲಾಗಿದೆ. 



.ವಿಂಕಾ ಸಂಕೇತಗಳನ್ನು ಆಗ್ನೇಯ ಯುರೋಪಿನ  ವಿಂಕಾ ಸಂಸ್ಕೃತಿಯ ಆದಿಮ ಬರಹ ಎಂದು ಪರಿಗಣಿಸಲಾಗಿದೆ.ಬಹುಶಃ ಅವು ಮಾಹಿತಿ ರವಾನೆ ಮಾಡಲುಬಳಸಲಾಗಿರಬಹುದು. ಆದರೆ ಭಾಷೆಯಾಗಿ ಅರ್ಥೈಸಲಾಗಿಲ್ಲ.. ಅವು ಈಗ ಗೊತ್ತಿರುವ ಆದಿಮ ಲಿಪಿವಿಕಾಸದ ಒಂದು ಸಹಸ್ರಮಾನ ಕ್ಕೂ ಅಧಿಕ ಕಾಲದ    ಮೊದಲೇಇದ್ದವು.


                                  
ವಿಂಕಾದಲ್ಲಿ ೨೬ ಅಡಿ ಆಳದಲ್ಲಿ ದೊರೆತಮಣ್ಣಿನ ಪಾತ್ರೆಯ ರೇಖಾಚಿತ್ರ
ರಾತತ್ವ ಶೋದಕರು  1875ರಲ್ಲಿ ರೊಮೇನಿಯಾದ ಟಾರ್ಟಆಸ್‌ನಲ್ಲಿ ಉತ್ಖನನ ನಡೆಸುವಾಗ , ಹಂಗೇರಿಯನ್‌ ಪುರಾತತ್ವ ಪರಿಣಿತನಾದ ಝೊಸಫಿಯಾ  ತೊರ್ಮಾ(Zsófia Torma 1840–1899) ನಿಗೆ ನೆಲದಡಿಯಲ್ಲಿ ಅದುವರೆಗೂ ಅಪರಿಚಿತವಾದ ಸಂಕೇತಗಳಿರುವ ವಸ್ತುಗಳು  ದೊರೆತವು  ಮಿಲೋಯಿ ವಾಸಿಕ್‌ ಬೆಲ್‌ಗ್ರೇಡ್‌(ಸರ್ಬಿಯಾದ ಬಳಿಯ ವಿಂಕಾದಲ್ಲಿ ಉತ್ಖನನ ನಡೆಸಿದಾಗ 1908  ರಲ್ಲಿ , ಅದೇ ತರಹದ ಅಪರಿಚಿತ ಲಿಪಿಗಳಿರುವ ವಸ್ತುಗಳು ಸಿಕ್ಕವು. ಅದು ಟರ್ಡಾದಿಂದ ೧೨೦ ಕಿ. ಮೀಟರ್‌ ದೂರದಲ್ಲಿತ್ತು. ಅದಾದ ಮೇಲೆ ಸುಮಾರು೧೫೦ ತಾಣಗಳಲ್ಲಿ ಪುರಾತತ್ವ ವಸ್ತುಗಳು ದೊರೆತಿವೆ.ಆದರೆ ವಿಂಕಾವು ಸೇರಿದಂತೆ ಯಾವುದೇ ತಾಣದಲ್ಲಿ ಉತ್ಖನನವನ್ನು ಪೂರ್ಣ ಪ್ರಮಾಣದಲ್ಲಿ ಜರುಗಿಸಿಲ್ಲ. ಈ ಎಲ್ಲವನ್ನೂ ವಿಂಕಾ ಸಂಸ್ಕೃತಿ ಎಂದು ಕರೆಯಲಾಗುವುದು. ಮತ್ತು ಅಲ್ಲಿನ ಲಿಪಿಯನ್ನುವಿಂಕಾ-ಟರ್ಡಾಷ್‌ ಲಿಪಿ ಎನ್ನುವರು..
ನಿಕೊಲಾಯ್ ವ್ಲಾಸ್ಸಾನ  ೧೯೬೧ ರಲ್ಲಿ ರುಮೇನಿಯಾದಲ್ಲಿ ಟಾರ್ಟರಿಯಾ ಮಣ್ಣಿನ ಫಲಕಗಳ ಶೋಧವು ದೊಡ್ಡ ಚರ್ಚೆಯನ್ನೆ ಹುಟ್ಟು ಹಾಕಿತು. ವ್ಲಾಸ್ಸಾ ಆ ಸಂಕೇತಗಳು ಚಿತ್ರ ಲಿಪಿ ಎಂದುನಂಬಿದ್ದ. ಅವುಗಳನ್ನು ನಂತರ ಕಾರ್ಬನ್‌ ಡೇಟಿಂಗ್‌ಗೆ ಒಳ ಪಡಿಸಿದಾಗ ಅವುಗಳ ಕಾಲ ಕ್ರಿ. ಪೂ. ೪೦೦೦ ವರ್ಷಗಳಿಗಿಂತಲೂ ಪುರಾತನ ಎಂದು ತಿಳಿಯಿತು. ಆತನು ಅಂದುಕೊಂಡಿದ್ದ ಕಾಲಕ್ಕಿಂತ ೧೩೦೦ ವರ್ಷ ಹಿಂದಿನದಾಗಿದ್ದವು.ಅಲ್ಲದೆ ಸುಮೇರಿಯನ್‌ ಮತ್ತು ಮಿನೋವನ್‌ರ ಲಿಪಿಒಗಳಿಗಿಂತಲೂ ೧೩೦೦ ವರ್ಷ ಪುರಾತನವಾಗಿದ್ದವು .
ಈವರೆಗೆ ೧೦೦೦ಕ್ಕೂ ಹೆಚ್ಚು ಅದೇರೀತಿಯ ತುಣುಕುಗಳು ಆಗ್ನೇಯ ಯುರೋಪಿನ  ಗ್ರೀಸ್,( ಡಿಸ್ಪಿಲಿಯೋ ಫಲಕ) , ಬಲ್ಗೇರಿಯಾ, ಹಿಂದಿನ ಯುಗೊಸ್ಲಾವಿಯಾ,ರೊಮೆನಿಯಾ,ಪೂರ್ವ ಹಂಗರಿ, ಮೋಲ್ಡೋವ ಮತ್ತು ದಕ್ಷಿಣ ಉಕ್ರೇನಿನಲ್ಲಿ ದೊರಕಿವೆ.. ಬಹುತೇಕ ಅವು ಮಡಕೆಗಳ ಮೇಲಿವೆ.ಸುಮಾರು 85% ನಷ್ಟಯ ಏಕ ಸಂಕೇತಗಳಾಗಿವೆ.. ಅವು ಅಮೂರ್ತವಾದ ವೈವಿದ್ಯಮಯ ಚಿತ್ರಲಿಪಿಗಳಾಗಿವೆ.ಕೆಲವುಪ್ರಾಣಿಗಳನ್ನೂ, ಬಾಚಣಿಕೆ, ಅಥವ ಬ್ರಷ್‌ ಸ್ವಸ್ತಿಕ, ಕ್ರಾಸ್‌ ಹೋಲುತ್ತವೆ, ಜೊತೆಗೆ ಇನ್ನೂ ಕೆಲವುಗುಂಪಾದ ಸಂಕೇತಗಳಿವೆ. ಅವುಗಳಿಗೆ ನಿರ್ಧಿಷ್ಟ ವಿನ್ಯಾಸ ಅಥವ ದಿಕ್ಕು ಇಲ್ಲ. ಅವುನಿರ್ಣಾಯಕಗಳಾಗಿರಬಹುದು.  ಸ್ವತಂತ್ರ ಸಂಕೇತಗಳು ಮಡಿಕೆಗಳ ಮೇಲಿವೆ. ಗುಂಪಾಗಿರುವವು ಸುರಳಿಗಳ ಮೇಲಿವೆ..
 M  ಗುರುತಿರುವ ಮಣ್ಣಿ ಪಾತ್ರೆಯ ಚೂರು.

                                              
ವಿಂಕಾಸಂಕೇತಗಳ ಪ್ರಾಮುಖ್ಯತೆ ಇರುವುದು, ಅವುಗಳಲ್ಲಿ ಬಹಳಷ್ಟು ಕ್ರಿ .ಪೂ4500 ಮತ್ತು 4000 ದಲ್ಲಿ ನಿರ್ಮಾಣವಾಗಿವೆ.ಟಾರ್ಟರಿಯ ಫಲಕವೊಂದು ಕ್ರಿಪೂ. 5300 ವರ್ಷಗಳಷ್ಟು ಹಳೆಯದು.ಅದರ ಅರ್ಥ ಯುರಕ್‌(  (ಆದುನಿಕ ಇರಾಕ್‌) ನಲ್ಲಿ ದೊರೆತ  ಜಗತ್ತಿನಲ್ಲಿದೊರೆತ ಅತ್ಯಂತ ಪ್ರಾಚೀನ ಕಾಲದ ಆದಿಕಾಲದ ಸುಮೇರಿಯನ್‌ ಚಿತ್ರ ಲಿಪಿಗಳಿಗಿಂತ ಒಂದು ಸಾವಿರ ವರ್ಷ   ಪ್ರಾಚೀನ . ವಿಶ್ಲೇಷಣೆಯಿಂದ  ಅವುಗಳಿಗೂ ಹತ್ತಿರದ ಪೂರ್ವದಲ್ಲಿನ ಲಿಪಿಗಳಿಗೂ ತುಸುವೂ ಹೋಲಿಕೆಇಲ್ಲ. ಅದರಿಂದ ಈ ಸಂಕೇತಗಳು ಮತ್ತು ಸುಮೇರಿಯನ್‌ ಲಿಪಿಗಳು ಸ್ವತಂತ್ರವಾಗಿಯೇ ಉಗಮವಾದವು ಎಂದು ನಿರ್ಧರಿಸಬಹುದು.ಆದರೆ ವಿಂಕಾ ಬರಹಕ್ಕೂ ನೂತನ ಶಿಲಾಯುಗದ ಇತರೆ ಲಿಪಿಗಳಿಗೂ ಸ್ವಲ್ಪ ಸಾಮ್ಯವಿರುವುದ ಕಂಡು ಬಂದಿದೆ.ಈಜಿಪ್ಟ್‌, ಕ್ರೀಟ್‌ ಮತ್ತು ಚೀನಾದಲ್ಲಿ ಕೂಡಾ ಲಿಪಿಗಳ ಸಾಮ್ಯತೆ ಕಂಡು ಬರುವುದು. ಬಹುಶಃ ಆದಿಮ ಲಿಪಿಯ ಬೇರೆ ಬೇರೆ ಸಮಾಜಗಳಲ್ಲಿ ಪಡೆದುಕೊಂಡ ವಿಭಿನ್ನವಾದ ವಿಕಾಸವೇ ಇದಕ್ಕೆ ಕಾರಣ ಎಂದು ವಿದ್ವಾಂಸರ ಅಭಿಪ್ರಾಯ . ಅತಿ ಹೆಚ್ಚಿನ ಸಂಖ್ಯೆಯ ಸಂಕೇತಗಳು ತಿಳಿದಿದ್ದರೂ, ಬಹುತೇಕ ಪುರಾತತ್ವ ವಸ್ತುಗಳು ಕೆಲವೇ ಸಂಕೇತಗಳನ್ನು ಹೊಂದಿವೆ.ಅವುಗಳಿಂದ ಪೂರ್ಣ ಪಾಠವನ್ನು ಓದಲಾಗುವುದಿಲ್ಲ. ಬಲ್ಗೇರಿಯಾದಲ್ಲಿ ದೊರೆತ ಲಿಪಿಗಳು ಓದುವ ಸಾಧ್ಯತೆ ಇರುವುದಾದರೂ ಅವುಗಳ ಕಾಲಮಾನ ನಿಖರವಾಗಿಲ್ಲ.. ಅದಲ್ಲದೇ ಅದರಲ್ಲಿ ಕೂಡಾ ಬರಿ ೫೦ ಸಂಕೇತಗಳಿವೆ.ಅವು ಯಾವ ಭಾಷೆಯವು ಎಂಬುದು ತಿಳಿದಿಲ್ಲ. ಅವು ಭಾಷೆಯೊಂದನ್ನು ಪ್ರತಿನಿಧಿಸುವವೇ ಎಂಬುದೂ ಖಚಿತವಿಲ್ಲ
ರೊಮೇನಿಯಾದ ಟಾರ್ಟರರಿಯಾ ಹತ್ತಿರ ನಡೆದ ಉತ್ಖನನದಲ್ಲಿ ದೊರೆತ
 ಕ್ರಿ. ಪೂ. ೫೩೦೦ನೇ ಕಾಲದ ಮಣ್ಣಿನ ತಾಯಿತ
d


ಸಂಕೇತಗಳ ಸ್ವರೂಪ ಮತ್ತು ಉದ್ದೇಶವು ಅಸ್ಪಷ್ಟ.. ಆದರೆ ಅವು ಲಿಪಿಪದ್ದತಿಯ ಭಾಗ ಎಂಬುದಂತೂ ಸತ್ಯ.. ಅವುಗಳನ್ನು ಅರ್ಥೈಸಲು ಹಲವು ಪ್ರಯತ್ನಗಳು ನಡೆದಿವೆ. ಆದರೆ ಅವುಗಳ ಅರ್ಥದ  ಬಗ್ಗೆ ಒಮ್ಮತ ಮೂಡಿಲ್ಲ.ಮೊದಲಲ್ಲಿ ಅವು ಮಾಲಿಕನ  ಆಸ್ತಿಯ  ಸರಳ ಸಂಕೇತವೆಂದು ಎಂದು ಪುರಾತತ್ವ ತಜ್ಞಪೀಟರ್‌ಬೆಹ್ಲ್ ಭಾವಿಸಿದ್ದರು ಆದರೆ ಈ ವಾದವು ಈಗ ತಿರಸ್ಕೃತವಾಗಿದೆ. ಕಾರಣ ಇದೇ ಸಂಕೇತಗಳು ವಿಂಕಾದ ಸಂಸ್ಕೃತಿಯ  ಇತರೆ ಪ್ರದೇಶಗಳಲ್ಲೂ ಪದೇ ಪದೇದೊರಕಿವೆ.ಅವುಗಳು ನೂರಾರು ಮೈಲು ಅಂತರದಲ್ಲಿವೆ. , ಅಲ್ಲದೆ ಅವುಗಳ ಕಾಲದಲ್ಲೂ ಅನೇಕ ವರ್ಷಗಳ ವ್ಯತ್ಯಾಸ ಹೊಂದಿವೆ. .ಈಗಿರುವ ವಿಚಾರದಂತೆ ಅವು ಕೃಷಿ ಆಧಾರಿತ ಸಮಾಜದ ಧಾರ್ಮಿಕ ಆಚರಣೆಯ ಸಂಕೇತವಾಗಿರಬಹುದು. ಈ ಸಂಕೇತಗಳು ನೂರಾರು ವರ್ಷವಾದರೂ ತುಸುವೂ ಬದಲಾಗದೇ ಒಂದೇ ರಿತಿಯಲ್ಲಿರುವುದರಿಂದ ಆಸಂಸ್ಕೃತಿಯ ಆಚರಣೆ ಇರುವ ತನಕ ಬದಲಾಗದೇ ಉಳಿದಿಬಹುದು . ಈ  ಸಂಕೇತಗಳ ಬಳಕೆ ಕಂಚಿನಯುಗ ಪ್ರಾರಂಭವಾದ ಕಂಡುಬಂದಿಲ್ಲ.. ಹೊಸ ತಂತ್ರಜ್ಞಾನವು  ಸಾಮಾಜಿಕ ವ್ಯವಸ್ಥೆಯ ನಂಬಿಕೆ ಮತ್ತು ಆಚರಣೆಯಲ್ಲಿ ಗಣನೀಯ ಬದಲಾಬಣೆಯನ್ನು ತಂದಿರುವುದನ್ನು ಗುರುತಿಸಬಹುದು
ಧಾರ್ಮಿಕ ಆಚರಣೆಯ ಸಿದ್ಧಾಂತದ ಪ್ರಕಾರ ಸಂಕೇತಗಳನ್ನು ಮೂಡಿಸಿದ ವಸ್ತುಗಳು ಬಹಳ ಕಾಲ ಬಳಸುವಂಥಹವಲ್ಲ..ಅವು ವ್ಯರ್ಥ ವಸ್ತುಗಳ ಜೊತೆ  ಪಾಳು ಮನೆಯಡಿಯ ದೊರಕಿವೆ.ಅದರಿಂದ ಅವು ಮನೆಯಲ್ಲಿನ ಆಚರಣೆಯ ಅಂಗವಾಗಿದ್ದವು ಎಂದು ಊಹಿಸಬಹುದು.  ಆ ವಸ್ತುಗಳು ವಿವಿಧ ಭಾವನೆಗಳಾದ ಆಸೆ, ನಿರ್ಧಾರ, ಬೇಡಿಕೆ ಇತ್ಯಾದಿಗಳನ್ನು ಪ್ರತಿನಿಧಿಸುತಿರಹುದು.ಆ ಕೆಲಸ ಮುಗಿದ ಮೇಲೆ  ಅವನ್ನು ನೆಲದಲ್ಲಿ ಹುಗಿಯುವ ಆಚರಣೆ ಇಂದಿಗೂ ಕೆಲವೆಡೆ ಇದೆ.( ಇದನ್ನು ಹರಕೆಯ ಪೂರೈಕೆ ಎನ್ನಬಹುದು)
ಅಲ್ಲಿ ಬ್ರಷ್ ಮತ್ತು ಹಣಿಗೆಯಾಕಾರದ ಸಂಕೇತಗಳು ಅಧಿಕವಾಗಿ ದೊರೆತಿವೆ. ಅವು ದೊರಕಿರುವ ಎಲ್ಲ ಸಂಕೇತಗಳ ಸಂಖ್ಯೆಯ  ಆರನೇಯ ಒಂದು ಭಾಗದಷ್ಟು ಇವೆ.ಅವು ಸಂಖ್ಯಾ ಸೂಚಕಗಳಾಗಿರಬಹುದು. ವಿದ್ವಾಂಸರ ಪ್ರಕಾರ  ದೊರೆತಿರುವ ಲಿಪಿಗಳ ಕಾಲುಭಾಗ ಮಡಕೆಯ ತಳ ಭಾಗದಲ್ಲಿರುವುದರಿಂದ ಅವು ಪವಿತ್ರ ಬರಹಗಳು ಅಲ್ಲ ಎಂಬ ಅಭಿಪ್ರಾಯವಿದೆ.. ವಿಂಕಾ ಸಂಸ್ಕೃತಿಯ ಕಾಲದಲ್ಲಿ ಅವರು ಇತರೆ ಸಂಸ್ಕೃತಿಯ ಜನರೊಡನೆ ವ್ಯಾಪಕ ವ್ಯಾಪಾರ ಸಂಬಂಧ ಹೊಂದಿದ್ದರು ( ಲಿಪಿಯುಕ್ತ ಮಡಕೆಗಳು ದೂರಪ್ರದೇಶದಲ್ಲಿ ದೊರೆತಿವೆ) ಆದ್ದರಿಂದ ಮಡಕೆಗಳ ಮೇಲಿನ ಬರಹವು ಮಡಕೆಯಲ್ಲಿರುವ ವಸ್ತುಗಳ ಸ್ವರೂಪ ಅಥವ ಸಂಖ್ಯೆಯ  ಸಂಕೇತಗಳಾಗಿರಬಹುದು.ಇತರೆ ಸಂಸ್ಕೃತಿಗಳಾದ  ಮಿನೋವನ್ನರು ಮತ್ತು ಸುಮೇರಿಯನ್ನರು ಲಿಪಿಗಳನ್ನು ಎಣಿಕೆಯ ಸಾಧನವಾಗ ಬಳಸಿರುವುದರಿಂದ ವಿಂಕಾ ಸಂಕೇತಗಳೂ ಅದೇ ಉದ್ದೇಶಕ್ಕೆ ಬಳಕೆಯಾಗಿರಬಹುದು.
ಇತರೆ ಸಂಕೇತಗಳು (  ಮಡಕೆಯ ತಳದಲ್ಲಿರುವವು)  ಅನನ್ಯವಾಗಿವೆ.. ಆ  ಸಂಕೇತಗಳು ಮಡಕೆಯಲ್ಲಿನ ವಸ್ತು, ಪ್ರದೇಶ/ತಲುಪಿಸಬೇಕಾದ ಸ್ಥಳ,, ಉತ್ಪಾದಕ / ಮಾಲಿಕನ ಮಾಹಿತಿ ಹೊಂದಿರಬಹುದು
ಮಾರಿಯ ಗಿಂಬುಟಸ್‌ (೧೯೨೪-೧೯೯೪) ಈ ಗುರುತಿಗಳು ಲಿಪಿಗಳೆಂದು ಹೇಳಿದ ಪ್ರಥಮ ೨೦ನೆಯ ಶತಮಾನದ ಪುರಾತತ್ವ ಕೋವಿದೆ. “ ಪ್ರಾಚೀನ ಯುರೋಪಿನ ಲಿಪಿ” ಎಂಬ ಪದವನ್ನು ಟಂಕಿಸಿದವಳು..ಮಧ್ಯ ಏಷಿಯಾದ ಕುರ‍್ಗಾನ್ ಸಂಸ್ಕೃತಿಯುಇಂಡೊ ಯುರೋಪಿಯನ್‌ ಆದಿ ಸಂಸ್ಕೃತಿಯ ಲಿಪಿ. ಅವಳು ತನ್ನ ಪುರಾತನ ಯುರೋಪಿನ ಮಾದರಿಯಲ್ಲಿವಿಂಕಾ ಗುರುತುಗಳನ್ನು ಅಳವಡಿಸಿಕೊಂಡವಳು. ಅವು ಪ್ರಾಚೀನ ಯುರೋಪಿನ ಭಾಷೆಯ  ಲಿಪಿ ಪದ್ದತಿಯಾಗಿರಬಹುದು ಅಥವ ಲಿಪಿಪೂರ್ವದ ಸಂಕೇತಗಳಾಗಿರ ಬಹುದು ಎಂಬ ಸಲಹೆ ಮಾಡಿದಳು. ಆದರೆ  ವಿಂಕಾ ಚಿತ್ರಲಿಪಿಗಳು ಆಗ್ನೇಯ ಹಂಗೆರಿ ದಕ್ಷಿಣ ರೊಮೆನಿಯಾ ಮತ್ತು ಪಶ್ಚಿಮ ಬಲ್ಗೇರಿಯಾಗಳನ್ನು ಹೊರತು ಪಡಿದಸಿ ಬೇರೆ ಕಡೆ ಕಂಡು ಬಂದಿಲ್ಲ.

ನ್ಯಾಷನ್‌ಮ್ಯೂಜಿಯಂ ಅಫ್ ಟ್ರಾನ್ಸವಾಲಿಯನ್‌ ಹಿಸ್ಟರಿಯ, ಪುರಾತತ್ವ ತಜ್ಞ  ನಿಕೊಲಾಯ ವ್ಲಾಸ್ಸಾ ನ ನೇತೃತ್ವದ ತಂಡ 1961  ರಲ್ಲಿ, ಮಾಡಿದ ಉತ್ಖನನದಲ್ಲಿ ಚಿತ್ರಗಳಿರುವ  ಮಣ್ಣಿನ ಫಲಕಗಳನ್ನು ಶೋಧಿಸಿದ. ಅವುಗಳನ್ನು ಸುಟ್ಟಿರಲಿಲ್ಲ.. ಅದರ ಜೊತೆ ಚಿಪ್ಪಿನ ಬಳೆ, ೨೬ ಮಣ್ಣಿನ ಮತ್ತು ಕಲ್ಲಿ  ಆಕೃತಿಗಳು, ವಯಸ್ಕ ಗಂಡಸಿನ ಸುಟ್ಟ , ಮುರಿದ ಮೂಳೆಗಳೂ ದೊರೆತವು. ಎರಡು ಫಲಕಗಳು ಆಯತಾಕಾರದಲ್ಲಿವೆ. ಮತ್ತು ಮೂರನೆಯದು ಗುಂಡಗಿದೆ.. ಅವು ಚಿಕ್ಕವು ದುಂಡಗಿರುವುದ ೬ ಸೆ,ಮೀ ವ್ಯಾಸವನ್ನು ಹೊಂದಿದೆ. ಅವುಗಳ ನಡುವೆ ರಂದ್ರವನ್ನು ಮಾಡಲಾಗಿದೆ. ಮೂರರ ಮೇಲೂ ಒಂದು ಭಾಗದಲ್ಲಿ ಸಂಕೇತಗಳನ್ನು ಬರೆಯಲಾಗಿದೆ. ರಂದ್ರವಿರದ ಆಯಾತಾಕಾರದ ಫಲಕದಲ್ಲಿ ಕೊಂಬಿರುವ ಪ್ರಾಣಿಯ ಚಿತ್ರವಿದೆ.ಮತ್ತು ಅಸ್ಪಷ್ಟ ಚಿತ್ರಣ ವಿದೆ..ಉಳಿದವುಗಳ ಮೇಲೆ ಅಮೂರ್ತವಾದಸಂಕೇತಗಳಿವೆ.ಈ ರೀತಿಸಮಾಧಿ ಮಾಡಿದ ಉದ್ದೇಶ ತಿಳಿಯದು. ಆದರೆ ಆ ದೇಹವು ಅರಸ  ಅಥವ ಅರ್ಚಕನಾಗಿರದಿದ್ದರೂ  ಗೌರವಾನ್ವಿತನೊಬ್ಬನ ದೇಹ ವಾಗಿರಬಹುದ ಎಂದು ಊಹಿಸಲಾಗಿದೆ.
 ಆ ಸಂಕೇತಗಳ ಅರ್ಥ  ಈ ವರೆಗೆ ತಿಳಿದಿಲ್ಲ. ಅವುಗಳ ಸ್ವರೂಪವೂ ವಿವಾದಕ್ಕೆ ಒಳಗಾಗಿದೆ. ವಸ್ತುಗಳ ಮೇಲೆ ಬರೆದ ಈ ಸಂಕೇತಗಳು ಲಿಪಿಗಳು ಎಂದು ಗುರುತಿಸಿದ ವಿದ್ವಾಂಸರು ತಮ್ಮ ತೀರ್ಮಾನ ತೆಗೆದುಕೊಳ್ಳುವಲ್ಲಿ ಪ್ರಪಂಚಾದ್ಯಂತ ಒಪ್ಪಿತವಾಗಿರುವ ವಿಧಾನಗಳನ್ನು ಅನುಸರಿಸಿಲ್ಲ. ಮೊದಲನೆಯದಾಗಿ ಇದೇ ರೀತಿಯ ಸಂಕೇತಗಳು ಡೆನ್ಯಬ್‌ನದಿ ತೀರದ ಇತರೆ ನಾಗರೀಕತೆಯ ಪ್ರದೇಶದಲ್ಲಿ ಕೂಡಾ ದೊರಕಿವೆ. ಅದರಿಂದ ನಿಗದಿತ ಆಕೃತಿಯ  ಈ ಪ್ರಾಚ್ಯ ವಸ್ತುಗಳ ಪಟ್ಟಿಯೇಇದ್ದು ಅವುಗಳನ್ನು ಲಿಪಿಕಾರರು  ಬಳಸಿದಂತೆ ಕಾಣುತ್ತದೆ. ಎರಡನೆಯದಾಗಿ ಸಂಕೇತಗಳು ಅಧಿಕ ಸಂಖ್ಯೆಯಲ್ಲಿ ಪ್ರಮಾಣೀಕೃತ  ಮತ್ತು ಸರಳರೇಖಾಕೃತಿಯು ಪುರಾತನ ಲಿಪಿ ಪದ್ದತಿಗಳನ್ನು ಹೋಲುತ್ತವೆ..ಮೂನೆಯದಾಗಿ ಪ್ರತಿ ವಸ್ತುವಿನ ಮೇಲಿರುವ ಸಂಕೇತ ನೀಡುವ ಮಾಹಿತಿಯು  ನಿರ್ಧಿಷ್ಟವಾಗಿದ್ದು  ನಿಗದಿತ ಅರ್ಥ ಕೊಡುವುದು
 ಲಿಪಿಗಳನ್ನು ಉದ್ದ ಸಾಲಿನಲ್ಲಿ, ಅಡ್ಡಸಾಲಿನಲ್ಲಿ ಅಥವ ವೃತ್ತಾಕಾರವಾಗಿ  ರಚಿಸಲಾಗಿದೆ.ಅದು ಲಿಪಿಯೇ ಆಗಿದ್ದಲ್ಲಿ ಯಾವ ರೀತಿಯ ಪದ್ದತಿಯನ್ನು ಪ್ರತಿನಿಧಿಸಿದೆ ಎನ್ನುವುದು  ತಿಳಿದಿಲ್ಲ. ಆದ್ದರಿಂದ ಸಂಕೇತಗಳು ಅತ್ಯಂತ ಪುರಾತನವಾದರೂ ಅವುಗಳು ಲಿಪಿ ಎಂಬುದಕ್ಕೆ ನಿಖರ ಪುರಾವೆಯ ಬೇಕಿದೆ.

ಆಧಾರ:- ಅಂತರ್‌ಜಾಲತಾಣಗಳು ಮತ್ತು ಷಾನ್‌ಎಂ. ಎಂ.  ಅವರ  ಲೇಖನ
..




No comments:

Post a Comment