Tuesday, July 16, 2013

- . - ಕಟ್ಟ ಕಡ ಕಟ್ಟ - ಕೊನೆಯಸಂದೇಶ

                                          ತಂತಿ ನಿಂತಿತು. 



ಸುಮಾರು ಒಂದೂವರೆ ಶತಮಾನ ಹಿಂದೆ ಸಂಪರ್ಕ ಮಾಧ್ಯಮದಲ್ಲಿ ಸಂಚಲನ ಉಂಟುಮಾಡಿ ರಾಷ್ಟ್ರ ರಾಷ್ಟ್ರಗಳನ್ನು ಹತ್ತಿರ ತಂದ, ಹಳ್ಳಿ ಹಳ್ಳಿಗಳನ್ನೂ ತಲುಪುತಿದ್ದ  ಟೆಲಿಗ್ರಾಫ್  ಎಂಬ   ಸಂಪರ್ಕ  ಸಾಧನ  ಭಾನುವಾರ ದಿನಾಂಕ ೧೪-೭-೨೦೧೩ ರಂದು ಹಂಸಗೀತೆ ಹಾಡಿತು. ಸಂವಹನ ಮತ್ತು ಸಂಪರ್ಕ ನಾಗರೀಕ ಜಗತ್ತಿನ  ಹೆಗ್ಗುರುತುಗಳು. ಮೊದಲಲ್ಲಿ  ಮಾನವನು ಸಂದೇಶಗಳನ್ನು ಕಳುಹಿಸಲು ಪಾರಿವಾಳಗಳನ್ನು ಬಳಸುತಿದ್ದನು. ಆಫ್ರಿಕಾದಲ್ಲಿ ಎತ್ತರದ ಸ್ಥಾನದಲ್ಲಿ ನಿಂತು ನಗಾರಿ ಬಾರಿಸಿ ಆ ಮೂಲಕ ಬಾರಿಸಿ ಸಂದೇಶ ಪ್ರಸಾರಮಾಡುತಿದ್ದರು.. ರಾತ್ರಿಯ ಹೊತ್ತು ಬೆಂಕಿಹಾಕಿ ದೊಂದಿಹಚ್ಚಿ  ಬೆಳಕಿನಮೂಲಕ  ಸಂದೇಶಗಳ ಸಾಗಣಿಕೆ ಯಾಗುತಿತ್ತು.  ಹಗಲಲ್ಲಿ ಹೊಗೆ ಹಾಕುವುದರಿಂದ ಸಂದೇಶ  ರವಾನೆಯಾಗುತ್ತಿತ್ತು. ಆದರೆ ಇವೆಲ್ಲಕ್ಕೂ ತಮ್ಮದೇ ಆದ  ಮಿತಿ ಇತ್ತು ಇವೆಲ್ಲಕ್ಕೂ ಮೀರಿದ ಸಂದೇಶವನ್ನು ವೇಗವಾಗಿ ಕಳುಹಿಸುವ ಸಾಧನವನ್ನು ಹುಡುಕುತ್ತಲೇಇದ್ದರು. ದೂತನೊಬ್ಬನು ಓಡುತ್ತಾ ನೂರಾರು ಮೈಲು ಕ್ರಮಿಸಿ ಸಂದೇಶ ತಲುಪಿಸಿ ಪ್ರಾಣ ಬಿಟ್ಟ ಘಟನೆಗಳು ಇತಿಹಾಸದಲ್ಲಿ ಇವೆ. ಕುದರೆ ಸವಾರರೂ ಸಂದೇಶವಾಹಕಕರಾಗಿ ಬಳಕೆಯಾಗುತಿದ್ದರು. ಯುರೋಪು ಮತ್ತು ಅಮೇರಿಕಾದಲ್ಲಿ ಕುದರೆಗಾಡಿಗಳೂ ಬಳಕೆಯಾಗಿದ್ದವು ದೂರದ ಸ್ಥಳಕ್ಕೆ ಹೋಗಲು ಅವುಗಳಿಗೆ ಒಂದು ಮಿತಿ ಇತ್ತು.  ಮಧ್ಯ ಮಧ್ಯ ವಿಶ್ರಾಂತಿ ಪಡೆದು ಸಾಗಬೇಕಿತ್ತು. ಹಾಗಾಗಿ  ಎಷ್ಟೇ ತುರ್ತು ಇದ್ದರೂ   ಸಂದೇಶ ತಲುಪಿಸಲು ಹಲವಾರು ದಿಗಳು ಹಿಡಿಯುತಿದ್ದವು. ಅದಕ್ಕೆಂದೇ ಹಿಂದಿನಕಾಲದಲ್ಲಿ ಭಾರತದಲ್ಲಿ ಕಾಶಿಯಾತ್ರೆಗ ಹೋಗುವವರುಮನೆ ನಡೆಸಲು ಸರ್ವ ವ್ಯವಸ್ಥೆ ಮಾಡಿ ಹೊಗುವರು. ಅವರು ಇರುವರೋ ಇಲ್ಲವೋ ಎಂಬ ಸುದ್ಧಿ ಸಹಾ ಸಿಗುತ್ತಿರಲಿಲ್ಲ. ಆರೇಳುತಿಂಗಳಾದ ಮೇಲೆ ತಿರುಗಿ ಬಂದರೆ ಊರಿಗೆ ಊರೇ ಸಂಭ್ರಮದಿಂದ ಅವರನ್ನುಸ್ವಾಗತಿಸಿ ಹಬ್ಬ ಮಾಡುತಿದ್ದರು ಈ ಎಲ್ಲ ಅಡಚಣೆಗಳಿಗೆ ಮಂಗಲ ಹಾಡಿದ ಮಹಾನ್‌ಅನ್ವೇಷಣೆ ಎಂದರೆ ಟೆಲಿಗ್ರಫಿ , . ಜನರ ಬಾಲ್ಲಿ ತಂತಿ ಅಥವ ತಾರು .
ಟೆಲಿಗ್ರಫಿ ಎಂದರೆ  ದೂರಬರಹ .ಸಂದೇಶದಲ್ಲಿ  ಭಾಷೆಯನ್ನು  ಸಂಕೇತಗಳಾಗಿ ಪರಿವರ್ತಿಸಿ ತಂತಿಯ  ಮೂಲಕ ಕಳುಹಿಸುವ ವಿಧಾನ.ಅದನ್ನು ಪಡೆಯುವವರು ಸಂಕೇತಗಳನ್ನು ಭಾಷೆಯಾಗಿ ಪರಿವರ್ತಿಸಿ ಸಂಬಂಧಿಸಿದವರಿಗೆ ತಲುಪಿಸುವರು..ವಿದ್ಯುತ್‌ ಅನ್ವೇಷಣೆಯಾದಾಗ  ದ್ವನಿತರಂಗಗಳನ್ನು ವಿದ್ಯುತ್‌ ತರಂಗಗಳಾಗಿ ತಂತಿಯ ಮೂಲಕ ಕಳುಹಿಸುವುದರಿಂದ ತಂತಿ ಎಂಬ ಹೆಸರು ಪ್ರಚಾರದಲ್ಲಿ ಬಂದಿತು.ಸುಮಾರು ಐವತ್ತು ವರ್ಷಗಳವರೆಗೆ ಅದೇ ಪದ್ದತಿ ಜಾರಿಯಲ್ಲಿದ್ದಿತು. ನಂತರ  ರೇಡಿಯೋಗ್ರಫಿ ಬಳಕೆಗೆ ಬಂದಿತು. ಅಂದರೆ ನಿಸ್ತಂತು ಸೇವೆ ಬಳಕೆಗೆ ಬಂದಿತುಅಂದರೆ ತಂತಿಇಲ್ಲದ ಎಸಂದೇಶ ರವಾನಿಸುವ ಪದ್ದತಿ.  ಮೊದಲಿನಂತೆ ಕಟ್‌ ಕಡ  ಕಡ ಕಟ್ಟ್ ಎಂದು ಕುಟ್ಟುತ್ತಾ ಕೂಡುವ ಅಗತ್ಯ ವಿರಲಿಲ್ಲ..ಆದರೆ ಈಗಿನನ ವಿದ್ಯುನ್ಮಾನ ಯುಗದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಯುಗದಲ್ಲಿ ಕ್ಷಣ  ಮಾತ್ರದಲ್ಲಿ ಸಂದೇಶವನ್ನು ಕಳುಹಿಸಬಹುದಾಗಿದೆ.

..ಅಮೇರಿಕಾದಲ್ಲಿ  ಸ್ಯಾಮ್ಯುಯಲ್ ಮೋರ್ಸ್‌ನು  ೧೧ ನೆಯ ಜನವರಿ ೧೮೩೮ ರಲ್ಲಿ  ಕಂಡು ಹಿಡಿದರೂ ಅದು ಪೂರ್ಣಪ್ರಮಾದಲ್ಲಿ ಬಳಕೆಗೆ ಬಂದದ್ದು ರ ಮೇ ೧೮೪೪ರಂದು.ವಾಷಿಂಗ್ಟನ್ನಿಂದ ಬಾಲ್ಟಿ ಮೋರ್‌ಗೆ ಮೊದಲ ಟೆಲಿಗ್ರಾಫಿಕ್‌ ಸಂದೇಶ ಹೋಯಿತು.ಅದು-  what hath God wrought ?  ಎಂದಾಗಿತ್ತು. ಆಗ ಎಲ್ಲವೂ ಕ್ಯಾಪಿಟಲ್‌ ಅಕ್ಷರಗಳಲ್ಲಿಯೇ ಇರುತಿದ್ದವು.  ಲೇಖನ ಚಿಹ್ನೆಗಳೇ  ಇರಲಿಲ್ಲ.ಎರಡೇವರ್ಷದಲ್ಲಿ
. ಅಮೇರಿಕಾದ  ಎಲ್ಲ ಭೂಭಾಗದಲ್ಲೂ ಅದನ್ನು ಅಳವಡಿಸಲಾಯಿತು. ಪೂರ್ವ ಮತ್ತು ಪಶ್ಚಿಮತೀರಗಳಿಗೂ ಸಂಪರ್ಕ ಬಂದಿತು. ಕುದುರೆ ಗಾಡಿ ಮೂಲಕ ಅಂಚೆ ಕಳುಹಿಸುವ ಪದ್ದತಿ ಕೊನೆ ಗೊಂಡಿತು ಆಗ ತುರ್ತು ಸಂದೇಶವೆಂದರೂ  ತಲುಪಲು  ಕನಿಷ್ಠ ೧೦ ದಿನ ಬೇಕಾಗುತಿತ್ತು  ಟೆಲಿಗ್ರಫಿ ಬಂದನಂತರ  ಕೆಲವೇ ನಿಮಿಷಗಳಲ್ಲಿ  ಸುದ್ಧಿ ತಲುಪುವಂತಾಯಿತು.ಇದರಿಂದ ಸರ್ಕಾರಕ್ಕ ಆಡಳಿತ ಮತ್ತು ಸೈನಿಕ ಚಟುವಟಿಕೆಯಮೆಲೆ ನಿಯಂತ್ರಣ ಬಂದಿತು
ಅದೂಅಲ್ಲದೆ ವ್ಯಾಪಾರ ವ್ಯವಹಾರಗಳಿಗೂ ಬಹಳ ಅನು ಕೂಲವಾಯಿತು.  ಹಿಂದೆ ಇದ್ದ ಪೋನಿ ಎಕ್ಷ ಪ್ರೆಸ್‌ ಪದ್ದತಿ ಕೊನೆ ಗೊಂಡಿತು. ಇದರ
ಅಮೇರಿಕಾ ಮತ್ತು ಯುರೋಪಿನ ಇಂಗ್ಲೆಂಡ್‌ ನಡುವೆ ಪ್ರಥಮ ತಂತಿ ಸಂಪರ್ಕವು  ೧೮೫೮ರಲ್ಲಿ ಆಯಿತು. ಇದು ಸಾಧ್ಯವಾದುದು ಅಟ್ಲಾಂಟಿಕ್‌ ಸಾಗರದ ಅಡಿಯಲ್ಲಿ ಕೇಬಲ್ ಹಾಕಿದ್ದರಿಂದ ಹಡಗಿನಲ್ಲಿ  ಹಲವು ದಿನದಲ್ಲಿ ತಲುಪಬಹುದಾದ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಕಳುಹಿಸಲು ಸಾಧ್ಯವಾಯಿತು, ಅದರಿಂದ
“ ಯುರೋಪ್‌ಮತ್ತು ಅಮೇರಿಕಾ ಟೆಲಿಗ್ರಫಿ ಯಿಂದ ಒಂದಾದವು”  ಎಂದು ಬ್ರಿಟಿಷ್‌ರಾಣಿ ಘೋಷಿಸಿದಳು
ತಂತಿ ಸೇವೆಯಿಂದ ಶಾಂತಿ ಮತ್ತು ಸುವ್ಯವಸ್ಥೆಗೆ ಬಹಳ ಶಕ್ತಿಯುತವಾಯಿತು. ಆ ಕಾಲದದಲ್ಲಿ ಯುರೋಪಿನ  ಪಾತಕಿಗಳು ಘೋರ ಅಪರಾಧ ಮಾಡಿ ಹಡಗಿನ ಮೂಲಕ ಅಮೇರಿಕಾಕ್ಕೆ ಹೋಗಿ ಬಿಡುತಿದ್ದರು ಅವರನ್ನು ಕಂಡು ಹಿಡಿಯಲು  ತಿಂಗಳುಗಳೇ ಬೇಕಾದ್ದರಿಂದ ತಪ್ಪಿಸಿಕೊಳ್ಳುವುದು ಸುಲಭವಾಗುತಿತ್ತು. ಆದರೆ ಮೊದಲಬಾರಿಗೆ ಪಾತಕಿಯೊಬ್ಬನು ಅಮೇರಿಕಾದಲ್ಲಿ ಹಡಗಿನಿಂದ ಇಳಿದ ತಕ್ಷಣ ಅವನನ್ನುಬಂಧಿಸಿದಾಗ ಅಚ್ಚರಿಯೊ ಅಚ್ಚರಿ ಕಾರಣ ಅವನ ಅಪರಾಧದ ಪೂರ್ಣ ವಿವರ ತಂತಿ ಸಂದೇಶದ ಮೂಲಕ ಅಮೇರಿಕಾಕ್ಕೆ ಅವನು ಬರುವ ಮೊದಲೇ ತಲುಪಿತ್ತು.
ಟೆಲಿಗ್ರಫಿಯ ನೇರ ಪರಿಣಾಮ ವಾರ್ತಾ ಪತ್ರಿಕೆಗಳ ಗುಣಮಟ್ಟದ ಮೇಲೆ ಆಯಿತು. ಈ ಮೊದಲು ನೈಸರ್ಗಿಕ ಅವಘಡಗಳು, ಯುದ್ಧ , ದಂಗೆ ಮೊದಲಾದವುಗಳನ್ನು ವರದಿಮಾಡಲು ವರದಿಗಾರರು ಖುದ್ದಾಗಿ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿಕೊಂಡು ಕಾರ್ಯಾಲಯಕ್ಕೆ ಬಂದು ಬರೆದು ನಂತರ ಪ್ರಕಟಿಸ ಬೇಕಿತ್ತು .  ಇಲ್ಲವೆ ಬರೆದುದನ್ನು ಹೇಗಾದರೂ ಮಾಡಿ ಕಚೇರಿಗೆ ಮುಟ್ಟಿಸಲು ಹರಸಹಾಸ ಪಡಬೇಕಿತ್ತು ಆದರೆ ಟೆಲಿಗ್ರಫಿ ಬಂದ ಮೇಲೆ  ಹತ್ತಿರದ ಟೆಲಿಗ್ರಾಫಿಕ್‌  ಕಚೇರಿಗೆ ಹೋಗಿ ನೂರಾರು ಮೈಲು ಏಕೆ ಸಾವಿರಾರು ಮೈಲು ದೂರದಿಂದಲೂ ಸುದ್ದಿ ರವಾನೆ ಮಾಡುವ ಸೌಲಭ್ಯ ದೊರೆಯಿತು.  .
ಭಾರತದಲ್ಲಿ ಮೊಟ್ಟ ಮೊದಲ ಸಂದೇಶವು ೧೮೫೦ ರಲ್ಲಿ ಭಾರತದಲ್ಲಿ ಬ್ರಿಟಿಷ್‌  ಸಾಮ್ರಾಜ್ಯದ ರಾಜಧಾನಿಯಾದ ಕಲಕತ್ತಾ ದಿಂದ ಡೈಮಂಡ್ ಹಾರ್ಬರ್‌ ರವಾನೆಯಾಗಿತ್ತು ಆಗ . ಭಾರತದ ಗೌರ್ನರ್‌ಆಗಿದ್ದ  ಲಾರ್ಡ ಡಾಲ್‌ಹೌಸಿಯು ಟೆಲಿಗ್ರಾಮ್‌ಗಳ  ಪ್ರಾಮುಖ್ಯತೆಯನ್ನು ಗಮನಿಸಿ  ಕಲಕತ್ತಾದ ಹತ್ತಿರ ೨೭ ಮೈಲು  ಸಂಪರ್ಕ ಒದಗಿಸಲು ಅನುಮತಿ ನೀಡಿದ . ಅದು ಕ್ರಮೇಣ ೧೮೫೬ ರ ಹೊತ್ತಿಗೆ ಬ್ರಿಟಿಷ್‌ ಆಡಳಿತವಿರುವ ಪ್ರದೇಶಗಳ  ಪ್ರಮುಖ ನಗರಗಳಾದ  ಕಲಕತ್ತಾ,  ಆಗ್ರಾ, ಬಾಂಬೆ,ಪೆಷಾವರ್‌ ಮತ್ತು ಮದ್ರಾಸ್‌ಗೆ ಸಂಪರ್ಕ ಕಲ್ಪಿಸಲಾಯಿತು ಈ ತಂತಿಜಾಲವು ಸುಮಾರು ೪೦೦೦ ಮೈಲು ಉದ್ದವಾಗಿತ್ತು.  .
ಅದೇ ತಂತಿ ಜಾಲವು ೧೮೮೧೦ರ ಹೊತ್ತಿಗೆ ಲಂಡನ್‌ ಯುರೋಪು ಮೊದಲಾದ ವುಗಳನ್ನು ಪ್ರಮುಖ ಸ್ಥಳ ಗಳನ್ನು ಜೋಡಿಸುವ   20000 ಮೈಲು ಉದ್ದ  ಸಂಪರ್ಕ ಜಾಲವವನ್ನುಹೊಂದಿತ್ತು.ಭಾರತದಲ್ಲಿ ಈಸ್ಟ ಇಂಡಿಯಾ ಕಂಪನಿಯವರು ತಂತಿ ಸೇವೆಯನ್ನು ಪ್ರಥಮವಾಗಿ ಉಪಯೋಗಿಸಿದ  ಹಿರಿಮೆ ಅವರದಾಯಿತು.. ಅದರ ಉಪಯುಕ್ತತೆಯನ್ನು ಗಮನಿಸಿದ ಅವರು ತಂತಿ ಸೇವಾ  ವ್ಯವಸ್ಥೆಯನ್ನುಭಾರತಾದ್ಯಂತ ವಿಸ್ತರಿಸಿದರು
ಅದರಿಂದ ಅವರ ಆಡಳಿತ ಮತ್ತು ಸೈನಿಕ ಕಾರ್ಯಗಳಿಗೆ  ತುಂಬ ಅನುಕೂಲವಾಯಿತು.ಆದಕ್ಕೆ ಅಂಚೆ ಮತ್ತು ತಂತಿಕಚೇರಿಗಳು ಪೂರ್ಣವಾಗಿ ಅವರ ಹತೋಟಿಯಲ್ಲಿದ್ದವು ..
 ಒಂದು ರೀತಿಯಲ್ಲಿ ೧೮೫೭ ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಬ್ರಿಟಿಷರ ಗೆಲುವಿಗೆ ಟೆಲಿಗ್ರಫಿಯೇ ಕಾರಣ.ಅದರಿಂದ  ಅವರಿಗೆ ದೇಶಾದ್ಯಂತದ ಪರಿಸ್ಥಿತಿಯನ್ನು ತಕ್ಷಣವೇತಂತಿಯ ಮೂಲಕ ತಿಳಿದುಕೊಂಡು ಸೂಕ್ತ ಕ್ರಮಕೈಗೊಳ್ಳು ಅವಕಾಸವಿರುತಿತ್ತು ಅದೇ ಸ್ವಾತಂತ್ರ್ಯ ಹೋರಾಟಗಾರರು ಸಂದೇಶಗಳನ್ನು ಗುಟ್ಟಾಗಿ ಕಳುಹಿಸಲು ವ್ಯಕ್ತಿಯೊಬ್ಬನ ಕೈನಲ್ಲಿನ ಬುತ್ತಿಯಲ್ಲಿ ಸಂದೇಶ ಅಡಗಿಸಿ ಕಳೂಹಿಸುತಿದ್ದರು ಅಂದ ಮೇಲೆ ಅವರ  ಮಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಯಾವಾಗ ಸೈನಿಕರು ದಂಗೆ ಎದ್ದರೋ ತಕ್ಷಣ ತಂತಿ ಸಂದೇಶವನ್ನು ಎಲ್ಲಕಡೆ ಕಳುಹಿಸಿ ಸೈನ್ಯ ಜಮಾವಣೆ ಮಾಡಿದರು ಇಂಗ್ಲೇಂಡಿಗೆ ಕಳುಹಿಸಿ ಅಲ್ಲಿಫ್ರೆಂಚರೊಡನೆ ಯುದ್ಧ ನಿರತರಾಗಿದ್ದ ಸೈನ್ಯವನ್ನು ಭಾರತಕ್ಕೆ ಕರಸಿಕೊಂಡರು.
ಕೆಲವೇ ವರ್ಷದ ಹಿಂದೆ ಸ್ಥಾಪಿಸಿದ ಈ ಸಂಪರ್ಕಜಾಲವು ಬ್ರಟಿಷರಿಗೆ ಸಿಪಾಯಿ ದಂಗೆ ಯನ್ನು ಹತ್ತಿಕ್ಕಲು ಬಹಳ ಸಹಾಯ ಮಾಡಿತು.ಭಾರತಾದ್ಯಂತ ವಿವಿಧ ಕಡೆಗಳಲ್ಲಿ ಬ್ರಿಟಿಷರ  ವಿರುದ್ಧ ಒಟ್ಟಿಗೆ ಹೋರಾಟ ನಡೆಸಿದರೂ ಆಂಗ್ಲರಿಗೆ ಇರುವ  ಅತ್ಯುತ್ಯತ್ತಮ ಸಂಪರ್ಕ ಜಾಲದಿಂದ ಸೈನ್ಯ ಜಮಾವಣೆಗೆ ಅವಕಾಶ ದೊರೆತು ಹೋರಾಟಗಾರರನ್ನು ಹಿಮ್ಮೆಟ್ಟಿಸಲಾಯಿತು. ಸ್ವಾತಂತ್ರ ಹೋರಾಟಗಾರರನ್ನು  ನೇಣಿಗೆ ಏರಿಸುವಾಗ ಅವರಲ್ಲಿ ಒಬ್ಬನಾಯಕನು  ಟೆಲಿಗ್ರಾಫಿಕ್‌  ಕಂಬಗಳನ್ನು ನೊಡಿ  “ ಈ ಪಾಪಿ ತಂತಿಗಳೇ ನಮ್ಮ ಕೊರಳಿಗೆ ಉರುಳಾದವು” ಎಂಬ ಅವನ  ಉದ್ಗಾರವು  ಸಂವಹನಶಕ್ತಿಯ ಪ್ರಾಮುಖ್ಯತೆಯ  ಪಾತ್ರವನ್ನು ಎತ್ತಿ ತೋರುತ್ತದೆ.
 ವಿಶೇಷವಾಗಿ ಇದು ಸಮುದ್ರಯಾನ ದಲ್ಲಿ ಹಡಗುಗಳಲ್ಲಿ ಬಹಳ ಅನುಕೂಲ ಒದಗಿದಸಿತು ಯಾವುದೇ ತೊಂದರೆ ಇದ್ದರೆ ಅವರು ಕಳುಹಿಸುವ S-O-S   •••---••• (SOS) ಎಂಬ ತಂತಿ ಸಂದೇಶವು ಸಹಸ್ರಾರು ಜನರ ಪ್ರಾಣಗಳನ್ನು ಕಾಪಾಡುವ ಮಂತ್ರವಾಯಿತು
.
ಒಂದು ರೀತಿಯಲ್ಲಿ ಟೆಲಿಗ್ರಾಫಿಕ್‌ ತಂತಿಗಳು ಬ್ರಿಟಿಷರ ಏಕಸ್ವಾಮ್ತತ್ವದ, ಅಧಿಕಾರದ  ಸಂಕೇತವೂ ಆಗಿದ್ದವು ಅದರಿಂದಲೇ ಕ್ರಾಂತಿ ಕಾರಿ ಸ್ವತಂತ್ರ್ಯ ಹೋರಾಟಗಾರರು ಟೆಲಗ್ರಾಫಿಕ್‌ ತಂತಿಗಳನ್ನು ಕಡಿದುಹಾಕುವುದು ಮತ್ತು ಸೈನ್ಯ ಸಾಗಣಿಕೆಗೆ ಸಹಾಯ ಮಾಡುತಿದ್ದ ರೈಲ್ವೇಸ್ಠೇಷನ್‌ಗಳನ್ನು ಸುಟ್ಟು ಹಾಕುವುದು ಪ್ರತಿಭಟನೆಯ ಅಂಗವಾಗಿ ಪರಿಗಣಿಸಿದ್ದರು ಕರ್ನಾಟಕದ ಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರಾದ ಹಳ್ಳಿಕೇರಿ ಗುದ್ಲೆಪ್ಪ ಮತ್ತು ಮೈಲಾರ ಮಹದೇವ ಇದೇ ಅಪಾದನೆಯ ಮೇಲೆ ಶಿಕ್ಷೆಗೆ ಗುರಿಯಾಗಿದ್ದರು.
ಗಾಂಧೀಜಿಯವರು ತಮ್ಮ ದಕ್ಷಿಣ ಆಫ್ರಿಕಾ ಹೋರಾಟದ ಸಮಯದಿಂದಲೆ ಬ್ರಿಟಿಷ್‌ಅದಿಕಾರಶಾಹಿಗೆ ಮೇಲಿಂದ ಮೇಲೆ ತಂತಿಯ ಮೂಲಕ ತಮ್ಮ ಪ್ರತಿಭಟನೆ  ಸೂಚಿಸುತಿದ್ದರು. ತಮ್ಮ ಸಂಗಾತಿಗಳೊಡನೆ ಸತತಸಂಪರ್ಕದಲ್ಲಿರಲು ತಂತಿಯ ಮೂಲಕವೇ ಮಾರ್ಗದರ್ಶನ ನೀಡಿ ಚಳುವಳಿಯನ್ನು  ಮುನ್ನೆಡೆಸುತಿದ್ದರು .ತಮ್ಮ ಹೋರಾಟದ ಮುನ್ಸೂಚನೆಯನ್ನು ತಂತಿ ಸಂದೇಶದ ಮೂಲಕ ಸರ್ಕಾರಕ್ಕೆ ತಿಳಿಸಿಯೇ ಹೋರಾಟ ಪ್ರಾರಂಭಿಸುತಿದ್ದರು.
ಸ್ವಾತ್ರ್ಯ ಬಂದನಂತರ ತಂತಿಕಚೇರಿಯ ವಿಸ್ತರಣೆ ಅಗಾದವಾಗಿತ್ತು ಅದು ಗರಿಷ್ಟ ಮಟ್ಟ ಮುಟ್ಟಿದುದು ೧೯೮೫ರಲ್ಲಿ. ಆಗ ೪೫,೦೦ ತಂತಿಕಚೇರಿಗಳಿದ್ದವು ಅವುಗಳ ಮೂಲಕ ಆವರ್ಷ  ೬ ಕೋಟಿ ಟೆಲಿಗ್ರಾಮ್‌ಗಳ ವಿತರಣೆ ಯಾಗಿತ್ತು.
.
ಸಾರಿಗೆ ಸೌಲಭ್ಯವಿಲ್ಲದ ಭಾರತದಲ್ಲಿ ತಂತಿ ಸೇವೆಯು ವರದಾನವಾಗಿ ಬಂದಿತು ಮೊದಲು ನಗರಗಳಿಗೆ ಮಾತ್ರ ಇದ್ದ ಸಂಪರ್ಕವು ಬರಬರುತ್ತಾ ಪಟ್ಟಣ ಮತ್ತು ಹಳ್ಳಿಗಳಿಗೂ ವಿಸ್ತರಿಸಿತು ಇದು ಅಂವೆ ಸೇವೆಯ ಭಾಗವಾಗಿದ್ದುದರಿಂದ ಎಲ್ಲಿ ಅಂಚೆ ಕಚೇರಿಗಳಿವೆಯೋ ಅಲ್ಲಿ ತಂತಿಸೌಲಭ್ಯವೂ ಸಿಗುತಿತ್ತು ಅಂಚೆಕಚೇರಿಗೆ ಬಂದ ತಂತಿ ಸಂದೇಶವನ್ನು ಸಂದೇಶವಾಹಕರು ಸೈಕಲ್‌ಮೇಲೆ ಹೋಗಿ ಸಂಬಂಧಪಟ್ಟವರಿಗೆ ತಲುಪಿಸುತಿದ್ದರು. ಬರಿ ಸರ್ಕಾರದ ಕೆಲಸಕ್ಕೆ ಬಳಕೆಯಾಗುತಿದ್ದ ತಂತಿಸೇವೆ ಸಾಮಾನ್ಯರ ಸೇವೆಗೂ ಲಭ್ಯವಾಯಿತು ಆದರೂ ಬಹಳ ಕಾಲದ ತನಕ ತಂತಿ ಬಂದಿತೆಂದರೆ ಅದು ಸಾವಿನ ಸುದ್ದಿ ಎಂದೇ ತಿಳಿದುಕೊಂಡು ಗಾಬರಿಯಾಗುತಿದ್ದರು
.
ಈಗ ಹಲವಾರು ಟಿ.ವಿ ಚಾನಲ್‌ಗಳು24x7  ಎಂದು ಹೆಮ್ಮೆಯಿಂದಹೇಳಿಕೊಂಡು ಕೆಲಸ ಮಾಡುತ್ತಿವೆ. ಆದರೆ ಬಹಳ ಮೂಚೆಯೇ ಹಗಲು ಮತ್ತು ತಡ ರಾತ್ರಿಯವರೆಗೆ ಕಟ್‌ಕಟಕ ಕಟ್‌ ಎಂದು ಶಬ್ದ ಮಾಡುತಿದ್ದು ಎಂದರೆ ತಂತಿಕಚೇರಿ ಮಾತ್ರ.. ನೀರವರಾತ್ರಿಯಲ್ಲಿಯು ದರ ಶಬ್ದ ಕಟ್ಟಡದ ಆಸು ಪಾಸಿನಲ್ಲಿ ಕೇಳಬಹುದಾಗಿತ್ತು
ಭಾರತದಲ್ಲಿ ಬ್ರಿಟಷರು ಅದನ್ನು ಸ್ತಾಪಿಸಿದುದು ತಮ್ಮ ಆಡಳಿತ ಮತ್ತುಸೈನಿಕ ಕಾರಣಗಳಿಗಾಗಿ. ಆದರೆ ಅದು ಸ್ವಾತಂತ್ರ್ಯ ಹೋರಾಟದ ಚಾಲಕ ಶಕ್ತಿಯಾಗಿಯು ಕೆಲಸ ಮಾಡಿತು
ಟೆಲಿಗ್ರಾಫಿಕ್  ಇಂಗ್ಲಿಷ್ ಎಂಬುದು ಒಂದು  ವಿಶೇಷ ರೀತಿಯ  ಇಂಗ್ಲಿಷ್‌ ಬರಹ. ಅದರಲ್ಲಿ ನಾಮಪದ ಮತ್ತು ಕ್ರಿಯಾಪದಗಳು ಮಾತ್ರ ಇರುತ್ತವೆ. ಇಂಗ್ಲಿಷ್‌ನ  helping verb, adjective , adverb article preposion ಗಳಿಗೆ ಪ್ರಾಮುಖ್ಯತೆ ಇಲ್ಲ. ಕಾರಣ ಪ್ರತಿ ಪದಕ್ಕೂ ನಿಗದಿತ ಮೊತ್ತದ ಹಣ ಕೊಡಬೇಕು ಆದ್ದರಿಂದ ಕಡಿಮೆ ಪದಗಳಲ್ಲಿ ಹೆಚ್ಚು ಮಾಹಿತಿ ಕೊಡಲುಪ್ರಯತ್ನಿಸುವರು.ಇದನ್ನು ಅಡಕ  ಬರಹ ಎನ್ನಬಹುದು. ಮೊದಲುಇಂಗ್ಲಿಷ್‌ನಲ್ಲಿ ಮಾತ್ರ ಸಂದೇಶ ಇರಬೇಕಿತ್ತುಬ ಆದರೆ ನಂತರ ಲಿಪ್ಯಾಂತರ ಮಾಡಿದರೆ ಸಾಕಿತ್ತು ವಿಶೇಷ ಸಂದರ್ಭ ಲ್ಲಿ ಆಯ್ದ ಶುಭಾಶಯಗಳಿಗೆ ನಿಗದಿತ ಸಂಖ್ಯೆಬರೆದರೆ ಸಾಕಿತ್ತು ಮತ್ತು ಒಂದೆ ವಿಷಯವನ್ನು ಅನೇಕರಿಗೆ ಪ್ರತಿಹಾಕಿದರೆ ರಿಯಾತಿಯ  ಸೌಲಭ್ಯವೂ ಇತ್ತು.  
 ಜೊತೆಗೆ ರಿಪ್ಲೈ ಪೇಡ್‌  ತಂತಿ ಕಳುಹಿಸುವ ಸೌಲಭ್ಯವಿತ್ತು.  ನ್ಯಾಯಾಲಯದಲ್ಲಿ ತಂತಿಯನ್ನು ಸಾಕ್ಷಿವಾಗಿ ಪರಿಗಣಿಸುವ ಅವಕಾಶವೂಇತ್ತು.
ಅತಿ ಚಿಕ್ಕ ಸಂದೇಶ ಕಳುಹಿಸಿದ ಹಿರಿಮೆ ಇಂಗ್ಲಿಷ್‌ಲೇಖಕ ಅಸ್ಕರ್‌ವೈಲ್ಡ್‌ನದು. ಅವನ ಹೊಸ ಪುಸ್ತ ಒಂದು ಇಂಗ್ಲೆಂಡಿನಲ್ಲಿ ಪ್ರಕಟವಾದಾಗ ಅವನು ಪ್ಯಾರಿಸ್‌ನಲ್ಲಿದ್ದ. ಅದರ ಮಾರಾಟ ಹೇಗಿದೆ ಎಂದು ತಿಳಿಯಲು ಪ್ರಕಾಶರಿಗೆ ಕಳುಹಿಸಿದ ತಂತಿಯಲ್ಲ್ಲಿ  ?   ಚಿಹ್ನೆ ಮಾತ್ರ ಇತ್ತು.ಅವನಿಗೆ ಬಂದ ಉತ್ತರವೂ ಅಷ್ಟೇ ಚಿಕ್ಕದಾಗಿತ್ತು. ಅದರಲ್ಲಿಯೂ  !   ಗುರುತ ಮಾತ್ರ ಇತ್ತು . ಅತ್ಯಂತ ದೊಡ್ಡ ಸಂದೇಶವನ್ನು ಕಳುಹಿಸಿರುವುದು  ಜವಹರ್‌ಲಾಲ್‌ನೆಹರೂ ಅವರು. ೧೯೪೭ ರಲ್ಲಿ ಬ್ರಿಟಿಷ್‌ ಪ್ರಧಾನಿ ಕ್ಲೆಮೆಂಟ್‌ ಆಟ್ಲಿ ಯವರಿಗೆ ೧೬೩ ಪದದ ಸಂದೇಶ ಕಳುಹಿಸಿದ್ದರು.
ಮೊಬೈಲ್‌ಫೋನುಗಳ ಸಂಖ್ಯೆಯು ಕಳೆದ ದಶಕದಲ್ಲಿ ಸ್ಪೋಟಕವಾಗಿ ಹೆಚ್ಚಿದೆ,ಅದು ಒಂದುರೀತಿಯಲ್ಲಿ ಸಂಪರ್ಕಕ್ರಾಂತಿಯನ್ನು ತಂದಿದೆ. ಎಸ್ ಎಂಎಸ್ ಅಂತೂ ತಂತಿ ಸಂದೇಶಕ್ಕೆ ಮಾರಣಾಂತಿಕ ಹೊಡೆತ ನೀಡಿತು. ಅದರ ಫಲವಾಗಿ ನೂರು ಕೋಟಿ ಇದ್ದವ್ಯವಹಾರ ೭೦ ಲಕ್ಷ ಕ್ಕೆ ಇಳಿಯಿತು. ಅನಿವಾರ್ಯವಾಗಿ ಮಹಾ ಸೇವೆಯೊಂದಕ್ಕೆ ಮಂಗಳ ಹಾಡ ಬೇಕಾಯಿತು


No comments:

Post a Comment