Wednesday, September 18, 2013

ಕರ್ನಾಟಕ ಇತಿಹಾಸ ಅಕಾದಮಿಯ 27ನೆಯ ಸಮ್ಮೇಳನ-ಸರ್ವಾಧ್ಯಕ್ಷರು

appaaji @gmail.com







ಪುರಾತತ್ತ್ವ ಪರಿಣಿತ- ಡಾ.ಎಸ್‌ಕೆ. ಜೋಷಿ
ನಮ್ಮಲ್ಲಿ ಲಭ್ಯವಿರುವ ಶಾಸನ , ಸ್ಮಾರಕ, ನಾಣ್ಯ, ಹಸ್ತಪ್ರತಿ,ಐತಿಹ್ಯಗಳ ಸಾಹಿತ್ಯ ಮೊದಲಾದ ಆಕರಗಳ ಅಧ್ಯಯನ ಮಾಡಿ , ವಿಶ್ಲೇಷಿಸಿ  ಗತಕಾಲದ ಚರಿತ್ರೆಯನ್ನು  ಪುನರ್‌ ರಚಿಸುವವರು ಇತಿಹಾಸಕಾರರಾದರೆ, ಕಾಲನ ಕಾಲ್ತುಳಿತಕ್ಕೆ ಸಿಕ್ಕು ಪ್ರಾಕೃತಿಕ ಪ್ರಕೋಪ, ಶತೃಗಳ ದಾಳಿ,ನಿರ್ಲಕ್ಷ್ಯಗಳ ಕಾರಣದಿಂದ ಮಣ್ಣಲ್ಲಿ ಮರೆಯಾಗಿರುವ ಅವಶೇಷಗಳನ್ನು ಉತ್ಖನನ ಮಾಡಿ ಐತಿಹಾಸಿಕ ಆಕರಗಳನ್ನು ಹೊರತೆಗೆದು ಸಂರಕ್ಷಿಸಿ ಅರ್ಥೈಸುವುದು ಪುರಾತತ್ತ್ವವಿದರ ಕರ್ತವ್ಯ. ಅದಕ್ಕೆ ಬಿಸಿಲು, ನೆರಳು, ಗಾಳಿ ಮಳೆ ಎನ್ನದೆ ಪಾಳು ಬಿದ್ದ ಆಜ್ಞಾತ ಸ್ಥಳಗಳಲ್ಲಿ ನೆಲದೊಳಗಿನ ರಚನೆ ಮುಕ್ಕಾಗದಂತೆ,ಸಾಮಗ್ರಿಗಳು ಹಾಳಾಗದಂತೆ, ಮಡಕೆಯ ಚೂರಾದರೂ  ಸರಿ ಅದು ಮುರಿಯದಂತೆ  ಎಚ್ಚರಿಕೆಯಿಂದ ಭೂಶೋಧನೆ ಮಾಡಿ ಇತಿಹಾಸದ ಆಕರಗಳನ್ನು ಅರಸಿ ಅವುಗಳ ಕಾಲವನ್ನು ವಿವಿಧ ವಿಧಾನಗಳಿಂದ ನಿಗದಿ ಪಡಿಸಿ ನಂತರ ಅವನ್ನು ಸುರಕ್ಷಿತವಾಗಿ ಸಂರಕ್ಷಿಸುವ  ಹೊಣೆ  ಪುರಾತತ್ತ್ವ ಪರಿಣಿತರದು. ಈಗಂತೂ ನೆಲದಾಳದ ಸಂಶೋಧನೆಯ ಜೊತೆಗೆ ಜಲದಾಳದ ಸಂಶೋಧನೆಯೂ ಪ್ರಾಮುಖ್ಯತೆ ಪಡೆದಿದೆ.  ಈ  ಕೆಲಸವನ್ನು  ಶತಮಾನಗಳಿಂದಲೂ ಎ.ಎಸ್‌ಐ ಮಾಡುತ್ತಿದೆ.ಅದರ ಪರಿಶ್ರಮದ ಪರಿಣಾಮವಾಗಿ ಭಾರತದ ಬಹಳಷ್ಟು ಸ್ಮಾರಕಗಳು ವಿಶ್ವಪರಂಪರೆಯ ತಾಣಗಳಾಗಿ ಗುರುತಿಸಲ್ಪಟ್ಟಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಪ್ರಾರಂಭವಾದ ಈ ಕಾರ್ಯದಿಂದ ಕ್ರಿ. ಪೂ.  ಎರಡು ಸಹಸ್ರಮಾನಗಳಿಗೂ ಹಿಂದಿನ  ಸಿಂದೂ ಕಣಿವೆ ಸಂಸ್ಕೃತಿ ಬೆಳಕಿಗೆ ಬಂದಿತು. ವಿಶ್ವ ವಿಖ್ಯಾತ ಪುರಾತತ್ತ್ವಜ್ಞರ ಪರಂಪರೆಯನ್ನು ಮುಂದುವರಿಸದವರಲ್ಲಿ ಕೂಡಾ. ಕೆ. ಎಸ್ ಜೋಷಿ ಒಬ್ಬರು
ಡಾ.ಎಸ್‌ .ಕೆ.ಜೋಷಿಯವರ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣಾಜಿ  ಜೋಷಿ. ಅವರು ಬೆಳಗಾವಿ ಜಿಲ್ಲೆಯ ಹಿಡ್ಕಲ್‌ನಲ್ಲಿ.  ೧೯-೬ ೧೯೩೬ ರಲ್ಲಿ ಜನಿಸಿದರು.. ಅವರ ತಂದೆ ಕೃಷ್ಣಾಜಿ ಕೇಶವ ಜೋಷಿ.  ಅವರು ಹೈಸ್ಕೂಲ ಶಿಕ್ಷಕಕರು. ತಾಯಿ ಪದ್ಮಾವತಿ .  ಬಾಲಕ ಶ್ರೀನಿವಾಸನೆಂದರೆ ಅವರ ತಾತನಿಗೆ ಅಚ್ಚು ಮೆಚ್ಚು.ಅವರು ಹೋದಲ್ಲಿಗೆಲ್ಲ ಬಾಲದಂತೆ ಹಿಂಬಾಲಿಸುವರು.ಅವರ ತಾತ ಸಂಸ್ಕೃತ ಪಂಡಿತರು ಧರ್ಮಶ್ರದ್ಧೆ ಉಳ್ಳವರು ಅದರಿಂದ ಅವರೊಡನೆ ಬಾಲ್ಯದಲ್ಲಿ ಗುಡಿ ಗುಂಡಾರ, ಜಾತ್ರೆ ಉತ್ಸವಗಳಿಗೆ ತಪ್ಪದೆ ಹಾಜರ್‌. ಪ್ರಾಚೀನ ಪರಂಪರೆಯ ಅಂಗಗಳಾದ ಪುರಾಣ , ಹರಿಕಥೆಗಳು ಕಿವಿಗೆ ಬೀಳುತಿದ್ದವು  ಹಬ್ಬ ಹುಣ್ಣಿಮೆ, ನೀತಿ,ನಂಬಿಕೆ, ಆಚರಣೆಗಳು ಅವರನ್ನು ಆಕರ್ಷಿಸುತಿದ್ದವು. ಪರಿಣಾಮವಾಗಿ ಅವರಿಗೆ ಪರಂಪರೆ ಮತ್ತು ಇತಿಹಾಸದ ಬಗ್ಗೆ  ಒಲವು ಮೂಡಿತು.
ಶ್ರೀನಿವಾಸರ . ಪ್ರಾಥಮಿಕ ಶಿಕ್ಷಣದಲ್ಲಿ .  ಹಿಡ್ಕಲ್‌ನಲ್ಲಿ  ಆಯಿತು. ಹೈಸ್ಕೂಲು ಶಿಕ್ಷಣ ಪಡೆದದ್ದು ಜಮಖಂಡಿಯ ಪರಶುರಾಮ ಬಾವು ಪಟವರ್ಧನ ಶಾಲೆಯಲ್ಲಿ. ಅದು ಬಹು ಪ್ರಖ್ಯಾತ ಸಂಸ್ಥೆ. ಅಲ್ಲಿಯೇ ಡಾ. ಮಹದೇವ ರಾನಡೆಯವರೂ ಓದಿದ್ದರು. ಪ್ರತಿವರ್ಷ  ಎಸ್‌ಎಸ್ ಸಿ ವಿದ್ಯಾಥಿಗಳನ್ನು ಗುರುದೇವ ರಾನಡೆಯವರು ಅಧ್ಯಯನ ಮಾಡಿದ ಕೋಣೆಯಲ್ಲಿಯೇ ಕೂಡಿಸಿ ಪಾಠ ಮಾಡುತಿದ್ದರು.  ಅವರ ಪ್ರಬಾವ ತುಸುವಾದರೂ ಮಕ್ಕಳ ಮೇಲಾಗಲಿ ಎಂಬುದು ಗುರಗಳ ಸದಾಶಯ..ಆ ಶಾಲೆಯ ಇನ್ನೊಂದು ವಿಶೇಷವೆಂದರೆ ಅಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ ಪೂನಾದ ಪಟವರ್ಧನ್‌ ಎಸ್‌ಪಿ ಕಾಲೇಜಿನಲ್ಲಿ ಉಚಿತ ಶಿಕ್ಷಣ ದೊರೆಯುತಿತ್ತು.  ಜೋಷಿಯವರು ಇಂಟರ್‌ಮಿಡಿಯಟ್‌ಅನ್ನು ಅಲ್ಲಿಯೇ ಮುಗಿಸಿದರು  ನಂತರದ ಶಿಕ್ಷಣ ಧಾರವಾಡದಲ್ಲಿ. ಪ್ರಾಚೀನ ಭಾರತ  ಪುರಾತ್ತತ್ವ ವಿಷಯದಲ್ಲಿ ಸ್ನಾತಕ ಪದವಿ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.ಹಾಗೂ ಪಿಎಚ್‌ಡಿ ಪದವಿಯನ್ನು ಧಾರವಾಡದಲ್ಲೇ ಪಡೆದರು ಅವರ “ ಪಿ. ಎಚ್‌ಡಿ ಸಂಪ್ರಬಂಧವು “ಡಿಫೆನ್ಸ ಆರ್ಕಿಟೆಕ್ಟರ್‌ ಇನ್ ಅರ್ಲಿ ಕರ್ನಾಟಕ “ಜಗತ್ತಿನ ನಾನಾ ವಿಶ್ವ ವಿದ್ಯಾಲಯಗಳಲ್ಲಿ ಆಕರ ಗ್ರಂಥವೆಂದು ಪರಿಗಣಿತ ವಾಗಿದೆ.
ಅವರಿಗೆ ವೃತ್ತಿಪ್ರವೇಶವಾದುದು ಔರಂಗಾಬಾದ್‌ನ ಪುರಾತತ್ತತ್ವ ಇಲಾಖೆಯಲ್ಲಿ ಸಹಾಕ ಅನ್ವೇಷಕನೆಂದು ೧೯೫೭ ರಲ್ಲಿ ನೇಮಕವಾಯಿತು.ಇತಿಹಾಸ ಪರಿಣಿತರಿಗೆ ಇದ್ದ ಆಕರಗಳ ಆಳವಾದ ಅಧ್ಯಯನ, ಹಲವುಭಾಷೆಗಳ ಪ್ರಾವೀಣ್ಯತೆ ಅಗತ್ಯ. ಆದರೆ ಪುರಾತತ್ತ್ವವಿದರಿಗೆ ಹತ್ತು ಹಲವು ರಂಗದಲ್ಲಿ ಪರಿಣತೆ ಬೇಕು ಉತ್ಖನನಮಡುವಲ್ಲಿ ವಾತಾವರಣದ ತೀವ್ರತೆ ಸಹಿಸುವ ದೈಹಿಕಕ್ಷಮತೆಯ ಜೊತೆಗೆ  ತಿಂಗಳುಗಟ್ಟಲೇ ಜನಸಂಪರ್ಕದಿಂದ ದೂರವಾಗಿ ಸಂಸಾರ ಸುಖ ತೊರೆದು , ಕಾರ್ಯತತ್ಪರರಾಗುವ ಬದ್ದತೆ ಬೇಕು. ಅದಕ್ಕೆಂದೇ ಇಲಾಖೆಯೇ ವಿಶೇಷ ತರಬೇತಿ ಕೊಡುವುದು. ಸ್ನಾತಕೋತ್ತರ ಡಿಪ್ಲೊಮಾ ಪಡೆದದ್ದು ಅವರ ವೃತ್ತಿ ಜೀವನದ ಮೈಲಿಗಲ್ಲು. ಏಷಿಯಾದ ಖ್ಯಾತಿವೆತ್ತ  ದೆಹಲಿಯ ಇನಸ್ಟಿಸ್ಟ್ಯೂಟ್ ಅಅಫ್‌ ಆರ್ಕಿಯಾಲಜಿ” ಯಲ್ಲಿ ಅವರಿಗೆ ತರಬೇತಿ ದೊರೆಯಿತು. .ಅಲ್ಲಿ ಅವರ ಗುರುವೃಂದ ಅಖಿಲಭಾರತೀಯ ಖ್ಯಾತಿವೆತ್ತ ಪುರಾತತ್ತ್ವವಿದರು , ಇತಿಹಾಸಕಾರರು ಆ\ಪ್ರೊ. ನೂರಲ್‌ ಹಸನ್‌ “ ಇಸ್ಲಾಂ ವಸ್ತುಶಿಲ್ಪದಲ್ಲಿ, ಭಾರತೀಯತೆ”,  ಪ್ರೊ. ನಿಹರ್‌ರಂಜನ್‌ರೇ ಅವರಿಂದ “ ರಾಮಾಯಣ ಮಹಾಭಾರತಗಳು ಮಿಥ್‌ಗಳೋ ವಾಸ್ತವವೋ?” ಡಾ.. ರೊಮಿಲ್ಲಾ ಥಾಪರ್‌,ಅವರ  “ ಗುಪ್ತಗಾಮಿನಿ ಸರಸ್ವತಿ, “” ,  ಪ್ರೊ. ಎಚ್‌.ಡಿ. ಸಂಕಾಲಿಯಾ ಅವರು ”ಇಂಡೋ ಪಾಕ್‌ಗಳ ಪ್ರಾಗೈತಿಹಾಸ” ,   ,ಡಾ. ಶಿ. ಶಿವರಾಮ ಮೂರ್ತಿಯವರಿಂದ “ ಭಾರತದ ಪ್ರತಿಮಾಶಾಸ್ತ್ರ,  ಪ್ರೊ. ಎಂ ಎನ್‌ ದೇಶಪಾಂಡೆಯವರಿಂದ  “ ಅಜಂತಾ ಎಲ್ಲೋರಾ ಗುಹಾಂತರ್ದೇವಾಲಯಗಳು” ,   ಡಾ. ಎಸ್‌.ಆರ್‌. ರಾವ್ ರಿಂದ ಸಿಂಧೂ ಸಂಸ್ಕೃತಿ ಲಿಪಿ,”  , ಡಾ. ಅ ಸುಂದರ  ಅವರಿಂದ ದಕ್ಷಿಣ ಭಾರತದ ಬೃಹದ್‌ ಶಿಲಾಯುಗದ ಸಂಸ್ಕೃತಿ” , ಪ್ರೊ.. ಶ್ರೀನಿವಾಸ ರಿತ್ತಿ , ಡಾ ಗಾಯಿ ಮತ್ತು , ಡಾ. ಕೆ.ವಿ. ರಮೇಶ್‌ ಅವರಿಂದ ಭಾರತ ಶಾಸನ ಶಾಸ್ತ್ರ”  ಮೊದಲಾದ ವಿಷಯದಲ್ಲಿ ತಜ್ಞರು ಮಾರ್ಗದರ್ಶನ  ಮಾಡಿದರು.
ಈ ಎಲ್ಲವಿದ್ವಾಂಸರಿಂದ ಕಲಿತುದುದು  ಅಪರಂಪಾರ.  ಅವರ ಬೋಧನೆಯ ಬರಿ ಪುಸ್ತಕದ ಬದನೆ ಕಾಯಿಯಾಗದೇ, ಅವುಗಳನ್ನು ಜೀರ್ಣಸಿಕೊಂಡು ವ್ಯವಸ್ಥಿತ ಸಂಪ್ರಬಂಧಗಳನ್ನು ರಚಿಸಬೇಕಿತ್ತು. ಮಾನವನ ಉತ್ಕ್ರಾಂತಿ ಬದುಕಿನಿಂದ ಹಿಡಿದು ಆಧುನಿಕ ನಾಗರೀಕತೆಯವರೆಗೆ ಅವುಗಳ ಹರಿವು.ಪುರಾತತ್ತ್ವ ರಂಗಪ್ರವೇಶ ಮಾಡಿ ಕ್ಷೇತ್ರಕಾರ್ಯಕ್ಕೆ ತೊಡಗುವ  ಮುನ್ನ ಪ್ರಿ ಹಿಸ್ಟರಿ, ಪ್ರೊಟೊ ಹಿಸ್ಟರಿ,ಪ್ರಾಚೀನ, ಮಧ್ಯ ಯುಗೀನ ಆದುನಿಕ  ವಾಸ್ತುಶಿಲ್ಪ, ಅನ್ವೇಷನೆ, ಉತ್ಖನನ,ಲಿಪಿ ಶಾಸ್ತ್ರ, ನಾಣ್ಯ ಶಾಸ್ತ್ರ, ಮೂರ್ತಿ ಶಿಲ್ಪಸ್ಮಾರಕಗಳ ಸಂರಕ್ಷಣೆ,, ಮ್ಯೂಜಿಯಂ ವಿಧಾನಗಳು,ಕೆಮಿಕಲ್‌ ಟ್ರೀಟ್‌ಮೆಂಟ್ ಅಫ್‌ ಪೇಂಟಿಂಗ್ಸ್‌,ಮಾಡಲಿಂಗ್‌,ಗಾರ್ಡನಿಂಗ್‌,ಸಾಂ ಸ್ಕೃತಿಕ ಅಧ್ಯಯನ, ಅಂತರ್‌ ಧರ್ಮೀಯ ಅಧ್ಯಯನ, ಸಂಗಿತ, ಭಾರತೀಯ ಶಾಸ್ತ್ರೀಯ ನೃತ್ಯ ಮೊದಲಾದ ಅನೇಕ ವಿಷಯಗಳಲ್ಲಿ  ಪ್ರವೇಶ ದೊರಕಿಸಿದವು. ಅವುಗಳ ಆಳವಾದ ಅಧ್ಯಯನವೇ ಪುರಾತತ್ತ್ವವಿದನ ಐತಿಹಾಸಿಕ ಜ್ಞಾನದ ಮೂಲನೆಲೆಗಳು.ಅವೇ ಮುಂದೆ ಇತಿಹಾಸ ರಚನೆಗೆ ಭದ್ರ ಬುನಾದಿ ಹಾಕಿಕೊಟ್ಟವು.

ಈ ಪುರಾತ್ತ್ವದ ಮೂಲಸೆಲೆಗಳ ಸ್ಥೂ ಲ ಪರಿಚಯದ ನಂತರವೇ ಕ್ಷೇತ್ರ ಕಾರ್ಯ ಪ್ರಾರಂಭ. ಅಲ್ಲಿಂದ ಮೊದಲಾಯಿತು  ಡಾ. ಜೋಷಿಯವರ ಎರಡು ದಶಕಗಳ ಉತ್ಖನನ ಯಾತ್ರೆ. ಎಸ್‌.ಆರ್‌.ರಾವ್‌ ಅವರ ಮುನ್ನೋಟದಿಂದಾಗಿ ಈಗ ಸಾಗರ ತಳದ ಸಂಶೋಧನೆಯ ಅವಕಾಶ ದೊರಕಿ ಸಂಶೋದಕರಿಗೆ ಹೊಸ ಸಾಧ್ಯತೆಯ ಸವಾಲು ಎಸೆದಿದೆ. ಇದೆಲ್ಲವನ್ನೂ ಅರಿತ ಜೋಷಿಯವರು ಎ. ಎಸ್‌ಐ ಸೇರಿದರು.. ಸಾಹಸದ ಸವಾಲು ಎದುರಿಸಲು ಸಿದ್ದರಾಗಿದ್ದ ಅವರಿಗೆ ಕ್ಷೇತ್ರ ಕಾರ್ಯ ಕಠಿನ ಎನಿಸಲಿಲ್ಲ. ಆದರೆ೧೯೬೫ ಮದುವೆಯಾಯಿತು. ಶ್ರೀಮತಿ ಸಿಮಾ ಮನೆತುಂಬಿದರು. ಅವರಿಗೆ ಗಂಡನ ಅಲೆಮಾರಿ ಜೀವನ ಅರ್ಥವಾಯಿತು.ತಿಂಗಳುಗಟ್ಟಲೇ ಕ್ಷೇತ್ರಕಾರ್ಯಕ್ಕೆ ದೂರದ ಪ್ರದೇಶಗಳಿಗೆ ಹೋಗುವ ,ಸಂಪರ್ಕಕ್ಕಕ್ಕೆ ಸಿಗಲು ವಾರಗಳೇ ಬೇಕಾಗುವ ಕಾಲವದು . ಫೊನು ಮೊಬೈಲು, ಕಂಪ್ಯೂಟರ್‌ಗಳು ಇರದ ಕಾಲ.. ಆದರೆ ಶ್ರೀ ಮತಿ  ಶೀಮಾ ಧೃತಿಗೆಡಲಿಲ ಮಗುವಾಗು ತನಕ ಗಂಡನೊಡನೆ ತಿರುಗಿದರೂ . ಮಕ್ಕಳಾದ ಮೇಲೆ ಧಾರವಾಡದಲ್ಲಿ ನೆಲೆನಿಂತರು . ಪತಿ ಎಲ್ಲಿಗೆ ಹೋದರೂ ಮನೆ ಮಾತ್ರ ಒಂದು ಕಡೆ. ಅವರುಅನುಕೂಲವಾದಾಗ ಬಂದು ಹೋಗುವರು ಮಗ ದಿಲೀಪ ಮತ್ತು ಮಗಲು ಎಲ್‌ಕೆಜಿ ಯಿಂದ ಸ್ನಾತಕೋತ್ತರ ಅಧ್ಯಯನ ಮುಗಿಸುವವರೆಗೂ ತಾಯಿಯದೇ ಹೊಣೆ. ಅದನ್ನುಯಶಸ್ವಿಯಾಗಿ ನಿಭಾಯಿಸದ್ದೇ  ನಾನು ವೃತ್ತಿ ಬದುಕಿನಲ್ಲಿ ತೃಪ್ತಿ ಕಾಣಲು ಕಾರಣವಾಯಿತು”, ಎಂದು. ಡಾ.ಜೋಷಿ  ಮಡದಿಯ ಕಾರ್ಯಕ್ಷಮತೆ, ಮತ್ತು ಸಹಕಾರ ದಿಂದಾಗಿಯೇ ಮಗ ಮತ್ತು ಮಗಳುಜೀವನದಲ್ಲಿ ರೂಪಿತವಾಯಿತು  ಎಂದು ಮನದುಂಬಿ ಹೇಳಿದರು.
ಪ್ರಾಗೈತಿಹಸಿಕ ಕಾಲದಿಂದ ಹಿಡಿದು ಮಧ್ಯಯುಗೀನ ಇತಿಹಾಸದವರೆಗೂ ಹರಡಿದ ೩೦ ತಾಣಗಳ ಉತ್ಖನನದಲ್ಲಿ ಭಾಗಿಯಾಗಿದ್ದಾರೆ.  ಹರಿಯಾಣದ ಗುಪ್ತಗಾಮಿನಿ ಸರಸ್ವತಿ ತೀರದ ಭಗವಾನಪುರ,ಉತ್ತರ ಪ್ರದೇಶದಲ್ಲಿ ಕನಿಷ್ಕರ ತಾಣ ವಾಗಿದ್ದ ಮಥುರಾ,  ಮಹಾಭಾರತದ ಇಂದ್ರ ಪ್ರಸ್ತ ,ಕರ್ನಾಟಕದ ಹಂಪಿಯಲ್ಲಿ ಹಜಾರಾಮ ದೇವಸ್ಥಾನದ ಹತ್ತಿರದ ದಣ್ಣಾಯಕನ ವಸತಿ ಸಮುಚ್ಚಯದ, ಸನ್ನತಿಯ ಬೌದ್ಧ ಧರ್ಮದ ಸ್ತೂಪಗಳ ಶೋಧ,ಗೋವಾದಲ್ಲಿ ೧೬-೧೭ನೆ ಶತಮಾನದಲ್ಲಿ ಉಛ್ರಾಯ ಸ್ಥಿತಿಯಲ್ಲಿದ್ದು ನಂತರ ಕ್ಯಾಥೊಲಿಕ್‌ ಮತ್ತು ಆಗಸ್ಟೀನ್‌ ಕ್ರಿಶ್ಚಿಯನ್‌ ಒಳ ಪಂಗಡಗಳ್ಲ ಸಂಘರ್ಷಕ್ಕೆ ಬಲಿಯಾದ ಸಂತ ಅಗಸ್ಟೀನ್‌ಚರ್ಚ್‌ ಅವಶೇಷಗಳ ತಾಣದ ಭೂಶೋಧ ಗೋವಾದ  ಸೆಂಟ್‌ ಆಗಸ್ಟೀನ ಚರ್ಚು ಕ್ರಿಶ್ಚಿಯನ್‌ರ ಅಂತರ್‌ ಕಲಹದಿಂದ ಹಾಳು ಬಿದ್ದು ಹೋಗಿತ್ತು. ಅಲ್ಲಿರುವ ಚರ್ಚು, ಕಾನ್ವೆಂಟ್‌ ,ವಸತಿ ಗೃಹಗಳು ಆಳರಸರ ಅವಕೃಪೆಯಿಂದ ಮಣ್ಣಿನಲ್ಲಿ ಹೂತು ಹೋಗಿ ಆ ಬೃಹತ್‌ರಚನೆಯು ಚಿಕ್ಕ ಬೆಟ್ಟದೋಪಾದಿಯಲ್ಲಿದ್ದಿತು ಅದರ ಮೇಲೆ ಗಿಡಗಂಟೆ,  ಪೊದೆ ಬೆಳೆದಿದ್ದವು. ವಿಶ್ವ ಪರಂಪರೆಯ ತಾಣವಾದ ಮೇಲೆ ಡಾ. ಜೋಷಿಯವರು ಸತತ ಏಳುವರ್ಷಗಳ ಕಾಲ  ಉತ್ಖನನದಲ್ಲಿ ಭಾಗವಹಿಸಿ  ಅದರ ಅವಶೇಷಗಳನ್ನು ಶೋಧಿಸಿದರು.ವಾಸ್ಕೋದ ತೀರದಲ್ಲಿ ೧೯ನೆಯ ಶತಮಾನದಲ್ಲಿ ಮುಳುಗಿದ್ದ ನೌಕೆಯ ಅವಶೇಷಗಳ ಅನ್ವೇಷಣೆಯನ್ನು ಡಾ.ಎಸ್‌.ಆರ್‌.ರಾವ್‌ ಅವರ ನೇತೃತ್ವದಲ್ಲಿ ಮಾಡಿ ಸಾಗರ ತಳ ಉತ್ಖನನದ ಅನುಭವ ಪಡೆದರು. ಡಾ. ದೇಶಪಾಂಡೆ ಮಹಾನಿರ್ದೇಶಕರಾಗಿದ್ದಾಗ ಆಫ್ಘನಿಸ್ಥಾನದಲ್ಲಿ ಬೌದ್ಧ ಸ್ಮಾರಕಗಳ ಸಂರಕ್ಷಣೆಯ ಕಾರ್ಯಕ್ಕೆ ನಿಯೋಜಿತರಾದರು ಆಫ್ಘನಿಸ್ಥಾನದಬಾಮಿಯಾನ್‌ನಲ್ಲಿ ಪ್ರಪಂಚದಲ್ಲೇ ಬೃಹತ್ತಾದ ಬುದ್ದನ ಪ್ರಾಚೀನ ಪ್ರತಿಮೆಯ ಸಂರಕ್ಷಣೆಯ ಕೆಲಸದಲ್ಲಿ ಭಾಗಿಗಳಾಗಿ ಅದನ್ನು .ಸುಸ್ಥಿತಿಗೆ ತಂದರು. ಆದರೆ ಬುದ್ದನ ಪ್ರತಿಮೆಯನ್ನ ವಿಗ್ರಹ ಭಂಜಕರಾದ ತಾಲಿಬಾನಿಗಳು ಪಿರಂಗಿಯಿಂದ ಹೊಡೆದು ನಾಶ ಮಾಡಿದ್ದು ಸಾಂಸ್ಕೃತಿಕ ಪ್ರಪಂಚದಲ್ಲಿನ ದುರಂತ. ಈಗ ಮತ್ತೆ ಅದರ ಪುನರುತ್ಥಾನಕ್ಕೆ ಆಫ್ಘನಿಘನಿಸ್ತಾನದ ಹೊಸ ಸರ್ಕಾರವು ಭಾರತದ ನೆರವು ಕೇಳಿದರೂ ಅದು ಮೊದಲಿನಂತೆ ಸರಿಯಾಗುವ ಅವಕಾಶ ಬಹು ಕಡಿಮೆ.
ಡಾ.ಜೊಷಿಯವರು ೧೪ ಸಂಶೋದನಾತ್ಮಕ ಗ್ರಂಥಗಳನ್ನು ರಚಿಸಿದ್ದಾರೆ. ಅವು ಮೌಲ್ಯಯುತ ಆಕರಗ್ರಂಥಗಳಾಗಿವೆ ಅವರಿಂದ  450 ಕ್ಕೂ ಅಧಿಕ ಸಂಶೋಧನಾ ಲೇಖನಗಳು ಪ್ರಕಟವಾಗಿವೆ
ಪುರಾತತ್ತ್ವ ವಿಷಯದ ಮೇಲೆ ರೇಡಿಯೋ ಮತ್ತು ದೂರರ್ಶನದಲ್ಲಿ 50 ಕ್ಕೂ ಅಧಿಕ ಭಾಷಣ ಮತ್ತು ಸಂದರ್ಶನ ನೀಡಿರುವರು.ಹಲವಾರು ವಿಶ್ವ ವಿದ್ಯಾಲಯಗಳ ಪಿಎಚ್‌ಡಿ ಪ್ರಬಂಧಕ್ಕೆ ಪರೀಕ್ಷಕರಾಗಿ  ಕೆಲಸ ಮಾಡಿರುವರು.
gÁdå ºÁUÀÆ gÁµÀÖçªÀÄlÖzÀ ¸ÀªÉÄäüÀ£ÀUÀ¼À°è UÉÆö×AiÀÄ CzsÀåPÀëgÁV, ¥Àæ§AzsÀUÀ¼À£ÀÄß ªÀÄAr¹zÁÝgÉ. ºÀ®ªÁgÀÄ ªÀĺÀ¤ÃAiÀÄgÀ C©ü£ÀAzÀ£Á UÀæAxÀUÀ¼À ¸ÀA¥ÁzÀPÀ ¥ÀæzsÁ£À ¸ÀA¥ÁzÀPÀgÁVAiÀÄÆ PÉ®¸À ªÀiÁrರುವರು, EArAiÀÄ£ï »¸ÀÖj PÁAUÉæ¸ï, J¦UÁæ¦üPÀ¯ï ¸ÉƸÉÊn D¥sï EArAiÀiÁ, ASI D¦üøÀ¸ïð C¸ÉÆùAiÉÄñÀ£ï D¥sï EArAiÀiÁ, PÀ£ÁðlPÀ EwºÁ¸À CPÁzÉ«Ä, yAiÀiÁ¸ÉÆæüPÀ¯ï ¸ÉƸÉÊn D¥sï EArAiÀiÁ, PÀ£ÀßqÀ ¸Á»vÀå ¥ÀjµÀvÀÄÛ, PÀ£ÁðlPÀ «zÁåªÀzsÀð£À ¸ÀAWÀ, ¸ÉÊ£ïì CPÁzÉ«Ä, ¦æëÄAiÀÄgï-gÉÆÃlj ¥ÉÆæç¸ï EAlgï £ÁåµÀ£À¯ï EvÁå¢ ¸ÁªÀiÁfPÀ ¸ÀA¸ÉÜUÀ¼À, ¸ÀzÀ¸ÀågÁV ¸ÀzÁ PÁAiÀÄð ¤gÀvÀgÁVzÁÝgÉ. ಹೀಗೆ ಹಲವು ಹತ್ತು ಸಂಸ್ಥೆಗಳಲ್‌ಇ ಸಕ್ರಿಯವಾಗಿ ಸೇವೆ ಸಲ್ಲಿಸಿ ಸಂಘಟನಾಸಾಮರ್ಥ್ಯ ಮೆರೆದಿದ್ದಾರೆ.  ಇತಿಹಾಸ ಮತ್ತು ಪುರಾತತ್ತ್ವವಿಷಯದ ಆಳವಾದ ಜ್ಞಾನ, ತರ್ಕ ಬದ್ಧ ವಾಗ್ಝರಿ, ಅಸ್ಖಲಿತ ಭಾಷೆ , £Ár£À »jAiÀÄ ¥ÀÄgÁvÀvÀé«zÀgÀ°è £ÁªÀĪÉvÀÛ ªÀåQÛ, eÉÆvÉUÉ DAiÀiÁ PÉëÃvÀæUÀ¼À°è ºÉ¸ÀgÀÄ UÀ½¹zÀ K²AiÀiÁzÀ ±ÉæõÀ×gÀ (out standing persons in Asia) ¥ÀnÖPÉAiÀÄ°è ¸ÁÜ£À UÀ½¹ರುವqÁ. eÉÆò (1936)ಎ.ಎಸ್‌ಐ ನಲ್ಲಿ¢üÃPÀëPÀ ¸ÀºÁAiÀÄPÀgÁV ¤ªÀÈwÛAiÀiÁzÀgÀÄ.
ನಯ ವಿನಯಗಳಿಂದ ಕೂಡಿದ ನಡೆ,  ಮೃದು ಮಧುರ ನುಡಿ ಹಲವು ಶಿಸ್ತು ಮತ್ತು ಅಚ್ಚುಕಟ್ಟಾದ ಉಡುಪು,ಆಕರ್ಷಕ ವ್ಯಕ್ತಿತ್ವದಿಂದಾಗಿ  ಜಗತ್ತಿನ ಹಲವು ರಾಷ್ಟ್ರಗಳ  ಪ್ರಮುಖರು ಭಾರತಕ್ಕೆ ಬಂದಾಗ   ಐತಿಹಾಸಿಕ ತಾಣಗಳನ್ನು ಅವರಿಗೆ  ಪರಿಚಯಿಸುವ ಕೆಲಸದ ಹೊಣೆ ಇವರದೇ ಆಗಿತ್ತು . ಹೀಗಾಗಿ ವಿದೇಶಿ ಗಣ್ಯರಿಗೆ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮನವರಿಕೆ ಮಾಡಿ  ಸದಭಿಪ್ರಾಯ ಮೂಡಲು ಕಾರಣರಾದರು.
ಅವರ ಪ್ರಕಟಿತ ಕೃತಿಗಳು: ಪುರಾತತ್ತ್ವ ಇತಿಹಾಸ, ಕರ್ನಾಟಕದ ಕೋಟೆ ಕೊತ್ತಳಗಳು, ಇಂದ್ರಜಾಲದಿ ಕಲ್ಲು ಕುಸುರಿತು, ಕಾಲಿಕಾದರ್ಶನ,ಗಾಯತ್ರಿ ಅಂತರ್ಯ,ಗೋವೆಯ ಸಾಂಸ್ಕೃತಿಕ  ಅಧ್ಯಯನ, ಗೋವೆಯ ಕೋಟೆಗಳು.
ಇವರ ಕಾರ್ಯ ಗುರುತಿಸಿ ಅನೇಕ ಸಂð ಸಂಸ್ಥೆಗಳುಪ್ರಶ್ತಿ ಪ್ರದಾನ ಮಾಡಿವೆ.ಅವುಗಳಲ್ಲಿಪ್ರಮುಖವಾದವು  ¥Àæ±À¹ÛUÀ¼ÀÄ:
1.           ²æë±ÀéPÀªÀÄð «PÁ¸À ¸ÀA¸ÉÜ - ¸ÀvÀå±ÉÆÃzsÀPÀ ¥Àæ±À¹Û
2.           1982-83, ²gÀ¸ÀAVÃvÀ ²æà PÁ½PÁ ¸ÀA¸ÁÜ£ÀªÀiï ¥Àæ±À¹Û
3.           2000 qÁ. §¸ÀªÀgÁd ªÀÄ£ÀÆìgï PÀ.gÁ. PÀ¯Á¸ÀA¸ÉÜ zsÁgÀªÁqÀ ¥ÀÄgÁvÀvÀé gÀvÀß ¥Àæ±À¹Û.
4.           2009 - ºÀħâ½î C.PÀ. «±ÀéPÀªÀÄð ªÀĺÁ¸À¨sÉ ¨ÉAUÀ¼ÀÆgÀÄ EwºÁ¸ÀPÁÌV «±ÀéPÀªÀÄð ¥Àæ±À¹Û.
5.           ¨sÁgÀvÀ ¸ÀgÀPÁgÀ, ¸ÀA¸ÀÌøw E¯ÁSɬÄAzÀ (Ministry of Culture), £ÀÆå ¢°è (Out standing work in Archaeology, Exvn. in Goa)UÁV a£ÀßzÀ ¥ÀzÀPÀ.
6.           PÀ£ÁðlPÀ gÁdå «±ÀéPÀªÀÄð «PÁ¸À ¥ÀæwµÁ×£À, ¨ÉAUÀ¼ÀÆgÀÄ ªÀw¬ÄAzÀ UÀtå ¥ÀÄgÁvÀvÀé«zÀ ¥Àæ±À¹Û ºÁUÀÆ a£ÀßzÀ ¥ÀzÀPÀ.

ಕರ್ನಾಟಕ ಇತಿಹಾಸ ಅಕಾದಮಿಯು ಬೆಂಗಳೂರಿನಲ್ಲಿ ಸೆಪ್ಟಂಬರ್‌ನಲ್ಲಿ  ನಡೆಯುವ ಮೂರುದಿನದ ೨೭ನೆಯ ವಾರ್ಷಿಕ ಸಮ್ಮೇಳನಕ್ಕೆ ಸರ್ವಾದ್ಯಕ್ಷರನ್ನಾಗಿಸಿ ಗೌರವಿಸಿದೆ.





No comments:

Post a Comment