Saturday, September 21, 2013

ಕರ್ನಾಟಕ ಇತಿಹಾಸ ಅಕಾದಮಿ ೨೭ನೆಯ ಸಮ್ಮೇಳನ- ಉದ್ಘಾಟನೆ

ಕರ್ನಾಟಕ ಇತಿಹಾಸ ಅಕಾದಮಿ ಬೆಂಗಳೂರು  ದಿಮಿಥಿಕ್‌ ಸೊಸೈಟಿ ,ಬೆಂಗಳೂರು ಮತ್ತು  ಕರ್ನಾಟಕ   ಪ್ರಾಚ್ಯವಸ್ತು, ಸಂಗ್ರಹಾಲಯಗಳು  ಮತ್ತು ಪರಂಪರೆ ಇಲಾಖೆ, ಮೈಸೂರು ಸಹಯೋಗದಲ್ಲಿ ಅಕಾಶದಮಿಯ ಮೂರುದಿನದ ೨೭ನೆಯ ವಾರ್ಷಿಕ ಸಮ್ಮೇಳನ  ಮಿಥಿಕ್‌ ಸೊಟಿಯಲ್ಲಿ  ದಿನಾಂಕ ೨೧-೯=೨೦೧೩ , ಶನಿವಾರ ಬೆಳಗ್ಗೆ  ೧೦  ಗಂಟೆಗೆ ಉದ್ಘಾಟನೆಯಾಯಿತು

.ಅಕಾದಮಿಯ ಅಧ್ಯಕ್ಷ ಡಾ. ದೇವರ ಕೊಂಡಾರೆಡ್ಡಿಯವರು ಪ್ರಸ್ತಾವಿಕ ಭಾಷಣ ಮಾಡಿ ಇತಿಹಾಸ ಅಕಾದಮಿಯು ನಡೆದ ಬಂದ ದಾರಿಯನ್ನು ವಿವರಿಸಿದರು. ಇತಿಹಾಸ ಪರಂಪರೆಯ ಜಾಗೃತಿಗಾಗಿ ಇ.ಮೇಲ್‌, ಬ್ಲಾಗ್‌ ಮತ್ತು ವೆಬ್‌ಸೈಟಗಳ ಸೂಕ್ತ ಬಳಕೆಗೆ ಕರೆ ಕೊಟ್ಟರು.ಮೂರು  ದಿನಗಳಲ್ಲಿ ೨೧ ವಿದ್ವತ್‌ಗೋಷ್ಠಿ ನಡೆದು ಅದರಲ್ಲಿ  ಸುಮಾರು ೧೭೫ ಸಂಪ್ರಬಂಧಗಳ ಮಂಡನೆಯಾಗಿ ಅವುಗಳನ್ನು ಮುಂದಿನವರ್ಷದ ಸಮ್ಮೇಳನದಲ್ಲಿ ಪುಸ್ತಕ ರೂಪದಲ್ಲಿ ಬರುವುದೆಂದು ತಿಳಿಸಿದರು.


ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಶ್ರೀ . ಬಿ.ಎಸ್ ಸತ್ಯನಾರಾಯಣ,ಸಮ್ಮೇಳನದ ಉದ್ಘಾಟನೆ ಮಾಡಿ  ., ಕರ್ನಾಟಕದರ್ಶನ ಸಂಚಿಕೆ ಬಿಡುಗಡೆಮಾಡಿ  ತಾವು ಈ ಹಂತಕ್ಕೆ ಬರಲು  ಕಾರಣರಾದ ಗೋಕಾಕ ಚಳುವಳಿ ಮತ್ತು ಡಾ. ಚಿದಾನಂದಮೂರ್ತಿಯವರನ್ನು ನೆನೆದರು.ಅಕಾದಮಿಯ ಕೆಲಸಕ್ಕೆ ನಗರ ಪಾಲಿಕೆಯ ಸಹಕಾರದ ಭರವಸೆ ನೀಡಿದರು . ಸರ್ವಾಧ್ಯಕ್ಷ ರಿಗೆ ಸನ್ಮಾನ ಮಾಡಲಾಯಿತು.

  ಒಂದುಲಕ್ಷ ರೂಪಾಯಿ ಮೌಲ್ಯದ. ಬಿ.ಆರ್‌.ಅರ್‌ ಫ್ಯಾಮಿಲ ಟ್ರಸ್ಟ್‌ ನವರ “ಇತಿಹಾಸ ಸಂಸ್ಕೃತಿ ಶ್ರೀ”  ಪ್ರಶಸ್ತಿಯನ್ನುಘೋಷಿಸಿ ಡಾ. ಕಾಮತ್‌ ಅವರ ಅನಾರೋಗ್ಯದ ನಿಮಿತ್ತ ಅವರ ಮನೆಯಲ್ಲಿಯೇ ಪ್ರದಾನ ಮಾಡುವುದಾಗಿ ತಿಳಿಸಲಾಯಿತು.   ಬಾ ರಾ. ಗೋಪಾಲ ಪ್ರಶಸ್ತಿಯನ್ನು ಡಾ. ಶೇಷಶಾಸ್ತ್ರಿಗಳಿಗೆ ನೀಡಿ ಗೌರವಿಸಲಾಯಿತು, ಅವರು ಪ್ರಶಸ್ತಿಸ್ವೀಕರಿಸಿ ತಮ್ಮ ಹಿರಿಯ ಸಹೋದ್ಯೋಗಿಯ  ಹೆಸರಿನ ಪ್ರಶಸ್ತಿ  ಬಂದುದಕ್ಕೆ ಸಂತಸ ವ್ಯಕ್ತಪಡಿಸಿದರು. ನಿಕಟ ಫೂರ್ವ ಸರ್ವಾಧ್ಯಕ್ಷ ಡಾ. ಎಸ್‌ ವಿ ವೆಂಕಟೇಶಯ್ಯನವರಿಂದ ಶ್ರೀಮತಿ ಸೀತಾರಾವ್‌ ರೂಪಿಸಿದ ವೆಬ್‌ಸೈಟ್‌ ಅನ್ನು ಉದ್ಘಾಟಿಸಲಾಯಿತು

 ಡಾ.ವಸಂತಲಕ್ಷ್ಮಿಯವರು ಬರೆದ ಡಾ. ಸೂರ್ಯನಾಥ. ಯು. ಕಾಮತ್‌ ಕುರಿತ ಪುಸ್ತಕವನ್ನು.ಮಿಥಿಕ್‌ ಸೊಸೈಟಿಯ ಅಧ್ಯಕ್ಷರಾದ ಶ್ರೀ. ಎಂ. ಕೆ. ಎಸ್‌. ಎಲ್‌.ಎನ್‌.ಶಾಸ್ತ್ರಿಗಳು ಲೋಕಾರ್ಪಣೆ ಮಾಡಿ  ಈ ಸಾಲಿನ ಪಿ.ಎಚ್‌ಡಿ ಪದವಿಧರರಿಗೆ ಸನ್ಮಾನ ಮಾಡಿದರು , ಸರ್ವಾಧ್ಯಕ್ಷ  ಡಾ.ಎಸ್‌.ಕೆ. ಜೋಷಿ , ಪುರಾತತ್ತ್ವಕಾರ್ಯದ ಮಹತ್ವ ವಿವರಿಸುತ್ತಾ ಇತಿಹಾಸವನ್ನು ಸಾಮಾನ್ಯ ಜನರಿಗೆ ಮುಟ್ಟಿಸಲು ಸರಳ ಭಾಷೆಯ  ಅಗತ್ಯವನ್ನು  ಒತ್ತಿ ಹೇಳಿದರು.ಪುರಾತತ್ತ್ವ ಇಲಾಖೆಯ ಉನ್ನತ ಹುದ್ದೆಗೆ ಪರಿಣಿತರೇ ಇರಬೇಕು    ಐ.ಎ.ಎಸ್‌ ಅಧಿಕಾರಿಗಳಿಗೆ ಅದರ ಮಹತ್ವ ಅರಿವಾಗದು ಎಂದುಅಭಿಪ್ರಾಯಪಟ್ಟರು. ಕೋಟೆಗಳ ಸಂರಕ್ಷಣೆಗೆ ವಿಶೇಷ ವಿಭಾಗ  ಇರಬೇಕೆಂದರು. .


  ಮಿಥಿಕ್‌  ಸೊಸೈಟಿ ಕಾರ್ಯದರ್ಶಿ ಶ್ರೀ. ವಿ ನಾಗರಾಜ ಸ್ವಾಗತಿಸಿದರು ಅಕಾದಮಿ  ಕಾರ್ಯದರ್ಶಿ ಜಿ.ಕೆ ದೇವರಾಜಸ್ವಾಮಿ ವಂದನಾರ್ಪಣೆ ಮಾಡಿದರು

No comments:

Post a Comment