Sunday, March 3, 2013

ರೊಜೆಟ್ಟಾ ಶಿಲೆ






\




                                                                                                                  
                                                      
 ಈಜಿಪ್ಟ್ ಸಂಸ್ಕೃತಿಯ ಕೀಲಿಕೈ -ರೊಜೆಟ್ಟಾ ಶಿಲೆ


ನೈಲ್‌ನದಿ ನಾಗರೀಕತೆಯು ಪುರಾತನ ನಾಗರಿಕತೆಗಳಲ್ಲಿ  ಒಂದು.  ಆ ಅವಧಿಯಲ್ಲಿನ ಪ್ರಾಚೀನ ಈಜಿಪ್ಟಿನ ಲಿಪಿಗಳು ಬೃಹತ್‌ ಪ್ರಮಾಣದಲ್ಲಿ ದೊರೆತಿವೆ.  ಕ್ರಿ..ಪೂ.ಅವಧಿಯ ಅನೇಕ  ಬರಹಗಳು ಬಂಡೆಗಳ ಮೇಲೆ, ದೇವಾಲಯದ ಗೋಡೆಗಳಮೇಲೆ, .ಪಿರಮಿಡ್ಡುಗಳ ಒಳಗೆ, ಪೆಪ್ರಸ್‌ ಸುರಳಿಗಳಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬಂದರೂ ಅವುಗಳನ್ನು ಅರ್ಥೈಸುವುದು 19ನೆಯ ಶತಮಾನದ ಪ್ರಾಂಭದವರೆಗೆ ಆಗಿರಲಿಲ್ಲ. ಸಂಕೇತಗಳ, ಚಿತ್ರಲಿಪಿಗಳ ನಿಗೂಢತೆಯನ್ನು ಬಿಡಿಸುವುದು ಕಗ್ಗಂಟಾಗಿತ್ತು.ಅವುಗಳ ರಹಸ್ಯದ ಬಾಗಿಲಿನ ಬೀಗ ತೆಗೆಯುವ ಕೀಲಿಕೈ ದೊರೆತಿರಲಿಲ್ಲ. ರೊಜೆಟ್ಟಾ ಶಾಸನವು ದೊರೆತ ಮೇಲೆ ಅದು ಸರಳವಾಗಿ ತೆರೆದುಕೊಂಡಿತು.
 ,ರೊಜೆಟ್ಟಾ ಶಿಲೆಯು ಕ್ರಿ.ಪೂ. 1799.ರಲ್ಲಿ ದೊರೆಯಿತು. ನೆಪೋಲಿಯನ್ನನ ಫ್ರೆಂಚ್‌ಸೈನಿಕರುಈಜಿಪ್ಟಿನ ಮೇಲೆ  ಜಯಗಳಿಸಿದ್ದರು ಅವರು ಇಜಿಪ್ಟ್‌  ಪುನರ್‌ನಿರ್ಮಾಣಮಾಡುತಿದ್ದರು. ಅವರು ಈಜಿಪ್ಟಿನ ನೈನೈಲ್‌ನದಿ ಬಯಲಿನಲ್ಲಿ ಜೂಲಿಯಾನ್‌ ಎಂಬ ಕೋಟೆಯನ್ನು ಪುನರ್‌ನಿರ್ಮಾಣ ಮಾಡುತಿದ್ದರು. ರೊಜೆಟ್ಟಾ ಶಿಲೆ ನದಿಮುಖಜ ಭೂಮಿಯಲ್ಲಿರುವ ಚಿಕ್ಕಹಳ್ಳಿ ರೊಸೆಟ್ಟಾದಲ್ಲಿ ದೊರೆಯಿತು.ಅದುರೊಸೆಟ್ಟಾ(ರಷೀದ್‌) ಎಂಬ ಗ್ರಾಮದಲ್ಲಿ ಸಿಕ್ಕಿದುದರಿಂದ ರೊಜೆಟ್ಟಾ ಶಿಲೆ ಎಂದು ಹೆಸರಿಸಿದರು . ರೊಜೆಟ್ಟಾ ಶಾಸನವು ಎರಡುಭಾಷೆಯಲ್ಲಿ ( ಇಜಿಪ್ಷಿಯನ್‌ ಮತ್ತು ಗ್ರೀಕ್‌) ಮೂರು ಲಿಪಿಗಳಲ್ಲಿ ( ಪವಿತ್ರಲಿಪಿ, ಡೆಮೊಟಿಕ್‌ ಲಿಪಿ ಮತ್ತಿ ಗ್ರೀಕ್‌ಲಿಸ್ಯಪಿ) ಇರುವ ಶಾಸನ. ಮೇಲಾಗಿ ಅವೆಲ್ಲವೂ ಒಂದೇ ವಿಷಯವನ್ನು ಕುರಿತ ಬರಹ. ಇದರಿಂದ ಒಂದು ಭಾಷೆ ಮತ್ತು ಒಂದು ಲಿಪಿಗಳು ಗೊತ್ತಿದ್ದರೂ ಸಾಕು ಉಳಿದವುಗಳನ್ನು ಅರಿತುಕೊಳ್ಳಬಹುದಾಗಿತ್ತು. ರೊಸೆಟ್ಟಾ ಶಿಲೆಯು ಮೇಲೆ  ಮೂರು ವಿಭಿನ್ನ ಲಿಪಿಗಳಲ್ಲಿ ಬರಹವಿರಲು ಕಾರಣ ಆಗ ಈಜಿಪ್ಟಿನಲ್ಲಿ ಮೂರು ಲಿಪಿಗಳು ಬಳಕೆಯಲ್ಲಿ ಇದ್ದವು. . ಮೊದಲನೆಯದು ಪವಿತ್ರ ಲಿಪಿ .ಅದನ್ನು ಧಾರ್ಮಿಕ ಮತ್ತು ಅತಿಮುಖ್ಯವಾದ ರಾಜಕಾರಣದ ವಿಷಯ ದಾಖಲಿಸಲು ಬಳಕೆ ಮಾಡುತಿದ್ದರು. ಎರಡನೆಯದು ಈಜಿಪ್ಟನ್ನು ಆ ಕಾಲದಲ್ಲಿ ಆಳುತಿದ್ದ ಗ್ರೀಕರಭಾಷೆಯ ಲಿಪಿಯಾಗಿತ್ತು. ಮೂರನೆಯದು ಜನ ಸಾಮಾನ್ಯರು ಬಳಸುತ್ತಿರುವ ಸಾಮಾನ್ಯ ಲಿಪಿ (ಡೆಮೊಟಿಕ್) ಆಗಿತ್ತು.

ಆ ಶಾಸನವು ಮೂರು ವರ್ಗದವರಿಗೂ ಸಂಬಂಧಿಸಿರುವುದರಿಂದ ಮೂರು ಲಿಪಿಯಲ್ಲಿ ಬರೆಯಲಾಗಿತ್ತು. ಅದನ್ನು ಅರ್ಚಕರು , ಅಧಿಕಾರಿಗಳು, ಜನಸಾಮಾನ್ಯರು ಮತ್ತು ಆಳುವ ಗ್ರೀಕರು ಓದಿ ತಿಳಿಯಲು ಸಾಧ್ಯವಾಗ ಬೇಕಿತ್ತು.
 ರೊಸೆಟ್ಟಾ ಶಿಲಾಶಾಸನವನ್ನು ಅರ್ಚಕರ ಗುಂಪೊಂದು ಬರೆಸಿದ್ದರು. ಅದು ಈಜಿಪ್ಟನ್‌ ಅರಸ ಫೆರೊನ ಕಾರ್ಯವೈಖರಿಯನ್ನು ವಿವರಿಸುವ  ವಿಷಯಹೊಂದಿತ್ತು. ಇದು ಅರ್ಚಕರ ಸಮೂಹವು ಅನುಮೋದಿಸಿದ ನಂತರ ಕಂಡರಿಸಿದ ಶಾಸನ ಬರಹ.ಈಜಿಪ್ಟನ್ ಅರಸ ಟಾಲಮಿ –V ಯ ಕಿರೀಟ ಧಾರಣೆಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊರಡಿಸಿದ ಶಾಸನ  ಅದಾಗಿತ್ತು.
ಅದರಲ್ಲಿ ರಾಜನು ಅರ್ಚಕರ, ಅಧಿಕಾರಿಗಳ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಿರುವ ಕೆಲಸಗಳ ವಿವರವಾದ ಪಟ್ಟಿ ಇದ್ದಿತು.ಅದರಿಂದ  ಅದನ್ನು ಮೂರೂ ವರ್ಗದವರೂ ಓದಿ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಹಾಗೆ ಬರೆಸಲಾಗಿತ್ತು.
ಈಗಿನ ಇಜಿಪ್ಷಿಯನ್‌ ಭಾಷೆಯ  ಪ್ರಾಚೀನದಲ್ಲಿನ ಒಂದು ಹಂತವನ್ನು ಕಾಪ್ಟಿಕ್ ಎನ್ನುವರು. ಅದನ್ನು ೧೭ ನೇ ಶತಮಾನದವರೆಗೆ ಬಳಸುತಿದ್ದರು. ಆದರೆ ಕ್ರಿ. ಶ.ಮೊದಲನೆಯ ಶತಮಾನದಿಂದಲೇ ಈಜಿಪ್ಷಿಯನ್‌ ಭಾಷೆಯನ್ನು ಗ್ರೀಕ್‌ ಅಕ್ಷರಗಳಲ್ಲಿ ಬರೆಯಲು ಪ್ರಾಂಭಿಸಿದರು.ಆ ಲಿಪಿಗಳಲ್ಲಿ ಆರೇಳು ಕಾಪ್ಟಿಕ್‌ ಲಿಪಿಗಳೂ ಸೇರಿವೆ.  ಈ.ಶಾಸನದಲ್ಲಿನ ಕಾಪ್ಟಿಕ್‌ ಲಿಪಿಗಳನ್ನು ಮೊದಲು  ಗುರುತಿಸಿ ಅವುಗಳ ಸಹಾಯದಿಂದ ಉಳಿದವನ್ನೂ ಅರ್ಥೈಸುವ ಕೆಲಸ ಮೊದಲಾಯಿತು..

ಥಾಮಸ್ ಯಂಗ್ ಮೊದಲಿಗೆ ಶಾಸನದಲ್ಲಿನ ಕೆಲವು ಸಂಕೇತಗಳು ಅರಸನನ್ನು ಸೂಚಿಸುತ್ತವೆ ಎಂದು  ಅರ್ಥಮಾಡಿಕೊಂಡ. ಅಲ್ಲಿಂದ  ಪುರಾತನ ಈಜಿಪ್ಟ ಬರಹಗಳನ್ನು ಅನೇಕ ವರ್ಷ ಅಧ್ಯಯನ ಮಾಡಿದ  ಫ್ರೆಂಚ್‌ ವಿದ್ವಾಂಸ  ಜೀನ್‌, ಫ್ರಾಂಕೊಯಿಸ್‌ ಮುಂದುವರಿದ. ಗೊತ್ತಿರುವ ಸಂಕೇತಗಳ ಸಹಾಯದಿಂದ ಉಳಿದವನ್ನು ತಿಳಿಯಲು ಪ್ರಯತ್ನಿಸಿದ. ಆ ಕೆಲಸದಲ್ಲಿ ಗ್ರೀಕ್‌ಭಾಷೆ ಮತ್ತು ಲಿಪಿಗಳೂ ಸಹಾಯಕವಾದವು. ಈಜಿಪ್ಟ ಮತ್ತು ಗ್ರೀಕ್‌ರಾಜ್ಯಗಳ ನಡುವಣ ಪತ್ರವ್ಯವಹಾರದ ದಾಖಲೆಗಳೂ ಲಭ್ಯವಿದ್ದವು. ಅವುಗಳ ಸಹಾಯವೂ ಉಪಯುಕ್ತವಾದವು. ಹೀಗೆ ಇದು ಹೈಯರೊಗ್ಲಿಫ್‌ಗಳ ಅರ್ಥೈಸುವಕೆಗೆ  ಕೀಲಿ ಕೈ ಆಯಿತು .
.  ಈಜಿಪ್ಟಿನ ಪ್ರಾಚೀನ ಸಂಸ್ಕೃತಿ ಮತ್ತು ಮತ್ತು ಭಾಷೆಯನ್ನುತಿಳಿದುಕೊಳ್ಳುವ ಪ್ರಯತ್ನಕ್ಕೆ ಬುನಾದಿ ಹಾಕಿದ.ಅಲ್ಲಿಂದ ಕೆಲವೇ ದಶಕಗಳಲ್ಲಿ ನೈಲ್‌ನದಿ ಕಣಿವೆಯ ನಾಗರಿಕತೆ,ಸಂಸ್ಕೃತಿಯ ಮತ್ತು ಲಿಪಿಯ ಪೂರ್ಣ ಅನಾವರಣವಾಯಿತು. ಆನಂತರದಲ್ಲಿ ಒಂದೆರಡು ದ್ವಿಭಾಷಾ ಶಾಸನಗಳು ದೊರೆತಿವೆ.ಆದರೆ ಪ್ರಪ್ರಥಮ ದ್ವಿಭಾಷಾಶಾಸನವಾದ ರೊಸೆಟ್ಟಾಶಿಲೆಯ ಸ್ಥಾನದ ಪ್ರಾಮುಖ್ಯತೆಯು ಎಂದಿಗೂ ಕಡಿಮೆಯಾಗದು.ಅದನ್ನು  ಬ್ರಿಟಿಷ್‌ ಮ್ಯೂಜಿಯಂನಲ್ಲಿ ಸುರಕ್ಷಿತವಾಗಿ ಪ್ರದರ್ಶನಕ್ಕೆ ಇಡಲಾಗಿದೆ.
(ಚಿತ್ರ ಕೃಪೆ-ಅಂತರ್‌ಜಾಲ)


No comments:

Post a Comment