Sunday, March 10, 2013

ಬಸವಪ್ಪನಾಯಕರ ಕಾಲದ ನಿರೂಪಗಳು


ಗೋಕರ್ಣದಲ್ಲಿ ದೊರೆತ ಕೆಳದಿ ಚೆನ್ನಮ್ಮಾಜಿ ಬಸವಪ್ಪನಾಯಕರ ಕಾಲದ ನಿರೂಪಗಳು
ಡಾ. ಕೆಳದಿ ವೆಂಕಟೇಶ್ ಜೋಯಿಸ್
ಕ್ಯೂರೇಟರ್, ಕೆಳದಿ ಮ್ಯೂಸಿಯಂ, ಕೆಳದಿ,
ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ-೫೭೭೪೦೧.



ಗೋಕರ್ಣ ಕ್ಷೇತ್ರದಲ್ಲಿ ಶ್ರೀ ಹೆದ್ಲಿ ಅಶೋಕ್, ಶ್ರೀ ನಿತಿನ್, ಇವರೊಡನೆ ಸರ್ವೇಕ್ಷಣೆ ಕೈಗೊಂಡ ಸಂದರ್ಭದಲ್ಲಿ ಶ್ರೀ ವಿನಾಯಕ ಶಿವರಾಂಭಟ್ ರಮಣಿ ಮನೆ ರಥದ ಬೀದಿ, ಗೋಕರ್ಣ ಇವರಲ್ಲಿ ದೊರೆತ ಕೈಬರಹದ ಪುಸ್ತಕ ಗಮನ ಸೆಳೆಯಿತು. ಇದು ಸುಮಾರು ಹದಿನೆಂಟನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಪ್ರತಿ ಮಾಡಿಕೊಂಡ ಪುಸ್ತಕವಾಗಿತ್ತು. ಈ ಪುಸ್ತಕದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ನಿರೂಪಗಳಿವೆ. ಎಲ್ಲವೂ ಮೋಡಿ ಅಕ್ಷರದಲ್ಲಿ ಬರೆಯಲ್ಪಟ್ಟಿವೆ. ಎರಡು ಮರಾಠಿ ಮೋಡಿಯಲ್ಲಿ ಮತ್ತು ಎರಡು ಅರೆಬಿಕ್‌ನಲ್ಲಿದೆ. ಇವು ಗೋಕರ್ಣ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹುದಾಗಿವೆ. ಈ ನಿರೂಪಗಳು ಬನವಾಸಿ ಕದಂಬರು, ವಿಜಯನಗರದರಸರು, (ಈ ನಿರೂಪವನ್ನು ಹಂಪಿ ಉತ್ಸವ ೨೦೧೧ರಲ್ಲಿ ನಡೆದ ವಿಜಯನಗರ ಇತಿಹಾಸ ವಿಚಾರ ಸಂಕಿರಣದಲ್ಲಿ ಪ್ರಕಟಿಸಲಾಗಿದೆ) ಚನ್ನಭೈರರಸರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡಳಿತ ನಡೆಸಿದ ತುಂಡರಸರುಗಳು, ಕೆಳದಿ ಸೋಮಶೇಖರನಾಯಕನ ಕಾಲದ ನಿರೂಪ ಕುರಿತು ೨೦೧೦ರಲ್ಲಿ ಆದಿಚುಂಚನಗಿರಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ. ಈ ನಿರೂಪದಲ್ಲಿ ಉಲ್ಲೇಖವಾಗಿರುವ ಕುಂಭಕರ್ಣೇಶ್ವರ, ರಾವಣೇಶ್ವರ, ವಿಭೀಷಣೇಶ್ವರ ದೇವಾಲಯಗಳು ಇಂದೂ ಅಲ್ಲಿವೆ. ಅವುಗಳು ಪುರೋಹಿತರ ಮನೆಯ ಒಳಭಾಗದಲ್ಲಿ, ಬಚ್ಚಲ ಹಿಂಭಾಗದಲ್ಲಿ ಸೇರಿಹೋಗಿವೆ. ಇಂದೂ ಅವುಗಳಿಗೆ ಪೂಜೆ ನಡೆಯುತ್ತಿರುವುದು ಕಂಡುಬರುತ್ತದೆ. ಉಳಿದಂತೆ ಕೆಳದಿ ಚೆನ್ನಮ್ಮಾಜಿ ಮತ್ತು ಕೆಳದಿ ಬಸವಪ್ಪನಾಯಕ ಮೊದಲಾದವರುಗಳ ಕಾಲದ ನಿರೂಪಗಳೂ ಅಲ್ಲಿದ್ದು ಅವುಗಳಲ್ಲಿ ಕೆಲವನ್ನಾಧರಿಸಿ ಇಲ್ಲಿ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿದ್ದೇನೆ. ಶಿಲಾಶಾಸನದ ಪ್ರತಿಯೂ ಇದರಲ್ಲಿ ದಾಖಲಾಗಿದೆ. ಈ ಹಳೆಯ ಪುಸ್ತಕವನ್ನು ನನ್ನ ಸಂಶೋಧನೆಗೆ ಒದಗಿಸಿದ ಶ್ರೀ ರಮಣಿರವರಿಗೆ ಸಹಕರಿಸಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ. ಇಂತಹ ದಾಖಲೆಗಳು ದೊರೆತಲ್ಲಿ ಇತಿಹಾಸಕ್ಕೆ ಉತ್ತಮ ಆಕರಗಳಾಗುವುದರಲ್ಲಿ ಎರಡು ಮಾತಿಲ್ಲ.
ನಿರೂಪದ ಪಾಠ
ಪುಸ್ತಕದಲ್ಲಿ ದಾಖಲಾಗಿರುವ ಪುಟ ಸಂಖ್ಯೆ ೨೬
ರುದರೊದ್ಗಾರ್ರಿ ಸಂವತ್ಸರ ಫಾಲ್ಗುಣ ಶು ೧೦ ಲು ಶ್ರಿಮತ್ಕೆಳದಿಚೆ
ಂನಂಮಾಜಿಯವರ್ರುದೆವಂಣಗೆ ಬರಶಿಕಳುಹಿದ ಕಾರ್ಯ
ಗೊಕರ್ನದ ಶ್ರಿ ಮಹಾಬಲೆಶ್ವರ ದೆವಸ್ಥಾನದ  ಪ್ರಾಕಾರದ ಹೊರ
ಗಣ ಆದಿ ಗೊಕರ್ನೆಶ್ವರ ದೆವಸ್ಥಾನದ ಸಮಿಪದಲ್ಲಿ|ಕಳಸಂ
ಣ ನಾರಾಯಣನ್ನು ದೆವಸ್ಥಾನ ಕಟ್ಟಿಶಿ|ಕಳಶೆಶ್ವರ ದೆವರ ಪ್ರತಿ
ಷ್ಟೆ ಮಾಡಿಶಿ|ಆದೆವತ್ತಾ ವೆಚಕ್ಕೆ| ಮಿಡಿಜೆ ಶಿಮೆ ದೆಶಯಿ
ರಾಮನಾಯ್ಕ| ಬಾಬನಾಯ್ಕ | ಮರ್ತು ನಾಯ್ಕನ ಉಂಬಕ್ಕಿ ಉ
ಪುಟ ೨೫
ತ್ತಾರ ದೊಳಗೆ ಅವಂದಿರ ಕೈಯ ಗ ೧೨ ಹಂನ್ನೆರಡು ವರಹಾ
ಂನಾ ಭುವಿಯಂನು ನುರಿಯಿಪತು ವರ ಹೊಂನು ವಿಶ್ವೆ
ಶ್ವರ ದೆವಸ್ತಾನದ ಭಂಡಾರಕ್ಕೆ ಕ್ರಯ ಸಾಧನ ಬರಶಿ|ದೆವತ್ತಾ
ವೆಚ್ಚಕ್ಕೆ ನಡದುಬರುಥೆನೆಂದು ಹೆಳಿಕೊಂಡ ಸಂಮಂಧ|ಮಿ
ಡಿಜೆ ಶಿಮೆ ಯಿಂದಾ ಅವರಿಗೆ | ಉಂಬಳಿ ಉತ್ತಾರವಾದ ಬೆಟ್ಟಕುಳಿ
ವಳಗೆ ಹಂಣೆನಾಗರ ಸ್ತಳದಲ್ಲಿ ಗ ೧೨ ಹಂನ್ನೆರಡು ವರಹಾಂನ್ನು
ಸ್ವಾಸ್ತೆಯಂನ್ನು ಕಳಶೆಶ್ವರ ದೆವರ ದೆವತ್ತಾ ವೆಚ್ಚಕ್ಕೆ ಶಿವಾರ್ಪಿತವಾ
ಗಿ ಬಿಟ್ಟು ಯಿದೆವೆ|ಸಾಧನ ಪ್ರಮಾಣ ಸ್ವಾಸ್ತೆ ಭುಮಿಯಂನು
ಮಹಬಲೆಶ್ವರ ದೆವರ ಸಿಸ್ತಿಗೆ ಕುಡಿಕೊಂಡು ಆ ಕಳಶೆಶ್ವರ ದೆವ
ರ ದೆವತಾ ಸೆವೆನಡೆಸಿ ಬಹ ರಿತ್ತಿ ಕಟು ಮಾಡಿಶಿ ಯಿದೆವೆ|
ಂತ್ತಾ ಅವರು ವಿಂಗಡಿಸಿಕೊಟು ಭುಮಿಯಂನು ದೆವಸ್ತಾನದ|
ಮಣೆಗಾರನ ಹವಾಲೆ ಮಾಡಿ ಕೊಟು ಯಿ ಕಾಗದವನು ಸೆನ
ಭವರ ಕಡಿತಕ್ಕೆ ಬರಶಿ ತಿರುಗಾ ಯಿವರ ವ್ಸಕ್ಕೆ ಕೊಡಿಸುವದು
ಯಂದು ಬರಶಿಕೊಟ ನಿರುಪು | ಯಿ ಅಸಲು ಶಿಖೆ ನಿರು
ಪು ವೆಂಕದ್ರಿ ರಾಂಭಟನ ವಶಕೆ ಯಿರುತದೆ ಅದರ ನಖಲು
ಸಾರಾಂಶ : ಕೆಳದಿ ಚೆನ್ನಮ್ಮಾಜಿಯವರು ಗೋಕರ್ನದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಪ್ರಾಕಾರದ ಹೊರಗಣ ಆದಿ ಗೋಕರ್ಣಶ್ವರ ದೇವಸ್ಥಾನದ ಸಮೀಪದಲ್ಲಿ ಇರುವ ಕಳಸಂಣ ನಾರಾಯಣ ದೇವಸ್ಥಾನ ಕಟ್ಟಿಸಿ ಕಳಸೇಶ್ವರ ದೇವರ ಪ್ರತಿಷ್ಠೆ ಮಾಡಿಶಿ ಆ ದೇವತಾ ವೆಚ್ಚಕ್ಕೆ ಮಿಡಿಜೆ ಶಿಮೆ ದೇಸಾಯಿ ರಾಮನಾಯ್ಕೆ, ಬಾಬನಾಯ್ಕ ಮರ್ತು ನಾಯ್ಕ ಇವರ ಉಂಬಳಿಯಲ್ಲಿ ಅವರಿಂದ ೧೨ ವರಹಾ ಮತ್ತು ನೂರ ಯಿಪ್ಪತ್ತು ಹೊನ್ನು ವಿಶ್ವೇಶ್ವರ ದೇವಸ್ಥಾನಕ್ಕೆ ಬರಸಿ ದೇವತಾ ವೆಚ್ಚಕ್ಕೆ ನಡದು ಬರುವಂತೆ ಕೇಳಿಕೊಂಡ ಸಂಬಂಧ ಹಂಣಿನಾಗರ ಸ್ಥಳದಲ್ಲಿ ಗ ೧೨ ವರಹಾಂನ್ನು ಸ್ವಾಸ್ಥೆಯನ್ನು ಕಳಶೇಶ್ವರ ದೇವರ ದೇವತಾ ವೆಚ್ಚಕ್ಕೆ ಶಿವಾರ್ಪಿತವಾಗಿ ಬಿಟ್ಟ ದಾನದ ವಿವರವನ್ನು ಈ ನಿರೂಪ ಒಳಗೊಂಡಿದೆ.
ಪುಟ ಸಂಖ್ಯೆ: ೨೭
ಆನಂದ ಸಂವತ್ಸರದ ಆಶ್ವಿಜ ಬ ೧೦ಲ್ಲು ಶ್ರೀಮತ್ತು| ಕೆಳದಿ
ಚಂನಂಮಾಜಿಯವರ್ರು|ನಾರಣಪ್ಪಗೆ|ಬರ‍್ಸಿ ಕಳುಹಿದಕಾ
ರ್ಯ|ಮಿಡಜೆ ಶಿಮೆ ದೆಸಾಯಿ| ಅಚವೆಚಂದ್ರಾಯಿಣಿ ಹೆ
ಬಾರಗೆ|ಮಿಡಜೆ ಶಿಮೆಯೊಳಗಣ|ಅಚವೆ ಗ್ರಾಮದಿಂದಾ
|ರೆಖೆ ಗ ೭೩೭|| ಂ ದೆಸಾಯಿಗಳ ಪಟೆ ಗ ೧೩||ಂ ಉಭಯ
ಂ ಗ ರೆಖೆ ಯೆಳನುರ ಅವತ್ತ ವಂದು ವರಹಾ
ಕ್ಕೆ| ಉಂಬಳಿ ಉತ್ತಾರವಾಗಿ ಪರಿಧಾವಿ ಸಂವಸ್ತರದಲ್ಲು |
ಗ ೪೫೦|ನುಳದು|ಶುಧ ಅರಮನೆಗೆ ಬಾಹ ಸಿಸ್ತು ಗ ೩೦೧ಹಾಂ
ಮುಂನುರ್ರ ವಂದು ವರಹಾಂನ್ನೂ| ಆ ಶಿಮೆನಾಂಣ್ಯ ವ
ನೆ ತ್ತರ್ರಿಶಿ ಕೊಳುತ್ತಾ ಬಾಹದು| ಯಿ ಶಿಸ್ತಿನವಳಗೆ ಪ್ರಾ
ಕುನಷ್ಟದಿಂದ ಕುಡಿದ ಭುಮಿಗೆ|ಸಸಿ ಹಾಕಿಕೊಂಡು
ಆಉತ್ಪತ್ತಿಯಂನು ಆತನೆ ಅನುಭವಿಶಿಕೊಂಡು
ಬಂದಾನು|ಯಿ ಕಾಗದವ| ಶ್ಯಾನುಭೋಗರ್ರಿಗೆ ಬರಶಿ
ತ್ತಿರ್ರುಗಿ ಯಿತ್ತನ ವಶಕ್ಕೆ ಕೊಡುವದು ಯಂತ್ತಾ ಬರದ
ಶಿಕ್ಕೆ ನಿರ್ರುಪಿನ ನಕಲು
ಯಿನಿರ್ರುಪ ಕಾಗದ ಉ | ಅಚುವೆ ಹೆಬಾರನ ವಶಕ್ಕೆ ಯಿ
ರ್ರುತ್ತಧೆ.
ಸಾರಾಂಶ : ಆನಂದ ಸಂವತ್ಸರದಲ್ಲಿ ಕೆಳದಿ ಚೆನ್ನಮ್ಮಾಜಿಯವರು ನಾರಣಪ್ಪಗೆ ಬರಸಿ ಕಳುಹಿಸಿದ ಕಾರ್ಯ ಇದಾಗಿದೆ. ಮಿಡಜೆ ಶಿಮೆ ದೇಸಾಯಿ ಅಚವೆ ಚಂದ್ರಾಯಿಣಿ ಹೆಬಾರಗೆ ಅಚವೆ ಗ್ರಾಮದಿಂದ ಏಳುನೂರ ಐವತ್ತು ವರಹಾ ಉಂಬಳಿ ಬಿಟ್ಟದ್ದನ್ನು ಈ ನಿರೂಪ ತಿಳಿಸುತ್ತದೆ.
ಪುಟ ಸಂಖ್ಯೆ : ೮೬
ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೆ | ತ್ರೈಲೊ
ಕ್ಯ ನಗರಾರಂಭ|ಮೂಲಸ್ತಂಭಾಯ ಶಾಂಭವೆ|ಸ್ವಸ್ತಿ ಶ್ರೀ
ಜಯಾಭ್ಯುದಯ ನೃಪ ಶ್ಯಾಲಿವಾಹನ ಶಖ ವರ್ರುಷ ೧೬೩೮
ನೆಯ ದುರ್ಮುಖಿ ಸಂವತ್ಸರದ| ಕಾರ್ತಿಕ ಶು ೧೦ಲ್ಲು ಶ್ರಿ ಮ್ಮ
ದ್ದೆಡವ ಮುರಾರ್ರಿ ಕೊಟೆ ಕೊಳಹಳಾ ! ವಿಶುಧ ದ್ವೈತ ಶಿಧಾ
ಂತ್ತ ಪ್ರತಿಷ್ಟಾಪಕ|ಶಿವಗುರ್ರು ಭಕ್ತಿ ಪರಾಯಣರಾದ |
ಶ್ರೀಮತ್ಕೆಳದಿ ಸದಾಶಿವನಾಯಕ ರೈಯನವರ| ವಂಶೊ
ದ್ಭವರಾದ | ಶಿವಪ್ಪನಾಯಕರ್ರ ಪುತರ್ರು | ಸೊಮಸೆ
ಖರ್ರನಾಯಕರ ಧರ್ಮಪತ್ನಿಯರಾದ| ಚಂನಂಮಾಜಿಯ
******ಬಸವಪ್ಪನಾಯಕರೈಯನವರ್ರು|
ಪುಟ ಸಂಖ್ಯೆ : ೮೭
ಕಟಿಸ್ತ ಪುರವರ್ಗದ ಚಂನ ಬಸವೆಶ್ವರ ದೆವರ್ರಿಗೆ|ಉತ್ತಾ
ರವಾದ|ಮಿಡಜೆ ಹೊಬಳಿ ವಳಗಣ ಹರ್ರಿಟೆ ಶಿಮೆ ಉಪ್ಪಿನ ಪ
ಟಣ ಗ್ರಾಮದಲ್ಲು| ನಿರ್ವಾಣೈಯನವರ್ರ ಹ್ಸೆರಲ್ಲು| ಹುದಾ
| ಕೊಲುಗುಣಸೆ ಭದ್ರಯ್ಯನು ಕಟಿಸ್ತ ಮಠದ ಧರ್ಮ
ಕ್ಕೆ ಯಿ ಶಿಮೆ ವಳಗುಣ ಸುಂಕದ ಟಾಂಣ್ಯದಲ್ಲು|ಮಿಡಿಜೆ
ಠಾಂಣ್ಯದಲ್ಲು ಸಹಾ | ವ್ಯವಹಾರ ಮಾಡುವ ಶೆಟಿಶರ ಪೆಟೆ
ಹರದರ್ರು | ಬರಶಿಕೊಟ | ಮುಲ ವಿಸದ ಪಟಿ ಕ್ರಮವೆಂ
ತೆಂದರೆ | ಯಿ ಮಟದಲ್ಲು|ದಿಗ್ದೆಶದ ಶಿವಭಕ್ತರ್ರು
ಪರದೆಶಿಗಳಿಗೆ ಮುಂತ್ತಾಗಿ|ಧರ್ಮನಡಸುವ ಬಗ್ಯೆ
ನಾಂಉ ಮಾಡುವ ವ್ಯವಹಾರಕ್ಕೆ | ಸ್ಥಳದ ಸರಕು ಅ
ಡಕ್ಕೆ ಮೆಣ್ಸು ಖಂಡಿ ೧ ರ ಹಾ | ಂ ಹಾಗ ಮಾರ್ಗ ಚರಾದಾ
| ವಿದಳ ಕುಂಬು ೧ರ ಹಾ = ಬೆಳೆ ಅಕ್ಕಿ ಕುಂಬು ಹಾ| ಂ ಹಾ
ಗಾ | ರಾಗಿ ಕುಂಬು ೧ರ ಹಾ = ಬೆಳೆ | ಯೆಂಣೆ ಖಂ ೧ರ ಹಾ ೧ ಹಾ
ಗಾ|ತುಪ್ಪ ಖಂ ೧ರ ಹಾ||ಂ ಅರ್ದಾ ಬೆಲ್ಲಾ ಖಂ ೧ರ ಹಾಂ | ಂ ಹಾ
ಗಾ|ಕಂಬಳಿ ಕೊಡಿ ೧ರ ಹಾ ||ಂ ಅಡ| ಅರಶಿನಾ ಹತಿ ಹೊ|
ಗೆಸಪ್ಪು ಕೊಬರ್ರಿ ಖರ್ಜುರಾ ಕಾಚು ! ಕವಾಡ ನಡೆ ೧ರ
ಹಾ - ವಿಸಾ | ಲಂವಂಗ ಪತ್ರೆ ಜಾಯಿಕಾಯಿ ಮ ೧ರ ಹಾ - ವಿಸಾ
ರಾಂಪತ್ರಿ ಕಬಾಬಿ ಜಿನಿ ಮುಂತಾವಾದ್ದನ್ನು ಮ ೧ರ ಹಾ ವ್ಸ || ಂ ಅರವ್ಸಿ
ಹಶಿಸುಂಟಿ ನಿರ್ರುಳಿ ಬೆಳುಳ್ಳಿ ಸಹಾ ನಡೆ ೧ರ ಹಾ ಂ ||
ರವಿಸಾ| ಕಾಂಗು ತ್ತು ಶುಧಾ ಖಡಿ ಮೂಂತಾಗಿ ಮಾಡಿ ೧ರ
ಹಾ ಂ||ಂ ಅರವಿಸಾ | ಪಟೆ ಪಿತಾಂಬರ ಸುರೆ|ಪುಟಾ ಮು
ಂತಾಗಿ|ತ್ತಾಉ ೧ರ ಹಾ-ವ್ಸಿಸ ಉಪ್ಪುಹರದ ರ್ರಿ
ದಾ| ಮಹಾನಾಡ ರ್ರಿಂದಾ ಸಹಾ ************
ಪುಟ ಸಂಖ್ಯೆ: ೮೮
ಹಾವ್ಸಿ || ಂ ಅರವಿಸಾ | ಯಿ ಪ್ರಮಾಣಿ ನ ಪ್ರಹಾರದಲ್ಲು |
ಮಠ ದರ್ಮಕ್ಕೆ ನಡಸುವ ಬಗೈ|ಶಿವಾರ್ಪಿತವಾಗಿ
ಕೊಟೆಉ-ಯಿ ಪ್ರಮಾಣು ಸಲುವ ಹಣ ಉಂ| ಪ್ರಾಕು ಯೆ
ತ್ತುವ|ಸುಂಕಾ ಕೊಡುವಿಸ ವರ್ತನೆ ಹೊರತ್ತು|ಯೆತ್ತಿ
ಸುಂಕದ ಮಣೆಗಾರನ ಸಂಗಡಾ | ಕಾಲ ಕಾಲಂ ಪ್ರ
ತ್ತಿಯಲ್ಲು | ಕೊಟು ಬಾಹೆಉ ಯಂದು ಬರಶಿಕೊಟ
ಮುಲ ವಿಸದ ಪಟೆ | ಯಿದಕ್ಕೆ ಧರ್ಮ ಸಾಕ್ಷಿಗಳು
ಆದಿತ್ಯಚಂದ್ರವ ನಿಲೊನಲಶ್ಚ | ದೌರ್ಬುಮಿ
ರಾಪೋಹೃದಯಂ ಯಮಶ್ಚ|ಅಹಶ್ಚ ರಾ
ತ್ರೊಶ್ಚ ಉಭೆಶ್ಚ ಸಂದೊ| ಧರ್ಮಶ್ಯ ಜಾನಾತ್ತಿ | ನರ
ಶ್ಯ ಉತ್ತಂ || ದಾನಪಾಲನಯೊರ್ಮಧೆ | ದಾನಾಚ್ಛ್ರೆ
ಯನಪಾಲನಂ || ದಾನಸ್ವರ್ಗಮವಾಪ್ನೊತ್ತಿ | ಪಾ
ಲನಂ|ದಚುತ್ತಂ ಪದಂ| ಯಂದು ಬರಕೊಟ ಮು
ಲವಿಸದ ಪಟೆ ನಖಲಿನ ಪ್ರತ್ತಿ
ಅಸಲು ಯಡವಾರ್ರು ಆಯಿಹೊಯಿತ್ತು | ನಕಲ್ಲು ಉಪ್ಪಿನ ಪಟ
ಣದ ಮಠದ ಶಿವಲ್ಲಿಂಗೈನ ವಶ್ಯಾ ಅಧೆ.
ಸಾರಾಂಶ : ಶಾಲಿವಾಹನ ಶಕ ೧೬೩೮ ಎಂದರೆ ಕ್ರಿ.ಶ.೧೭೧೬ರ ನಿರೂಪ ಇದಾಗಿದೆ. ಚೆನ್ನಮ್ಮಾಜಿಯ ಮಗ ಬಸಪ್ಪನಾಯಕನ ಕಾಲದ್ದು. ಇದು ಪುರವರ್ಗದ ಚಂನ ಬಸವೇಶ್ವರ ದೇವರಿಗೆ ಬಿಟ್ಟ ಉಂಬಳಿಯನ್ನು ಈ ನಿರೂಪ ತಿಳಿಸುತ್ತದೆ. ಮಿಡಜೆ ಹೊಬಳಿಯ ಹರ್ರಿಟೆ ಶಿಮೆ ಉಪ್ಪಿನ ಪಟ್ಟಣ ಗ್ರಾಮದಲ್ಲಿ ನಿರ್ವಾಣೈಯನವರ ಹೆಸರಲ್ಲಿ ಕೊಲುಗುಣಸೆ ಭದ್ರಯ್ಯನು ಕಟ್ಟಿಸಿದ ಮಠದ ಧರ್ಮಕ್ಕೆ ಯಿ ಶಿಮೆ ಯೊಳಗಿನ ಸುಂಕದ ಟಾಂಣ್ಯದಲ್ಲಿ ಮತ್ತು ಮಿಡಿಜೆ ಠಾಂಣ್ಯದಲ್ಲಿ ವ್ಯವಹಾರ ಮಾಡುವ ಶೆಟಿಶರ ಪೆಟೆ ಹರದರ್ರು ಬರಶಿಕೊಟ ಮುಲ ವಿಸದ ಪಟ್ಟಿ ಇದಾಗಿದೆ. ಈ ಮಠದಲ್ಲಿ ಶಿವಭಕ್ತರು ಪರದೇಶಿಗಳಿಗೆ ತಾವು ಮಾಡುವ ವ್ಯವಹಾರದಲ್ಲಿ ಕೆಲ ಭಾಗವನ್ನು ಧರ್ಮವಾಗಿ ನೀಡಿರುವುದನ್ನು ನಿರೂಪ ತಿಳಿಸುತ್ತದೆ.
ಪುಟ ಸಂಖ್ಯೆ: ೮೯
ಸ್ವಸ್ತಿ ಶ್ರಿ ಜಯಾಭ್ಯುದಯ ನೃಪ ಶಾಲಿವಾಹನ ಶಕ ವರುಶ ೧೬೩೮
ನೆ ದುರ್ಮುಕ್ಕಿ ಸಂವತ್ಸರದ ಕಾರ್ತಿಕ ಶು ೧ ಲು ಶ್ರಿಮದ್ದೆಡವ ಮುರಾ
ರ್ರಿಕೊಟೆ ಕೊಳಾಹಳ ವಿಶುದ್ಯಾತ್ಮಕ ಸಿದ್ದಾಂತ ಪ್ರತಿಷ್ಠಾಪಕ
ಶಿವಗುರುಭಕ್ತ ಪರಾಯಣರಾದ ಶ್ರಿಮತ್ಕೆಳದಿ ಸದಾಸಿ
ವನಾಯಕರಯ್ಯನವರ್ರು ವಂಶೋದ್ಭವರಾದ ಸಿದ್ದಪೈ
ನಾಯಕರ ಪುತ್ರರು | ಶಿವಪ್ಪನಾಯಕರು ಪುತ್ರರು |
ಸೊಮಸೆಕರನಾಯಕರ ಧರ್ಮಪತ್ನಿಯರಾದ ಚಂನ್ನ
ಮಾಜಿಯವರ ಪುತ್ರರು | ಬಸಪನಾಯಕರಯಕರ |
ಯ್ಯನವರ್ರು | ಕಟಿಶಿದ ಪುರವರ್ಗದ ಚಂಬಸವೆಶ್ವರದೆ
ವರ್ರಿಗೆ | ಉತ್ತಾರವಾದ | ಮಿಡಿಜಿ ಹೊಬಳಿ ವಳಗಣ ಉಪ್ಪಿನ
ಪಟಣದ ಗ್ರಾಮದಲ್ಲು ನಿರ್ವಾಣಯನವರ ಹೆಸ್ರಲು ಹುದಾ
ರ ಕೊಲಗುಣಸೆ ಭದ್ರಪ್ಪ | ನವರ್ರು ಕಟಿಸಿದ ಮಠದ ಧರ್ಮ
ಕೆ | ಯಿ ಸಿಮೆ ಪ್ರಜೆಗಳು ನಡಸುವ ಧರ್ಮಕೆ | ಬರಶಿಕೊಟ ಪಟೆ
ಕ್ರಮವೆಂತ್ತೆಂದರೆ | ಯಿ ಮಠದ ಧರ್ಮದ ಬಗ್ಯೆ ನಾಂಉ ಮಾಡಿ ಕೊ
ಟ್ಟದ್ದು ವರುಶ ೧ ರ ಗ ೧೨ || ಂ ಹಂನೆರಡುವರ್ರೆ ವರಹಾಂನ್ನು ನಾ
ಂಉ ಅರಮನೆಗೆ ತೆತ್ತು ಬಾಹ ಸಿಸ್ತಿಗೆ | ಬಾಹ ವಂತಿಕೆ ಪ್ರಮಾಣಿ |
ಮಾಡಿಕೊಂಡು ಅಧಿಕಾರ ಮಾಡುವರ ಮುಖದಲ್ಲು | ಕಾಲಕಾಲಾಂ
ಪ್ರತಿಯಲು ನಡಶಿಕೊಟು ಬಹ ಉ ಯಂದು ಬರಶಿಕೊಟ
ಧರ್ಮಸಾಧನ ಪಾಟೆ ಯಿದಕೆ ಧರ್ಮ ಸಾಕ್ಷಿಗಳು | ಯಾವಶ್ಛಂ
ದ್ರಶ್ಚ ಸೂರ್ಯಶ್ಚ ಕಾವಂತ್ರಿಷ್ಠತಿ ಮೆಧಿನಿ | ಯಾವದ್ಯಾಮಕ ಧಾ
ಲೊಕೆ | ಕಾವದ್ರಾಜ್ಯ ವಿಬೆಶಣಾಯಂದು ಬರದ ಪಟೆಗೆ
ಯಿ ಅಜನಾಯಕನ ಬರಹಾ ಶಿಮೆಯಲು*********
ಪುಟ ಸಂಖ್ಯೆ: ೯೦
ಬರಹಾದ ಗುರ್ತಾಯಿಂತಿ ಯಿವರ ಸನ್ಮತದಿಂದಾ | ಸ್ತಳದ
ನಾಡಕರ್ಣಿರವಳಪೈನಬರಹಾ ಶಾಂತವಿರಣನ ಬರಹಾ|ಪ್ರತಿ ಣಪತಿ ಬರಹಾದ ಧರ್ಮಪಟಿ ಪ್ರತಿ ಕಾಗದಾ |
ಅಸಲು ಯೆಡವಾರ್ರಾಯಿತ್ತು ನಕಲು ಸಿದಲಿಂಗಯ್ಯನವಶಕೆ ಉಂಟು |
ಸಾರಾಂಶ: ಶಾಲಿವಾಹನ ಶಕ ೧೬೩೮ ಎಂದರೆ ಕ್ರಿ.ಶ.೧೭೧೬ರ ನಿರೂಪ ಇದಾಗಿದೆ. ಚೆನ್ನಮ್ಮಾಜಿಯ ಮಗ ಬಸಪ್ಪನಾಯಕನ ಕಾಲದ್ದು. ಇದು ಪುರವರ್ಗದ ಚಂನಬಸವೇಶ್ವರ ದೇವರಿಗೆ ಬಿಟ್ಟ ಉಂಬಳಿಯನ್ನು ಈ ನಿರೂಪ ತಿಳಿಸುತ್ತದೆ. ಮಿಡಜೆ ಹೊಬಳಿಯ ಹರ್ರಿಟೆ ಶಿಮೆ ಉಪ್ಪಿನ ಪಟ್ಟಣ ಗ್ರಾಮದಲ್ಲಿ ನಿರ್ವಾಣೈಯನವರ ಹೆಸರಲ್ಲಿ ಕೊಲುಗುಣಸೆ ಭದ್ರಯ್ಯನು ಕಟ್ಟಿಸಿದ ಮಠದ ಧರ್ಮಕ್ಕೆ ಬಿಟ್ಟ ದಾನದ ವಿವರವನ್ನು ಈ ನಿರೂಪ ತಿಳಿಸುತ್ತದೆ. ಈ ಮಠದ ಧರ್ಮಕ್ಕೆ ವರುಶ ೧ ರ ಗ ೧೨||೦ ಹಂನೆರಡುವರ್ರೆ ವರಹಾಂನ್ನು ನಾಂಉ ಅರಮನೆಗೆ ತೆತ್ತು ಬಾಹ ಸಿಸಿತೆ | ಬಾಹ ವಂತಿಕೆ ಪ್ರಮಾಣಿ | ಮಾಡಿಕೊಂಡು ಅಧಿಕಾರ ಮಾಡುವರ ಮುಖದಲ್ಲು | ಕಾಲಕಾಲಾಂ ಪ್ರತಿಯಲು ನಡಶಿಕೊಟು ಬರುತ್ತೇವೆ ಎಂದು ಬರಸಿದ ಪತ್ರ ಇದಾಗಿದೆ.
ಪುಟ ಸಂಖ್ಯೆ : ೩೬-೩೫
ಕ್ರೊಧನ ಸಂವತ್ಸರದ ಮಾಘ ಶು೧೦ಲ್ಲು ಶ್ರೀಮತ್ ಕೆಳದಿ ಬಸ
ವಪ್ಪನಾಯಕರ್ರು|ವಿಷ್ಣು ಸ್ಸಭಾಯಿತ್ತಗೆ ಬರಶಿ ಕಳುಹಿದ ಕಾರ್ಯ
|ನಿನು ಹುಜುರ್ರು ಬಂದು|ಗೊಕರ್ನಕ್ಕೆ ಹೊಗುವ ಮಾರ್ಗದಲ್ಲು
ಜುರ್ರು ಬಂದು|ಗೊಕರ್ನದ ಶ್ರಿ ಮಹಾಬಲೆಶ್ವರ ದೆವರಿಗೆ| ಗೆರಸಪ್ಪೆ ಶಿಮೆ
ವಳಗಣ ಯಿಡಗುಂಜಿ ಶ್ರಿ ವಿಘ್ನೆಶ್ವರ ದೆವರಿಗೆ | ಕೊಲ್ಲುರ ಮುಕಾಂಬಿಕೆ
ಅಂಮನವರ್ರಿಗೆ ಸಹಾ| ನಮಗೆ ಆಲಶ್ಯಾ ಬಂದಾಗ್ಯೆ ಯಿಡುಗುಂಜಿವಿ
ಷ್ಣು ಸಭೈಯಿತನ್ನು ಹೆಳಿಕೊಂಡು ಯಿಧಾನೆ ಯಂತ್ತಾ | ಸಿವಲಿಂಗಪ್ಪನವರು
ಹೆಳಿಕೊಂಡ ಸಂಮ್ಮಂಧಾ | ವಿಷ್ಣು ಸಭೈಯಿತನ ಕಯ್ಯಾ ಅರಮನೆಎ ಕಾಣಿಕೆ
ಗ ೩೨೦ ಮುಂನ್ನುರ್ರು ಯಿಪತ್ತು ವರಹಾಂನ್ನು ತೆಗೆದುಕೊಂಡು ಮಿಡಿಜೆ
ಶಿಮೆಯೊಗಳಣ ಗೊಕರ್ನ ಮಾಗಣಿ ಬಾರ್ರೆಕೊಡಲು ಗ್ರಾಮದಲು ಉತಾರವ
ಕೊಟರು ಗ ೩೨ ಮೂವತೆರಡು ವರಹಾನ ಸ್ವಾಸ್ಥೆಯನ್ನೂ ಶಿವಾ
ರ್ಪಿತವಾಗ್ಯೆ ಬಿಟ್ಟುಕೊಟ್ಟಧೆವೆ | ಗೊಕರ್ನದ ಶ್ರಿಮಹಾಬಲೆಶ್ವರ ದೆವ
ರ್ರಿಗೆ ಯಿಡಗುಂಜಿ ವಿಘ್ನೆಶ್ವರ ದೆವರಿಗೆ ಕೊಲ್ಲುರ ಶ್ರಿ ಮುಕಾಂಬಿಕೆ
ಅಂಮನವರ್ರಿಗೆ | ಸಹ ಪುಜೆ ಸಾಂಗವಾಗಿ ಸಡಶಿಕೊಂಡು ಬಾಹ
ದುಯಿ ಕಾಗದ ಸೆನಬೊವರ ಬರಹಕ್ಕೆ ಬರಶಿ | ತಿರುಗಾ| ನಿನ್ಯು
ತೆಗೆದುಕೊಂಬುವದು || **** || ಯಿದರ ಅಸಲು ಯೆಡವಾರವಾಗಿ
ಹೊಯಿತಂತ್ತೆ | ವಾಲೆಮೆಲೆ ಬರದ ನಖಲಿನ ಪ್ರತಿ | ಯಿ ವಾಲೆ ಗಣ
ಪ ಸಭಾತನ ಕೈಯಾ ಅಧೆ |
ಸಾರಾಂಶ : ವಿಭವ ಸಂವತ್ಸರದ ಚೈತ್ರ ಶು ೧೩ಲೂ ಶ್ರೀಮತ್ಕೆಳದಿ ಬಸವಪ್ಪನಾಯಕರು ವಿಷ್ಣು ಸಭೈತಗೆ
ಬರಶಿಕಳುಹಿದ ಕಾರ್ಯ ಇದಾಗಿದೆ. ಗೊಕರ್ನದ ಶ್ರಿ ಮಹಾಬಲೇಶ್ವರ ದೆವರಿಗೆ ಗೆರಸಪ್ಪೆ ಶಿಮೆವಳಗಣ ಯಿಡಗುಂಜಿ ಶ್ರಿ ವಿಘ್ನೆಶ್ವರ ದೆವರಿಗೆ | ಕೊಲ್ಲುರ ಮುಕಾಂಬಿಕೆ ಅಂಮನವರ್ರಿಗೆ ಸಹಾ | ನಮಗೆ ಆಲಶ್ಯಾ ಬಂದಾಗ್ಯೆ ಯಿಡುಗುಂಜಿ ವಿಷ್ಣು ಸಭೈಯಿತನ್ನು ಹೆಳಿಕೊಂಡು ಯಿಧಾನೆ ಎಂದು ಸಿವಲಿಂಗಪ್ಪನವರು ಹೆಳಿದ್ದರಿಂದ ವಿಷ್ಣು ಸಭೈಯಿತನಿಂದ ಅರಮನೆಗೆ ಮುಂನ್ನುರ್ರು ಯಿಪತ್ತು ವರಹಾಂನ್ನು ತೆಗೆದುಕೊಂಡು ಗೊಕರ್ನ ಮಾಗಣಿ ಬಾರ್ರೆಕೊಡಲು ಗ್ರಾಮದಲು ಉತಾರವನ್ನು ಬಿಟ್ಟ  ವಿವರವನ್ನು ನಿರೂಪ ಹೇಳುತ್ತದೆ.
ಪುಟ ಸಂಖ್ಯೆ : ೩೪-೩೫
ಧಾತು ಸಂವತ್ಸರದ ಜೆಷ್ಠ ಬ ೧೩ರಲ್ಲು ಶ್ರಿಮತ್ಕೆಳದಿ ಬಸಪ್ಪನಾ
ಯಕರು|ವಿಷ್ಣು ಸಭ್ಯೆತಗೆ ಬರಶಿ ಕಳುಹಿದ ಕಾರ್ಯ | ನಿನ್ನು ಹುಜುರ್ರು
ಬಂದು|ಗೊಕರ್ನಕೆ ಹೊಗುವ ಮಾರ್ಗದಲು ಚಂದಾವರ  ಶಿಮೆ ವಳಗಣ
ಅಘನಾಶಿನಿ ಗ್ರಾಮದಲು ದೆವಸ್ತಾನದ ಕಟಿಶಿ ಪ್ರತಿಷ್ಠೆ ಮಾಡಿಸಿದ ಶ್ರಿ ಸ
ದಾಶಿವೆಶ್ವರ ದೆವರಿಗೆ ಕಟ್ಟಲೆ ರಥ ಉತ್ಸಹದ ಬಗ್ಗೆ ಸಹಾ ಪ್ರಾಕು ಉ
ತ್ತಾರವ ಕೊಟ್ಟ ಸ್ವಾಸ್ಥೆ ಸಾಲದಿದರಿಂದ | ಮಿಡಜಿ ಶಿಮೆಯಲ್ಲು
ಗಜನಿಭುಮಿಗಳ ಸಾಗುಮಾಡುವ ಬಗ್ಯೆ ಉತ್ತಾರವ ಕೊಟ್ಟಿದ್ದು
ಹಿತಲಮಕ್ಕಿ ಗ್ರಾಮದಿಂದಾ ಗ ೧೭||||೦ ತ್ತಾರಕ್ಕೆ ಗ್ರಾಮದಿಂದ ಗ ೩೨  ಹಾ ೨||
ಪುಟ ಸಂಖ್ಯೆ : ೩೩
ಉಭಯಂ ಗ ೫೦ ಹಾ ಅವತ್ತವರಹಾಂನ್ನ ಸ್ವಾಸ್ಥೆಯಂನ್ನು ಕಟಲೆ ರಥ
ಉತ್ಸಹದ ಬಗ್ಯೆ ಸಹಾ ಉತ್ತಾರವ ಕೊಡುವರ್ರಿತ್ತಿ ಅಪಣೆ ಆಗಬೆಕೆಂ
ದು ಹೆಳಿಕೊಳುತಾನೆಯಂದು ಶಿವಲಿಂಗಪನವರ್ರು ಹೆಳಿಕೊಂಡ ಸಂ
ಮ್ಮಂದ್ಧಾ | ಯಿ ವಿಷ್ಣು ಸಭಾಯಿತನ ಕೈಯಾ ಕಾಣಿಕೆ ಗ ೫೦ ಅವತ್ತುವ
ಚಂದಾವರದ ಶಿಮೆವಳಗಣ ಅಘನಾಶಿನಿ ನಧಿ ತ್ತಿರದ ಸಮಿ
ಪದಲ್ಲು ದೆವಸ್ಥಾನ ಕಟಿಶಿ| ಪತಿಷ್ಠೆ ಮಾಡಿದ ಶ್ರೀ ಸದಾಶಿವೆಶ್ವರ
ದೆವರ್ರಿತೆ ಆಗಶೆ ಗ್ರಾಮದಿಂದಾ| ಪಗುದಿ ಚಕ್ರವಂತ್ತಿಕೆಯಿಂದಾ
ಪುಟ ೩೫
ಸಹಾ ಪ್ರಾಕು ಸಂವತ್ಸರದಲ್ಲು | ಉತ್ತಾರವ ಕೊಟದು ಗ ||
ವಂ ಭತ್ತ ೧೧ ಲು ಉತ್ತಾರವಉ| ಸಾಲದು ಯಂದು|ಕ್ರಯ ಕೊ
ಟೆನು ಸ್ವಾಸ್ಥೆ ಉತಾರವ ಕೊಟು ಶಿಲಾಸ್ಥಾಪಿತವ ಮಾಡಿಶಿ
ಕೊಟು ನಿರೂಪಕ್ಕೆ ಅಪ್ಪಣೆ ಆಗಬೆಕೆಂದು| ವಿಷ್ಣು ಸಭಾಯಿ
ತನು| ಹೆಳಿಕೊಳುತ್ತಾನೆ ಯಂತ್ತಾ | ಶಿವಲಿಂಗಪ್ಪನವ
ರು ಹೆಳಿಕೊಂಡ ಸಂಬಂಧ | ಸಭಾಯಿತನ ಕೈಯ
ಗ ೨೮೯ ಹಾ ಂ ಯಿಂನುರ ಯೆಂಭತ್ತ ಒಂಬತ್ತು ವರಹಾನ್ನು ಅ
ರಮನೆಗೆ ತೆಗದುಕೊಂಡು | ಉತಾರವ ಕೊಟಿದು | ಮಿಡಜೆ
ಶಿಮೆಗೆ ಗೊಕರ್ನದ ಮಾಗಣಿಹಾರೊಮಾಸಗೆರ್ರೆ ಗ್ರಾಮದಲ್ಲು|
ಗ ೨೪ ಹಾ ಂ ಯಿ ಗ ಹೆಚಿದ್ದು ಪಗಡಿ ಚಕ್ರವಂತಿಕೆಯಿಂದ ಗ ೪||
ಉಭಯಂ ಗ ೨೮||ಂ ಇಪ್ಪತ್ತಯೆಂಟು ವರ್ರೆ ವರಹಾಂನ್ನ ಸ್ವಾ
ಸ್ಥೆಯನ್ನು | ಗೊಕರ್ನಕ್ಕೆ ಹೊಹ ಮಾರ್ಗದಲ್ಲು | ಅಗನಾಶಿನಿ
ನದಿ ಸಮಿಪದಲ್ಲು | ಚಂದಾವರದ ಶಿಮೆ ಅಗಸೆ ಗ್ರಾಮದಲ್ಲು
ದೆವಸ್ಥಾನದ ಕಟಿಶಿ ಪ್ರತಿಷ್ಠೆ ಮಾಡಿದ | ಶ್ರೀ ಸದಾಶಿವೆಶ್ವರ ದೆವ
ತಾವೆಚ್ಚಕೆ ಶಿವಾರ್ಪಿತವಾಗಿ ಕೊಟು | ವಾಮನ ಮುದ್ರೆ
ಶಿಲಾಸ್ಥಾಪಿತ ಮಾಡಿಸುವ ಬಗ್ಗೆ | ಹುಜುರ್ರಿಂದ | ಉಳಿಗದ
ಶಿದನ ಕಳುಹಿಸಿದೆವೆ | ಚಉ ಗ್ರಾಮದವರ ಕರೆಸಿಕೊಂ
ಡು ಗಡಿ ತತ್ವಾರ ಬಾರದಿದ ರ್ರಿತ್ತಿ | ಯಿವನ ಮುಂತಿಟ್ಟು
ರೆಖೆ ಪ್ರಮಾಣು ಶಿಲಾಸ್ಥಾಪಿತ ಮಾಡಿಶಿ ಕೊಟು | ಯಿ ಕಾಗ
ದ ಶಾನಬೊವರ ಬರಹಕ್ಕೆ ಬರಶಿ ತಿರುಗಾ ನಿನು
ತೆಗದುಕೊಂಬುವದಾಗಿ | ಯಿದರ ಅಸಲು ಯಡವಟ್ಟು
ಆಯಿತ್ತಂತೆ ವಾಲೆ ಮೆಲೆ ಬರದ ನಖಲು ಪ್ರತಿ |
ಸಾರಾಂಶ : ಕ್ರೊಧನ ಸಂವತ್ಸರದಲ್ಲಿ ಶ್ರೀಮತ್ ಕೆಳದಿ ಬಸವಪ್ಪನಾಯಕರ್ರು | ವಿಷ್ಣು ಸ್ಸಭಾಯಿತ್ತಗೆ ಬರಶಿ ಕಳುಹಿದ ಕಾರ್ಯ ಇದಾಗಿದೆ. ಗೊಕರ್ನಕ್ಕೆ ಹೊಗುವ ಮಾರ್ಗದಲ್ಲು ಚಂದಾವರದ ಶಿಮೆ ವಳಗಣ ಅಘನಾಶಿನಿ ನಧಿ ತ್ತಿರದಸಮಿಪದಲ್ಲು ದೆವಸ್ಥಾನ ಕಟಿಶಿ | ಪತಿಷ್ಠೆ ಮಾಡಿದ ಶ್ರೀ ಸದಾಶಿವೆಶ್ವರ ದೆವರ್ರಿಗೆ ಅಗಶೆ ಗ್ರಾಮದಿಂದಾ | ಪಗುದಿ ಚಕ್ರವಂತ್ತಿಕೆಯಿಂದಾ ಈ ಸಂವತ್ಸರದಲ್ಲಿ ಉತ್ತಾರವ ಕೊಟದ್ದು ಸಾಲದಾಗಿದೆ ಎಂದೂ ಕ್ರಯವನ್ನು ಕೊಡುತ್ತೇನೆ ಸ್ವಾಸ್ಥೆ ಉತ್ತಾರವ ಕೊಟ್ಟು ಶಿಲಾಸ್ಥಾಪಿತವನ್ನು ಮಾಡಿಸಿಕೊಡುವ ನಿರೂಪಕ್ಕೆ ಅಪ್ಪಣೆ ಆಗಬೇಕೆಂದು ವಿಷ್ಣು ಸಭಾಯಿತನು | ಹೆಳಿಕೊಳುತ್ತಾನೆಂದು ಶಿವಲಿಂಗಪ್ಪನವರು ಹೆಳಿದ್ದರಿಂದ ಸಭಾಯಿತನ ಕೈಯ ಯಿಂನುರ ಯೆಂಭತ್ತ ಒಂಬತ್ತು ವರಹಾನ್ನು ಅರಮನೆಗೆ ತೆಗೆದುಕೊಂಡು ಉತಾರವ ಕೊಟ್ಟ ವಿವರ ಈ ನಿರೂಪ ತಿಳಿಸುತ್ತದೆ.
ಪುಟ ಸಂಖ್ಯೆ : ೩೪
ವಿಭವ ಸಂವತ್ಸರದ ಚಯಿತ್ರ ಶು ೧೩ಲೂ ಶ್ರೀಮತ್ಕೆಳದಿ ಬಸವ
ಪ್ಪನಾಯಕರ್ರು | ವಿಷ್ಣು ಸಭೈತಗೆ | ಬರಶಿಕಳುಹಿದ ಕಾರ್ಯ| ನಿನ್ನು ಹು
ರಹಾಂನ್ನು ಅರಮನೆಗೆ ತೆಗದುಕೊಂಡು ಮಿಡಜೆ ಶಿಮೆಯಲ್ಲಿ ಗಜಿ
ನಿ ಭುಮಿ ಸಾಗು ಮಾಡುವ ಬಗ್ಯೆ ಉತ್ತಾರವ ಬಿಟ್ಟುಕೊಟದು ಹಿತಲಮ
ಕ್ಕಿ ಗ್ರಾಮದಿಂದ ಹದಿನೆಳು ಯೆಳು ಹಣ ಅಡಾ|ತ್ತೊರಕೆ ಗ್ರಾಮದಿಂದಾ
ಮೂವತ್ತೆರಡು ಯಿಷಣ ಅಡಾ | ಉಭಯಂ ಅವತ್ತು ವರ ಹೊಂ
ನ್ನು ಶ್ರಿ ಸದಾಶಿವೇಶ್ವರ ದೆವರ್ರಿಗೆ ಕಟಲೆ ರಥ ಉತ್ಸಹದ ಬಗ್ಯೆ ಸಹಾ|
ತ್ತಾರವ ಕೊಟು ಪ್ರಾಕು ಉತಾರ ಸ್ವಾಸ್ಥೆಯಿಂದ ಸಹಾ ದೆವತ್ತ ಶೆವೆನ
ಡಶಿ ಬರಹೆಳಿಕೊಟಧೆ| ಪ್ರಾಕು ಉತ್ತಾರ ಸ್ವಾಸ್ಥೆಯಿಂದ ಸಹಾ| ದೆವ
ತ್ತಾ ಸೆವೆ ಸಾಂಗವಾಗಿ ನಡಸುತ್ತಾ ಬಾಹುದು ಯಿ ಕಾಗದ ಶ್ಯಾನಬ
ವರ ಬರಹಾಕ್ಕೆ ಬರಶಿ ತಿರ್ರುಗಾ ತೆಗದುಕೊಂಬುವದೂ || ||
|| ಯಿದರ ಅಸಲು ಯೆಡವಾರ್ರಲಾಯಿತಂತೆ ವಾಲೆ ಮೆಲೆ
ಬರದ ನಖಲಿನಪ್ರತ್ತಿ | ಯಿ ವಾಲೆ ಗಣಪಸಭ್ಯಾತನವ್ಸಾಯಿಧೆ|
ಸಾರಾಂಶ : ಧಾತು ಸಂವತ್ಸರದ ಜೆಷ್ಠ ಬ ೧೩ರಲ್ಲಿ ಶ್ರಿಮತ್ಕೆಳದಿ ಬಸಪ್ಪನಾಯಕರು ವಿಷ್ಣು ಸಭೈತಗೆ ಬರಶಿ ಕಳುಹಿದ ಕಾರ್ಯ ಇದಾಗಿದೆ. ಗೊಕರ್ನಕೆ ಹೊಗುವ ಮಾರ್ಗದಲು ಚಂದಾವರ ಶಿಮೆ ವಳಗಣ ಅಘನಾಶಿನಿ ಗ್ರಾಮದಲು ದೆವಸ್ಥಾನದ ಕಟಿಶಿ ಪ್ರತಿಷ್ಠೆ ಮಾಡಿಸಿದ ಶ್ರಿ ಸದಾಶಿವೆಶ್ವರ ದೆವರಿಗೆ ಕಟ್ಟಲೆ ರಥ ಉತ್ಸಹದ ಬಗ್ಗೆ ಸಹಾ ಪ್ರಾಕು ಉತ್ತಾರವ ಕೊಟ್ಟ ಸ್ವಾಸ್ಥೆ ಸಾಲದಿದ್ದರಿಂದ ಮಿಡಜಿ ಶಿಮೆಯಲ್ಲು ಗಜನಿ ಭುಮಿಗಳ ಸಾಗು ಮಾಡುವ ಬಗ್ಯೆ ಉತ್ತಾರವ ಕೊಟಿದ್ದನ್ನು ಈ ನಿರೂಪ ಹೇಳುತ್ತದೆ.
ಹೀಗೆ ಈ ನಿರೂಪಗಳು ಗೋಕರ್ಣ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲು ಪ್ರಮುಖ ಆಕರಗಳಾಗಿವೆ. ಈ ನಿರೂಪದಲ್ಲಿ ಉಲ್ಲೇಖಗೊಂಡಿರುವ ದೇವಾಲಯಗಳ ಅವಶೇಷಗಳು ಇಂದೂ ಗೋಕರ್ಣದಲ್ಲಿ ಕಾಣಬಹುದಾಗಿದೆ. ಕೆಲವಕ್ಕೆ ಪೂಜೆ ನಡೆಯುತ್ತಿದ್ದರೆ ಇನ್ನು ಕೆಲವು ಪುರೋಹಿತರ ಮನೆಯ ನಡುಮನೆಯಲ್ಲಿವೆ. ಕೆಲ ಕಡೆಗಳಲ್ಲಿ ಹೆಸರು ಮಾತ್ರ ತಿಳಿದುಬರುತ್ತದೆಯಾದರೂ ಲಿಂಗವನ್ನು ತೆಗೆದುಬಿಟ್ಟಿರುವು ದನ್ನು ನೋಡಬಹುದಾಗಿದೆ. ಗೋಕರ್ಣೇಶ್ವರನಿಗೆ ಇರುವ ಪ್ರಾಶಸ್ತ್ಯ ಈ ದೇವಾಲಯಗಳಿಗೆ ಇರುವುದಿಲ್ಲ.
ಸಾಮಾಜಿಕ ಮತ್ತು ಧಾರ್ಮಿಕ ಅಧ್ಯಯನ ನಡೆಸಲು ಇಂತಹ ನಿರೂಪಗಳು ಉತ್ತಮ ಆಕರಗಳಾಗಿವೆ. ಇಂತಹ ನಿರೂಪಗಳು ಗೋಕರ್ಣದ ಪ್ರತಿಯೊಬ್ಬರ ಮನೆಯಲ್ಲಿಯೂ ಲಭ್ಯವಿವೆ. ಇವುಗಳನ್ನು ಸಂಗ್ರಹಿಸುವ ಮತ್ತು ಪ್ರಕಟಿಸುವ ಕೆಲಸ ಆಗುತ್ತಿರುವುದು ನಮ್ಮ ಸುದೈವ. ಗೋಕರ್ಣ ಇತಿಹಾಸಕ್ಕೆ ಇದು ಹೊಸ ಸೇರ್ಪಡೆಯಾಗಿದೆ.



No comments:

Post a Comment