Saturday, December 27, 2014

ಹಳ್ಳಿಕೆರೆ ರಾಷ್ಟ್ರ ಕೂಟ ಅಸಗನ ಶಾಸನ


ಹರಪನಹಳ್ಳಿ ತಾಲ್ಲೂಕು ಹಳ್ಳಿಕೆರೆ ರಾಷ್ಟ್ರಕೂಟರ
ಅಸಗನ ಶಾಸನ
ರಾಘವೇಂದ್ರಾಚಾರಿ ಕೆ.ಎಂ
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು, ಹಳ್ಳಿಕೆರೆ ಗ್ರಾಮವು ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದ ಕೆರೆಯಲ್ಲಿರುವ ಕಲ್ಲೇಶ್ವರ ದೇವಾಲಯವು ಬಹಳ ಪ್ರಾಚೀನತೆಯನ್ನು ಹೊಂದಿದೆ. ಈ ದೇವಾಲಯ ದಕ್ಷಿಣ ಭಾಗದ ಗೋಡೆಗೆ ನಿಲ್ಲಿಸಿರುವ ಎರಡು ಶಾಸನಗಳಲ್ಲಿ ಒಂದು ಶಾಸನವು ರಾಷ್ಟ್ರಕೂಟರ ಅಸಗರಸನು ಕ್ರಿ.ಶ.1073ರಲ್ಲಿ ಸ್ವಯಂಭೂ ಮಲ್ಲಿಕಾರ್ಜುನದೇವರು ಮತ್ತು ಆದಿತ್ಯದೇವರ ದೇವಾಲಯ ಮತ್ತು ಗೋಪುರವನ್ನು ಕಟ್ಟಿಸಿ, ದೇವಾಲಯದ ಪೂಜಾ ಕೈಂಕರ್ಯಗಳಿಗೆ ಭೂದಾನವನ್ನು ಮಾಡಿದ್ದಂತೆ ತಿಳಿಸುತ್ತದೆ.
ಪ್ರಸ್ತುತ ಶಾಸನವು ರಾಷ್ಟ್ರಕೂಟರ ಅಸಗರಸನ ಪರಾಕ್ರಮವನ್ನು ವರ್ಣಿಸಲು ಮೀಸಲಾಗಿರುವ ಶಾಸನವಾಗಿದೆ. ಈ ಶಾಸನದಲ್ಲಿ ಮೂವತ್ತು ಸಾಲುಗಳಿದ್ದು, ಯಾವುದೇ ದೇವತಾ ಶ್ಲೋಕಗಳಿಲ್ಲದೆ ನೇರವಾಗಿ ಅಸಗರಸನನ್ನು ಅವನ ವೀರ ಪರಾಕ್ರಮವನ್ನು ವರ್ಣಿಸುತ್ತದೆ. ಈ ಶಾಸನದ ಆರಂಭದ ಭಾಗ ಬೇರೊಂದು ಕಲ್ಲಿನಲ್ಲಿದೆ. ಆ ಶಾಸನದ ಶೋಧ ಮಾಡಬೇಕಾಗಿದೆ. ಈ ಶಾಸನವು ಅಸಗರಸನು ಸೂರ್ಯ ವಂಶದಲ್ಲಿ ಉದ್ಭವಿಸಿದ ಕಣ್ವನಿಗಿಂತ ಮಿಗಿಲಾದ ವೀರಲಕ್ಷ್ಮಿಯನ್ನು ಧರಿಸಿದ ಸತ್ಕ್‍ವೀಂದ್ರ ನೆನೆಸಿ ಕೀರ್ತಿಲಕ್ಷ್ಮಿ ಒಲಿಸಿಕೊಂಡು ವಿಜೃಂಭಿಸಿದನು. ರಟ್ಟರಾಜೇಂದ್ರಭೂಪ ಎಂದು ಎತ್ತೆತ್ತ ನೋಡಿದರು ಅಸಗರಸನ ಕೀರ್ತಿಯೇ ತುಂಬಿರಲು ಧೀರ ವಿಕ್ರಮ ಭೂಪತಿ ರಟ್ಟನಾರಾಯಣನೆಂಬ ಕೀರ್ತಿಗೆ ಪಾತ್ರವಾಗಿದ್ದಾನೆ.
ರಾಷ್ಟ್ರಕೂಟರ ಶಂಕರಗಂಡನ ಪೂರ್ವಜರಲ್ಲಿ ಅಸಗರಸನ ಉಲ್ಲೇಖ ಉಪ್ಪಿನ ಬೆಟಗರಿ ಮತ್ತು ಕೊಲ್ಲಿಪಾಕಿ ಶಾಸನಗಳಲ್ಲಿ ಬರುತ್ತದೆ. ಈ ಮನೆತನದ ತಲೆಮಾರಿನಲ್ಲಿ ಒಬ್ಬ ವ್ಯಕ್ತಿಗೆ ಈ ಹೆಸರನ್ನಿಟ್ಟುದ್ದು, ಈ ವಂಶದ ಪಾರಂಪರಿಕ ಬಿರುದುಗಳೊಂದಿಗೆ ಈತನ ಹೆಸರಿನ ಅಸಗೇಶ್ವರ ದೇವಾಲಯಗಳು ಇವೆ. ಈ ಅರಸನ ವಿಷಯವಾಗಿ ಇನ್ನು ಶೋಧನೆ ನಡೆಯಬೇಕಿದೆ.
ಶಾಸನಪಾಠ
1 ಆತನಕ್ಷ ಚೋಳ ಮಾಡುತರದಿ . . ನಿದ್ದರಣ್ಯಾನ್ಮಕ್ಷರಕ್ರ . . . . . ಮ.ಕ್ಷ . . . ನಂ
2 ಗತರಾ.ದನ್ತಿಯೊಳಿಕಲೆವಿವಿೂಗಳನಳದ್ವಿಕ್ರಮಶ್ರೀ . . . ಣ ಪೇಳ
3 ಯಾ£ಡುಞವಾ : ಣ್ಡನದಂಲ್ಯಾಕಾನ್ತಮಂ ಪಕ್ಷದ್ವಳಿಸಗರಿಪುಳ್ವ . ಕಸ್ದ . ಭೂಪ|| ಶ್ರೀಣೇತ್ರಾ
4 ಶ್ರೀಯಂತಕ್ರ್ಕಯ್ಯ ವಕ್ಷ ಸ್ಥಳದೊಳವಿಸಿಕಣ್ವಣೋಲ್ತೊ ಮೇಲ್ವಾಯ್ದ ವೀರಶ್ರೀ
5 ಯಂಕೈಕೊಣ್ಡ | ದೋದ್ರ್ದಣ್ಡದೊಳಿರಿಸಿ ವಹಾಧಿಸ್ತಾವತನೈಸದಿಂ ವಾರ್ಕಶ್ರೀಯಂತಾಳ್ದಯ್ದ
6 ವಕ್ತ್ರಾಂಬು ಜಗೋಳಿರಿಸಿಪೃಇಷ್ಟಾತ್ರ್ಥಮಂ ಕೊಟ್ಟು ಕೀರ್ತಿಶ್ರೀಯಂ ಸ್ವೇಛ್ಛಾದಿಹಾರಕ್ರಮದಳಿರಿಸುಗಂರ
7 ಟ್ಟ ಮಾತ್ರ್ತಾಣ್ಡದೇವ || ಸಂಗರದೇ(ಳ್ದೆ)     ಂಬಿದರಕಂತ    ದಿದೇಜಯಾಂಗ ನಾಸಮಾಲಿಂಗನೆ ಗೆಯ್ದುವ.
8 ರಳವಟ್ಟಿರೆ ಮಾಡಿದ £ನ್ನ ಬೀರಚಾಶಾಂ: ನೆಯರ್ಕಳಾ (ನ್ನ) ಲಿಯಲಾರ್ಕದ . . . .ಯ್ದಗಣ್ಡರನೆಯ್ದೆಸೆಹ್ದಾವೆ
9 ಟಂಗೋಳಿಸಿತ್ತೂಗಣ್ಡಮುಮದರ್ಪಣಗಣ್ಡರ ಹಿವ ಭೂಪತಿ || ಆವಿಭೂಭ್ರಿದ್ಗೋತ್ರಿಗೋತ್ರಾಛಳಕುಳದೊಳೀ
10 ಶಂ ಬನ್ದುವಗ್ರ್ಗೊಬ್ಟಿಂನ(ವಾ) ಸರನಾಥಂ ಸತ್ಕವೀಂದ್ರ ದ್ವಿಜಮುನಿಜಂನರದ್ವಪ್ರಮಂವೀರ. . ತಾತಾರಾಳ್ದು ಪಾಂಗಾಸಿತಂದಿ
11 ವರಸರಸಸರಶ್ಚಂದ್ರಮಂ ಕೀತಿರ್() ಲಕ್ಷ್ಮೀಧರಹಾಸಂ ಸ್ತೈ ಪು ಸ್ವ ನ್ಮ ಣಿ ಮಯಮುಣಳಂರಟ್ಟರಾಜೇಯ
12 ಭೂಪ|| ಛಲದಿಂ ನಮ್ಮಂದು ಚೋಳ ದ್ವೀರದ ಪುಟಗಳದ್ವಿತ್ತೆದಣ್ಡಾದುದೆಲ್ಲಂ ತಲುಸೆದ್ದ್ಯಾಟಲ್ಕೆನಿನಾಂ
13 ತಿ   ದಿ   ದೇದೆಯೊಳುವ್ಯಾಳಮಾಣ್ಡಾಳೆಕಂಬ ಸ್ತಳ ನಿಯ್ರ್ಯಾದ್ರಕ್ತಮುಕ್ತಾತತಿವಿತತಿಗಳಿಂ . ಸಂಗರಪ್ರಾಂಗ
14 ಣಂ ಪೋವಲಿಗೆಯ್ದಂತಿ     ದಾಶ್ಚಯ್ರ್ಯಂಮ(ನೊ) ದವಿಷ್ಟಾತ್ರ್ಥಕೊಂತೆÀ್ತಕಾಂತೆಯಭೂಪಾ||ಮದನ(ವಿ)ರೋದಿ
15 ಗಿಲ್ಲದವಿಭೂತಿಮಹಾತ್ಪತೆಗೆಲ್ಲದೊಂದು ಸಂಪದವಿನ . . ಸಹಾಪಿ . . . ವಿಜೇಂದ್ರದಂತಿಗಿ.
16 ಲ್ಲದಮದದಾನಮಂಬುಗಿದ್ವಿಗಿಲ್ಲದ ಪಾರಗಂಭೀರ ಮಾಗ್ಗೆವಿಲ್ಲದ . ಗ್ವಿದ್ಯೆಯ(ಬ)ಣ್ನಿಸುವೊಂದೊಪ್ಪದೆ
17 ವಿಕ್ರಮಧೀರಭೂಪತಿ ||ಎತ್ತೆತ್ತಲಸಗನ ಪೇವ್ದಿತ್ತೆತ್ತಲಾ ಚಕ್ರಿಯೋ . . . . .(ಶಿ)ಮಿ  ್ದಮ  ್ದನಯಂಬೆ
18 ತ್ತೂಪತಕಲಿಸಿಸಲೆಡಿಗ್ಭಿತ್ತಿವರಂ ಪೇಕ್ಷಿಸುಚ್ಚಿದಳ್ಳಿಸುತಿರ್ಕು || ಹೊಚ್ಚಾ . . . . ಜ.ಳದಿಲೆರೊರ್ವರೆವರನ
19 ಮತ್ತಸೇತೂವಿತ್ತಲ್ನಹಿಮಹತ್ಪಕ್ಷಂತಂಮೆಮೆರತಜದ ಪಬ್ರ್ಬನಿಸಿದಂರು(ದಿ)ಸಿರಟ್ಟನಾರಾಯಣನ@|
20 ಆತನರಿಪುನೃಪರಬಲಮೆನೆತೆಣ ತ್ಯಮನವಯ ವದೇಮಾಂಗಲ ಸಗಂನೆಕೊಂತಂತಿನಿ (ಣ) ದೇರಳ್ಗನೆಯ್ದವಾಸು
21 ಗಿಯೆನೇರಣಮುಖದೊಳಾನಿಹಶ್ರಮು . ಮುಂಚೊಕ್ರ್ಕ || ಭುವನಕಾದ.ರದಪ್ಪಮನದಿಪ್ರ್ಪಂ£ನ್ನಯಗೆಣ
22 ತಕ್ರ್ಕನೋಸ್ನವಬಿಪಾವಾಸದೊ   . . . ಮಲ್ಯಾವರಲ್ಪಚದಣ್ಡ . ಗಳ್ವ ಪತ್ತು . . ಮಿವ್ವೆತ್ತುಚೊತ್ತೂವಕುಹಳ್ಚಾದಕ
23 ಪ್ಪಿಸುವಾಂಕೆಗೊಳ್ವಖಿಚ್ರ್ಚುವಸೆಳೆವುಚ್ರ್ಚ . ಗಪ್ಪೆಶಷತ್ತನ್ಯತಗಣ್ದರ . . ಭೂಪತಿ || ಪರಚಕ್ರಾದ್ವಂ
24 ಚೋಳಾಸುರಕಟಕಮುರದ್ವಂಸಿಞಪ್ಪೆಮ್ಮಹಾಗಣ್ಡರ . . . . . . ನಿನ್ನೆದಳಕೆ ಪರಲೋರಳ್ಕಯ್ಯ
25 ಮತ್ತ್ರ್ಯವನಿಪ . . . . ಯಿಲ್ಯುಕೊಡ . . . ದ್ವವ.ಸೆ . . . . . . ಳು . . ಸರಪು
26 ದು . . . ದ್ರಾಹನದಿವಿದಿವಿ . . . .  ಯಮಾವ್ಯೆ . . . . . . . . . . ಣಿಲ್ಲಳಂಮುಡಿ . . ಣ್ನಂ . . .
27 ಬಿದಪಣ್ಡು . . ತಳಿತೆಮಿದ್ದಳ ಪವಣ್ಬಪೇತಿಪು . . . . . . . . . . . .ರೆದಿರೆಕ . . . ಟ್ಟಿಪಿ . . . . .
28 ಸವಮಂನಸ . . . . ಚಾಳುತೂಂಪ . ಸುತ್ಯ . ಲ್ದ . ಬಿರಸಿ . ರಿ . ತೋಟಿದೆ ಪಲರೊದೆಗಣ್ಡನಂ
29 ಶ್ರೀರಟ್ಟಾನ್ವಯೇಸಂದೇತಮಂತಕೋತೆಯ ಭೂಭೂದೇಃತತ್ಪಾದಪ . ಪಚಿಲಿರತ್ನರಾ . . .
30 ಲಿಖ್ಯತೇ | ಶ್ರೀ
 ಟೈಲ್ಸ್ ಮೇಸ್ತ್ರಿ, 3ನೇ ಕ್ರಾಸ್, ಭಾರತ್ ಕಾಲೋನಿ, ದಾವಣಗೆರೆ-3.



No comments:

Post a Comment