Wednesday, October 9, 2013

ಡಾ. ಜ್ಯೋತ್ಸ್ನಾ ಕಾಮತ್‌

ಸಂಶೋದಕಿ, ಸಾಹಿತಿ -ಡಾ. ಜ್ಯೋತ್ಸ್ನಾ ಕಾಮತ್

ಪ್ರತಿ ಯಶಸ್ವಿ ವ್ಯಕ್ತಿಯ  ಹಿಂದೆ ಒಬ್ಬ ಆತ್ಮೀಯರು ಇದ್ದೇ ಇರುವುರು.ಆದರೆ ತಾನೂ ಯಶಸ್ಸು ಪಡೆದು ತನ್ನ ಸಂಗಾತಿಯ ಯಶಸ್ಸಿಗೂ ಕಾರಣರಾಗುವವರು ವಿರಳ. ಅದರಲ್ಲೂ ದಂಪತಿಗಳಲ್ಲಿ ಒಬ್ಬರು ವಿಜ್ಞಾನಿ ಇನ್ನೊಬ್ಬರು ಇತಿಹಾಸ  ಸಂಶೋದಕರು.ಅಲ್ಲದೇ. ವೈವಾಹಿಕ ಜೀವನದ ಅರ್ಧಕ್ಕೂ ಹೆಚ್ಚು ಅವಧಿ ದೂರದೂರವೇ ಇದ್ದ ವೃತ್ತಿ ಪರರು. ಅವರದು  ಪತ್ರದಾಂಪತ್ಯ ಆದರೆ ಇಬ್ಬರ ಮನಸ್ಸೂ ಏಕೀಭವಿಸಿದ್ದು ಸಾಹಿತ್ಯದಲ್ಲಿ. ಅದರ ಲಾಭವಾದದ್ದು ಮಾತ್ರ ಕನ್ನಡ ಸಾರಸ್ವತ ಲೋಕಕ್ಕೆ.ಅನುಪಮಾನಿರಂಜನ, ಕಮಲಾಹಂಪನಾ ಅವರ ಸಾಲಿನಲ್ಲಿಯೇ ಪ್ರಖರವಾಗಿ ಕಾಣುವವರು ಡಾ. ಜ್ಯೋತ್ಸ್ನಾಕಾಮತ್

Jyostna Kamat
ಡಾ. ಜ್ಯೋತ್ಸ್ನಾಕಾಮತ್‌ 

ಜೋತ್ಸ್ನಾ    ಜನಿಸಿದ್ದು  24-3-1943ರಲ್ಲಿ  . ಜನ್ಮ  ಸ್ಥಳ ಮಹಾರಾಷ್ಟ್ರದ ಸತಾರಾ ಜಿಲ್ಲೆಯನ ವಾಯಿ ಎಂಬಊರು ಅವರದು ಮಧ್ಯಮವರ್ಗದ ಕುಟುಂಬ. ತಂದೆ ಗಣೇಶ್‌ಬುರ್ಡೆ ಪೋಸ್ಟ್‌ ಮಾಸ್ಟರ್, ತಾಯಿ ಶಾರದಬಾಯಿ ಬುರ್ಡೆ. ಅವರದು ಇಬ್ಬರು ಸೋದರಿಯರು ಒಬ್ಬ ಸೋದರನಿಂದ ಕೂಡಿದ ತುಂಬುಕುಟುಂಬ, ಏಳರ ಎಳೆ ವಯಸ್ಸಿನಲ್ಲಿಯೇ ತಾಯಿಯ ಮರಣ. ಮಲತಾಯಿ ಬಂದರೂ ಅವರ ಮುಗ್ದತೆಯಿಂದಾಗಿ ಅವರ ಮಕ್ಕಳ ಹೊಣೆಯೂ ಅಕ್ಕನ ಪಾಲಿಗೆಗೆ. ತಂದೆಯದು ವರ್ಗವಾಗುವ ನೌಕರಿ ಪರಿಣಾಮ. ಸರ್ಕಾರದ ವೆಚ್ಚದಲ್ಲಿ  ಬೇರೆ ಬೇರೆ ಊರು ನೋಡುವ ಅವಕಾಶ. ಪ್ರಾಥಮಿಕ ಶಿಕ್ಷಣ ಹಿರೆಕೇರೂರಿನ ಸಾಲಿಗುಡಿಯಿಂದ ಹಿಡಿದು  ಹಲವು ಕಡೆ ಅಂದರೆ .ಧಾರವಾಡ ಅಂಚೆ ವೃತ್ತದಲ್ಲಿನ ಅನೇಕ ಚಿಕ್ಕ ಪುಟ್ಟ ಪಟ್ಟಗಳಲ್ಲಿ ಅವರ ಅಭ್ಯಾಸ ಸಾಗಿತು.  ಹೈಸ್ಕೂಲು ಶಿಕ್ಷಣ ಕುಮಟಾದಲ್ಲಿ. ಸಾಹಿತ್ಯಾಸಕ್ತಿ ತಂದೆಯ ಬಳುವಳಿ.ಮನೆಯಲ್ಲಿದ್ದ  ಪುಸ್ತಕ ಸಂಗ್ರಹವು ಸಹಜವಾಗಿಯೇ ಸಹಾಯಮಾಡಿತು   ಬಾಲ್ಯದಲ್ಲಿಯೇ ಕನ್ನಡ , ಇಂಗ್ಲಿಷ್, , ಕೊಂಕಣಿಮರಾಠಿ ಸಲೀಸು, ಹೈಸ್ಕೂಲಿನಲ್ಲಿ ಸಂಸ್ಕೃತ ಪ್ರಾವಿಣ್ಯ ಆಕಾಶವಾಣಿಯಲ್ಲಿ ಉದ್ಯೋಗ ದೊರೆತಾಗ   ,ಬಂಗಾಲಿ ಹಿಂದಿ ಭಾಷೆಗಳ ಕಲಿಕೆ. ಹಾಗಾಗಿ ಬಹುಭಾಷಾ ಪ್ರಾವೀಣ್ಯತೆ.
ಕಾಲೇಜು ಶಿಕ್ಷಣ ಸಾಂಸ್ಕೃತಿಕ ನಗರ ಧಾರವಾಡದಲ್ಲಿ. ಪದವಿಯಲ್ಲಿ ಕನ್ನಡ ಮತ್ತು ಸಂಸ್ಕೃತ ಅಧ್ಯಯನ. ಸ್ನಾತಕೋತ್ತರ ಅಧ್ಯಯನ ಮಾಡುವಾಗ ಬಂದ ಇತಿಹಾಸ ತಜ್ಞ ಪ್ರೊ. ಜಿ, ಎಸ್‌ ದೀಕ್ಷಿತ್‌  ಸಂಪರ್ಕ. ಅವರು ಜೀವನ ಪೂರ್ತಿ ಮುಂದುವರೆಯಿತು. ಉದ್ಯೋಗಾವಕಾಶ ದೊರಕುವುದೆಂದು ಡಿಪ್ಲೊಮ ಇನ್‌ ಎಜುಕೇಷನ್‌ ಮಾಡಿದರು.  ಹಣಕಾಸಿನ ಅನಿವಾರ್ಯತೆಯಿಂದ ಶಿಕ್ಷಕಿಯಾಗಿ ಮೊದಲು ಕೆಲಸ ಮಾಡಿದರೂ ನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಶಿಷ್ಯವೇತನ ದೊರೆಯಿತು. ಸಂಶೋಧನ ಸಹಾಯಕ ಹುದ್ದೆ ದೊರೆತಾಗ ಅಧ್ಯಯನಕ್ಕೆ ಅನುವು ದೊರೆಯಿತು. ಆಗ ಗುರುಗಳ ಮಾರ್ಗದರ್ಶನದಲ್ಲಿ ಗಂಭೀರ ಅಧ್ಯಯನ ಸಾಗಿತ್ತು. ಹಾಗಿರುವಾಗ ಆಕಾಶವಾಣಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾ ಪರೀಕ್ಷೆ ನಡೆಯಿತು. ಡಾ. ದೀಕ್ಷಿತ್‌ರ ಉತ್ತೇಜನದಿಂದ  ಶ್ರಮಿಸಿ  ಉತ್ತೀರ್ಣರಾದರು . ಅಧಿಕಾರಿಯ ಹುದ್ದೆಗೆ ಆಯ್ಕೆ ಆಯಿತು. ಅಲ್ಲಿಂದ ಅವರ ಬದಕು ಹೊಸ ತಿರುವು ಪಡೆಯಿತು. ಅವರ ಕಾರ್ಯಕ್ಷೇತ್ರದ ವ್ಯಾಪ್ತಿ ವಿಶಾಲವಾಯಿತು. ರಾಜ್ಯ ಬಿಟ್ಟು ದೇಶದ ಯಾವ ಮೂಲೆಗೆ ಹಾಕಿದರೂ ಹೋಗಬೇಕಾಗುವುದು ತುಂಬ ಕಠಿನ ಎಂಬ ಅನೇಕರ ಅನಿಸಿಕೆಗೆ ಬೆಚ್ಚದೆ ಮತ್ತೆ ಗುರುಗಳ ಮಾರ್ಗದರ್ಶನದಿಂದ   ಅವರ ನೀಡಿದ ಪ್ರೋತ್ಸಾಹದಿಂದ ವೃತ್ತಿ ಬದಕು ಪ್ರಾರಂಭ ಮಾಡಿದರು.  ವೃತ್ತಿಯಲ್ಲಿ  ಮತ್ತು ವೈಯುಕ್ತಿಕ ಜೀವನದಲ್ಲೂ ಗುರುಗಳು ಆತ್ಮೀಯತೆಯಿಂದ ಮುನ್ನೆಡಸಿದರು.ಅಷ್ಟು ಗಾಢ ಗುರುಶಿಷ್ಯರ ಸಂಬಂಧ.
 ಅವರ ಮಾರ್ಗದರ್ಶನದಲ್ಲೇ . ಪಿಎಚ್‌.ಡಿ ಮಾಡಿದರು.  ಆಕಾಶವಾಣಿಯಲ್ಲಿನ ಪ್ರೋಗ್ರಾಮ್‌ ಆಫೀಸರ್‌ ಹುದ್ದೆ ಯೂ ಅವರ ಆಸಕ್ತಿಗೆ ಪೂರಕವಾಯಿತು. ಸಾಹಿತ್ಯ ಸಂಗಿತ ಲೋಕದ ದಿಗ್ಗಜರ ನಿಕಟ ಸಂಪರ್ಕ  ದೊರಕಿತು. ಧಾರವಾಡದಲ್ಲಿ ಬೇಂದ್ರೆ , ಗೋಕಾಕ, ಮುಗುಳಿ ಹತ್ತಿರವಾದರೆ ಮೈಸೂರಿನಲ್ಲಿ ಕುವೆಂಪು , ಎ.ಎನ್‌.ಮೂರ್ತಿರಾವ್‌, ಆರ್‌ಕೆ ನಾರಾಯಣ್‌ ರಾಜಾರಾವ್‌, ಯು. ಆರ್‌. ಅನಂತಮೂರ್ತಿಗಳ  ಒಡನಾಟ.  ಅದೇ ಸಮಯದಲ್ಲಿ ವಿಜ್ಞಾನಿ ಡಾ.ಕೃಷ್ಣಾನಂದ ಕಾಮತ್‌ ರೊಡನೆ  1966 ರಲ್ಲಿ  ಸಪ್ತಪದಿ ತುಳಿದರು.  ಇವರ ಜೋಡಿ ಹೇಳಿ ಮಾಡಿಸಿದಂತೆ ಇದ್ದಿತು. ಸುವರ್ಣಕ್ಕೆ ಸುಗಂಧ ಬಂದಂತಾಯಿತು.ಆದರೆ ಇಬ್ಬರು ರಾಷ್ಟ್ರ ಮಟ್ಟದ ವೃತ್ತಿ ಪರರು ಪರಿಣಾಮ ಹೊಸ ಸಮಸ್ಯೆಗಳ ಸರಮಾಲೆ .ಹೆಂಡತಿ ಮೈಸೂರು , ಬೆಂಗಳೂರು ಮುಂಬೈ, ಕೊಲಕತ್ತಾ ,ಜೈಪುರದಲ್ಲಿ ಕಾರ್ಯ ನಿರ್ವಹಿಸಿದರೆ ಗಂಡ ರಾಜಸ್ತಾನ, ಬಂಗಾಲ  ಮಧ್ಯಪ್ರದೇಶದಲ್ಲಿ ಕೆಲಸ.  ಅದೃಷ್ಟಕ್ಕೆ ಹಲವು ಸಲ ಒಂದೇ  ರಾಜ್ಯದಲ್ಲಿ ಇರುವ ಅವಕಾಶ ದೊರಕಿತು. .ಅದೂ ಕೆಲವೇ ವರ್ಷಗಳು ಮತ್ತೆ ಬೇರೆ ರಾಜ್ಯಕ್ಕೆ ವರ್ಗಾವಣೆ. ಹಾಗಾಗಿ  ಸಂಸಾರಿಕ ಜೀವನದಲ್ಲಿ ಒಟ್ಟಿಗೆ ಇದ್ದಷ್ಟೇ ಅವಧಿ ದೂರದಲ್ಲಿಯೇ ಇರುವಂತಾಯಿತು.. ಆದರೆ ಅದರ ಪರಿಣಾಮ ವೈಯುಕ್ತಿಕವಾಗಿ ತೊಂದರೆಯಾದರೂ ವೃತ್ತಿ ಮತ್ತು ಸೃಜನ ಶೀಲತೆಯಲ್ಲಿ ಇಬ್ಬರೂ ಮಿಂಚಿದರು..ಕೀಟವಿಜ್ಞಾನಿ, ಛಾಯಗ್ರಾಹಕ ಡಾ. ಕೃಷ್ಣಾನಂದಕಾಮತ್‌ ಸಾಹಿತ್ಯ ಸೃಜನಶೀಲತೆಗೆ ಕಾರಣ ಅವರ ಅರ್ಧಾಂಗಿ.  ಪತ್ನಿಯ  ಉತ್ತೇಜನದಿಂದ ಸಾಹಿತ್ಯ ಲೋಕಕ್ಕೆ  ಕೃಷ್ಣಾನಂದರಿಂದ ಮರೆಯಲಾಗದ ಕೊಡುಗೆ ದೊರೆಯಿತು.. ಅವರ ಪ್ರವಾಸ ಸಾಹಿತ್ಯ. ಪ್ರೇಯಸಿಗೆ ಪತ್ರಗಳು ಅವರೇ ಹೇಳಿದಂತೆ ಅವರ ಪತ್ರ .ದಾಂಪತ್ಯದ ಕೊಡುಗೆ. ಅಮೇರಿಕಾ,  ರಾಜಸ್ತಾನ, ಬಂಗಾಳ ಮತ್ತು ಮಧ್ಯಪ್ರದೇಶದ  ಅನುಭವ ಕಥನವು ಕನ್ನಡ  ಪ್ರವಾಸ ಸಾಹಿತ್ಯದ ಅಪುರ್ವ ಕೊಡುಗೆಯಾಗಿವೆ.ಅನಿವಾರ್ಯ ಅಗಲಿಕೆಯಿಂದ ಸಾಹಿತ್ಯ ಇಬ್ಬರ ಸಂಶೋಧನೆಯ ಬೆಳೆ ಹುಲಸಾಯಿತು. . ಜೊತೆಗೆ  ತಮ್ಮಸಾಹಿತ್ಯ, ಮತ್ತು ಸಂಸ್ಕೃತಿ ಪ್ರಜ್ಞೆಯಿಂದ ಆಕಾಶವಾಣಿಯಲ್ಲು ಜೀವ ಕಳೆ ತುಂಬಿದರು.ಇನ್ನು ಇವರ ಸಂಪರ್ಕಕ್ಕೆ ಬಂದ ಯುವಜನರನ್ನೂ ಬೆಳಸಿದರು. ಸಾಹಿತ್ಯ ಮತ್ತು ಇತಿಹಾಸ ರಂಗದ ದಿಗ್ಗಜಗಳೊಡಗಿನ ಒಡನಾಟ ಸಾಧನೆಯ ಪ್ರಖರತೆ ಹೆಚ್ಚಿಸಿತು. ಇದ್ದೊಬ್ಬ ಮಗ ವಿಕಾಸ ಕುಮಾರ್‌ ಕಾಂಪ್ಯೂಟರ್‌ ಇಂಜನಿಯರ್‌, ಸೊಸೆ ಗಣಿತಜ್ಞೆ. ನಾಲ್ಕುಸದಸ್ಯರ ಈ ಕುಟುಂಬಕ್ಕೆ ಐದು ಪಿಎಚ್‌ಡಿ ಪದವಿಗಳು. ಕನ್ನಡದಲ್ಲಿ ಕಾಮತ್‌ ಪಾಟ್‌ ಪುರಿ ಎಂಬ ವೆಬ್‌ಸೈಟ್‌ಪ್ರಾರಂಭಿಸಿದ ಹಿರಿಮೆ ಇವರದು. ಪತ್ರ ದಾಂಪತ್ಯದ ಪರಿಣಾಮ ಎರಡು ರೀತಿಯಲ್ಲಿ ಅವರ ಮೇಲೆ ಪರಿಣಾಮ ಬೀರಿತು. ಮೊದಲನೆಯದಾಗಿ ಅನವರತ ಅಧ್ಯಯನ ಸಾಧ್ಯವಾಯಿತು. ಎರನೆಯದಾಗಿ ರಜೆಸಿಕ್ಕರೆ ಸಾಕು ಪತಿಯೊಡಗಿನ ಒಡನಾಟ ಮತ್ತು ಅವರ ಪ್ರವಾಸ ಪ್ರಿಯತೆಯಿಂದ ಹೊಸಹೊಸ ಪ್ರದೇಶಗಳ ಸುತ್ತಾಟ. ಹೀಗೆ ಕೋಶ ಓದುವುದು ಮತ್ತು ದೇಶ ನೋಡುವುದು ಎರಡಕ್ಕೂ ಅವಕಾಶ ದೊರಕಿತು. ಜೊತೆಗೆ ತಮ್ಮ ಅಧ್ಯಯನದ ಪ್ರವೃತ್ತಿಯ ಪರಿಣಾಮ ವೃತ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು.
ಮೈಸೂರು ಆಕಾಶಶವಾಣಿ ಸುವರ್ಣ ಮಹೋತ್ಸವದಲ್ಲಿ  ಕುವೆಂಪು -  ಚಿತ್ರ ಕೃಪೆ- ಕಾಮತ್‌ ಪಾಟ್‌ಪುರಿ
 ಅವರು ಕೆಲಸ ಮಾಡಿದ ಕಡೆಯಲ್ಲಿ ಉತ್ತಮ ಅಧಿಕಾರಿ ಎನಿಸಿ ಕೊಂಡರು. ಮೈಸೂರು ಆಕಾಶವಾಣಿಯ ಸುವರ್ಣ ಮಹೋತ್ಸವವನ್ನು ಅವರು ನಡೆಸಿದ ರೀತಿ ಒಂದು ಮೈಲಿಗಲ್ಲಾಯಿತು. ಮೈ ಸೂರಿನಲ್ಲಿ ಪ್ರಾಂಭವಾದ ಆಕಾಶವಾಣಿ ಕೇಂದ್ರ ಉದ್ಘಾಟಿಸಿದ ರಾಷ್ಟ್ರಕವಿ ಕುವೆಂಪು ಅವರೇ ಸುವರ್ಣ ಸಂಭ್ರಮದಲ್ಲೂ ವಯೋಭಾರ ಮರೆತು ಭಾಗವಹಿಸಿದ್ದರು. ಆವರ ಮೈಸೂರಿನ ಸೇವಾವಧಿ ಸಾಹಿತ್ಯ, ಸಂಗಿತ ರಂಗದ ದಿಗ್ಗಜಗಳನ್ನು ಕೇಳುಗರಿಗೆ ಮುಖಾಮುಖಿಯಾಗಿಸಿತು. ತಮ್ಮವೃತ್ತಿಯ ಒತ್ತಡ ಮತ್ತು ಸಂಸಾರಿಕ ಹೊಣೆಯ ಮಧ್ಯವೂ ಅವರಲ್ಲಿನ ಸಂಶೋಧಕಿ ಮುರುಟಲಿಲ್ಲ. ಮಗ ವಿಕಾಸ  ಜನಿಸಿದ ಮೇಲೆ ಅವಿರತವಾಗಿ ಶ್ರಮಿಸುತ್ತಾ ತಮ್ಮನೆಚ್ಚಿನ ಗುರುಗಳ ಮಾರ್ಗದರ್ಶನದಲ್ಲಿ 1972 ರಲ್ಲಿ  ಪಿಎಚ್‌ಡಿ ಪದವಿ ಪಡೆದರು.. ಇತಿಹಾಸ ಸಂಶೋಧನಾಲೇಖನಗಳ  ಜೊತೆ ಜೊತೆಗೆ ಸಾಹಿತ್ಯ ರಂಗದಲ್ಲೂ ಅವರ ಕೃಷಿ ಹುಲುಸಾಗಿತ್ತು
Social life in Mediaval Karntaka, ಮಹಾಪ್ರಭಂಧವಾದರೆ, ಮಹಿಳೆಯರ,ಕುರಿತಾದ ಮಹಿಳೆ ಅಂದು ಇಂದು, ಮಹಿಳೆ ಒಂದು ಅಧ್ಯಯನ, ಕರ್ನಾಟಕ ಶಿಕ್ಷಣ ಪರಂಪರೆ ನೆನಪಲ್ಲಿ ನೆನದೇವು ಆತ್ಮಚರಿತೆ , ಅನೇಕ ಹಾಸ್ಯ ಮತ್ತು ಲಘುಬರಹಗಳು ಅವರ ಹಾಸ್ಯಪ್ರಜ್ಞೆಯ ಮತ್ತು ಜೀವನಪ್ರೀತಿಯ ಸಂಕೇತವಾಗಿವೆ.
ಪತ್ರಪರಾಚಿ  ("Letters from Far") –  ಮಗನಿಗೆ ಪತಿ ಬರೆದ ಪತ್ರಗಳ ಸಂಕಲನ ಹೊರತಂದಿರುವರು ಹೀಗೆ ಸುಮಾರು ನೂರಾರು ಸಂಶೋಧನ ಲೇಖನಗಳು ಕನ್ನಡ ಇಂಗ್ಲಿಷ್‌ ಮತ್ತು ಕೊಂಕಣಿಭಾಷೆಗಳಲ್ಲಿ ಅನೇಕ ವಿದ್ವತ್‌ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಹದಿನಾಲಕಕ್ಕೂ ಹೆಚ್ಚು ಕೃತಿಗಳೂಪ್ರಕಟವಾಗಿವೆ.
ಇವರ ಏಕಮಾತ್ರ ಪುತ್ರ ವಿಕಾಸ್‌ಕಾಮತ್‌ ಕಾಂಪ್ಯೂಟರ್‌ವಿಜ್ಞಾನಿ ,  ಅವರ ವೃತ್ತಿ ಜೀವನ ಅಮೇರಿಕದಲ್ಲಿ . ತಂದೆ ಮಗನಿಗೆ ಬರೆದ ಪತ್ರಗಳು  ಉತ್ತಮ ಸಾಹಿತ್ಯ ಕೃತಿಯಾಯಿತು. ವಿದೇಶದಲ್ಲಿದ್ದ ಮಗನಿಂದ  ಹೆತ್ತವರಿಗೆ ದೊರೆತ ಕೊಡುಗೆಯೇ ಕಾಮತ್‌ಪಾಟ್‌ಪುರಿ  ಕನ್ನಡದ ಸಾಹಿತ್ಯ, ಸಾಂಸ್ಕೃತಿ ಲೋಕದ ಮಾಹಿತಿ ನೀಡಲು ವಿದ್ಯುನ್ಮಾನ ಮಾದ್ಯಮವನ್ನು ಯಶಸ್ವಿಯಾಗಿ ಬಳಸಿಕೊಂಡ  ಮೊದಲ ಪ್ರಯತ್ನ.ಇದರಿಂದ ಜಗತ್ತಿಗೆ ಭಾರತೀಯ ಅದರಲ್ಲೂ ಕರ್ನಾಟಕದ ಸಂಸ್ಕೃತಿಯ ಸೊಗಡು ಹರಡಲು ಸಾಧ್ಯವಾಯಿತು.. ಮೊದಮೊದಲು ಕೈಬರಹದಲ್ಲಿ ಅಮೇರಿಕಾಗೆ ಕಳುಹಿಸಿ ಅಪ್‌ಲೋಡ್‌ ಮಾಡುತಿದ್ದುದು ಉಂಟು. ಬಹುಶಃ ವಿಶ್ವದಲ್ಲೇ ಒಂದು ವೈವಿದ್ಯಮಯ, ಬಹು ವ್ಯಾಪ್ತಿಯ ಕೌಟುಂಬಕ ವಿದ್ಯುನ್ಮಾನ ಮಾದ್ಯಮದ ಬೃಹತ್‌ ಪತ್ರಿಕೆ   ಎನ್ನಬಹುದು. ಈಗ ಡಾ. ಜ್ಯೋತ್ಸನಾ ಕಾಮತ್‌ ತಾವೆ ನಿಭಾಯಿಸುವ ಹಾಗಾಗಿದ್ದರೆ.ಸೊಸೆಯೂ ಗಣಿತ ಶಾಸ್ತ್ರಜ್ಞೆ. ಕಾಮತ್‌ ಕುಟುಂಬದ ನಾಲ್ವರು ಸದಸ್ಯರೂ ಒಟ್ಟು ಐದು ಪಿಎಚ್.ಡಿ ಪಡೆದಿರುವರು.ವೈವಿದ್ಯಮಯ ವೈಯುಕ್ತಿಕ , ಸಾಹಿತ್ಯ ಮತ್ತು ಇತಿಹಾಸದ ಲೇಖನಗಳ ರಾಶಿರಾಶಿಯೇ ವೆಬ್‌ಸೈಟ್‌ನಲ್ಲಿದೆ. ಜೊತೆಗೆ ಕಾಮತ್‌ರವರ ಸಹಸ್ರಾರು ಛಾಯಾಚಿತ್ರಗಳೂ ಲಭ್ಯ.ಉದಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸಲು  ಕೃಷ್ಣಾನಂದಕಾಮತ್‌ ಸಾಹಿತ್ಯ ಪ್ರಶಸ್ತಿಯನ್ನು ಪ್ರತಿ ವರ್ಷ ಪ್ರದಾನ ಮಾಡುತ್ತಿರುವರು.
ಡಾ. ಜ್ಯೋತ್ಸ್ನಾ . ಪತಿ ಪುತ್ರ ಮತ್ತು ಸೊಸೆಜೊತೆ-    ಚಿತ್ರ ಕೃಪೆ  ’ಕಾಮತ್‌ಪಾಟ್‌ಪುರಿ’

ಸಾಮಾಜಿಕ ಕಳಕಳಿಯುಳ್ಳ ಅವರು ಸಾಹಿತ್ಯ ಮತ್ತು ಇತಿಹಾಸ ರಂಗದಲ್ಲಿ ತಮ್ಮವಿದ್ವತ್ತಿನ ಸದುಪಯೋಗ  ಮಾಡಲು ಇಂಡಿಯನ್‌ ಆರ್ಕಿಯಾಲಜಿ ಸೊಸೈಟಿ , ದ ಮಿಥಿಕ್‌ಸೊಸೈಟಿ ಮಹಾತ್ಮಾಗಾಂಧಿ ಪೀಸ್‌ಫೌಂಡೇಷನ್‌  , ಕರ್ನಾಟಕ ಇತಿಹಾಸ ಅಕಾದಮಿಯ ಸದಸ್ಯರಾಗಿ ದುಡಿಯುತ್ತಿರುವರು.ಅವರ ಬಹುಮುಖಿ ಸಾಧನೆಯನ್ನು ಪುರಸ್ಕರಿಸಿ ಅನೇಕ ಪ್ರಶಸ್ತಿಗಳೂ ಸಂದಿವೆ.
ಕರ್ನಾಟಕ ಸರ್ಕಾರವು ೧೯೯೧ ರಲ್ಲಿ ಜ್ಯೋತ್ಸ್ನಾ ಅವರಿಗೆ "ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿದೆ. ಅವರ 'ಕರ್ನಾಟಕ ಶಿಕ್ಷಣ ಪರಂಪರೆ' ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕೆಡಮಿಯಿಂದ ವಿಶೇಷ ಪುರಸ್ಕಾರ ದೊರೆತಿದೆ. ಕನ್ನಡ ಸಾಹಿತ್ಯ ಸಂಶೋದನೆಗಾಗಿ 'ಕಿಟ್ಟಲ್ ಪುರಸ್ಕಾರ' ದೊರೆತಿದೆ.
ಸಾಹಿತ್ಯಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಗಾಗಿ  ,ಅ.ನ. ಕೃ ಪ್ರಶಸ್ತಿ ದೊರೆತಿದೆ.  ವರ್ಷದ ಶ್ರೇಷ್ಠ ಮಹಿಳಾ ಲೇಖಕಿ ಎಂದು  ಕೆ.ಶಾಮರಾವ್‌ ಪ್ರಶಸ್ತಿ  ದೊರೆತಿದೆ.ಇವಲ್ಲದೆ ಸಂಘ ಸಂರ್ಸತೆಗಳ ಹಲವು ಪ್ರಶಸ್ತಿಗಳು ಬಂದಿವೆ. ಕರ್ನಾಟಕಇತಿಹಾಸಅಕಾದಮಿಯ ೨೦೦೧ ರ ವಾರ್ಷಿಕ ಸಮ್ಮೇಳನದ  ಗೌರವಾದ್ಯಕ್ಷರಾಗಿ ಸನ್ಮಾನಿತರಾಗಿದ್ದಾರೆ.
Everyday Kamats
ಅಧ್ಯಯನದಲ್ಲಿ
   ಮಾಗಿದ  ವಯಸ್ಸಿನಲ್ಲೂ  ಅವರ ಸೃಜನ ಶೀಲತೆ ಮತ್ತು ಸಂಶೋಧನ ಆಸಕ್ತಿ ಪ್ರಖರವಾಗಿಯೇ ಇದೆ. ಒಂಟಿಯಾಗಿದ್ದರೂ ಸಾಹಿತ್ಯ ಮತ್ತು ಸಂಶೋಧನೆ ಚಟುವಟಿಕೆಯಲ್ಲಿ ಚುರುಕಾಗಿದ್ದಾರೆ. ಕಾಮತ್‌ಪಾಟ್‌ ಪುರಿ ಅಂತರ್‌ಜಾಲಕ್ಕಾಗಿ The History of Kannada Literature  ಮತ್ತು the Saints of India   ಸರಣಿ ಬರೆಯುತಿದ್ದಾರೆ.ಜೊತೆಗೆ  "The Remote Control -- Letters to a Son"  ಸಂಪಾದನೆ ಕೆಲಸ ಸಾಗಿದೆ. ಈಗಲೂ  ಈಗಲೂ ವಿದ್ವತ್‌ ಸಮಾವೇಶಗಳಲ್ಲಿ ಭಾಗವಹಿಸಿ ಸಂಪ್ರಬಂಧ ಮಂಡಿಸುವರು. ಎಪ್ಪತ್ತರ ವಯಸ್ಸಿನಲ್ಲೂ ಇಪ್ಪತ್ತರ ಹುರುಪು ಉಳಿಸಿಕೊಂಡು  ಸದಾ ಚಟುವಟಿಗೆಳಲ್ಲಿ ನಿರತರಾಗಿರುವ ಮಹಿಳಾ ಸಂಶೋಧಕಿ ಎಂಬುದು ಅವರ ಹಿರಿಮೆ..ನಿವೃತ್ತ ಜೀವನ ಬೆಂಗಳೂರಿನಲ್ಲಿ ನಡೆಸುತಿದ್ದಾರೆ.







No comments:

Post a Comment