Sunday, August 31, 2014

ಇತಿಹಾಸ ಅಕಾಡೆಮಿ ಸಂತಾಪ


ಡಾ.ಬಿಪಿನ್‍ಚಂದ್ರ 

      ಡಾ.ಬಿಪಿನ್‍ಚಂದ್ರ ನಿಧನಕ್ಕೆ ಇತಿಹಾಸ ಅಕಾಡೆಮಿ ಸಂತಾಪ

 ಖ್ಯಾತ ಇತಿಹಾಸಕಾರರಾಗಿದ್ದ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಡಾ.ಬಿಪಿನ್‍ಚಂದ್ರ ಅವರ ನಿಧನಕ್ಕೆ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಧುನಿಕ ಭಾರತದ ಅರ್ಥಶಾಸ್ತ್ರ ಮತ್ತು ರಾಜಕೀಯ ಇತಿಹಾಸದಲ್ಲಿ ವಿಶೇಷ ಕೃಷಿ ಮಾಡಿದ್ದ ಬಿಪಿನ್‍ಚಂದ್ರ (86) ಅವರು ಭಾರತೀಯ ಸ್ವಾತಂತ್ರ್ಯ ಚಳುವಳಿ ಹಾಗೂ ಮಹಾತ್ಮಾ ಗಾಂಧಿಯವರ ಕುರಿತು ಬರೆದವರಲ್ಲಿ ಪ್ರಮುಖರಾಗಿದ್ದರು.
1985ರಲ್ಲಿ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ಸಿನ ಸೆಕ್ಷನಲ್ ಪ್ರೆಸಿಡೆಂಟ್ ಆಗಿ ನಂತರ ಅದರ ಸರ್ವಾಧ್ಯಕ್ಷ ಗೌರವಕ್ಕೂ ಪಾತ್ರರಾಗಿದ್ದರು. 1993 ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯು.ಜಿ.ಸಿ.)ದ ಸದಸ್ಯರಾಗಿ, 2004-12ರ ಅವಧಿಗೆ ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ನ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಸಿದ್ದರು.
ಭಾರತದ ಸ್ವಾತಂತ್ರ್ಯಾರಂಭದಿಂದಲೂ ಕಮ್ಯುನಿಸ್ಟ್ ಚಳುವಳಿಯ ಮುಂಚೂಣಿಯಲ್ಲಿದ್ದ ಅವರು ಇತಿಹಾಸಕಾರರಾದ ಡಾ.ಆರ್.ಎಸ್.ಶರ್ಮಾ, ಡಾ.ರೋಮಿಳಾ ಥಾಪರ್, ಇರ್ಫಾನ್ ಹಬೀಬ್, ಡಾ.ಸತೀಶ್ ಚಂದ್ರ ಮತ್ತು ಅರ್ಜುನ್ ದೇವ್ ಅವರನ್ನೊಳಗೊಂಡ ವಲಯವೊಂದರ ಹುಟ್ಟಿಗೆ ಅವರು ಕಾರಣೀಕರ್ತೃರಾಗಿದ್ದರು.
ಹಿಸ್ಟರಿ ಆಫ್ ಮಾಡರ್ನ ಇಂಡಿಯಾ, ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್-1947-2000, ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್ ಎಂಬ ಅನೇಕ ಉಪಯುಕ್ತ ಗ್ರಂಥಗಳನ್ನು ಅವರು ರಚಿಸಿದ್ದಲ್ಲದೆ ಅವುಗಳಲ್ಲಿ ಕೆಲವು ಕಾಲೇಜು ಪಠ್ಯವಾಗಿಯೂ ಆಯ್ಕೆಯಾಗಿದ್ದವು.
ಡಾ.ಬಿಪಿನ್‍ಚಂದ್ರ ಅವರ ಮರಣ ಇತಿಹಾಸ ಕ್ಷೇತ್ರಕ್ಕೆ ತುಂಬಲಾರದ ಹಾನಿ ಎಂದು ಡಾ.ಬಾಲಕೃಷ್ಣ ಹೆಗಡೆ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

No comments:

Post a Comment