Wednesday, August 27, 2014

ಹೊಯ್ಸಳರ ಶಿಲ್ಪಗಳಲ್ಲಿ ಸಂಗೀತ ವಾದ್ಯಗಳು

ಹೊಯ್ಸಳರ ಶಿಲ್ಪಗಳಲ್ಲಿ ಸಂಗೀತ ವಾದ್ಯಗಳು
ಒಂದು ಶಾಸ್ತ್ರೀಯ ಅಧ್ಯಯನ
ಡಾ. ವಿ. ಅನುರಾಧ
ಈ ಲೇಖನದ ಉದ್ದೇಶ ಹೊಯ್ಸಳರ ಕಾಲದ ಸಂಗೀತ ವಾದ್ಯಗಳನ್ನು, ದೇವಾಲಯ ಸಮುಚ್ಛಯಗಳಲ್ಲಿ ಗುರುತಿಸಿ, ಅವುಗಳನ್ನು ಶಾಸ್ತ್ರೀಯವಾಗಿ ವಿಂಗಡಿಸುವುದು. ಹೊಯ್ಸಳರ ದೇವಾಲಯಗಳು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬಂದಿದ್ದು, 12 ಮತ್ತು 13ನೇ ಶತಮಾನಕ್ಕೆ ಸೇರಿವೆ, ಇವರ ಪ್ರಮುಖ ದೇವಾಲಯಗಳು ಹೊಯ್ಸಳ-ಸಾಮ್ರಾಜ್ಯದ ಹೃದಯ ಭಾಗದಲ್ಲಿದ್ದು, ಕರ್ನಾಟಕದಲ್ಲಿ ಬಹು ಸಂಖ್ಯೆಯಲ್ಲಿ ಕಂಡುಬಂದಿವೆ. ಈ ದೇವಾಲಯಗಳು ಕಲೆಯ ಬೀಡಾಗಿದ್ದು, ನೈಜವಾಗಿ, ಹೆಚ್ಚು ವಿವರಣೆಗಳೊಂದಿಗೆ ವಾದ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತವೆ. ಈ ಲೇಖನವನ್ನು ಬರೆಯಲು ಹಲವು ಪ್ರಮುಖ ಹೊಯ್ಸಳ ದೇವಾಲಯದ ಶಿಲ್ಪಗಳನ್ನು ಆಧಾರಗಳನ್ನು ಬಳಸಲಾಗಿದೆ. ಮುಖ್ಯವಾಗಿ ಅಮೃತಾಪುರದ-ಅಮೃತೇಶ್ವರ ದೇವಾಲಯ (1196) ಅರಳಗುಪ್ಪೆಯ-ಚೆನ್ನಕೇಶವ ದೇವಾಲಯದ (1250) ಬಸರಾಳಿನ ಮಲ್ಲಿಕಾರ್ಜುನ ದೇವಾಲಯ (1235) ಬೆಳವಾಡಿಯ ವೀರನಾರಾಯಣ ದೇವಾಲಯ (1300) ಬೇಲೂರಿನ ಕೇಶವ ದೇವಾಲಯ (1117) ಹಳೇಬೀಡಿನ-ಹೊಯ್ಸಳೇಶ್ವರ ಕೇದಾರೇಶ್ವರ, ಹಾರ್ನಹಳ್ಳಿಯ-ಚನ್ನೆಕೇಶವ (1234) ಕೊರವಂಗಲದ-ಬುಕ್ಕೇಶ್ವರ ದೇವಾಲಯ, (1173) ಮರಳೆಯ-ಸಿದ್ದೇಶ್ವರ ದೇವಾಲಯ (1130) ನಾಗಲಾಪುರದ-ಚೆನ್ನಕೇಶವ ದೇವಾಲಯ (1250) ಜಾವಗಲ್ಲಿನ-ಲಕ್ಷ್ಮೀನರಸಿಂಹ (1249) ಸೋಮನಾಥಪುರದ ಕೇಶವ ದೇವಾಲಯಗಳಲ್ಲಿ (1268) ಕ್ಷೇತ್ರಕಾರ್ಯ ನಡೆಸಿ ವಿವರಗಳನ್ನು ಸಂಗ್ರಹಿಸಲಾಗಿದೆ. ವಾದ್ಯಗಳನ್ನು ಶಾಸ್ತ್ರಿಯವಾಗಿ ವಿಂಗಡಿಸಿ, ಅವುಗಳ ನಿರ್ಮಾಣ ಅಥವಾ ಮಾಡುವ, ತಯಾರಿಸುವ ರೀತಿಯನ್ನು ಅಭ್ಯಸಿಸಿ, ಅವುಗಳ ಬಳಕೆಯ ವಿಧಾನವನ್ನು ಸಂಗೀತ ಗ್ರಂಥಗಳಿಂದ ಅರಿತು, ಈ ಲೇಖನವನ್ನು ಬರೆಯಲು ಪ್ರಯತ್ನಿಸಲಾಗಿದೆ. ಮೊದಲಿಗೆ ಸಂಗೀತದ ಬಗ್ಗೆ ನಮ್ಮ ಪ್ರಾಚೀನ ಸಂಸ್ಕøತಿ ನೀಡುವ ಆಕರಗಳನ್ನು ಗಮನಿಸಬೇಕಾಗಿದೆ.
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಸಂಗೀತ, ನೃತ್ಯ ಪರಂಪರೆ ಎಲ್ಲ ಸಾಂಸ್ಕøತಿಕ ಚಟುವಟಿಕೆಗಳಲ್ಲೂ ದೈನಂದಿನ ಜೀವನದಲ್ಲೂ ಹಾಸುಹೊಕ್ಕಾಗಿದೆ ಎರಡನೆ ಸಹಸ್ರಮಾನವ ಪೂರ್ವಾರ್ಧದ ಸುಮಾರಿನಲ್ಲಿ ಸಿಂಧೂ ನಾಗರೀಕತೆಯ ಅವನತಿ ಉಂಟಾಗಿ ವೈದಿಕ ನಾಗರೀಕತೆಗೆ ದಾರಿ ಮಾಡಿ ಕೊಟ್ಟಿತು. ವೈದಿಕ ಪರಂಪರೆಯಲ್ಲಿ ಸಂಗೀತವು ಪ್ರಮುಖ ಪಾತ್ರವಹಿಸಿದ್ದು, ವೈದಿಕ ದೇವತೆಗಳನ್ನು ಕೊಂಡಾಡುವ ಪ್ರಾರ್ಥನಾ ಶ್ಲೋಕಗಳನ್ನು ರಾಗವಾಗಿ ಹಾಡುತ್ತಿದ್ದು, ನಂತರದ ಕಾಲದಲ್ಲಿ ಇದು ಸಂಹಿತ ಸ್ವರೂಪವನ್ನು ಪಡೆಯಿತು. ಹೀಗೆ ಶಾಸ್ತ್ರೀಯವಾಗಿ ಋಗ್ವೇದ ಸಂಹಿತೆ ರಚನೆಗೊಂಡು, ನಿಸರ್ಗ ದೇವತೆಗಳನ್ನು ನೈಸರ್ಗಿಕ ಆಪತ್ತುಗಳಿಂದ ರಕ್ಷಿಸಿಕೊಳ್ಳಲು, ಸಂಪತ್ತು ಮತ್ತು ಆಧ್ಯಾತ್ಮಿಕ ಸಾಧನೆಗಾಗಿ ಪ್ರಾರ್ಥನೆಗಳಿಂದ ಒಲಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು1. ನಂತರದ ಕಾಲದಲ್ಲಿ ಯಜುರ್ವೇದ ಮತ್ತು ಸಾಮವೇದಗಳ ರಚನೆಯಾಯಿತು. ಸಾಮವೇದವು ಸಂಗೀತದ ಮೊದಲ ನೆಲೆಯಾಗಿದ್ದು, ಸಂಗೀತದ ಆರಂಭಿಕ ಹಂತ, ಸಂಗೀತ ವಾದ್ಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಸಂಹಿತಗಳ ರಚನಕಾರರು ಹಲವು ಶ್ರೇಷ್ಠ ಋಷಿ ಮುನಿಗಳು, ಋಷಿ ಕನ್ಯೆಯರು ಆಗಿದ್ದು ಅವರಲ್ಲಿ ಸಪ್ತ ಋಷಿಗಳಿಗೆ ಪ್ರಮುಖ ಸ್ಥಾನವಿದ್ದು, ಅವರು ಸಂಗೀತ ಪರಂಪರೆಯನ್ನು ವೃದ್ಧಿಗೊಳಿಸುವಲ್ಲಿ ಸಫಲರಾಗಿದ್ದರು2.
ವೈದಿಕ ಕಾಲದಲ್ಲಿ ಯಜ್ಞಯಾಗಾದಿಗಳು-ದೇವತೆಗಳನ್ನು ಸಂತುಷ್ಟಿಗೊಳಿಸಲು ಆಚರಿಸಲಾಗುತ್ತಿತ್ತು. ಈ ಸಮಯದಲ್ಲಿ ಸಂಗೀತ ಮತ್ತು ನೃತ್ಯಗಳು ಮೇಳೈಸಿ, ಯಾಗಮಂಟಪದಲ್ಲಿ ದಿವ್ಯಸಾನ್ನಿಧ್ಯವನ್ನು ಸೃಷ್ಟಿಸುವುದಲ್ಲದೆ, ಅವು ದೇವತೆಗಳನ್ನು ಸುಪ್ರೀತಗೊಳಿಸಲು ಬಳಸಲಾಗುತ್ತಿತ್ತು. ಯಾವುದೇ ಧಾರ್ಮಿಕ ಕಾರ್ಯವು ಸಂಗೀತವಿಲ್ಲದೇ ಪೂರ್ಣಗೊಳ್ಳುತ್ತಿರಲಿಲ್ಲ. ಸಾಮವೇದವನ್ನು ಸಪ್ತಸ್ವರಗಳೊಡನೆ ಗಂಧರ್ವರು ಹಾಡಿ, ಉತ್ತಮವಾದ ವಾದ್ಯಗಳಿಂದ ಗಾನಸುಧೆ ಹರಿಯುವಂತೆ ಮಾಡುತ್ತಿದ್ದರು. ಯಜ್ಞಯಾಗಾದಿಗಳಲ್ಲಿ ಸಾಮವೇದ ಗಾಯನ ಪ್ರಮುಖ ಪಾತ್ರ ವಹಿಸುತ್ತಿತ್ತು. ‘ಸಾಮ’ ಎಂಬ ಪದವೇ ಎರಡು ಪ್ರಮುಖ ಅಂಗಗಳನ್ನು ಹೊಂದಿದೆ. ಪದದ ಮೊದಲ ಅಕ್ಷರ ‘ಸಾ’ ಎಂಬುದು ಮಂತ್ರವಾಗಿದ್ದು, ‘ರಿಚ’ ವಾಗಿದೆ, ಎರಡನೆಯ ಅಕ್ಷರವೇ ‘ಮ’ ಇದು ಸಂಗೀತದ ಸ್ವರಗಳನ್ನು ನಿರೂಪಿಸುತ್ತದೆ. ವೈದಿಕ ಸಾಹಿತ್ಯ ಪ್ರಕಾರಗಳಲ್ಲಿ ಮೊದಲ ಭಾಗವೇ ‘ಶಿಕ್ಷ’. ಇದು ಸರಿಯಾದ ಉಚ್ಛಾರಣೆಯನ್ನು ವೈಜ್ಞಾನಿಕ ರೀತಿಯಲ್ಲಿ ತಿಳಿಸಿಕೊಡುವ ಶಾಸ್ತ್ರೀಯ ವಿಜ್ಞಾನ3. ಈ ಕ್ಷೇತ್ರದಲ್ಲಿ ಪಾಣಿನಿ, ಯಾಜ್ಞವಲ್ಕ್ಯ, ವಾಸಿಷ್ಠ, ಕಾತ್ಯಾಯನಿ, ಮಾಂಡುಕಿ, ಮತ್ತು ನಾರದರು ಪ್ರಮುಖರು, ಸಂಗೀತ ವಿದ್ಯೆಯ ಸನಾತನವಾಗಿದ್ದು, ಗುರು-ಶಿಷ್ಯ ಪರಂಪರೆಯು, ಇದರ ಪ್ರಸರಣಕ್ಕೆ ಕಾರಣವಾಗಿತ್ತು. ಗುರುಕುಲ ವ್ಯವಸ್ಥೆಯಲ್ಲಿ ಶಿಷ್ಯನು ಗುರುಮುಖೇನ ದೀಕ್ಷೆ ಪಡೆದು ಸಂಗೀತ ವಿದ್ಯೆಯ ಪರಿಚಯ ಪಡೆಯುತ್ತಿದ್ದನು. ವೇದಗಳು ನಾಲ್ಕು ರೀತಿಯ ಗುರುಪರಂಪರೆಯನ್ನು ಗುರುತಿಸಿವೆ4 ಹಾಗೆಯೇ ಎರಡು ರೀತಿಯ ಶಿಷ್ಯರನ್ನೂ ಗುರುತಿಸಿವೆ5 ಅಂಗೀರಸ, ಗಾರ್ಗಿ, ಅತ್ರ್ರಿ, ಬೃಹಸ್ವತಿ ಮತ್ತು ವಸಿಷ್ಠರು ಪ್ರಮುಖ ಗುರು-ಪರಂಪರೆಯ ದೀವಿಗೆಯಂತಿದ್ದರು. ರಾಮಾಯಣ ಕಾಲದಲ್ಲಿ ಮಾರ್ಗ ಮತ್ತು ದೇಸೀ ಸಂಗೀತವು ಪರಿಚಿತವಾಗಿದ್ದು, ಶ್ರೀರಾಮಚಂದ್ರನು ‘ಗಂಧರ್ವ’ ಸಂಗೀತದಲ್ಲಿ ನಿಪುಣನಾಗಿದ್ದನು. ರಾಮಾಯಣ ಕಾಲದಲ್ಲಿ ವೀಣೆ, ವೇಣು, ವಂಶಿ, ಶಂಖ, ದುಂದುಭಿ, ಭೇರಿ, ಮೃದಂಗ, ಪನಯ್ ಮತ್ತು ಪತಹ್ ಪ್ರಸಿದ್ಧ ವಾದ್ಯಗಳಾಗಿದ್ದವು ರಾವಣನು ಸಂಗೀತದಲ್ಲಿ ಪಾರಂಗತನಾಗಿದ್ದನು. ರಾವಣನು ರುದ್ರವೀಣೆಯನ್ನು ನುಡಿಸುವಲ್ಲಿ ಪಾರಂಗತನಾಗಿದ್ದು, ಈ ಗಾಯನಕ್ಕೆ ಸಾಕ್ಷಾತ್ ಶಿವನು ಒಲಿದು, ಆತ್ಮಲಿಂಗವನ್ನು ನೀಡಿದ್ದನು. ಆಗಾಗ ನಡೆಯುತ್ತಿದ್ದ ಸಾಂಸ್ಕøತಿಕ ಸಂಗೀತ ಕಾರ್ಯಕ್ರಮಗಳನ್ನು ‘ಸಮಾಜ’ ಎಂದು ರಾಮಾಯಣ ತಿಳಿಸುತ್ತದೆ. ವಂದಿ, ಸೂಕ, ಮಾಗಧರು ಸಂಗೀತಜ್ಞಾನ ಪಡೆದವರಾಗಿದ್ದು, ಶ್ರೇಷ್ಠ ನಾಯಕರ-ರಾಮ, ದಿಲೀಪ, ರಘು ಮುಂತಾದವರ ಕಥೆಗಳನ್ನು ಶ್ಲೋಕ ರೀತಿಯಲ್ಲಿ ಹಾಡುತ್ತಿದ್ದರು.
ಪಥ್ಯ ಸಂಗೀತ: ಪಥ್ಯ ಎಂಬುದು ಒಂದು ವಿಶೇಷ ರೀತಿಯ ಸಂಗೀತ ರಚನೆಯಾಗಿದೆ. ಭರತ ಮುನಿಯು ಪಥ್ಯ ಸಂಗೀತ ರಚನೆಯ ಆರು ಲಕ್ಷಣಗಳನ್ನು ವಿವರಿಸಿದ್ದಾರೆ.
1. ಸಪ್ತಸ್ವರ-ಏಳು ಸ್ವರಗಳು
2. ಸ್ಥಾನ-(ಸ್ವರ-ಸ್ಥಾನ) -ಮೂರು ಸ್ಥಾನಗಳು
3. ಕಾಕು
4. ನಾಲ್ಕು ವರ್ಣಗಳು
5. ಆರು-ಅಲಂಕಾರಗಳು
6. ಆರು-ಅಂಗಗಳು.
ಲವ-ಕುಶರು ರಾಮಾಯಣವನ್ನು ಪಠ್ಯ ಪ್ರಕಾರದಲ್ಲಿ ಏಕನಾದವನ್ನು ಬಳಸಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ರಾಮಾಯಣ ಗ್ರಂಥವು ಸಂಗೀತ ಶಸ್ತ್ರದ ಪ್ರಮಾಣ, ಲಯ, ಸಮ, ತಲ, ಕಾಲ, ಮಾತ್ರ ಮತ್ತು ಸಮಯವನ್ನು ಕುರಿತು ವರ್ಣಿಸಿದೆ.
ಮಹಾಭಾರತವು ಸಂಗೀತವನ್ನು ಗಂಧÀರ್ವಶಾಸ್ತ್ರ ಎಂದು ಉಲ್ಲೇಖಿಸುತ್ತದೆ. ಗಂಧರ್ವರು ಮತ್ತು ಅಪ್ಸರೆಯರು ಸಂಗೀತಶಾಸ್ತ್ರದಲ್ಲಿ ಪರಿಣಿತರಾಗಿದ್ದರು. ಏಳು ಸ್ವರಗಳು ಷಡ್ಜ ಎಂದು ತಿಳಿಸಿದೆ.
ಬೌದ್ಧ ಸಾಹಿತ್ಯದಲ್ಲಿ ಸಂಗೀತದ ಬೆಳವಣಿಗೆಯನ್ನು ವರ್ಣಿಸಲಾಗಿದೆ. ಬೌದ್ಧ ಗ್ರಂಥಗಳಾದ ತೇರಗಾಥ ಮತ್ತು ತೇರೀಗಾಥÀದಲ್ಲಿ ಸಂಗೀತದ ವಿವಿಧ ಪ್ರಬೇಧಗಳನ್ನು ವಿವರಿಸಲಾಗಿದೆ. ಪಾಲಿ ಭಾಷೆಯಲ್ಲಿರುವ ಜಾತಕಕತೆಗಳಲ್ಲಿ ವೀಣೆ, ವೇಪಮೈ, ಧುನಕ್ ಮತ್ತು ಪನಕ್ ಎಂಬ ಸಂಗೀತ ವಾದ್ಯಗಳನ್ನು ಉಲ್ಲೇಖಿಸಿವೆ. ಸಾಂಚಿ ಮತ್ತು ಬಾರ್ ಹತ್‍ನಲ್ಲಿರುವ ಔದ್ಧ ಶಿಲ್ಪಗಳು ಸಂಗೀತ ಹಲವು ವಾದ್ಯಗಳ ಬಗ್ಗೆ ವಿವರಗಳನ್ನು ನೀಡುತ್ತದೆ. ಜೈನ ಸಾಹಿತ್ಯದಲ್ಲಿ ಸಂಗೀತಗಾರ ವಿಶೇಷಗಳನ್ನು ಕುರಿತು ತಿಳಿಸಲಾಗಿದೆ7 ಭಂಭ, ಮುಕುಂದ, ಮಚಲ್ ಕದಂಬ್ ಇತ್ಯಾದಿ ವಾದ್ಯಗಳನ್ನು ಹೆಸರಿದ್ದಾರೆ.
ಭಾರತೀಯ ಪರಂಪರೆಯಲ್ಲಿ ನಾರದ ಮುನಿಯು ಸಂಗೀತ ಶಾಸ್ತ್ರದ ನಿಯಮಗಳಲ್ಲಿ ಪಾಂಡಿತ್ಯ ಪಡೆದವರಲ್ಲಿ ಮೊದಲಿಗರಾದರೆ, ತುಂಬುರು ಮುನಿಯನ್ನು ಮೊದಲ ಗಾಯಕರು ಎಂದು ಪರಿಗಣಿಸಿಲಾಗಿದೆ. ಭರತ ಮುನಿಯು ತನ್ನ ನಾಟ್ಯಶಾಸ್ತ್ರದಲ್ಲಿ ಸಂಗೀತ ವಾದ್ಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾನೆ8 ಸರಸ್ವತಿಯು ಸಂಗೀತ ಮತ್ತು ನಾಟ್ಯಗಳ ಅಧಿದೇವತೆಯಾಗಿದ್ದಾಳೆ. ನಾಟ್ಯಶಾಸ್ತ್ರದಲ್ಲಿ ಹಲವು ವಿಚಾರಗಳ ಉತ್ತಮ ಸಮ್ಮಿಶ್ರಣದಿಂದ ರಸೋತ್ಪಾದನೆ ಉಂಟಾಗುತ್ತದೆ ಎಂದು ತಿಳಿಸುತ್ತಾ, ಅನುಭಾವ ಮತ್ತು ವ್ಯಭಿಚಾರಿಭಾವಗಳನ್ನು ವಿವರಿಸಲಾಗಿದೆ. ಅಭಿನವ ಗುಪ್ತನು ಸಂಗೀತಶಾಸ್ತ್ರಕ್ಕೆ ಹಲವು ಪ್ರಮುಖ ಕೊಡುಗೆಗಳನ್ನು ನೀಡಿದ್ದಾನೆ. ಕಾಳಿದಾಸನು ತನ್ನ ಪ್ರಮುಖ ಕೃತಿಗಳಲ್ಲಿ9 ಪರಿವಾದಿನಿ, ವೀಣಾ, ವಿಪಂಚಿ, ವೀಣಾ, ಪುಶ್ಕರ, ಮೃದಂಗ, ವಂಶೀ, ಶಂಖ ಮುಂತಾದ ವಾದ್ಯಗಳ ಬಗ್ಗೆ ವಿವರಣೆ ನೀಡುತ್ತಾನೆ.
ಭರತನು ತನ್ನ ನಾಟ್ಯಶಾಸ್ತ್ರದಲ್ಲಿ ಸಂಗೀತ ವಾದ್ಯಗಳನ್ನು ಘನವಾದ್ಯ, ಅವನದ್ದ ವಾದ್ಯ, ತಥವಾದ್ಯ, ಸುಶಿರವಾದ್ಯ  ಎಂದು ನಾಲ್ಕು ಭಾಗಗಳಾಗಿ ವಿವರಿಸಿದ್ದಾನೆ. ಘನ ವಾದ್ಯಗಳೆಂದರೆ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು), ಅವನದ್ಧ ವಾದ್ಯಗಳೆಂದರೆ-ತಾಡನ ವಾದ್ಯಗಳು, ತಥ ವಾದ್ಯಗಳೆಂದರೆ ತಂತೀ ವಾದ್ಯಗಳು, ಸುಶಿರ ವಾದ್ಯಗಳೆಂದರೆ- ಗಾಳೀ ವಾದ್ಯಗಳು, ಸಂಗೀತದ ಧ್ವನಿಯನ್ನು ಹೊರಡಿಸುವ ಉದ್ದೇಶದಿಂದ ಸಂಗೀತ ವಾದ್ಯವನ್ನು ತಯಾರಿಸಲಾಗಿದೆ. ಮೂಲತತ್ವದಲ್ಲಿ ಧ್ವನಿಯನ್ನು ಹೊರಡಿಸುವ ಯಾವುದೇ ವಸ್ತು ಸಂಗೀತ ವಾದ್ಯವಾಗುತ್ತದೆ. ಸಂಗೀತ ವಾದ್ಯಗಳ ಶೈಕ್ಷಣಿಕ ಅಧ್ಯಯನವನ್ನು ಅರ್ಗನಾಲಜಿ ಎನ್ನುತ್ತಾರೆ. ನೃತ್ಯದಂತಹ ಭಾವನಾತ್ಮಕ ಕಲೆಗಳಿಗೆ ಧ್ವನಿ ಒದಗಿಸುವ ಮಾನವರ ಪ್ರೇರಣೆಯ ಕಾರಣದಿಂದ ಇಂತಹ ವಾದ್ಯಗಳು ಕಾಣಿಸಿಕೊಂಡವು. ಕೆಲವು ಸಂಸ್ಕøತಿಗಳು ಅವರ ಸಂಗೀತ ವಾದ್ಯಗಳಿಗೆ ಅನುಷ್ಠಾನ ಕಾರ್ಯಗಳನ್ನು ನಿಗದಿಪಡಿಸಿದವು. ಹೊಯ್ಸಳರ ಕಾಲಕ್ಕಾಗಲೇ ಬಿದರಿನಿಂದ ತಯಾರಾದ ರಿಬ್ಬನ್ನಿನಂತಹ ಪೀಪಿಗಳು, ಕೊಳಲುಗಳು, ಕಹಳೆಯಂತಹ ವಾದ್ಯಗಳು ಅಭಿವೃದ್ಧಿಗೊಂಡಿರುವುದು ಶಿಲ್ಪಗಳಿಂದ ತಿಳಿದು ಬರುತ್ತದೆ. ವಿವಿಧ ವಾದ್ಯಗಳಲ್ಲಿ ಸ್ಪಷ್ಟ ವ್ಯತ್ಯಾಸವಿಲ್ಲದ ಕಾರಣ ಈ ವಾದ್ಯಗಳಿಗೆ ಹೆಸರನ್ನು ಕೊಡುವ ಮತ್ತು ಅವುಗಳನ್ನು ವಿವರಿಸಲು, ಉತ್ಸವ ಹಬ್ಬಗಳ ಸಂಬಂಧಿ ವಾದ್ಯಗಳನ್ನು ಪುನನಿರ್ಮಿಸಲು ಕಲಾಕೃತಿಗಳ ಮೊರೆ ಹೋಗಬೇಕಾಗಿದೆ. ದೊಡ್ಡ ತಾಳಗಳು, ಘಂಟೆಗಳು, ಹಲವು ರೀತಿಯ ತಂತೀ ವಾದ್ಯಗಳು ಹೊಯ್ಸಳರ ದೇವಾಲಯಗಳಲ್ಲಿವೆ. ನೆಟ್ಟಗಿನ ಕೊಳಲುಗಳು, ಬಾಗಿದ ಕೊಳಲುಗಳು, ತುತ್ತೂರಿ, ಕಹಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿವೆ. ಹಾವಾಡಿಗಳ ನಳಿಕೆಯ ಪುಂಗಿ, ಕಂಸಾಳೆಯಂತಹ ವಾದ್ಯ, ಸಿಲಿಂಡರಿನಾಕಾರದ ಡ್ರಮ್‍ಗಳು, “ಸಂಪ್ರದಾಯಬದ್ಧ” ಆಕಾರವನ್ನು ಪಡೆದ ವಾದ್ಯಗಳು ಇವೆ. ಈ ರೀತಿ ವಾದ್ಯಗಳಲ್ಲಿ ಹೊಯ್ಸಳ ಶಿಲ್ಪಗಳಲ್ಲಿ ಪ್ರಮುಖವಾಗಿ ಕಾಣುವ ಕೆಲವು ವಾದ್ಯಗಳನ್ನು ಇಲ್ಲಿ ವಿವರಿಸಲಾಗಿದೆ.
ವೀಣೆ : ಇದು ಒಂದು ಜನಪ್ರಿಯ ತಂತೀ ವಾದ್ಯ, ಸರಸ್ವತಿ ದೇವಿಯು ನುಡಿಸುತ್ತಿದ್ದ ವೀಣೆಯ ಹೆಸರು- ಸರಸ್ವತೀ ವೀಣೆ, ಇದರಲ್ಲಿ ಮೂರು ತಂತಿಗಳು, ಒಂದು ಮುಖ್ಯ ತಂತಿ ಇರುತ್ತದೆ. ಎಲ್ಲವೂ ಹಿತ್ತಾಳೆಯವು. ಸಪ್ತಸ್ವರದ ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸಲ್ಪಟ್ಟಿದೆ. ಹೊಯ್ಸಳ ದೇವಾಲಯಗಳಲ್ಲಿ ವೀಣೆಗಳು ಕಂಡು ಬಂದಿದ್ದು ಮೆಟ್ಟಲುಗಳುಳ್ಳದ್ದು, ಮತ್ತು ಮೆಟ್ಟಲುಗಳು ಇಲ್ಲದ್ದೂ ದೊರೆತಿದೆ. ವೀಣೆಯನ್ನು ಕುರಿತು ಋಗ್ವೇದ ಮತ್ತು ಯಜುರ್ವೇದಗಳು ಪ್ರಸ್ತಾಪಿಸಿವೆ. ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣನಾದ್ದರಿಂದ, ಇದಕ್ಕೆ “ರುದ್ರವೀಣೆ” ಎಂಬ ಹೆಸರು. ತುಂಬುರರು ನುಡಿಸುತ್ತಿದ್ದ ವೀಣೆಯ ಹೆಸರು “ಕಲಾವತೀ” ವಿಶ್ವಾವಸುವಿನ ವೀಣೆಯ ಹೆಸರು “ಬೃಹತೀ”, ನಾರದರು ನುಡಿಸುತ್ತಿದ್ದ ವೀಣೆಯ ಹೆಸರು “ಮಹತೀ” ರಾವಣನು ವೀಣೆಯ ತಂತಿಯೊಂದು ಕಿತ್ತುಹೋದಾಗ ತನ್ನ ದೇಹದ ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮಾಡಿ, ಶಿವನನ್ನು ಒಲಿಸಿಕೊಂಡನು, ಕಾಳಿದಾಸನು ತನ್ನ ಶ್ಯಾಮಲಾದಂಡಕದಲ್ಲಿ “ಮಾಣಿಕ್ಯವೀಣಾಂ” ಎಂಬ ಮಾಣಿಕ್ಯದಿಂದ ಅಲಂಕರಿಸಿರುವ ವೀಣೆಯನ್ನು ಶಾರದೆಯು ನುಡಿಸುತ್ತಾಳೆ ಎಂದು ವಿವರಿಸಿದ್ದಾನೆ.
ಪುರಾತತ್ವ ಶಾಸ್ತ್ರಜ್ಞರು, ಗುಪ್ತ ದೊರೆ-ಸಮುದ್ರಗುಪ್ತನು (ಕ್ರಿ.ಶ.330-375) ಒಂದು ರೀತಿಯ ವೀಣೆ ನುಡಿಸುತ್ತಿರುವ ನಾಣ್ಯವನ್ನು ಹೊರಡಿಸಿರುವುದನ್ನು ಕಂಡುಹಿಡಿದಿದ್ದಾರೆ. ಮೆಟ್ಟಲುಗಳು ಇರುವ ವೀಣಿಯನ್ನು ‘ಸಾರಿ’ ವೀಣೆ10. ಎಂದು, ಮೆಟ್ಟಲುಗಳು ಇಲ್ಲದ ವೀಣೆಯನ್ನು ‘ನಿಸಾರಿ’ ವೀಣೆ11 ಎಂದೂ ಕರೆಯಲಾಗಿದೆ. ಒಂದೇ ಮರದ ತುಂಡಿನಲ್ಲಿ ನಿರ್ಮಾಣವಾಗಿದ್ದಲ್ಲಿ `ಏಕಾಂತ’ ವೀಣೆ, ಎಂದೂ ಮೂರು ಮರದ ತುಂಡುಗಳನ್ನು ಬಳಸಿದ್ದಲ್ಲಿ `ಒಟ್ಟು’ ವೀಣೆ ಎಂದೂ ಕರೆಯುತ್ತಾರೆ.
ಮಹಾನಾಟಕ ವೀಣೆ: ಇದನ್ನು ವೀಣೆಯ ಇನ್ನೊಂದು ಪ್ರಭೇದವೆನ್ನಬಹುದು. ಇದು ಆಕಾರ ಮತ್ತು ರಚನೆಗಳಲ್ಲಿ ವೀಣೆಯಂತಿದ್ದರೂ, ಇದರಲ್ಲಿ ಮೆಟ್ಟಿಲುಗಳು ಇರುವುದಿಲ್ಲ. ಸ್ವರಸ್ಥಾನದಲ್ಲಿ ತಂತಿಯನ್ನೊತ್ತಲು ಮರದ ಗೋಟನ್ನು (ಸಿಲಿಂಡರಿನ ಆಕಾರದ ಮರದ ಚೂರು) ಬಳಸುವುದರಿಂದ ಇದಕ್ಕೆ ಗೋಟುವಾದ್ಯ ಎಂಬ ಹೆಸರು ಬಂದಿದೆ. ಇದರ ಧ್ವನಿ ವೀಣೆಗಿಂತ ಗಾಢ. ಇದರಲ್ಲಿ ಒಟ್ಟು 21 ತಂತಿಗಳಿರುತ್ತವೆ. ಯಾಜ್ಞಲ್ಕ್ಯನು ತನ್ನ ಸ್ಮøತಿಯಲ್ಲಿ’ ವೀಣಾ ವಾದನ ಕಥ ವಂಗ, ಶೃತಿ, ಜತಿ, ವಿಸರ್ಥ ತಲನ್‍ಜಾಪ್ರಯಾಸೇನ ಮೋಕ್ಷ ಮಾರ್ಗಂ ನಿಯಾಪತೀ ಎಂದು ಹೇಳಿದ್ದಾರೆ. ರಘುನಾಥ ವೀಣೆ ಎಂಬ ಹೆಸರು, ತಂಜಾವೂರಿನ ರಘುನಾಥನಾಯಕನ ಕಾಲದ ವೀಣೆಗೆ ಬಂದಿರಬಹುದು. ಶತತಂಕ್ರೀ ವೀಣೆಯು ಸಂತೂರಿನ ರೂಪದಲ್ಲಿದ್ದಿತು. ಸಪ್ತತಂತಿ ವೀಣೆಯು ಏಳು ತಂತಿಗಳನ್ನು ಹೊಂದಿತ್ತು. ಹೆಚ್ಚಾಗಿ ತಂತೀವಾದ್ಯಗಳ ಸಂಗೀತ ಮೇಳದ ಉನ್ನತಿಯಾದಂತೆ, ಗಾಳೀ ವಾದ್ಯಗಳಾದ ಕೊಳಲು, ಶಹನಾಯಿ, ಬಾನ್ಸುರಿ ಮುಂತಾದ ಸಂಗೀತ ಸಾಧನಗಳು ತಂತಿವಾದ್ಯಗಳ ಏಕತಾನಕೆಯಟಿಜಿಟಿu ಹೋಗಲಾಗಿಸಲು ಸಹಾಯಕವಾದವು.  ಈ ಕಾಲದ ವೀಣೆಗಳಲ್ಲೂ ಬಹು ಬಗೆಯವು ಕಂಡುಬಂದಿವೆ.
ಅವನದ್ಧ ವಾದ್ಯ
ಘಟಂ: ಇದು ಕರ್ನಾಟಕ ಶಾಸ್ತ್ರಿಯ ಸಂಗೀತದಲ್ಲಿ ಬಳಸುವ ಒಂದು ತಾಳವಾದ್ಯ. ಅನಾದಿ ಕಾಲದಿಂದಲೂ ಜಾನಪದ ವಾದ್ಯವಾಗಿ ಬಳಕೆಯಲ್ಲಿದೆ. ಇದನ್ನು ಈಗ ಕರ್ನಾಟಕದ ಸಂಗೀತದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ವಿಶೇಷ ಗುಣವುಳ್ಳ ಮಣ್ಣನ್ನು ಆಯ್ದು, ಹಲವು ತಿಂಗಳ ಕಾಲ ನೆನೆಸಿ, ನಂತರ ಕಬ್ಬಿಣದ ಪುಡಿಯೊಡನೆ ಕಲಸಿ, ಬೇಯಿಸಿ (ಬೆಂಕಿಯಲ್ಲಿ ಸುಟ್ಟು) ತಯಾರಿಸುತ್ತಾರೆ. ಎರಡು ಅಂಗೈ ಮತ್ತು ಬೆರಳುಗಳಿಂದ ಈ ವಾದ್ಯವನ್ನು ನುಡಿಸುತ್ತಾರೆ. ಇದು ಮೃದಂಗ ಹಾಗೂ ಖಂಜೀರದೊಂದಿಗೆ ನುಡಿಸಿದಾಗ ಸುಮಧುರನಾದ ಹೊರಹೊಮ್ಮಿಸುತ್ತದೆ.
ಮೃದಂಗ: ಇದು ಕರ್ನಾಟಕ ಸಂಗೀತದಲ್ಲಿ ಬಳಸುವ ಲಯ ವಾದ್ಯ. ಮೃದಂಗವನ್ನು ಮರ, ಚರ್ಮ ಮತ್ತು ಕರಣೆ ಕಲ್ಲು ಬಳಸಿ ತಯಾರಿಸುತ್ತಾರೆ. ಮೃದಂಗ ಎಂಬ ಹೆಸರು ‘ಮೃತ್’ ಮತ್ತು ‘ಅಂಗ’ ಎಂಬ ಎರಡು ಸಂಸ್ಕøತ ಪದಗಳಿಂದ ಬಂದಿದೆ. ಮೃತ್ ಎಂದರೆ ಮಣ್ಣು, ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಹಲವು, ಹೆಬ್ಬಲಸು ಸಂಪಿಗೆ, ತೇಗ, ಬೇವು ಮುಂತಾದ ಮರಗಳಿಂದ ತಯಾರಿಸಲಾಗುತ್ತದೆ. ಬಳಗೆ ಟೊಳ್ಳಾಗಿರುವ ಭಾಗಕ್ಕೆ `ಹೊಲವು’ ಅಥವಾ `ಕಳಸಿಗೆ’ ಎಂದು ಹೆಸರು. ಇದರ ಮಧ್ಯಭಾಗ ಉಬ್ಬಿ ಕಡೆಯ ಭಾಗದಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕಡೆಯುತ್ತಾರೆ. ಬಲಭಾಗದ ವ್ಯಾಸವು ಎಡಭಾಗಕ್ಕಿಂತ ಕಡಿಮೆ ಇರುತ್ತದೆ ಉಬ್ಬಿದ ಭಾಗವನ್ನು `ಹರಡ’ ಅಥವಾ `ಕಡಗ’ ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡೂ ಮುಖಗಳ ವ್ಯಾಸ ನೇರವಾಗಿದ್ದು ಮೃದಂಗದ ಶೃತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವ್ಯಾಸ ಹೆಚ್ಚಿದ್ದರೆ ತಗ್ಗು ಶೃತಿಗೆ ಹೊಂದಿಸಬಹುದು. ಕಡಿಮೆ ಇದ್ದರೆ ಹೆಚ್ಚು ಶೃತಿಗೆ ಹೊಂದಿಸಬಹುದು. ಬಲ ಮುಚ್ಚಿಗೆಗೆ ಮೇಕೆ ಹಾಗೂ ಹಸುವಿನ ಚರ್ಮ ಬೇಕಾಗುತ್ತದೆ. ಬಲ ಮುಚ್ಚಿಗೆಯಲ್ಲಿ ಮೂರು ಪದರಗಳು, ಎಡ ಮುಚ್ಚಿಗೆಯಲ್ಲಿ ಎರಡು ಪದರಗಳೂ ಇವೆ. ಇದಾದ ನಂತರ ಮುಚ್ಚಿಗೆಯ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಇದನ್ನು ‘ಇಂಡಿಗ’ ಎಂದು ಕರೆಯುತ್ತಾರೆ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ, ಉಳಿದ ಭಾಗಗಳನ್ನು ಕತ್ತರಿಸುತ್ತಾರೆ. ಹಲವು ಬಗೆಯ ತಾಳವಾದ್ಯಗಳು ಈ ಶಿಲ್ಪಗಳಲ್ಲಿ ಕಂಡುಬಂದಿವೆ.
ತಾಳವಾದ್ಯ
ಗೆಜ್ಜೆ: ಒಂದು ತಾಳವಾದ್ಯ ಹಾಗೂ ಆಭರಣ. ಕಂಚಿನ ಟೊಳ್ಳಾದ ದುಂಡು ಗುಳಿಗೆಯ ಅರ್ಧಭಾಗದವರೆಗೂ ಬಾಯಿ ಬಿಡಿಸಿ, ಒಳಗೆ ಕಲ್ಲಿನ ಸಣ್ಣ ಸಣ್ಣ ಚೂರುಗಳನ್ನು ಸೇರಿಸಿ, ಗುಳಿಗೆಯ ಇನ್ನೊಂದು ಬದಿಗೆ ಸಣ್ಣ ಉಂಗುರವನ್ನು ಅಳವಡಿಸಿರುತ್ತಾರೆ. ಇದನ್ನು ಭಾಗವತರು, ನಟರು, ನಾಟ್ಯ ಮಾಡುವ ನರ್ತಕರು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಹಾವಾಡಿಗರೂ, ದೊಂಬರು, ಭಜನೆಗೋಷ್ಠಿಯವರೂ ಇದನ್ನು ಬಳಸುತ್ತಾರೆ.
ತಬಲ: ಒಂದು ಜನಪ್ರಿಯ ತಾಳವಾದ್ಯ ಈ ವಾದ್ಯದಲ್ಲಿ ಎರಡು ಡೊಳ್ಳುಗಳಿದ್ದು ಅವುಗಳನ್ನು ಕೈ ಮತ್ತು ಬೆರಳುಗಳಿಂದ ನುಡಿಸಲಾಗುತ್ತದೆ.
ಡೋಲು: ಇದು ನಾದ ಸ್ವರದೊಡನೆ ಉಪಯೋಗಿಸುವ ತಾಳವಾದ್ಯ ಇದು ಆಕಾರದಲ್ಲಿ ಮೃದಂಗವನ್ನು ಹೋಲುತ್ತದೆ. ಇದರ ಆಕಾರ ದೊಡ್ಡದು. ಹಲಸು ಮರದ ಒಂದೇ ತುಂಡನ್ನು ಕೊರೆದು ಮಾಡಿರುತ್ತಾರೆ. ಎರಡೂ ಕಡೆಗಳಲ್ಲಿ ಹಾಕಿರುವ ವೃತ್ತಾಕಾರದ ಹದ ಮಾಡಿದ ಚರ್ಮಗಳನ್ನು ಚರ್ಮದ ಪಟ್ಟಿಗಳಿಂದ ಎಳೆದು ಕಟ್ಟಿರುತ್ತಾರೆ. ಇದನ್ನು ಬಿಗಿ ಅಥವಾ ಸಡಿಲ ಮಾಡುವುದರಿಂದ ಬೇಕಾದ ಶೃತಿಯನ್ನು ಪಡೆಯಬಹುದು. ಇದರ ಎಡಭಾಗವನ್ನು ಸಣ್ಣ ಕೋಲಿನಿಂದಲೂ, ಬಲ ಭಾಗವನ್ನು ಬೆರಳುಗಳಿಂದಲೂ ನುಡಿಸುತ್ತಾರೆ ಕೊರಳಿಗೆ ಬಟ್ಟೆಯಿಂದ ಇಳಿಬಿಟ್ಟು ನುಡಿಸುತ್ತಾರೆ.
ಗಾಳಿ ವಾದ್ಯ
ಭಾರತದ ಅತ್ಯಂತ ಪ್ರಾಚೀನ ಗಾಳಿ ವಾದ್ಯಗಳಲ್ಲಿ ಕೊಳಲು ಒಂದು. ಸಂಗೀತ ರತ್ನಾಕರದಲ್ಲಿ 14 ಬಗೆಯ ಕೊಳಲನ್ನು ಹೇಳಿದೆ. ಅವುಗಳ ಉದ್ದ ಬಂದಂಗುಲದಿಂದ-ಹದಿನೆಂಟು ಅಂಗುಲದವರೆಗೆ ಇರುತ್ತದೆ. ಈ ಬಗೆಯ ಕೊಳಲುಗಳು ಹೊಯ್ಸಳ ಶಿಲ್ಪಗಳಲ್ಲಿ ದೊರೆತಿವೆ.
ಕೊಳಲು: ಬಿದಿರಿನ ಒಂಟಿ ವಿಸ್ತಾರದಿಂದ ತಯಾರಿಸಲಾಗುವ ಗಾಳಿವಾದ್ಯ. ಏಳು ತೆರೆದ ಬೆರಳ ರಂಧ್ರಗಳಿರುವ ವಾದ್ಯ. ಗೋವಳರು ಮತ್ತು ಗ್ರಾಮೀಣ ಪರಂಪರೆಯೊಂದಿಗೆ ಇರುವ ಪ್ರಾಚೀನವಾದ ಸಂಗೀತ ವಾದ್ಯ.
ನಾಗಸ್ವರ: ಇದು ಪ್ರಮುಖ ಮಂಗಳವಾದ್ಯ. ಅತ್ಯಂತ ಗಟ್ಟಿಯಾದ ಸ್ವರವುಳ್ಳ ಅಲೋಹ ವಾದ್ಯವಾಗಿದೆ. ಇದು ಮೇಲ್ಭಾಗದಲ್ಲಿ ಸಣ್ಣ ಆಕಾರವಿದ್ದು ಕೆಳಭಾಗಕ್ಕೆ ದೊಡ್ಡದಾಗಿರುವ ಮರದ ಕೊಳವೆಯಾಗಿದೆ. ಇದರ ಉದ್ದವು ಸುಮಾರು ಎರಡದಿಂದ ಎರಡೂವರೆ ಅಡಿಗಳಿರುತ್ತದೆ. ವಾದ್ಯದ ಮೇಲ್ಭಾಗದಲ್ಲಿ ಲೋಹದ ಮುಖವಿರುತ್ತದೆ. ಕೆಳಭಾಗದಲ್ಲಿ ಗಂಟೆಯ ಆಕಾರದ ಲೋಹದ ಭಾಗವನ್ನು ಸೇರಿಸಿರುತ್ತಾರೆ. ಇದರ ಮೇಲ್ಭಾಗದಲ್ಲಿ ಏಳು ರಂಧ್ರಗಳು ಕೆಳಭಾಗದಲ್ಲಿ ಐದು ರಂಧ್ರಗಳು ಇರುತ್ತದೆ.
ಕೊಂಬು, ಕಹಳೆ, ಶಂಖ, ಭಜಂತ್ರಿ ಮುಂತಾದ ವಾದ್ಯಗಳು ಹೊಯ್ಸಳ ಶಿಲ್ಪಗಳಲ್ಲಿ ಹೇರಳವಾಗಿವೆ. ರಚನೆಯ ದೃಷ್ಟಿಯಿಂದ ಬಹಳ ಸರಳವಾದ ಜನಪದ ವಾದ್ಯವಿದು. ಹಸರೇ ಸೂಚಿಸುವ ಕೋಣ ಇಲ್ಲವೇ ಎಮ್ಮೆಯ ವಕ್ರವಾಗಿ ಬಾಗಿರುವ ಕೊಂಬಿನ ಚೂಪಾದ ಭಾಗದಲ್ಲಿ ಒಂದು ರಂಧ್ರ ಮಾಡಿದರೆ ಕೊಂಬುವಾದ್ಯ ಸಿದ್ದ. ರಂಧ್ರಕ್ಕೆ ಬಾಯಿಟ್ಟು ಜೋರಾಗಿ ಊದಿದರೆ, ಕೊಂಬು ಡೊಳ್ಳಾಗಿರುವುದರಿಂದ ಅದರೊಳಗಿಂದ ಗಾಳಿ ಹಾದು ಬರುವಾಗ ಕಂಪನಗಳುಂಟಾಗಿ ಧ್ವನಿ ಹೊರಡುತ್ತದೆ. ಕೊಂಬು ವಾದ್ಯದ ಮುಂಭಾಗ ಅಗಲವಾಗಿರುವುದರಿಂದ ಧ್ವನಿ ವರ್ಧಿಸುತ್ತಾ ಬಹುದೂರದವರೆಗೆ ಅದು ಕೇಳುತ್ತದೆ.
ಕಹಳೆ: ಆಕಾರದಲ್ಲಿ ಕಹಳೆಯಂತೆಯೇ ಇದ್ದರೂ ಅದಕ್ಕಿಂತ ಹೆಚ್ಚು ಉದ್ದ ಮತ್ತು ವಕ್ರವಾಗಿರುತ್ತದೆ. ಇದನ್ನು ಹಿತ್ತಾಳೆಯ ಕೊಳವೆಗಳಿಂದ ರಚಿಸಿರುತ್ತಾರೆ. ಇದು ಇಂಗ್ಲೀಷ್‍ನ S ಆಕಾರದಲ್ಲಿ ಇರುತ್ತದೆ. ಬಾಯಿಗೆ ತಗುಲಿಸಿ ಕೊಳವೆಯ ವ್ಯಾಸ ಕಡಿಮೆ ಇದ್ದು, ಕೊನೆಯ ಊದುವ ಕೊಳವೆಯ ಮುಂಭಾಗ ಹೆಚ್ಚು ಅಗಲವಾಗಿರುತ್ತದೆ. ಕೊಂಬುಗಳು ಕರೆದಾವ ಕಾಳೆಗಳು ಉದ್ಯಾವ ದಿಮ್ಮಿ ಕರಡೆಲ್ಲ ಕಣಕಣಿಸಿ ನಿಬ್ಬಂದ ಅಬ್ಬರ ಸಂಭ್ರಮ ಹೇಳಾವ ಎಂಬ ತ್ರಿಪದಿಯಿಂದ ಕೊಂಬು, ಕಹಳೆಗಳು ಸಾಂಸ್ಕøತಿಕ ಸಂಧರ್ಭದಲ್ಲಿ ಬಳಸುತ್ತಿದ್ದ ವಾದ್ಯಗಳೆಂದು ತಿಳಿಯುತ್ತದೆ. ಹೆಗ್ಗಹಳೆ, ಚಿನಿಕಹಳೆ, ರಣಕಹಳೆ, ಜವಳಿಕಹಳೆ, ಇರುಗಹಳೆ ಇತ್ಯಾದಿ ಹಲವಾರು ಬೇರೆ ಬೇರೆ ಬಗೆಯ ಕಹಳೆಗಳ ಉಲ್ಲೇಖ ಶಾಸನಗಳಲ್ಲಿ ಕಂಡುಬರುವುದು ಹೊಯ್ಸಳ ಶಿಲ್ಪಗಳಲ್ಲಿ ಉಲ್ಲೇಖವಾಗಿವೆ.
ಶಂಖ: ಇದು ಬಹಳ ಪ್ರಾಚೀನ ವಾದ್ಯವಾಗಿದ್ದು, ಸಾಮವೇದದಲ್ಲಿ ಇದರ ಉಲ್ಲೇಖವಿದೆ. ಪ್ರಕೃತಿದತ್ತ ವಾದ್ಯವಿದು. ಇದರ ಒಳಭಾಗದಲ್ಲಿ ನೈಸರ್ಗಿಕ ಸುರುಳಿಯಾಕಾರದ ಟೊಳ್ಳು ಭಾಗವಿರುತ್ತದೆ. ಅದರ ಮುಚ್ಚಿದ ಭಾಗದಲ್ಲಿ ಒಂದು ರಂಧ್ರ ತೆಗೆದರೆ ಸಾಕು. ಉಸಿರುವಾದ್ಯವಾದ ಶಂಖ ಸಿದ್ದ. ರಂಧ್ರದ ಮೂಲಕ ಊದಿದ ಗಾಳಿಯು ಸುರುಳಿಗಳಲ್ಲಿ ಸುತ್ತುತ್ತ ಕಂಪನ ಪಡೆದು ಧ್ವನಿಯಾಗಿ ಹೊರಹೊಮುತ್ತದೆ. ದೇವಾಲಯಗಳಲ್ಲಿ ದೇವರ ಪೂಜಾ ಸಂದರ್ಭದಲ್ಲಿ ಶಂಖ ಊದುವುದು ರೂಢಿ. ವಿಷ್ಣು ಶಂಖಧಾರಿ. ಹಿಂದೂಗಳಲ್ಲಿ ಶಂಖಕ್ಕೆ ಒಂದು ಬಗೆಯ ಧಾರ್ಮಿಕ ಮಹತ್ವವಿದೆ. ಈ ಲೇಖನದೊಂದಿಗೆ ನೀಡಿರುವ ಶಿಲ್ಪಗಳ ಚಿತ್ರಗಳು ನೂರಾರು ರೀತಿಯ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಕಾರರನ್ನು ನಮಗೆ ಪರಿಚಯಿಸುತ್ತವೆ. ಅವು ಗಾಯನ ಮತ್ತು ನರ್ತನದಲ್ಲಿ ಸಂಪೂರ್ಣವಾಗಿ ಮೈಮರೆತು, ಆನಂದಿಸುತ್ತಿರುವ ಭಂಗಿಗಳು, ಹೊಯ್ಸಳರು ಸಂಗೀತ ಮತ್ತು ಶುದ್ಧ ಮನೋರಂಜನೆಯನ್ನು ನೀಡುವುದರಲ್ಲಿ ಅಗ್ರಗಣ್ಯರಾಗಿದ್ದರು ಎಂಬ ವಾಸ್ತವತೆಯನ್ನು ಸೂಚಿಸುತ್ತವೆ. ನಾನು ಕೆಲವು ವಾದ್ಯಗಳನ್ನು ಪ್ರಮುಖ ಸಂಗೀತಕಾರರನ್ನು ಕಂಡು ವಿಭಜಿಸಲು ಪ್ರಯತ್ನಿಸಿದ್ದೇನೆ. ಮಿಕ್ಕವನ್ನು ಇನ್ನೂ ಹೆಚ್ಚಿನ ಅಧ್ಯಯನಕ್ಕಾಗಿ ಮೀಸಲಿಡುತ್ತಿದ್ದೇನೆ.
1. ಋಗ್ವೇದ ಸಂಹಿತ ಸುಮಾರು ಕ್ರಿ.ಪೂ. 1500ರಿಂದ 500ರ ಒಳಗೆ ರಚನೆಗೊಂಡಿದೆ. ಇಲ್ಲಿನ ಶ್ಲೋಕಗಳು ಕರ್ತೃಗಳ ಕುಲಗಳನ್ನು ಆಧರಿಸಿ ಜೋಡಿಸಲ್ಪಟ್ಟಿವೆ. ಈ ಜೋಡಣೆಯ ಒಟ್ಟು ಸ್ವರೂಪವೇ ಸಂಹಿತ.
2.   ಶತಪಥ ಬ್ರಾಹ್ಮಣವು ಸಪ್ತ ಋಷಿಗಳನ್ನು ಹೆಸರಿಸುತ್ತದೆ. ಅವರು: 1. ಗೌತಮ, 2. ಭಾರಧ್ವಾಜ, 3. ವಿಶ್ವಾಮಿತ್ರ, 4. ಜಮದಗ್ನಿ, 5. ವಶಿಷ್ಠ, 6. ಕಶ್ಯಪ, 7. ಅತ್ರಿ.
3. ಸ್ವರ, ವ್ಯಂಜನ ಮತ್ತು ಅನುನಾಸಿಕಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದಲ್ಲದೆ, ವರ್ಣ, ಸ್ವರ, ಮಾತ್ರ, ಬಲ, ಸಮ ಮತ್ತು ಸಂತನಗಳನ್ನು ವಿವರಿಸುತ್ತದೆ.
4. ಆಚಾರ್ಯ, ಪ್ರವಕ್ತ, ಶ್ರೋತ್ರೀಯ ಮತ್ತು ಅಧ್ಯಾಪಕ.
5. ಶಿಷ್ಯರಲ್ಲಿ ಎರಡು ವಿಧಗಳನ್ನು ಗುರುತಿಸಲಾಗಿದೆ. ಗುರುದಕ್ಷಿಣೆಯ ಮುಖೇನ ಶಿಷ್ಯರಾದವರನ್ನು-ಆಚಾರ್ಯಭಾಗ ಎಂದೂ, ಗುರು-ಕುಲದ ಕೈಂಕರ್ಯವನ್ನು ಮಾಡುತ್ತಾ, ಶಿಷ್ಯರಾದವÀರನ್ನು ಧರ್ಮ-ಶಿಷ್ಯ ಎಂದು ಗುರುತಿಸಲಾಗಿದೆ.
6. ಮಾರ್ಗ ಪದ್ಧತಿಯು ಬ್ರಹ್ಮ ಮತ್ತು ಇತರ ದೇವತೆಗಳಿಂದ ಪ್ರಚುರಪಡಿಸಲ್ಪಟ್ಟಿದ್ದು, ಇದನ್ನು ಮನೋರಂಜನೆಗೆ ಬಳಸಲ್ಪಡುತ್ತಿರಲಿಲ್ಲ, ಬದಲಾಗಿ ದೇವತೆಗಳನ್ನು ಸಂಪ್ರೀತಗೊಳಿಸಲು ಬಳಸುತ್ತಿದ್ದರು.
7. ಸ್ಥಾನಂಗ ಸಊತ್ರ, ನಾರದೀಯ ಶಿಕ್ಷ, ರಾಯಪ್ಪ ಸೇನಜನ ಕೃತಿಗಳಲ್ಲಿ ವಾದ್ಯಗಳನ್ನು 18 ವಿಭಾಗಳಾಗಿ ವಿಂಗಡಿಸಿದ್ದಾರೆ. 63 ವಾದ್ಯಗಳನ್ನು ಹೆಸರಿಸಿದ್ದಾರೆ.
8. ಸುಮಾರು ಕ್ರಿ.ಪೂ.200ಯಿಂದ ಕ್ರಿ.ಶ.200ರ ನಡುವಿನ ಕಾಲದಲ್ಲಿ ಭರತನ ನಾಟ್ಯಶಾಸ್ತ್ರ ರಚನೆಯಾಗಿದೆ.
9. ಕಾಳಿದಾಸರು ವಿಕ್ರಮಾದಿತ್ಯನ ಆಸ್ಥಾನಕವಿಯಾಗಿದ್ದು (ಕ್ರಿ.ಶ.380-413) ಮಹಾಕಾವ್ಯಗಳನ್ನು ರಚಿಸಿದ್ದಾನೆ. ಆತನ ಮೇಘದೂತ, ರಘುವಂಶ, ಅಭಿಜ್ಞಾನ ಶಾಕುಂತಲಾ ಮೊದಲಾದ ಗ್ರಂಥಗಳು ಶಾಸ್ತ್ರೀಯ ಸಂಗೀತ ಮತ್ತು ವಾದ್ಯಗಳನ್ನು ವಿವರಿಸುತ್ತವೆ. ಹಲವು ಬಗ್ಗೆ ಹಾಡುಗಳ ವಿಧಗಳು ಅಲ್ಲಿ ಕಂಡುಬರುತ್ತವೆ. ಕಾಕಳೀಗೀತ, ಸ್ತ್ರೀಗೀತ, ಅಪ್ಸರಗೀತ, ಮೂರ್ವನ, ಸ್ವರಸಪ್ತಕ, ತಾನ ಮತ್ತು ಧ್ವನಿಯನ್ನು ಕುರಿತು, ಕಿನ್ನರ ಕಂಠ ವಲ್ ಗುವಗಮ್ ಎಂಬ ವಿಧಾನಗಳನ್ನು ತಿಳಿಸಿದ್ದಾನೆ.
10. ಸಾರಿ ವೀಣೆಗಳು ಬೇಲೂರು, ಹಳೇಬೀಡುಗಳ ಭಿತ್ತಿಗಳಲ್ಲಿ ಕಂಡುಬಂದಿವೆ. ಸಾರಿ ವೀಣೆಗಳು 24 ಮೆಟ್ಟಿಲುಗಳನ್ನು ಹೊಂದಿವೆ. ಇದಕ್ಕೆ ‘ಮೇರು’ ಎಂದು ಕರೆಯುವರು.

ಃibiಟiogಡಿಚಿಠಿhಥಿ
ಆಚಿಥಿ. ಅ.ಖ.,ಖಿhe musiಛಿಚಿಟ iಟಿsಣಡಿumeಟಿಣs oಜಿ souಣheಡಿಟಿ Iಟಿಜiಚಿ ಚಿಟಿಜ ಣhe ಆeಛಿಛಿಚಿಟಿ, ಆeಟhi,1974.
Sಚಿmbಚಿmuಡಿಣhಥಿ P., ಅಚಿಣಚಿಟogue oಜಿ ಣhe ಒusiಛಿಚಿಟ iಟಿsಣಡಿumeಟಿಣs exhibiಣeಜ iಟಿ ಣhe ಉoveಡಿಟಿmeಟಿಣ ಒuseum, ಒಚಿಜಡಿಚಿs-1996.
ಖಿಚಿಡಿಟeಞಚಿಡಿ.ಉ., ಒusiಛಿಚಿಟ Iಟಿsಣಡಿumeಟಿಣs iಟಿ Iಟಿಜiಚಿಟಿ Sಛಿuಟಠಿಣuಡಿe,Pooಟಿಚಿ-1972.
ಒಚಿಡಿಛಿeಟ-ಆubois ಅ., ಐes iಟಿsಣಡಿumeಟಿಣs ಜe musique ಜe ಟ Iಟಿಜe ಚಿಟಿಛಿieಟಿಟಿe, Pಚಿಡಿis, 1943.
ಏಡಿishಟಿಚಿmuಡಿಣhಥಿ .ಏ., ಂಡಿಛಿhಚಿeoಟogಥಿ oಟಿ Iಟಿಜiಚಿಟಿ iಟಿsಣಡಿumeಟಿಣs, ಆeಟhi-1985.
ಉiಜಿಣ Siಡಿomಚಿಟಿಥಿ., ಏಚಿಟಥಿಚಿಟಿಚಿ ಒಚಿಟಿಣಚಿಠಿಚಿs oಜಿ ಣhe 16ಣh  ಅeಟಿ-ಒಚಿಜಡಿಚಿs ಅhಡಿisಣiಚಿಟಿ ಅoಟಟege ಒಚಿgಚಿziಟಿe, ಗಿoಟ-46-1977.
ಃoಟಿಟಿie ಅ Wಚಿಜe., ಒusiಛಿ iಟಿ Iಟಿಜiಚಿ, 2004-ಒಚಿಟಿohಚಿಡಿ ಠಿubಟiಛಿಚಿಣioಟಿs.
P.Sಚಿmbಚಿmuಡಿಣhಥಿ., ಊisಣoಡಿಥಿ oಜಿ Iಟಿಜiಚಿಟಿ ಒusiಛಿ, 2005-ಖಿhe Iಟಿಜiಚಿಟಿ musiಛಿ ಠಿubಟishiಟಿg ಊouse.
ಉeeಣhಚಿ ಖಚಿರಿಚಿgoಠಿಚಿಟ., ಒusiಛಿ ಖiಣuಚಿಟs iಟಿ ಣemಠಿಟes oಜಿ Souಣh Iಟಿಜiಚಿ, ಗಿoಟ-1-ಆ.ಞ.Pಡಿiಟಿಣತಿoಡಿಟಜ.
ಖ.ಇ.ಖies.,ಖಿhe ಛಿuಟಣuಡಿಚಿಟ seಣಣiಟಿgs oಜಿ Souಣh Iಟಿಜiಚಿಟಿ ಒusiಛಿ, ಂsiಚಿಟಿ ಒusiಛಿ-uಟಿiveಡಿsiಣಥಿ oಜಿ ಖಿexಚಿs Pಡಿess.
ಊiggiಟಿs ಎ.ಃ., Peಡಿಜಿoಡಿmiಟಿg ಚಿಡಿಣs iಟಿ Iಟಿಜiಚಿ, ಇssಚಿಥಿs oಟಿ ಒusiಛಿ, ಆಚಿಟಿಛಿe ಚಿಟಿಜ ಆಡಿಚಿmಚಿ.

 ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಬೆಂಗಳೂರು-560001.
                                 
ಈಟuಣe-ಊoಥಿsಚಿಟeshತಿಚಿಡಿಚಿ ಣemಠಿಟe-       ಂmಡಿuಣಚಿಠಿuಡಿಚಿ-ಂmಡಿuಣeshತಿಚಿಡಿಚಿ ಣemಠಿಟe
ಊಚಿಟebiಜu-ಓIಆಊI

No comments:

Post a Comment