Tuesday, December 31, 2013

ಕನ್ನಡದ ಸೇವೆಗೆ ಅನನ್ಯ ಅವಕಾಶ





ಹಸ್ತ ಪ್ರತಿಗಳು ಇತಿಹಾಸ ಮತ್ತು ಸಾಹಿತ್ಯದ ಪ್ರಮುಖ ಆಕರ.ಅವು ನಮ್ಮ ನಾಡಿನ ಪರಂಪರಾಗತ ಸಂಪತ್ತು.ನಾಶದ ಅಂಚಿನಲ್ಲಿರುವ ಅವುಗಳನ್ನು ಸಂರಕ್ಷಿಸಲು ಮತ್ತು ಅಭ್ಯಸಿಸಲು ಅಭಿಯಾನ ಹಮ್ಮಿಕೊಂಡಿದೆ.ಆಧುನಿಕತಂತ್ರ ಜ್ಞಾನವನ್ನು ಅಳವಡಿಸಿಕೊಂಡರೆ ಈ ಕೆಲಸ ಸರಳ ಮತ್ತು ಸುಲಭ.ಈಗಾಗಲೇ  ದೇಶವಿದೇಶದ ಮೂವತ್ತಕ್ಕೂ ಹೆಚ್ಚು ಜನ ಸ್ವಯಂ ಸೇವಕರು ಈ ಕೆಲಸದಲ್ಲಿತೊಡಗಿಸಿ ಕೊಂಡಿರುವರು.ಎಲ್ಲದಕ್ಕೂ ಸರಕಾರವನ್ನೇ ನಂಬಿಕೊಂಡರೆ ಕೆಲಸ ಆಗದು.  ಹಣ ಇಲ್ಲದಿದ್ದರೂ ಜನ ಇದ್ದರೆ ಸಾಕು. ಈಗ ಒಂದು ತಿಂಗಳಲ್ಲಿ ೫೦ ಕೃತಿಗಳ ಡಿಜಿಟಲೈಜೇಷನ್‌ ಮತ್ತು ಸೂಚಿಯ ಕರಡು ತಯಾರಿ ಕೆಲಸ ಆಗಿದೆ. ಇನ್ನೂ ಒಂದು ಲಕ್ಷಕ್ಕೂ ಮಿಗಿಲು ಗರಿಗಳು ಇವೆ.ಈಗ ಆಗಿರುವ ಕೆಲಸ ಅಡಿಕೆಯಷ್ಟು ಆಗ ಬೇಕಾದುದು ಬೆಟ್ಟದಷ್ಟು. ಕನ್ನಡದ ತೇರು ಎಳೆಯಲು ಕೈಗಳು ಬೇಕಿವೆ, ವಿದ್ಯಾರ್ಥಿ , ವಿದ್ವಾಂಸ, ತಂತ್ರಜ್ಞ, ಗೃಹಿಣಿ, ವೃತ್ತಿಪರ ಮತ್ತು ನಿವೃತ್ತrOಸೇರಿದಂತೆ ಎಲ್ಲರೂ ಸೇವೆ ಸಲ್ಲಿಸಲು ಸಾಧ್ಯವಿದೆ.ಬಿಡುವಿನ ಸಮಯದಲ್ಲಿ ಕೆಲಸಮಾಡುವ ದೃಢ ಮನ ಬೇಕು.ವಿಶೇಷವಾಗಿ ಇಂಟರ್‌ನೆಟ್‌ ಸೌಲಭ್ಯ ಹೊಂದಿದವರು ಜಗತ್ತಿನ ಯಾವ ಮೂಲೆಯಲ್ಲೊ ಇದ್ದರೂ ಈ ಅನನ್ಯ ಕೆಲಸದಲ್ಲಿ ಭಾಗಿಯಾಗಬಹುದು.ಇಲ್ಲದವರು ಬೆಂಗಳೂರಿನವರಾದರೆ ಪ್ರತಿಷ್ಠಾನದಲ್ಲಿ   ಕೆಲಸ ನಿರ್ವಹಿಸಬಹುದು.ಜ್ಞಾನ ಸಂಪತ್ತನ್ನು ಉಳಿಸುವ, ಹರಡುವ ಮತ್ತು  ಅಧ್ಯಯನ ಮಾಡಲು ಅವಕಾಶ ಒದಗಿಸುವ ಹೆಮ್ಮೆ ನಿಮ್ಮದಾಗಲು  ಸಂಪರ್ಕಿಸಿ
ಎಚ್‌.ಶೇಷಗಿರಿರಾವ್‌
ನಿರ್ದೇಶಕರು
ಹಸ್ತ ಪ್ರತಿ ಅಭಿಯಾನ
ಬಿ.ಎಂ.ಶ್ರೀ. ಪ್ತತಿಷ್ಠಾನ, ಬೆಂಗಳೂರು-೧೯
ಚರದೂರವಾಣಿ – 9448442323,  ಸ್ಥಿರ ದೂರವಾಣಿ-080-26613929

No comments:

Post a Comment