Saturday, November 9, 2013

ಹಸ್ತ ಪ್ರತಿ ಸಮಾವೇಶದ ಸರ್ವಾದ್ಯಕ್ಷರು



ಎಚ್‌.ಶೇಷಗಿರಿರಾವ್‌



ಹಸ್ತಪ್ರತಿರಂಗದ ಹಿರಿಯತಲೆಪ್ರೊ.ಜಿ.ಜಿ. ಮಂಜುನಾಥನ್‌.







       ಹೆಸರಿನ ಹಪಾಹಪಿ ಇಲ್ಲದೆ,ಅಧಿಕಾರ ಆಸೆ ಇಲ್ಲದೆ ಎಲೆಯ ಮರೆಯ ಕಾಯಿಯಂತೆ ಜನಸಂಪರ್ಕಕ್ಕೆಬಾರದೆ  ತಾಳೆಗರಿಗಳ ನಡುವೆ ತನ್ಮಯಯರಾಗಿ ಕಾರ್ಯ ನಿರ್ವಹಿಸುವವರು ಹಸ್ತಪ್ರತಿ ವಿದ್ವಾಂಸರು. ಬಿ.ಎಲ್‌ರೈಸ್‌ರವರ ಕಾಲದಲ್ಲಿ ನಾಡಿನ  ಸರಸ್ವತಿಬಂಢಾರವನ್ನು  ತುಂಬಲು ಹಸ್ತಪ್ರತಿಗಳನ್ನುಸಂಗ್ರಹಿಸುವ, ಸಂರಕ್ಷಿಸುವ, ಅಧ್ಯಯನಮಾಡುವ ಸಂಸ್ಥೆಯೆಂದರೆ ಮೈಸೂರಿನ ಓರಿಯಂಟಲ್‌ ರಿಸರ್ಚ ಇನಸ್ಟಿಟ್ಯೂಟ್‌ ಸಂಸ್ಥೆ ಅದರಲ್ಲಿ ಬಿ.ಎಲ್.ರೈಸ್‌  ಆರ್‌.ನರಸಿಂಹಾಚಾರ್,ಡಾ.ಶಾಮಾಶಾಸ್ತ್ರಿ ಮೊದಲಾದ ಮಹನೀಯರು ದುಡಿದು  ಪ್ರಾಚೀನ ಕೃತಿಗಳನ್ನು ಬೆಳಕಿಗೆ ತಂದಿರುವರು. ಆ ದಿಶೆಯಲ್ಲಿ ಹೆಜ್ಜೆ ಹಾಕಿ ಮೂರು ದಶಕಕ್ಕೂ ಹೆಚ್ಚು  ಕಾಲ ಕುವೆಂಪು ಕನ್ನಡ ಅಧ್ಯಯನಸಂಸ್ಥೆಯಲ್ಲಿ  ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತರಾದ ಮೇಲೂ ಹಸ್ತಪ್ರತಿಗಳ ಹಳೆಯನಂಟನ್ನು ಮುಂದುವರಿಸಿರುವ ವಿದ್ವಾಂಸರೆಂದರೆ ಡಾ.ಜಿ,ಜಿ, ಮಂಜುನಾಥನ್.

ಡಾ. ಜಿ.ಜಿ. ಮಂಜುನಾಥನ್‌

 ಗುಂಡ್ಲುಪೇಟೆ ಗುಂಡಪ್ಪಯ್ಯ್ತಮಂಜುನಾಥನ್‌ ಅವರ ಪೂರ್ಣಹೆಸರು .,ಇವರ ಜನನ 06-8-1941 ರಲ್ಲಿ.ಹುಟ್ಟೂರು ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆ.ತಂದೆ ಜಿ.ಎನ್‌.ಗುಂಡಪ್ಪಯ್ಯ ಇವರದು ತಳಲೆ ಶಾನುಭೋಗರ ವಂಶ. ತಂದೆ ಬಹುಬಾಷಾ ಪರಿಣಿತರು.ಸಾಹಿತ್ಯಾಸಕ್ತರು ಸಾರ್ವಜನಿಕ ಸೇವೆಯಲ್ಲಿ ತೊಡಗಿದವರು. ಪುರಸಭಾ ಸದಸ್ಯರಾಗಿ ಜನಾನುರಾಗಿಗಳಾಗಿದ್ದರು.. ತಾಯಿ ಸುಬ್ಬಮ್ಮ ಸಹೃದಯಿ ಸುತ್ತಲ ಜನರಿಗೆ ಸಹಾಯಮಾಡಲು ಸದಾ ತುಡಿಯುವ ತಾಯಿ.  ಹೀಗಾಗಿ ಮಂಜುನಾಥನ್‌ ಬಾಲ್ಯದಿಂದಲೇ ಜನರ ನಡುವೆ,ಅವರ ಒಡನಾಟದಲ್ಲಿ ಬೆಳೆದವರು. ಈಗಲೂ  ಊರು ಬಿಟ್ಟ ಹಲವು ದಶಕಗಳಾದರೂ ಅವರೊಡನೆ  ಸತತ ಸಂಪರ್ಕವಿದೆ.
ಇವರ ಪ್ರಾಥಮಿಕ ಶಿಕ್ಷಣ ಮನೆಯಲ್ಲಿಯೇ ಆಯಿತು. .ಅವರ ತಾತನೇ ಮೊದಲ ಗುರು. ಅವರಿಂದಲೆ ಅಕ್ಷರ ಮತ್ತು  ಲೆಕ್ಕ  ಕಲಿಕೆ. ಅವರಲ್ಲಿ ಕಲಿತು ನೇರವಾಗಿ ಮಾಧ್ಯಮಿಕ ಶಾಲೆಗೆ ಸೇರಿದರು ೧೯೫೭ ರಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿ ಕಾಲೇಜು ಕಲಿಯಲು ಮೈಸೂರಿಗೆ ಬಂದರು. ಯುವರಾಜ ಕಾಲೇಜಿನಲ್ಲಿ ಪಿ.ಯುಸಿಗೆ ಸೇರಿದರು. ಅಲ್ಲಿ ಜಿ.ಎಸ್‌ಶಿವರುದ್ರಪ್ಪ ಮತ್ತು ಚಿದಾನಂದ ಮೂರ್ರಿ*ಗಳೀಂ*ದ ಕನ್ನಡ ಕಲಿಯುವ ಅವಕಾಶ ದೊರೆಯಿತು. ನಂತರ, ಮಹಾರಾಜಕಾಲೇಜಿನಲ್ಲಿ ಪದವಿಗೆ ಅಬ್ಯಾಸಮಾಡಿದರು..ಅರ್ಥಶಾಸ್ತ್ರ ಮತ್ತು ಕನ್ನಡ  ಐಚ್ಛಿಕವಿಷಯಗಳಾಗದ್ದವು.. ಕಾಲೇಜಿನಲ್ಲಿ ಪ್ರೊ.ತಿ.ನಂ ಶ್ರೀ,ಪ್ರೊ.ಡಿ.ಎಲ್‌.ಎನ್,ಎಸ್‌.ವಿ..ಪರಮೇಶ್ವರಭಟ್ಟರು, ಪ್ರೊ.ವರದರಾಜರಾವ್‌, ಡಾ. ಹಾ.ಮಾ.ನಾಯಕ್‌ ಗುರುಗಳಾಗಿ ದೊರೆತರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ,ಎಂ.ಎ ಗೆ ಸೇರಿದರು. ಮಾನಸ ಗಂಗೋತ್ರಿಯಲ್ಲಿ ತಿ.ನಂ ಶ್ರೀ., ಡಿ.ಜವರೇಗೌಡ, ಎಲ್‌.ಬಸವರಾಜು ಅವರ ಮಾರ್ಗದರ್ಶನ ದೊರೆಯಿತು ಹೀಗೆ ಅವರ ಕಾಲೇಜು ಶಿಕ್ಷಣ ಅವಧಿಯಲ್ಲಿ ಸಂಪೂರ್ಣ ವಿದ್ವತ್‌ ವಾತಾವರಣ ದೊರೆಯಿತು.. ಇವರೆಲ್ಲರ ಸ್ಪೂರ್ತಿದಾಯಕ ಬೋಧನೆಯಿಂದ ಅವರ ಕಾರ್ಯಕ್ಷಮತೆ ಹೆಚ್ಚಿತು.
ಎಂ. ಎ ಪರೀಕ್ಷೆ ಕಾರಣಾಂತರದಿಂದ ಮುಂದೆ ಹೋಯಿತು.ಆ ಅವಧಿಯಲ್ಲಿ ಮಳವಳ್ಳಿ ತಾಲೂಕಿನ ಪೂರಿಗಾಲಿಯಲ್ಲಿ ಗಾಂಧಿವಾದಿ ತಗಡೂರುಸುಬ್ಬಣ್ಣನವರು ಸ್ಥಾಪಿಸಿದ್ದ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾದರು .ಅಲ್ಲಿ ತಮ್ಮ ಬೋಧನಾ ವಿಧಾನ ಮತ್ತು ಬದ್ದತೆಯಿಂದ ಜನಪ್ರಿಯರಾದರು. ಸೇವೆ ಸಲ್ಲಿಸಿದ ಒಂದೇ ವರ್ಷದಲ್ಲಿ ಸಂಸ್ಥೆಯ ಆಸ್ತಿ ಎಂಬ ಹೆಸರು ಪಡೆದರು. ಆದರೆ ಗುರುಗಳಾದ ಪ್ರೊ. ಜವರೇಗೌಡರು ಮೈಸೂರಿನಲ್ಲಿ ಸಂಪಾದನಾ ವಿಭಾಗಕ್ಕೆ ಅವರನ್ನು ಆಹ್ವಾನಿಸಿ ಉದ್ಯೋಗ ನೀಡಿದರು. ಸಹಾಯಕ ಸಂಪಾದಕನೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಕಚೇರಿಯಲ್ಲಿ ವೃತ್ತಿಜೀವನ ಪ್ರಾರಂಭವಾಯಿತು. ಆಗಎನ್‌.ಬಸವಾರಾಧ್ಯರು ಸಂಪಾದಕರು .ಪ್ರೊ. ಡಿ .ಎಲ್‌.ಎನ್‌ .ಮತ್ತು  ತಿ.ನಂ.. ಶ್ರೀ ಸಲಹೆಗಾರರು. ನಿಘಂಟು ರಚನೆಯ ಸಮಯದಲ್ಲಿ ಹಲವಾರು ಪ್ರಾಚೀನ ನಿಘಂಟುಗಳನ್ನು, ಪುರಾಣ ಕೃತಿಗಳನ್ನೂ ಅವಲೋಕಿಸ ಬೇಕಾಗುತಿತ್ತು ತಾಳೆಗರಿ, ಹಸ್ತ ಪ್ರತಿ, ಕೋರಿ ಕಾಗದದ ಪ್ರತಿಗಳನ್ನು ಓದ ಬೇಕಿತ್ತು.ನಂತರ  ನಿಘಂಟಿನ ಕರಡು ರಚಿಸಿ ಅದನ್ನು ಪ್ರತಿ ತಿಂಗಳ ಸಭೆಗೆ ಮೊದಲು  ಮೈಸೂರಿಗೆ ಹೋಗಿ  ಪ್ರೊ. ಡಿ .ಎಲ್‌.ಎನ್‌ ಮತ್ತು ಪ್ರೊ. ತಿ.ನಂ ಶ್ರೀ. ಅವರ ಮಾರ್ಗದರ್ಶನ ಪಡೆಯಲಾಗುತಿತ್ತು .ನಂತರ ನಿಘಂಟಿನ ಸಮಿತಿಯ ಸಭೆಯಲ್ಲಿ ಚರ್ಚಿತವಾಗುತಿತ್ತು. ನಾಡಿನ ಖ್ಯಾತ ವಿದ್ವಾಂಸರಾದ. ದೇಜೆ ಗೌ,, ಮರಿಯಪ್ಪಭಟ್ಟರು, ಸಿದ್ದಯ್ಯಪುರಾಣಿಕ,.ಡಿ.ಕೆ. ಭೀಮಸೇನರಾವ್, ಕೆ.ಎಸ್.ಧರಣೇಂದ್ರಯ್ಯ ಬಿ. ಶಿವಮೂರ್ತಿಶಾಸ್ತ್ರಿ, ಮತ್ತು ಸ..ಸ. ಮಾಳವಾಡ,  ಚರ್ಚೆಯಲ್ಲಿ ಭಾಗವಹಿಸಿ ಅಂತಿಮ ರೂಪ ಕೊಡುತಿದ್ದರು. ಒಂದು ಶಬ್ದ. ಅದರ ಭಿನ್ನರೂಪಗಳು, ಅರ್ಥ, ಪ್ರದೇಶಿಕ ಭಿನ್ನತೆ,  :ಅಭಿಪ್ರಾಯ ಬೇಧ, ಸಮರ್ಥನೆ ಹೀಗೆ ಹಲವು ಸ್ತರದಲ್ಲಿ ಚರ್ಚೆ ನಡೆಯುತಿತ್ತು. ಇದರ ಪರಿಣಾಮವಾಗಿ ಗ್ರಂಥ ಸಂಪಾದನಾ ಕಾರ್ಯದಲ್ಲಿ ಉತ್ತಮ ಮಾರ್ಗದರ್ಶನ ದೊರೆಯಿತು. ಇದರಿಂದ “ಕೆಲಸ ಸಂಸ್ಕೃತಿ” ಯ ಮಟ್ಟ ಹೆಚ್ಚಿತು.
 ಅವರ ಕಲಿಕೆಯ ಮಹತ್ವದಘಟ್ಟ ಡಿ ಎಲ್ ಎನ್‌ ಅವರಿಗೆ ಸಹಾಯಕನಾಗಿ ಅವರ ಮನೆಯಲ್ಲಿಯೇ ಕೆಲಸ ನಿರ್ವಸಿದ ಮೂರು ವರ್ಷದ ಅವಧಿ.  ನಿಘಂಟು ಶಾಸ್ತ್ರ, ಗ್ರಂಥ ಸಂಪಾದನೆ ಮತ್ತು ಹಸ್ತಪ್ರತಿಶಾಸ್ತ್ರ, ಬಾಷೆಯ ಬಳಕೆ ವಿಷಯದಲ್ಲಿ ನಿಖರತೆ ದೊರೆತದ್ದು ಆಗಲೇ. ನಂತರ ಕ.ವೆಂ. ರಾಘವಾಚಾರ್‌ಮತ್ತು ಡಾ.ಜಿ.ಎಸ್‌ಗಾಯಿ ಅವರೊಂದಿಗೆ ಕೆಲಸ ಮಾಡುವ ಸಮಯದಲ್ಲಿ ಸಾಹಿತ್ಯ ವಿವೇಚನೆಯಲ್ಲ್ಲಿಶಾಸನಗಳ ಬಳಕೆಯ ಸಾದ್ಯತೆಯ ಅರಿವಾಯಿತು.
ಉದ್ಘಾಟನೆ
ಹಿರಿಯರ ಮಾರ್ಗದರ್ಶನ ಅವರ ಮುಂದಿನ ಕಾರ್ಯಕ್ಕೆ ದಾರಿ ದೀಪವಾಯಿತು. ಬಹುತೇಕ ವಿದ್ವಾಂಸರು ಜನಪ್ರಿಯ ಕೃತಿಗಳ ಸಂಪಾದನಾ ಕೆಲಸಕ್ಕೆ ಕೈಹಾಕುವರು.. ಆದರೆ ಮಂಜುನಾಥನ್‌ ಯಾರೂ ಗಮನಿಸದ ವಿರಳ ಲೌಕಿಕ ಶಾಸ್ತ್ರಕೃತಿಗಳ ಸಂಪಾದನೆಗೆ ಮುಂದಾದರು. ವೈದ್ಯ ಶಾಸ್ತ್ರ, ಕಾಮಶಾಸ್ತ್ರ, ಗೃಹಶಾಸ್ತ್ರ,ಗಜ ಶಾಸ್ತ್ರ, ಅಶ್ವ ಶಾಸ್ತ್ರ, ಜೋತಿಷ್ಯ ಶಾಸ್ತ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಕಾರಣ ಹೆಚ್ಚಿನ ಸಂಖ್ಯೆಯ ಪ್ರತಿಗಳ ಕೊರತೆ ಮತ್ತು ಅದಕ್ಕೆ ಬೇಕಾದ ವಿಶೇಷ ಜ್ಞಾನದ ಅಭಾವ.ಅನೇಕರು  ಹಿಂಜರಿಯುವ ಕೆಲಸಕ್ಕೆ ಡಾ. ಮಂಜುನಾಥನ್‌ ಮುಂದಾದರು. ಅದರ ಫಲವಾಗಿ ವಿರಳ ಕೃತಿಗಳ ಹೊರತರುವ ಸಾಹಸ ಮೊದಲಾಯಿತು.. ಜನವಶ್ಯ,ಯೋಗರತ್ನಾಕರ,ಸುಜ್ಞಾನಚಿಂತಾಮಣಿ, ಅಶ್ವಶಾಸ್ತ್ರ ಸಂಪಾದಿಸಿದರು.” ಜನವಶ್ಯ” ಎಂಬುದು ಶರ,ಕುಸುಮ ಮತ್ತು ಭೋಗ ಷಟ್ಪದಿಯಲ್ಲಿರುವ ಕಾವ್ಯ. ವಿಜಯನಗರದ ರಾಜವಂಶಸ್ಥನಾದ ಕಲ್ಲರಸನ ಕೃತಿ. .ಇದರಲ್ಲಿ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ವಿವರಗಳು ಇವೆ. ಅದರ ರಚನೆಯಲ್ಲಿ ಅದರ ನಿಖರತೆಗಾಗಿ ಅನೇಕ ಇಂಗ್ಲಿಷ್‌ಗ್ರಂಥಗಳನ್ನೂ ಪರಿಶೀಲಿಸಿದರು. ಇದು ಒಂದು ವೈಜ್ಞಾನಿಕ ದೃಷ್ಟಿಕೋನದ ನಿಖರ ಮಾಹಿತಿ ಇರುವ ಕೃತಿ. ಇತ್ತೀಚೆಗ ಶಾಲಾ ಪಠ್ಯ ಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸ ಬೇಕೆಂಬ ಯೋಜನೆ ಇರುವಾಗ “ಜನವಶ್ಯ”  ಗ್ರಂಥವು ಮಹತ್ವ ಪಡೆಯುವುದು.

ಓರಿಯಂಟಲ್‌ ಇನಸ್ಟಿಸ್ಟೂಟನಲ್ಲಿ ಇದ್ದಾಗ ಅವರು ಸಂಚಾರಿಪಂಡಿತರಾಗಿ ಕಾರ್ಯ ನಿರ್ವಹಿಸಿದರು. ಹಸ್ತಪ್ರತಿಗಳ ಸಂಗ್ರಹ ಅವರ ಮುಖ್ಯ ಉದ್ದೇಶ. ಆಗಿನ ಅವರ ಹಸ್ತಪ್ರತಿ ಸಂಗ್ರಹದ ಓಡಾಟದ ಅನುಭವ ಬಹಳ ರೋಚಕ. ಅನೇಕ ಸಲ ಅವರಿಗೆ ಹುಡುಕಿಕೊಂಡು ಹೋದ ಹಸ್ತಪ್ರತಿ ದೊರೆಯದು, ಕಣ್ಣಿಗೆ ಕಂಡದ್ದು ಕೈಗೆ ಬಾರದ ನಿರಾಶೆಯ ದಿನಗಳೂ ಇದ್ದವು  ಆದರೆ  ಆ  ಕೆಲಸದ ಜೊತೆ ಜೊತೆಯಲ್ಲಿಯ ಅಪೂರ್ವ ಪ್ರಾಚ್ಯವಸ್ತುಗಳ ಸಂಗ್ರಹಣೆಯನ್ನೂ ಮಾಡಿದರು.. ಓರಿಯಂಟಲ್‌ಇನಸ್ಟಿಟೂಟ್‌ ಕುವೆಂಪು ಅಧ್ಯಯನಸಂಸ್ಥೆಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ವಿಲೀನ ಗೊಂಡಮೇಲೆ ಸಂಶೋಧನಾ ಸಹಾಯಕರೆಂಬ ಹೊಸ ಹೆಸರಿನೊಂದಿಗೆ ಕೆಲಸ ಮಾಡಿದರು.ಆಗಲೂ ಹಾಸನ,ಮಧುಗಿರಿ,ಮಾಗಡಿ,ಕೊಳ್ಳೆಗಾಲ,ತೀರ್ಥಹಳ್ಳಿ ತಾಲೂಕಗಳಲ್ಲಿ ಹಸ್ತಪ್ರತಿ ಸಂಗ್ರಹಕ್ಕೆ ಪ್ರವಾಸ ಮಾಡಿದರು. ಆದರೆ ಅಂಥಹ ಯಶಸ್ಸು ದೊರೆಯಲಿಲ್ಲ.
ಸನತ್ಕುಮಾರ ಚರಿತೆ, ಜೀವಂಧರ ಚರಿತೆ, ಚಂದ್ರಪ್ರಭ ಚರಿತೆ,ಹಾಲಾಸ್ಯ ಪುರಾಣಂ. ನಂದಿ ಮಹಾತ್ಮಂ, ,ಗಿರಿರಮಣವಿಲಾಸ,ನನ್ನಯ್ಯಗಳ ಚಾರಿತ್ರೆ ಅಶ್ವಶಾಸ್ತ್ರ,ಈ ಮೊದಲಾದ ಜೈನ, ಶೈವ, ಶಾಸ್ತ್ರಮತ್ತು ಚಾರಿತ್ರಿಕ ಕೃತಿಗಳನ್ನು ಸಂಪಾದಿಸಿರುವರು. ಅಲ್ಲದೆ ಅಳಿಯ ಲಿಂಗರಾಜ ಬರೆದ ಯಕ್ಷಗಾನ ಸಾಹಿತ್ಯ ಮೊದಲಾದ ೪೪ ಕೃತಿಗಳು ಕುವೆಂಪು ಕನ್ನಡ ಅಧ್ಯಯನಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ,ಹಂಪಿ ವಿಶ್ವ ವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತತ್ತಿನಂಥಹ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಕಟವಾಗಿವೆ.
ಹುಟ್ಟೂರಿನ ಮೇಲೆ ಅವರಿಗೆ ಅಪಾರ  ಅಭಿಮಾನ. ಅವರು ಗ್ರಂಥಸಂಪಾದನೆ ಮಾಡಲು ಪ್ರಥಮವಾಗಿ ಆರಿಸಿದ ಕೃತಿ  ಅವರ ಹುಟ್ಟೂರಿಗೆ  ಹತ್ತಿರವಿರುವ ತೆರಕಣಾಂಬಿಯ ಬೊಮ್ಮರಸ ನಸನತ್ಕುಮಾರ  ಚರಿತೆ ಆಯ್ದುಕೊಂಡರು  .ಅವರ ಆಸಕ್ತಿಯ ಫಲವಾಗಿ ಕೌಂಡಿನ್ಯ ವನಶ್ರೀ, ಇಂಗುಳವಾಡಿ ಮಾದೇಶ್ವರ,  ಶ್ರೀಗಂದ ಮೊದಲಾದ ಕೃತಿಗಳುಬೆಳಕು ಕಂಡು ಗುಂಡ್ಲುಪೇಟೆ ತಾಲೂಕಿನ ಸವಿವರ ಚಿತ್ರ ನೀಡುತ್ತವೆ. ಮೈಸೂರು ಜಿಲ್ಲೆಯ ಸಾಹಿತ್ಯ ಸಮ್ಮೇಳನ ಅಂಗವಾಗಿ ಗುಂಡ್ಲು ಪೆಟೆ ತಾಲೂಕಿನಭೂಪ್ರದೇಶ, ಇತಿಹಾಸ, ಮಠಮಾನ್ಯಗಳುತೀರ್ಥ ಕ್ಷೇತ್ರಗಳು, ಜಾನಪದ, ಶಾಸನ ಪರಂಪರೆ, ಕವಿರಾಜ ಮಾರ್ಗದಿಂದ ಹಿಡಿದು ದೇವನೂರು ಮಹಾದೇವನ ವರೆಗಿನ ಸಾಹಿತ್ಯ ವಿವೇಚನೆ ಒಳ ಗೊಂಡ “ ಸ್ಕಂದ ಗಿರಿ” ಎಂಬ 500 ಪುಟಗಳ ಸ್ಮರಣ ಸಂಚಿಕೆ ಅವರ ಮೆಚ್ಚಿನ ಕೃತಿಯಾಗಿದೆ
ಇವರ ವಿದ್ವತ್‌ಸಾಧನೆ ಗಮನಿಸಿ ಮೂಡುಬಿದರೆಯಲ್ಲಿ ನಡೆದ ೭೧ ನೆಯ ಸಾಹಿತ್ಯ ಸಮ್ಮೇಳನದಲ್ಲಿ ’”ಕರ್ನಾಟಕಶ್ರೀ“ಪ್ರಶಸ್ತಿ ದೊರೆತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವೂ ೨೦೦೬ ಲ್ಲಿ ಸನ್ಮಾನಿಸಿದೆ. ೨೦೧೩ ರಲ್ಲಿ ಸೆಡಿಯಾಪು ಕೃಷ್ಣ ಭಟ್ಟರ ಪ್ರಶಸ್ತಿ ಸಂದಿದೆ. ಪ್ರತಿಷ್ಠಿತ ತೀ.ನಂ ಶ್ರೀ ಪ್ರಶಸ್ತಿಗೂ ಭಾಜನರಾಗಿರುವರು. .ಕಲ್ಲರಸನ “ಜನವಶ್ಯ” . ಮತ್ತು ಮಾದಣ್ಣನ “ ನನ್ನಯ್ಯಗಳ ಚಾರಿತ್ರ’ ರಾಜ್ಯ ಸಾಹಿತ್ಯ ಅಕಾಡೆಮಿಯು ಆಯಾ ವರ್ಷದ ಶ್ರೇಷ್ಟ ಕೃತಿಗಳೆಂದು   ಗೌರವ  ಪಡೆದಿವೆ.
 ಅಲ್ಲದೆ ಬಿ..ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನವು ತುಮುಕೂರುವಿಶ್ವ ವಿದ್ಯಾನಿಲಯದಲ್ಲಿ ೨೦೧೩ನೆಯನವಂಬರ್‌ ೮ ರಂದು ನಡೆಸಿದ ರಾಷ್ಟ್ರೀಯ ಹಸ್ತಪ್ರತಿ ಅಧ್ಯಯನ ಸಮಾವೇಶದ ಸರ್ವಾಧ್ಯಕ್ಷ ಸ್ಥಾನವನ್ನೂ ನೀಡಿ ಗೌರವಿಸಿದೆ .
ಸ್ಮರಣ ಸಂಚಿಕೆ ಬಿಡುಗಡೆ
ಡಾ. ಜಿ .ಜಿ. ಮಂಜುನಾಥನ್‌ ಅವರದು ಸುಖಿ ಕುಟುಂಬ. ಅವರ ವಿವಾಹ ೧೯೬೪ ರಲ್ಲಿ  ಶ್ರೀಮತಿ ಸಿ.ಶಾರದಮ್ಮ ಅವರೊಂದಿಗೆ ಆಯಿತು.  ಅವರ ದಾಂಪತ್ಯ  ಜೀವನವು ಸುವರ್ಣ ಮಹೋತ್ಸವ ಆಚರಣೆ ಹತ್ತಿರ ಬಂದಿದೆ. ಅವರಿಗೆ ಇಬ್ಬರು ಪುತ್ರಿಯರು ಶ್ರೀಮತಿ ಎಂ.ನಾಗರತ್ನ ಮತ್ತು ಎಂ. ಮೀನಾಕ್ಷಿ . ಅವರಿಬ್ಬರೂ ಸುಮಾರು ಒಂದು ದಶಕದ ವಿದೇಶವಾಸದ ನಂತರ ಮತ್ತೆ ಹೆತ್ತವರ ಹತ್ತಿರವೇ ಇರಲು  ತಾಯ್ನಾಡಿಗೆ ಬಂದು  ನೆಲಸಿರುವರು.
ಮಡದಿಯೊಂದಿಗೆ ಮಂಜುನಾಥನ್‌
ಹುದ್ದೆಯಿಂದ ನಿವೃತ್ತರಾದರೂ ಕಾರ್ಯಭಾರ ಅವರ ಬೆನ್ನು ಬಿಟ್ಟಿಲ್ಲ. ಕಚೇರಿಯಲ್ಲಿ ಮಾಡುವ ಹಸ್ತಪ್ರತಿಗಳ ಅವಲೋಕನವು ಈಗ ಮನೆಯಲ್ಲಿಯೇ ನಡೆಯುತ್ತಿದೆ.. ನಿವೃತ್ತರಾದ ನಂತರ ಜಗನ್ನಾಥ ವಿಜಯ, ಮೋಹನ ತರಂಗಿಣಿ, ಸಿದ್ಧಾಂತ ಶಿಖಾಮಣಿ, ಒಡೆಯರ ಕಾಲದ ಹಾಡುಗಳು ಮೊದಲಾದ  8 ಕೃತಿಗಳನ್ನು ಸಂಪಾದಿಸಿರುವರು. , ನೋಂಪಿಯ ಕಥೆಗಳು ಈಗ ಅಚ್ಚು ಮನೆಯಲ್ಲಿದೆ. ಯಾವುದೆ ಹಸ್ತಪ್ರತಿಗೆ ತುರ್ತಾಗಿ ಅಧ್ಯಯನದ ಅಗತ್ಯಬಿದ್ದರೆ ಅದು ನೇರವಾಗಿ ಬರುವುದು ಡಾ, ಜಿ.ಜಿ .ಮಂಜುನಾಥನ್‌ರ ಬಳಿಗೆ. ಅವರು ಈ ಮಾಗಿದ ವಯಸ್ಸಿನಲ್ಲಿ ತಡಮಾಡದೆ ಸಂಶೋಧನೆ ಮಾಡಲು ತುಡಿಯುತಿದ್ದಾರೆ. ತಾವು ಬರೆಯುವುದಲ್ಲದೆ ಇತರರಿಗೂ ಬರೆಯಲು ಉತ್ತೇಜನ ನೀಡುವರು. ಕನ್ನಡ ಗ್ರಂಥಸಂಪಾದನಾ ರಂಗದ ಮೂಲಪುರುಷ ಡಿ..ಎಲ್. ಎನ್‌ ಅವರ  ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿರುವರು.








No comments:

Post a Comment