Wednesday, November 13, 2013

ಕೊಂಡ್ಲ ಹಳ್ಳಿಹಟ್ಟಿಯ ಬೃಹತ್‌ ಶಿಲಾಯುಗದ ನೆಲೆ

ಚಳ್ಳಕೆರೆ ತಾಲ್ಲೂಕು ಕೊಂಡ್ಲಹಳ್ಳಿ ಹಟ್ಟಿಯಲ್ಲಿ ಬೃಹತ್ ಶಿಲಾಯುಗದ ನೆಲೆಯ ಶೋಧ
ಮಂಜಣ್ಣ ಪಿ.ಬಿ. *  ಮತ್ತು  ಕೆ.ಎಸ್. ಶರತ್‌ಬಾಬು **
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಪ್ರಾಗೈತಿ ಹಾಸಿಕ ದೃಷ್ಟಿಯಿಂದ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಚಳ್ಳಕೆರೆಯಿಂದ ವಾಯವ್ಯಕ್ಕೆ ೩೦ ಕಿ.ಮೀ. ಅಂತರದಲ್ಲಿರುವ ಕೊಂಡ್ಲಹಳ್ಳಿ ಹಟ್ಟಿ ಗ್ರಾಮ ಚಿನ್ನಹಗರಿನದಿ ಬಲದಂಡೆ ಮೇಲಿದೆ.
ಕೊಂಡ್ಲಹಳ್ಳಿ ಹಟ್ಟಿ ಪರಿಸರದಲ್ಲಿ ಒಟ್ಟು ಒಂಬತ್ತು ಬೃಹತ್ ಶಿಲಾ ಸಮಾಧಿಗಳು ಚಿನ್ನಹಗರಿ ನದಿ ಬಲ ದಂಡೆಯ ಮೇಲಿವೆ. ಕೊಂಡ್ಲಹಳ್ಳಿ ಹಟ್ಟಿಯ ಆಗ್ನೇಯಕ್ಕೆ ಎರಡು, ಈಶಾನ್ಯಕ್ಕೆ ಆರು, ನಾಯಕನಹಟ್ಟಿಯ ಉತ್ತರಕ್ಕೆ ಒಂದು ಸಮಾಧಿಗಳಿವೆ. ಇವುಗಳಲ್ಲಿ ಮೂರು ಸಮಾಧಿಗಳು ಶಿಲಾವೃತ್ತ, ಆರು ಕಲ್ಗುಪ್ಪೆ ಸಮಾಧಿಗಳು. ಇವುಗಳನ್ನು ಸ್ಥಳೀಯರು ಪಾಂಡವರ ಮಟ್ಟಿ, ಕೊಂಡ್ಲಹಳ್ಳಿ ಹಟ್ಟಿ ಮಟ್ಟಿ, ಗದುಗಿನ ತಿಪ್ಪಯ್ಯನ ಮಟ್ಟಿ ಎಂಬುದಾಗಿ ಕರೆಯುತ್ತಾರೆ. ಈ ಸಮಾಧಿಗಳ ವ್ಯಾಸ ಒಂದೇ ಆಗಿರದೆ ಬೇರೆ ಬೇರೆ ಆಗಿರುವುದು ವಿಶೇಷವಾಗಿದೆ. ಇವುಗಳಲ್ಲಿ ನಾಲ್ಕು ಸಮಾಧಿಗಳು ೪೦x೪೦ ಅಡಿ, ಮೂರು  ೨೦x೨೦ ಅಡಿ, ಮತ್ತೊಂದು ಸಮಾಧಿ ೧೫x೧೫ ಅಡಿ ಒಂದು ೫x೫೦ ಅಡಿ ವ್ಯಾಸ ಹೊಂದಿದೆ.  ಇವುಗಳಲ್ಲಿ ಮೂರು ಸಮಾಧಿಗಳನ್ನು ಎರಡರಿಂದ ಮೂರು ಅಡಿ ಎತ್ತರದ ಮಣ್ಣಿನ ಗುಡ್ಡೆಯ ಮೇಲೆ ಕಲ್ಲುಗಳನ್ನು ವೃತ್ತಾಕಾರವಾಗಿ ಇಟ್ಟು ಸಮಾಧಿ ಮಾಡಲಾಗಿದೆ.  ಕೊಂಡ್ಲಹಳ್ಳಿ ಹಟ್ಟಿಯ ಈಶಾನ್ಯಕ್ಕಿರುವ ಆರು ಕಲ್ಗುಪ್ಪೆ ಸಮಾಧಿಗಳು ತುಂಬಾ ವಿಶೇಷವಾಗಿವೆ. ಇವು ಒಂದೇ ವ್ಯಾಸವಾಗಿರದೆ ಬೇರೆ ಬೇರೆಯಾಗಿದ್ದು ನೆಲದ ಮೇಲೆ ಎರಡರಿಂದ ಮೂರು ಅಡಿ ಎತ್ತರವಿದ್ದು ಸ್ಥಳೀಯವಾಗಿ ದೂರೆಯುವ ಚಿಕ್ಕ ಕಲ್ಲುಗಳನ್ನು ಬಳಸಿ ಸಮಾಧಿ ಮಾಡಲಾಗಿದೆ. ಇವುಗಳ ಮಧ್ಯೆ ವಿಶಾಲವಾದ ಬಯಲಿರುವುದು ವಿಶೇಷವಾಗಿದೆ. ಇದರಲ್ಲಿ ಎರಡು ಸಮಾಧಿ ಗಳನ್ನು ನಿಧಿಗಳ್ಳರು ಅಗೆದಿದ್ದು, ಅಲ್ಲಿ ಕಪ್ಪು ಬಣ್ಣದ ಮಡಕೆ ಚೂರುಗಳು ದೂರೆತಿವೆ. ಈ ರೀತಿಯ ಸಮಾಧಿಗಳು ಅದೇ ಪರಿಸರದ ಕೂನಬೇವು, ಚಿಪ್ಪಿನಕೆರೆ, ಬ್ರಹ್ಮಗಿರಿ, ನೆರೆನಹಾಳು ಪರಿಸರದಲ್ಲೂ ದೂರೆತಿವೆ.
ಂ.ಹೆಚ್. ಕೃಷ್ಣ, ಮಾರ್ಟಿಮ್ಹರ್ ವೀಲ್ಹರ್ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ದೊರೆತ ಅವಶೇಷಗಳಿಂದ ಹಾಗೂ ಚಿತ್ರದುರ್ಗ ತಾಲ್ಲೂಕು ಕೂನಬೇವು, ಚಿಪ್ಪಿನಕೆರೆಯಲ್ಲಿ ಎಸ್.ವೈ. ಸೋಮಶೇಖರ್ ಶೋಧಿಸಿದ ಪ್ರಾಕ್ಚಾರಿತ್ರಿಕ ಕುರುಹುಗಳು ಈ ನೆಲೆಗೆ ಹೋಲಿಕೆ ಆಗುವುದ ರಿಂದ ಈ ಪ್ರದೇಶವು ಬೃಹತ್ ಶಿಲಾಯುಗ ಅಥವಾ ಕಬ್ಬಿಣ ಯುಗ ಕಾಲಕ್ಕೆ ಸೇರಿದ ನೆಲೆಯಾಗಿರಬಹುದೆಂದು ತರ್ಕಿಸ ಬಹುದಾಗಿದೆ.


ಆಧಾರಸೂಚಿ
೧.         ಷೇಕ್ ಅಲಿ.ಬಿ [ಪ್ರ.ಸಂ], ೧೯೯೭ಕರ್ನಾಟಕ ಚರಿತ್ರೆ, ಸಂಪುಟ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೨.         ಶಿವತಾರಕ್ ಕೆ.ಬಿ, ೨೦೦೧, ಕರ್ನಾಟಕದ ಪುರಾತತ್ತ್ವ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೩.           ಇತಿಹಾಸ ಮತ್ತು ಪುರಾತತ್ತ್ವ, ಕನ್ನಡ ವಿಷಯ ವಿಶ್ವಕೋಶ, ೨೦೦೯, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
೪.         ಗೋಪಾಲ್ ಆರ್. [ಸಂ]., ೨೦೦೫, ಚಿತ್ರದುರ್ಗ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ, ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ.
೫.       ಕ್ಷೇತ್ರ ಕಾರ್ಯದ ವರದಿ.
ಪಿಎಚ್.ಡಿ., ಸಂಶೋಧನಾರ್ಥಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೫೮೩೨೭೬.
  **  ಕಲೂನಬೇವು, ಚಿತ್ರದುರ್ಗ ತಾಲ್ಲೂಕು-೫೭೭೫೧೭.

ತಿ ಪಿಎಚ್.ಡಿ., ಸಂಶೋಧನಾರ್ಥಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೫೮೩೨೭೬.

No comments:

Post a Comment