Wednesday, April 3, 2013

ಕೋಟೆ-ಸರಣಿ

ಕೋಟೆ  ಕೊತ್ತಳಗಳು



ಬಾಲ್ಯವನ್ನು ಹಂಪೆಯ ಹಾಳು ಪಟ್ಟಣದಲ್ಲಿ ವಾಯು ವಿಹಾರ ಮಾಡುತ್ತ ಕಳೆದ ನನಗೆ ಅದೇನೋ ಕೋಟೆ ಕೊತ್ತಲಗಳೆಂದರೆ ಅತೀವ ಆಕರ್ಷಣೆ. ವಿಜಯನಗರದ ಇತಿಹಾಸ ಓದಿದ ಮೇಲಂತೂ ದಕ್ಷಿಣ ಭಾರತದಲ್ಲಿ ಎಲ್ಲಿಯೇ ಹೋಗಲಿ ಕೋಟೆ ಕೊತ್ತಳಗಳನ್ನು ಕಂಡರೆ ಹಿಂದೆ ಒಂದು ಕಾಲದಲ್ಲಿ ಇದು ನಮ್ಮದಾಗಿತ್ತು ಎಂಬ ಭಾವನೆ ಒತ್ತರಿಸಿಕೊಂಡು ಬಂದು  ಮನಸ್ಸು ಗತಕಾಲಕ್ಕೆ ಜಾರುತ್ತದೆ.. ಕೆಲವು ಊರುಗಳ ಹೆಸರು ಕೇಳಿದರೂ ಸಾಕು ಇತಿಹಾಸದ ನೆನಪು ಮರುಕಳಿಸುವುದು, ಉಚ್ಚಂಗಿ ದುರ್ಗ,ಕವಲೆ ,ಚಿತ್ರದುರ್ಗ, ಹುಲಯೂರು ದುರ್ಗ. ಗುಡೆಕೋಟೆ, ಹೊಸಕೋಟೆ, ಗಜೇಂದ್ರಗಡ, ಸದಾಶಿವ ಗಡ,ಹೀಗೆ ಊರಿನಹೆಸರೇ ಕೋಟೆಯಿಂದ ಗುರುತಿಸಲಾಗಿರುವುದು. ಇನ್ನು ಐತಿಹಾಸಿಕ ವ್ಯಕ್ತಿಗಳಿಗೂ  ಊರಿನ ಕೋಟೆಗೂ ಅವಿನಾವ ಭಾವ ಸಂಬಂಧ, ಕಿತ್ತೂರು ಚೆನ್ನಮ್ಮ, ಶ್ರೀರಂಗ ಪಟ್ಟಣದ ಟಿಪ್ಪು ಸುಲ್ತಾನ, ದೇವನ ಹಳ್ಳಿಹೈದರಾಲಿ, ಬಿಜಾಪುರ, ಬೀದರ್, ರಾಯಚೂರು , ಬಳ್ಳಾರಿ ಎಂದ ಕೂಡಲೆ ಅಲ್ಲಿನ ಭವ್ಯ ಕೋಟೆಗಳು ಕಣ್ಣ ಮುಂದೆ ಬರುತ್ತವೆ.ಐತಿಹಾಸಿಕ ಹಿನ್ನೆಲೆ ಇರುವ ಯಾವುದೇ ಪಟ್ಟಣವಾದರೂ ಇಂದಿಗೂ ಕೋಟೆ ಮತ್ತು ಪೇಟೆ ಪ್ರದೇಶಗಳು ಇದ್ದೇ ಇರುತ್ತವೆ.ರಾಜಾಸ್ತಾನದ ಹೆಸರೇ ಹೇಳುವಂತೆ ಅಲ್ಲಿರುವ ಕೋಟೆಗಳ ಮತ್ತು ಅರಮನೆಗಳ ವೈಭವ ನಮ್ಮಲ್ಲಿ ಇರಲಿಕ್ಕಿಲ್ಲ . ಇನ್ನು ದೆಹಲಿಯ ಕೆಂಪು ಕೋಟೆಯಂತೂ ರಾಷ್ಟ್ರೀಯ ದಿನಾಚರಣೆಯ ಅವಿಭಾಜ್ಯ ಅಂಗ.ಆದರೆ ನಮ್ಮಲ್ಲಿರುವವನ್ನೂ ತಿಳಿದುಕೊಳ್ಳುವುದು ಇಂದಿನ ಅಗತ್ಯ. ಜೊತೆಗೆ ಮಹಾನ್‌ಸಾಮ್ರಾಜ್ಯಗಳ ತವರೂರಾದ ಕನ್ನಡ ನಾಡಿನ ರಾಜವಂಶದವರ ವಶದಲ್ಲಿರುವ ಕೋಟೆಗಳ ಕಿರು ಪರಿಚಯ ಮಾಡಿಕೊಡುವ ಯತ್ನ ಇದು. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅತ್ಯಗತ್ಯ.ನಿಮ್ಮ ನಿಮ್ಮ ಪ್ರದೇಶದ ಕೋಟೆ ಕೊತ್ತಲಗಳ ಬಗೆಗೆ ಒಂದು ಕಿರು ಬರಹ ಜೊತೆಗೆ ನಾಲ್ಕಾರು ಫೊಟೋಗಳನ್ನು ಪ್ರತ್ಯೇಕವಾಗಿ ಕಳುಹಿಸಿದರೆ ಪ್ರಕಟಿಸುವ ಉದ್ದೇಶವಿದೆ. ದಯವಿಟ್ಟು ಕೆಳಗಿನ ಇ. ಮೇಲ್‌ವಿಳಾಸಕ್ಕೆ ಲೇಖನ ಮತ್ತು ಚಿತ್ರಗಳನ್ನು ಕಳುಹಿಸಿ.. ಪುನರಾವರ್ತನೆ ಆಗುವುದೆಂಬ ಅಳುಕು ಬೇಡ.ಪರಂಪರೆ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಐತಿಹಾಸಿಕ ಪರಂಪರೆ ಉಳಿಸುವಲ್ಲಿ ನಿಮ್ಮ ಕಾಣಿಕೆಯೂ ಸಲ್ಲಲಿ
ಒಂದು ಹಳ್ಳಿಯೇ ಆದರೂ ಕನಿಷ್ಟ ಹುಡೆ ಆದರೂ ಇದ್ದೆ ಇರುತ್ತದೆ..ಈಗ ಅವು  ನಶಿಸುತ್ತಿವೆ ನಿಜ.ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ  ಉದ್ದೇಶದಿಂದ ಕರ್ನಾಟಕ ಇತಿಹಾಸ ಅಕಾದೆಮಿಯ ಬ್ಲಾಗ್‌ನಲ್ಲಿ ಕೋಟೆಗಳ ಸರಣಿ ಪ್ರಾರಂಭಿಸುವ ಆಶಯವಿದೆ. ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಾಹಿತಿ ಮತ್ತು ಚಿತ್ರಸಂಗ್ರಹ ಸುಲಭ. ಈಗಾಲೇ ಬೇರೆ ಕಡೆ ವಿವರವಾಗಿ ಬಂದಿರಲೂ ಬಹುದು. ಆದರೆ ಒಂದೇಕಡೆ ಗುಂಡಿಯೊತ್ತಿದರೆ ಅದೂ ಇತಿಹಾಸ ಅಕಾದೆಮಿಯ ಬ್ಲಾಗ್‌ನಲ್ಲಿ ಓದುಗರಿಗೆ ಸಿಗುವಂತಿದ್ದರೆ  ತುಂಬ ಅನುಕೂಲ
ಜೊತೆಗೆ ಮಹಾನ್‌ಸಾಮ್ರಾಜ್ಯಗಳ ತವರೂರಾದ ಕನ್ನಡ ನಾಡಿನ ರಾಜವಂಶದವರ ವಶದಲ್ಲಿರುವ ಕೋಟೆಗಳ ಕಿರು ಪರಿಚಯ ಮಾಡಿಕೊಡುವ ಯತ್ನ ಇದು. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅತ್ಯಗತ್ಯ.ನಿಮ್ಮ ನಿಮ್ಮ ಪ್ರದೇಶದ ಕೋಟೆ ಕೊತ್ತಲಗಳ ಬಗೆಗೆ  ಅಥವ ನೀವು ಪ್ರವಾಸ ಮಡಿದಾಗ ನೋಡಿದ ಕೋಟೆಗಳ ಕುರಿತು ಒಂದು ಕಿರು ಬರಹ ಜೊತೆಗೆ ನಾಲ್ಕಾರು ಫೊಟೋಗಳನ್ನು ಪ್ರತ್ಯೇಕವಾಗಿ ಕಳುಹಿಸಿದರೆ ಪ್ರಕಟಿಸುವ ಉದ್ದೇಶವಿದೆ. ದಯವಿಟ್ಟು ಕೆಳಗಿನ ಇ. ಮೇಲ್‌ವಿಳಾಸಕ್ಕೆ ಲೇಖನ ಮತ್ತು ಚಿತ್ರಗಳನ್ನು ಕಳುಹಿಸಿ.. ಪುನರಾವರ್ತನೆ ಆಗುವುದೆಂಬ ಅಳುಕು ಬೇಡ.ಪರಂಪರೆ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಐತಿಹಾಸಿಕ ಪರಂಪರೆ ಉಳಿಸುವಲ್ಲಿ ನಿಮ್ಮ ಕಾಣಿಕೆಯೂ ಸಲ್ಲಲಿ.

       ಲೇಖನ ಕಳುಹಿಸುವ ವಿಳಾಸ- appaaji@gmail.com

No comments:

Post a Comment