Tuesday, March 3, 2015

ಬಳ್ಳಾರಿ ಜಿಲ್ಲೆಯ ಕಾಳಾಮುಖ ಸ್ಥಾನಾಚಾರ್ಯರು
(ಶಾಸನಗಳನ್ನಾಧರಿಸಿ)
ಮಂಜುಳ ಆಚಾರಿ 
ಭಾರತೀಯ ಶೈವ ಪ್ರಪಂಚ ತುಂಬಾ ವಿಸ್ತಾರವಾದುದು. ಅದರ ಶಾಖೋಪಶಾಖೆಗಳಾದ ಪಾಶುಪತ, ಲಾಕುಳ, ಕಾಳಾಮುಖ, ಕಾಶ್ಮೀರ ಶೈವ, ತಮಿಳು ಶೈವ, ವೀರಶೈವ, ಶುದ್ಧ ಶೈವ ಮೊದಲಾದವುಗಳಲ್ಲಿ ದೇಶವ್ಯಾಪಿಯಾಗಿದ್ದ ಪಾಶುಪತ, ಲಾಕುಳಗಳು, ಕಾಳಾಮುಖ ಮತ್ತು ನಮ್ಮ ನಾಡಿನ ವೀರಶೈವಗಳು ಪ್ರಮುಖವಾಗಿವೆ. ಇವುಗಳಲ್ಲಿ ಸಿಂಧೂ ನಾಗರೀಕತೆಯಷ್ಟು ಪ್ರಾಚೀನವಾದುದು ಪಾಶುಪತ, ಮಧ್ಯಯುಗದ ಇದರ ಪರಿಷ್ಕøತ ರೂಪ ಲಾಕುಳ, ನ್ಯಾಯ ವೈಶೇಷಿಕ ದರ್ಶನಗಳ ದಕ್ಷಿಣದ ಶೈವೀಯ ಶಾಖೆ ಕಾಳಾಮುಖ.
ಮಧ್ಯಯುಗದಲ್ಲಿ ಕರ್ನಾಟಕದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಏಕೈಕ ಶೈವ ಪಂಥ ಕಾಳಾಮುಖ. ಕರ್ನಾಟಕದಲ್ಲಿ ಸು. 9ನೇ ಶತಮಾನದಿಂದ 13ನೇ ಶತಮಾನದವರೆಗೆ ಕಾಳಾಮುಖ ಉಲ್ಲೇಖಗಳು ಶಾಸನಗಳಲ್ಲಿ ಸಿಗುತ್ತವೆ. ಈವರೆಗೆ ಸು.150ಕ್ಕೂ ಹೆಚ್ಚು ಕಾಳಾಮುಖರ ನೇರ ಉಲ್ಲೇಖಿತ ಶಾಸನಗಳು ದೊರೆತಿವೆ. ಕರ್ನಾಟಕದಲ್ಲಿ ಕ್ರಿ.ಶ.810ರ ನಂದಿಬೆಟ್ಟದ ಶಾಸನವು ಮೊಟ್ಟ ಮೊದಲು ಕಾಳಾಮುಖ ಉಲ್ಲೇಖ ನೀಡುತ್ತದೆ. ಇದು ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ ಕಾಲಕ್ಕೆ ಸೇರಿದೆ.1
ಮಧ್ಯಯುಗದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆ ಶೈವರ ಅಧ್ಯಯನದ ದೃಷ್ಠಿಯಿಂದ ತುಂಬ ವಿಶೇಷವಾದ ಮತ್ತು ಮಹತ್ವದ ಆಕರಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿನ ಧಾರ್ಮಿಕ ಜೀವನವನ್ನು ಗಮನಿಸಿದರೆ ಹಲವಾರು ಧರ್ಮಗಳು ಬೆಳೆದು ಬಂದಿರುವುದು ತಿಳಿಯುತ್ತದೆ. ಅವುಗಳಲ್ಲಿ ಶೈವ ಧರ್ಮದ ಕಾಳಾಮುಖ ಪರಂಪರೆಯು ವ್ಯಾಪಕವಾಗಿ ಹರಡಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಾಳಾಮುಖ ನೇರ ಉಲ್ಲೇಖವುಳ್ಳ ಶಾಸನಗಳ ಸಂಖ್ಯೆ 7, ಅವು ಬಳ್ಳಾರಿ ತಾಲೂಕಿನಲ್ಲಿ 03, ಹಡಗಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ತಲಾ ಒಂದೊಂದು ಶಾಸನಗಳಿವೆ. ಇವುಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ 06, ಕಳಚೂರಿಗಳು ಮತ್ತು ಕುರುಗೋಡ ಸಿಂಧರ ಅವದಿsಯ 01 ಶಾಸನ ಲಭ್ಯವಾಗಿದೆ. ರಾಜಮನೆತನದ ಉಲ್ಲೇಖವಿಲ್ಲದಿರುವುದು 01 ಶಾಸನವಿದೆ.
ಕುರುವತ್ತಿ ಶಾಸನದಲ್ಲಿ ಬ್ರಾಹ್ಮಣರು ತಮ್ಮ ಮಕ್ಕಳಿಗೆ ಪುಣ್ಯವಾಗಲಿ ಎಂದು (ಕ್ರಿ.ಶ.1067) ದಾನ ಮಾಡಿದ್ದಾರೆ. ಇದು ವರ್ಗ/ವರ್ಣ ಸಾಮರಸ್ಯವನ್ನು ತೋರಿಸುತ್ತದೆ. ಮಹಾಮಂಡಳೇಶ್ವರ ಘಟ್ಟಿಯರಸನು ಅಮೃತರಾಶಿಪಂಡಿತರಿಗೆ ಎರೆಯ ಕೆರೆಯ ಮತ್ತರು ಭೂಮಿ, 450 ಸಾವಿರ ಒಳ್ಳೆಯ ತೋಟ, ಗಾಣ, ಕೋಟೆಯೊಳಗಿನ ಮನೆ ಇತ್ಯಾದಿ ದಾನ ನೀಡಿದ್ದಾನೆ. ಸಾಮಂತರಾದ ತ್ರಿಭುವನ ಮಲ್ಲಪಾಂಡ್ಯ ಸೋಮಕತ್ರ್ತಾರರಿಗೆ ಗ್ರಾಮ, ಗದ್ದೆ, 1 ಗಾಣ ಒಕ್ಕಲು ದಾನ ನೀಡಿದ್ದಾರೆ. ಸಾಮಂತ ಕುರುಗೋಡಸಿಂದರ ರಾಚಮಲ್ಲನು ಬಾಲಶಿವಾಚಾರ್ಯರಿಗೆ ಮತ್ತು ಅಮೃತರಾಶಿ ಪಂಡಿತರಿಗೆ ತೆಕ್ಕಲ ಮತ್ತರು 2, ಕಂಬ 225ನ್ನು ದಾನ ಮಾಡಿದ್ದಾರೆ.
ಕಾಳಾಮುಖ ಸ್ಥಾನಾಚಾರ್ಯರು
1. e್ಞÁನೇಶ್ವರ ಪಂಡಿತ
ಕ್ರಿ.ಶ.1067ರ ಕುರುವತ್ತಿ ಶಾಸನದಲ್ಲಿ “ಕಾಳಾಮುಖ ಸರಸ್ವತಿ ಕಣ್ರ್ನಾವತಂಸ” ಎಂದು e್ಞÁನೇಶ್ವರ ಪಂಡಿತರನ್ನು ಹೊಗಳಿದೆ.2 ಚಾಲುಕ್ಯ ಆಹವಮಲ್ಲ ತುಂಗಭದ್ರೆಯಲ್ಲಿ ಮುಳುಗಿ ಸತ್ತಾಗ, ಅವನ ಹೆಸರಿನಲ್ಲಿ ಚಾಳುಕ್ಯ ಮಲ್ಲೇಶ್ವರ ಎಂಬ ದೇವಾಲಯ ನಿರ್ಮಿಸಿ, ಅದಕ್ಕೆ ಅಬಿsನವವಾದಿ ದೇವರು ಎಂದು ಪರ್ಯಾಯವಾಗಿ ಇಲ್ಲಿ ಕರೆಯಲಾಗಿದೆ. ಇಲ್ಲಿಯ ಸ್ಥಾನಾಚಾರ್ಯ e್ಞÁನೇಶ್ವರ ಪಂಡಿತ ಶಾಸನದಲ್ಲಿ ‘e್ಞÁನೇಶ್ವರ ಪಂಡಿತ ವಿಜಯೀಭವತು’ ಎಂದಿರುವುದು ಮತ್ತು ಬ್ರಾಹ್ಮಣರಿಂದ ದಾನ ಪಡೆದಿರುವುದು ಈ ಪಂಡಿತನ ವ್ಯಕ್ತಿತ್ವವನ್ನು ತೋರಿಸುತ್ತದೆ.
2. ಸೋಮಕತ್ರ್ಥಾರ ಪಂಡಿತ
ಹಗರಿಬೊಮ್ಮನಹಳ್ಳಿಯ ಕ್ರಿ.ಶ.1111ರ ಶಾಸನದಲ್ಲಿ ಈ ಯತಿಯ ವಿವರವಿದ್ದು, ಕಾಳಾಮುಖಸ್ಥಾನ ಕತ್ರ್ಥಾರ ಮಠ 3 ಎಂದು ಹೇಳಿದೆ. ಇಲ್ಲಿ ಸೋಮಕತ್ರ್ಥಾರ ಮತ್ತು ಕಾಳಾಮುಖ ಕತ್ರ್ಥಾರ ಮಠಕ್ಕೆ ಏನೋ ಸಂಬಂಧವಿರುವಂತೆ ತೋರುತ್ತದೆ. ಪರಶುರಾಮೇಶ್ವರ ದೇವರ ಸೇವೆಗೆ ದಾನ ಕೊಡುವಾಗ ಕತ್ರ್ಥಾರ ಮಠದ ಯತಿಗೂ ದಾನ ನೀಡಿದ್ದಾರೆ. ಅಂದರೆ ಇಲ್ಲಿ ಪರಶುರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡೇ ಕಾಳಾಮುಖ ಕತ್ರ್ಥಾರ ಮಠವೂ ಇದ್ದಿರಬೇಕು. ಸೋಮಕತ್ರ್ಥಾರರ ಹೆಸರಿನಲ್ಲಿ ಬಹುಶಃ ಮಠ ಸ್ಥಾಪನೆಯಾಗಿರಬೇಕೆನ್ನಿಸುತ್ತದೆ. ಯಮ ನಿಯಮಸ್ವಾಧ್ಯಾಯಧ್ಯಾನ ಧಾರಣಾಷಾವಿಣ ಜಪಸಮಾದಿs ಶೀಳ ಗುಣಸಂಪನ್ನರಪ್ಪ ಎಂದು ಯತಿಯನ್ನು ವರ್ಣಿಸಲಾಗಿದೆ.
3. ನಿರ್ವಾಣಿ ದೇವರು
ಕ್ರಿ.ಶ.1141ರ ಸಿಂದಿಗೆರೆ ಶಾಸನದಲ್ಲಿ ಎಕ್ಕೋಟಿ ಚಕ್ರವರ್ತಿಯ ಮಠದ ಉಲ್ಲೇಖವಿದೆ. ಇದರಲ್ಲಿ ಕಾಳಾಮುಖ ಸಮಯ ಸಮುದ್ಧರಣ ಮುಳುಗುಂದದ ಸ್ವಯಂಭುದೇವರ ಆಚಾರ್ಯನಾದ ಎಕ್ಕೋಟಿ ಚಕ್ರವರ್ತಿ ವಾಮದೇವರ ಶಿಷ್ಯ ಶ್ರೀಮತ್ ತ್ರಿಲೋಚನದೇವರ ಶಿಷ್ಯ ಕುಮಾರದೇವ, ಇವರ ಶಿಷ್ಯ ನಿರ್ವಾಣಿದೇವರು ಎಂದು ಹೇಳಿದೆ. ನಿರ್ವಾಣಿ ದೇವರು ಸಿಂದಿಗೆರೆಯ ಮಲ್ಲಿಕಾರ್ಜುನ ದೇವರನ್ನು “ಎಕ್ಕೋಟಿ ಚಕ್ರವರ್ತಿ ಮಠ” ಎಂದು ಹೇಳಿದೆ. ದತ್ತಿ ಭೂಮಿಯನ್ನು ಕಾಶ್ಮೀರ ಭೂಮಿ ಎಂದು ಉಲ್ಲೇಖಿಸಿದೆ.
ಇದೇ ಶಾಸನದಲ್ಲಿ ವಾಮದೇವನನ್ನು ವ್ಯಾಕರಣ ತರ್ಕ, ಸಿದ್ಧಾಂತ, ಕಾವ್ಯ, ನಾಟಕ, ನೃತ್ಯ, ಪುರಾಣ, ಇತಿಹಾಸ, ಮೀಮಾಂಸೆ, ನೀತಿಶಾಸ್ತ್ರ ಮುಂತಾದವುಗಳಲ್ಲಿ ಪ್ರವೀಣನಾಗಿದ್ದನೆಂದು ಉಲ್ಲೇಖಿಸಿದೆ. ಇಲ್ಲಿ ಮುಳುಗುಂದದ ಶ್ರೀ ಸ್ವಯಂಭುದೇವರಾಚಾರ್ಯರುಂ ನಿರ್ವಾಣಿದೇವರ ಕಾಲಂಕರ್ಚಿ ದಿsರಾಪ್ರದಾನಂ ಮಾಡಿ ಕೇಮನಕೇಸಿ(ಯ)ಣ ನಾಯಕ ಕೊಟ್ಟ ಧರ್ಮ
“ಮುಳುಂಗದ ಶ್ರೀ ಸ್ವಯಂಭು ದೇವರಾಚಾರ್ಯರು ನಿರ್ವಾಣಿದೇವರು
ಸಿಂದಗೆ¾Éಯ ಶ್ರೀಮಲ್ಲಿಕಾರ್ಜುನ ....
...... ಇದು ಎಕ್ಕೋಟಿ ಚಕ್ರವರ್ತಿಮಠ ಅಲ್ಲೆಂದನ ಬಾಯ ಕೋಷ್ಟ ಮೂಡುಗು....
ಅವಾರಿಛದ್ರ ಈಡಿಲ್ಲೆಂದನ ಬಾಯ ಕೋಷ್ಠಿ ಮೂಡುಗು|”....4
ಅಂದರೆ ಮುಳುಗುಂದದ ಸ್ವಯಂಭು ದೇವರು ಹಾಗೂ ಸಿಂದಗೆರೆಯ ಮಲ್ಲಿಕಾರ್ಜುನ ದೇವರು ಎರಡು ಸಹ ಎಕ್ಕೋಟಿ ಚಕ್ರವರ್ತಿ ಮಠಗಳೆಂದು ತಿಳಿಯುತ್ತದೆ. ಅಲ್ಲದೆ ನಿರ್ವಾಣಿ ದೇವರು ಮುಳುಗುನ್ದದ ಸ್ವಯಂಭು ದೇವರ ಆಚಾರ್ಯ ಸ್ಥಾನವನ್ನು ಸಹ ವಹಿಸಿಕೊಂಡಿದ್ದಿರಬೇಕು ಎಂಬುದು ತಿಳಿದು ಬರುತ್ತದೆ.
ಕ್ರಿ.ಶ.1113ರ ಕೊಟ್ಟೂರು ಶಾಸನದಲ್ಲಿ ದಶಬ್ರಹ್ಮರಾಯ ಮತ್ತು ನಾಗಲಾದೇವಿಯರ ಮಗನಾದ ಪೃಥ್ವಿದೇವನು ಕೇದಾರ ಪಂಡಿತರ ಶಿಷ್ಯನಾಗಿ ನಿಬ್ರ್ಬಾಣಿ ಎಂಬ ಹೆಸರನ್ನು ಪಡೆದು ಡಕ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವರ ದೇವಾಲಯಗಳ ಒಡೆಯನಾಗುತ್ತಾನೆ ಎಂಬ ವಿವರ ಇದೆ. ಇದರಿಂದ ನಿರ್ವಾಣಿ ದೇವ ಮೊದಲು ಪೃಥ್ವಿದೇವನೆಂಬ ಹೆಸರಿನ ರಾಜಕುಮಾರನಾಗಿದ್ದು ಅನಂತರ ಈ ಗುರು ಪರಂಪರೆಗೆ ಸೇರಿರುವ ವಿಷಯ ತಿಳಿದುಬರುತ್ತದೆ. ಬಹುಶಃ ಎಕ್ಕೋಟಿ ಮಠಗಳಿಗೆ ದೀಕ್ಷೆ ಪಡೆದು ಯಾರೂ ಬೇಕಾದರೂ ಗುರುಗಳಾಗಬಹುದಿತ್ತು ಎಂದು ತಿಳಿಯುತ್ತದೆ.5
ನಿರ್ವಾಣಿ ದೇವನು ಗುರುದೀಕ್ಷೆ ಪಡೆದ ಕೇದಾರ ಪಂಡಿತರು ಸಿರಿಯಮೇಶ್ವರ ಮತ್ತು ರಾಮೇಶ್ವರ ದೇವರುಗಳ ಸ್ಥಾನಾಚಾರ್ಯರಾಗಿದ್ದರೆಂದು ಕ್ರಿ.ಶ.1113ರ ಕೊಟ್ಟೂರು ಶಾಸನ ತಿಳಿಸುತ್ತದೆ.
4. ಅಮೃತರಾಸಿ ಮುನಿ
ಕ್ರಿ.ಶ.1176ರ ಕುರುಗೋಡು ಶಾಸನದಲ್ಲಿ “ಶಿವಶಕ್ತಿ ಸುತನು ಕಲಿದೇವರ ಪೂಜಕನೂ ಕಾಳಾಮುಖ ತಿಲಕನೂ ಆದ ಅಮೃತರಾಸಿಮುನಿ” ಎಂಬ ಉಲ್ಲೇಖವಿದೆ. ಕಲಿದೇವರ ಸ್ಥಾನಾಚಾರ್ಯನಾದ ಈತನ ಕಾಲ್ತೊಳೆದು ಕಲ್ಲಿಸೆಟ್ಟಿ ಭೂಮಿದಾನ ಮಾಡಿದ್ದಾನೆ.6
ಕ್ರಿ.ಶ.1112ರ ಕೊಟ್ಟೂರಿನ ಶಾಸನವು “ಕೊಟ್ಟೂರಿನ ರಾಮೇಶ್ವರ ದೇವರ ಆಚಾರ್ಯ” ಎಂದು ಹೇಳಿದೆ. ಅಂದರೆ ಕುರುಗೋಡಿನ ಕಲಿದೇವರ ಹಾಗೂ ಕೊಟ್ಟೂರಿನ ರಾಮೇಶ್ವರ ದೇವಾಲಯಗಳಿಗೆ ಈತ ಆಚಾರ್ಯನಾಗಿರಬೇಕು.
5. ಬಾಲಶಿವಾಚಾರ್ಯ
ಕ್ರಿ.ಶ.1181ರ ಕುರುಗೋಡು ಶಾಸನದಲ್ಲಿ ಸ್ವಯಂಭೂ ದೇವರ ಸ್ಥಾನಾಚಾರ್ಯ ಬಾಲಶಿವಾಚಾರ್ಯರ ಬಗ್ಗೆ ಹೇಳಲಾಗಿದೆ.7 ಯಮ ನಿಯಮ ಸ್ವಾಧ್ಯಾಯಧ್ಯಾಯ ಧಾರಣ ಮೋಮೌನಾನುಷಾವಿನ ಶಿವಪೂಜಾ ತತ್ಪರಪ್ಪವರ ಮಹಿಮೆಂತೆದಡೆ ಆ ಲಕುಳೀಶ್ವರಾಗಮ ಕಾಳಾ(ಲಾ)ಮುಖ ದರ್ಶನಂಗಳನ್ತಾಳ್ದಿತಪೋಲೀಕಿಗೆ ಮೈವಾಂತಿಪ್ರ್ಪಂ ಬಾಲಶಿವಾಚಾರ್ಯ ವಯ್ರ್ಯನಗಣಿತ ಧೈಯ್ರ್ಯನ್|| ಅಂತೆನಿಸಿದ ಬಾಲಶಿವಾಚಾಯ್ರ್ಯರ್|| ಎಂದಿದೆ. ಇಲ್ಲಿ ಲಾಕುಳಕ್ಕೆ ಆಗಮ ಸಂಬಂಧ, ಕಾಳಾಮುಖಕ್ಕೆ ದರ್ಶನ ಸಂಬಂಧ ಕಲ್ಪಿಸಿರುವುದು, ವೈಶೇಷಿಕ ವ್ಯಾಖ್ಯಾನದ ಬಗ್ಗೆ ಹೇಳಿರುವುದು ಈ ಯತಿಯ ಉದಾರ ಸ್ವಭಾವಕ್ಕೆ ಸಾಕ್ಷಿ ಈ ಹಿನ್ನೆಲೆಯಲ್ಲಿ ಬಾಲಶಿವಾಚಾರ್ಯರು ಎರಡು ಸಮಯಗಳ ಸಮನ್ವಯಕಾರರಂತೆ ಇಲ್ಲಿ ಚಿತ್ರಿಸಲಾಗಿದೆ.
ಇವರುಗಳಲ್ಲದೇ “ಕಾಳಾಮುಖ” ಎಂಬ ಸ್ಪಷ್ಟ ಉಲ್ಲೇಖವಿಲ್ಲದಿರುವ ಹಲವು ಶಾಸನಗಳಲ್ಲಿ ಸುರೇಶ್ವರ ಪಂಡಿತ, ಲೋಕಾಭರಣ ಪಂಡಿತ, ಚಿಲ್ಲುಕಾಚಾರ್ಯ, ರುದ್ರರಾಸಿಭಟಾರ, ದೇವರಾಸಿ ಪಂಡಿತ, ತ್ರಿಲೋಚನದೇವ, ಬಿsೀಮರಾಶಿ ಪಂಡಿತ ಮುಂತಾದ ಹಲವು ಆಚಾರ್ಯಗಳ ಉಲ್ಲೇಖಗಳು ಸಿಗುತ್ತವೆ.
ಬಳ್ಳಾರಿ ಜಿಲ್ಲೆಯ ಮೋರಗೇರಿಯ ನೊಳಂಬೇಶ್ವರ ದೇವಾಲಯ, ಹೂವಿನ ಹಡಗಲಿಯ ಕಲಿದೇವ ದೇವಾಲಯ, ಹೊಳಗೊಂದಿಯ ಬಾಳೇಶ್ವರ ದೇವಾಲಯ, ಬೆಣ್ಣೆಕಲ್ಲು ಮುಂತಾದ ಸ್ಥಳಗಳು ಪಾಶುಪತರ ಕೇಂದ್ರಗಳೆಂದು ಗುರುತಿಸಬಹುದು.
ಕುರುವತ್ತಿಯ ಮಲ್ಲೇಶ್ವರ ದೇವಾಲಯ, ಹನಶಿಯ ಪರಶುರಾಮೇಶ್ವರ ದೇವಾಲಯ, ಕುರುಗೋಡಿನ ಸ್ವಯಂಭು ದೇವಾಲಯ, ಕೊಟ್ಟೂರಿನ ರಾಮೇಶ್ವರ ದೇವಾಲಯ, ಸಿಂದಗೆರೆ ಮೊದಲಾದವು ಕಾಳಾಮುಖರ ಸ್ಥಳಗಳಾಗಿದ್ದವೆಂದು ತಿಳಿದುಬರುತ್ತದೆ.
ಈ ಶೈವ ಯತಿಗಳ ಕೊಡುಗೆಗಳನ್ನು ಈ ರೀತಿ ಗುರುತಿಸಬಹುದು. ಬೇರೆ ಬೇರೆ ಮೂಲಗಳಿಂದ ದಾನದತ್ತಿಗಳನ್ನು ಪಡೆದು, ದೇವಾಲಯಗಳನ್ನು ಸಂಪತ್ತಿನ ಕೇಂದ್ರಗಳನ್ನಾಗಿ ಮಾಡಿದರು.
ಅಧಿಕಾರಿವರ್ಗಕ್ಕೂ, ಜನಸಾಮಾನ್ಯರಿಗೂ ಧಾರ್ಮಿಕ ಸೇತುವೆಯಾಗಿ ಕಾರ್ಯನಿರ್ವಹಿಸಿದರು.
 ಶಿವ ಪಾರಮ್ಯದ ಏಳಿಗೆಗಾಗಿ ಬೇರೆ ಮತದೊಂದಿಗೆ ಸಂಘರ್ಷ ಅಥವಾ ರಾಜೀಯ ತಂತ್ರದಿಂದ ಶೈವ ಸಂಸ್ಕøತಿಗೆ ಹೊಸ ಆಯಾಮ ನೀಡಿದರು.
ಶೈವ ಧರ್ಮವನ್ನು ಪರಿವರ್ತಿಸಿ ಜನಮುಖಿಯಾಗುವಂತೆ ನೋಡಿಕೊಂಡರು.
ಶೈವ ಸ್ಥಾನಾಚಾರ್ಯರು ಪ್ರಚಂಡ ಪಂಡಿತರು ವೇದ, ಆಗಮ, ವ್ಯಾಕರಣ, ಶಾಸ್ತ್ರ, bsÀಂದಸ್ಸು ಹಾಗೂ ಕಲೆಗಳಲ್ಲಿ ಪಾರಂಗತರಾಗಿದ್ದು, ಅವುಗಳನ್ನು ಇವರ ಆಶ್ರಯದಲ್ಲಿದ ಹಲವಾರು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಹೊಸ ಚೈತನ್ಯ ತುಂಬುತ್ತಿದ್ದರು. ತರ್ಕಶಾಸ್ತ್ರದಲ್ಲಿ ಚಕ್ರವರ್ತಿ ಎಂಬ ಉಲ್ಲೇಖ ಇವರ ಬಹುತರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇದರಿಂದ ಇವರು ಕೇವಲ ಸ್ಥಾನಾಚಾರ್ಯರಾಗಿದ್ದುದ್ದಲ್ಲದೇ ಸಮಾಜೋಪಕಾರಿ ಕೆಲಸಗಳಲ್ಲೂ ತೊಡಗಿರುತ್ತಿದ್ದರೆಂದು ತಿಳಿದುಬರುತ್ತದೆ. ಕೆಲವೊಮ್ಮೆ ರಾಜಗುರುಗಳಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದರು. 13ನೆಯ ಶತಮಾನದ ನಂತರ ರಾಜಾಶ್ರಯದ ಕೊರತೆಯಿಂದಾಗಿ ಈ ಯತಿ ಪರಂಪರೆ ಸಮಾಜದಿಂದ ಹಿಂದಕ್ಕೆ ಸರಿಯಿತು. ಇದಕ್ಕೆ ಶರಣ ಚಳುವಳಿಯ ಪ್ರಭಾವವೂ ಆಗದೇ ಇಲ್ಲ.
ಒಟ್ಟಾರೆ ಧಾರ್ಮಿಕ, ಸಾಮಾಜಿಕ, ಸಂಸ್ಕøತಿಗೆ ಬಳ್ಳಾರಿ ಜಿಲ್ಲೆಯ ಕಾಳಾಮುಖ ಯತಿಗಳ ಕೊಡುಗೆ ಶ್ಲಾಘನೀಯ.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ನಂ. 66, ಇ.ಸಿ. x, ಚಿಕ್ಕಬಳ್ಳಾಪುರ.
2. ನಂ. 7, ಹಡಗಲಿ, ಕ.ವಿ.ಶಾ.ಸಂ-1.
3. ನಂ. 1, ಹನಶಿ, ಹಗರಿಬೊಮ್ಮನಹಳ್ಳಿ, ಕ.ವಿ.ಶಾ.ಸಂ-1.
4. ನಂ. 61, ಸಿಂದಗೆರೆ, ಕ.ವಿ.ಶಾ.ಸಂ-1.
5. ನಂ. 26, ಕೊಟ್ಟೂರು, ಕ.ವಿ.ಶಾ.ಸಂ-1, ಪುಟ-674.
6. ನಂ. 7, ಕುರುಗೋಡು, ಕ.ವಿ.ಶಾ.ಸಂ-1.
7. ನಂ. 18, ಕುರುಗೋಡು, ಕ.ವಿ.ಶಾ.ಸಂ-1.

ಸಂಶೋಧನಾ ವಿದ್ಯಾರ್ಥಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

No comments:

Post a Comment