Friday, January 3, 2014

ಶಾಸನಗಳಲ್ಲಿ ಕಾಲಗಣನೆ

ಕರ್ನಾಟಕದ ಶಾಸನಗಳಲ್ಲಿನ ಕಾಲಗಣನೆ
 *ಎಂ.ವಿ. ವಿಶ್ವೇಶ್ವರ  ಮತ್ತು  ** ಎಸ್. ಕಾರ‍್ತಿಕ್

ರ್ನಾಟಕದ ಶಾಸನಗಳಲ್ಲಿ ಬಳಕೆಯಾಗಿರುವ ಕಾಲಗಣನೆ ವೈವಿಧ್ಯಮಯವಾಗಿದೆ. ಇದರ ಪೂರ್ಣ ಪ್ರಮಾಣದ ಅಧ್ಯಯನ ಇದುವರೆಗೂ ನಡೆದಿಲ್ಲ. ಕರ್ನಾಟಕದ ಶಾಸನಗಳಲ್ಲಿ ಕಂಡುಬರುವ ನಕ್ಷತ್ರಗಳ, ವಾರಗಳ ಹೆಸರುಗಳು, ಮಾಸಗಳ ಹೆಸರುಗಳು, ಸಂಖ್ಯಾಶಬ್ದಗಳು, ಕಟಪಯಾದಿ ಪದ್ಧತಿಯ ಕಾಲಗಣನೆ, ಕಾಲಗಣನೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಬರಹಗಳ ಸೂಚಿ ಇವನ್ನು ಪ್ರಕೃತ ಲೇಖನದಲ್ಲಿ ಕಿರಿದಾಗಿ ನೀಡಲಾಗಿದೆ. ಕೆಲವು ಸಂಖ್ಯಾಶಬ್ದಗಳ ಸಂಖ್ಯಾ ವಾಚಕಗಳನ್ನು ನಿಖರವಾಗಿ ಹೇಳಲು ಸಾಧ್ಯವಿದ್ದರೂ ಆ ಶಬ್ದವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಉದಾ: ಖರ. ಕೆಲವು ಸಂಖ್ಯಾ ಶಬ್ದಗಳನ್ನು ಎರಡು ಮೂರು ರೀತಿಯಲ್ಲಿ ಅರ್ಥೈಸಬಹುದು. ಉದಾ: ಕರ್ಮ-ತ್ರಿಕರ್ಮ, ಚತುಷ್ಕರ್ಮ, ಷಟ್ಕರ್ಮ. ಇಂತಹ ಶಬ್ದಗಳು ಬಂದಾಗ ಆಯಾ ಕಾಲದ ಸಂದರ್ಭ, ಐತಿಹಾಸಿಕ ಅಂಶಗಳು ಮುಂತಾದ ಸಂಗತಿಗಳನ್ನು ಗಮನಿಸಿಕೊಂಡು ನಿರ್ಧರಿಸಬೇಕು. ಇದು ವ್ಯಾಪಕವಾದ ಅಧ್ಯಯನದ ವಿಷಯವಾಗಿದ್ದು ಇಲ್ಲಿ ಪೂರ್ಣ ಪ್ರಮಾಣದ ಪ್ರಕಟಣೆಯೂ ಸಾಧ್ಯವಿಲ್ಲದ ಕಾರಣ; ಕೇವಲ ಪ್ರಮುಖವೆನಿಸುವ ಕೆಲವು ಸೂಚಿಗಳನ್ನು ಕಿರಿದಾಗಿ ನೀಡಲಾಗಿದೆ. ಅಪಲಿಖಿತಗಳು, ಲಿಪಿ ಮತ್ತು ಕಾಲಗಣನೆ, ಸಮಸ್ಯೆಗಳು ಮುಂತಾದವುಗಳ ಬಗೆಗೆ ವ್ಯಾಪಕ ಅಧ್ಯಯನ ನಡೆಯಬೇಕಾದ ಅಗತ್ಯವಿದೆ. ಇದಕ್ಕೆ ಮೊದಲು ಸೂಚಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ರಾಜರ ಹೆಸರಿನಲ್ಲಿ ಬಳಕೆಗೊಂಡಿರುವ ಶಕೆಗಳ ಪೂರ್ಣ ವಿವರವೂ ಸರಿಯಾಗಿ ದೊರಕದು. ಅಪಲಿಖಿತಗಳನ್ನು ತಿದ್ದಿಕೊಳ್ಳದೆ ತಪ್ಪಾದ ಶಬ್ದಗಳನ್ನೇ ಅವಲಂಬಿಸಿ ಕಾಲನಿರ್ಣಯ ಮಾಡಲು ಹೊರಟರೆ ಗೊಂದಲಗಳೇ ವಿಶೇಷವಾಗಿ ಸೃಷ್ಟಿಯಾಗುತ್ತವೆ. ಕಟಪಯಾದಿ ಸಂಖ್ಯಾ ಪದ್ಧತಿ ಮತ್ತು ಸಂಖ್ಯಾಶಬ್ದಗಳ ಬಳಕೆಯಲ್ಲಿ ಇವುಗಳನ್ನು ಗಮನಿಸಬಹುದು. ಇಂತಹ ಹಲವಾರು ವಿವರಗಳ ಮೇಲೆ ವಿಸ್ತಾರವಾದ ವಿವೇಚನೆಗೆ ಅವಕಾಶವಿದ್ದು ಸಂಶೋಧಕರು ಇದರತ್ತ ಗಮನ ಹರಿಸ ಬೇಕಾದ್ದು ಅಗತ್ಯ ಎಂದು ಒತ್ತಿ ಹೇಳಬೇಕಾಗಿದೆ.

ನಕ್ಷತ್ರಗಳು ಮತ್ತು ನಕ್ಷತ್ರಗಳ ಅಧಿದೇವತೆಗಳು
        ನಕ್ಷತ್ರಗಳ            ನಕ್ಷತ್ರದ ಅಧಿದೇವತೆಗಳು
 ಕ್ರ.ಸಂ.  ಹೆಸರುಗಳು         [=ನಕ್ಷತ್ರಗಳ ಹೆಸರುಗಳು]
 ೧.   ಅಶ್ವಿನೀ     ಅಶ್ವಿನೀ ದೇವತೆಗಳು
 ೨.   ಭರಣೀ      ಯಮ
 ೩.   ಕೃತ್ತಿಕಾ     ಅಗ್ನಿ
 ೪.   ರೋಹಿಣೀ   ಪ್ರಜಾಪತಿ (ಬ್ರಹ್ಮ)
 ೫.   ಮೃಗಶಿರ    ಸೋಮ (ಚಂದ್ರ)
 ೬.   ಆರ್ದ್ರಾ     ರುದ್ರ
 ೭.   ಪುನರ‍್ವಸು   ಅದಿತಿ
 ೮.   ಪುಷ್ಯ        ಬೃಹಸ್ಪತಿ
 ೯.   ಆಶ್ಲೇಷ     ಸರ್ಪ
 ೧೦.  ಮಖ       ಪಿತೃ
 ೧೧.  ಪೂರ್ವ ಫಲ್ಗುಣೀ     ಭಗ
 ೧೨.  ಉತ್ತರ ಫಲ್ಗುಣೀ     ಅರ್ಯಮಾ
 ೧೩.  ಹಸ್ತ        ಸೂರ‍್ಯ
 ೧೪.  ಚಿತ್ರಾ (ಚಿತ್ತ)         ತ್ವಷ್ಟ (ವಿಶ್ವಕರ‍್ಮ)
 ೧೫.  ಸ್ವಾತಿ      ವಾಯು
 ೧೬.  ವಿಶಾಖ    ಇಂದ್ರ, ಅಗ್ನಿ
 ೧೭.  ಅನೂರಾಧ ಮಿತ್ರ
 ೧೮.  ಜೇಷ್ಠ      ಇಂದ್ರ
 ೧೯.  ಮೂಲ     ನಿಋತಿ
 ೨೦.  ಪೂರ್ವಾಷಾಢ        ಆಪಃ
 ೨೧.  ಉತ್ತರಾಷಾಢ        ವಿಶ್ವೇದೇವ
 ೨೨.  ಶ್ರವಣ     ವಿಷ್ಣು
 ೨೩.  ಧನಿಷ್ಠ     ಅಷ್ಟವಸುಗಳು
 ೨೪.  ಶತಭಿಷಾ  ವರುಣ
 ೨೫.  ಪೂರ್ವಾಭಾದ್ರ       ಅಜೈಕಪಾದ
 ೨೬.  ಉತ್ತರಾಭಾದ್ರ       ಅಹಿರ್ ಬುಧ್ಯಯನ
 ೨೭.  ರೇವತಿ    ಪೂಷ
 ೨೮.  ಅಭಿಜಿತ್


­          *     ಉಪಅಧೀಕ್ಷಕಪುರಾತತ್ತ್ವವಿದರು, (ನಿ), # ೩೮, ಶಾಂಕರೀ, ೨ನೆಯ ಮುಖ್ಯರಸ್ತೆ, ಇಟ್ಟುಮಡು ಬಡಾವಣೆ, ಬನಶಂಕರಿ ೩ನೆಯ ಹಂತ, ೩ನೆಯ ಫೇಸ್, ಬೆಂಗಳೂರು-೫೬೦೦೮೫.
***# ೬೫, (೧ನೆಯ ಮಹಡಿ), ೩ನೆಯ ಅಡ್ಡರಸ್ತೆ, ಶಿಕ್ಷಕರ ಬಡಾವಣೆ, ೧ನೆಯ ಹಂತ, ಜೆ.ಪಿ. ನಗರ ಅಂಚೆ, ಬೆಂಗಳೂರು-೫೬೦೦೭೮.









No comments:

Post a Comment