ಕರ್ನಾಟಕ ಇತಿಹಾಸ ಅಕಾದಮಿಯ೨೭ನೆಯ ಸಮಾವೇಶದ ಸಮಾರೋ ಸಮಾರಂಭವು ದಿನಾಂಕ೨೩-೯-೨೦೧೩
ರಂದು ಮಿಥಿಕ್ ಸೊಸೈಟಿಯಲ್ಲಿ ನಡೆಯಿತು. ಡಾ.ಅ.ಸುಂದರ ಅವರು ಸಮರೋಪ ಭಾಷಣ ಮಾಡಿದರು. ಮೂರುದಿನದ
ಸಮ್ಮೇಳನದಲ್ಲಿ ನೂರಾರು ಸಂಪ್ರಬಂಧಗಳು ಮಂಡಿತವಾದುದು ಆಶಾದಾಯಕ ಆದರೆ ಯುವ ಸಂಶೋಧಕರು ಅಧ್ಯಯನ
ಶೀಲರಾಗಬೇಕು ಅದರಿಂದ ಈವರೆಗೆ ದೊರಕಿದ ಮಾಹಿತಿಯ ಆಧಾರದ ಮೇಲೆ ಮುಂದಿನ ವಿಶ್ಲೇಷಣೆ ಮಾಡಬಹುದು.
ಅಲ್ಲದೆ ಈ ರಂಗದಲ್ಲಿ ಪರಿಣಿತರಾದ ಹಿರಿಯರ ಮಾರ್ಗದರ್ಶನ
ಪಡೆಯುವುದು ಅತ್ಯಗತ್ಯ , ಅಂದಾಗ ಮಾತ್ರ ಉತ್ತಮ ಮಟ್ಟದ ಸಂಶೋದನೆ ಸಾಧ್ಯವಾಗಬಹುದು ಎಂದು
ಹಿತವಚನ ನೀಡಿದರು
ಮಿಥಿಕ್‌ಸೊಸೈಟಿಯ ಕಾರ್ಯದರ್ಶಿಗಳಾದ ವಿ. ರಾಮಸ್ವಾಮಿ ಇತಿಹಾಸ ಮತ್ತು ಪರಂಪರೆಯನ್ನು
ಅರಿಯುವುದರಿಂದ ದೇಶದ ಬಗೆಗಿನ ಅಭಿಮಾನ ಹೆಚ್ಚುವುದು,
ಇಂದಿನ ಯುವ ಪೀಳಿಗೆಯು ಆಧುನಿಕತೆಯ ಮೆರುಗಿಗೆ ಮಾರು ಹೋಗಿ ಇತಿಹಾಸ ಮರೆತಿರುವರು ಅವರಲ್ಲಿ
ಜಾಗೃತಿ ತರುವ ಅಗತ್ಯವಿದೆ ಎಂದರು.
ಸರ್ವಾಧ್ಯಕ್ಷರಾದ ಡಾ, ಎಸ್.ಕೆ. ಜೋಷಿಯವರು ಪುರಾತತ್ತ್ವ ರಂಗದ ತಮ್ಮ ಕಿರು
ಕಾಣಿಕೆಯನ್ನು ಗಮನಿಸಿ ಹಿರಿಯ ಗೌರವ ನೀಡಿರುವುದಕ್ಕೆ ವಂದಿಸುತ್ತಾ ಇತಿಹಾಸ ಅಕಾದಮಿಯು ಪುರಾತತ್ತ್ವಕಾರ್ಯದ ಮಹತ್ವವನ್ನು ಗುರುತಿಸಿದೆ,ಕಾರಣ
ಇತಿಹಾಸದ ಆಕರಗಳ ಶೋಧನೆಯೇ ಪುರಾತ್ತ್ವಶಾಸ್ತ್ರದ ಗುರಿ, ಹೇಗೆ ಸ್ಮಾರಕಗಳು ಸ್ಪೂರ್ತಿಯ ಸೆಲೆಯಾಗುವವು ಎಂಬುದನ್ನುಉದಾಹರಣೆ ಸಮೇತ
ವಿವರಿಸಿದರು.
ಅಕಾದಮಿಯ ಅಧ್ಯಕ್ಷರಾದ ಡಾ.ದೇವರಕೊಂಡಾ ರೆಡ್ಡಿಯವರು ಕರ್ನಾಟಕ ಇತಿಹಾಸದ ಪರಿಚಯವನ್ನು
ಅದರ ಅನನ್ಯತೆಯನ್ನು ಹೊರ ಜಗತ್ತಿಗೆ ಪರಿಚಯ ಮಾಡಿಕೊಡುವ ಅಗತ್ಯವನ್ನು ಒತ್ತಿ ಹೇಳುತ್ತಾ ಅಕಾದಮಿಯ
ವೆಬ್‌ಸೈಟ್ ಪ್ರಾರಂಭಿಸಿರುವುದರ
ಮಹತ್ವತಿಳಿಸಿದರು. ಹಾಗೆಯೇ ಒಂದು ವರ್ಷದಿಂದ ನಡೆಸಲಾಗುತ್ತಿರುವ ಬ್ಲಾಗ್‌ನ ಬಳಕೆ ಮಾಡಿಕೊಳ್ಳಲು ಕೋರಿದರು.
ಸಮ್ಮೇಳನದ ಯಶಸ್ಸಿಗೆ ಸಹಾಯ ಮತ್ತು ಸಹಕಾರ ನೀಡಿದವರಿಗೆ
ಅಭಿನಂದನೆ ಸಲ್ಲಿಸಿದರು
ಕಾರ್ಯದರ್ಶಿಗಳಾದ ದೇವರಾಜ ಸ್ವಾಮಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದರ್ನಾಣೆ
ಮಾಡಿದರು
No comments:
Post a Comment