Thursday, September 19, 2013

ಬಾ.ರಾ. ಗೊಪಾಲ್‌ಪ್ರಶಸ್ತಿ ವಿಜೇತರು


ಉಭಯ ಭಾಷಾ ವಿದ್ವಾಂಸ ಡಾ.ಆರ್‌... . ....ಶೇಷಶಾಸ್ತ್ರಿ.

     ಶ್ರೀಕೃಷ್ಣ ದೇವರಾಯ ಎಂದರೆ ಕರ್ನಾಟಕ ಮತ್ತು ಆಂಧ್ರರಾಜ್ಯಗಳೆರಡೂ ನಮ್ಮವನು ನಮ್ಮವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ.  ಅದೇ ರೀತಿಯಲ್ಲಿ ಅನಂತಪುರದಲ್ಲಿರುವ  ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ವಾಂಸರೊಬ್ಬರ ಬಗ್ಗೆ ಕನ್ನಡ ಮತ್ತು ತೆಲುಗು ಸಾಹಿತ್ಯ, ಶಾಸನ ಮತ್ತು ವಿದ್ವತ್‌ ಲೋಕಗಳೆರಡೂ  ಇವ ನಮ್ಮವ ಇವ ನಮ್ಮವ ಎಂದು ಸಮಾನ ಗೌರವ, ಪ್ರೀತಿ ಮತ್ತು ವಿಶ್ವಾಸ ತೋರುತ್ತಿರುವ ವಿರಳ ವ್ಯಕ್ತಿ ಒಬ್ಬರಿದ್ದಾರೆ.  ಅವರ  ಜನ್ಮ ಭೂಮಿ ಕನ್ನಡ ನಾಡಾದರೆ ಕರ್ಮಭೂಮಿ ತೆಲುಗುನಾಡು.  .ಅಧ್ಯಯನ ಕನ್ನಡ ಸಾಹಿತ್ಯ ಮತ್ತು ಶಾಸನ ರಂಗದಲ್ಲಿ ಅಧ್ಯಾಪನ ತೆಲುಗು ಮತ್ತು ತುಲನಾತ್ಮಕ ಸಾಹಿತ್ಯವಿಭಾಗದಲ್ಲಿ.ಒಂದು ರೀತಿಯಲ್ಲಿ ಶಾಸನ ರಂಗದ ಗಂಡ ಬೇರುಂಡ ಡಾ. ಆರ್‌ ಶೇಷ ಶಾಸ್ತ್ರಿ.


ಶೇಷಾದ್ರಿ ಮೊದಲಿನ ಹೆಸರು. ನಂತರದಲ್ಲಿ ಮನೆತನದ ಹೆಸರುಶಾಸ್ತ್ರಿ ಸೇರಿತು. ಜನಿಸಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೆ ಕಲ್ಲನ ಹಳ್ಳಿಯಲ್ಲಿ . ಜನನ ದಿನಾಂಕ24.04.1951. ತಂದೆ ರಾಮಸ್ವಾಮಿ ಶಾಸ್ತ್ರಿ ತಾಯಿ ಅಮ್ಮಣ್ಣಮ್ಮ.ತಂದೆ ವೃತ್ತಿಯಿಂದ ಪುರೋಹಿತರಾದರೂ ಸಣ್ಣ ರೈತರೂ ಆಗಿದ್ದರು. ಅವರದು ಕೊಡುಗೈ.ಎಲ್ಲರೂ ತನ್ನವರೆಂಬ ಆತ್ಮೀಯತೆ. ಗಳಿಸಿದ್ದನ್ನು ಉಳಿಸುವುದಕ್ಕಿಂತ ಅಗತ್ಯವಿದ್ದವರಿಗೆ ಹಂಚುವ ಧಾರಾಳತನ. ಅದೇ ಗುಣ ಮಗನಲ್ಲೂ ಬಂದಿತು, ಹುಟ್ಟಿ ಹತ್ತುವರ್ಷವಾದರೂ ಶಾಲೆಗೆ ಹೋಗುವ ಅಗತ್ಯ ಬೀಳಲಿಲ್ಲ.ಕಾರಣ ಅವರ ದೊಡ್ಡಪ್ಪ ಲಕ್ಷ್ಮಿ ನರಸಿಂಹಶಾಸ್ತ್ರಿಗಳು  ಅವರು ಶಿಕ್ಷಕರಾಗಿ ಸರ್ಕಾರಿ ಹುದ್ದೆಯಲ್ಲಿದ್ದರೂ ಅದನ್ನು ಬಿಟ್ಟು ಪುರೋಹಿತ್ಯ ವೃತ್ತಿಗೆ ಇಳಿದ. ಕನ್ಡಡ, ತೆಲುಗು  ಮತ್ತು ಸಂಸ್ಕೃತ ವಿದ್ವಾಂಸರು. ಸಾಹಿತ್ಯ ಸೇವೆ  ಜೊತೆಗೆ ಸಮಾಜ ಸೇವೆ. ಜಾತಿ ಕುಲ ಬೇಧವಿಲ್ಲದೆ ಅರ್ಹರಿಗೆ ಶಿಕ್ಷಣಕ್ಕೆ ಕ್ಕೆ ಸಹಾಯ ಮಾಡಿ ಜೀವನದ ದಾರಿತೋರಿದ ಉದಾರಿ. ಜೊತೆಗೆ ಆಯುರ್ವೇಧ ವೈದ್ಯರು. ಚಿಕ್ಕ ವಯಸ್ಸಿನಲ್ಲೇ ವಿಧುರಾದರೂ ಮದುವೆಯಾಗದೆ ಒಂಟಿ ಜೀವನ ಸಾಗಿಸಿ ಎಲ್ಲರನ್ನು ತಮ್ಮ ಕುಟುಂಬದವರೆಂಬ ಭಾವನೆಯಿಂದ ನಡೆಸಿಕೊಂಡರು..ಅವರ ಪ್ರಭಾವ ಬಾಲ್ಯದಲ್ಲಿ ದಟ್ಟವಾಗಿತ್ತು. ಅವರ ಪ್ರಯತ್ನದಿಂದಲೆ ಅವರ ಹಳ್ಳಿಗೆ ಸರ್ಕಾರಿ ಶಾಲೆಯೂ ಬಂದಿತು.ಅವರು ಗಳಿಸಿದ ಹಣವನ್ನು ಗ್ರಂಥ ಪ್ರಕಟನೆಗೆ ಬಳಸಿದರು ಸುಮಾರು ಅರವತ್ತು ಕೃತಿಗಳನ್ನು ತಮ್ಮಸಾಹಿತ್ಯ ಸೇವಾ ಸದನ ದ ಮೂಲಕನ ಪ್ರಕಟಿದ್ದರು. ಪುಸ್ತಕಗಳ ಗಂಟು ಹುತ್ತು ಮಾರಾಟ ಮಾಡಿದರು.  ಹೀಗಾಗಿ ಸಾಹಿತ್ಯಾಸಕ್ತಿ, ಜನಬಳಕೆ, ಸ್ನೇಹ ಪರತೆ ಮತ್ತು ಜೀವನ್ಮುಖಿ ಧೋರಣೆ ಬಾಲ್ಯದಲ್ಲಿ ಮೈಗೂಡಿತು
ಪ್ರಾಥಮಿಕ ಶಿಕ್ಷಣ ಭಾರತಿ ವಿದ್ಯಾ ನಿಕೇತನದಲ್ಲಿ ನಂತರ ಬೆಂಗಳೂರು ಹೈಸ್ಕೂಲಲ್ಲಿ ಶಿಕ್ಷಣ ಮುಂದುವರಿಸಿದರು. ಕೃಷಿ ಪದವಿ ಪಡೆಯುವ ಹಂಬಲ ಕೈಗೂಡದೇ ಕನ್ನಡದಲ್ಲಿ ಪದವಿ ಮತ್ತು ಎಂಎ. ಎಲ್ಲ  ಸೆಂಟ್ರಲ್‌ಕಾಲೇಜಿನಲ್ಲಿ,.
        ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯ ಮತ್ತು ಸಂಗೀತದಲ್ಲಿ ಅತೀವ ಆಸಕ್ತಿ ಅನಕೃ ಅವರ ಭಾಷಣ ಮತ್ತು ಕಾಳಿಂಗರಾಯರ ಗಾಯನ ಎಲ್ಲೇ ಇರಲಿ ಹಾಜರ್‌. ಅನನ್ಯ ವಿದ್ಯಾಗುರುಗಳ ಅಡಿಯಲ್ಲಿ ಅಧ್ಯಯನ.ಜಿ.ಎಸ್‌ಎಸ್, ಕೆ . ಮರುಳಸಿದ್ದಪ್ಪ, ಹಂ.ಪನಾ, ಎಂವಿ ಸಿ , ಜಯದೇವ್‌ ರಂತಹ ಸಹೃದಯರ ಮಾರ್ಗದರ್ಶನ’ ದೊಡ್ಡ ರಂಗೇ ಗೌಡ, ರುದ್ರಮೂರ್ತಿಶಾಸ್ತ್ರಿ ,ಜಿಎಸ್‌. ಸಿದ್ದಲಿಂಗಯ್ಯ ಮಧುಸೂಧನ್‌ ಮೊದಲಾದವರು ಸಹಪಾಠಿಗಳು.ಎಲ್ಲರಿಗೂ ಶೇಷಶಾಸ್ತ್ರಿ ಅಚ್ಚು ಮೆಚ್ಚು.ಕಾರಣ ಅವರ ಸರಳತೆ ಮತ್ತು ಹಿರಿಕಿರಿಯರೆನ್ನದೆ ಬೆರೆತು ನಗೆ ಬುಗ್ಗೆ ಉಕ್ಕಿಸುವ ಹಾಸ್ಯ ಪ್ರವೃತ್ತಿ. ಅದೇ ಕಾಲದಲ್ಲಿ ಕುವೆಂಪು ಬೇಂದ್ರೆಯಂಥವರ ಖ್ಯಾತಕವಿತೆಗಳ ಅಣಕವಾಡು ರಚಿಸಿ ರಂಜಿಸುತ್ತಿದ್ದರು.ಈ ಗುಂಪಿನ ಗಲಾಟೆ ಎಷ್ಟೆಂದರೆ  ಖುದ್ದೂಸ್‌ ಎಂಬ ಕಾಲ್ಪನಿಕ ಕವಿಯನ್ನು ಕುರಿತುಸಂಶೋಧನೆ  ನಡೆಸಿ ಜಿ.ಎಸ್‌ ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಸಿದರು. ಸತ್ಯ ಹೊರಬಿದ್ದಾಗ ಎಲ್ಲೆಲೂ ನಗೆ ಬುಗ್ಗೆ ..ಅವರ ಈ ಹಾಸ್ಯ ಪ್ರವೃತ್ತಿ ಯು ಅವರ ಸಂಶೋಧನೆ ಸಮಯದಲ್ಲೂ ಎದ್ದು ಕಾಣುತಿತ್ತು.ಅವರ ಪರಿಚಯ ಆದುದೂ ಅದರಿಂದಲೇ.ಅವರು ಶಾಸನ ಅಧ್ಯಯನದಲ್ಲಿ ಪಿ.ಎಚ್‌ಡಿ ಮಾಡುತಿದ್ದಾಗ  ಎಪ್ಪತ್ತರ ದಶಕದಲ್ಲಿ ನಮ್ಮ  ಕಾಲೇಜಿನಲ್ಲಿ ಉನ್ಯಾಸಕರಾಗಿದ್ದ ಅವರ ಗೆಳೆಯ ಮುಕುಂದನ್‌ ಅವರನ್ನು ನೋಡಲು ಬಂದಿದ್ದರು. ಆಗ ಇನ್ನೂ ಟೇಪ್‌ರೆಕಾರ್ಡರ್‌ ಎಂದರೆ ಬಾಯ್ಬಿಟ್ಟು ಕೇಳುವ ಕಾಲ. ಅವರು ನಮಗೆಲ್ಲ ತಾವು ಪುನರ್‌ಜನ್ಮದ ಸ್ಮರಣೆ ಇರುವ ಬಾಲಕನ ಮಾತುಗಳ ಧ್ವನಿಮುದ್ರಣ ನಮಗೆಲ್ಲ ಕೇಳಿಸಿದರು. ಹತ್ತುವರ್ಷದ ಹುಡುಗ ಹೇಳುವ ತನ್ನ ಹಿಂದಿನ ಜನ್ಮದ ಊರು.ಮನೆ, ಹೆಂಡತಿ ಮಕ್ಕಳ  ವಿವರ ಕೇಳಿ ದಂಗಾದೆವು. ಒಂದು ಗಂಟೆಯ ನಂತರ ಅವನ ಕೊನೆಯ ಮಾತುಕೇಳಿ ನಾವು ಬಿದ್ದು ಬಿದ್ದು ನಕ್ಕೆವು. ಕಾರಣ ಆ ಹುಡುಗ ಇದೆಲ್ಲ ತನ್ನ ಮೇಷ್ಟ್ರು ಹೇಳಿಕೊಟ್ಟದ್ದು ಎಂದು ಮಾತು ಮುಗಿಸಿದ್ದ...ಹೀಗೆ ವೀರಗಲಲ್ಲುಗಳ ಸಂಶೋಧನೆಯಂಥಹ ಗಂಭಿರ ಮಾಹಿತಿ ಸಂಗ್ರಹದ ನಡುವೆಯೂ ಅವರ ಹಾಸ್ಯ ಪ್ರವೃತ್ತಿ ಮಿಂಚುತಿತ್ತು.ಇದರಿಂಲೇ ಅವರ ಗೆಳೆಯರ ಬಳಗ ವಿಸ್ತರಿಸಿದ್ದು. ಭಾವುಕತೆ. ಅವರ ಇನ್ನೊಂದು ಗುಣ. ಯಾರಾದರೂ ಸಹಾಯ ಮಾಡಿದರೆ ಇಲ್ಲವೇ ಎರಡು ಒಳ್ಳೆಯ ಮಾತನಾಡಿದರೆ ಕೊನೆತನಕ ನೆನಪಿಡುವರು. ಆ ಗುಣದ ಪರಿಚಯ ನನಗೆ ಇತ್ತೀಚೆಗೆ ಆಯಿತು .
         ಅವರು ಶಾಸನಗಳ ಸಂಶೋಧನೆಗೆ ನಮ್ಮಲ್ಲಿಗೆ ಬಂದಾಗ  ಹಂಪೆ ಮತ್ತು ಆನೆಗೊಂದಿಯಲ್ಲಿನ ಶಾಸನಗಳ ಹುಡುಕಾಟಕ್ಕೆ ಕಮಲಾಪುರದಲ್ಲಿದ್ದ ನನ್ನ ಮಾವ ಡಾ.ದಾಸುರಾವ್‌ ಅವರನ್ನು ಸಹಾಯ ಮಾಡಲು ಕೇಳಿಕೊಂಡಿದ್ದೆ. ಅವರು ಯುವಕ ಶೇಷಶಾಸ್ತ್ರಿಯನ್ನು  ತಮ್ಮ ಸೈಕಲ್‌ಮೇಲೆ ಕೂಡ್ರಿಸಿ ಕೊಂಡು ಎಲ್ಲ ಕಡೆ ಕರೆದು ಕೊಂಡು ಹೊದದ್ದನ್ನ್ನು ಮೂರುದಿನ ಅತಿಥ್ಯ ನೀಡಿದ್ದನ್ನು ನಲವತ್ತು ವರ್ಷದ ನಂತರ ಭೇಟಿಯಾದಾಗ ನೆನಪಿಸಿಕೊಂಡು ಭಾವುಕರಾದರು.ಆ ಪ್ರದೇಶದ ಇತಿಹಾಸದ ಭಾಗವಾಗಿದ್ದರು ಅವರಬಗ್ಗೆ ಹಂಪೆಯಿಂದ ಹರಪ್ಪಾದವರೆಗೆ ಎಂಬ ಗ್ರಂಥದಲ್ಲಿ ಉಲ್ಲೇಖಿತವಾಗಿದೆ ಎಂಬ ಮಾಹಿತಿ ನೀಡಿದರು.
ಸ್ನಾತಕೋತ್ತರ ಪದವಿಯನ್ನು ಪಡೆದಾಗ ಪದವಿ ಪೂರ್ವಕಾಲೇಜುಗಳಲ್ಲಿ ಉಪನ್ಯಾಸಕರ  ಬೇಡಿಕೆ ಬಹಳ ಇತ್ತು. ಇವರ ಗೆಳೆಯರೆಲ್ಲ ಕೆಲಸಕ್ಕೆ ಸೇರಿದರೂ ಆದರೆ ಹಣ ಕೈಗೆ ಬಂದರೆ ಅಧ್ಯಯನ ಆಗದು ಎಂದು ಡಾ. ಚಿದಾನಂದ ಮೂರ್ತಿಯವರ ಮಾರ್ಗದರ್ಶನದಲ್ಲಿ ಪೂರ್ಣಾವಧಿ ಸಂಶೋದನೆಗೆ ತೊಡಗಿದರು,  . ಆ ಅವಧಿಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಗೆ  ಹೋಗಿ ವೀರಗಲ್ಲುಗಳ ಶೋಧನೆ, , ಅಧ್ಯಯನ ಮತ್ತು ವಿಶ್ಲೇಷಣೆಗಳ ಫಲವೇ , “ಕರ್ನಾಟಕದ ವೀರಗಲ್ಲುಗಳು” ಸಂಪ್ರಬಂಧ.ಅದನ್ನು ನ್ನಡ ಸಾಹಿತ್ಯ ಪರಿಷತ್‌ ೧೯೮೩ ರಲ್ಲಿ ಪ್ರಕಟಿಸಿದೆ .ಮರು ಮುದ್ರಣ ಕಂಡ ವಿರಳ ಸಂಶೋದನ ಗ್ರಂಥದಲ್ಲಿ ಇದೂ ಒಂದು.
ಆ ಹಂತದಲ್ಲಿ ಬೆಂಗಳೂರುವಿಶ್ವ ವಿದ್ಯಾಲಯ,ಐಸಿಎಆರ್‌ಗಳಲ್ಲಿ ಸಹಾಯಕ ಸಂಶೋಧಕರಾಗಿ ದುಡಿದರು.ಅದು ಅವರನಿರುದ್ಯೋಗ  ಅಥವ ಅರೆ ಉದ್ಯೋಗದ 
 ಪರ್ವದ ಅವಧಿ. ಅದೇ ಸಮಯದಲ್ಲಿ ಊರಲ್ಲಿ ಏಳು ವರ್ಷ ರೇಷ್ಮೆ ಕೃಷಿಯನ್ನು ಮಾಡಿದರು.ಅಲ್ಲೂ  ಸುತ್ತಲಿನ ಜನರಿಗೆ ಕೃಷಿ ವಿಷಯದ ಮಾಹಿತಿ ನೀಡುತ್ತಾ ಸಾಹಿತ್ಯ ಸಂಸ್ಕೃತಿಯ ಸೊಗಡನ್ನು ಹರಡಿದರು.ಅದೇಕೋ ಅವರಿಗೆ ಸಕಾಲದಲ್ಲಿ ವಿವಾಹ ಯೋಗ ಬರಲಿಲ್ಲ ಆದರೆ ಅದನ್ನೆ ಸದುಪಯೋಗ ಪಡಿಸಿಕೊಂಡು ಶಾಸನ ಸಂಬಂಧಿ ಕೃತಿ ರಚನೆ ಮಾಡಿದರು.

      ಕೃಷಿ ಜೊತೆ ಜೊತೆಗೆ  ಕಥೆ,ಅಣಕವಾಡು, ವಿಮರ್ಶೆ ಬರವಣಿಗೆ ಸಾಗಿತ್ತು.ಅವರ ಸಾಹಿತ್ಯ ಸೇವೆ, ಸಂಶೋಧನಾಪ್ರವೃತ್ತಿ., ವಿನೋದ ಪ್ರಿಯತೆ ಕನ್ನಡ ಸಾರಸ್ವತ ಲೋಕದ ದಿಗ್ಗಜಗಳ ಸಾಮಿಪ್ಯವನ್ನು ತಂದಿತು. ಎಂ.ವಿ ಸೀ ಯವರು ಬೇಸರವಾದಾಗ “ ಶೇಷ ಶಾಸ್ತ್ರಿಯನ್ನುಬರ ಹೇಳಿ ಅವರ ಜೊತೆ ಮಾತನಾಡಿದರೆ ಮನಸ್ಸು ಹಗುರವಾಗುವುದು ಎನ್ನುತ್ತಿದ್ದರು. ಅವರ ಸಂಪ್ರಬಂಧ ಸಿದ್ಧವಾದುದು  ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಆಶ್ರಮ ಸದೃಶ ನಿವಾಸದಲ್ಲಿ , ಡಾ. ಕೃಷ್ಣಾನಂದ ಕಾಮತ್‌, ಬಿ.ಜಿ.ಎಲ್‌.ಸ್ವಾಮಿ ಮತ್ತು ,ಡಾ. ಚಿದಾನಂದ ಮೂರ್ತಿಗಳು ಮನೆಯ ಮಗನಂತೆ ಕಾಣುತಿದ್ದರು.ಹಿರಿಯ ಸಂಶೋಧಕ ಶಂಬಾಜೋಷಿಯವರಿಗೆ ಅಚ್ಚು ಮೆಚ್ಚು   ಪಿಎಚ್‌ಡಿ ಮುಗಿಸಿದ ನಂತರವೂ ಉದ್ಯೋಗಾನ್ವೇಷಣೆ ಮುಂದುವರಿದಿತ್ತು.ಅವರಿಗಾಗ ಆಸರೆಗೆ ಬಂದವರು ಡಾ. ದೇವರಕೊಂಡಾರೆಡ್ಡಿ.ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸುತಿದ್ದ ಸಂಶೋಧನಾ ಕೇಂದ್ರಕೆ ಕರೆತಂದರು ಅಲ್ಲಿನ ಮೂರುವರ್ಷದ  ಸೇವೆ ಶಾಸನ ಮತ್ತು ಸಾಹಿತ್ಯ ಲೋಕದ ಹಿರಿಯರನ್ನು ಹತ್ತಿರ ತಂದಿತು.ಅಲ್ಲಿ ಪ್ರಾರಂಭವಾದ ದೇವರ ಕೊಂಡಾರೆಡ್ಡಿಯವರ ಸ್ನೇಹ ಅವರ ಜೀವನದಲ್ಲಿ ಹಾಸು ಹೊಕ್ಕಾಯಿತು. ಅಲ್ಲಿಂದ ಮುಂದೆ  ಕರ್ನಾಟಕ ಗೆಜೆಟಿಯರ್‌ ನಲ್ಲಿ  ೧೯೮೪ರಲ್ಲಿ ಸಂಪಾದಕರೂ ಆದರು.

ಎಂಬತ್ತರ ದಶಕದಲ್ಲಿ ಅವರ ಕಾರ್ಯಕ್ಷೇತ್ರವು ನೆರೆಯರಾಜ್ಯ ಆಂಧ್ರಪ್ರದೇಶಕ್ಕೆ ಬದಲಾಯಿತು.ಅದೇವೇಳೆಗೆ ೧೯೮೩ರಲ್ಲಿಮೋಕ್ಷಗುಂಡಂ ಸಂಜೀವರತ್ನ ಅವರೊಂದಿಗೆ ಮದುವೆಯಾಯಿತು. ಅವರು ಆಂಧ್ರ ಪ್ರದೇಶದಲ್ಲಿ ಉದ್ಯೋಗಸ್ಥ ಮಹಿಳೆ.  ಆಂಧ್ರದ ಅಳಿಯನಾದ ಎರಡೇ ವರ್ಷದಲ್ಲಿ ಕನ್ನಡದಕುವರನಿಗೆ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ದೊರೆಯಿತು.ಜೀವನದಲ್ಲಿ ಸುಭದ್ರತೆ  ಸಂಸಾರಸುಖ ಸಂತೋಷದಲ್ಲಿ ಅವರು ತಮ್ಮ ವಿದ್ವತ್‌ಯಾತ್ರೆಯನ್ನು ದ್ವಿಗುಣ ಉತ್ಸಹಾದಿಂದ ಮುಂದುವರಿಸಿದರು. ಕನ್ನಡ ಸಾರಸ್ವತ ಲೋಕದೊಡನೆ ಅವರಿಗಿದ್ದ ನಿಕಟ ಒಡನಾಟ ತೆಲುಗು ನಾಡಿನಲ್ಲೂ ಮುಂದುವರಿಯಿತು. ತಿರುಮಲರಾಮಚಂದ್ರ, ಗಡಿಯಾರಂ ಕೃಷ್ಣಶರ್ಮ,ಡಾ.ಜೆ.ಸದಾನಂದ ಮೊದಲಾದ ವಿದ್ವಾಂಸರು ಹತ್ತಿರವಾದರು. ಈಗ ಅವರ ಶಾಸನ ಸಂಶೋಧನೆ ಮತ್ತು ಸಾಹಿತ್ಯ ಯಾತ್ರೆ ಆಂಧ್ರಪ್ರದೇಶಕ್ಕೂ ವಿಸ್ತರಿಸಿತು. ಶಾಸನ ಸಂಗ್ರಹ, ಶಾಸನ ಪರಿಚಯ, ಮಣಿಹ, ವೀರಬ್ರಹ್ಮಯ್ಯ ಅವರ ಕೃತಿಗಳಲ್ಲಿ ಮುಖ್ಯವಾದವು.  ಅವರ ಇನ್ನೊಂದು ಪ್ರತಿಭೆಯೂ ಹೊರಹೊಮ್ಮಿತು. ಕನ್ನಡ , ತೆಲುಗು. ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆ ಮತ್ತು ಸಾಹಿತ್ಯದ ಅವರ ಆಳವಾದ ಜ್ಞಾನ ಅನೇಕ ಅನುವಾದಿತ ಕೃತಿಗಳ ರಚನೆಗೆ ಪ್ರೇರಣೆ ನೀಡಿತು. ತೆಲಗುಸಾಹಿತ್ಯದಲ್ಲಿ ಯುಗಳಕವಿಗಳು ಹೆಸರುವಾಸಿ. ವೈಜ್ಞಾನಿಕ ಸಂಶೋಧನೆಯಲ್ಲಿ ಜಂಟಿ ಸಂಶೋಧನೆ ಸಾಮಾನ್ಯ ಆದರೆ ಯುಗಳಸಂಶೋಧಕರು ಮತ್ತು ಅನುವಾದಕರೂ ವಿರಳ.ಡಾ.ಜೆ ಸದಾನಂದರ ಜೊತೆಗೂಡಿ ಕನ್ನಡ ಮತ್ತು ತೆಲುಗುಕೃತಿಗಳ ಅನುವಾದ ಕೆಲಸ ಕೈಗೆತ್ತಿಕೊಂಡರು. ಇಬ್ಬರು ಪ್ರಗಲ್ಭ  ವಿದ್ವಾಂಸರ ಸಹಯೋಗದಿಂದ ಮೂಲಕೃತಿಯ ಸೊಗಸು,ಸೊಗಡು  ಮತ್ತು ಸ್ವಾರಸ್ಯಅನುವಾದಗಳಲ್ಲೂ ಪ್ರತಿಫಲಿತವಾಗಿವೆ. ಅಲ್ಲದೆ ನಾನೇ ಮೇಲು ಎಂಬಭಾವ ಅಳಿದುಪರಸ್ಪರ ಕೊಡು ಕೊಳ್ಳುವಿಕೆ ಯಿಂದ ವ್ಯಕ್ತಿತ್ವ ವಿಕಾಸದ ಜೊತೆಗೆ ಕೃತಿಯ  ಅಂತಃ ಸತ್ವವೂ ಹೆಚ್ಚುವುದು ಈಗ ಇಬ್ಬರ ಶ್ರಮದ ಫಲವಾಗಿ ಮೊಟ್ಟಮೊದಲ ತೆಲುಗುಕನ್ನಡ ನಿಘಂಟು ಸಿದ್ಧವಾಗಿದೆ.. ಅವರು ಕರ್ನಾಟಕದಲ್ಲಿರುವ ಡಾ. ವೀರಕೊಂಡಾರೆಡ್ಡಿಯವರಂತೆ ಆಪ್ತರು ಮತ್ತು ಹಿತ ಚಿಂತಕರು
ಅದರ ಫಲ ಬೇಂದ್ರೆಯವರ ಕವನ ಸಂಕಲನದ ಅನುವಾದ  ಮಲಿಪುಟ , ಕನಕದಾಸರ ಕೀರ್ತನೆಗಳು ಮೊದಲಾದ ತೆಲುಗುಅನುವಾದಗಳು,ಮುನಿವಾಹನ,ನಮ್ಮ ತಂದೆಯವರು, ಹಂಪಿಯಿಂದ ಹರಪ್ಪಾವರೆಗೆ, ಶತಪತ್ರ ಮೊದಲಾದ ಕನ್ನಡ ಅನುವಾದಗಳಲ್ಲಿ ಕಾಣಬಹುದು  ಮತ್ತು ಆದರು.ಸ್ವಂತ ಕೃತಿಗಳು, ಅನುವಾದಗಳು, ನೂರಾರು ಸಂಶೋಧನಾಪ್ರಬಂಧಗಳ ಜೊತೆಗಅನೇಕ ಗ್ರಂತಬವಲಿ,ಶ್ರೀಕೃಷ್ಣ ದೇವರಾಯ, ಆಚಾರ್ಯ ಕುಂದೇಂದರು, ಜ್ಯೋತಿಷ್ಯ ಪದಕೋಶಗಳ ಸಂಪಾದಕಾರಗಿ ಕಾರ್ಯ ನಿರ್ವಹಿಸಿರುವರು.


ಆರು ಕನ್ನಡ ವಿದ್ವತ್‌ ಲೋಕದ ಧೀಮಂತರ  ನುಡಿಚಿತ್ರಗಳನ್ನು ರಚಿಸಿರುವರು.ಮೂರುವರ್ಷ ನಿರಂತರವಾಗಿ ದಿನಪತ್ರಿಕೆಗಳಲ್ಲಿ ಮತ್ತು ವಿದ್ವತ್‌ ಪತ್ರಿಕೆಗಳಲ್ಲಿ ವಿಮರ್ಶೆ.ವಿದ್ವತ್‌ಸಂಸ್ಥೆಗಳಾದ ಸಾಹಿತ್ಯ ಪರಿಷತ್‌, ಮಿಥಿಕ್‌ಸೊಸೈಟಿ, ಕರ್ನಾಟಕ ಇತಿಹಾಸ ಅಕಾದಮಿ, ಬಿ. ಎಂ ಶ್ರೀ ಪ್ರತಿಷ್ಠಾನಗಳಲ್ಲಿ ಸಕ್ರಿಯ ಪಾತ್ರವನಿರ್ವಹಣೆ, ಇತಿಹಾಸ, ಸಾಹಿತ್ಯ , ಶಾಸನಗಳನ್ನು ಕುರಿತಾದ ಅಸಂಖ್ಯ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಮ್ಮೇಳನ, ಸೆಮಿನಾರ್‌ ಕಾರ್ಯ ಶಿಬಿರಗಳಲ್ಲಿ ಸಂಪ್ರಬಂಧ ಮಂಡನೆ, ದಕ್ಷಿಣ ಭಾರತದ ಸರಿ ಸುಮಾರು ಎಲ್ಲ ವಿಶ್ವ ವಿದ್ಯಾಲಯಗಳ ವಿದ್ವತ್‌ಗೋಷ್ಠಿಯಲ್ಲಿ ಪಾಲುಗೊಳ್ಳುವಿಕೆ   ಕರ್ನಾಟಕ, ಮೈಸೂರು, ಬೆಂಗಳೂರು ಹಂಪಿಕನ್ನಡವಿಶ್ವ ವಿದ್ಯಾಲಯ  , ಕೃಷ್ಣ ದೇವರಾಯ, ಮಂಗಳೂರು,ಕುಪ್ಪಂದ್ರಾವಿಡ ಭಾಷಾವಿಶ್ವವಿದ್ಯಾನಿಯಗಳೊಡನೆ ನಿಕಟ ಸಂಪರ್ಕ.ಶಾಸನ ಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವೂ ಅವರಿಲ್ಲದೆ ಅಪೂರ್ಣ.ಜೊತೆಗೆ ಅನುವಾದ ಕಮ್ಮಟಗಳನ್ನೂ ನಡೆಸಿರುವರುಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಮತಿಗಳಲ್ಲಿ ಸೇವೆ ಸಲ್ಲಿಸುತ್ತಲಿರುವರುಇವರ ಸೇವೆ ಗುರುತಿಸಿ ತಿರುಪತಿಯ “ ಧೃ. ತಿರುಮಲ ರಾಮಚಂದ್ರರಾವ್‌ ಪ್ರಶಸ್ತಿಯು ೧೯೯೦ ರಲ್ಲಿ ಸಂಶೋಧನಾಕಾರ್ಯಕ್ಕೆ ಸಂದಿತು.
ಸುಮಾರುಎರಡು  ಡಜನ್‌ ಎಂ.ಫಿಲ್ ಮತ್ತು ಪಿ.ಎಚ್‌ಡಿ ವಿದ್ಯಾರ್ಥಿಗಳಿಗೆ ತೆಲುಗು ಮತ್ತು ಕನ್ನಡ ದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವರು
ಅವರಶಾನ ಅಧ್ಯನದ ಕರ್ಯಕ್ಕಾಗಿ ೨೦೦೯ ರಲ್ಲಿ  ಡಾ. ಬಿ.ಎನ್‌.ಶಾಸ್ತ್ರಿ ಪ್ರಶಸ್ತಿ ದೊರಕಿದೆ.ಅಲ್ಲದೆ ಕರ್ನಾಟಕ ಇತಿಹಾಸ ಅಕಾದಮಿಯವರು ತಮ್ಮ ೨೭ನೆಯ ವಾರ್ಷಿಕ ಸಮ್ಮೇಳನದಲ್ಲಿ ಬಾ.ರಾ. ಗೋಪಾಲ ಪ್ರಶಸ್ತಿ ಘೋಷಿಸಿರುವರು
ಕುಪ್ಪಂನ ದ್ರಾವಿಡಭಾಷಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರಾಗಿ ಎರಡು ವರ್ಷ ಸೇವೆ. ಯನಂತರ ೨೦೧೧ ರಳಲ್ಲಿ ನಿವೃತ್ತರಾಗಿರುವರು. ಆದರೆ ಅವರ ಅನಂತಪುರದ ವಾಸ ಇನ್ನೂ ಮುಂದುವರೆದಿದೆ.ಕಾರಣ ಅಲ್ಲಿನ ಜನರು “ ಏಮಪ್ಪಾ ಮೇಮು ಬಿಡ್ಡನಿ ಇಚ್ಚಿನಾಮು, ಇಕ್ಕಡೇ ಉಂಡಪ್ಪಾ” ಎನ್ನುವ ಆತ್ಮಿಯತೆ. ಇವರ ಹಿರಿಯ ಮಗಳೂ ಸೌಮ್ಯ  ತಂದೆಯ ಹಾದಿಯಲ್ಲಿ ಸಾಗಿ ನಾಟಕ ಬರೆದು ಅನುವಾದಿಸಿ ,ಆಡಿಸಿ ’ಬಾಲಶ್ರೀ  ಪ್ರಶಸ್ತಿ ಪಡೆದಿರುವಳು ಕಿರಿಯ ಮಗಳು ಕಾವ್ಯಪ್ರಿಯ ನೃತ್ಯಗಾತಿ ಮತ್ತು ವೃತ್ತಿಯಲ್ಲಿ ಇಂಜನಿಯರ್. .
ಘನ ಗಂಭಿರ ವಿಷಯಗಳನ್ನು ವಿದ್ವತ್‌ ಸಭೆಯಲ್ಲಿ ಚರ್ಚಿಸುವ ಶಾಸ್ತ್ರಿಗಳು ಹೊರಗೆ ಬಂದೊಡನೆ ಎಲ್ಲರೊಡನೆ  ಸಹಜವಾಗಿ ಬೆರೆಯುವರು. ಅವರಿದ್ದಲ್ಲಿ ಹಾಸ್ಯ, ಚೇಷ್ಟೆ,ನಗು ಸಾಮಾನ್ಯ. ಅದಕ್ಕೆ ಅವರು ಎಲ್ಲರಿಗೂ ಬೆಲ್ಲದ ಅಚ್ಚು.  ಹಿರಿಯರೊಂದಿಗೆ ಮಾತ್ರವಲ್ಲ ಮಕ್ಖಳೊಡನೆಯೂ ಒಂದಾಗುವರು. ಅವರಣ್ಣನ ಮೊಮ್ಮಗು, ಇವರು  ಊರಿಗೆ ಹೋಗುವೆ ಎಂದರೆ “ ’ಶೇಷ ಬಾ ಒಂದು ಆಟ ಆಡಿ ನಂತರ ಹೋಗು” ಎಂದು ಒತ್ತಾಯ ಮಾಡುವಷ್ಟು ಸಲಿಗೆ ಆತ್ಮೀಯತೆ..ವಯಸ್ಸು ದೇಹಕ್ಕೆ ಮನಸ್ಸಿಗೆ ಅಲ್ಲ ಎಂಬ ಮಾತಿಗೆ  ಸಾಕ್ಷಿಯಾಗಿ ನಗುತ್ತಾ ನಗಿಸುತ್ತಾ ನಲಿಯುವುದೆ    ಡಾ. ಶೇಷಶಾಸ್ತ್ರಿಗಳ ಹಿರಿಮೆ.





No comments:

Post a Comment