ಶಾಸನತಜ್ಞ ಡಾ. ಕೆ. ವಿ.
ರಮೇಶ
ಎಸ್.
ಕಾರ‍್ತಿಕ್
# ೬೫ [೧ ಮಹಡಿ], ೩
ನೆಯ ಅಡ್ಡರಸ್ತೆ , ಶಿಕ್ಷಕರ ಬಡಾವಣೆ, ೧ ನೆಯ
ಹಂತ, ಜೆ.ಪಿ. ನಗರ ಅಂಚೆ , ಬೆಂಗಳೂರು-೫೬೦೦೭೮
--------------------------------------------------------------------
ಭಾರತದ ಶ್ರೇಷ್ಠ
ಶಾಸನತಜ್ಞರಲ್ಲೊಬ್ಬರಾದ ಕೋಳುವೈಲ್ ವ್ಯಾಸರಾಯಶಾಸ್ತ್ರೀ ರಮೇಶ ಅವರು ಕ್ರಿ.ಶ. ೮-೬-೧೯೩೫ ರಲ್ಲಿ
ಕೇರಳದ ಫಾಲ್ಘಾಟ್‌ನ ಉಪಗ್ರಾಮ ಕಲ್ಪಾತಿಯಲ್ಲಿ ಜನಿಸಿದರು. ಇವರದು ಸುಸಂಸ್ಕೃತ ಮಾಧ್ವ ಬ್ರಾಹ್ಮಣ
ಮನೆತನ. ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರು. ಕೋಳುವೈಲ್ ಎಂಬುದು ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯ
ಸುರತ್ಕಲ್ ಪಾವಂಜೆ ಬಳಿಯ ಒಂದು ಕುಗ್ರಾಮ. ತಂದೆ ಕೊ.ಲ. ವ್ಯಾಸರಾಯ ಶಾಸ್ತ್ರಿಗಳು, ತಾಯಿ
ಕಮಲಾಬಾಯಿ ಅವರು. ಇವರೊಂದಿಗೆ ಒಡಹುಟ್ಟಿದವರು ಒಬ್ಬಳೇ ಸಹೋದರಿ, ನಾಲ್ವರು
ಅಣ್ಣತಮ್ಮಂದಿರು. ರಮೇಶ ಅವರ ಪತ್ನಿ ಶ್ರೀಮತಿ ಪ್ರೇಮಾ ಅವರು. ಇವರಿಗೆ ಸುಫಲಾ, ಶಾಂತಲಾ, ಮೇಖಲಾ ಹೆಸರಿನ ಮೂವರು ಹೆಣ್ಣುಮಕ್ಕಳು.
ವ್ಯಾಸರಾಯ ಶಾಸ್ತ್ರಿಗಳು
ಫಾಲ್ಘಾಟಿನ ವಿಕ್ಟೋರಿಯಾ ಕಾಲೇಜಿನಲ್ಲಿ ಸಂಸ್ಕೃತ ಪಂಡಿತರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ
ಅವರಿಗೆ ಕುಂಭಕೋಣಕ್ಕೆ ವರ್ಗವಾಯಿತು. ರಮೇಶ ಅವರ ಮೊದಲ ಮೂರು ತರಗತಿಗಳ ವಿದ್ಯಾಭ್ಯಾಸ ಇಲ್ಲಿಯೇ
ನಡೆಯಿತು. ೧೯೪೪ ರ ಸುಮಾರಿ ನಲ್ಲಿ ವ್ಯಾಸರಾಯ ಶಾಸ್ತ್ರಿಗಳಿಗೆ ಮದ್ರಾಸಿನ ಪ್ರೆಸಿಡೆನ್ಸಿ
ಕಾಲೇಜಿಗೆ ವರ್ಗವಾಯಿತು. ಇಲ್ಲಿನ ಕಾರ್ಪೊರೇಷನ್ ಸ್ಕೂಲಿನಲ್ಲಿ ನಾಲ್ಕು ಮತ್ತು ಐದನೆಯ ತರಗತಿಗಳ
ವ್ಯಾಸಂಗ ನಡೆಯಿತು. ಆರನೆಯ ತರಗತಿಯಿಂದ ಹಿಂದೂ ಹೈಸ್ಕೂಲಿನಲ್ಲಿ ವ್ಯಾಸಂಗ ಮುಂದುವರಿಯಿತು.
ಆರನೆಯ ತರಗತಿ ಮತ್ತು ಏಳನೆಯ ತರಗತಿಯನ್ನು ತೆಲುಗು ಮಾಧ್ಯಮದಲ್ಲಿ ಓದಬೇಕಾಯಿತು. ಎಂಟನೆಯ
ತರಗತಿಯಿಂದ ಹತ್ತನೆಯ ತರಗತಿಯ ವರೆಗೂ ತಮಿಳು ಮಾಧ್ಯಮದಲ್ಲಿ ಓದು ಮುಂದುವರೆಯಿತು. ಅಲ್ಲಿ
ಕನ್ನಡವನ್ನು ಕಲಿಯುವ ಅವಕಾಶ ಇಲ್ಲದಿದ್ದರೂ ತಾಯಿ ಕಮಲಾಬಾಯಿ ಅವರು ಮನೆಯಲ್ಲೇ ಕನ್ನಡವನ್ನು
ಅಭ್ಯಾಸಮಾಡಿಸಿದರು. ಮನೆಯೆ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು ಎಂಬ ಕವನದ ಸಾಲು ಈ
ದೃಷ್ಟಿಯಿಂದ ಸಾರ್ಥಕವಾದುದು. ಈ ಕನ್ನಡ ಕಲಿಕೆಯೇ ಮುಂದೆ ಹೆಮ್ಮರವಾಯಿತು. ಈ ರೀತಿಯ ಓದು ಮುಂದೆ
ಅವರು ಬಹು ಭಾಷಾವಿದರಾಗಿ ಬೆಳೆಯಲು ಅನುಕೂಲವಾಯಿತು. ಮದ್ರಾಸಿನ ಮೈಲಾಪುರದಲ್ಲಿರುವ ವಿವೇಕಾನಂದ
ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ (=ಪಿ.ಯುಸಿ) ವ್ಯಾಸಂಗ ನಡಸಿದರು. ರಮೇಶ ಅವರಿಗೆ ವೈದ್ಯಕೀಯ
ಕ್ಷೇತ್ರವನ್ನು ಸೇರಬೇಕೆಂಬ ಆಸೆಯಿದ್ದು ಇಂಟರ್‌ಮೀಡಿಯಟ್‌ನಲ್ಲಿ ನಿರೀಕ್ಷಿತ ಮಟ್ಟದ ಅಂಕಗಳು
ಬಾರದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಸ್ಕೃತ ಎಂ.ಎ ಪದವಿಗೆ ಸೇರಿದರು. ಇದರಲ್ಲಿ ಪ್ರಥಮ ರ‍್ಯಾಂಕ್
ಪಡೆದು ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ೨೬-೯-೧೯೫೬ ರಲ್ಲಿ ತಮಿಳುಭಾಷೆಯ ಸಹಾಯಕ
ಶಾಸನತಜ್ಞರಾಗಿ ಅಂದು ಉದಕಮಂಡಲದಲ್ಲಿದ್ದ ಭಾರತ ಸರ್ಕಾರದ ಕೇಂದ್ರಶಾಸನ ಇಲಾಖೆಯಲ್ಲಿ ತಮ್ಮ
ವೃತ್ತಿಜೀವನವನ್ನು ಆರಂಭಿಸಿದರು. ಅಲ್ಲಿ ಡಿ.ಸಿ. ಸರ್ಕಾರ್, ಜಿ.ಎಸ್.
ಗಾಯಿ, ಕೆ.ಜಿ. ಕೃಷ್ಣನ್ ಮುಂತಾದ ಖ್ಯಾತ ವಿದ್ವಾಂಸರ ಮಾರ್ಗದರ್ಶನ
ದೊರೆಯಿತು. ತಮಿಳುಭಾಷೆಯ ಶಾಸನ ಸಹಾಯಕ ರೆಂದು ನೇಮಕಗೊಂಡರೂ ಮುಂದೆ ಕನ್ನಡಭಾಷೆಯ ಶಾಸನತಜ್ಞರೆಂದು
ಬದಲಾವಣೆಯಾದುದು ಒಂದು ವಿಶೇಷ. ೧೯೬೬ ರಲ್ಲಿ ಉಪ ಅಧೀಕ್ಷಕ ಶಾಸನತಜ್ಞ, ೧೯೭೬
ರಲ್ಲಿ ಅಧೀಕ್ಷಕ ಶಾಸನತಜ್ಞ, ೧೯೮೧ ರಲ್ಲಿ ಶಾಸನ ಇಲಾಖೆಯ
ಮುಖ್ಯಶಾಸನತಜ್ಞ, ೧೯೮೪ ರಲ್ಲಿ ಶಾಸನ ಇಲಾಖೆಯ ನಿರ್ದೇಶಕ ಹುದ್ದೆಗಳಲ್ಲಿ
ಕಾರ‍್ಯ ನಿರ‍್ವಹಿಸಿದರು. ಮೇ ೧೯೯೨ ರಲ್ಲಿ ಭಾರತದ ಪುರಾತತ್ತ್ವ ಇಲಾಖೆಯ ಜಂಟಿಮಹಾನಿರ್ದೇಶಕರಾಗಿ
ನೇಮಕಗೊಂಡು ೧೯೯೩ ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ೧೯೯೮-೨೦೦೬ ರ ವರೆಗೂ ಮೈಸೂರಿನ
ಪ್ರಾಚ್ಯವಿದ್ಯಾ ಸಂಶೋಧನಾ ಲಯದ ಗೌರವ ನಿರ್ದೇಶಕರಾಗಿದ್ದರು. ೧೧-೯-೨೦೧೨ ರಿಂದ ಶಾಸನಶಾಸ್ತ್ರದ
ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಗೌರವ ಪಡೆದು ತಮ್ಮ ಸೇವೆ ಯನ್ನು ನಡಸುತ್ತಿದ್ದರು. ರಮೇಶ ಅವರಿಗೆ
ಅನೇಕ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ವಿದೇಶಗಳಿಗೂ ಪ್ರವಾಸ ಮಾಡಿ ಅಲ್ಲಿಯೂ ಅನೇಕ
ಸಂಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಚಾರವಿನಿಮಯ ನಡಸಿದ್ದಾರೆ. ಅವುಗಳ ವಿವರಗಳನ್ನು ಕೆಳಗೆ
ಪಟ್ಟಿಮಾಡಿಕೊಡಲಾಗಿದೆ [ಕೆ.ವಿ. ರಮೇಶ ಅವರು ತಯಾರಿಸಿದ್ದ ಪಟ್ಟಿಯನ್ನೇ ಯಥಾವತ್ತಾಗಿ
ನೀಡಲಾಗಿದೆ. ಇದರಲ್ಲಿಯೂ ಕೆಲವೊಂದು ಅಂಶಗಳು ಬಿಟ್ಟುಹೋಗಿರಬಹುದಾದ ಸಾಧ್ಯತೆಯಿದೆ].
1.
President of Section V of the XXXVII Indian History
Congress, Calicut ,
1976
2. Founder
Member (1974) and Secretary & Executive Editor, Epigraphical Society of India
3. Founder
Member (1978) and presently Chairman, Place Names Society of India
4. Served
as Member of International Committee for Onamastic Sciences, Louvain , Belgium
(1985-90)
5. Served for two terms (1988-93) as Council
Member of the Indian Council of Historical Research (New Delhi ) as a nominee of the Ministry of
Education, Govt. of India
6. One of the five scholars honoured by the
Govt. of Karnataka on the occasion of the Centenary Celebrations of the State’s Department of Archaeology and
Museums, 1985
7. Member,
Editorial committee, Kannada-Kannada Dictionary (1982-94) and later of the
ongoing Kannada-
Kannada- English Dictionary,
Kannada Sahitya Parishat, Bangalore
8. Honoured
by His Holiness the Swamiji of Puttige Math on the occasion of his accession to
the Paryaya
Peetha of Udupi Shri Krishna
Temple, January., 1992:
9. General
President in the VI Annual Session of Karnataka Itihasa Academy (Bangalore ) held at
Raichur, July, 1992
10. General
President in the XXI Annual Congress of the Epigraphical Society of India at
Dharwar, 1995
11.
Honoured with a Copper
Plate Citation by the Epigraphical Society of India at its XXII Annual Congress
at Mysore , May, 1996
12. Conferred
‘Honorary Fellowship for life’ by the General Body of the Asiatic Society of
Bombay (founded
in 1804), Mumbai, with all
rights and privileges appertaining thereto, Aug., 1998:
13. Awarded
‘Chidananda Prashasti’ at Bangalore ,
May, 1999
14. Awarded
the Polali Sheenappa Heggade Prashasti at Udupi, April 2000:
15. One
of the five scholars honoured by the Jaina Matha, Shravanabelgola, Karnataka,
Feb., 2001
16. Awarded
‘Dr.Ba.Ra.Gopal Prashasti’ by the Karnataka
Itihasa Academy ,
October, 2001
17. Honoured
by the Karnataka Tulu Sahitya
Academy , Govt. of
Karnataka, at Mangalore, May, 2002
18. Delivered
the Inaugural Lecture in the Lecture Series started by ICHR Southern Regional
Centre,
19. Manipal Foundation’s awarded on Prof. Achyuta Rao Memorial
Fellowship for writing a treatise on ‘The
Philosophy of Indian
History’, 2003
20. Delivered
the Maheshwar Neogi Memorial Endowment Lecture at Guwahati on ‘Assam , the
North-East
and the rest of India ’,
13-9-2003:
21. Honoured
“Man of the Year’ award by The Academy of General Education, Syndicate Bank and
Rotary
Club of Udupi, Manipal,
2006
22. Delivered
‘Dr. D.C.Sircar centenary Lecture’ at the Asiatic Society, Kolkata on 8th
June, 2007.
23. General
President in the Conference on the ‘History and Archaeology of Udupi District’
conducted at Udupi by the Department of Archaeology and Museums, Govt. of
Karnataka, Mysore .
24. Chief
Guest at the Inaugural Function of the Centenary year celebrations of the
Mythic Society,
25. Nominated as a Member of the ‘Central
advisory Board of Archaeology, Department of Culture,
Govt. of India , 2010
26. Delivered the Keynote address “The Invincible two decades of Indian History”
on Krishnadevaraya
at
the Southern Centre of The Indian Council of Historical, Bangalore , January, 2010
Visits Abroad:
1.
Visited Bulgaria for three weeks on a Cultural Exchange
Programme; also visited Rome
on way back to
2.
Visited Japan for a
week and delivered the Key-Note address (since published) on South Asian
Epigraphy in the International Conference
on Asian and North African Studies, Aug.-Sept. 1983:
3.
Visited Finland
as a member of the official delegation’ headed by Dr. M.S. Nagaraja Rao, the
then
Director General, Archaeological Survey of India, for
11 days to negotiate terms for the Cultural Exchange programmes between India and Finland for the next three years,
June, 1984:
4.
Nov.-Dec.
1986: Visited Finland for three weeks in connection with the preparation of a
photographic
Corpus of Indus Seals and Sealing as part of
Indo-Finnish collaboration programme
5.
Aug. 1987:
Participated in the XVI International Congress on Onamastic Sciences held in Quebec City ,
6.
Visited
the United States of America
for two weeks, Aug.-Sept. 1987:
7.
Visited
Srilanka and participated in the International Seminar ‘Towards the Second
Century of
Archaeology in Srilanka’ held in Colombo , July, 1990:
8.
Visited Finland and
participated in the XVII International Congress on Onamastic Sciences
held in Helsinki
and presented a paper, Aug. 1990:
9.
Visited
the United States of America
for two weeks, Aug. 1990
10.
As member
of the Indo-Japanese team led by Prof. Noboru Karashima for the
Archaeological-cum-
Epigraphical exploration of South-east
Asia
11.
Visited
(South and North) Vietnam and Laos, Dec. 1991-Jan. 1992
12.
Visited
Malaysia and Thailand, Dec. 1992-Jan. 1993
13.
Visited Indonesia , Dec.
1993-Jan. 1994
14.
Visited Japan and presented a report at the Tokyo University
on the results of the
Epigraphical Explorations in South-East Asia during the 1991-94 seasons (since
published), March, 1994
15.
Visited
(Central) Vietnam and Cambodia ,
March, 1995:
16.
Visited Canada and the United States of America ; delivered
a talk on Southeast Asian Inscriptions at the
Shastri Institute, Edmonton University , Canada ,
July 1995-Jan. 1996
17.
Visited Denmark and Sweden . Participated in the 14th
European Conference on Modern South Asian
Studies at Copenhagen
and presented a paper “ The Ever Changing Face of the Indian Village ”;
also
delivered a talk on ‘Myths in Indian History’ at the
Dept. of Religions, University of Copenhagen, Denmark, Aug. 1996
18.
As member
of the Indo-Srilankan team of Explorers visited a number of historical sites in
Srilanka for Two
Weeks; also participated in the International Seminar
at the University of Peradania , Kandy and
presented two papers on the Merchant Guilds of Karnataka and Merchant Guilds
and Urbanization in Karnataka; delivered a talk at the Indo-Srilankan
Friendship Society, Colombo ,
Dec. 2002
19.
Visited Malaysia
and participated in the International Seminar on ‘Asian-European Epics’ and
presented
paper ‘The Great Indian Poems’, Oct. 2002
20.
Participated
in the International Conference held in Bangkok ,
Thailand , on ‘Sanskrit in Asia : Unity in
Diversity; Presided over a section in which I presented
a paper on ‘Sanskrit Inscriptions of India and Southeast Asia- A Study in
Comparison and Contrast’, June 20-26, 2006
21.
Participated
in the 2nd SSEASR Conference at Bangkok and presented a paper on ‘The Nature
and
Degree of Influence exerted by Different
Politico-Religious and Palaeographical Regions of India on Southeast
Asia through the Ancient and Early Medieval Periods’, 2007:
22.
Participated in the 3rd
SSEASR Conference at Bali , Indonesia , and presented a paper on
‘Water
Resources Management in Ancient and Medieval South and Southeast
Asia ’, June, 2009
ಮೈಸೂರಿನ ಪ್ರಾಚ್ಯವಿದ್ಯಾ
ಸಂಶೋಧನಾಲಯದ ಗೌರವ ನಿರ್ದೇಶಕರಾದ ಸಮಯದಲ್ಲಿ ಆ ಸಂಸ್ಥೆಯ ಕಟ್ಟಡವನ್ನು ಸುಸ್ಥಿತಿಯಲ್ಲಿ ಡಲು
ಶ್ರಮಿಸಿದರು. ಸರ್ಕಾರದಿಂದ ಹಣವನ್ನು ಮಂಜೂರಾತಿ ಮಾಡಿಸಿಕೊಂಡು ಆ ಸಂಸ್ಥೆಯನ್ನು ಉತ್ತಮ
ರೀತಿಯಲ್ಲಿ ನಡಸಿದರು. ಇದರಂತೆಯೇ Epigraphical
Society of India ಮತ್ತು Place Names
Society of India
ಸಂಸ್ಥೆಗಳ ಅಧ್ಯಕ್ಷರಾಗಿ
ಅವುಗಳನ್ನು ನಡಸಿಕೊಂಡು ಹೋಗುತ್ತಿದ್ದರು. ಇವುಗಳೇ ಅಲ್ಲದೇ ಇನ್ನೂ ಅನೇಕ ಸಂಘ ಸಂಸ್ಥೆಗಳ ನಿಕಟ
ಸಂಬಂಧವನ್ನು ಹೊಂದಿದ್ದರು.
ಶಾಸನ ಕ್ಷೇತ್ರಕ್ಕೆ ರಮೇಶ
ಅವರ ಕೊಡುಗೆ ಅಪಾರವಾದುದು. ರಮೇಶ ಅವರ ಸ್ವತಂತ್ರ ಕೃತಿಗಳು ಕಡಮೆ ಸಂಖ್ಯೆಯಲ್ಲಿದ್ದರೂ ಗುಣ
ಮತ್ತು ಸಂಶೋಧನೆಯ ದೃಷ್ಟಿಯಿಂದ ಮಹತ್ತ್ವಪೂರ್ಣವಾದವುಗಳೆಂದು ಹೇಳಬಹುದು. ಇವುಗಳ ಬಗೆಗೆ
ಪ್ರತ್ಯೇಕವಾಗಿ ಅಧ್ಯಯನ ನಡಸ ಬೇಕಾಗಿದೆ. ಇಲ್ಲಿ ಕಿರಿದಾಗಿ ಮಾತ್ರ ಒಂದೆರಡು ಮಾತುಗಳನ್ನು ಹೇಳಲು
ಸಾಧ್ಯ. ತುಳುನಾಡಿನ ಇತಿಹಾಸ ಕೃತಿಯು ೧೯೬೩-೬೫ ರವರೆಗೆ ಜಿ.ಎಸ್. ದೀಕ್ಷಿತರ ಮಾರ್ಗದರ್ಶನದಲ್ಲಿ
ಕೈಕೊಂಡ ಪಿ.ಎಚ್.ಡಿ ಅಧ್ಯಯನದ ಫಲ. ತುಳುನಾಡಿನ ಇತಿಹಾಸವನ್ನು ಶಾಸನಗಳ ಆಧಾರದಿಂದ
ವ್ಯವಸ್ಥಿತವಾಗಿ ನಿರೂಪಿಸಲಾಗಿದೆ. ಇದೇ ಕೃತಿ ಇಂಗ್ಲಿಷಿನಲ್ಲಿಯೂ ಪ್ರಕಟವಾಗಿದೆ. ಬಾದಾಮಿ
ಚಲುಕ್ಯರ ಬಗೆಗಿನ ಇಂಗ್ಲಿಷ್ ಕೃತಿ ವಿನೂತನ ಮಾದರಿಯಲ್ಲಿ ರಚಿತವಾಗಿದ್ದು ಬಾದಾಮಿ ಚಲುಕ್ಯರ
ಬಗೆಗೆ ವಸ್ತುನಿಷ್ಠವಾಗಿ ವಿಶ್ಲೇಷಿಸಿರುವ ಅಧಿಕೃತ ಕೃತಿಯಾಗಿದೆ. ಕರ್ಣಾಟಕ ಶಾಸನ ಸಮೀಕ್ಷೆ
ಕೃತಿಯಲ್ಲಿ ಅನೇಕ ಹೊಸ ಅಂಶಗಳನ್ನು ಕಾಣುತ್ತೇವೆ. ತಲಕಾಡು ಗಂಗರ ೧೫೯ ಶಾಸನಗಳನ್ನು ಎಪಿಗ್ರಾಫಿಯಾ
ಇಂಡಿಕಾ ಮಾದರಿಯಲ್ಲಿ ಸೊಗಸಾಗಿ ಸಂಪಾದಿಸಿಕೊಟ್ಟಿದ್ದಾರೆ. ಈಚೆಗೆ ದಕ್ಷಿಣ ಭಾರತದ ನಾಲ್ಕು
ಭಾಷೆಗಳ ಶಾಸನ ನಿಘಂಟನ್ನು ಸಂಪಾದಿಸಿಕೊಟ್ಟಿದ್ದಾರೆ. ರಮೇಶ ಅವರ ಪ್ರತಿಯೊಂದು ಪುಸ್ತಕ ಮತ್ತು
ಕನ್ನಡ ಇಂಗ್ಲಿಷ್ ಲೇಖನಗಳಲ್ಲಿಯೂ ನೂತನ ದೃಷ್ಟಿಕೋನವನ್ನು ಕಾಣುತ್ತೇವೆ.
ರಮೇಶ ಅವರು ಶಾಸನ
ಅಧ್ಯಯನದಲ್ಲಿ ನಡೆಯಬೇಕಾದ ಕೆಲಸಗಳ ಬಗೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನ ಅಧ್ಯಯನ ಕೃತಿಗೆ
ನೀಡಿರುವ ದೀರ್ಘವಾದ ಸಂದರ್ಶನದಲ್ಲಿ ಹೇಳಿದ್ದಾರೆ (ನೋಡಿ : ಶಾಸನ ಅಧ್ಯಯನ, ಸಂಪುಟ-೩,
ಸಂಚಿಕೆ-೨, ಜುಲೈ-ಡಿಸೆಂಬರ್ ೨೦೦೬, ಪುಟ ೧೪೮-೧೭೨). ಇದನ್ನು ಅಗತ್ಯವಾಗಿ ಗಮನಿಸಬೇಕು. ಸಿಂಧೂ ಲಿಪಿಯ ಬಗೆಗೆ ಎಸ್. ಆರ್.
ರಾಯರಂತೆಯೇ ಶೋಧನೆ ನಡಸಿ ತಮ್ಮ ದೃಷ್ಟಿಕೋನವನ್ನು ಮಂಡಿಸಿದ್ದಾರೆ. ಶಾಸನಗಳಲ್ಲಿನ ಐತಿಹಾಸಿಕ,
ಸಾಮಾಜಿಕ ಅಂಶಗಳು ಮತ್ತು ಆರ್ಥಿಕಾಂಶಗಳ ಬಗೆಗೆ ನಡೆಯ ಬೇಕಾದ ಕೆಲಸಗಳ ಬಗೆಗೆ
ಒತ್ತಿ ಹೇಳಿದ್ದಾರೆ. ರಮೇಶ ಅವರು ಕನ್ನಡದಲ್ಲಿ ಬರೆದಿರುವ ಬರಹಗಳು ಬಹಳ ಕಡಮೆ ಎಂದು ಹೇಳಬಹುದು.
ಆದರೆ ಇಂಗ್ಲಿಷ್‌ನಲ್ಲಿ ಬರೆದಿರುವ ಬರಹಗಳು ಬಹುಪಾಲು ಕರ್ನಾಟಕದ ಇತಿಹಾಸ, ಶಾಸನಗಳು ಈ ವಿಷಯಗಳಿಗೇ ಸಂಬಂಧಪಟ್ಟಿವೆ. ಶಾಸನಗಳ ಪುನರ್‌ಪರಿಷ್ಕರಣದ ಅಗತ್ಯವನ್ನು
ಒತ್ತಿ ಹೇಳಿರುವವರು ರಮೇಶ ಅವರನ್ನು ಬಿಟ್ಟರೆ ಇಬ್ಬರೋ, ಮೂವರೋ
ಇರಬಹುದು. ಇದನ್ನು ರಮೇಶ ಅವರ ಅನೇಕ ಬರಹಗಳಲ್ಲಿ ಕಾಣುತ್ತೇವೆ. ಶಾಸನಗಳಲ್ಲಿ ಕಂಡುಬರುವ
ಪುರಾತತ್ತ್ವೀಯ ಮಾಹಿತಿಯನ್ನು ಅಭ್ಯಸಿಸಿ ಅವುಗಳನ್ನು ಬಳಸಿಕೊಂಡು ಸಂಪ್ರಬಂಧಗಳನ್ನು
ಮಂಡಿಸಿದವರಲ್ಲಿ ರಮೇಶ ಅವರು ಒಬ್ಬರು. ಇಂತಹ ಹಲವು ರೀತಿಯ ಮಾಹಿತಿಗಳನ್ನು ರಮೇಶ ಅವರ ಬರಹಗಳಲ್ಲಿ
ಕಾಣುತ್ತೇವೆ. ಅಯೋಧ್ಯೆಯಲ್ಲಿ ಈಗ ಬಾಬರೀ ಮಸೀದಿಯೆಂದು ಹೇಳಲಾಗುವ ಸ್ಥಳದಲ್ಲಿ ದೊರಕಿದ ಸಂಸ್ಕೃತ
ಭಾಷೆಯ ಶಾಸನ ವನ್ನು ಅತ್ಯಂತ ಶ್ರೇಷ್ಠವಾಗಿ ಸಂಪಾದಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ದೊರೆತ ಅಶೋಕನ ಶಾಸನಗಳನ್ನು ಸಂಪಾದಿಸಿ
ಪ್ರಕಟಿಸಿದ್ದಾರೆ. ಈ ಶಾಸನಗಳ ಓದುವಿಕೆ ವಿವಿಧ ವಿದ್ವಾಂಸರಲ್ಲಿ ಅನೇಕ ರೀತಿಯದ್ದಾಗಿದ್ದು,
ಇಂತಹ ಸಮಯದಲ್ಲಿ ಯಾರ ಪಾಠವನ್ನು ಅವಲಂಬಿಸಬೇಕು ಎಂಬುದರ ಬಗೆಗೆ ಮಾನದಂಡವನ್ನು
ರೂಪಿಸಬೇಕಾದ ಅಗತ್ಯವಿದೆ. ಅನೇಕ ವಿದ್ವಾಂಸರ ಅಭಿನಂದನ ಗ್ರಂಥಗಳು ಮತ್ತು ಸಂಸ್ಮರಣ ಗ್ರಂಥಗಳ
ಸಂಪಾದಕರು ಹಾಗೂ ಪ್ರಧಾನ ಸಂಪಾದಕರಾಗಿ ಕಾರ‍್ಯನಿರ್ವಹಿಸಿದ್ದಾರೆ. ಈ ಗ್ರಂಥಗಳೆಲ್ಲವೂ
ಉತ್ತಮವಾಗಿ ಸಂಪಾದಿತಗೊಂಡಿವೆ. ಒಟ್ಟಾರೆಯಾಗಿ ರಮೇಶ ಅವರ ಬರಹಗಳು ಒಂದೆಡೆ ಸಂಕಲನಗೊಂಡು ಅಧ್ಯಯನ
ನಡೆಯಬೇಕಾಗಿದೆ.
ರಮೇಶ ಅವರಿಗೆ ದೇಶ ವಿದೇಶಗಳ
ವಿದ್ವಾಂಸರ ನಿಕಟ ಪರಿಚಯವಿದ್ದಿತು. ಶ್ರೀನಿವಾಸ ರಿತ್ತಿ, ಬಾ.ರಾ.
ಗೋಪಾಲ, ನೋಬುರು ಕರಾಷಿಮಾ, ವೈ.
ಸುಬ್ಬರಾಯುಲು ಮುಂತಾದ ವಿದ್ವಾಂಸರೊಡನೆ ನಿಕಟ ಸ್ನೇಹವಿತ್ತು. ಪುರಾತತ್ತ್ವ ವಿದ್ವಾಂಸರಾದ
ಡಾ.ಎಸ್. ನಾಗರಾಜು ಅವರಿಗೂ ರಮೇಶ ಅವರಿಗೂ ಸುಮಾರು ೧೯೬೦ ರ ಸುಮಾರಿನಿಂದಲೂ ನಿಕಟವಾದ ಸ್ನೇಹ. ಇವರಿಬ್ಬರ
ಮಧ್ಯೆ ನಡೆಯುತ್ತಿದ್ದ ಚರ್ಚೆಗಳಿಗೆ ಲೆಕ್ಕವಿಲ್ಲ. ದಿನ, ವಾರ,
ತಿಂಗಳುಗಳೇ ಇದಕ್ಕೆ ಕಳೆದುಹೋಗಿವೆ, ಈ ಚರ್ಚೆಗಳ
ಸಮಯದಲ್ಲಿ ಬಿ.ಕೆ. ಗುರುರಾಜರಾಯರು ಸೇರಿದ್ದರು ಎಂದು ಎಸ್. ನಾಗರಾಜು ಅವರು ಹೇಳುತ್ತಾರೆ.
ನಾಣ್ಯತಜ್ಞ ಡಾ. ಎ.ವಿ. ನರಸಿಂಹಮೂರ‍್ತಿ ಅವರಿಗೂ ರಮೇಶ ಅವರಿಗೂ ೧೯೫೭ರ ಸುಮಾರಿನಿಂದಲೇ ನಿಕಟ
ಸ್ನೇಹ. ನರಸಿಂಹಮೂರ‍್ತಿಗಳು ಸೇಉಣರ ಬಗೆಗೆ ಪಿ ಎಚ್. ಡಿ ಮಾಡುವ ಸಮಯದಲ್ಲಿ ಆಗ
ಉದಕಮಂಡಲದಲ್ಲಿದ್ದ ಕೇಂದ್ರ ಶಾಸನ ಇಲಾಖೆಗೆ ಶಾಸನಗಳ ಅಧ್ಯಯನಕ್ಕೆಂದು ತೆರಳಿದ್ದರು. ಆ ಸಮಯದಿಂದ
ಇಂದಿನ ವರೆಗೂ ರಮೇಶ ಅವರಿಗೂ ನರಸಿಂಹಮೂರ‍್ತಿಗಳಿಗೂ ಸ್ನೇಹ ಸತತವಾಗಿದ್ದಿತು. ನರಸಿಂಹಮೂರ‍್ತಿಗಳು
“ರಮೇಶ ಅವರು ಶ್ರೇಷ್ಠ ವಿದ್ವಾಂಸರು. ಅವರಿಗಿದ್ದ
ಬುದ್ಧಿಮತ್ತೆಗೆ ಕನಿಷ್ಠ ೫೦ ಗ್ರಂಥಗಳ ನ್ನಾದರೂ ಬರೆಯಬೇಕಿತ್ತು” ಎಂದು ಹೇಳುತ್ತಿದ್ದರು. ರಮೇಶ ಅವರು ಕಿರಿಯರಿಗೆ
ಕೊಡುತ್ತಿದ್ದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸದಾ ಸ್ಮರಣೀಯವಾದುದು. ಅನೇಕ ಮಂದಿ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಲಾಭ ಪಡೆದವರಾಗಿದ್ದು
ಅವರಲ್ಲಿ ಪ್ರಕೃತ ಲೇಖಕನೂ ಒಬ್ಬನಾಗಿದ್ದಾನೆ.
ರಮೇಶ ಅವರಿಗೂ ನನಗೂ ನಿಕಟವಾದ ಪರಿಚಯ ಇದ್ದಿತು. ೨೪-೩-೨೦೧೨
ರಂದುANCIENT
SCIENCES AND ARCHAEOLOGICAL SOCIETY OF INDIA ಸಂಸ್ಥೆಯ ಸಮಾರಂಭವೊಂದು ನಮ್ಮ ಮನೆಯ
ಬಳಿಯೇ ಇರುವAcharya Bangalore -School ನಲ್ಲಿ ನಡೆಯಿತು. ಆ ದಿನ ಡಾ. ಎ.ವಿ. ನರಸಿಂಹಮೂರ‍್ತಿಗಳಿಗೂ, ಡಾ. ಕೆ. ವಿ. ರಮೇಶ ಅವರಿಗೂ ಅಲ್ಲಿ Honorary Fellowship ಅನ್ನು ನೀಡಿ ಗೌರವಿಸಲಾಯಿತು. ಸಮಾರಂಭದ ನಂತರ ನಮ್ಮ ಮನೆಗೆ
ಇಬ್ಬರೂ ಆಗಮಿಸಿ ನನ್ನ ಕಿರು ಗ್ರಂಥಾಲಯವನ್ನು ನೋಡಿ ಸಂತೋಷಪಟ್ಟರು. ರಮೇಶ ಅವರು ತಮಗೆ
ಬೇಕಾಗಿದ್ದ ಪುಸ್ತಕವೊಂದು ನನ್ನಲ್ಲಿ ಇರುವುದನ್ನು ಗಮನಿಸಿ ಅದರ ಕ್ಸೆರಾಕ್ಸ್ ಪ್ರತಿಯನ್ನು
ಅಪೇಕ್ಷಿಸಿದರು. ನಾನು ಅವರಿಗದನ್ನು ನಂತರ ಕಳುಹಿಸಿಕೊಟ್ಟೆ. ಇದರಿಂದಾಗಿ ಅವರಿಗೆ ತುಂಬ ಸಂತೋಷವಾಗಿತ್ತು. ಅವರು ಬರೆದಿರುವ ಅನೇಕ
ಪುಸ್ತಕಗಳೇ ಅವರ ಬಳಿ ಇರಲಿಲ್ಲ. ನಾನು ಬೆಂಗಳೂರಿನಿಂದ ಅದನ್ನು ಕ್ಸೆರಾಕ್ಸ್ ಮಾಡಿಸಿ
ಕಳುಹಿಸಿಕೊಟ್ಟಿದ್ದೆ. ಅದನ್ನು ಕಂಡು ಅವರು ಬಹಳವಾಗಿ ಸಂತೋಷಪಟ್ಟರು. ಅವರ ಕೃತಿಗಳಲ್ಲಿ ಕಂಡು
ಬಂದ ಹಲವು ದೋಷಗಳನ್ನು ಕೂಡ ಪಟ್ಟಿಮಾಡಿಕೊಟ್ಟಿದ್ದೆ. ಅವುಗಳನ್ನು ಮುಂದಿನ ಮುದ್ರಣಗಳಲ್ಲಿ
ಸರಿಪಡಿಸುವುದಾಗಿ ಹೇಳಿದರು. ಆದರೆ ಅದಕ್ಕೆ ಕಾಲನ ಕರೆ ಅವಕಾಶವನ್ನು ನೀಡಲಿಲ್ಲ.
ನಮ್ಮಿಬ್ಬರ ನಡುವೆ ಅನೇಕ ಶಾಸನಗಳು, ಅವುಗಳ ಸಮಸ್ಯೆಗಳು ಮುಂತಾದ ವಿಷಯಗಳಲ್ಲಿನ ಸಮಸ್ಯೆಗಳೇ ಚರ್ಚೆಯ ವಿಷಯ ಗಳಾಗಿದ್ದವು. ಶಾಸನ
ಕ್ಷೇತ್ರದಲ್ಲಿನ ನನ್ನ ಬರಹಗಳನ್ನು ಅವರು ತುಂಬಾ ಮೆಚ್ಚಿಕೊಂಡಿದ್ದರು. ನನ್ನ ಬರವಣಿಗೆ ಮತ್ತು
ಶಾಸನ ಸಂಶೋಧನೆಯ ವಿನೂತನ ಆಯಾಮಗಳ ಅಗತ್ಯದ ನನ್ನ ದೃಷ್ಟಿಕೋನವನ್ನು ಅನೇಕ ಸಭೆ, ಸಮಾರಂಭಗಳಲ್ಲಿ ಮುಕ್ತವಾಗಿ ಹೊಗಳಿ, ಅವುಗಳ ಅವಶ್ಯಕತೆ ಯನ್ನು ಪ್ರತಿಪಾದಿಸಿದ್ದರು. ಶಾಸನ ಸಂಪಾದನೆಯಲ್ಲಿ ಬಳಸುವ ಚಿಹ್ನೆಗಳು :
ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು ಎಂಬ ಲೇಖನವನ್ನು ನಾನು ಬರೆದು ಅವರಿಗೆ
ಕಳುಹಿಸಿಕೊಟ್ಟಿದ್ದೆ (ಈ ಲೇಖನ ಇತಿಹಾಸ ದರ್ಶನ ಸಂಪುಟದಲ್ಲಿ ಸಂಪಾದಕರ ವಿಪರೀತ
ತಿದ್ದುಪಾಡುಗಳಿಂದ ತೀರಾ ಕೆಟ್ಟದಾಗಿ ಪ್ರಕಟವಾಗಿದೆ). ಅದನ್ನು ಅವರು ತುಂಬ ಮೆಚ್ಚಿಕೊಂಡು
ಆಮೂಲಾಗ್ರವಾಗಿ ಅವಲೋಕಿಸಿ ಅನೇಕ ಸಲಹೆ, ಸೂಚನೆಗಳನ್ನು ಕೊಟ್ಟರು. ತಮಗೆ
ತಿಳಿದಂತೆ ಅಖಂಡ ಭಾರತದಲ್ಲಿ ಈ ವಿಷಯವಾಗಿ ಯಾವುದೇ ಲೇಖನ ಪ್ರಕಟವಾಗಿಲ್ಲ ಎಂದು ಕೂಡ ತಿಳಿಸಿದರು.
ಈಚೆಗೆ ನಾನು ಶಾಸನೋಕ್ತ ಕಾಲಗಣನೆಯ ಬಗೆಗೆ ಕೆಲಸ ಮಾಡುತ್ತಿದ್ದು ಅವುಗಳಲ್ಲಿನ ಸಮಸ್ಯೆಗಳು, ಪರಿಹಾರಗಳು, ಅರ್ಥೈಸುವ ರೀತಿಯಲ್ಲಿನ ತೊಡಕುಗಳು ಇತ್ಯಾದಿ ಅಂಶಗಳ ಮೇಲೆ
ರಮೇಶ ಅವರೊಂದಿಗೆ ಹಲವಾರು ದಿನಗಳು, ಗಂಟೆಗಟ್ಟಳೆ ಚರ್ಚೆಮಾಡಿದ್ದೆ.
ಇದರಿಂದಾಗಿ ಕೆಲವು ಸಮಸ್ಯೆಗಳನ್ನು ಬಿಡಿಸಲು ಅವರು ನೀಡಿದ ಸಲಹೆ ನೆರವಾಯಿತು. ತೇದಿಯಿಲ್ಲದ
ಶಾಸನಗಳ ಕಾಲವನ್ನು ನಿರ್ಧರಿಸುವಲ್ಲಿ ಈಗ ಅನುಸರಿಸುತ್ತಿ ರುವ ವಿಧಾನದ ಬಗೆಗೆ ನನ್ನ
ಅಸಮ್ಮತಿಯನ್ನು ವ್ಯಕ್ತಪಡಿಸಿ, ನನ್ನ ಅಧ್ಯಯನದ ಹಿನ್ನೆಲೆಯಿಂದ
ಕಂಡುಕೊಂಡ ವಿಧಾನವನ್ನು, ಅದರ ಹಂತ ಗಳನ್ನು ಕುರಿತು ರಮೇಶ ಅವರ
ಬಳಿ ಪ್ರತಿಪಾದಿಸಿದೆ. ಅದಕ್ಕೆ ಅವರು ತಮ್ಮ ಸಮ್ಮತಿಯನ್ನು ಸೂಚಿಸಿ "ಈ ವಿಧಾನ ಸಮರ್ಪಕ
ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲವಾದರೂ ಇದಕ್ಕೆ ಮಾಡಬೇಕಾದ ಕೆಲಸ ವಿಪರೀತ ಕತ್ತೆಚಾಕರಿ.
ಇದಕ್ಕೆ ಸಾಹಿತ್ಯ ಮತ್ತು ಇತರ ಅಂಶಗಳ ಗಾಢವಾದ ತಿಳಿವಳಿಕೆ ಅಗತ್ಯ. ಇದನ್ನು ಮಾಡಬಲ್ಲ ಸಂಶೋಧಕರು
ನಮ್ಮಲ್ಲಿ ಎಷ್ಟು ಜನರಿದ್ದಾರೆ, ಮೂಲಶಾಸನಗಳನ್ನು ಓದಿ ಅವುಗಳನ್ನು
ವಿವರಿಸುವ ಜನ ಎಲ್ಲಿದ್ದಾರೆ" ಎಂದು ಕೇಳಿದರು. ಇಂದು ನಡೆಯುತ್ತಿರುವ ಶಾಸನ ಸಂಶೋಧನೆಯನ್ನು
ಗಮನಿಸಿದರೆ ಈ ಮಾತನ್ನು ಧಾರಾಳ ವಾಗಿ ಒಪ್ಪಬಹುದು. ಶಾಸನ ಅಧ್ಯಯನದಲ್ಲಿ ಹೊಸರೀತಿಯ ಆಯಾಮವನ್ನು
ಪ್ರತಿಪಾದಿಸಿದರೆ ಅವುಗಳನ್ನು ಸ್ವಾಗತಿಸುವವರೇ ಹೆಚ್ಚು ಮಂದಿ ಇಲ್ಲವಾಗಿದ್ದಾರೆ. ಒಟ್ಟಾರೆಯಾಗಿ
ಹೇಳಬೇಕೆಂದರೆ ಶಾಸನ ಅಧ್ಯಯನ ಮತೀಯ ದೃಷ್ಟಿಕೋನ, ಪೂರ್ವಾಗ್ರಹಗಳಿಗೆ ಸಿಲುಕಿ ವಸ್ತುನಿಷ್ಠತೆ ಇಲ್ಲದೆ ನಲುಗಿದೆ. ಶಾಸನ ಸಂಪುಟಗಳ ಸಂಪಾದನೆಯ
ವೈಖರಿಯ ಬಗೆಗೆ ನಾನು ಆಕ್ಷೇಪಿಸಿದ್ದೆ. ಶಾಸನ ಸಂಪುಟಗಳ ಸಂಪಾದನೆಯಲ್ಲಿ ಸಂಪಾದಕರು ಅವುಗಳನ್ನು
ರೂಪಿಸುವ ವಿಧಾನವನ್ನು ಹೇಳದೆ ಅನೇಕ ಗೊಂದಲಗಳಾಗಿವೆ. ಇದನ್ನು ಅವರ ಬಳಿ ಹೇಳಿದಾಗ ಅವರು ಇದಕ್ಕೆ
ತಕ್ಕುದಾದ ಪಠ್ಯವನ್ನು ರೂಪಿಸಿ ಅದನ್ನು ವಿಸ್ತಾರವಾಗಿ ಪಠ್ಯಕ್ರಮದಲ್ಲಿ ಸೇರಿಸಿ ಪಾಠಮಾಡಿದರೆ
ಮಾತ್ರ ಇಂತಹ ಗೊಂದಲಗಳನ್ನು ನಿವಾರಿಸಲು ಸಾಧ್ಯ ಎಂದು ತಿಳಿಸಿದರು. ಶಾಸನ ಸಂಪಾದನೆ, ಅವುಗಳ ಸಮಸ್ಯೆಗಳು. ಪರಿಹಾರಗಳು, ಶಾಸನ ಸಂಪಾದನೆಯಲ್ಲಿ ಅನುಸರಿಸಬೇಕಾದ
ವಿಧಿ ವಿಧಾನಗಳ ಬಗೆಗೆ ನಮ್ಮಲ್ಲಿ ಯಾವುದೇ ರೀತಿಯ ಕೆಲಸ ಇದುವರೆಗೂ ನಡೆದಿಲ್ಲ. ಅಗತ್ಯವಿಲ್ಲ
ಎಂದು ಪ್ರತಿಪಾದಿಸುತ್ತಿರುವವರ ಸಂಖ್ಯೆಯೇ ಹೆಚ್ಚು. ಇದು ನಿಜಕ್ಕೂ ವಿಷಾದಕರ ಅಂಶ. ಇದಕ್ಕೆ
ಸಂಬಂಧಿಸಿದಂತೆ ಪ್ರಕೃತ ಲೇಖಕನು ಕೆಲಸ ಮಾಡುತ್ತಿದ್ದು ಶೀಘ್ರದಲ್ಲಿಯೇ ಇದರ ಬಗೆಗಿನ ಬರವಣಿಗೆ
ಹೊರಬೀಳುವ ಆಶಾಭಾವನೆಯಿದೆ !?. ಅವರು ನಿಧನರಾಗುವ ಎರಡು ದಿನಗಳ
ಹಿಂದೆ ದೂರವಾಣಿಯಲ್ಲಿ ಮಾತನಾಡಿದ್ದೆ. ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಶಾಸನದ
ಪರಿಷ್ಕೃತ ಪಾಠ ಎಂಬ ಲೇಖನವನ್ನು ಈ ಮೇಲ್ ಮಾಡಿದ್ದೆ. ಅದನ್ನು ಎಪಿಗ್ರಾಫಿಯಾ ಇಂಡಿಕಾ
ಮಾದರಿಯಲ್ಲಿ ಸಿದ್ಧಪಡಿಸಿದ್ದೆ. ಅದನ್ನು ನೋಡಿ ಅವರು ಸಂತೋಷಪಟ್ಟು ಶಾಸನ ಸಂಪಾದನೆಯಲ್ಲಿ ಈ
ಮಾದರಿ ಯನ್ನು ಬಲ್ಲವರ ಕೊರತೆ ಇದೆ. ನೀವು ಇದನ್ನು ರೂಢಿಸಿಕೊಂಡಿದ್ದೀರಿ. ಇದನ್ನೇ ಮುಂದಕ್ಕೂ
ಶಾಸನ ಸಂಪಾದನೆಯಲ್ಲಿ ಪಾಲಿಸಿ ಎಂದು ಹೇಳಿದರು. ನಿಮ್ಮೊಡನೆ ಶಾಸನ ನಿಘಂಟಿನ ಬಗೆಗೆ ಚರ್ಚಿಸಬೇಕು
ಎಂದು ಹೇಳಿದರು. ಇದೇ ನನಗೂ ಅವರಿಗೂ ನಡೆದ ಕೊನೆಯ ಮಾತುಕತೆ. ೧೦-೭-೨೦೧೩, ಬುಧವಾರ ನಿಧನರಾದರು. ಶಾಸನಕ್ಷೇತ್ರದ ಮಹಾನ್ ದಿಗ್ಗಜರಲ್ಲಿ ಒಬ್ಬರನ್ನು ಆ ಕ್ಷೇತ್ರ
ಕಳೆದುಕೊಂಡಿತು.
ಪ್ರಕೃತ ಲೇಖನದಲ್ಲಿ ಡಾ. ಕೆ. ವಿ. ರಮೇಶ ಅವರ ಬಗೆಗೆ
ಕಿರಿದಾಗಿ ಪರಿಚಯಿಸಲಾಗಿದ್ದು ಅವರ ಬರಹಗಳ ಸೂಚಿಯನ್ನು ಗಮನಕ್ಕೆ ಬಂದ ಮಟ್ಟಿಗೂ ಶೋಧಿಸಿ
ಕೊನೆಯಲ್ಲಿ ನೀಡಲಾಗಿದೆ. ತಮಿಳು ಭಾಷೆಯಲ್ಲಿಯೂ ಬರಹಗಳಿದ್ದು ಇವುಗಳ ಮಾಹಿತಿ ಪ್ರಯತ್ನ ಪಟ್ಟರೂ
ತಿಳಿಯ ಲಾಗಲಿಲ್ಲ. ಕನ್ನಡ ವಿಶ್ವಕೋಶ, ಕನ್ನಡ ವಿಷಯ ವಿಶ್ವಕೋಶಗಳಿಗೆ ಬರೆದ
ಬರಹಗಳ ವಿವರಗಳನ್ನು ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಇನ್ನೂ ಕೆಲವು ಬರಹಗಳು ನಮ್ಮ ಗಮನಕ್ಕೆ
ಬಾರದೇ ಇರುವುದರಿಂದ, ಅವು ಪ್ರಕಟವಾದ ಆಕರಗಳು ಯಾವುವು ಎಂಬ
ಮಾಹಿತಿಯೂ ಇಲ್ಲದೇ ಇರುವುದರಿಂದ ಪೂರ್ಣಪ್ರಮಾಣದ ಸೂಚಿಯನ್ನು ರೂಪಿಸಲು ಸಾಧ್ಯವಾಗದೇ ಇದೆ.
ಇದಕ್ಕಾಗಿ ನಮಗೆ ವಿಷಾದವಿದೆ. ನಮ್ಮ ಬರಹದಲ್ಲಿಯೇ ಕೆಲವು ಅರೆಕೊರೆಗಳೂ ಇರಬಹುದು. ಬಲ್ಲವರು
ಇವುಗಳನ್ನು ನೇರ್ಪಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಮುಂದುವರಿಒದಿದೆ.
ಮುಂದುವರಿಒದಿದೆ.
No comments:
Post a Comment