Wednesday, July 31, 2013

ಫಾವಗಡ ತಾಲೂಕಿನ ಪ್ರಾಗೈತಿಹಾಸಿಕ ನೆಲೆಗಳು

 ¥ÁªÀUÀqÀ vÁ®ÆQ£À°è EwÛZÉUÉ zÉÆgÉvÀ PÉ®ªÀÅ ¥ÁæUÉÊwºÁ¹PÀ £É¯ÉUÀ¼ÀÄ
   v

ತುಮಕೂರು ಜಿಲ್ಲೆಯಲ್ಲಿ ಆನಾದಿ ಕಾಲದಿಂದಲೂ ಮಾನವನ ಚಟುವಟಿಕೆಗಳು ನಡೆಯುತ್ತಿರುವುದನ್ನು ಇಲ್ಲಿ ದೊರೆತಿರುವ ಅವಶೇಷಗಳಿಂದ ಗುರುತಿಸಬಹುದಾಗಿದೆ. ಈ ಪರಿಸರದಲ್ಲಿ ಪ್ರಾಗಿತಿಹಾಸ ಮಾನವನ ವಿಕಾಸವನ್ನು ತಿಳಿಯಲು ಆತ ಬಳಿಸಿ ಬಿಟ್ಟುಹೊದ ಭೌತಿಕ ವಸ್ತುಗಳನ್ನು ವಿಶ್ಲೇಷಿಸಿದಾಗ ಮಾತ್ರ ಆಕಾಲದ ಆದಿಮ ಸಂಸ್ಕೃತಿ ಹೇಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.
   ಪಾವಗಡ ತಾಲೂಕಿನಲ್ಲಿ ಈಗಾಗಲೇ ಕೆಲವು ಪ್ರಾಗಿತಿಹಾಸ ನೆಲೆಗಳನ್ನು ಪತ್ತೆಮಾಡಲಾಗಿದ್ದು, ಪ್ರಮುಖವಾಗಿ ಯಲ್ಲಪ್ಪನಾಯಕನಹಳ್ಳಿಯಲ್ಲಿ ಆದಿ ಹಳೆಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮಶಿಲಾಯುಗ, ಬೂದಿಬೆಟ್ಟದಲ್ಲಿ ನವಶಿಲಾಯುಗ, ಕಣಿಕಲಬಂಡ್ಡೆಯಲ್ಲಿ ಬೃಹತ್‌ಶಿಲಾಯುಗ, ಪಾವಗಡದಲ್ಲಿ ಇತಿಹಾಸ ಆರಂಭ ಕಾಲವೆಂದು ಹಲವು ನೆಲೆಗಳನ್ನು ಪತ್ತೆಮಾಡಲಾಗಿದೆ. ನಾನು ಕ್ಷೇತ್ರಕಾರ್ಯ ಕೈಗೊಂಡಾಗ ಕನ್ನಮೇಡಿ ಮತ್ತು ನಲಿಗಾನಹಳ್ಳಿಯಲ್ಲಿ ಪ್ರಾಗಿತಿಹಾಸದ ಕುರುಹುಗಳು ಕಂಡುಬಂದಿವೆ.
ಕನ್ನಮೇಡಿ
   ಇದು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಹಿಂದೆ ಈ ಗ್ರಾಮದಲ್ಲಿ ಗೊಲ್ಲ ಜನಾಂಗವು ಚಿನ್ನದ ಹಿಡಿಕೆಯುಳ್ಳ ನೊಗದೊಂದಿಗೆ ಮಡಿಕೆ ಹೊಡೆಯುತ್ತಿದ್ದರಂತೆ, ಒಮ್ಮೆ ಇವರಿಗೆ ದಣಿವಾದಾಗ ವಿಶ್ರಾಂತಿ ಪಡೆಯಲು ಹೋದಾಗ ಪಾಲುಕುಂಟೆ ಕಳ್ಳರು ಚಿನ್ನದ ಹಿಡಿಕೆಯುಳ್ಳ ಮಡಿಕೆಯನ್ನು ಕನ್ನ ಮಾಡಿದ್ದರಿಂದ, ಕನ್ನವಾದ ಮೇಡಿ ಕನ್ನಮೇಡಿ ಎಂದಾಗಿದೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದಿಗೂ ಇಲ್ಲಿಯವರ ಮೂಲ ಕಸುಬಾಗಿರುವ ಕೃಷಿ ಮತ್ತು ಪಶುಪಾಲನೆಯು ಪ್ರಾಗಿತಿಹಾಸ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿತ್ತೆಂದು, ಈ ಗ್ರಾಮದ ವೆಂಕಾವದೂತ ಗುಹೆಯ ಬಳಿಯಿರುವ ನವಶಿಲಾಯುಗ ಮತ್ತು ಬೃಹತ್‌ಶಿಲಾಯುಗದ ಕೆಂಪು ಮತ್ತು ಬಿಳಿ ಬಣ್ಣದ ಗೀರುಚಿತ್ರಗಳಿಂದ ತಿಳಿಯಬಹುದಾಗಿದೆ. ಈ ಗೀರುಚಿತ್ರಗಳು ೪.೯೦ಮೀ. ಉದ್ದ ೨.೫೦ಮೀ. ಅಗಲವಿರುವ ಬೃಹತ್ ಹೆಬ್ಬಂಡೆಯಲ್ಲಿ ಹರಡಿಕೊಂಡಿವೆ. ಇದರಲ್ಲಿ ಗೂಳಿ, ಜಿಂಕೆ, ಕಾಡುಹಂದಿ, ಮನುಷ್ಯ ಕೋಲು ಹಿಡಿದು ನಿಂತಿರುವ, ಕೋತಿ ಚೆಳು, ನೃತ್ಯ ಮಾಡುತ್ತಿರುವ ವ್ಯಕ್ತಿ ಮೊದಲಾದ ಚಿತ್ರಗಳಿವೆ. ಹಾಗೆಯೇ ಈ ಗುಹೆಯ ಬಳಿ ಬೇಡರ ಕಣ್ಣಪ್ಪ ಮತ್ತು ದುರ್ಗಮ್ಮ ದೇವಾಲಯಗಳಿದ್ದು, ಇವುಗಳಲ್ಲಿ ನವಶಿಲಾಯುಗದ ಕೈಗೊಡಲಿಗಳನ್ನು ಪೂಜೆಗೈಯ್ಯುತ್ತಿರುವುದು ಇಂದಿಗೂ ಪ್ರಾಗಿತಿಹಾಸ ಕಾಲದ ಸಂಸ್ಕೃತಿಯ ಜೀವಂತಿಕೆಯನ್ನು ತೋರ್ಪಡಿಸುತ್ತದೆ. ಈ ಗುಹೆಯ ಪಶ್ಚಿಮಕ್ಕೆ ನವಶಿಲಾಯುಗದ ಬೂದಿ ದಿನ್ನೆಯಿದ್ದು, ಇಲ್ಲಿ ನವಶಿಲಾಯುಗದ ಬೂದು, ಚಾಕೊಲೇಟ್ ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕೈಗೊಡಲಿ, ಕವಣೆಕಲ್ಲು ಮೊದಲಾದ ಉಪಕರಣಗಳು, ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಯ ಅವಶೇಷಗಳಿವೆ.
ನಲಿಗಾನಹಳ್ಳಿ
   ಈ ಗ್ರಾಮ ತಾಲೂಕು ಕೇಂದ್ರದಿಂದ ಪೂರ್ವಕ್ಕೆ ೬ ಕಿ.ಮೀ. ದೂರದಲ್ಲಿದ್ದು. ಹಿಂದೆ ಈ ಗ್ರಾಮವನ್ನು ಸಂಕಾಪುರವೆಂದು ಕರೆಯುತ್ತಿದ್ದರಂತೆ. ಗ್ರಾಮದ ಈಶನ್ಯಕ್ಕೆ ಭತ್ತದಗುಂಡು ಎಂಬ ಹೆಬ್ಬಂಡೆಯಲ್ಲಿ ನವಶಿಲಾಯುಗದ ಕೈಗೊಡಲಿ, ಕವಣೆಕಲ್ಲು, ಪೌಂಡರ‍್ಸ್, ಸ್ಕ್ರಾಪರ್ ಮೊದಲಾದ ಉಪಕರಣಗಳು ಹಾಗೂ ಬೃಹತ್‌ಶಿಲಾಯುಗದ ಸ್ವಸ್ತಿಕ್ (೨.೭೦ಮೀ.=೨.೦೫ಮೀ.ವ್ಯಾಸ), ವೃತ್ತಾಕಾರ(೬ಮೀ.=೬ಮೀ.ವ್ಯಾಸ), ಚಪ್ಪಟೆಯಾಕಾರದ ಕಲ್ಲುಬಂಡೆ(೪ಮೀ.=೪ಮೀ.ವ್ಯಾಸ), ನಿಲುವುಗಲ್ಲು (೪ಮೀ.ಉದ್ದ) ಎಂಬ ನಾಲ್ಕು ಮಾದರಿಯ ಸಮಾಧಿಗಳಿರುವುದು ವಿಶೇಷವಗಿದ್ದು. ಪಾವಗಡ ತಾಲೂಕಿನಲ್ಲಿ ಈ ಮಾದರಿಯ ಸಮಾಧಿಗಳು ಮತ್ತೆಲ್ಲೂ ಕಂಡುಬರದಿರುವುದು ಈ ಪ್ರದೇಶದಲ್ಲಿನ ಬೃಹತ್‌ಶಿಲಾಯುಗದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರ್ಪಡಿಸುತ್ತದೆ. ಈ ಸಮಾಧಿಗಳ ಬಳಿ ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಹಾಗೂ ಆರಂಭ ಇತಿಹಾಸ ಕಾಲದ ನಯಗೊಳಿಸಿದ ಕೆಂಪು ಬಣ್ಣದ ಮೃತ್‌ಪಾತ್ರೆಗಳ ಅವಶೇಷಗಳು ದೊರೆಯುತ್ತವೆ.

    ಕನ್ನಮೇಡಿ ನವಶಿಲಾಯುಗದ ಕೈಗೊಡಲಿ

                          ಕನ್ನಮೇಡಿಗೀರುಚಿತ್ರಗಳು  

(೪ಮೀ.=೪ಮೀ. ವ್ಯಾಸ)  

ನಲಿಗಾನಹಳ್ಳಿ ಚಪ್ಪಟೆಯಾಕಾರದ ಕಲ್ಲುಬಂಡೆ ಸಮಾಧಿ

ರವೀಶ್ ಜಿ.ಎನ್.
ಗುಂಡಾರ‍್ಲಹಳ್ಳಿ, ಬ್ಯಾಡನೂರು ( ಪೊಸ್ಟ್.),
ಪಾವಗಡ (ತಾಲೂಕು),
ತುಮಕೂರು (ಜಿಲ್ಲೆ) - ೬೫೧೨೦೨
ಪೋನ್ ನಂಬರ್ : ೯೭೪೧೯೪೧೭೧೪

ಇಮೇಲ್: ravishsurya@gmail.com

No comments:

Post a Comment