ಶ್ರದ್ದಾಕೇಂದ್ರ ಸವಣೂರಿನ ಚಂದ್ರನಾಥ ಬಸದಿ
*ಪ್ರವೀಣ್ ಚೆನ್ನಾವರ
ದ.ಕ.ಜಿಲ್ಲೆಯು ಹಲವಾರು ಜೈನ ಬಸದಿಗಳ ತಾಣವಾಗಿದೆ.ಈ ಬಸದಿಗಳ ವಾಸ್ತುಶಿಲ್ಪಗಳ,ಕಟ್ಟಡ ವಿನ್ಯಾಸ ಅವರ್ಣನೀಯ.ಇಂತಹ ಬಸದಿಗಳಲ್ಲಿ ಶ್ರೇಷ್ಠ ಬಸದಿ ಪುತ್ತೂರು
ತಾಲೂಕಿನ ಸವಣೂರಿನ ಪುಷ್ಪಪುರದಲ್ಲಿದೆ.ಜೈನರ ಎಂಟನೇ ತೀರ್ಥಂಕರ ಚಂದ್ರನಾಥ ಸ್ವಾಮಿಯಿಂದ ಸ್ಥಾಪನೆಯಾಗಿದೆಯೆನ್ನಲಾಗಿರುವ
ಈ ಬಸದಿಗೆ ಸುಮಾರು ೧೫೦೦ ವರ್ಷಗಳ ಇತಿಹಾಸವಿದೆ.
ಕರ್ನಾಟಕದ ಎಲ್ಲಾ ಬಸದಿಗಳಲ್ಲಿ ಪದ್ಮಾವತಿ ದೇವಿಯೂ
ಉತ್ತರಭಾಗದಲ್ಲಿ ನಲೆನಿಂತಿದ್ದರೆ ಇಲ್ಲಿನ
ಬಸದಿಯಲ್ಲಿ ಪದ್ಮಾವತಿ ದೇ ವಿಯು ಪೂರ್ವಭಾಗದಲ್ಲಿನಿಂತಿದ್ದಾರೆ.ಭಕ್ತರು ದೇವಿಗೆ ಹೂವಿನ ಪೂಜೆಯ ಮೂಲಕ
ತಮ್ಮ ಬೇಡಿಕೆಯಿಡುತ್ತಾರೆ.ಪೂಜೆಯ ವೇಳೆಯಲ್ಲಿ ದೇವಿಯ ಬಲಭಾಗದಿಂದ ಹೂವು ಬಿದ್ದರೆ ತಮ್ಮ ಬೇಡಿಕೆ ಈಡೇರುತ್ತದೆ
ಎಂಬುದು ಭಕ್ತರ ನಂಬಿಕೆ..ಪುತ್ತೂರು ತಾಲೂಕಿನ ಸವಣೂರು ಹಾಗೂ ಉಡುಪಿ ತಾಲೂಕಿನ ಅಲೆವೂರು ಜೈನ ಶ್ರಾವಿಕರಿಂದ
ತುಂಬಿತುಳುಕಿದ ಊರೆಂದು ಹೇಳುತ್ತಾರೆ.
sssಸವಣೂರಿನ ಜಿನಮಂದಿರದ ಪಶ್ಚಿಮಕ್ಕೆ ಒಂದು ಕಿ.ಮೀ ದೂರವಿರುವ ಮಠವೆಂಬ ಸ್ಥಳದ
ತನಕ ಪುದ್ದೊಟ್ಟು ಎಂಬ ಹೆಸರಿನ ಪೇಟೆ ಇದ್ದು ಇಲ್ಲಿ ನೂರಾರು ಮನೆಗಳಿದ್ದವು ಎನ್ನುತ್ತಾರೆ ಎಂಬುದಕ್ಕೆ
ಪ್ರತೀಕವಾಗಿ ನೂರೊಂದು ಬಾವಿಗಳ ಕುರುಹುಗಳು ಸುಮಾರು ಹಿಂದಿನ ತನಕ ಕಾಣುತ್ತಿದ್ದವು.ಆದರಿಂದ ಹಿಂದೆ
ಜೈನ ಶ್ರಾವಣರು ಇಲ್ಲಿ ನೆಲೆಸಿದ ಕಾರಣ ಶ್ರವಣೂರು (ಶ್ರವಣರ ಊರು) ಮುಂದೆ ಸವಣೂರು ಎಂಬುದು ಆಗಿರಬೇಕು.
ಮಕ್ಕಳ ಬಸದಿ
ಮುಖ್ಯಬಸದಿಯ ಎದುರು ಗುಡ್ಡದಲ್ಲಿ ಮಕ್ಕಳ ಬಸದಿಯಿದ್ದು ಇದು ಕರಿಕಲ್ಲಿನಿಂದ ನಿರ್ಮಿಸಿದ್ದಾಗಿದೆ.ಇದನ್ನು
ಮಕ್ಕಳೇ ಸೇರಿ ರಚಿಸದ್ದಾಗಿದೆ ಎಂದು ಹೇಳಲಾಗಿದೆ.ಇಲ್ಲಿ ಪಾರ್ಶ್ವನಾಥ ಸ್ವಾಮಿಯಿದ್ದು ಅದರ ಎಡಬಾಗದಲ್ಲಿ
ಧgಣೇಂದ್ರ , ಬಲಭಾಗದಲ್ಲಿ ಪದ್ಮಾವತಿಯು
ಯಕ್ಷಯಕ್ಷಿಯಾಗಿದ್ದಾರೆ. ಮಕ್ಕಳ ಬಸದಿಯ ಹಿಂಬದಿಯ ಭಾಗದಲ್ಲಿ ಜಿನೈಕ್ಯರಾದ ಜೈನಮುನಿಗಳ ಸ್ತೂಪಗಳು
ಕಾಣ ಸಿಗುತ್ತಿದೆ. ಶ್ರೀಕ್ಷೇತ್ರ ಹೊಂಬುಜ ಮಠದ ಪೀಠ ಅಧಿಕಾರಕ್ಕೊಳಪಟ್ಟಿರುವ ಈ ಜಿನಮಂದಿರ ಈ ಭಾಗದ
ಭಕ್ತರ ಶ್ರದ್ದಾಕೇಂದ್ರವಾಗಿದೆ.
ಹದಿನಾರು ಎಸಳಿನ ಕೇಪುಳ ಹೂವು
ಇಲ್ಲಿನ ಇನ್ನೊಂದು ವಿಶೇಷತೆ ೧೬ ಎಸಳಿನ ಕೇಪಲ ಹೂ ನಿತ್ಯ ಅರಳಿ ಶೋಭಿಸುತ್ತಿರುವುದು.ಈ ಕ್ಷೇತ್ರದಲ್ಲಿ
ಪದ್ಮಾವತಿ ಮಾತೆಯ ಕೃಪಾಕಟಾಕ್ಷ ಅತಿಶಯವಾಗಿದ್ದು ಈ ಕ್ಷೇತ್ರ ಬಡಗು ದಿಕ್ಕಿಗೆ ಸಂಪೂರ್ಣವಾಗಿ ತೆರೆದುಕೊಂಡಿದೆ.ಇಲ್ಲಿಗೆ
ಪೂಬೆಟ್ಟು ಅಥವಾ ಪುಷ್ಪಪುರವೆಂದು ಹೆಸರು ಪಡೆಯಲು ಇಲ್ಲಿರುವ ಹದಿನಾರು ಎಸಳಿನ ಕೇಪಲ ಹೂವು ನಿತ್ಯ
ಅರಳಿ ಶೋಭಿಸುತ್ತಿರುವುದು ಕೂಡಾ ಕಾರಣವಾಗಿರಬಹುದು ಎನ್ನುತ್ತಾರೆ.
ಇಲ್ಲಿ ಪಾಶನಾಥ ಸ್ವಾಮಿಗೆ ಕ್ಷೀರಾಭಿಷೇಕ,ಪದ್ಮಾವತಿ ಮಾತೆಗೆ
ಕುಂಕುಮಾರ್ಚನೆ,ವರಹ ಪೂಜೆ,ನಿತ್ಯ ಪೂಜೆ ನಡೆಯುತ್ತದೆ.
ವಿಳಾಸ:ಪ್ರವೀಣ್ ಕುಮಾರ್
ಚೆನ್ನಾವರ ಮನೆ,
ಪಾಲ್ತಾಡಿ ಅಂಚೆ & ಗ್ರಾಮ
ಪುತ್ತೂರು.ದ.ಕ.೫೭೪೨೦
ಮೊ:೯೯೦೨೪೫೯೫೪೩
No comments:
Post a Comment