ಎಚ್.ಶೇಷಗಿರಿರಾವ್ |
ಪ್ರೊಫೆಸರ್ ಗಿರೀಶ್ ಶ್ರೀಧರ ದೀಕ್ಷಿತರು:
|
||||
ಸನಾತನ ಭಾರತೀಯ ಸಂಪ್ರದಾಯದ ಪ್ರಕಾರ " ಗುರುದೇವೋ
ಮಹೇಶ್ವರಃ"" ಅಂದರೆ ಗುರುವೇ ದೇವರು. ಪುರಾತನ ಕಾಲದಲ್ಲಿ ಗುರು ಎಂದರೆ ಅರಿವು, ಕಲಿಕೆ ಮತ್ತು ವಿದ್ವತ್ತಿನ ಪ್ರತಿರೂಪ. ಆದರೆ ಇಂಥಹ ಗುರುತ್ವವನ್ನು ಪಡೆಯುವುದು
ಸಾಮಾನ್ಯ ಸಾಧನೆ ಅಲ್ಲ. ಅದನ್ನು ದೀರ್ಘಕಾಲದ ಅಧ್ಯಯನ,ತಪ ,ಸಂಯಮ ಮತ್ತು ಕಠಿನ ಪರಿಶ್ರಮದಿಂದ ಪಡೆಯಲು ಸಾಧ್ಯ. ಈ ರೀತಿಯ ಗುರುಗಳು
ನಿಸ್ವಾರ್ಥದಿಂದ ತಮ್ಮ ಜ್ಞಾನವನ್ನು ಅರ್ಹರಾದ ಎಲ್ಲರಿಗೂ ಧಾರೆ ಎರೆಯುವರು. ಇಂಥಹ ಗುರುಗಳ
ಮಾರ್ಗದರ್ಶನವೇ ದೊಡ್ಡ ಸೌಭಾಗ್ಯ. ನಾನು ನನ್ನ ಕುಟುಂಬ, ಎಂದು
ದುಡಿದು ಹಣ್ಣಾಗುವವರು ಬಹಳ. ಏನೇ ಕೆಲಸಮಾಡಿದರೂ ನನಗೇನು ಸಿಗುವುದು ಎಂದು ಕೇಳುವವರು ಹೆಚ್ಚು.
ಅರ್ಥಪೂರ್ಣ ಬದುಕನ್ನು ವ್ಯರ್ಥಮಾಡಿಕೊಳ್ಳುವವರು ಬಹಳ. ನನ್ನಿಂದ ಅನ್ಯರಿಗೆ ಏನು ಅನುಕೂಲ
ಮಾಡಿಕೊಡಲಿ ಎಂದು ಸದಾ ತುಡಿಯುವವರು ಕಡಿಮೆ. ಆಧುನಿಕ ಕಾಲದಲ್ಲಿ ಇಂಥಹ ಗುರುಗಳು ವಿರಳಾತಿ
ವಿರಳ. ಅಂಥಹ ವಿರಳರಲ್ಲಿ ಪ್ರಮುಖರು ಪ್ರೊ. ಜಿ ಎಸ್. ದೀಕ್ಷಿತ್.
ಆಗ ಶಿಕ್ಷಣ ಸೌಲಭ್ಯ ಮಿತವಾಗಿದ್ದ ಸಮಯ. ಆಗಲ್ಲೂ ಶೈಕ್ಷಣಿಕವಾಗಿ
ಉತ್ತಮ ಸಾಧನೆ ಮಾಡಿದರು. ಆದರೆ ಉದ್ಯೋಗ ಅವಕಾಶಗಳೂ ವಿರಳ. ಕೆಲಸಕ್ಕಾಗಿ ಊರಿಂದ ಊರಿಗೆ ಅಲೆದಾಟ
ಮೊದಲಾಯಿತು. ಮೈಸೂರು ರಾಜ್ಯದಲ್ಲಿ ಅವಕಾಶವೇ ಸಿಕ್ಕಲಿಲ್ಲ . ಆಗ ಮದ್ರಾಸ್ ಪ್ರಾಂತ್ಯದ
ಭಾಗವಾಗಿದ್ದ ಈಗಿನ ಒರಿಸ್ಸಾದ ಗಂಜಾಂ ಕಾಲೇಜಿನಲ್ಲಿ ಕೆಲಸ ದೊರೆಯಿತು. ಪಾರ್ಲ ಕಿಮೇದಿ ಆಗ ಒಂದು
ಚಿಕ್ಕ ಸಂಸ್ಥಾನ. ಇವರ ಆಕರ್ಷಕ ವ್ಯಕ್ತಿತ್ವ ಮತ್ತು ಕ್ರೀಡಾಸಕ್ತಿಯಯ ಫಲವಾಗಿ ಅಲ್ಲಿನ ರಾಜ
ಕುಟುಂದೊಡನೆ ಗೆಳೆತನ ಬೆಳೆಯಿತು. ಇವರು ಉತ್ತಮ ಟೆನ್ನಿಸ್ ಪಟುವಾಗಿದ್ದರು .ಅದರಿಂದಾಗಿ ರಾಜ
ಕುಮಾರನಿಗೆ ಹತ್ತಿರದವರಾದರು. ದಿನವೂ ಅವರೊಡನೆ ಟೆನ್ನಿಸ್ಆಡಲು ಅರಸರು ದೀಕ್ಷಿತರು ಕೆಲಸ
ಮುಗಿಸಿ ಕಾಲೇಜಿನಿಂದ ಬರುವುದನ್ನೇ ಕಾಯುತಿದ್ದರು. ಅದರಿಂದ ಅವರ ಜೀವನ ಶೈಲಿಯೇ ಬದಲಾಯಿತು.
ಉಡುಗೆತೊಡುಗೆಯಲ್ಲಿ ಅಚ್ಚುಕಟ್ಟುತನ, ಸಮಯಪ್ರಜ್ಞೆ
ಮೈ ಗೂಡಿತು. ಮಾತು ಸ್ಪಷ್ಟ, ನಿಖರ ಮತ್ತು ಗಾಂಭೀರ್ಯದಿಂದ ಕೂಡಿತು.
ಅವರ ಅರಸರೊಡಗಿನ ಆತ್ಮೀಯತೆಯ ಫಲವಾಗಿ ಅಲ್ಲಿ ನಡೆದ ಇಂಡಿಯನ್ ಹಿಸ್ಟರಿ ೨ನೇ ಸಮ್ಮೇಳನದಲ್ಲಿ,
ಸಕ್ರಿಯವಾಗಿ ಭಾಗವಹಿಸುವ ಅವಕಾಶ ಸಿಕ್ಕಿತು." ಪೂರ್ವ ಗಂಗರ
ರಾಜಧಾನಿ" ಪ್ರಬಂಧ ಮಂಡನೆಗೆ ಅವಕಾಶ ದೊರೆಯಿತು. ಜೀವನ ಸುಗಮವಾಗಿ ಸಾಗುತಿತ್ತು,
ಹಗಲಿನಲ್ಲಿ ಕಾಲೇಜು ಕೆಲಸ ಸಂಜೆಯ ನಂತರ ಟೆನ್ನಿಸ್ಆಟ. ಜೀವನದಲ್ಲಿ
ಯಾವುದಕ್ಕೂ ಕೊರತೆ ಇರಲಿಲ್ಲ. ಬಾಳು ಸುಗಮವಾಗಿ ಸಾಗುತಿತ್ತು.ಆದರೆ ತಾಯಿ ನೆಲದ ಸೆಳೆತ
ಅಧಿಕವಾಯಿತು. ಇದ್ದ ಕೆಲಸವನ್ನು ಬಿಟ್ಟು ೧೯೩೯ ರಲ್ಲಿ ಮೈಸೂರಿಗೆ ವಾಪಸ್ಸು. ಬಂದರು. ಮತ್ತೆ
ಕೆಲಸದ ಬೇಟೆ ಪ್ರಾರಂಭಿಸಿದರು. ಮೈಸೂರು ಪ್ರಾಚ್ಯವಸ್ತು ಇಲಾಖೆಯಲ್ಲಿ ತಾತ್ಕಾಲಿಕ ಉದ್ಯೋಗ
ದೊರೆಯಿತು. ಖ್ಯಾತ ಪುರಾತತ್ತ್ವ ತಜ್ಞರಾದ ಎಂ. ಎಚ್. ಕೃಷ್ಣ ರ ಮಾರ್ಗದರ್ಶನದಲ್ಲಿ ಉತ್ಖನನದ
ಕೆಲಸದಲ್ಲಿ ತೊಡಗಿದರು . ಚಿತ್ರದುರ್ಗ ಜಿಲ್ಲೆಯ ಬ್ರಹ್ಮ ಗಿರಿ ಮತ್ತು ಚಂದ್ರವಳ್ಳಿಯ ಉತ್ಖನನದಲ್ಲಿ
ನೆರವು ನೀಡಿದರು. ಪ್ರಾಚೀನ ಶಿಲಾಯುಗದ ಅವಶೇಷಗಳ ಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಂಡರು.
ಆದರೆ ಕಡಿಮೆ ಆದಾಯದಲ್ಲಿ ಜೀವನ ನಡೆಯುವುದ ಅಷ್ಟು
ಸುಲಭವಾಗಿರಲಿಲ್ಲ. ಅದಕ್ಕೆ ಪೂರ್ಣಾವಧಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಲೇ ಇದ್ದರು. ಮತ್ತೆ
ಮಹಾರಾಷ್ಟ್ರದ ಸಾಂಗ್ಲಿಯ,ಕಾಲೇಜಿನಲ್ಲಿ ಅಧ್ಯಾಪಕ ಉದ್ಯೋಗ ದೊರೆಯಿತು.
ಅಲ್ಲಿ ಶ್ರೀ ಗೋಕಾಕ. ರಂಶ್ರೀ.ಮುಗುಳಿ ,ಡಾ. ಎಸ್ ಆರ್.ಶರ್ಮರ ಜೊತೆ
ಕೆಲಸ ಮಾಡುವ ಅವಕಾಶ ದೊರೆಯಿತು. ವಿಲ್ಲಿಂಗ್ಟನ್ ಕಾಲೇಜಿನಲ್ಲಿ ೧೬ವರ್ಷ ನಿರಂತರ ಸೇವೆಯ ನಂತರ
ಫರ್ಗ್ಯೂಸನ್ ಕಾಲೇಜಿಗೆ ವರ್ಗವಾಯಿತು. ಪೂನಾ ವಿಶ್ವ ವಿದ್ಯಾಲಯ.೧೯೪೯ ರಲ್ಲಿ ಸ್ಥಾಪನೆಯಾದಾಗ
ಇವರ ಪಾಲಿಗೆ ಇತಿಹಾಸ ವಿಭಾಗ ರೂಪಿಸುವ ಹೊಣೆ ಬಂದಿತು. ಇವರೇ ಸ್ನಾತಕೋತ್ತರ ತರಗತಿಗಳ ಪಠ್ಯ
ಕ್ರಮದ ರಚನೆ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಬೋಧನೆಯ ಕೆಲಸವನ್ನೂ ಮಾಡಿದರು.ಅಲ್ಲಿ ಆರು
ವರ್ಷ ಕಾರ್ಯನಿರ್ವಹಿಸಿದರು.
೧೯೫೫ ರಲ್ಲಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪನೆಯಾದಾಗ
ಇತಿಹಾಸ ವಿಭಾಗ ರೂಪಿಸುವಲ್ಲಿ ಡಾ. ಭಾಸ್ಕರಾನಂದ ಸಾಲತ್ತೂರ್ ಅವರಿಗೆ ನೆರವಾಗಲು ಬಂದರು.
ಅಲ್ಲಿಂದಲೇ ಪಿಎಚ್.ಡಿ ಯನ್ನು ಪಡೆದರು .ಧಾರವಾಡದ ಕರ್ನಾಟಕ ಕಾಲೇಜು ವಿಶ್ವ ವಿದ್ಯಾಲಯದ ನೇರ
ಕಕ್ಷೆಯಲ್ಲಿನ ಕಾಲೇಜು. ಸ್ನಾತಕೋತ್ತರ ವಿಭಾಗದಲ್ಲಿ ಕಲಿಸುವ ಪ್ರಾಧ್ಯಾಪಕರೂ ಪದವಿ
ವಿದ್ಯಾರ್ಥಿಗಳಿಗೂ ಕಲಿಸುವುದು ರೂಢಿ. ಅಲ್ಲಿ ಬ್ರಿಟಿಷ್ ಸಂವಿಧಾನದ ಚರಿತ್ರೆ ಆರಿಸಿಕೊಂಡ
ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಹಾಗಾಗಿ ವಿದ್ವಾಂಸರ ನಿಕಟ ಸಂಪರ್ಕ ಅವರಿಗೆ
ದೊರೆಯುತಿತ್ತು. ಕರ್ನಾಟಕ ಕಾಲೇಜಿನಲ್ಲಿ ಕಲಿಯುವ ಪದವಿ ವಿದ್ಯಾರ್ಥಿಗಳಿಗೂ ಡಾ. ಜಿ.ಎಸ್
ದೀಕ್ಷಿತರ ಪಾಠಕೇಳುವ ಭಾಗ್ಯ ದೊರಕುತಿತ್ತು.
ಇವರದು ಆಕರ್ಷಕ ವ್ಯಕ್ತಿತ್ವ. ಮೊದಲೇ ಕ್ರೀಡಾಪಟು ಉತ್ತಮ ದೇಹ
ಧಾರ್ಡ್ಯ. ಉಡುಪು ಸದಾ ಟಿಪ್ಟಾಪ್. ಹೊರಗೆ ಹೊರಟರೆ ಫೂಲ್ ಸೂಟ್. ಸಮಯ ಪ್ರಜ್ಞೆ ಬಹಳ. ಜೇಬಿನಲ್ಲಿನ
ಸರಪಳಿ ಇದ್ದ ಗಡಿಯಾರನ್ನು ತರಗತಿಗೆ ಬಂದೊಡನೆ ಮೇಜಿನ ಮೇಲೆ ಇಟ್ಟು ಠಾಕೋ ಠೀಕ್ ಸಮಯಕ್ಕೆ
ಸರಿಯಾಗಿ ಪಾಠ. ಒಂದು ನಿಮಿಷವೂ ಅಪವ್ಯಯಾಗಕೂಡದು. ವಿಷಯದ ವಿವರವಾದ ವಿಶ್ಲೇಷಣೆ. ಮಧ್ಯಮಧ್ಯ
ತಿಳಿ ಹಾಸ್ಯ. ಹಾಗಾಗಿ ವಿದ್ಯಾರ್ಥಿಗಳ ನೆಚ್ಚಿನ ಗುರುವಾದರು. ಇತಿಹಾಸ ವಿಭಾಗದ ಬೆಳವಣಿಗೆಗೆ
೧೯೭೧ರವರೆಗೆ ಅವರೇ ಕಾರಣರಾದರು. ಸಾಲತ್ತೂರ್ ನಿವೃತ್ತರಾದಾಗ ವಿಭಾಗ ಮುಖ್ಯಸ್ಥರಾಗಿ
ಮುನ್ನೆಡಸಿದರು. ಅವರು ಬರಿ ತರಗತಿಯಲ್ಲಿ ಉಪನ್ಯಾಸ ಮಾಡಿ ಹೋಗುವವರಲ್ಲ. ವಿದ್ಯಾರ್ಥಿಗಳ
ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲ, ಅವರ ವೃತ್ತಿ ಜೀವನ ಮತ್ತು ಅನೇಕರ
ವೈಯುಕ್ತಿಕ ಬದುಕಿನಲ್ಲೂ ಮಾರ್ಗದರ್ಶಕರಾಗಿರುತಿದ್ದರು ಮತ್ತು ದುಃಖದ ಸಮಯದಲ್ಲಿ
ಬಂಡೆಗಲ್ಲಿನಂತೆ ದೃಢವಾದ ಆಸರೆ ಕೊಡುತಿದ್ದರು.ಅವರ ಶಿಷ್ಯ ವಾತ್ಸಲ್ಯ ದೊಡ್ಡದು
ತಮ್ಮಸಂಪರ್ಕಕ್ಕೆ ಬಂದ ಎಲ್ಲ ವಿದ್ಯಾರ್ಥಿಗಳ ಕಷ್ಟ ಸುಖಗಳಲ್ಲಿ ಭಾಗಿಯಾಗುವರು ಮತ್ತು ಅವರ
ಜೀವನದಲ್ಲಿ ನೆಲೆಗೊಳ್ಳಲು ಸಹಾಯ ಹಸ್ತ ಚಾಚುತಿದ್ದರು. ದೀಕ್ಷಿತ್ ಇತಿಹಾಸದ ಪ್ರತಿಭಾನ್ವಿತ
ಪ್ರಾಧ್ಯಾಪಕ ಮತ್ತು ಶ್ರೇಷ್ಠ ಸಂಶೋಧಕರು. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಮಾಡಿ
ಕೈತೊಳೆದುಕೊಳ್ಳವುದು ಅವರ ಜಾಯಮಾನವಲ್ಲ. ಅವರ ಜೀವನದುದ್ದಕ್ಕೂ ಎಲ್ಲೆ ಇರಲಿ ಪತ್ರದ
ಮೂಲಕವಾದರೂ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದ ಹಿರಿಯ ಜೀವ. ಹಿರಿಯ ವಿದ್ವಾಂಸ ಎ.ಕೆ.
ಶಾಸ್ತ್ರಿಗಳು ತಮಗೆ ಸುಮಾರು ೧೦೦ಕ್ಕೂ ಹೆಚ್ಚು ಪತ್ರ ಬರೆದಿರುವರುಎಂದು ತಿಳಿಸಿರುವುರು. ಡಾ.
ಸೂರ್ಯನಾಥ್ ಕಾಮತ್ ಜೀವನದಲ್ಲಿ ನೆಲಗೊಳ್ಳಲು ಕಾರಣ ಕರ್ತರು. ಡಾ.ಜ್ಯೋತ್ಸ್ನಾ ಕಾಮತ್ ಗೆ
ಕೊನೆಯವರೆಗ ಮಾರ್ಗದರ್ಶನ ಮಾಡಿದರು ಅವರ ಮಾರ್ಗದರ್ಶನದಲ್ಲಿ ೧೯ ವಿದ್ಯಾರ್ಥಿಗಳು ಸಂಶೋಧನೆ
ಮಾಡಿ ಪಿಎಚ್.ಡಿ ಪಡೆದಿರುವರು. ಅವರು ಉತ್ತಮ ಸಂಘಟಕರು.ಕರ್ನಾಟಕ ಇತಿಹಾಸ ಅಕಾಡಮಿ ಮತ್ತು
ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅವರ ಕನಸಿನ ಕೂಸುಗಳು.
ಪ್ರೊ.ದೀಕ್ಷಿತರು ಮಧ್ಯಕಾಲೀನ ಇತಿಹಾಸದಲ್ಲಿ ಅಧಿಕಾರಯುತವಾಗಿ
ಮಾತನಾಡ ಬಲ್ಲವರಾಗಿದ್ದರು ಪ್ರೊ. ದೀಕ್ಷಿತರು ಇತಿಹಾಸವನ್ನು ಸಮಗ್ರವಾಗಿ ಒಂದು ಘಟಕವಾಗಿ
ಪರಿಗಣಿಸುತಿದ್ದರು. ಅವರ ಅಮೇರಿಕನ್ಇತಿಹಾಸದ ಮತ್ತು ಕೆಳದಿರಾಜ್ಯಗಳ ಕುರಿತಾದ ಕನ್ನಡದ ಎರಡು
ಕೃತಿಗಳು ಅಧಿಕೃತ ಪಠ್ಯ ಪುಸ್ತಕಗಳೆನ್ನಬಹುದು. ವಿಶ್ವ ರಾಜಕೀಯದಲ್ಲಿ ಅರಬ್ ರಾಷ್ಟ್ರಗಳ ಪಾತ್ರವನ್ನು
ಮನಗಂಡು ತೈಲ ರಾಜಕೀಯ ಮೊದಲಾಗುವ ಮುಂಚೆಯೇ, ಸ್ನಾತಕೋತ್ತರ
ಅಧ್ಯಯನದಲ್ಲಿ ಮಧ್ಯಪ್ರಾಚ್ಯದ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಿದ್ದರು. ಅವರಿಗೆ
ವಿಜಯನಗರದ ಇತಿಹಾಸದಷ್ಟೇ ಚೀನಾ ಮತ್ತು ಜಪಾನುಗಳ ಇತಿಹಾಸವೂ ಕೈವಶವಾಗಿತ್ತು. ೧೯೬೧ರಲ್ಲಿ
ಹೆಚ್ಚಿನ ಅಧ್ಯಯನಕ್ಕೆ ವಿದೇಶ ಪ್ರವಾಸಮಾಡಿದರು. ಫುಲ್ಬ್ರೈಟ್ ವಿದ್ಯಾರ್ಥಿ ವೇತನ ಪಡೆದು
ಅಮೇರಿಕಾಗೆ ಹೋದರು.
ಮಧ್ಯಕಾಲೀನ ಕರ್ನಾಟಕ ಇತಿಹಾಸ,ಬೌಧ್ಧ ಧರ್ಮದ
ಕೊಡುಗೆ, ಆಂಧ್ರ ಅರಸರ ಕೊಡುಗೆ. ಮೈನರ್ ಕಿಂಗ್ಡಮ್ಸ್ ಅಂಡ್ ಮೇಕರ್
ಡೈನಾಸ್ಟೀಸ್-ಕೆಳದಿ- ಭಾರತೀಯ ಇತಿಹಾಸ ಕುರಿತು ೬೦ ಲೇಖನಗಳು ಬರೆದಿರುವರು ಅದರಲ್ಲಿ ೪೬ ಕನ್ನಡ
, ೧೪ ಇಂಗ್ಲಿಷ್ ನಲ್ಲಿವೆ. ೧೨ ವ್ಯಕ್ತಿಚಿತ್ರಗಳನ್ನು ಬರೆದಿರುವರು.
ಶಾಸನ ಅಧ್ಯಯನ-೧೮೭೨ ರಲ್ಲಿ , ಕೊಡೂರು-
ಬೆಳಗಾಂ ಜಿಲ್ಲೆಗಳ ಕನ್ನಡ ಶಾಸನಗಳು ಪ್ರಕಟ-೧೯೭೩-೯೨ ರ ತನಕದ ೧೯೬ ದಾಖಲೆಗಳ ಪ್ರಕಟನೆಗೆ
ಕಾರಣರಾದರು., ಇಂಡಿಯನ್ ಆಂಟಿಕ್ವರಿ ಜರ್ನಲ್ ಗೆ ಸತತ ಬರವಣಿಗೆ
ಮಾಡುತಿದ್ದರು . ಕೆಲವು ಸಮಯ ಅದರ ಸಂಪಾದಕೀಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದರು. ಬಾದಾಮಿ
ಚಾಲುಕ್ಯರ ಇತಿಹಾಸ,ಐಹೊಳೆ ಶಾಸನ, ಮಹಾಕೂಟದ
ಸ್ತಂಭ ಶಾಸನ, ರಾಷ್ಟ್ರಕೂಟ ನಾಣ್ಯ ಮತ್ತು ಸ್ಥಳನಾಮಗಳ ಬಗ್ಗೆ
ಅಧ್ಯಯನ ,ಗಂಭೀರ ಸಂಶೋಧನೆ ಮಾಡಿರುವರು.ಶಿಲಾಹರರು ಕೊಂಕಣ ಮತ್ತು
ಉತ್ತರಕೊಂಕಣಗಳ ಅಧ್ಯಯನ ಮಾಡಿರುವರು. ಲಾವಣಿ ಸಂಗ್ರಹವನ್ನೂ ಮಾಡಿದರು. ಕಿತ್ತೂರು
ಚೆನ್ನಮ್ಮನನ್ನು ಕುರಿತ ೨೯ ಲಾವಣಿಗಳನ್ನು ಭಾಷಾಂತರ ಸಮೇತ ಪ್ರಕಟಿಸಿದರು .
ನಿವೃತ್ತಿಯ ನಂತರ ಮದ್ರಾಸ್, ಬಾಂಬೆ
ಕರ್ನಾಟಕ ವಿಶ್ವ ವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರ ಸೇವೆ
ವಿದೇಶದಲ್ಲೂ ಸಂದಿತು. ಅಮೆರಿಕಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ಮತ್ತು ಕೆನಡಾದ ಟೊರೆಂಟೊ
ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಮಾಡಿದರು.
ಕೃಷ್ಣ ದೇವರಾಯ ಅವರ ಮೆಚ್ಚಿನ ಅರಸ. ಅವನನ್ನು ಕುರಿತ ಕನ್ನಡದಲ್ಲಿ
ಮಾನೊಗ್ರಾಫ್ ರಚಿಸಿದರು -ಅದು ಕನ್ನಡದಲ್ಲೂ ಮಾನೊಗ್ರಾಫ್ ಬರೆದಿರುವರು..್
ಅವರ ಪ್ರಮುಖ ಕೃತಿಗಳಲ್ಲಿ ಕೆಲವು :
1.‘Local self-government in medieval Karnataka'.
1964, Karnatak University, Dharwar.
2.‘Tank irrigation in Karnataka: a historical survey', (with G.R. Kuppuswamy and S.K. Mohan), 1993, Gandhi Sahitya Sangha, Bangalore. 3.‘Early Vijayanagara: Studies in its History and Culture': Proceedings of S. Srikantayya Centenary Seminar, (with others) B.M.S. Memorial Foundation, Bangalore. 4.‘Studies in Keladi History, Seminar papers' edited by Giri. S. Dikshit), 1981, Mythic Society, Bangalore.
ಮಡದಿ ತಾರಾ ಮತ್ತು ಅವರದು ಇಬ್ಬರು ಹೆಣ್ಣುಮಕ್ಕಳಿಂದ ಕೂಡಿದ ಚಿಕ್ಕ
ಮತ್ತು ಚೊಕ್ಕ ಸಂಸಾರ. ದೀಕ್ಷಿತ್ ಇಂದಿನ ಮತ್ತು ಮುಂದಿನ ಜನಾಂಗ ಸೇರಿಸುವ ಕೊಂಡಿಯ ಕಾರ್ಯ
ನಿರ್ವಹಿಸಿದರು. ಅವರು 2004ಲ್ಲಿ ಇತಿಹಾಸ ಲೋಕ ಸೇರಿದರು.ತಮ್ಮ ಹಲವಾರು ವಿದ್ವಾಂಸರಾದ
ಶಿಷ್ಯರ ಮನಸ್ಸಿನಲ್ಲಿ ಈಗಲೂ ನೆಲೆ ನಿಂತಿರುವರು.
|
No comments:
Post a Comment