ವಿಶೇಷ ಸೂಚನೆ.-ಇತಿಹಾಸವೆಂದರೆ ಕಾಲಗರ್ಭದಲ್ಲಿ ಅಡಗಿರುವ ಮಾಹಿತಿ. ಅದರ ಪರಿಚಯ ಶಾಸನ , ಸ್ಮಾರಕ ,ನಾಣ್ಯ, ಮಡಿಕೆ ಕುಡಿಕೆ, ಮಣ್ಣಿನಫಲಕ, ಚಿತ್ರ ಮತ್ತು ಹಸ್ತಪ್ರತಿಗಳಮೂಲಕ ಸಾಧ್ಯ. ಇತಿಹಾಸಕ್ಕೆ ಕಾಲದೇಶದ ಎಲ್ಲೆ ಕಟ್ಟು ಇಲ್ಲ. ಪುರಾತನ ನಾಗರೀಕತೆಗಳ ಪರಿಚಯವನ್ನು ಅಲ್ಲಿನ ಲಿಪಿಗಳ ಮೂಲಕ ಅರಿಯುವ ಕಿರು ಪ್ರಯತ್ನ ಮಾಡಿದೆ.ಇದರಲ್ಲಿ ಸಂಶೋಧನೆ ಎನ್ನುವ ಮಾತೇ ಇಲ್ಲ. ಅಂತರ್ ಜಾಲದಿಂದ ಪಡೆದ ಮಾಹಿತಿಯನ್ನು ಸಂಗ್ರಹ ಮಾಡಿ ಅದನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಿರು ಪ್ರಯತ್ನ ಇದು.ಇದರಲ್ಲಿ ಯಾವುದೂ ಸ್ವಂತದ್ದು ಇಲ್ಲ.ಎಲ್ಲ ಹಲವು ಮೂಲಗಳಿಂದ ಪಡೆದಿದೆ. ದೋಷಗಳುಇದ್ದರೆ ಮಾತ್ರ ಅವು ಲೇಖಕನದು. ಪ್ರಾಜ್ಞರು ತಿದ್ದಿದರೆ ಸ್ವಾಗತ.ವಿಷಯ ಮತ್ತು ಚಿತ್ರಗಳು ಅನೇಕ ಅಂತರ್‌ಜಾಲದಲ್ಲಿ ಬರೆದ ಲೇಖಕರಿಂದ ಪಡೆದಿದೆ. ಅವರಿಗೆಲ್ಲ ಋಣಿ.ಕರ್ನಾಟಕ ಇತಿಹಾಸ ಅಕಾದೆಮಿಯ ಅಧ್ಯಕ್ಷ ವಿದ್ವಾಂಸ ಡಾ. ದೇವರ ಕೊಂಡಾರೆಡ್ಡಿಯವರು ಉತ್ತೇಜನದಿಂದ ಇದು ಸಾಧ್ಯವಾಗಿದೆ. ಅವರಿಗೆ ನಮನ.ಇದರ ಹಿಂದಿನ ಸ್ಪೂರ್ತಿಶಾಸನ ತಜ್ಞ ಡಾ. ಪಿ.ವಿ.ಕೃಷ್ಣ ಮೂರ್ತಿಯವರು. ಅವರಿಗೆ ವಂದನೆಗಳು- --- ಎಚ್...ಶೇಷಗಿರಿರಾವ್
ಈಜಿಪ್ಟಿನ ಪವಿತ್ರ ಲಿಪಿ(Hieroglyp)ಪ್ರಪಂಚದ ಅತಿ ಪ್ರಾಚೀನ ಲಿಪಿಗಳಲ್ಲಿ ಒಂದು. ಸಮಕಾಲೀನ ಸುಮೇರಿಯನ್ ಕ್ಯೂನಿಫಾರಂ ಲಿಪಿಯಂತೆ ಪವಿತ್ರ ಲಿಪಿಗಳ ಮೂಲ ಬಹಳ ನಿಗೂಢವಾಗಿದೆ,ಅದಕ್ಕೆ ಗುರುತಿಸ ಬಹುದಾದ ಹಿಂದಿನ ಲಿಪಿ ಇಲ್ಲ. ಈಜಿಪ್ಟಿನ ಪ್ರಾಚೀನ ದೇವಾಲಯದ ಗೋಡೆಗಳ ಮೇಲೆ,ಬಂಡೆ ಮತ್ತು ಶಿಲೆಗಳಲ್ಲಿಕಂಡರಿಸಿದ , ಪಿರಮಿಡ್ಡುಗಳಲ್ಲಿ, ಸಮಾಧಿಯಒಳಗೆ ಮತ್ತು ಪೆಪ್ರಸ್ ಸುರಳಿಗಳ ಮೇಲೆ ಪ್ರಾಚೀನ ಬರಹವು ಕಂಡುಬರುತ್ತದೆ. ಒಂದು ಕಾಲದಲ್ಲಿ ಪವಿತ್ರ ಲಿಪಿಯ ಮೂಲ ಧಾರ್ಮಿಕ ಮತ್ತು ಐತಿಹಾಸಿಕ ಬರವಣಿಗೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಈ ಲಿಪಿಯು ಹಣಕಾಸಿನ ವ್ಯವಹಾರಕ್ಕೂ ಬಳಕೆಯಾಗಿರುವುದು ಕಂಡು ಬಂದಿದೆ. ಅದರಿಂದ ಈ ಲಿಪಿಯಕಾಲವು ಇನ್ನೂ ಹಿಂದಿನದಾಗಿರಬಹುದು ಎನ್ನಲಾಗಿದೆ.
ಈಜಿಪ್ಟಿನ ಬರಹ ಪದ್ದತಿಯು ಬಹಳ ಸಂಕೀರ್ಣವಾಗಿರುವುದು. ಆದರೆ
ತುಲನಾತ್ಮಕವಾಗಿ ಈ ಸಂಕೇತಗಳ ಪಟ್ಟಿಯನ್ನು ಮೂರು
ಪ್ರಮುಖ ಭಾಗಗಳಾಗಿ ವಿಂಗಡಿಸುವರು. i(1) ಚಿತ್ರ ಲಿಪಿಗಳು,ಪದಾಂಶವನ್ನು ಪ್ರತಿನಿಧಿಸುವ ಸಂಕೇತಗಳು; (2)ಧ್ವನಿ ಚಿತ್ರಗಳು, ಒಂದು ಅಥವ ಹೆಚ್ಚು ಧ್ವನಿಗಳನ್ನು
ಪ್ರತಿನಿಧಿಸುವ ಸಂಕೇತಗಳು ; ಮತ್ತು (3) ನಿರ್ಧಾರಕಗಳು,ಅವು ಪದಾಂಶ ಅಥವ ಧ್ವನಿಯ ಸಂಕೇತಗಳಲ್ಲ . ಆದರೆಅವು ತಮ್ಮ ಹಿಂದೆ
ಬರೆದಿರುವ ಸಂಕೇತಗಳ ಗುಂಪಿನ ಅರ್ಥವನ್ನು ಸ್ಪಷ್ಷ್ಗಳಿಸುತ್ತವೆ
ಚಿತ್ರ ಲಿಪಿಗಳ ಉದಾಹರಣೆಗಳು
ಸಿಮಾಟಿಕ್ ಪೂರ್ವ ನಿಷ್ಪನ್ನ ಲಿಪಿಗಳಂತೆ ಇಜಿಪ್ಷಿಯನರು ಬರಿ
ವ್ಯಂಜನಗಳನ್ನು ಮಾತ್ರ ಬಳಕೆ ಮಾಡುತಿದ್ದರು. ಅವರಲ್ಲಿ ಸ್ವರಗಳಿಗೆ ಸಂಕೇತಗಳಿರಲಿಲ್ಲ ಅದರಿಂದಾಗಿ
ಧ್ವನಿ ಚಿತ್ರಗಳು ಏಕ ವ್ಯಂಜನ, ದ್ವಿ ವ್ಯಂಜನ, ಮತ್ತು
ತ್ರಿವ್ಯಂಜನಗಳಾಗಿರುತ್ತವೆ.
ಏಕವ್ಯಂಜನೀಯ ಗಳು:
ಇಜಿಪ್ಷಿಯನ್ ಪವಿತ್ರ ಲಿಪಿಗಳ
ಉಚ್ಚಾರ
ಪ್ರತಿ ವ್ಯಂಜನಗಳ ಮಧ್ಯದಲ್ಲಿ ಯಾವ
ಸ್ವರಗಳು ಬರುತ್ತವೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ವ್ಯಂಜನಗಳ ಸರಣಿಯನ್ನು ಮಧ್ಯದಲ್ಲಿ
ಸ್ವರವಿಲ್ಲದೆ ಉಚ್ಚರಿಸುವುದು ಕಷ್ಟ.. ಪುರಾತತ್ವಪರಿಣಿತರು ಪವಿತ್ರ ಲಿಪಿಗಳ ಮಧ್ಯದಲ್ಲಿ
ಸ್ವರಗಳನ್ನು ಸೇರಿಸುವ ಶಿಷ್ಟಾಚಾರವನ್ನು
ಪಾಲಿಸಿದರು.. ವ್ಯಂಜನಗಳ ನಡುವೆ A
/e/ ಇಡಲಾಗುವುದು ,
/y/ ಅನ್ನು i /i/ ಎಂದೂ , /w/ ಅನ್ನು /u/, ಮತ್ತು /3/ ಮತ್ತು /‘>/ ಗಳನ್ನು /a/ ಎಂದೂ
ಬರೆಯಲಾಗುವುದು.ಹೇಗೋ ಏನೋ ಈ ಪದ್ದತಿಯು ಬಳಕೆಯಲ್ಲಿ ಬಂದಿದೆ,ಈಜಿಪ್ಟಿನ
ಪದಗಳ ಉಚ್ಚಾರವು ಹೇಗೆ ಎಂಬುದು ಅನೇಕರಿಗೆ ತಿಳಿಯದು., 19ನೆಯ
ವಂಶದ ಅರಸ R‘-mss ನನ್ನು ರಮಸೆಸ್ ಅಥವ ರೈಮೆಸೆಸ
ಎಂದು ಕರೆಬಹುದೆಂದು ಕ್ಯೂನಿಫಾರಂ ಬರಹಗಳಿಂದ ತಿಳಿಯುವುದು. ಮೆಸಪಟೋಮಿಯಾ ಮತ್ತು ಈಜಿಪ್ಟಿನ
ನಡುವಿನ ರಾಜತಾಂತ್ರಿಕ ಪತ್ರ ವ್ಯವಹಾರದಲ್ಲಿ ಈ ಉಲ್ಲೇಖ ಕಾಣಬಹುದು
ನಿರ್ಣಾಯಕಗಳು ಪದಾಂಶಗಳು. ಆದರೆ
ತಮ್ಮದೆ ಆದ ಧ್ವನ್ಯಾತ್ಮಕ ಮೌಲ್ಯ ಹೊಂದಿಲ್ಲ. ಯಾವದೇ ಪದದ ಮುಂದೆ ಅವನ್ನು ಬರೆದರೆ ಆ ಶಬ್ದದ
ಅರ್ಥವನ್ನು ಸ್ಪಷ್ಟ ಪಡಿಸುವುದು.ಅದಕ್ಕೆ ಕಾರಣ ಈ ಬರಹ ಪದ್ದತಿಯಲ್ಲಿ ಸ್ವರಗಳ ದಾಖಲೆಯೇ ಇಲ್ಲ.
ಆದ್ದರಿಂದ ಅನೇಕ ಪದಗಳು ಒಂದೇ ರೀತಿಯ ಸಂಕೇತಗಳನ್ನು ಹೊಂದಿವೆ. ವಿವಿಧ ಸಂಕೇತ ಸಮೂಹಗಳು(ವಿಭಿನ್ನ
ಸ್ವರಗಳಿಂದಾಗಿ) ವಿಭಿನ್ನಪದವಾಗುತ್ತವೆ.ಆದ್ದರಿಂದ ಬೇರೆ ಬೇರೆ ಪದಗಳನ್ನುಒಂದೆರೀತಿಯ ಸಂಕೇತಗಳ
ಗುಂಪುಗಳ ಪದಾಂಶಗಳ ಸರಣಿಯಲ್ಲಿ ( ಬೇರೆ ಬೇರೆ ಸ್ವರ ಸೇರಿಸಿ) ಬರೆಯಬಹುದು. ಹೀಗಾಗಿ ನಿರ್ಧಾರಕಗಳು ಪದಾಂಶಗಳ ಸರಣಿಯ ಅರ್ಥವಿವರಣೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತ್ವವೆ.
ಸೂಚನೆ : ಚಿತ್ರ
ಲಿಪಿ ಸೂಚಕಗಳು ನಿರ್ಧಾರಕಗಳಾಗಿವೆ.ಅವು ಪದಾಂಶವನ್ನುಚಿತ್ರಲಿಪಿಯಾಗಿ ಮಾರ್ಪಡಿಸುತ್ತವೆ.. ಅನೇಕ
ಚಿತ್ರಲಿಪಿಗಳು ಧ್ವನಿ ಲಿಪಿಗಳಾಗಿಯೂ ಬಳಕೆಯಾಗುತ್ತವೆ
ಚಿತ್ರಲಿಪಿ, ಪವಿತ್ರಲಿಪಿ
ಮತ್ತು ಸಾಮಾನ್ಯ ಲಿಪಿ
ಈಜಿಪ್ಟ
ತಜ್ಞರು ಸಂಪ್ರದಾಯಿಕವಾಗಿ ಪವಿತ್ರಲಿಪಿಯನ್ನು ಅವುಗಳ ಆಕಾರಕ್ಕನುಗುಣವಾಗಿ ಮೂರು
ಭಾಗವಾಗಿ ವಿಂಗಡಿಸಿರುವರು(Hieroglyphs) : ಚಿತ್ರಲಿಪಿ(Hieroglyph),ಪವಿತ್ರಲಿಪಿ( hieratic), ಮತ್ತುಸಾಮಾನ್ಯ
ಲಿಪಿ( demotic). ಚಿತ್ರಲಿಪಿಯನ್ನು
ಬಹುತೇಕ ಬಂಡೆ ಅಥವ ಬೃಹತ್‌ಸ್ಮಾರಕಗಳ ಮೇಲೆ ಕಂಡರಸಿರುವರು ಪವಿತ್ರಲಿಪಿಯು “ ಅರ್ಚಕರ ಲಿಪಿ" .ವ್ಯಾಪಕವಾಗಿ
ಹಸ್ತಪ್ರತಿಗಳಲ್ಲಿ ಮತ್ತು ಚಿತ್ರಗಳಲ್ಲಿ ಬಳಕೆಯಾಗಿದೆ.ಅದು ವಾಸ್ತವವಾಗಿ ಸ್ಮಾರಕಗಳಲ್ಲಿಯ
ಚಿತ್ರಲಿಪಿಯ ಕೂಡು ಬರಹವಾಗಿದೆ.ಸಾಮಾನ್ಯ ಲಿಪಿಯನ್ನು ದೈನಂದಿನ ಬಳಕೆಯಲ್ಲಿ ಉಪಯೋಗಿಸಲಾಗುತಿತ್ತು. ಅದೂ ಕೂಡಾ ಬಹುವಾಗಿ
ಕೂಡುಲಿಪಿಯೇ.ಅದು ಪವಿತ್ರಲಿಪಿಯ ಬದಲಾಗಿ ಕ್ರ.
ಪೂ. 600 ಇಸ್ವಿಯಿಂ
ದೈನಂದಿನ ಬಳಕೆಯಲ್ಲಿತ್ತು.ವಾಸ್ತವವಾಗಿ ಒಂದು ಸಾಮಾನ್ಯ ಲಿಪಿಯನ್ನು ಒಂದಕ್ಕಿಂತ ಹೆಚ್ಚಾದ ಚಿತ್ರ
ಲಿಪಿ ಅಥವ ಪವಿತ್ರಲಿಪಿಯಾಗಿ ಅನುವಾದಿಸಬಹುದು. ಆದ್ದರಿಂದ ಸಾಮಾನ್ಯ ಲಿಪಿಗೂ ಉಳಿದವಕ್ಕೂ
ಸಂವಾದಿಯಾಗಿ ಒಂದೇ ಸಂಕೇತವಿದೆ ಎನ್ನುವ ಹಾಗಿಲ್ಲ.
ಈಗಾಗಲೇ ತಿಳಿಸಿರುವಂತೆ ಚಿತ್ರಲಿಪಿ ಮತ್ತು ಪವಿತ್ರ ಲಿಪಿಗಳನ್ನು ಪ್ರತಿನಿಧಿಸುವ ಸಂಕೇತಗಳು ಒಂದೇ
ರೀತಿಯಲ್ಲಿರುತ್ತವೆ. ವಾಸ್ತವವಾಗಿಈಎರಡೂ ಪದ್ದತಿಗಳೂ ಈಜಿಪ್ಟಿನ ನಾಗರೀಕತೆಯ ಕ್ರಿ.ಪೂ.ಮೂರನೆಯ
ಸಹಸ್ರಮಾನದ ಕೊನೆಯ ಅರ್ಧ ಭಾಗದಲ್ಲಿ ವಂಶಪೂರ್ವಯುಗದಲ್ಲಿ ಉಗಮವಾದವು.ಇತ್ತೀಚೆಗೆ ವಂಶಪೂರ್ವ
ಅವಧಿಯ ಸ್ಕಾರ್ಪಿಯನ್ I ಅನ್ನು ಕುರಿತ ವಿವರ ಸಿಕ್ಕಿವೆ. ಅವನ
ಸಮಾಧಿಯಲ್ಲಿ ( Abydos) ಅತಿ ಹೆಚ್ಚಿ ಸಂಖ್ಯೆಯ ಮುದ್ರೆಗಳು ದೊರೆತಿವ. ಅವುಗಳ ಕಾಲ
ಕ್ರಿ. ಫೂ. 3400 ನಿಂದ 3200 ಆಗಿರುವುದರಿಂದ ಅವು ಈಜಿಪ್ಟಿನ ಅತ್ಯಂತ ಪುರಾತನ
ಲಿಪಿಗಳಾಗಿವೆ.
ಅತಿಪುರಾತನ ಚಿತ್ರಲಿಪಿ ಕಂಡರಿಕೆಗಳ ಉದಾಹರಣೆ ಸಿಕ್ಕಿರುವುದು. ನಾರ್ಮರ್‌ನ ವರ್ಣಫಲಕದಲ್ಲಿದೆ. . ನಾರ್ಮರ್ ಒಬ್ಬ ಪ್ರಾಚೀನ ಅರಸ.. ಅವನು ಸಾಂಪ್ರದಾಯಿಕ ಈಜಿಪ್ಟಿನ ಅರಸರ ಪಟ್ಟಿಯಲ್ಲಿ ಇಲ್ಲದಿದ್ದರೂ ( ಸೆತಿ ಅರಸನ ಕಾಲದಲ್ಲಿ ತಯಾರಾದ ಅಬ್ಯದಾಸನ ರಾಜರ ಪಟ್ಟಿ). ಆದರೂ, ಅವನ ವರ್ಣಫಲಕದ
ಮೇಲಿನ ಚಿತ್ರ ಲಿಪಿ ಯಪ್ರಕಾರ ಅವನು
ಏಕೀಕೃತ ಈಜಿಪ್ಟಿನನ್ನು ಕ್ರಿ. ಫೂ.3000 ಆಳಿದ. ಅವನು ಮೇಲ್ ಮತ್ತು ಕೆಳ
ಈಜಿಪ್ಟನ ಎರಡೂ ಕಿರೀಟ ಧರಿಸಿದ್ದ.. ಅನೇಕ ಈಜಿಪ್ಟನ ತಜ್ಞರು ಅವನನ್ನು ಆ ವಂಶದ ಪ್ರಥಮ ಅರಸ
ಮೆಮನೆಸನ ಸಮಕಾಲೀನ ಎನ್ನುವರು, ಇನ್ನೂ ಕೆಲವರು ಅದಕ್ಕೂ ಮೊದಲಿದ್ದ ಎನ್ನುವರು ಸ್ಕಾರ್ಪಿಯನ್
ಅರಸ II , ಮತ್ತು ಕಾ(ಝೆ ಖೆನ್ ) ಅರಸರಿಧ್ದ “ಝಿರೋ ವಂಶ” ದವನು
ಎನ್ನುವರು..
"Narmer"
ನಾರ್ಮರ್ ಹೆಸರಿನ ಚಿತ್ರಲಿಪಿ ಯಲ್ಲಿ 2 ಪದಾಂಶಗಳಿವೆ. ನೇಮ್ (name,) ಮತ್ತು ಅದ್ನುಆವರಿಸಿದ ಸೆರಖ್. ಹೆಸರಿನ ಬರಹದ ಮೇಲುಭಾಗವು ಕ್ಯಾಟ್‌ಫಿಷ್ ಕೆಳಭಾಗವು ಉಳಿ(serekh) , ಈಜಿಪ್ಟ್ ಭಾಷೆಯಲ್ಲಿ. ರಾಜರ ಹೆಸರಿನ ಸುತ್ತ ಆವರ ಇರುವುದು. ಆ ಭಾಷೆಯಲ್ಲಿ ಕ್ಯಾಟ್ ಫಿಷ್ /n‘>r/,
ಮತ್ತು
ಉಳಿ /mr/. ಒಟ್ಟಾಗಿ ಸೇರಿಸಿ ಬರೆದರೆ ಅದರ ಉಚ್ಚಾರ /n‘rmr/. ಅದನ್ನು ನಾರ್ಮರ್( Narmer) ಎಂದುನಾವು ಕರೆದರೂ,ನಮಗೆ /n‘rmr/. ನಲ್ಲಿರುವ
ವ್ಯಂಜನಗಳ ಮಧ್ಯದ ಸ್ವರಯಾವುದು ಎಂಬುದು ತಿಳಿಯದು.
ಸ್ಮಾರಕಗಳ ಚಿತ್ರಲಿಪಿಯ ಜೊತೆಗೆ ಕೂಡುಬರಹದ ಪವಿತ್ರಲಿಪಿಯೂ ಕೂಡಾ “ಕಾ” ಅರಸನ ಆಳ್ವಿಕೆಯ ಅವಧಿಯಲ್ಲಿದ್ದಿತು.ಅದನ್ನು ಆ ಕಾಲದ ಮಡಕೆಯ
ಮೇಲೆ ಕಾಣಬಹುದು. ತುಸು ಸಮಯದ ನಂತರದ ಉದಾಹರಣೆಗಳೆಂದರೆ “ಆಹ “ ಅರಸ ಮತ್ತು “ಡೆನ್” ಅರಸರಕಾಲದ ಪ್ರಥಮವಂಶದವರ ಅವಧಿಯದು.ಆದರೆ 4ನೆಯ ವಂಶದವರ ಅವಧಿಯಲ್ಲಿ ಸಾಕಷ್ಟು ಪವಿತ್ರಲಿಪಿಗಳ ದಾಖಲೆಗಳು
ಲಭ್ಯವಾಗಿವೆ.
ಚಿತ್ರಲಿಪಿ ಬದಲಾಗದೇ ಇದ್ದರೂ, ಅವುಗಳನ್ನು ಕೂಡಿಸಿ ಬರೆಯಲಾಯಿತು. ಅದರಿಂದ ಹೆಚ್ಚಿನ ಸಂಖ್ಯೆಯ ಲಿಗೇಚರ್‌ಗಳ
(ಸಂಲಗ್ನ) ಬಳಕೆಯಾಯಿತು ಕೆಳಗಿರುವ ಚಿತ್ರಲಿಪಿ ಮತ್ತು ಪವಿತ್ರ ಲಿಪಿಗಳನ್ನು ಹೋಲಿಸಿ(ಕಾಲ ಸುಮಾರು ಕ್ರಿ. ಪೂ. 1200 ):
ಮೊದಲ ಮತ್ತು ಎರಡನೆ ಸಾಲಿನ ನಡುವೆ ತುಸು ಹೋಲಿಕೆ ಗುರುತಿಸ ಬಹುದು,
ನೀವು ಪವಿತ್ರ ಲಿಪಿಯೂ ಒಂದೆ ಸಂಕೇತವಾಗಿ ಬದಲಾಗಿರುವುದನ್ನೂ ಗುರುತಿಸ ಬಹುದು.ಪದೇಪದೇ ಬಳಸಿದ
ಅನೇಕ ಸಂಕೇತಗಳು ಸೇರಿ ಲಿಗೇಚರ್‌ಗಳಾಗಿರುವವು.
ನಾವು 'a' ಮತ್ತು 'e' ಗಳನ್ನು ಸೇರಿಸಿ 'æ' ಎಂದು ಬರೆಯುವ ಹಾಗೆ..
ಅಂತಿಮವಾಗಿ ಪವಿತ್ರಲಿಪಿಯನ್ನುಅತಿಹೆಚ್ಚು ಸೇರಿಸಿಬರೆದ ಲಿಪಿಯು ಸಾಮಾನ್ಯ ಬರಹವಾಯಿತು. ಅದು ಚಿತ್ರ ಲಿಪಿಯ
ಮೂಲದಿಂದ ಬಂದಿದೆ ಎಂಬ ಸುಳಿವೂ ಸಿಗುವುದಿಲ್ಲ.. ಕ್ರಿ. ಪೂ.
600 , ಪೆಪ್ರಿಯ ಮೇಲೆ ದಾಖಲೆಗಳನ್ನು ಬರೆಯಲು
ಬಳಸಲಾಗುತಿದ್ದ ಪವಿತ್ರ ಲಿಪಿಯು ಧಾರ್ಮಿಕ
ಬರಹಗಳಿಗಾಗಿ ಸೀಮಿತವಾಯಿತು.ಸಾಮಾನ್ಯ ಲಿಪಿಯು ದೈನಂದಿನ ಲಿಪಿಯಾಯಿತು. ಅದನ್ನು ಲೆಕ್ಕವಿಡಲು,
ಸಾಹಿತ್ಯದಲ್ಲಿ ಇತರೆ ಬರಹಗಳಿಗೆ ಬಳಕೆಮಾಡಿದರು. ಕೆಳಗಿನದು ರೊಜೆಟ್ಟಾ ಶಿಲೆಯ ಮೇಲಿನ
ಬರಹ.ಇದಕ್ಕೂ ಚಿತ್ರ ಲಿಪಿಗೂ ಯಾವುದೇ ಹೋಲಿಕೆ ಇಲ್ಲ. ಎಷ್ಟು ಕೂಡಿಸಿ ಬರೆಯಲಾಗಿದೆ ಎಂದರೆ ಅದು ಅರಾಮಿಕ್‌ಲಿಪಿಯನ್ನು ಹೋಲುವುದು
ಕ್ರಿ ಶ.5ನೆಯ ಶತಮಾನದ ಈಜಿಪ್ಟಿನ ಕೊನೆಯ
ಶಾಸನ. ಇದು ಕಾಪ್ಟಿಕ್ ಲಿಪಿಯಲ್ಲಿದೆ
ಗ್ರೀಕ್ ಆಧಾರಿತ ವರ್ಣಗಳು ಮತ್ತು ಕೆಲವು ಸಾಮಾನ್ಯ ಸಂಕೇತಗಳ ಸಹಾಯದಿಂದ ಈಜಿಪ್ಟಿನ ಪ್ರಾಥಮಿಕ ಬರಹ ಪದ್ದತಿಯು ಗ್ರೀಕ್ ಆಧಾರಿತ ವರ್ಣಗಳು ಮತ್ತು ಕೆಲವು ಸಾಮಾನ್ಯ ಸಂಕೇತಗಳ ಸಹಾಯದಿಂದ ಉಗಮವಾಯಿತು.
No comments:
Post a Comment