ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿಗಳ ಕುರಿತು ವಿವೇಚನೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಜಿ.ಆರ್. ಸುಂದರರವರು ಕಂಡು
ಹಿಡಿದ ಬೆಳುವನ ಕುಡಿಗೆ ಬಿಟ್ಟರೆ ಚಿಟ್ಟೆಮಕ್ಕಿ ರಸ್ತೆಯಲ್ಲಿ ಕಂಡು ಬರುವ ಈ ಬೃಹತ್ ಶಿಲಾಯುಗ ಸಮಾಧಿಗಳು ೨ನೆಯವು ಎಂದು ಹೇಳಬಹುದು.
ಈ ನೆಲೆಯು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ (ಭುವನಕೋಟೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ) ದಯಂಬಳ್ಳಿ ಗ್ರಾಮದ ಹೊಸಹಳ್ಳಿ ಕನ್ನೆಮಡ್ಲು ಮತ್ತು ಚಿಟ್ಟೆಮಕ್ಕಿ
ಬಸ್ ನಿಲ್ದಾಣದಿಂದ ಹೊರಡುವ ಸಣ್ಣ ರಸ್ತೆಯ ಇಕ್ಕೆಲಗಳಲ್ಲಿ ಕಂಡು ಬರುತ್ತದೆ. ಸದರಿ ಸ್ಥಳ ಕೊಪ್ಪದಿಂದ
ಸುಮಾರು ೨೪ ಕಿ.ಮೀ. ದೂರದಲ್ಲಿ ಕೊಪ್ಪ - ಜಯಪುರ ರಸ್ತೆಯ ಬಲಬದಿಯಲ್ಲಿದೆ. ಹೊಸಳ್ಳಿ ಗ್ರಾಮದ ಚಿಟ್ಟೆಮಕ್ಕಿ
ರಸ್ತೆ ನಿರ್ಮಿಸಲು ಜೆ.ಸಿ.ಬಿ ಯಂತ್ರವನ್ನು ಬಳಸಿ ನೆಲ ಸಮತಟ್ಟು ಮಾಡುತ್ತಿದ್ದ ಸಮಯದಲ್ಲಿ ಈ ಕೆಲವು
ಕಲ್ಗೋರಿಗಳು ಪತ್ತೆಯಾಗಿದ್ದವು, ದಟ್ಟ ಅರಣ್ಯದ ನಡುವೆ ಇವುಗಳು ಕಂಡು ಬರುತ್ತವೆ, ಅಲ್ಲಿ ವಿಸ್ತೃತವಾದ ಕ್ಷೇತ್ರ ಅಧ್ಯಯನ ಕೈಗೊಂಡಾಗ ಅದರಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸಂಬಂಧಿಸಿದ
ಕೆಂಪು ಮತ್ತು ಕಪ್ಪು ಬಣ್ಣದ ಮೃತ್ ಪಾತ್ರೆಗಳು ಹಾಗೂ ಕೆಲವು ಕಬ್ಬಿಣದ ಆಯುಧಗಳು ಪತ್ತೆಯಾಗಿದ್ದು
ಮೂವತ್ತಕ್ಕೂ ಹೆಚ್ಚು ಶಿಲಾಗೋರಿಗಳು ಕಂಡುಬಂದಿವೆ. ಆದರೂ ಈಗ ಬೆಳಕಿಗೆ ಬಂದಿರುವ (ಜೆ.ಸಿ.ಬಿ ಅಗೆತದಿಂದ)
ಗೋರಿಗಳನ್ನು ಪರಿಶೀಲಿಸಲಾಗಿ ಅವು ಬೃಹತ್ ಶಿಲಾಯುಗದ ಕೋಣೆ ಗೋರಿಗಳ ಮಾದರಿಗಳ ಗೋರಿಗಳು ಎಂದು ಹೇಳ
ಬಹುದು, ಆಯತಾಕಾರದಲ್ಲಿ ನಿರ್ಮಿಸಲಾಗಿರುವ ಈ ಗೋರಿಗಳು ನಾಲ್ಕು ಕಡೆ ಕಣಶಿಲೆಯ
ಹಲಗೆಗಳನ್ನು ಜೋಡಿಸಿ ಕೊಠಡಿಯಾಕಾರದಲ್ಲಿ ನಿರ್ಮಿಸಲಾಗಿವೆ. ಈ ಗೋರಿಗಳ ಅಳತೆ ೨.೧೦ ಘಿ ೧.೫೦ ಘಿ ೧.೧೦ಮೀ ಗಳಿದ್ದು ಕೋಣೆಯ ಮೇಲೆ ಸ್ವಾಭಾವಿಕ ಕಣಶಿಲೆಯ ಹಲಗೆಗಳಿಂದ
ಮುಚ್ಚಲಾಗಿದೆ.
ಪ್ರಸ್ತುತ ದೊರಕಿರುವ
ಈ ಮೃತ್ ಪಾತ್ರೆಗಳು ಹಾಗೂ ಆಯುಧದ ಆಧಾರದ ಮೇಲೆ ಈ ಗೋರಿಗಳ ಕಾಲವನ್ನು ಕ್ರಿ.ಪೂ
೮೦೦-೧೦೦ ಅಸುಪಾಸೆಂದು ಅಂದಾಜಿಸಲಾಗಿದೆ. ಇಲ್ಲಿರುವ ಕೆಲವು ಕಲ್ಲು ಚಪ್ಪಡಿಗಳನ್ನು ಸ್ಥಳೀಯರು ಮನೆಗಳಿಗೆ
ಉಪಯೋಗಿಸಿಕೊಂಡಿರುವುದು ಕಂಡುಬರುತ್ತದೆ.
ಆಧಾರಸೂಚಿ
೧. ಕ್ಷೇತ್ರ
ಕಾರ್ಯದಲ್ಲಿ ಸಹಕರಿಸಿದ ಹಾಗೂ ಲೇಖನ ರಚಿಸಲು ಮಾರ್ಗದರ್ಶಕರಾದ ಡಾ. ಜಗದೀಶ ಮತ್ತು ಡಾ. ಎಸ್.ಜಿ. ಸಾಮಕ್
ಇವರುಗಳಿಗೆ ನಾನು ಅಭಾರಿಯಾಗಿರುತ್ತೇನೆ.
೨. ಸಂಗ್ರಹಿಸಿದ ಪ್ರಾಚ್ಯಾವಶೇಷಗಳನ್ನು
ಈಗ ಶಿವಪ್ಪನಾಯಕ ಅರಮ
£É
²ªÀªÉÆUÀÎ E°è£À ªÀ¸ÀÄÛ¸ÀAUÀæºÁ®AiÀÄzÀ°è ¸ÀAgÀQë¹qÀ¯ÁVzÉ.
No comments:
Post a Comment