Tuesday, July 30, 2013

ಫುರಾತನ ಶಿಕ್ಷಣ ವ್ಯವಸ್ಥೆ ಡಾ.ಶ್ಯಾಮಲಾರತ್ನಕುಮಾರಿ

ಡಾ. ಶ್ಯಾಮಲಾ ರತ್ನ ಕುಮಾರಿ




’ವಡ್ಡಾರಾಧನೆ’ಯಲ್ಲಿ ಶಿಕ್ಷಣ ವ್ಯವಸ್ಥೆಯ ಚಿತ್ರಣ 

        

  ’ವಡ್ಡಾರಾಧನೆ’ ಶಿವಕೋಟಾಚಾರ್ಯರಿಂದ ಕ್ರಿ.ಶ. ೧೦ನೇ ಶತಮಾನದಲ್ಲಿ ರಚಿಸಲ್ಪಟ್ಟ ಕೃತಿ ಈವರೆಗೆ ನಮಗೆ ಉಪಲಬ್ದ  ವಾಗಿರುವ ಪ್ರಥಮ ಕನ್ನಡ ಗದ್ಯಕೃತಿ ಮೂಲತಃ ಜೈನ ಕೃತಿಯಾದ ಇದರಲ್ಲಿ ೧೯ ಜನ ಮಹಾಪುರುಷರ ಗಾಹೆ(ಗಾದೆ-ಚರಿತೆ)ಗಳನ್ನೊಳಗೊಂಡಿದೆ. ಧಾರ್ಮಿಕ ಹಿನ್ನಲೆಯಲ್ಲಿ ರಚಿತವಾಗಿದ್ದರೂ ಈ ಕೃತಿಯು ಬಗ್ಗೆ ಸಮಕಾಲಿನ ಶಿಕ್ಷಣ ವ್ಯವಸ್ಥೆಯ ಅತ್ಯುಪಯುಕ್ತವಾದ ಮಾಹಿತಿಯನ್ನೊದಗಿಸುತ್ತದೆ.

          ಈ ಕೃತಿಯಲ್ಲಿ ವೈದಿಕರ ವಿದ್ಯಾಭ್ಯಾಸ ಕ್ರಮ ಹಾಗೂ ಜೈನ ವಿದ್ಯಾಭ್ಯಾಸ ಕ್ರಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಲಾಗಿದೆ. ಹಾಗೆಯೇ ಲೌಕಿಕ, ಆಧ್ಯಾತ್ಮಿಕ ಶಿಕ್ಷಣಗಳೆರಡಕ್ಕೂ ಮಾನವ ಜೀವನದಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ. ಇವರ ಸುಕುಮಾರ ಸ್ವಾಮಿಯ ಕಥೆ, ಸನತ್ಕುಮಾರ ಚಕ್ರವರ್ತಿಯ ಕಥೆ ವಿದ್ಯುಚ್ಚೋರರಿಸಿಯ ಕಥೆ, ಗುರುದತ್ತ ಭಟಾರರ ಕಥೆ, ಚಿಲಾತಪುತ್ರನ ಕಥೆಗಳಲ್ಲಿ ಶೈಕ್ಷಣಿಕ ಕ್ರಮದ ಬಗ್ಗೆ ಮಹತ್ವಪೂರ್ಣ ಮಾಹಿತಿ ಲಭ್ಯವಾಗುತ್ತದೆ.

          ಸುಕುಮಾರಸ್ವಾಮಿಯ ಕಥೆಯಲ್ಲಿ ವತ್ಸದೇಶದ ಕೌಶಾಂಬಿನಗರದ ರಾಜ ಅತಿಬಳನ ಮಂತ್ರಿ ಸೋಮಶರ್ಮನ ಮಕ್ಕಳಾದ ಅಗ್ನಿಭೂತಿ, ವಾಯುಭೂತಿ ವಿದ್ಯಾವಂತರಲ್ಲ, ಸೋಮಾರಿಗಳು ಹಾಗೂ ಉಂಡಾಡಿಗಳಾಗಿದ್ದರಿಂದ ಸೋಮಶರ್ಮನ ಮರಣಾನಂತರ ಮಂತ್ರಿ ಪದವಿಯನ್ನು ಯೋಗ್ಯತಾ ಆಧಾರದ ಮೇಲೆ ರಾಜನು ಅವರ ದಾಯಾದಿಗೆ ಕೊಡುತ್ತಾನೆ. ಇದರಿಂದ ಅಪಮಾನಗೊಂಡು ತಮ್ಮ ತಾಯಿ ಕಾಶ್ಯಪಿಗೆ ಈ ವಿಷಯನ್ನರುಹಿ ತಾವು ಇನ್ನು ಮುಂದೆ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ತೋರುವೆವು ಎಂದು ಹೇಳಲು ತಾಯಿಯು ಅವರಿಬ್ಬರನ್ನೂ ತನ್ನ ಸೋದರ ಮಗಧೆಯ ಮಂತ್ರಿ ಸೂರ್ಯಮಿತ್ರನಲ್ಲಿಗೆ ಕಳುಹುವಳು ಈ ಪ್ರಸಂಗದಿಂದ ವಿದ್ಯಾಭ್ಯಾಸವೇ ಅರ್ಹತೆಯ ಸಾಧನವೆಂದೂ, ಓದದಿರುವವರು ಮೂರ್ಖರಿಂದೂ ಅಂತಹವರಿಗೆ ಉನ್ನತ ಹುದ್ದೆಯನ್ನು ವಂಶ ಪಾರಂಪರ‍್ಯತಾಧಾರ ಮೇಲಾದರೂ ಕೊಡಲಾಗದು, ಯೋಗ್ಯತಾಧಾರದ ಮೇಲೆ ಉನ್ನತಾಧಿಕಾರಿಗಳಿಗೆ ನೇಮಕ ಎಂಬ ಕೃತಿಕಾರನ ಸ್ಪಷ್ಟ ಧೋರಣೆ ಮತ್ತು ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುವುದು.

          ಅಗ್ನಿಭೂತಿ, ವಾಯುಭೂತಿ ಪಂಡಿತನಾದ ತಮ್ಮ ಸೋದರಮಾವ ಸೂರ್ಯಮಿತ್ರನೆಡೆಗೆ ಬಂದಾಗ ಸೂರ್ಯಮಿತ್ರ ಬಾಂಧವ್ಯ ಹಾಗೂ ಸಲಿಗೆ ವಿದ್ಯಾಭ್ಯಾಸಕ್ಕೆ ಹಾನಿಕರವೆಂದು ಭಾವಿಸಿ ಬಂಧುತ್ವವನ್ನು ಮರೆಮಾಚಿ ವಿದ್ಯಾರ್ಥಿಗಳಾಗಿ ತನ್ನ ಬಳಿ ಇರಲು ಅರ್ಹತಾ ನಿಯಮಗಳನ್ನೊಡ್ಡುವನು. ’ವಿದ್ಯಾರ್ಥಿಗಳಾಗಿ ಯೋದಂ ಕಲ್ವೆಮೆಂಬೞ್ತಯೊಳ್ ಬಂದಿರಪ್ಪೊಡೆಬೈಕಂದಿರಿದು ಕಪ್ಪಡಮುಟ್ಟಿರುಳಂ ಪಗಲುಮಲಸದೆ ನಿರ್ಬಂಧದಿಂದೋದಲಾರ್ಪೊಡೆ ನಿಮ್ಮನೋದಿಸಲಕ್ಕುಂ’  ಎಂದು. ಅಂದರೆ ವಿದ್ಯಾರ್ಥಿಗಳು ಓದು ಕಲಿಯಬೇಕೆಂಬ ಶ್ರದ್ಧಾಸಕ್ತಿಗಳನ್ನು ಮೊಟ್ಟಮೊದಲು ಹೊಂದಿರ ಬೇಕು, ಭಿಕ್ಷಾಟನೆಯಿಂದ ತಮ್ಮ ಆಹಾರವನ್ನು ತಾವೇ ಗಳಿಸಿಕೊಳ್ಳಬೇಕು ಹಾಗೂ ವೇಷಭೂಷಣಗಳಲ್ಲಿ ಆಸಕ್ತಿ ತೋರದೆ ನಿಯಮಪೂರ್ವಕವಾಗಿ ಹಗಲು ರಾತ್ರಿಗಳೆಂದೆಣಿಸದೆ ಸೋಮಾರಿತನ ಬಿಟ್ಟು ಕಷ್ಟ ಪಟ್ಟು ಓದಬೇಕು. ಇದೇ ವಿದ್ಯಾರ್ಥಿಗಳ ಲಕ್ಷಣ. ವಿದ್ಯಾರ್ಥಿಗಳಿಗೆ ಹೇಳಿರುವ ಈ ಲಕ್ಷಣಗಳು ಇಂದಿಗೂ ಉಪಯುಕ್ತವಾಗಿವೆ ಹಾಗೂ ಆಚರಣಯೋಗ್ಯವಾಗಿವೆ.

          ವಿದ್ಯಾರ್ಜನೆಗೆ ತೀವ್ರಾಕಾಂಕ್ಷೆ, ಛಲ ಮತ್ತು ತ್ಯಾಗದ ಅವಶ್ಯಕತೆ ಎಷ್ಟಿದೆ ಎಂಬುದು ದೃಷ್ಟಾಂತಪೂರ್ವಕವಾಗಿ ತಿಳಿದು ಬರುತ್ತದೆ. ಸೂರ್ಯಮಿತ್ರನು ಸುಧರ್ಮಾಚಾರ್ಯರಿಂದ ಜ್ಯೋತಿಶ್ಶಾಸ್ತ್ರ ಕಲಿಯಲು ಬಂದ ಸಂಧರ್ಭದಲ್ಲಿ ಸೂರ್ಯಮಿತ್ರ ಸ್ವತಃ ತಾನೇ ಸರ್ವಶಾಸ್ತ್ರ ವಿಶಾರದ ಪಂಡಿತನಾದರೂ ಸುಧರ್ಮಾಚಾರ್ಯರು ತಾನು ಕಳೆದಿದ್ದ ಅರಸನ ಉಂಗುರವನ್ನು ತಮ್ಮ ಜ್ಯೋತಿಷ್ಯ ವಿದ್ಯೆಯಿಂದ ದೊರಕಿಸಿ ಕೊಟ್ಟು ಪ್ರಾಣ ಉಳಿಸಿದ್ದನ್ನು ಕಂಡು ಅಂತಹ ಶಕ್ತಿಯುಳ್ಳ ಜ್ಯೋತಿಷ್ಯ ವಿದ್ಯಯನ್ನು ಕಲಿಯಲಪೇಕ್ಷಿಸಿ ಸುಧರ್ಮಾಚಾರ್ಯರಲ್ಲಿಗೆ ಬಂದು ವಿದ್ಯೆಯನ್ನು ಹೇಳಿಕೊಡಬೇಕೆಂದು ಕೇಳಿಕೊಂಡಾಗ ಸುಧರ್ಮಾಚಾರ್ಯರು ಇಂತೆಂದರು - ’ತಮಾ, ಯಮ್ಮಜೋಯಿಸನೆಂತಪ್ಪ ರೂಪಿದ ಋಷಿಯರ್ಗಲ್ಲದೆ ಪೇೞಲುಂ ಕಲಲುಮಾಗದು’. ಆ ಮೇರೆಗೆ ಸೂರ್ಯಮಿತ್ರನು ಜ್ಯೋತಿಷ್ಯವನ್ನು ಕಲಿಯಲೇಬೇಕೆಂಬ ತೀವ್ರಾಕಾಂಕ್ಷಯಿಂದ ಸುಧರ್ಮಾಚಾರ್ಯರನ್ನು ಬೇಡಿ ಅವರಿಂದ ದೀಕ್ಷೆಯನ್ನು ಪಡೆದು ಸುಧರ್ಮಾಚಾರ್ಯರ ನಿಯಮಗಳಿಗೊಪ್ಪಿ ಪಂಚಮಹಾವ್ರತಗಳು(ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ) ಪರಿಕ್ರಮಣ ನಮಸ್ಕಾರ(ಪಶ್ಚಾತಾಪ, ಪ್ರಕೀರಣಕ ಮತ್ತು ಪಂಚನಮಸ್ಕಾರ) ಗಳನ್ನು ಅನುಷ್ಠಾನ ಮಾಡಿ, ತ್ರಿಷಷ್ಠಿ(೬೩) ಶಲಾಕಾ ಪುರುಷಚರಿತ್ರೆ, ಚರಣಗ್ರಂಥ, ಕರಣಗ್ರಂಥ ಹಾಗೂ ದ್ರವ್ಯಾನುಯೋಗಗಳನ್ನೂ ಅಧ್ಯಯನ ಮಾಡಿದನು. ಅಷ್ಟೇ ಅಲ್ಲದೇ ಕೇವಲ ಜ್ಯೋತಿಷ ವಿದ್ಯೆಯನ್ನು ಕಲಿಯಲು ಸನ್ಯಾಸಿಯಾದವನು ಈಗ ನಿಷ್ಟೆಯಾದ ತಪೋಜೀವನವನ್ನು ಸ್ವ ಇಚ್ಛೆಯಿಂದಲೇ ಕೈಗೊಂಡನು, ತಪಃಶಕ್ತಿಯಿಂದಲೇ ಜ್ಯೋತಿಷ ವಿದ್ಯೆಯು  ಸಾಧಿಸಲ್ಪಟ್ಟಿತು.

          ಅಂದಿನ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಬೋಧಿಸಲ್ಪಡುತ್ತಿದ್ದ ವಿಷಯಗಳ ವ್ಯಾಪ್ತಿ ಎಷ್ಟು ವಿಸ್ತ್ರುತವಾಗಿತ್ತೆಂದು ಈ ಕೆಳಗಿನ ಬೋಧನಾ ವಿಷಯಗಳ ಪಟ್ಟಿಯಿಂದ ತಿಳಿದುಬರುತ್ತದೆ. ಸೂರ್ಯಮಿತ್ರನು ತನ್ನ ಶಿಷ್ಯನಾದ ಅಗ್ನಿಭೂತಿಗೆ ಬೋಧಿಸಿದ ವಿಷಯಗಳೆಂದರೆ ಚತುರ್ವೇದಗಳು, ಷಡಂಗಗಳು, ಹದಿನೆಂಟು ಧರ್ಮಶಾಸ್ತ್ರಗಳು(ಮನು, ಗೌತಮ, ವಶಿಷ್ಠ, ಅತ್ರಿ, ದಕ್ಷ, ಅಂಗೀರಸ, ಉಶನಸ್, ವಾಕ್ಪತಿ, ವ್ಯಾಸ, ಆಪಸ್ತಂಭ, ಕಾತ್ಯಾಯನ, ವಿಷ್ಣು, ಯಾಜ್ಞವಲ್ಕ್ಯ, ನಾರದ, ಪರಾಶರ, ಶಂಖ, ಹಾರೀತ - ಇವರಿಂದ ಪ್ರಣೀತವಾದ ಸ್ಮೃತಿಗಳು), ಮೀಮಾಂಸಾ, ನ್ಯಾಯವಿಸ್ತರ(ತರ್ಕಶಾಸ್ತ್ರ), ಪ್ರಮಾಣಂ(ಪ್ರತ್ಯಕ್ಷ, ಅನುಮಾನ, ಶಬ್ದ, ಅನುಪಲಬ್ದಿ, ಅರ್ಥಪತ್ತಿ), ಛಂದಸ್ಸು, ಅಲಂಕಾರ, ನಿಗಂಟು, ಕಾವ್ಯ, ನಾಟಕ, ಚಾಣಕ್ಯ, ಅರ್ಥಶಾಸ್ತ್ರ, ಸಾಮಂತ್ರಿಕ, ಶಾಲಿಹೋತ್ರ(ಶಾಲಿಹೋತ್ರನೆಂಬ ಋಷಿವಿರಚಿತ ಅಶ್ವಶಾಸ್ತ್ರ), ಪಾಳಕಾಪ್ಯ(ಪಾಳಕಾಪ್ಯನೆಂಬ ಋಷಿವಿರಚಿತ ಗಜಶಾಸ್ತ್ರ), ಹಾನಿತಂ, ಚರಕಂ, ಅಶ್ವಿನೀಮತಂ, ಬಾಹಲಾ, ಶುಶ್ರುತಂ, ಕ್ಷಾರಪಾನೀಯಂ ಎಂಬ ಆರು ವೈದ್ಯಪದತ್ತಿಗಳು, ಜ್ಯೋತಿಷ ಹಾಗೂ ಮಂತ್ರವಿದ್ಯೆ. ಈ ಬೋಧನಾ ವಿಷಯಗಳ ಪಟ್ಟಿಯಲ್ಲಿ ವೈದಿಕ, ಧಾರ್ಮಿಕ, ಲೌಕಿಕ, ಪ್ರಾಣಿಕ ಮುಂತಾದ ವೈವಿಧ್ಯಪೂರ್ಣ ವಿಷಯಗಳು ಅಡಕವಾಗಿದ್ದು ಶೈಕ್ಷಣಿಕ ವ್ಯವಸ್ಥೆಯು ಸಮಕಾಲೀನ ಜನಸಮುದಾಯದ ಆವಶ್ಯಕತೆಗಳನ್ನು ಪೂರೈಸುವ ಹಾಗೂ ದೈನಂದಿನ ಜೀವನದಲ್ಲಿ ಸುಲಭವಾಗಿ ಅಳವಡಿಸಬಹುದಾಗಿದ್ದು ಸಮಾಜದಲ್ಲಿ ಮಹತ್ವದ ಸ್ಥಾನವನ್ನು ಶಿಕ್ಷಣಕ್ಕೆ ತಂದಿದ್ದಿತು ಎಂಬುದು ಗಮನಿಸಬೇಕಾದ ಅಂಶ.
         
          ವೈದಿಕ ಶಿಕ್ಷಣ ವ್ಯವಸ್ಥೆಯ ಜೊತೆ ಜೊತೆಗೇ ಜೈನ ಶಿಕ್ಷಣ ಕ್ರಮವು ಈ ಕೃತಿಯಲ್ಲಿ ವಿವೇಚಿಸಲ್ಪಟ್ಟಿದೆ. ಜೈನ ಶೈಕ್ಷಣಿಕ ಕ್ರಮದಲ್ಲಿ ಬೋಧಿಸಲ್ಪಡುತ್ತಿದ್ದ ವಿಷಯಗಳೆಂದರೆ ೧೪ ಪೂರ್ವಗಳು(ಉತ್ಪಾದಪೂರ್ವ, ಆಗ್ರಾಯಣೀಪೂರ್ವ, ನೀರ್ಯಾನುವಾದಪೂರ್ವ, ಅಸ್ತಿ-ನಾಸ್ತಿಪ್ರವಾದಪೂರ್ವ, ಜ್ಞಾನಪ್ರವಾದಪೂರ್ವ, ಸತ್ಯಪ್ರವಾದಪೂರ್ವ, ಆತ್ಮಪ್ರವಾದಪೂರ್ವ, ಕರ್ಮಪ್ರವಾದಪೂರ್ವ, ಪ್ರತ್ಯಾಖ್ಯಾನುವಾದಪೂರ್ವ, ವಿದ್ಯಾನುವಾದಪೂರ್ವ, ಕಲ್ಯಾಣವಾದ ಪೂರ್ವ, ಪ್ರಾಣವಾದ ಪೂರ್ವ, ಕ್ರಿಯಾವಾದ ಪೂರ್ವ, ತ್ರಿಲೋಕಪೂರ್ವ ಬಿಂದುಸಾರ ಪೂರ್ವ), ದ್ವಾದಶಂಗಗಳು(ಆಚಾರಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಖ್ಯಾಪ್ರಜ್ಞಪ್ತಿ, ಜ್ಞಾತೃಧರ್ಮ ಕಥಾಂಗ, ಉಪಾಸಕಾಧ್ಯಾಂಗ, ಅಂತಕೃದ್ಧಶಾಂಗ, ಅನುಕ್ತರೋಪಪಾದಕ ದಶಾಂಗ, ಪ್ರಶ್ನವ್ಯಾಕರಣಾಂಗ, ವಿಪಾಕಸೂತ್ರಂಗ, ದೃಷ್ಟಿಪ್ರವಾದಾಂಗ), ಚರಣಗ್ರಂಥ, ಕರಣಗ್ರಂಥ, ದ್ರವ್ಯಾನುಯೋಗ, ತ್ರಿಷಷ್ಠಿ  ಶಲಾಕ ಪುರುಷರ ಚರಿತೆ ಮುಂತಾದವು.

          ಸ್ತ್ರೀ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಕೃತಿಯು ಕೆಲವು ವಿವರಗಳನ್ನು ನೀಡುತ್ತದೆ. ಸ್ತ್ರೀಯರು ಅಕ್ಷರ ಆಲೇಖ್ಯಗಣಿತ, ಗಾಂಧರ್ವ, ನೃತ್ಯ, ಚಿತ್ರಕರ್ಮ, ಪತ್ಯಚ್ಛೇದ್ಯ ಮುಂತಾದ ಚತುಷ್ಷಷ್ಠಿ(೬೪) ಕಲೆಗಳಲ್ಲಿ ಪರಿಣತಿ ಪಡೆಯುತ್ತಿದ್ದರು ಎಂದು ವಿದ್ಯುಚ್ಚೋರನ ಕಥೆ ತಿಳಿಸುತ್ತದೆ. ಇದೇ ಕಥೆಯಲ್ಲಿ ಚೋರ ವಿದ್ಯೆ - ಕರ್ಪಟ ವಿದ್ಯೆ(ಕರಪಟ್ಟಿ ರಚಿತ ಶಾಸ್ತ್ರ), ಕಳ್ಳತನವನ್ನು ಪತ್ತೆ ಹಚ್ಚುವುದನ್ನು ಪ್ರತಿಪಾದಿಸುವ ಶಾಸ್ತ್ರ(ಸುರಖಶಾಸ್ತ್ರ) ಹಾಗೂ ಚೋರವಿದ್ಯೆಯ ಪ್ರಕಾರಗಳಾದ ಜೃಂಭಿನಿ(ಪ್ರತ್ಯಕ್ಷ, ಮಾಯ), ಸ್ಥಂಭಿನಿ(ಗತಿ ನಿರೋಧ), ಮೋಹಿನಿ(ಮೂರ್ಛೆ), ಸರ್ಷಪಿ(ಚರ್ಮ ರೋಗ ಉಂಟುಮಾಡುವಿಕೆ), ತಾಳ್ತೋದ್ಘಾಟಿನಿ(ಬೀಗ ತೆಗೆಯುವುದು), ಮಂತ್ರ, ಚೂರ್ಣ, ಯೋಗ, ಘುಟಿಕಾ(ಗುಳಿಗೆ) ಮತ್ತು ಅಂಜನಗಳ ಉಲ್ಲೇಖವಿದೆ.

          ಅಧ್ಯಯನ ವಿಧಾನಕ್ಕೆ ಸಂಬಂಧಿಸಿದಂತಯೂ ಮಾಹಿತಿ ದೊರಕುತ್ತದೆ ಈ ಕೃತಿಯಲ್ಲಿ. ಇಲ್ಲಿ ಹೇಳಿರುವ ಶಿಕ್ಕಣ ವಿಧಾನಗಳೆಂದರೇ ಸ್ವಾಧ್ಯಾಯ(ಮನನಪೂರ್ವಕ ಸ್ವತಃ ವಿಷಯಗಳನ್ನು ಗ್ರಹಿಸುವಿಕೆ, ಅರ್ಥೈಸುವಿಕೆ), ವಾದ(ಪರಪಕ್ಷಖಂಡನಪೂರ್ವಕ ಸ್ವಪಕ್ಷ ಮಂಡನೆ), ಗ್ರಂಥಾರ್ಥ ಸ್ವರೂಪಾಧ್ಯಯನ, ವ್ಯಾಖ್ಯಾನ(ಪದವಿಭಾಗ, ಪದಶಃ ಅರ್ಥ, ಅನ್ವಯ, ತಾತ್ಪರ್ಯ, ವಿಮರ್ಶೆ), ವಾಕ್ಯಾರ್ಥ(ಹೇತು ನಿದಿರ್ಷ್ಟವಾಗಿ ಆಂತರಿಕ, ಬಾಹ್ಯ ಪ್ರಮಾಣ ಪೂರ್ವಕ ತರ್ಕಬದ್ಧವಾಗಿ ವಾಕ್ಯವನ್ನು ಅರ್ಥೈಸುವಿಕೆ), ವೇದಾಭ್ಯಾಸದಲ್ಲಿ ಅನುಸರಿಸಬೇಕಾದ ವಿಧಾನವೆಂದರೇ ಮೊದಲು ಪ್ರಣವ(ಓಂಕಾರ)ದ ಉಚ್ಛಾರಣೆ ಸ್ವರ, ವರ್ಣ, ಬೇಧದಿಂದ ಮೊದಲು ೬೪ ಋಕ್ ಸಂಹತಿಗಳನ್ನು, ಪದಕ್ರಮಬೇಧದಿಂದ ಬ್ರಾಹ್ಮಣ ಆರಣ್ಯಕ ಸೂತ್ರಗಳನ್ನು ಓದುವುದು, ಋಗ್ಯಜುಸ್ಸಾಮಾರ್ಥವಣ ವೇದಗಳನ್ನು ಸ್ವರವರ್ಣಬೇಧದಿಂದ ಮಂತ್ರಸಹಿತ ಪಾಠ, ಪದ ಕ್ರಮ, ಜಟೆ, ಘನ ಬೇಧದಿಂದ ಯಥಾಕ್ರಮದಿಂದ ಉಚ್ಛಾರಣೆ, ಮೀಮಾಂಸ, ನ್ಯಾಯಸೂತ್ರಗಳನ್ನು ಓದಿ ಕ್ರಿಯಾಕಾರಕ ಸಂಬಂಧದಿಂದ ವ್ಯಾಖ್ಯಾನ ಮಾಡುವುದು. ಈ ಕಾರ್ಯಕಾರಣ ವಿಧಾನಗಳನ್ನೇ ನಾಗಶ್ರೀ ಅನುಸರಿಸಿ ತನಗಿರುವ ವಿದ್ಯಾ ಪಾಂಡಿತ್ಯವನ್ನು ಚಂದ್ರವಾಹನನೆಂಬ ಅರಸನ ಮತ್ತು ಸೂರ್ಯಮಿತ್ರ, ಅಗ್ನಿಭೂತಿ ಭಟಾರರ ಸಮುಖದಲ್ಲಿ ಪ್ರಕಟಗೊಳಿಸಿದಳೆಂದು ಸುಕುಮಾರಸ್ವಾಮಿಯ ಕಥೆಯಿಂದ ತಿಳಿದುಬರುತ್ತದೆ ಅಲ್ಲದೇ, ಗುರುದತ್ತ ಭಟ್ಟಾರರ ಕಥೆಯಲ್ಲಿ ಹಸ್ತಿನಾಪುರದ ರಾಜ ವಿಜಯದತ್ತನ ಪುತ್ರನಾದ ಗುರುದತ್ತನು ಚಿಂತಾಗತಿಯಂಬ ವಿದ್ಯಾಧರನು ಆಕಾಶಕ್ಕೇರುವ ವಿದ್ಯಾಸಾಧನೆಯಲ್ಲಿ ತೊಡಗಿ ಮಂತ್ರಪಠನಗೈದಾಗ ಅದರಲ್ಲಿದ್ದ ಹೀನಾಧಿಕಾಕ್ಷರ ದೋಷಗಳನ್ನು ತನ್ನ ಮಂತ್ರವ್ಯಾಕರಣಪರಿಣತಿಯಿಂದ ಕಂಡುಹಿಡಿದು ಮಂತ್ರ ಉಚ್ಛಾರಣೆಯನ್ನು ತಿದ್ದಿ ಸಕ್ರಮಗೊಳಿಸಿ ವಿದ್ಯಾಧರನ ವಿದ್ಯಾಸಾಧನೆಗೆ ನೆರಾವಾದನೆಂದು ಹೇಳಿದೆ. ಈ ಪ್ರಸಂಗದಿಂದ ಮಂತ್ರಸಿದ್ಧಿಯಲ್ಲಿ ಹೀನಾಧಿಕಾಕ್ಷರ ಮಹತ್ವ ಎಷ್ಟೆಂಬುದು ವ್ಯಕ್ತವಾಗುತ್ತದೆ. ಅಂತೆಯೇ ಭದ್ರಬಾಹುಭಟಾರರ ಕಥೆಯಲ್ಲಿ ವಾಚಕದ ತಪ್ಪಿನಿಂದ ಎಂಥ ಪ್ರಮಾದವಾಯಿತೆಂದು ಹೇಳಿದೆ. ಅಶೋಕ ಚಕ್ರವರ್ತಿಯು ತಾನು ಯುದ್ಧ ಕೈಗೊಂಡಾಗ ಆ ಪರದೇಶದಿಂದ ತನ್ನ ಮಂತ್ರಿ, ಪುರೋಹಿತ ಮುಂತಾದ ಅಧಿಕಾರಿಗಳಿಗೆ ಓಲೆಯೊಂದನ್ನು ಬರೆಯಿಸಿ ರಾಜಕುಮಾರನ ಕುನಾಲನ ವಿದ್ಯಾಭ್ಯಾಸಕ್ಕೆ ಏರ್ಪಡಿಸಲು "ಉಪಾಧ್ಯಾಯನಂಗೆ ಕೞಮೆಯುಂ ಕೂೞುಂ ತುಪ್ಪಮುಂ ತೊವ್ವೆಯುಮಮುಣನಲ್ಕೊಟ್ಟು ಕುಮಾರನೋದಿಸುಗೆ" ಎಂದು ಆದೇಶ ನೀಡಿದನು. "ಕುಮಾರಂ ಅಧ್ಯಾಪಯೇತ್" ಎಂಬುದನ್ನು ವಾಚಕನು "ಕುಮಾರಮಂಭಾಪಯೇತ್" ಎಂದು ವಿಪರೀತವಾಗಿ ಓದಿದ್ದರಿಂದ ಆದೇಶದ ಮೇರೆಗೆ ಉಪಾಧ್ಯಾಯನಿಗೆ ಅಕ್ಕಿ, ತುಪ್ಪ ಮುಂತಾದವುಗಳನ್ನು ಕೊಟ್ಟು ಕುಮಾರ ಕುನಾಲನ ಕಣ್ಣುಗಳನ್ನು ಕೀಳಿಸಿ ಕುರುಡನನಾಗಿಸಲಾಗುತ್ತದೆ. ಈ ದೃಷ್ಟಾಂತದಿಂದ ಓಲೆಯ ಪಾಠದ ಯಥಾರ್ಥವಾಚನ ಕಲೆಯ ಪ್ರಾಮುಖ್ಯ ಎಷ್ಟೆಂದು ಸ್ಫಷ್ಟವಾಗುತ್ತದೆ.

          ಶಿಕ್ಷಣದ ಅವಧಿಯ ಬಗ್ಗೆ ’ವಡ್ಡಾರಾಧನೆ’ಯು ನೀಡುವ ಮಾಹಿತಿಯು ಇಂತಿದೆ: ’ವೈದಿಕ ವಿದ್ಯಾಭ್ಯಾಸಕ್ಕೆ ಎಂಟು ವರ್ಷಗಳೆಂದೂ, ದೀಕ್ಷಾಪೂರ್ವಕ ಜೈನಧರ್ಮದ ಆಧ್ಯಾತ್ಮಿಕ ಶಿಕ್ಷಣಕ್ಕೆ ಹನ್ನೆರಡು ವರ್ಷಗಳೆಂದೂ ನಿಗದಿಯಾಗಿತ್ತೆಂದು ತಿಳಿಸುತ್ತದೆ. ಶಿಕ್ಷಣ ಪಡೆದ ವಿದ್ಯಾರ್ಥಿಯು ನಗರಕ್ಕೆ ತೆರಳಿ ಪಂಡಿತ ಸಭೆಯಲ್ಲಿ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಕೀರ್ತಿವಂತನಾಗುವುದರೊಂದಿಗೆ ಶಿಕ್ಷಣದ ಪರಿಸಮಾಪ್ತಿಯು ಆಗುತ್ತದೆ ಎಂಬುದು ಭದ್ರಬಾಹುಭಟಾರರ ಕಥೆಯಲ್ಲಿ ಹೇಳಿದೆ. ಈ ಮೂಲಕ ಗುರುಕುಲದ ಖ್ಯಾತಿಯು ರಾಜನವರೆಗೂ ತಲುಪಿ ರಾಜನು ಸ್ವತಃ ಗುರುಕುಲದ ನಿರ್ವಹಣೆಗೆ ಮುಂದಾಗುತ್ತಾನೆ. ಹೀಗಾಗಿ ಶಿಕ್ಷಣ ವ್ಯವಸ್ಥೆ ಪ್ರಗತಿಯನ್ನು ಹೊಂದುತ್ತದೆ.

          ಈಗ ಮೇಲೆ ಹೇಳಿದಾದ ’ವಡ್ಡಾರಾಧನೆ’ಯಲ್ಲಿನ ಶಿಕ್ಷಣ ವ್ಯವಸ್ಥೆ ಚಿತ್ರಣವು ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆಗೆ ಎಷ್ಟರ ಮಟ್ಟಿಗೆ ಅನ್ವಯಿಸಬಹುದೆಂದು ತುಲಾನಾತ್ಮಕವಾಗಿ ಪರಿಶೀಲಿಸಿ ನೋಡೋಣ. ಶಿಕ್ಷಣವು ವಿದ್ಯಾ ಎಂದರೆ ಜ್ಞಾನ ಹಾಗೂ ದರ್ಶನವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯೇ ಆಗಿದೆ. ಶಿಕ್ಷಣದ ಮಹತ್ವ ಸಾಮಾಜಿಕ ಜೀವನದ ಸಂಪನ್ನತೆ ಮತ್ತು ಸಂಸ್ಕೃತಿಯ ಪ್ರಗತಿಗಾಗಿ ಎಂದು ಪರಿಗಣಿಸಲಾಗಿತ್ತು. ಶಿಕ್ಷಣವು ಸಾಂಸ್ಕೃತಿಯ ಪರಂಪರೆಗಳನ್ನು ನಿರ್ಮಿಸುವುದರಲ್ಲಿ ಹಾಗೂ ವಿಸ್ತರಣೆಯಲ್ಲಿ ನೆರವು ನೀಡುತ್ತದೆ ಹಾಗೂ ವಿದ್ಯಾರ್ಥಿಗೆ ಸಮಾಜದ ಕಲ್ಯಾಣದಲ್ಲಿ ಭಾಗವಹಿಸಲು, ತನ್ನ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಲು ಪ್ರೇರೇಪಿಸುತ್ತದೆ. ವ್ಯಕ್ತಿತ್ವದ ಸಂಪೂರ್ಣ ವಿಕಾಸ, ಸಮಾಜದ ಸಂರಕ್ಷಣೆ, ವ್ಯಕ್ತಿಯ ಸಾಮಾಜಕೀಕರಣ, ಮಾನವ ಸಭ್ಯತೆಯ ನಿರ್ಮಾಣ, ಜ್ಞಾನ ಪ್ರಸಾರ, ಆ ಮೂಲಕ ಚರಿತ್ರೆ ನಿರ್ಮಾಣ - ಇವು ಶಿಕ್ಷಣದ ಪ್ರಮುಖ ಉದ್ದೇಶಗಳು. ಈ ಶೈಕ್ಷಣಿಕ ಉದ್ದೇಶಗಳಿಗನುಗುಣವಾಗಿ ಪಠ್ಯಕ್ರಮ ರೂಪಿತವಾಗುತ್ತದೆ. ಪಠ್ಯಕ್ರಮದಲ್ಲಿನ ವಿಷಯಗಳನ್ನು ಕಲಿಸುವುದರಿಂದಲೇ ಆಯಾ ಕಾಲದ ಶಿಕ್ಷಣದ ದೇಯೋದ್ಧೇಶಗಳು, ಜೀವನ ದರ್ಶನದ ಸಾಕ್ಷಾತ್ಕಾರವು ಈಡೇರುತ್ತದೆ.

          ಈ ಹಿನ್ನಲೆಯಲ್ಲಿ ’ವಡ್ಡಾರಾಧನೆ’ಯಲ್ಲಿ ಉಲ್ಲೇಖಿತವಾಗಿರುವ ಪಠ್ಯಕ್ರಮಸ್ವರೂಪವನ್ನು ವೇಚಿಸಿದಾಗ ವೇದಗಳು, ವೇದಾಂಗಗಳು, ಧರ್ಮಶಾಸ್ತ್ರಗಳು ಅಥವಾ ಸ್ಮೃತಿಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜ್ಷಾನದ ನೆಲೆಕಟ್ಟಿನಲ್ಲಿ ವ್ಯಕ್ತಿಯ ಚಾರಿತ್ರ್ಯವನ್ನು ನಿರ್ಮಿಸಿ ಆ ಮೂಲಕ ಮಾನವನ ಪರಮೋಚ್ಛ ಗುರಿಯಾದ ಮೋಕ್ಷದೆಡೆಗೆ ಕರೆದೊಯ್ಯಲು ಸಹಕಾರಿಯಾಗಿರುತ್ತಿದ್ದವು. ಮೀಮಾಂಸಾ - ಕ್ರಿಯಾಶಕ್ತಿಯನ್ನೂ, ನ್ಯಾಯವಿಸ್ತರ - ವಾಕ್ ಶಕ್ತಿಯನ್ನೂ ಪ್ರಮಾಣವು - ಸೂಕ್ಮದರ್ಶಿತ್ವವನ್ನೂ, ಛಂದಸ್ಸು, ಅಲಂಕಾರ, ಕಾವ್ಯ, ನಾಟಕ - ಭಾವನಾತ್ಮಕತೆಯನ್ನೂ ಭಾವಾಭಿವ್ಯಕ್ತಿಯನ್ನು ವ್ಯಕ್ತಿಯಲ್ಲಿ ಪ್ರಚೋದಿಸುತ್ತದ್ದವು. ಪ್ರಾಣಿ ಹಾಗೂ ಮಾನವ ವೈದ್ಯಕೀಯ ಶಾಸ್ತ್ರಗಳುಸಾಮುದ್ರಿಕ, ಜ್ಯೋತಿಷ್ಯ ಹಾಗೂ ಮಂತ್ರವಿದ್ಯೆಗಳು ವ್ಯಕ್ತಿಗಳ ಜೀವನೋಪಾರ್ಜನೆಗೆ ವೃತ್ತಿಶೀಕ್ಷಣ ನೀಡಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದವು. ’ವಡ್ಡಾರಾಧನೆ’ಯಲ್ಲಿ ಬರುವ ವಿದ್ಯುಚ್ಛೋರನ ಕಥೆಯಲ್ಲಿ ಚೋರ ವಿದ್ಯಾಪ್ರಕಾರಗಳನ್ನು ಹೇಳಿದೆ. ಇದರಿಂದ ಕಳ್ಳತನ ನಡೆದ ಬಗೆಯನ್ನು ತಿಳಿದು, ಕಳ್ಳನನ್ನು ಹಿಡಿಯಲೂ ಹಾಗೂ ಮುಂದೆ ಆ ರೀತಿ ಕಳ್ಳತನ ನಡೆಯದಂತೆ ಏರ್ಪಡಿಸಲು ನೆರವಾಗುತ್ತದೆ. ಇದರಿಂದ ಸ್ಫಷ್ಟವಾಗುವ ಅಂಶವೆಂದರೇ ಚೋರತನವು ಅಂದು ಅತ್ಯಂತ ಹೆಚ್ಚಿನ ಪ್ರಮುಖ್ಯತೆ ಪಡೆದ ಅಪರಾಧವೆಂದು ಪರಿಗಣಿಸಲ್ಪಟ್ಟು ಅದನ್ನು ಪತ್ತೆ ಹಚ್ಚಿ ವಿವಾರಿಸುವ ನಿಟ್ಟಿನಲ್ಲಿ ಕೆಲವು ಗ್ರಂಥಗಳನ್ನೂ ರಚಿಸಿದ್ದರು ಎಂದು. ಅಂತಹ ಗ್ರಂಥಗಳಾದ ಕರ್ಪಟಶಾಸ್ತ್ರ ಮತ್ತು ಸುರಖಶಾಸ್ತ್ರಗಳಲ್ಲಿ ಕಳ್ಳನನ್ನು ವಿಧಾನಗಳನ್ನೂ, ಕಳ್ಳನನ್ನು ಯಾವ ರೀತಿಯ ಶಿಕ್ಷೆಗೆ ಒಳಪಡಿಸಬೇಕೆಂಬ ನಿಯಮಗಳನ್ನೂ ಹೇಳಲಾಗಿದ್ದು ಅವುಗಳನ್ನು ಇಂದೂ ಕಳ್ಳತನವನ್ನು ಪತ್ತೆ ಹಚ್ಚುವ, ಕಳ್ಳತನವನ್ನು ತಡೆಯುವ, ಕಳ್ಳತನಕ್ಕೆ ಸಂಬಂಧಿಸಿದ ಅಪರಾಧ ಕಾಯ್ದೆಗಳನ್ನು ರಚಿಸುವ ಸಂದರ್ಭದಲ್ಲಿ ಈ ಶಾಸ್ತ್ರಗಳಲ್ಲಿ ಹೇಳಿದ ಕೆಲವು ಅಂಶಗಳನ್ನು ಸೇರಿಸಲು ಯೋಗ್ಯವಾಗಿದೆ ಎಂದು ಈ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆಯಿದೆ.

          ’ವಡ್ಡಾರಾಧನೆ’ ಕೃತಿಯಲ್ಲಿ ಹೇಳಿರುವ ಶೈಕ್ಷಣಿಕ ವಿಧಾನಗಳಾದ ಸ್ವಾಧ್ಯಾಯ, ವಾದ, ವ್ಯಾಖ್ಯಾನ ಹಾಗೂ ವಾಕ್ಯಾರ್ಥಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೂ ಮಹತ್ವದ ಸ್ಥಾನ ಪಡೆಯಬಹುದಾಗಿದೆ ಮತ್ತು ಪಡೆಯಬೇಕಾಗಿದೆ. ಇಂದು ಪ್ರಚಲಿತವಾಗಿರುವ ಶಿಕ್ಷಣ ವಿಧಾನಗಳಾದ ಕಥನ, ವಿವರಣೆ, ವರ್ಣನೆ, ಚರ್ಚೆ, ಪ್ರಶ್ನೋತ್ತರ, ನಿರೂಪಣೆ ಮುಂತಾದವುಗಳು ಈ ಮೇಲಿನ ಶಿಕ್ಷಣ ವಿಧಾನಗಳಲ್ಲಿ ಅಡಕವಾಗಿವೆಯಾದರೂ ಸ್ವಾಧ್ಯಾಯ ಹಾಗೂ ಮನನ ವಿಧಾನಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಅಗತ್ಯವಿದೆ.

ಆಧಾರ : ’ವಡ್ಡಾರಾಧನೆ’, ಸಂ: ಡಿ.ಎಲ್.ನರಸಿಂಹಾಚಾರ್

-------------------------



Monday, July 29, 2013

ಸವಣೂರಿನ ಚಂದ್ರನಾಥ ಬಸದಿ

ಶ್ರದ್ದಾಕೇಂದ್ರ ಸವಣೂರಿನ ಚಂದ್ರನಾಥ ಬಸದಿ

                                                                                              *ಪ್ರವೀಣ್ ಚೆನ್ನಾವರ

ದ.ಕ.ಜಿಲ್ಲೆಯು ಹಲವಾರು ಜೈನ ಬಸದಿಗಳ ತಾಣವಾಗಿದೆ.ಈ ಬಸದಿಗಳ ವಾಸ್ತುಶಿಲ್ಪಗಳ,ಕಟ್ಟಡ ವಿನ್ಯಾಸ ಅವರ್ಣನೀಯ.ಇಂತಹ ಬಸದಿಗಳಲ್ಲಿ ಶ್ರೇಷ್ಠ ಬಸದಿ ಪುತ್ತೂರು ತಾಲೂಕಿನ ಸವಣೂರಿನ ಪುಷ್ಪಪುರದಲ್ಲಿದೆ.ಜೈನರ ಎಂಟನೇ ತೀರ್ಥಂಕರ ಚಂದ್ರನಾಥ ಸ್ವಾಮಿಯಿಂದ ಸ್ಥಾಪನೆಯಾಗಿದೆಯೆನ್ನಲಾಗಿರುವ ಈ ಬಸದಿಗೆ ಸುಮಾರು ೧೫೦೦ ವರ್ಷಗಳ ಇತಿಹಾಸವಿದೆ.
ಕರ್ನಾಟಕದ ಎಲ್ಲಾ ಬಸದಿಗಳಲ್ಲಿ ಪದ್ಮಾವತಿ ದೇವಿಯೂ   ಉತ್ತರಭಾಗದಲ್ಲಿ  ನಲೆನಿಂತಿದ್ದರೆ ಇಲ್ಲಿನ ಬಸದಿಯಲ್ಲಿ ಪದ್ಮಾವತಿ ದೇ ವಿಯು ಪೂರ್ವಭಾಗದಲ್ಲಿನಿಂತಿದ್ದಾರೆ.ಭಕ್ತರು ದೇವಿಗೆ ಹೂವಿನ ಪೂಜೆಯ ಮೂಲಕ ತಮ್ಮ ಬೇಡಿಕೆಯಿಡುತ್ತಾರೆ.ಪೂಜೆಯ ವೇಳೆಯಲ್ಲಿ ದೇವಿಯ ಬಲಭಾಗದಿಂದ ಹೂವು ಬಿದ್ದರೆ ತಮ್ಮ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ..ಪುತ್ತೂರು ತಾಲೂಕಿನ ಸವಣೂರು ಹಾಗೂ ಉಡುಪಿ ತಾಲೂಕಿನ ಅಲೆವೂರು ಜೈನ ಶ್ರಾವಿಕರಿಂದ ತುಂಬಿತುಳುಕಿದ ಊರೆಂದು  ಹೇಳುತ್ತಾರೆ.
front view basadi.jpg
sssಸವಣೂರಿನ ಜಿನಮಂದಿರದ ಪಶ್ಚಿಮಕ್ಕೆ ಒಂದು ಕಿ.ಮೀ ದೂರವಿರುವ ಮಠವೆಂಬ ಸ್ಥಳದ ತನಕ ಪುದ್ದೊಟ್ಟು ಎಂಬ ಹೆಸರಿನ ಪೇಟೆ ಇದ್ದು ಇಲ್ಲಿ ನೂರಾರು ಮನೆಗಳಿದ್ದವು ಎನ್ನುತ್ತಾರೆ ಎಂಬುದಕ್ಕೆ ಪ್ರತೀಕವಾಗಿ ನೂರೊಂದು ಬಾವಿಗಳ ಕುರುಹುಗಳು ಸುಮಾರು ಹಿಂದಿನ ತನಕ ಕಾಣುತ್ತಿದ್ದವು.ಆದರಿಂದ ಹಿಂದೆ ಜೈನ ಶ್ರಾವಣರು ಇಲ್ಲಿ ನೆಲೆಸಿದ ಕಾರಣ ಶ್ರವಣೂರು (ಶ್ರವಣರ ಊರು) ಮುಂದೆ ಸವಣೂರು ಎಂಬುದು ಆಗಿರಬೇಕು.
padmavati amma.JPG
ಇಲ್ಲಿನ ಮೂಲ ಬಸದಿಯಲ್ಲಿ ಚಂದ್ರನಾಥ ಸ್ವಾಮಿಯ ಶಿಲಾಬಿಂಬವಿದ್ದು ಜೀರ್ಣೊದ್ದಾರ ಸಮಯದಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ಬಸದಿಯಲ್ಲಿದ್ದ  ಪಾರ್ಶ್ವನಾಥ ಸ್ವಾಮಿಯ ಲೋಹದ ಬಿಂಬವನ್ನು ಸ್ಥಾಪಿಸಲಾಗಿದೆ.ಈಗ ಅದೇ ಬಿಂಬವಿದೆ. ಈ ಹಿಂದಿನ ಚಂದ್ರನಾಥ ಸ್ವಾಮಿಯ ಬಿಂಬವನ್ನು ಕುಮಾರಧಾರನದಿಯಲ್ಲಿ ವಿಸರ್ಜನೆ ಮಾಡುವಾಗ ಎರಡು ಸಲ ಅದು ಮುಳುಗದೆ ತೇಲಿ ಬಂತಂತೆ.ಆಗ ಮಾಡಿಕೊಂಡ ಹರಿಕೆಯಂತೆ ದೇವರಿಗೆ ನಿತ್ಯ ಪೂಜೆ ಸಲ್ಲಿಸುವಾಗ ಮೊದಲು ಚಂದ್ರನಾಥ ಸ್ವಾಮಿಯ ಸ್ತುತಿಪಾಠ ಮಾಡಿ ಆನಂತರ ಪಾರ್ಶ್ವನಾಥ ಸ್ತುತಿ ಮಾಡಿ ಪೂಜೆ ಮಾಡುತ್ತೇವೆ ಎಂದಾಗ ಬಿಂಬವು ನದಿ ನೀರಿನಲ್ಲಿ ಮುಳುಗಿತಂತೆ ಆದ್ದರಿಂದ ಈಗಲೂ ಕೂಡ ಮೊದಲನೆಯದಾಗಿ ಶ್ರೀ ಚಂದ್ರನಾಥಯ ನಮಃ ಎಂದು ಹೇಳುತ್ತಾರೆ.

ಮಕ್ಕಳ ಬಸದಿ
ಮುಖ್ಯಬಸದಿಯ ಎದುರು ಗುಡ್ಡದಲ್ಲಿ ಮಕ್ಕಳ ಬಸದಿಯಿದ್ದು ಇದು ಕರಿಕಲ್ಲಿನಿಂದ ನಿರ್ಮಿಸಿದ್ದಾಗಿದೆ.ಇದನ್ನು ಮಕ್ಕಳೇ ಸೇರಿ ರಚಿಸದ್ದಾಗಿದೆ ಎಂದು ಹೇಳಲಾಗಿದೆ.ಇಲ್ಲಿ ಪಾರ್ಶ್ವನಾಥ ಸ್ವಾಮಿಯಿದ್ದು ಅದರ ಎಡಬಾಗದಲ್ಲಿ ಧgಣೇಂದ್ರ , ಬಲಭಾಗದಲ್ಲಿ ಪದ್ಮಾವತಿಯು ಯಕ್ಷಯಕ್ಷಿಯಾಗಿದ್ದಾರೆ. ಮಕ್ಕಳ ಬಸದಿಯ ಹಿಂಬದಿಯ ಭಾಗದಲ್ಲಿ ಜಿನೈಕ್ಯರಾದ ಜೈನಮುನಿಗಳ ಸ್ತೂಪಗಳು ಕಾಣ ಸಿಗುತ್ತಿದೆ. ಶ್ರೀಕ್ಷೇತ್ರ ಹೊಂಬುಜ ಮಠದ ಪೀಠ ಅಧಿಕಾರಕ್ಕೊಳಪಟ್ಟಿರುವ ಈ ಜಿನಮಂದಿರ ಈ ಭಾಗದ ಭಕ್ತರ ಶ್ರದ್ದಾಕೇಂದ್ರವಾಗಿದೆ.
makkala basadi.jpg
ಹದಿನಾರು ಎಸಳಿನ ಕೇಪುಳ ಹೂವು
ಇಲ್ಲಿನ ಇನ್ನೊಂದು ವಿಶೇಷತೆ ೧೬ ಎಸಳಿನ ಕೇಪಲ ಹೂ ನಿತ್ಯ ಅರಳಿ ಶೋಭಿಸುತ್ತಿರುವುದು.ಈ ಕ್ಷೇತ್ರದಲ್ಲಿ ಪದ್ಮಾವತಿ ಮಾತೆಯ ಕೃಪಾಕಟಾಕ್ಷ ಅತಿಶಯವಾಗಿದ್ದು ಈ ಕ್ಷೇತ್ರ ಬಡಗು ದಿಕ್ಕಿಗೆ ಸಂಪೂರ್ಣವಾಗಿ ತೆರೆದುಕೊಂಡಿದೆ.ಇಲ್ಲಿಗೆ ಪೂಬೆಟ್ಟು ಅಥವಾ ಪುಷ್ಪಪುರವೆಂದು ಹೆಸರು ಪಡೆಯಲು ಇಲ್ಲಿರುವ ಹದಿನಾರು ಎಸಳಿನ ಕೇಪಲ ಹೂವು ನಿತ್ಯ ಅರಳಿ ಶೋಭಿಸುತ್ತಿರುವುದು ಕೂಡಾ ಕಾರಣವಾಗಿರಬಹುದು ಎನ್ನುತ್ತಾರೆ.
ಇಲ್ಲಿ ಪಾಶನಾಥ ಸ್ವಾಮಿಗೆ ಕ್ಷೀರಾಭಿಷೇಕ,ಪದ್ಮಾವತಿ ಮಾತೆಗೆ ಕುಂಕುಮಾರ್ಚನೆ,ವರಹ ಪೂಜೆ,ನಿತ್ಯ ಪೂಜೆ ನಡೆಯುತ್ತದೆ.
            
ವಿಳಾಸ:ಪ್ರವೀಣ್ ಕುಮಾರ್
      ಚೆನ್ನಾವರ ಮನೆ,
      ಪಾಲ್ತಾಡಿ ಅಂಚೆ & ಗ್ರಾಮ
      ಪುತ್ತೂರು.ದ.ಕ.೫೭೪೨೦
ಮೊ:೯೯೦೨೪೫೯೫೪೩











Sunday, July 28, 2013

ರಾಜ ರಂಗಪ್ಪನಾಯಕನ ಅಪ್ರಕಟಿತ ತಾಮ್ರಶಾಸನ

²gÁ-gÀvÀßVjAiÀÄ gÁd gÀAUÀ¥Àà£À C¥ÀæPÀnvÀ vÁªÀÄæ±Á¸À£À
qÁ.J¸ï.ªÉÊ. ¸ÉÆÃªÀıÉÃRgï
¸ÀºÁAiÀÄPÀ ¥ÁæzsÁå¥ÀPÀgÀÄ
¥ÁæaãÀ EwºÁ¸À ªÀÄvÀÄÛ ¥ÀÄgÁvÀvÀé CzsÀåAiÀÄ£À «¨sÁUÀ
PÀ£ÀßqÀ «±Àé«zÁå®AiÀÄ, ºÀA¦, «zÁågÀtå


PÀ£ÁðlPÀzÀ ZÀjvÉæAiÀÄ°è «dAiÀÄ£ÀUÀgÉÆÃvÀÛgÀ PÁ®zÀ D½éPÉAiÀÄ°è £ÁAiÀÄPÀ CgÀ¸ÀgÀ ¥ÁvÀæ vÀÄA¨Á »jzÀÄ. F CªÀ¢üAiÀİè C£ÉÃPÀgÀÄ ¸ÁªÀÄAvÀgÁV ºÁUÀÆ ¸ÀévÀAvÀæªÁV D½éPÉ £ÀqɹzÁÝgÉ. EªÀgÀ°è avÀæzÀÄUÀð ªÀÄvÀÄÛ vÀĪÀÄPÀÆgÀÄ ¥Àj¸ÀgÀzÀ°è D½éPÉ ªÀiÁr vÀªÀÄäzÉà DzÀ PÉÆqÀÄUÉUÀ¼À£ÀÄß ¤ÃrzÀªÀgÀ°è ºÀgÀw £ÁAiÀÄPÀgÀÄ ¥ÀæªÀÄÄRgÁVgÀĪÀgÀÄ. F ºÀgÀw ªÀÄ£ÉvÀ£ÀªÀÅ C£ÉÃPÀ PÀªÀ®ÄUÀ¼À°è ¨ÉÃgÉ ¨ÉÃgÀAiÀiÁV D½gÀĪÀÅzÀ£ÀÄß PÁt§ºÀÄzÀÄ. CªÀgÀ°è ²gÁ-gÀvÀßVj ªÀÄ£ÉvÀ£ÀªÀÇ ªÀÄÄRåªÁVzÉ.
²gÁ-gÀvÀßVj ªÀÄ£ÉvÀ£ÀªÀÅ DgÀA¨sÀzÀ°è gÀvÀßVjAiÀÄ£ÀÄß gÁdzsÁ¤AiÀÄ£ÁßV ªÀiÁrPÉÆAqÀÄ DqÀ½vÀ £ÀqɹzÀÝgÀÄ. £ÀAvÀgÀ EªÀgÀÄ ²gÁªÀ£ÀÄß vÀªÀÄä PÉÃAzÀæªÀ£ÁßV ªÀiÁrPÉÆAqÀÄ DqÀ½vÀ £ÀqɹzÀÄzÀ£ÀÄß PÁt§ºÀÄzÀÄ. F ªÀÄ£ÉvÀ£ÀzÀ gÀAUÀ¥Àà  ರಾd¤UÉ ¸ÀA§A¢ü¹zÀ vÁªÀÄæ¥ÀlªÉÇAzÀÄ £Á£ÀÄ PÉÊUÉÆAqÀ PÉëÃvÀæPÁAiÀÄðzÀ ¸ÀAzÀ¨sÀðzÀ°è ¨É¼ÀQUÉ §A¢zÉ. EzÀÄ ²gÁ-gÀvÀßVj £ÁAiÀÄPÀ CgÀ¸ÀgÀ ªÀÄÆ®£É¯É, ªÀÄ£ÉvÀ£À, ªÀÄÆ®¥ÀÄgÀĵÀ£À®èzÉ EªÀgÀÄ ¸Áܦ¹zÀ UÁæªÀÄ, PÉÆÃmÉ, zÉêÁ®AiÀÄUÀ¼À «ªÀgÀUÀ¼À£ÀÄß ¸ÀàµÀ×¥Àr¸ÀÄwÛgÀĪÀÅzÀÄ UÀªÀÄ£ÁºÀð. ºÁUÉAiÉÄà zÉêÁ®AiÀÄzÀ ¥ÀÆeÁjPÉ «µÀAiÀÄzÀ°è GAmÁzÀ ªÉÄîéUÀðUÀ¼À ªÀÄ£À¸ÁÛ¥ÀªÀÇ E°è ¥ÀæPÀlªÁVgÀĪÀÅzÀÄ UÀªÀĤÃAiÀÄ.

vÁªÀÄæ¥Àl «ªÀgÀ: ¥Àæ¸ÀÄÛvÀ vÁªÀÄæ¥ÀlªÀÅ avÀæzÀÄUÀð f¯ÉèAiÀÄ »jAiÀÄÆgÀÄ vÁ®ÆQ£À ªÀĸÀ̯ï UÁæªÀÄzÀ°è PÀAqÀħA¢zÉ. EzÀ£ÀÄß UÁæªÀÄzÀ ªÁ°äÃQ ¸ÀªÀÄÄzÁAiÀÄzÀ PÉ. ¥ÁAqÀÄgÀAUÀ¥Àà JA§ÄªÀªÀgÀ ªÀÄ£ÉAiÀİèzÀÄÝ, ²æÃ JA.J. ªÉAPÀmÉñï JA§ÄªÀªÀgÀ ¸ÀºÀPÁgÀ¢AzÀ ¨É¼ÀQUÉ §gÀ®Ä ¸ÁzsÀåªÁVzÉ. F vÁªÀÄæ¥ÀlzÀ GzÀÝ ¸ÀĪÀiÁgÀÄ 13 EAZÀÄ GzÀÝ, 9 MAZÀÄ CUÀ®ªÁVzÉ. vÁªÀÄæ¥ÀlzÀ JgÀqÀÆ PÀqÉUÀ¼À°è ±Á¸À£À«zÉ. ªÀÄÄA¨sÁUÀzÀ°è 27 ¸Á®ÄUÀ¼ÀÄ, »A¨sÁUÀzÀ°è 10 ¸Á®ÄUÀ½ªÉ. ¨sÁµÉ ºÁUÀÆ °¦ PÀ£ÀßqÀªÁVzÀÄÝ, ¸ÀÄ®¨sÀªÁV NzÀĪÀAwzÉ.
vÁªÀÄæ¥ÀlzÀ ªÉÄïÁãUÀzÀ°è ``²æÃ gÁd gÀAUÀ¥Àà gÁd¸ÀA¸ÁÜ£À ²gÁ-gÀvÀßVj'' JA§ÄzÁV ªÀÈvÀÛzÀ°è §gÉAiÀįÁVzÉ. F ±Á¸À£ÀzÀ°è JgÀqÀÄ PÁ®UÀ¼À G¯ÉèÃRUÀ½ªÉ. MAzÀ£ÉAiÀÄzÀÄ Qæ.±À. 1933£Éà dįÉÊ 12 JA§ÄzÀÄ. E£ÉÆßAzÀÄ ±Á°ªÁºÀ£À ±ÀPÀªÀgÀĵÀ 1050£Éà gÁPÀë¸À£ÁªÀÄ ¸ÀAªÀvÀìgÀ PÁwðPÀ ±ÀÄ 10 JA¢gÀĪÀÅzÀÄ.
F vÁªÀÄæ±Á¸À£ÀªÀ£ÀÄß CA§®UÉgÉAiÀÄ ¤ªÀiÁðtzÀ ¸ÀAzÀ¨sÀðzÀ°è ºÁQ¹zÀÄÝzÀÄ ¸ÀàµÀתÁUÀÄvÀÛzÉ. DzÀgÉ F ªÀÄÆ® ±Á¸À£ÀzÀ ¥ÀæwAiÀÄ£ÀÄß ªÀĸÀ̯ï UÁæªÀÄzÀ CA§®£ÁAiÀÄÌ£À ªÀÄUÀ zÁ¸À£ÁAiÀÄÌ, wªÀÄä£ÁAiÀÄÌ ºÁUÀÆ ºÀÄZÀÑgÀAUÀ£ÁAiÀÄÌ£À ªÀÄUÀ gÀAUÀ£ÁAiÀÄÌgÀ PÉÆÃjPÉAiÀÄ ªÉÄÃgÉUÉ PÁ¦ü(¥Àæw) ªÀiÁr¹PÉÆlÖ ¸ÀAUÀw DgÀA¨sÀzÀ°è ªÀÄvÀÄÛ PÉÆ£ÉAiÀİè zÁR°¸À¯ÁVzÉ. G½zÀ ¨sÁUÀªÀÅ ªÀÄÆ®zÀAvÉ ``²æÃ ¸ÁgÁéqÉñÀégÀ ¥Àæ¸À£Àß'' JA§ÄzÁV DgÀA¨sÀUÉÆArzÉ. EzÀgÀ PÁ®ªÀ£ÀÄß ±À.±ÀPÀ 1050 JAzÀÄ ºÉýzÉ. F PÀÄjvÀÄ ºÉaÑ£À CzsÀåAiÀÄ£À CUÀvÀå«zÉ.
 <http://3.bp.blogspot.com/-

±Á¸À£ÀzÀ ªÀĺÀvÀé
F vÁªÀÄæ±Á¸À£ÀªÀÅ ²gÁ-gÀvÀßVj ªÀÄ£ÉvÀ£ÀzÀ ªÀÄÆ®¥ÀÄgÀĵÀ w¥Àà£ÁAiÀÄÌ£ÉAzÀÄ ºÉýzÉ. C®èzÉ EªÀgÀÄ «dAiÀÄ£ÀUÀgÀ gÁdå¢AzÀ §AzÀªÀgÉAzÀÆ w½¸ÀÄvÀÛzÉ. F w¥Àà£ÁAiÀÄÌ£ÀÄ ºÀwð ¸ÁgÁél¢AzÀ §AzÀªÀ£ÉAzÀÆEªÀ£ÉÆA¢UÉ ®ZÀÑªÉÆ£ÉÃgÀ ¨ÉƪÀÄä£ÁAiÀÄÌ ºÁUÀÆ PÁªÀÄ£ÁAiÀÄÌ£À ¸ÀAvÀwAiÀĪÀgÀÄ §AzÀgÉAzÀÆ zÀÈqsÀ¥Àr¸ÀÄvÀÛzÉ. C®èzÉ w¥Àà£ÁAiÀÄÌ£ÀÄ ¸Áܦ¹zÀ UÁæªÀÄ, PÉÆÃmÉ ªÀÄvÀÄÛ zÉêÁ®UÀ¼À «ªÀgÀªÀ£ÀÆß E°è PÁt§ºÀÄzÀÄ. w¥Àà£ÁAiÀÄÌ£ÀÄ ªÉÆzÀ°UÉ CAPÀ¸ÀªÀÄÄzÀæzÀ PÉÆÃmÉAiÀÄ£ÀÄß ¤«Äð¹, £ÀAvÀgÀ ºÀwð UÁæªÀĪÀ£ÀÄß ¸Áܦ¹ C°è ¸ÁªÀðqÉñÀégÀ¸Áé«Ä ºÁUÀÆ «ÃgÀ¨sÀzÀæ zÉêÀgÀ zÉêÀ¸ÁÜ£ÀUÀ¼À£ÀÄß ¤ªÀiÁðt ªÀiÁrzÀ£ÉAzÀÄ ºÉýzÉ. F zÉêÁ®AiÀÄUÀ¼À£ÀÄß EA¢UÀÆ ºÀgÀw UÁæªÀÄzÀ°è PÁt§ºÀÄzÀÄ. ªÁ¸ÀÄÛ±ÉʰAiÀÄ£ÀÄß UÀªÀĤ¹zÀgÉ F zÉêÁ®AiÀÄUÀ¼À PÁ®ªÀÇ EzÀPÉÌ ¸ÀjºÉÆAzÀÄvÀÛzÉ. ºÁUÉAiÉÄà ºÀgÀw UÁæªÀÄPÉÌ ¸Àé®àªÉà zÀÆgÀzÀ°ègÀĪÀ CA§®UÉgÉ UÁæªÀĪÀ£ÀÄß EzÉà ¸ÀAzÀ¨sÀðzÀ°è ¸Áܦ¹ C°è vÀ£Àß ªÀÄ£ÉzÉêÀgÁzÀ gÀAUÀ¸Áé«Ä zÉêÁ®AiÀĪÀ£ÀÄß ¤ªÀiÁðt ªÀiÁrzÀ£ÉAzÀÆ ¸ÀàµÀÖ¥Àr¸ÀÄvÀÛzÉ. CA§®UÉgÉAiÀÄ gÀAUÀ£ÁxÀ¸Áé«Ä zÉêÁ®AiÀĪÀÅ «dAiÀÄ£ÀUÀgÀ ±ÉʰAiÀİègÀĪÀ F ¨sÁUÀzÀ ¸ÀÄAzÀgÀªÁzÀ zÉêÁ®AiÀĪÁVzÉ. ¸ÀzÁ²ªÀgÁAiÀÄ£À((EC-XI, Hiriyur-21, 1554AD) PÁ®zÀ°è F gÀAUÀ£ÁxÀ(±Á¸À£ÀzÀ°è wgÀĪÉÃAUÀ¼À£ÁxÀ zÉêÀjUÉ JA¢zÉ) zÉêÀjUÉ G¥ÀjPÀgÀºÀ½î ¥Àæw£ÁªÀĪÁzÀ ªÉAUÀ¼Á¥ÀÄgÀªÀ£ÀÄß zÁ£À ªÀiÁrzÀ «ªÀgÀªÀżÀî ²¯Á±Á¸À£À«zÉ. EzÀPÉÌ ¥ÀÆgÀPÀªÉ£ÀÄߪÀAvÉ Qæ.±À.1517gÀ ²æÃ PÀȵÀÚzÉêÀgÁAiÀÄ£À PÁ®zÀ ±Á¸À£ÀzÀ°è(EC-XI, Hiriyur-36, 1517AD) ²æÃªÀÄ£ÀäºÁ£ÁAiÀÄPÁZÁAiÀÄð ºÀgÀvÉʪÀÄAUÀ¼À w¥Àà¼À£ÁAiÀÄÌ JA§ ºÉ¸Àj£À G¯ÉèÃR«zÉ. EzÀjAzÀ ²æÃPÀȵÀÚzÉêÀgÁAiÀÄ£À PÁ®zÀ°è w¥Àà£ÁAiÀÄÌ£ÀÄ ºÀgÀw ªÀÄvÀÄÛ LªÀÄAUÀ¼ÀzÀ DqÀ½vÀªÀ£ÀÄß £ÉÆÃrPÉÆ¼ÀÄîwÛzÀÝ£ÉA§ÄzÀÄ ²¯Á±Á¸À£À ªÀÄvÀÄÛ ¥Àæ¸ÀÄÛvÀ vÁªÀÄæ¥ÀlUÀ¼À §gÀºÀUÀ½AzÀ ¸ÀÖµÀתÁUÀÄvÀÛzÉ. F ºÉÆwÛUÉ ºÀgÀw ªÀÄvÀÄÛ LªÀÄAUÀ¼ÀUÀ¼ÀÄ DqÀ½vÀzÀ ¥ÀæªÀÄÄR PÉÃAzÀæUÀ¼ÁVzÀݪÀÅ. F »£É߯ÉAiÀİè gÀAUÀ£ÁxÀ¸Áé«Ä zÉêÁ®AiÀĪÀÅ CA§®UÉgÉAiÀÄ°è ²æÃPÀȵÀÚzÉêÀgÁAiÀÄ£À PÁ®zÀ ºÉÆwÛUÉ w¥Àà£ÁAiÀÄÌ£À £ÉÃvÀÈvÀézÀ°è ¤ªÀiÁðtªÁVgÀĪÀÅzÀ£ÀÄß RavÀ¥Àr¸À§ºÀÄzÀÄ.
DSC00271.JPG
w¥Àà£ÁAiÀÄÌ£ÀÄ CA§®UÉgÉ UÁæªÀÄ ªÀÄvÀÄÛ zÉêÁ®AiÀÄUÀ¼À£ÀÄß PÀnÖ¹ C°è£À £ÁAiÀÄPÀvÀ£À, UËrPÉ, gÀAUÀ£ÁxÀ¸Áé«Ä zÉêÁ®AiÀÄzÀ AiÀÄdªÀiÁ¤PÉ ºÁUÀÆ ¥ÀÆeÁjPÉAiÀÄ PÁAiÀÄðUÀ½UÉ ªÁ°äÃQ ªÀÄvÀzÀ ºÁUÀÆ ¨ÉƪÀÄä£ÁAiÀÄÌ, PÁªÀÄ£ÁAiÀÄÌ£À ¸ÀAvÀwAiÀĪÀ£ÁzÀ gÀAUÀ£ÁAiÀÄ̤UÉ ªÀ»¸ÀÄvÁÛ£É. DzÀgÉ EªÀÅUÀ¼À°è zÉêÁ®AiÀÄzÀ ¥ÀÆeÁPÁAiÀÄðPÉÌ ªÁ°äÃQ ªÀÄvÀzÀªÀgÀ£ÀÄß £ÉëĹzÀÄzÀÄ ªÉÄîéUÀðzÀ ²ªÁZÁgÀ(°AUÁAiÀÄvÀ)zÀªÀgÀÄ ªÀÄvÀÄÛ ¨ÁæºÀätgÀÄ «gÉÆÃ¢ü¹zÀ «ªÀgÀ«zÉ. C®èzÉ F PÀÄjvÀÄ w¥Àà£ÁAiÀÄ̤UÉ CjPÉ ªÀiÁrPÉÆ¼ÀÄîªÀ ¥Àæ¸ÀAUÀªÀ£ÀÄß ±Á¸À£ÀzÀ°è, ``ªÁ°äPÀgÀ PÉÊAiÀİè wÃxÀð ¥Àæ¸ÁzÀ vÉUÉzÀÄPÉÆ¼ÀÄîªÀÅzÀÄ ºÉÃUÉ'' JAzÀÄ ºÉýzÉ. DUÀ w¥Àà£ÁAiÀÄÌ£ÀÄ CªÀgÀ ªÀÄ£À«AiÀÄ£ÀÄß ¥ÀÄgÀ¸ÀÌj¹ ¨ÁæºÀät ªÀUÀðPÉÌ ¸ÉÃjzÀ PÉÆÃmÉPÉgÉAiÀÄ ±ÉªÉÄgÁAiÀÄ PÉñÀªÀ¥Àà JA§ÄªÀ£À£ÀÄß PÀgɹPÉÆAqÀÄ CªÀ¤UÉ zÉêÀgÀ ¥ÀÆeÉ ªÀiÁrPÉÆAqÀÄ ºÉÆÃUÀ®Ä £ÉëĸÀÄvÁÛ£É. DzÀgÉ gÀAUÀ£ÁAiÀÄ̤UÉ UÁæªÀÄzÀ UËrPÉ, £ÁAiÀÄPÀvÀ£À, zÉêÁ®AiÀÄzÀ AiÀÄdªÀiÁ¤PÉUÀ¼À£ÀÄß ¥ÀÄvÀæ¥ËvÀæ ¥ÁgÀA¥ÀAiÀÄðªÁV C£ÀĨsÀ«¹PÉÆAqÀÄ ºÉÆÃUÀĪÀAvÉ  DzÉò¹ F ±Á¸À£ÀªÀ£ÀÄß ºÁQ¹zÀÄzÁV w½zÀħgÀÄvÀÛzÉ.
 <https://blogger.googleusercontent.com/img/b/R29vZ2xl/AVvXsEjuI3ObEb1CVy_K0MhR6WCEG3EC-SPJkfiw2LZ-Qxa360oohGhQ7X6c3XHxTbpzKfGuOiQ98hVqUS5F_xYkjyFLHxmgp3oOhS588qa6UdUG8c6_fmtSITlp9pYh8AMFMuLQeO56P7H2OPU/s1600/SC-3.png>
vÁªÀÄæ±Á¸À£ÀzÀ PÉÆ£ÉAiÀİè JA¢£ÀAvÉ ±Á¥Á±ÀAiÀÄ«zÉ. EzÀgÀ°è ``F zÁ£À¥ÀvÀæzÀ PÀgÁjUÉ AiÀiÁgÁzÀgÀÆ vÀ¦àzÀ°è PÁ²AiÀİè UÉÆÃºÀvÉå ªÀiÁrzÀ ºÁUÉ, PÀëwæAiÀÄ PÀÄ®zÀ CgÀ¸ÀÄUÀ¼ÀÄ C¯ÁèAiÉÄAzÀ°è ¹AºÁ¸À£ÀPÉÌ zÉÆæÃºÀ ªÀiÁrzÀ ºÁUÉ'' JA¢zÉ. PÉÆ£ÉAiÀÄ°è ¸ÀA¸ÀÌøvÀ ±ÉÆèÃPÀªÁzÀ ``¸ÀéºÁ¸Á¢éUÀÄtÄ£ÁA ¥ÀÄtåA ¥ÀgÀzÀvÁÛ£ÀÄ¥Á®£ÀA ¥ÀgÀzÀvÁÛ¥ÀºÁgÉãÁ ¸ÀézÀvÀÛA ¤µÀáPÀA¨sÀªÉvï'' JA§ÄzÁVzÉ. ±ÉÆèÃPÀzÀ £ÀAvÀgÀ PÀA¸ÀzÀ°è £ÀªÀÄä »jAiÀÄgÀÄ PÉÆnÖgÀĪÀ zÁ£À¥ÀvÀæzÀ PÁ¦AiÀÄ£ÀÄß ¤ªÀÄUÉ PÉÆnÖgÀÄvÉÛêÉ. C¸À°UÉ ¸ÀjAiÀiÁVgÀÄvÉÛ JAzÀÄ ªÀÄPÁÌA vÁªÀgÀUÉgÉ ¸ÀA¸ÁÜ£ÀzÀ ªÉAPÀlgÀªÀÄt¥Àà, gÁdgÀAUÀ¥ÀàgÁd ²gÁ gÀvÀßVj JA§ÄzÁV £ÀªÀÄÆ¢¸À¯ÁVzÉ. EzÀÄ ªÀÄÆ® ±Á¸À£ÀzÀ ¥ÀæwAiÀÄ£ÀÄß £ÀPÀ®Ä ªÀiÁrPÉÆlÖ vÁªÀÄæ¥ÀlªÉA§ÄzÀÄ ¸ÀàµÀÖªÁUÀÄvÀÛzÉ. E°è G¯ÉèÃRªÁVgÀĪÀ gÁdgÀAUÀ¥Àà£ÀÄ Qæ.±À.1756jAzÀ 1778gÀªÀgÉUÉ ²gÁ¢AzÀ D½éPÉ ªÀiÁrzÀ ºÀgÀw ªÀÄ£ÉvÀ£ÀzÀ £ÁAiÀÄPÀgÀ CgÀ¸À£ÁVzÀÄÝ, ¥Àæ¸ÀÄÛvÀ vÁªÀÄæ¥ÀlªÀÅ 18£Éà ±ÀvÀªÀiÁ£ÀzÀ°è ¹zÀÞUÉÆArgÀĪÀÅzÀÄ ¸ÀàµÀÖªÁUÀÄvÀÛzÉ.

vÁªÀÄæ±Á¸À£ÀzÀ ªÀÄÆ® ¥ÁoÀ F PɼÀPÀAqÀAwzÉ:
²æÃ
gÁd gÀAUÀ¥Àà
gÁd ¸ÀA¸ÁÛ£À
²gÁ gÀvÀßV
j
²æÃªÀÄ£ïªÀĺÁªÀÄAqÀ¯ÉñÀégÀ Cwð¸ÀAªÉÄmï¸Àdð¸ÀA
¸ÁÜ£À ²gÁ gÀvÀßVj gÁd gÀAUÀ¥Àà gÁdgÀÄ ¸À£ï 1933£É ¬Ä
¹é dįÉÊ vÁjÃPÀÄ 12gÀ®Äè »jAiÀÄÆgÀ vÀ®ÆèPÀ ªÀĸÀ̯ï UÁæA
ªÀÄzÀ°ègÀĪÀ CA§®£ÁAiÀÄÌ£À ªÀÄUÀ zÁ¸À£ÁAiÀÄÌ|| CA§®£ÁAiÀÄÌ£À ªÀÄ
UÀ wªÀÄä£ÁAiÀÄÌ|| ºÀÄZÀÑgÀAUÀ£ÁAiÀÄÌ£À ªÀÄUÀ gÀAUÀ£ÁAiÀÄÌ ¬ÄªÀgÀÄUÀ¼ÀÄ £ÀªÀÄä
°è ºÁdgÁV CA§®UÉgÉ UÀÄrPÀnÖ£À CAzÀgÉ|| gÀAUÀ£ÁxÀ¸Áé«Ä «µÀAiÀÄ
zÀ°è £ÀªÀÄä »jAiÀĪÀgÀÄ PÉÆnÖgÀĪÀ zÁ£À¥ÀvÀæ|| PÁ¦ü PÉýPÉÆArzÀÝjA
zÀ £ÀªÀÄä°è|| ¸ÀªÀĸÁÛ£ÀzÀªÀgÀÄ PÉÆnÖgÀĪÀÅzÉãÉAzÀgÉ|| ²æÃ ¸ÁgÁéqÉñÀégÀ ¥Àæ
¸À£Àß|| ¸Àé¹Û²æÃ «dAiÀiÁ¨sÀÄåzÀAiÀÄ ±Á°ªÁºÀ£À ±ÀPÀ ªÀµÀðAUÀ¼ÀÄ 1050 £É gÁ
PÀë¸À£ÁªÀÄ ¸ÀªÀÄävÀìgÀzÀ PÁwðPÀ ±ÀÄzÀÝ 10AiÀÄ®Äè «dAiÀÄ£ÀUÀgÀzÀ gÁdå¢A
zÀ §AzÀAvÁªÀgÀÄ|| ªÀÄÆ®¥ÀÄgÀĵÀgÀÄ|| gÁd ªÀfÓÃgÀ w¥Àà£ÁAiÀÄÌ §AzÀÄ CAPÀ¸À
ªÀÄÄzÀæªÉA¨ÉÆ PÉÆmÉAiÀÄ¤ß PÀnÖ¹ vÀgÀĪÁAiÀÄ|| CwðAiÀÄA¨ÉÆ UÁæªÀÄ ¤
ªÀÄðt ªÀiÁrzÀgÀÄ| C°è ¸ÁªÀðqÉñÀégÀ¸Áé«Ä ¤ªÀiÁðt ªÀiÁr¹zÀgÀÄ|| «ÃgÀ¨sÀ
zÀæ zÉêÀgÀ zÉêÀ¸ÁÛ£À ¤ªÀiÁðt ªÀiÁr¹zÀgÀÄ|| C°èAzÀ CA§®UÉgÉà UÁæªÀÄ ¤ªÀiÁð
t ªÀiÁrzÀgÀÄ|| C°è ªÀÄ£ÉÃzÉêÀgÀÄ gÀAUÀ¸Áé«Ä zÉêÀgÀ ¤ªÀiÁðt ªÀiÁr¹zÀgÀÄ|| D
£ÀÄ UÁæªÀÄPÉÌ UËqÀgÀ £ÉªÀÄ||
PÀ ªÀiÁqÀ¨ÉÃPÉAzÀÄ AiÉÆZÀ£É ªÀiÁr| vÀªÀÄä ¸ÀAUÀqÀ ºÀwð ¸ÁgÁél¢AzÀ §A
zÀAvÁªÀgÀÄ| ®ZÀÑªÉÆ£ÉÆgÀÄ ¨ÉƪÀÄä£ÁAiÀÄÌ|| PÁªÀÄ£ÁAiÀÄÌ£À ¸ÀAvÀwAiÀĪÀgÀÄ
||gÀAUÀ£ÁAiÀÄÌ£À PÀj¹ ¬ÄUÁæªÀÄzÀ UËrPÉ ªÀiÁrPÉÆAqÀÄ ºÉÆUÀÄ AiÀÄA§ÄzÁV £ÉÃ
ªÀÄPÁ ªÀiÁrzÀgÀÄ||  ¬iÁZÉUÉ ²ªÁZÁgÀzÀªÀgÀÄ ¨ÁæAºÀtgÀÄ ¸ÀºÁ|| ªÀĺÁgÁ
eÉà ²æAiÀĪÀjUÉ CjPÉ ªÀiÁrzÀÄÝ|| ªÁ°äPÀgÀ PÉÊAiÀİè wÃxÀð ¥Àæ¸ÁzÀ vÉUÉzÀÄ
PÉÆ¼ÀÄîªÀzÀÄ ºÉÃUÉ AiÀÄA§zÁV CjPÉ ªÀiÁrPÉÆArzÀÝjAzÀ PÉÆnPÉgÉ ±ÉªÉÆ
gÁAiÀÄ PÉñÀªÀ¥Àà AiÀÄA§ÄªÀgÀ£ÀÄß PÀgÀ¹|| ¤ªÀÅ gÀAUÀ£ÁAiÀÄÌ ºÉýzÀ ªÉÆjUÉ||
zÉêÀgÀ ¥ÀÆeÉ ªÀiÁrPÉÆAqÀÄ ºÉÆVj| §AzÀAvÁªÀjUÉ wÃxÀð ¥Àæ¸ÁzÀ PÉÆlÄÖ
PÉÆAqÀÄ ºÉÆVj AiÀÄA§ÄzÁV ¤ªÀiÁð£À ªÀiÁr¹zÀgÀÄ|| gÀAUÀ£ÁAiÀÄÌ£À PÀgÉzÀÄ
UÁæªÀÄzÀ UËrPÉ PÉ®¸À £ÁAiÀÄÌvÀ£ÀzÀ PÉ®¸À zÉêÀ¸ÁÛ£ÀzÀ AiÀÄd
»A¨sÁUÀ
ªÀiÁ¤PÉ PÉ®¸À ¤ªÀÄä ¥ÀÄvÀæ¥ËvÀæ ¥ÁgÀA¥ÀgÀåªÁV C£ÀĨsÀ«¹
PÉÆAqÀÄ ¸ÀPÀðgÀzÀ ZÁPÀj ªÀiÁrPÉÆAqÀÄ ºÉÆÃUÀÄ AiÉÄA§ÄzÁV|| §gÀ¹
PÉÆlÖ zÁ£À¥ÀvÀæ ||¸À»|| ¬ÄzÀPÉÌ AiÀiÁgÁzÀgÀÆ C¯ÁèAiÀÄAzÀ°è
|| PÁ¹AiÀİè UÉÆºÀvÀå ªÀiÁrzÀ ºÁUÉ|| PÀëwæPÀÄ®zÀ CgÀ¸ÀÄUÀ¼ÀÄ C
¯ÁèAiÀÄAzÀ°è ¹AºÁ¸À£ÀPÉÌ zÉÆæºÀ ªÀiÁrzÀ ºÁUÉ||
¸ÀéºÁ¸ÁÛ¢éUÀÄtÄ£ÁA ¥ÀÄtÆåA|| ¥sÀgÀzÀvÁÛ£ÀÄ¥Á®£ÀA|| ¥ÀgÀzÀ
vÁÛ¥ÀºÁgÉãÁ|| ¸ÀézÀvÀÛA ¤µÀá®A¨sÀªÉvï|| ((£ÀªÀÄä »jAiÀĪÀgÀÄ PÉÆ
nÖgÀĪÀ zÁ£À¥ÀvÀæ PÁ¦üAiÀÄ£ÀÄß ¤ªÀÄUÉ PÉÆnÖgÀÄvÉæªÉ|| C¸À°UÉ
¸ÀjAiÀiÁVgÀÄvÉÛ|| ((ªÀÄPÁÌA vÁªÀgÀUÉgÉ|| ¸ÀA¸ÁÛ£ÀzÀ ||¥Á|| ªÉAPÀ
lgÀªÀt¥Àà|| gÁdgÀAUÀ¥Àà gÁd ²gÁ gÀvÀßVj))









Saturday, July 27, 2013

ಅಳಿಯಸಂತಾನ -ಇಂದಿರಾಹೆಗಡೆ

 
                                                                                                             
ಇಂದಿರಾ ಹೆಗಡೆ

   ಕುಲಶೇಖರ ಆಳುಪೇಂದ್ರನ ಶಾಸನದಲ್ಲಿ ಅಳಿಯ ಸಂತಾನ ಕುಟುಂಬ ಪದ್ಧತಿ


         ಕರ್ನಾಟಕದ ಕರಾವಳಿ ಭಾಗದ ತುಳುನಾಡು ಕರ್ನಾಟಕದ ಇತರ ಭಾಗಕ್ಕಿಂತ  ಸಾಂಸ್ಕೃತಿಕ ಮತ್ತು ಸಾಮಾಜಿಕ ಪದ್ಧತಿಯಲ್ಲಿ ಭಾರತದ ಇತರ ಭಾಗಕ್ಕಿಂತ ಭಿನ್ನವಾಗಿ ವಿಶಿಷ್ಠತೆಯನ್ನು ಪಡೆದಿದೆ. ಅಂತರ ಒಂದು ವಿಶಿಷ್ಠ ಸಾಮಾಜಿಕ ಪದ್ಧತಿ ಅಳಿಯ ಸಂತಾನ ಕುಟುಂಬ ಪದ್ಧತಿ ಅಥವಾ ಮಾತೃವಂಶೀಯ ಕುಟುಂಬ ಪದ್ಧತಿ. ಮಾತೃವಂಶೀಯ ಪದ್ಧತಿಯಲ್ಲೂ ರಾಜ್ಯವನ್ನು ಆಳುವ ಅರಸ ಪುರುಷನೇ. ಹೀಗಾಗಿ ಒಬ್ಬ ಅರಸ ಸತ್ತ ಅನಂತರ ಅವನ ಸೋದರಳಿಯ  ಆ ಸಿಂಹಾಸನಕ್ಕೆ ವಾರಸುದಾರನಾಗುತ್ತಾನೆ.  ಆದ್ದರಿಂದ ಅಳಿಯ ಸಂತಾನ ಪದ್ಧತಿ ಎನ್ನುವ ರೂಢಿ ಬೆಳೆದಿದೆ. ಆದರೆ ವಂಶದ ವಿಷಯದಲ್ಲಿ ಆತನ ತಾಯಿಯ ಮೂಲವನ್ನು ನೋಡುವುದರಿಂದ ಮಾತೃವಂಶೀಯ ಕುಟುಂಬ ಪದ್ಧತಿ ಎನ್ನುತ್ತಾರೆ. ವಾಸ್ತವವಾಗಿ ಇವೆರಡೂ ಒಂದೇ.

         ಅಳಿಯಸಂತಾನ ಪದ್ಧತಿಯ ಬಗ್ಗೆ ಶಾಸನಾಂಕಿತ ದಾಖಲೆ ಸಿಗುವುದು ತಡವಾಗಿ. ಕ್ರಿ.ಶ. ಹತ್ತನೆಯ ಶತಮಾನದ ತಳಂಗರೆಯ ಜಯಸಿಂಹನ ಶಾಸನದಲ್ಲಿ ಆ ಆಸ್ತಿಯ ಉತ್ತರಾಧಿಕಾರವು ಹೆಣ್ಣುಮಕ್ಕಳಿಗಲ್ಲದೆ ಗಂಡುಮಕ್ಕಳಿಗೆ ಹೋಗ ಸಲ್ಲದು ಎಂದು ಜೋಗವ್ವೆಯು ಶಾಸನೀಕರಿಸಿದ್ದಾಳೆ. ಈ ಆಸ್ತಿಯು ಆಕೆಯ ತಾಯಿಯ ಮೂಲದಿಂದ (ಮಾತೃ ಮೂಲ) ಬಂದ ಆಸ್ತಿಯಾಗಿರದೆ ಆಕೆಯ ಸ್ವಯಾರ್ಜಿತ (ಕನ್ಯಾದಾನವಾಗಿ) ಆಸ್ತಿಯಾಗಿದೆ. ಹೀಗಾಗಿ ಆಕೆಗೆ ಶಾಸನಾಂಕಿತಗೊಳಿಸುವ ಅಗತ್ಯ ಬಂದಿರಬೇಕು.  ೧೦ನೆಯ ಶತಮಾನಕ್ಕಾಗಲೇ ತುಳುವ ರೂಢಿ ಪದ್ಧತಿಯಂತೆ ಹೆಣ್ಣುಮಕ್ಕಳಿಗೆ ತಾಯಿಯ/ಮಾತೃಮೂಲದ ಆಸ್ತಿ ಸಲ್ಲುತ್ತಿದ್ದು ಇತರ ಮೂಲಗಳ ಆಸ್ತಿಯಲ್ಲಿ ಗಂಡುಮಕ್ಕಳೂ ಪಾಲು ಪಡೆಯುತ್ತಿದ್ದಿರಬೇಕು. ಹೀಗಾಗಿ ಜೋಗವ್ವೆ ತನ್ನ ಆಸ್ತಿ ಹೆಣ್ಣು ಸಂತಾನಕ್ಕೆ ಮಾತ್ರ ಹೋಗಬೇಕೆಂದೂ ಹೆಣ್ಣು ಮಕ್ಕಳಿಲ್ಲವಾದರೆ ಗಂಡು ಮಕ್ಕಳಿಗೆ ಹೋಗಬಹುದೆಂದು ಶಾಸನ ಬರೆಸಿರಬೇಕು. ತಳಂಗೆರೆ ಆಳುಪರಸರ ಆಳ್ವಖೇಡಕ್ಕೆ ಸೇರಿದ ಭಾಗ.

        
         ವರಾಂಗದ ಶಾಸನದ ಪ್ರಕಾರ ಕುಲಸೇಖರಾಳ್ಪೆಂದ್ರನಿಗೆ ಜಾಕಮಲಾದೇವಿ ಎಂಬ ರಾಣಿಯೂ ಇದ್ದಳು.
 ****************************************************************************************
 ಕ್ರಿ.ಶ. ೧೨೦೪ರ ವೀರ ಕುಲಶೇಖರನ ಮಂಗಳೂರು ಶಾಸನವು ಮಂಗಲಾಪುರದ ಭುವನಾಶ್ರಯದ ಮೊಗಸಾಲೆಯಲ್ಲಿ ನಡೆದ ರಾಜ ಶಭೆಯಲ್ಲಿ ಅಳಿಯ ವೀರ ಬಂಕಿದೇವನಿಗೆ ಮುಗುರುನಾಡಿನ ರಾಜಭಾರವನ್ನು ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ನೀಡುತ್ತದೆ. ಶಾಸನದ ಕೊನೆಗೆ   ಯೀ ಧರ್ಮವನ್ನು ಶಿಲಾಶಾಸನಂಗೆಯಿದು ಕೊಟ್ಟ ಮಾವ ಕುಲಸೇಖರ ದೇವರ್ಗೆ ಅಳಿಯಂದಿರು ಬಂಕಿದೇವರುಬಂಮದೇವರು ಕುಲಸೇಖರ ದೇವರರ್ಗೇ ಮಂಗಳ ಮಹಾ ....... (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. ೩೬) ಎಂದಿದೆ. ಕೂರ್ಸಿ ಶಾಸನ ಬರೆದ ೪೩ ವರ್ಷಗಳ ಬಳಿಕ ಮಂಗಳೂರು ಶಾಸನವನ್ನು ಬರೆಯಲಾಗಿದೆ. ೧೧೬೨ರಲ್ಲಿ ಕೂರ್ಸಿಯ ಭೂಮಿಯನ್ನು ದಾನ ನೀಡುವಾಗ ಕುಲಸೇಖರನ ಕುಟುಂಬದಲ್ಲಿ ಇದ್ದ ಇತರ ಆತನ ಸೋದರಳಿಯ ಪಾಂಡ್ಯ ಪಟ್ಟಿಗದೇವರುಂಬಲ್ಲಹದೇವರುಂಕುಲಶೇಖರ ದೇವರುಂಕೀರ್ತಿದೇವರುಂ -ಇವರೆಲ್ಲರ ಪ್ರಸ್ತಾಪ ಮಂಗಳೂರಿನ ಮೇಲಿನ ಶಾಸನದಲ್ಲಿ ಇಲ್ಲ. ಬಂಕಿದೇವನ ಸೋದರ ಸಾಂತರ ದೇವನ ಪ್ರಸ್ತಾಪ ಕೂಡಾ ಇಲ್ಲಿ ಇಲ್ಲ.  ಅಳಿಯಂದಿರು ಬಂಕಿದೇವರುಬಂಮದೇವರು ಕುಲಸೇಖರ ದೇವರರ್ಗೇ ಎಂದಿದೆ. ಸಾಂತರ ದೇವ ಆ ಸಂಬದರ್ಭದಲ್ಲಿ ರಾಜ ಸಭೆಯಲ್ಲಿ ಇಲ್ಲದೆ ಹೋಗಿರಬಹುದು. ಆದರೆ ಕೊಲಶೇಖರನ ಉತ್ತರಾಧಿಕಾರಿಯಾಗಬೇಕಾಗಿದ್ದ ಪಾಂಡ್ಯ ಪಟ್ಟಿಗದೇವ ಏನಾದಬಹುಷ ಮುಗುರುನಾಡನ್ನು ಬಂಕಿದೇವನಿಗೆ ಕೊಟ್ಟು ಹಿರಿಯ ಅಳಿಯ ಪಾಂಡ್ಯ ಪಟ್ಟಿಗದೇವನು  ಆಳುಪ ಸಿಂಹಾಸನಕ್ಕೆ ಕೊಲಶೇಖರನ ಉತ್ತರಾಧಿಕಾರಿಯಾಗಿದ್ದಿರಬೇಕು.  .  ಈ ಮೂಲಕ ಆತ ತನ್ನ ಇಬ್ಬರು ಸೋದರಿಯರಲ್ಲಿ ರಾಜ್ಯವನ್ನು ಹಂಚಿರಬೇಕು. ತುಳುನಾಡಿನ ಅಳಿಯ ಸಂತಾನ ಪದ್ಧತಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಸಮಾನ ಭಾಗ ದೊರಕುತ್ತದೆ. ಮೂಲ ಭಾಗ ಹಿರಿಯವಳಿಗೆ ಸೇರುತ್ತದೆ.

         ವರಾಂಗದ ೧೩ನೆಯ ಶತಮಾನದ ಶಾಸನದಲ್ಲಿ ಆಳುಪ ಅರಸರಾದ ಪಟ್ಟಿಯೊಡೆಯ , ಪಾಂಡ್ಯ ಪಟ್ಟಿಯೊಡೆಯಕವಿಯಾಳುಪಮತ್ತು ಪಟ್ಟಿಯೊಡೆಯ ಕುಲಶೇಖರ ಇವರುಗಳ ಹೆಸರು ಕ್ರಮವಾಗಿ ಬಂದಿದೆ. ಶಾಸನದ ಕೊನೆಯ ಭಾಗದಲ್ಲಿ ತ್ರಿಭುವನ ಶಾನ್ತರನನ್ನು ಹೊಗುಳುತ್ತಾ ಇವನಿಗೆ ಶಾಂತರನೆಂಬನ್ವರ್ತ್ಥ ಸಂಜ್ಞೆಯ(ಂ) ಎನ್ನುವುದಲ್ಲದೆ ಇವನನ್ನು ವೀರ ಭೂಪಾಲ ಎನ್ನುತ್ತದೆ. ರಿಪುರಾಯರ ತೂಳ್ದಿ ಧರ್ಮಮಂ ಪಾಳಿಸಿ ರಾಜ್ಯಲಕ್ಷ್ಮಿಯಂ ಮಿಳಿಸಿ ರಾಜ್ಯಂಗೈಯ್ಯುತ್ತಿರಲಾ ಮಹೀಭುಜ ನಿಜಾನುಜನ ಪಾರೋದರ ಶೌರ್ಯಚಾರ ವೀರಭೂಪಾಳನಿಂ ಕಿರಿಯನಪ್ಪ ಕುಂಡಣ ಕ್ಷೋಣೀಪಾಳನಖಿಲ ದಿಕ್ಪಾಳ ನಿಳಯಮಂ ನಿಜಕೀರ್ತಿಯಿಂ  ಧವಳಿಸಿ ಜಗತ್ಪ್ರಸಿದ್ಧ ವಿದ್ಯಾ ವಿಳಾಸಿನೀ ಸ್ವರ್ಣ ಕರ್ಣ್ಣಕುಂಡಲಾಭರಣನಪ್ಪು(ದ)..........ಪಂಡಿತ ಪಾಂಡ್ಯನೆನೆನಿಸಿ ಪಾಂಡ್ಯ ದನಂಜಯ ನಪ್ಪು ........ . (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. ೩೯) ಹೀಗೆ ಶಾಸನ ಪಾಠ ಮುಂದುವರಿಯುತ್ತದೆ. ಈ ಶಾಸನದಲ್ಲಿ ಬರುವ ಕುಲಸೇಖರನೇ ಕೂರ್ಸಿ ಶಾಸನದ ಕುಲಶೇಖರ. ಇಲ್ಲಿ ಬುರವ ಬಂಕಿದೇವನಿಗೆ ಮೊಗರುನಾಡಿನ ರಾಜ್ಯವನ್ನು ಕುಲಶೇಖರ ಬಿಟ್ಟುಕೊಟ್ಟಿದ್ದ. (ಅದೇ. ಸಂ. ೩೬) ಆದರೆ ಮುಂದಿನ ಇತಿಹಾಸಗಳ ಪುಟದಲ್ಲಿ ಮುಗುರುನಾಡಿನ ಬಂಕಿದೇವನ ಪ್ರಸ್ತಾಪ ಕಾಣಬರುವುದಿಲ್ಲ.
ಕುಂಡಣನ ಶಾಸನದಲ್ಲಿ ಮೇಲಿನ ಅರಸರನ್ನು ನಲ್ಲಿಂ ಬಳಿಯವರು ಎನ್ನಲಾಗಿದೆ.  

ಮುಂದೆ ಆಳುಪ ಸಿಂಹಾಸನ ದತ್ತಾಳುಪ ಬಳಿಯರಿಗೆ ಸೇರುತ್ತದೆ. ವೀರ ಪಾಂಡ್ಯನ ಅಳಿಯ ಬಂಕಿದೇವ ದತ್ತಾಳುಪ ಬಳಿಯವನೆಂದು ಹೇಳಲಾಗಿದೆ. ( SII.,ಗಿoಟ. ೨೭,o, ೨೧೬,  ೧೨೮೧ ಂ.ಆ)   ಹೀಗಾಗಿ ಬಂಕಿದೇವನ ಸೋದರಮಾವನಾದ ವೀರ ಪಾಂಡ್ಯನೂ ದತ್ತಾಳುಪ ಬಳಿಯವನು ಆಗುತ್ತಾನೆ. ವೀರಪಾಂಡ್ಯದೇವಾಳುಪೇಂದ್ರನ ಕಾಲ ಕ್ರಿ.ಶ ೧೨೫೦-೧೨೭೫.

         ಕ್ರಿ.ಶ. ೧೨೦೪ರಲ್ಲಿ ನಲ್ಲಿ ಬಳಿಯ ಕುಲಸೇಖರ ಮಂಗಳಾಪುರದಿಂದ ಆಳುತ್ತಿದ್ದ. ಮುಂದೆ ಆಳುಪ ಸಿಂಹಾಸನದಲ್ಲಿ  ತ್ರಿಭುವನ ಸಾಂತರ ಮತ್ತು ಕುಂಡಣರು ಕಾಣಬರುತ್ತಾರಾದರೂ ಇವರ ಕಾಲ ೧೩ನೆಯ ಶತಮಾನ ಎಂದಿದೆ. ದತ್ತಾಳುಪೇಂದ್ರ ಶ್ರೀ ಮಾರ ಒಡ್ಡಮದೇವ ಕೆಲವು ಕಾಲ ಆಳಿರಬಹುದು. ಕ್ರಿ.ಶ. ೧೨೫೦ರಲ್ಲಿ ದತ್ತಾಳುಪ ಬಳಿಯ ವೀರ ಪಾಂಡ್ಯದೇವ ಮಂಗಳೂರಿನಿಂದ ಆಳುತ್ತಾನೆ. ಇಲ್ಲಿಯ ಸುಮಾರು ೮೫ವರುಷಗಳ ಅವಧಿಯ ರಾಜಕೀಯ ಇತಿಹಾಸ ಕತ್ತಲೆಯಲ್ಲಿ ಉಳಿದಿದೆ.

         ವೀರ ಪಾಂಡ್ಯಾಳುಪೇಂದ್ರನ ಶಾಸನದಲ್ಲೂ ಆತನ ತಾಯಿಯನ್ನು ಸ್ಮರಿಸಲಾಗಿದೆ. ತಂದೆಯನ್ನಲ್ಲ:
 ಶ್ರೀ ಮತ್ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಸುಪುತ್ರರಹ ಶ್ರೀಮತು ಪಾಂಡ್ಯ ಚಕ್ರವರ್ತಿ ಅರಿರಾಯ ಗಜಕೆಸರಿ ವೀರ ಪಾಂಡ್ಯ ದೇವಾಳುಪೇಂದ್ರ ದೇವರಸರು......ತನ್ನ ರಾಣಿ ಬಲ್ಲಮಹಾದೇವಿಯೊಂದಿಗೆ ಬಾರಹ ಕನ್ಯಾಪುರದಿಂದ ಆಳುವ ಮಾಹಿತಿ ಸಿಗುತ್ತದೆ. (SII.,ಗಿoಟ. ೨೭,o .೨೧೩ , ೧೩ಣಛಿeಟಿಣuಡಿಥಿವೀರಪಾಂಡ್ಯದೇವಾಳುಪೇಂದ್ರನನ್ನು ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಪುತ್ರ ಎಂದಿದೆ. ಕೂರ್ಸಿಯ ಶಾಸನದಲ್ಲಿ ಕುಲಶೇಖರನ ಸೋದರಿ ಬಮ್ಮಲದೇವಿಯನ್ನು ಪಟ್ಟಮಹಾದೇವಿ ಎನ್ನಲಾಗಿದೆ. ಕ್ರಿ.ಶ. ೧೨೯೨ರ ಶಾಸನದಲ್ಲಿಯೂ ನಾಗದೇವರಸನನ್ನು ಪಿರಿಯರಸಿ ಬಲ್ಲಮಹಾದೇವಿಯ ಪುತ್ರ ಎನ್ನಲಾಗಿದೆ.   . (SII.,Vol. 27,No .213 , 13th century’)ಕ್ರಿ.ಶ. ೧೩೦೨ರಕ್ಕೆ ವೀರಪಾಂಡ್ಯದೇವಾಳುಪೇಂದ್ರನ ಅಳಿಯ ಬಂಕಿದೇವ ಬಂಕಿದೇವಾಳುಪೇಂದ್ರನಾಗಿ ರಾಜಧಾನಿ ಮಂಗಳಾಪುರದಿಂದ ಆಳುತ್ತಾನೆ. ಕುಲಸೇಖರ ಮಂಗಳಾಪುರದರಮನೆಯ ಮೊಗಸಾಲೆಯಲ್ಲಿ ಕುಳಿತು ನಡೆಸಿದ ಒಡ್ಡೋಲಗವನ್ನು ಈತ ನಡೆಸುತ್ತಾನೆ. (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು. ಸಂ .೪೫) ಈತನ ಅಕ್ಕ ವೋಚಮಲಾ ದೇವಿಗೆ ಈತ ವಾಮನನ ಕೈಯಲ್ಲಿ ನೀರದೇವಾಲಯದಲ್ಲಿ ಪಿಂಡಪ್ರಧಾನ ಮಾಡಿಸುತ್ತಾನೆ. ಹೀಗಾಗಿ ಬಂಕಿದೇವನಿಗೆ ವಾಮನನೆಂಬ ಅಳಿಯನಿದ್ದ ಎಂದಾಗುತ್ತದೆ. ಸತ್ತವರ ಗಂಡು ಮಕ್ಕಳ ಕೈಯಲ್ಲಿ ಪಿಂಡ ಪ್ರಧಾನ ಮಾಡುವುದು ಪದ್ಧತಿ. ಹಾಗಿದ್ದಲ್ಲಿ ವೋಚಮಲಾ ದೇವಿಗೆ ವೋಮನ ಎಂಬ ಮಗನಿದ್ದ. ಆತ ಬಂಕಿದೇವನ ಉತ್ತರಾಧಿಕಾರಿಯಾಗಬೇಕಾದವನು.

         ಮುಂದೆ ಬರುವ ಅರಸರ ಸಾಮಾಜಿಕ ಪದ್ಧತಿಯಲ್ಲಿಯೂ ಮಾತೃ ವಂಶೀಯಮಾತೃಪ್ರಧಾನಅಳಿಯ ಸಂತಾನ ಪದ್ಧತಿಯನ್ನು ಕಾಣಬಹುದು.  ಕ್ರಿ.ಶ. ೧೪೫೫ರ ಶಾಸನವು ಶ್ರೀ ಚಂದಲ ದೇವಿಯರ ಕುಮಾರ ಅರಿರಾಯ ಗಂಡರಧಾವಣಿ ಶ್ರೀ ವೀರ ಪಾಂಡ್ಯಪ್ಪೊಡೆಯರು. (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. ೮೬.)ಎಂಬಲ್ಲಿ  ತಾಯಿಯೇ ಪ್ರಧಾನಳಾಗುತ್ತಾಳೆ. ಕಿರಿತಾಯಿಗೂ ಇಲ್ಲಿ ಅಧಿಕಾರ ಇರುತ್ತದೆ. ಕ್ರಿ.ಶ. ೧೫೪೬ರ ಕುಂದಾಪುರ ತಾಲೂಕಿನ ಹಾಡುವಳ್ಳಿ ಶಾಸನದಲ್ಲಿ ....ಚಿಕ್ಕ ಅರಮನೆಯ  ಕಿರಿತಾಯಿ ಬಸವನಾಯಕತಿ ಹಾಕಿಸಿದ ಕಲ್ಲು ಎಂದಿದೆ. (ಡಾಪಿ.ಎನ್. ನರಸಿಂಹಮೂರ್ತಿಕುಂದಾನಾಡಿನ ಶಾಸನಗಳು. ಸಂ.೫೬ ಶ್ರೀ ಮದ್ಭೈರವರಾಜ ತುಂಗ ಭಗಿನೀ ಶ್ರೀ ಗುಮ್ಮಟಾಂಬಸುತ ...ಎಂದು ಭೈರವರಾಜನ ಅಳಿಯ ತನ್ನನ್ನು ಕರೆದುಕೊಳ್ಳುತ್ತಾನೆ. (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. ೮೮ ) ಅನೇಕ ಶಾಸನಗಳು ತಾಯಿಯ ಮೂಲಕವೇ ಅರಸನನ್ನು ಹೆಸರಿಸುತ್ತವೆ.  

         ಪಿತೃವಂಶೀಯ ವ್ಯವಸ್ಥೆಯಲ್ಲಿ ತಂದೆಯ ಅನಂತರ ಮಗನ ಆಳ್ವಿಕೆಯಲ್ಲಿಯೇ ಆ ರಾಜ್ಯ ಉಳಿದು ಬರುತ್ತದೆಯೆಂದು ಹೇಳಲಾಗದು. ಅಂತಯೇ ಮಾತೃವಂಶೀಯ ವ್ಯವಸ್ಥೆಯಲ್ಲಿ  ಸೋದರಮಾವನ ಅನಂತರ ಸೋದರಳಿಯನಲ್ಲಿ  ಮಾತ್ರವೇ ಉಳಿಯುವುದು ಎಲ್ಲಾ ಸಮದಭ್ದಲ್ಲೂ ಸಂಭವವಲ್ಲ. ರಾಜ್ಯಕ್ಕಾಗಿಯೇ ಯುದ್ಧನಡೆಯುತ್ತಿರುವಾಗ ಇಂತಹ ನಿರೀಕ್ಷೆಗಳೇ ತಪ್ಪಾಗುತ್ತವೆ. ಎಂಟನೆಯ ಶತಮಾನದಲ್ಲಿ ಉದ್ಯಾವರದ ಆಳುಪ ಸಿಂಹಾಸನಕ್ಕಾಗಿ ರಣಸಾಗರಚಿತ್ರವಾಹನಶ್ವೇತವಾಹನ ಇವರೊಳಗೆ ನಡೆದ ಯುದ್ಧವನ್ನೂ ಗಮನಿಸಬಹುದು. ಹಿಂದಿನ ಅರಸರ ಉತ್ತರಾಧಿಕಾರಿಯಾಗಿ ಬಂದವರು ಮಗನೇ ಎಂದು ತುಳುನಾಡಿನ ಯಾವ ಶಾಸನಗಳಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಿರುವಾಗ ನಾನು ಮೇಲೆ ತೋರಿಸಿದ ಮಾತೃಪ್ರಧಾನ ಪದ್ಧತಿಯನ್ನು ಆಧಾರಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸಿಂಹಾಸನದ ಉಪನಾಮ ಪಟ್ಟಾಭಿಷೇಕ ಆದವರಿಗೆ ಅಧಿಕೃತವಾಗಿ ನೀಡುವ ಪಟ್ಟದ ಹೆಸರು. ಅಲ್ಲಿ ಮಗ ಕೂತರೂ ಅಳಿಯ ಕೂತರೂ ಅಥವಾ ಇವರಿಬ್ಬರಿಗೂ ಸಂಬಂಧ ಪಡದ ಮೂರನೆಯ ವ್ಯಕ್ತಿ ಕೂತರೂ ಆತ ಸಿಂಹಾಸನದ ಪೂರ್ವ ಪರಂಪರೆಯ ಹೆಸರನ್ನು  ಪಡೆಯುತ್ತಾನೆ.

ಪಿತೃಪ್ರಧಾನಪಿತೃವಂಶೀಯ ವ್ಯವಸ್ಥೆಯು ಮಾತೃಪ್ರಧಾನಮಾತೃವಂಶೀಯ ವ್ಯವಸ್ಥೆಯಾಗಿ ಪಲ್ಲಟಗೊಂಡ ಉದಾಹರಣೆ ಇಡಿಯ ವಿಶ್ವದಲ್ಲಿ ಎಲ್ಲೂ ಕಾಣದು ಎನ್ನುತ್ತಾರೆ ಮಾನವ ಶಾಸ್ತ್ರಜ್ಷರು.  ಮಾತೃಪ್ರಧಾನಮಾತೃವಂಶೀಯ ವ್ಯವಸ್ಥೆಯೇ ವಿಶ್ವದ ಮೊದಲ ಸಮಾಜ ವ್ಯವಸ್ಥೆಯಾಗಿದ್ದು ಅದು ಪಿತೃಪ್ರಧಾನತೆಗೆ ಪರಿವರ್ತನೆಗೊಂಡುದೇ ಹೆಚ್ಚು ಅಥವಾ ಇವೆರಡರ ಮಧ್ಯೆ ಇತ್ತು ಎನ್ನುವುದು ಅವರ ಅಭಿಪ್ರಾಯ.



ಇಂದಿರಾ ಹೆಗ್ಗಡೆ
ನಂ ೬ ಕೃಷ್ಣಾ ರೆಸಿಡೆನ್ಸಿ ೪ನೆಯ ತಿರುವು,ಅಮರಜ್ಯೋತಿ ನಗರ
ವಿಜಯನಗರ ಬೆಂಗಳೂರು ೫೬೦೦೪೦
 ೦೮೦-೨೩೩೮೧೬೩೩೯೮೪೫೫೭೭೫೫೩







                              
        




Friday, July 26, 2013

ಇತಿಹಾಸಕಾರರು- ಪ್ರೊ. ಜಿ.ಎಸ್‌... ದೀಕ್ಷಿತ್‌

ಎಚ್.ಶೇಷಗಿರಿರಾವ್

ಪ್ರೊಫೆಸರ್ ಗಿರೀಶ್ ಶ್ರೀಧರ ದೀಕ್ಷಿತರು:
http://kendasampige.com/images/trans.gif

http://kendasampige.com/images/trans.gif








ಸನಾತನ ಭಾರತೀಯ ಸಂಪ್ರದಾಯದ ಪ್ರಕಾರ " ಗುರುದೇವೋ ಮಹೇಶ್ವರಃ"" ಅಂದರೆ ಗುರುವೇ ದೇವರು. ಪುರಾತನ ಕಾಲದಲ್ಲಿ ಗುರು ಎಂದರೆ ಅರಿವು, ಕಲಿಕೆ ಮತ್ತು ವಿದ್ವತ್ತಿನ ಪ್ರತಿರೂಪ. ಆದರೆ ಇಂಥಹ ಗುರುತ್ವವನ್ನು ಪಡೆಯುವುದು ಸಾಮಾನ್ಯ ಸಾಧನೆ ಅಲ್ಲ. ಅದನ್ನು ದೀರ್ಘಕಾಲದ ಅಧ್ಯಯನ,ತಪ ,ಸಂಯಮ ಮತ್ತು ಕಠಿನ ಪರಿಶ್ರಮದಿಂದ ಪಡೆಯಲು ಸಾಧ್ಯ. ಈ ರೀತಿಯ ಗುರುಗಳು ನಿಸ್ವಾರ್ಥದಿಂದ ತಮ್ಮ ಜ್ಞಾನವನ್ನು ಅರ್ಹರಾದ ಎಲ್ಲರಿಗೂ ಧಾರೆ ಎರೆಯುವರು. ಇಂಥಹ ಗುರುಗಳ ಮಾರ್ಗದರ್ಶನವೇ ದೊಡ್ಡ ಸೌಭಾಗ್ಯ. ನಾನು ನನ್ನ ಕುಟುಂಬ, ಎಂದು ದುಡಿದು ಹಣ್ಣಾಗುವವರು ಬಹಳ. ಏನೇ ಕೆಲಸಮಾಡಿದರೂ ನನಗೇನು ಸಿಗುವುದು ಎಂದು ಕೇಳುವವರು ಹೆಚ್ಚು. ಅರ್ಥಪೂರ್ಣ ಬದುಕನ್ನು ವ್ಯರ್ಥಮಾಡಿಕೊಳ್ಳುವವರು ಬಹಳ. ನನ್ನಿಂದ ಅನ್ಯರಿಗೆ ಏನು ಅನುಕೂಲ ಮಾಡಿಕೊಡಲಿ ಎಂದು ಸದಾ ತುಡಿಯುವವರು ಕಡಿಮೆ. ಆಧುನಿಕ ಕಾಲದಲ್ಲಿ ಇಂಥಹ ಗುರುಗಳು ವಿರಳಾತಿ ವಿರಳ. ಅಂಥಹ ವಿರಳರಲ್ಲಿ ಪ್ರಮುಖರು ಪ್ರೊ. ಜಿ ಎಸ್. ದೀಕ್ಷಿತ್.

 ಪೂರ್ಣ ಹೆಸರು ಜಿ.ಎಸ್.ದೀಕ್ಷಿತ್ (ಗಿರೀಶ್ ಶ್ರೀಧರ ದೀಕ್ಷಿತ್) ಕರ್ನಾಟಕದ ಹೆಸರಾಂತ ಇತಿಹಾಸ ತಜ್ಞರು. ಭಾರತೀಯ ಮತ್ತು ಪಾಶ್ಚಾತ್ಯ ಇತಿಹಾಸದಲ್ಲಿ ಪರಿಣಿತರು. ಅವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹರಿಹರ. ಅವರದು ಸಂಪ್ರದಾಯಸ್ಥ ಕುಟುಂಬ. ಹೆಸರಾಂತ ವಿದ್ವಾಂಸರಾದ ಅಪ್ಪಯ್ಯ ದೀಕ್ಷಿತರ ಮನೆತನದವರು. ಅವರು .ಜನಿಸಿದುದು ೧೦ನೆಯ ಜನವರಿ೧೯೧೧ ರಂದು. ತಂದೆ ಗಿರಿರಾಮ ದೀಕ್ಷಿತರು ಅವರು ಅಂಥಹ ಸ್ಥಿತಿವಂತರಲ್ಲ. ಮಗನಿಗೆ ಶಿಕ್ಷಣ ಕೊಡಿಸುವುದೂ ಅವರಿಗೆ ಕಠಿಣ ಎನಿಸಿತಿತ್ತು. ಪ್ರಾಥಮಿಕ ಶಿಕ್ಷಣ ಹರಿಹರದ ಸರ್ಕಾರಿ ಶಾಲೆಯಲ್ಲಿ ಆಯಿತು ನಂತರ ಹೈಸ್ಕೂಲ್ ಶಿಕ್ಷಣಕ್ಕಾಗಿ ದಾವಣಗೆರೆಗೆ ಹೋದರು. ಕಾರಣ ಅಲ್ಲಿ ಊಟ ವಸತಿ ಉಚಿತವಾಗಿ ಲಭ್ಯವಾಗಿತ್ತು. ಅಲ್ಲಿಂದ ಪದವಿಗಾಗಿ ಶಿವಮೊಗ್ಗದಲ್ಲಿ ಕೆಲ ಕಾಲ ಕಳೆದ ನಂತರ ಕೊನೆಗೆ ಮೈಸೂರು ಮಹಾರಾಜಾ ಕಾಲೇಜು ಅವರ ವಿದ್ಯಾತಾಣ ವಾಯಿತು .೧೯೩೨ ರಲ್ಲಿ ಪದವಿ ಪಡೆದರು. ಬಹಳ ತೀಕ್ಷ್ಣ ಮತಿ. ಎಷ್ಟೆಲ್ಲಾ ಕಷ್ಟಗಳ ಮಧ್ಯ ರಾಜ್ಯದಲ್ಲಿ ೧೧ನೆಯ ಸ್ಥಾನ ಪಡೆದರು ಮತ್ತು ಇತಿಹಾಸ ವಿಷಯದಲ್ಲಿ ಪ್ರಪ್ರಥಮರಾದರು. .್
ಆಗ ಶಿಕ್ಷಣ ಸೌಲಭ್ಯ ಮಿತವಾಗಿದ್ದ ಸಮಯ. ಆಗಲ್ಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದರು. ಆದರೆ ಉದ್ಯೋಗ ಅವಕಾಶಗಳೂ ವಿರಳ. ಕೆಲಸಕ್ಕಾಗಿ ಊರಿಂದ ಊರಿಗೆ ಅಲೆದಾಟ ಮೊದಲಾಯಿತು. ಮೈಸೂರು ರಾಜ್ಯದಲ್ಲಿ ಅವಕಾಶವೇ ಸಿಕ್ಕಲಿಲ್ಲ . ಆಗ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಈಗಿನ ಒರಿಸ್ಸಾದ ಗಂಜಾಂ ಕಾಲೇಜಿನಲ್ಲಿ ಕೆಲಸ ದೊರೆಯಿತು. ಪಾರ್ಲ ಕಿಮೇದಿ ಆಗ ಒಂದು ಚಿಕ್ಕ ಸಂಸ್ಥಾನ. ಇವರ ಆಕರ್ಷಕ ವ್ಯಕ್ತಿತ್ವ ಮತ್ತು ಕ್ರೀಡಾಸಕ್ತಿಯಯ ಫಲವಾಗಿ ಅಲ್ಲಿನ ರಾಜ ಕುಟುಂದೊಡನೆ ಗೆಳೆತನ ಬೆಳೆಯಿತು. ಇವರು ಉತ್ತಮ ಟೆನ್ನಿಸ್ ಪಟುವಾಗಿದ್ದರು .ಅದರಿಂದಾಗಿ ರಾಜ ಕುಮಾರನಿಗೆ ಹತ್ತಿರದವರಾದರು. ದಿನವೂ ಅವರೊಡನೆ ಟೆನ್ನಿಸ್ಆಡಲು ಅರಸರು ದೀಕ್ಷಿತರು ಕೆಲಸ ಮುಗಿಸಿ ಕಾಲೇಜಿನಿಂದ ಬರುವುದನ್ನೇ ಕಾಯುತಿದ್ದರು. ಅದರಿಂದ ಅವರ ಜೀವನ ಶೈಲಿಯೇ ಬದಲಾಯಿತು. ಉಡುಗೆತೊಡುಗೆಯಲ್ಲಿ ಅಚ್ಚುಕಟ್ಟುತನ, ಸಮಯಪ್ರಜ್ಞೆ ಮೈ ಗೂಡಿತು. ಮಾತು ಸ್ಪಷ್ಟ, ನಿಖರ ಮತ್ತು ಗಾಂಭೀರ್ಯದಿಂದ ಕೂಡಿತು. ಅವರ ಅರಸರೊಡಗಿನ ಆತ್ಮೀಯತೆಯ ಫಲವಾಗಿ ಅಲ್ಲಿ ನಡೆದ ಇಂಡಿಯನ್ ಹಿಸ್ಟರಿ ೨ನೇ ಸಮ್ಮೇಳನದಲ್ಲಿ, ಸಕ್ರಿಯವಾಗಿ ಭಾಗವಹಿಸುವ ಅವಕಾಶ ಸಿಕ್ಕಿತು." ಪೂರ್ವ ಗಂಗರ ರಾಜಧಾನಿ" ಪ್ರಬಂಧ ಮಂಡನೆಗೆ ಅವಕಾಶ ದೊರೆಯಿತು. ಜೀವನ ಸುಗಮವಾಗಿ ಸಾಗುತಿತ್ತು, ಹಗಲಿನಲ್ಲಿ ಕಾಲೇಜು ಕೆಲಸ ಸಂಜೆಯ ನಂತರ ಟೆನ್ನಿಸ್ಆಟ. ಜೀವನದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಬಾಳು ಸುಗಮವಾಗಿ ಸಾಗುತಿತ್ತು.ಆದರೆ ತಾಯಿ ನೆಲದ ಸೆಳೆತ ಅಧಿಕವಾಯಿತು. ಇದ್ದ ಕೆಲಸವನ್ನು ಬಿಟ್ಟು ೧೯೩೯ ರಲ್ಲಿ ಮೈಸೂರಿಗೆ ವಾಪಸ್ಸು. ಬಂದರು. ಮತ್ತೆ ಕೆಲಸದ ಬೇಟೆ ಪ್ರಾರಂಭಿಸಿದರು. ಮೈಸೂರು ಪ್ರಾಚ್ಯವಸ್ತು ಇಲಾಖೆಯಲ್ಲಿ ತಾತ್ಕಾಲಿಕ ಉದ್ಯೋಗ ದೊರೆಯಿತು. ಖ್ಯಾತ ಪುರಾತತ್ತ್ವ ತಜ್ಞರಾದ ಎಂ. ಎಚ್. ಕೃಷ್ಣ ರ ಮಾರ್ಗದರ್ಶನದಲ್ಲಿ ಉತ್ಖನನದ ಕೆಲಸದಲ್ಲಿ ತೊಡಗಿದರು . ಚಿತ್ರದುರ್ಗ ಜಿಲ್ಲೆಯ ಬ್ರಹ್ಮ ಗಿರಿ ಮತ್ತು ಚಂದ್ರವಳ್ಳಿಯ ಉತ್ಖನನದಲ್ಲಿ ನೆರವು ನೀಡಿದರು. ಪ್ರಾಚೀನ ಶಿಲಾಯುಗದ ಅವಶೇಷಗಳ ಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಂಡರು.
ಆದರೆ ಕಡಿಮೆ ಆದಾಯದಲ್ಲಿ ಜೀವನ ನಡೆಯುವುದ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಪೂರ್ಣಾವಧಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಲೇ ಇದ್ದರು. ಮತ್ತೆ ಮಹಾರಾಷ್ಟ್ರದ ಸಾಂಗ್ಲಿಯ,ಕಾಲೇಜಿನಲ್ಲಿ ಅಧ್ಯಾಪಕ ಉದ್ಯೋಗ ದೊರೆಯಿತು. ಅಲ್ಲಿ ಶ್ರೀ ಗೋಕಾಕ. ರಂಶ್ರೀ.ಮುಗುಳಿ ,ಡಾ. ಎಸ್ ಆರ್.ಶರ್ಮರ ಜೊತೆ ಕೆಲಸ ಮಾಡುವ ಅವಕಾಶ ದೊರೆಯಿತು. ವಿಲ್ಲಿಂಗ್ಟನ್ ಕಾಲೇಜಿನಲ್ಲಿ ೧೬ವರ್ಷ ನಿರಂತರ ಸೇವೆಯ ನಂತರ ಫರ್ಗ್ಯೂಸನ್ ಕಾಲೇಜಿಗೆ ವರ್ಗವಾಯಿತು. ಪೂನಾ ವಿಶ್ವ ವಿದ್ಯಾಲಯ.೧೯೪೯ ರಲ್ಲಿ ಸ್ಥಾಪನೆಯಾದಾಗ ಇವರ ಪಾಲಿಗೆ ಇತಿಹಾಸ ವಿಭಾಗ ರೂಪಿಸುವ ಹೊಣೆ ಬಂದಿತು. ಇವರೇ ಸ್ನಾತಕೋತ್ತರ ತರಗತಿಗಳ ಪಠ್ಯ ಕ್ರಮದ ರಚನೆ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಬೋಧನೆಯ ಕೆಲಸವನ್ನೂ ಮಾಡಿದರು.ಅಲ್ಲಿ ಆರು ವರ್ಷ ಕಾರ್ಯನಿರ್ವಹಿಸಿದರು.
೧೯೫೫ ರಲ್ಲಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪನೆಯಾದಾಗ ಇತಿಹಾಸ ವಿಭಾಗ ರೂಪಿಸುವಲ್ಲಿ ಡಾ. ಭಾಸ್ಕರಾನಂದ ಸಾಲತ್ತೂರ್ ಅವರಿಗೆ ನೆರವಾಗಲು ಬಂದರು. ಅಲ್ಲಿಂದಲೇ ಪಿಎಚ್.ಡಿ ಯನ್ನು ಪಡೆದರು .ಧಾರವಾಡದ ಕರ್ನಾಟಕ ಕಾಲೇಜು ವಿಶ್ವ ವಿದ್ಯಾಲಯದ ನೇರ ಕಕ್ಷೆಯಲ್ಲಿನ ಕಾಲೇಜು. ಸ್ನಾತಕೋತ್ತರ ವಿಭಾಗದಲ್ಲಿ ಕಲಿಸುವ ಪ್ರಾಧ್ಯಾಪಕರೂ ಪದವಿ ವಿದ್ಯಾರ್ಥಿಗಳಿಗೂ ಕಲಿಸುವುದು ರೂಢಿ. ಅಲ್ಲಿ ಬ್ರಿಟಿಷ್ ಸಂವಿಧಾನದ ಚರಿತ್ರೆ ಆರಿಸಿಕೊಂಡ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಹಾಗಾಗಿ ವಿದ್ವಾಂಸರ ನಿಕಟ ಸಂಪರ್ಕ ಅವರಿಗೆ ದೊರೆಯುತಿತ್ತು. ಕರ್ನಾಟಕ ಕಾಲೇಜಿನಲ್ಲಿ ಕಲಿಯುವ ಪದವಿ ವಿದ್ಯಾರ್ಥಿಗಳಿಗೂ ಡಾ. ಜಿ.ಎಸ್ ದೀಕ್ಷಿತರ ಪಾಠಕೇಳುವ ಭಾಗ್ಯ ದೊರಕುತಿತ್ತು.
ಇವರದು ಆಕರ್ಷಕ ವ್ಯಕ್ತಿತ್ವ. ಮೊದಲೇ ಕ್ರೀಡಾಪಟು ಉತ್ತಮ ದೇಹ ಧಾರ್ಡ್ಯ. ಉಡುಪು ಸದಾ ಟಿಪ್ಟಾಪ್. ಹೊರಗೆ ಹೊರಟರೆ ಫೂಲ್ ಸೂಟ್. ಸಮಯ ಪ್ರಜ್ಞೆ ಬಹಳ. ಜೇಬಿನಲ್ಲಿನ ಸರಪಳಿ ಇದ್ದ ಗಡಿಯಾರನ್ನು ತರಗತಿಗೆ ಬಂದೊಡನೆ ಮೇಜಿನ ಮೇಲೆ ಇಟ್ಟು ಠಾಕೋ ಠೀಕ್ ಸಮಯಕ್ಕೆ ಸರಿಯಾಗಿ ಪಾಠ. ಒಂದು ನಿಮಿಷವೂ ಅಪವ್ಯಯಾಗಕೂಡದು. ವಿಷಯದ ವಿವರವಾದ ವಿಶ್ಲೇಷಣೆ. ಮಧ್ಯಮಧ್ಯ ತಿಳಿ ಹಾಸ್ಯ. ಹಾಗಾಗಿ ವಿದ್ಯಾರ್ಥಿಗಳ ನೆಚ್ಚಿನ ಗುರುವಾದರು. ಇತಿಹಾಸ ವಿಭಾಗದ ಬೆಳವಣಿಗೆಗೆ ೧೯೭೧ರವರೆಗೆ ಅವರೇ ಕಾರಣರಾದರು. ಸಾಲತ್ತೂರ್ ನಿವೃತ್ತರಾದಾಗ ವಿಭಾಗ ಮುಖ್ಯಸ್ಥರಾಗಿ ಮುನ್ನೆಡಸಿದರು. ಅವರು ಬರಿ ತರಗತಿಯಲ್ಲಿ ಉಪನ್ಯಾಸ ಮಾಡಿ ಹೋಗುವವರಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲ, ಅವರ ವೃತ್ತಿ ಜೀವನ ಮತ್ತು ಅನೇಕರ ವೈಯುಕ್ತಿಕ ಬದುಕಿನಲ್ಲೂ ಮಾರ್ಗದರ್ಶಕರಾಗಿರುತಿದ್ದರು ಮತ್ತು ದುಃಖದ ಸಮಯದಲ್ಲಿ ಬಂಡೆಗಲ್ಲಿನಂತೆ ದೃಢವಾದ ಆಸರೆ ಕೊಡುತಿದ್ದರು.ಅವರ ಶಿಷ್ಯ ವಾತ್ಸಲ್ಯ ದೊಡ್ಡದು ತಮ್ಮಸಂಪರ್ಕಕ್ಕೆ ಬಂದ ಎಲ್ಲ ವಿದ್ಯಾರ್ಥಿಗಳ ಕಷ್ಟ ಸುಖಗಳಲ್ಲಿ ಭಾಗಿಯಾಗುವರು ಮತ್ತು ಅವರ ಜೀವನದಲ್ಲಿ ನೆಲೆಗೊಳ್ಳಲು ಸಹಾಯ ಹಸ್ತ ಚಾಚುತಿದ್ದರು. ದೀಕ್ಷಿತ್ ಇತಿಹಾಸದ ಪ್ರತಿಭಾನ್ವಿತ ಪ್ರಾಧ್ಯಾಪಕ ಮತ್ತು ಶ್ರೇಷ್ಠ ಸಂಶೋಧಕರು. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಮಾಡಿ ಕೈತೊಳೆದುಕೊಳ್ಳವುದು ಅವರ ಜಾಯಮಾನವಲ್ಲ. ಅವರ ಜೀವನದುದ್ದಕ್ಕೂ ಎಲ್ಲೆ ಇರಲಿ ಪತ್ರದ ಮೂಲಕವಾದರೂ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದ ಹಿರಿಯ ಜೀವ. ಹಿರಿಯ ವಿದ್ವಾಂಸ ಎ.ಕೆ. ಶಾಸ್ತ್ರಿಗಳು ತಮಗೆ ಸುಮಾರು ೧೦೦ಕ್ಕೂ ಹೆಚ್ಚು ಪತ್ರ ಬರೆದಿರುವರುಎಂದು ತಿಳಿಸಿರುವುರು. ಡಾ. ಸೂರ್ಯನಾಥ್ ಕಾಮತ್ ಜೀವನದಲ್ಲಿ ನೆಲಗೊಳ್ಳಲು ಕಾರಣ ಕರ್ತರು. ಡಾ.ಜ್ಯೋತ್ಸ್ನಾ ಕಾಮತ್ ಗೆ ಕೊನೆಯವರೆಗ ಮಾರ್ಗದರ್ಶನ ಮಾಡಿದರು ಅವರ ಮಾರ್ಗದರ್ಶನದಲ್ಲಿ ೧೯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಪಿಎಚ್.ಡಿ ಪಡೆದಿರುವರು. ಅವರು ಉತ್ತಮ ಸಂಘಟಕರು.ಕರ್ನಾಟಕ ಇತಿಹಾಸ ಅಕಾಡಮಿ ಮತ್ತು ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅವರ ಕನಸಿನ ಕೂಸುಗಳು.
ಪ್ರೊ.ದೀಕ್ಷಿತರು ಮಧ್ಯಕಾಲೀನ ಇತಿಹಾಸದಲ್ಲಿ ಅಧಿಕಾರಯುತವಾಗಿ ಮಾತನಾಡ ಬಲ್ಲವರಾಗಿದ್ದರು ಪ್ರೊ. ದೀಕ್ಷಿತರು ಇತಿಹಾಸವನ್ನು ಸಮಗ್ರವಾಗಿ ಒಂದು ಘಟಕವಾಗಿ ಪರಿಗಣಿಸುತಿದ್ದರು. ಅವರ ಅಮೇರಿಕನ್ಇತಿಹಾಸದ ಮತ್ತು ಕೆಳದಿರಾಜ್ಯಗಳ ಕುರಿತಾದ ಕನ್ನಡದ ಎರಡು ಕೃತಿಗಳು ಅಧಿಕೃತ ಪಠ್ಯ ಪುಸ್ತಕಗಳೆನ್ನಬಹುದು. ವಿಶ್ವ ರಾಜಕೀಯದಲ್ಲಿ ಅರಬ್ ರಾಷ್ಟ್ರಗಳ ಪಾತ್ರವನ್ನು ಮನಗಂಡು ತೈಲ ರಾಜಕೀಯ ಮೊದಲಾಗುವ ಮುಂಚೆಯೇ, ಸ್ನಾತಕೋತ್ತರ ಅಧ್ಯಯನದಲ್ಲಿ ಮಧ್ಯಪ್ರಾಚ್ಯದ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಿದ್ದರು. ಅವರಿಗೆ ವಿಜಯನಗರದ ಇತಿಹಾಸದಷ್ಟೇ ಚೀನಾ ಮತ್ತು ಜಪಾನುಗಳ ಇತಿಹಾಸವೂ ಕೈವಶವಾಗಿತ್ತು. ೧೯೬೧ರಲ್ಲಿ ಹೆಚ್ಚಿನ ಅಧ್ಯಯನಕ್ಕೆ ವಿದೇಶ ಪ್ರವಾಸಮಾಡಿದರು. ಫುಲ್ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ಅಮೇರಿಕಾಗೆ ಹೋದರು.
ಮಧ್ಯಕಾಲೀನ ಕರ್ನಾಟಕ ಇತಿಹಾಸ,ಬೌಧ್ಧ ಧರ್ಮದ ಕೊಡುಗೆ, ಆಂಧ್ರ ಅರಸರ ಕೊಡುಗೆ. ಮೈನರ್ ಕಿಂಗ್ಡಮ್ಸ್ ಅಂಡ್ ಮೇಕರ್ ಡೈನಾಸ್ಟೀಸ್-ಕೆಳದಿ- ಭಾರತೀಯ ಇತಿಹಾಸ ಕುರಿತು ೬೦ ಲೇಖನಗಳು ಬರೆದಿರುವರು ಅದರಲ್ಲಿ ೪೬ ಕನ್ನಡ , ೧೪ ಇಂಗ್ಲಿಷ್ ನಲ್ಲಿವೆ. ೧೨ ವ್ಯಕ್ತಿಚಿತ್ರಗಳನ್ನು ಬರೆದಿರುವರು.
ಶಾಸನ ಅಧ್ಯಯನ-೧೮೭೨ ರಲ್ಲಿ , ಕೊಡೂರು- ಬೆಳಗಾಂ ಜಿಲ್ಲೆಗಳ ಕನ್ನಡ ಶಾಸನಗಳು ಪ್ರಕಟ-೧೯೭೩-೯೨ ರ ತನಕದ ೧೯೬ ದಾಖಲೆಗಳ ಪ್ರಕಟನೆಗೆ ಕಾರಣರಾದರು., ಇಂಡಿಯನ್ ಆಂಟಿಕ್ವರಿ ಜರ್ನಲ್ ಗೆ ಸತತ ಬರವಣಿಗೆ ಮಾಡುತಿದ್ದರು . ಕೆಲವು ಸಮಯ ಅದರ ಸಂಪಾದಕೀಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದರು. ಬಾದಾಮಿ ಚಾಲುಕ್ಯರ ಇತಿಹಾಸ,ಐಹೊಳೆ ಶಾಸನ, ಮಹಾಕೂಟದ ಸ್ತಂಭ ಶಾಸನ, ರಾಷ್ಟ್ರಕೂಟ ನಾಣ್ಯ ಮತ್ತು ಸ್ಥಳನಾಮಗಳ ಬಗ್ಗೆ ಅಧ್ಯಯನ ,ಗಂಭೀರ ಸಂಶೋಧನೆ ಮಾಡಿರುವರು.ಶಿಲಾಹರರು ಕೊಂಕಣ ಮತ್ತು ಉತ್ತರಕೊಂಕಣಗಳ ಅಧ್ಯಯನ ಮಾಡಿರುವರು. ಲಾವಣಿ ಸಂಗ್ರಹವನ್ನೂ ಮಾಡಿದರು. ಕಿತ್ತೂರು ಚೆನ್ನಮ್ಮನನ್ನು ಕುರಿತ ೨೯ ಲಾವಣಿಗಳನ್ನು ಭಾಷಾಂತರ ಸಮೇತ ಪ್ರಕಟಿಸಿದರು .


ನಿವೃತ್ತಿಯ ನಂತರ ಮದ್ರಾಸ್, ಬಾಂಬೆ ಕರ್ನಾಟಕ ವಿಶ್ವ ವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರ ಸೇವೆ ವಿದೇಶದಲ್ಲೂ ಸಂದಿತು. ಅಮೆರಿಕಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ಮತ್ತು ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಮಾಡಿದರು.
ಕೃಷ್ಣ ದೇವರಾಯ ಅವರ ಮೆಚ್ಚಿನ ಅರಸ. ಅವನನ್ನು ಕುರಿತ ಕನ್ನಡದಲ್ಲಿ ಮಾನೊಗ್ರಾಫ್ ರಚಿಸಿದರು -ಅದು ಕನ್ನಡದಲ್ಲೂ ಮಾನೊಗ್ರಾಫ್ ಬರೆದಿರುವರು..್
ಅವರ ಪ್ರಮುಖ ಕೃತಿಗಳಲ್ಲಿ ಕೆಲವು :
1.‘Local self-government in medieval Karnataka'. 1964, Karnatak University, Dharwar.
2.‘Tank irrigation in Karnataka: a historical survey', (with G.R. Kuppuswamy and S.K. Mohan), 1993, Gandhi Sahitya Sangha, Bangalore.
3.‘Early Vijayanagara: Studies in its History and Culture': Proceedings of S. Srikantayya Centenary Seminar, (with others) B.M.S. Memorial Foundation, Bangalore.
4.‘Studies in Keladi History, Seminar papers' edited by Giri. S. Dikshit), 1981, Mythic Society, Bangalore.
ಮಡದಿ ತಾರಾ ಮತ್ತು ಅವರದು ಇಬ್ಬರು ಹೆಣ್ಣುಮಕ್ಕಳಿಂದ ಕೂಡಿದ ಚಿಕ್ಕ ಮತ್ತು ಚೊಕ್ಕ ಸಂಸಾರ. ದೀಕ್ಷಿತ್ ಇಂದಿನ ಮತ್ತು ಮುಂದಿನ ಜನಾಂಗ ಸೇರಿಸುವ ಕೊಂಡಿಯ ಕಾರ್ಯ ನಿರ್ವಹಿಸಿದರು. ಅವರು 2004ಲ್ಲಿ ಇತಿಹಾಸ ಲೋಕ ಸೇರಿದರು.ತಮ್ಮ ಹಲವಾರು ವಿದ್ವಾಂಸರಾದ ಶಿಷ್ಯರ ಮನಸ್ಸಿನಲ್ಲಿ ಈಗಲೂ ನೆಲೆ ನಿಂತಿರುವರು.