Monday, February 17, 2014

ಪಾರ್ಥಿವೇಶ್ವರ ಪೂಜೆ

  ಕರಸ್ಥಲ ಲಿಂಗಪೂಜೆಯ ವೈದಿಕ ರೂಪ : ಪಾರ್ಥಿವೇಶ್ವರ ಪೂಜೆ
ಡಾ. ಎಸ್.ಎಲ್. ಶ್ರೀನಿವಾಸಮೂರ್ತಿ
ರಸ್ಥಲ ಲಿಂಗಪೂಜೆಯು ವೀರಶೈವ ಮತಕ್ಕೆ ಮಾತ್ರ ಸೀಮಿತವಾದ ಪೂಜಾ ವಿಧಾನವೆನ್ನುವುದು ಸದ್ಯಕ್ಕೆ ರೂಢಿಯಲ್ಲಿರುವ ನಂಬಿಕೆ. ಆದರೆ ಬ್ರಾಹ್ಮಣರಲ್ಲಿಯೂ ಬಹು ಅಪರೂಪವಾಗಿ ಈ ಪದ್ಧತಿಯು ಚಾಲ್ತಿಯಲ್ಲಿದೆ ಎಂಬುದನ್ನು ನಿರೂಪಿಸುವುದು ಪ್ರಸ್ತುತ ಸಂಪ್ರಬಂಧದ ಉದ್ದೇಶ.
ವೀರಶೈವ ಮತದ ಉಗಮದ ಬಗ್ಗೆ ಅನೇಕ ಮಂದಿ ವಿದ್ವಾಂಸರು ಸಾಕಷ್ಟು ಚಿಂತನ-ಮಂಥನಗಳನ್ನು ನಡೆಸಿದ್ದಾರೆ. ಬಹುಮಟ್ಟಿಗೆ ಎಲ್ಲರೂ ಒಪ್ಪಿಕೊಂಡಿರುವ ಅಂಶವೆಂದರೆ “ವೀರಶೈವ ಪಂಥವು ಇತರ ಶೈವ ಪಂಥಗಳಾದ ಕಾಶ್ಮೀರಶೈವ ಮತ, ಕಾಳಾಮುಖ, ಪಾಶುಪತ, ಶೈವಸಿದ್ಧಾಂತ ಮತ್ತು ಶ್ರೀಕಂಠನ ಶಕ್ತಿ ವಿಶಿಷ್ಟಾದ್ವೈತಗಳಿಂದ ಆಚಾರ ವಿಚಾರಗಳಲ್ಲಿ ಪ್ರಭಾವಿತವಾಗಿದೆ.’’ ಇಷ್ಟಲಿಂಗ ಧಾರಣೆ ಮತ್ತು ಕರಸ್ಥಲ ಲಿಂಗಪೂಜೆಯು ವೀರಶೈವದ ಕೇಂದ್ರತತ್ವ. “ಲಿಂಗಧಾರಣ ಪದ್ಧತಿಯು ಲಿಂಗಾರ್ಚನೆಯಷ್ಟು ಪ್ರಾಚೀನವಲ್ಲದಿದ್ದರೂ ಬಸವಣ್ಣನವರಿಗಿಂತ ಹಿಂದೆಯೇ ಇದ್ದಂತೆ ತೋರುತ್ತದೆ. ಇದು ವೀರಶೈವರಿಗೆ ವಿಶಿಷ್ಟವಾದ ಕುರುಹು. ಆದ್ದರಿಂದ ಈ ಪದ್ಧತಿಯ ಆದಿಯು ಗೊತ್ತಾದರೆ ವೀರಶೈವ ಮತೇತಿಹಾಸಕ್ಕೆ ಅನುಕೂಲವಾಗುವುದು’’ ಎಂಬ ಉದ್ದೇಶದಿಂದ ಡಿ.ಎಲ್. ನರಸಿಂಹಾಚಾರ್‌ರವರು ತಮ್ಮ ಒಂದು ಲೇಖನದಲ್ಲಿ ಲಿಂಗಧಾರಣೆಯ ಮೂಲಚೂಲಗಳನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ವೈದಿಕ ಪರಂಪರೆಯ ಮೂಲದವರಾದ ಪಾಶುಪತರು ಮತ್ತು ಅವರ ಶಾಖೆಗಳಾದ ಮಾಹೇಶ್ವರರು, ಲಕುಲೀಶರು ಮತ್ತು ಕಾಳಾಮುಖರು ಶರೀರದ ಮೇಲೆ ಲಿಂಗಗಳನ್ನು ಧರಿಸುತ್ತಿದ್ದರೆಂಬುದನ್ನು ಶ್ರೀಪತಿ ಪಂಡಿತರ ‘ಶ್ರೀಕರಭಾಷ್ಯ (ಕಾಲ ಸು. ಕ್ರಿ.ಶ. ೧೧೬೦), ಸಾಯಣ ಮಾಧವರ ‘ಸರ್ವದರ್ಶನ ಸಂಗ್ರಹ ಮುಂತಾದವುಗಳ ಮೂಲಕ ಅವರು ಖಚಿತಪಡಿಸಿದ್ದಾರೆ. ಹಾಗಾಗಿ ‘ಶರೀರದ ವಿವಿಧ ಭಾಗಗಳ ಮೇಲೆ ಲಿಂಗವನ್ನು ಧರಿಸುವುದು ವೇದ ಸಮ್ಮತವಾದ ವಿಧಾನವಾಗಿದ್ದು ಅದನ್ನು ಎಲ್ಲ ಶೈವಪಂಥದವರೂ ನಡೆಸಿಕೊಂಡು ಬಂದಿದ್ದರು. ವೀರಶೈವವು ಈ ಪದ್ಧತಿಯನ್ನು ಮುಂದೆ ತನ್ನದಾಗಿಸಿಕೊಂಡಾಗ ಇಷ್ಟಲಿಂಗ ವೆಂಬ ತತ್ವವು ಮೂಡಿರಬೇಕು’’ ಎಂದು ತೀರ್ಮಾನಿಸಬಹುದು.
“ತಮ್ಮ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಪೂಜೆಗೊಳ್ಳುತ್ತಿದ್ದ ದೇವಾಲಯಗಳ ಸ್ಥಾವರಲಿಂಗಗಳ ಹೆಸರುಗಳನ್ನೇ ಶಿವಶರಣರು ತಮ್ಮ ದೇಹದ ಮೇಲೆ ಧರಿಸುತ್ತಿದ್ದ ಇಷ್ಟಲಿಂಗಕ್ಕೂ ಹೊಂದಿರುತ್ತಿದ್ದರು. ಅಂತಹ ಸ್ಥಾವರಲಿಂಗದ ಕುರುಹನ್ನು (ಇಷ್ಟಲಿಂಗವನ್ನು) ಮನೆಯ ಜಗುಲಿಯ ಮೇಲೆ ಇಟ್ಟು ಪೂಜಿಸುವ ಸಂಪ್ರದಾಯವೂ ಇತ್ತು. ಶೈವರ ಸ್ಥಾವರಲಿಂಗವು ಶರಣರ ಇಷ್ಟಲಿಂಗವೆನಿಸುವಲ್ಲಿ ಶೈವರು ಪ್ರವಾಸದ ಅನುಕೂಲಕ್ಕಾಗಿ ಮಾಡಿಕೊಂಡ ಉರಸ್ಥಲದ ಧಾರಣಕ್ರಮವೂ, ಪೂಜಾ ಅನುಕೂಲಕ್ಕಾಗಿ ಮಾಡಿಕೊಂಡ ಕರಸ್ಥಲದ ಅರ್ಚನ ಕ್ರಮವೂ ಶರಣರ ಇಷ್ಟಲಿಂಗದ ಸಾಮಾನ್ಯ ಬಾಹ್ಯ ಲಕ್ಷಣಗಳಾದವು ಎಂಬ ಅಭಿಪ್ರಾಯವನ್ನು ಎಂ.ಎಂ. ಕಲಬುರ್ಗಿಯವರು ತಮ್ಮ ಒಂದು ಸಂಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾರೆ. “ಇಷ್ಟಲಿಂಗವನ್ನು ಶಿರಸ್ಸು, ಕೊರಳು, ರೆಟ್ಟೆ, ಎದೆ, ಕರಸ್ಥಳ ಇವುಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಧರಿಸಬೇಕು’’ ಎನ್ನುವುದು ಶಾಸ್ತ್ರನಿಯಮ. ಲಿಂಗವನ್ನು ದೇಹದ ಯಾವುದೇ ಭಾಗದಲ್ಲಿ ಧರಿಸಿದರೂ ಅದನ್ನು ಅಂಗೈಯಲ್ಲಿಟ್ಟುಕೊಂಡು ಪೂಜಿಸುವುದು ಪದ್ಧತಿ. ಇದೇ ಕರಸ್ಥಲ ಲಿಂಗಪೂಜೆ.
ಬಸವಪೂರ್ವಯುಗದಲ್ಲಿ ಹೀಗೆ ಲಾಕುಲೀಶ ಮತ್ತು ಪಾಶುಪತ ಪಂಥದವರಲ್ಲಿದ್ದ ಕರಸ್ಥಲ ಲಿಂಗಪೂಜೆಯು ಮುಂದೆ ವೈದಿಕ ಪರಂಪರೆಯಲ್ಲಿ ಮುಂದುವರೆದದ್ದು ಕೇವಲ ಆರಾಧ್ಯ ಬ್ರಾಹ್ಮಣರಲ್ಲಿ ಮಾತ್ರ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ ಲಿಂಗವನ್ನು ದೇಹದ ಮೇಲೆ ಧರಿಸದೇ ಇದ್ದರೂ ಪ್ರತಿನಿತ್ಯವೂ ಮಣ್ಣಿನಿಂದ ಹೊಚ್ಚಹೊಸ ಲಿಂಗವೊಂದನ್ನು ರಚಿಸಿ ಕರಸ್ಥಲದಲ್ಲಿರಿಸಿಕೊಂಡು ಪೂಜಿಸುವ ವಿಧಾನವು ಅತ್ಯಂತ ಅಪರೂಪವಾಗಿಯಾದರೂ ಬ್ರಾಹ್ಮಣರಲ್ಲಿ ಉಳಿದುಬಂದಿರುವುದಕ್ಕೆ ಎರಡು ಪುರಾವೆಗಳು ಇಲ್ಲಿವೆ.
೧. ಡಿ.ವಿ. ಗುಂಡಪ್ಪನವರು ತಮ್ಮ ‘ಜ್ಞಾಪಕ ಚಿತ್ರಶಾಲೆಯ ಎಂಟನೇ ಸಂಪುಟದಲ್ಲಿ ‘ಶಿವಪೂಜೆ ನಾರಣಪ್ಪನವರು ಎಂಬುವರನ್ನು ಕುರಿತು ನೀಡುವ ಚಿತ್ರಣ ಹೀಗಿದೆ:
ಪಾರ್ಥೀವ ಪೂಜೆ
ನಾರಣಪ್ಪನವರು ಬೆಳಗ್ಗೆ ೫ ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ವಿಭೂತಿ ಧರಿಸಿ ಮೂರು ನಾಲ್ಕು ರುದ್ರಾಕ್ಷಿ ಸರಗಳನ್ನು ಹಾಕಿಕೊಂಡು ಮೊದಲು ಪಾರ್ಥೀವ ಪೂಜೆ ಮಾಡುವರು. ಈ ಪಾರ್ಥೀವ ಲಿಂಗಪೂಜೆಯ ಪದ್ಧತಿ ಈಗ ನನಗೆ ತಿಳಿದಿರುವಂತೆ ಎಲ್ಲೂ ಇಲ್ಲ. ನನಗೆ ತೋರುತ್ತದೆ ಅದು ಸರ್ವೋತ್ಕೃಷ್ಟವಾದ ಏಕಾಂತ ಭಕ್ತಿಯೆಂದು ಭಕ್ತನು ಹುತ್ತದ ಮಣ್ಣನ್ನು ತಂದಿರಿಸಿಕೊಂಡಿರುತ್ತಾನೆ. ಅದು ಒದ್ದೆಯಾಗಿರುತ್ತದೆ. ಮಾರನೆಯ ದಿನ ಬೆಳಗ್ಗೆ ಸ್ನಾನ ಸಂಧ್ಯಾದಿಗಳು ಮುಗಿದ ತರುವಾಯ ಆತನು ತನ್ನ ಎಡಗೈಯಲ್ಲಿ ಆ ಮಣ್ಣಿನಿಂದ ಒಂದು ಶಿವಲಿಂಗದ ಪ್ರತೀಕವನ್ನು ಮಾಡಿ ಇರಿಸಿಕೊಳ್ಳುತ್ತಾನೆ. ಮಾಡಿ ಅದನ್ನು ಬಲಗೈಯಿಂದ ಪೂಜಿಸುತ್ತಾನೆ. ಆಗ ಹೇಳುವ ಮಂತ್ರಗಳೇ ‘ನಿಧನಪತಯೇ ನಮಃ ಇತ್ಯಾದಿಗಳು. ಅದೇ ‘ಅಂಗೈಯ ಲಿಂಗ. ಈ ಅರ‍್ಚನೆಗೆ ಬೇಕಾದ್ದು ತುಂಬೆಹೂವು ಮತ್ತು ಬಿಲ್ವ. ಒಂದೊಂದು ಸಾರಿ ನಮ್ಮ ನಾರಣಪ್ಪನವರು ನೈವೇದ್ಯಕ್ಕೆ ಬೇರೆ ಏನೂ ಗತಿಯಿಲ್ಲದೆ ಕುದುರೆಗಾಗಿ ಇರಿಸಿಕೊಂಡಿದ್ದ ಹುರಿದ ಹುರುಳಿಯನ್ನು ನೈವೇದ್ಯ ಮಾಡಿದ್ದುಂಟಂತೆ. ನಾರಣಪ್ಪನವರನ್ನು ಜನ ಶಿವಪೂಜಾ ಧುರಂಧರ ಎಂದು ಕರೆಯುತ್ತಿದ್ದರು.’’
೨. ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನೀ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದು ನಂತರ ಅಧ್ಯಕ್ಷರಾಗಿದ್ದ ಆಸ್ಥಾನ ಜ್ಯೋತಿಷ್ಟ ವಿದ್ವಾನ್ ವೇ.ಬ್ರ.ಶ್ರೀ. ಶಂಕರ ನಾರಾಯಣ ಜೋಯಿಸರು (೧೯೦೩-೧೯೯೮) “ನಿಜ ಜೀವನದಲ್ಲಿ ಶಿವಶಕ್ತಿಯ ಉಪಾಸಕರು. ಅವರು ಅನೇಕ ವರ್ಷಗಳ ಕಾಲ ಪ್ರತಿದಿನ ಮೃಣ್ಮಯ ಪಾರ್ಥಿವೇಶ್ವರನ ಪೂಜೆಯನ್ನು ಮಾಡುತ್ತಿದ್ದರು’’ ಶ್ರೀ ಜೋಯಿಸರು ಕರಸ್ಥಲದಲ್ಲಿ ಮಣ್ಣಿನ ಲಿಂಗವನ್ನು ಇರಿಸಿಕೊಂಡು ಪೂಜಿಸುತ್ತಿರುವ, ೧೯೫೮ರಲ್ಲಿ ತೆಗೆಯಲಾದ ಛಾಯಾಚಿತ್ರವನ್ನು ಗಮನಿಸಿ.
ಪ್ರಸ್ತುತದಲ್ಲಿ ಪಾರ್ಥಿವ ಪೂಜೆಯನ್ನು ಆಚರಣೆಯಲ್ಲಿ ಇರಿಸಿಕೊಂಡಿರುವವರು ಯಾರಾದರೂ ಇದ್ದಾರೆಯೇ ಎಂಬ ಮಾಹಿತಿಯನ್ನು ಪಡೆಯುವಲ್ಲಿ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಹಾಗಾಗಿ ಈ ಆಚರಣೆಯ ವಿಧಿ ವಿಧಾನಗಳನ್ನು ಅರಿಯಲು ಮೇಲ್ಕಂಡ ಉಲ್ಲೇಖಗಳನ್ನು ಮಾತ್ರವೇ ಆಧರಿಸದೆ ವಿಧಿಯಿಲ್ಲ. ಆದರೆ ಶಿವ (ಮಹಾ) ಪುರಾಣದ ವಿದ್ಯೇಶ್ವರ ಸಂಹಿತೆಯ ೧೯, ೨೦ ಮತ್ತು ೨೧ನೇ ಅಧ್ಯಾಯಗಳು ಸಂಪೂರ್ಣವಾಗಿ ಪಾರ್ಥಿವೇಶ್ವರ ಪೂಜೆಯ ವಿವರಣೆಗೆ ಮೀಸಲಾಗಿದ್ದು ಇದರ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತವೆ. ಸುಮಾರು ೧೩೦ಕ್ಕೂ ಹೆಚ್ಚು ಅನುಷ್ಟುಪ್ ಶ್ಲೋಕಗಳಲ್ಲಿ ಹರಡಿರುವ ಇಲ್ಲಿಯ ವಿವರಗಳನ್ನು ಹೀಗೆ ಸಂಗ್ರಹಿಸಬಹುದು:
“ಇರುವ ಎಲ್ಲ ಬಗೆಯ ಲಿಂಗಗಳಲ್ಲಿಯೂ* ಪಾರ್ಥಿವ ಲಿಂಗವೇ ಅತ್ಯುತ್ತಮ. ಅದನ್ನು ಪೂಜಿಸಿ ಅನೇಕರು ಸಿದ್ಧಿಯನ್ನು ಪಡೆದಿರುವರು.೧೦ ದೇವತೆಗಳಲ್ಲಿ ಮಹೇಶ್ವರ, ನದಿಗಳಲ್ಲಿ ಗಂಗೆ, ಮಂತ್ರಗಳಲ್ಲಿ ಪ್ರಣವ, ಪಟ್ಟಣಗಳಲ್ಲಿ ಕಾಶಿ, ವರ್ಣಗಳಲ್ಲಿ ಬ್ರಾಹ್ಮಣ ಹಾಗೂ ವ್ರತಗಳಲ್ಲಿ ಶಿವರಾತ್ರಿ ಹೇಗೆ ಶ್ರೇಷ್ಠವೋ ಹಾಗೆಯೇ ಲಿಂಗಗಳಲ್ಲೆಲ್ಲಾ ಪಾರ್ಥಿವ ಲಿಂಗವು.೧೧ ಕೈಯಲ್ಲಿ ಇರಿಸಿಕೊಳ್ಳುವ ಚರಲಿಂಗವನ್ನು ಅಖಂಡವಾಗಿ ಮತ್ತು ವೇದಿಕೆಯ ಮೇಲೆ ಇರಿಸಿ ಪೂಜಿಸುವಂತಹುದನ್ನು ಪೀಠ ಮತ್ತು ಲಿಂಗವೆಂದು ಎರಡು ಭಾಗಗಳಾಗಿ ಮಾಡಬೇಕು.೧೨ ವೈದಿಕರಾದ ಬ್ರಾಹ್ಮಣರು ತಮ್ಮ ಗೃಹ್ಯಸೂತ್ರದಲ್ಲಿ ಹೇಳಿರುವ ವಿಧಿಯಂತೆ ಸ್ನಾನ ಮಾಡಿ ಸಂಧ್ಯಾವಂದನೆಯನ್ನು ಆಚರಿಸಿ ಮೊದಲು ಬ್ರಹ್ಮಯಜ್ಞವನ್ನು ಆಚರಿಸಿ ಬಳಿಕ ತರ್ಪಣ ನೀಡಬೇಕು. ನಂತರ ಶುದ್ಧವಾದ ಪ್ರದೇಶದಿಂದ ಮಣ್ಣನ್ನು ಹುಡುಕಿ ತಂದು ಅದನ್ನು ನೀರಿನಲ್ಲಿ ಶೋಧಿಸಿ ವೇದೋಕ್ತ ವಿಧಿಯಂತೆ ನಿಧಾನವಾಗಿ ಉಂಡೆಕಟ್ಟಿ ಲಿಂಗವನ್ನು ರಚಿಸಬೇಕು.೧೩ ಅನಂತರ ‘ನಮಸ್ತೇ ರುದ್ರ, ‘ನಮಃ ಶಂಭವಾಯ ಮುಂತಾದ ತೈತ್ತರೀಯ ಸಂಹಿತೆಯ ಮಂತ್ರಗಳಿಂದ ಮತ್ತು ‘ಯಾತೇ ರುದ್ರ ಮೊದಲಾದ ರುದ್ರಾಧ್ಯಾಯದ ಮಂತ್ರಗಳಿಂದ೧೪ ಅಥವಾ ಗುರುವು ಉಪದೇಶಿಸಿರುವಂತಹ ಶಿವ ಪಂಚಾಕ್ಷರೀ ಮಂತ್ರದಿಂದ೧೫ ಷೋಡಶೋಪಚಾರಗಳನ್ನು ಅರ್ಪಿಸಿ ವಿಧಿವತ್ತಾಗಿ ಪೂಜಿಸಬೇಕು. ಗೃಹಸ್ಥರಾದವರು ಈ ಲಿಂಗವನ್ನು ಪೀಠದ ಮೇಲಿಟ್ಟು೧೬ ವಿರಕ್ತರು (ಸನ್ಯಾಸಿಗಳು) ತಮ್ಮ ಕರತಲದಲ್ಲಿ ಇರಿಸಿಕೊಂಡೂ ಪೂಜಿಸಬೇಕು.’’೧೭
ಶಿವಪೂಜೆ ನಾರಣಪ್ಪನವರು ಹಾಗೂ ಶಂಕರ ನಾರಾಯಣ ಜೋಯಿಸರಿಬ್ಬರ ಪೂಜಾವಿಧಾನವೂ ಶಿವಪುರಾಣದ ಈ ಎಲ್ಲ ವಿಧಿಗಳಿಗೆ ಅನುಗುಣವಾಗಿರುವುದರಿಂದ ನಿಸ್ಸಂದೇಹವಾಗಿ ಇದು ವೈದಿಕ ಸ್ವರೂಪದ ಕರಸ್ಥಲ ಲಿಂಗಪೂಜೆಯೇ ಆಗಿದೆ. ಹಾಗಾಗಿ ಒಂದು ಕಾಲದಲ್ಲಿ ಲಾಕುಲೀಶ, ಪಾಶುಪಾತ ಮುಂತಾದವರಲ್ಲಿ ರೂಢಿಯಲ್ಲಿದ್ದ ಅಪರೂಪದ ಈ ವೈದಿಕ ಪೂಜಾ ವಿಧಾನವು ೨೦ನೆಯ ಶತಮಾನದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತೆಂಬುದು ಖಚಿತವಾಗುತ್ತದೆ.
[ಈ ಸಂಪ್ರಬಂಧವನ್ನು ಸಿದ್ಧಪಡಿಸುವಲ್ಲಿ ನೆರವಾದ ಶ್ರೀಮತಿ ಕೆ.ಎಸ್. ಶೈಲಜಾ ಹಾಗೂ ಡಾ. ಎಸ್.ವಿ. ಶ್ರೀಧರಮೂರ್ತಿ ದಂಪತಿಗಳಿಗೆ, ಅಪರೂಪದ ಛಾಯಾಚಿತ್ರವನ್ನು ಒದಗಿಸಿದ ಹೈದರಾಬಾದಿನ ಶ್ರೀ ಸೀತಾರಾಮ್‌ರವರಿಗೆ ಹಾಗೂ ಆರಾಧ್ಯ ಬ್ರಾಹ್ಮಣರನ್ನು ಕುರಿತು ವಿವರಿಸಿದ ತುಮಕೂರಿನ ಡಾ. ಬಿ. ನಂಜುಂಡಸ್ವಾಮಿಯವರಿಗೆ ಧನ್ಯವಾದಗಳು.)

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ರುದ್ರಪ್ಪ ಜೆ., ‘ವೀರಶೈವ ಧರ್ಮ, ಕರ್ಣಾಟಕದ ಪರಂಪರೆ, ಭಾಗ ೧, ಪುಟ ೫೨೯, ೧೯೭೦.
೨.         ನರಸಿಂಹಾಚಾರ್, ಡಿ.ಎಲ್. ‘ಲಿಂಗಾರ್ಚನೆ, ಲಿಂಗಧಾರಣೆ ಪೀಠಿಕೆಗಳು, ಲೇಖನಗಳು, ಪುಟ ೯೮೬, ೧೯೭೧.
೩.         ಪಾರಮೇಶ್ವರಾಗಮದ ಪ್ರಕಾರ ಚತುರ್ವರ್ಣಗಳಲ್ಲಿ ಯಾರೇ ಆದರೂ ಲಿಂಗಧಾರಣ ಮಾತ್ರದಿಂದ ಅವರು ಶಿವರೇ ಆಗುವರು. (ನೋಡಿ: ನಂದಿಕೋಲಮಠ, ಜ.ಐ., ಕರಸ್ಥಲ ಪರಂಪರೆ, ಪುಟ ೩೫, ೨೦೦೯.
೪.         ಕಲಬುರ್ಗಿ ಎಂ.ಎಂ., ‘ಇಷ್ಟಲಿಂಗ, ಮಾರ್ಗ ಸಂ. ೧, ಪುಟ ೧೮೭, ೧೯೮೮.
೫.         ಉತ್ತಮಾಂಗೇ ಗಲೇಕಕ್ಷೇ ತಥಾ ವಕ್ಷಃ ಸ್ಥಲೇಪಿ ವಾ |
            ಕರಸ್ಥಲೇಪಿವಾ ನಿತ್ಯಂ ಸಾವಧಾನೇನ ಧಾರಯ || -ಸೂಕ್ಷ್ಮಾಗಮ.
೬.         “ಲಿಂಗಯಜ್ಞೋಪವೀತಧಾರೀ ಪಾಶುಪತ ಮಹೇಶ್ವರ..ಧರ್ಮವನ್ನು ಬಸವೇಶ್ವರನು ಸಂಸ್ಕರಿಸಲು, ಪಾಶುಪತರು ಪಥವನ್ನರಿಯದೆ, ಕಾಳಾಮುಖರು ಕಂಗೆಟ್ಟು ಸುಧಾರಿತ ಧರ್ಮವನ್ನು ಬಹುಸಂಖ್ಯೆಯಲ್ಲಿ ಅಪ್ಪಿಕೊಂಡರಾದರೂ ಲಿಂಗ ಬ್ರಾಹ್ಮಣ ಧರ್ಮವು ಆರಾಧ್ಯ ಬ್ರಾಹ್ಮಣರಲ್ಲಿ ಮುಂದುವರೆಯಿತು’’ -ಮಲ್ಲಪ್ಪ ಟಿಎನ್., ‘ಬಸವಯುಗದ ಹಿನ್ನೆಲೆ, ಬಸವೇಶ್ವರ ಸಮಕಾಲೀನರು, ಪುಟ ೬೮೦, ೨೦೦೭.
೭.         ಗುಂಡಪ್ಪ. ಡಿ.ವಿ. ‘ಡಿವಿಜಿ ಕೃತಿ ಶ್ರೇಣಿ, ಸಂ. ೮, ಪುಟ ೨೪೯, ೧೯೯೮.
೮.         ‘ಸಾರ್ಥಕಜೀವಿ ಶೃಂಗೇರಿ ಕುಲಪತಿ ಶಂಕರನಾರಾಯಣ ಜೋಯಿಸರು, ಪುಟ ೮, ಶ್ರೀ ಕಲ್ಲೇಶ್ವರ ಮಲ್ಲೇಶ್ವರ ಸ್ವಾಮಿ ಸೇವಾ ಟ್ರಸ್ಟ್, ಶಿವಮೊಗ್ಗ, ೨೦೦೯.
೯.         ವೆಂಕಟರಾವ್ (ಸಂ) ಶಿವಮಹಾಪುರಾಣ, ಭಾಗ ೧, ಜಯಚಾಮರಾಜೇಂದ್ರ ಗ್ರಂಥಮಾಲಾ, ಕ್ರ.ಸಂ. ೨೧, ೧೯೪೫.
*           ದ್ರವ್ಯಗಳ ಭೇದದಿಂದ ಲಿಂಗಗಳಲ್ಲಿ ಶೈಲಜ, ರತ್ನಜ, ಧಾತುಜ, ದಾರುಜ, ಮೃಣ್ಮಯ ಮತ್ತು ಕ್ಷಣಿಕವೆಂಬ ಆರು ಬಗೆಗಳಿವೆ. -ಲಿಂಗ ಮಹಾಪುರಾಣ, ಪೂರ್ವಭಾಗ, ಅಧ್ಯಾಯ ೭೪, ಶ್ಲೋಕ : ೧೭.
೧೦.      ಶಿವಮಹಾಪುರಾಣ, ಅಧ್ಯಾಯ ೧೮, ಶ್ಲೋಕ-೪.
೧೧.      ಅಲ್ಲೇ., ಶ್ಲೋಕಗಳು ೯-೧೫.
೧೨.      ಅಲ್ಲೇ., ಶ್ಲೋಕಗಳು ೩೧-೩೫.
೧೩.      ಅಲ್ಲೇ., ಅಧ್ಯಾಯ ೧೯, ಶ್ಲೋಕಗಳು ೬-೯.
೧೪.      ಅಲ್ಲೇ., ಶ್ಲೋಕಗಳು ೧೧-೪೧.
೧೫.      ಅಲ್ಲೇ., ಶ್ಲೋಕಗಳು ೪೨-೪೪.
೧೬.      ಅಲ್ಲೇ., ಅಧ್ಯಾಯ ೨೦, ಶ್ಲೋಕ ೩೩.
೧೭.      ಅಲ್ಲೇ., ಶ್ಲೋಕ ೩೫.
?   ಮುಖ್ಯಸ್ಥ, ಕನ್ನಡ ವಿಭಾಗ, ವಿಜಯ ಪದವಿ ಪೂರ್ವ ಕಾಲೇಜು, ಆರ್.ವಿ. ರಸ್ತೆ, ಬಸವನಗುಡಿ, ಬೆಂಗಳೂರು-೫೬೦೦೦೪.






Thursday, February 13, 2014

ಚಿಂತನ ಗೋಷ್ಠಿ

ªÀÄÄ°Ì ¸ÀÄAzÀgï gÁªÀiï ±ÉnÖ PÁ¯ÉÃdÄ, ²ªÀð
ªÀÄvÀÄÛ
PÀ£ÀßqÀ ¸Á»vÀå ¥ÀjµÀvÀÄÛ, PÁ¥ÀÄ ºÉÆÃ§½ WÀlPÀ

         «µÀAiÀÄ: ºÀA¥À£Á zÀA¥ÀwUÀ¼À ¸ÁA¸ÀÌøwPÀ PÉÆqÀÄUÉUÀ¼À §UÉÎ ªÀÄAUÀ¼ÀÆgÀÄ «.«. ªÀÄlÖzÀ MAzÀÄ ¢£ÀzÀ aAvÀ£À UÉÆÃ¶× ªÀÄvÀÄÛ C©ü£ÀAzÀ£Á ¸ÀªÀiÁgÀA¨sÀ
         ²æÃªÀÄw/²æÃ PÀªÀįÁ ºÀA¥À£Á ªÀÄvÀÄÛ ºÀA¥À £ÁUÀgÁdAiÀÄå PÀ£ÀßqÀ ¸ÁgÀ¸ÀévÀ ¯ÉÆÃPÀzÀ JgÀqÀÄ zsÀÄæªÀvÁgÉUÀ¼ÀÄ. ºÀA¥À£Á zÀA¥ÀwUÀ¼ÀÄ PÀ£ÀßqÀ ¸Á»vÀå, ¸ÀA¸ÀÌøw, ¨sÁµÉAiÀÄ JvÀÛgÀ - ©vÀÛgÀUÀ¼À£ÀÄß zÉñÀ-«zÉñÀUÀ¼À°è ¥À¸Àj¹ PÀ£ÀßqÀPÉÌ ªÉÄÃgÀÄ ªÀåQÛvÀéªÀ£ÀÄß zÉÆgÀQ¹PÉÆnÖzÁÝgÉ. CªÀgÀ PÉÆqÀÄUÉUÀ¼À aAvÀ£É ªÀÄvÀÄÛ «ªÀıÉðUÀ¼ÀÄ AiÀÄĪÀ ¦Ã½UÉUÉ MAzÀÄ ¢PÀÆìaAiÀiÁUÀ§®èzÀÄ JA§ ¸ÀzÀÄzÉÝñÀ¢AzÀ £ÀªÀÄä PÁ¯ÉÃf£À°è ªÀÄAUÀ¼ÀÆgÀÄ «±Àé«zÁå®AiÀÄ ªÀÄlÖzÀ MAzÀÄ ¢£ÀzÀ PÁAiÀÄðPÀæªÀĪÀ£ÀÄß EzÉà wAUÀ¼ÀÄ 25 gÀ ªÀÄAUÀ¼ÀªÁgÀzÀAzÀÄ ºÀ«ÄäPÉÆ¼Àî¯ÁVzÉ.
         ¸ÀzÀj PÁAiÀÄðPÀæªÀÄzÀ°è ºÀA¥À£Á zÀA¥ÀwUÀ¼ÀÄ ¢£À«rà £ÀªÀÄä eÉÆvɬÄgÀ®Ä ¸ÀºÀÈzÀAiÀÄvɬÄAzÀ M¦àPÉÆArgÀÄvÁÛgÉ. ¸ÀzÀj PÁAiÀÄðPÀæªÀÄPÉÌ vÀªÀÄä PÁ¯ÉÃf£À 5 d£À «zÁåyðUÀ¼ÀÄ ºÁUÀÆ CzsÁå¥ÀPÀgÀ£ÀÄß DzÀåvÉAiÀÄ £É¯ÉAiÀİè PÀ¼ÀÄ»¹ F PÁAiÀÄðPÀæªÀĪÀ£ÀÄß AiÀıÀ¹éUÉÆ½¸À¨ÉÃPÉAzÀÄ F ªÀÄÆ®PÀ vÀªÀÄä£ÀÄß PÉÆÃgÀ¯ÁVzÉ.
         ªÀAzÀ£ÉUÀ¼ÉÆA¢UÉ,

¢:13/02/2014                                                   
¸ÀܼÀ: ²ªÀð
                                                  ¥ÉÆæ. PÉ. ¸ÀħæºÀätå ¨sÀmï                                                                       ¥ÁæA±ÀÄ¥Á®gÀÄ
¥ÉÆæ. n. ªÀÄÄgÀÄUÉò
¸ÀAWÀl£Á PÁAiÀÄðzÀ²ð

²æÃ. ªÀÄzsÀĸÀÆzsÀ£ï Dgï. PÁ¥ÀÄ
¸ÀºÀ PÁAiÀÄðzÀ²ð


     ºÀA¥À£Á zÀA¥ÀwUÀ¼À PÉÆqÀÄUÉUÀ¼À §UÉÎ «µÀAiÀÄ ªÀÄAqÀ£É ªÀiÁqÀ°gÀĪÀ «zÁéA¸ÀgÀÄ.
1.   qÁ. ¥ÀÄArPÁÊ UÀt¥ÀAiÀÄå ¨sÀmï
zsÀªÀ¼Á PÁ¯ÉÃdÄ, ªÀÄÆqÀ©zÉæ
2.   ¥ÉÆæ. J¸ï. J. PÀȵÀÚAiÀÄå
eÁ£À¥ÀzÀ «zÁéA¸ÀgÀÄ, GqÀĦ
3.    qÁ. UÀt£Áxï JPÁÌgï
PÀ£ÀßqÀ ¸ÁßvÀPÉÆÃvÀÛgÀ «¨sÁUÀ
¸À. ¥Àæ. zÀeÉð PÁ¯ÉÃdÄ, vÉAPÀ¤rAiÀÄÆgÀÄ

4.    qÁ. ¤PÉÃvÀ£À
PÀ£ÀßqÀ ¸ÁßvÀPÉÆÃvÀÛgÀ «¨sÁUÀ
¸À. ¥Àæ. zÀeÉð PÁ¯ÉÃdÄ, vÉAPÀ¤rAiÀÄÆgÀÄ
5.   ¥ÉÆæ. n. ªÀÄÄgÀÄUÉò
¥ÁæZÉãÀ EwºÁ¸À ªÀÄvÀÄÛ ¥ÀÄgÁvÀé «¨sÁUÀ
JA. J¸ï. Dgï. J¸ï. PÁ¯ÉÃdÄ, ²ªÀð
6.    qÁ. ¸ÀÄ®vÁ «zÁåzsÀgï
PÀ£ÀßqÀ «¨sÁUÀ
D¼Áé¸ï PÁ¯ÉÃdÄ, ªÀÄÆqÀ©¢æ


    

Sunday, February 9, 2014

ದ್ವಿಭಾಷಾ ಸಾಹಿತಿಯ ನಾಲ್ಕು ಪುಸ್ತಕಗಳು

ಬಹುಮುಖಿ ಸಾಧನೆಯ ಸಾಹಿತಿ  ಡಾ. ಸಿದ್ದ ಲಿಂಗ ಪಟ್ಟಣಶೆಟ್ಟಿ

ಕಲಿತ ಮತ್ತು ಕಲಿಸಿದ ಭಾಷೆಯಸಾಹಿತ್ಯದಲ್ಲಿ ತಮ್ಮ ಸ್ವಂತಿಕೆಯಛಾಪು ಮೂಡಿಸುವುದರ ಜೊತೆಗೆ ಮನೆಮಾತಾದ ತಾಯ್ನುಡಿಯಲ್ಲೂ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳು ಹಲವರು. ಕನ್ನಡ ಮತ್ತು ಸಂಸ್ಕೃತದಲ್ಲಿ ಪ್ರಾಚೀನ  ವಿದ್ವಾಂಸರು ಹೆಸರು ಮಾಡಿದರೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಯಲವು ಆಧುನಿಕರು  ಪ್ರಖ್ಯಾತರಾಗಿರುವರು. , ಆದರೆ ರಾಷ್ಟ್ರಭಾಷೆ ಮತ್ತು ರಾಜ್ಯ ಭಾಷೆ ಎರಡರಲ್ಲೂ ಗಣನೀಯ ಸಾಧಕರೆಂದರೆ ತಟ್ಟನೆ ನೆನಪಿಗೆ ಬರುವುದು ಡಾ. ಸಿದ್ದಲಿಂಗ ಪಟ್ಟಣಸೆಟ್ಟಿಯವರ ಹೆಸರು.ಹಿಂದಿ ಮತ್ತು ಕನ್ನಡ ಎರಡುಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿ ರಾಷ್ಟ್ರ ಮಟ್ಟದಲ್ಲಿ ಗೌರವ ಮತ್ತು ರಾಜ್ಯಾದ್ಯಂತ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿರುವ ವಿರಳ ವ್ಯಕ್ತಿತ್ವ ಅವರದು.ಗಂಡು ಮೆಟ್ಟಿನ ನಾಡಾದ ಧಾರವಾಡ ಅವರ ಕರ್ಮ ಭೂಮಿಯಾದರೂ ನಾಡಿನಾದ್ಯಂತ ಗೆಳಯರು ಅಭಿಮಾನಿಗಳು ಇರುವರು.ಫೋಲಿಸು ಅಧಿಕಾರಿಗಳಿಂದ ಹಿಡಿದು ಸಾಹಿತ್ಯ, ರಂಗಭೂಮಿ,ಸಮಾಜಸೇವೆ ಚಳುವಳಿ, ಪತ್ರಿಕಾಪ್ರಪಂಚ  ಹೀಗೆ ಹಲವು ರಂಗಗಳಲ್ಲೂ ಅವರ ಸ್ನೇಹ ಛಾಯೆ ಹರಡಿದೆ,     

ಸಾಮಾನ್ಯವಾಗಿ ಚಿಂದಿಯುಡುಗೆಯವ ಚೀನಾಂಬರ ಧರಿಸುವ ಹಂತ ತಲುಪಿದ  ಕಥೆಗಳು ರೋಚಕ. ಪಟ್ಟಣ ಸೆಟ್ಟಿಯವರದು ಕಥೆ ಕಾದಂಬರಿಗಿಂತ ರೋಚಕವಾದ ಜೀವನಗಾಥೆ. ಅವರು ಜನಿಸಿದುದು ಧಾರವಾಡ ಜಿಲ್ಲೆಯ ತಾಯಿಯ ತವರಾದ ಯಾದವಾಡದಲ್ಲಿ ೧೯೩೬ ರಲ್ಲಿ. ತಂದೆ ದಲಾಲಿ ಅಂಗಡಿಯ ಕಾರಕೂನ.,ಮಗುವಿಗೆ ತಂದೆಯ ನೆನಪೆಂದರೆ ಸಿದಗಿಯ ಮೇಲೆ ಹೋಗುವ ಹೆಣದ್ದು ಮಾತ್ರ. ಕಾರಣ ಎರಡು ವರ್ಷವಾಗುವುದರಲ್ಲೇ ತಂದೆ ಬಸೆಟ್ಟೆಪ್ಪ ತೀರಿಕೊಂಡರು. ತಾಯಿ ಗಿರಿಜವ್ವ ಹಸುಗೂಸನ್ನು ಕಟ್ಟಿಕೊಂಡು ತೌರೂರು ಸೇರಿದಳು. ಏಕಾದಸಿಯ ಮನೆಗೆ ಶಿವರಾತ್ರಿ ಬಂದಂತಾಯಿತು. ಅಲ್ಲೂ ಕಿತ್ತು ತಿನ್ನುವ ಬಡತನ. ಕೂಲಿ ಮಾಡಿ, ಕುಳ್ಳುಹಚ್ಚಿ ಕಂದನನ್ನುಸಾಕಿದಳು.ಮಗು ಮನೆಗಿಂತ ಬೀದಿಯಲ್ಲಿ ಬೆಳೆದಿದ್ದೇ ಹೆಚ್ಚುಅಜ್ಜನ ಚಾದಂಗಡಿಯಲ್ಲಿ ಚಾ ಮಾಡುವ , ಕಪ್ಪು ಬಸಿ ತೊಳೆಯುವ ಕೆಲಸದಿಂದ ಹುಡುಗನ  ಕಾಯಕ ಮೊದಲಾಯಿತು. ಪರಿಣಾಮ ಬಾಲ್ಯದಲ್ಲೇ ಜನ ಬಳಕೆ. ಹಳ್ಳಿಯ ಹಲವುಹತ್ತು ವಿಷಯಗಳನ್ನು ಹತ್ತಿರದಿಂದ ಗಮನಿಸುವ ಅವಕಾಶ.  ಅಜ್ಜನ ಅಂಗಡಿಯ ಉದ್ದರಿ ಲೆಕ್ಕ ಬರೆಯುವುದರಿಂದ ಪ್ರಾರಂಭವಾಯಿತು. ಅಕ್ಷರ ಮತ್ತುಅಂಕೆಗಳ ಕಲಿಕೆ. ಹುಡುಗ ಶ್ಯಾಣ್ಯಾ ಆಗಲಿ ಎಂಬ ಅವ್ವನ ಹಂಬಲದಿಂದ ಐದನೆಯತ್ತೆಯತನಕ ಹಳ್ಳಿಯಲ್ಲೇ ಕಲಿಕೆ.  ನಂತರ ಧಾರವಾಡಕ್ಕೆ ವಲಸೆ. ಅಲ್ಲಿ ಸರಕಾರಿ ಕನ್ನಡ ಶಾಲೆಯಲ್ಲಿ ಹೆಸರು ಹಚ್ಚಿದರು. ಅವ್ವ ಯಥಾರೀತಿ ಅವರಿವರ ಮನೆಯಲ್ಲಿ ಬಾಂಡಿ ತಿಕ್ಕಿ, ಹೊಲದಲ್ಲಿ ಕೂಲಿಮಾಡಿ ಮಗನಿಗೆ ಸಾಲಿಕಲಿಸಲು ಹವಣಿಸಿದಳು. ಸೂಟಿಯಲ್ಲಿ ಮಗನೂ ತಾಯಿಯ ಕೆಲಸದಲ್ಲಿ ಕೈ ಗೂಡಿಸಿದ. ಎರಡುರೂಪಾಯಿಯ ಖೋಲಿಯಲ್ಲಿ ವಾಸ. ಎಂ. ಎ ಓದುವ ಹೊತ್ತಿಗೆ ಅದರ ಬಾಡಿಗೆ ಐದು ರೂಪಾಯಿ ಆಗಿತ್ತು.ಆರನೆಯ ಇಯತ್ತೆಗೆ ಬರುವಷ್ಟರಲ್ಲಿ ನವಲುಗಂದ ಮಾಸ್ತರು ಕಲಿಸಿದ ಛಂದಸ್ಸಿನ ಪಾಠ ಮನಸ್ಸಿಗೆ ಹತ್ತಿತ್ತು ಅದರ ಪ್ರಯೋಗ ತಡೆಯಿಲ್ಲದೆ ಸಾಗಿತು.ಬಾಸೆಲ್‌ಮಿಷನ್‌ನಲ್ಲಿ ಹೈಸ್ಕೂಲಿನಲ್ಲಿ. ಕಂಡದ್ದರ ಬಗ್ಗೆ  ಬರೆದ  ಕವನ.ಕಥೆ ಗಳನ್ನು ತಿದ್ದಿ ತೀಡಿದವರು ಹುಯಿಲುಗೋಳರು,. ಹೀಗೆ ಎಳೆವಯಸ್ಸಿನಲ್ಲೇ ಕಾವ್ಯ ಪ್ರೀತಿ ಮೊಳಕೆಯೊಡೆಯಿತು
.. ಅಲ್ಲಿಯೇ ಎಲ್ಲ  ಚಟುವಟಿಕೆಯಲ್ಲಿ ಸಕ್ರಿಯ  ಆಸಕ್ತಿ.  .ಹದಿ ಹರೆಯದಲ್ಲಿ ಏಕಮುಖ ಪ್ರೇಮದ ಅನುಭವ. ಅದರಫಲ ಪುಂಖಾನುಪುಂಖ ಕವಿತೆಗಳ ರಚನೆ.ಆ ವಿಪ್ರಲಂಭ ಶೃಂಗಾರದ ಸಂಕಲನವೇ ’ನೀನಾ’ ಅದಕ್ಕೆ ಕೆ.ಎಸ್‌. ನರಸಿಂಹ ಸ್ವಾಮಿಯವರು ಮುನ್ನುಡಿ. ಏಕದಂ  ಸಾಹಿತ್ಯ ಲೋಕಕ್ಕೆ ಪ್ರವೇಶ. ನಾಡಿನಾದ್ಯಂತ ಗೆಳೆಯರು. ಎಲ್ಲ ಪತ್ರಿಕೆಗಳಲ್ಲೂ ಕಥೆ ಕವನ ಪ್ರಕಟನೆ.ನೋವುಗಳನ್ನು ಮೆರೆಯಲು ಮತ್ತು ಮರೆಯಲು ಬರವಣಿಗೆ ಸಾಧನವಾಯಿತು .ಕರ್ನಾಟಕ ಕಾಲೇಜನಲ್ಲಿ  ಗೋಕಾಕರು ಗುರಗಳು. ಅವರೊಡಗಿನ ಬಾಂಧವ್ಯ ಮಾರ್ಗದರ್ಶನ ಅನವರತ. ಹಿಂದಿಕಲಿತ ಹಿನ್ನಲೆ ರೋಚಕ. ಮುಲ್ಕಿಯಲ್ಲಿ ಹಿಂದಿಯಲ್ಲಿ  ನಪಾಸು. .ಅದು ಆತ್ಮಾಭಿಮಾನಕ್ಕೆ ದೊಡ್ಡ ಸವಾಲು . ಕಷ್ಟ ಪಟ್ಟು ಭಾಷೆಯಮೇಲೆ ಹಿಡಿತ ಸಾಧಿಸಿ ಅದನ್ನೆ ಪದವಿ ಮತ್ತ ಸ್ನಾತಕೋತ್ತರ ಹಂತದಲ್ಲಿ ಕಲಿತರು.   ಜೊತೆಗೆ ಹಿಂದಿಯಲ್ಲಿಯೂ ಕಥೆ ಕವನ, ವಿಮರ್ಶೆ ಬರೆಯತೊಡಗಿದರು.ಹಿಂದಿಯ ಕವನ ಸಂಕಲನ ’೧೯೬೩ರಲ್ಲಿ ಪ್ರಕಟವಾಗಿ ಖ್ಯಾತಿತಂದಿತು. ’ಆಧುನಿಕ ಹಿಂದಿ ಔರ್‌ ಕನ್ನಡ ಕಾವ್ಯ’ ಒಂದು ತುಲನಾತ್ಮಕ ಅಧ್ಯಯನ. ಎರಡೂ ಭಾಷೆಗಳಲ್ಲು ಅದು ಒಂದು ಮೇರುಕೃತಿ.ಹಿಂದಿ ಬರಹದ ಫಲ ನಾಡಿನಾದ್ಯಂತದ ಲೇಖಕರ , ಕವಿಗಳ ಪರಿಚಯ.ಹಿಂದಿಯಲ್ಲಿಯ ಸಾಹಿತ್ಯಸಾಧನೆ ಕಾವ್ಯಕ್ಕೆ ನಾವಿನ್ಯತೆ ತಂದಿತು  ಮತ್ತು ಪ್ರಭಾವ ಹೆಚ್ಚಿಸಿತು.  ಹಿಂದಿ ಸಾಹಿತ್ಯದ ಸಾಧನೆಯಲ್ಲಿ ನೆನಪಿಡುವ ಅಂಶವೆಂದರೆ ಅವರ ಗೀತೆಯೊಂದನ್ನು ಪ್ರತಿದಿನ ಸಾವಿರಾರು  ಜನ ತಪ್ಪದೆ ಹಾಡುವುದು. ಜೀವ ವಿಮಾ ನಿಗಮದ’ “ನಿಗಮ್‌ ಗೀತ್‌’”  ಇವರ ಲೇಖನಿಯಿಂದ ಮೂಡಿದೆ. ಅದನ್ನು ಹಾಡಿಯೇ ನಾಡಿನಾದ್ಯಂತದ ಜೀವ ವಿಮಾ ನಿಗಮದ ಕಚೇರಿ ಮತ್ತು ಕಾರ್ಯಕ್ರಮ ಪ್ರಾರಂಭಿಸುವರು.


ಅವರ ಆರಂಭದ ವೃತ್ತಿ ಜೀವನವೂ ಸುಗಮವಲ್ಲ.ಸ್ನಾತಕೋತ್ತರ ಪದವಿಯಲ್ಲಿ ಪ್ರಪ್ರಥಮ ಸ್ಥಾನ ಪಡೆದರೂ ಎರಡುವರ್ಷ ನಿರುದ್ಯೋಗ ಪರ್ವ.ಆಗಲೂ ಅವ್ವ ತಾನು ಉಪವಾಸ ಇದ್ದರೂ ಮಗನಿಗೆ ರೊಟ್ಟಿಕೊಟ್ಟು ಸಲಹಿದಳು.ಕಾರಣ ನಿನಗೆಉತ್ತಮ ಅಂಕಬಂದಿವೆ ಎಲ್ಲಿಯಾದರೂ ನೌಕರಿ ದೊರಕುವುದು  ಎಂದು ಸಂದರ್ಶನದಲ್ಲಿ ಸಮಜಾಯಿಒಷಿ ಹೇಳಿ ಸಾಗ ಹಾಕುತಿದ್ದರು. ಆ ಅವಧಿಯಲ್ಲಿಮಾರ್ವಾಡಿ ಮಕ್ಕಳಿಗೆಮನೆ ಪಾಠ ಹೇಳಿಅವ್ವನಿಗೆ ನೆರವಾಗುತಿದ್ದರು ಎರಡುವರ್ಷದ ನಂತರ ಶಿರಶಿಯಲ್ಲಿ ಉಪನ್ಯಾಸಕನ ಹುದ್ದೆ ದೊರಕಿತು. ಮಾರನೆಯ ವರ್ಷವೇ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕರಾದರು ಹಿಂದಿ ಪ್ರಾಧ್ಯಾಪಕರಾಗಿ ೨೦೦೦ ನೆಯ ಇಸ್ವಿ ನಿವೃತ್ತರಾಗುವ ತನಕ ಅಲ್ಲಿಯೇ ಅವರ ಸೇವೆ.
ವೈಯುಕ್ತಿಕ ಬದುಕು ವರ್ಣಮಯ. ಡಾ. ಮಾಲತಿಯವರನ್ನು  ಮದುವೆಯದಾಗ ಹಾಲಿಗೆ ಸಕ್ಕರೆ ಬೆರಸಿದಂಥಹ ಸಂಸಾರ. ಇಬ್ಬರೂ ಸಾಹಿತಿಗಳು ಸಹೃದಯರು. ಈ ದಾಂತ್ಯದ ಫಲ ಒಬ್ಬಮಗ ಮತ್ತು ಒಬ್ಬ ಮಗಳು. .ಆದರೆ ಎಂಟುವರ್ಷದಲ್ಲೇ ಬೇರೆಯಾದರು. ನಂತರ ಮದುವೆಯಾದದ್ದು ಸಾಹಿತಿ ಹೇಮಅವರನ್ನು. ಅವರದು ಬಹು ಮುಖ ಪ್ರತಿಭೆ. ಇಬ್ಬರು ಮಕ್ಕಳು ಹೂ ಮತ್ತು ಸಮುದ್ರ.ಈಗ ಇಬ್ಬರೂ ಸಾಹಿತ್ಯ  ಮತ್ತು ಜೀವನ ಸಾಗರದಲ್ಲಿ ಸಹ ಪ್ರಯಾಣಿಕರು
ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡದ ಪ್ರಮುಖ ಕವಿ, ಕಥೆಗಾರ, ವಿಮರ್ಶಕ, ಅಂಕಣಕಾರ, ಹಾಗೂ ಅನುವಾದಕರು.ಎಪ್ಪತ್ತರ ದಶಕದಲ್ಲಿ ಚಂದ್ರಶೇಖರ ಪಾಟೀಲ  ಮತ್ತು ಗಿರಡ್ಡಿಯವರ ಜೊತೆ ಗೂಡಿ ಹೊರತಂದ ಮಾಸ ಪತ್ರಿಕೆ “ ಸಂಕ್ರಮಣ ಸಾಹಿತ್ಯವಲಯದಲ್ಲಿ ಹೊಸ ಗಾಳಿ ಬೀಸಿತು. ಅದನ್ನು ಹಲವುವ ರ್ಷ ಒಬ್ಬರೇ ನಡೆಸು ಹೊಣೆ ಇವರ ಮೇಲೆ ಬಿದ್ದಿತ್ತು. ಅದು ಬಹುತೇಕ ಪ್ರಗತಿಶೀಲ ಬರಹಗಾರರನ್ನು ಒಗ್ಗೂಡಿಸುವ ಕೆಲಸ ಮಾಡಿತು.ನಂತರ ಕಾರಣಾಂತರದಿಂದ ದೂರ ಸರಿದರು.
ಗಿರೀಶ ಕಾರ್ನಾಡ ಮತ್ತು ಮೋಹನ್ ರಾಕೇಶ್‌ರ ನಾಟಕಗಳ ತೌಲನಿಕ ಆಧ್ಯಯನ ಇವರ ಪಿಎಚ್.ಡಿ. ಸಂಪ್ರಬಂಧ
.ಅವರು ಕನ್ನಡದ ವಿವಿಧ ಪ್ರಕಾರಗಳಲ್ಲಿ ೭೦ ಕೃತಿ ರಚಿಸಿರುವರು ಹಿಂದಿಯಲ್ಲಿ ೧೬ ಕೃತಿಗಳು ಬಂದಿವೆ.. ಅವರು ನಿರ್ವಹಿಸಿದ ಹೊಣೆಗಳು ವಿಫುಲ

CAvÀgÀAUÀÀ £ÁlPÀ PÀÆl, ¸ÀAVÃvÀ £ÁlPÀ CPÁqÉ«,  PÀ£ÁðlPÀ £ÁlPÀ CPÁqÉ«Ä ¸ÀzÀ¸Àå PÀ£ÁðlPÀ «zÁåªÀzsÀðPÀ ¸ÀAWÀ,  ¥ÀæzsÁ£À PÁAiÀÄðzÀ²ð:  gÀAUÁAiÀÄt,  gÀAUÀ¸ÀªÀiÁd, zÀQët ªÀÄzsÀåªÀ®AiÀÄ ¸ÁA¸ÀÌøwPÀ PÉÃAzÀæ,  £ÁUÀ¥ÀÄgÀ,  PÉÃA¢æÃAiÀÄ »A¢Ã ²PÀët ªÀÄAqÀ¯ï, DUÁæ,  CªÀ¯ÉÆÃPÀ£À, PÀ£ÁðlPÀ ¸ÀgÀPÁgÀzÀ ¸ÁPÀëöåavÀæ ¤zÉðñÀPÀgÀ DAiÉÄÌ ¸À«Äw CzsÀåPÀë, gÀAUÀ¨sÀÆ«ÄPÁ. gÁdå UÀæAxÁ®AiÀÄ ¥ÀĸÀÛPÀ DAiÉÄÌ ¸À«Äw ¸ÁªÀðd¤PÀ ²PÀët E¯ÁSÉ ¥ÀĸÀÛPÀ Rjâ ¸À«Äw CzsÀåPÀë , CAZÉ ªÉâPÉ CzsÀåPÀë : vÉÆÃAlzÁAiÀÄð PÀ¯ÁgÀAUÀ,  ¸Á° gÁªÀÄZÀAzÀægÁAiÀÄ ¥ÀæwµÁ×£À , qÁ.ªÀİèPÁdÄð£À ªÀÄ£À¸ÀÆgÀ ¥ÀæwµÁ×£À, ಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು.
PÀ£ÁðlPÀ ¸ÀgÀPÁgÀzÀ ¥ÀA¥À ¥Àæ±À¹Û, UÀĩ⠫ÃgÀtÚ ¥Àæ±À¹Û, ²±ÀÄ£Á¼À ±ÀjÃ¥sÀ ¥Àæ±À¹Û, ¸ÁuÉúÀ½îAiÀÄ ²ªÀPÀĪÀiÁgÀ ¥Àæ±À¹Û ªÀÄÄAvÁzÀ DAiÉÄÌ ¸À«ÄwUÀ¼Àದಸ್ಯÀ ಸಾಹಿತ್ಯ ಸುಧಾಕರ, ಬೇಂದ್ರೆ ಪ್ರತಿಷ್ಠಾನ, ಅಡ್ನೂರ : ಕಾವ್ಯಗಂಗಾಧರ ಶ್ರೀಮುರುಘರಾಜೇಂದ್ರ ಮಠ, ಚಿತ್ರದುರ್ಗ: ಕಲಾರಾಧಕ ಪ್ರಶಸ್ತಿ, ಹೂವಿನಹಡಗಲಿಯ ಮ.ಮ. ಪಾಟೀಲ ಪ್ರತಿಷ್ಠಾನ : ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ಗೌರವಸನ್ಮಾನ, ದೊರೆತಿವೆ. ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಮತ್ತು ದುಬೈ ಕರ್ನಾಟಕ ಸಂಘದ ರಜತಮಹೋತ್ಸವದ ಸರ್ವಾಧ್ಯಕ್ಷತೆ - ಹಿಂದಿ ಸಾಹಿತ್ಯ ಲೋಕವೂ ವಿಶೇಷ ಸಾಹಿತ್ಯ ಸೇವಾ ಸಮ್ಮಾನ್, ವಿಶಿಷ್ಟ ಹಿಂದೀ ಸೇವೀ ಸಮ್ಮಾನ್: ನೀಡಿ ಗೌರವಿಸಿದೆ . ಅಮೆರಿಕಾದ ಲಾಸ್ ಎಂಜಲೀಸ್‌ದ ನಾವಿಕ ಪ್ರಥಮ ಕನ್ನಡ ಸಾಂಸ್ಕೃತಿಕ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಕಥೆ, ಕವಿತೆಗಳು ಇಂಗ್ಲಿಶ್, ಹಿಂದೀ, ಉರ್ದೂ, ತೆಲುಗು ಮುಂತಾದ ಭಾಷೆಗಳಲ್ಲಿ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅಂತರ್ಜಾಲದಲ್ಲಿ ಕವಿತಾ ವಾಚನ ಮತ್ತು ಜೀವನ ಪರಿಚಯ.
ಒಮ್ಮೆ ಪರಿಚಯವಾದರೆ ಸಾಕು. ಹೃದಯಕ್ಕೆ ಹತ್ತಿರವಾಗುವ ಸರಳತೆ ಅವರದು. ವರ್ಣರಂಜಿತ ವ್ಯಕ್ತಿತ್ತವ ಡಾ.ಪಟ್ಟಣಶೆಟ್ಟಿಯವರ ಕೃತಿಗಳು ಹಳೆ ಮೈಸೂರಿನ ಹೃದಯಭಾಗದಲ್ಲಿರುವ ಬೆಂಗಳೂರಿನಲ್ಲೂ  ಲೋಕಾರ್ಪಣೆ ಯಾಗುತ್ತಿರುವುದಕ್ಕೆ ಅವರ ಗೆಳೆಯರ ಬಳಗದ ಅಭಿಮಾನದ ಫಲ.
೧೬. ೨. ೧೪ ರಂದು ಸಂಜೆ ನಯನ ಸಭಾಂಗಣದಲ್ಲಿ  ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಯಾಗಲಿವೆ.





          ಅಭಿಮುಖ:
 
 ಕಾವ್ಯ ಮತ್ತು ನಾಟಕಗಳಿಗೆ ಸೂಕ್ಷ್ಮ ಸಂವೇದನೆಯ ಮನಸ್ಸು ಮುಖಾಮುಖಿಯಾದಾಗ ಸಾಹಿತ್ಯ ಕೃತಿಗಳಿಗೆ ನೀಡಿದ ಪ್ರತಿಸ್ಪಂದನೆಯ ಬರಹ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಅಭಿಮುಖದಲ್ಲಿದೆ. ವಿಮರ್ಶಕನಾಗಿ ನೋಡುವುದಕ್ಕಿಂತ ಇನ್ನೊಂದು ಬಗೆಯ ಭಿನ್ನ ಆಯಾಮದ ಒಳನೋಟಗಳನ್ನು ಇಲ್ಲಿ ಕಾಣಬಹುದು. ಕವಿಯ ಭಾವ ಮತ್ತು ವಿಮರ್ಶಕನ ವಸ್ತುನಿಷ್ಠತೆಗಳು ಇಲ್ಲಿ ಹದವಾಗಿ ಬೆರೆತಿವೆ. ಸಾಮಾನ್ಯ ಓದುಗನಿಗೂ ಇದು ಆಪ್ಯಾಯಮಾನ ಅನಿಸುತ್ತದೆ ಮತ್ತು ಹೆಚ್ಚಿನ ಓದಿಗೆ ಮಾರ್ಗದರ್ಶಿಯಾಗಬಲ್ಲ್ಲುದು.






ಈ ಕೃತಿಯಲ್ಲಿ ಲೇಖಕರು ತಮ್ಮ ಸಾಹಿತ್ಯ ಬದುಕಿನ ಕೆಲವು ವಿಶಿಷ್ಟ ಮಗ್ಗುಲುಗಳನ್ನು ಅನಿಮಿತ್ತವಾಗಿ  ನಮೂದಿಸಿದ್ದಾರೆ. ಅವರ ಪ್ರತಿಯೊಂದು ವ್ಯಕ್ತಿ ಸಂಬಂಧದಲ್ಲಿ ಆಪ್ತತೆ, ಆರ್ದ್ರ ಭಾವ, ಅಂತಃಕರಣ ಮುಖ್ಯ ಸೆಲೆಯಾಗಿದೆ. ಪಟ್ಟಣಶೆಟ್ಟಿಯವರ ಆತ್ಮಕಥನಾತ್ಮಕ ಮಾದರಿಯ ಬರಹಗಳ ಸಂಗ್ರಹ ಇದು.
ಅನಿಮಿತ್ತ:

ಈಗಾಗಲೇ ತಮ್ಮ ಹಿಂದೀ ಅನುವಾದ ಕೃತಿಗಳಿಂದ ಹೆಸರಾಗಿರುವ ಪಟ್ಟಣಶೆಟ್ಟರ ಮತ್ತೊಂದು ಅನುವಾದಿತ ಕಾವ್ಯ ಸಂಕಲನ ಎಷ್ಟೊಂದು ದೋಣಿಗಳಲ್ಲಿ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗುತ್ತಿದೆ. ಈ ಕೃತಿಯಲ್ಲಿ ಹಿಂದಿಯ ಪ್ರಸಿದ್ಧ ಕವಿಗಳಾದ ಅಜ್ಞೇಯಹರಿವಂಶರಾಯ್ ಬಚ್ಚನ್ದಿನಕರ್ಧರ್ಮವೀರ್ ಭಾರತೀನೀರಜ್ ಮುಂತಾದವರ ಕವಿತೆಗಳಿವೆ. ಪಟ್ಟಣಶೆಟ್ಟಿಯವರು ಕನ್ನಡದ ಓರ್ವ ಸಂವೇದನಾಶೀಲ ಕವಿಯಾಗಿರುವ ಕಾರಣ ಇಲ್ಲಿನ ಕವಿತೆಗಳು ಅನುವಾದ ಅನಿಸದೆಕನ್ನಡದ್ದೇ ಕವಿತೆಗಳು ಅನ್ನಿಸುವಷ್ಟು ನೈಜವಾಗಿವೆ.




ಎಷ್ಟೊಂದು ದೋಣಿಗಳಲ್ಲಿ:


ಈಗಾಗಲೇ ತಮ್ಮ ಹಿಂದೀ ಅನುವಾದ ಕೃತಿಗಳಿಂದ ಹೆಸರಾಗಿರುವ ಪಟ್ಟಣಶೆಟ್ಟರ ಮತ್ತೊಂದು ಅನುವಾದಿತ ಕಾವ್ಯ ಸಂಕಲನ ಎಷ್ಟೊಂದು ದೋಣಿಗಳಲ್ಲಿ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗುತ್ತಿದೆ. ಈ ಕೃತಿಯಲ್ಲಿ ಹಿಂದಿಯ ಪ್ರಸಿದ್ಧ ಕವಿಗಳಾದ ಅಜ್ಞೇಯ, ಹರಿವಂಶರಾಯ್ ಬಚ್ಚನ್, ದಿನಕರ್, ಧರ್ಮವೀರ್ ಭಾರತೀ, ನೀರಜ್ ಮುಂತಾದವರ ಕವಿತೆಗಳಿವೆ. ಪಟ್ಟಣಶೆಟ್ಟಿಯವರು ಕನ್ನಡದ ಓರ್ವ ಸಂವೇದನಾಶೀಲ ಕವಿಯಾಗಿರುವ ಕಾರಣ ಇಲ್ಲಿನ ಕವಿತೆಗಳು ಅನುವಾದ ಅನಿಸದೆ, ಕನ್ನಡದ್ದೇ ಕವಿತೆಗಳು ಅನ್ನಿಸುವಷ್ಟು ನೈಜವಾಗಿವೆ.



ಕುಲಾಯಿ ಇರಲಿ ನನ್ನಲ್ಲಿಯೇ:

ಈ ಕಾವ್ಯ ಸಂಕಲನ ಆತ್ಮಚರಿತ್ರೆಯನ್ನೇ ಕಾವ್ಯವಾಗಿಸಲು ಹವಣಿಸುತ್ತದೆ. ಮಾನಸಿಕ ತಲ್ಲಣಗಳು, ಸಂತೋಷದ ಕ್ಷಣಗಳು, ವಯಸ್ಸಿನೊಂದಿಗೆ ಮಾಗುತ್ತ ನಡೆದಿರುವ ಮನಸ್ಸು ಮತ್ತು ಬಾಲ್ಯದ ಕಣ್ಣುಗಳಿಂದಲೇ ನೋಡುವ ಕ್ರಮ ಇವೆಲ್ಲವುಗಳ ಹದವಾದ ಸಮ್ಮಿಲನ ಈ ಕಾವ್ಯದ ಪ್ರಮುಖ ಗುಣವಾಗಿ ಎದ್ದು ಕಾಣುತ್ತದೆ. ಇಳಿವಯಸ್ಸಿನಲ್ಲಿ ರಸಿಕ ಕವಿಯೊಬ್ಬ ಆಧುನಿಕತೆಗೆ ತನ್ನನ್ನೇ ತೆರೆದುಕೊಳ್ಳುತ್ತ ಹೋಗುವ ವಿಶಿಷ್ಟ ಕಾವ್ಯಾಧಾರಿತ ದಾಖಲೆಯೊಂದು ಇಲ್ಲಿದೆ. 
ಎಪ್ಪತ್ತೆಂಟರ ಇಳಿವಯಸ್ಸಿನಲ್ಲೂ ಇಪ್ಪತ್ತೆಂಟರ ಉತ್ಸಾಹವಿರುವ ಅವರು ಸಂಧಿವಾತದಿಂದ ಬೆರಳುಗಳ ತೊಂದರೆ ಇದ್ದರೂ .  ಕಂಪ್ಯೂಟರ್‌ ಬಳಸುತಿದ್ದಾರೆ.. ತಮ್ಮ ನೆನಪುಗಳ ಗಣಿಯಲ್ಲಿನ ತಮ್ಮ,,  ಗೆಳೆಯರ , ಮತ್ತು ಗುರುಗಳ ಬರಹಗಳನ್ನು ಬೆಳಕಿಗೆ ತರುವ ಹಂಬಲ.ಅವರಿಗಿದೆ.






   

Friday, February 7, 2014

ಹಸ್ತ ಪ್ರತಿ ಕಾರ್ಯಾಗಾರ

             ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು   "  ಹಸ್ತ ಪ್ರತಿ ಅಭಿಯಾನದ" ಅಡಿಯಲ್ಲಿ            

ಸ್ನಾತಕೋತ್ತರ  ವಿದ್ಯಾರ್ಥಿಗಳಿಗೆ   ಆರುದಿನದ ಕಾರ್ಯಾಗಾರವನ್ನು  ನಡೆಸಲಾಗುವುದು. ಯುವಜನತೆಯಲ್ಲಿ    ಹಸ್ತಪ್ರತಿಗಳನ್ನು        ಕುರಿತು      ಜಾಗೃತಿ ಮೂಡಿಸುವಸಂರಕ್ಷಣೆ ಮತ್ತು ಅಧ್ಯಯನದಲ್ಲಿ ತೊಡಗಿಸುವ ಉದ್ಧೇಶ ಹೊಂದಲಾಗಿದೆ





ಈ ರಿತಿಯ ತಾತ್ವಿಕ ಬೋಧನೆಗೆ ಆದ್ಯತೆ ಇಲ್ಲದೆ ಆದರೆ ಅದಕ್ಕೆ ಪೂರಕವಾಗಿ  ಪೂರ್ಣ ಕೈಮುಟ್ಟಿ ಕೆಲಸ ಮಾಡುವ ಪ್ರಥಮ ಕಾರ್ಯಾಗಾರ ಇದಾಗಿದೆ.
ಸಂಶೋಧನೆಯ ಆಸಕ್ತಿ ಹೊಂದಿರುವ ಎಲ್ಲರಿಗೂ ಮೂಲ ಆಕರವನ್ನೇ ಅಭ್ಯಸಿಸುವ  ಅವಕಾಶವನ್ನು ಈ ತರಬೇತಿ ತೆರೆಯುತ್ತದೆ.

Wednesday, February 5, 2014

ಶ್ರೀ ಪ್ರಶಸ್ತಿ

                                    ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೊಂದು ಪ್ರತಿಷ್ಠಿತ  ಪ್ರಶಸ್ತಿ.

ಬಿ. ಎಂ. ಶ್ರೀಕಂಠಯ್ಯ
ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸಾಧನೆಯನ್ನು ಗುರುತಿಸಲು ಕನ್ನಡದ ಕಣ್ವ, ನವೋದಯದ ಹರಿಕಾರ ಬಿ. ಎಂ. ಶ್ರೀ ಅವರ ಹೆಸರಿನಲ್ಲಿ  “ ಶ್ರೀ ಪ್ರಶಸ್ತಿಯನ್ನು” ಇದೇ ವರ್ಷದಿಂದ ಬಿ. ಎಂ. ಶ್ರೀ. ಪ್ರತಿಷ್ಠಾನವು ಪ್ರದಾನ ಮಾಡುವುದು. ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣ ಫಲಕವನ್ನು ಕೊಡಲಾಗುವುದು . ಇದನ್ನು ನೀಡಲು ಬಿ. ಎಂ ಶ್ರೀ ಅವರ ಮೊಮ್ಮಗಳು ಶ್ರೀಮತಿ ಕಮಲಿನಿಬಾಲೂರಾವ್‌ಅವರು ೧೫ ಲಕ್ಷ  ರೂಪಾಯಿ ದತ್ತಿನಿಧಿ ಸ್ಥಾಪಿಸಿರುವರು. ಈ ಪ್ರ ಶಸ್ತಿಯ ವೈಶಿಷ್ಠ್ಯವೆಂದರೆ ಸಾಹಿತ್ಯ ಲೋಕದಲ್ಲಿ ಗಣನೀಯ ಸಾಧನೆ ಮಾಡಿದ ಆದರೆ ಈ ವರೆಗೂ ಯಾವುದೇ ಹೆಸರಾಂತ ಪ್ರಶಸ್ತಿಗಳಾದ ಜ್ಞಾನಪೀಠ, ಪಂಪ ಮೊದಲಾದವುಗಳು ದೊರಕದ ಪ್ರತಿಭಾವಂತರನ್ನು ಗುರುತಿಸುವುದಾಗಿದೆ.ಈ ಪ್ರಶಸ್ತಿಗೆ ಯಾವುದೇ ಅರ್ಜಿ ಹಾಕಬೇಕಿಲ್ಲ. ಕರ್ನಾಟಕದ ಐದುವಿಭಾಗಗಳನ್ನು ಪ್ರತಿನಿಧಿಸುವ ಖ್ಯಾತ ಸಾಹಿತಿಗಳ ಸಮಿತಿಯು ಪುರಸ್ಕಾರಕ್ಕೆ ಅರ್ಹರಾದರವನ್ನು ಗುರುತಿಸಿ ಆಯ್ಕೆ ಮಾಡುವುದು. ಆಯ್ಕೆ ಸಮಿತಿಗೆ ಸಮಿತಿಗೆ ಪೂರ್ಣ ಸ್ವಾತಂತ್ರವಿದ್ದು     ಅದು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದು.

                                              ಪ್ರಥಮ ಶ್ರೀ ಪ್ರಶಸ್ತಿ ವಿಜೇತರು

ಎಸ್‌.ಎನ್‌.ಲಕ್ಷ್ಮಿನಾರಾಯಣ ಭಟ್ಟ
ಎನ್‌.ಎಸ್‌.ಲಕ್ಷ್ಮಿನಾರಾಯಣ ಭಟ್ಟ ಅವರು ಹೊಸ ತಲೆ ಮಾರಿನ  ಒಬ್ಬ ವಿಶಿಷ್ಟ ಕವಿ. ಅವರು  ಶಿವಮೊಗ್ಗ ಜನಿಸಿದರು. 
ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು ಅವರಿಗೆ ಕನ್ನಡ, ಇಂಗ್ಲಿಷ್‌ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪ್ರಭುತ್ವವಿದೆ.ಕನ್ನಡ ಸಾಹಿತ್ಯದಲ್ಲಿ ಲಯ ಬದ್ದ ಕವನಗಳಿಂದ ಮನೆ ಮಾತಾಗಿರುವರು.ಅವರು ಷೇಕ್ಸಪಿಯರನ ಸಾನೆಟ್‌ಗಳನ್ನು ಮತ್ತು ಏಟ್ಸನನ ಕವನಗಳನ್ನು ಕನ್ನಡ ಓದುಗರಿಗೆ ತಮ್ಮ ಅನುವಾದಗಳ ಮೂಲಕ ಪರಿಚಯಿಸಿರುವರು. ಅವರ “ಹೊರಳು ಹಾದಿಯಲ್ಲಿ  “ಕೃತಿಗೆ ಸಾಹಿತ್ಯ ಅಕಾದಮಿ ಬಹುಮಾನ ಬಂದಿದೆ.ಅವರಿಗೆ ಮಾಸ್ತಿ ಪ್ರಶಸ್ತಿಯೂ ಸಂದಿದೆ.ಸಂತಶಿಶುನಾಳ ಷರೀಫ್‌ಅವರ ಗೀತೆಗಳನ್ನು ಕನ್ನಡ ನಾಡಿನ ಮೂಲೆ ಮೂಲೆಗೂ ಮುಟ್ಟಿಸಿದ ಕೀರ್ತಿ ಅವರದು.ಭಾವ ಗೀತೆಗಳನ್ನು ನಾಡಿನಾದ್ಯಂತ ಗುಣಗುಣಿಸುವಂತೆ ಮಾಡಿದವರಲ್ಲಿ ಅವರ ಪಾತ್ರ ಹಿರಿದು
 2013-14ನೆಯ ಸಾಲಿನ ಶ್ರೀಪ್ರಶಸ್ತಿ “ಅವರ ಮುಡಿಗೇರಿದೆ.. ಪ್ರಥಮ ಪ್ರಶಸ್ತಿ ವಿಜೇಜೇತರೆಂಬ ಹಿರಿಮೆ ಅವರದಾಗಿದೆ

Tuesday, February 4, 2014

ತೀರ್ಥಹಳ್ಳಿತಾಲೂಕಿನ ಮೂರುಶಾಸನಗಳು

ತೀರ್ಥಹಳ್ಳಿ ತಾಲ್ಲೂಕಿನ ಮೂರು ಸ್ಮಾರಕ ಶಾಸನಗಳು
ಜಿ.ಕೆ. ದೇವರಾಜಸ್ವಾಮಿ
ತೀರ್ಥಹಳ್ಳಿ ತಾಲ್ಲೂಕಿನಿಂದ ಸುಮಾರು ೧೫ ಕಿ.ಮೀ. ದೂರದಲ್ಲಿ ಹೆದ್ದೂರು ಗ್ರಾಮವಿದೆ. ಈ ಗ್ರಾಮದ ಬೆಂಡೆಕೊಪ್ಪ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿರುವ ಶಾಸನ.
ಶಾಸನವು ೪ ಅಡಿ ೬ ಇಂಚು ಎತ್ತರ, ೩ ಅಡಿ ಅಗಲವಾಗಿದೆ. ಬಳಪದಕಲ್ಲಿನಲ್ಲಿ ಕೆತ್ತಲಾಗಿದೆ. ಕೆಳಗಿನ ಪಟ್ಟಿಕೆಯಲ್ಲಿ ನಾಲ್ಕು ಜನ ಯೋಧರಿದ್ದಾರೆ. ಮಧ್ಯದಲ್ಲಿ ಇಬ್ಬರು ಗುರಾಣಿ ಮತ್ತು ಭರ್ಜಿಯನ್ನು ಹಿಡಿದು ಹೋರಾಡುತ್ತಿರುವ ದೃಶ್ಯವಿದೆ. ಇವರ ಎಡಕ್ಕೆ ಒಬ್ಬ ಖಡ್ಗ ಗುರಾಣಿ ಹಿಡಿದವನಿದ್ದಾನೆ. ಎರಡೂ ಬದಿಯಲ್ಲಿ ಬಿಲ್ಲು ಮತ್ತು ಖಡ್ಗವನ್ನು ಹಿಡಿದ ಯೋಧರ ಚಿತ್ರವನ್ನು ಚಿತ್ರಿಸಲಾಗಿದೆ.
ಎರಡನೇ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಕುದುರೆ ಮೇಲೆ ಖಡ್ಗಧಾರಿಯಾದವನನ್ನು ಕೆತ್ತಲಾಗಿದೆ. ಅವನಿಗೆ ಹಿಂಭಾಗದಿಂದ ಛತ್ರಿಯನ್ನು ಒಬ್ಬ ಹಿಡಿದಿದ್ದಾನೆ. ಛತ್ರಿ ಹಿಡಿದವನ ಹಿಂಭಾಗದಲ್ಲಿ ಒಬ್ಬ ಗಿಂಡಿಯನ್ನು ಹಿಡಿದಿರುವಂತಿದೆ. ಕುದುರೆಯ ಮುಂಭಾಗದಲ್ಲಿ ಒಬ್ಬ ಕುದುರೆಯ ಹಗ್ಗವನ್ನು ಹಿಡಿದಿರುವಂತಿದೆ. ಮತ್ತೊಬ್ಬ ಯೋಧ ಕಹಳೆಯನ್ನು ಊದುತ್ತಿದ್ದಾನೆ. ಒಟ್ಟಾರೆ ಯುದ್ಧಕ್ಕೆ ಹೋಗುವ ಚಿತ್ರಣ ಕಂಡುಬರುತ್ತಿದೆ. ಮೂರನೇ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಶಿವಲಿಂಗವಿದ್ದು, ಎಡ-ಬಲಕ್ಕೆ ಸ್ತ್ರೀಯರ ಚಿತ್ರವಿದೆ. ಈ ಸ್ತ್ರೀಯರ ಪಕ್ಕದಲ್ಲಿ ಕೈ ಮುಗಿದು ಕುಳಿತಿರುವ  ವೀರರ ಚಿತ್ರವಿದೆ. ಕೈ ಮುಗಿದು ಕುಳಿತ ವೀರರ ಬಲಕ್ಕೆ ಖಡ್ಗದ ಚಿತ್ರಣವಿದೆ. ಎಡಭಾಗದಲ್ಲಿರುವ ಸ್ತ್ರೀ ಕೈ ಮುಗಿದು ಕುಳಿತ ವೀರನಿಗೆ ಸಂತೈಸುವ ರೀತಿಯಲ್ಲಿ ಹಾಗೂ ಬಲಭಾಗದಲ್ಲಿರುವ ಸ್ತ್ರೀ ಕೈಯಲ್ಲಿ ಏನೋ ಹಿಡಿದಿರುವಂತೆ ಅನಿಸುತ್ತದೆ. ಮೇಲ್ಭಾಗದಲ್ಲಿ ಜಟಾಧಾರಿ ಅರ್ಚಕ/ಮುನಿ ಶಿವನಿಗೆ ಘಂಟೆ ಬಾರಿಸುತ್ತಾ ಆರತಿ ಬೆಳಗುತ್ತಿದ್ದಾನೆ. ಮುನಿಯ ಎಡ ಪಕ್ಕದಲ್ಲಿ ಮೇಲ್ಭಾಗದಲ್ಲಿ ಚಂದ್ರ ಕೆಳಭಾಗವನ್ನು ಹಸು-ಕರುವನ್ನು ಕೆತ್ತಲಾಗಿದೆ. ಬಲಭಾಗದ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಶಿವದೇವಾಲಯದಲ್ಲಿರುವ ಬಸವನಂತೆ ಬಸವನನ್ನು ಕೆತ್ತಲಾಗಿದೆ. ಶಾಸನದ ಸುತ್ತಲೂ ಪಟ್ಟಿಕೆಯನ್ನು ರಚಿಸಿದ್ದಲ್ಲದೆ ಅಲಂಕಾರಿಕ ಹೂ-ಬಳ್ಳಿಯಿಂದ ಕೆತ್ತಿದೆ. ಮೇಲ್ಭಾಗದ ಕೊನೆಯಲ್ಲಿ ಸಿಂಹ ಮುಖವನ್ನು ಕೆತ್ತಲಾಗಿದೆ. ಮೂರು ಅಡ್ಡ ಪಟ್ಟಿಕೆಗಳಲ್ಲಿ ಹಾಗೂ ಕೆಳಭಾಗವು  ಕೆತ್ತಲಾಗಿದೆ. ಲಿಪಿ ಅಲಂಕಾರವಾಗಿದ್ದರೂ ಭಾಷಾ ಸ್ಪಷ್ಟತೆ ಇಲ್ಲ. ಇದರ ಕಾಲ ಕ್ರಿ.ಶ. ೭-೧೦-೧೨೫೪ (ಶಾ.ಶ. ೧೧೭೬).
ಶಾಸನ ಪಾಠ
೧        ಆನಂದ ಸಂವಚಾರದ ಆಶಿಜ ಬ ೧೦ ಲು ಗುರ[ವಾ]
೨        ರ ಬೊ[ಂ]ಮ್ನೆರು ನಾಯಕನ ಮರ(ಗ) ಲಿಂಗಣನು ಮಾಳೂರ ಆರು
೩        ಕಿಲಾರ ಸೀಮೆಯ ಸುರುಳಿಯ ಕೋಟೆಯ ಹೋರು
೪        ತಾ[ಂ]ನಲಿ ಹುಲುರಾಶಿಯ
೫        ತಂಮಗೌಉ[ಡ]
೬        ನ್ಮಮಗ . . ಹೋರೆಹಾಯದಾಡಿ[ಪಾಯ್ದಳ]? ಸಹಿತಂ ಏರಿ
೭        ದಂ . ಹಾವರು . . . . ಬಯಉ
೮        ಸಾಲು ಸ್ಪಷ್ಟವಾಗಿಲ್ಲ
ಶಾಸನದಲ್ಲಿ ಪ್ರಮುಖ ವ್ಯಕ್ತಿಯಾದ ಲಿಂಗಣ ಹಾಗೂ ಇನ್ನೊಬ್ಬ ವ್ಯಕ್ತಿ ಮರಣ ಹೊಂದಿರುವುದನ್ನು ದಾಖಲಿಸಿದೆ. ಚಿತ್ರದ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ಸತ್ತ ವ್ಯಕ್ತಿಗಳಲ್ಲಿ ಒಬ್ಬ ಪ್ರಮುಖನಾದ ಮಾಂಡಲೀಕನ ಅಥವಾ ಗಾವುಂಡನೋ ಆಗಿರಬೇಕು. ಹೆಚ್ಚಿನ ಮಾಹಿತಿಯು ತಿಳಿಯುತ್ತಿಲ್ಲ.

೨. ಬೆಂಡೆಕೊಪ್ಪ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿರುವ ಎರಡನೆಯ ಶಾಸನ
ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಇದು ೪ ಅಡಿ ಎತ್ತರ, ೩ ಅಡಿ ಅಗಲ ಅಳತೆ ಉಳ್ಳದ್ದಾಗಿದೆ. ಶಾಸನವನ್ನು ಬಳಪದಕಲ್ಲಿನ ಮೇಲೆ ಕೆತ್ತಲಾಗಿದೆ. ಶಾಸನದ ಕೆಳಗಿನ ಪಟ್ಟಿಕೆಯ ಬಲಭಾಗದಲ್ಲಿ ಒಬ್ಬ ವೀರ ಕುದುರೆ ಮೇಲೆ ಕುಳಿತು ಈಟಿಯನ್ನು ಹಿಡಿದು ತಿವಿಯಲು ಸಿದ್ಧನಾದಂತಿದೆ. ಕುದುರೆಯು ಎರಡು ಕಾಲುಗಳನ್ನು ಎತ್ತಿ ಜಿಗಿಯುತ್ತಿರುವಂತೆ ಕೆತ್ತಲಾಗಿದೆ. ಎದುರಾಳಿ ವೀರನು ಕುದುರೆಯ ತಲೆ ಹಿಡಿದು ಭರ್ಜಿಯಿಂದ ಕುತ್ತಿಗೆಯನ್ನು ತಿವಿಯುತ್ತಿರುವಂತಿದೆ. ಅವನ ಕಾಲಿನ ಕೆಳಗೆ ಒಂದು ಕುದುರೆ ಬಿದ್ದಂತೆ ಚಿತ್ರಿಸಲಾಗಿದೆ. ಅವನ ಹಿಂಭಾಗದಲ್ಲಿರುವ ಒಬ್ಬ ವೀರನು ಬಿಲ್ಲನ್ನು ಎಳೆದುಬಿಡುವಂತೆ  ಚಿತ್ರಿಸಿದೆ. ಶಾಸನದ ಎರಡನೆಯ ಪಟ್ಟಿಕೆಯ ಬಲಭಾಗದಲ್ಲಿ ಇಬ್ಬರು ಕುದುರೆ ಮೇಲೆ ಕುಳಿತು ಯುದ್ಧ ಮಾಡುತ್ತಿದ್ದಾರೆ. ಕೆಳಗಿನ ಪಟ್ಟಿಕೆಯ ದೃಶ್ಯ ಮುಂದುವರೆದಂತಿದೆ. ಎದುರಾಳಿಯು ಕುದುರೆಯನ್ನು ಭರ್ಜಿಯಿಂದ ತಿವಿದು ಎಡಕೈಯಲ್ಲಿ ಹಿಡಿದಿದ್ದಾನೆ. ಬಲಕೈ ಏನೋ ಹಿಡಿದಿರುವಂತಿದೆ. ಕುದುರೆಯ ಮೇಲೆ ಕುಳಿತ ಎರಡನೆಯವನು ಈಟಿಯನ್ನು ಹಿಡಿದು ಮುನ್ನುಗ್ಗುತ್ತಿರುವಂತಿದೆ. ಮುಂದಿನ ಕುದುರೆ ಸವಾರನ ಸಹಾಯಕ್ಕೆ ಬರುತ್ತಿರುವಂತೆ ಚಿತ್ರಿಸಿದೆ. ಮೂರನೇ ಪಟ್ಟಿಕೆಯಲ್ಲಿ ಕೆಳಗೆ ನಿಂತು ಹೋರಾಡುತ್ತಿರುವ ಎದುರಾಳಿ ವೀರ ಮಡಿದಿರಬೇಕು. ಅವನನ್ನು ನಾಲ್ಕು ಜನ ಅಪ್ಸರೆಯರು ಹೆಗಲ ಮೇಲೆ ಕೈ ಹಾಕಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಚಿತ್ರಿಸಿದೆ. ಮೇಲ್ಭಾಗದಲ್ಲಿ ದೇವಾಲಯವನ್ನು ಹೋಲುವಂತೆ ಸಾಂಕೇತಿಕವಾಗಿ ಮಂಟಪದ ರೀತಿಯಲ್ಲಿ ಕೆತ್ತಲಾಗಿದೆ. ಮಂಟಪದ ಮಧ್ಯದಲ್ಲಿ ಶಿವಲಿಂಗದ ಎಡಕ್ಕೆ ವೀರ ಕೈ ಮುಗಿದು ಕುಳಿತಿದ್ದಾನೆ. ಬಲಕ್ಕೆ ಜಟಾಧಾರಿ ಮುನಿಯು ಶಿವಲಿಂಗವನ್ನು ಪೂಜಿಸುತ್ತಿದ್ದಾನೆ. ಮಂಟಪದ ಹೊರಭಾಗ ಎಡಕ್ಕೆ ಸೂರ್ಯ ಹಾಗೂ ಹಸು-ಕರುವನ್ನು ಚಿತ್ರಿಸಲಾಗಿದೆ. ಬಲಭಾಗದಲ್ಲಿ ಚಂದ್ರ ಮತ್ತು ಜಟಾಧಾರಿ ವ್ಯಕ್ತಿ ಏನನ್ನೋ ಕೈ ಹಿಡಿದು ತರುತ್ತಿರುವ ದೃಶ್ಯವಿದೆ. ಈ ಮೇಲಿನ ಪಟ್ಟಿಕೆ ಭಾಗದಲ್ಲಿ ಮಾತ್ರ ಕಮಾನಿನಿಂದ ಕೂಡಿ ಅಲಂಕಾರ ಕೆತ್ತನೆಗಳಿಂದ ಕೂಡಿದೆ. ಮೂರು ಅಡ್ಡಪಟ್ಟಿಕೆಯಲ್ಲಿ ಹಾಗೂ ಕೆಳಭಾಗದಲ್ಲಿ ಶಾಸನವನ್ನು ಕೆತ್ತಲಾಗಿದೆ.
ಶಾಸನ ಪಾಠ
೧        ಶ್ರೀ ಸ್ವಸ್ತಿ ಶಮಸ್ತ ಪ್ರಸಸ್ತಿ ಸಹಿತಂ ಭಡ್ತಕೋರ
೨        . . . ಸಿ . . ಸಃ . . . . ಗಮ ಮಾದ . . . . ಉರವಿ
೩        ಣ್ದದ . . ಒಲ್ಲೆಸಿರಣದ . . . ಪಂ ಲೋಸ ಹುತ್ಯೆಯ
೪        ಸ . ತ . . . . . . . . . . . . .
೫        ದ . ಕಂರ ತುಲೆಯವ.ಕ..ಗ.ಸ.ರದಕ್ತಯ ಕುಸಂಸಿವಸ್ತ್ರಂ
೬        ಯಕನಮಾ ಹ ಳಿ ನ[ಸ್ತು]?ಶಸ್ತ ಸಮಸ್ತ ಮಹಾಮಣ್ಡ ಳೇಶ್ವರಂ . . ಪ್ರತ್ಪಾ[ವ] ಹಿರಣ್ಯಾವ
೭        ಸ್ತ್ರದಾನ . . ರಸಿರಸಿಂ . ಸನವ . . . . . . . . . . .
೮        ರಿರವಿವಾದಲನಾಡರವ . . ಬಿಮ . . . ರಿಸಿ ರೆರುಡೂಲೆಃ ವಿಧಃವಿದು
೯        ಸತ್ತತೈಲ್ಪಗೌಡ[ನ] ಧನಕನಕ [ದಿಂದೆ] ಸಪುಣ್ಯ ಮುಮಿದೆ ಇಳಂಬಿ. ಯರೆಸಿಕುಮ
೧೦     ರಾನ(ಸೂ)ಪುಂಡಯರಸಮ . . . . . [ಮೊರಡಿ]. ಲಾಕಣಭಂದದುಯಿಡರ‍್ಯಗರೊಲೊಮಾ
೧೧     ದಾನಂ . . . . . . . . . . . . . . . .
೧೨     (ಶಾಸನದ ಕೆಳಭಾಗ ಭೂಮಿಯಲ್ಲಿ ಹೂತುಹೋಗಿದ್ದು, ಮುಂದಿನ ಸಾಲಿನ ಲಿಪಿಯು ಸ್ಪಷ್ಟವಾಗಿಲ್ಲ.)
ಪ್ರಸ್ತುತ ಶಾಸನವು ತ್ರುಟಿತವಾಗಿದ್ದು, ಪಾಠ ನಿರ್ಧರಿಸಲು ಕಷ್ಟಸಾಧ್ಯ. ಶಾಸನದ ಲಿಪಿ, ಭಾಷಾ ದೃಷ್ಟಿಯಿಂದ ಇದನ್ನು ಕ್ರಿ.ಶ. ೧೨-೧೩ನೇ ಶತಮಾನದ್ದೆನ್ನಬಹುದು. ಮಹಾ ಮಂಡಳೇಶ್ವರ ತೈಲಪಗೌಡ ಇತ್ಯಾದಿ ಸ್ಪಷ್ಟತೆಯಿಂದ ಪ್ರಾದೇಶಿಕವಾಗಿ ಸಾಂತರರ ಕಾಲದ್ದೆಂದು ಊಹಿಸಬಹುದಾಗಿದೆ.
೩. ಮುನ್ನೂರಿನ ತುರುಗೋಳ್ ಪೆಣ್ಬುಯ್ಯಲ್ ವೀರಗಲ್ಲು
ತೀರ್ಥಹಳ್ಳಿ ತಾಲ್ಲೂಕಿನಿಂದ ೫ ಕಿ.ಮೀ. ದೂರದಲ್ಲಿ ಮುನ್ನೂರು ಗ್ರಾಮವಿದೆ. ಗ್ರಾಮದ ಶ್ರೀ ಮೋಹನ್‌ರವರ ಮನೆಯ ಆವರಣದಲ್ಲಿ ಈ ಶಾಸನವಿದೆ. ಈ ವೀರಗಲ್ಲು ಶಾಸನವು ೫ ಅಡಿ ೨ ಇಂಚು ಎತ್ತರ ಹಾಗೂ ೩ ಅಡಿ ಅಗಲವಿದೆ. ಕಣಶಿಲೆಯಲ್ಲಿ ಶಿಲ್ಪದೊಂದಿಗೆ ಶಾಸನವನ್ನು ಕಂಡರಿಸಲಾಗಿದೆ. ಶಾಸನವು ೪ ಹಂತಗಳ ಚಿತ್ರ ಪಟ್ಟಿಕೆ ಯನ್ನು ಒಳಗೊಂಡಿದೆ. ಶಾಸನದ ಕೆಳಭಾಗದ ಪಟ್ಟಿಕೆಯಲ್ಲಿ ನಾಲ್ಕು ಜನರನ್ನು ಕೆತ್ತಲಾಗಿದೆ. ಈ ಉಬ್ಬುಶಿಲ್ಪದಲ್ಲಿ ಒಬ್ಬನನ್ನು ಹಸುವು ತುಳಿದು ನಿಂತಿದೆ. ಹಸುವಿನಿಂದ ತುಳಿಯಲ್ಪಟ್ಟವನನ್ನು ಒಬ್ಬನು ತಿವಿಯುತ್ತಿರುವಂತಿದೆ. ಉಳಿದ ಇಬ್ಬರು ಸ್ತ್ರೀಯರು ಕೈ ಕೈ ಹಿಡಿದಿದ್ದಾರೆ. ಕೈ ಹಿಡಿದ ಮಧ್ಯದಲ್ಲಿ ಮರ ಅಥವಾ ತ್ರಿಶೂಲದ ರೀತಿಯಲ್ಲಿ ಕೆತ್ತಲಾಗಿದೆ. ಎರಡನೆಯ ಪಟ್ಟಿಕೆಯಲ್ಲಿ ನಾಲ್ಕು ಜನರನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಎಡಭಾಗದಲ್ಲಿರುವ ವ್ಯಕ್ತಿಯನ್ನು ಇಬ್ಬರು ಸ್ತ್ರೀಯರನ್ನು ಅಪಹರಿಸುತ್ತಿರುವ ವ್ಯಕ್ತಿಯು ಕತ್ತಿಯಿಂದ ತಿವಿಯುತ್ತಿದ್ದಾನೆ. ಅಪಹರಿಸುತ್ತಿರುವ ಸ್ತ್ರೀಯರು ಪರಸ್ಪರ ಕೈಯನ್ನು ಹಿಡಿದಿದ್ದಾರೆ. ಹಾಗೂ ಬಲಭಾಗದ ಕೊನೆಯಲ್ಲಿ ರುವ ಸ್ತ್ರೀಯು ಕೈಯಲ್ಲಿ ಆಯುಧವನ್ನು ಹಿಡಿದು ಪ್ರತಿಭಟಿಸು ತ್ತಿರುವಂತಿದೆ. ಅವಳ ಪಕ್ಕದಲ್ಲಿ ಚಿತ್ರಣವಿದ್ದು, ಸ್ಪಷ್ಟವಾಗುತ್ತಿಲ್ಲ. ಮೂರನೆಯ ಪಟ್ಟಿಕೆಯಲ್ಲಿ ಮಧ್ಯದಲ್ಲಿ ಇಬ್ಬರು ವೀರರು ಪರಸ್ಪರ ಕೈಯನ್ನು ಹಿಡಿದುಕೊಂಡಿದ್ದು ಅವರ ಪಕ್ಕದಲ್ಲಿ ಅಪ್ಸರೆಯರ ಸೂಚಕವಾಗಿ ಸ್ತ್ರೀಯರ ಚಿತ್ರ ಕೆತ್ತಲಾಗಿದೆ. ನಾಲ್ಕು ಜನರೂ ಕೈ ಹಿಡಿದು ಹೋಗುತ್ತಿರುವಂತಿದೆ. ಮೇಲ್ಭಾಗದ ಮಧ್ಯದಲ್ಲಿ ಗಜಲಕ್ಷ್ಮಿ ಚಿತ್ರಣ, ಎಡಕ್ಕೆ ಚಂದ್ರ ಹಸುವಿನ ಚಿತ್ರವಿದೆ. ಬಲಕ್ಕೆ ಸೂರ್ಯ, ಕುದುರೆ ಚಿತ್ರವನ್ನು ಕೆತ್ತಲಾಗಿದೆ. ಶಿಲ್ಪದ ಮಧ್ಯದ ಮೂರೂ ಪಟ್ಟಿಕೆ ಹಾಗೂ ಅಕ್ಕಪಕ್ಕದ ಪಟ್ಟಿಕೆಗಳಲ್ಲಿ ಶಾಸನವನ್ನು ಕೆತ್ತಲಾಗಿದೆ. ಪಟ್ಟಿಕೆ ಕೆಳಭಾಗದಲ್ಲಿಯೂ ಶಾಸನವನ್ನು ಬರೆಯಲಾಗಿದೆ.
ಶಾಸನ ಪಾಠ
ಮೇಲ್ಭಾಗದ ಪಟ್ಟಿಕೆ
೧        . . . . . ಲೆಕಪಸಲೆಬಃ
ಎರಡು  ಮತ್ತು ಮೂರನೆಯ ಪಟ್ಟಿಕೆ ಸವೆದಿದೆ
ಶಾಸನದ ಎಡಭಾಗದ ಪಟ್ಟಿಕೆ
೧ ಮೃಚುರುಲ . ಳಯ . . . . . . .
ಶಾಸನದ ಬಲಭಾಗದ ಪಟ್ಟಿಕೆ
೧ . . . ಮಲೆಂ ಪುಗೆನ ಮೃತಳನ . .
ಶಾಸನದ ಕೆಳಭಾಗದಲ್ಲಿ
೧        ಅ ಪಡೆದ ಇವೂರ ತುರುವುಂತೊಳ್ದಿ
೨        ಭಾಳಗಮ್ಮ ಮಡಿದ ಕಲ್ಲೋಡಿ(ಟಿ) ವೀರೋ
೩        ಜ ಬರೆ(ದ) ಇ ಕಲ
          ಪಟ್ಟಿಕೆಯಲ್ಲಿರುವಂತಹ ಲಿಪಿಯು ತ್ರುಟಿತವಾಗಿದ್ದು ಪಾಠ ಸ್ಪಷ್ಟವಾಗುತ್ತಿಲ್ಲ. ಕೆಳಭಾಗದ ಪಾಠ ಓದಬಹುದು. ಈವೂರ ತುರುವು ತುಳಿದು ಬಾಳಗಮ್ಮ ಎಂಬುವನು ಮಡಿದ ಹಾಗೂ ಕಲ್ಲನ್ನು ಕಲೋಟಿ ವಿರೋಜ ಬರೆದ ಎಂದಿದೆ. ಶಾಸನ ಗಮನಿಸುವಲ್ಲಿ, ಬಾಳಗಮ್ಮ ಎಂಬುವನು ಹಸುವಿನಿಂದಲೇ ತುಳಿದು ಸತ್ತ ಎಂದು ಶಾಸನವು ಉಲ್ಲೇಖಿಸುತ್ತದೆ. ಈ ಘಟನೆಯನ್ನು ಉಲ್ಲೇಖಿಸುವ ಶಾಸನವು ಇದೇ ಮೊದಲನೆಯದೆನ್ನಬಹುದು. ಕಾರಣ ತುರುಗೋಳ್/ಪೆಣ್ಬುಯ್ಯಿಲ್ ಶಾಸನಗಳಲ್ಲಿ ವಿದ್ವಾಂಸರು ಗಮನಿಸಿ ಉಲ್ಲೇಖಿಸಿದಂತೆ ಕಾಳಗದಲ್ಲಿ ಮಡಿದ ವೀರನನ್ನು ಹಸುಗಳು ತುಳಿದುಕೊಂಡು / ದಾಟಿಕೊಂಡು ಹೋದವು ಎಂದು ಕಾವ್ಯ ಶಾಸನಗಳಲ್ಲಿದೆ. ಆದರೆ ಹಸುವೇ ತುಳಿದು ಸತ್ತನೆಂಬುದು ಶಾಸನೋಕ್ತ ಉಲ್ಲೇಖವು ಮೊದಲನೆಯದಾಗಿದೆ. ಚಿತ್ರಣದಲ್ಲೂ ಶಿಲ್ಪಿಯು ಸ್ಪಷ್ಟವಾಗಿ ಬಿದ್ದ ವ್ಯಕ್ತಿಯ ಮೇಲೆ ಹಸುವು ತುಳಿದು ನಿಂತಂತೆ ಕೆತ್ತಿದ್ದಾನೆ. ಚಿತ್ರ ಗಮನಿಸಿದರೆ ಪೆಣ್ಬುಯ್ಯಲನ್ನೂ ಚಿತ್ರಿಸಿದಂತಿದೆ. ಶಾಸನದ ಅರ್ಧಭಾಗದಷ್ಟು ಪಾಠವಿಲ್ಲ ಮತ್ತು ಕಣಶಿಲೆಯಾದ್ದರಿಂದ ಸ್ತ್ರೀ/ಪುರುಷ ಉಬ್ಬು ಶಿಲ್ಪವನ್ನು ಸೂಕ್ಷ್ಮತೆಯಿಂದ ಗಮನಿಸಬೇಕಾಗಿದೆ. ಒಟ್ಟಾರೆ ಹಸುವಿನಿಂದ ತುಳಿದು ಸತ್ತದ್ದನ್ನು ಶಾಸನವು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಚಿತ್ರದ ಹಿನ್ನೆಲೆಯಲ್ಲಿ ಈ ಶಾಸನವು ತುರುಗೋಳ್ ಹಾಗೂ ಪೆಣ್ಬುಯ್ಯಲನ್ನು ದಾಖಲಿಸಿದೆ.

?# ೫೬, ‘ತ್ರಯೀ ಮೈಸೂರು ಲ್ಯಾಂಪ್ಸ್ ಲೇಔಟ್, ಚನ್ನನಾಯಕನಪಾಳ್ಯ, ೨ನೇ ಹಂತ, ನಾಗಸಂದ್ರ ಅಂಚೆ, ಬೆಂಗಳೂರು-೫೬೦೦೭೩.