ಬಹುಮುಖಿ ಸಾಧನೆಯ ಸಾಹಿತಿ ಡಾ. ಸಿದ್ದ ಲಿಂಗ ಪಟ್ಟಣಶೆಟ್ಟಿ
ಕಲಿತ
ಮತ್ತು ಕಲಿಸಿದ ಭಾಷೆಯಸಾಹಿತ್ಯದಲ್ಲಿ ತಮ್ಮ ಸ್ವಂತಿಕೆಯಛಾಪು ಮೂಡಿಸುವುದರ ಜೊತೆಗೆ ಮನೆಮಾತಾದ
ತಾಯ್ನುಡಿಯಲ್ಲೂ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳು ಹಲವರು. ಕನ್ನಡ ಮತ್ತು ಸಂಸ್ಕೃತದಲ್ಲಿ
ಪ್ರಾಚೀನ ವಿದ್ವಾಂಸರು ಹೆಸರು ಮಾಡಿದರೆ ಕನ್ನಡ
ಮತ್ತು ಇಂಗ್ಲಿಷ್‌ನಲ್ಲಿ ಹಯಲವು ಆಧುನಿಕರು ಪ್ರಖ್ಯಾತರಾಗಿರುವರು. , ಆದರೆ ರಾಷ್ಟ್ರಭಾಷೆ ಮತ್ತು
ರಾಜ್ಯ ಭಾಷೆ ಎರಡರಲ್ಲೂ ಗಣನೀಯ ಸಾಧಕರೆಂದರೆ ತಟ್ಟನೆ ನೆನಪಿಗೆ ಬರುವುದು ಡಾ. ಸಿದ್ದಲಿಂಗ ಪಟ್ಟಣಸೆಟ್ಟಿಯವರ
ಹೆಸರು.ಹಿಂದಿ ಮತ್ತು ಕನ್ನಡ ಎರಡುಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿ ರಾಷ್ಟ್ರ ಮಟ್ಟದಲ್ಲಿ ಗೌರವ
ಮತ್ತು ರಾಜ್ಯಾದ್ಯಂತ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿರುವ ವಿರಳ ವ್ಯಕ್ತಿತ್ವ ಅವರದು.ಗಂಡು
ಮೆಟ್ಟಿನ ನಾಡಾದ ಧಾರವಾಡ ಅವರ ಕರ್ಮ ಭೂಮಿಯಾದರೂ ನಾಡಿನಾದ್ಯಂತ ಗೆಳಯರು ಅಭಿಮಾನಿಗಳು ಇರುವರು.ಫೋಲಿಸು
ಅಧಿಕಾರಿಗಳಿಂದ ಹಿಡಿದು ಸಾಹಿತ್ಯ, ರಂಗಭೂಮಿ,ಸಮಾಜಸೇವೆ ಚಳುವಳಿ, ಪತ್ರಿಕಾಪ್ರಪಂಚ ಹೀಗೆ ಹಲವು ರಂಗಗಳಲ್ಲೂ ಅವರ ಸ್ನೇಹ ಛಾಯೆ
ಹರಡಿದೆ,
ಕಾವ್ಯ ಮತ್ತು ನಾಟಕಗಳಿಗೆ
ಸೂಕ್ಷ್ಮ ಸಂವೇದನೆಯ ಮನಸ್ಸು ಮುಖಾಮುಖಿಯಾದಾಗ ಸಾಹಿತ್ಯ ಕೃತಿಗಳಿಗೆ ನೀಡಿದ ಪ್ರತಿಸ್ಪಂದನೆಯ ಬರಹ
ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಅಭಿಮುಖದಲ್ಲಿದೆ. ವಿಮರ್ಶಕನಾಗಿ ನೋಡುವುದಕ್ಕಿಂತ ಇನ್ನೊಂದು ಬಗೆಯ
ಭಿನ್ನ ಆಯಾಮದ ಒಳನೋಟಗಳನ್ನು ಇಲ್ಲಿ ಕಾಣಬಹುದು. ಕವಿಯ ಭಾವ ಮತ್ತು ವಿಮರ್ಶಕನ ವಸ್ತುನಿಷ್ಠತೆಗಳು
ಇಲ್ಲಿ ಹದವಾಗಿ ಬೆರೆತಿವೆ. ಸಾಮಾನ್ಯ ಓದುಗನಿಗೂ ಇದು ಆಪ್ಯಾಯಮಾನ ಅನಿಸುತ್ತದೆ ಮತ್ತು ಹೆಚ್ಚಿನ
ಓದಿಗೆ ಮಾರ್ಗದರ್ಶಿಯಾಗಬಲ್ಲ್ಲುದು.
ಕಲಿತ
ಮತ್ತು ಕಲಿಸಿದ ಭಾಷೆಯಸಾಹಿತ್ಯದಲ್ಲಿ ತಮ್ಮ ಸ್ವಂತಿಕೆಯಛಾಪು ಮೂಡಿಸುವುದರ ಜೊತೆಗೆ ಮನೆಮಾತಾದ
ತಾಯ್ನುಡಿಯಲ್ಲೂ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳು ಹಲವರು. ಕನ್ನಡ ಮತ್ತು ಸಂಸ್ಕೃತದಲ್ಲಿ
ಪ್ರಾಚೀನ ವಿದ್ವಾಂಸರು ಹೆಸರು ಮಾಡಿದರೆ ಕನ್ನಡ
ಮತ್ತು ಇಂಗ್ಲಿಷ್‌ನಲ್ಲಿ ಹಯಲವು ಆಧುನಿಕರು ಪ್ರಖ್ಯಾತರಾಗಿರುವರು. , ಆದರೆ ರಾಷ್ಟ್ರಭಾಷೆ ಮತ್ತು
ರಾಜ್ಯ ಭಾಷೆ ಎರಡರಲ್ಲೂ ಗಣನೀಯ ಸಾಧಕರೆಂದರೆ ತಟ್ಟನೆ ನೆನಪಿಗೆ ಬರುವುದು ಡಾ. ಸಿದ್ದಲಿಂಗ ಪಟ್ಟಣಸೆಟ್ಟಿಯವರ
ಹೆಸರು.ಹಿಂದಿ ಮತ್ತು ಕನ್ನಡ ಎರಡುಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡಿ ರಾಷ್ಟ್ರ ಮಟ್ಟದಲ್ಲಿ ಗೌರವ
ಮತ್ತು ರಾಜ್ಯಾದ್ಯಂತ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿರುವ ವಿರಳ ವ್ಯಕ್ತಿತ್ವ ಅವರದು.ಗಂಡು
ಮೆಟ್ಟಿನ ನಾಡಾದ ಧಾರವಾಡ ಅವರ ಕರ್ಮ ಭೂಮಿಯಾದರೂ ನಾಡಿನಾದ್ಯಂತ ಗೆಳಯರು ಅಭಿಮಾನಿಗಳು ಇರುವರು.ಫೋಲಿಸು
ಅಧಿಕಾರಿಗಳಿಂದ ಹಿಡಿದು ಸಾಹಿತ್ಯ, ರಂಗಭೂಮಿ,ಸಮಾಜಸೇವೆ ಚಳುವಳಿ, ಪತ್ರಿಕಾಪ್ರಪಂಚ ಹೀಗೆ ಹಲವು ರಂಗಗಳಲ್ಲೂ ಅವರ ಸ್ನೇಹ ಛಾಯೆ
ಹರಡಿದೆ,
ಸಾಮಾನ್ಯವಾಗಿ ಚಿಂದಿಯುಡುಗೆಯವ
ಚೀನಾಂಬರ ಧರಿಸುವ ಹಂತ ತಲುಪಿದ ಕಥೆಗಳು ರೋಚಕ. ಪಟ್ಟಣ ಸೆಟ್ಟಿಯವರದು ಕಥೆ ಕಾದಂಬರಿಗಿಂತ
ರೋಚಕವಾದ ಜೀವನಗಾಥೆ. ಅವರು ಜನಿಸಿದುದು ಧಾರವಾಡ ಜಿಲ್ಲೆಯ ತಾಯಿಯ ತವರಾದ ಯಾದವಾಡದಲ್ಲಿ ೧೯೩೬
ರಲ್ಲಿ. ತಂದೆ ದಲಾಲಿ ಅಂಗಡಿಯ ಕಾರಕೂನ.,ಮಗುವಿಗೆ ತಂದೆಯ ನೆನಪೆಂದರೆ ಸಿದಗಿಯ ಮೇಲೆ ಹೋಗುವ ಹೆಣದ್ದು
ಮಾತ್ರ. ಕಾರಣ ಎರಡು ವರ್ಷವಾಗುವುದರಲ್ಲೇ ತಂದೆ ಬಸೆಟ್ಟೆಪ್ಪ ತೀರಿಕೊಂಡರು. ತಾಯಿ ಗಿರಿಜವ್ವ
ಹಸುಗೂಸನ್ನು ಕಟ್ಟಿಕೊಂಡು ತೌರೂರು ಸೇರಿದಳು. ಏಕಾದಸಿಯ ಮನೆಗೆ ಶಿವರಾತ್ರಿ ಬಂದಂತಾಯಿತು. ಅಲ್ಲೂ
ಕಿತ್ತು ತಿನ್ನುವ ಬಡತನ. ಕೂಲಿ ಮಾಡಿ, ಕುಳ್ಳುಹಚ್ಚಿ ಕಂದನನ್ನುಸಾಕಿದಳು.ಮಗು ಮನೆಗಿಂತ
ಬೀದಿಯಲ್ಲಿ ಬೆಳೆದಿದ್ದೇ ಹೆಚ್ಚುಅಜ್ಜನ ಚಾದಂಗಡಿಯಲ್ಲಿ ಚಾ ಮಾಡುವ , ಕಪ್ಪು ಬಸಿ ತೊಳೆಯುವ
ಕೆಲಸದಿಂದ ಹುಡುಗನ ಕಾಯಕ ಮೊದಲಾಯಿತು. ಪರಿಣಾಮ
ಬಾಲ್ಯದಲ್ಲೇ ಜನ ಬಳಕೆ. ಹಳ್ಳಿಯ ಹಲವುಹತ್ತು ವಿಷಯಗಳನ್ನು ಹತ್ತಿರದಿಂದ ಗಮನಿಸುವ ಅವಕಾಶ. ಅಜ್ಜನ ಅಂಗಡಿಯ ಉದ್ದರಿ ಲೆಕ್ಕ ಬರೆಯುವುದರಿಂದ
ಪ್ರಾರಂಭವಾಯಿತು. ಅಕ್ಷರ ಮತ್ತುಅಂಕೆಗಳ ಕಲಿಕೆ. ಹುಡುಗ ಶ್ಯಾಣ್ಯಾ ಆಗಲಿ ಎಂಬ ಅವ್ವನ ಹಂಬಲದಿಂದ
ಐದನೆಯತ್ತೆಯತನಕ ಹಳ್ಳಿಯಲ್ಲೇ ಕಲಿಕೆ. ನಂತರ ಧಾರವಾಡಕ್ಕೆ
ವಲಸೆ. ಅಲ್ಲಿ ಸರಕಾರಿ ಕನ್ನಡ ಶಾಲೆಯಲ್ಲಿ ಹೆಸರು ಹಚ್ಚಿದರು. ಅವ್ವ ಯಥಾರೀತಿ ಅವರಿವರ ಮನೆಯಲ್ಲಿ
ಬಾಂಡಿ ತಿಕ್ಕಿ, ಹೊಲದಲ್ಲಿ ಕೂಲಿಮಾಡಿ ಮಗನಿಗೆ ಸಾಲಿಕಲಿಸಲು ಹವಣಿಸಿದಳು. ಸೂಟಿಯಲ್ಲಿ ಮಗನೂ
ತಾಯಿಯ ಕೆಲಸದಲ್ಲಿ ಕೈ ಗೂಡಿಸಿದ. ಎರಡುರೂಪಾಯಿಯ ಖೋಲಿಯಲ್ಲಿ ವಾಸ. ಎಂ. ಎ ಓದುವ ಹೊತ್ತಿಗೆ ಅದರ
ಬಾಡಿಗೆ ಐದು ರೂಪಾಯಿ ಆಗಿತ್ತು.ಆರನೆಯ ಇಯತ್ತೆಗೆ ಬರುವಷ್ಟರಲ್ಲಿ ನವಲುಗಂದ ಮಾಸ್ತರು ಕಲಿಸಿದ
ಛಂದಸ್ಸಿನ ಪಾಠ ಮನಸ್ಸಿಗೆ ಹತ್ತಿತ್ತು ಅದರ ಪ್ರಯೋಗ ತಡೆಯಿಲ್ಲದೆ ಸಾಗಿತು.ಬಾಸೆಲ್‌ಮಿಷನ್‌ನಲ್ಲಿ
ಹೈಸ್ಕೂಲಿನಲ್ಲಿ. ಕಂಡದ್ದರ ಬಗ್ಗೆ ಬರೆದ ಕವನ.ಕಥೆ ಗಳನ್ನು ತಿದ್ದಿ ತೀಡಿದವರು ಹುಯಿಲುಗೋಳರು,.
ಹೀಗೆ ಎಳೆವಯಸ್ಸಿನಲ್ಲೇ ಕಾವ್ಯ ಪ್ರೀತಿ ಮೊಳಕೆಯೊಡೆಯಿತು
.. ಅಲ್ಲಿಯೇ ಎಲ್ಲ ಚಟುವಟಿಕೆಯಲ್ಲಿ ಸಕ್ರಿಯ ಆಸಕ್ತಿ.
.ಹದಿ ಹರೆಯದಲ್ಲಿ ಏಕಮುಖ ಪ್ರೇಮದ ಅನುಭವ. ಅದರಫಲ ಪುಂಖಾನುಪುಂಖ ಕವಿತೆಗಳ ರಚನೆ.ಆ
ವಿಪ್ರಲಂಭ ಶೃಂಗಾರದ ಸಂಕಲನವೇ ’ನೀನಾ’ ಅದಕ್ಕೆ ಕೆ.ಎಸ್. ನರಸಿಂಹ ಸ್ವಾಮಿಯವರು ಮುನ್ನುಡಿ.
ಏಕದಂ ಸಾಹಿತ್ಯ ಲೋಕಕ್ಕೆ ಪ್ರವೇಶ. ನಾಡಿನಾದ್ಯಂತ
ಗೆಳೆಯರು. ಎಲ್ಲ ಪತ್ರಿಕೆಗಳಲ್ಲೂ ಕಥೆ ಕವನ ಪ್ರಕಟನೆ.ನೋವುಗಳನ್ನು ಮೆರೆಯಲು ಮತ್ತು ಮರೆಯಲು
ಬರವಣಿಗೆ ಸಾಧನವಾಯಿತು .ಕರ್ನಾಟಕ ಕಾಲೇಜನಲ್ಲಿ
ಗೋಕಾಕರು ಗುರಗಳು. ಅವರೊಡಗಿನ ಬಾಂಧವ್ಯ ಮಾರ್ಗದರ್ಶನ ಅನವರತ. ಹಿಂದಿಕಲಿತ ಹಿನ್ನಲೆ
ರೋಚಕ. ಮುಲ್ಕಿಯಲ್ಲಿ ಹಿಂದಿಯಲ್ಲಿ ನಪಾಸು. .ಅದು
ಆತ್ಮಾಭಿಮಾನಕ್ಕೆ ದೊಡ್ಡ ಸವಾಲು . ಕಷ್ಟ ಪಟ್ಟು ಭಾಷೆಯಮೇಲೆ ಹಿಡಿತ ಸಾಧಿಸಿ ಅದನ್ನೆ ಪದವಿ ಮತ್ತ
ಸ್ನಾತಕೋತ್ತರ ಹಂತದಲ್ಲಿ ಕಲಿತರು. ಜೊತೆಗೆ
ಹಿಂದಿಯಲ್ಲಿಯೂ ಕಥೆ ಕವನ, ವಿಮರ್ಶೆ ಬರೆಯತೊಡಗಿದರು.ಹಿಂದಿಯ ಕವನ ಸಂಕಲನ ’೧೯೬೩ರಲ್ಲಿ
ಪ್ರಕಟವಾಗಿ ಖ್ಯಾತಿತಂದಿತು. ’ಆಧುನಿಕ ಹಿಂದಿ ಔರ್ ಕನ್ನಡ ಕಾವ್ಯ’ ಒಂದು ತುಲನಾತ್ಮಕ ಅಧ್ಯಯನ.
ಎರಡೂ ಭಾಷೆಗಳಲ್ಲು ಅದು ಒಂದು ಮೇರುಕೃತಿ.ಹಿಂದಿ ಬರಹದ ಫಲ ನಾಡಿನಾದ್ಯಂತದ ಲೇಖಕರ , ಕವಿಗಳ
ಪರಿಚಯ.ಹಿಂದಿಯಲ್ಲಿಯ ಸಾಹಿತ್ಯಸಾಧನೆ ಕಾವ್ಯಕ್ಕೆ ನಾವಿನ್ಯತೆ ತಂದಿತು ಮತ್ತು ಪ್ರಭಾವ ಹೆಚ್ಚಿಸಿತು. ಹಿಂದಿ ಸಾಹಿತ್ಯದ ಸಾಧನೆಯಲ್ಲಿ ನೆನಪಿಡುವ ಅಂಶವೆಂದರೆ
ಅವರ ಗೀತೆಯೊಂದನ್ನು ಪ್ರತಿದಿನ ಸಾವಿರಾರು ಜನ
ತಪ್ಪದೆ ಹಾಡುವುದು. ಜೀವ ವಿಮಾ ನಿಗಮದ’ “ನಿಗಮ್ ಗೀತ್’” ಇವರ ಲೇಖನಿಯಿಂದ ಮೂಡಿದೆ. ಅದನ್ನು ಹಾಡಿಯೇ
ನಾಡಿನಾದ್ಯಂತದ ಜೀವ ವಿಮಾ ನಿಗಮದ ಕಚೇರಿ ಮತ್ತು ಕಾರ್ಯಕ್ರಮ ಪ್ರಾರಂಭಿಸುವರು.
ಅವರ ಆರಂಭದ ವೃತ್ತಿ
ಜೀವನವೂ ಸುಗಮವಲ್ಲ.ಸ್ನಾತಕೋತ್ತರ ಪದವಿಯಲ್ಲಿ ಪ್ರಪ್ರಥಮ ಸ್ಥಾನ ಪಡೆದರೂ ಎರಡುವರ್ಷ ನಿರುದ್ಯೋಗ
ಪರ್ವ.ಆಗಲೂ ಅವ್ವ ತಾನು ಉಪವಾಸ ಇದ್ದರೂ ಮಗನಿಗೆ ರೊಟ್ಟಿಕೊಟ್ಟು ಸಲಹಿದಳು.ಕಾರಣ ನಿನಗೆಉತ್ತಮ
ಅಂಕಬಂದಿವೆ ಎಲ್ಲಿಯಾದರೂ ನೌಕರಿ ದೊರಕುವುದು
ಎಂದು ಸಂದರ್ಶನದಲ್ಲಿ ಸಮಜಾಯಿಒಷಿ ಹೇಳಿ ಸಾಗ ಹಾಕುತಿದ್ದರು. ಆ ಅವಧಿಯಲ್ಲಿಮಾರ್ವಾಡಿ
ಮಕ್ಕಳಿಗೆಮನೆ ಪಾಠ ಹೇಳಿಅವ್ವನಿಗೆ ನೆರವಾಗುತಿದ್ದರು ಎರಡುವರ್ಷದ ನಂತರ ಶಿರಶಿಯಲ್ಲಿ ಉಪನ್ಯಾಸಕನ
ಹುದ್ದೆ ದೊರಕಿತು. ಮಾರನೆಯ ವರ್ಷವೇ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕರಾದರು ಹಿಂದಿ
ಪ್ರಾಧ್ಯಾಪಕರಾಗಿ ೨೦೦೦ ನೆಯ ಇಸ್ವಿ ನಿವೃತ್ತರಾಗುವ ತನಕ ಅಲ್ಲಿಯೇ ಅವರ ಸೇವೆ.
ವೈಯುಕ್ತಿಕ ಬದುಕು
ವರ್ಣಮಯ. ಡಾ. ಮಾಲತಿಯವರನ್ನು ಮದುವೆಯದಾಗ ಹಾಲಿಗೆ
ಸಕ್ಕರೆ ಬೆರಸಿದಂಥಹ ಸಂಸಾರ. ಇಬ್ಬರೂ ಸಾಹಿತಿಗಳು ಸಹೃದಯರು. ಈ ದಾಂತ್ಯದ ಫಲ ಒಬ್ಬಮಗ ಮತ್ತು
ಒಬ್ಬ ಮಗಳು. .ಆದರೆ ಎಂಟುವರ್ಷದಲ್ಲೇ ಬೇರೆಯಾದರು. ನಂತರ ಮದುವೆಯಾದದ್ದು ಸಾಹಿತಿ ಹೇಮಅವರನ್ನು.
ಅವರದು ಬಹು ಮುಖ ಪ್ರತಿಭೆ. ಇಬ್ಬರು ಮಕ್ಕಳು ಹೂ ಮತ್ತು ಸಮುದ್ರ.ಈಗ ಇಬ್ಬರೂ ಸಾಹಿತ್ಯ ಮತ್ತು ಜೀವನ ಸಾಗರದಲ್ಲಿ ಸಹ ಪ್ರಯಾಣಿಕರು
ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡದ ಪ್ರಮುಖ ಕವಿ, ಕಥೆಗಾರ, ವಿಮರ್ಶಕ,
ಅಂಕಣಕಾರ, ಹಾಗೂ ಅನುವಾದಕರು.ಎಪ್ಪತ್ತರ ದಶಕದಲ್ಲಿ
ಚಂದ್ರಶೇಖರ ಪಾಟೀಲ ಮತ್ತು ಗಿರಡ್ಡಿಯವರ ಜೊತೆ
ಗೂಡಿ ಹೊರತಂದ ಮಾಸ ಪತ್ರಿಕೆ “ ಸಂಕ್ರಮಣ ಸಾಹಿತ್ಯವಲಯದಲ್ಲಿ ಹೊಸ ಗಾಳಿ ಬೀಸಿತು. ಅದನ್ನು ಹಲವುವ
ರ್ಷ ಒಬ್ಬರೇ ನಡೆಸು ಹೊಣೆ ಇವರ ಮೇಲೆ ಬಿದ್ದಿತ್ತು. ಅದು ಬಹುತೇಕ ಪ್ರಗತಿಶೀಲ ಬರಹಗಾರರನ್ನು
ಒಗ್ಗೂಡಿಸುವ ಕೆಲಸ ಮಾಡಿತು.ನಂತರ ಕಾರಣಾಂತರದಿಂದ ದೂರ ಸರಿದರು.
ಗಿರೀಶ ಕಾರ್ನಾಡ ಮತ್ತು ಮೋಹನ್ ರಾಕೇಶ್‌ರ ನಾಟಕಗಳ ತೌಲನಿಕ ಆಧ್ಯಯನ ಇವರ ಪಿಎಚ್.ಡಿ.
ಸಂಪ್ರಬಂಧ
.ಅವರು ಕನ್ನಡದ ವಿವಿಧ ಪ್ರಕಾರಗಳಲ್ಲಿ ೭೦ ಕೃತಿ ರಚಿಸಿರುವರು
ಹಿಂದಿಯಲ್ಲಿ ೧೬ ಕೃತಿಗಳು ಬಂದಿವೆ.. ಅವರು ನಿರ್ವಹಿಸಿದ ಹೊಣೆಗಳು ವಿಫುಲ
CAvÀgÀAUÀÀ £ÁlPÀ PÀÆl, ¸ÀAVÃvÀ
£ÁlPÀ CPÁqÉ«, PÀ£ÁðlPÀ £ÁlPÀ CPÁqÉ«Ä ¸ÀzÀ¸Àå PÀ£ÁðlPÀ
«zÁåªÀzsÀðPÀ ¸ÀAWÀದ, ¥ÀæzsÁ£À PÁAiÀÄðzÀ²ð: gÀAUÁAiÀÄt, gÀAUÀ¸ÀªÀiÁd, zÀQët ªÀÄzsÀåªÀ®AiÀÄ ¸ÁA¸ÀÌøwPÀ PÉÃAzÀæ, £ÁUÀ¥ÀÄgÀ, PÉÃA¢æÃAiÀÄ »A¢Ã ²PÀët ªÀÄAqÀ¯ï, DUÁæ, CªÀ¯ÉÆÃPÀ£À,
PÀ£ÁðlPÀ ¸ÀgÀPÁgÀzÀ ¸ÁPÀëöåavÀæ ¤zÉðñÀPÀgÀ DAiÉÄÌ ¸À«Äw CzsÀåPÀë, gÀAUÀ¨sÀÆ«ÄPÁ.
gÁdå UÀæAxÁ®AiÀÄ
¥ÀĸÀÛPÀ DAiÉÄÌ ¸À«Äw ¸ÁªÀðd¤PÀ ²PÀët E¯ÁSÉ ¥ÀĸÀÛPÀ Rjâ ¸À«Äw CzsÀåPÀë , CAZÉ ªÉâPÉ CzsÀåPÀë :
vÉÆÃAlzÁAiÀÄð PÀ¯ÁgÀAUÀ, ¸Á° gÁªÀÄZÀAzÀægÁAiÀÄ ¥ÀæwµÁ×£À , qÁ.ªÀÄ°èPÁdÄð£À
ªÀÄ£À¸ÀÆgÀ ¥ÀæwµÁ×£À, ಗಳ
ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು.
PÀ£ÁðlPÀ ¸ÀgÀPÁgÀzÀ ¥ÀA¥À ¥Àæ±À¹Û, UÀÄ©â «ÃgÀtÚ ¥Àæ±À¹Û, ²±ÀÄ£Á¼À
±ÀjÃ¥sÀ ¥Àæ±À¹Û, ¸ÁuÉúÀ½îAiÀÄ ²ªÀPÀĪÀiÁgÀ ¥Àæ±À¹Û ªÀÄÄAvÁzÀ DAiÉÄÌ ¸À«ÄwUÀ¼À ಸದಸ್ಯÀ ಸಾಹಿತ್ಯ ಸುಧಾಕರ’, ಬೇಂದ್ರೆ
ಪ್ರತಿಷ್ಠಾನ, ಅಡ್ನೂರ : ‘ಕಾವ್ಯಗಂಗಾಧರ’ ಶ್ರೀಮುರುಘರಾಜೇಂದ್ರ
ಮಠ, ಚಿತ್ರದುರ್ಗ: ‘ಕಲಾರಾಧಕ’
ಪ್ರಶಸ್ತಿ, ಹೂವಿನಹಡಗಲಿಯ ಮ.ಮ. ಪಾಟೀಲ ಪ್ರತಿಷ್ಠಾನ :
ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ಗೌರವಸನ್ಮಾನ, ದೊರೆತಿವೆ. ವಿಶ್ವಕನ್ನಡ
ಸಂಸ್ಕೃತಿ ಸಮ್ಮೇಳನ ಮತ್ತು ದುಬೈ ಕರ್ನಾಟಕ ಸಂಘದ ರಜತಮಹೋತ್ಸವದ ಸರ್ವಾಧ್ಯಕ್ಷತೆ - ಹಿಂದಿ ಸಾಹಿತ್ಯ ಲೋಕವೂ ‘ವಿಶೇಷ ಸಾಹಿತ್ಯ ಸೇವಾ ಸಮ್ಮಾನ್’, ವಿಶಿಷ್ಟ
ಹಿಂದೀ ಸೇವೀ ಸಮ್ಮಾನ್’: ನೀಡಿ ಗೌರವಿಸಿದೆ . ಅಮೆರಿಕಾದ ಲಾಸ್
ಎಂಜಲೀಸ್‌ದ ‘ನಾವಿಕ’ ಪ್ರಥಮ ಕನ್ನಡ ಸಾಂಸ್ಕೃತಿಕ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ಕಥೆ, ಕವಿತೆಗಳು ಇಂಗ್ಲಿಶ್, ಹಿಂದೀ,
ಉರ್ದೂ, ತೆಲುಗು ಮುಂತಾದ ಭಾಷೆಗಳಲ್ಲಿ
ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅಂತರ್ಜಾಲದಲ್ಲಿ ಕವಿತಾ ವಾಚನ ಮತ್ತು ಜೀವನ
ಪರಿಚಯ.
ಒಮ್ಮೆ ಪರಿಚಯವಾದರೆ ಸಾಕು. ಹೃದಯಕ್ಕೆ ಹತ್ತಿರವಾಗುವ ಸರಳತೆ ಅವರದು. ವರ್ಣರಂಜಿತ
ವ್ಯಕ್ತಿತ್ತವ ಡಾ.ಪಟ್ಟಣಶೆಟ್ಟಿಯವರ ಕೃತಿಗಳು ಹಳೆ ಮೈಸೂರಿನ
ಹೃದಯಭಾಗದಲ್ಲಿರುವ ಬೆಂಗಳೂರಿನಲ್ಲೂ ಲೋಕಾರ್ಪಣೆ
ಯಾಗುತ್ತಿರುವುದಕ್ಕೆ ಅವರ ಗೆಳೆಯರ ಬಳಗದ ಅಭಿಮಾನದ ಫಲ.
೧೬. ೨. ೧೪ ರಂದು ಸಂಜೆ ನಯನ
ಸಭಾಂಗಣದಲ್ಲಿ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ
ಯಾಗಲಿವೆ.
ಅಭಿಮುಖ:
|
ಈ ಕೃತಿಯಲ್ಲಿ ಲೇಖಕರು ತಮ್ಮ
ಸಾಹಿತ್ಯ ಬದುಕಿನ ಕೆಲವು ವಿಶಿಷ್ಟ ಮಗ್ಗುಲುಗಳನ್ನು ‘ಅನಿಮಿತ್ತ’ವಾಗಿ ನಮೂದಿಸಿದ್ದಾರೆ. ಅವರ ಪ್ರತಿಯೊಂದು ವ್ಯಕ್ತಿ
ಸಂಬಂಧದಲ್ಲಿ ಆಪ್ತತೆ, ಆರ್ದ್ರ
ಭಾವ, ಅಂತಃಕರಣ ಮುಖ್ಯ ಸೆಲೆಯಾಗಿದೆ. ಪಟ್ಟಣಶೆಟ್ಟಿಯವರ ಆತ್ಮಕಥನಾತ್ಮಕ
ಮಾದರಿಯ ಬರಹಗಳ ಸಂಗ್ರಹ ಇದು.
ಅನಿಮಿತ್ತ: |
ಈಗಾಗಲೇ ತಮ್ಮ ಹಿಂದೀ ಅನುವಾದ ಕೃತಿಗಳಿಂದ ಹೆಸರಾಗಿರುವ ಪಟ್ಟಣಶೆಟ್ಟರ ಮತ್ತೊಂದು ಅನುವಾದಿತ ಕಾವ್ಯ ಸಂಕಲನ ‘ಎಷ್ಟೊಂದು ದೋಣಿಗಳಲ್ಲಿ’ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗುತ್ತಿದೆ. ಈ ಕೃತಿಯಲ್ಲಿ ಹಿಂದಿಯ ಪ್ರಸಿದ್ಧ ಕವಿಗಳಾದ ಅಜ್ಞೇಯ, ಹರಿವಂಶರಾಯ್ ಬಚ್ಚನ್, ದಿನಕರ್, ಧರ್ಮವೀರ್ ಭಾರತೀ, ನೀರಜ್ ಮುಂತಾದವರ ಕವಿತೆಗಳಿವೆ. ಪಟ್ಟಣಶೆಟ್ಟಿಯವರು ಕನ್ನಡದ ಓರ್ವ ಸಂವೇದನಾಶೀಲ ಕವಿಯಾಗಿರುವ ಕಾರಣ ಇಲ್ಲಿನ ಕವಿತೆಗಳು ಅನುವಾದ ಅನಿಸದೆ, ಕನ್ನಡದ್ದೇ ಕವಿತೆಗಳು ಅನ್ನಿಸುವಷ್ಟು ನೈಜವಾಗಿವೆ.
ಎಷ್ಟೊಂದು ದೋಣಿಗಳಲ್ಲಿ: |
ಈಗಾಗಲೇ ತಮ್ಮ ಹಿಂದೀ ಅನುವಾದ
ಕೃತಿಗಳಿಂದ ಹೆಸರಾಗಿರುವ ಪಟ್ಟಣಶೆಟ್ಟರ ಮತ್ತೊಂದು ಅನುವಾದಿತ ಕಾವ್ಯ ಸಂಕಲನ ‘ಎಷ್ಟೊಂದು
ದೋಣಿಗಳಲ್ಲಿ’ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗುತ್ತಿದೆ. ಈ
ಕೃತಿಯಲ್ಲಿ ಹಿಂದಿಯ ಪ್ರಸಿದ್ಧ ಕವಿಗಳಾದ ಅಜ್ಞೇಯ, ಹರಿವಂಶರಾಯ್ ಬಚ್ಚನ್, ದಿನಕರ್, ಧರ್ಮವೀರ್
ಭಾರತೀ, ನೀರಜ್ ಮುಂತಾದವರ ಕವಿತೆಗಳಿವೆ. ಪಟ್ಟಣಶೆಟ್ಟಿಯವರು ಕನ್ನಡದ
ಓರ್ವ ಸಂವೇದನಾಶೀಲ ಕವಿಯಾಗಿರುವ ಕಾರಣ ಇಲ್ಲಿನ ಕವಿತೆಗಳು ಅನುವಾದ ಅನಿಸದೆ, ಕನ್ನಡದ್ದೇ ಕವಿತೆಗಳು ಅನ್ನಿಸುವಷ್ಟು ನೈಜವಾಗಿವೆ.
ಕುಲಾಯಿ ಇರಲಿ ನನ್ನಲ್ಲಿಯೇ: |
ಈ ಕಾವ್ಯ ಸಂಕಲನ
ಆತ್ಮಚರಿತ್ರೆಯನ್ನೇ ಕಾವ್ಯವಾಗಿಸಲು ಹವಣಿಸುತ್ತದೆ. ಮಾನಸಿಕ ತಲ್ಲಣಗಳು, ಸಂತೋಷದ ಕ್ಷಣಗಳು, ವಯಸ್ಸಿನೊಂದಿಗೆ
ಮಾಗುತ್ತ ನಡೆದಿರುವ ಮನಸ್ಸು ಮತ್ತು ಬಾಲ್ಯದ ಕಣ್ಣುಗಳಿಂದಲೇ ನೋಡುವ ಕ್ರಮ ಇವೆಲ್ಲವುಗಳ ಹದವಾದ
ಸಮ್ಮಿಲನ ಈ ಕಾವ್ಯದ ಪ್ರಮುಖ ಗುಣವಾಗಿ ಎದ್ದು ಕಾಣುತ್ತದೆ. ಇಳಿವಯಸ್ಸಿನಲ್ಲಿ ರಸಿಕ ಕವಿಯೊಬ್ಬ
ಆಧುನಿಕತೆಗೆ ತನ್ನನ್ನೇ ತೆರೆದುಕೊಳ್ಳುತ್ತ ಹೋಗುವ ವಿಶಿಷ್ಟ ಕಾವ್ಯಾಧಾರಿತ ದಾಖಲೆಯೊಂದು
ಇಲ್ಲಿದೆ.
ಎಪ್ಪತ್ತೆಂಟರ
ಇಳಿವಯಸ್ಸಿನಲ್ಲೂ ಇಪ್ಪತ್ತೆಂಟರ ಉತ್ಸಾಹವಿರುವ ಅವರು ಸಂಧಿವಾತದಿಂದ ಬೆರಳುಗಳ ತೊಂದರೆ ಇದ್ದರೂ
. ಕಂಪ್ಯೂಟರ್ ಬಳಸುತಿದ್ದಾರೆ.. ತಮ್ಮ ನೆನಪುಗಳ
ಗಣಿಯಲ್ಲಿನ ತಮ್ಮ,, ಗೆಳೆಯರ , ಮತ್ತು ಗುರುಗಳ
ಬರಹಗಳನ್ನು ಬೆಳಕಿಗೆ ತರುವ ಹಂಬಲ.ಅವರಿಗಿದೆ.
No comments:
Post a Comment