ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ.
ಬಿ. ಎಂ. ಶ್ರೀಕಂಠಯ್ಯ |
ಪ್ರಥಮ ಶ್ರೀ ಪ್ರಶಸ್ತಿ ವಿಜೇತರು
ಎಸ್.ಎನ್.ಲಕ್ಷ್ಮಿನಾರಾಯಣ ಭಟ್ಟ |
ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಅವರು ಹೊಸ ತಲೆ ಮಾರಿನ ಒಬ್ಬ ವಿಶಿಷ್ಟ ಕವಿ. ಅವರು ಶಿವಮೊಗ್ಗ ಜನಿಸಿದರು.
ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಪ್ರಭುತ್ವವಿದೆ.ಕನ್ನಡ ಸಾಹಿತ್ಯದಲ್ಲಿ ಲಯ ಬದ್ದ ಕವನಗಳಿಂದ ಮನೆ ಮಾತಾಗಿರುವರು.ಅವರು ಷೇಕ್ಸಪಿಯರನ ಸಾನೆಟ್‌ಗಳನ್ನು ಮತ್ತು ಏಟ್ಸನನ ಕವನಗಳನ್ನು ಕನ್ನಡ ಓದುಗರಿಗೆ ತಮ್ಮ ಅನುವಾದಗಳ ಮೂಲಕ ಪರಿಚಯಿಸಿರುವರು. ಅವರ “ಹೊರಳು ಹಾದಿಯಲ್ಲಿ “ಕೃತಿಗೆ ಸಾಹಿತ್ಯ ಅಕಾದಮಿ ಬಹುಮಾನ ಬಂದಿದೆ.ಅವರಿಗೆ ಮಾಸ್ತಿ ಪ್ರಶಸ್ತಿಯೂ ಸಂದಿದೆ.ಸಂತಶಿಶುನಾಳ ಷರೀಫ್‌ಅವರ ಗೀತೆಗಳನ್ನು ಕನ್ನಡ ನಾಡಿನ ಮೂಲೆ ಮೂಲೆಗೂ ಮುಟ್ಟಿಸಿದ ಕೀರ್ತಿ ಅವರದು.ಭಾವ ಗೀತೆಗಳನ್ನು ನಾಡಿನಾದ್ಯಂತ ಗುಣಗುಣಿಸುವಂತೆ ಮಾಡಿದವರಲ್ಲಿ ಅವರ ಪಾತ್ರ ಹಿರಿದು
2013-14ನೆಯ ಸಾಲಿನ “ಶ್ರೀಪ್ರಶಸ್ತಿ “ಅವರ ಮುಡಿಗೇರಿದೆ.. ಪ್ರಥಮ ಪ್ರಶಸ್ತಿ ವಿಜೇಜೇತರೆಂಬ ಹಿರಿಮೆ ಅವರದಾಗಿದೆ
No comments:
Post a Comment