Tuesday, August 19, 2014

ಐತಿಹಾಸಿಕ ಪರಂಪರೆ ಉಳಿಸಿ’

                                   ಸ್ಥಳಿಯ ಚರಿತ್ರೆ

ಸ್ಥಳಿಯಸ್ಥಳಿಯ ಚರಿತ್ರೆಯ ಬಗೆಗೆ ಅಲಕ್ಷ ಸಲ್ಲದು

ಸ್ಥಳಿಯ ಚರಿಸ್ಥಳಿಯ ಚರಿತ್ರೆಯ ಬಗೆಗೆ ಅಲಕ್ಷ ಸಲ್ಲದುತ್ರೆಯ ಬಗೆಗೆ ಅಲಕ್ಷ ಸಲ್ಲದು ಸ್ಥಳಿಯ ಚರಿತ್ರೆಯ ಬಗೆಗೆ ಅಲಕ್ಷ ಸಲ್ಲದು ಯ ಬಗೆಗೆ ಅಲಕ್ಷ ಸಲ್ಲದು   


ಹಂಪಿ ಕನ್ನಡ ವಿಶ್ವವಿದ್ಯಾಲಯದಉಪ ಕುಲಸಚಿವರಾದ ಡಾ.ಕೆ.ರವೀಂದ್ರನಾಥ, ವೇದಿಕೆಯಲ್ಲಿ ಪ್ರಾಚಾರ್ಯರಾದ ಡಾ.ಎಸ್.ಎನ್.ಶಿವರಡ್ಡಿ, ಬಿ.ಎ.ಕೆಂಚರಡ್ಡಿ





  ಇತಿಹಾಸವೆಂದರೆ ಬರಿ ರಾಜರ ಕಥೆಯಲ್ಲ. ಅದು ನಮ್ಮ ಬದುಕಿನ ಚರಿತ್ರೆಯಾಗಿದೆ. ಪ್ರತಿ ಮನೆಯು ತನ್ನದೇ ಆದ ಇತಿಹಾಸವನ್ನು ಹೊಂದಿರುತ್ತದೆ. ಈ ನಾಡಿನಲ್ಲಿ ಬಹು ಸಂಸ್ಕøತಿಯನ್ನು ಬಿಂಬಿಸುವ  ಕಲ್ಲುಗಳಿವೆ. ಅವು ಮೌನವಾಗಿ ಕೂಗುತ್ತಿದ್ದರೂ ಆ ಕೂಗನ್ನು ಕೇಳುವ ಕಿವಿಗಳಿಲ್ಲ. ನಾಡಿನ ಅಮೂಲ್ಯ ಸಂಪತ್ತುಗಳಾದ ಶಾಸನಗಳು, ಕೋಟೆ ಕೊತ್ತಲಗಳು, ದೇಗುಲಗಳು, ಸ್ಮಾರಕಗಳು, ನಾಣ್ಯಗಳು ನಮ್ಮವರ ಹಿಂದಿನ ಚರಿತ್ರೆಯನ್ನು ತಿಳಿಸುವ ದಾಖಲೆಗಳಾಗಿವೆ. ಇವುಗಳು ನಾಶವಾದರೆ ನಮ್ಮ ಪರಂಪರೆಯೇ ಹಾಳಾದಂತೆ, ನಮ್ಮ ಸುತ್ತಲು ನಮಗೆ ಕಾಣಿಸದ ಇಂತಹ ಚರಿತ್ರೆಗಳ ಬಗ್ಗೆ ನಮಗೆ ಅಲಕ್ಷವಿರಬಾರದು ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವರಾದ ಡಾ.ಕೆ. ರವೀಂದ್ರನಾಥರವರು ವಿದ್ಯಾರ್ಥಿಗಳಿಗೆ ಕಳಕಳಿಯುಳ್ಳ ಮಾತುಗಳನ್ನು ಹೇಳಿದರು.
ಚರಿತ್ರೆಯೊಂದಿಗೆ  ಹಾಸುಹೊಕ್ಕಾಗಿರುವ ನಮ್ಮ ಪರಂಪರೆಯು ಬಹು ದೊಡ್ಡದು. ಅದನ್ನು ಚರಿತ್ರೆಯೊಂದಿಗೆ ಸಮೀಕರಿಸುತ್ತಾ ತಮ್ಮ ವರ್ತಮಾನವನ್ನು ರೂಪಿಸಿಕೊಳ್ಳಬೇಕು. ಇತಿಹಾಸವೆಂದರೆ ನಮ್ಮವರ ಬದುಕು. ಅದನ್ನು ಅರಿಯದಿದ್ದರೆ ನಮ್ಮನ್ನು ಅರ್ಥಮಾಡಿಕೊಳ್ಳಲಾಗದು. ಇತಿಹಾಸ ಪ್ರಜ್ಞೆ ಇಲ್ಲದಿದ್ದರೆ ನಾವು ಉಸಿರನ್ನು ಕಳೆದುಕೊಂಡ ದೇಹದಂತಾಗುತ್ತೇವೆ. ಎಂದು ವಿದ್ಯಾರ್ಥಿಗಳಿಗೆ ತಾಳೆಗರಿ, ಕಡತ, ಹಸ್ತಪ್ರತಿಗಳನ್ನು ತೋರಿಸುತ್ತಾ ಐತಿಹಾಸಿಕ ಜಾಗೃತಿ ಮೂಡುವ ನುಡಿಗಳನ್ನು ಹೇಳಿದರು.
 ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಎಸ್.ಎಮ್.ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿ ಆಶ್ರಯದಲ್ಲಿ ನಡೆದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಇತಿಹಾಸದ ಪುಟಗಳಲ್ಲಿನ  ಪ್ರಮುಖ ವಿಷಯಗಳನ್ನು ಉದಾಹರಿಸುತ್ತಾ ರೈಸ್, ಫ್ಲೀಟ್, ಮೆಕೆಂಜಿ, ಹಳಕಟ್ಟಿಯಂತಹ ಇತಿಹಾಸಕಾರರ ಕೊಡುಗೆಗಳನ್ನು ಕೊಂಡಾಡಿಡರು.
    ಕಾರ್ಯಕ್ರಮದ ಅತಿಥಿಗಳಾದ ಇತಿಹಾಸ ಅಕಾದೆಮಿಯ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕುಂಬಾರವರು ಇತಿಹಾಸ ಕಾಲವೆಂಬುದು ವಿಸ್ಮಯದ ಮಹಾಗುಹೆ. ಕಾಲ ಪುರುಷನು ತನ್ನ ಜಠರಾಗ್ನಿಯಲ್ಲಿ ಎಲ್ಲವನ್ನು ಭಸ್ಮಮಾಡಿ, ಮರವೆಯ ಹೊಗೆಯನ್ನು ಉಗುಳುತ್ತಾನೆ. ಜೀವನದಲ್ಲಿ ನಡೆದ ಅನೇಕ ಸಂಗತಿಗಳು ಕೆಲವು ಸಲ ಜ್ಞಾಪಕಕ್ಕೆ ಬರುವದಿಲ್ಲ. ಇನ್ನು ಅಸಂಖ್ಯ ಜನಗಳ ಜೀವನ, ಗತಿಸಿದ ತಲೆಮಾರುಗಳ ವಿಷಯಗಳಂತೂ ನೆನಪಿರುವದು ಬಹಳ ದೂರದ ಮಾತು. ಈ ಹಿನ್ನೆಲೆಯಲ್ಲಿ ನಮ್ಮ ಜನಾಂಗದಿಂದ ಕಣ್ಮರೆಯಾದ ಸಂಸ್ಕ್ರತಿಯ ಕಣಜದಂತೆ ಶೋಭಿಸುತ್ತಿರುವ ಶಾಸನಗಳು ಈ ನಾಡಿನ ಅಮೂಲ್ಯ ನಿಧಿಗಳಾಗಿವೆ. ಅಲ್ಲಿರುವ ಒಂದೊಂದು ಅಕ್ಷರಗಳು ಒಂದೊಂದು ದೀಪದ ಕುಡಿಗಳಾಗಿವೆ. ಕನ್ನಡ ಸಾಹಿತ್ಯದ ತಲಕಾವೇರಿಯಾದ ಶಾಸನಗಳು ಈ ನಾಡಿನ ಅಮೂಲ್ಯ ಸಂಪತ್ತುಗಳಾಗಿ, ಇವುಗಳು ಆಯಾ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಸ್ಥಿತಿಗಳನ್ನು ಸ್ಪಷ್ಠವಾಗಿ ತಿಳಿಸುತ್ತವೆ ಅದರ ಅರಿವನ್ನು ವಿದ್ಯಾರ್ಥಿಗಳು ಗಳಿಸಿಕೊಳ್ಳಬೇಕೆಂದರು. 
    ಈ ಐತಿಹಾಸಿಕ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಎನ್.ಶಿವರಡ್ಡಿಯವರು ವಹಿಸಿ ನಮ್ಮ ಸುತ್ತಲಿನ ಚರಿತ್ರೆಯ ಅರಿವು ನಮಗಿರಬೇಕು. ಅಂದಾಗಲೇ ನಾವು ನಮ್ಮ ಚರಿತ್ರೆಯನ್ನು ಕಟ್ಟಬಹುದು. ವಿದ್ಯಾರ್ಥಿಗಳು ಆ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಮಾರಂಭದಲ್ಲಿ ಅಧ್ಯಾಪಕರಾದ ಬಿ.ಎ.ಕೆಂಚರಡ್ಡಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಇತಿಹಾಸದ ಅಧ್ಯಾಪಕಿ ಕುಮಾರಿ ಚಳಗೇರಿಯವರು ಎಲ್ಲರಿಗೂ ವಂದಿಸಿದರೆ, ಅಧ್ಯಾಪಕರಾದ ಅರವಿಂದ ವಡ್ಡರವರು ಸಭೆಯ ಸಂಚಾಲಕತ್ವವನ್ನು ವಹಿಸಿದ್ದರು.



No comments:

Post a Comment