Sunday, August 31, 2014

ಇತಿಹಾಸ ಅಕಾಡೆಮಿ ಸಂತಾಪ


ಡಾ.ಬಿಪಿನ್‍ಚಂದ್ರ 

      ಡಾ.ಬಿಪಿನ್‍ಚಂದ್ರ ನಿಧನಕ್ಕೆ ಇತಿಹಾಸ ಅಕಾಡೆಮಿ ಸಂತಾಪ

 ಖ್ಯಾತ ಇತಿಹಾಸಕಾರರಾಗಿದ್ದ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಡಾ.ಬಿಪಿನ್‍ಚಂದ್ರ ಅವರ ನಿಧನಕ್ಕೆ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಧುನಿಕ ಭಾರತದ ಅರ್ಥಶಾಸ್ತ್ರ ಮತ್ತು ರಾಜಕೀಯ ಇತಿಹಾಸದಲ್ಲಿ ವಿಶೇಷ ಕೃಷಿ ಮಾಡಿದ್ದ ಬಿಪಿನ್‍ಚಂದ್ರ (86) ಅವರು ಭಾರತೀಯ ಸ್ವಾತಂತ್ರ್ಯ ಚಳುವಳಿ ಹಾಗೂ ಮಹಾತ್ಮಾ ಗಾಂಧಿಯವರ ಕುರಿತು ಬರೆದವರಲ್ಲಿ ಪ್ರಮುಖರಾಗಿದ್ದರು.
1985ರಲ್ಲಿ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ಸಿನ ಸೆಕ್ಷನಲ್ ಪ್ರೆಸಿಡೆಂಟ್ ಆಗಿ ನಂತರ ಅದರ ಸರ್ವಾಧ್ಯಕ್ಷ ಗೌರವಕ್ಕೂ ಪಾತ್ರರಾಗಿದ್ದರು. 1993 ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯು.ಜಿ.ಸಿ.)ದ ಸದಸ್ಯರಾಗಿ, 2004-12ರ ಅವಧಿಗೆ ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ನ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಸಿದ್ದರು.
ಭಾರತದ ಸ್ವಾತಂತ್ರ್ಯಾರಂಭದಿಂದಲೂ ಕಮ್ಯುನಿಸ್ಟ್ ಚಳುವಳಿಯ ಮುಂಚೂಣಿಯಲ್ಲಿದ್ದ ಅವರು ಇತಿಹಾಸಕಾರರಾದ ಡಾ.ಆರ್.ಎಸ್.ಶರ್ಮಾ, ಡಾ.ರೋಮಿಳಾ ಥಾಪರ್, ಇರ್ಫಾನ್ ಹಬೀಬ್, ಡಾ.ಸತೀಶ್ ಚಂದ್ರ ಮತ್ತು ಅರ್ಜುನ್ ದೇವ್ ಅವರನ್ನೊಳಗೊಂಡ ವಲಯವೊಂದರ ಹುಟ್ಟಿಗೆ ಅವರು ಕಾರಣೀಕರ್ತೃರಾಗಿದ್ದರು.
ಹಿಸ್ಟರಿ ಆಫ್ ಮಾಡರ್ನ ಇಂಡಿಯಾ, ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್-1947-2000, ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್ ಎಂಬ ಅನೇಕ ಉಪಯುಕ್ತ ಗ್ರಂಥಗಳನ್ನು ಅವರು ರಚಿಸಿದ್ದಲ್ಲದೆ ಅವುಗಳಲ್ಲಿ ಕೆಲವು ಕಾಲೇಜು ಪಠ್ಯವಾಗಿಯೂ ಆಯ್ಕೆಯಾಗಿದ್ದವು.
ಡಾ.ಬಿಪಿನ್‍ಚಂದ್ರ ಅವರ ಮರಣ ಇತಿಹಾಸ ಕ್ಷೇತ್ರಕ್ಕೆ ತುಂಬಲಾರದ ಹಾನಿ ಎಂದು ಡಾ.ಬಾಲಕೃಷ್ಣ ಹೆಗಡೆ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

Wednesday, August 27, 2014

ಹೊಯ್ಸಳರ ಶಿಲ್ಪಗಳಲ್ಲಿ ಸಂಗೀತ ವಾದ್ಯಗಳು

ಹೊಯ್ಸಳರ ಶಿಲ್ಪಗಳಲ್ಲಿ ಸಂಗೀತ ವಾದ್ಯಗಳು
ಒಂದು ಶಾಸ್ತ್ರೀಯ ಅಧ್ಯಯನ
ಡಾ. ವಿ. ಅನುರಾಧ
ಈ ಲೇಖನದ ಉದ್ದೇಶ ಹೊಯ್ಸಳರ ಕಾಲದ ಸಂಗೀತ ವಾದ್ಯಗಳನ್ನು, ದೇವಾಲಯ ಸಮುಚ್ಛಯಗಳಲ್ಲಿ ಗುರುತಿಸಿ, ಅವುಗಳನ್ನು ಶಾಸ್ತ್ರೀಯವಾಗಿ ವಿಂಗಡಿಸುವುದು. ಹೊಯ್ಸಳರ ದೇವಾಲಯಗಳು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬಂದಿದ್ದು, 12 ಮತ್ತು 13ನೇ ಶತಮಾನಕ್ಕೆ ಸೇರಿವೆ, ಇವರ ಪ್ರಮುಖ ದೇವಾಲಯಗಳು ಹೊಯ್ಸಳ-ಸಾಮ್ರಾಜ್ಯದ ಹೃದಯ ಭಾಗದಲ್ಲಿದ್ದು, ಕರ್ನಾಟಕದಲ್ಲಿ ಬಹು ಸಂಖ್ಯೆಯಲ್ಲಿ ಕಂಡುಬಂದಿವೆ. ಈ ದೇವಾಲಯಗಳು ಕಲೆಯ ಬೀಡಾಗಿದ್ದು, ನೈಜವಾಗಿ, ಹೆಚ್ಚು ವಿವರಣೆಗಳೊಂದಿಗೆ ವಾದ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತವೆ. ಈ ಲೇಖನವನ್ನು ಬರೆಯಲು ಹಲವು ಪ್ರಮುಖ ಹೊಯ್ಸಳ ದೇವಾಲಯದ ಶಿಲ್ಪಗಳನ್ನು ಆಧಾರಗಳನ್ನು ಬಳಸಲಾಗಿದೆ. ಮುಖ್ಯವಾಗಿ ಅಮೃತಾಪುರದ-ಅಮೃತೇಶ್ವರ ದೇವಾಲಯ (1196) ಅರಳಗುಪ್ಪೆಯ-ಚೆನ್ನಕೇಶವ ದೇವಾಲಯದ (1250) ಬಸರಾಳಿನ ಮಲ್ಲಿಕಾರ್ಜುನ ದೇವಾಲಯ (1235) ಬೆಳವಾಡಿಯ ವೀರನಾರಾಯಣ ದೇವಾಲಯ (1300) ಬೇಲೂರಿನ ಕೇಶವ ದೇವಾಲಯ (1117) ಹಳೇಬೀಡಿನ-ಹೊಯ್ಸಳೇಶ್ವರ ಕೇದಾರೇಶ್ವರ, ಹಾರ್ನಹಳ್ಳಿಯ-ಚನ್ನೆಕೇಶವ (1234) ಕೊರವಂಗಲದ-ಬುಕ್ಕೇಶ್ವರ ದೇವಾಲಯ, (1173) ಮರಳೆಯ-ಸಿದ್ದೇಶ್ವರ ದೇವಾಲಯ (1130) ನಾಗಲಾಪುರದ-ಚೆನ್ನಕೇಶವ ದೇವಾಲಯ (1250) ಜಾವಗಲ್ಲಿನ-ಲಕ್ಷ್ಮೀನರಸಿಂಹ (1249) ಸೋಮನಾಥಪುರದ ಕೇಶವ ದೇವಾಲಯಗಳಲ್ಲಿ (1268) ಕ್ಷೇತ್ರಕಾರ್ಯ ನಡೆಸಿ ವಿವರಗಳನ್ನು ಸಂಗ್ರಹಿಸಲಾಗಿದೆ. ವಾದ್ಯಗಳನ್ನು ಶಾಸ್ತ್ರಿಯವಾಗಿ ವಿಂಗಡಿಸಿ, ಅವುಗಳ ನಿರ್ಮಾಣ ಅಥವಾ ಮಾಡುವ, ತಯಾರಿಸುವ ರೀತಿಯನ್ನು ಅಭ್ಯಸಿಸಿ, ಅವುಗಳ ಬಳಕೆಯ ವಿಧಾನವನ್ನು ಸಂಗೀತ ಗ್ರಂಥಗಳಿಂದ ಅರಿತು, ಈ ಲೇಖನವನ್ನು ಬರೆಯಲು ಪ್ರಯತ್ನಿಸಲಾಗಿದೆ. ಮೊದಲಿಗೆ ಸಂಗೀತದ ಬಗ್ಗೆ ನಮ್ಮ ಪ್ರಾಚೀನ ಸಂಸ್ಕøತಿ ನೀಡುವ ಆಕರಗಳನ್ನು ಗಮನಿಸಬೇಕಾಗಿದೆ.
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಸಂಗೀತ, ನೃತ್ಯ ಪರಂಪರೆ ಎಲ್ಲ ಸಾಂಸ್ಕøತಿಕ ಚಟುವಟಿಕೆಗಳಲ್ಲೂ ದೈನಂದಿನ ಜೀವನದಲ್ಲೂ ಹಾಸುಹೊಕ್ಕಾಗಿದೆ ಎರಡನೆ ಸಹಸ್ರಮಾನವ ಪೂರ್ವಾರ್ಧದ ಸುಮಾರಿನಲ್ಲಿ ಸಿಂಧೂ ನಾಗರೀಕತೆಯ ಅವನತಿ ಉಂಟಾಗಿ ವೈದಿಕ ನಾಗರೀಕತೆಗೆ ದಾರಿ ಮಾಡಿ ಕೊಟ್ಟಿತು. ವೈದಿಕ ಪರಂಪರೆಯಲ್ಲಿ ಸಂಗೀತವು ಪ್ರಮುಖ ಪಾತ್ರವಹಿಸಿದ್ದು, ವೈದಿಕ ದೇವತೆಗಳನ್ನು ಕೊಂಡಾಡುವ ಪ್ರಾರ್ಥನಾ ಶ್ಲೋಕಗಳನ್ನು ರಾಗವಾಗಿ ಹಾಡುತ್ತಿದ್ದು, ನಂತರದ ಕಾಲದಲ್ಲಿ ಇದು ಸಂಹಿತ ಸ್ವರೂಪವನ್ನು ಪಡೆಯಿತು. ಹೀಗೆ ಶಾಸ್ತ್ರೀಯವಾಗಿ ಋಗ್ವೇದ ಸಂಹಿತೆ ರಚನೆಗೊಂಡು, ನಿಸರ್ಗ ದೇವತೆಗಳನ್ನು ನೈಸರ್ಗಿಕ ಆಪತ್ತುಗಳಿಂದ ರಕ್ಷಿಸಿಕೊಳ್ಳಲು, ಸಂಪತ್ತು ಮತ್ತು ಆಧ್ಯಾತ್ಮಿಕ ಸಾಧನೆಗಾಗಿ ಪ್ರಾರ್ಥನೆಗಳಿಂದ ಒಲಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು1. ನಂತರದ ಕಾಲದಲ್ಲಿ ಯಜುರ್ವೇದ ಮತ್ತು ಸಾಮವೇದಗಳ ರಚನೆಯಾಯಿತು. ಸಾಮವೇದವು ಸಂಗೀತದ ಮೊದಲ ನೆಲೆಯಾಗಿದ್ದು, ಸಂಗೀತದ ಆರಂಭಿಕ ಹಂತ, ಸಂಗೀತ ವಾದ್ಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಸಂಹಿತಗಳ ರಚನಕಾರರು ಹಲವು ಶ್ರೇಷ್ಠ ಋಷಿ ಮುನಿಗಳು, ಋಷಿ ಕನ್ಯೆಯರು ಆಗಿದ್ದು ಅವರಲ್ಲಿ ಸಪ್ತ ಋಷಿಗಳಿಗೆ ಪ್ರಮುಖ ಸ್ಥಾನವಿದ್ದು, ಅವರು ಸಂಗೀತ ಪರಂಪರೆಯನ್ನು ವೃದ್ಧಿಗೊಳಿಸುವಲ್ಲಿ ಸಫಲರಾಗಿದ್ದರು2.
ವೈದಿಕ ಕಾಲದಲ್ಲಿ ಯಜ್ಞಯಾಗಾದಿಗಳು-ದೇವತೆಗಳನ್ನು ಸಂತುಷ್ಟಿಗೊಳಿಸಲು ಆಚರಿಸಲಾಗುತ್ತಿತ್ತು. ಈ ಸಮಯದಲ್ಲಿ ಸಂಗೀತ ಮತ್ತು ನೃತ್ಯಗಳು ಮೇಳೈಸಿ, ಯಾಗಮಂಟಪದಲ್ಲಿ ದಿವ್ಯಸಾನ್ನಿಧ್ಯವನ್ನು ಸೃಷ್ಟಿಸುವುದಲ್ಲದೆ, ಅವು ದೇವತೆಗಳನ್ನು ಸುಪ್ರೀತಗೊಳಿಸಲು ಬಳಸಲಾಗುತ್ತಿತ್ತು. ಯಾವುದೇ ಧಾರ್ಮಿಕ ಕಾರ್ಯವು ಸಂಗೀತವಿಲ್ಲದೇ ಪೂರ್ಣಗೊಳ್ಳುತ್ತಿರಲಿಲ್ಲ. ಸಾಮವೇದವನ್ನು ಸಪ್ತಸ್ವರಗಳೊಡನೆ ಗಂಧರ್ವರು ಹಾಡಿ, ಉತ್ತಮವಾದ ವಾದ್ಯಗಳಿಂದ ಗಾನಸುಧೆ ಹರಿಯುವಂತೆ ಮಾಡುತ್ತಿದ್ದರು. ಯಜ್ಞಯಾಗಾದಿಗಳಲ್ಲಿ ಸಾಮವೇದ ಗಾಯನ ಪ್ರಮುಖ ಪಾತ್ರ ವಹಿಸುತ್ತಿತ್ತು. ‘ಸಾಮ’ ಎಂಬ ಪದವೇ ಎರಡು ಪ್ರಮುಖ ಅಂಗಗಳನ್ನು ಹೊಂದಿದೆ. ಪದದ ಮೊದಲ ಅಕ್ಷರ ‘ಸಾ’ ಎಂಬುದು ಮಂತ್ರವಾಗಿದ್ದು, ‘ರಿಚ’ ವಾಗಿದೆ, ಎರಡನೆಯ ಅಕ್ಷರವೇ ‘ಮ’ ಇದು ಸಂಗೀತದ ಸ್ವರಗಳನ್ನು ನಿರೂಪಿಸುತ್ತದೆ. ವೈದಿಕ ಸಾಹಿತ್ಯ ಪ್ರಕಾರಗಳಲ್ಲಿ ಮೊದಲ ಭಾಗವೇ ‘ಶಿಕ್ಷ’. ಇದು ಸರಿಯಾದ ಉಚ್ಛಾರಣೆಯನ್ನು ವೈಜ್ಞಾನಿಕ ರೀತಿಯಲ್ಲಿ ತಿಳಿಸಿಕೊಡುವ ಶಾಸ್ತ್ರೀಯ ವಿಜ್ಞಾನ3. ಈ ಕ್ಷೇತ್ರದಲ್ಲಿ ಪಾಣಿನಿ, ಯಾಜ್ಞವಲ್ಕ್ಯ, ವಾಸಿಷ್ಠ, ಕಾತ್ಯಾಯನಿ, ಮಾಂಡುಕಿ, ಮತ್ತು ನಾರದರು ಪ್ರಮುಖರು, ಸಂಗೀತ ವಿದ್ಯೆಯ ಸನಾತನವಾಗಿದ್ದು, ಗುರು-ಶಿಷ್ಯ ಪರಂಪರೆಯು, ಇದರ ಪ್ರಸರಣಕ್ಕೆ ಕಾರಣವಾಗಿತ್ತು. ಗುರುಕುಲ ವ್ಯವಸ್ಥೆಯಲ್ಲಿ ಶಿಷ್ಯನು ಗುರುಮುಖೇನ ದೀಕ್ಷೆ ಪಡೆದು ಸಂಗೀತ ವಿದ್ಯೆಯ ಪರಿಚಯ ಪಡೆಯುತ್ತಿದ್ದನು. ವೇದಗಳು ನಾಲ್ಕು ರೀತಿಯ ಗುರುಪರಂಪರೆಯನ್ನು ಗುರುತಿಸಿವೆ4 ಹಾಗೆಯೇ ಎರಡು ರೀತಿಯ ಶಿಷ್ಯರನ್ನೂ ಗುರುತಿಸಿವೆ5 ಅಂಗೀರಸ, ಗಾರ್ಗಿ, ಅತ್ರ್ರಿ, ಬೃಹಸ್ವತಿ ಮತ್ತು ವಸಿಷ್ಠರು ಪ್ರಮುಖ ಗುರು-ಪರಂಪರೆಯ ದೀವಿಗೆಯಂತಿದ್ದರು. ರಾಮಾಯಣ ಕಾಲದಲ್ಲಿ ಮಾರ್ಗ ಮತ್ತು ದೇಸೀ ಸಂಗೀತವು ಪರಿಚಿತವಾಗಿದ್ದು, ಶ್ರೀರಾಮಚಂದ್ರನು ‘ಗಂಧರ್ವ’ ಸಂಗೀತದಲ್ಲಿ ನಿಪುಣನಾಗಿದ್ದನು. ರಾಮಾಯಣ ಕಾಲದಲ್ಲಿ ವೀಣೆ, ವೇಣು, ವಂಶಿ, ಶಂಖ, ದುಂದುಭಿ, ಭೇರಿ, ಮೃದಂಗ, ಪನಯ್ ಮತ್ತು ಪತಹ್ ಪ್ರಸಿದ್ಧ ವಾದ್ಯಗಳಾಗಿದ್ದವು ರಾವಣನು ಸಂಗೀತದಲ್ಲಿ ಪಾರಂಗತನಾಗಿದ್ದನು. ರಾವಣನು ರುದ್ರವೀಣೆಯನ್ನು ನುಡಿಸುವಲ್ಲಿ ಪಾರಂಗತನಾಗಿದ್ದು, ಈ ಗಾಯನಕ್ಕೆ ಸಾಕ್ಷಾತ್ ಶಿವನು ಒಲಿದು, ಆತ್ಮಲಿಂಗವನ್ನು ನೀಡಿದ್ದನು. ಆಗಾಗ ನಡೆಯುತ್ತಿದ್ದ ಸಾಂಸ್ಕøತಿಕ ಸಂಗೀತ ಕಾರ್ಯಕ್ರಮಗಳನ್ನು ‘ಸಮಾಜ’ ಎಂದು ರಾಮಾಯಣ ತಿಳಿಸುತ್ತದೆ. ವಂದಿ, ಸೂಕ, ಮಾಗಧರು ಸಂಗೀತಜ್ಞಾನ ಪಡೆದವರಾಗಿದ್ದು, ಶ್ರೇಷ್ಠ ನಾಯಕರ-ರಾಮ, ದಿಲೀಪ, ರಘು ಮುಂತಾದವರ ಕಥೆಗಳನ್ನು ಶ್ಲೋಕ ರೀತಿಯಲ್ಲಿ ಹಾಡುತ್ತಿದ್ದರು.
ಪಥ್ಯ ಸಂಗೀತ: ಪಥ್ಯ ಎಂಬುದು ಒಂದು ವಿಶೇಷ ರೀತಿಯ ಸಂಗೀತ ರಚನೆಯಾಗಿದೆ. ಭರತ ಮುನಿಯು ಪಥ್ಯ ಸಂಗೀತ ರಚನೆಯ ಆರು ಲಕ್ಷಣಗಳನ್ನು ವಿವರಿಸಿದ್ದಾರೆ.
1. ಸಪ್ತಸ್ವರ-ಏಳು ಸ್ವರಗಳು
2. ಸ್ಥಾನ-(ಸ್ವರ-ಸ್ಥಾನ) -ಮೂರು ಸ್ಥಾನಗಳು
3. ಕಾಕು
4. ನಾಲ್ಕು ವರ್ಣಗಳು
5. ಆರು-ಅಲಂಕಾರಗಳು
6. ಆರು-ಅಂಗಗಳು.
ಲವ-ಕುಶರು ರಾಮಾಯಣವನ್ನು ಪಠ್ಯ ಪ್ರಕಾರದಲ್ಲಿ ಏಕನಾದವನ್ನು ಬಳಸಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ರಾಮಾಯಣ ಗ್ರಂಥವು ಸಂಗೀತ ಶಸ್ತ್ರದ ಪ್ರಮಾಣ, ಲಯ, ಸಮ, ತಲ, ಕಾಲ, ಮಾತ್ರ ಮತ್ತು ಸಮಯವನ್ನು ಕುರಿತು ವರ್ಣಿಸಿದೆ.
ಮಹಾಭಾರತವು ಸಂಗೀತವನ್ನು ಗಂಧÀರ್ವಶಾಸ್ತ್ರ ಎಂದು ಉಲ್ಲೇಖಿಸುತ್ತದೆ. ಗಂಧರ್ವರು ಮತ್ತು ಅಪ್ಸರೆಯರು ಸಂಗೀತಶಾಸ್ತ್ರದಲ್ಲಿ ಪರಿಣಿತರಾಗಿದ್ದರು. ಏಳು ಸ್ವರಗಳು ಷಡ್ಜ ಎಂದು ತಿಳಿಸಿದೆ.
ಬೌದ್ಧ ಸಾಹಿತ್ಯದಲ್ಲಿ ಸಂಗೀತದ ಬೆಳವಣಿಗೆಯನ್ನು ವರ್ಣಿಸಲಾಗಿದೆ. ಬೌದ್ಧ ಗ್ರಂಥಗಳಾದ ತೇರಗಾಥ ಮತ್ತು ತೇರೀಗಾಥÀದಲ್ಲಿ ಸಂಗೀತದ ವಿವಿಧ ಪ್ರಬೇಧಗಳನ್ನು ವಿವರಿಸಲಾಗಿದೆ. ಪಾಲಿ ಭಾಷೆಯಲ್ಲಿರುವ ಜಾತಕಕತೆಗಳಲ್ಲಿ ವೀಣೆ, ವೇಪಮೈ, ಧುನಕ್ ಮತ್ತು ಪನಕ್ ಎಂಬ ಸಂಗೀತ ವಾದ್ಯಗಳನ್ನು ಉಲ್ಲೇಖಿಸಿವೆ. ಸಾಂಚಿ ಮತ್ತು ಬಾರ್ ಹತ್‍ನಲ್ಲಿರುವ ಔದ್ಧ ಶಿಲ್ಪಗಳು ಸಂಗೀತ ಹಲವು ವಾದ್ಯಗಳ ಬಗ್ಗೆ ವಿವರಗಳನ್ನು ನೀಡುತ್ತದೆ. ಜೈನ ಸಾಹಿತ್ಯದಲ್ಲಿ ಸಂಗೀತಗಾರ ವಿಶೇಷಗಳನ್ನು ಕುರಿತು ತಿಳಿಸಲಾಗಿದೆ7 ಭಂಭ, ಮುಕುಂದ, ಮಚಲ್ ಕದಂಬ್ ಇತ್ಯಾದಿ ವಾದ್ಯಗಳನ್ನು ಹೆಸರಿದ್ದಾರೆ.
ಭಾರತೀಯ ಪರಂಪರೆಯಲ್ಲಿ ನಾರದ ಮುನಿಯು ಸಂಗೀತ ಶಾಸ್ತ್ರದ ನಿಯಮಗಳಲ್ಲಿ ಪಾಂಡಿತ್ಯ ಪಡೆದವರಲ್ಲಿ ಮೊದಲಿಗರಾದರೆ, ತುಂಬುರು ಮುನಿಯನ್ನು ಮೊದಲ ಗಾಯಕರು ಎಂದು ಪರಿಗಣಿಸಿಲಾಗಿದೆ. ಭರತ ಮುನಿಯು ತನ್ನ ನಾಟ್ಯಶಾಸ್ತ್ರದಲ್ಲಿ ಸಂಗೀತ ವಾದ್ಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾನೆ8 ಸರಸ್ವತಿಯು ಸಂಗೀತ ಮತ್ತು ನಾಟ್ಯಗಳ ಅಧಿದೇವತೆಯಾಗಿದ್ದಾಳೆ. ನಾಟ್ಯಶಾಸ್ತ್ರದಲ್ಲಿ ಹಲವು ವಿಚಾರಗಳ ಉತ್ತಮ ಸಮ್ಮಿಶ್ರಣದಿಂದ ರಸೋತ್ಪಾದನೆ ಉಂಟಾಗುತ್ತದೆ ಎಂದು ತಿಳಿಸುತ್ತಾ, ಅನುಭಾವ ಮತ್ತು ವ್ಯಭಿಚಾರಿಭಾವಗಳನ್ನು ವಿವರಿಸಲಾಗಿದೆ. ಅಭಿನವ ಗುಪ್ತನು ಸಂಗೀತಶಾಸ್ತ್ರಕ್ಕೆ ಹಲವು ಪ್ರಮುಖ ಕೊಡುಗೆಗಳನ್ನು ನೀಡಿದ್ದಾನೆ. ಕಾಳಿದಾಸನು ತನ್ನ ಪ್ರಮುಖ ಕೃತಿಗಳಲ್ಲಿ9 ಪರಿವಾದಿನಿ, ವೀಣಾ, ವಿಪಂಚಿ, ವೀಣಾ, ಪುಶ್ಕರ, ಮೃದಂಗ, ವಂಶೀ, ಶಂಖ ಮುಂತಾದ ವಾದ್ಯಗಳ ಬಗ್ಗೆ ವಿವರಣೆ ನೀಡುತ್ತಾನೆ.
ಭರತನು ತನ್ನ ನಾಟ್ಯಶಾಸ್ತ್ರದಲ್ಲಿ ಸಂಗೀತ ವಾದ್ಯಗಳನ್ನು ಘನವಾದ್ಯ, ಅವನದ್ದ ವಾದ್ಯ, ತಥವಾದ್ಯ, ಸುಶಿರವಾದ್ಯ  ಎಂದು ನಾಲ್ಕು ಭಾಗಗಳಾಗಿ ವಿವರಿಸಿದ್ದಾನೆ. ಘನ ವಾದ್ಯಗಳೆಂದರೆ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು), ಅವನದ್ಧ ವಾದ್ಯಗಳೆಂದರೆ-ತಾಡನ ವಾದ್ಯಗಳು, ತಥ ವಾದ್ಯಗಳೆಂದರೆ ತಂತೀ ವಾದ್ಯಗಳು, ಸುಶಿರ ವಾದ್ಯಗಳೆಂದರೆ- ಗಾಳೀ ವಾದ್ಯಗಳು, ಸಂಗೀತದ ಧ್ವನಿಯನ್ನು ಹೊರಡಿಸುವ ಉದ್ದೇಶದಿಂದ ಸಂಗೀತ ವಾದ್ಯವನ್ನು ತಯಾರಿಸಲಾಗಿದೆ. ಮೂಲತತ್ವದಲ್ಲಿ ಧ್ವನಿಯನ್ನು ಹೊರಡಿಸುವ ಯಾವುದೇ ವಸ್ತು ಸಂಗೀತ ವಾದ್ಯವಾಗುತ್ತದೆ. ಸಂಗೀತ ವಾದ್ಯಗಳ ಶೈಕ್ಷಣಿಕ ಅಧ್ಯಯನವನ್ನು ಅರ್ಗನಾಲಜಿ ಎನ್ನುತ್ತಾರೆ. ನೃತ್ಯದಂತಹ ಭಾವನಾತ್ಮಕ ಕಲೆಗಳಿಗೆ ಧ್ವನಿ ಒದಗಿಸುವ ಮಾನವರ ಪ್ರೇರಣೆಯ ಕಾರಣದಿಂದ ಇಂತಹ ವಾದ್ಯಗಳು ಕಾಣಿಸಿಕೊಂಡವು. ಕೆಲವು ಸಂಸ್ಕøತಿಗಳು ಅವರ ಸಂಗೀತ ವಾದ್ಯಗಳಿಗೆ ಅನುಷ್ಠಾನ ಕಾರ್ಯಗಳನ್ನು ನಿಗದಿಪಡಿಸಿದವು. ಹೊಯ್ಸಳರ ಕಾಲಕ್ಕಾಗಲೇ ಬಿದರಿನಿಂದ ತಯಾರಾದ ರಿಬ್ಬನ್ನಿನಂತಹ ಪೀಪಿಗಳು, ಕೊಳಲುಗಳು, ಕಹಳೆಯಂತಹ ವಾದ್ಯಗಳು ಅಭಿವೃದ್ಧಿಗೊಂಡಿರುವುದು ಶಿಲ್ಪಗಳಿಂದ ತಿಳಿದು ಬರುತ್ತದೆ. ವಿವಿಧ ವಾದ್ಯಗಳಲ್ಲಿ ಸ್ಪಷ್ಟ ವ್ಯತ್ಯಾಸವಿಲ್ಲದ ಕಾರಣ ಈ ವಾದ್ಯಗಳಿಗೆ ಹೆಸರನ್ನು ಕೊಡುವ ಮತ್ತು ಅವುಗಳನ್ನು ವಿವರಿಸಲು, ಉತ್ಸವ ಹಬ್ಬಗಳ ಸಂಬಂಧಿ ವಾದ್ಯಗಳನ್ನು ಪುನನಿರ್ಮಿಸಲು ಕಲಾಕೃತಿಗಳ ಮೊರೆ ಹೋಗಬೇಕಾಗಿದೆ. ದೊಡ್ಡ ತಾಳಗಳು, ಘಂಟೆಗಳು, ಹಲವು ರೀತಿಯ ತಂತೀ ವಾದ್ಯಗಳು ಹೊಯ್ಸಳರ ದೇವಾಲಯಗಳಲ್ಲಿವೆ. ನೆಟ್ಟಗಿನ ಕೊಳಲುಗಳು, ಬಾಗಿದ ಕೊಳಲುಗಳು, ತುತ್ತೂರಿ, ಕಹಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿವೆ. ಹಾವಾಡಿಗಳ ನಳಿಕೆಯ ಪುಂಗಿ, ಕಂಸಾಳೆಯಂತಹ ವಾದ್ಯ, ಸಿಲಿಂಡರಿನಾಕಾರದ ಡ್ರಮ್‍ಗಳು, “ಸಂಪ್ರದಾಯಬದ್ಧ” ಆಕಾರವನ್ನು ಪಡೆದ ವಾದ್ಯಗಳು ಇವೆ. ಈ ರೀತಿ ವಾದ್ಯಗಳಲ್ಲಿ ಹೊಯ್ಸಳ ಶಿಲ್ಪಗಳಲ್ಲಿ ಪ್ರಮುಖವಾಗಿ ಕಾಣುವ ಕೆಲವು ವಾದ್ಯಗಳನ್ನು ಇಲ್ಲಿ ವಿವರಿಸಲಾಗಿದೆ.
ವೀಣೆ : ಇದು ಒಂದು ಜನಪ್ರಿಯ ತಂತೀ ವಾದ್ಯ, ಸರಸ್ವತಿ ದೇವಿಯು ನುಡಿಸುತ್ತಿದ್ದ ವೀಣೆಯ ಹೆಸರು- ಸರಸ್ವತೀ ವೀಣೆ, ಇದರಲ್ಲಿ ಮೂರು ತಂತಿಗಳು, ಒಂದು ಮುಖ್ಯ ತಂತಿ ಇರುತ್ತದೆ. ಎಲ್ಲವೂ ಹಿತ್ತಾಳೆಯವು. ಸಪ್ತಸ್ವರದ ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸಲ್ಪಟ್ಟಿದೆ. ಹೊಯ್ಸಳ ದೇವಾಲಯಗಳಲ್ಲಿ ವೀಣೆಗಳು ಕಂಡು ಬಂದಿದ್ದು ಮೆಟ್ಟಲುಗಳುಳ್ಳದ್ದು, ಮತ್ತು ಮೆಟ್ಟಲುಗಳು ಇಲ್ಲದ್ದೂ ದೊರೆತಿದೆ. ವೀಣೆಯನ್ನು ಕುರಿತು ಋಗ್ವೇದ ಮತ್ತು ಯಜುರ್ವೇದಗಳು ಪ್ರಸ್ತಾಪಿಸಿವೆ. ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣನಾದ್ದರಿಂದ, ಇದಕ್ಕೆ “ರುದ್ರವೀಣೆ” ಎಂಬ ಹೆಸರು. ತುಂಬುರರು ನುಡಿಸುತ್ತಿದ್ದ ವೀಣೆಯ ಹೆಸರು “ಕಲಾವತೀ” ವಿಶ್ವಾವಸುವಿನ ವೀಣೆಯ ಹೆಸರು “ಬೃಹತೀ”, ನಾರದರು ನುಡಿಸುತ್ತಿದ್ದ ವೀಣೆಯ ಹೆಸರು “ಮಹತೀ” ರಾವಣನು ವೀಣೆಯ ತಂತಿಯೊಂದು ಕಿತ್ತುಹೋದಾಗ ತನ್ನ ದೇಹದ ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮಾಡಿ, ಶಿವನನ್ನು ಒಲಿಸಿಕೊಂಡನು, ಕಾಳಿದಾಸನು ತನ್ನ ಶ್ಯಾಮಲಾದಂಡಕದಲ್ಲಿ “ಮಾಣಿಕ್ಯವೀಣಾಂ” ಎಂಬ ಮಾಣಿಕ್ಯದಿಂದ ಅಲಂಕರಿಸಿರುವ ವೀಣೆಯನ್ನು ಶಾರದೆಯು ನುಡಿಸುತ್ತಾಳೆ ಎಂದು ವಿವರಿಸಿದ್ದಾನೆ.
ಪುರಾತತ್ವ ಶಾಸ್ತ್ರಜ್ಞರು, ಗುಪ್ತ ದೊರೆ-ಸಮುದ್ರಗುಪ್ತನು (ಕ್ರಿ.ಶ.330-375) ಒಂದು ರೀತಿಯ ವೀಣೆ ನುಡಿಸುತ್ತಿರುವ ನಾಣ್ಯವನ್ನು ಹೊರಡಿಸಿರುವುದನ್ನು ಕಂಡುಹಿಡಿದಿದ್ದಾರೆ. ಮೆಟ್ಟಲುಗಳು ಇರುವ ವೀಣಿಯನ್ನು ‘ಸಾರಿ’ ವೀಣೆ10. ಎಂದು, ಮೆಟ್ಟಲುಗಳು ಇಲ್ಲದ ವೀಣೆಯನ್ನು ‘ನಿಸಾರಿ’ ವೀಣೆ11 ಎಂದೂ ಕರೆಯಲಾಗಿದೆ. ಒಂದೇ ಮರದ ತುಂಡಿನಲ್ಲಿ ನಿರ್ಮಾಣವಾಗಿದ್ದಲ್ಲಿ `ಏಕಾಂತ’ ವೀಣೆ, ಎಂದೂ ಮೂರು ಮರದ ತುಂಡುಗಳನ್ನು ಬಳಸಿದ್ದಲ್ಲಿ `ಒಟ್ಟು’ ವೀಣೆ ಎಂದೂ ಕರೆಯುತ್ತಾರೆ.
ಮಹಾನಾಟಕ ವೀಣೆ: ಇದನ್ನು ವೀಣೆಯ ಇನ್ನೊಂದು ಪ್ರಭೇದವೆನ್ನಬಹುದು. ಇದು ಆಕಾರ ಮತ್ತು ರಚನೆಗಳಲ್ಲಿ ವೀಣೆಯಂತಿದ್ದರೂ, ಇದರಲ್ಲಿ ಮೆಟ್ಟಿಲುಗಳು ಇರುವುದಿಲ್ಲ. ಸ್ವರಸ್ಥಾನದಲ್ಲಿ ತಂತಿಯನ್ನೊತ್ತಲು ಮರದ ಗೋಟನ್ನು (ಸಿಲಿಂಡರಿನ ಆಕಾರದ ಮರದ ಚೂರು) ಬಳಸುವುದರಿಂದ ಇದಕ್ಕೆ ಗೋಟುವಾದ್ಯ ಎಂಬ ಹೆಸರು ಬಂದಿದೆ. ಇದರ ಧ್ವನಿ ವೀಣೆಗಿಂತ ಗಾಢ. ಇದರಲ್ಲಿ ಒಟ್ಟು 21 ತಂತಿಗಳಿರುತ್ತವೆ. ಯಾಜ್ಞಲ್ಕ್ಯನು ತನ್ನ ಸ್ಮøತಿಯಲ್ಲಿ’ ವೀಣಾ ವಾದನ ಕಥ ವಂಗ, ಶೃತಿ, ಜತಿ, ವಿಸರ್ಥ ತಲನ್‍ಜಾಪ್ರಯಾಸೇನ ಮೋಕ್ಷ ಮಾರ್ಗಂ ನಿಯಾಪತೀ ಎಂದು ಹೇಳಿದ್ದಾರೆ. ರಘುನಾಥ ವೀಣೆ ಎಂಬ ಹೆಸರು, ತಂಜಾವೂರಿನ ರಘುನಾಥನಾಯಕನ ಕಾಲದ ವೀಣೆಗೆ ಬಂದಿರಬಹುದು. ಶತತಂಕ್ರೀ ವೀಣೆಯು ಸಂತೂರಿನ ರೂಪದಲ್ಲಿದ್ದಿತು. ಸಪ್ತತಂತಿ ವೀಣೆಯು ಏಳು ತಂತಿಗಳನ್ನು ಹೊಂದಿತ್ತು. ಹೆಚ್ಚಾಗಿ ತಂತೀವಾದ್ಯಗಳ ಸಂಗೀತ ಮೇಳದ ಉನ್ನತಿಯಾದಂತೆ, ಗಾಳೀ ವಾದ್ಯಗಳಾದ ಕೊಳಲು, ಶಹನಾಯಿ, ಬಾನ್ಸುರಿ ಮುಂತಾದ ಸಂಗೀತ ಸಾಧನಗಳು ತಂತಿವಾದ್ಯಗಳ ಏಕತಾನಕೆಯಟಿಜಿಟಿu ಹೋಗಲಾಗಿಸಲು ಸಹಾಯಕವಾದವು.  ಈ ಕಾಲದ ವೀಣೆಗಳಲ್ಲೂ ಬಹು ಬಗೆಯವು ಕಂಡುಬಂದಿವೆ.
ಅವನದ್ಧ ವಾದ್ಯ
ಘಟಂ: ಇದು ಕರ್ನಾಟಕ ಶಾಸ್ತ್ರಿಯ ಸಂಗೀತದಲ್ಲಿ ಬಳಸುವ ಒಂದು ತಾಳವಾದ್ಯ. ಅನಾದಿ ಕಾಲದಿಂದಲೂ ಜಾನಪದ ವಾದ್ಯವಾಗಿ ಬಳಕೆಯಲ್ಲಿದೆ. ಇದನ್ನು ಈಗ ಕರ್ನಾಟಕದ ಸಂಗೀತದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ವಿಶೇಷ ಗುಣವುಳ್ಳ ಮಣ್ಣನ್ನು ಆಯ್ದು, ಹಲವು ತಿಂಗಳ ಕಾಲ ನೆನೆಸಿ, ನಂತರ ಕಬ್ಬಿಣದ ಪುಡಿಯೊಡನೆ ಕಲಸಿ, ಬೇಯಿಸಿ (ಬೆಂಕಿಯಲ್ಲಿ ಸುಟ್ಟು) ತಯಾರಿಸುತ್ತಾರೆ. ಎರಡು ಅಂಗೈ ಮತ್ತು ಬೆರಳುಗಳಿಂದ ಈ ವಾದ್ಯವನ್ನು ನುಡಿಸುತ್ತಾರೆ. ಇದು ಮೃದಂಗ ಹಾಗೂ ಖಂಜೀರದೊಂದಿಗೆ ನುಡಿಸಿದಾಗ ಸುಮಧುರನಾದ ಹೊರಹೊಮ್ಮಿಸುತ್ತದೆ.
ಮೃದಂಗ: ಇದು ಕರ್ನಾಟಕ ಸಂಗೀತದಲ್ಲಿ ಬಳಸುವ ಲಯ ವಾದ್ಯ. ಮೃದಂಗವನ್ನು ಮರ, ಚರ್ಮ ಮತ್ತು ಕರಣೆ ಕಲ್ಲು ಬಳಸಿ ತಯಾರಿಸುತ್ತಾರೆ. ಮೃದಂಗ ಎಂಬ ಹೆಸರು ‘ಮೃತ್’ ಮತ್ತು ‘ಅಂಗ’ ಎಂಬ ಎರಡು ಸಂಸ್ಕøತ ಪದಗಳಿಂದ ಬಂದಿದೆ. ಮೃತ್ ಎಂದರೆ ಮಣ್ಣು, ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಹಲವು, ಹೆಬ್ಬಲಸು ಸಂಪಿಗೆ, ತೇಗ, ಬೇವು ಮುಂತಾದ ಮರಗಳಿಂದ ತಯಾರಿಸಲಾಗುತ್ತದೆ. ಬಳಗೆ ಟೊಳ್ಳಾಗಿರುವ ಭಾಗಕ್ಕೆ `ಹೊಲವು’ ಅಥವಾ `ಕಳಸಿಗೆ’ ಎಂದು ಹೆಸರು. ಇದರ ಮಧ್ಯಭಾಗ ಉಬ್ಬಿ ಕಡೆಯ ಭಾಗದಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕಡೆಯುತ್ತಾರೆ. ಬಲಭಾಗದ ವ್ಯಾಸವು ಎಡಭಾಗಕ್ಕಿಂತ ಕಡಿಮೆ ಇರುತ್ತದೆ ಉಬ್ಬಿದ ಭಾಗವನ್ನು `ಹರಡ’ ಅಥವಾ `ಕಡಗ’ ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡೂ ಮುಖಗಳ ವ್ಯಾಸ ನೇರವಾಗಿದ್ದು ಮೃದಂಗದ ಶೃತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವ್ಯಾಸ ಹೆಚ್ಚಿದ್ದರೆ ತಗ್ಗು ಶೃತಿಗೆ ಹೊಂದಿಸಬಹುದು. ಕಡಿಮೆ ಇದ್ದರೆ ಹೆಚ್ಚು ಶೃತಿಗೆ ಹೊಂದಿಸಬಹುದು. ಬಲ ಮುಚ್ಚಿಗೆಗೆ ಮೇಕೆ ಹಾಗೂ ಹಸುವಿನ ಚರ್ಮ ಬೇಕಾಗುತ್ತದೆ. ಬಲ ಮುಚ್ಚಿಗೆಯಲ್ಲಿ ಮೂರು ಪದರಗಳು, ಎಡ ಮುಚ್ಚಿಗೆಯಲ್ಲಿ ಎರಡು ಪದರಗಳೂ ಇವೆ. ಇದಾದ ನಂತರ ಮುಚ್ಚಿಗೆಯ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಇದನ್ನು ‘ಇಂಡಿಗ’ ಎಂದು ಕರೆಯುತ್ತಾರೆ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ, ಉಳಿದ ಭಾಗಗಳನ್ನು ಕತ್ತರಿಸುತ್ತಾರೆ. ಹಲವು ಬಗೆಯ ತಾಳವಾದ್ಯಗಳು ಈ ಶಿಲ್ಪಗಳಲ್ಲಿ ಕಂಡುಬಂದಿವೆ.
ತಾಳವಾದ್ಯ
ಗೆಜ್ಜೆ: ಒಂದು ತಾಳವಾದ್ಯ ಹಾಗೂ ಆಭರಣ. ಕಂಚಿನ ಟೊಳ್ಳಾದ ದುಂಡು ಗುಳಿಗೆಯ ಅರ್ಧಭಾಗದವರೆಗೂ ಬಾಯಿ ಬಿಡಿಸಿ, ಒಳಗೆ ಕಲ್ಲಿನ ಸಣ್ಣ ಸಣ್ಣ ಚೂರುಗಳನ್ನು ಸೇರಿಸಿ, ಗುಳಿಗೆಯ ಇನ್ನೊಂದು ಬದಿಗೆ ಸಣ್ಣ ಉಂಗುರವನ್ನು ಅಳವಡಿಸಿರುತ್ತಾರೆ. ಇದನ್ನು ಭಾಗವತರು, ನಟರು, ನಾಟ್ಯ ಮಾಡುವ ನರ್ತಕರು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಹಾವಾಡಿಗರೂ, ದೊಂಬರು, ಭಜನೆಗೋಷ್ಠಿಯವರೂ ಇದನ್ನು ಬಳಸುತ್ತಾರೆ.
ತಬಲ: ಒಂದು ಜನಪ್ರಿಯ ತಾಳವಾದ್ಯ ಈ ವಾದ್ಯದಲ್ಲಿ ಎರಡು ಡೊಳ್ಳುಗಳಿದ್ದು ಅವುಗಳನ್ನು ಕೈ ಮತ್ತು ಬೆರಳುಗಳಿಂದ ನುಡಿಸಲಾಗುತ್ತದೆ.
ಡೋಲು: ಇದು ನಾದ ಸ್ವರದೊಡನೆ ಉಪಯೋಗಿಸುವ ತಾಳವಾದ್ಯ ಇದು ಆಕಾರದಲ್ಲಿ ಮೃದಂಗವನ್ನು ಹೋಲುತ್ತದೆ. ಇದರ ಆಕಾರ ದೊಡ್ಡದು. ಹಲಸು ಮರದ ಒಂದೇ ತುಂಡನ್ನು ಕೊರೆದು ಮಾಡಿರುತ್ತಾರೆ. ಎರಡೂ ಕಡೆಗಳಲ್ಲಿ ಹಾಕಿರುವ ವೃತ್ತಾಕಾರದ ಹದ ಮಾಡಿದ ಚರ್ಮಗಳನ್ನು ಚರ್ಮದ ಪಟ್ಟಿಗಳಿಂದ ಎಳೆದು ಕಟ್ಟಿರುತ್ತಾರೆ. ಇದನ್ನು ಬಿಗಿ ಅಥವಾ ಸಡಿಲ ಮಾಡುವುದರಿಂದ ಬೇಕಾದ ಶೃತಿಯನ್ನು ಪಡೆಯಬಹುದು. ಇದರ ಎಡಭಾಗವನ್ನು ಸಣ್ಣ ಕೋಲಿನಿಂದಲೂ, ಬಲ ಭಾಗವನ್ನು ಬೆರಳುಗಳಿಂದಲೂ ನುಡಿಸುತ್ತಾರೆ ಕೊರಳಿಗೆ ಬಟ್ಟೆಯಿಂದ ಇಳಿಬಿಟ್ಟು ನುಡಿಸುತ್ತಾರೆ.
ಗಾಳಿ ವಾದ್ಯ
ಭಾರತದ ಅತ್ಯಂತ ಪ್ರಾಚೀನ ಗಾಳಿ ವಾದ್ಯಗಳಲ್ಲಿ ಕೊಳಲು ಒಂದು. ಸಂಗೀತ ರತ್ನಾಕರದಲ್ಲಿ 14 ಬಗೆಯ ಕೊಳಲನ್ನು ಹೇಳಿದೆ. ಅವುಗಳ ಉದ್ದ ಬಂದಂಗುಲದಿಂದ-ಹದಿನೆಂಟು ಅಂಗುಲದವರೆಗೆ ಇರುತ್ತದೆ. ಈ ಬಗೆಯ ಕೊಳಲುಗಳು ಹೊಯ್ಸಳ ಶಿಲ್ಪಗಳಲ್ಲಿ ದೊರೆತಿವೆ.
ಕೊಳಲು: ಬಿದಿರಿನ ಒಂಟಿ ವಿಸ್ತಾರದಿಂದ ತಯಾರಿಸಲಾಗುವ ಗಾಳಿವಾದ್ಯ. ಏಳು ತೆರೆದ ಬೆರಳ ರಂಧ್ರಗಳಿರುವ ವಾದ್ಯ. ಗೋವಳರು ಮತ್ತು ಗ್ರಾಮೀಣ ಪರಂಪರೆಯೊಂದಿಗೆ ಇರುವ ಪ್ರಾಚೀನವಾದ ಸಂಗೀತ ವಾದ್ಯ.
ನಾಗಸ್ವರ: ಇದು ಪ್ರಮುಖ ಮಂಗಳವಾದ್ಯ. ಅತ್ಯಂತ ಗಟ್ಟಿಯಾದ ಸ್ವರವುಳ್ಳ ಅಲೋಹ ವಾದ್ಯವಾಗಿದೆ. ಇದು ಮೇಲ್ಭಾಗದಲ್ಲಿ ಸಣ್ಣ ಆಕಾರವಿದ್ದು ಕೆಳಭಾಗಕ್ಕೆ ದೊಡ್ಡದಾಗಿರುವ ಮರದ ಕೊಳವೆಯಾಗಿದೆ. ಇದರ ಉದ್ದವು ಸುಮಾರು ಎರಡದಿಂದ ಎರಡೂವರೆ ಅಡಿಗಳಿರುತ್ತದೆ. ವಾದ್ಯದ ಮೇಲ್ಭಾಗದಲ್ಲಿ ಲೋಹದ ಮುಖವಿರುತ್ತದೆ. ಕೆಳಭಾಗದಲ್ಲಿ ಗಂಟೆಯ ಆಕಾರದ ಲೋಹದ ಭಾಗವನ್ನು ಸೇರಿಸಿರುತ್ತಾರೆ. ಇದರ ಮೇಲ್ಭಾಗದಲ್ಲಿ ಏಳು ರಂಧ್ರಗಳು ಕೆಳಭಾಗದಲ್ಲಿ ಐದು ರಂಧ್ರಗಳು ಇರುತ್ತದೆ.
ಕೊಂಬು, ಕಹಳೆ, ಶಂಖ, ಭಜಂತ್ರಿ ಮುಂತಾದ ವಾದ್ಯಗಳು ಹೊಯ್ಸಳ ಶಿಲ್ಪಗಳಲ್ಲಿ ಹೇರಳವಾಗಿವೆ. ರಚನೆಯ ದೃಷ್ಟಿಯಿಂದ ಬಹಳ ಸರಳವಾದ ಜನಪದ ವಾದ್ಯವಿದು. ಹಸರೇ ಸೂಚಿಸುವ ಕೋಣ ಇಲ್ಲವೇ ಎಮ್ಮೆಯ ವಕ್ರವಾಗಿ ಬಾಗಿರುವ ಕೊಂಬಿನ ಚೂಪಾದ ಭಾಗದಲ್ಲಿ ಒಂದು ರಂಧ್ರ ಮಾಡಿದರೆ ಕೊಂಬುವಾದ್ಯ ಸಿದ್ದ. ರಂಧ್ರಕ್ಕೆ ಬಾಯಿಟ್ಟು ಜೋರಾಗಿ ಊದಿದರೆ, ಕೊಂಬು ಡೊಳ್ಳಾಗಿರುವುದರಿಂದ ಅದರೊಳಗಿಂದ ಗಾಳಿ ಹಾದು ಬರುವಾಗ ಕಂಪನಗಳುಂಟಾಗಿ ಧ್ವನಿ ಹೊರಡುತ್ತದೆ. ಕೊಂಬು ವಾದ್ಯದ ಮುಂಭಾಗ ಅಗಲವಾಗಿರುವುದರಿಂದ ಧ್ವನಿ ವರ್ಧಿಸುತ್ತಾ ಬಹುದೂರದವರೆಗೆ ಅದು ಕೇಳುತ್ತದೆ.
ಕಹಳೆ: ಆಕಾರದಲ್ಲಿ ಕಹಳೆಯಂತೆಯೇ ಇದ್ದರೂ ಅದಕ್ಕಿಂತ ಹೆಚ್ಚು ಉದ್ದ ಮತ್ತು ವಕ್ರವಾಗಿರುತ್ತದೆ. ಇದನ್ನು ಹಿತ್ತಾಳೆಯ ಕೊಳವೆಗಳಿಂದ ರಚಿಸಿರುತ್ತಾರೆ. ಇದು ಇಂಗ್ಲೀಷ್‍ನ S ಆಕಾರದಲ್ಲಿ ಇರುತ್ತದೆ. ಬಾಯಿಗೆ ತಗುಲಿಸಿ ಕೊಳವೆಯ ವ್ಯಾಸ ಕಡಿಮೆ ಇದ್ದು, ಕೊನೆಯ ಊದುವ ಕೊಳವೆಯ ಮುಂಭಾಗ ಹೆಚ್ಚು ಅಗಲವಾಗಿರುತ್ತದೆ. ಕೊಂಬುಗಳು ಕರೆದಾವ ಕಾಳೆಗಳು ಉದ್ಯಾವ ದಿಮ್ಮಿ ಕರಡೆಲ್ಲ ಕಣಕಣಿಸಿ ನಿಬ್ಬಂದ ಅಬ್ಬರ ಸಂಭ್ರಮ ಹೇಳಾವ ಎಂಬ ತ್ರಿಪದಿಯಿಂದ ಕೊಂಬು, ಕಹಳೆಗಳು ಸಾಂಸ್ಕøತಿಕ ಸಂಧರ್ಭದಲ್ಲಿ ಬಳಸುತ್ತಿದ್ದ ವಾದ್ಯಗಳೆಂದು ತಿಳಿಯುತ್ತದೆ. ಹೆಗ್ಗಹಳೆ, ಚಿನಿಕಹಳೆ, ರಣಕಹಳೆ, ಜವಳಿಕಹಳೆ, ಇರುಗಹಳೆ ಇತ್ಯಾದಿ ಹಲವಾರು ಬೇರೆ ಬೇರೆ ಬಗೆಯ ಕಹಳೆಗಳ ಉಲ್ಲೇಖ ಶಾಸನಗಳಲ್ಲಿ ಕಂಡುಬರುವುದು ಹೊಯ್ಸಳ ಶಿಲ್ಪಗಳಲ್ಲಿ ಉಲ್ಲೇಖವಾಗಿವೆ.
ಶಂಖ: ಇದು ಬಹಳ ಪ್ರಾಚೀನ ವಾದ್ಯವಾಗಿದ್ದು, ಸಾಮವೇದದಲ್ಲಿ ಇದರ ಉಲ್ಲೇಖವಿದೆ. ಪ್ರಕೃತಿದತ್ತ ವಾದ್ಯವಿದು. ಇದರ ಒಳಭಾಗದಲ್ಲಿ ನೈಸರ್ಗಿಕ ಸುರುಳಿಯಾಕಾರದ ಟೊಳ್ಳು ಭಾಗವಿರುತ್ತದೆ. ಅದರ ಮುಚ್ಚಿದ ಭಾಗದಲ್ಲಿ ಒಂದು ರಂಧ್ರ ತೆಗೆದರೆ ಸಾಕು. ಉಸಿರುವಾದ್ಯವಾದ ಶಂಖ ಸಿದ್ದ. ರಂಧ್ರದ ಮೂಲಕ ಊದಿದ ಗಾಳಿಯು ಸುರುಳಿಗಳಲ್ಲಿ ಸುತ್ತುತ್ತ ಕಂಪನ ಪಡೆದು ಧ್ವನಿಯಾಗಿ ಹೊರಹೊಮುತ್ತದೆ. ದೇವಾಲಯಗಳಲ್ಲಿ ದೇವರ ಪೂಜಾ ಸಂದರ್ಭದಲ್ಲಿ ಶಂಖ ಊದುವುದು ರೂಢಿ. ವಿಷ್ಣು ಶಂಖಧಾರಿ. ಹಿಂದೂಗಳಲ್ಲಿ ಶಂಖಕ್ಕೆ ಒಂದು ಬಗೆಯ ಧಾರ್ಮಿಕ ಮಹತ್ವವಿದೆ. ಈ ಲೇಖನದೊಂದಿಗೆ ನೀಡಿರುವ ಶಿಲ್ಪಗಳ ಚಿತ್ರಗಳು ನೂರಾರು ರೀತಿಯ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಕಾರರನ್ನು ನಮಗೆ ಪರಿಚಯಿಸುತ್ತವೆ. ಅವು ಗಾಯನ ಮತ್ತು ನರ್ತನದಲ್ಲಿ ಸಂಪೂರ್ಣವಾಗಿ ಮೈಮರೆತು, ಆನಂದಿಸುತ್ತಿರುವ ಭಂಗಿಗಳು, ಹೊಯ್ಸಳರು ಸಂಗೀತ ಮತ್ತು ಶುದ್ಧ ಮನೋರಂಜನೆಯನ್ನು ನೀಡುವುದರಲ್ಲಿ ಅಗ್ರಗಣ್ಯರಾಗಿದ್ದರು ಎಂಬ ವಾಸ್ತವತೆಯನ್ನು ಸೂಚಿಸುತ್ತವೆ. ನಾನು ಕೆಲವು ವಾದ್ಯಗಳನ್ನು ಪ್ರಮುಖ ಸಂಗೀತಕಾರರನ್ನು ಕಂಡು ವಿಭಜಿಸಲು ಪ್ರಯತ್ನಿಸಿದ್ದೇನೆ. ಮಿಕ್ಕವನ್ನು ಇನ್ನೂ ಹೆಚ್ಚಿನ ಅಧ್ಯಯನಕ್ಕಾಗಿ ಮೀಸಲಿಡುತ್ತಿದ್ದೇನೆ.
1. ಋಗ್ವೇದ ಸಂಹಿತ ಸುಮಾರು ಕ್ರಿ.ಪೂ. 1500ರಿಂದ 500ರ ಒಳಗೆ ರಚನೆಗೊಂಡಿದೆ. ಇಲ್ಲಿನ ಶ್ಲೋಕಗಳು ಕರ್ತೃಗಳ ಕುಲಗಳನ್ನು ಆಧರಿಸಿ ಜೋಡಿಸಲ್ಪಟ್ಟಿವೆ. ಈ ಜೋಡಣೆಯ ಒಟ್ಟು ಸ್ವರೂಪವೇ ಸಂಹಿತ.
2.   ಶತಪಥ ಬ್ರಾಹ್ಮಣವು ಸಪ್ತ ಋಷಿಗಳನ್ನು ಹೆಸರಿಸುತ್ತದೆ. ಅವರು: 1. ಗೌತಮ, 2. ಭಾರಧ್ವಾಜ, 3. ವಿಶ್ವಾಮಿತ್ರ, 4. ಜಮದಗ್ನಿ, 5. ವಶಿಷ್ಠ, 6. ಕಶ್ಯಪ, 7. ಅತ್ರಿ.
3. ಸ್ವರ, ವ್ಯಂಜನ ಮತ್ತು ಅನುನಾಸಿಕಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದಲ್ಲದೆ, ವರ್ಣ, ಸ್ವರ, ಮಾತ್ರ, ಬಲ, ಸಮ ಮತ್ತು ಸಂತನಗಳನ್ನು ವಿವರಿಸುತ್ತದೆ.
4. ಆಚಾರ್ಯ, ಪ್ರವಕ್ತ, ಶ್ರೋತ್ರೀಯ ಮತ್ತು ಅಧ್ಯಾಪಕ.
5. ಶಿಷ್ಯರಲ್ಲಿ ಎರಡು ವಿಧಗಳನ್ನು ಗುರುತಿಸಲಾಗಿದೆ. ಗುರುದಕ್ಷಿಣೆಯ ಮುಖೇನ ಶಿಷ್ಯರಾದವರನ್ನು-ಆಚಾರ್ಯಭಾಗ ಎಂದೂ, ಗುರು-ಕುಲದ ಕೈಂಕರ್ಯವನ್ನು ಮಾಡುತ್ತಾ, ಶಿಷ್ಯರಾದವÀರನ್ನು ಧರ್ಮ-ಶಿಷ್ಯ ಎಂದು ಗುರುತಿಸಲಾಗಿದೆ.
6. ಮಾರ್ಗ ಪದ್ಧತಿಯು ಬ್ರಹ್ಮ ಮತ್ತು ಇತರ ದೇವತೆಗಳಿಂದ ಪ್ರಚುರಪಡಿಸಲ್ಪಟ್ಟಿದ್ದು, ಇದನ್ನು ಮನೋರಂಜನೆಗೆ ಬಳಸಲ್ಪಡುತ್ತಿರಲಿಲ್ಲ, ಬದಲಾಗಿ ದೇವತೆಗಳನ್ನು ಸಂಪ್ರೀತಗೊಳಿಸಲು ಬಳಸುತ್ತಿದ್ದರು.
7. ಸ್ಥಾನಂಗ ಸಊತ್ರ, ನಾರದೀಯ ಶಿಕ್ಷ, ರಾಯಪ್ಪ ಸೇನಜನ ಕೃತಿಗಳಲ್ಲಿ ವಾದ್ಯಗಳನ್ನು 18 ವಿಭಾಗಳಾಗಿ ವಿಂಗಡಿಸಿದ್ದಾರೆ. 63 ವಾದ್ಯಗಳನ್ನು ಹೆಸರಿಸಿದ್ದಾರೆ.
8. ಸುಮಾರು ಕ್ರಿ.ಪೂ.200ಯಿಂದ ಕ್ರಿ.ಶ.200ರ ನಡುವಿನ ಕಾಲದಲ್ಲಿ ಭರತನ ನಾಟ್ಯಶಾಸ್ತ್ರ ರಚನೆಯಾಗಿದೆ.
9. ಕಾಳಿದಾಸರು ವಿಕ್ರಮಾದಿತ್ಯನ ಆಸ್ಥಾನಕವಿಯಾಗಿದ್ದು (ಕ್ರಿ.ಶ.380-413) ಮಹಾಕಾವ್ಯಗಳನ್ನು ರಚಿಸಿದ್ದಾನೆ. ಆತನ ಮೇಘದೂತ, ರಘುವಂಶ, ಅಭಿಜ್ಞಾನ ಶಾಕುಂತಲಾ ಮೊದಲಾದ ಗ್ರಂಥಗಳು ಶಾಸ್ತ್ರೀಯ ಸಂಗೀತ ಮತ್ತು ವಾದ್ಯಗಳನ್ನು ವಿವರಿಸುತ್ತವೆ. ಹಲವು ಬಗ್ಗೆ ಹಾಡುಗಳ ವಿಧಗಳು ಅಲ್ಲಿ ಕಂಡುಬರುತ್ತವೆ. ಕಾಕಳೀಗೀತ, ಸ್ತ್ರೀಗೀತ, ಅಪ್ಸರಗೀತ, ಮೂರ್ವನ, ಸ್ವರಸಪ್ತಕ, ತಾನ ಮತ್ತು ಧ್ವನಿಯನ್ನು ಕುರಿತು, ಕಿನ್ನರ ಕಂಠ ವಲ್ ಗುವಗಮ್ ಎಂಬ ವಿಧಾನಗಳನ್ನು ತಿಳಿಸಿದ್ದಾನೆ.
10. ಸಾರಿ ವೀಣೆಗಳು ಬೇಲೂರು, ಹಳೇಬೀಡುಗಳ ಭಿತ್ತಿಗಳಲ್ಲಿ ಕಂಡುಬಂದಿವೆ. ಸಾರಿ ವೀಣೆಗಳು 24 ಮೆಟ್ಟಿಲುಗಳನ್ನು ಹೊಂದಿವೆ. ಇದಕ್ಕೆ ‘ಮೇರು’ ಎಂದು ಕರೆಯುವರು.

ಃibiಟiogಡಿಚಿಠಿhಥಿ
ಆಚಿಥಿ. ಅ.ಖ.,ಖಿhe musiಛಿಚಿಟ iಟಿsಣಡಿumeಟಿಣs oಜಿ souಣheಡಿಟಿ Iಟಿಜiಚಿ ಚಿಟಿಜ ಣhe ಆeಛಿಛಿಚಿಟಿ, ಆeಟhi,1974.
Sಚಿmbಚಿmuಡಿಣhಥಿ P., ಅಚಿಣಚಿಟogue oಜಿ ಣhe ಒusiಛಿಚಿಟ iಟಿsಣಡಿumeಟಿಣs exhibiಣeಜ iಟಿ ಣhe ಉoveಡಿಟಿmeಟಿಣ ಒuseum, ಒಚಿಜಡಿಚಿs-1996.
ಖಿಚಿಡಿಟeಞಚಿಡಿ.ಉ., ಒusiಛಿಚಿಟ Iಟಿsಣಡಿumeಟಿಣs iಟಿ Iಟಿಜiಚಿಟಿ Sಛಿuಟಠಿಣuಡಿe,Pooಟಿಚಿ-1972.
ಒಚಿಡಿಛಿeಟ-ಆubois ಅ., ಐes iಟಿsಣಡಿumeಟಿಣs ಜe musique ಜe ಟ Iಟಿಜe ಚಿಟಿಛಿieಟಿಟಿe, Pಚಿಡಿis, 1943.
ಏಡಿishಟಿಚಿmuಡಿಣhಥಿ .ಏ., ಂಡಿಛಿhಚಿeoಟogಥಿ oಟಿ Iಟಿಜiಚಿಟಿ iಟಿsಣಡಿumeಟಿಣs, ಆeಟhi-1985.
ಉiಜಿಣ Siಡಿomಚಿಟಿಥಿ., ಏಚಿಟಥಿಚಿಟಿಚಿ ಒಚಿಟಿಣಚಿಠಿಚಿs oಜಿ ಣhe 16ಣh  ಅeಟಿ-ಒಚಿಜಡಿಚಿs ಅhಡಿisಣiಚಿಟಿ ಅoಟಟege ಒಚಿgಚಿziಟಿe, ಗಿoಟ-46-1977.
ಃoಟಿಟಿie ಅ Wಚಿಜe., ಒusiಛಿ iಟಿ Iಟಿಜiಚಿ, 2004-ಒಚಿಟಿohಚಿಡಿ ಠಿubಟiಛಿಚಿಣioಟಿs.
P.Sಚಿmbಚಿmuಡಿಣhಥಿ., ಊisಣoಡಿಥಿ oಜಿ Iಟಿಜiಚಿಟಿ ಒusiಛಿ, 2005-ಖಿhe Iಟಿಜiಚಿಟಿ musiಛಿ ಠಿubಟishiಟಿg ಊouse.
ಉeeಣhಚಿ ಖಚಿರಿಚಿgoಠಿಚಿಟ., ಒusiಛಿ ಖiಣuಚಿಟs iಟಿ ಣemಠಿಟes oಜಿ Souಣh Iಟಿಜiಚಿ, ಗಿoಟ-1-ಆ.ಞ.Pಡಿiಟಿಣತಿoಡಿಟಜ.
ಖ.ಇ.ಖies.,ಖಿhe ಛಿuಟಣuಡಿಚಿಟ seಣಣiಟಿgs oಜಿ Souಣh Iಟಿಜiಚಿಟಿ ಒusiಛಿ, ಂsiಚಿಟಿ ಒusiಛಿ-uಟಿiveಡಿsiಣಥಿ oಜಿ ಖಿexಚಿs Pಡಿess.
ಊiggiಟಿs ಎ.ಃ., Peಡಿಜಿoಡಿmiಟಿg ಚಿಡಿಣs iಟಿ Iಟಿಜiಚಿ, ಇssಚಿಥಿs oಟಿ ಒusiಛಿ, ಆಚಿಟಿಛಿe ಚಿಟಿಜ ಆಡಿಚಿmಚಿ.

 ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಬೆಂಗಳೂರು-560001.
                                 
ಈಟuಣe-ಊoಥಿsಚಿಟeshತಿಚಿಡಿಚಿ ಣemಠಿಟe-       ಂmಡಿuಣಚಿಠಿuಡಿಚಿ-ಂmಡಿuಣeshತಿಚಿಡಿಚಿ ಣemಠಿಟe
ಊಚಿಟebiಜu-ಓIಆಊI

Friday, August 22, 2014

ಸಾಹಿತ್ಯ ಸಾಕ್ಷಿ ಪ್ರಜ್ಞೆ ಅಸ್ತಂಗತ






ಅನಂತ ಯಾತ್ರೆ ಅಂತ್ಯ.



ಕನ್ನಡ ಸಾಹಿತ್ಯ ಜಗತ್ತಿನ ಮೇರುಶಿಖರ ಉರುಳಿದೆ. ಸಾಹಿತ್ಯ, ವಿಚಾರವಾದ, ರಾಜಕೀಯ ಮತ್ತು ಸಮಾಜಿಕ ವಿಷಯಗಳ ಅಂತರ್ಸಾಕ್ಷಿ ಮೂಕವಾಗಿದೆ.. ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದ್ದ ಆರು ದಶಕಗಳಿಗೂ ಮಿಕ್ಕಿ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಬಹುತೇಕ ಸಾಹಿತಿಗಳಂತೆ ದಂತದ ಗೋಪುರದಲ್ಲಿ ಕುಳಿತು ತಮ್ಮ ಸಾಹಿತ್ಯ ಲೋಕದಲ್ಲಿಯೇ ಲೀನವಾಗದೆ. ನಾಡು, ನುಡಿ,ಯ ವಿಷಯಕ್ಕೆ ಸದಾಮಿಡಿಯುತಿದ್ದ  ಪ್ರಗತಿಪರ ಚಿಂತಕ , ವಿಚಾರವಾದಿ  ಸಮಾಜಮುಖಿ ಪೀಠ ಪ್ರಶಸ್ತಿ ವಿಜೇತ ಉಡುಪಿ ರಾಜ ಗೋಪಾಲಾಚಾರ್ಯ ಅನಂತಮೂರ್ತಿ  ಇನ್ನಿಲ್ಲ.
ಯುವ ಅನಂತ ಮೂರ್ತಿ 
ಅವರ ವಂಶಜರ ಮೂಲ ದಕ್ಷಿಣ ಕನ್ನಡ ಜಿಲ್ಲೆಯಾದರೂ ಜನಿಸಿದ್ದು ಲೋಹಿಯಾವಾದದ ಜನಪರ ಚಳುವಳಿಯ  ತವರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಲಿ ತಾಲೂಕಿನ ಮೇಳಿಗೆ  ಗ್ರಾಮದಲ್ಲಿ. ಜನನ   ೨೧, ಡಿಸೆಂಬರ್ ೧೯೩೨ ರಂದು.. ಮನೆತನ ಕರ್ಮಠ ಬ್ರಾಹ್ಮಣರದು . ಪ್ರಾಥಮಿಕ ಮತ್ತು ಹೈಸ್ಕೂಲು ಶಿಕ್ಷಣ ತೀರ್ಥಹಳ್ಳಿ ತಾಲೂಕು ದೂರ್ವಾಸ ಪುರದಲ್ಲಿ. ಮೈಸೂರಿನಲ್ಲಿ ಮಾಸ್ಟರ್‌ ಡಿಗ್ರಿ ಪಡೆದರುಅವರ ಮೈಸೂರುವಾಸ ಅನೇಕ ಉತ್ತಮ ಗೆಳೆಯರನ್ನು  ಒದಗಿಸಿತು ಕೆ. ವಿ ಸುಬ್ಭಣ್ಣ, ಎಚ್ ಎಸ್ ಬಿಳಿಗಿರಿ, ತೇಜಸ್ವಿ, ಸದಾಶಿವ, ವಿಶ್ವನಾಥ ಮಿರ್ಲೆ ಜಿ.ಎಚ್. ನಾಯಕ , ಡಾ, ರತ್ನ ಮೊದಲಾದ ಗೆಳೆಯರು   ತಿಂಗಳಿಗೊಂದು ಸಲ ವಿಮರ್ಶಕ ವೃಂದ ಎಂಬ ಹೆಸರಲ್ಲಿ ಸೇರಿ ಸಾಹಿತ್ಯ ಚರ್ಚೆಮಾಡುತಿದ್ದರು. ಗೋಪಾಲಕೃಷ್ಣ ಅಡಿಗರೂ ಅಲ್ಲಿ ಹಲವು ಸಲ ಕವನವಾಚನೆ ಮಾಡಿ ಚರ್ಚೆಯಲ್ಲಿಭಾಗವಹಿಸುತಿದ್ದರು.
ಸಿ.ಡಿ ಎನ್‌ , ಭರತರಾಜ್ ಸಿಂಗ್,  ಎಸ್ ವಿ ರಂಗಣ್ನ ಅವರಿಂದ ಇಂಗ್ಲಿಷ್ ಕಲಿಕೆ. ಎಂ. ಎ ನಂತರ ಕಾಮನ್‌ವೆಲ್ತ್ತ್‌  ವಿದ್ಯಾರ್ಥಿ ವೇತನ ಪಡೆದು  ಇಂಗ್ಲೇಂಡಿನ ಬರ್ಮಿಂಗ್‌ಹ್ಯಾಂ ನಲ್ಲಿ ಪಿ. ಎಚ್ ಡಿ   ಪಡೆದರು..ಅವರ ಉನ್ನತ ಅಧ್ಯಯನದ ಮಾಹಾಪ್ರಬಂಧ ’Politics and fiction of 1930’s’- ಸಾಹಿತ್ಯ ಮತ್ತು ಜೀವನ ಯಾತ್ರೆಯ ಮುನ್ಸೂಚಿ.


             ಪ್ರೌಢ ಅನಂತ ಮೂರ್ತಿ
ಸಂಪ್ರದಾಯಸ್ಥ ಕುಟುಂಬದಲ್ಲಿ ಜನವಾದ್ದರಿಂದ ಎಳವೆಯಲ್ಲಿಯೇ ಸಂಸ್ಕೃತ ಜ್ಞಾನ ಕರಗತ. ಹದಿಹರೆಯದಲ್ಲಿ ಲೋಹಿಯಾವಾದಿ ಗೋಪಾಲಗೌಡರ ಸಂಪರ್ಕ. ಕೊಣಂದೂರು ಲಿಂಗಪ್ಪ, ಜೆ. ಎಚ್ ಪಾಟಿಲರ  ಸಹವಾಸದಿಂದ ಸಮಾಜವಾದಿ ಚಳುವಳಿಗಳಲ್ಲಿ ಕ್ರಿಯಾಶೀಲ. ವಿಚಾರವಾದದ ವಕ್ತಾರ. ಬರಿ ಮಾತಿನಲ್ಲಿ ಮಾತ್ರವಲ್ಲ ಕೃತಿಯಲ್ಲೂ ಅವರು ನಂಬಿಕೆಯಂತೆ ನಡೆದವರು. ವೈದಿಕ ಹಿನ್ನೆಲೆಯ ಕುಟುಂದ ಪ್ರತಿಭಟನೆಯ ನಡುವೆಯೂ ಪಾಶ್ಚಾತ್ ಜೀವನಶೈಲಿಯ ಅಳವಡಿಕೆ.  ಸಾಧಾರಣ ನಿಲುವಿನ ಉತ್ತಮ ಮೈಕಟ್ಟಿನ ಸುಂದರ ಅನಂತ ಮೂರ್ತಿಯವರು  ಉಡುಗೆ ತೊಡುಗೆಯಲ್ಲಿ ಸೊಗಸುಗಾರರು. ಕುಡಿತ ಮಾಂಸ ಸೇವನೆಮಾಡಿ ಸಭ್ಯರಂತೆ ಸೊಗುಹಾಕುವ ಆಷಾಡಭೂತಿಗಳಲ್ಲ. ಇದ್ದುದನ್ನು  ಒಪ್ಪಿಕೊಳ್ಳುವ ಎದೆಗಾರಿಕೆ. ತಪ್ಪನ್ನು ಒಪ್ಪಿಕೊಳ್ಳುವ ಪ್ರಾಂಜಲತೆ.ಅವರ ವಿಶೇಷತೆ.
 ..ಅವರ ಬಾಳ ಸಂಗಾತಿ ಎಸ್ತರ್‌  ಅವರನ್ನು ಹಾಸನದಲ್ಲಿ  ಬೋಧಕರಾಗಿದ್ದಾಗಲೇ  ಭೇಟಿಯಾದರೂ .  ಅಂತರ್‌ ಧಾರ್ಮಿಕ ವಿವಾಹಕ್ಕೆ ವರ್ಷಗಟ್ಟಲೇ ಕಾದು ೧೯೫೬ ರಲ್ಲಿ ಮದುವೆಯಾದರು... ಅವರ ಸುಮಾರು ಅರ್ಧಶತಕಕ್ಕೂ ಮಿಕ್ಕಿದ  ಸಾರ್ಥಕ ದಾಂಪತ್ಯದ ಫಲ ಇಬ್ಬರು ಮಕ್ಕಳು. ಶರತ್‌ ಮತ್ತುಅನುರಾಧ.
ಬಾಳ ಸಂಗಾತಿ ಎಸ್ತರ್‌ ಒಡನೆ
 ಬಾಲ್ಯದಲ್ಲೇ ಸಾಹಿತ್ಯಾಸಕ್ತಿ ಇದ್ದಿತು.ಶಾಲಾಪತ್ರಿಕೆ  ’ ತರಂಗಿಣಿ’ ಪ್ರಾರಂಭಿಸಿ   ಕನ್ನಡ ಇಂಗ್ಲಿಷ್ ಮತ್ತು ಸಂಸ್ಕೃತ  ಬರಹಗಳನ್ನು ಪ್ರಕಟಿಸಿದ್ದರು.ಇವರ ಎಳವೆಯಲ್ಲಿಯೇ ಪ್ರಾರಂಭವಾದ ಸಾಹಿತ್ಯ ಕೃಷಿ  ಸುಮಾರು ಅರವತ್ತು ದಶಕಗಳ ಕಾಲ ಸಮೃದ್ಧವಾಗಿ ಸಾಗಿತು. ಮೊದಲ ಕೃತಿ ಹೊರ ಬಂದಿದ್ದು ಅವರ ಇಪ್ಪತ್ತಮೂರನೆಯ ವಯಸ್ಸಿನಲ್ಲಿ  . ೧೯೫೫ರಲ್ಲಿ "ಎಂದೆಂದೂ ಮುಗಿಯದ ಕತೆ" ಕಥಾ ಸಂಕಲನ. ಮೌನಿಪ್ರಶ್ನೆಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ "ಮೂರು ದಶಕದ ಕಥೆಗಳು" ೧೯೮೯ರಲ್ಲಿ ಹೊರಬಂದಿದೆ. ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆನವಿಲುಗಳುಬರಘಟಶ್ರಾದ್ಧತಾಯಿ,ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.

ಅವರ ಕಾದಂಬರಿಗಳು  ಸಾಹಿತ್ಯ  ಜಗತ್ತಿಗೆ ಹೊಸ ದಿಕ್ಕನ್ನೇ ತೋರಿದವು  ಪ್ರಕಟವಾದ ಇವರ. ೧೯೬೫ರಲ್ಲಿ ಇವರ   ಕಾದಂಬರಿ "ಸಂಸ್ಕಾರ" ಬ್ರಾಹ್ಮಣ ಸಂಪ್ರದಾಯದ ಅಸಂಗತೆಯನ್ನು ವಿಶದ ಪಡಿಸುವ ಈ ಕೃತಿ  ಪ್ರಕಟವಾದಾಗ ತುಂಬ ವಿವಾದವನ್ನುಂಟು ಮಾಡಿತು. ಇದು ಹಲವಾರು ದೇಶಿ ಮತ್ತು ವಿದೇಶಿಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ,ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. ಅವರು ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ "ಪ್ರೀತಿ-ಮೃತ್ಯು-ಭಯ"ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
ಚಲನ ಚಿತ್ರಂಗದಲ್ಲೂ ಇವರ ಕೃತಿಗಳು ಅಲೆ ಎಬ್ಬಿಸಿವೆ. ಅನಂತಮೂರ್ತಿಯವರ ಸಂಸ್ಕಾರಅವಸ್ಥೆ ಕಾದಂಬರಿಗಳನ್ನು ಮತ್ತು ಬರಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದುರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ.ಘಟಶ್ರಾದ್ಧ ಕತೆಯನ್ನು ಆಧರಿಸಿ "ದೀಕ್ಷಾ" ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು  ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.
ಜ್ಞಾನಪೀಠಪ್ರಶಸ್ತಿ ಪಡೆದಾಗ
ಅವರು  "೧೫ ಪದ್ಯಗಳು", "ಮಿಥುನ" ಮತ್ತು "ಅಜ್ಜನ ಹೆಗಲ ಸುಕ್ಕುಗಳು" ಎಂಬ ಮೂರು ಕವನ ಸಂಕಲನಗಳನ್ನೂ ಮತ್ತು . .ಆವಾಹನೆ" ಎಂಬ ಒಂದು ನಾಟಕವನ್ನು ರಚಿಸಿದ್ದಾರೆ.ಪ್ರಜ್ಞೆ ಮತ್ತು ಪರಿಸರಪೂರ್ವಾಪರಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.೧೯೮೧ರಲ್ಲಿ ರಾಜಕೀಯಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು "ರುಜುವಾತು" ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು. 
ಇನ್ನೊಬ್ಬ  ಜ್ಞಾನ ಪೀಠಿ ಗಿರೀಶ್‌ಕರ್ನಾಡರೊಡನೆn
ಇವರುಪ್ರಶಸ್ತಿಗಳ ಸರಮಾಲೆಯನ್ನೇ ಧರಿಸಿದವರು..ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಮಾಸ್ತಿ ಪ್ರಶಸ್ತಿ –ಮತ್ತು  ಜ್ಞಾನ ಪೀಠ ಪ್ರಶಸ್ತಿಗಳು  ಅನಂತಮೂರ್ತಿಯವರಿಗೆ ಬಂದಿವೆ. ಅಂತರಾಷ್ಟ್ರೀಯ ಮಟ್ಟದ ಬೂಕರ್‌ಪ್ರಶಸ್ತಿಯ ಅಂತಿಮ ಹಂತ ತಲುಪಿದ್ದರು.. ಭಾರತ ಸಕಾರದ ಪದ್ಮ ಭೂಷಣವೂ ದೊರೆತಿದೆ. ಸಂಸ್ಕಾರಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ.
ಇಂಗ್ಲಿಷ್‌  ಪ್ರವಾಚಕರಾಗಿ ವೃತ್ತಿ ಪ್ರಾರಂಭಿಸಿದ ಇವರು ಹಂತಹಂತವಾಗಿ ಮೇಲೇರಿ ಪ್ರಾಧ್ಯಾಪಕರಾದರು. 
ದೇಶವಿದೇಶಗಗಳ ಪ್ರತಿಠಿತ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವರು , ಕೇರಳದ ಮಹಾತ್ಮಗಾಂಧಿ ವಿಶ್ವ ವಿದ್ಯಾಲಯ, ಕರ್ನಾಟಕದ ಸೆಂಟ್ರಲ್‌ ಯುನಿವರ್ಸಿಟಿಯ    ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ವ್ಯಾಪಕವಾಗಿ ವಿದೇಶಿ ಪ್ರವಾಸ ಮಾಮಡಿರುವ ಅವರು ಭಾಗವಹಿಸಿದ  ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರಸಂಕಿರಣಗಳು ಅಸಂಖ್ಯಾತ.ನ್ಯಾಷನಲ್‌ಬುಕ್‌ ಟ್ರಸ್ಟ, ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್‌ ಫಿಲ್ಮ್‌ ಅಂಡ್‌  ಟೆಲಿವಜನ್‌ಇನಸ್ಟಿಟ್ಯೂಟ್ ಅದ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ರಾಷ್ಟ್ರ ಮಟ್ಟದಲ್ಲಿ ಅನಂತಮೂರ್ತಿಇಲ್ಲದ ಯಾವುದೇ ಸಾಹಿತ್ಯ ಸಮಾರಂಭ ಅಪರೂಪ..
ಅನಂತ ಮುರ್ತಿಯವರ  ಸಾಮಾಜಿಕ ಪ್ರಜ್ಞೆ ಸದಾಜಾಗೃತ. ಕೊನೆಯವರೆಗೂ ಪ್ರತಿಯೊಂದು ಸಮಸ್ಯೆಗೂ ಅವರ ಸ್ಪಂದನೆ ಇದ್ದೇ ಇರುತಿತ್ತು ಅದು ಜನಪರ ಎಂದು ಅವರು ಭಾವಿಸಿದ್ದರೆ ಜನಪ್ರಿಯವಲ್ಲದ ನಿಲುವಿಗೂ ಅವರು ಬದ್ದರು..ಹೀಗಾಗಿ ಅನೇಕ ವಿವಾದಗಳ ಹುತ್ತ ಅವರ ಸುತ್ತ . 
ಜ್ಯಾತೀತ ದಳದ ನಾಯಕರೊಡನೆ
ರಾಜಕೀಯವಾಗಿ ಕ್ರಿಯಾಶೀಲ. ಬಲಪಂಥದ ಕಟ್ಟಾ ವಿರೋಧಿ. ಸಕ್ರಿಯ ರಾಜಕಾರಣಿಗಳ  ಸಂಗ ಅವರಿಗೆ ಅಧಿಕಾರದ ಹಪಾ ಹಪಿ ಇದೆ ಎನಿಸುವಷ್ಟು ನಿಕಟ. ದಿ.ರಾಮಕೃಷ್ಣಹೆಗಡೆ,ದಿ ಜೆ.ಎಚ್‌.ಪಟೇಲ್,ಮಾಜಿಪ್ರದಾನಿ, ದೇವೇ ಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು  ಬಹಳ ಹತ್ತಿರ. ರಾಜ್ಯಸಭಾ ಸದಸ್ಯರಾಗ ಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸೇರಿದ್ದು ಟೀಕೆಗೆ ಕಾರಣವಾಗಿತ್ತು.  ಯಾರವರು ಅನಂತ ಮೂರ್ತಿ ? ಎಂದು ರಾಜಕೀಯ ನಾಯಕರೊಬ್ಬರು ವ್ಯಂಗ್ಯವಾಡಿದರೂ ಸಂಕೋಚವಿಲ್ಲ.. ಮೋದಿಯವರುಪ್ರಧಾನ ಮಂತ್ರಿಯಾದರೆ ದೇಶ ತೊರೆಯುವೆ ಎಂಬ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣ.

 ಸಾಹಿತ್ಯ ರಂಗದಲ್ಲೂ ವಿಚಾರವಾದಿಗಳು ಮತ್ತು ಎಡಪಂಥೀಯರೆಡೆಗೆ ಒಲವು. ಅವರ ಮತ್ತು ಎಸ್ ಎಲ್ ಬೈರಪ್ಪನವರ ಜೊತಗಿನ  ವೈಚಾರಿಕ ಘರ್ಷಣೆ ತುಂಬ ಕುತೂಹಲಕಾರಿ. ಅವರೊಂದು ರೀತಿಯ ಯೋಚನಾ ಲಹರಿಯ , ವಿಚಾರ ಪ್ರಜ್ಞೆಯ ಸಾಕ್ಷಿಪ್ರಜ್ಞೆ. ಅಳಕು ಅಂಜಿಕೆ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ದಿಟ್ಟ. ವರಿಗೆ ಯುವಬರಹಗಾರರನ್ನು ಕಂಡರೆ ಬಹು ಪ್ರೀತಿ. ಹೊಸ ವಿಚಾರಕ್ಕೆ ತೆರೆದ ಮನ.. ಅವರ ಅಗಲುವಿಕೆಯಿಂದ ನೂರಾರು ಬರಹಗಾರಿಗೆ ಅನಾಥ ಪ್ರಜ್ಞೆ ಕಾಡುವುದು ಖಂಡಿತ.

ಭಾರತೀಯ ಸಾಹಿತ್ಯ ರಂಗದಲ್ಲಿ ಕರ್ನಾಟಕದ ಸಾಮಾಜಿಕ ವಲಯದಲ್ಲಿ ಒಂದು ಬಹು ಪ್ರಭಾವಿ ವರ್ಣರಂಜಿತ ವ್ಯಕ್ತಿತ್ವದ ಕೊರತೆ ಬಹುಕಾಲದ ವರೆಗೆ ಕಾಡುವುದು. ಅವರಿಗಿರುವ ಪ್ರಾಮುಖ್ಯತೆ , ಜನಪ್ರಿಯತೆ ಮತ್ತು ಸಾಹಿತ್ಯ ಸಾಧನೆಯ ಸಂಕೇತವಾಗಿ ರಾಜ್ಯ ಸರ್ಕಾರವು ಮೂರುದಿನ ಶೋಕಾಚರಣೆ ಘೋಷಿಸಿದೆ. ಸಮಾಜ ಮತ್ತು ರಾಜಕಾರಣದ ಮಾರ್ಗದರ್ಶಕನಿಗೆ ಸಕಲ ಸರ್ಕಾರಿ   ಗೌರವದೊಂದಿಗೆ ಅಂತಿಮಕಾರ್ಯ ಆಚರಣೆಗೆ ಮುಂದಾಗಿದೆ. ಆಗಸ್ಟ ೨೨, ೨೦೧೪ ರಂದು ಉದ್ದಾಮ ಸಾಹಿತಿ, ಪ್ರಖರ ಸಾಮಾಜಿಕ ಕಳಕಳಿ ಹೊಂದಿರುವ ಸಮಾಜಮುಖಿ, ಅಖಂಡ ಜೀವನಪ್ರೀತಿ ಹೊಂದಿದ  ಅನಂತಮೂರ್ತಿಯವರ ಆತ್ಮ ಅನಂತದಲ್ಲಿ ಲೀನವಾಗಿದೆ.

Tuesday, August 19, 2014

ಐತಿಹಾಸಿಕ ಪರಂಪರೆ ಉಳಿಸಿ’

                                   ಸ್ಥಳಿಯ ಚರಿತ್ರೆ

ಸ್ಥಳಿಯಸ್ಥಳಿಯ ಚರಿತ್ರೆಯ ಬಗೆಗೆ ಅಲಕ್ಷ ಸಲ್ಲದು

ಸ್ಥಳಿಯ ಚರಿಸ್ಥಳಿಯ ಚರಿತ್ರೆಯ ಬಗೆಗೆ ಅಲಕ್ಷ ಸಲ್ಲದುತ್ರೆಯ ಬಗೆಗೆ ಅಲಕ್ಷ ಸಲ್ಲದು ಸ್ಥಳಿಯ ಚರಿತ್ರೆಯ ಬಗೆಗೆ ಅಲಕ್ಷ ಸಲ್ಲದು ಯ ಬಗೆಗೆ ಅಲಕ್ಷ ಸಲ್ಲದು   


ಹಂಪಿ ಕನ್ನಡ ವಿಶ್ವವಿದ್ಯಾಲಯದಉಪ ಕುಲಸಚಿವರಾದ ಡಾ.ಕೆ.ರವೀಂದ್ರನಾಥ, ವೇದಿಕೆಯಲ್ಲಿ ಪ್ರಾಚಾರ್ಯರಾದ ಡಾ.ಎಸ್.ಎನ್.ಶಿವರಡ್ಡಿ, ಬಿ.ಎ.ಕೆಂಚರಡ್ಡಿ





  ಇತಿಹಾಸವೆಂದರೆ ಬರಿ ರಾಜರ ಕಥೆಯಲ್ಲ. ಅದು ನಮ್ಮ ಬದುಕಿನ ಚರಿತ್ರೆಯಾಗಿದೆ. ಪ್ರತಿ ಮನೆಯು ತನ್ನದೇ ಆದ ಇತಿಹಾಸವನ್ನು ಹೊಂದಿರುತ್ತದೆ. ಈ ನಾಡಿನಲ್ಲಿ ಬಹು ಸಂಸ್ಕøತಿಯನ್ನು ಬಿಂಬಿಸುವ  ಕಲ್ಲುಗಳಿವೆ. ಅವು ಮೌನವಾಗಿ ಕೂಗುತ್ತಿದ್ದರೂ ಆ ಕೂಗನ್ನು ಕೇಳುವ ಕಿವಿಗಳಿಲ್ಲ. ನಾಡಿನ ಅಮೂಲ್ಯ ಸಂಪತ್ತುಗಳಾದ ಶಾಸನಗಳು, ಕೋಟೆ ಕೊತ್ತಲಗಳು, ದೇಗುಲಗಳು, ಸ್ಮಾರಕಗಳು, ನಾಣ್ಯಗಳು ನಮ್ಮವರ ಹಿಂದಿನ ಚರಿತ್ರೆಯನ್ನು ತಿಳಿಸುವ ದಾಖಲೆಗಳಾಗಿವೆ. ಇವುಗಳು ನಾಶವಾದರೆ ನಮ್ಮ ಪರಂಪರೆಯೇ ಹಾಳಾದಂತೆ, ನಮ್ಮ ಸುತ್ತಲು ನಮಗೆ ಕಾಣಿಸದ ಇಂತಹ ಚರಿತ್ರೆಗಳ ಬಗ್ಗೆ ನಮಗೆ ಅಲಕ್ಷವಿರಬಾರದು ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವರಾದ ಡಾ.ಕೆ. ರವೀಂದ್ರನಾಥರವರು ವಿದ್ಯಾರ್ಥಿಗಳಿಗೆ ಕಳಕಳಿಯುಳ್ಳ ಮಾತುಗಳನ್ನು ಹೇಳಿದರು.
ಚರಿತ್ರೆಯೊಂದಿಗೆ  ಹಾಸುಹೊಕ್ಕಾಗಿರುವ ನಮ್ಮ ಪರಂಪರೆಯು ಬಹು ದೊಡ್ಡದು. ಅದನ್ನು ಚರಿತ್ರೆಯೊಂದಿಗೆ ಸಮೀಕರಿಸುತ್ತಾ ತಮ್ಮ ವರ್ತಮಾನವನ್ನು ರೂಪಿಸಿಕೊಳ್ಳಬೇಕು. ಇತಿಹಾಸವೆಂದರೆ ನಮ್ಮವರ ಬದುಕು. ಅದನ್ನು ಅರಿಯದಿದ್ದರೆ ನಮ್ಮನ್ನು ಅರ್ಥಮಾಡಿಕೊಳ್ಳಲಾಗದು. ಇತಿಹಾಸ ಪ್ರಜ್ಞೆ ಇಲ್ಲದಿದ್ದರೆ ನಾವು ಉಸಿರನ್ನು ಕಳೆದುಕೊಂಡ ದೇಹದಂತಾಗುತ್ತೇವೆ. ಎಂದು ವಿದ್ಯಾರ್ಥಿಗಳಿಗೆ ತಾಳೆಗರಿ, ಕಡತ, ಹಸ್ತಪ್ರತಿಗಳನ್ನು ತೋರಿಸುತ್ತಾ ಐತಿಹಾಸಿಕ ಜಾಗೃತಿ ಮೂಡುವ ನುಡಿಗಳನ್ನು ಹೇಳಿದರು.
 ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಎಸ್.ಎಮ್.ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿ ಆಶ್ರಯದಲ್ಲಿ ನಡೆದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಇತಿಹಾಸದ ಪುಟಗಳಲ್ಲಿನ  ಪ್ರಮುಖ ವಿಷಯಗಳನ್ನು ಉದಾಹರಿಸುತ್ತಾ ರೈಸ್, ಫ್ಲೀಟ್, ಮೆಕೆಂಜಿ, ಹಳಕಟ್ಟಿಯಂತಹ ಇತಿಹಾಸಕಾರರ ಕೊಡುಗೆಗಳನ್ನು ಕೊಂಡಾಡಿಡರು.
    ಕಾರ್ಯಕ್ರಮದ ಅತಿಥಿಗಳಾದ ಇತಿಹಾಸ ಅಕಾದೆಮಿಯ ಸದಸ್ಯರಾದ ಡಾ.ಮಲ್ಲಿಕಾರ್ಜುನ ಕುಂಬಾರವರು ಇತಿಹಾಸ ಕಾಲವೆಂಬುದು ವಿಸ್ಮಯದ ಮಹಾಗುಹೆ. ಕಾಲ ಪುರುಷನು ತನ್ನ ಜಠರಾಗ್ನಿಯಲ್ಲಿ ಎಲ್ಲವನ್ನು ಭಸ್ಮಮಾಡಿ, ಮರವೆಯ ಹೊಗೆಯನ್ನು ಉಗುಳುತ್ತಾನೆ. ಜೀವನದಲ್ಲಿ ನಡೆದ ಅನೇಕ ಸಂಗತಿಗಳು ಕೆಲವು ಸಲ ಜ್ಞಾಪಕಕ್ಕೆ ಬರುವದಿಲ್ಲ. ಇನ್ನು ಅಸಂಖ್ಯ ಜನಗಳ ಜೀವನ, ಗತಿಸಿದ ತಲೆಮಾರುಗಳ ವಿಷಯಗಳಂತೂ ನೆನಪಿರುವದು ಬಹಳ ದೂರದ ಮಾತು. ಈ ಹಿನ್ನೆಲೆಯಲ್ಲಿ ನಮ್ಮ ಜನಾಂಗದಿಂದ ಕಣ್ಮರೆಯಾದ ಸಂಸ್ಕ್ರತಿಯ ಕಣಜದಂತೆ ಶೋಭಿಸುತ್ತಿರುವ ಶಾಸನಗಳು ಈ ನಾಡಿನ ಅಮೂಲ್ಯ ನಿಧಿಗಳಾಗಿವೆ. ಅಲ್ಲಿರುವ ಒಂದೊಂದು ಅಕ್ಷರಗಳು ಒಂದೊಂದು ದೀಪದ ಕುಡಿಗಳಾಗಿವೆ. ಕನ್ನಡ ಸಾಹಿತ್ಯದ ತಲಕಾವೇರಿಯಾದ ಶಾಸನಗಳು ಈ ನಾಡಿನ ಅಮೂಲ್ಯ ಸಂಪತ್ತುಗಳಾಗಿ, ಇವುಗಳು ಆಯಾ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಸ್ಥಿತಿಗಳನ್ನು ಸ್ಪಷ್ಠವಾಗಿ ತಿಳಿಸುತ್ತವೆ ಅದರ ಅರಿವನ್ನು ವಿದ್ಯಾರ್ಥಿಗಳು ಗಳಿಸಿಕೊಳ್ಳಬೇಕೆಂದರು. 
    ಈ ಐತಿಹಾಸಿಕ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಎನ್.ಶಿವರಡ್ಡಿಯವರು ವಹಿಸಿ ನಮ್ಮ ಸುತ್ತಲಿನ ಚರಿತ್ರೆಯ ಅರಿವು ನಮಗಿರಬೇಕು. ಅಂದಾಗಲೇ ನಾವು ನಮ್ಮ ಚರಿತ್ರೆಯನ್ನು ಕಟ್ಟಬಹುದು. ವಿದ್ಯಾರ್ಥಿಗಳು ಆ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಮಾರಂಭದಲ್ಲಿ ಅಧ್ಯಾಪಕರಾದ ಬಿ.ಎ.ಕೆಂಚರಡ್ಡಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಇತಿಹಾಸದ ಅಧ್ಯಾಪಕಿ ಕುಮಾರಿ ಚಳಗೇರಿಯವರು ಎಲ್ಲರಿಗೂ ವಂದಿಸಿದರೆ, ಅಧ್ಯಾಪಕರಾದ ಅರವಿಂದ ವಡ್ಡರವರು ಸಭೆಯ ಸಂಚಾಲಕತ್ವವನ್ನು ವಹಿಸಿದ್ದರು.



Friday, August 15, 2014

Save Historical Heritage



                     Karnataka Itihasa academy (Rg)
                                                      Call to History lovers
                               Save Historical Heritage

              Karnataka Itihasa academy is trying to create public awareness through ‘Save Historical Heritage’ programme. The purpose of this movement is to give vast publicity for the  protection of Ancient forts, buildings, temples, churches, Masjids, tanks, edicts, hero stones, memorial stones, copper plates, coins, Artifacts,( statues, handicrafts , paintings), weapons etc
                                                   Nature of the movements
Encouraging the registration of   ancient statues and paintings (Antiquities)
Enlightening the people living in that locality, about the necessity of protecting   ancient edicts, statues, and memory stones
 Raising voice against destruction, misuse of ancient buildings and exerting pressure on the environment (publicity, Writing to Government, and press)
Protection of historical sites from the encroachers for agricultural and residential purpose.ion
Informing authorized  collectors ( Sahithya parishat,universities and other concerned institutions)  about the existence of Manuscripts. Informing the state archeology about historical Documents
Academy   wants to involve  teachers, students, public  and specially  intellectuals  in its work .
 Conducting meetings, processions, seminars and  various competitions for high school and college students,
 Involving high school students to clean, protect historical monuments and propagating the cause during the “Save Historical heritage week’

                          Popularize the below slogans
·        As memory to humans so History to the nation
·        Memory is a lamp to show us path
·        History is store house of Memory
·        Research in history  is  development of knowledge
·        Saving manuscripts  helps protection of heritage
·         Ancient  mosque, temple and church are the crown jewels of our heritage
·        Abuse and misuse of stones of forts is destruction of  the foundation of our heritage
·        Neglecting ancient water bodirs results in deadly drought

Sunday, August 10, 2014

ಚಿಕ್ಕಹನಸೋಗೆಯ ತ್ರಿಕೂಟಾಚಲ ಬಸದಿ


ಚಿಕ್ಕಹನಸೋಗೆಯ ತ್ರಿಕೂಟಾಚಲ ಬಸದಿ

ಟಿ. ರಾಜು
ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಸಣ್ಣ ರಾಜಮನೆತನಗಳ ಪೈಕಿ ಚಂಗಾಳ್ವರ ಮನೆತನ ಪ್ರಸಿದ್ಧವಾಗಿದ್ದು, ಅವರ ಕಾಲದ ಸಾಂಸ್ಕøತಿಕ ಪ್ರಗತಿಯ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಬಿ.ಎಲ್. ರೈಸ್, ಹಯವದನರಾವ್. ಸೂರ್ಯನಾಥ ಕಾಮತ್ ಮತ್ತು ಹೆಚ್.ಎಸ್. ಗೋಪಾಲರಾವ್ ಮುಂತಾದವರು ಚಂಗಾಳ್ವರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮೇಲಿನ ಅಧ್ಯಯನದ ವಿವರ ಬಸದಿಯ ಖುದ್ದು ಅಧ್ಯಯನ ಹಾಗು ಬಸದಿಯ ಪ್ರಧಾನ ಅರ್ಚಕರು ಮತ್ತು ಚಂಗಾಳ್ವರ ಕಾಲದಿಂದಲೂ ರಾಜಾಶ್ರಯ ಪಡೆದಿದ್ದ ವಿದ್ವಾಂಸ ಮನೆತನದವರಾದ ಡಾ. ಡಿ. ಶರ್ಮ ಜೋಯಿಸ್‍ರವರಿಂದ ಪಡೆದ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
ಚಿಕ್ಕಹನಸೋಗೆ ಗ್ರಾಮವು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ನೆಲೆ. ಈ ಗ್ರಾಮವು ಚಂಗಾಳ್ವ ಮತ್ತು ಚೋಳರ ಕಾಲದಿಂದಲೂ ಚಿನ್ನಸೋಗೆ, ಪನಸೋಗೆ, ಹೊನ್ನಸೋಗೆ ಹಾಗು ಹನಸೋಗೆ ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದು ಚಂಗಾಳ್ವರ ಆಡಳಿತ ಕೇಂದ್ರವಾಗಿ. ಐತಿಹಾಸಿಕ ಹಾಗೂ ಧಾರ್ಮಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಹಲವಾರು ಶಾಸನಗಳು ಸಹ ಇಲ್ಲಿ ದೊರೆತಿವೆ. ಇಲ್ಲಿ ತ್ರಿಕೂಟಾಚಲ ಜೈನ ಬಸದಿ ಇದೆ. ಚೆಂಗಾಳ್ವರು ಗಂಗರ, ಚೋಳರ ನಂತರ ಹೊಯ್ಸಳರ ಸಾಮಂತರಾಗಿ ಈ ಭಾಗದಲ್ಲಿ ಆಳ್ವಿಕೆ ನಡೆಸಿರುವುದು ತಿಳಿದುಬರುತ್ತದೆ. ಕ್ರಿ.ಶ.11ನೇ ಶತಮಾನದಲ್ಲಿ ಹನಸೋಗೆ ಜೈನಧರ್ಮದ ಪ್ರಮುಖ ಕೇಂದ್ರವಾಗಿದ್ದು ಹಲವಾರು ಸಂಘಗಳು ಅಂದಿನ ಕಾಲಕ್ಕೆ ನೆಲೆಗೊಂಡಿದ್ದಕ್ಕೆ ಶಾಸನೋಕ್ತ ದಾಖಲೆಗಳಿವೆ. ಮೂಲಸಂಘ, ದೇಶಿಗಣ, ಪುಸ್ತಕಗಚ್ಚ ಮತ್ತು ಕುಂದಕುಂದಾನ್ವಯ ಸಾಲಿಗೆ ಸೇರಿದ ಜೈನ ಗುರುಗಳು ಚಿಕ್ಕ ಹನಸೋಗೆಯಲ್ಲಿ ನೆಲೆಸಿದ್ದಾಗಿ ತಿಳಿದುಬರುತ್ತದೆ.
11-12ನೇ ಶತಮಾನದಲ್ಲಿ ಸುಮಾರು ಅರವತ್ತಕ್ಕು ಹೆಚ್ಚು ಬಸದಿಗಳು ಚಿಕ್ಕ ಹನಸೋಗೆಯಲ್ಲಿ ಇದ್ದ ಬಗ್ಗೆ ಶಾಸನಗಳು ತಿಳಿಸುತ್ತವೆ. ಅಲ್ಲದೆ ಜೈನಗುರುಗಳು, ಆಚಾರ್ಯರು ಹಲವಾರು ಕೈಂಕರ್ಯವನ್ನು ನಡೆಸಿದ ವಿವರಗಳು ದಾಖಲೆಯಲ್ಲಿದೆ. ಅದಕ್ಕೆ ಊರಿನ ಮಧ್ಯಭಾಗದಲ್ಲಿ ನಿರ್ಮಾಣವಾಗಿರುವ ತ್ರಿಕೂಟಾಚಲ ಜೈನ ಬಸದಿ ನಿದರ್ಶನವಾಗಿದ್ದು ಚಂಗಾಳ್ವರ ಕಾಲದ ಜೈನ ಧರ್ಮದ ಬಗ್ಗೆ ಸಾಕ್ಷಿಯಾಗಿದೆ.
ಚಂಗಾಳ್ವರ ದೊರೆಯಾದ ವೀರರಾಜೇಂದ್ರನು ಚೋಳರ ರಾಜರಾಜಚೋಳನ ಆಳ್ವಿಕೆಯಲ್ಲಿ ಮಾಂಡಲೀಕನಾಗಿದ್ದು ಚಿಕ್ಕಹನಸೋಗೆಯಲ್ಲಿ ಆದಿನಾಥ, ಚಂದ್ರನಾಥ ಮತ್ತು ನೇಮಿನಾಥ ಎಂಬ ತೀರ್ಥಂಕರರ ತ್ರಿಕೂಟಾಚಲ ಬಸದಿಯನ್ನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಈ ಬಸದಿಯು ಸರಳವಾದ ಕಟ್ಟಡವಾಗಿದ್ದು ಮೂರು ಗರ್ಭಗುಡಿಗಳನ್ನು, ಅಂತರಾಳ ಮತ್ತು ನವರಂಗಗಳನ್ನು ಹೊಂದಿದೆ. ಮೂರೂ ನವರಂಗಗಳಿಗೆ ಮಧ್ಯದಲ್ಲಿ ಮಹಾಮಂಟಪ ಇದೆ. ಮಹಾ ಮಂಟಪದ ಪೂರ್ವಭಾಗಕ್ಕೆ ಎರಡು ಕಂಭಗಳು ಮುಂದೆ ಚಾಚಿರುವ ಮಂಟಪ ಇದೆ.
ಬಸದಿಯ ಅಧಿಷ್ಠಾನವು ಉಪಾನ ದುಂಡಾದ ಕುಮುದ ಕಂಠ ಮತ್ತು ಅಲ್ಲಲ್ಲಿ ಕೂಡುಗಳನ್ನು ಹೊಂದಿರುವ ಕಪೆÇೀತ ವನ್ನು ಹೊಂದಿದೆ. ಬಸದಿಯ ಭಿತ್ತಿ ಮೇಲೆ ಕೋಷ್ಠಕಗಳಿವೆ.
ಆದಿನಾಥ ಗರ್ಭಗುಡಿಯು ಮಧ್ಯಭಾಗದಲ್ಲಿದ್ದು ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಆದಿನಾಥ ಶಿಲ್ಪವು ಪದ್ಮಾಸನದಲ್ಲಿದ್ದು ಧ್ಯಾನಮುದ್ರೆಯಲ್ಲಿದೆ. ಆದಿನಾಥನಿಗೆ ಇಬ್ಬರು ಚಾಮರಧಾರಿಗಳು ಇದ್ದಾರೆ, ಈ ಚಾಮರಧಾರಿಗಳು ಪ್ರಭಾವಳಿಯಲ್ಲಿರುವುದು ಒಂದು ವಿಶೇಷತೆ. ಆದಿನಾಥನಿಗೆ ಹಿಂಭಾಗದಲ್ಲಿ ಸಿಂಹಾಸನದ ಕೆತ್ತನೆ ಕಂಡುಬರುವುದಿಲ್ಲ. ಇದರಿಂದ ಅದರ ಪ್ರಭಾವಳಿಯ ಮೇಲ್ಭಾಗದಲ್ಲಿ ಅಲಂಕೃತ ಗೊಂಡ ಮುಕ್ಕೋಡೆ ಕಂಡುಬರುತ್ತದೆ. ಸಿಂಹಗಳ ಕೆತ್ತನೆ ಇರುವ ಪೀಠದ ಮೇಲೆ ಆದಿನಾಥನ ವಿಗ್ರಹವಿದೆ. ಶಿಲ್ಪವು ಸುಂದರವಾಗಿದ್ದು ಹೆಚ್ಚು ಅಲಂಕೃತವಾಗಿಲ್ಲ, ಈ ಗರ್ಭಗುಡಿಯ ದ್ವಾರ ಆಕರ್ಷಕವಾಗಿದ್ದು ದ್ವಾರದ ತೊಲೆಯ ಮೇಲೆ “ಶ್ರೀ ರಾಜರಾಜೇಂದ್ರ ಚೋಳ ಪುಸ್ತಕಗಚ್ಛಂ” ಎಂದು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ.
ಉತ್ತರ ದಿಕ್ಕಿಗೆ ಮುಖಮಾಡಿಕೊಂಡಿರುವ ಚಂದ್ರನಾಥ ಗರ್ಭಗುಡಿಯ ನವರಂಗ ದ್ವಾರವು ಐದು ಶಾಖೆಗಳಿಂದ ಅಲಂಕೃತಗೊಂಡ ದ್ವಾರವಾಗಿದೆ. ಇವುಗಳಲ್ಲಿ ಬಳ್ಳಿ ಸುರುಳಿ ಹಾಗೂ ಲತಾ ವಿನ್ಯಾಸಗಳ ಮಧ್ಯೆ ಯಕ್ಷರ ಕಿರು ಶಿಲ್ಪ ಅಲಂಕಾರಿಕ ಕಂಬ, ಸಿಂಹ ಹಾಗೂ ಬಳ್ಳಿಗಳು ಕ್ರಮವಾಗಿ ಕಂಡುಬರುತ್ತವೆ. ಲಲಾಟ ಬಿಂಬದಲ್ಲಿ ಸುಂದರವಾದ ಗಜಲಕ್ಷ್ಮಿಯ ಶಿಲ್ಪವಿದೆ. ದ್ವಾರಶಾಖೆಯಲ್ಲಿ ಕಂಡುಬರುವ ಕಂಭಗಳು ಹದಿನಾರು ಮುಖವುಳ್ಳ ದಿಂಡನ್ನು ಹೊಂದಿದೆ.

ದಕ್ಷಿಣಕ್ಕೆ ಮುಖ ಮಾಡಿರುವ ಗರ್ಭಗುಡಿಯಲ್ಲಿರುವ ಶಿಲ್ಪವು ಆಕರ್ಷಕವಾಗಿದ್ದು ಸರಳವಾದ ಕೆತ್ತನೆಯನ್ನು ಹೊಂದಿದೆ. ಈ ಶಿಲ್ಪವು ಕೂಡ ಆದಿನಾಥನಂತೆ ಪ್ರಭಾವಳಿ ಹಾಗೂ ಪರಿಚಾರಕಿ ಯಕ್ಷ-ಯಕ್ಷಿಯರನ್ನು ಪ್ರಭಾವಳಿಯ ಮೇಲೆ ಹೊಂದಿದೆ. ಈ ಶಿಲ್ಪವು ಕುಸುರಿಯಿಂದ ಕೂಡಿದ್ದ್ದು, ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ.
ಮೂರು ನವರಂಗಗಳನ್ನು ಜೋಡಿಸಿರುವ ಮಂಟಪದ ವಿನ್ಯಾಸ ಆಕರ್ಷಕವಾಗಿದ್ದು ನವರಂಗದ ಭಾಗಿಲುಗಳಿಗೆ ಹೊಂದಿಕೊಂಡಂತೆ ಎತ್ತರದ ಸೋಪಾನಗಳು ಇವೆ. ಈ ಸೋಪಾನದ ಮೇಲೆ ಮಂಟಪದ ಸುತ್ತಲೂ ಕಂಭಗಳನ್ನು ಕೂರಿಸಲಾಗಿದೆ. ಈ ಸೋಪಾನಗಳನ್ನು ಒಂದೇ ತೆರನಾದ ಜಗಲಿ ಅಥವಾ ಶಾಸನಗಳಂತೆ ವಿನ್ಯಾಸಗೊಳಿಸಲಾಗಿದೆ ಮಧ್ಯದಲ್ಲಿ ಎತ್ತರದ ಕಂಭಗಳಿದ್ದು ವಿನ್ಯಾಸದಲ್ಲಿ ದ್ರಾವಿಡ ಶೈಲಿಯನ್ನು ಹೊಂದಿವೆ. ಚೌಕದ ಪೀಠ, ಚೌಕದ ತಳಭಾಗ ಅಷ್ಟಮುಖವುಳ್ಳ ಪಟ್ಟಿಕೆ, ಉಬ್ಬುಗಳುಳ್ಳ ದುಂಡಾದ ದಿಂಡು ಪಲಗೈ ಮತ್ತು ಚಾಚು ಪೀಠಗಳು ಕಂಭಗಳ ವಿನ್ಯಾಸಗಳಲ್ಲಿ ಕಂಡುಬರುತ್ತದೆ. ಈ ಕಂಭಗಳು ಹೊಯ್ಸಳ ಶೈಲಿಯ ಪ್ರೌಢಕಂಭಗಳ ಬೆಳವಣಿಗೆಯ ಪೂರ್ವ ಹಂತವನ್ನು ತೋರಿಸುತ್ತವೆ.
ಈ ಕಂಭಗಳ ಮೇಲ್ಭಾಗವು ಕುಂಭಗಳನ್ನು ಹೊಂದಿದ್ದು, ಇವುಗಳೊಳಗಿಂದ ಎಲೆಗಳು ಹೊರಚಾಚಿದಂತೆ ಕಾಣುತ್ತದೆ. ಇವು ಪೂರ್ಣ ಕಳಸದ ಸಂಕೇತವಾಗಿದೆ. ಈ ಕಂಭಗಳ ಮೇಲೆ ಉಬ್ಬು-ತಗ್ಗು, ಮೈಯುಳ್ಳ ಹೂದಾನಿ ಆಕೃತಿ ಕಂಠವಿದೆ. ಬೋದಿಗೆಗಳು ಕೂಡ ಉಬ್ಬು ಮೈಯನ್ನು ಹೊಂದಿವೆ. ಇವುಗಳಲ್ಲಿನ ದಿಂಬು ಆಮ್ಲಕದಂತೆ ಕಾಣುತ್ತದೆ. ಈ ಬೋದಿಗೆಯ ಮೇಲೆ ತರಂಗಪೆÇೀತಕವಿದ್ದು ದ್ವಾರಬಂಧದ ಮೇಲ್ಭಾಗದಲ್ಲಿ ಹೊರಚಾಚಿರುವಂತೆ ತೆಳುವಾದ ಕಪೆÇೀತವಿದ್ದು ಮೇಲೆ ಕೀರ್ತಿ ಮುಖವುಳ್ಳ ಅಲಂಕಾರವಾದಿ ಕೋಡುಗಳು ತೆಳು ಕೆತ್ತನೆಯನ್ನು ಹೊಂದಿವೆ.
ಚಿಕ್ಕಹನಸೋಗೆಯ ಆದಿನಾಥ ಬಸದಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ. ಜೈನ ಸಂಘವಾದ ಪುಸ್ತಕಗಚ್ಚಕ್ಕಾಗಿ ಚಂಗಾಳ್ಳ ದೊರೆ ವೀರ ರಾಜೇಂದ್ರನು ನಿರ್ಮಿಸಿದನು. ರಾಜೇಂದ್ರ ಚೋಳನ ಬಸದಿ ಎಂದು ಇದನ್ನು ಶಾಸನಗಳು ತಿಳಿಸುತ್ತವೆ. ಈ ಸಂಗತಿ ಅವರು ಅನ್ಯ ಧರ್ಮಗಳೊಂದಿಗೆ ಹೊಂದಿದ್ದ ಒಲವು ತಿಳಿದುಬರುತ್ತದೆ.
ಹಿಂದೆÉ ಚಂಗಾಳ್ವರ ಕಾಲದಲ್ಲಿ ವೈಭವದಿಂದ ಮೆರೆದು ಆಡಳಿತ ಕೇಂದ್ರವಾಗಿದ್ದ ಚಿಕ್ಕಹನಸೋಗೆಯಲ್ಲಿ ಬ್ರಾಹ್ಮಣ ಮತ್ತು ಜೈನ ಧರ್ಮೀಯರಿದ್ದರು. 650 ವರ್ಷಗಳ ಹಿಂದೆ ಪಿರಿಯಾಪಟ್ಟಣ-ಬೆಟ್ಟದಪುರದ ಲಿಂಗಾಯಿತ ಪಾಳೆಯಗಾರನಿಗೂ, ಪನ್ನಸೋಗೆಯ ಜೈನಪಾಳೆಗಾರನಿಗೂ ಕಾವೇರಿ ನದಿ ದಡದಲ್ಲಿ ನಡೆದ ಯುದ್ಧದಲ್ಲಿ ಜೈನ ಪಾಳೆಗಾರ ಸೋತುಹೋದ, ಕಾಲಕ್ರಮದಲ್ಲಿ ಈ ಪಟ್ಟಣವು ಅವನತಿಗೊಂಡಿರುವಂತೆ ತೋರುತ್ತದೆ. ಹಿಂದೆ ಪ್ರಮುಖ ಆಡಳಿತ ಕೇಂದ್ರವಾಗಿದ್ದ ಪನ್ನಸೋಗೆ ಈಗ ದೊಡ್ಡ ಹನಸೋಗೆ ಮತ್ತು ಚಿಕ್ಕ ಹನಸೋಗೆ ಎಂಬ ಎರಡು ಗ್ರಾಮಗಳಾಗಿವೆ. ದೊಡ್ಡ ಹನಸೋಗೆಯಲ್ಲಿ ಬ್ರಾಹ್ಮಣರು ಬಹು ಸಂಖ್ಯಾತರಾಗಿದ್ದಾರೆ. ಚಿಕ್ಕ ಹನಸೋಗೆಯಲ್ಲಿ ಒಕ್ಕಲಿಗರು ಬಹು ಸಂಖ್ಯಾತರಾಗಿದ್ದು ಈಗ ಜೈನರ ಒಂದೇ ಒಂದು ಕುಟುಂಬ ಮಾತ್ರ ಈ ಗ್ರಾಮದಲ್ಲಿರುವುದು ವಿಶೇಷವಾಗಿದೆ. ಹಿಂದೆ ಲಲಿತಕೀರ್ತಿಸ್ವಾಮಿ ಎಂಬ ಜೈನ ಗುರುವಿದ್ದು ಸುತ್ತಮುತ್ತಲ ಹದಿನಾರು ಗ್ರಾಮಗಳ ಜೈನಬಸದಿಗಳಿಗೆ ಗುರುವಾಗಿದ್ದರು. ಚಂಗಾಳ್ವರ ರಾಜಕುಮಾರಿಯರು ಹಿಂದೆ ಚಿಕ್ಕಹನಸೋಗೆಯಲ್ಲಿ ಎರಡು ಕೆರೆಗಳನ್ನು ನಿರ್ಮಿಸಿದ್ದು ಈಗ ಅಕ್ಕನ ಕೆರೆ ಮತ್ತು ತಂಗಿಯ ಕೆರೆ ಎಂದು ಪ್ರಸಿದ್ಧವಾಗಿದ್ದು ಸಾವಿರಾರು ಎಕರೆ ಜಮೀನಿಗೆ ನೀರಾವರಿಯನ್ನು ಒದಗಿಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಗ್ರಾಮಕ್ಕೆ ಸಮೀಪವಿರುವ ಸಾಲಿಗ್ರಾಮದಲ್ಲಿ ಜೈನರ ಕುಟುಂಬಗಳು ಸಾಕಷ್ಟಿವೆ. ಹೊಯ್ಸಳರ ಕಾಲದಲ್ಲಿ ಶ್ರೀ ರಾಮಾನುಜಾಚಾರ್ಯರು ಚಿಕ್ಕ ಹನಸೋಗೆ ಗ್ರಾಮಕ್ಕೆ ಬಂದಿದ್ದು ಅಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡರೆಂದು, ಅಲ್ಲಿದ್ದ ಜೈನರಿಗೆ ನಾಮ ಹಾಕಿಸಿ ಮತಾಂತರಗೊಳಿಸಿದ್ದರೆಂದು ಹೇಳಲಾಗುತ್ತದೆ. ಇಂದಿಗೂ ಈ ಭಾಗದಲ್ಲಿ ನಾಮಧಾರಿಗೌಡ ಎಂಬ ಜಾತಿಯ ಜನರಿದ್ದು ಶುದ್ಧ ಸಸ್ಯಹಾರಿಗಳಾಗಿದ್ದಾರೆ. ಇವರಿಗೂ ಮತ್ತು ಜೈನರಿಗೂ ವೈವಾಹಿಕ ಸಂಬಂಧಗಳು ನಡೆÀಯುತ್ತವೆ. ಈ ಮೇಲಿನ ವಿವರಣೆಯಿಂದ ಚಂಗಾಳ್ವರ ಕಾಲದಲ್ಲಿ ಪ್ರಸಿದ್ಧವಾಗಿದ್ದ ಜೈನ ಧರ್ಮ ಚಿಕ್ಕ ಹನಸೋಗೆ ಪ್ರಮುಖ ಜೈನ ಕೇಂದ್ರವಾಗಿದ್ದು ಜೈನಧರ್ಮದ ಪ್ರಚಾರ ಹಾಗೂ ಪ್ರಸಿದ್ಧಿಗೆ ಹೆಸರುವಾಸಿಯಾಗಿತ್ತು. ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಈ ಭಾಗದಲ್ಲಿ ಜೈನಧರ್ಮ ತನ್ನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಕ್ಕೆ ಅಂದಿನ ಕಾಲದಲ್ಲಿ ಚಿಕ್ಕ ಹನಸೋಗೆಯಲ್ಲಿ ಜೈನಧರ್ಮ ಅತ್ಯಂತ ಸಾಕ್ಷಿಯಾಗಿ ಆದಿನಾಥ ತ್ರಿಕೂಟಾಚಲ ಬಸದಿ ಪ್ರಸ್ತುತ ಕಂಡುಬರುತ್ತದೆ.

ಆಧಾರಸೂಚಿ
1. ಎಪಿಗ್ರಾಪಿಯ ಕರ್ನಾಟಕ, ಸಂ. 8, ಹಾಸನ.
2. ಎಪಿಗ್ರಾಪಿಯ ಕರ್ನಾಟಕ, ಸಂ. 4, ಪಿರಿಯಾಪಟ್ಟಣ, ಹುಣಸೂರು.
3. ಎಪಿಗ್ರಾಪಿಯ ಕರ್ನಾಟಕ, ಸಂ. 1, ಕೊಡಗು.
4. ಎಪಿಗ್ರಾಪಿಯ ಕರ್ನಾಟಕ, ಸಂ. 5, ಕೆ.ಆರ್. ನಗರ
5. ಎಪಿಗ್ರಾಪಿಯ ಕರ್ನಾಟಕ, ಸಂ. 5, ಮೈಸೂರು.
6. ಎಪಿಗ್ರಾಪಿಯ ಕರ್ನಾಟಕ, ಸಂ. 3, ಹೆಚ್.ಡಿ. ಕೋಟೆ.
7. ಮೈನರ್ ಡೈನಾಸ್ಟಿಸ್ ಆಫ್ ಸೌತ್ ಇಂಡಿಯಾ, ಡಾ. ಬಿ.ಆರ್. ಗೋಪಾಲ್.
8. ಚೋಳರ ಕಾಲದ ವಾಸ್ತು ಮತ್ತು ಶಿಲ್ಪ, ಡಾ. ಬಸವರಾಜು.
9. ಡಾ. ಡಿ. ಶರ್ಮ ಜೋಯಿಸ್ ಸ್ಥಳೀಯರು ಇವರಿಂದ ಮಾಹಿತಿ.

 ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಮಂಡ್ಯ-571401.


ತ್ರಿಕೂಟಾಚಲ ಬಸದಿಯ ಮುಖ್ಯ ದ್ವಾರ

   

Friday, August 1, 2014

ನವಶೋಧಿತ ಜೈನ ಶಿಲ್ಪ


 ಯಲವಟ್ಟಿಯಲ್ಲಿ  ನವಶೋಧಿತ ಜೈನ ಶಿಲ್ಪ 
            ಡಾ.ಬಾಲಕೃಷ್ಣ ಹೆಗಡೆ  
     ಭಾರತದ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮ ದೇಶದ ದರ್ಮ, ಸಂಸ್ಕøತಿ, ಸಾಹಿತ್ಯ, ಕಲೆ ಮತ್ತು ವಾಸ್ತು ಶಿಲ್ಪಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದನ್ನು ನಾವು ಕಾಣುತ್ತೇವೆ. ಕರ್ನಾಟಕದಲ್ಲಂತೂ ಜೈನರ ಸೇವೆಯನ್ನು ಮರೆಯುಂತೆಯೇ ಇಲ್ಲ. ಕರ್ನಾಟಕದ ಎಲ್ಲಾ ಪ್ರಮುಖ ರಾಜ ಮನೆತನಗಳು, ಕದಂಬರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಜೈನ ಧರ್ಮವನ್ನು ಪೋಷಿಸಿದ್ದಾರೆ. ವಿಜಯನಗರ ಕಾಲದಲ್ಲಂತೂ ಸಾಮ್ರಾಜ್ಯ ಕಟ್ಟಲು ನೆರವಾದ ವೀರರಲ್ಲಿ ಜೈನರು ಮುಖ್ಯ ಪಾತ್ರ ವಹಿಸಿದ್ದರೆಂಬುದನ್ನು ಅಲ್ಲಗಳೆಯುವಂತಿಲ್ಲ.
     ಕರ್ನಾಟಕದ ವಿವಿಧ ಭಾಗಗಳಲ್ಲಿ ಆಳಿದ ಹಲವು ಜಿನ ಸಾಮಂತರು ಜೈನರಾಗಿದ್ದಾರೆ. ಸಾಂಸ್ಕøತಿಕವಾಗಿ ಕರ್ನಾಟಕದ ವಾಸ್ತು ಶಿಲ್ಪವನ್ನು ಶ್ರೀಮಂತಗೊಳಿಸಿದ ಶ್ರವಣಬೆಳಗೊಳ, ಹುಂಚ, ಗೇರುಸೊಪ್ಪೆ, ಬೀಳಗಿ, ಹಾಡುವಳ್ಳಿ, ಮೂಡಬಿದಿರೆ, ಕಾರ್ಕಳ, ವೇಣೂರು ಇವು ಇಂದಿಗೂ ಜೈನ ಕ್ಷೇತ್ರಗಳಾಗಿವೆ.
     ಶಿವಮೊಗ್ಗ ಕೂಡ ಒಂದು ಕಾಲದಲ್ಲಿ ಜೈನ ಪ್ರಭಾವವಿರುವ ಪ್ರಮುಖ ಕೇಂದ್ರವಾಗಿತ್ತೆಂಬುದಕ್ಕೆ ಇತ್ತೀಚೆಗೆ ಜಿಲ್ಲೆಯ ಯಲವಟ್ಟಿಯಲ್ಲಿ ದೊರೆತ ಜೈನ ಶಿಲಾ ವಿಗ್ರಹ ಸಮರ್ಥನೆಯನ್ನು ನೀಡುತ್ತದೆ.
     ಯಲವಟ್ಟಿ ಇದು ಒಂದು ಪುಟ್ಟ ಹಳ್ಳಿ. ಶಿವಮೊಗ್ಗ ತಾಲೂಕಿನ ನಿದಿಗೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮ. ಇಲ್ಲಿಯ ಕೆರೆ ಹೂಳೆತ್ತುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಈ ವಿಗ್ರಹ ಬೆಳಕಿಗೆ ಬಂದಿದೆ.


     ನೀಲಿ ಮಿಶ್ರಿತ ಬಳಪದ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕೆತ್ತಲಾದ ಈ ಮೂರ್ತಿಯ ಒಟ್ಟೂ ಎತ್ತರ 32 ಸೆ.ಮೀ. ಇದ್ದು ಅಗಲ 21 ಸೆ.ಮೀ.ಇದೆ.  ಮೂರ್ತಿಯ ದಪ್ಪ 10 ಸೆ.ಮೀ.ಇದೆ. ಇದರಲ್ಲಿ ಒಟ್ಟೂ ಐದು ಜೈನ ಮೂರ್ತಿಗಳನ್ನು ಖಂಡರಿಸಲಾಗಿದ್ದು ಐದು ಮೂರ್ತಿಗಳ ಗುಂಪಿನ ಒಂದು ವಿಗ್ರಹ ಇದಾಗಿದೆ. ಮಧ್ಯದಲ್ಲಿ ಒಂದು ಸ್ವಲ್ಪ ದೊಡ್ಡ ಮೂರ್ತಿ, ಅದರ ಸುತ್ತಲೂ ಎಡ-ಬಲಗಳಲ್ಲಿ ಮೇಲೊಂದು, ಕೆಳಗೊಂದು ಹೀಗೆ ನಾಲ್ಕು ಚಿಕ್ಕ ಜೈನ ಮೂರ್ತಿಗಳನ್ನು ಕೆತ್ತಲಾಗಿದೆ.
     ಮಧ್ಯದಲ್ಲಿರುವ ಮೂರ್ತಿ 14 ಸೆ.ಮೀ.ಎತ್ತರವಿದ್ದು 12.5 ಸೆ.ಮೀ.ಅಗಲವಿದೆ. ಪ್ರಭಾವಳಿ ಸುಂದರವಾದ ಲತಾ ಬಳ್ಳಿಗಳ ಕೆತ್ತನೆಯಿಂದ ಕೂಡಿದ್ದು 15.ಸೆ.ಮೀ.ಎತ್ತರವಿದೆ. ಮೂರ್ತಿಯ ತಲೆಯ ಮೇಲ್ಗಡೆ ಜೈನ ಮುಕ್ಕೊಡೆ ಇದ್ದು ಅದು 8.5 ಸೆ.ಮೀ.ಎತ್ತರವಿದೆ.
     ಸಿಂಹ ಪೀಠದ ಮೇಲೆ ಈ ಮೂರ್ತಿಗಳನ್ನು ಕೆತ್ತಲಾಗಿದು ಪೀಠದ ಇಕ್ಕೆಲೆಗಳಲ್ಲಿ ಸಿಂಹ ಯ್ಯಾಳಿ ಚಿತ್ರಗಳನ್ನು ಕೊರೆಯಲಾಗಿದೆ. ಕೆಳ ಭಾಗದಲ್ಲಿರುವ ಮುಖ್ಯ ಮೂರ್ತಿಯೂ ಸೇರಿದಂತೆ ಇನ್ನಿತರ ಎರಡು ಚಿಕ್ಕ ಮೂರ್ತಿಗಳು ಕಮಲದ  ಹೂ ದಳಗಳ ಮೇಲೆ ಕುಳಿತಂತೆ ಚಿತ್ರಿಸಲಾಗಿದೆ. ಬಲಭಾಗದ ಮೂತಿಯ ಶಿರ ಜೆ.ಸಿ.ಬಿ ತಾಗಿ ಭಗ್ನವಾಗಿದೆ. ಎಲ್ಲಾ ಐದು ಮೂರ್ತಿಗಳು ಎಡಗಾಲ ಮೇಲೆ ಬಲಗಾಲನ್ನಿಟ್ಟು, ಪಾದದ ಮೇಲೆ ಎಡಗೈ ಮೇಲೆ ಬಲಗೈಯನ್ನಿಟ್ಟು ಧ್ಯಾನ ಭಂಗಿಯಲ್ಲಿ ಪರ್ಯಂಕಾಸನದಲ್ಲಿ  ಕುಳಿತಿರುವಂತೆ ಕೊರೆಯಲಾಗಿದೆ. ಮುಖ್ಯ ಮೂರ್ತಿಯ ಹಿಂಭಾಗದಲ್ಲಿ ಎಡ-ಬಲಗಳಲ್ಲಿ ಭುಜದಿಂದ ಮೇಲಕ್ಕೆ ಎರಡು ಮರದ ರೆಂಬೆಗಳನ್ನು ಕೆತ್ತಲಾಗಿದ್ದು ಅವುಗಳ ತುದಿಯಲ್ಲಿ ಪರ್ಯಂಕಾಸನದಲ್ಲಿ ಕುಳಿತ ಎರಡು ಮೂರ್ತಿಗಳನ್ನು ಕೆತ್ತಲಾಗಿದೆ.
     ಪೀಠದಲ್ಲಿ ಸಿಂಹ ಲಾಂಛನವಿರುವುದರಿಂದ ಇದೊಂದು ಮಹಾವೀರ ತೀರ್ಥಂಕರ? ಮೂರ್ತಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸಾಮಾನ್ಯವಾಗಿ ನಾಲ್ಕು ಮೂರ್ತಿಗಳಿರುವ ವಿಗ್ರಹಗಳು ದೊರೆಯುತ್ತವೆ. ಆದರೆ ಈ ರೀತಿಯ ಐದು ವಿಗ್ರಹಗಳಿರುವ ಮೂರ್ತಿ ದೊರೆಯುವುದು ಬಹಳ ವಿರಳ. ಈ ಮೂರ್ತಿ ಅತ್ಯಂತ ವಿಶಿಷ್ಟವಾಗಿದ್ದು ಇದೊಂದು ‘ಪಂಚತೀರ್ಥಿ’ ಜೈನ ವಿಗ್ರಹ ಎಂದು ಇತಿಹಾಸಕಾರರಾದ ಡಾ.ಶ್ರೀನಿವಾಸ ಪಾಡಿಗಾರ ಅಭಿಪ್ರಾಯ ಪಟ್ಟಿದ್ದಾರೆ.
     ತೀರ್ಥಂಕರ ಪರ್ಯಂಕಾಸನದಲ್ಲಿ ಧ್ಯಾನಮುದ್ರೆಯಲ್ಲಿದ್ದು, ಏಕಚಿತ್ತವಾಗಿ ನಾಸಿಕದ ತುದಿ, ನೀಳವಾದ ಜೋತು ಬಿದ್ದ ಕಿವಿಗಳು, ಗಂಭೀರವಾದ ಏಕಚಿತ್ತ ಮುಖ ಭಾವ, ಗುಂಗುರು ಕೂದಲು, ಕಮಲದ ದಳಗಳ ಮೇಲೆ ಪದ್ಮಾಸನದಲ್ಲಿ ಕುಳಿತ ತೀರ್ಥಕರನ ಕಾಲುಗಳು ಒಂದರ ಮೇಲೊಂದು. ತಲೆಯ ಮೇಲೆ ಮುಕ್ಕೊಡೆ ಈ ಮೂರ್ತಿ ಶಿಲ್ಪದ ವೈಶಿಷ್ಟ್ಯವಾಗಿದೆ. ಈ ಶಿಲ್ಪ ಕಲಾ ಸೌಂದರ್ಯ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಕೆತ್ತನೆ ಶೈಲಿಯಿಂದ ಈ ವಿಗ್ರಹ ಸುಮಾರು ಕ್ರಿ.ಶ.12-13ನೇ ಶತಮಾನದ ಹೊಯ್ಸಳ ಕಾಲದ್ದಿರಬಹುದೆಂದು ಊಹಿಸಬಹುದು.
      ಮೂರ್ತಿಯ ಹಿಂಭಾಗ ಸಂಪೂರ್ಣ ನುಣುಪಾತಿದ್ದು ಯಾವುದೇ ಶಾಸನವಾಗಲೀ ಕೆತ್ತನೆಯಾಗಲೀ ಇಲ್ಲ.  ಈ ಮೂರ್ತಿಯ ಮಾಟವನ್ನು ಗಮನಿಸಿದರೆ ಇದೊಂದು ಭಕ್ತರು ಹರಕೆ ಹೊತ್ತು ಕೆತ್ತಿಸಿ ನೀಡಿದ ಮೂರ್ತಿಯಂತೆ ಕಾಣುತ್ತದೆ.
      ನಿದಿಗೆ ಗ್ರಾಮದ ದೊಡ್ಡಕೆರೆ ಏರಿ ಮೀಲಿನ ಕಲ್ಲಿನಲ್ಲಿನ ಆರು ಸಾಲಿನ ಶಾಸನ ಯಲವಟ್ಟಿ ಕುರಿತು ಉಲ್ಲೇಖವನ್ನು ನೀಡುತ್ತಿದೆ. ಆ ಶಾಸನದ ಪಾಠ ಇಂತಿದೆ:
1ಸ್ವಸ್ತಿ ಸಮಸ್ತಸಕಳಗುಣಸಂಪಂನರಪ್ಪ ಶ್ರೀಮೂಲ
2ಸಂಘದೇಸಿಯಗಣಕೊಂಡಕುಂದಾನ್ವಯವೋಸ್ತಕಗಛ್ಛದ
3 .....
4
5ಗೌಡನ ಮಗ ಎಲವಟ್ಟಿಯದಾಸೆಯನಾಯಕನ ಸಿದ್ದಯಪ್ಪ ಭೂಮಿ
6ಯಿದುಮಂಗಳಮಹಾ ಶ್ರೀಶ್ರೀಶ್ರೀ
ಜೈನ ಧರ್ಮದ ಸಂಪ್ರದಾಯದಂತೆ ಸಲ್ಲೇಖನ ವೃತ ಆಚರಿಸಿ ನಿರ್ವಾಣ ಹೊಂದಲು ಜೈನರು ಶ್ರವಣ ಬೆಳಗೊಳ, ಕೊಪ್ಪಳ ಮೊದಲಾದ ಪ್ರಸಿದ್ಧ ಜೈನ ಕ್ಷೇತ್ರಗಳಿಗೆ ಹೋಗುತ್ತಿದ್ದಂತೆ ನಿದಿಗೆ, ಯಲವಟ್ಟಿ ಗ್ರಾಮಗಳಿಗೂ ಬರುತ್ತಿದ್ದರೆಂಬುದು ಈ ವಿಗ್ರಹದಿಂದ ತಿಳಿಯಬಹುದು.
ಯಲವಟ್ಟಿ, ಇಲ್ಲಿಗೆ ಸಮೀಪದ ಹೊಸೂಡಿ, ಪುರಲೆ, ಗುರುಪುರ, ನಿದಿಗೆ ಮೊದಲಾದ ಗ್ರಾಮಗಳು ಜೈನ ಧರ್ಮದ ಪ್ರಭಾವವಿದ್ದ ಗ್ರಾಮಗಳಾಗಿದ್ದವೆಂಬುದು ಇದರಿಂದ ವೇದ್ಯವಾಗುತ್ತದೆ. ಅಲ್ಲದೆ ಈ ಗ್ರಾಮಗಳಲ್ಲಿ ದೊರಕಿದ, ದೊರಕುತ್ತಿರುವ ಜೈನ ಶಿಲ್ಪಗಳು, ಶಾಸನಗಳು, ನಿಷಿಧಿ ಕಲ್ಲುಗಳು ಈ ಭಾಗದಲ್ಲಿ ಜೈನ ಧರ್ಮ ಉಛ್ರಾಯ ಸ್ಥಿತಿಯಲ್ಲಿತ್ತು ಎಂಬುದನ್ನು ಪುಷ್ಟೀಕರಿಸುತ್ತವೆ.
     ಈ ಮೂರ್ತಿಯನ್ನು ಅರ್ಥೈಸುವಿಕೆಯಲ್ಲಿ ಸಹಕರಿಸಿದ ನನ್ನ ಗುರುಗಳಾದ ಡಾ.ಶ್ರೀನಿವಾಸ ಪಾಡಿಗಾರ ಅವರಿಗೂ ಮಿತ್ರರಾದ ಡಾ.ಜಗದೀಶ ಅಗಸಿಬಾಗಿಲ ಅವರಿಗೂ, ಅಲ್ಲದೆ ಈ ವಿಗ್ರದ ಮಾಹಿತಿ ನೀಡಿದ ನನ್ನ ವಿದ್ಯಾರ್ಥಿನಿ ನಯನಾಳಿಗೂ ಮೂರ್ತಿಯನ್ನು ಜೋಪಾನವಾಗಿರಿಸಿಕೊಂಡ ಚಂದ್ರಪ್ಪ ಶಿವಣ್ಣ ಯಲವಟ್ಟಿ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಪರಾಮರ್ಶನ ಗ್ರಂಥಗಳು:
1.ಇ.ಸಿ.ಸಂಪುಟ ಗಿII P-I ನಂ.58, ಪುಟ ಸಂಖ್ಯೆ 61
2.ಡಾ.ವಾಸುದೇವನ್ ಸಿ.ಎಸ್.( ಸಂ)’ಮುಕ್ಕೊಡೆ’ ಜೈನ ಸಂಸ್ಕøತಿಯ ಕುರಿತ ಲೇಖನಗಳು, ಹಂಪಿ
3.ಭಟ್ ಸೂರಿ ಕೆ.ಜಿ. ‘ಹಾಡುವಳ್ಳಿ’ ಜೈನ ಶಾಸನ ವಾಸ್ತು-ಮೂರ್ತಿ ಶಿಲ್ಪ, ಹಂಪಿ.
4.ಡಾ.ಕಲಘಟಗಿ ಟಿ.ಜಿ. ‘ಜೈನಿಸಮ್ ಆಂಡ್ ಕರ್ನಾಟಕ ಕಲ್ಚರ್’ (ಸಂ).ಕ.ವಿ.ವಿ.ಧಾರವಾಡ.