ಹವ್ಯಾಸಿ ನಾಣ್ಯ ಸಂಗ್ರಹಕಾರರಲ್ಲಿ ದೊರೆತ ಇಂಡೋ-ಗ್ರೀಕ್, (ಬ್ಯಾಕ್ಟ್ರಿಯನ್ ದೊರೆ) ಮತ್ತು ಟೀಪು ಸುಲ್ತಾನ್ ಕಾಲದ ತಾಮ್ರದ
ನಾಣ್ಯಗಳು
ಬಿ.ಎಸ್. ಗುರುಪ್ರಸಾದ್
ಇತ್ತೀಚೆಗೆ ನಾನು ಒಬ್ಬ ಹವ್ಯಾಸಿ ನಾಣ್ಯ ಸಂಗ್ರಹಕಾರರಾದ ಶ್ರೀ ಬಿ.ಎಸ್. ನಟರಾಜ್, ಬೆಂಗಳೂರು ಅವರನ್ನು ಭೇಟಿ ಮಾಡಿದ
ಸಂದರ್ಭದಲ್ಲಿ, ಅವರು ಕೆಲವು ಅಪರೂಪದ ನಾಣ್ಯಗಳು ತಮ್ಮ ಬಳಿ ಇವೆಯೆಂದೂ
ಮತ್ತು ಅವುಗಳ ಬಗ್ಗೆ ತಮಗೆ ಯಾವ ಮಾಹಿತಿಯಾಗಲೀ/ವಿವರಗಳಾಗಲೀ ದೊರೆಯುತ್ತಿಲ್ಲವೆಂದು ತಿಳಿಸಿದರು.
ಅವರು ಈಗಷ್ಟೆ ನಾಣ್ಯ ಸಂಗ್ರಹದ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ
ಸಂಗ್ರಹದಲ್ಲಿರುವ ನಾಣ್ಯಗಳೆಲ್ಲಾ, ಅವರ ಪೂರ್ವಿಕರು ಸಂಗ್ರಹಿಸಿರುವ
ನಾಣ್ಯಗಳಾಗಿವೆ. ಈಸ್ಟ್ ಇಂಡಿಯಾ ಕಂಪೆನಿಯ ನಾಣ್ಯಗಳು ಬಹು ಸಂಖ್ಯೆಯಲ್ಲಿವೆ. ಅವರ ಬಳಿ ಆಲ್ಬಂ
ಇಲ್ಲದ ಕಾರಣ, ಒಂದು ಆಲ್ಬಂನ್ನು ಖರೀದಿಸಿ, ನಾಣ್ಯಗಳನ್ನು
ವ್ಯವಸ್ಥಿತ ರೀತಿಯಲ್ಲಿ ಪ್ರದರ್ಶನ ಮಾಡುವ ವಿಧಾನವನ್ನು ಅವರಿಗೆ ತಿಳಿಸಲಾಯಿತು. ಆ ಕಾರ್ಯದಲ್ಲಿ
ಅವರು ಈಗ ನಿರತರಾಗಿದ್ದಾರೆ. ನನ್ನ ಗಮನ ಸೆಳೆದ, ಅವರ ಬಳಿಯಿರುವ “ಅಪರೂಪದ ನಾಣ್ಯಗಳು’’ ಯಾವುದೆಂದು
ಪರಿಶೀಲಿಸಲಾಗಿ, ಅವುಗಳು ಈ ಕೆಳಕಂಡಂತೆ ಇವೆ. ಅವುಗಳನ್ನು ಈ
ಸಂಪ್ರಬಂಧದ ಮೂಲಕ ಇತಿಹಾಸಕ್ತರ ಗಮನಕ್ಕೆ ತರುತ್ತಿದ್ದೇನೆ.
೧. ಇಂಡೋ-ಗ್ರೀಕ್ ನಾಣ್ಯ
ಈ ನಾಣ್ಯ ದ್ವಿಮುಖ ಮುದ್ರಾ ವಿಧಾನದ ತಾಂತ್ರಿಕತೆ ಯಲ್ಲಿ
ತಯಾರಿಸಿದ ನಾಣ್ಯ (ಆie Sಣಡಿuಛಿಞ ಅoiಟಿ)
ಲೋಹ : ತಾಮ್ರ ತೂಕ : ೧೦.೪ gms ಅಗಲ : ೨.೫ ಛಿms
ವ್ಯಾಸ : ೮ ಛಿms ಆಕಾರ : ವೃತ್ತಾಕಾರ
ಮುಮ್ಮುಖ
ಶಿರಸ್ತ್ರಾಣ ಧರಿಸಿ (ಆiಚಿಜem)- ಬಲಕ್ಕೆ ತಿರುಗಿರುವ “ಹಿಪ್ಪೊ ಸ್ಟ್ರಾಟಸ್’’ನ ಮುಖ ನಾಣ್ಯದ ಮಧ್ಯದಲ್ಲಿದೆ.
ಹಿಮ್ಮುಖ
ಹಿಂಗಾಲಿನಿಂದ ಚಿಮ್ಮುತ್ತಿರುವ ಭಂಗಿಯ ಕುದುರೆಯ ಮೇಲೆ
ಕುಳಿತಿರುವ ಸವಾರ. ಕುದುರೆ ಬಲಕ್ಕೆ ಚಲಿಸುತ್ತಿದೆ.
ಮುಮ್ಮುಖದಲ್ಲಿರುವ ಬರಹ : ನಾಣ್ಯದ ಸುತ್ತಲೂ ವೃತ್ತಾಕಾರದಲ್ಲಿ ಗ್ರೀಕ್ ಭಾಷೆಯಲ್ಲಿ
ಗ್ರೀಕ್ ಲಿಪಿಯಲ್ಲಿ “ಬ್ಯಾಸಿಲಿಯೋಸ್
ಸೊಟೆರೋಸ್ ಇಪ್ಪೊಸ್ಟ್ರಾಟಸ್’’ ಎಂದು ಅಚ್ಚಾಗಿದೆ.
ಹಿಮ್ಮುಖದಲ್ಲಿರುವ ಬರಹ
ನಾಣ್ಯದ ಸುತ್ತಲೂ ಪ್ರಾಕೃತ ಭಾಷೆ ಮತ್ತು ಖರೋಷ್ಠಿ ಲಿಪಿಯಲ್ಲಿ
“ಮಹಾರಾಜಸ ತ್ರಾತಾರಸ
ಜಯತಸ ಹಿಪ್ಪೋಸ್ಟ್ರಾಟಸ’’ ಎಂದಿದೆ.
ಈ ನಾಣ್ಯದ ಮೇಲೆ ಯಾವ ಬದಿಯಲ್ಲಾಗಲೀ ಕಾಲವನ್ನು ನಮೂದಿಸಿಲ್ಲ.
ಹಿಪ್ಪೋಸ್ಟ್ರಾಟಸ್
ಪಶ್ಚಿಮ ಗಾಂಧಾರದ ಅಧಿಪತಿಯಾಗಿದ್ದ (ರಾಜನಾಗಿದ್ದ) ನಿಕಿಯಾಸ್
ಕ್ರಿ.ಪೂ. ಒಂದನೇ ಶತಮಾನದಲ್ಲಿ ರಾಜ್ಯವಾಳುತ್ತಿದ್ದ. ಇವನ ಮಗನೇ ಹಿಪ್ಪೋಸ್ಟ್ರಾಟಸ್ ಹಾಗೂ ಕೊನೆಯ
ಇಂಡೋ-ಗ್ರೀಕ್ ರಾಜ. ಇವನು ತನ್ನ ರಾಜ್ಯವನ್ನು ಪಶ್ಚಿಮ ಪಂಜಾಬ್, ತಕ್ಷಶಿಲಾ ಮತ್ತು ಪುಷ್ಕಲಾವತಿಯವರೆಗೂ
ವಿಸ್ತರಿಸಿದ್ದನು. ಇವನ ಆಳ್ವಿಕೆಯಲ್ಲಿ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಭಾರತೀಯ
ಪದ್ದತಿಯಂತೆ ಚಲಾವಣೆಗೆ ತಂದಿದ್ದನು. ಆ ನಾಣ್ಯಗಳೆಲ್ಲವೂ ಮುದ್ರಾಂಕಿತ ನಾಣ್ಯಗಳಾಗಿದ್ದವು.
ಇಂಡೋ-ಗ್ರೀಕ್ ಅರಸರ ನಾಣ್ಯಗಳ ವೈಶಿಷ್ಟ್ಯತೆ
ಭಾರತದಲ್ಲಿ ಮೊಟ್ಟ ಮೊದಲಿಗೆ ನಾಣ್ಯಗಳ ಎರಡೂ ಕಡೆಯಲ್ಲಿ ಅಂಕಣದ
(ಐegeಟಿಜs) ಬಳಕೆಯನ್ನು
ತಂದವರಲ್ಲಿ ಇಂಡೋ-ಗ್ರೀಕ್ ಅರಸರೇ ಮೊದಲಿಗರು. ದ್ವಿಭಾಷೆ ಮತ್ತು ಬರಹಗಳನ್ನು ಇಂಡೋ-ಗ್ರೀಕ್ ರಾಜರ
ಕಾಲದಲ್ಲಿ ಕಾಣಬಹುದು. ಗ್ರೀಕ್ ಅರಸರ ನಾಣ್ಯಗಳಲ್ಲಿಯ ಅಂಕಣಗಳು ಮುಂಬದಿಯಲ್ಲಿ ಗ್ರೀಕ್ ಭಾಷೆ
ಮತ್ತು ಗ್ರೀಕ್ ಬರಹದಲ್ಲೂ ಸಾಮಾನ್ಯವಾಗಿ ಕಂಡುಬರುತ್ತದೆ. ಹಿಂಗಡೆಯಲ್ಲಿ ಪ್ರಾಕೃತ ಭಾಷೆಯಲ್ಲೂ, ಮತ್ತು ಖರೋಷ್ಠಿ ಬರಹದಲ್ಲೂ
ಕಂಡುಬರುತ್ತದೆ. ಎರಡೂ ಕಡೆಯ ಅಂಕಣಗಳು ಷಷ್ಠಿ ವಿಭಕ್ತಿ ಏಕವನಚದಲ್ಲಿವೆ. ಉಚಿsiಟeos ಎಂಬ ಶಬ್ಧ, ಃಚಿsiಟeus ಎಂಬ ಗ್ರೀಕ್
ಶಬ್ದದ ಷಷ್ಟಿ ವಿಭಕ್ತಿಯ ಏಕವಚನ. ಅಂದರೆ ರಾಜರ ರಾಜ ಮಹಾರಾಜ ಎಂದು ಭಾಷಾಂತರಿಸಿದೆ. Soಣeಡಿos ಎಂಬುದು, Soಣeಡಿ ತ್ರಾತಾರ
(ರಕ್ಷಕ) ಎಂಬ ಪ್ರಾಕೃತ ಭಾಷೆಯ ಷಷ್ಠಿ ವಿಭಕ್ತಿಯ ಏಕವಚನ.
ಗ್ರೀಕ್ ಅರಸರ ಆಳ್ವಿಕೆ ಮುಗಿದ ನಂತರವೂ. ಅವರ ತರುವಾಯ ಆಳಿದ
ಗ್ರೀಕೇತರ ಅರಸರೂ, ಬ್ಯಾಕ್ಟ್ರಿಯನ್
ಅರಸರೂ, ವಿಮಕತ್ಫೀಷರು ಮತ್ತು ಕುಶಾನರ ಅರಸನಾದ ಕಾನಿಷ್ಕನೂ, ರಾಜರ ರಾಜ-ಮಹಾರಾಜ-ರಾಜಾಧಿರಾಜ, ಅಪರಜಿತಸ (ಸೋಲಿಸಲ್ಪಡದವನು)
ಎಂದು ದೆಮೆತ್ರಿಯಸ್, ದಿಯೋದೋತಿ, ಜಯಧರಸ,
ಅಂತಿಮುಖಸ, ಮುಂತಾದವರು ಇದೇ ರೀತಿಯಲ್ಲಿ
ನಾಣ್ಯಗಳನ್ನು ಅಚ್ಚು ಹಾಕಿಸಿರುವುದು ಕಂಡುಬರುತ್ತದೆ.
ತಲೆದಿರಿಸು (ಆiಚಿಜem):
ಛಾಯಾಚಿತ್ರವನ್ನು ಗಮನಿಸಿದರೆ, ರಾಜನು ತಲೆಗೆ ಕಿರೀಟವನ್ನು ಧರಿಸಿಲ್ಲ.
ಕೇವಲ ರಾಜಲಾಂಛನವಿರುವ ತಲೆದಿರಿಸು ಅಥವಾ ಪಟ್ಟಿಯನ್ನು ತಲೆಯ ಕೆಳಗೆ, ಸುತ್ತಲೂ
ಧರಿಸಿ, ತಲೆಯ ಹಿಂಭಾಗದಲ್ಲಿ ಕಟ್ಟಿದೆ. ದಿರಿಸಿನ/ಪಟ್ಟಿಯ ಎರಡೂ ತುದಿಗಳು
ಹಿಂದೆ ಎದ್ದು ಕಾಣುತ್ತದೆ. ಬಹುತೇಕ ಇಂಡೋ-ಗ್ರೀಕ್ ನಾಣ್ಯಗಳಲ್ಲಿ ಇದೇ ರೀತಿಯ ತಲೆದಿರಿಸನ್ನು ನಾವು ಗಮನಿಸಬಹುದು. ಸಾಮ್ರಾಟ್
ಅಲೆಗ್ಸಾಂಡರನು ಇದೇ ರೀತಿಯ ತಲೆದಿರಿಸನ್ನು ಧರಿಸಿರುವ ಚಿತ್ರಗಳನ್ನು ನಾವು ಇತಿಹಾಸದ
ಗ್ರಂಥಗಳಲ್ಲಿ ಕಾಣುತ್ತೇವೆ. ಬಹುಶಃ ಪರ್ಷಿಯನ್ ದೊರೆಗಳ ಶೈಲಿಯನ್ನು ಇವರೆಲ್ಲರೂ ಅನುಕರಿಸಿರಬಹುದೆಂದು
ವಿದ್ವಾಂಸರ ಅಭಿಪ್ರಾಯ.
ನಾಣ್ಯದ ಬೆಲೆ
ಈ ನಾಣ್ಯದ ಬೆಲೆ/ಕಿಮ್ಮತ್ತು ಎಲ್ಲಿಯೂ ನಮೂದಿಸಿಲ್ಲ.
೨. ಇವರ ನಾಣ್ಯಸಂಗ್ರಹದಲ್ಲಿನ ಇನ್ನೊಂದು ನಾಣ್ಯವೆಂದರೆ, ಟೀಪುಸುಲ್ತಾನನ ತಾಮ್ರದ ನಾಣ್ಯ.
ಟೀಪುಸುಲ್ತಾನನ ನಾಣ್ಯ
ಈ ನಾಣ್ಯವೂ ಸಹ ದ್ವಿಮುಖ ಮುದ್ರಾ ವಿಧಾನ ತಾಂತ್ರಿಕತೆಯಲ್ಲಿ
ತಯಾರಿಸಿದ ನಾಣ್ಯ. (ಜie-sಣಡಿuಛಿಞ ಛಿoiಟಿ)
ಲೋಹ : ತಾಮ್ರ ತೂಕ : ೧೧.೧೧ gms ಅಗಲ : ೨.೨ ಛಿms
ವ್ಯಾಸ : ೭.೪ ಛಿms ಆಕಾರ : ವೃತ್ತಾಕಾರ
ಮುಮ್ಮುಖ
ಒಂದು ಸಾಲಂಕೃತವಾದ ಆನೆ ಬಲದಿಂದ ಎಡಕ್ಕೆ ಚಲಿಸುತ್ತಿರುವಂತೆ
ಚಿತ್ರಿಸಲಾಗಿದೆ. ಬಾಲವು ಮೇಲೆತ್ತಿಕೊಂಡು ಬೆನ್ನಿಗೆ ಸಮಾನಾಂತರವಾಗಿದೆ. ಸೊಂಡಿಲನ್ನು ಕೆಳಗೆ
ಬಿಟ್ಟಿದೆ. ಬೆನ್ನ ಮೇಲೆ ಅಲಂಕಾರಿಕ/ಕಸೂತಿಯುಕ್ತ ಬಟ್ಟೆ ಹೊದಿಸಲಾಗಿದೆ. ಆನೆಯ ಬೆನ್ನಿನ
ಮೇಲ್ಭಾಗದಲ್ಲಿ ಹಿಜಿರಾ ಶಕೆಯಲ್ಲಿ ೧೨೨೦ ಎಂದು ಮುದ್ರಿಸಿದೆ.
ಹಿಮ್ಮುಖ
ನಾಣ್ಯದ ಹಿಂಬದಿಯಲ್ಲಿ ಪರ್ಶಿಯನ್ ಭಾಷೆಯಲ್ಲಿ “ಜರ್ಬ-ಇ-ಪಟನ್’’ ಎಂದು ಮುದ್ರಿಸಲಾಗಿದೆ. ನಾಣ್ಯದ ಸುತ್ತಲೂ ಎರಡು ವೃತ್ತಗಳಿವೆ. ಒಂದು
ಗೆರೆಯಿಂದ ಮಾಡಿದ ವೃತ್ತ, ಅದರ ಆಚೆಗೆ ಚುಕ್ಕೆಯಿಂದ ಕೂಡಿದ ವೃತ್ತ.
ಮಧ್ಯದಲ್ಲಿ ಅಲಂಕಾರಿಕ ಚುಕ್ಕೆಗಳಿವೆ.
ಮೌಲ್ಯ
ನಾಣ್ಯದ ಮೌಲ್ಯವನ್ನು ಎಲ್ಲೂ ನಮೂದಿಸಿಲ್ಲ. ಇದರ ಬೆಲೆ ಅರ್ಧ
ಪೈಸೆ ಮತ್ತು ಈ ನಾಣ್ಯವನ್ನು “ಬಹ್ರಂ’’ ಎಂದು ಕರೆಯಲ್ಪಡುತ್ತಿತ್ತು. ಅದರ ಮಾಹಿತಿ ಈ ರೀತಿ ಇದೆ. ಟೀಪು
ಸುಲ್ತಾನನು ಐದು ನಮೂನೆಯ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದನು.
೧) ೨ ಪೈಸೆಯ ಓತ್ಮನಿ/ಮುಷ್ಕರಿ
೨) ೧ ಪೈಸೆಯ ಜೋಹ್ರಾ
೩) ೧/೨ ಪೈಸೆಯ ಬಹ್ರಾಂ-ಒಂದು ಬಹ್ರಾಂಗೆ ೨ ಅಖ್ತರ್‌ಗಳು.
ಬಹ್ರಾಂ ಎಂದರೆ ಪರ್ಶಿಯನ್ ಭಾಷೆಯಲ್ಲಿ “ಮಂಗಳ’’ ಗ್ರಹ ಎಂದರ್ಥ.
೪) ೧/೪ ಪೈಸೆಯ ಅಖ್ತರ್
೫) ೧/೮ ಪೈಸೆಯ ಕುತ್ಬ್
ಅರ್ಧ ಪೈಸೆಯ ನಾಣ್ಯಗಳು ಟೀಪು ಸುಲ್ತಾನನು ಸ್ಥಾಪಿಸಿದ ೧೭
ಟಂಕಸಾಲೆಗಳಿಂದಲೂ ಮುದ್ರಿತವಾಗುತ್ತಿದ್ದವು. (ಕೇರಳದ ಕ್ಯಾಲಿಕಟ್ ಟಂಕಸಾಲೆಯನ್ನು ಹೊರತುಪಡಿಸಿ)
ಅವನ ಪ್ರತಿಯೊಂದು ಟಂಕಸಾಲೆಗೂ ಒಂದು ಕಲ್ಪಾನಮಯ ಹೆಸರನ್ನು ಕೊಟ್ಟಿದ್ದನು.
ನಾಣ್ಯದ ಕಾಲಗಣನೆ
ಟೀಪುವಿನ ಮೊದಲ ನಾಲ್ಕು ವರ್ಷದ ರಾಜ್ಯಭಾರದಲ್ಲಿ, ಅವನು ಹಿಜಿರಾ ಶಕೆ ಗಣನೆ ಪ್ರಾರಂಭಿಸಿ
(೧೧೯೭ರಿಂದ ೧೨೦೦ ರವರೆಗೆ), ೧೨೦೧ ರಿಂದ ಮೌಲೂದಿ ಶಕೆಯನ್ನು ಆರಂಭಿಸಿದನು.
ಇಂಡೋ ಗ್ರೀಕ್, ಬ್ಯಾಕ್ಟ್ರಿಯನ್, ಕುಶಾನರು ಮೊದಲಾದ
ರಾಜಮನೆತನಗಳ ಇತಿಹಾಸ ತಿಳಿಯಲು ನಾಣ್ಯಗಳು ಆಕರ ಸಾಮಗ್ರಿಗಳಾಗುತ್ತವೆ. ಆ ಕಾಲದ ನಾಣ್ಯಗಳ
ಅಧ್ಯಯನಕ್ಕೆ ನಾವು ವಸ್ತು ಸಂಗ್ರಹಾಲಯದಲ್ಲೂ ಮತ್ತು ಖಾಸಗಿ ನಾಣ್ಯ ಸಂಗ್ರಹಕಾರರಲ್ಲೂ ಸಹಾಯ ಪಡೆಯ
ಬಹುದು. ಅನೇಕ ರಾಜಮನೆತನಗಳ ನಾಣ್ಯಗಳು ಬೆಳಕಿಗೆ ಬಾರದೇ, ನಾಣ್ಯ
ಇತಿಹಾಸದಲ್ಲಿ ಕೊರತೆಯಾಗಿದೆ. ವಸ್ತುಸಂಗ್ರಹಾಲಯಗಳು ನಾಣ್ಯಗಳ ಸಂರಕ್ಷಣೆಗೆ ತೊಡಗಿರುವುದು
ಮಾತ್ರವಲ್ಲದೆ, ಖಾಸಗಿಯಾಗಿಯೂ ಸಾಕಷ್ಟು ಸಂಗ್ರಹಕಾರರಿದ್ದಾರೆ.
[ಬ್ಯಾಕ್ಟ್ರಿಯನ್ ನಾಣ್ಯದ ಬಗ್ಗೆ ನನಗೆ ಅಗತ್ಯವಾದ
ಸಲಹೆ ಮತ್ತು ಸೂಚನೆ ಕೊಟ್ಟು, ಅದರ ಮೂಲವನ್ನು ಪತ್ತೆ ಹಚ್ಚುವ
ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಡಾ. ದೇವರಕೊಂಡಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು, ಇವರಿಗೆ ನನ್ನ ಧನ್ಯವಾದಗಳು.]
ಆಧಾರಸೂಚಿ
೧. ಕರ್ನಾಟಕ
ನಾಣ್ಯ ಪರಂಪರೆ, ಎ.ವಿ. ನರಸಿಂಹಮೂರ್ತಿ, ಅಧ್ಯಾಯ ೮ರಿಂದ ಆಯ್ದ ಕೆಲವು ಮಾಹಿತಿಗಳು.
The
coins of Haider Ali and Tippu Sultan, 1987, edition by J.R. Henderson.
3. Art Motifs on Ancient
Indian Coins
by Prashanth Srivatsava-Edition 2001.
4. Numismatic Art of India-An Album of the Master pieces of
Indian Coins (Chapter: Coins of Indo-Greeks) - by B.N. Mukharjee.
5. Coins - by Parameshwari Lal Gupta.
೨.
No comments:
Post a Comment