ವರದಿ: ಡಾ.ಬಾಲಕೃಷ್ಣ ಹೆಗಡೆ
ಶಿವಮೊಗ್ಗ: ಪೂರ್ವಿಕರಿಂದ ಐತಿಹಾಸಿಕವಾಗಿ ಬಂದ ಪರಂಪರೆಗಳು ನಮ್ಮ ನಾಡಿನ ದ್ಯೋತಕವಾಗಿವೆ. ಅವುಗಳನ್ನು
ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ತಲುಪಿಸುವ ಜವಾಬ್ದಾರಿ ಇಂದಿನ ಇತಿಹಾಸ ಅಧ್ಯಾಪಕರ ಹಾಗೂ
ಇತಹಾಸ ಆಸಕ್ತರ ಮೀಲಿದೆ ಎಂದು ಕುವೆಂಪು ವಿಶ್ವಿವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರ ಡಾ.ರಾಜಾರಾಮ
ಹೆಗಡೆ ತಿಳಿಸಿದರು.
ಅವರು ದಿ.೧೯-೦೮-೨೦೧೩ರಂದು ನಗರದ ಡಿ.ವಿ.ಎಸ್.ಕಾಲೇಜಿನ
ಸಿಂಗಾರ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಘಟಕ ಹಾಗೂ ಆ ಕಾಲೇಜಿನ ಇತಿಹಾಸ
ವೇದಿಕೆ ಸಂಯುಕ್ತವಾಗಿ ಏರ್ಪಡಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿಶೇಷ
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ದೃಷ್ಟಿಯಿಂದ ನಾಡಿನ ಪುರಾತನ ದೇವಾಲಯಗಳು, ಕೋಟೆ ಕೊತ್ತಲಗಳು, ಸ್ಮಾರಕಗಳು ಮಹತ್ವ ಪಡೆದುಕೊಂಡಿವೆಯಾದರೂ ಪ್ರತಿಯೊಂದು ಗ್ರಾಮದಲ್ಲೂ ಸಣ್ಣ ಸಣ್ಣ ಸಂಗತಿಗಳು
ಪರಂಪರೆಯ ಮಹತ್ವ ಹೊಂದಿವೆ. ಅವುಗಳ ಸಂರಕ್ಷಣೆಯೂ ತೀರಾ ಮಹತ್ವದ್ದಾಗಿದೆ ಎಂದು ಅಭಿಪ್ರಾಯ
ಪಟ್ಟರು.
ಶಿವಮೊಗ್ಗ ಜಿಲ್ಲೆಯಲ್ಲಿ ಲಕ್ಷಾಂತರ ವರ್ಷಗಳ ಪುರಾತನ ಸಂಸ್ಕೃತಿಗಳ ನೆಲೆಗಳು ಸಿಗುವುದು
ಕಷ್ಟ ಎಂಬ ಕಲ್ಪನೆ ಇತ್ತು. ಆದರೆ ಇತ್ತೀಚಿನ ವ ರ್ಷಗಳಲ್ಲಿ ಕೈಗೊಳ್ಳಲಾದ ಭೂ ಉತ್ಖನಗಳಿಂದ
ಮಲೆನಾಡು ಅದರಲ್ಲಿಯೂ ಶಿವಮೊಗ್ಗ ಜಿಲ್ಲೆಗೆ ಅತ್ಯಂತ ಪುರಾತನ ಇತಿಹಾಸವಿದೆ ಎಂದು ಭದ್ರಾ
ಪ್ರಾಜೆಕ್ಟ ಪ್ರದೇಶದಲ್ಲಿ ದೊರೆತ ಪಳಿವಳಿಕೆಗಳಿಂದ ತಿಳಿದು ಬಂದಿದೆ ಎಂದರು.
ಜಿಲ್ಲೆಯಲ್ಲಿ ಪಶುಸಂಗೋಪನೆ ಅಧಿಕವಾಗಿತ್ತು ಎನ್ನುವುದು ಅನೇಕ ಕಡೆ ದೊರೆತ ಗೋಸಾಸ
ಕಲ್ಲುಗಳಿಂದ ತಿಳಿದುಬರುತ್ತದೆ. ಅಲ್ಲದೆ ಮಡಿಕೆ, ಮಡಿಕೆ ಚೂರು ದೊರೆಯುವ ಸ್ಥಳ, ವೀರಗಲ್ಲು, ಮಹಾಸತಿ ಕಲ್ಲು, ನಿಷಧಿ ಕಲ್ಲು, ಗಡಿ ಕಲ್ಲುಗಳು, ನಿಲಸ್‌ಗಲ್ಲುಗಳು, ತಾಳೆಗರಿ, ತಾಮ್ರ ಪತ್ರಗಳು ನಮ್ಮ
ಪೂವಿಕರು ನೀಡಿದ ಪರಂಪರೆಯಾಗಿವೆ. ಅವುಗಳನ್ನು ಶೋಧಿಸಿ ಸಂರಕ್ಷಿಸುವ ಕೆಲಸವಾಗಬೇಕು ಎಂದು ಅವರು
ಕರೆ ನೀಡಿದರು.
ಮಲೆನಾಡಿಗೆ ಬಹಯ ಹಿಂದೆಯೇ ಕಬ್ಬಣ ಬಂದ
ಕುರುಹುಗಳು ಕಮ್ಮಾರಘಟ್ಟದಲ್ಲಿ ಸಿಕ್ಕ ಅವಶೇಷಗಳಿಂದ ತಿಳಿದು ಬರುತ್ತದೆ ಎಂದ ಅವರು ಪೂರ್ವಿಕರು
ನೀಡಿದ ಪರಂಪರೆಯನ್ನು ಹಾಳು ಮಾಡುವ ಹಕ್ಕು ನಮಗೆ ಇಲ್ಲ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಇತಿಹಾಸ, ಪರಂಪರೆಗಳಿಗೆ ಸಂಬಂಧಿಸಿದಂತೆಇನ್ನೂ ವ್ಯಾಪಕ ಸಂಢೋಧನೆ, ಕ್ಷೇತ್ರಕಾರ್ಯಗಳು ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾಡನಾಡಿದ ಅಕಾಡೆಮಿಯ ಜಿಲ್ಲಾ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ, ಕನಾಟಕ ಇತಿಹಾಸ ಅಕಾಡೆಮಿ ಕಳೆದ ೨೬ ವರ್ಷಗಳಿಂದ ನಾಡಿನ ಐತಿಹಾಸಕಿ
ಪರಂಪರೆ ಉಳಿಸುವ ನಿಟ್ಟಿನಲ್ಲಿ ಪ್ರತಿ ವ ರ್ಷ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡು
ಬರುತ್ತಿದೆ. ಆನಸಾಮಾನ್ಯರಿಗೆ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ತಲುಪಿಸುವ, ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.
ಡಿ.ವಿ.ಎಸ್.ಕಾಲೇಜಿನ ಪ್ರಾಂಶುಪಾಲ ಪ್ರೊ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ
ಮುಖ್ಯಸ್ಥ ಪ್ರೊ.ಟಿ.ಎಸ್.ಗೋಪಾಲ್, ಡಾ.ಎಸ್.ಜಿ.ಸಾಮಕ ಮೊದಲಾದವರು ಉಪಸ್ಥಿತರಿದ ಕಾಲೇಜಿನ ಇತಿಹಾಸ ವೇದಿಕೆ ಸಂಚಾಲಕ
ಪ್ರೊ.ಕೆ.ಜಿ.ವೆಂಕಟೇಶ ಸ್ವಾಗತಿಸಿದರು. ಕಿರಣಕುಮಾರ ಎಚ್.ಕಾರ್ಯಕ್ರಮ ನಿರ್ವಹಿಸಿದರು. ಬಾಷಾ
ವಂದಿಸಿದರು.
No comments:
Post a Comment