Saturday, March 23, 2013

ಶೆಟ್ಟರ್‌-ಕೃತಿ"ಸೋಮನಾಥಪುರ" -ವಿಮರ್ಶೆ


ಈ ವಿಮರ್ಶೆಯಲ್ಲಿರುವ  ಅಭಿಪ್ರಾಯವು ಪೂರ್ಣವಾಗಿ ಲೇಖಕರದು.ಇತಿಹಾಸಕಾರರು ಗಮನಿಸಿ ಚರ್ಚೆ ಮಾಡಲು ಪ್ರಕಟಿಸಿದೆ.
A Passé on Somanathapura
Review of S. Settar’s Somanathapura (2nd edition),
Ruvari, Bangalore, 2012, pages xvi+172, price Rs. 250.
– Manu V. Devadevan
Somanathapura, an idyllic village on the banks of Kaveri in the Mysore district
of Karnataka, needs no introduction to students of art history in India. The
famous Kesava temple found here is one of the exquisite treasures of temple
architecture in the country and – save the Sun temple of Konark in Odisha – the
finest thirteenth century structure from the subcontinent in terms of grandeur and
workmanship. Of course, the Kesava cannot boast of a rich and checkered history
comparable to the great temples of Udupi, Melukote or Sringeri in Karnataka, or
to many living temples of considerable antiquity in other parts of peninsular India,
like the Padmanabha at Tiruvanantapuram in Kerala, the Jagannatha and the
Lingaraja in Odisha, Tirupati, Kalahasti and Simhachalam in Andhra Pradesh, and
Srirangam, Chidambaram, Palani and Suchindram in Tamilnadu. This in no way
undermines its importance, though. Somanathapura can any day be the subject of
a rich and rewarding study. The book under review is one such attempt by the
renowned art historian, S Settar. Sadly though, by no counts is this attempt a
successful one.
Although the book claims to be “an illustrated monograph”, it lacks some of
the basic prerequisites of a historical monograph. There are no references in it by
way of footnotes, endnotes or in-text citations, so it is not easy to verify how
authentic the facts are. There is no bibliography, and the two-page bibliographical
note (pp. 163-64) is far from satisfactory. Most chapters are too short and the
discussion abysmally terse to be scholarly. For instance, the third chapter on the
rise and fall of Somanathapura is all but 281 words long (pp. 41-42), the fifth
chapter on the founder of the temple, 325 words (pp. 46-47), the eleventh chapter
on a mythical sculptor, 270 (pp. 60-61), the fourteenth chapter on the time taken
to build the temple, 324 (pp. 78-79) and so on. The preface is longer than most
chapters (pp. 1-6). Articles in newspaper supplements tend to be more respectable
in terms of their length than many a chapter in this monograph. The book also
lacks uniformity of presentation, which a scholarly work warrants. At one place,
dates are mentioned as “1269-1279”, but elsewhere on the same page, we have it
in the more popular format, “1269-76” (p. 55). At one place, we have “Saivasthana”
followed in the next paragraph by “Saiva sthanas” without the hyphen and
with the suffix in italics (ibid). There is “Saiva” at one place with and “Saiva” in
the next sentence without diacritical marks (p. 52). The diacritical marks are not
2
uniform and oftentimes, incomplete. So, the book does not qualify to be called a
monograph, when looked at from the standpoint of form.
Moving on to the content, the work is equally pathetic. There is no argument,
no central thesis, only a pastiche of facts. The cumulative significance of these
facts in the making and unmaking of Somanathapura is nowhere taken up for
discussion. Some of these facts and suggestions are indeed interesting. The
possibility of the mythical sculptor Jakka or Jakkana being an archetype of Jakka
(Prakrit) or Yaksha (Sanskrit), the presiding deity of plastic arts, is one such
suggestion (pp. 60-61). The discussion on the likelihood of the master-sculptor
Mallitamma “offering models or literally laying down the rules of carving” points
to the author’s careful observations, comparisons and analyses (p. 77). The career
of Mallitamma engages the thoughtful reader in more ways than one (pp. 73-77).
These sidelights do not, however, substitute for the poor historical light, which the
author throws on Somanathapura. The sculptors found at Somanathapura point to
a marked departure in form and taste when compared to the sculptors of the
Badami Chalukya, Rashtrakuta or Kalyana Chalukya times. What were these
changes and what do they tell us about the mentality, which brought them forth?
Settar provides no answer (for he does not raise such crucial questions). How do
we contextualize the political and economic significance of Somanathapura at a
time when the Cholas and Pandyas were on the decline in the deep south and
ruling houses established by warlords from the frontiers – like the Hoysalas, the
Seunas and the Kakatiyas – held sway over much of Deccan? The study fails to
address this question too. Settar points to the difficulties in using expressions like
Hoysala temple, Hoysala style and so on (pp. 10-11), but he comes up with no
alternative scheme of classification. He remains faithful to dynastic labels
throughout the study.
Finally, readers of this “illustrated monograph” are advised not to consult the
illustrations to which the author invites our attention in the text so often. There is
no assurance that they will succeed in finding them. Take for example, the
reference to plates 10 and 11 as Mondusale temple (p. 26). Turn to plates 10 and
11, and what you find is a relief sculpture from the Kesava temple. Look for “the
porch or the railing…divided into three sections” (p. 91) on plate 38, and what
you will see there is a Yaksha with a huge belly. There is a carved ceiling on plate
43 and a navaranga on plate 44, but the text tells you that these are elephants (p.
105). On plate 45 is the Kesava temple and on plate 46, four Yakshas. The text
tries to persuade you that what you see in these plates are “525 horses” (p. 105).
And then, try to locate “the four-armed images” on plate 58, 59 and 61 (p. 112) or
the portraits of Vishnu on plates 57 and 65 (p. 110), and you will wake up to the
fact that there are only forty-seven plates in the book. Small wonder if readers feel
that the author has taken them for a ride.

ಬಾಸ್ಲಾಪುರದ ನವಶೋಧಿತ ಶಾಸನ



ಗದಗ ಜಿಲ್ಲೆ ರೋಣ ತಾಲ್ಲೂಕಿನ ಬಾಸ್ಲಾಪುರದ ನವಶೋಧಿತ ಶಾಸನ
ಡಾ. ಎಸ್.ಕೆ. ಮೇಲಕಾರ                                           ಡಾ. ಆರ್.ಎಂ. ಷಡಕ್ಷರಯ್ಯ
ಮ್ಯೂಜಿಯಂ ಮೇಲ್ವಿಚಾರಕರು,                                                                 ಇತಿಹಾಸ ಮತ್ತು ಪುರಾತತ್ವ ಪ್ರಾಧ್ಯಾಪಕರು,
ಕನ್ನಡ ಸಂಶೋಧನ ಸಂಸ್ಥೆ,                                                                                                                   ನಿರ್ದೇಶಕ (ಪ್ರ), ಕನ್ನಡ ಸಂಶೋಧನ ಸಂಸ್ಥೆ,
 ಕರ್ನಾಟಕ ವಿಶ್ವವಿದ್ಯಾಲಯ,    ಧಾರವಾಡ-೫೮೦೦೦೩                              ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೫೮೦೦೦೩                                                              
                                            
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ಬಾಸ್ಲಾಪುರ ಗ್ರಾಮ. ಇದು ನವಲಗುಂದದಿಂದ ರೋಣಕ್ಕೆ ಹೋಗುವ ಮಾರ್ಗದಲ್ಲಿ ರೋಣದಿಂದ ೭ ಕಿ.ಮೀ. ದೂರದಲ್ಲಿರುತ್ತದೆ.ಗ್ರಾಮದಲ್ಲಿ ಪುರಾತನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗಿನ ಇತಿಹಾಸದ ಕುರುಹುಗಳು ಇಲ್ಲಿ ಕಂಡುಬರುತ್ತವೆ. ಪ್ರಾಚೀನ ಕಾಲದ ಪುಲಗೇರಿ ೩೦೦ಕ್ಕೆ ಸೇರಿದ ರೋಣ ತಾಲ್ಲೂಕು ಈ ಗ್ರಾಮದ ಹತ್ತಿರದಲ್ಲಿಯೇ ಇದ್ದು ಅಲ್ಲಿ ರಾಷ್ಟ್ರಕೂಟ, ಕಲ್ಯಾಣದ ಚಾಳುಕ್ಯರು, ಕಲಚೂರಿಗಳ ಕಾಲಕ್ಕೆ ಸೇರಿದ ಅಪಾರ ಶಾಸನ, ದೇವಾಲಯಗಳು ಮೂರ್ತಿ ಶಿಲ್ಪಗಳು ಬಸದಿಗಳು, ಕೆರೆ, ಬಾವಿಗಳು ಈ ಪ್ರದೇಶದ ಇತಿಹಾಸವನ್ನು ಸ್ಪಷ್ಟಪಡಿಸುತ್ತವೆ.
ಬಾಸ್ಲಾಪುರ ಗ್ರಾಮದ ವೀರಭದ್ರ ದೇವಾಲಯದ ಈರಣ್ಣನ ಮೂರ್ತಿಯ ಹಿಂದೆ ಬರೆದ ಶಾಸನ ಇತ್ತೀಚಿಗೆ ಶೋಧಿಸಿದ್ದು, ಮೊದಲು ಇದು ಶಾಸನ ಕಲ್ಲಾಗಿದ್ದು, ನಂತರ ಕಾಲದಲ್ಲಿ ಈರಣ್ಣ ದೇವರ ಮೂರ್ತಿಯನ್ನು ಮಾಡಿಸಿ ಕಳೆದ ಎರಡು ನೂರು ವರ್ಷಗಳ ಹಿಂದೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಅದರ ಎದುರಿಗೆಯೇ ಈಗ ಮತ್ತೊಂದು ಹೊಸ ಗುಡಿ ಕಟ್ಟಿಸುತ್ತಿದ್ದಾರೆ. ಆ ದೇವರಭಕ್ತರೊಬ್ಬರು ಮೂರ್ತಿಯ ಹಿಂದೆ ಶಾಸನದ ಅಕ್ಷರಗಳಿರುವ ಸುಳಿವು ನಮಗೆ ನೀಡಿದರು. ಅವರ ವಿನಂತಿ ಮೇರೆಗೆ ಹೋಗಿ ನೋಡಲಾಗಿ ಶಾಸನ ಇರುವುದು ನಮಗೆ ಸ್ಪಷ್ಟವಾಯಿತು. ಆಗ ಸ್ಥಳೀಯ ಜನರ ಸಹಕಾರದಿಂದ ಮೂರ್ತಿಯ ಹಿಂದೆ ಕಟ್ಟಿಸಲ್ಪಟ್ಟ ಗದ್ದುಗೆಯನ್ನು ಕೂಲಿ ಆಳುಗಳಿಂದ ಒಡೆಯಿಸಿ ಸಿಮೆಂಟಿನಿಂದ ಮೆತ್ತಿದ ಪಾಲಿಷ್ಯನ್ನು ಸ್ವಚ್ಛಗೊಳಿಸಿ ನಂತರ ಶಾಸನ ಪ್ರತಿ ಹಾಗೂ ಛಾಯಾಚಿತ್ರ ತೆಗೆದುಕೊಳ್ಳಲಾಯಿತು.
ಈ ಶಾಸನ ಕಲ್ಲು ನಾಲ್ಕು ಪೂಟು ಎತ್ತರವಿದ್ದು ಎರಡುವರೆ ಪುಟ ಅಗಲ, ನಾಲ್ಕು ಇಂಚು ದಪ್ಪವಾಗಿರುತ್ತದೆ. ಕರಿಕಲ್ಲಿನಲ್ಲಿ ಬರೆಯಲ್ಪಟ್ಟ ಈ ಶಾಸನದ ಶಿರೋಭಾಗದಲ್ಲಿ ಸೂರ್ಯಚಂದ್ರ ಮಧ್ಯ ಲಿಂಗ ಹಾಗೂ ಕರು-ಆಕಳ ಹಾಲನ್ನು ಕುಡಿಯುತ್ತಿರುವ ಉಬ್ಬು ಚಿತ್ರಗಳನ್ನು ಕೆತ್ತಲಾಗಿರುತ್ತದೆ. ಕೆಳಗಡೆ ೧೫ ಸಾಲುಗಳುಳ್ಳ ಶಾಸನ ಬರೆಯಲಾಗಿದ್ದು, ಅಕ್ಷರಗಳನ್ನು ದುಂಡಾಗಿ ಆಳವಾಗಿ ಕೊರೆಯಲಾಗಿದೆ. ಲಿಪಿಯ ಬೆಳವಣಿಗೆಯ ದೃಷ್ಟಿಯಿಂದ ಇದು ಕ್ರಿ.ಶ.೧೨ನೆಯ ಶತಮಾನದ ಆದಿಭಾಗವೆಂದು ಗುರ್ತಿಸಲಾಗಿರುತ್ತದೆ.
ಶಾಸನದ ಪಾಠ ಹೀಗಿರುತ್ತದೆ.
೧        ಸ್ವಸ್ತಿ ಶ್ರೀ . ಖರಾ [ಸ್ವಂಮ್] ಸಂವತ್ಸರದ ಪ್ರವರ್ಧಮಾನೆ
೨        ರೇ ಪುಸ್ಸ್ಯಾನಕ್ಷತ್ರದೊಳು ಬ್ರಹಸ್ಪತಿವಾರದ
೩        ನ್ದು . . . ತ್ರೈವೇಶ್ವರ (ತ್ರೈಲೋಕೇಶ್ವರ) (ಯ) . .
೪        . . ಇದ ವಸಾ . . . . . ತಿಲೊ . . ನಿ
೫        ಶ್ರೀಮತು . . ಪ್ಪಾಯ್ಯಾರ್ತಿ . . . . . . ಹಿರ್ಗು . . .
೬        ನೈವೇದ್ಯಕ್ಕೆ . . ಮನ್ನೀಯಮ್ ಶ್ರೀ ಇಂದ್ರರೆಬಿಟ್ಟಕ್ಕೇ
೭        ಯ್ಯ ಮತ್ತರೈ ಐವತ್ತು ವಿದ್ಯಾಧಾನಕ್ಕೆ ಬಿಟ್ಟಕ್ಕೇಯ್ಯಮತ್ತ
೮        ರೈ ವತ್ತು ೧೧/- ವೈರ(ದ) . ನ . ಗೊ ನವಿಜಪ್ಪಾರಣೊಯ್ದು
೯        ವೆಕ್ಕೆಂಟಪ್ಪಾ . . . ನೆನುರಾನ . . . ಇ . . . ಜಮಾ
೧೦     ಹತ್ತನೇ ಸಾಲಿನಲ್ಲಿ ಅಕ್ಷರಗಳು ಕಾಣದಂತೆ ಹಾಳಾಗಿವೆ.
೧೧     ಇಂತೀ ಧರ್ಮಮಂ . . . . ರಕ್ಷಿಸದವರು ವಾರಣಾಸಿಯ ಲೊಂದು ಕೋಟಿ ಕವಿಲೆ ಯಮನ ನಿಬರು ವೇದ ಪಾರಗರಪ್ಪ ಬ್ರಾಹ್ಮಣರ್ಗ್ಗೆ ದಾನಂಗೊಟ್ಟ . . . . . . .  . . . . . . ಕವಿ ಲೆಯಮನಯಮ ಬ್ರಾಹ್ಮಣರು ಮನಳಿದ ದೋಷ ಮನೆಯ್ಯವರು . . ಮಂಗಳ ಮಹಾಶ್ರೀ
ಶಾಸನದ ಮುಂದಿನ ಭಾಗದಲ್ಲಿ ಈರಣ್ಣನ ಮೂರ್ತಿ ಮಾಡಿದ್ದರಿಂದ ಬಹಳಷ್ಟು ಅಕ್ಷರಗಳು ಹಾಳಾಗಿದ್ದರೆ ಇನ್ನು ಕೆಲವು ಅಕ್ಷರಗಳು ಸಿಮೆಂಟ ಮೆತ್ತನೆಯಿಂದಾಗಿ ಅಸ್ಪಷ್ಟವಾಗಿವೆ. ಹೀಗಾಗಿ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಅರಸನ ಹೆಸರು ಮತ್ತು ಪ್ರಶಸ್ತಿಯ ಕೆಲ ಭಾಗವು ಮತ್ತು ಕಾಲಮಾನದ ಕೆಲವು ವಿವರಗಳಿಲ್ಲ. ಶಾಸನೋಕ್ತ ಬೃಹಸ್ಪತಿವಾರ ಮತ್ತು ಪುಷ್ಯ ತಿಂಗಳ ಉಲ್ಲೇಖವಿದೆ. ಶಾಸನದ ಮೇಲೆ ಕೆತ್ತಲಾದ ಶಿವಲಿಂಗ, ಆಕಳು ಮತ್ತು ಕರು ಹಾಗೂ ಕುಳಿತ ನಂದಿಯ ಉಬ್ಬು ಚಿತ್ರಗಳ ಕೆಳಗಡೆ ವೃತ್ತಾಕಾರದ ಶಿವಲಿಂಗವನ್ನು ಕೆತ್ತಲಾಗಿದೆ. ಅದರ ಬದಿಗಳಲ್ಲಿ ಆಯತಾಕಾರದ ರಂಧ್ರಗಳಿವೆ. ಕೊನೆಯಲ್ಲಿ ಶಾಪಾಶಯದ ಶ್ಲೋಕವಿರುವುದು. ಈ ಶಾಸನದ ಅಕ್ಷರ ಮತ್ತು ಕಲ್ಲಿನ ಬಳಕೆ ಇಲ್ಲಿ ದೊರೆತಿರುವ ಇನ್ನಿತರ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಇದರ ಕಾಲಮಾನ ಕ್ರಿ.ಶ.೧೧-೧೨ನೇ ಶತಮಾನವೆಂದು ನಿರ್ಧರಿಸಲಾಗಿದೆ.
ಬಾಸ್ಲಾಪುರ ಗ್ರಾಮದ ವೀರಭದ್ರ ದೇವಾಲಯದ ಪಕ್ಕದಲ್ಲಿ ೧೨ನೇ ಶತಮಾನದ ನಾಗಶಿಲ್ಪ ಮತ್ತು ಲಿಂಗಮುದ್ರೆ ಕಲ್ಲುಗಳು ಇರುತ್ತವೆ. ಗುಡಿಯ ಮುಂದಿನ ಭಾಗದ ಗೋಡೆಗೆ ತಾಗಿಸಿ ಇಡಲ್ಪಟ್ಟ ಹನುಮಾನ ಮೂರ್ತಿ ೬ ಫೂಟು ಎತ್ತರವಾಗಿದ್ದು, ಅದು ವಿಜಯನಗರ ಕಾಲದ್ದಾಗಿದೆ. ಹಾಗೆಯೇ ೧೭-೧೮ನೇ ಶತಮಾನದ್ದೆನ್ನಲಾದ ದ್ಯಾಮವ್ವನ ಗುಡಿಯ ಮರದ ಬಾಗಿಲು ಬಿದ್ದುಕೊಂಡಿರುತ್ತದೆ. ಈ ಪ್ರಾಚ್ಯವಸ್ತುಗಳಿರುವ ಸ್ಥಳದಿಂದ ೨೫ ಮೀಟರ್ ದೂರದಲ್ಲಿ ೧೮ನೇ ಶತಮಾನದ ಭಾವಿ ಕೂಡ ಇದ್ದಿರುತ್ತದೆ.
ಇವೆಲ್ಲ ಪ್ರಾಚ್ಯಾವಶೇಷಗಳ ಆಧಾರದಿಂದ ಬಾಸ್ಲಾಪುರ ಗ್ರಾಮದ ಪ್ರಾಚೀನತೆ ಹಾಗೂ ಇತಿಹಾಸವನ್ನು ಗುರುತಿಸುವಲ್ಲಿ ಇತಿಹಾಸಕಾರರಿಗೆ ಸಹಾಯಕಾರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

[ಈ ಶಾಸನ ಓದಲು ಸಹಾಯ ಮಾಡಿದ ಬಾಸ್ಲಾಪುರ ಗ್ರಾಮದ ಈರಣ್ಣಾ ದೇವರ ಭಕ್ತರಾದ ಶ್ರೀಮತಿ ಸರಸ್ವತಿ ಮತ್ತು ಊರಿನ ಪ್ರಮುಖರಾದ ಶ್ರೀ ಫಾಲಾಕ್ಷಯ್ಯ ಹಿರೇಮಠ, ಶ್ರೀ ವೀರಭದ್ರಪ್ಪ ಹೂಗಾರ, ಶ್ರೀ ರುದ್ರಗೌಡ ಇವರಿಗೆ ಕೃತಜ್ಞತೆಗಳು ಸಲ್ಲಿಸದೆ ಇರಲಾರೆ. ಕ್ಷೇತ್ರಕಾರ್ಯದಲ್ಲಿ ಸಹಾಯ ಮಾಡಿದ ಧರ್ಮಪತ್ನಿ ರಮಾ. ಜಿ. ಇವರಿಗೂ ವಂದನೆಗಳು.]

ಆಧಾರಸೂಚಿ
೧.         ಸೂರ್ಯನಾಥ. ಯು. ಕಾಮತ್, ೧೯೯೫ (ಸಂ), ಕರ್ನಾಟಕ ರಾಜ್ಯ ಗ್ಯಾಸೆಟಿಯರ್, ಧಾರವಾಡ ಜಿಲ್ಲೆ ಗ್ಯಾಸೆಟಿಯರ್, ಕರ್ನಾಟಕ ಸರಕಾರ ಬೆಂಗಳೂರು, ಪುಟ ೧೦೦೨-೦೩.
೨.         ಡಾ. ಜಯಮ್ಮ, ೨೦೧೧, ಧಾರವಾಡ ಜಿಲ್ಲೆಯ ಪುರಾತತ್ತ  ಅಧ್ಯಯನ, ಕರ್ನಾಟಕ ವಿಶ್ವವಿವದ್ಯಾಲಯ, ಧಾರವಾಡ.
೩.         ಡಾ. ಆರ್. ಗೋಪಾಲ (ಸಂ), ೨೦೦೮, ಧಾರವಾಡ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ , ಕರ್ನಾಟಕ ರಾಜ್ಯ ಸರಕಾರದ ಪುರಾತತ್ತ  ಇಲಾಖೆ, ಮೈಸೂರು.
೪.         ಇತಿಹಾಸ ದರ್ಶನ ಸಂಪುಟಗಳು, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು.


                 


Thursday, March 21, 2013

ಪುರಾತನ ಇಜಿಪ್ಷಿಯನ್‌ಗುಣಾಕಾರ & ಭಾಗಾಕಾರ


ಶೇಷಗಿರಿರಾವ್. ಎಚ್

ಪ್ರಾಚೀನ ಈಜಪ್ಷಿಯನ್‌ರ ಗಣಿತ ಜ್ಞಾನ ಅರಿಯಲಯ ನಮಗೆ ಪೆಪರಸ್‌ ಸುರಳಿಗಳು ಸಹಾಯ ಮಾಡುತ್ತವೆ. ವಿಶೇಷವಾಗಿ ರಂಡ್‌ ಪೆಪರಸ್‌ ಸುರಳಿ ಮತ್ತು ಮಾಸ್ಕೊ ಪೆಪರಸ್‌ ಸುರಳಿಗಳಲ್ಲಿ ಗಣಿತದ ಸಮಸ್ಯಗಳು ಆಧುನಿಕ ಗಣಿತಜ್ಞರನ್ನು ಅಚ್ಚರಿ ಗೊಳಿಸುತ್ತವೆ.ಸಾಮಾನ್ಯ ಓದುಗರನ್ನು ಗಮನದಲ್ಲಿ ಇಟ್ಟುಕೊಂಡು ಮತ್ತು ನನ್ನ ಮಿತಿಯೊಳಗೆ ಗಣಿತದ ನಾಲ್ಕು ಮೂಲ ಪ್ರಕ್ರಿಯೆಗಳಾದ ಸಂಕಲನ, ವ್ಯವಕಲನ , ಗುಣಾಕಾರ ಮತ್ತು ಭಾಗಾಕಾರದ ಉದಾಹರಣೆಗಳನ್ನು ಮಾತ್ರ ವಿವರಿಸಿದೆ,ಸಂರ್ಕೀಣ ವಾದ ಜ್ಯಾಮಿತಿ  ಗೊಡವೆಗೆ ಹೋಗಿಲ್ಲ
ಮಾಸ್ಕೊ ಪೆಪರಸ್‌ನಲ್ಲಿನ ಗಣಿತದ ಸಮಸ್ಯೆಗಳು


 ಪುರಾತನ ಈಜಿಪ್ಟಿನವರ ಗುಣಾಕಾರ  ನಮಗಿಂತ ಬಹಳ ಭಿನ್ನವಾಗಿತ್ತು.ಅವರು ಗುಣ್ಯ ಮತ್ತು ಗುಣಕಗಳನ್ನು,  2  ರಿಂದ ಗುಣಿಸಿ ಮತ್ತು ಭಾಗಿಸುವರು. ಅದು ನಮಗಿಂತ ಸುಲಭವಾಗಿತ್ತು. 8  ರ ಅರ್ಧ 4  ಆದರೆ ಕಪ್ಪೆ ಮರಿಯ ಅರ್ಧ  ಐದು ಎಂಬುದು ಮಾತ್ರ  ನೆನಪಿರಬೇಕು
. 36 ಮತ್ತು 57 ಗುಣಿಸೋಣ. ನಾವು ಒಂದುಸಂಖ್ಯೆಯನ್ನು.  (ಇಲ್ಲಿ: 36) ಅನ್ನು  2 ರಿಂದ ಒಂದು ಬರುವವರೆಗೆ ಭಾಗಿಸುತ್ತಾಹೋಗಬೇಕು. ಬೆಸ ಸಂಖ್ಯೆ ಇದ್ದಾಗ ಭಾಗವಾಗದಿದ್ದರೆ ಅದರಲ್ಲಿ1 ಕಳೆಯಿರಿ  1 ಉಳಿಯುವುದು, ಅಷ್ಟೆ ಸಲ ಇನ್ನೊಂದು ಸಂಖ್ಯೆಯ ದ್ವಿಗುಣ ಮಾಡುತ್ತಾ ಹೋಗಿರಿ ( ಇಲ್ಲಿ  47 )  ಬೆಸ ಸಂಖ್ಯೆಗಳಿದ್ದವನ್ನು ಕೂಡಿದರೆ ಗುಣ ಲಬ್ದ ಸಿಗುವುದು..
                                                  36X  47


ಮೊದಲ ಸಂಖ್ಯೆ ಅರ್ಧ ಮಾಡಿ

ಬೆಸ ಸಂಖ್ಯೆ

ಎರಡನೆ ಸಂಖ್ಯೆ ದ್ವಿಗುಣ ಮಾಡಿ

ಅರ್ಧ ಮಾಡಿದ ಬೆಸ ಸಂಖ್ಯೆಯ ದ್ವಿಗುಣ
     36
47

   18
94

    9
 1 ಕಳೆ                   
188
188

4
376

2
752
 752
1
1504
1504

ಗುಣಲಬ್ದ

36X 47

=188  + 1504

1692

41 = 32 + 8 + 1. ಆದ್ದರಿಂದ  32, 8, 1 ಗಳಿಗೆ ಸಂವಾದಿಯಗಿರುವ ಕಂಬ ಸಾಲಿನ ಸಂಖ್ಯೆಗಳನ್ನು ಕೂಡಿಸಿ


  41             59

  _________________

   1             59

   2            118

   4            236

   8            472

  16            944

  32           1888

  _________________

               2419




ಗಣಿತದ ಸಮಸ್ಯಗಳಿರುವ ಪೆಪರಸ್‌

ಗುಣಾಕಾರವನ್ನುನನ ಬರಿ ಸಂಕಲನದಿಂದಲೇ ಮಾಡುವುದನ್ನು ಗಮನಿಸಬಹುದು.. ಅಲ್ಲದೆ ದ್ವಿಮಾನಪದ್ದತಿಯ ಪ್ರಾಚೀನಕಾಲದಲ್ಲೆ ಬಳಕೆ ಮಾಡಿರುವರು ಅಪವರ್ತನಗಳನ್ನು ಅದಲು ಬದಲು ಮಾಡಲಾಗಿದೆ
41X59 = 59X41


    59             41

    _________________

     1             41

     2             82

     4            164

     8            328

    16            656

    32           1312

    _________________

                 2419


ಈ ವಿಧಾನದಿಂದ ಪರಿಹಾರ ಕಂಡುಕೊಳ್ಳಲುಪ್ರತಿಸಂಖ್ಯೆಯೂ 2 ರಗುಣಕಗಳ ಮೊತ್ತವಾಗಿರುವುದ ಎಂದು. ಇದರ ತತ್ವ ಪುರಾತನಈಜಿಪ್ಟಿನವರಿಗೆ ಗೊತ್ತಿರಲಿಕ್ಕಿಲ್ಲ ಮತ್ತು  ಅದು ಅವರಿಗೆ ಬೇಕೂ ಇರಲಿಲ್ಲ. ಅವರು ಅನುಭವದ ಆಧಾರದಿಂದ ಕಂಡುಕೊಂಡಿದ್ದರು. ಮೂಲತಃ ಈ ವಿಧಾನವನ್ನು ನಾವು  ಒಂದು ಸಂಖ್ಯೆಯನ್ನು ದ್ವಿಮಾನದಲ್ಲಿ ಬರೆಯಬೇಕು.
ಮೇಲಿನ ಸಂಖ್ಯೆಗಳನ್ನು ಹೀಗೆ ಬರೆಯಬಹುದು
41 = 1.20 + 0.21 + 0.22 + 1.23 + 0.24 + 1.25
ಮತ್ತು
59 = 1.20 + 1.21 + 0.22 + 1.23 + 1.24 + 1.25.
ಭಾಗಾಕಾರವೂ  ಗುಣಾಕಾರ ವಿರುದ್ಧದಿಶೆಯ ಪ್ರಕ್ರಿಯೆ ಆಗಿತ್ತು


ಉದಾಹರಣೆ:  17 ನ್ನು  3  ರಿಂದ ಭಾಗಿಸಬೇಕು.17 ಭಾಜ್ಯ  3 ಭಾಜಕ. ನಾವು ಭಾಗಲಬ್ದ ಮತ್ತು ಶೇಷವನ್ನು ಕಂಡುಹಿಡಿಯಬೇಕು

       2 ರ ಗುಣಕಗಳು ( Powers)        ಭಾಜಕ ದ್ವಿಗುಣ ಗೊಳಸಿ
              
            2^0 = 1                       3
            2^1 = 2                       6
            2^2 = 4                      12
            2^3 = 8                      24
        24>17  ಇಲ್ಲಿನಾವು ನಿಲ್ಲಿಸಬೇಕು.

ನಾವು 3, 6, ಮತ್ತು 12 ರ ಸಂಯೋಜನೆಯನ್ನು ಗಮನಿಸಿದರೆ  12 + 3 = 15 ಬೆಲೆಯು 17  ಕ್ಕೆ ಅತಿ ಹತ್ತಿರವಾಗಿರುವುದು ಎಂದು ಕಂಡುಕೊಳ್ಳ ಬಹುದು.
ಶೇಷ  17 – 15 = 2

ಈಗ ಶೇಷವನ್ನು ಪಡೆಯುವ ಬಗೆ ಹೇಗೆ?
ಅವರು ಭಾಜಕದ 2/3 ಅನ್ನು ಪರಿಗಣಿಸಿದರು.. ನಂತರ ಅದರ ½  ತೆಗೆದು ಕೊಂಡರು.
ನಾವು  2/3 ತೆಗೆದುಕೊಳ್ಳಲು ಕಾರಣ ಈ ಲೆಕ್ಕದಲ್ಲಿ 3 ಭಾಜಕವಾಗಿದೆ.. ನಮಗೆ  3/3 = 1, ಎಂದು ಗೊತ್ತಿದೆರುವುದರಿಂದ ಸಂಬಂಧಿಸಿದ ಬೆಲೆ ತಿಳಿದು ಕೊಳ್ಳ ಬಹುದು  1/3 ಗೆ ಸಂಬಂಧಿಸಿದ ಬೆಲೆ ತಿಳಿಯಬಹುದು. 3 ಭಾಜಕವಾದಾಗ ಸಾಧ್ಯವಿರುವ ಶೇಷ ಗಳೆಂದರೆ 0/3,
1/3, ಮತ್ತು 2/3.

ಈಗ ನಮಗೆ ಗೊತ್ತಿದೆ:ಭಾಗ ಲಬ್ದ 
     
       ಎರಡರ ಗುಣಕಗಳು               ಭಾಜಕ ದ್ವಿಗುಣ ವಾದಾಗ
              
            2^0 = 1                       3
            2^1 = 2                       6
            2^2 = 4                      12
                2/3                       2     (  3  ರ  2/3  = 2)
                1/3                       1     (  3 x 1/2 x 2/3  = 1)

ಭಾಜಕದ ಲಂಬಸಾಲನ್ನು   ಸಂಕಲನ ಮಾಡಿದರೆ ಅದರ ಬೆಲೆ 17?
         
          3 + 12 + 2 = 17
        
ಇದು 2 ಪವರ್‌ ನ ಲಂಬಸಾಲಿಗೆ ಸಂಬಂಧಿಸಿರುವುದಾಗಿದೆ..
 ಅಂದರೆ ಭಾಗಾಕಾರವನ್ನು ಈಜಿಪ್ಟಿನವರು ಸಂಕಲನದಿಂದಲೇ ಮಾಡುತಿದ್ದರು. ಒಂದು ಗಮನಿಬೇಕಾದ ಅಂಶವೆಂದರೆ ಅವರು ಆರು ಸಹಸ್ರ ವರ್ಷಗಳ ಮೊದಲೇ ಈಗ ಆಧುನಿಕ ಕಾಂಪ್ಯೂಟರ್‌ನಲ್ಲಿ ಬಳಸುವ ದ್ವಿಮಾನ ಪದ್ದತಿಯನ್ನು  (0,1) ಉಪಯೋಗಿಸುತಿದ್ದರು.
 ಇನ್ನು ಜ್ಯಾಮಿತಿಯಲ್ಲಿ ಅವರ ಪರಿಣತೆಯನ್ನು ಸಾರಲು ಪಿರಮಿಡ್‌ಗಳೇ, ಬೃಹತ್‌ದೇಗುಲಗಳು ಮತ್ತು ವಿಗ್ರಹಗಳು ಸಾಕ್ಷಿ. ಫೈಥಾಗರಸ್‌ ಪ್ರಮೇಯದ ತತ್ವವನ್ನು ಅವನಿಗಿಂತ ಸಾವಿರ ವರ್ಷ ಮೊದಲೇ ಅವರು ಅಳವಡಿಸಿಕೊಂಡು ಬೃಹತ್‌ಕಟ್ಟಡಗಳನ್ನು ನಿರ್ಮಿಸಿದ್ದರು

ಬೃಹತ್‌ನಿರ್ಮಾಣಗಳನ್ನು ಗಮನಿಸಿದರೆ ಅವರಿಗೆ ವಿವಿಧ ಆಕೃತಿಗಳಾದ, ವೃತ್ತ, ತ್ರಿಕೋನ, ಸಿಲಿಂಡರ್, ಶಂಕುವಿನ  ವಿಸ್ತೀರ್ಣ ಮತ್ತು ಘನಫಲದ ತಿಳುವಳಿಕೆ ಇರುವುದು ಸ್ಪಷ್ಟ.ಅವರು ಜ್ಯಾಮಿತಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಿಡಿಸಿರುವುದುಮಾಸ್ಕೊ ಮ್ಯಾಥ ಮೆಟಿಕಲ್‌ಪೈಪರಸ್‌ (MMP)  ಮತ್ತು  ರಿಂಡ್‌ ಮ್ಯಾಥಮೆಟಿಕಲ್‌ಪೈಪರಸ್‌(  RMP).ಎಂಬ ಪುರಾತನ ಬರಹಗಳಿಂದ ವ್ಯಕ್ತವಾಗುವುದು.ಅವು ಕ್ರಿ. ಪೂ. 3000 ರಿಂದ 300ನೆಯ ಇಸ್ವಿಯ ಅವಧಿಯವಾಗಿವೆ



Wednesday, March 20, 2013

ಈಜಿಪ್ಷಿಯನ್‌ ಸಂಕಲನ ಮತ್ತು ವ್ಯವಕಲನ

ಶೇಷಗಿರಿರಾವ್‌











ಈಜಿಪ್ಷಿಯನ್‌ ಸಂಕಲನ ಮತ್ತು ವ್ಯವಕಲನ


ಪುರಾತನ ಇಜಿಪ್ಷಿಯನ್‌  ಪದ್ದ್ಲತಿಯಲ್ಲಿ  ಸಂಕಲನ   ಬಹಳ ಸರಳ  ಸಂಕೇತಗಳನ್ನು ಎಣಿಸಿ ಅವುಗಳ ಮೊತ್ತವನ್ನು ಬರೆದರೆ ಆಯಿತು. ಯಾವದೇ ಸಂಕೇತವು  9 ಕ್ಕಿಂತ ಹೆಚ್ಚು ಇದ್ದರೆ ಅವುಗಳ ಬದಲಾಗಿ ನಿಗದಿತ  ಬೇರೆ ಸಂಕೇತವನ್ನು ಬರೆಯ ಬೇಕಾಗುತ್ತದೆ. ಸಂಕೇತಗಳನ್ನು ಎಡಬಲದಲ್ಲಿ ಹೇಗೆ ಬೇಕಾದರೂ ಬರೆಯ ಬಹುದು. ಅವಕ್ಕೆ ಸ್ಥಾನಬೆಲೆ ಇಲ್ಲ.
ಉದಾಹರಣೆ:-
 9+2. 83+21 ಮತ್ತು 31 +980 ಗಳನ್ನು ಗಮನಿಸೋಣ.







.ಉದಾಹರಣೆ-                              37 +15  =52
+           
=                                                 



ಇನ್ನೊಂದು ಉದಾಹರಣೆ ನೋಡೋಣ  ಇಲ್ಲಿ ಮೊತ್ತವು ಒಂದು ಸಾವಿರದ ಎರಡುನೂರ ಒಂದು ಆಗಿದೆ. ಸಂಕೇತಗನ್ನು ಕೂಡಿಸಿದಾಗ ಉತ್ತರದಲ್ಲಿ 11ನೂರರ  ಸಂಕೇತಗಳು 10 ಹತ್ತರ ಸಂಕೇತಗಳು ಮತ್ತು 11 ಒಂದರ ಸಂಕೇತಗಳುಇವೆ .ಅವುಗಳನ್ನು ಸರಳಗೊಳಿಸಿ 1 ಸಾವಿರದ ಸಂಕೇತ,
ಮತ್ತು2 ನೂರರ  1 ಒಂದರ ಸಂಕೇತ   ಬರೆಯಬೇಕು ಬೇಕು.

  
ವ್ಯವಕಲನ
ವ್ಯವಕಲನವು ಸಂಕಲನದಂತೆಯೇ ಸರಳ .ದೊಡ್ಡಸಂಖ್ಯೆಲ್ಲಿರುವ ಸಂಕೇತಗಳನ್ನು ಎಣಿಸಿ ಅದರಲ್ಲಿ ಚಿಕ್ಕಸಂಖ್ಯೆಯ ಸಂಕೇತಗಳನ್ನು ಕಳೆಯಬೇಕು.ಉಳಿದವನ್ನ್ನು ಸಂಕೇತಗಳ ಮೂಲಕ ನಮೂದಿಸಬೇಕು

               52 -37 = 15
-      
                         
      =        
                                                                         ಮುಂದಿನ ಸಂಚಿಕೆಯಲ್ಲಿ ಗುಣಾಕಾರ ಮತ್ತು ಭಾಗಾಕಾರ  

Monday, March 18, 2013

ತುಮುಕೂರುಜಿಲ್ಲೆ-ಅಪ್ರಕಟಿತ ಶಾಸನ

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕಸಾಪುರ ಮಿಡಿಗೇಶಿ ಹಾಗೂ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಕೆಲವು ಅಪ್ರಕಟಿತ ಶಾಸನಗಳು
ಡಾ. ಎನ್. ನಂದೀಶ್ವರ
ಪ್ರಾಂಶುಪಾಲರು,
ಎಸ್.ಎಮ್.ಆರ್.ಪಿ.ಯು. ಕಾಲೇಜು,
 ಕಳ್ಳಂಬೆಳ್ಳ, ಸಿರಾ ತಾಲ್ಲೂಕು,
ತುಮಕೂರು ಜಿಲ್ಲೆ-೫೭೨೧೨೫.


 ಕಸಾಪುರ ಹರೆ ಶಾಸನ
ಕಸಾಪುರ ಗ್ರಾಮವು ತಾಲ್ಲೂಕು ಕೇಂದ್ರವಾದ ಮಧುಗಿರಿಯಿಂದ ೨೨ ಕಿ.ಮೀ. ದೂರದಲ್ಲಿ, ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೬೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ಪ್ರಾಗೈತಿಹಾಸದ ಕಾಲದಿಂದಲೂ ಬಹಳ ಪ್ರಸಿದ್ಧವಾದ ಗ್ರಾಮವಾಗಿದೆ. ಈ ಕಸಾಪುರ ಗ್ರಾಮದ ಛಲವಾದಿ (ಆದಿದ್ರಾವಿಡರ) ಬಸಣ್ಣನ ಹತ್ತಿರ ಕಂಚಿನ ಹರೆ ಇದೆ. ಈ ಹರೆ ಮಿಡಿಗೇಶಿಯ ಕುಂಚಿಟಿಗರ ಶೆಟ್ಟೇನವರ ಮನೆದೇವರಾದ ಶ್ರೀಲಕ್ಷ್ಮೀ ದೇವರಿಗೆ ಬಡೆಯುವ ಹರೆಯಾಗಿದ್ದು, ಇದರ ಮೇಲೆ ಅಪ್ರಕಟಿತವಾದ ಶಾಸನವಿದೆ. ಶ್ರೀಲಕ್ಷ್ಮೀ ದೇವತೆಗೆ ಹರೆಯನ್ನು ಮಾತ್ರ ಬಡಿಯುತ್ತಾರೆ. ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನವನ್ನು ೨ ಭಾಗಗಳಲ್ಲಿ ಬರೆಯಲಾಗಿದೆ.
ಶಾಸನದ ಪ್ರಾರಂಭದಲ್ಲಿ ಚಂದ್ರ ಎಡಭಾಗದಲ್ಲಿ ಬರೆದಿದ್ದರೆ, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವು ೬ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಕಾಲ ೧೭೮೭ ಜೂನ್ ೨೯ ಗುರುವಾರವಾಗಿರುತ್ತದೆ. ಮಿಡಿಗೇಶಿಯ ಕುಂಚಿಟಿಗ ಜನಾಂಗದ ಶೆಟ್ಟೇನವರ ಕುಲದ ಮನೆದೇವರಾದ ಮಿಡಿಗೇಶಿಯ ಶ್ರೀಲಕ್ಷ್ಮೀ ದೇವರಿಗೆ ಬೆಂಗಳೂರಿನ ಶೆಟಿಪನ ಮಗ ಯಿರ ಚಿಕಂಣನು ಮಾಡಿಸಿಕೊಟ್ಟ ಅರೆ. ಮಿಡಿಗೇಶಿಯ ಶಾನುಭೋಗ ಅರುಣಚಲೈನವರು ಬರೆದ ಬರಹವೆಂದು ಇದೆ. ಈ ಹರೆಯನ್ನು ಬಾಳಮಂಡೆ ಬಸಪನ ಮೊಮ್ಮಗನ ಕೊರಳಿಗೆ ಲಕ್ಷ್ಮೀದೇವರಿಗೆ ದೇವರ ಉತ್ಸವ ಹಬ್ಬ ಹರಿದಿನಗಳಲ್ಲಿ ಬಡಿಯಲು ಹಾಕಿಸಿರುವ ಹರೆಯಾಗಿರುತ್ತದೆ.
ಶಾಸನ ಪಾಠ
೧        ಪ್ಲವಂಗ ಸಂವತ್ಸರದ ಅಷಾಡ ಶು ೧೪ಲ್ಲು ಮಿ
೨        ಡಿಗೇಶಿ ಶ್ರೀ ಲಕ್ಷ್ಮೀ ದೇವತಿಗೆ ಬೆಂಗಳೂರು ಶೆಟೆಪ್ಪನ
೩        ಮಗ ಯಿರ ಚಿಕಂಣ ಮಾಡಿಶಿ ಕೊಟ ಅರ್ರೆ ಮಿಡಿಗೇ
೪        ಶಿ ಶಾನುಬಾಗ ಆರುಣಚಲೈನ ಬರಹ ||
೫ ಯಿ ಹರ್ರೆ ಬಾಳಮಂಡೆ ಬಸಪನ ಮೊಮಗ
೬ ನ ಕೊರಳಿಗೆ ಹಾಕಿದ ಹರೆ ||

ಮಿಡಿಗೇಶಿ ಹರೆ ಶಾಸನ
ಮಿಡಿಗೇಶಿಯ ಆದಿದ್ರಾವಿಡ ಜನಾಂಗದ ಕಾವೇರಪ್ಪನ ಮಗ ಹನುಮಂತರಾಯಪ್ಪನ ಹತ್ತಿರ ಒಂದು ಹರೆ ಇದೆ. ಇದನ್ನು ಗಡಿಭಾಗದ ಆಂಧ್ರಪ್ರದೇಶದ ಗೊಟ್ಟುಗುರಿಕೆಯಿಂದ ತಂದಿಟ್ಟುಕೊಂಡಿರುತ್ತಾರೆ. ಇದನ್ನು ಇಂದು ಎಲ್ಲಾ ದೇವರಿಗೂ ಬಡಿಯುತ್ತಾರೆ. ಇದರ ಮೇಲೆ ಅಪ್ರಕಟಿತವಾದ ಶಾಸನವಿದೆ.
ಹರೆಯನ್ನು ೫ ಕಟ್ಟುಗಳಲ್ಲಿ ರಚಿಸಿ, ೪ ಮನೆಗಳನ್ನು ಮಾಡಲಾಗಿದೆ. ಶಾಸನದ ಪ್ರಾರಂಭದಲ್ಲಿ ಎಡಭಾಗದಲ್ಲಿ ಚಂದ್ರನನ್ನು, ಬಲಭಾಗದಲ್ಲಿ ಸೂರ್ಯನನ್ನು ಬರೆಯಲಾಗಿದೆ. ಶಾಸನವನ್ನು ೨ ಭಾಗಗಳಲ್ಲಿ ಬರೆಯಲಾಗಿದೆ. ಶಾಸನವು ೮ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಕಾಲ ೧೭೭೭ ಏಪ್ರಿಲ್ ೮, ಸೋಮವಾರವಾಗಿರುತ್ತದೆ.
ಗೊಟ್ಟುಗುರಿಕೆ ಏತಂಣನ ಮಗನಾದ ನಲ್ಲನಿಂಗಣ್ಣನು ಶ್ರೀ ಪಾತಪ್ಪದೇವರಿಗೆ ಹರೆ ಬಡಿಯಲು ಭಕ್ತಿಯಿಂದ ಕೊಟ್ಟಿರುವರು. ಇಂದಿಗೂ ಗೊಟ್ಟುಗುರಿಕೆಯಲ್ಲಿ ತೆರೆದ ಅಂಕಣದಲ್ಲಿ ಶ್ರೀಪಾತಪ್ಪ ದೇವಸ್ಥಾನವಿದ್ದು ಇಂದು ನಾಯಕ (ತಳವಾರ) ಜನಾಂಗದವರ ಮನೆದೇವರಾಗಿದೆ. ಈ ದೇವರನ್ನು ಹಬ್ಬಹರಿದಿನಗಳಲ್ಲಿ ವಿಶೇಷವಾದ ಪೂಜೆ ಮಾಡುತ್ತಾರೆ. ನಾಯಕ ಜನಾಂಗದವರೇ ಅರ್ಚಕರಾಗಿರುತ್ತಾರೆ. ಪಕ್ಕ ಕರ್ನಾಟಕದ ಗಡಿಯಲ್ಲಿ ಗ್ರಾಮ ರೆಡ್ಡಿಹಳ್ಳಿ. ಈ ರಡಿಅಳಿ(ರೆಡ್ಡಿಹಳ್ಳಿ)ಯ  ಹಳೆ ಮಗನಾದ ಚೆಲವಾದಿನಾಗನ ಮಗ ನರಸನ ಕೊರಳಿಗೆ ಹಾಕಿಸಿರುವರು. ರತ್ನಗಿರಿಯ ಚಿತ್ರಗಾರ ಪುಟ್ಟಲಿಂಗಪ್ಪ ಶಾಸವನ್ನು ಬರೆದಿರುವನು.
ಶಾಸನ ಪಾಠ
೧ ಶ್ರೀ
೨ ಶ್ರೀ ಹೇವಳಂಬಿ ಸಂಮತ್ಸರದ ಚೈತ್ರ ಶುದ ೧ ಯ
೩ ಲ್ಲು ಶ್ರೀ ಮತು ಗೊಟ್ಟು ಗುರಿಕೆ ಏತಂಣನ ಮಗ
೪ ನಲ್ಲ ನಿಂಗಣ ಶ್ರೀಪಾತಪ್ಪ ದೇವರಿಗೆ ಕೊಡಿಶಿದ
೫ ಆರೆ ಭಕ್ತಿ ಸದರಿ ಆರೆ ಅಳೆ ಮಗನಾದ ರಡಿ
೬ ಅಳಿ ಚೆಲವಾದಿ ನಾಗನ ಮಗ ನರಸನ ಕೊ
೭ ಳಿಗೆ ಆಕಿದ ಅರೆ
೮ || ರತ್ನಗಿರಿ ಚಿತ್ರಗಾರ
೯ ಪುಟ್ಟಲಿಂಗಪ್ಪ

ಹೇಮಾವತಿಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಯು ನೊಳಂಬರ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧವಾದ ಸಿದ್ದೇಶ್ವರ ದೇವಸ್ಥಾನದ ದ್ವಾರಬಂಧದಲ್ಲಿ ಅಪ್ರಕಟಿತವಾದ ಶಾಸನವಿದೆ. ಬಾಗಿಲುವಾಡಕ್ಕೆ ಹಾಕಿದ್ದ ಬೆಳ್ಳಿಯ ತಗಡನ್ನು ಜೀರ್ಣೋದ್ಧಾರದ ಸಂದರ್ಭದಲ್ಲಿ ತೆಗೆದಿದ್ದರಿಂದ ಈ ಶಾಸನ ಕಂಡುಬಂದಿತು.
ಶಾಸನವು ೨ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಲಿಪಿಯು ೧೨ನೇ ಶತಮಾನದ ಲಿಪಿಯನ್ನು ಹೋಲುತ್ತದೆ. ಗರೆಯ ಪಲೆಯ ಎಂಬುವನು ಹೂವಿನ ಕಲ್ಲುದ್ವಾರಬಂಧವನ್ನು ಮಾಡಿಸಿದ ವಿಷಯ ಎಂದು ಊಹಿಸಬಹುದಾಗಿದೆ.
ಶಾಸನ ಪಾಠ
೧        ಶ್ರೀಮತು ಗರೆಯ ಪಲೆಯ ಹುವಿನ ಕಲುದರವಂದ ಮಾ
೨        ಡಿಸಿದ
ಪೇಲುಬಂಡೆಯ ಶಾಸನ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಹೇಮಾವತಿಗೆ ಹತ್ತಿರದ ಗ್ರಾಮ ಪೇಲುಬಂಡೆ. ಇಲ್ಲಿನ ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನದ ಯಾಗಶಾಲೆಯ ದ್ವಾರಬಂಧದಲ್ಲಿ ಒಂದು ಅಪ್ರಕಟಿತವಾದ ಶಾಸನವಿದೆ.
ಶಾಸನವು ೩ ಸಾಲುಗಳಲ್ಲಿ, ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಲಿಪಿಯು ೧೮ನೇ ಶತಮಾನದ್ದಾಗಿದೆ. ಶಾಸನವು ನಿಡಗಲ್ಲು ಮಹಾನಾಯಕಾಚಾರ‍್ಯರಾದ ನಿಡಗಲ್ಲು ಇಮ್ಮಡಿ ತಿಮ್ಮಣ್ಣ ನಾಯಕನು ಯಾಗಶಾಲೆಯನ್ನು ಕಟ್ಟಿಸಿದ ವಿಷಯವನ್ನು ತಿಳಿಸುತ್ತದೆ. ಆದರೆ ಈ ಯಾಗಶಾಲೆಯ ಕಂಬಗಳನ್ನು ನೋಡಿದರೆ ಇದು ಇವರ ಕಾಲದಲ್ಲಿ ನಿರ್ಮಿತವಾದಂತೆ ಕಂಡುಬರುವುದಿಲ್ಲ. ಆದರೆ ಈಗಾಗಲೇ ಅಸ್ವಿತ್ವದಲ್ಲಿದ್ದ ಪೇಲುಬಂಡೆಯ ರಂಗನಾಥ ಸ್ವಾಮಿಯ (ನೊಳಂಬರ ಕಾಲದಲ್ಲಿ ರಚನೆ) ಶಿಥಿಲವಾದ ಪಳೆಯುಳಿಕೆ ಉಪಯೋಗಿಸಿ ಅಥವಾ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಉಪಯೋಗಿಸಿ ಉಳಿದ ಕಂಬಗಳಿಂದ ಈ ಯಾಗಶಾಲೆಯನ್ನು ನಿರ್ಮಿಸಿರಬಹುದು. ನಿಡಗಲ್ಲು ನಾಯಕರ ವಂಶಾವಳಿಯಲ್ಲಿ ಹಲವಾರು ಜನ ತಿಮ್ಮಣ್ಣ ನಾಯಕರು ಬಂದರೂ ಹರತಿ ವಂಶಾವಳಿಯ ವೀರತಿಮ್ಮಣ್ಣ ನಾಯಕನೇ ಇರಬಹುದು. ಈತನು ೧೭೫೮ ರಿಂದ ೧೭೮೫ರವರೆಗೆ ಆಳ್ವಿಕೆ ನಡೆಸಿರುವನು.
ಶಾಸನ ಪಾo
೧        ಶುಭಮಸ್ತು ಪಾರ್ಥಿವ ಸಂವತ್ಸರದ ಮಾಘ ಶುಧ ೫ ಲೂ ಶ್ರೀ ಮನ್ಮಹಾನಾಯಕಾಚಾರ‍್ಯರಾದ ನಿಡುಗಲಯಿಮಡಿ ತಿಮಣ್ಣ ನಾಯ
೨        ಕ ಅಯ್ಯನವರ ರಾಯಸದ ರಾಂಂಣನೂ ಕಟ್ಟಿಸಿದ ಪೆಯಲಬಂಡೆ ರಂಗನಾಥನ ಯಾಗಶಾಲೆಯ ಬಾಗಿಲಿ ವಾ
೩        (ವಾ)ಡದ (ಅಂಕಣ ಕ) ಮಂಗಳ ಮಹಾ ಶ್ರೀಶ್ರೀ ರಾಮಚಂದ್ರ ಸಹಾಯ

[ಶಾಸನ ಓದಲು ನೆರವಾದ ಸುಂಕಂ ಗೋವರ್ಧನ, ಡಾ. ಪಿ.ವಿ. ಕೃಷ್ಣಮೂರ್ತಿ ಹಾಗೂ ಡಾ.ಬಿ. ರಾಜಶೇಖರಪ್ಪ ಅವರಿಗೆ ಕೃತಜ್ಞತೆಗಳು.]