Wednesday, August 7, 2013

ವಡ್ಡುರಾಳ ತೆರಿಗೆ-ಡ. ಜಗದೀಶ್‌

ವಡ್ಡರಾವುಳ ಮತ್ತು ಹೆರ್ಜ್ಜುಂಕ ತೆರಿಗೆ-ಒಂದು ಟಿಪ್ಪಣಿ
ಡಾ. ಜಗದೀಶ
ಪ್ರಾಚೀನ ಕರ್ನಾಟಕದಲ್ಲಿ ಅನೇಕ ತೆರಿಗೆಗಳನ್ನು ವಸೂಲು ಮಾಡಲಾಗುತ್ತಿತ್ತು. ಅವುಗಳಲ್ಲಿ ವಡ್ಡರಾವುಳ ಒಂದು ಶಾಸನಗಳಲ್ಲಿ ಒಟ್ಟೊಟ್ಟಾಗಿ ಸಾಮಾನ್ಯವ ಆಗಿ ವಡ್ಡರಾವುಳ, ಹೆರ್ಜ್ಜಂಕ ಮತ್ತು ಬಿಲ್ಕೊಡೆ ಕಾಣಿಸಿಕೊಳ್ಳುತ್ತವೆ. ಡಾ|| ಶ್ರೀನಿವಾಸ ರಿತ್ತಿ ತಮ್ಮ ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾ ಕೋಶದಲ್ಲಿ ವಡ್ಡರಾವುಳ ವೃದ್ಧರಾಜಕುಲ ಎಂಬ ಸಂಸ್ಕೃತ ಪದದಿಂದ ಬಂದ ಶಬ್ದವೆಂದೂ ರಾಜ ಮನೆತನದ ವೃದ್ಧರ ಪೋಷಣೆಗಾಗಿ ಈ ಕರವನ್ನು ಹಾಕಲಾಗುತ್ತಿತ್ತೆಂದು ಹೇಳಿರು ತ್ತಾರೆ. ಆದರೆ ಈ ವಿವರಣೆ ಸಂದರ್ಭಕ್ಕೆ ಹೊಂದುವುದಿಲ್ಲ. ಬಹುಶಃ ನಗದು ವ್ಯಾಪಾರಕ್ಕೆ ಸಂಬಂಧಿಸಿದ ದೊಡ್ಡ ಮೊತ್ತದ ಕರವಿರಬೇಕು ಎಂದು ತಿಳಿಸುತ್ತಾರೆ. ಹೆರ್ಜ್ಜುಂಕ ಕುರಿತಾಗಿ ಹಿರಿದಾದ ಸುಂಕ, ಯಾವುದೊಂದು ಊರಿನ ಅಥವಾ ಪ್ರದೇಶದ ಒಟ್ಟು ಸುಂಕ, ಹೆಚ್ಚು ಆದಾಯ ತರುವ ಸುಂಕ ಎಂಬ ವಿವರಣೆ ಇದೆ.
ಸಾಮಾನ್ಯವಾಗಿ ವಡ್ಡರಾವುಳ ಮತ್ತು ಹೆರ್ಜ್ಜುಂಕವನ್ನು ಒಟ್ಟಾಗಿ ಎರಡು ಶಾಸನಗಳಲ್ಲಿ ನಮೂದಿಸಿರುವುದನ್ನು ಕಾಣಬಹುದು. ಈ ಎರಡು ಸುಂಕಗಳಲ್ಲಿ ಬಿಲ್ಕೊಡೆ ಸಹ ಕಾಣಿಸಿಕೊಳ್ಳುತ್ತದೆ. ಇದು ಮಾರಾಟದ ಸರಕುಗಳ ಮೇಲಿನ ಕರ ಎಂಬ ವಿವರಣೆ ಇದೆ.
ಬಿ.ಆರ್. ಗೋಪಾಲರು ತಮ್ಮ ದಿ. ಚಾಲುಕ್ಯಾಸ್ ಅಂಡ್ ದಿ ಕಲಚೂರಿಸ್ ಕೃತಿಯಲ್ಲಿ ಬನವಾಸಿ ಪ್ರದೇಶದಲ್ಲಿ ಇರುವ ಆಡಳಿತಾಧಿಕಾರಿಗಳನ್ನು ಬದಲಿಸುವ ನೀತಿ ಇತ್ತೆಂದು ಮತ್ತು ಈ ನೀತಿಯು ಅಧಿಕಾರಿಗಳು ಪ್ರಬಲರಾಗುವುದನ್ನು ತಪ್ಪಿಸುತ್ತಿತ್ತೆಂದು ಭಾವಿಸಲಾಗಿತ್ತು ಎಂದು ಶಾಸನಾಧಾರಗಳನ್ನು ನೀಡಿದ್ದಾರೆ. ಚಟ್ಟಯ್ಯ ಕ್ರಿ.ಶ ೯೯೧-೯೯೩ ಮತ್ತು ೧೦೦೬-೧೦೧೨ ಹೀಗೆ ಎರಡು ಅವಧಿಯಲ್ಲಿ ಬನವಾಸಿಯಲ್ಲಿ ಆಳುತ್ತಿದ್ದನು, ಈ ಮಧ್ಯದ ಅವಧಿ ೧೦೦೨-೧೦೦೩ರಲ್ಲಿ ಭೀಮರಸನು ಆಳುತ್ತಿದ್ದನು.   ಅದೇ ರೀತಿ ಗುಂಣ್ಡಮರಸನು ಬನವಾಸಿಯಲ್ಲಿ ೧೦೮೦ರಲ್ಲಿ ಮತ್ತು  ತರ್ದ್ದವಾಡಿ ನಾಡಿನಲ್ಲಿ ೧೦೮೩ ರಲ್ಲಿರುತ್ತಾನೆ. ಅನಂತಪಾಲ ದಂಡನಾಯಕನು ಬನವಾಸಿ ಪ್ರಾಂತ್ಯವನ್ನಾಳುತ್ತ ಬೆಳ್ವೊಲ ಮತ್ತು ಪುರಿಗೆರೆ ೩೦೦ ವಿಭಾಗಗಳ ಆಡಳಿತವನ್ನು ಕ್ರಿ.ಶ. ೧೧೦೩-೧೧೦೭ ಅವಧಿಯಲ್ಲಿ ಆಳುತ್ತಿದ್ದಾನೆ.
ಈ ಆಧಿಕಾರಿಗಳಲ್ಲಿ ಗುಂಣ್ಡಮರಸ ಹಾಗೂ ಅನಂತಪಾಲ ವಡ್ಡರಾವುಳ ಮತ್ತು ಪೆರ್ಜ್ಜುಂಕ ಹಾಗೂ ಬಿಲ್ಕೊಡೆಯ ಸುಂಕವನ್ನು ಆಳುತ್ತಿರುವುದನ್ನು ಈ ಕೆಳಗಿನ ಶಾಸನಗಳಿಂದ ನೋಡಬಹುದು.
ಗವರೇಶ್ವರ ದೇವರ ಅಂಗಭೋಗಕ್ಕವಲ್ಲಿಯ ಖಂಡ ಸ್ಫುಟಿತ ಜೀರ್ಣ್ಣೋಧಾರಕಂ ಕೊಟ್ಟ ಧಂರ್ಮ್ಮಾಯಂ ಶ್ರೀನಗರಂಗಳಂಡಿಗಳಲು ವರ್ಷಕ್ಕೆ ಪ್ರತ್ಯೇಕ ವೀಸಂ ಹತ್ತು, ಚಿಂನ ಗೆಯಿಕದ ಬೆವಹಾರಿಗರು ಪ್ರತ್ಯೇಕ ವರ್ಷಕೆ ವೀಸಂ ಹತ್ತು, ಸ್ಥಳದ ಗವಱೆಗಳು ವರ್ಷಕೆ ಹಸುಂಬೆಗೆ ಪಣವೊಂದು, ನಾನಾದೇಶಿಗವಱೆಗಳು ವರ್ಷಕ್ಕೆ ದಸುಂದಗೆ ಹಾಗವೊಂದು, ಕರ್ಪೂರ ಕಸ್ತೂರಿ ಕುಂಕುಮ ಶ್ರೀಖಂಡ ಮುತ್ತೊಳಗಾಗಿ ಸಮಸ್ತ ತೂಕದ ಭಂಡವತಕ್ಕಂ ಪೊಂಗೆ ಕಾಣಿ ಎರಡು, ಸ್ಥಳದ ದೂಸಿಗ ವ್ಯವಹಾರಿಗಳಲುಂ ನಾನಾದೇಶಿದೂಸಿಗ ವ್ಯವಹಾರಿಗಳಲುಂ  ಪೊಂಗೆ ಕಾಣಿ ಎರಡು, ಮೆಳಸು ಜೀರಗೆ ಸಾಸವಿ ಸದಹುಗೆವೋವ ಕೊತ್ತುಂಬಲಿ ಯೊಳಗಾಗಿ ಪೊಂಗೆ ವೀಸವೊಂದು, ಸಖ್ಖರೆ ಯಿಂಗು ಸೂಂಠಿ ಹಿಪ್ಪಲಿ ಏಲೆಯಕ್ಕಿ ಯಲ್ಲ ವರಿಸಿನಾರು ಪೇರು ಸಮಸ್ತ ತೂಕದ ಭಂಡಕ್ಕೆ ಪೊಂಗೆ ವೀಸವೊಂದು, ಹೆಜ್ಜುಂಕ ವಡ್ಡರಾವುಳಕೆ ನಡವ ದಂಡನಾಯಕರು ಹತ್ತಕೊಂದ ಹೇಱನ ಸುಂಕವಂ ಬಿಟ್ಟುಕೊಟ್ಟರು ಸ್ಥಳದ ಹೇಱುವ ಬಂಣಂಜಿಗರು ಹೊಱಗಣಿಂದ ಬಂದ ಸಮಸ್ತ ಬಣಂಜಿಗರು ಹೇಱಂಗೆ ಮಾನವೊಂದು ಮಾಲಗಾಱ ನಾಲ್ವೊತ್ತೊಕಲಲು ತಂಮ ಕರಂಡಗೆಗಳಲು ಪ್ರತ್ಯೇಕ ಹೂವಿನ ಸರವೊಂದು ತಂಬುಲಿ ಗರು ಸಾಸಿರ್ಬ್ಬರಲು ಚೈತ್ರ ಪವಿತ್ರ ಪರ್ವ್ವ ಬಿಯಕ್ಕೆ ವೊಕ್ಕಲಲು ಎಲೆ ಸಾಯಿರ ವೊಂದುಮ ತೆಲ್ಲಿಗಯ್ವತ್ತೊಕ್ಕಲಲುಂ ದೇವರ ನಂದಾದೀವಿಗೆಗೆ ಗಾಣಂಗಳಲು ಪ್ರತ್ಯೇಕ ಎಣ್ಣೆ ಸೊಂಟಿಗೆ ವೊಂದು ಜಿಡ್ಡುಳಿಗೆ ಯೆಪ್ಪತ್ತಱ ಮಂನೆಯ ಎಕ್ಕಲರಸಂ ಮುಖ್ಯವಾಗಿ . . .  ಎಂದು ಶಿಕಾರಿಪುರ ಶಾಸನ ಉಲ್ಲೇಖಿ ಸುತ್ತದೆ.
ಇನ್ತು ದಯಾತ್ಯ ದಣ್ಡಾಧಿಪತಿ ಬನವಾಸೆ ಪನ್ನಿರ್ಚ್ಛಾಸಿರ ಮುಮಂ ಶಾನ್ತಳಿಗೆ ಸಾಯಿರಮುಮಂ ಪದಿನೆಂಟು ಭತ್ತ ಗ್ರಾಮಗಳಂ ಮೇಲ್ವಟ್ಟೆಯ ವಡ್ಡರಾವುಳದ ಸುಂಕಮುಮಂ ಸುಖಸಂಕಥಾವಿನೋದದಿಂ . . . . ಮಠದ ಸೊಡರೆಂಣ್ನೆಗಂ ವಡ್ಡರಾವುಳಂ ಪೆರ್ಜ್ಜುಂಕ ಎರಡು ಬಿಲ್ಕೊಡೆ ಅನ್ತು ನಾಲ್ಕು ಸುಂಕಮುಮಂ ಎಂದು ಸೊರಬ ಶಾಸನ ಉಲ್ಲೇಖಿಸುತ್ತದೆ. 
ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಾಧಿಪತಿ ಮಹಾಪ್ರಧಾನ ದಂಣ್ಡನಾಯಕ ಮನೆವೆರ್ಗ್ಗೆಡೆ ದಂಣ್ಡನಾಯಕಂ ಗುಂಣ್ಡಮರಸರು ಬನವಸೆ ನಾಡೊಳಗಣ ಕಂಪಣ ಮಗ್ರಹಾರಂ ವಡ್ಡರಾವುಳಂ ಹೆಜ್ಜುಂಕ ಯೆರಡುಂ ಬಿಲ್ಕೊಡೆಯ ಮನಾಳುತ್ತಿರೆ  ಯಿವರ ವಂಶದೊಳಗೆ ಜ್ಯೇಷ್ಠನುದಿತ್ಯಕೃಷ್ಟನು ಮೆನಿಸಿದ ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಾಧಿ ಪತಿ ಮಹಾಪ್ರಷಣ್ಡ ದಣ್ಡನಾಯಕಂ ವಿಬುಧ ಪ್ರದಾಯಕಂ ಹಯವತ್ಸರಾಜಂ ರೂಪ ಮನೋಜಂ ಪರಾರ್ತ್ಥ ಜೀಮೂತವಾಹನ ಯರಿತಟಭೈರವಂ ಗುಣ್ಪನಸಂನ್ನಾಹ ಸಮಸ್ತ ನಾಮಾವಸೀ ಸಮೇತರಪ್ಪ ಜೆಕ್ಕಮರಸನುಂ ಎಂದು ಶಿಕಾರಿಪುರ ಮತ್ತೊಂದು ಶಾಸನ ಉಲ್ಲೇಖಿಸುತ್ತದೆ.
ಸಮಸ್ತ ಪ್ರಶಸ್ತಿ ಸಹಿತಂ ಸ್ರೀಮದ್ದಂಡನಾ ಸ್ರೀಧರ ಯ್ಯಂಗಳು ಮೇಲ್ವಟ್ಟೆಯ ವಡ್ಡರಾವುಳ ಎರಡುಂ ಬಿಲ್ಕೊಡೆಯ ನಾಳುತ್ತಮಿರೆ   . . . . . ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ಪೆರ್ಗ್ಗಡೆ ಚಂಗಮಯ್ಯಂಗಳೆ ಬನವಾಸೆ ಪನ್ನಿರ್ಚ್ಛಾಸಿರದ ದವಸಾಯದ ಸುಮಕಮಂ ವಡರಾವುಳ ಡರಡುಂ ಬಿ  . . ಕಡೆಯ ಮನಾಳುತ್ತಂ ಚಾಳುಕ್ಯ ವಿಕ್ರಮಕಾಲದ ೧೩ ನೆಯ . . . ಎಂದು ಸಒರಬದ ಎಲೆವಾಳ ಶಾಸನ ಉಲ್ಲೇಖವಿದೆ.
ಶಿಕಾರಿಪುರ ತಾಲೂಕಿನ ಮತ್ತೊಂದು ಶಾಸನದಲ್ಲಿ ಹೀಗೆ ಉಲ್ಲೇಖವಿದೆ. ಸಮಧಿಗತ ಪಞ್ಚಮಹಾಶಬ್ದ ಮಹಾಸಾಮನ್ತಾಧಿಪತಿ ಮಹಾಪ್ರಚಣ್ಡ ದಣ್ಡನಾಯಕನ ನನ್ತ ಪಾಳನಾ ಬೆಸದಿಂ ಬನವಾಸಿ ಪರ್ಚ್ಚಾಸಿದರ ವಡ್ಡರಾವುಳದ ಸುಂಕದಧಿಷ್ಠಾಯಕಂ ಶ್ರೀಮದ್ದಣ್ಡನಾಯಕಂ ಮಾದಿರಾಜಂ ಚಾಳುಕ್ಯ ವಿಕ್ರಮ ವರ್ಷದ ೨೨ ನೆಯ ಈಶ್ವರ ಸಂವತ್ಸರದ ಪೌಷ್ಯ ಸುದ್ಧ ೧೦ ಆದಿತ್ಯವಾರದನುತ್ತರಾಯಣ ಸಂಕ್ರಮಣ ನಿಮಿತ್ತಂ ಶ್ರೀಮದಗ್ರಹಾರ ಮಾರಸಿಂಗನ ಬೇಗೂರ ವಿಷ್ಣುದೇವರಿರ್ಗ್ಗೆ ಧಾರಾಪೂರ್ವ್ವಕ . .  ಡಿ ಆಗ್ರಾಮದ ಅಡಕೆಯ ವಡ್ಡರಾವುಳದ ಸುಂಕದೊಳಗೆ ಮೂ . . . ಲಕ್ಕಡಕೆಯ ಸುಂಕಮುನುಂ ಮತ್ತಂ ತಮಗೆ ನಡೆವ ಕಿಱುಕುಳ ಸುಂಕದೊಳಗೆ ಬಿಲ್ಕಡೆಯ ಎಲೆಯ ಹೇಱಂಗೆ ದಸವನ್ದ ಮುಮಂ ಮತ್ತಂ ಕ . . ಭೂಮಿಂಗೆ ಸುಂಕ ವೀಸಮುಮಂ| ದವಸಾಯದೊಳಗೆ . . . ನಮುಂ ಬಿಟ್ಟು ||
ಶ್ರೀಮದ್ದಣ್ಡನಾಯಕ ಗೋವಿನ್ದರಸರ್ ಮೇಲ್ವಟ್ಟೆಯ ವಡ್ಡರಾವುಳ ಮುಮೆರಡುಂ ಬಿಲ್ಕೊಡೆಯಯಂ ಪೆರ್ಜ್ಜುಂಮುಂ ಪಡೆದು ಸುಖಸಂಕಥಾವಿನೋದದಿಂ ಪ್ರತಿಪಾಳಿಸುತ್ತಮಿರೆ || . . . . . . . .ಶ್ರೀಮತ್ಕೇದಾರೇಶ್ವರ ದೇವರ ಧೂಪ ದೋಪ ನಿವೇದ್ಯಕ್ಕೆಂದು| ಅವಾಗರದೋಳ್ಪಿಡಿವಲ್ಲಿ ಮಾಱುವಡಮೆಱಡು ಲಕ್ಕವಡಕೆಗೆ ಪೆರ್ಜ್ಜುಂಕಮುಮಂ ವಡ್ಡರಾವುಳಮುಮೆರಡುಂ ಬಿಲ್ಕೊಡೆಯುಂ ಸರ್ವ್ವ ನಮಸ್ಯೆಮೆಂದು ಬಿಟ್ಟರ್ || ಹಾಗೂ ಧಾರಾಪೂರ್ವ್ವಕಂ ಮಾಡಿ ಜಿಡ್ಡುಳಿಗೆ ನಾಡೊಳಗಣ ತದವಣಲೆಯುಮ ನಾಡೊಳಗೆ ಸ್ಥಳವೃತ್ತಿಯಾಗಿ ಹಕ್ಕಲೆಯ ಹೊಲನುಮಂ ತ್ರಿಭೋಗಾಭ್ಯನ್ತರವಾಗಿ ಕೊಟ್ಟು ಮತ್ತ ವಲೆಯಡಕೆ ಧಾನ್ಯವೆಂಬೀ ವಸ್ತುಗಳು ಮೊದಲಾಗಿ ಕ್ರಯವಿಕ್ರಯ ಯೋಗ್ಯಂಗಳಪ್ಪುವರ್ಕ್ಕೆಲ್ಲಂ ವಡ್ಡರಾವುಳಂ ಹೆರ್ಜ್ಜುಂಕಮೆಂಬಿವು ಮೊದಲಾಗಿ ಯುಳ್ಳನ್ತಪ್ಪ ಸುಂಕ ಗಳೆಲ್ಲಮಂ ಬಿಟ್ಟುಕೊಟ್ಟ ಸರ್ವ್ವನಮಸ್ಯವಾಗಿ ಕೊಟ್ಟಾಗಳ್ ||  ಎಂದು ಶಿಕಾರಿಪುರ ತಾಲೂಕಿನ ಶಾಸನದಲ್ಲಿ ಉಲ್ಲೇಖವಿದೆ.
ಶ್ರೀಕೇದಾರೇಶ್ವರದೇವರ ತೋಂಟದಲು ಪುಟ್ಟುವಾವು ದಂನ್ನದ ಗೋಂಟಡಕೆಯ ವಡ್ಡರಾವುಳ ಹೆಜ್ಜುಂಕ ವೆರಡುಂ ಬಿಲ್ಕೊಡೆಯ ಸುಂಕವತುಮಂ ಮತ್ತವಾ ತೋಂಟದೆಲೆಯ ಪಂನ್ನಾಯದೆಲ್ಲಾ ಸುಂಕಮುಮಂ ಸರ್ವ್ವಾಭಾಧಾ ಪರಿಹಾರ ವಾಗಿ ನಡವಂತಾಗಿರಲು ಬಿಟ್ಟುಕೊಟ್ಟ || ಎಂದು ಮತ್ತೊಂದು ಶಿಕಾರಿಪುರ ತಾಲೂಕಿನ ಶಾಸನ ಉಲ್ಲೇಖಿಸಿದೆ.೧೦
ಬಾದಾಮಿಯ ಬೊಮ್ಮನಾಯಕ ನೆರಡುನೂಱಱ ಹೆರ್ಜ್ಜುಂಮನಾಳುತ್ತ ದೇವರ ಚೈತ್ರ ಪವಿತ್ರದಂದು ಕುಕ್ಕನೂರ ಮೂವತ್ತಱೊಳಗೆಲ್ಲಯಾದೊಡಂ ಗುಡಿಯ ಬೀಡಿಗಂ ಅಡಕೆ ಮೆಣಸು ಧಸರಿಯ ಮಳವೆ ಸೀರೆಯ ಮಳವೆ ಹದವಿನ ಮಳವೆ ಅರಸಿನದ ಮಳವೆ ಅಲ್ಲದ ಮಳವೆ ಲಯ ಕೊಡ ಎತ್ತಿನಲು ಕತ್ತೆಯಲು ಕೋಣನಲು ಏನ ಹೇಱ ಬಂದಡಂ ಹೆರ್ಜ್ಜುಂಕ ಬೀರವಣ ವಡ್ಡಲಾವುಳ ಸಹಿತ ಹತ್ತಕೊಂದು  ದಸವಂದಮಾಗಿ ಚಾಳುಕ್ಯ ವಿಕ್ರಮ ಕಾಲದ ೫೦ನೆಯ . . . . ಎಂಬ ಉಲ್ಲೇಖ ಯಲಬುರ್ಗಾ ತಾಲೂಕಿನ ಶಾಸನದಲ್ಲಿದೆ. ೧೧
|| ಭರತಂ ಮುನ್ನಂ ರಾಜ್ಯದ ಭರಮಂ ತಾಳ್ದಿೞ್ದು ಸುಂಕಮಂ ಮಾರ್ಪ್ಪಂದಾದರದಿಂ ಗೌಡದ ಗೌತಮೇಶ್ವ ದೇವಂಗಿತ್ತ ನೆರೆಡು ಸುಂಕದ ತೆಱೆಯ || ಪಿರಿಯ ತೆಱೆ ವಡ್ಡರಾವುಳ ವರಸರ ಸಾಮಂತ ಭುಕ್ತಿ ಪೆರ್ಜ್ಜುಂಕಂ ದೇವರಿ ಗಿಂತು ಸರ್ಬ್ಬಭಾಧಾ ಪರಿಹಾರಂ ಭರತಂದೆವತ್ತಿಸಿ ನಡೆಗುಂ ಇಂತೀ ಧರ್ಮ್ಮಮಂ  ಸವಿಸ್ತರಂ ಕೇಳ್ದು ದೇವರ ದೇವಂಗೆ ನಾಲ್ಕು ಲಕ್ಕವಡಕೆಯ ವಡ್ಡರಾವುಳದ ಸುಂಕಮುಮಂ ಪೆರ್ಜ್ಜುಂಕಮುಮತಾವುಂ ಭಾಸ್ಕರಯ್ಯನುಂ ಧಾರಾಪೂರ್ಬ್ಬಕಂ ಬಿಟ್ಟು ಕೊಟ್ಟರಿಂತೀ ಧರ್ಮ್ಮಮಂ ಪ್ರತಿಪಾಳಿಸಿದಾತಂಗೆ ಕುರುಕ್ಷೇತ್ರ . . . . ಎಂಬ ಉಲ್ಲೇಖವು ಶಿಕಾರಿಪುರ ತಾಲೂಕಿನ ಶಾಸನದಲ್ಲಿದೆ. ೧೨
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಎರಡು ರೀತಿಯ ಮಾರ್ಗ ಸುಂಕಗಳಿವೆ. ಮೇಲ್ವಟ್ಟೆ ಮತ್ತು ಕೀಳ್ವಟ್ಟೆ. ಮೇಲ್ವಟ್ಟೆಯು ಹೆದ್ದಾರಿಗಳ ಸುಂಕವಾದರೆ, ಕೀಳ್ವಟ್ಟೆಯು ಗ್ರಾಮಗಳಿಗೆ ಹೋಗುವ ಚಿಕ್ಕ ರಸ್ತೆಗಳ ಮೇಲೆ ಸಾಗಿಸುವ ಮಾರಾಟದ ಸರಕುಗಳ ಮೇಲಿನ ಸುಂಕ. ಬೀರವಣವು ಸಾರಿಗೆ ಸುಂಕ. ಗೌಜ ಗ್ರಾಮದ ಶಾಸನವು ಹಿಂದೆ ಭರತನು ಗೌತಮೇಶ್ವರ ದೇವರಿಗೆ ಬಿಟ್ಟ ಎರಡು ತೆರಿಗೆಗಳನ್ನು ಪ್ರಸ್ತಾಪಿಸುತ್ತದೆ. ಈ ಎರಡು ತೆರಿಗೆಗಳ ವಿವರ ಹೀಗಿದೆ, ಪಿರಿಯ ತೆರೆ ವಡ್ಡರಾವುಳ ಮತ್ತು ಅರಸರ ಸಾಮಂತ ಭುಕ್ತಿ ಪೆರ್ಜ್ಜುಂಕ. ಕೆಲವು ಅಧಿಕಾರಿಗಳು ಮೇಲ್ವಟ್ಟೆಯ ವಡ್ಡರಾವುಳ ಮತ್ತು ಪೆರ್ಜ್ಜುಂಕ ಆಳುತ್ತಿರುವುದನ್ನು ಕಾಣಬಹುದು. ಪ್ರಾಯಶಃ ಇದರಿಂದ ಮುಖ್ಯ ಮಾರ್ಗಗಳಲ್ಲಿ ಇರುವ ಠಾಣೆಗಳಲ್ಲಿ ಸಂಕಲಿಸಲಾಗುತ್ತಿದ್ದ (ವಸೂಲಾಗುತ್ತಿದ್ದ) ಸುಂಕವು ಸಾಮ್ರಾಟರಿಗೆ ಸಲ್ಲುತ್ತಿತ್ತು. ಇದನ್ನು ಅರಸರ ಸಾಮಂತರು ನೀಡುತ್ತಿದ್ದರು ಮತ್ತು ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಬಿಲ್ಕೊಡೆ ಅಥವಾ ಬೀರವಣವು ಸಾಗಣೆ ಸಮಯದಲ್ಲಿ ಕಳ್ಳಕಾಕರಿಂದ ರಕ್ಷಣೆಗೆ ನೀಡುವ ಸಲುವಾಗಿ ಪಡೆಯುತ್ತಿದ್ದ ಸುಂಕ ಆಗಿತ್ತೆಂದು ತೋರುತ್ತದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಡಾ|| ಶ್ರೀನಿವಾಸ ರಿತ್ತಿ, ೨೦೦೦, ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.
೨.         ಡಾ|| ಬಿ.ಆರ್. ಗೋಪಾಲ್, ೧೯೮೧, ದಿ ಚಾಲುಕ್ಯಾಸ್ ಅಂಡ್ ದಿ ಕಲಚೂರಿಸ್, ಕರ್ನಾಟಕ ವಿಶ್ವವಿದ್ಯಾಲಯ, ಪುಟ ೭೯.
೩.         ಅದೇ ಪುಟ ೨೭೩.
೪.         ಎ.ಕ.೭, (ರೈಸ್ ಆವೃತ್ತಿ), ಶಿಕಾರಿಪುರ ತಾಲೂಕು ನಂ ೧೧೮, ಸೋಮೇಶ್ವರ ದೇವಸ್ಥಾನದ ಬಾಗಲಿನ ಬಲಭಾಗದಲ್ಲಿ ನೆಟ್ಟಕಲ್ಲು, ಬೆಳಗಾಮಿ ಕ್ರಿ.ಶ ೧೦೫೪.
೫.         ಎ.ಕ.೮, (ರೈಸ್ ಆವೃತ್ತಿ), ಸೊರಬ ತಾಲೂಕು, ನಂ ೨೯೯, ತೊರೆವಂದ ಗ್ರಾಮದ ಬಯಲ ಬಸವನ ಗುಡಿ ಬಳಿ ನೆಟ್ಟ ೨ನೆಯ ಕಲ್ಲು ಕ್ರಿ.ಶ ೧೦೭೪.
೬.         ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲೂಕು ನಂ ೧೦೦, ವಿರಕ್ತ ಮಠದ ತುಂಬೋ ಹೊಂಡದ ಏರೀ ಮೇಲಿರುವ ಕಲ್ಲು, ಬೆಳಗಾಮಿ ಕ್ರಿ.ಶ ೧೦೮೦.
೭.         ಎ.ಕ. ೮, (ರೈಸ್ ಆವೃತ್ತಿ), ಸೊರಬ ತಾಲೂಕು, ಎಲೆವಾಳ ನಂ ೩೮೮, ಬಸವಣ್ಣನ ಗುಡಿ ಮುಂದೆ ನೆಟ್ಟ ನಾಲ್ಕನೆಯ ಕಲ್ಲು, ಕ್ರಿ.ಶ ೧೦೮೯
೮.         ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲ್ಲೂಕು, ನಂ. ೧೩, ಬೇಗೂರು ಮಲ್ಲಿಕಾರ್ಜುನ ದೇವಾಲಯಕ್ಕೆ ಆಗ್ನೇಯದಲ್ಲಿ ಅಶ್ವತ್ಥ ಮರದ ಬುಡದಲ್ಲಿ ಕ್ರಿ.ಶ ೧೦೯೮.
೯.         ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲ್ಲೂಕು, ನಂ. ೯೮ ಮತ್ತು ೧೦೦, ಕೇದಾರೇಶ್ವರ ದೇವಾಲಯ ೭ನೆಯ ಕಲ್ಲು ಮತ್ತು ೯ನೆಯ ಕಲ್ಲು  ಬೆಳಗಾಮಿ ಕ್ರಿ.ಶ. ೧೧೦೩ ಮತ್ತು  ಕ್ರಿ.ಶ. ೧೧೨೯.
೧೦.      ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ ತಾಲೂಕು ನಂ ೧೦೪, ಕೇದಾರೇಶ್ವರ ದೇವಾಲಯ ೧೩ನೆಯ ಕಲ್ಲು, ಬೆಳಗಾಮಿ ಕ್ರಿ.ಶ ೧೧೫೫.
೧೧.      ಕೊಪ್ಪಳ ಜಿಲ್ಲೆ, ಯಲಬುರ್ಗ ತಾಲೂಕು, ಕುಕ್ಕನೂರು ನಂ ೧೭, ಕ್ರಿ.ಶ. ೧೧೫೪, ಕ.ವಿ.ಶಾ.ಸಂ. ೨, ಹಂಪಿ, ಕ.ವಿ.ವಿ.
೧೨.      ಎ.ಕ. ೭, (ರೈಸ್ ಆವೃತ್ತಿ), ಶಿಕಾರಿಪುರ, ನಂ ೪೮, ಗೌಜ, ಗೌತಮೇಶ್ವರ ದೇವರ ಪ್ರಾಕಾರದಲ್ಲಿ ಕ್ರಿ.ಶ. ೧೦೭೬.

? # ೬೬, ಮೊದಲನೆಯ ಅಡ್ಡರಸ್ತೆ, ಹೊಸಮನೆ ಬಡಾವಣೆ, ಶಿವಮೊಗ್ಗ-೫೭೭೨೦೧.



Tuesday, August 6, 2013

ಡಾ. ಶಂ ಬಾ ಜೋಷಿ

ಎಚ್  ಶೇಷಗಿರಿರಾವ್‌









ಸಾಂಸ್ಸಕೃತಿಕ ಸಂಶೋಧಕ ಶಂ..ಬಾ ಜೋಷಿ

ನವೋದಯ ಕಾಲದಲ್ಲಿ ಧಾರವಾಡಕ್ಕೇ ಭೇಟಿನೀಡಿದಾಗ ಸಾಹಿತ್ಯ ಪ್ರಿಯರಿಗೆ ಹೊಗಲೇ ಬೇಕಾದ ಎರಡು ತಾಣಗಳಿದ್ದವು. ಭಾವಜೀವಿಗಳಾದ ಕಾವ್ಯಪ್ರಿಯರು ಸಾಧನ ಕೇರಿಯ ಹಾದಿ ಹಿಡಿದು .ಬೇಂದ್ರೆಯವರ ದರ್ಶನ ಪಡೆದರೆ , ವಿಚಾರವಂತರಿಗೆ ವಿದ್ವಾಂಸರಿಗೆ ನೋಡಲೇ ಬೇಕಾದ ಇನ್ನೊಬ್ಬ ವ್ಯಕ್ತಿ ಎಂದರೆ ಶಂಬಾ ಜೋಷಿ. ಇಬ್ಬರನ್ನೂ ನೋಡಿಕೊಂಡು ಬರುವವರು ಇದ್ದರೂತಮ್ಮ ಭೇಟಿಯ ಬಗೆಗೆ ಬಾಯಿ ಬಿಚ್ಚುತ್ತಿರಲಿಲ್ಲ. ಇಬ್ಬರ ಘಟಾನುಘಟಿಗಳು. ಒಟ್ಟಿಗೆ ಸೇರಿ ರಾನಡೆಯವರ ಉಪನಿಷದ್‌ ರಹಸ್ಯ ಎಂಬ ಕೃತಿಯನ್ನು ೧೯೨೮ ರಲ್ಲಿಯೇ ಅನುವಾದಿಸಿದ್ದರು. ಇಬ್ಬರ ಹಿನ್ನೆಲೆಯೂ ಸಮಾನವಾಗಿತ್ತು. ಜೀವನ ಶೈಲಿ ಒಂದೇ ಆಗಿತ್ತು , ಇಬ್ಬರೂ ಕನ್ನಡದ ಸಾಧನೆ ಶಿಖರವಾಗಿದ್ದರೂ ಅದೇಕೋ ಅನೇಕ ಸಲ ಅವರು ಉತ್ತರ ಧೃವ ಮತ್ತು ದಕ್ಷಿಣ ಧೃವ ಆಗುತಿದ್ದರು ಎನಿಸುತಿತ್ತು. ಪರಸ್ಪರ ಸಾಧನೆಯ ಕುರಿತು ಗೌರವ ಇದ್ದರೂ ಏನೋ ಕಸಿವಿಸಿ ಕಾಡುತಿತ್ತು. ಹೀಗೆ ಬೇಂದ್ರೆಯವರ ಸರಿಸಮನಾದ ಸಾಧನೆಯನ್ನು ಸಂಶೋಧನೆ ಮತ್ತು ಭಾಷಾ ಶಾಸ್ತ್ರ ಕ್ಷೇತ್ರದಲ್ಲಿ ಸಾಧಿಸಿದ ಹಿರಿಮೆ ಶಂಬಾ ಅವರದು. ಆ ಕಾಲಕ್ಕೆ ಕನ್ನಡ ನಾಡು ನುಡಿಯಧರ್ಮ ಮತ್ತು ಸಂಸ್ಕೃತಿ ಬಗ್ಗೆ ಆಳವಾದ ಸಂಶೋಧನೆ ಮಾಡಿ ಅಧಿಕೃತವಾಗಿ ಮಾತನಾಡುವ ವ್ಯಕ್ತಿ ಅವರೊಬ್ಬರೇ ಆಗಿದ್ದರು. ವಿಚಾರವೇ ಜೀವನದ ಬೆಳಕು ಎಂದು ಬಾಳಿದವರು ಶಂಬಾ.
ಶಂಬಾ ಜೊಷಿ


 ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲ ಹೊಸೂರಿನಲ್ಲಿ ೧೮೮೬ಜನವರಿ ೪ ರಂದು ಜನಿಸಿದರು.ಅವರ ಹುಟ್ಟು ಹೆಸರು ಶಂಕರ. ತಂದೆ ಬಾಳಾ ದೀಕ್ಷಿತ .ಅವರದು ಶ್ರೋತ್ರಿಯ ಮನೆತನ ಹೀಗಾಗಿ ಜೋಷಿ ಅವರ ಹೆಸರಿಗೆ ಸೇರಿತು. ಪೂರ್ಣ ಹೆಸರು ಶಂಕರ ಬಾಳಾ ದೀಕ್ಷಿತ ಜೋಷಿ ಆದರೂ ಅವರು ನಾಡಿನಾದ್ಯಂತ ಶಂಬಾ ಎಂದೇ ಪರಿಚಿತರು.ಅವರು ಚಿತ್ಪಾವನ ಬ್ರಾಹ್ಮಣರು ಹೀಗಾಗಿ ಕನ್ನಡದ ಜೊತೆ ಮರಾಠಿಯ ಪರಿಚಯ ಬಾಲ್ಯದಿಂದಲೇ ಇತ್ತುಅವರ ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ ಆಯಿತು. ಮಲಫ್ರಭೆಯ ಮಹಾಪೂರದ ಹಾವಳಿಯಲ್ಲಿ ಅವರು ವಾಸವಿದ್ದ ಮನೆ ಹೋಯಿತು. ಅದೇ ಸಮಯದಲ್ಲಿ ತಂದೆಯೂ ತೀರಿಕೊಂಡರು. ಪುಣೆಯಲ್ಲಿದ್ದ ವೈದಿಕ ವೃತ್ತಿ ಮಾಡುತಿದ್ದ ಅಣ್ಣನ ಮನೆಯಲ್ಲಿ ಕೆಲಕಾಲ ಆಶ್ರಯ ಪಡೆದರು. ಅವರಂತೆ ವೈದಿಕ ವೃತ್ತಿ ಹಿಡಿಯಲು ಮನಸ್ಸು ಬರಲಿಲ್ಲ. ಅಲ್ಲಿಗೆ ಹೋದುದರ ಲಾಭವೆಂದರೆ ಲೋಕಮಾನ್ಯ ತಿಲಕರ ದರ್ಶನ ಮತ್ತು ಅವರ ಪ್ರಭಾವದಿಂದ ದೇಶಭಕ್ತಿಯ ಕಿಚ್ಚು ಮನದಲ್ಲಿ ಹತ್ತಿತು. ತಮ್ಮ ಕಾಲಮೇಲೆ ತಾವು ನಿಲ್ಲಲು ಧಾರವಾಡದಲ್ಲಿ ಟೀಚರ್‌ ಟ್ರೇನಿಂಗ್‌ ಸೇರಿದರು. ೧೯೧೯ರಲ್ಲಿ ಪ್ರಪ್ರಥಮ ಸ್ಥಾನ ಪಡೆದರು ಚಿಕ್ಕೋಡಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆ ದೊರಕಿತು.ಅದೇ ಸಮಯದಲ್ಲಿ ಚಿಕ್ಕೋಡಿಗೆ ಬಂದ ಗಾಂಧೀಜಿಯವರು ಬಂದರು. ಶಂಬಾರವರಲ್ಲಿದ್ದ ರಾಷ್ಟ್ರಭಕ್ತಿಯ ಕಿಡಿ ಪ್ರಜ್ವಲಿಸಿತು. ಗಾಂಧೀಜಿಯವರ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ದುಡಿದರು. ಸರ್ಕಾರಿ ನೌಕರರೆಂಬ ವಿಷಯ ಅವರಿಗೆ ಅಡ್ಡ ಬರಲೇ ಇಲ್ಲ. ಗಾಂಧೀಜಿಯವರ ಜೊತೆಗೂಡಿ ಪ್ರವಾಸ ಮಾಡಿದರುಅವರಿಗಾಗಿ ದುಡಿದರು. ಖಾದಿ ಪ್ರಚಾರಹರಿಜನೋದ್ಧಾರ , ಸತ್ಯಾಗ್ರಹ ಮೊದಲಾದವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದರಿಂದ ಸರ್ಕಾರದ ಕ್ರೂರ ದೃಷ್ಟಿಗೆ ಬೀಳ ಬೇಕಾಯಿತು. ಪರಿಣಾಮವಾಗಿ ಎಚ್ಚರಿಕೆ ನೀಡಿ ವರ್ಗಾವಣೆಯಾಯಿತು. ಅದೇ ಸಮಯದಲ್ಲಿ ಕನ್ನಡ ಸಾಹಿತ್ಯದ ಅಧ್ಯಯನ ಮೊದಲು ಮಾಡಿದರು. ಪತ್ರಿಕಾ ಲೇಖನ ಬರೆಯ ತೊಡಗಿದರು.ಸರ್ಕಾರಿ ಚಾಕರಿ ಬೇಡವೆನಿಸಿತು. ರಾಜಿನಾಮೆ ನೀಡಿದರು. ಲೇಖನ ವ್ಯವಸಾಯ ಮುಂದುವರಿಸಿದರು. ಕೆಲಕಾಲ ಕರ್ಮವೀರದಲ್ಲಿ ಕೆಲಸ ಮಾಡಿದರು. ಅವರ ಮದುವೆ ೧೯೨೧ ರಲ್ಲಿ ಪಾರ್ವತಿಬಾಯಿಯೊಡನೆ ಮದುವೆಯಾಯಿತು. ಅವರು ಗಂಡನ ಸಂಕಷ್ಟಗಳಲ್ಲಿ ಸಹಭಾಗಿಯಾಗಿ ಸಂಶೋಧನೆಯ ಬಗೆಗೆ ಬಹಳ ಗೌರವ ಹೊಂದಿ ಎಲ್ಲ ರೀತಿಯಲ್ಲೂ ಸಹಕರಿಸಿದರು. ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿನ ಸಂಸಾರವನ್ನು ಸಹನೆಯಿಂದ ನಿಭಾಯಿಸಿದರು. ಆಗಲೇ ಮಡದಿ ಮಕ್ಕಳನ್ನು ಸಾಕುವ ಹೊಣೆ ಹೆಗಲೇರಿತ್ತು . ಬೇರೆ ಆದಾಯದ ಮೂಲವಿರಲಿಲ್ಲ. ದೇಶ ಸೇವೆಯನ್ನೇ ಕಸುಬು ಆಗಿಸಿಕೊಳ್ಳಲು ಮನವಿರಲಿಲ್ಲ. ಜೀವನದಲ್ಲಿ ಸ್ಥಿರತೆ ಅಗತ್ಯವೆನಿಸಿತು ಹಾಗಾಗಿ ಮತ್ತೆ ಉದ್ಯೋಗದತ್ತ ಮನಮಾಡಿದರು.. ಧಾರವಾಡದಲ್ಲಿ ೧೯೨೬ ರಲ್ಲಿ ಕರ್ನಾಟಕ ಹೈಸ್ಕೂಲಿನಲ್ಲಿ ನಂತರ ೧೯೨೮ರಿಂದ ನಿವೃತ್ತರಾಗುವವರೆಗೆ ಅಂದರೆ ೧೯೪೮ ರತನಕ ( ಅಂದಿನ ವಿಕ್ಟೋರಿಯಾ) ಈಗಿನ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಸೇವೆ ಸಲ್ಲಿಸಿದರು. ಅದು ಖಾಸಗಿ ಶಾಲೆಯಾದ್ದರಿಂದ ಅವರ ಚಟುವಟಿಕೆಗಳಿಗೆ ನಿರ್ಬಂಧವಿರಲಿಲ್ಲ. ಸಾಕಷ್ಟು ವಿರಾಮವೂ ಸಿಗುತಿತ್ತು. ಶೈಕ್ಷಣಿಕ ವಾತಾವರಣ ಮತ್ತು ಅಗತ್ಯ ಪರಾಮರ್ಶನ ಗ್ರಂಥಗಳ ಲಭ್ಯತೆ ಅವರ ಹುಮ್ಮಸ್ಸು ಹೆಚ್ಚಿಸಿತು. ನೂರಾರು ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿಮಾನ ಬೆಳಗಿಸಿದರು .ಕನ್ನಡ ಮತ್ತು ಮರಾಠಿಯಲ್ಲಿ ಬರವಣಿಗೆ ಮುಂದುವರಿಯಿತು. ಕನ್ನಡ ಸಾರಸ್ವತ ಲೋಕದಲ್ಲಿ ಪ್ರವೇಶ ದೊರೆಯಿತು..ಕನ್ನಡ ಮತ್ತು ಮರಾಠಿ ಸಾಹಿತ್ಯಲೋಕದ ದಿಗ್ಗಜಗಳ ಗೆಳೆತನ ಲಭಿಸಿತು.ಸಂಸ್ಕೃತವೂ ಕರಗತವಾಗಿತ್ತು.
ತಾರುಣ್ಯದಲ್ಲಿ ಶಂಬಾ ಅವರಲ್ಲಿ ಭಾವನೆ ಮತ್ತು ವೈಚಾರಿಕತೆ ಎರಡು ಇದ್ದರೂ ಬರಬರುತ್ತಾ ಭಾವನೆಯು ಗೌಣವಾಗಿ ಅವರ ಜೀವನದಲ್ಲಿ ವಿಚಾರಪರತೆಯೇ ಪ್ರಧಾನವಾಯಿತು. ಅವರ ಬರವಣಿಗೆ ಕಲ್ಪನೆಗಿಂತ ವಾಸ್ತವಕ್ಕೆಸತ್ಯಕ್ಕೆ ಹೆಚ್ಚು ಬದ್ಧವಾಯಿತು. ಕನ್ನಡ - ಸಂಸ್ಕೃತಿ- ಇತಿಹಾಸಗಳ ಅಧ್ಯಯನಕ್ಕೆ ಮೊದಲು ಅವರ ಮೇಲೆ ವಿವೇಕಾನಂದಅರವಿಂದ ತಿಲಕ್‌ ಮತ್ತು ಗಾಂಧೀಜಿಯವರ ಪ್ರಭಾವ ದಟ್ಟವಾಗಿತ್ತುಅಸಹಕಾರ ಚಳುವಳಿಯ ಅವಧಿಯಲ್ಲಿ ಆರು ತಿಂಗಳ ಕಾಲ ಗೃಹ ಬಂಧನದಲ್ಲೂ ಇರಬೇಕಾಯಿತು. ಆದರೆ ಅಂತಿಮವಾಗಿ ಅವರನ್ನು ಆವರಿಸಿದ್ದು ಸತ್ಯಾನ್ವೇಷಣೆಯ ಸಂಶೋಧನೆ.
ಅವರ ಅಧ್ಯಯನದ ಫಲವಾದ " ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ" ಕೃತಿಯು ಕನ್ನಡ ನಾಡು ನುಡಿಯ ಕುರಿತಾದ ಸರ್ವವಿಷಯಗಳನ್ನೂ ಒಳಗೊಂಡಿದೆ. ಅದನ್ನು ವೇದಉಪನಿಷತ್ತು,ಪುರಾಣಸ್ಮೃತಿಐತಿಹ್ಯ , ಮೊದಲಾದ ಎಲ್ಲ ಆಕರಗಳಲ್ಲಿನ ಅಂಶಗಳನ್ನೂಒಳಗೊಂಡ ಬೃಹತ್‌ಕೃತಿ. ಅದರ ಆಳ , ಅಗಲ ಮತ್ತು ವ್ಯಾಪಕತೆಗಳು ವಿದ್ವತ್‌ಲೋಕವನ್ನು ಚಕಿತಗೊಳಿಸಿದವು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.
ಸಂಸ್ಕೃತಿ ಇತಿಹಾಸಗಳ ಅಧ್ಯಯನದ ಆಳಕ್ಕೆ ಹೋಗಲು ಕನ್ನಡ , ಮರಾಠಿ,ಸಂಸ್ಕೃತ ಜೊತೆಗೆ ಇಂಗ್ಲಿಷ್‌ ಅಗತ್ಯವೆನಿಸಿತು. ತಮ್ಮ ೨೪ ವರ್ಷದಲ್ಲಿ ಕಲಿಯಲು ಪ್ರಾರಂಭಿಸಿದರು. ಸತತ ಅಧ್ಯಯನದಿಂದ ಅಗತ್ಯವಿರುವ ಗ್ರಂಥಗಳ ಪರಾಮರ್ಶೆ ಮತ್ತು ವಿದ್ವತ್‌ಸಂವಾದಗಳನ್ನು ನಡೆಸುವ ಪ್ರಾವಿಣ್ಯತೆಯನ್ನು ೧೯೩೦ರ ಹೊತ್ತಿಗೆ ಗಳಿಸಿಕೊಂಡರು. ಅಧ್ಯಯನ ಅನವರತ ಸಾಗಿತ್ತು. ಕನ್ನಡ ನಾಡು ನುಡಿಗಳ ಕುರಿತ ತಮ್ಮ ಬರಹಗಳ ಪ್ರಕಟಣೆಯ ಜೊತೆಗೆ.ನಾಡು ನುಡಿಗಳ ಅಂತಃಸತ್ವ ತಿಳಿಸುವ ಗ್ರಂಥಗಳ ಅನುವಾದ ಮತ್ತು ಪ್ರಕಟಣೆಯನ್ನೂ ಕೈಗೊಂಡರು.
ಆಗ ಕರ್ನಾಟಕ ಏಕೀಕರಣ ಚಳುವಳಿಯ ಕಾಲ. ಆಗಲೇ ಶಂಬಾರವರು ಕನ್ನಡನಾಡಿನ ಹುಟ್ಟುಬೆಳವಣಿಗೆ ವ್ಯಾಪ್ತಿಯ ಕುರಿತ ಸಂಶೋಧನ ಲೇಖನ ಪ್ರಕಟಿಸಿದರು.ಅವರ  ಮೊದಲ ಕೃತಿ " ಕಣ್ಮರೆಯಾದ ಕನ್ನಡ" ,ವಿದ್ವತ್‌ಲೋಕದಲ್ಲಿ ಪ್ರಶಂಸೆಗಳಿಸಿ ಸಂಶೋಧನೆಯ ಕೆಲಸ ಮುಂದುವರಿಸಲು ಅವರಿಗೆ ಹುಮ್ಮಸ್ಸು ತಂದಿತು. ಅವರ ಸಂಶೋಧನೆಯ ವ್ಯಾಪ್ತಿ ವೇದಉಪನಿಷತ್ತು,ಇತಿಹಾಸಪುರಾಣ. ಸಾಹಿತ್ಯಗಳನ್ನು ಒಳಗೊಂಡಿದ್ದು ಅವರ ನಿರ್ಧಾರಗಳು ಖಚಿತವಾಗಿರುತಿದ್ದವು. "ಕಂನುಡಿಹುಟ್ಟು" ಕನ್ನಡ ಭಾಷೆಯ ಉಗಮ ಮತ್ತು ಬೆಳವಣಿಗೆ ತಿಳಿಸಿದರೆಅವರ " ಮಹಾರಾಷ್ಟ್ರ ಮೂಲ" ಕೃತಿಯು ಮರಾಠಿ ಜ್ಞಾನ ಕ್ಞೇತ್ರದಲ್ಲಿ ಅವರ ಸ್ಥಾನ ಸ್ಥಿರ ಪಡಿಸಿತು. ಈ ಕೃತಿಯಿಂದ ಅವರ ತಾತ್ವಿಕ ಮತ್ತು ಸಾಂಸ್ಕೃತಿಕ ಕರ್ನಾಟಕ ಸಂಸ್ಕೃತಿಯಿಂದ ಭಾರತೀಯ ಸಂಸ್ಕೃತಿಯ ಆಳಕ್ಕೆ ಎಳಸಿರುವುದನ್ನು ಗುರತಿಸಬಹುದು.. ಹಾಲುಮತ ದರ್ಶನ,ಋಗ್ವೇದ ಸಾರ: ನಾಗಪ್ರತಿಮಾ ವಿಚಾರವೈವಸ್ವತ ಮನುಪ್ರಣೀತ ಮಾನವ ಧರ್ಮದ ಅಕೃತಿಬುಧನ ಜಾತಕಬಿತ್ತಿದುದ ಬೆಳಕೋ ಅವರ ಪ್ರಮುಖ ಕೃತಿಗಳಲ್ಲಿ ಕೆಲವು.ಅವರು ಅನೇಕ ಸಂಶೋಧನ ಲೇಖನಗಳು ಪ್ರಕಟವಾಗಿ ದೇಶಾದ್ಯಂತ ಗಮನ ಸೆಳೆದು ಅರವಿಂದ ಘೋಷರ ಚರಿತ್ರ(೧೯೨೧) ಯಿಂದ ಪ್ರಾರಂಭವಾದ ಅವರ ಲೇಖನವ್ಯವಸಾಯವು ಸತತ ೬೩ ವರ್ಷ ಸಕ್ರಿಯವಾಗಿದ್ದು ಬಿತ್ತದ್ದನ್ನು ಬೆಳೆದುಕೋ (೧೯೮೪ ) ಅವರ ಕೊನೆಯ ಗ್ರಂಥ.ಅರವತ್ತು ಮೂರುವರ್ಷದಲ್ಲಿ ಉದ್‌ಗ್ರಂಥಗಳ ಕಾಣಿಕೆ ನೀಡಿರುವರು. ಇಂದಿಗೂ ಸಂಶೋಧಕರಿಗೆ ಅವರ ಕೃತಿಗಳ ಪರಾಮರ್ಶನೆಯಿಂದ ಸ್ಪೂರ್ತಿ ಸಿಗುವುದು ರಾಷ್ಟ್ರಮಟ್ಟದ ವಿಚಾರವಾದಿ ಮತ್ತು ಸಂಶೋದಕರ ಸಾಲಿನಲ್ಲಿ ಅವರಗೆ ಪ್ರಮುಖ ಸ್ಥಾನವಿದೆ.
ವ್ಯಕ್ತಿ ಸಮಾಜ ಸೃಷ್ಠಿಯ ಎಂಬ ಅಂಶವನ್ನು ಅರ್ಥಮಾಡಿಕೊಂಡರೆ ಜಾತಿಧರ್ಮ.ವರ್ಗ ವರ್ಣ,ಪಂಥಾಭಿಮಾನಗಳು ಬೆಳೆದು ಸಮಾಜವನ್ನು ವಿಭಜಿಸುವ ಸಾಧ್ಯತೆ ಇಲ್ಲ ಎಂಬ ಸರ್ವಕಾಲಿಕ ಸತ್ಯವನ್ನೇ ಅವರ ಎಲ್ಲ ಕೃತಿಗಳೂ ಸಾರಿವೆ.
ಶಂ.ಬಾ. ಜೋಶಿಯವರ ಕೃತಿಗಳನ್ನು ಸಾಂಸ್ಕೃತಿಕ ಸಂಶೋಧನಾ ಸಾಹಿತ್ಯವೆಂದು ಕರೆಯಬಹುದು. ಮಾನವ ಜನಾಂಗಗಳ ನಾಗರಿಕತೆಯ ಮಜಲುಗಳನ್ನು ಅವರವರ ಭಾಷಾಪ್ರಯೋಗಗಳಲ್ಲಿ ಕಾಣಬಹುದು ಎನ್ನುವದನ್ನು ಶಂಬಾ ಜೋಶಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ತೋರಿಸಿಕೊಟ್ಟರು. ಜೋಶಿಯವರು ಈ ಶಾಸ್ತ್ರವಿಭಾಗವನ್ನು ಪ್ರಾರಂಭಿಸಿದ ಭಾರತೀಯರಲ್ಲಿ ಮೊದಲಿಗರು. ಇದೇ ಸಮಯಕ್ಕೆ ಯುರೋಪಿನಲ್ಲಿ ಸಹ ಅದೇ ತಾನೇ ಈ ತರಹದ ಶಾಸ್ತ್ರವಿಭಾಗ ಪ್ರಾರಂಭವಾಯಿತು. ಆದುದರಿಂದ ಜಗತ್ತಿನಲ್ಲಿ ಇವರನ್ನು ಸಹಪ್ರಥಮರು ಎಂದು ಹೇಳಲು ಅಡ್ಡಿಯಿಲ್ಲ.
‘‘ಕರ್ನಾಟಕದ ದರ್ಶನ ಮತ್ತು ಪಂಥಗಳ ಮೇಲೆ ಸಂಶೋಧನೆಯನ್ನು ಮಾಡಿದವರಲ್ಲಿ ಶಂಬಾ ಜೋಶಿಯವರು ಪ್ರಮುಖರು. ದುರಂತವೆಂದರೆ ಭಾರತದ ಮುಖ್ಯ ಸಂಶೋಧಕರಲ್ಲಿ ಒಬ್ಬರಾದ ಶಂಬಾ ಚಿಂತನೆಗಳಿಗೆ ಅವರು ಬದುಕಿದ್ದ ಕಾಲದಲ್ಲಿ ಅವರ ಸಮಕಾಲೀನರಿಂದ ಸರಿಯಾದ ಪ್ರತಿಸ್ಪಂದನೆ ಸಿಗಲಿಲ್ಲ. ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ' ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿಎಂದು ಕರೆಗೊಟ್ಟ ಕುವೆಂಪು ಅವರಂತಹ ಅಧ್ಯಾತ್ಮವಾದಿ ಚಿಂತಕರಿಗೆ ಸಿಕ್ಕ ಮನ್ನಣೆಶಂಬಾ ಅವರಿಗೆ ಸಿಕ್ಕಲಿಲ್ಲ. ಸ್ಮೃತಿ ಹಾಗೂ ಭಗವದ್ಗೀತೆಗಳನ್ನೂ ಶಂಬಾ ತೀವ್ರ ವಿಮರ್ಶೆಗೆ ಒಳಪಡಿಸಿದರು ಎಂಬ ಕಾರಣಕ್ಕಾಗಿ ಸಂಪ್ರದಾಯವಾದಿಗಳು ಶಂಬಾ ಚಿಂತನೆಗಳನ್ನು ಮೂಲೆಗುಂಪು ಮಾಡಿದರು.
ಬೇಂದ್ರೆಯವರ ಪ್ರಖರ ಪ್ರಭಾವಳಿಯಲ್ಲಿ ಉತ್ತರ ಕರ್ನಾಟಕಅದರಲ್ಲೂ ಧಾರವಾಡ ಸಹ ಶಂಬಾ ಅವರನ್ನು ಬಹಳ ನಿರ್ಲಕ್ಷಿಸಿತು. ಅದು ಸಹಜವೂ ಆಗಿತ್ತು. ಕಾರಣ ಅವರ ಬರಹ ಪಂಡಿತರಿಗೇ ಕಬ್ಬಿಣದ ಕಡಲೆಯಾಗಿದ್ದವು. ಅವು ಜನಪ್ರಿಯ ಬರಹಗಳಲ್ಲ. ಸಾಮಾನ್ಯ ಓದುಗರನ್ನು ಮೆಚ್ಚಿಸುವ ಗುಣ ಅವರ ಕೃತಿಗಳಲ್ಲಿ ಇರಲಿಲ್ಲ. ಜೊತೆಗೆ ರೂಢಿಯಲ್ಲಿದ್ದ ನಂಬಿಕೆಯನ್ನು ಅವರು ಪ್ರಶ್ನಿಸುತಿದ್ದರು. ಅವಕ್ಕೆ ಹೊಸ ವಾಖ್ಯೆ ನೀಡುತಿದ್ದರು. ಮೊದಲಿನಿಂದಲೂ ಬಂಡುಕೋರ ಚಿಂತಕರುಸಂತರುಪಂಥಗಳನ್ನು ವ್ಯವಸ್ಥೆಯ ಭಾಗವಾದ ಸಂಪ್ರದಾಯವಾದವು ನಿರಾಕರಣ ಮಾಡಿದೆ. ಇಲ್ಲವೇ ನಾಶ ಮಾಡಲು ಯತ್ನಿಸಿದೆ. ಚಿಂತನೆಗಳು ಸತ್ಯ ಸದಾ ಶಾಶ್ವತ. ಹಾಗಾಗಿ ಶಂಬಾ ಚಿಂತನೆಗಳಿಗೆ ಅವರ ಮರಣಾನಂತರವೂ ಗೌರವ ದೊರಕಿದೆ. ಆಗಲೂ ಒಂದು ಸೀಮಿತ ವಲಯದಲ್ಲಿ ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಇದ್ದಿತು. ಅವರ ಬರಹ ನೆಲದ ಮರೆಯ ನಿದಾನಅವರುಎಲೆಯ ಮರೆಯ ಕಾಯಿ. ಹಾಗಾಗಿ ಹಲವು ಪ್ರಶಸ್ತಿಗಳು ಅರಸಿಬಂದವು.
ಮಡಿಕೇರಿಯಲ್ಲಿ ೧೯೮೧ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಕನ್ನಡನಾಡು ಗೌರವ ಸಲ್ಲಿಸಿತುಅವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಬಂದವು , ಮೈಸೂರು ವಿಶ್ವವಿದ್ಯಾಲಯದ೧೯೭೧ ರಲ್ಲಿ ಡಾಕ್ಟರೇಟ್.ಪದವಿ ನೀಡಿತು.ವಿದ್ವತ್‌ಲೋಕವು ಅವರ ಅಧ್ಯಯನ ಶೀಲತೆಯನ್ನು ಗುರುತಿಸಿ ಶಂಬಾರವರಿಗೆ ಅರ್ಪಿಸಿದ ಅಭಿನಂದನ ಗ್ರಂಥ ‘ಅಧ್ಯಯನ' . ಇವರು ಕಣ್ಮರೆಯಾದ ನಂತರ (೨೮.೯.೧೯೯೧) ಅರ್ಪಿಸಿದ ಇನ್ನೊಂದು ಗ್ರಂಥ ‘ಶಂಬಾ ಸ್ಮೃತಿ ಗಂಧ.'
ಅವರ ಹೆಸರಲ್ಲಿ ಶಂಭಾ ಜೋಷಿ ಪ್ರಶಸ್ತಿಯನ್ನು ಸಂಶೋದಕರಿಗೆ ನೀಡಿ ಅವರ ಸ್ಮರಣೆಗೆ ಗೌರವ ಸಲ್ಲಿಸಲಾಗುತ್ತಿದೆ.
ಇಂದಿನ ಜೀವನದ ವೈಪರೀತ್ಯಕ್ಕೆ ವರ್ತಮಾನ ಮಾತ್ರ ಕಾರಣವಾಗಿರದೆ ಅದಕ್ಕೆ ಭೂತಕಾಲದ ಅಂಶಗಳೂ ಹೇಗೆ ಕಾರಣ ಎಂಬುದನ್ನುಸಮರ್ಥವಾಗಿ ನಿರೂಪಿಸಿರುವರು. ವರ್ತಮಾನದ ಬಿಕ್ಕಟ್ಟುಗಳಿಗೆ ಕಾರಣ ಹುಡುಕುವುದೇ ಅವರ ಸಂಶೋಧನೆಯ ಸಾರ.
ಅವರ ಪ್ರವಾಹ ಪತಿತರ ಕರ್ಮ ಹಿಂದೂಧರ್ಮ ಮತ್ತು ಭಗವದ್ಗೀತೆಯಲ್ಲಿ ಅಡಗಿರುವ ರಾಜ ಯೋಗ ಸ್ವರೂಪ ಕೃತಿಗಳಲ್ಲಿನ ಅವರ ತಳಸ್ಪರ್ಶಿ ವಿಶ್ಲೇಷಣೆ ಅನೇಕ ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದುದು ಸಹಜ. ಅವರ ಹಿಂದೂ ಎಂಬ ಪದ ವ್ಯುತ್ಪತ್ತಿ ಮತ್ತು ಅದುನಾಡಿನ ಹೆಸರು ಹೇಗಾಯಿತು ಎಂಬ ಅವರ ವಿಚಾರವನ್ನು ಓದಿದರೆ ಶಂಬಾರವರ ವಿದ್ವತ್ತಿನ ಮತ್ತು ವೈಚಾರಿಕ ಪ್ರಖರತೆಯ ಪರಿಚಯ ಆಗುವುದು.ಅವರ ಗ್ರಂಥಗಳ ಅಧ್ಯಯನಕ್ಕಂತೂ ಅಪಾರ ಶ್ರದ್ಧೆ ಮತ್ತು ಪೂರ್ವ ಸಿದ್ದತೆ ಬೇಕೇ ಬೇಕು. ಹಾಗೆ ಓದಿ ಹೀಗೆ ಮರೆಯುವ ವರ್ಗಕ್ಕೆ ಸೇರಿಲ್ಲ ಅವುಗಳು. ಅವರ ಕೊಡುಗೆಯ ಸಾರ್ಥಕತೆ ಮತ್ತು ಅದರ ಹಿಂದಿರುವ ವಿದ್ವತ್‌ವಿವೇಚನೆ ಮತ್ತು ವಿಚಾರಪರತೆಯ ಪರಿಚಯ ಕೆಳಗೆ ನೀಡಿರುವ ಅವರ ಗ್ರಂಥಗಳ ಪಟ್ಟಿಯ ಅವಲೋಕನದಿಂದಲೇ ವಿದಿತವಾಗುವುದು. ಅವರ ಗ್ರಂಥಗಳ ಅಧ್ಯಯನಕ್ಕಂತೂ ಅಪಾರ ಶ್ರದ್ಧೆ ಮತ್ತು ಪೂರ್ವ ಸಿದ್ದತೆ ಬೇಕೇ ಬೇಕು. ಹಾಗೆ ಓದಿ ಹೀಗೆ ಮರೆಯುವ ವರ್ಗಕ್ಕೆ ಸೇರಿಲ್ಲ ಅವುಗಳು. ಅವರ ಕೊಡುಗೆಯ ಸಾರ್ಥಕತೆ ಮತ್ತು ಅದರ ಹಿಂದಿರುವ ವಿದ್ವತ್‌ವಿವೇಚನೆ ಮತ್ತು ವಿಚಾರಪರತೆಯ ಪರಿಚಯ ಕೆಳಗೆ ನೀಡಿರುವ ಅವರ ಗ್ರಂಥಗಳ ಪಟ್ಟಿಯ ಅವಲೋಕನದಿಂದಲೇ ವಿದಿತವಾಗುವುದು. ::





ಅವರ ಗ್ರಂಥಗಳ ಅಧ್ಯಯನಕ್ಕಂತೂ ಅಪಾರ ಶ್ರದ್ಧೆ ಮತ್ತು ಪೂರ್ವ ಸಿದ್ದತೆ ಬೇಕೇ ಬೇಕು. ಹಾಗೆ ಓದಿ ಹೀಗೆ ಮರೆಯುವ ವರ್ಗಕ್ಕೆ ಸೇರಿಲ್ಲ ಅವುಗಳು. ಅವರ ಕೊಡುಗೆಯ ಸಾರ್ಥಕತೆ ಮತ್ತು ಅದರ ಹಿಂದಿರುವ ವಿದ್ವತ್‌ವಿವೇಚನೆ ಮತ್ತು ವಿಚಾರಪರತೆಯ ಪರಿಚಯ ಕೆಳಗೆ ನೀಡಿರುವ ಅವರ ಗ್ರಂಥಗಳ ಪಟ್ಟಿಯ ಅವಲೋಕನದಿಂದಲೇ ವಿದಿತವಾಗುವುದು. :

Monday, August 5, 2013

ಡಾ.ಶ್ಯಾಮಲಾರತ್ನ ಕುಮಾರಿಯವರ - ಹೊಸ ಶೋಧ


ಡಾ.ಶ್ಯಾಮಲಾರತ್ನ ಕುಮಾರಿ


7. UÉÃgÀďɯ¥ÁàzÀ°è£À PÁ«avÀæUÀ¼ÀÄ - MAzÀÄ ºÉƸÀ ±ÉÆÃz
----------------------   ---------------
      




GvÀÛgÀPÀ£ÀßqÀ f¯ÉèUÉ ¸ÉÃjzÀ UÉÃgÀďɯ¥ÉàAiÀÄ £ÀUÀgÀ(£ÀVgÉ) §¹ÛPÉÃjAiÀÄ §½ ±ÀgÁªÀw£À¢AiÀÄ DZÉAiÀÄ zÀAqÉAiÀÄ ªÉÄÃ¯É ªÀiÁgÀÄw ªÀÄvÀÄÛ ®QëöäêÉAPÀmÉñÀégÀ zÉêÁ®AiÀÄUÀ½ªÉ. ®QëöäêÉAPÀmÉñÀ zÉêÁ®AiÀÄzÀ°è ¥Ë½UÉÆÃqÉAiÀÄ M¼ÀºÉÆgÀ ªÉÄïÉäöÊAiÀİè CAPÀtUÀ¼À°è UÉÆÃqÉUÉ ºÀaÑzÀ ¸ÀÄtÚ§tÚPÁgÀuÉAiÉÆ¼ÀVAzÀ®Æ PÉ®ªÀÅ gÉÃSÁavÀæUÀ¼ÀÄ ªÀĸÀPÀĪÀĸÀPÁV UÉÆÃZÀj¸ÀÄvÀÛªÉ. M¼ÀUÉÆÃqÉAiÀÄ avÀæªÉÇAzÀgÀ°è MAzÉqÉ ºÀ¹ªÀÄtÂÚ£À PÀ¯ÉAiÀÄAvÉ EzÀÄÝzÀ£ÀÄß bÁAiÀiÁavÀæ vÉUÉAiÀÄ¯ÉÆÃ¸ÀÄUÀ ¨ÉgÀ½AzÀ GfÓ MgɹzÁUÀ M¼ÀV£À PÁ«§tÚzÀ avÀæªÀÅ ¸ÀÄálªÁV PÀAqÀħA¢vÀÄ. EzÀjAzÀ UÉÆÃqÉAiÀÄ ªÉÄð£À gÉÃSÁ avÀæUÀ¼ÀÄ PÁ«PÀ¯ÉAiÀÄ avÀæUÀ¼ÉAzÀÄ ¸ÀàµÀÖªÁ¬ÄvÀÄ.

       zÉêÁ®AiÀÄzÀ M¼ÀºÉÆgÀ ªÀÄvÀÄÛ M¼À¥Á±Àéð UÉÆÃqÉUÀ¼À ªÉÄÃ¯É MlÄÖ 20 PÁ«avÀæUÀ½ªÉ. M¼À¨sÁUÀzÀ JqÀ¥Á±Àéð zÀ ªÀÄÆ¯ÉAiÀÄ°è ªÉÄð£À ªÀĺÀrUÉ ºÉÆÃUÀ®Ä ªÀÄgÀzÀ ¥ÁªÀnUÉUÀ¼À£ÀÄß C¼ÀªÀr¸À¯ÁVzÉ. D ¨sÁUÀzÀ°èzÀÝ JgÀqÀÄ avÀæUÀ¼ÀÄ ¥ÁªÀnUÉUÀ¼À¯Éèà CqÀPÀUÉÆArªÉ. avÀæUÀ¼ÀÄ gÁªÀiÁAiÀÄt ªÀĺÁ¨sÁgÀvÀ ¥ÀÄgÁtUÀ½UÉ ¸ÀA§A¢ü¹ªÉ. MAzÉgÀqÀÄ avÀæUÀ¼ÀÄ gÁdQÃAiÀÄ zÀȱÀåUÀ¼À£ÀÄß M¼ÀUÉÆArªÉAiÉÄAzÀÄ ºÉüÀ§ºÀÄzÁVzÉ.

      avÀæUÀ¼À£ÀÄß ¥Àj²Ã°¹zÁUÀ ºÉÆgÀ©üwÛAiÀİè zÁégÀzÀ EPÉÌqÉ zÁégÀ¥Á®PÀgÁzÀ dAiÀÄ«dAiÀÄgÀÄ PÀAqÀħgÀÄvÁÛgÉ.  JqÀUÀqÉAiÀÄ zÁégÀ¥Á®PÀ£À avÀæzÀ ¥ÀPÀÌzÀ°è PÀAqÀħgÀĪÀ avÀæUÀ¼ÉAzÀgÉ PÀæªÀĪÁV PÀÄgÀÄPÉëÃvÀæ AiÀÄÄzÀÞzÀ°è PÀtð£ÀÄ ±À®å£À ¸ÁgÀxÀåzÀ°è vÀ£Àß ±ÀvÀÄæªÁzÀ CdÄð£À£À ªÉÄÃ¯É ¸À¥Áð¸ÀÛç ¥ÀæAiÉÆÃV¸ÀÄwÛgÀĪÀÅzÀÄ; £ÀgÀ¹AºÀ£ÀÄ zÁ£ÀªÀgÁd »gÀtåPÀ²¥ÀÄ«£À PÀgÀļÀ£ÀÄß §VAiÀÄÄwÛgÀĪÀÅzÀÄ; ¸ÀÄzsÀ£Àé-CdÄð£À£À PÁ¼ÀUÀ; zÁ£ÀªÀ gÁd£ÉƧâ£ÀÄ vÀ£Àß zsÀ£ÀÄ«ðzÁå UÀÄgÀÄ«¤AzÀ D²ÃªÁðzÀ ¥ÀqÉAiÀÄÄwÛgÀĪÀÅzÀÄ; §®UÀqÉAiÀÄ zÁégÀ¥Á®PÀ£À avÀæzÀ ¥ÀPÀÌzÀ°è ²æÃPÀȵÀÚ£À ¸ÁgÀxÀåzÀ°è PÀ¦zsÀéd£ÁzÀ CdÄð£À£ÀÄ PÀtð£ÀÄ vÀ£Àß ªÉÄÃ¯É ¥ÀæAiÉÆÃV¹zÀ ¸À¥Áð¸ÀÛçªÀ£ÀÄß ¥ÀævÀå¸ÀÛç¢AzÀ ¤ªÁj¸ÀÄwÛgÀĪÀ avÀæ ºÁUÀÆ CzÀgÀ ¥ÀPÀÌzÀ°è CgÀ½zÀ PÀªÀÄ®¥ÀĵÀàzÀ avÀæ«zÉ. G½zÀ ¨sÁUÀzÀ°è avÀæUÀ¼ÁªÀŪÀÇ E®è.

    zÉêÁ®AiÀÄzÀ M¼ÀUÉÆÃqÉAiÀÄ ªÉÄð£À avÀæUÀ¼ÀÄ PÀæªÀĪÁV EAwªÉ: ¨ÁV°£À JqÀUÀqÉAiÀÄ UÉÆÃqÉAiÀÄ ªÉÄÃ¯É ¦ÃoÀzÀ ªÉÄÃ¯É D¹Ã£À£ÁzÀ ªÀÄÄPÀÄlzsÁjAiÀiÁzÀ gÁd, CªÀ£À ¸ÀªÀÄÄäRzÀ°è zÀAqÀzsÁj ¸ÉêÀPÀ£ÉƧâ£ÀÄ K£À£ÉÆßà ¤ªÉâ¸ÀÄ wÛgÀĪÀAwzÉ. CzÀgÀ ¥ÀPÀÌzÀ°è£À avÀæzÀ°è gÁdgÁtÂAiÀÄgÀÄ ±ÀÈAUÁgÀ¨sÁªÀzÀ°ègÀĪÀAvÉ vÉÆÃj¸À¯ÁVzÉ.

    E°è£À J®è avÀæUÀ¼À°èAiÀÄÆ ªÉÄð£À ¨sÁUÀzÀ°è MAzÉqÉ avÀæzÀ ºÉ¸ÀgÀ£ÀÄß £ÀªÀÄÆ¢¸À®Ä MAzÀÄ DAiÀÄvÁAPÀtªÀ£ÀÄß PÁt§ºÀÄzÁzÀgÀÆ CzÀgÉÆ¼ÀV£À CPÀëgÀUÀ¼ÀÄ ¸ÀàµÀÖªÁV PÁtĪÀÅ¢®è. DzÀgÉ gÁdgÁtÂAiÀÄgÀ avÀæzÀ°è£À £ÁªÀiÁAPÀtzÀ°è ¥Àæ¨sÁªÀwÃ-¸ÀÄzsÀ£Àé JA§ ºÉ¸ÀgÀÄUÀ¼À£ÀÄß £ÁUÀjð¦AiÀÄ°è §gÉAiÀįÁVzÉ. EzÀgÀ ¥ÀPÀÌzÀ avÀæzÀ°è ©üêÀÄ ªÀÄvÀÄÛ zËæ¥À¢ PÉÊAiÀÄ°è ¥ÀĵÀàªÉÇAzÀ£ÀÄß »r¢zÀÄÝ ªÀĺÁ¨sÁgÀvÀzÀ ¸ËUÀA¢üPÁ ¥ÀĵÀàzÀ ¥Àæ¸ÀAUÀPÉÌ ¸ÀA§A¢ü¹zÉ. ©üêÀÄ£À£ÀÄß ©üêÀÄPÁgÀ ªÁVAiÀÄÆ zËæ¥À¢AiÀÄ£ÀÄß ¹ÛçøÀºÀd UÁvÀæzÀ°èAiÀÄÆ awæ¸À¯ÁVzÉ. £ÀAvÀgÀzÀ avÀæ zÁ£À ¨ÉÃqÀ®Ä §°AiÀÄ §½UÉ §A¢gÀĪÀ ªÁªÀÄ£À, ¨ÁæºÀät ªÀlÄ ªÁªÀÄ£À£À£ÀÄß ¦ÃoÀzÀ ªÉÄÃ¯É PÀĽîj¹ §° ªÀĺÁgÁd£ÀÄ ¨sÀQÛ¨sÁªÀ¢AzÀ ªÀA¢¸ÀÄvÀÛ ¤AwgÀÄ  ªÀAvÉ ªÀÄÆr¸À¯ÁVzÉ. ªÁªÀÄ£À£ÀdmÉAiÀÄÄ ªÉʲµÀÖöå¥ÀÆtðªÁVzÉ, PÀįÁ«AiÀÄAwgÀĪÀ mÉÆ¦àUÉAiÀÄ£ÀÄß D¼ÀªÀr¸À¯ÁVzÉ. F avÀæzÀ°è PÀAqÀħgÀĪÀ UÀļÁ¥ÀÄ ¢Ã¥À ªÀåªÀ¸ÉÜAiÀÄÄ UÀªÀÄ£ÁºÀðªÁVzÉ. PÀįÁ« ªÀÄvÀÄÛ UÀļÁ¥ÀÄ ¢Ã¥À AiÀÄÆgÉÆÃ¦AiÀÄ£ï ±ÉʰAiÀÄ ¥Àæ¨sÁªÀªÀ£ÀÄß vÉÆÃj¸ÀÄwÛzÉ. EzÀgÀ ¥ÀPÀÌzÀ°ègÀĪÀÅzÀÄ PÁ½AUÀªÀÄzsÀð£À PÀȵÀÚ£À avÀæ. F avÀæzÀ JqÀ¥Á±ÀéðzÀ°è ªÀĺÀrUÉ ªÉÄlÖ®ÄUÀ½zÀÄÝ CzÀgÀ ¥ÀPÀÌzÀ UÉÆÃqÉAiÀÄ ªÉÄÃ¯É UÀuÉñÀ£À avÀæ«zÀÄÝ CzÀgÀ CzsÀð¨sÁUÀ ªÀiÁvÀæ PÁt¹UÀÄvÀÛzÉ. ¥ÀPÀÌzÀ°ègÀĪÀÅzÀÄ ªÀvÀÄð¯ÁPÁgÀªÁV UÀjPÉzÀj ¤AvÀ ªÀÄAiÀÄÆgÁ¸À£ÉAiÀiÁzÀ «ÃuÁªÁzÀ£ÀzÀ°è vÉÆqÀVgÀĪÀ ¸ÀgÀ¸ÀéwAiÀÄ avÀæ. ¸ÀgÀ¸ÀéwAiÀÄ avÀæzÀ »A¢£À avÀæ UÀuÉñÀ£ÀzÁVgÀĪÀÅzÀjAzÀ ¸ÀgÀ¸ÀéwAiÀÄ avÀæzÀ ªÀÄÄA¢£À avÀæ ªÉÄlÖ®ÄUÀ¼À°è ¸ÉÃjºÉÆÃV PÁt¸À¢zÀÝgÀÆ CzÀÄ ®QëöäAiÀÄzÉAzÀÄ H»¸À§ºÀÄzÁVzÉ. E£ÀÄß zÁégÀzÀ §®UÉÆÃqÉAiÀÄ ªÉÄÃ¯É zsÀ£ÀÄzsÁðjUÀ¼ÁzÀ ºÀA¸ÀzsÀéd, ¸ÀÄzsÀ£Àé, CdÄð£À, £ÀAvÀgÀ ¹ÛçÃ¥ÀÄgÀĵÀ¸ÀAAiÉÆÃd£ÀzÀ avÀæ«zÉ. CzÀÄ §ÈºÀ£Àᬐ CdÄð£À£À avÀæªÉAzÀÄ ºÉüÀ §ºÀÄzÁVzÉ. CzÀgÀ ¥ÀPÀÌzÀ°è CgÀ½zÀ ¥ÀzÀäzÀ avÀæ«zÉ. ¥Á±ÀéðUÉÆÃqÉUÉ ºÉÆA¢PÉÆAqÀAwgÀĪÀ PÉÆoÀrAiÀÄ ¨ÁV°£À EPÉÌqÉAiÀÄ UÉÆÃqÉUÀ¼À°è «µÀÄÚªÀ£ÀÄß ºÉÆvÀÄÛ¤AvÀ ¥ÀÄgÀĵÀgÀƦ UÀgÀÄqÀ ºÁUÀÆ gÁªÀÄ£À£ÀÄß ºÉÆvÀÄÛ ¤AvÀ ºÀ£ÀĪÀÄAvÀ£À avÀæUÀ½ªÉ. F avÀæzÀ°è PÀAqÀħgÀĪÀ ºÀ£ÀĪÀÄAvÀ£À GqÀÄUÉvÉÆqÀÄUÉUÀ¼ÀÄ ªÀÄÄRåªÁV QjÃl, CAV, ZÀ®èt ºÁUÀÆ D¨sÀgÀtUÀ¼ÀÄ PÀgÁªÀ½ ¥ÀæzÉñÀzÀ «²µÀÖPÀ¯Á¥ÀæPÁgÀUÀ¼ÁzÀ AiÀÄPÀëUÁ£À ªÀÄvÀÄÛ PÉÃgÀ¼ÀzÀ PÀxÀPÀ̽UÀ¼À ¥Àæ¨sÁªÀªÀ£ÀÄß JwÛ vÉÆÃj¸ÀÄvÀÛzÉ. PÀtð£À£ÀÄß CvÀåAvÀ ¥ÀæzÁ£À£ÁV awæ¹gÀĪÀÅzÀÄ F ¥ÀæzÉñÀzÀ°è ¨É¸ÀÛgÀ ¥ÁæªÀÄÄRåvÉAiÀÄ£ÀÄß w½¸ÀÄvÀÛzÉ.

     PÁ« avÀæPÀ¯ÉAiÀÄÄ AiÀÄÆgÉÆÃ¦£À j£ÉʸÁ£ïì CAzÀgÉ ¥ÀÄ£ÀgÀÄfÓêÀ£À PÁ®zÀ Væ¦üámÉÆÃ avÀæPÀ¯Á±ÉʰAiÀÄ£ÀÄß ¥Àæw¤¢ü ¸ÀÄvÀÛzÉ. MAzÀÄ §tÚzÀ ¥ÀzÀgÀªÀ£ÀÄß PÉgÉzÀÄvÉUÉzÀÄ CzÀgÉÆ¼ÀAvÀUÀðvÀªÁzÀ E£ÉÆßAzÀÄ §tÚzÀ gÉÃSÁavÀæªÀ£ÀÄß gÀa¸ÀĪÀ PÀ¯ÉAiÉÄà Væ¦üámÉÆÃ PÀ¯É. `¥sÉæ¸ÉÆÌ' ©üwÛ avÀæUÀ¼ÀAvÉ V¯Á¬Ä E£ÀÆß ºÀ¹¬ÄzÁÝUÀ¯Éà F gÉÃSÁavÀæUÀ¼À ¤ªÀiÁðt PÁAiÀÄð ªÀ£ÀÄß ªÀÄÄV¹©qÀ¨ÉÃPÁUÀÄvÀÛzÉ. UÉÆÃqÉUÁV §¼À¹zÀ ªÀÄgÀUÀ®ÄèUÀ¼À£ÀÄß eÉÆÃr¸ÀĪÀ UÀZÀÑ£Éßà V¯Á¬ÄUÁV §¼À¸À¯ÁUÀÄvÀÛzÉ. ¨ÉuÉÚAiÀÄAvÉ £ÀAiÀĪÁzÀ »ªÀÄzÀµÀÄÖ ©½AiÀiÁzÀ ¸ÀÄtÚzÀ°è ºÉÆ£ÁߪÀgÀ¢AzÀ 2 Q.«ÄÃ. zÀÆgÀzÀ°ègÀĪÀ §¸ÀªÀgÁdzÀÄUÀð    ¢éÃ¥ÀzÀ°è «¥ÀÄ®ªÁV zÉÆgÉAiÀÄĪÀ `ºÀÄgÀªÀÄÄAd' CAzÀgÉ PÁ«ªÀÄtÄÚ ºÀÄrAiÀÄ£ÀÄß ¸ÉÃj¹ ¥ÁAiÀĸÀzÀAvÉ ªÀÄAzÀªÁzÀ      «Ä±ÀætªÀ£ÀÄß ¹zÀÞ¥Àr¹ CzÀ£ÀÄß avÀæ ¤ªÀiÁðt CAPÀtUÀ¼À°è KPÀ¥ÀæPÁgÀªÁV ¯Éæ¸À¯ÁUÀÄvÀÛzÉ. MAzÀÄ WÀ½UÉAiÀÄ £ÀAvÀgÀ
vÁ¦ CxÀªÁ zÀ§â¼À¢AzÀ C£ÀªÀ±ÀåPÀ «Ä±ÀætªÀ£ÀÄß avÀæPÀÌ£ÀÄUÀÄtªÁV PÉgÉzÀÄ ¨ÉÃ¥Àðr¹zÁUÀ ©½UÉÆÃqÉAiÀÄ ªÉÄÃ¯É gÀPÀÛ  ªÀtðzÀ avÀæUÀ¼ÀÄ gÀZÀ£ÉUÉÆ¼ÀÄîvÀÛªÉ. MAzÀÄ ¢£ÀzÀ £ÀAvÀgÀ ¥Àæw £Á®ÄÌ WÀAmÉUÉÆªÉÄä MAzÀÄ ªÁgÀzÀ PÁ® ¤ÃgÀÄ  
¹A¥Àr¸ÀÄwÛzÀÄÝ ©gÀÄPÀÄ©qÀzÀAvÉ ªÀiÁqÀ¯ÁUÀĪÀÅzÀÄ.

       »ÃUÉ ¹zÀÞUÉÆAqÀ avÀæUÀ¼ÀÄ ZÀ¥ÀàmÉAiÀiÁV KPÀªÀtÂðAiÀĪÁVzÀÝgÀÆ ¸ÀgÀ¼À ¸ÀÆPÀëöä gÉÃSÉ ºÁUÀÆ ¨sÁªÀUÀ¼À D©ü    ªÀåQÛUÀ½AzÀ ¸ÀÄAzÀgÀªÉ¤¸ÀÄvÀÛªÉ. ¥Àæw avÀæzÀ°è ¸ÉÃj¹gÀĪÀ ¸ÀÆPÀëöä «ªÀgÀUÀ¼ÀÄ, £ÀAiÀÄ£ÁdÆPÀÄUÀ¼ÀÄ avÀæPÁgÀ£À C©ügÀÄaAiÀÄ zÉÆåÃvÀPÀªÁVgÀÄvÀÛªÉ. F ±ÉʰAiÀÄ avÀæUÀ¼À°è PÀ¯ÁPÁgÀ£À gÉÃSÁavÀæ ¤«ÄðwAiÀÄ ¸ÀàµÀÖ PÀ®à£É ºÁUÀÆ PÀ¯Á£ÉÊ¥ÀÄtåvÉ PÉÊZÀ¼ÀPÀ CvÀäUÀvÀªÁVgÀÄvÀÛªÉ. F zÀȶ֬ÄAzÀ PÁ«avÀæUÀ¼ÀÄ «²µÀÖ jÃwAiÀÄ avÀæPÀ¯ÉAiÀiÁV £ÉÆÃlPÀgÀ PÀtä£À ¸À¼ÉAiÀÄÄvÀÛªÉ.

       ¥ÉÆÃZÀÄðVøÀgÀÄ ¥À²ÑªÀÄ PÀgÁªÀ½AiÀÄ vÀªÀÄä £É¯ÉUÀ¼ÁzÀ UÉÆÃªÁ, PÉÆaÑ£ï, PÀ°èPÉÆÃmÉ ªÀÄÄAvÁzÉqÉUÀ¼À°è F Væ¦üámÉÆ PÀ¯ÉAiÀÄ£ÀÄß ¥ÀæZÀÄgÀ¥Àr¹zÀgÀÄ. ¥ÉÆÃZÀÄðVøÀgÀ GUÀæ ªÀÄvÁAvÀgÀ¤ÃwUÉ ºÉzÀj UËqÀ¸ÁgÀ¸ÀévÀgÀÄ D ¥ÀæzÉñÀUÀ½AzÀ Nr§AzÀÄ PÀ£ÁðlPÀzÀ GvÀÛgÀ PÀgÁªÀ½AiÀÄ ¥ÀæzÉñÀUÀ¼À°è £É¯É¹ vÀªÀÄä ªÀÄ£ÉUÀ¼À ªÀÄvÀÄÛ zÉêÁ®AiÀÄUÀ¼À UÉÆÃqÉUÀ¼À ªÉÄÃ¯É PÁ«avÀæUÀ¼À£ÀÄß gÀa¹zÀgÀÄ. EwÛÃZÉUÉ F PÁ«avÀæUÀ¼ÀÄ ªÀiÁ¸À®ÄUÉÆAqÁUÀ UÉÆÃqÉUÀ½UÉ ¸ÀÄtÚ§tß §½AiÀÄÄwÛgÀĪÀÅzÀjAzÀ PÁ«avÀæUÀ¼ÀÄ PÀtägÉAiÀiÁUÀÄwÛªÉ.

        UÉÃgÀďɯ¥ÁàzÀ PÁ«avÀæUÀ¼ÀÄ ¸À«ÄÃ¥ÀzÀ°ègÀĪÀ ºÉƸÁqÀÄ ªÀÄvÀÄÛ ºÉÆ£ÁߪÀgÀzÀ°ègÀĪÀ PÁ«avÀæUÀ¼À£ÀÄß ±Éʰ   AiÀÄ°è §ºÀ¼ÀªÁV ºÉÆÃ®ÄvÀÛªÉ. qÁ||PÀȵÁÚ£ÀAzÀ PÁªÀÄvÀgÀÄ ºÉƸÁr£À PÁ«avÀæUÀ¼À£ÀÄß ¥ÀævÉåÃPÀ ±ÉʰAiÀÄzÉAzÉà UÀÄgÀÄw¹zÁÝgÉ. ºÉƸÁr£À PÉ®ªÀÅ avÀæUÀ¼ÀÄ FUÁUÀ¯Éà ºÁ¼ÁVªÉ, §ºÀÄvÉÃPÀ ºÀ¼ÉAiÀÄzÁVªÉ. GvÀÛgÀPÀ£ÀßqÀ f¯ÉèAiÀÄ            ªÀiÁ«£ÀPÀĪÉð, ²gÀ¹ ªÀÄvÀÄÛ zÀQëtPÀ£ÀßqÀf¯ÉèAiÀÄ PÉÆ®ÆègÀÄUÀ¼À°ègÀĪÀ PÁ«avÀæUÀ¼ÀÄ ¥ÀÄ£ÀgÀæa¸À®ànÖgÀĪÀÅzÀjAzÀ C avÀæ   UÀ¼À ±Éʰ ªÀÄvÀÄÛ ªÀÄÆ®¸ÀégÀÆ¥ÀUÀ¼À£ÀÄß UÀÄgÀÄw¸ÀĪÀÅzÀÄ PÀµÀÖ. UÉÃgÀďɯ¥ÁàzÀ PÁ«avÀæUÀ½gÀĪÀ UÉÆÃqÉUÀ½UÉ ¸ÀÄtÚ       ºÀaÑzÀÝgÀÆ avÀæUÀ¼ÀÄ ¸ÀAgÀQëvÀªÁVzÀÄÝ ªÀÄÆ®¸ÀégÀÆ¥ÀªÀ£ÀÄß G½¹PÉÆArªÉ. DzÀgÉ PÁ«avÀæUÀ½gÀĪÀ UÉÆÃqÉUÀ¼À£ÀÄß PÉqÀ« ªÉAPÀmÉñÀ zÉêÁ®AiÀÄzÀ ªÀÄÄAWÁUÀzÀ°è PÀ¯ÁåtªÀÄAl¥ÀªÀ£ÀÄß PÀlÄÖªÀ AiÉÆÃd£É ºÁQPÉÆ¼Àî¯ÁVzÉAiÉÄAzÀÄ zÉêÁ®AiÀÄzÀ PÁAiÀÄðPÀvÀðjAzÀ w½zÀÄ §AvÀÄ. DzÀÄzÀjAzÀ UÉÃgÀďɯ¥ÁàzÀ ªÉAPÀmÉñÀ zÉêÁ®AiÀÄzÀ°è£À PÁ«avÀæUÀ¼À bÁAiÀiÁavÀæ¸À»vÀ zÁR¯Áw ªÀÄvÀÄÛ ¥ÀjZÀAiÀÄ ¤ÃqÀ®Ä F ¯ÉÃR£ÀzÀ ªÀÄÆ®PÀ ¥ÀæAiÀÄw߸À¯ÁVzÉ.
        GvÀÛgÀ PÀ£ÀßqÀ f¯ÉèAiÀİègÀĪÀ PÁ«avÀæPÀ¯ÁPÉÃAzÀæUÀ¼ÉAzÀgÉ ºÉƸÁqÀÄ, ªÀiÁ«£ÀPÀĪÉð, ºÉÆ£ÁߪÀgÀ, ²gÀ¹ ªÀÄvÀÄÛ zÀQët PÀ£ÀßqÀ f¯ÉèAiÀÄ PÉÆ®ÆègÀÄ. F J®è PÉÃAzÀæUÀ¼À°è£À PÁ«avÀæUÀ¼À bÁAiÀiÁavÀæUÀ¼À£ÀÄß ¸ÀévÀB vÉUÉzÀÄ, PÁ« avÀæPÀ¯ÉAiÀÄ «²µÀÖvÉ, «©ü£Àß±ÉʰUÀ¼À ®PÀëtUÀ¼À£ÀÆß UÀÄgÀÄw¹ `PÁ« PÀ¯É' JA§ CªÀÄÆ®åªÁzÀ PÀÈwAiÀÄ£ÀÄß gÀa¹ PÉÆlÄÖ   PÁ«avÀæUÀ¼À£ÀÄß zÁR°¹  F PÀ¯Á¥ÀgÀA¥ÀgÉAiÀÄ£ÀÄß d£À¸ÁªÀiÁ£ÀåjUÀÆ ¥ÀjZÀ¬Ä¹ ¸ÀAgÀQë¸ÀĪÀ PÁAiÀÄðzÀ°è zÀÈqsÀºÉeÉÓAiÀÄ
UÀÄgÀÄvÀÄUÀ¼À£ÀÄß £ÀªÀÄUÉ ¤Ãr ªÀĺÀzÉÆÃ¥ÀPÁgÀªÀ£É߸ÀVzÁÝgÉ qÁ||PÀȵÁÚ£ÀAzÀ PÁªÀÄvÀgÀÄ. CªÀjUÀÆ CªÀgÀ ¥Àwß qÁ||eÉÆåÃvÁìöß PÁªÀÄvÀjUÀÆ £À£Àß ªÀAzÀ£ÉUÀ¼ÀÄ.



    

         -------------------------                                        

Thursday, August 1, 2013

ಎಂ ಶ್ರೀನಿವಾಸ ಅಯ್ಯಂಗಾರ್ ಮತ್ತು ಪತ್ರಿಕೊಧ್ಯಮ

ಎಮ್. ಶ್ರೀನಿವಾಸ ಅಯ್ಯಂಗಾರ್ ಮತ್ತು ಪತ್ರಿಕೋದ್ಯಮ
ಡಾ. ಲಕ್ಷ್ಮಿದೇವಿ ಎಸ್.
‘ಭಾರತದಲ್ಲಿ ಪತ್ರಿಕೋದ್ಯಮ ಹುಟ್ಟಿದ ಅನೇಕ ದಶಕಗಳ ನಂತರ ಕರ್ನಾಟಕದಲ್ಲಿ ಪತ್ರಿಕೋದ್ಯಮ ಜನ್ಮತಾಳಿತು. ಕರ್ನಾಟಕದ ಪತ್ರಿಕೋದ್ಯಮಕ್ಕೆ ೧೬೯ ವರ್ಷಗಳ ಸುದೀರ್ಘ ಇತಿಹಾಸವಿದೆ. ಪ್ರಥಮದಲ್ಲಿ ಧರ್ಮ ಪ್ರಚಾರ, ಆನಂತರ ಕನ್ನಡ ನಾಡು ಮತ್ತು ನುಡಿಯ ಏಳ್ಗೆ - ಈ ಉದ್ಧೇಶಗಳನ್ನಿಟ್ಟುಕೊಂಡು ಪತ್ರಿಕೆಗಳು ಪ್ರಾರಂಭವಾದವು. ಕರ್ನಾಟಕದ ಪತ್ರಿಕೆಗಳು ಭಾರತದ ಇತರ ಭಾಷೆಗಳ ಪತ್ರಿಕೆಗಳಂತೆಯೇ ಇಲ್ಲಿಯ ಜನಜೀವನದ ವಿವಿಧ ಮುಖಗಳ ಪ್ರತಿಬಿಂಬವಾಗಿವೆ.
ಮಂಗಳೂರಿನಲ್ಲಿ ೧೮೪೩ ಜುಲೈ ೧ರಂದು ಪ್ರಕಟ ವಾದ ‘ಮಂಗಳೂರು ಸಮಾಚಾರ’ ಎಂಬುದೇ ಪ್ರಥಮ ಕನ್ನಡ ಪತ್ರಿಕೆ. ಕ್ರೈಸ್ತಮತ ಪ್ರಚಾರ ಈ ಪತ್ರಿಕೆಯ ಮುಖ್ಯೋದ್ದೇಶ; ಹರ್ಮನ್ ಮೋಗ್ಲಿಂಗ್ ಇದರ ಸಂಪಾದಕ. ೧೮೬೦ರ ದಶಕದ ಕೊನೆಯ ಸರಿಸುಮಾರಿಗೆ ಕರ್ನಾಟಕದಲ್ಲಿ ಹೊಸ ರೀತಿಯ ಪತ್ರಿಕೋದ್ಯಮ ಚಟುವಟಿಕೆ ಕಾಣಿಸಿಕೊಂಡಿತು. ಪತ್ರಿಕೆಗಳು, ಸಾರ್ವಜನಿಕ ವಿಷಯಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ರಾಜಕೀಯ ಘಟನಾವಳಿಗಳ ಬಗ್ಗೆ ವಿಶ್ಲೇಷಣೆ ಮಾಡುವುದನ್ನು ಆರಂಭಿಸಿದವು. ಕೆಲ ಪತ್ರಿಕೆಗಳು ನಿರ್ಭಯವಾದ ಧೋರಣೆಯಿಂದ ಆಗಿನ ಸರ್ಕಾರದ ರೀತಿ ನೀತಿಗಳನ್ನು ಟೀಕಿಸುತ್ತಿದ್ದರಲ್ಲದೆ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಪತ್ರಿಕೆಯನ್ನು ಒಂದು ಪ್ರಧಾನ ಮಾಧ್ಯಮವಾಗಿ ಬಳಸಿದರು. ಮೈಸೂರಿನಲ್ಲಿ ಮೈಸೂರೇತರರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿದ್ದುದನ್ನು ವಿರೋಧಿಸಿ, ಮೈಸೂರಿಗರ ಪರವಾಗಿ ಹೋರಾಟ ನಡೆಸಿದುದಲ್ಲದೆ, ಜನಸಾಮಾನ್ಯರ ಒಳಿತಿಗೆ ಸಂಬಂಧಿಸಿದಂತೆ ನಾನಾ ವಿಚಾರಗಳನ್ನು ಪ್ರಕಟಿಸುತ್ತಿದ್ದು, ಅನೇಕ ಪತ್ರಿಕೆಗಳ ಲೇಖನಗಳು ಆಗ ಪ್ರಭಾವಶಾಲಿಯಾಗಿದ್ದವು. ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಾರಂಭವಾಗುತ್ತಿದ್ದ ಕಾಲದಲ್ಲೆ ಕರ್ನಾಟಕದಲ್ಲಿ ರಾಷ್ಟ್ರವಾದಿ ರಾಜಕೀಯ ಪತ್ರಿಕೋದ್ಯಮ ಆರಂಭವಾಯಿತೆನ್ನಬಹುದು.
ಹಿತಬೋಧಿನಿ, ವಿದ್ಯಾದಾಯಿನಿ, ಸಾಧ್ವಿ, ಸಂಪದಭ್ಯುದಯ, ಗ್ರಾಮ ಜೀವನ ಮುಂತಾದ ಕನ್ನಡ ಪತ್ರಿಕೆಗಳನ್ನು ವೆಲ್ತ್ ಆಫ್ ಮೈಸೂರು, ಮೈಸೂರ್ ಪೇಟ್ರಿಯೇಟ್, ನೇಚರ್ ಕೇರ್ ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿದ್ದ ಅತ್ಯಂತ ಮಹತ್ವಾಕಾಂಕ್ಷೆಯ ಪತ್ರಕೋದ್ಯಮಿ ಆಗಿದ್ದ ಎಮ್. ವೆಂಕಟಕೃಷ್ಣಯ್ಯ (೧೮೪೪ - ೧೯೩೩) ನವರು ಪಳಗಿಸಿದ ಇಬ್ಬರು ತರುಣ ಸಹೋದರರೇ ಎಮ್. ಗೋಪಾಲ ಅಯ್ಯಂಗಾರ್ ಮತ್ತು ಎಮ್. ಶ್ರೀನಿವಾಸ ಅಯ್ಯಂಗಾರ್.
ಶ್ರೀ ಎಮ್. ಶ್ರೀನಿವಾಸ ಅಯ್ಯಂಗಾರರು ಒಬ್ಬ ದೊಡ್ಡ ಪತ್ರಿಕೋದ್ಯಮಿ, ಮೈಸೂರಿನ ಒಬ್ಬ ದೊಡ್ಡ ದೇಶಭಕ್ತರಾಗಿದ್ದರು. ಉತ್ತಮ ತತ್ವ ಮತ್ತು ಅತ್ಯುತ್ತಮ ಗುಣಮಟ್ಟದ ಪತ್ರಿಕೋದ್ಯಮಿ. ತಮ್ಮ ಲೇಖನಿಯನ್ನು ಕೌಶಲ್ಯ ಮತ್ತು ಹರಿತವಾಗಿ ಬಳಸಿ, ಉದಾತ್ತ ಸೇವೆಗಾಗಿ ಮೀಸಲಿಟ್ಟವರು. ‘ವಿಕ್ಟೋರಿಯಾ - ಕ್ರಾಸ್’ ಎಂಬ ಪದವಿಯನ್ನು ಹೆಗಲೇರಿಸಿಕೊಂಡವರು. ಒಂದು ದಶಕಕ್ಕೂ ಹೆಚ್ಚು ಕಾಲ ಮೈಸೂರಿನ ಮಣ್ಣಿನ ಮಗನಾಗಿ ಎರಡು ನಿಯ ಕಾಲಿಕೆಗಳನ್ನು ಅಸಾಧಾರಣ ಸ್ವಾತಂತ್ರ್ಯ ಮತ್ತು ದಕ್ಷತೆಯಿಂದ ನಡೆಸಿದ್ದರು. ಇವರು ನಡೆಸುತ್ತಿದ್ದ ಸಾಪ್ತಾಹಿಕ ಪತ್ರಿಕೆ, ‘ಮೈಸೂರ್ ಸ್ಟ್ಯಾಂಡರ್ಡ್’ ಮತ್ತು ಕನ್ನಡದ ಸಾಪ್ತಾಹಿಕ ಪತ್ರಿಕೆ ‘ನಡೆಗನ್ನಡಿ’ (೧೮೯೫ರಲ್ಲಿ) ಆರಂಭವಾದದ್ದು) ಜನಪ್ರಿಯತೆ ಮತ್ತು ಶಕ್ತಿಯಲ್ಲಿ ಇವುಗಳಲ್ಲಿ ಪ್ರತಿಸ್ಫರ್ಧಿಯಾಗುವ ಯಾವ ಪತ್ರಿಕೆಗಳು ಇರಲಿಲ್ಲ.
ಶ್ರೀನಿವಾಸ ಅಯ್ಯಂಗಾರರ ದೇಶಾಭಿಮಾನ, ಭಾಷಾಶುದ್ಧಿ, ಸಾಹಿತ್ಯದ ಗುಣ, ಸುದ್ದಿಯ ಪ್ರಾಶಸ್ತ್ಯ, ವಿಚಾರ ಪೂರ್ಣ ಲೇಖನ, ಕಥೆ, ವ್ಯಂಗ್ಯ ಮುಂತಾದವನ್ನೆಲ್ಲ ಒಳಗೊಂಡು ಹೊರಬರುತ್ತಿದ್ದ ಇವರ ಪತ್ರಿಕೆಗಳು ಅದ್ಭುತವಾದವುಗಳು. ಸುದ್ಧಿಯ ನಿಖರ ನಿರೂಪಣೆ, ವಿಚಾರ ವೈವಿಧ್ಯ, ಜ್ಞಾನ ಪ್ರಸಾರ ಜೊತೆಗೆ ಸಾಹಿತ್ಯ ಪೆಷಣೆ, ಹೇಗೆಂದರೆ ಕನ್ನಡ ನಡೆಗನ್ನಡಿ-ಕನ್ನಡದ ಗದ್ಯಭಾಗವನ್ನು ಪ್ರಕಟಿಸಿ, ಐತಿಹಾಸಿಕ ಪ್ರಜ್ಞೆ ಜನರಲ್ಲಿ ಉಂಟುಮಾಡುವಲ್ಲಿ ಹೆಸರುವಾಸಿಯಾಯಿತು. ಇವರ ಪತ್ರಿಕೆಗಳು ಆಧುನಿಕ ಕಾಲದ ಅಗತ್ಯಕ್ಕೆ ಭಾರತೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಅಳವಡಿಸಲು ಪ್ರಯತ್ನಿಸಿದವು.
ಅಲ್ಲದೆ ಇವರ ಪತ್ರಿಕೆಗಳು ಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲೂ ಪ್ರಮುಖ ಪಾತ್ರವಹಿಸಿವೆ. ಈ ಪತ್ರಿಕೆಗಳು ಸ್ವಾತಂತ್ರ ಚಳುವಳಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಲ್ಲದೆ, ಕರ್ನಾಟಕದಲ್ಲಿ ಭಾವನಾತ್ಮಕ ಅಖಂಡತೆಗೆ ಪ್ರೋತ್ಸಾಹ ನೀಡಿತು. ಜೊತೆಗೆ ಪ್ರಗತಿಪರ ಚಿಂತನೆಗಳನ್ನು ಪ್ರಸಾರ ಮಾಡುವಲ್ಲಿ ಇವುಗಳ ಪಾತ್ರ ಬಹುಮುಖ್ಯ.
ದೇಶಿಯ ರಾಜರುಗಳ ಮೇಲೆ ಈಸ್ಟ್ ಇಂಡಿಯಾ ಕಂಪೆನಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದ ಬಳಿಕ ಪರಮಾಧಿಕಾರವೆಂಬ ಪರಿಭಾಷೆ ಜಾರಿಗೆ ತಂದರು. ಕಾರಣ ಪೂರ್ವಕ ಚಿಂತನೆಯ ಫಲವಾಗಿ ಇದು ಮೂಡಿಬರದೆ, ರಾಜಕೀಯ ಅಗತ್ಯ ಹಾಗೂ ಆಡಳಿತಾತ್ಮಕ ಅನಿವಾರ‍್ಯತೆಯ ಫಲವಾಗಿ ಹುಟ್ಟಿದ್ದುದಾಗಿದೆ.
ನೇರವಾದ ಬ್ರಿಟೀಷ್ ಆಡಳಿತಕ್ಕೆ ಸಂಬಂಧಿಸಿದ ವಲಯಗಳಲ್ಲಿನ ವೃತ್ತ ಪತ್ರಿಕೆಗಳು ಬ್ರಿಟೀಷ್ ಭಾರತೀಯ ಕಾನೂನು ಪದ್ಧತಿಗೆ ಒಳಪಟ್ಟರೆ, ಮೈಸೂರು ಸಂಸ್ಥಾನದಲ್ಲಿ ಮಾತ್ರ ದ್ವಂದ್ವ ಪರಿಶೀಲನೆಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಒದಗಿತ್ತು. ರಾಜ್ಯದಲ್ಲಿ ರೂಪುಗೊಂಡಿದ್ದ ನಿಯಮಗಳು ಹಾಗೂ ಈ ರಾಜ್ಯಕ್ಕೆಂದೇ ವಿಶೇಷವಾಗಿ ಸಿದ್ದವಾದ ಹಾಗೂ ಬ್ರಿಟೀಷ್ ಭಾರತೀಯ ನಿಯಮಗಳು ಎರಡೂ ಸೇರಿ ಪತ್ರಿಕಾ ಸ್ವಾತಂತ್ರ್ಯವನ್ನು ಕಡಿತಗೊಳಿಸಿತ್ತು.
ಮೈಸೂರಿನ ಶಾಸನಾತ್ಮಕ ಮಂಡಳಿಯ ಮೊದಲ ಸದಸ್ಯರಾದ ಟಿ. ಆನಂದರಾವ್ ಆಗಸ್ಟ್ ೫, ೧೯೦೮ರಲ್ಲಿ ಸರ್ಕಾರ ಜಾರಿಗೆ ತರುವ ಕಾಯ್ದೆಯ ಉದ್ದೇಶವನ್ನು ಬಹಿರಂಗಗೊಳಿಸಿದರು. ಈ ಹಿಂದೆ ಪತ್ರಿಕೆಗಳು ಸರ್ಕಾರದ ಕಾರ್ಯವನ್ನು ತಪ್ಪು ವರದಿ ಮಾಡುವುದರ ಮೂಲಕ ಗಣನೀಯ ಹಾನಿವುಂಟು ಮಾಡಿದ್ದು, ಅಂತಹ ಪತ್ರಿಕೆಗಳ ಪ್ರಕಟನೆಯನ್ನು ನಿಯಂತ್ರಣಕ್ಕೆ ತರುವುದೇ ಸರ್ಕಾರದ ಉದ್ದೇಶವೆಂದರು.
ಈ ೧೯೦೮ ಕಾಯ್ದೆ ಅಪರಾಧವನ್ನು ಶಿಕ್ಷಾತ್ಮಕ ನಿಟ್ಟಿನಲ್ಲಿ ಬಿಟ್ಟು, ನಿವಾರಣೆ ನಿಟ್ಟಿಗೆ ವ್ಯಾಖ್ಯಾನ ನೀಡಿದಂತಿದೆ. ಮೈಸೂರಿನ ಪತ್ರಿನಿಧಿ ಸಭೆಯಲ್ಲಿ ಜಮೀನ್ದಾರಿ ಕುಲೀನರನ್ನು ಪ್ರತಿನಿಧಿಸುವ ಗ್ರಾಮೀಣ ಮೈಸೂರಿನ ಅನೇಕ ಸದಸ್ಯರು ಮಹಾರಾಜ ಮತ್ತು ದಿವಾನರನ್ನು ಅನುಮೋದಿಸುತ್ತಿದ್ದರು. ಸಾಮಾನ್ಯ ರೈತರಿಗೂ ಈ ವಿಷಯದಲ್ಲಿ ದೂರು ಇರಲಿಲ್ಲ. ಇದಕ್ಕೆ ವಿರುದ್ಧವಾಗಿ ನಗರ ಪ್ರದೇಶಗಳಾದ ಬೆಂಗಳೂರು, ಶಿವಮೊಗ್ಗ, ಮೈಸೂರಿನ ಸದಸ್ಯರುಗಳು, ಕಾನೂನು ವೃತ್ತಿಯಲ್ಲಿದ್ದವರು, ವಿಚಾರಣೆಯಲ್ಲಿ, ನ್ಯಾಯ ನೀಡುವಲ್ಲಿ ಸ್ವಾಭಾವಿಕ ಅಪಾಯಗಳು ಎದುರಾಗಬಹುದೆಂದರು. ಬೆಂಗಳೂರಿನ ಸುಬ್ಬಣ್ಣ, ಶಿವಮೊಗ್ಗದ ಸೀತಾರಾಮಯ್ಯ, ಕೋಲಾರದ ಭೀಮ್‌ರಾವ್ ಮುಂತಾದ ವಕೀಲರು ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿದರು. ಆದರೆ ಇವರ ಸಂಖ್ಯೆ ಕಡಿಮೆ ಇದ್ದಿತ್ತು. ಹಾಗಾಗಿ ಈ ಕಠೋರವಾದ ಡ್ರಾಕೋನಿಯನ್ ಕಾಯ್ದೆ ೧೧ನೇ ಅಕ್ಟೋಬರ್ ೧೯೦೮ರಲ್ಲಿ ಜಾರಿಗೆ ಬಂದಿತು. ಹಾಗಾಗಿ ಮೈಸೂರು ಪ್ರತಿನಿಧಿ ಸಭೆಯ ಚರಿತ್ರೆಯಲ್ಲಿ ಈ ದಿನ ಕರಾಳದಿನವಾಗಿ ಮಾರ್ಪಟ್ಟಿತ್ತು. ಈ ಕಾಯ್ದೆಯ ಸ್ವರೂಪ ನೋಡಿದಲ್ಲಿ ಕೇವಲ ಮುನ್ನೆಚ್ಚರಿಕೆಯ ಸ್ವರೂಪ ಹೊಂದಿದ್ದು, ಸ್ವತಂತ್ರ ಪತ್ರಿಕೋದ್ಯಮ ಬೆಳವಣಿಗೆಯನ್ನು ಅವಸರದಲ್ಲಿ ಮೊಟಕುಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಬಹುದು.
ಅಧಿಕೃತವಾದ ಚರ್ಚೆ ಮತ್ತು ಚಿಂತನೆಯ ಮೂಲಕ ಈ ಬಗೆಯ ದೋಷಪೂರಿತ ಪತ್ರಿಕಾ ಕಾನೂನುಗಳು ಅನುಷ್ಠಾನಕ್ಕೆ ತಂದ ಉದ್ದೇಶವೆಂದರೆ ಮೈಸೂರು ಪತ್ರಿಕೆಗಳು ಪರಮಾಧಿಕಾರಕ್ಕೆ ಅವಿಧೇಯ ರೀತಿಯಲ್ಲಿ ಬರೆಯ ತೊಡಗಿದ್ದು, ಪರಮಾಧಿಕಾರದ ಒತ್ತಡದಿಂದಾಗಿಯೇ ಈ ಕಾನೂನನ್ನು ಜಾರಿಗೊಳಿಸಲಾಗಿತ್ತು.
‘ಭಾರತಿ’, ‘ದಿ ಮೈಸೂರು ಹೆರಾಲ್ಡ್’, ‘ವೃತ್ತಾಂತ ಚಿಂತಾಮಣಿ’, ‘ಮೈಸೂರು ಸ್ಟಾಂಡರ್ಡ್’, ‘ನಡೆಗನ್ನಡಿ’ ಮುಂತಾದ ಅನೇಕ ಪತ್ರಿಕೆಗಳು ಈ ಕಾನೂನನ್ನು ಪ್ರತಿಭಟಿಸಿದವು. ಅದರಲ್ಲೂ ಶ್ರೀನಿವಾಸ ಅಯ್ಯಂಗಾರರ ‘ನಡೆಗನ್ನಡಿ’ ಇದರ ಮೂಲಕ ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಇವರು ನಡೆಸತೊಡಗಿದ ಪತ್ರಿಕೆ ಜನಹಿತ ಪ್ರತಿಪಾದನೆ ಮಾಡಿದ ತಪ್ಪಿಗಾಗಿ ಸರ್ಕಾರದ ಆಗ್ರಹಕ್ಕೆ ತುತ್ತಾಯಿತು. ೧೯೦೮ರ ಈ ಕಾಯ್ದೆಯಿಂದಾಗಿ ಪತ್ರಿಕೆಗಳಿಗೆ ಈ ಹಿಂದೆ ಇದ್ದ ಅಷ್ಟಿಷ್ಟು ಸ್ವಾತಂತ್ರ್ಯವೂ ಇಲ್ಲವಾಯಿತು. ಈ ಕಾಲದಲ್ಲಿ ಆರಂಭವಾದ ಅನೇಕ ಪತ್ರಿಕೆಗಳು ಪ್ರೋತ್ಸಾಹದ ಅಭಾವದಿಂದಲೂ, ಕಾಯ್ದೆಯ ಫಲವಾಗಿಯೂ ಬಾಲಾರಿಷ್ಟಕ್ಕೆ ತುತ್ತಾದವು.
ಈ ಕಾಯ್ದೆಯ ಮೊದಲ ಬಲಿಪಶುವಾದವರು ಚನ್ನಪಟ್ಟಣದ ಸುಭಾಶಿನಿ ಪತ್ರಿಕೆಯ ಎಸ್.ಎಸ್. ಶರ್ಮನ್ ಎಂಬುವರು. ನಡೆಗನ್ನಡಿಯ ಎಮ್. ಶ್ರೀನಿವಾಸ್ ಅಯ್ಯಂಗಾರ್ ಗಡಿಪಾರಾದ ಮತ್ತೋರ್ವ ಬಲಿಪಶು. ಮಹಾರಾಜರ ಹಾಜರಿಯಲ್ಲಿ ಜನರು ರಾಷ್ಟ್ರೀಯ ರಾಜಕೀಯದತ್ತ ಚಿಂತನೆ ನಡೆಸುವುದಕ್ಕೆ ಪ್ರೋತ್ಸಾಹ ದೊರಕಲಿಲ್ಲ. ಈ ಕಾಯ್ದೆ ಜಾರಿ ಬಂದ ನಂತರ ೨೯/೮/೧೯೦೮ ರಂದು ತಮ್ಮ ಪತ್ರಿಕೆಯಲ್ಲಿ ಈ ರೀತಿ ಹೇಳಿಕೆಕೊಟ್ಟರು “ಹೊಸ ವೃತ್ತ ಪತ್ರಿಕಾ ಶಾಸನ ಆಚರಣೆಗೆ ಬಂತು. ಮೈಸೂರು ದೇಶದಲ್ಲಿ ಪ್ರಾಮಾಣಿಕತೆಯಿಂದ, ಆತ್ಮಗೌರವದಿಂದ ಪತ್ರಿಕೆಗಳನ್ನು ಇನ್ನು ಮುಂದುವರೆಸುವುದು ಸಾಧ್ಯವಿಲ್ಲ. ಪತ್ರಿಕೆಗಳು ಸುಖಜೀವನ ನಡೆಸಬೇಕಾದರೆ ರಾಜಕೀಯ ವಿಚಾರಗಳ ಚರ್ಚೆಯ ಗೋಜಿಗೆ ಹೋಗಬಾರದು, ಇಲ್ಲವೇ ಸರ್ಕಾರದ ಅಧಿಕಾರಿಗಳ ಮುಖಸ್ತೋತ್ರ ಮಾಡುತ್ತಿರಬೇಕು. ಈಗಿನ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮೂಲಕ ಜನರಿಗೆ ರಾಜಕೀಯ ವಿಚಾರಗಳಲ್ಲಿ ಶಿಕ್ಷಣವಾಗಬೇಕು ಇದೇ ಮುಖ್ಯವಾದ ಸಾಧನ. ರಾಜಕೀಯ ವಿಚಾರಗಳ ಚರ್ಚೆ ಮಾಡದ ಪತ್ರಿಕೆಯಿಂದೇನೂ ಪ್ರಯೋಜನವಿಲ್ಲ. ದೀರ್ಘ ಕಾಲದಿಂದ ನಡೆದು ಬರುತ್ತಿರುವ ಹೆರಾಲ್ಡ್ ಮತ್ತು ಚಿಂತಾಮಣಿ ಪತ್ರಿಕೆಗಳನ್ನು ನಿಲ್ಲಿಸಬೇಕಾದ ಅವಶ್ಯಕತೆ ಕಂಡುಬಂದಾಗ ‘ನಡೆಗನ್ನಡಿ’ ಮುಂದುವರೆಸಿದ ಸಾಹಸ ಮಾಡುವುದಿಲ್ಲ.”
ಇದು ಏನೇ ಇದ್ದಾಗ್ಯು ಶ್ರೀನಿವಾಸ ಅಯ್ಯಂಗಾರ್‌ರು ಸದಾ ಸಾರ್ವಜನಿಕ ಹಿತಾಸಕ್ತಿಯ ಜಾಗರೂಕತನದ ಮತ್ತು ದಿಟ್ಟತನದ ಸರ್ವ ಶ್ರೇಷ್ಠ ವ್ಯಕ್ತಿ, ಅಧಿಕಾರಗಳ ಪ್ರೇರಣೆಗೆ ಒಳಗಾದವರಲ್ಲ. ಸ್ವಾತಂತ್ರ್ಯದ ಪ್ರೀತಿಯನ್ನು ಪತ್ರಿಕೆಯನ್ನು ರದ್ದುಗೊಳಿಸುವುದರ ಮೂಲಕ ತೋರಿಸಿದರು. ತಮಗೆ ತಾವೇ ಆತ್ಮಬಲಿ ಮಾಡಿಕೊಂಡಿದ್ದು ಇವರ ಪತ್ರಿಕೆಗಳು. ಆನಂತರ ಲಾಹೋರಿಗೆ ಪಯಣಿಸಿ ಅಲ್ಲಿನ ಟ್ರಿಬ್ಯುನಲ್ ಪತ್ರಿಕೆಯ ಕಛೇರಿಯಲ್ಲಿ ಆಶ್ರಯ ಪಡೆದರು. ಇವರಿಗೆ ಪಂಜಾಬ್ ಮತ್ತು ಅಲ್ಲಿನ ಜನ, ಸಂಪ್ರದಾಯ ಬಹಳ ಮೆಚ್ಚುಗೆ. ಇವರ ಧೃಡ ನಿಲವು ಮೆಚ್ಚುವಂತಹುದು. ಟ್ರಿಬ್ಯುನಲ್ ಪತ್ರಿಕೆಗೂ, ಅದರ ಮುಖ್ಯಸ್ಥ ಕಾಳಿನಾಥರಾಯ್‌ರಿಗೂ ಇವರು ವಿಧೇಯತೆ, ಉತ್ಸಾಹ, ಸ್ಥಿಮಿತತೆಯ (ಸೊಬಿರಿಟಿ) ಮೌಲ್ಯ ನೀಡಿದರು.
ಇವರು ಒಬ್ಬ ಉತ್ತಮ, ಉನ್ನತ ರಾಜಕೀಯ ಪತ್ರಿಕೋದ್ಯಮಿ, ಅಲ್ಲದೆ ಸಾಮಾಜಿಕ ಸುಧಾರಕರು ಆಗಿದ್ದರು.  ಜಾನ್ ಸ್ಟಾರ್ಟ್ ಮಿಲ್ ರ ವಿದ್ಯಾರ್ಥಿ. ಮಿಲ್‌ರ “ಎಸ್‌ಎ ಆನ್ ಲಿಬರ್ಟಿ” ಮೇಲೆ ಸಂಪಾದಕೀಯ ಮಾಡಿದ್ದರು. ನಮ್ಮ ದೇಶದ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ವೈಚಾರಿಕತೆಯ ಉಪಯೋಗ ತಿಳಿಸಿದರು. ಪ್ರತಿಕೋದ್ಯಮ ಕೇವಲ ಜೀವನ ನಿರ್ವಹಣೆ ಮಾತ್ರವಲ್ಲ ಅದು ಅವರ ಪ್ರತಿಜ್ಞೆ ಮತ್ತು ಜೀವಿತದ ಧ್ಯೇಯವಾಗಿತ್ತು. ಇವರು ಸಾರ್ವಜನಿಕ ವಾಗ್ಮಿಯಲ್ಲ. ಎಲೆಮರೆ ಕಾಯಿಯಂತೆ ಪ್ರಭಾವ ಬೀರಿ, ಸ್ನೇಹಿತರೊಂದಿಗೆ ಬಹಳ ವಿಶ್ವಾಸ ಹೊಂದಿದ್ದರು. ಯುವ ಉತ್ಕಾಂಕ್ಷಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ಔದಾರ್ಯ, ವಿನಯಶೀಲತೆಗೂ ಹೆಸರುವಾಸಿ.
ಪ್ರಾಮಾಣಿಕ ನಿಷ್ಠೆಯಿಂದ ನಿರ್ಭಿತ ಸಂಪಾದಕರಾಗಿ ನಿರ್ಭೀತ ಪತ್ರಿಕೆಗೆ ಸೇವೆ ಸಲ್ಲಿಸಿದ್ದರು. ಪತ್ರಿಕೆಗಳನ್ನು ದಕ್ಷ ಮತ್ತು ಸಮರ್ಥ ರೀತಿಯಲ್ಲಿ ಕೊಂಡೊಯ್ದರು. ಒಬ್ಬ ಸುಸಂಸ್ಕೃತ ವ್ಯಕ್ತಿಯಾದ ಇವರು ಸದಾ ಮೈಸೂರಿನ ಅಭಿವೃದ್ದಿ ಮತ್ತು ಪ್ರಗತಿಗಾಗಿ ಹಾತೊರೆಯುತ್ತಿದ್ದರು. ಅನೇಕ ಪ್ರಲೋಭನೆಗಳಿದ್ದಾಗ್ಯೂ, ಇವರು ಪತ್ರಿಕೋದ್ಯಮವನ್ನು ದುರುಪಯೋಗ ಮಾಡಲಿಲ್ಲ. ಲಾಹೋರ್‌ಗೆ ಗಡಿಪಾರಾಗಿ, ಪತ್ರಿಕಾ ವೃತ್ತಿ ಸ್ವಾತಂತ್ರ್ಯ ನಿರ್ಭೀತ ಜೀವನ ನಡೆಸಲು ಹಿತಕರವಾದ ವಾತಾವರಣ ಕಂಡುಕೊಂಡ ಅತ್ಯಂತ ಹೆಸರುವಾಸಿಯಾದ ಪತ್ರಿಕೋದ್ಯಮಿ ಆದರು ಶ್ರೀನಿವಾಸ ಅಯ್ಯಂಗಾರರು.

ಆಧಾರಸ್ರಚಿ
Dr. S. U. Kamat, ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’¸’ Mysore
 ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಒಥಿsoಡಿe ಉeeಣhಚಿ ಊouse, ೧೯೮೦.
Mysore Residency - 1891, file No. 269, Karnataka State Archives, Bangalore.

3.    K.R. Iqbal Ahmad, ‘Glimses of Journalism’ ¦¦æAiÀÄzÀ²ð¤ ¸Á»vÀå ¥ÀæPÁ±À£À, , 1992
ಸಾಹಿತ್ಯ ಪ್ರಕಾಶನ, , ೧೯೯೨
೪.      ೧೮-೬-೧೯೦೪, ನಡೆಗನ್ನಡಿ.
೫.      ೨೨-೯-೧೮೯೦, ಕರ್ನಾಟಕ ಪ್ರಕಾಶಿಕ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ದಾಖಲೆಗಳು.
೬.      ಕರ್ನಾಟಕ, ಕನ್ನಡ ವಿಷಯ ವಿಶ್ವಕೋಶ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ೧೯೭೯.

ಲ ಇತಿಹಾಸ ವಿಭಾಗ, ವಿ.ವಿ.ಎನ್. ಕಾಲೇಜು, ಬಸವನಗುಡಿ, ಬೆಂಗಳೂರು-೫೬೦೦೦೪.





Wednesday, July 31, 2013

ಫಾವಗಡ ತಾಲೂಕಿನ ಪ್ರಾಗೈತಿಹಾಸಿಕ ನೆಲೆಗಳು

 ¥ÁªÀUÀqÀ vÁ®ÆQ£À°è EwÛZÉUÉ zÉÆgÉvÀ PÉ®ªÀÅ ¥ÁæUÉÊwºÁ¹PÀ £É¯ÉUÀ¼ÀÄ
   v

ತುಮಕೂರು ಜಿಲ್ಲೆಯಲ್ಲಿ ಆನಾದಿ ಕಾಲದಿಂದಲೂ ಮಾನವನ ಚಟುವಟಿಕೆಗಳು ನಡೆಯುತ್ತಿರುವುದನ್ನು ಇಲ್ಲಿ ದೊರೆತಿರುವ ಅವಶೇಷಗಳಿಂದ ಗುರುತಿಸಬಹುದಾಗಿದೆ. ಈ ಪರಿಸರದಲ್ಲಿ ಪ್ರಾಗಿತಿಹಾಸ ಮಾನವನ ವಿಕಾಸವನ್ನು ತಿಳಿಯಲು ಆತ ಬಳಿಸಿ ಬಿಟ್ಟುಹೊದ ಭೌತಿಕ ವಸ್ತುಗಳನ್ನು ವಿಶ್ಲೇಷಿಸಿದಾಗ ಮಾತ್ರ ಆಕಾಲದ ಆದಿಮ ಸಂಸ್ಕೃತಿ ಹೇಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.
   ಪಾವಗಡ ತಾಲೂಕಿನಲ್ಲಿ ಈಗಾಗಲೇ ಕೆಲವು ಪ್ರಾಗಿತಿಹಾಸ ನೆಲೆಗಳನ್ನು ಪತ್ತೆಮಾಡಲಾಗಿದ್ದು, ಪ್ರಮುಖವಾಗಿ ಯಲ್ಲಪ್ಪನಾಯಕನಹಳ್ಳಿಯಲ್ಲಿ ಆದಿ ಹಳೆಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮಶಿಲಾಯುಗ, ಬೂದಿಬೆಟ್ಟದಲ್ಲಿ ನವಶಿಲಾಯುಗ, ಕಣಿಕಲಬಂಡ್ಡೆಯಲ್ಲಿ ಬೃಹತ್‌ಶಿಲಾಯುಗ, ಪಾವಗಡದಲ್ಲಿ ಇತಿಹಾಸ ಆರಂಭ ಕಾಲವೆಂದು ಹಲವು ನೆಲೆಗಳನ್ನು ಪತ್ತೆಮಾಡಲಾಗಿದೆ. ನಾನು ಕ್ಷೇತ್ರಕಾರ್ಯ ಕೈಗೊಂಡಾಗ ಕನ್ನಮೇಡಿ ಮತ್ತು ನಲಿಗಾನಹಳ್ಳಿಯಲ್ಲಿ ಪ್ರಾಗಿತಿಹಾಸದ ಕುರುಹುಗಳು ಕಂಡುಬಂದಿವೆ.
ಕನ್ನಮೇಡಿ
   ಇದು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಹಿಂದೆ ಈ ಗ್ರಾಮದಲ್ಲಿ ಗೊಲ್ಲ ಜನಾಂಗವು ಚಿನ್ನದ ಹಿಡಿಕೆಯುಳ್ಳ ನೊಗದೊಂದಿಗೆ ಮಡಿಕೆ ಹೊಡೆಯುತ್ತಿದ್ದರಂತೆ, ಒಮ್ಮೆ ಇವರಿಗೆ ದಣಿವಾದಾಗ ವಿಶ್ರಾಂತಿ ಪಡೆಯಲು ಹೋದಾಗ ಪಾಲುಕುಂಟೆ ಕಳ್ಳರು ಚಿನ್ನದ ಹಿಡಿಕೆಯುಳ್ಳ ಮಡಿಕೆಯನ್ನು ಕನ್ನ ಮಾಡಿದ್ದರಿಂದ, ಕನ್ನವಾದ ಮೇಡಿ ಕನ್ನಮೇಡಿ ಎಂದಾಗಿದೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದಿಗೂ ಇಲ್ಲಿಯವರ ಮೂಲ ಕಸುಬಾಗಿರುವ ಕೃಷಿ ಮತ್ತು ಪಶುಪಾಲನೆಯು ಪ್ರಾಗಿತಿಹಾಸ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿತ್ತೆಂದು, ಈ ಗ್ರಾಮದ ವೆಂಕಾವದೂತ ಗುಹೆಯ ಬಳಿಯಿರುವ ನವಶಿಲಾಯುಗ ಮತ್ತು ಬೃಹತ್‌ಶಿಲಾಯುಗದ ಕೆಂಪು ಮತ್ತು ಬಿಳಿ ಬಣ್ಣದ ಗೀರುಚಿತ್ರಗಳಿಂದ ತಿಳಿಯಬಹುದಾಗಿದೆ. ಈ ಗೀರುಚಿತ್ರಗಳು ೪.೯೦ಮೀ. ಉದ್ದ ೨.೫೦ಮೀ. ಅಗಲವಿರುವ ಬೃಹತ್ ಹೆಬ್ಬಂಡೆಯಲ್ಲಿ ಹರಡಿಕೊಂಡಿವೆ. ಇದರಲ್ಲಿ ಗೂಳಿ, ಜಿಂಕೆ, ಕಾಡುಹಂದಿ, ಮನುಷ್ಯ ಕೋಲು ಹಿಡಿದು ನಿಂತಿರುವ, ಕೋತಿ ಚೆಳು, ನೃತ್ಯ ಮಾಡುತ್ತಿರುವ ವ್ಯಕ್ತಿ ಮೊದಲಾದ ಚಿತ್ರಗಳಿವೆ. ಹಾಗೆಯೇ ಈ ಗುಹೆಯ ಬಳಿ ಬೇಡರ ಕಣ್ಣಪ್ಪ ಮತ್ತು ದುರ್ಗಮ್ಮ ದೇವಾಲಯಗಳಿದ್ದು, ಇವುಗಳಲ್ಲಿ ನವಶಿಲಾಯುಗದ ಕೈಗೊಡಲಿಗಳನ್ನು ಪೂಜೆಗೈಯ್ಯುತ್ತಿರುವುದು ಇಂದಿಗೂ ಪ್ರಾಗಿತಿಹಾಸ ಕಾಲದ ಸಂಸ್ಕೃತಿಯ ಜೀವಂತಿಕೆಯನ್ನು ತೋರ್ಪಡಿಸುತ್ತದೆ. ಈ ಗುಹೆಯ ಪಶ್ಚಿಮಕ್ಕೆ ನವಶಿಲಾಯುಗದ ಬೂದಿ ದಿನ್ನೆಯಿದ್ದು, ಇಲ್ಲಿ ನವಶಿಲಾಯುಗದ ಬೂದು, ಚಾಕೊಲೇಟ್ ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕೈಗೊಡಲಿ, ಕವಣೆಕಲ್ಲು ಮೊದಲಾದ ಉಪಕರಣಗಳು, ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಯ ಅವಶೇಷಗಳಿವೆ.
ನಲಿಗಾನಹಳ್ಳಿ
   ಈ ಗ್ರಾಮ ತಾಲೂಕು ಕೇಂದ್ರದಿಂದ ಪೂರ್ವಕ್ಕೆ ೬ ಕಿ.ಮೀ. ದೂರದಲ್ಲಿದ್ದು. ಹಿಂದೆ ಈ ಗ್ರಾಮವನ್ನು ಸಂಕಾಪುರವೆಂದು ಕರೆಯುತ್ತಿದ್ದರಂತೆ. ಗ್ರಾಮದ ಈಶನ್ಯಕ್ಕೆ ಭತ್ತದಗುಂಡು ಎಂಬ ಹೆಬ್ಬಂಡೆಯಲ್ಲಿ ನವಶಿಲಾಯುಗದ ಕೈಗೊಡಲಿ, ಕವಣೆಕಲ್ಲು, ಪೌಂಡರ‍್ಸ್, ಸ್ಕ್ರಾಪರ್ ಮೊದಲಾದ ಉಪಕರಣಗಳು ಹಾಗೂ ಬೃಹತ್‌ಶಿಲಾಯುಗದ ಸ್ವಸ್ತಿಕ್ (೨.೭೦ಮೀ.=೨.೦೫ಮೀ.ವ್ಯಾಸ), ವೃತ್ತಾಕಾರ(೬ಮೀ.=೬ಮೀ.ವ್ಯಾಸ), ಚಪ್ಪಟೆಯಾಕಾರದ ಕಲ್ಲುಬಂಡೆ(೪ಮೀ.=೪ಮೀ.ವ್ಯಾಸ), ನಿಲುವುಗಲ್ಲು (೪ಮೀ.ಉದ್ದ) ಎಂಬ ನಾಲ್ಕು ಮಾದರಿಯ ಸಮಾಧಿಗಳಿರುವುದು ವಿಶೇಷವಗಿದ್ದು. ಪಾವಗಡ ತಾಲೂಕಿನಲ್ಲಿ ಈ ಮಾದರಿಯ ಸಮಾಧಿಗಳು ಮತ್ತೆಲ್ಲೂ ಕಂಡುಬರದಿರುವುದು ಈ ಪ್ರದೇಶದಲ್ಲಿನ ಬೃಹತ್‌ಶಿಲಾಯುಗದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರ್ಪಡಿಸುತ್ತದೆ. ಈ ಸಮಾಧಿಗಳ ಬಳಿ ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಹಾಗೂ ಆರಂಭ ಇತಿಹಾಸ ಕಾಲದ ನಯಗೊಳಿಸಿದ ಕೆಂಪು ಬಣ್ಣದ ಮೃತ್‌ಪಾತ್ರೆಗಳ ಅವಶೇಷಗಳು ದೊರೆಯುತ್ತವೆ.







 ತುಮಕೂರು ಜಿಲ್ಲೆಯಲ್ಲಿ ಆನಾದಿ ಕಾಲದಿಂದಲೂ ಮಾನವನ ಚಟುವಟಿಕೆಗಳು ನಡೆಯುತ್ತಿರುವುದನ್ನು ಇಲ್ಲಿ ದೊರೆತಿರುವ ಅವಶೇಷಗಳಿಂದ ಗುರುತಿಸಬಹುದಾಗಿದೆ. ಈ ಪರಿಸರದಲ್ಲಿ ಪ್ರಾಗಿತಿಹಾಸ ಮಾನವನ ವಿಕಾಸವನ್ನು ತಿಳಿಯಲು ಆತ ಬಳಿಸಿ ಬಿಟ್ಟುಹೊದ ಭೌತಿಕ ವಸ್ತುಗಳನ್ನು ವಿಶ್ಲೇಷಿಸಿದಾಗ ಮಾತ್ರ ಆಕಾಲದ ಆದಿಮ ಸಂಸ್ಕೃತಿ ಹೇಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.
   ಪಾವಗಡ ತಾಲೂಕಿನಲ್ಲಿ ಈಗಾಗಲೇ ಕೆಲವು ಪ್ರಾಗಿತಿಹಾಸ ನೆಲೆಗಳನ್ನು ಪತ್ತೆಮಾಡಲಾಗಿದ್ದು, ಪ್ರಮುಖವಾಗಿ ಯಲ್ಲಪ್ಪನಾಯಕನಹಳ್ಳಿಯಲ್ಲಿ ಆದಿ ಹಳೆಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮಶಿಲಾಯುಗ, ಬೂದಿಬೆಟ್ಟದಲ್ಲಿ ನವಶಿಲಾಯುಗ, ಕಣಿಕಲಬಂಡ್ಡೆಯಲ್ಲಿ ಬೃಹತ್‌ಶಿಲಾಯುಗ, ಪಾವಗಡದಲ್ಲಿ ಇತಿಹಾಸ ಆರಂಭ ಕಾಲವೆಂದು ಹಲವು ನೆಲೆಗಳನ್ನು ಪತ್ತೆಮಾಡಲಾಗಿದೆ. ನಾನು ಕ್ಷೇತ್ರಕಾರ್ಯ ಕೈಗೊಂಡಾಗ ಕನ್ನಮೇಡಿ ಮತ್ತು ನಲಿಗಾನಹಳ್ಳಿಯಲ್ಲಿ ಪ್ರಾಗಿತಿಹಾಸದ ಕುರುಹುಗಳು ಕಂಡುಬಂದಿವೆ.
ಕನ್ನಮೇಡಿ
   ಇದು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಹಿಂದೆ ಈ ಗ್ರಾಮದಲ್ಲಿ ಗೊಲ್ಲ ಜನಾಂಗವು ಚಿನ್ನದ ಹಿಡಿಕೆಯುಳ್ಳ ನೊಗದೊಂದಿಗೆ ಮಡಿಕೆ ಹೊಡೆಯುತ್ತಿದ್ದರಂತೆ, ಒಮ್ಮೆ ಇವರಿಗೆ ದಣಿವಾದಾಗ ವಿಶ್ರಾಂತಿ ಪಡೆಯಲು ಹೋದಾಗ ಪಾಲುಕುಂಟೆ ಕಳ್ಳರು ಚಿನ್ನದ ಹಿಡಿಕೆಯುಳ್ಳ ಮಡಿಕೆಯನ್ನು ಕನ್ನ ಮಾಡಿದ್ದರಿಂದ, ಕನ್ನವಾದ ಮೇಡಿ ಕನ್ನಮೇಡಿ ಎಂದಾಗಿದೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದಿಗೂ ಇಲ್ಲಿಯವರ ಮೂಲ ಕಸುಬಾಗಿರುವ ಕೃಷಿ ಮತ್ತು ಪಶುಪಾಲನೆಯು ಪ್ರಾಗಿತಿಹಾಸ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿತ್ತೆಂದು, ಈ ಗ್ರಾಮದ ವೆಂಕಾವದೂತ ಗುಹೆಯ ಬಳಿಯಿರುವ ನವಶಿಲಾಯುಗ ಮತ್ತು ಬೃಹತ್‌ಶಿಲಾಯುಗದ ಕೆಂಪು ಮತ್ತು ಬಿಳಿ ಬಣ್ಣದ ಗೀರುಚಿತ್ರಗಳಿಂದ ತಿಳಿಯಬಹುದಾಗಿದೆ. ಈ ಗೀರುಚಿತ್ರಗಳು ೪.೯೦ಮೀ. ಉದ್ದ ೨.೫೦ಮೀ. ಅಗಲವಿರುವ ಬೃಹತ್ ಹೆಬ್ಬಂಡೆಯಲ್ಲಿ ಹರಡಿಕೊಂಡಿವೆ. ಇದರಲ್ಲಿ ಗೂಳಿ, ಜಿಂಕೆ, ಕಾಡುಹಂದಿ, ಮನುಷ್ಯ ಕೋಲು ಹಿಡಿದು ನಿಂತಿರುವ, ಕೋತಿ ಚೆಳು, ನೃತ್ಯ ಮಾಡುತ್ತಿರುವ ವ್ಯಕ್ತಿ ಮೊದಲಾದ ಚಿತ್ರಗಳಿವೆ. ಹಾಗೆಯೇ ಈ ಗುಹೆಯ ಬಳಿ ಬೇಡರ ಕಣ್ಣಪ್ಪ ಮತ್ತು ದುರ್ಗಮ್ಮ ದೇವಾಲಯಗಳಿದ್ದು, ಇವುಗಳಲ್ಲಿ ನವಶಿಲಾಯುಗದ ಕೈಗೊಡಲಿಗಳನ್ನು ಪೂಜೆಗೈಯ್ಯುತ್ತಿರುವುದು ಇಂದಿಗೂ ಪ್ರಾಗಿತಿಹಾಸ ಕಾಲದ ಸಂಸ್ಕೃತಿಯ ಜೀವಂತಿಕೆಯನ್ನು ತೋರ್ಪಡಿಸುತ್ತದೆ. ಈ ಗುಹೆಯ ಪಶ್ಚಿಮಕ್ಕೆ ನವಶಿಲಾಯುಗದ ಬೂದಿ ದಿನ್ನೆಯಿದ್ದು, ಇಲ್ಲಿ ನವಶಿಲಾಯುಗದ ಬೂದು, ಚಾಕೊಲೇಟ್ ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕೈಗೊಡಲಿ, ಕವಣೆಕಲ್ಲು ಮೊದಲಾದ ಉಪಕರಣಗಳು, ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಯ ಅವಶೇಷಗಳಿವೆ.
ನಲಿಗಾನಹಳ್ಳಿ
   ಈ ಗ್ರಾಮ ತಾಲೂಕು ಕೇಂದ್ರದಿಂದ ಪೂರ್ವಕ್ಕೆ ೬ ಕಿ.ಮೀ. ದೂರದಲ್ಲಿದ್ದು. ಹಿಂದೆ ಈ ಗ್ರಾಮವನ್ನು ಸಂಕಾಪುರವೆಂದು ಕರೆಯುತ್ತಿದ್ದರಂತೆ. ಗ್ರಾಮದ ಈಶನ್ಯಕ್ಕೆ ಭತ್ತದಗುಂಡು ಎಂಬ ಹೆಬ್ಬಂಡೆಯಲ್ಲಿ ನವಶಿಲಾಯುಗದ ಕೈಗೊಡಲಿ, ಕವಣೆಕಲ್ಲು, ಪೌಂಡರ‍್ಸ್, ಸ್ಕ್ರಾಪರ್ ಮೊದಲಾದ ಉಪಕರಣಗಳು ಹಾಗೂ ಬೃಹತ್‌ಶಿಲಾಯುಗದ ಸ್ವಸ್ತಿಕ್ (೨.೭೦ಮೀ.=೨.೦೫ಮೀ.ವ್ಯಾಸ), ವೃತ್ತಾಕಾರ(೬ಮೀ.=೬ಮೀ.ವ್ಯಾಸ), ಚಪ್ಪಟೆಯಾಕಾರದ ಕಲ್ಲುಬಂಡೆ(೪ಮೀ.=೪ಮೀ.ವ್ಯಾಸ), ನಿಲುವುಗಲ್ಲು (೪ಮೀ.ಉದ್ದ) ಎಂಬ ನಾಲ್ಕು ಮಾದರಿಯ ಸಮಾಧಿಗಳಿರುವುದು ವಿಶೇಷವಗಿದ್ದು. ಪಾವಗಡ ತಾಲೂಕಿನಲ್ಲಿ ಈ ಮಾದರಿಯ ಸಮಾಧಿಗಳು ಮತ್ತೆಲ್ಲೂ ಕಂಡುಬರದಿರುವುದು ಈ ಪ್ರದೇಶದಲ್ಲಿನ ಬೃಹತ್‌ಶಿಲಾಯುಗದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರ್ಪಡಿಸುತ್ತದೆ. ಈ ಸಮಾಧಿಗಳ ಬಳಿ ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಹಾಗೂ ಆರಂಭ ಇತಿಹಾಸ ಕಾಲದ ನಯಗೊಳಿಸಿದ ಕೆಂಪು ಬಣ್ಣದ ಮೃತ್‌ಪಾತ್ರೆಗಳ ಅವಶೇಷಗಳು ದೊರೆಯುತ್ತವೆ.






 ತುಮಕೂರು ಜಿಲ್ಲೆಯಲ್ಲಿ ಆನಾದಿ ಕಾಲದಿಂದಲೂ ಮಾನವನ ಚಟುವಟಿಕೆಗಳು ನಡೆಯುತ್ತಿರುವುದನ್ನು ಇಲ್ಲಿ ದೊರೆತಿರುವ ಅವಶೇಷಗಳಿಂದ ಗುರುತಿಸಬಹುದಾಗಿದೆ. ಈ ಪರಿಸರದಲ್ಲಿ ಪ್ರಾಗಿತಿಹಾಸ ಮಾನವನ ವಿಕಾಸವನ್ನು ತಿಳಿಯಲು ಆತ ಬಳಿಸಿ ಬಿಟ್ಟುಹೊದ ಭೌತಿಕ ವಸ್ತುಗಳನ್ನು ವಿಶ್ಲೇಷಿಸಿದಾಗ ಮಾತ್ರ ಆಕಾಲದ ಆದಿಮ ಸಂಸ್ಕೃತಿ ಹೇಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.
   ಪಾವಗಡ ತಾಲೂಕಿನಲ್ಲಿ ಈಗಾಗಲೇ ಕೆಲವು ಪ್ರಾಗಿತಿಹಾಸ ನೆಲೆಗಳನ್ನು ಪತ್ತೆಮಾಡಲಾಗಿದ್ದು, ಪ್ರಮುಖವಾಗಿ ಯಲ್ಲಪ್ಪನಾಯಕನಹಳ್ಳಿಯಲ್ಲಿ ಆದಿ ಹಳೆಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮಶಿಲಾಯುಗ, ಬೂದಿಬೆಟ್ಟದಲ್ಲಿ ನವಶಿಲಾಯುಗ, ಕಣಿಕಲಬಂಡ್ಡೆಯಲ್ಲಿ ಬೃಹತ್‌ಶಿಲಾಯುಗ, ಪಾವಗಡದಲ್ಲಿ ಇತಿಹಾಸ ಆರಂಭ ಕಾಲವೆಂದು ಹಲವು ನೆಲೆಗಳನ್ನು ಪತ್ತೆಮಾಡಲಾಗಿದೆ. ನಾನು ಕ್ಷೇತ್ರಕಾರ್ಯ ಕೈಗೊಂಡಾಗ ಕನ್ನಮೇಡಿ ಮತ್ತು ನಲಿಗಾನಹಳ್ಳಿಯಲ್ಲಿ ಪ್ರಾಗಿತಿಹಾಸದ ಕುರುಹುಗಳು ಕಂಡುಬಂದಿವೆ.
ಕನ್ನಮೇಡಿ
   ಇದು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ೧೬ ಕಿ.ಮೀ. ದೂರದಲ್ಲಿದೆ. ಹಿಂದೆ ಈ ಗ್ರಾಮದಲ್ಲಿ ಗೊಲ್ಲ ಜನಾಂಗವು ಚಿನ್ನದ ಹಿಡಿಕೆಯುಳ್ಳ ನೊಗದೊಂದಿಗೆ ಮಡಿಕೆ ಹೊಡೆಯುತ್ತಿದ್ದರಂತೆ, ಒಮ್ಮೆ ಇವರಿಗೆ ದಣಿವಾದಾಗ ವಿಶ್ರಾಂತಿ ಪಡೆಯಲು ಹೋದಾಗ ಪಾಲುಕುಂಟೆ ಕಳ್ಳರು ಚಿನ್ನದ ಹಿಡಿಕೆಯುಳ್ಳ ಮಡಿಕೆಯನ್ನು ಕನ್ನ ಮಾಡಿದ್ದರಿಂದ, ಕನ್ನವಾದ ಮೇಡಿ ಕನ್ನಮೇಡಿ ಎಂದಾಗಿದೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದಿಗೂ ಇಲ್ಲಿಯವರ ಮೂಲ ಕಸುಬಾಗಿರುವ ಕೃಷಿ ಮತ್ತು ಪಶುಪಾಲನೆಯು ಪ್ರಾಗಿತಿಹಾಸ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿತ್ತೆಂದು, ಈ ಗ್ರಾಮದ ವೆಂಕಾವದೂತ ಗುಹೆಯ ಬಳಿಯಿರುವ ನವಶಿಲಾಯುಗ ಮತ್ತು ಬೃಹತ್‌ಶಿಲಾಯುಗದ ಕೆಂಪು ಮತ್ತು ಬಿಳಿ ಬಣ್ಣದ ಗೀರುಚಿತ್ರಗಳಿಂದ ತಿಳಿಯಬಹುದಾಗಿದೆ. ಈ ಗೀರುಚಿತ್ರಗಳು ೪.೯೦ಮೀ. ಉದ್ದ ೨.೫೦ಮೀ. ಅಗಲವಿರುವ ಬೃಹತ್ ಹೆಬ್ಬಂಡೆಯಲ್ಲಿ ಹರಡಿಕೊಂಡಿವೆ. ಇದರಲ್ಲಿ ಗೂಳಿ, ಜಿಂಕೆ, ಕಾಡುಹಂದಿ, ಮನುಷ್ಯ ಕೋಲು ಹಿಡಿದು ನಿಂತಿರುವ, ಕೋತಿ ಚೆಳು, ನೃತ್ಯ ಮಾಡುತ್ತಿರುವ ವ್ಯಕ್ತಿ ಮೊದಲಾದ ಚಿತ್ರಗಳಿವೆ. ಹಾಗೆಯೇ ಈ ಗುಹೆಯ ಬಳಿ ಬೇಡರ ಕಣ್ಣಪ್ಪ ಮತ್ತು ದುರ್ಗಮ್ಮ ದೇವಾಲಯಗಳಿದ್ದು, ಇವುಗಳಲ್ಲಿ ನವಶಿಲಾಯುಗದ ಕೈಗೊಡಲಿಗಳನ್ನು ಪೂಜೆಗೈಯ್ಯುತ್ತಿರುವುದು ಇಂದಿಗೂ ಪ್ರಾಗಿತಿಹಾಸ ಕಾಲದ ಸಂಸ್ಕೃತಿಯ ಜೀವಂತಿಕೆಯನ್ನು ತೋರ್ಪಡಿಸುತ್ತದೆ. ಈ ಗುಹೆಯ ಪಶ್ಚಿಮಕ್ಕೆ ನವಶಿಲಾಯುಗದ ಬೂದಿ ದಿನ್ನೆಯಿದ್ದು, ಇಲ್ಲಿ ನವಶಿಲಾಯುಗದ ಬೂದು, ಚಾಕೊಲೇಟ್ ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕೈಗೊಡಲಿ, ಕವಣೆಕಲ್ಲು ಮೊದಲಾದ ಉಪಕರಣಗಳು, ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಯ ಅವಶೇಷಗಳಿವೆ.
ನಲಿಗಾನಹಳ್ಳಿ
   ಈ ಗ್ರಾಮ ತಾಲೂಕು ಕೇಂದ್ರದಿಂದ ಪೂರ್ವಕ್ಕೆ ೬ ಕಿ.ಮೀ. ದೂರದಲ್ಲಿದ್ದು. ಹಿಂದೆ ಈ ಗ್ರಾಮವನ್ನು ಸಂಕಾಪುರವೆಂದು ಕರೆಯುತ್ತಿದ್ದರಂತೆ. ಗ್ರಾಮದ ಈಶನ್ಯಕ್ಕೆ ಭತ್ತದಗುಂಡು ಎಂಬ ಹೆಬ್ಬಂಡೆಯಲ್ಲಿ ನವಶಿಲಾಯುಗದ ಕೈಗೊಡಲಿ, ಕವಣೆಕಲ್ಲು, ಪೌಂಡರ‍್ಸ್, ಸ್ಕ್ರಾಪರ್ ಮೊದಲಾದ ಉಪಕರಣಗಳು ಹಾಗೂ ಬೃಹತ್‌ಶಿಲಾಯುಗದ ಸ್ವಸ್ತಿಕ್ (೨.೭೦ಮೀ.=೨.೦೫ಮೀ.ವ್ಯಾಸ), ವೃತ್ತಾಕಾರ(೬ಮೀ.=೬ಮೀ.ವ್ಯಾಸ), ಚಪ್ಪಟೆಯಾಕಾರದ ಕಲ್ಲುಬಂಡೆ(೪ಮೀ.=೪ಮೀ.ವ್ಯಾಸ), ನಿಲುವುಗಲ್ಲು (೪ಮೀ.ಉದ್ದ) ಎಂಬ ನಾಲ್ಕು ಮಾದರಿಯ ಸಮಾಧಿಗಳಿರುವುದು ವಿಶೇಷವಗಿದ್ದು. ಪಾವಗಡ ತಾಲೂಕಿನಲ್ಲಿ ಈ ಮಾದರಿಯ ಸಮಾಧಿಗಳು ಮತ್ತೆಲ್ಲೂ ಕಂಡುಬರದಿರುವುದು ಈ ಪ್ರದೇಶದಲ್ಲಿನ ಬೃಹತ್‌ಶಿಲಾಯುಗದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರ್ಪಡಿಸುತ್ತದೆ. ಈ ಸಮಾಧಿಗಳ ಬಳಿ ಬೃಹತ್‌ಶಿಲಾಯುಗದ ಕಪ್ಪು ಮತ್ತು ಕೆಂಪು ಬಣ್ಣದ ಹಾಗೂ ಆರಂಭ ಇತಿಹಾಸ ಕಾಲದ ನಯಗೊಳಿಸಿದ ಕೆಂಪು ಬಣ್ಣದ ಮೃತ್‌ಪಾತ್ರೆಗಳ ಅವಶೇಷಗಳು ದೊರೆಯುತ್ತವೆ.







    ಕನ್ನಮೇಡಿ ನವಶಿಲಾಯುಗದ ಕೈಗೊಡಲಿ





                          ಕನ್ನಮೇಡಿಗೀರುಚಿತ್ರಗಳು  


          
(೪ಮೀ.=೪ಮೀ. ವ್ಯಾಸ)  






ನಲಿಗಾನಹಳ್ಳಿ ಚಪ್ಪಟೆಯಾಕಾರದ ಕಲ್ಲುಬಂಡೆ ಸಮಾಧಿ

ರವೀಶ್ ಜಿ.ಎನ್.
ಗುಂಡಾರ‍್ಲಹಳ್ಳಿ, ಬ್ಯಾಡನೂರು ( ಪೊಸ್ಟ್.),
ಪಾವಗಡ (ತಾಲೂಕು),
ತುಮಕೂರು (ಜಿಲ್ಲೆ) - ೬೫೧೨೦೨
ಪೋನ್ ನಂಬರ್ : ೯೭೪೧೯೪೧೭೧೪

ಇಮೇಲ್: ravishsurya@gmail.com