Tuesday, June 16, 2015

ಬೆಂಗಳೂರು ನಗರದ ಇನ್ನೊಂದು ಹೆಸರು `ಕಲ್ಯಾಣನಗರ

ಬೆಂಗಳೂರು ನಗರದ ಇನ್ನೊಂದು ಹೆಸರು `ಕಲ್ಯಾಣನಗರಇದರ ಉಲ್ಲೇಖ ಇರುವ ಬೆಂಗಳೂರು ನಗರೇಶ್ವರ ದೇವಾಲಯದ ಶಿಲಾಶಾಸನ
ಡಾ. ಬಿ. ನಂಜುಂಡಸ್ವಾಮಿ
ಬೆಂಗಳೂರು ನಗರಕ್ಕೆ ಇನ್ನೊಂದು ಹೆಸರು `ಕಲ್ಯಾಣನಗರವೆಂದು ಈ ಹೆಸರನ್ನು ಈ ಹಿಂದೆ ಬೆಂಗಳೂರು ನಗರದಲ್ಲಿ ಮುದ್ರಣವಾದ ಹತ್ತಾರು ಗ್ರಂಥಗಳ ಮುಖಪುಟದಲ್ಲಿ ಮುದ್ರಿಸಿದ್ದಾರೆ. ಈ ಹಿಂದೆ ಬೆಂಗಳೂರು ನಗರದಲ್ಲಿ 64 ವೀರಶೈವ ಮಠಗಳು ಇದ್ದು, ಆ ಎಲ್ಲಾ ಮಠಗಳು ಜ್ಞಾನದಾಸೋಹ-ಅನ್ನದಾಸೋಹವನ್ನು ನಡೆಸುತ್ತಾ ಇದ್ದವು. ಈ ಬಗ್ಗೆ ಡಾ. ಬಿ.ಸಿ. ವೀರಪ್ಪನವರು ಬೆಂಗಳೂರು ನಗರ ವೀರಶೈವ ಮಠಗಳು ಎಂಬ ಮಹಾ ಪ್ರಬಂಧವನ್ನು ರಚಿಸಿದ್ದಾರೆ. ಶರಣ ಸಾಹಿತ್ಯ ಪರಿಷತ್ತಿನಿಂದ 2001ರಲ್ಲಿ ಪ್ರಕಟವಾಗಿದೆ.
ಬೆಂಗಳೂರು ನಗರ್ತಪೇಟೆಯಲ್ಲಿ ಶ್ರೀ ಅನ್ನಪೂರ್ಣಾಂಬ ಸಮೇತ ಶ್ರೀನಗರೇಶ್ವರಸ್ವಾಮಿ ದೇವಾಲಯವನ್ನು ಬೆಂಗಳೂರಿನ ಸಹಸ್ರಮತಿ ಗೋತ್ರೋದ್ಭವರಾದ ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತಸಮಾಜ ಬಾಂಧವರು ಜನಾನುರಾಗಿಯೂ, ಧನಿಕರೂ ಆಗಿದ್ದ ಶ್ರೀ ಸಂಪನ್ನಯವರ ನಂಜುಂಡಪ್ಪನವರ ಮುಂದಾಳತ್ವದಲ್ಲಿ ಕಟ್ಟಿಸಿ ಅದರಲ್ಲಿ ಶೈವಾಗಮ ಶಾಸ್ತ್ರರೀತ್ಯ ಪಂಚಾನ್ಹಿಕ ಪೂರ್ವಕವಾಗಿ ಶ್ರೀ ನಗರೇಶ್ವಾಮಿ, ಶ್ರೀ ಅನ್ನಪೂರ್ಣಾಂಬ ದೇವಿ, ಶ್ರೀ ಮಹಾಗಣಪತಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಷಣ್ಮುಖಸ್ವಾಮಿ, ಶ್ರೀ ವೆಂಕಟೇಶ್ವರಸ್ವಾಮಿ, ಶ್ರೀ ನಾಗದೇವತೆಗಳು, ಶ್ರೀ ಆಂಜನೇಯಸ್ವಾಮಿ ಶ್ರೀ ದುರ್ಗಾದೇವಿ, ಶ್ರೀ ಸೂರ್ಯನಾರಾಯಣಸ್ವಾಮಿ, ಶ್ರೀ ನಾಗದೇವತೆಗಳು, ಶ್ರೀ ಆಂಜನೇಯಸ್ವಾಮಿ, ಶ್ರೀ ದುರ್ಗಾದೇವಿ, ಶ್ರೀ ಸೂರ್ಯನಾರಾಯಣಸ್ವಾಮಿ, ಶ್ರೀ ಕಾಲಭೈರವೇಶ್ವರ ಸ್ವಾಮಿ ಮುಂತಾದ ದೇವತಾ ವಿಗ್ರಹಗಳನ್ನು ಶಾಲಿವಾಹನ ಶಕ ಶ್ರೀ ಸ್ವಭಾನುನಾಮ ಸಂವತ್ಸರದ ಫಾಲ್ಗುಣ ಬಹುಳ ದ್ವಿತೀಯ ಹಸ್ತ ನಕ್ಷತ್ರ ಗುರುವಾರ ಮಿಥುನ ಲಗ್ನದಲ್ಲಿ 13-3-1884ರಂದು ಪ್ರತಿಷ್ಠೆ ಮಾಡಿಸಲಾಯಿತು. ಈ ವಿಶೇಷ ದೇವಾಲಯದಲ್ಲಿ ಇರುವ ದೇವಾಲಯ ಪ್ರತಿಷ್ಠಾ ಮುಹೂರ್ತದ ನಿಶ್ಚಿತ ಪ್ರತಿಯಿಂದ ತಿಳಿದುಬಂದದ್ದು. ಈ ವಿಷಯವನ್ನು ಸ್ಪಷ್ಟ ಮಾಡುವಂತಹ ಶಿಲಾಶಾಸನ ದೇವಾಲಯ ಮುಖಮಂಟಪದ ಮಧ್ಯದ ಶಿಲಾ ತೊಲೆಯ ಮೇಲೆ ಕೆತ್ತಿರುವ ಶಿಲಾಶಾಸನ, ಆರು ಸಾಲು ಇದ್ದು, ಸಂಸ್ಕøತ ಭಾಷೆಯ ಶಿಲಾಶಾಸನವನ್ನು ಕನ್ನಡ ಅಕ್ಷರದಲ್ಲಿ ಖಂಡರಿಸಲಾಗಿದೆ. ಆರು ಸಾಲಿನ ಈ ಶಾಸನದಲ್ಲಿ ಸ್ಪಷ್ಟವಾಗಿ ಬೆಂಗಳೂರು ನಗರವನ್ನು `ಕಲ್ಯಾಣನಗರೀಎಂದು ಕರೆಯಲಾಗಿದೆ.
               ಮಹಾಮಾನವತಾವಾದಿ ವಿಶ್ವಜ್ಯೋತಿ ಬಸವೇಶ್ವರರು ಮಹಾಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು `ಕಲ್ಯಾಣನಗರದಲ್ಲಿ. ಅನುಭವ ಮಂಟಪ, ಮಹಾಮನೆ ಎಲ್ಲಾ ಇದ್ದದ್ದು ಅಲ್ಲೇ. ಮುಂದೆ ಕಲ್ಯಾಣ ಕ್ರಾಂತಿಯ ನಂತರ ಶರಣರು ಚದುರಿದರು. ಮಹಾಜನತೆಯ ಮನಸ್ಸಿನಲ್ಲಿ `ಕಲ್ಯಾಣನಗರದ ಕಲ್ಪನೆ ಯಥಾವತ್ತಾಗಿ ಇತ್ತು. ಬೆಂಗಳೂರು ನಗರದಲ್ಲಿ ಯಲಹಂಕ-ಮಾಗಡಿ ಗೌಡ ದೊರೆಗಳ ಆಡಳಿತದ ಸಮಯದಲ್ಲಿ ಬಸವಣ್ಣನವರ ಕಲ್ಪನೆಯ ವೀರಶೈವ ಮಠಗಳು ಅದ್ಭುತವಾಗಿ ತಮ್ಮ ಸೇವಾ ಮಣಿಹವನ್ನು ಸಲ್ಲಿಸಿದರು. ಈ ಎಲ್ಲಾ ವಿಷಯವನ್ನು ಶಾಂತವೀರ ದೇಶೀಕ ವಿರಚಿತ ``ಶಿವಲಿಂಗ ಚಾರಿತ್ರ’’ದಲ್ಲಿ ಸ್ಪಷ್ಟವಾದ ಮಾಹಿತಿ ಇದೆ. ಈ ಲಘು ಕೃತಿ ಆಸ್ಥಾನ ವಿದ್ವಾನ್ ಶ್ರೀ ಎಂ.ಜಿ. ನಂಜುಂಡಾರಾಧ್ಯರು ಸಂಪಾದಿಸಿದರು. ಲಿಂ. ಡಾ. ಜ.ಚ.ನಿ. ಸನ್ನಿಧಿಯವರು ಶ್ರೀಶೈಲ ಜಗದ್ಗುರು ನಿಡುಮಾಮಿಡಿ ಗ್ರಂಥ ಭಂಡಾರದಿಂದ 1966ರಲ್ಲಿ ಪ್ರಕಟವಾಗಿದೆ. ಈ ಪುಸ್ತಕವನ್ನು ಕುರಿತು ಶಾಂತವೀರ ದೇಶಿಕ ವಿರಚಿತ ``ಶಿವಲಿಂಗ ಚಾರಿತ್ರ’’ ಒಂದು ಪರಿಚಯ ಲೇಖನವನ್ನು ನಾನೇ ಬರೆದಿದ್ದು ``ರಾಜಾಪುರಶ್ರೀ’’ ಸಂಸ್ಮರಣ ಸಂಪುಟ 2006ರಲ್ಲಿ ಪ್ರಕಟವಾಗಿದ್ದು ಈ ಸಂಸ್ಮರಣ ಸಂಪುಟದ ಪ್ರಧಾನ ಸಂಪಾದಕರು ಪೆÇ್ರ. ಎಸ್. ಬಸವಾರಾಧ್ಯ. ಈ ಸಂಸ್ಮರಣ ಸಂಪುಟ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲ್ಲೂಕ್ ಶ್ರೀ ಮದ್ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದಿಂದ ಪ್ರಕಟವಾಗಿದೆ. ಅಂದಿನ ದಿನ ವಚನ ಸಾಹಿತ್ಯ ಸಂಗ್ರಹ, ವಾಚನದ ಬಗ್ಗೆ ವಿವರವಾದ ಮಾಹಿತಿ ಇದೆ. ಅರವತ್ನಾಲ್ಕು ಮಠಗಳ ವಿಶಾಲವಾದ ಕಾರ್ಯಕ್ಷೇತ್ರ ಬೆಂಗಳೂರು ಆದ್ದರಿಂದ ಭಕ್ತಜನ ಅಭಿಮಾನದಿಂದ ಬಸವಣ್ಣನವರ ಕಲ್ಯಾಣಪಟ್ಟಣದ ಹೆಸರನ್ನು ಬೆಂಗಳೂರಿಗೆ ಕೊಟ್ಟರು.
ಬೆಂಗಳೂರು ನಗರ್ತಪೇಟೆಯ ನಗರೇಶ್ವರ ದೇವಸ್ಥಾನದ ಮುಖಮಂಟಪದ ಶಿರೋಭಾಗದಲ್ಲಿರುವ ಶಿಲಾಶಾಸನದ ಪಾಠವನ್ನು ಯಥಾವತ್ತಾಗಿ ಕೊಡಲಾಗಿದೆ.
1             0 ಶ್ರೀ ನಗರೇಶ್ವರ ಪ್ರಸಂನ U
2             ಶ್ರೀಮತ್ಕಲಿಯುಗೆ ವೇದ ವಸು ಬ್ರಹ್ಮಾಬ್ಧಿ ಸಂಯಿತೇ ಶುದ್ಧೇ
3             ಸಂಜ್ಞಕೆ ಶಕೆ ಚತುರ್ವಭೋಯುಕ್ತ ವಸು ಚಂದ್ರಾತ್ಮಕೆ ಶುಭೆ ಶ್ರೀಮತ್ಕøಷ್ಣೇಂದ್ರ ಸತ್ಪುತ್ರ ಶ್ರೀ ಚಾಮರಾಟ್ಪ್ರಭು ಪಾಲಿ |
4             ತೈಃ ಸಹಸ್ರರುಷಿ ಸದ್ಗೋತ್ರ ಸಂಭವೈ ಸ್ಸತ್ಯವಾದಿಭಿಃ
5             ಚದ್ರವಿಡ ತಾಂಗತೈಃ ಧರ್ಮವಾರಿಣ ಹೇಮಪಾಲ ಶ್ಶಿರಿಯಾಳೇತಿ ಸಂಜ್ಞೆಯಾ ಪೂತಿಃ ದಶರಥಾದೈಶ್ಚ ರಾಜಭಾದ್ರಹುಮಾನಿತೈಃ
6             ಕಲ್ಯಾಣನಗರೀ ವಾಸ ನಗರಸ್ತೈಃ ಮಹಾಜನೈಃ
               ಶ್ರೀಮತಃ ಕಲುದೇವತಸ್ಯ ನಗರೇಶ್ವರೂ ಶಾಶ್ವತೀ
7             ಪ್ರತಿಷ್ಠಾವಾಸು ಅತಾರಿ ಐಶ್ವರೈಃ ಆ ಚಂದ್ರ ತಾರಕಂ
8             ಃಙ ಖಂಒಓಂಖಿಊ ಂಓಆ ಅಔ.   1884 ಂ.ಆ.
ಮೊದಲನೇ ಸಾಲಿನಲ್ಲಿ ಸೂರ್ಯ ಚಂದ್ರ ಇರುವವರೆಗೆ ಈ ಶಾಸನ ಇರಲಿ ಅನ್ನುವ ಉದ್ದೇಶದಿಂದ ಶಾಸನದ ಶಿರೋಭಾಗದಲ್ಲಿ ಕೆತ್ತಲಾಗಿದೆ. ನಗರ್ತರು ತಮ್ಮ ಇಷ್ಟದೈವವಾಗಿ ಸ್ವೀಕರಿಸಿರುವ ಶ್ರೀ ನಗರೇಶ್ವರನ ಶಾಸನದ ಅದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಲವನ್ನು ತಿಳಿಸಲು ಪ್ರಾಚೀನ ಭಾರತೀಯರು ಬಳಸುತ್ತಾ ಇದ್ದ ಪದ್ಧತಿಯಲ್ಲಿ ಹೇಳಲಾಗಿದೆ ವೇದ=4 ವಸು=8 ಬ್ರಹ್ಮ=9 ಅಬ್ಭಿ=4 4984 ಇದರಲ್ಲಿ 3101 ಕಳೆದರೆ ಕ್ರಿ.ಶ. 1883 ಆ ದಿನ ಅಷ್ಟಮೀ ತಿಥಿ, ಸೋಮವಾರ ಬಂದಿರುತ್ತದೆ. ನಮ್ಮನು ಆಳಿದ ಧರ್ಮಪ್ರಭು ಮುಮ್ಮಡಿ ಕೃಷ್ಣರಾಜ ಒಡೆಯರವರ ದತ್ತುಪುತ್ರ ಶ್ರೀ ಚಾಮರಾಜೇಂದ್ರ ಒಡೆಯರವರ ಆಳ್ವಿಕೆಯಲ್ಲಿ ಸಹಸ್ರ ಋಷಿಗಳ ದ್ಗೋತ್ರದಲ್ಲಿ ಉತ್ಪನ್ನರಾಗಿ ಸತ್ಯವಾದಿಳಾದ ಗರುಡನ ಉಪಾಸನೆಯಿಂದ ಪಡೆದ ಗರುತ್ಮಾನ್ ಎಂಬ ಉಜ್ವಲ ಬಿರುದಿನಿಂದ ಕೂಡಿದ ಅಯೋಧ್ಯಾನಗರದಿಂದ ಬಂದ ಪಂಚದ್ರವಿಡ ವರ್ಗಕ್ಕೆ ಸೇರಿದ ಧರ್ಮವಾರಿಧಿಯಿಂದ ಹೇಮಪಾಲ, ಶೆರಿಯಾ ಮುಂತಾದ ಪೂರ್ವಿಕರಿಂದ ಕೂಡಿದ ದಶರಥನು ಆದಿಯಾಗಿ ಉಳ್ಳ ರಾಜರುಗಳಿಂದ ಸನ್ಮಾನಿತರಾದ, ಕಲ್ಯಾಣನಗರದಲ್ಲಿ ವಾಸ ಮಾಡುತ್ತಿರುವ ನಗರಸ್ತ ಮಹಾಜನಗಳಿಂದ ಶ್ರೀಯುಕ್ತ ಕುಲದೇವನಾದ ನಗರೇಶ್ವರ ಶಾಶ್ವತವಾದ ದೇವಾಲಯವು ನಕ್ಷತ್ರ ಸಹಿತವಾದ ಚಂದ್ರ ಇರುವವರೆಗೆ ಇರಲೆಂದು ಪ್ರತಿಷ್ಠಾಪಿಸಲ್ಪಟ್ಟಿತು. ಕಡೆಯ ಸಾಲಿನಲ್ಲಿ ಶಾಸನವನ್ನು ಖಂಡರಿಸಿದ. ಃಙ ಖಂಒಂಓಂಖಿಊ ಂಓಆ ಅಔ 1884 ಂ.ಆ.
ದೇವಾಲಯದ ಉದ್ಘಾಟನೆ ಮುಂಚೆ ಶಾಸನವನ್ನು ಮುಖಮಂಟಪಕ್ಕೆ ಸೇರಿಸಲು ಮೊದಲೇ ಕೆತ್ತಿಸಿ ಕಟ್ಟಡದ ಜೊತೆ ಸೇರಿಸಿ ಕಟ್ಟಬೇಕಾಗಿರುವುದರಿಂದ ಶಾಸನವನ್ನು ಕೆತ್ತಿದ ಖಂಒಂಓಂಖಿಊ ಂಓಆ ಅಔಒPಂಓಙ ಅವರು ಇಂಗ್ಲೀಷ್ ತೇದಿಯನ್ನು ಸ್ವಲ್ಪ ಹೆಚ್ಚಿಗೆ ಮಾಡಿ ಕೆತ್ತಿದ್ದಾರೆ. 1880-1900ರ ಕಾಲಮಾನದ ಮೂರು ನಾಲ್ಕು ಶಾಸನಗಳನ್ನು ಗಮನಿಸಿದ್ದೇನೆ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಕಲ್ಯಾಣಿಯ ಮುಖಮಂಟಪದಲ್ಲಿ ಹಾಕಿಸಿರುವ ಶಿಲಾಶಾಸನ, ಬೆಂಗಳೂರು ಗುಬ್ಬಿ ತೋಟದಪ್ಪನವರ ಧರ್ಮಛತ್ರದಲ್ಲಿ ಹಾಕಿಸಿರುವ ಶಿಲಾಶಾಸನ ಗುಬ್ಬಿ ತೋಟದಪ್ಪನವರು ಗೌರಿಬಿದನೂರು ತಾಲ್ಲೂಕ್ ಹಲಕೂರು ಸೋಮೇಶ್ವರಸ್ವಾಮಿ ಶಿವ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಹಾಕಿಸಿರುವ ಶಾಸನಗಳನ್ನು ಯುವ ವಿದ್ವಾಂಸರು ಅಧ್ಯಯನ ಮಾಡಬೇಕು. ಈ ಶಾಸನಗಳು ಅವುಗಳ ಅಕ್ಷರ ವಿನ್ಯಾಸ ಎಲ್ಲವನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಈ ಶಾಸನಗಳು ಕಳೆದ ಶತಮಾನದ ಕಡೇ ಘಟ್ಟದಲ್ಲಿ ಹಾಕಿಸಿದವು.
ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ಸಂಗ್ರಹಿಸಲ್ಪಟ್ಟಿರುವ `ಏಕೋತ್ತರ ಶತಸ್ಥಲದ ಹಸ್ತಪ್ರತಿಯ ಕ್ರಮಸಂಖ್ಯೆ 1156 (196 ಗರಿ-276 ಗರ). ಈ ಹಸ್ತಪ್ರತಿಯ ಅಂತ್ಯದಲ್ಲಿ ಈ ಪುಷ್ಟಿಕೆ ಬರೆಯಲ್ಪಟ್ಟಿದೆ.
ಮಹಾಮಹತ್ತಿಗೂ ಶ್ರೀ ಮಹಾಮೇರುವಿನ ದಕ್ಷಿಣ ದಿಗ್ಭಾಗದಲ್ಲಿ ವೊಪ್ಪುತಿರ್ದ ಕಲ್ಯಾಣ ಪಟ್ಟಣದ [ಹೋ]ಳಿನ ಹಿರಿಯ ಹಂಪಯ್ಯ ಅಯ್ಯನವರು ಚಿಕ್ಕಹಂಪಯ್ಯ ಅಯ್ಯನವರು ಗುಮ್ಮಳಾಪುರದ ಚೆನ್ನಮಲ್ಲಿಕಾರ್ಜುನ ದೇವರ ಶಿಷ್ಯರು ವಿರಕ್ತ ಜೆಡೆ ಸಿದ್ಧಲಿಂಗದೇವರು ಅಯ್ಯನವರಿಗೆ ಬರೆಯಿಸಿ ಭಕ್ತಿ ಮಾಡಿದ ``ಏಕೋತ್ತರ ಶತಸ್ಥಲ’’ ಸಮಾಪ್ತಿ ಮಂಗಳ ಮಹಾ ಸಾಧಾರಣ ಸಂವತ್ಸರದ ಆಷಾಢ ಬಹುಳ 10 ಬೃಹಸ್ಪತಿವಾರ ವಿಷಕಂಠ ಸೆಟ್ಟಿಮಗ ಕೆಂಪನು ಬರದು... ಇಲ್ಲಿ ಗಮನಿಸಬೇಕಾದ್ದು ಶ್ರೀ ಮಹಾಮೇರುವಿನ ದಕ್ಷಿಣ ದಿಗ್ಭಾದಲ್ಲಿ ವೊಪ್ಪುತಿರ್ದ ಕಲ್ಯಾಣ ಪಟ್ಟಣ ಅಂದರೆ ಇಂದಿನ ಬೆಂಗಳೂರು ಅಂದಿನ ದಿನವೆ ಜನಕ್ಕೆ ಉತ್ತರದ ಕಲ್ಯಾಣಪಟ್ಟಣ ಬೇರೆ ದಕ್ಷಿಣದ ಕಲ್ಯಾಣಪಟ್ಟಣ ಬೇರೆ ಎಂಬುದು ತಿಳಿದಿತ್ತು. ಹೋಳಿನ ಹಂಪಣ್ಣನ ಕಾಲವನ್ನು ಲಿಂ. ಎಸ್. ಶಿವಣ್ಣನವರು ಸುಮಾರು 1620ರ ವರಗೆ ಜೀವಿಸಿರಬಹುದು ಎಂದು ಊಹಿಸಿರುವುದರಿಂದ ಈ ಪೂರ್ವೋಕ್ತಿ ಕಾಲ ಸುಮಾರು ಕ್ರಿ.ಶ. 1600ರ ಕಾಲಮಾನದ್ದು ಇರಬಹುದು. ಎಸ್. ಶಿವಣ್ಣನವರ ಸಂಶೋಧನಾ ಲೇಖನಗಳ ಸಂಪುಟ ಕನ್ನಡ ಸಾಹಿತ್ಯ ಪರಿಷತ್ತಿನಿಂದ 2004ರಲ್ಲಿ ಪ್ರಕಟವಾಗಿದ್ದು ಹೆಚ್ಚಿನ ಮಾಹಿತಿಗೆ ಇದೇ ಪುಸ್ತಕದ ``ಹೋಳಿನ ಹಂಪಣ್ಣ-ಒಂದು ಟಿಪ್ಪಣಿ’’ ಲೇಖನವನ್ನು ಗಮನಿಸಬೇಕಾಗಿ ವಿನಂತಿ. ಬೆಂಗಳೂರಿಗೆ ಗುಮ್ಮಳಾಪುರ ಬಹಳ ಹತ್ತಿರ ಇರುವಂತಹದು.
ಬೆಳಗಾಂ ನಗರದ ಲಿಂಗಾಯತ ಸಂಶೋಧನಾ ಸಂಸ್ಥೆಯು ನಾಗನೂರು ರುದ್ರಾಕ್ಷಿ ಮಠದ ಆಶ್ರಯದಲ್ಲಿ ಬೆಳೆಯುತ್ತಾ ಇದೆ. ಈ ಸಂಸ್ಥೆಯ ಸಂಗ್ರಹದಲ್ಲಿ ಇರುವ ಹಸ್ತಪ್ರತಿ ಸಂಖ್ಯೆ 189/3 ಪರಮಾರ್ಥಗೀತೆ ಕಾಗದದ ಹಸ್ತಪ್ರತಿ ಪುಟ 195ರಲ್ಲಿ ಈ ಪುಷ್ತಿಕೆ ಲಿಖಿಸಲ್ಪಟ್ಟಿದೆ.
ಅಂತ್ಯದಲ್ಲಿ : ಗತಿ 11ಕ್ಕಂ 121ಕ್ಕಂ ಚರಣ 1469ಕ್ಕಂ ಮಂಗಳ ಮತ್ತು ಇತಿ ಶ್ರೀಮದ್ಬ್ರಹಾನಂದ ಯೋಗೀಂದ್ರ ಪ್ರಸಾದ ಪರಿಲಬ್ಧ ಬ್ರಹ್ಮ ವಿದ್ಯಾ ವೈಶದ್ಯ ವಿದ್ಯೋತಮಾನ ಶ್ರೀ ಶಂಕರಾನಂದ ಸೇವಾಸುಮದಿಗತ ಶಿವಯೋಗಭೋಗಾ ಶ್ರೀಮತ್ಕಲ್ಯಾಣನಗರ ಸಿದ್ಧಾಂತ ಸುಬ್ರಮಣ್ಯ ಶಿವಯೋಗಿ ಪ್ರಸೀತಮಾದ ಪರಮಾರ್ಥಗೀತಾ ಸಮಾಪ್ತಂ.
ಈ ಹಸ್ತಪ್ರತಿ ಬೆಂಗಳೂರು ನಗರದ್ದು ಈ ಕೃತಿಯ ಪ್ರಾರಂಭದಲ್ಲಿ ಸರ್ಪಭೂಷಣ ಶಿವಯೋಗಿನೇ ನಮಃ ಎಂದಿದೆ. ಅಂದರೆ ಈ ಹಸ್ತಪ್ರತಿ ಸರ್ಪಭೂಷಣ ಶಿವಯೋಗಿಗಳ ನಂತರವಾದರೆ ಸುಮಾರು ಕ್ರಿ.ಶ. 1840 ಅವರು ಇದ್ದಾಗಲೇ ಲಿಖಿತವಾಗಿದ್ದರೆ ಸುಮಾರು 1810-1820ರ ಕಾಲಮಾನದ್ದು. ಲಿಪಿಗಾರ ತನ್ನನ್ನು ಶ್ರೀಮತ್ಕಲ್ಯಾಣನಗರ ಸಿದ್ಧಾಂತ ಸುಬ್ರಮಣ್ಯ ಶಿವಯೋಗಿ ಎಂದು ಕರೆದುಕೊಂಡಿದ್ದಾನೆ.
`ರಘುವಂಶಕಾವ್ಯ ತೆಲುಗು ಅಕ್ಷರದಲ್ಲಿ ಮುದ್ರಣವಾಗಿದ್ದು ವೇದಬ್ರಹ್ಮ ಸಾಗ್ಗೆರೆ ಶ್ರೀಕಂಠಶಾಸ್ತ್ರಿಗಳು ಸಂಪಾದಿಸಿದ ಕೃತಿ ಮುದ್ರಣವಾದದ್ದು ಶ್ರೀಮತ್ಕಲ್ಯಾಣ ನಗರಾಭರಾಣಾ ಮಮಾನಾಯಾಂ ಬೆಂಗಳೂರು ಬುಕ್ ಡಿಪೆÇೀ ಮುದ್ರಾಕ್ಷರ ಶಾಲೆಯಲ್ಲಿ ವಾಜಪೇಯಿ ಕೃಷ್ಣಶಾಸ್ತ್ರಿಗಳಿಂದ ಬೆಂಗಳೂರು ನಗರದ ಪ್ರಸಿದ್ಧ ``ಸರ್ಪಭೂಷಣ ಶಿವಯೋಗಿಗಳ ಮಠ’’ ಇರುವುದು ಮೆಜೆಸ್ಟಿಕ್ ಕೆಂಪೇಗೌಡ ರಸ್ತೆಯಲ್ಲಿ ಅವರು ರಚಿಸಿದ ``ಕೈವಲ್ಯ ಕಲ್ಪವಲ್ಲರೀ’’ ಪುಸ್ತಕಕ್ಕೆ ಕನ್ನಡ ಟೀಕೆ ಬರೆದವರು ಬೆಂಗಳೂರು ದೊಡ್ಡಬೆಲೆ ನಾರಾಯಣಶಾಸ್ತ್ರಿಗಳು ಈ ಪುಸ್ತಕ 1907ರಲ್ಲಿ ಬಳ್ಳಾರಿಯ ಕರ್ಣಾಟಕ ಬುಕ್ ಡಿಪೆÇೀ ಮುದ್ರಾಕ್ಷರ ಶಾಲೆಯಲ್ಲಿ ಶ್ರೀ ಶಿವಲಿಂಗಂಶೆಟ್ರವರಿಂದ ಮುದ್ರಿತ ಪುಸ್ತಕದ ಮುಖಪುಟದ ಪ್ರಾರಂಭದಲ್ಲಿ ಈ ರೀತಿ ಮುದ್ರಿಸಲಾಗಿದೆ. ``ಕಲ್ಯಾಣನಗರ ಪ್ರಾಂತದೊಳು ಪುಟ್ಟಿ ಮಹಾಶಿವಯೋಗಿಯೆನಿಸಿಕೊಂಡು ಅನಿತರ ಸಾಧಾರಣವಾದ ಯಶಸ್ಸನ್ನು ಸಂಪಾದಿಸಿದಿ ಸಪ್ಪಣ್ಣಸ್ವಾಮಿಯೆಂಬ ಸರ್ಪಭೂಷಣನೆಂಬ ಶಿವಯೋಗಿಯಿಂದ ವಿರಚಿತವಾದ ``ಕೈಔಲ್ಯಕಲ್ಪವರೀ’’...ಎಂದು ಕರೆಯಲಾಗಿದೆ ಈ ಎಲ್ಲಾ ಅಧ್ಯಯನದಿಂದ ಸುಮಾರು 1500 ಕಾಲಮಾನದಲ್ಲಿ ಬೆಂಗಳೂರಿಗೆ ಕಲ್ಯಾಣನಗರ ಎಂಬ ಹೆಸರು ಇತ್ತು ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಕಲ್ಯಾಣನಗರ ಹೆಸರನ್ನೇ ನಗರೇಶ್ವರ ದೇವಸ್ಥಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
[ಈ ಲೇಖನ ಬರೆಯುವಾಗ ಸಂಸ್ಕøತ ಶಾಸನದ ಅಧ್ಯಯನಕ್ಕೆ ಸಹಕಾರ ನೀಡಿದ ಶ್ರೀ ಟಿ.ಕೆ. ನಂಜುಂಡಪ್ಪ ಅವರಿಗೆ ವಂದನೆಗಳು.]


ಆಧಾರಸೂಚಿ ಮತ್ತು ಅಡಿಟಿಪ್ಪಣಿ
1.            ದೇವರಕೊಂಡಾರೆಡ್ಡಿ (ಸಂ.), 1998, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1 ಬಳ್ಳಾರಿ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪುಟ ಸಂ. 436, 437.
2.            ಗಾಯಿ ಜಿ.ಎಸ್. (ಅ), ಬಸವರಾಧ್ಯ. ಎನ್. (ಪ್ರ.ಸಂ.) 2010, ಕನ್ನಡ ಘಂಟು ಸಂಪುಟ-7, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ಸಂ. 6641.
3.            ದೇವರಕೊಂಡಾರೆಡ್ಡಿ (ಸಂ.), ಪೂರ್ವೋಕ್ತ, ಪುಟ ಸಂ. 434, 437.
4.            ಶೇಠೆ ಬಿ.ಎಸ್., 1991, ಕರ್ನಾಟಕದಲ್ಲಿ ಸತಿ ಪದ್ದತಿ, ವೀರಶೈವ ಅಧ್ಯಯನ ಅಕಾಡೆಮಿ, ಬೆಳಗಾವಿ. ಪುಟ 63.
5.            ಪರಮಶಿವಮೂರ್ತಿ ಡಿ.ವಿ. 1999, ಕನ್ನಡ ಶಾಸನ ಶಿಲ್ಪ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ 138..
  ಪಂಡಿತ್ ತಾರಾನಾಥ್ ಆಯುರ್ವೇದ ಚಿಕಿತ್ಸಾಲಯ, ತುಮಕೂರು ಷಾಪಿಂಗ್ ಕಾಂಪ್ಲೆಕ್ಸ್, ಬಿ.ಹೆಚ್. ರಸ್ತೆ, ತುಮಕೂರು-572102.

No comments:

Post a Comment