ಬಿ. ಎಸ್ ಸಣ್ಣಯ್ಯ ಅವರಿಗೆ ಶ್ರೀಸಾಹಿತ್ಯ ಪ್ರಶಸ್ತಿ
|
ಎಚ್.ಶೇಷಗಿರಿರಾವ್, ನಿರ್ದೇಶಕರು, ಹಸ್ತಪ್ರತಿವಿಭಾಗ |
ಹಿರಿಯ ಸಂಶೋಧಕ, ಹಸ್ತ ಪ್ರತಿ ಸಂಗ್ರಾಹಕ , ಸಂಪಾದಕ ಮತ್ತು ಕೃತಿಕಾರ ಶ್ರೀ. ಬಿ.ಎಸ್ ಸಣ್ಣಯ್ಯ ಅವರಿಗೆ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು ಶ್ರೀ ಸಾಹಿತ್ಯ ಪ್ರಶಸ್ತಿಯನ್ನು ಶನಿವಾರ ಬಿ.ಎಂ.ಶ್ರೀ ಅವರ ಜನುಮ ದಿನದಂದು ಇಂಡಿಯನ್ ಇನಸ್ಟಿಟ್ಯೂಟ್ ಅಫ್ ವರ್ಲ್ದ ಕಲ್ಚರ್‌ಸಭಾಂಗಣದಲ್ಲಿ ನಾಡೋಜ ಡಾ. ಕಮಲಾ ಹಂಪನಾ ಪ್ರದಾನ ಮಾಡಿದರು..ತಮ್ಮ ಮತ್ತು ಪುರಸ್ಕೃತರ ಅರವತ್ತು ವರ್ಷದ ಒಡನಾಟವನ್ನು ನೆನಪಿಸಿಕೊಂಡು ಎಲೆಯ ಮರೆಯ ಕಾಯಿಯಂತೆ ಪ್ರಚಾರದ ಹಂಬಲವಿಲ್ಲದೆ ಶ್ರಮ,ಶ್ರದ್ಧೆ ಮತ್ತು ಆಳವಾದ ಪಾಂಡಿತ್ಯ ಅಗತ್ಯವಿರುವ ಕೆಲಸದಲ್ಲಿ ಜೀವನವನ್ನೇ ಮುಡುಪಾಗಿಟ್ಟು ಮಾಡಿದ ಅಪಾರ ಸಾಧನೆಯನ್ನು ಎತ್ತಿ ತೋರಿಸಿದರು.
ಡಾ. ವೈ.ಸಿ. ಭಾನುಮತಿಯವರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ತಮ್ಮ ನಾಲ್ಕು ದಶಕದ ಅನುಭವದಿಂದ ಬಿ.ಎಸ್ ಸಣ್ಣಯ್ಯ ಅವರು ಹೇಗೆ ಹಸ್ತಪ್ರತಿ ಸಂಗ್ರಹಣೆ, ಸಂಪಾದನೆ ಮತ್ತು ಕೃತಿ ರಚನೆಗಾಗಿ ೩೨ ವರ್ಷ ಇಲಾಖೆಯಲ್ಲಿ ನಂತರ ೨೨ ವರ್ಷ ಸಂಶೋಧನಾ ಸಂಸ್ಥೆಯಲ್ಲಿ ಅವಿರತ ಶ್ರಮಮಾಡಿ ಹಸ್ತಪ್ರತಿಗಳಲ್ಲಿದ್ದ ಸಾಹಿತ್ಯ ಮತ್ತು ಶಾಸ್ತ್ರ ಗ್ರಂಥಗಳನ್ನು ಬೆಳಕಿಗೆ ತಂದು ಮಾಡಿರುವ ಸಾಹಿತ್ಯ ಸೇವೆಯಿಂದ ಸಂಶೋಧನ ಮತ್ತು ಸಂಪಾದನಾ ರಂಗದ ದೊಡ್ಡಣ್ಣನಾಗಿರುವರು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಎಂಬತ್ತೇಳರ ಹರಯದಲ್ಲೂ ಕೆಲಸ ಮಾಡಲು ಸಾಧ್ಯವಾಗಿರುವುದು ಗುರುಗಳಾದ ಡಿ.ಎಲ್‌ಎನ್ ಮತ್ತು ತ.ಸು. ಶಾಮರಾಯರ ಬೋಧನೆ, ಯಾವುದೇ ಕೆಲಸವಾದರೂ ನಿಷ್ಠೆ ಮತ್ತು ಶ್ರದ್ಧೆ ಯಿದ್ದರೆ ಸಾಧನೆ ಸಾಧ್ಯ, ಅದರಿಂದಾಗಿಯೇ ಮಿತ ಆದಾಯದಲ್ಲಿಯೂ ಮರಿಮಕ್ಕಳಾದಿಯಾಗಿ ಎಲ್ಲರೂ ನೆಮ್ಮದಿಯಿಂದಿರುವ ಕುಟುಂಬ ತಮ್ಮದು ಎಂದರು. ಅಲ್ಲದೆ ಪ್ರತಿಷ್ಠಾನ ಮಾಡುತ್ತಿರುವ ಉತ್ತಮ ಸೇವೆಗೆ ಒತ್ತಾಸೆಯಾಗಿ ತಮ್ಮಕೃತಿಗಳನ್ನು ಮತ್ತು ೨೫ ಸಾವಿರ ರೂಪಾಯಿಗಳ ಕೊಡುಗೆ ನೀಡಿದರು
ಕರುಣಾಳು ಬಾ ಬೆಳಕೆ ಎಂಬ ಬಿ.ಎಂ.ಶ್ರೀ ಯವರ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾಂಭವಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು ಎರಡನೆಯ ಶ್ರೀಸಾಹಿತ್ಯ ಪ್ರಶಸ್ತಿಯ ಆಯ್ಕೆಯ ವಿಧಾನವನ್ನುವಿವರಿಸುತ್ತಾ. ಈ ಪ್ರಶಸ್ತಿಗೆ ಕಾಣರಾದ ಶ್ರೀಮತಿ ಕಮಲಿನಿ ಶಾ. ಬಾಲುರಾವ್ ಅವರ ಔದಾರ್ಯ ನೆನೆಯುತ್ತಾ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕಾರ್ಯದರ್ಶಿಗಳಾದ ರವೀಂದ್ರನಾಥ ಅವರು ಕಾರ್ಯಕ್ರಮ ನಿರೂಪಿಸಿದರು, ಡಾ.ಅಬ್ದುಲ್ ಬಷೀರ್ ಅವರು ಅಭಿನಂದನೆ ಪತ್ರ ವಾಚನ ಮಾಡಿದರು.
ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್. ಹನುಮಂತಯ್ಯನವರು ಇಂಥಹ ಅಪರೂಪದ ಸಮಾರಂಭಕ್ಕೆ ಕಾರಣವಾದ ಪ್ರತಿಷ್ಠಾನವನ್ನು ಅಭಿನಂದಿಸಿ , ಕನ್ನಡದ ವಿದ್ವತ್ ಕೆಲಸ ಮಾಡುತ್ತಿರುವ ಸಂಸ್ಥೆಗೆ ಪ್ರಾಧಿಕಾರ ಮತ್ತು ಸರ್ಕಾರ ಜೊತೆಯಾಗಿರುವು ದೆಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಲೋಕದ ಹಿರಿಯರು,, ಬಿ.ಎಂ ಶ್ರೀಯವರ ಮೊಮ್ಮಗಳಾದ ಶ್ರೀಮತಿ ಕಮಲಿನಿ ಶ.ಬಾಲುರಾವ್ , ಕಳೆದ ವರ್ಷ ಪ್ರಥಮ ಪ್ರಶಸ್ತಿ ವಿಜೇತ ಡಾ.ಎನ್‌ಎಸ್ ಲಕ್ಷ್ಮ ನಾರಾಯಣ ಭಟ್ಟ ಮತ್ತು ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು
ಶ್ರೀ ರಾಮಪ್ರಸಾದ, ಖಜಾಂಚಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
|
ಅಭಿನಂದನಾ ಪತ್ರ |
|
ಶ್ರೀಸಾಹಿತ್ಯ ಪ್ರಶಸ್ತಿ ಸ್ಮರಣ ಫಲಕ |
|
ಡಾ.ಪಿ ವಿ ಎನ್, ಡಾ. ಕಮಲಾಹಂಪನಾ, ಡಾ. ಎಲ್ ಹನುಮಂತಯ್ಯ,ಶ್ರೀ ಬಿ.ಎಸ್ ಸಣ್ಣಯ್ಯ, ಡಾ. ವೈಸಿ .ಭಾನುಮತಿ ಮತ್ತು ಪ್ರೊ. ಎಂ ಎಚ್.ಕೃಷ್ಣಯ್ಯ |
|
ಪ್ರಸ್ತಾವನಾ ನುಡಿ ಆಡಿದ ಅಧ್ಯಕ್ಷ ಡಾ. ಪಿವಿ.ನಾರಾಯಣ |
|
ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ |
|
ಸಣ್ಣ ಯ್ಯ ನವರನ್ನು ಸ್ವಾಗತಿಸುತ್ತಿರುವ ಅದ್ಯಕ್ಷರು |
|
ಡಾ.ಎಲ್ ಹನುಮಂತಯ್ಯನವರಿಗೆ ಸ್ವಾಗತ ನೀಡಿಕೆ |
|
ಡಾ. ಕಮಲಾ ಹಂಪನಾ ಅವರಿಗೆ ಸ್ವಾಗತ |
|
ಪ್ರಶಸ್ತಿ ಪ್ರದಾನ ಮಾಡಿದ ಡಾ. ಕಮಲಾ ಹಂಪನಾರ ಮಾತು |
|
ಅಭಿನಂದನಾ ಪತ್ರ ವಾಚಿಸುತ್ತಿರುವ ಕಾರ್ಯದರ್ಶಿ ಡಾ ಜಿ. ಅಬ್ದುಲ್ ಬಷೀರ್ |
|
ಅಭಿನಂದನಾ ಪತ್ರ ವಾಚಿಸುತ್ತಿರುವ ಡಾ. ಜಿ. ಅಬ್ದುಲ್ ಬಷೀರ್ |
|
ಸಕುಟುಂಬಿಯಾಗಿ ಶ್ರೀ ಸಣ್ಣಯ್ಯನವರು |
No comments:
Post a Comment