ಕನ್ನಡ ಸಾಹಿತಿಗಳಿಗೆ ಕಳೆದ ಎರಡು ದಶಕಗಳಿಂದ ಪ್ರಶಸ್ತಿಗಳಿಗೆ
ಬರವೇಇಲ್ಲ. ಬಡಾವಣೆಯ ಬಸವನ ಗುಡಿ ರತ್ನ ದಿಂದ
ಹಿಡಿದು ರಾಜ್ಯ ಮಟ್ಟದ ಕರ್ನಾಟಕ ರತ್ನ ದವರೆಗೆ ಪ್ರಶಸ್ತಿಗಳಿವೆ. ಜ್ಞಾನ
ಪೀಠಕ್ಕೂ ಹೆಚ್ಚಿನ ನಗದು ನೀಡುವ ಪ್ರಶಸ್ತಿಗಳಿವೆ. ಹಲವರಿಗಂತೂ ಪ್ರಶಸ್ತಿಗಳ ಸರಮಾಲೆ. ಸಾಹಿತ್ಯದ ವಿವಿಧ
ಪ್ರಕಾರಗಳಾದ ಕಥೆ. ಕಾದಂಬರಿ, ಕವನ. ವಿಮರ್ಶೆ ಮಹಿಳೆ, ಯುವ ಬರಹಗಾರ, ವಿಜ್ಞಾನ, ಸಂಶೋಧನೆ, ಅನುವಾದ ಹೀಗೆ ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸುವ
ಕೆಲಸ ಆಗುತ್ತ ಲಿದೆ
ಶಾಸನಗಳ ನೆಲವೀಡಾದ ಚಂದ್ರಗಿರಿ |
. ಈವರೆಗೆ , ಇತಿಹಾಸ ಮತ್ತು ಸಾಹಿತ್ಯಗಳ ತಾಯಿ ಬೇರಾದ ಶಾಸನ ಸಂಶೋಧಕರು ಮಾತ್ರ
ಎಲೆಯ ಮರೆಯ ಕಾಯಿಯಂತೆ ನೆಲದೊಳಗಣ ನಿದಾನದಂತೆ ಅಜ್ಞಾತವಾಗಿ
ಬೆಟ್ಟ ಗುಡ್ಡಗಳಲ್ಲಿ, ಹಾಳು ಗುಡಿಗಳಲ್ಲಿ, ಕಾಡು ಮೇಡುಗಳಲ್ಲಿ ಅಡಗಿರುವ ಶಾಸನಗಳ ಪತ್ತೆ ಮತ್ತು
ಅವುಗಳ ಅರ್ಥೈಸುವಿಕೆ, ಅವುಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿ ಮಹತ್ವವನ್ನು ಸಂಶೋಧಿಸಿ ಹೊಸ
ಬೆಳಕು ಚೆಲ್ಲಲು ಮಾಡುವ ಕಾರ್ಯದ ಮಹತ್ವ ಬರೀ ವಿಚಾರ ಸಂಕೀರಣ ಮತ್ತು ಸ್ಮರಣ ಸಂಚಿಕೆಗಳ ಲೇಖನಕ್ಕೆ
ಮಾತ್ರ ಮೀಸಲಾಗಿತ್ತು. ಈ ದಿಶೆಯಲ್ಲಿ ದುಡಿವ ಇತಿಹಾಸ
ತಜ್ಞರು, ಪುರಾತ್ತತ್ವ ಪರಿಣಿತರುಮತ್ತು ಲಿಪಿತಜ್ಞರನ್ನು ಗುರುತಿಸುವ, ಸಾರ್ವಜನಿಕವಾಗಿ
ಸಮ್ಮೇಳನದಲ್ಲಿ ಸನ್ಮಾನಿಸುವ ನಗದು ಪ್ರಶಸ್ತಿ ನೀಡುವ ಪ್ರಥಮ ಪ್ರಯತ್ನದ ಕರ್ನಾಟದಲ್ಲಿ ನಡೆಯಿತು.
ಶ್ರವ
ಬೆಳಗೊಳ ಜೈನ ಕಾಶಿ ಎಂದೇ ಪ್ರಖ್ಯಾತ. ಅಲ್ಲಿನ ವಿಂದ್ಯಾಗಿರಿಯಲ್ಲಿರುವ ಏಕಶಿಲಾ ಗೊಮ್ಮಟೇಶ್ವರ ವಿಗ್ರಹ
ವಿಶ್ವದ ವಿಸ್ಮಯಗಳಲ್ಲಿ ಒಂದು. ಅದಕ್ಕೆ ಲಕ್ಷಾಂತರ
ಜನ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಹನ್ನೆರಡು ವರ್ಷಕ್ಕೆ ಒಮ್ಮೆ ನಡೆವ ಮಹಾಮಸ್ತಕಾಭಿಷೇಕವಂತೂ
ಜಗತ್‌ಪ್ರಸಿದ್ಧ.
ಈ ಎಲ್ಲ ಖ್ಯಾತಿಗೂ ಕಾರಣರು ಅಲ್ಲಿರುವ ಜೈನ ಮಠದ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮಿಗಳು. ಅವರ
ದೂರದೃಷ್ಟಿಯ ಫಲಿತವೇ ಚಂದ್ರಗಿರಿ ಅತವ ಚಿಕ್ಕ ಬೆಟ್ಟದ ಉತ್ಸವ.ದೊಡ್ಡ ಬೆಟ್ಟವು ಔನತ್ಯಕ್ಕೆ
ಹೆಸರಾದರೆ ಚಿಕ್ಕಬೆಟ್ಟವು ಧಾರ್ಮಿಕ ಮತ್ತು ಐತಿಹಾಸಿಕವಾಗಿ ಅತಿ ಮಹತ್ವ ಹೊಂದಿದೆ.ಚಂದ್ರಗಿರಿಯು ಶಿಲಾಶಾಸನಗಳ ಸಾಗರ. ಬಹುಶಃ ಭಾರತದಲ್ಲೇ ಒಂದೇ ಕಡೆ
ಸುಮಾರು ೫೩೬ ಶಿಲಾಶಾನಗಳನ್ನು ಹೊಂದಿರುವ ಹಿರಿಮೆ
ಇದರದು. ಹತ್ತು ಶತಮಾನಗಳಿಗೂ ಅಧಿಕ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಬಸದಿಗಳು ಮತ್ತು ಶಾಸನಗಳ
ನೆಲೆಬೀಡು. ವಿಶೇಷವಾಗಿ ಮರಣದ ಮಹಿಮೆಯನ್ನು ಸಾರುವ ಏಕ ಮೇವ ಸ್ಥಾನ. ಇಬ್ಬರು ಚಕ್ರವರ್ತಿಗಳು
ನೂರಾರು ಜೈನ ಮುನಿಗಳು ಸಲ್ಲೇಖನ ವ್ರತದ ಮೂಲಕ ಪ್ರಾಣತ್ಯಾಗ ಮಾಡಿ ಪುಣ್ಯಭೂಮಿ ಇದು. ಸಾವೂ ಒಂದು
ಸಂಭ್ರಮ ಎಂಬ ಜೈನ ಮತದ ತತ್ವವನ್ನು ಸಾರಿದ್ದ ತಾಣ ಇದಾಗಿದೆ..
ಇದರ ಮಹತ್ವನ್ನು ಸಾರಲು ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು
ಬಾಹುಬಲಿಯ ಮಹಾಮಸ್ತಕಾಭಿಷೇಕದಂತೆ ಹನ್ನೆರಡುವರ್ಷಗಳ ನಡುವೆ ಚಂದ್ರಗಿರಿ ಮಹೋತ್ಸವವನ್ನೂ ಹನ್ನೆರಡು ವರ್ಷಗಳಿಗೊಂದು ಸಾರಿ ಆಚರಿಸಿ ಈ ಬೆಟ್ಟದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವನ್ನೂ ಸಾರಲು ೨೦೦೧ ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದರು. ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸುವರು. ಮಹೋತ್ಸವದ ಎರಡನೆಯ ಆವೃತ್ತಿ ಈ ವರ್ಷ ನಡೆದಿದೆ..ಈ ಸಲದ ವಿಶೇಷವೆಂದರೆ ಮೊದಲ ಬಾರಿಗೆ ಅದರ ಐತಿಹಾಸಿಕ ಮಹತ್ವಕ್ಕೆ ಕಾರಣವಾದ ಶಿಲಾಶಾನಗಳ ಅಧ್ಯಯನಮಾಡಿ ಹೊಸ ಬೆಳಕು ಚೆಲ್ಲುತ್ತಿರುವ ಶಾಸನ ನ ತಜ್ಞರಿಗೆ’ ಶಾಸನ ಸಾಹಿತ್ಯ “ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದರು. ಎರಡನೆಯ ಚಂದ್ರಗಿರಿ ಉತ್ಸವವು ಆದೃಷ್ಟಿಯಿಂದ ಅವಿಸ್ಮರಣೀಯ . ಮೊದಲಬಾರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಮೂತ್ತೈದು ಸಾವಿರ ರೂಪಾಯಿಗಳ ಶಾಸನ ಕ್ಷೇತ್ರದಲ್ಲಿನ ಹನ್ನೊಂದು ಜನ ಹಿರಿಯ ಸಾಧಕರಿಗೆ ನೀಡಿ ಗೌರವಿಸಲಾಗಿದೆ.
ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ |

ಶಾಸನಸ್ಥಾಪನಾ ರೂಪಕ |
ಈ ಕಾರ್ಯಕ್ರಮವೇ ಒಂದು ರೀತಿಯಲ್ಲಿ ವಿಶಿಷ್ಟವಾಗಿತ್ತು.
ಕಾರ್ಯಕ್ರಮ ಪ್ರಾಂಭವಾದ್ದು ಶಾಸನ ನಮನ ದಿಂದ..
ಅದೂ ಸಂಗೀತ ಮತ್ತು ನೃತ್ಯದ ಮೂಲಕ. ಹಾಸನದ ನೃತ್ಯ
ಪಟುವಿನ ನೃತ್ಯಾಂಜಲಿ ಆಕರ್ಷಕ ನಾಂದಿಯಾಯಿತು. ನಂತರದ
ಕಾರ್ಯಕ್ರಮವಾದ ಶಿಲಾಶಾಸನ ಸ್ಥಾಪನೆ ಎಂಬ
ರೂಪಕವು ನೋಡುಗರನ್ನು ಒಂದು ಸಹಸ್ರಮಾನದ ಹಿಂದಿನ ಐತಿಹಾಸಿಕ ಲೋಕಕ್ಕೆ ಕರೆದೊಯ್ದಿತು. ಶಿಲಾಶಾಸನವನ್ನು
ನಡೆಸಿ ತಾವು ಮಾಡಿದ ದಾನವನ್ನು ಸ್ಥಿರಗೊಳಿಸಿ ಪ್ರಜೆಗಳಲ್ಲಿ ಅದರ ಪ್ರಾಮುಖ್ಯತೆಯ ಅರಿವು ಮೂಡಿಸುವ ಪ್ರಯತ್ನ ಅದಾಗಿತ್ತು. ಶಾಸನ ಕಂಡರಿಸುವ ಶಿಲ್ಪಿ , ರಚಿಸುವ ಕವಿ, ನಿರ್ಮಿಸುವ
ದಂಡನಾಯಕ. ಅದನ್ನು ಸಮರ್ಪಿಸುವ ಅರಸ ವಿಷ್ಣುವರ್ಧನ,
ಅವನ ಅರಸು ಪರಿವಾರ ಸಕಲ ಗೌರವ ಗಳೊಂದಿಗೆ ನೆರೆದ ಸಭಾಸದರು ನಮ್ಮೆಲ್ಲರನ್ನೂ ಹೊಯ್ಸಳರ ಕಾಲಕ್ಕೆ ಕರೆದೊಯ್ದಿತು.ಈ
ರೂಪಕವು ಸ್ವಾಮೀಜಿಯವರ ಕನಸಿನ ಕೂಸು ಎಂಬುದ ಗಮನಾರ್ಹ.. . ವೈಭವೋಪೇತ ಉಡುಗೆ ತೊಡುಗೆಗಳು, ೨೫ ಕ್ಕೂ ಅಧಿಕ ನಟರ ಹೊಂದಾಣಿಕೆ ಸುಸಂಬದ್ಧ ,ಸಂಭಾಷಣೆ
ಮತ್ತು ಅದ್ದೂರಿಯ ರಂಗಸಜ್ಜಿಕೆ ನೋಡುಗರ ಮನಸೂರೆ
ಗೊಂಡವು.ಶಾಸನ ಸಾಹಿತ್ಯ ಪ್ರಶಸ್ತಿ ಪ್ರದಾನಕ್ಕೆ ಸೂಕ್ತ ಹಿನ್ನೆಲೆ ಒದಗಿಸಿತು
ಪ್ರಶಸ್ತಿ ಪಡೆದ ಡಾ. ದೇವರ ಕೊಂಡಾ ರೆಡ್ಡಿ |
ಇನ್ನು ವೇದಿಕೆಯಲ್ಲಿ ಸನ್ಮಾನಿತರಿಗೆ ಮಾಡಿದ ಆಸನ
ವ್ಯವಸ್ಥೆ ಅವರ ಸಾಧನೆಯ ಮಹತ್ವ ಸಾರುವಂತಿತ್ತು ಸಿಂಹಾಸನವನ್ನು ಹೋಲುವ ವೇದಿಕೆಯ ಮಧ್ಯದಲ್ಲಿದ್ದು
ಸ್ವಾಮೀಜಿಯವರಿಗೂ ಆಸನಕ್ಕಿಂತಲೂ
ವೈಭವೋಪೇತವಾಗಿದ್ದುದು ಶಾಸನ ಸಾಹಿತ್ಯಕ್ಕೆ ಸಲ್ಲಿಸಿದ ಅತಿ ದೊಡ್ಡ ಗೌರವವವೇ ಸರಿ. ಬಹುತೇಕ ಸನ್ಮಾನ ಸಮಾರಂಭಗಳಲ್ಲಿ ರಾಜಕಾರಣಿಗಳ, ವ್ಯವಸ್ಥಾಪಕರ
ಮತ್ತು ದಾನಿಗಳದೇ ದರ್ಬಾರು ಎದ್ದು ಕಾಣುವುದು ಸನ್ಮಾನಿತರು ಬಡ ಬಂಧುಗಳಂತೆ.ಆದರೆ ಇಲ್ಲಿ ಶಾಸನ ಮತ್ತು ಶಾಸನ ಪರಿಣಿತರೇ ಸಮಾರಂಭದ ಕೇಂದ್ರ ಬಿಂದುವಾಗಿದ್ದು ಸದಭಿರುಚಿಯ ಸಂಕೇತ..
ಪ್ರತಿಯೊಬ್ಬರ ಸಾದನೆ ಸಾರುವ ಮಾನ ಪತ್ರ ಪಠಣೆ,
ಶಾಲುಹೊಚ್ಚಿ ಸ್ಮರಣಿಕೆ ನೀಡಿ,ನಗದು ಬಹುಮಾನದೊಂದಿಗೆ ಗೌರವಿಸಲಾಯಿತು
ಚಾರು ಕೀರ್ತಿ ಭಟ್ಟಾರಕರೊಂದಿಗೆ ಪ್ರಶಸ್ತಿ ವಿಜೇತರು |
ಸನ್ಮಾನಿತರ ಪರವಾಗಿ . .ಷ.ಶೆಟ್ಟರ್
ಶ್ರವಣ ಬೆಳಗೊಳದ ಶಾಸನಗಳ ಮಹತ್ವ ಆಗಿರುವ ಮತ್ತು ಆಗ ಬೇಕಾದ ಕಾರ್ಯಗಳ ಮಹತ್ವವನ್ನು ತಿಳಿಸಿದರು.
ಪ್ರೊ. ಹಂ.ಪಾ. ನಾಗರಾಜಯ್ಯನವರು ಜೈನ ಸಾಹಿತ್ಯದ ಮೇರು ಸಾದಕ.ಅವರು ಸನ್ಮಾನಿತರಾದರೂ ಎಲ್ಲ ಕಾರ್ಯದಲ್ಲೂ
ಅವರುನಿರ್ದೇಶನ ನೀಡಿ ನಿರ್ವಹಿಸುತ್ತಿರುವುದು
ಕಾಣುತಿತ್ತು,ಸ್ವಾಮೀಜಿಯವರು ಮಾತಿಗಿಂತ ಕೃತಿಯಲ್ಲಿ ತಮ್ಮ ಇರವನ್ನು ಪ್ರಚುರ ಪಡಿಸಿದರು, ಈ
ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಶಾಸನ ಕ್ಷೇತ್ರದ ಹಿರಿಯರು ಭಾಗವಹಿಸಿದ್ದರು. ಕರ್ನಾಟಕ ಜೈನ
ಭವನವು ಜನರಿಂದ ತುಂಬಿ ತುಳುಕುತಿತ್ತು. ಜೈನ ಸಮಾಜವು ಬೆಳಗಿನ
ಉಪಹಾರದಿಂದ ಹಿಡಿದು ಮಧ್ಯಾಹ್ನದ ಊಟದ ವರೆಗೆ ಅಚ್ಚುಕಟ್ಟಾಗಿ ಕೆಲಸ ಮಾಡಿದರು.ಪರಂಪರೆ ಮತ್ತು ಇತಿಹಾಸವನ್ನು ಗೌರವಿಸುವಲ್ಲಿ ಈ ಸಮಾರಂಭ ಯಶಸ್ವಿಯಾಯಿತು ಎನ್ನಬಹುದು.
ಈ ಸಲದ ಪ್ರಶಸ್ತಿ ವಿಜೇತರಲ್ಲಿ ಸಿಂಹಪಾಲು ಕರ್ನಾಟಕ ಇತಿಹಾಸ ಅಕಾದಮಿಯವರಗಿರುವುದು ಗಮನಾರ್ಹ ಸಂಗತಿ. ಪ್ರದಾನ ಮಾಡಿ ಹನ್ನೊಂದು ಪ್ರಶಸ್ತಿಗಳಲ್ಲಿ ಅಕಾದಮಿಯ ಅಧ್ಯಕ್ಷರಾದ ಡಾ. ದೇವರ ಕೊಂಡಾರೆಡ್ಡಿಯವರೂ ಸೇರಿದಂತೆ ಒಂಬತ್ತು ಸದಸ್ಯರಿಗೆ ಪ್ರಶಸ್ತಿಗಳು ದೊರೆತಿರುವುದ ಅಕಾದಮಿಯ ಕ್ರಿಯಾಶೀಲತೆಗೆ ಸಾಕ್ಷಿ.

No comments:
Post a Comment