ಅಮೇರಿಕಾದಲ್ಲಿ ಹಸ್ತ ಪ್ರತಿ ಕುರಿತ ಸಂವಾದ
ಪ್ರತಿಷ್ಠಾನದ ಪರಿಮಳ ಮತ್ತು ಹಸ್ತಪ್ರತಿ ಅಭಿಯಾನದ ಅರಿವು ಅಮೇರಿಕಾದಲ್ಲಿ
ಹಸ್ತಪ್ರತಿ ಕುರಿತಾದ ಉಪನ್ಯಾಸ ಅಮೇರಿಕಾದ ನ್ಯೂ ಜರ್ಸಿಯ ನಾರ್ಥಬ್ರನ್ಸವಿಕ್‌ನಲ್ಲಿ ಭಾನುವಾರ ದಿನಾಂಕ ೨೨ನೆಯ ಜೂನ್ ೨೦೧೪ ರಂದು ನಡೆಯಿತು. ಇಲ್ಲಿನ ’ಪ್ರಸ್ತಾಪ’ ಸಾಹಿತ್ಯ ಮತ್ತು ಸಾಂಸ್ಕತಿಕ ಸಂಘಟನೆಯು ಕಾರ್ಯಕ್ರಮದ ವ್ಯವಸ್ಥೆಮಾಡಿತ್ತು. ಕಾಲಾವಕಾಶ ಕಡಿಮೆ ಇರುವುದರಿಂದ ಆಹ್ವಾನಿತರಾದ ಸುಮಾರು ಇಪ್ಪತ್ತು ಸದಸ್ಯರಲ್ಲಿ ಅರ್ಧಕ್ಕಿಂತ ಅಧಿಕ ಸದಸ್ಯರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀಕಾಂತಬಾಬು ಅವರು ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳಾದ ,, ಅಭಿಯಾನದ ನಿರ್ದೇಶಕರಾದ ಎಚ್.ಶೇಷಗಿರಿರಾವ್ ಅವರ ಪರಿಚಯ ಮಾಡಿಕೊಟ್ಟರು.
ಎಲ್ಲ ಸದಸ್ಯರಿಗೂ ’ Save & Study manuscripts’ ಅಭಿಯಾನದ ವಿವರವನ್ನು ಜೊತೆಗೆ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣರ ಧ್ವನಿಮುದ್ರಿತ ಸಂದೇಶವನ್ನೂ ಮಿಂಚಂಚೆಯ ಮೂಲಕ ಕಳುಹಿಸಲಾಗಿತ್ತು. ಹಾಗಾಗಿ ಪವರ್ ಪಾಯಿಂಟ್ ಮೂಲಕ ಉಪನ್ಯಾಸ ಕೊಡುತಿದ್ದಂತೆಯೇ ಮಧ್ಯಮಧ್ಯ ವಿವರಣೆ , ಸ್ಪಷ್ಠನೆ ಕೇಳಿ ಅನುಮಾನ ಪರಿ ಹರಿಸಿಕೊಳ್ಳಲು ಅವಕಾಶವಿತ್ತು.
ಇದರಿಂದ ಇದೊಂದು ಬರಿ ಒಮ್ಮುಖ ಮಾತಿನ ಉಪನ್ಯಾಸವಾಗುವುದರ ಬದಲು ಸಂವಾದದ ರೂಪ ತಳೆಯಿತು. ಮಾತುಕಥೆಯಲ್ಲಿ ಕವಿ ಪು.ತಿ.ನ ಅವರ ಮಗಳಾದ ಶ್ರೀಮತಿ ಪದ್ಮ ರಂಗರಾಜನ್ ಬಹಳ ಅಸಕ್ತಿಯಿಂದ ವಿವರ ಪಡೆದರು. ಡಾ.ರಂಗರಾಜನ್,ಡಾ. ಸಿ .ಎಮ್. ರಾಮಕೃಷ್ಣ , ಡಾ.ಸರೋಜ , ಶ್ರೀ ಕೃಷ್ಣ ಹೆಗಡೆ, ಶ್ರೀನಿವಾಸ್, ಶ್ರೀಕಾಂತ ಬಾಬು ಕುತೂಹಲದಿಂದ ಹಸ್ತ ಪ್ರತಿಗಳ ತಾಳೆಯ ಗರಿಗಳನ್ನು ಪರಿಶೀಲಿಸಿದರು. ಮೊದಲಬಾರಿಗೆ ನೊಡಿ ,ಮುಟ್ಟಿ ಮುಟ್ಟಿ ನಂದಿಸಿದರು. ಸಂಸ್ಕೃತ ವಿದ್ವಾಂಸ ಡಾ, ರಂಗಾಚಾರ್ ಗರಿಯಲ್ಲಿ ಸಂಸ್ಕೃತ ಬರಹ ಓದಲುಯತ್ನಿಸಿದರು ಪರದೆಯ ಮೇಲೆ ಝೂಮ್ ಮಾಡಿದ ತಾಳೆಗರಿಯ ಮೇಲಿನ ಅಕ್ಷರಗಳನ್ನು ತಕ್ಕ ಮಟ್ಟಿಗೆ ಓದಲು ಶಕ್ತರಾದರು.
ಸಿ. ಎಮ್. ರಾಮಚಂದ್ರ ದಂಪತಿಗಳು ಪರದೆಯ ಮೇಲೆ ಮೂಡಿದ ಸರ್ವಜ್ಞನ ವಚನಗಳನ್ನು ಅಲ್ಲಲ್ಲಿ ಓದಿ ಖುಷಿಪಟ್ಟರು.

ಅಭಿಯಾನದ ನಿರ್ದೇಶಕರಾದ ಶೇಷಗಿರಿರಾಯರು ತಿಳಿಸಿದ ಅಭಿಯಾನದ ಉದ್ದೇಶ ಅವರ ಮನಮುಟ್ಟಿತು. ಡಿಜಿಟಲೈಜೇಷನ್‌ನಿಂದ ಹಸ್ತಪ್ರತಿಗಳ ಶಾಶ್ವತ ಸಂರಕ್ಷಣೆ ಮತ್ತು ಅದರಲ್ಲಿನ ವಿಷಯವನ್ನು ಕಾಲ,ದೇಶ, ದೂರವನ್ನು ಮೀರಿ ಸುಲಭವಾಗಿ ಅಗತ್ಯವಿದ್ದವರಿಗೆ ತಲುಪಿಸುವ ಸಾಧ್ಯತೆಯ ಬಗ್ಗೆ ಮನವರಿಕೆಯಾಯಿತು. ಇದರಿಂದ ಯಾವುದೇ ಕೃತಿಯ ವ್ಯಾಪಕ ಪ್ರಚಾರವಾಗುವುದು .
ಪವರ್ ಪಾಯಿಂಟ್‌ನಲ್ಲಿ ತೋರಿಸಿದ ವೈವಿದ್ಯಮಯ ಆಕೃತಿಯ ಹಸ್ತ ಪ್ರತಿಗಳು
ಸುಲಭ ಲಭ್ಯತೆಯಿಂದ ಕೃತಿಯ ಪುನರ್ ಪರಿಶೀಲನೆ ಮತ್ತು ಮರುವ್ಯಾಖ್ಯಾನದ ಸಾಧ್ಯತೆ ಹೆಚ್ಚಿ ಹೊಸ ಹೊಸ ಅರ್ಥ ಹೊರ ಹೊಮ್ಮುವ ಸಾಧ್ಯತೆ ಮನಗಂಡರು. ಯಾವುದೇ ಜಾತಿ, ಮತ, ಧರ್ಮ, ಭಾಷೆಗೆ ಸೀಮಿತವಾಗದೇ ಹಸ್ತಪ್ರತಿಯಲ್ಲಿರುವುದನ್ನೆಲ್ಲ ಮುದ್ರಿತ ರೂಪದಲ್ಲಿ ತರುವ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯನವರ ಕನಸನ್ನು ನನಸು ಮಾಡುವುದಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಆನ್‌ಲೈನ್‌ನಲ್ಲಿ ಎಲ್ಲರಿಗೂ, ಎಲ್ಲೆಡೆಗೂ ತಲುಪಿಸಬಹುದೆಂಬ ಪರಿಕಲ್ಪನೆ ಎಲ್ಲರಿಗೂ ಹಿಡಿಸಿತು.ಈ ಕೆಲಸ ಸೀಮಿತ ವರ್ಗಕ್ಕೆ ಮಾತ್ರ ಮೀಸಲಾಗದೇ ಸಮುದಾಯವನ್ನೇ ತೊಡಗಿಸಿಕೊಳ್ಳುವದರಿಂದ ಅವುಗಳ ಕುರಿತಾದ ಮೆಚ್ಚುಗೆ ಹೆಚ್ಚುವ ಅಂಶವನ್ನು ಗಮನಿಸಲಾಯಿತು.

ಸರ್ಕಾರದ ಅನುದಾನ ಕ್ಕೆ ಕಾಯದೇ ಸ್ವಯಂ ಸೇವಕರ ಮೂಲಕ ಮಾಡಲು ಒಂದು ಹಂತದ ವರೆಗೆ ಸಾಧ್ಯವಾದರೂ ಅಂತಿಮವಾಗಿ ಹಣಕಾಸಿನ ಅಗತ್ಯ ಬೀಳುವುದು ಅದರಿಂದ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮಾಡಿದರೆ ಸಂಗ್ರಹಣೆ , ಸಂರಕ್ಷಣೆಯ ಜೊತೆಜೊತೆಗೆ ಅಧ್ಯಯನವೂ ಮೊದಲಾಗಬೇಕು ,ಅದಕ್ಕೆ ತಂತ್ರಜ್ಞರು, ವಿದ್ವಾಂಸರು ಮಾತ್ರವಲ್ಲದೆ ಆಸಕ್ತ ಜನಸಾಮಾನ್ಯರೂ ಭಾಗವಹಿಸಿದರೆ ಯಶಸ್ಸು ಖಂಡಿತ ವೆಂಬ ಅಭಿಪ್ರಾಯ ವ್ಯಕ್ತ ವಾಯಿತು. ಈ ದಿಶೆಯಲ್ಲಿ ಎಲ್ಲಸಂಘ ಸಂಸ್ಥೆಗಳ ಸದಸ್ಯರಿಗೆ ಪರಿಚಯಸ್ಥರಿಗೆ ಈ ಕುರಿತಾದ ವಿವರವಾದ ಮಾಹಿತಿಯನ್ನುಇ. ಮೇಲ್ ಮುಖಾಂತರ ಕಳುಹಿಸಲು ಒಪ್ಪಿಕೊಂಡರು. ಡಾ.ರಂಗಾಚಾರ್ ಅವರು ನ್ಯೂಯಾರ್ಕ ನಗರದ ಕೇಂದ್ರ ಗ್ರಂಥಾಲಯದಲ್ಲಿ ಉಪನ್ಯಾಸ ನೀಡಲು ಅವಕಾಶದ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಶ್ರೀ. ಕೃಷ್ಣ ಹೆಗಡೆಯವರು ಫೋರ್ಡ ಫೌಂಡೇಷನ್ ಹಾಗೂ ದಕ್ಷಿಣ ಏಷಿಯಾ ಭಾಷಾ ಅಧ್ಯಯನ ಸಂಸ್ಥೆಯ ಸಹಕಾರ ಪಡೆಯಲು ಪ್ರಯತ್ನಿಸ ಬಹುದಾಗಿ ತಿಳಿಸಿದರು.ಮತ್ತು ಎಲ್ಲ ಕಡೆ ಡಾ. ಪಿ.ವಿ ನಾರಾಯಣ ಅವರ ಧ್ವನಿಮುದ್ರಿತ ಸಂದೇಶವನ್ನು ಮತ್ತು ನಿರ್ದೇಶಕರು ಸಿದ್ಧ ಪಡಿಸಿದ ಕಾರ್ಯ ಸೂಚಿಯನ್ನು ಮಿಂಚಂಚೆಯ ಮೂಲಕ ಕಳುಹಿಸಿ ಪ್ರತಿಷ್ಠಾನದ ಚಟುವಟಿಕೆಯ ಪರಿಚಯ ಮಾಡಬಹುದೆಂಬ ಸೂಚನೆ ಎಲ್ಲರಿಗೂ ಸಮ್ಮತವಾಯಿತು.ಸಾ
ಧ್ಯವಾದರೆ ಕ್ಯಾಲಿಫೋರ್ನಿಯಾದಲ್ಲಿ ನಡೆವ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದಲ್ಲೂ ಪ್ರಚಾರ ಕೊಡಲು ಪ್ರಯತ್ನಿಸುವುದಾಗಿ ಶ್ರೀಮತಿ ಪದ್ಮ ರಂಗಾಚಾರ್ ತಿಳಿಸಿದರು. ಇದೇ ಸಮಯದಲ್ಲಿ ಪು.ತಿ.ನ ಅವರ ಕಾವ್ಯ ಸಂಪತ್ತನ್ನು ಆನ್‌ಲೈನ್‌ನಲ್ಲಿ ವೆಬ್‌ಸೈಟ್‌ಮೂಲಕ ನೀಡುವ ಅವರ ಯೋಜನೆಗೆ ಹಸ್ತಪ್ರತಿ ಅಭಿಯಾನದ ನಿರ್ದೇಶಕರು ಸಹಕರಿಸಿ , ಪ್ರತಿಷ್ಠಾನದಿಂದ ಮಾರ್ಗದರ್ಶನ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಶ್ರೀಮತಿ ಅನಸೂಯ ಅವರು ಪೆನ್ ಯುನಿವರ್ಸಿಟಿ ಬಿಬ್ಲಿಯೋಗ್ರಾಫರ್ ಮತ್ತು ಭಾರತದ ಬಗ್ಗೆ ಆಸಕ್ತರಾದ ವಿಭಾಗ ಮುಖ್ಯಸ್ಥರೊಡನೆ ಭೇಟಿಯವ್ಯವಸ್ಥೆ ಮಾಡಲು ಸಿದ್ಧವಿರುವುದರಿಂದ ಯಾರಾದರೂ ಫಿಲೆಡೆಲ್ಫಿಯಾಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಬಹುದೆಂದು ಒಮ್ಮತಕ್ಕೆ ಬರಲಾಯಿತು. ಮುಂದಿನಭೇಟಿಯ ಸಮಯದಲ್ಲಿ ಇನ್ನೂ ವ್ಯಾಪಕ ಪ್ರಚಾರ ನೀಡಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲು ಶ್ರೀಕಾಂತಬಾಬು ಬಯಸಿದರು.

ಆತಿಥ್ಯ ನೀಡಿದ ಕುಟುಂಬ |
ಅಂತಿಮವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆಲ್ಲರಿಗೂ ಆತಿಥ್ಯ ನೀಡಿ ಊಟೋಪಚಾರ ವ್ಯವಸ್ಥೆ ಮಾಡಿದ್ದ ಶ್ರೀ.ಶೈಲೇಶ್ ಸ್ವರೂಪ್ ಮತ್ತು ಪ್ರೇಮಾ ಶೈಲೇಶ್ ಅವರನ್ನು ಅಭಿನಂದಿಸಲಾಯಿತು.ಎಲ್ಲ ಸದಸ್ಯರ ವಿಳಾಸ,ದೂರವಾಣಿಸಂಖ್ಯೆಮತ್ತು ಇ-ಮೇಲ್‌ವಿಳಾಸ ಪಡೆದು ಸತತ ಸಂಪರ್ಕದಲ್ಲಿರಲು ನಿರ್ಧರಿಸಲಾಯಿತು. ಒಂದು ಗಂಟೆಯ ಕಾರ್ಯಕ್ರಮ ಸುಮಾರು ಮೂರುವರೆ ಗಂಟೆಯವರೆಗೆ
ನಡೆದುದು ಯಾರ ಗಮನಕ್ಕೂ ಬರಲೇ ಇಲ್ಲ. ಊಟದ ಸಮಯದಲ್ಲಿ ಮತ್ತೊಮ್ಮೆ ಅಧ್ಯಕ್ಷರ ಧ್ವನಿಮುದ್ರಿತ ಸಂದೇಶ ಎಲ್ಲರಿಗೂ ಕೇಳಿಸಲಾಯಿತು.ಅದನ್ನುಕೇಳಿದ ಕೆಲವರು ಪ್ರತಿಷ್ಠಾನದ ಎಲ್ಲ ಕಾರ್ಯಕ್ರಮಗಳನ್ನು ಅಂತರ್‌ಜಾಲದಲ್ಲಿ ಹಾಕಿದರೆ ಉತ್ತಮ ಎಂಬ ಅಭಿಪ್ರಾಯ ಸೂಚಿಸಿದರು.
ಈಗಂತೂ ನೂರಾರು ಜನರಿಗೆ ಮಿಂಚಂಚೆಯ ಮೂಲಕ ಮಾಹಿತಿ ತಲುಪಿದೆ, ಇದರ ಪರಿಣಾಮವಾಗಿ ಪ್ರತಿಷ್ಠಾನ ಮತ್ತು ಅಭಿಯಾನ ಕುರಿತಾದ ಮಾಹಿತಿ ಮತ್ತು ಸಾಧನೆಯ ಪರಿಮಳ ಅಮೇರಿಕಾದಲ್ಲೂ ತುಸು ಮಟ್ಟಿಗೆ ಹರಡಲು ಅನುಕೂಲವಾಯಿತು.
ವಿದಾಯ ಹೇಳುವ ಮುನ್ನ ಸಾಹಿತಿಗಳಾದ ಡಾ. ರಂಗಾಚಾರ್ ತಮ್ಮ ಕೃತಿ ’ತರಗೆಲೆಯ ಹಾರಾಟ " ಎಂಬ ಲಲಿತಪ್ರಬಂಧಗಳ ಸಂಕಲನವನ್ನು ನೆನಪಿನ ಕಾಣಿಕೆಯಾಗಿ ನಿರ್ದೇಶಕರಿಗೆ ನೀಡಿದರು.ಜೊತೆಗೆ ಕಿರುಕಾಣಿಕೆಯೂ ಸಂದಿತು

No comments:
Post a Comment