Monday, April 27, 2015

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆÇಸವೂರು

ಪ್ರಾಚೀನ ಶಕ್ತಿ ದೇವತೆಯ ಆರಾಧನಾ ಕೇಂದ್ರ ದಿವ್ಯಾದಪೆಸವೂರು
ಶಿವಯೋಗಿ ಕೋರಿಶೆಟ್ಟರ 
ಹಾವೇರಿ ತಾಲೂಕಿನ ಒಂದು ಪ್ರಾಚೀನ ಐತಿಹಾಸಿಕ ಗ್ರಾಮ ದೇವಿಹೊಸೂರು. ಹಾವೇರಿಯಿಂದ ನೈಋತ್ಯಕ್ಕೆ ಸುಮಾರು 8 ಕಿ.ಮಿ. ದೂರದಲ್ಲಿದೆ. ಅತ್ಯಂತ ಪ್ರಾಚೀನವಾಗಿರುವ ಗ್ರಾಮದಲ್ಲಿ ಹಲವಾರು ಶಿಲಾಶಾಸನಗಳು, ವೀರಗಲ್ಲುಗಳು, ಗೋಸಾಸಗಳು, ಕೋಣನ ತಲೆಶಿಲ್ಪ ವಿವಿಧ ದೇವಾಲಯಗಳು ಮೂರ್ತಿಶಿಲ್ಪಗಳು ಮುಂತಾದ ಪ್ರಾಚ್ಯ ಸ್ಮಾರಕಗಳನ್ನು ಕಾಣಬಹುದು. ಈ ಗ್ರಾಮವು ಶಾಸನಗಳಲ್ಲಿ ಪೊಸವೂರು, ದಿವ್ಯಾದ ಪೊಸವೂರು, ದೆಯ್ವದ ಪೊಸವೂರು, ದೇವಿಯ ಹೊಸವೂರು ಎಂಬುದಾಗಿ ಉಲ್ಲೇಖಿತಗೊಂಡಿದೆ. ರಾಷ್ಟ್ರಕೂಟರ ಕಾಲದಷ್ಟು ಪ್ರಾಚೀನತೆ ಹೊಂದಿರುವ ದಿವ್ಯಾದಪೊಸವೂರು ಪ್ರಾಚೀನ ಕುಂತಳ ದೇಶದ ಬನವಾಸಿ-12000ದ ಒಂದು ಕಂಪಣ ಬಾಸವೂರು-140ರ ಆಧೀನಕ್ಕೆ ಒಳಪಟ್ಟಿತ್ತು. ಮಲ್ಲಾರಿ ಮಾರ್ತಾಂಡನ ದೇವಿ ಮಾಳಚಿ ಇಲ್ಲಿ ನೆಲೆಗೊಂಡಿದ್ದರಿಂದಲೇ ದೇವಿಹೊಸೂರ ಎಂಬ ಹೆಸರು ಈ ಊರಿಗೆ ಬಂದಿತೆನ್ನಬಹುದು.
ದೇವಿಹೊಸೂರು ಪ್ರಾಚೀನ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು. ರಾಷ್ಟ್ರಕೂಟ 3ನೇ ಕೃಷ್ಣನ ಕ್ರಿ.ಶ. 961ರ ಶಾಸನವು ದೇವಿಹೊಸವೂರು ಅಗ್ರಹಾರದ ಮೊದಲ ಉಲ್ಲೇಖ ಹೊಂದಿದ್ದು, ಇದು ಪೊಸವೂರಿನ ಮಹಾಜನರನ್ನು ಉಲ್ಲೇಖಿಸುತ್ತದೆ. ಈ ಗ್ರಾಮವು ಮಾಳಜದೇವಿ ಲಬ್ದವರ-ಪ್ರಸಾದರಾಗಿದ್ದ ಸಾವಿರ ಮಹಾಜನರನ್ನು ಹೊಂದಿದ್ದ ಅಗ್ರಹಾರವಾಗಿತ್ತು. ದೇವಿಹೊಸವೂರಿನ ಅಗ್ರಹಾರವನ್ನು ಶಾಸನವು ಜನಮೇಜಯದತ್ತಿ ಅಗ್ರಹಾರ ಎಂದು ಉಲ್ಲೇಖಿಸಿರುವುದರಿಂದ ಈ ಅಗ್ರಹಾರವು ಅತ್ಯಂತ ಪ್ರಾಚೀನವಾದುದೆಂದು ತಿಳಿಯುತ್ತದೆ. ಇಲ್ಲಿನ ಮಹಾಜನ ಸಾಸಿರ್ವರು ದೇವಿಹೊಸವೂರು ಆಡಳಿತದ ಒಡೆತನ ಹೊಂದಿದ್ದು, ಇವರ ಸಮ್ಮಖದಲ್ಲಿಯೇ ಮಾಳಚಿ ದೇವಿಗೆ ದಾನದತ್ತಿಗಳನ್ನು ನೀಡಲಾಗಿದೆ. ಸಾಸಿರ್ವರೂ ಕೂಡಾ ದಾನಗಳನ್ನು ನೀಡಿದ ಮತ್ತು ಸ್ವೀಕರಿಸಿದ ಬಗ್ಗೆ ಶಾಸನಗಳು ಉಲ್ಲೇಖಿಸಿವೆ. ರಾಷ್ಟ್ರಕೂಟರ ಕಾಲದಿಂದ ಹಿಡಿದು ಯಾದವರ ಕಾಲದವರೆಗೂ ಈ ಗ್ರಾಮದ ಮೇಲೆ ಹಿಡಿತ ಹೊಂದಿದ್ದ ಮಹಾಜನ ಸಾಸಿರ್ವರು ಅಲ್ಲಿನ ಶಾಸನೋಕ್ತ ಮಾಳಚಿ, ಭೋಗೇಶ್ವರ, ಹಾಗೂ ಗವರೇಶ್ವರ ದೇವಾಲಯಗಳಲ್ಲದೇ, ಗ್ರಾಮದ ಇತರೆ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ದಿವ್ಯಾದಪೊಸವೂರನ ಮಾಳಚಿ ದೇವಾಲಯ ಹಾಗೂ ಮೈಲಾರಲಿಂಗ ದೇವಾಲಯಕ್ಕೂ ಸಾಂಸ್ಕøತಿಕ ಸಂಬಂಧ ಇರುವಂತೆ ತೋರುತ್ತದೆ. ಜನಪದ ಪುರುಷ ದೇವತೆ ಏಳುಕೋಟೆ ಅಥವಾ ಮೈಲಾರಲಿಂಗ ಭಕ್ತರಿಗೆ ಪ್ರತ್ಯಕ್ಷ ಶಿವ ಮಣಿಮಲ್ಲರೆಂಬ ದೈತ್ಯರನ್ನ ಸಂಹರಿಸಲು ಭೂಲೋಕಕ್ಕೆ ಬಂದು ಕಂಬಳಿ ಕಂತೆಯ ವೇಷತೊಟ್ಟನು. ತಲೆಯ ಮೇಲೆ ಮುರುಗಿ-ಮುಂಡಾಸ, ಕೈಯಲ್ಲಿ ತ್ರೀಶೂಲ, ಡಮರು, ಭಂಡಾರ ಚೀಲ, ಗಂಟೆ, ಡೋಣಿ ಧರಿಸಿ ದೇವರಗುಡ್ಡ ಸಮೀಪ ಶಿಡಗಿನಹಾಳ ಗ್ರಾಮದ ಪಶ್ಚಿಮದ ಕರಿಯಾಲದಲ್ಲಿ ಹಲವಾರು ರಾಕ್ಷಸರನ್ನ ಸಂಹರಿಸಿ ಅಂತಿಮವಾಗಿ ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ ಮಲ್ಲಾಸುರನನ್ನು ಸಂಹರಿಸಿದನೆಂದು ಹೇಳಲಾಗುತ್ತದೆ. ಏಳುಕೋಟಿ, ಮೈಲಾರಲಿಂಗ, ಮಲ್ಲಾರಿ, ಮಾರ್ತಾಂಡಭೈರವ, ಖಂಡೋಬಾ, ಮಾಲತೇಶ ಮುಂತಾದ ಹೆಸರುಗಳಿಂದ ಈತನನ್ನು ಕರೆಯಲಾಗಿದೆ.
ಗಂಗಿಮಾಳವ್ವ ಅಥವಾ ಮಾಳಚಿದೇವಿ ಮೈಲಾರಲಿಂಗನ ಪಟ್ಟದ ಹೆಂಡತಿ, ಕುರುಬತೆವ್ವ ಅಥವಾ ಕುರುಬರ ಮಾಳವ್ವ ಎರಡನೇ ಹೆಂಡತಿ. ಗಂಗಿಮಾಳವ್ವನ ಮೇಲಿನ ಹಠದಿಂದ ಇವಳನ್ನು ತಂದನೆಂಬುದು ನಂಬುಗೆ. ಇವರೀರ್ವರಿಗೂ ಹೆಗ್ಗಡೆಯೇ ಅಣ್ಣ. ಬನಾಯಿ, ಬನಶಂಕರಿ, ಬಾಣಾಯಿ ಮುಂತಾದ ಹೆಸರುಗಳಿಂದಲೂ ಈ ದೇವತೆಯನ್ನು ಕರೆಯಲಾಗಿದೆ. ಮೈಲಾರ ಮತ್ತು ದೇವರಗುಡ್ಡದಲ್ಲಿನ ಮಾಳಚಿ ಹಾಗೂ ಕುರುಬತೆವ್ವನ ಮೂರ್ತಿಗಳಲ್ಲಿ ಹೋಲಿಕೆಯನ್ನು ಕಾಣಬಹುದು. ಇವು ಮೈಲಾರಲಿಂಗನ ತದ್ವತ್ತಾದ ಸ್ತ್ರೀಮೂರ್ತಿಗಳಾಗಿವೆ. ಅಂದರೆ ಬಲದ ಕೈಗಳಲ್ಲಿ ಖಡ್ಗ ತ್ರಿಶೂಲಗಳು, ಎಡದ ಕೈಯಗಳಲ್ಲಿ ಪಾನಪಾತ್ರೆ ಡಮರುಗಳೂ ಇವೆ. ಮೈಲಾರಲಿಂಗನಿಗೆ ಮೈಲಾರ ಹಾಗೂ ದೇವರಗುಡ್ಡ ನೆಲೆಗಳಾಗಿರುವ ಹಾಗೆ ಮಾಳಚಿದೇವಿಗೆ ದೇವಿಹೊಸವೂರು ನೆಲೆಯಾಗಿತ್ತು.
ಪ್ರಸ್ತುತ ಗ್ರ್ರಾಮದ ಹೊರಗೆ ಇರುವ ಬನಶಂಕರಿ ದೇವಸ್ಥಾನವೇ ಮಾಳಚಿ ದೇವಸ್ಥಾನವಾಗಿದೆ. ಈ ಬಗ್ಗೆ ಇಲ್ಲ್ಲಿನ ಶಾಸನಗಳು ಉಲ್ಲೇಖ ಹೊಂದಿವೆ. ಯೋಗಪೀಠಕ್ಕಿಂತ ಮಿಗಿಲಾದ ಮಾಳಜ ಪೀಠ ಇದೆಂದು ಶಾಸನವೊಂದು ಬಣ್ಣಿಸಿದೆ. ಊರಿನ ಉತ್ತರಕ್ಕೆ ಇರುವ ದೊಡ್ಡಕೆರೆಯ ಸಮೀಪದಲ್ಲಿರುವ ಮಾಳಚಿ ದೇವಾಲಯವು ಭೌಗೋಳಿಕವಾಗಿ ಎತ್ತರದ ದಿನ್ನೆಯ ಆಯಕಟ್ಟಿನ ಜಾಗದಲ್ಲಿದೆ. ವಿಶಾಲ ಭೂಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತನ್ನದೇ ಆದ ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ಸುಮಾರು 10ನೇ ಶತಮಾನದಲ್ಲಿ ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ದೇವಾಲಯದ ಗರ್ಭಗೃಹದಲ್ಲಿನ ಮೂರ್ತಿಯು ಕಾಲಾಂತರದಲ್ಲಿ ಸ್ಥಳಾಂತರಗೊಂಡಿದ್ದು, ಈಗ ಗಣಪತಿಯ ಮೂರ್ತಿ ಇದೆ. ಇಲ್ಲಿನ ದೇವಿ ಮೂರ್ತಿಯನ್ನು ಊರಿನಲ್ಲಿರುವ ಬನಶಂಕರಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬುದು ಸ್ಥಳೀಕರ ಅಭಿಪ್ರಾಯ. ಸುಕನಾಸಿಯ ದ್ವಾರದ ಮೇಲ್ಭಾಗದ ಪಟ್ಟಿಕೆಯಲ್ಲಿ ಎರಡು ಮಕರಗಳ ನಡುವೆ ಮಾಳಚಿಯ ವಿಗ್ರಹವನ್ನು ಕೆತ್ತಲಾಗಿದೆ. ಚತುರ್ಭುಜೆಯಾಗಿರುವ ಮಾಳಚಿ ಕೈಗಳಲ್ಲಿ ಕ್ರಮವಾಗಿ ಕತ್ತಿ, ಡಮರು, ತ್ರಿಶೂಲ ಮತ್ತು ಕಪಾಲಗಳಿವೆ.  ಇನ್ನುಳಿದಂತೆ ಬಾಗಿಲುವಾಡ ಸರಳವಾದ್ದು, ಪಕ್ಕದಲ್ಲಿ ಸುಂದರ ಜಾಲಂದ್ರಗಳಿವೆ. ನವರಂಗದಲ್ಲಿ ನಾಲ್ಕು ಕಂಬಗಳು ಕಲಾತ್ಮಕವಾಗಿ ನಿರ್ಮಿಸಲ್ಪಟ್ಟಿವೆ. ಅವುಗಳ ಮಧ್ಯದ ಛತ್ತಿನಲ್ಲಿ ಕಮಲದಳಗಳ ಉಬ್ಬು ಚಿತ್ರದ ವಿತಾನವಿದೆ. ಬದಿಗಳಲ್ಲಿ ನಾಗಗಳಿವೆ. ದೇವಾಲಯದ ಗರ್ಭಗೃಹ ಹಾಗೂ ಅಂತರಾಳದ ಭಿತ್ತಿಗಳು ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿವೆ. ಗೋಡೆಗುಂಟ ಅರ್ಧಕಂಭಗಳಿದ್ದು ಪೀಠ, ಕಾಂಡ, ಕಂಠ ಹಾಗೂ ಬೋದಿಗೆಗಳಿಂದ ಅಲಂಕೃತಗೊಂಡಿವೆ. ಮುಖಮಂಟಪವು ಹನ್ನೆರಡು ಕಂಭಗಳನ್ನು ಹೊಂದಿದ್ದು, ನವೀಕರಣಗೊಂಡಿದೆ. ಗರ್ಭಗೃಹದ ಶಿಖರವು ಶಿಥಿಲಗೊಂಡು ದುರಸ್ತಿಯಾಗಿದೆ.
ಮಾಳಚಿ ದೇವಾಲಯವು ವಿಶಾಲವಾದ ಪ್ರಾಕಾರ ಹೋದಿದ್ದು, ದೇವಾಲಯದ ಸುತ್ತಲೂ ನಿರ್ದಿಷ್ಟಪಡಿಸಿದ ದಿಕ್ಕಿನಲ್ಲಿ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳಿವೆ. ಇವುಗಳಲ್ಲಿನ ಮೂರ್ತಿಗಳು ಕಾರಣಾಂತರಗಳಿಂದ ಚದುರಿ ಹೋಗಿವೆ. ದೇವಾಲಯದ ಸುತ್ತಲೂ ಇರುವ ಆವಾರದಲ್ಲಿ ಶಿವಲಿಂಗಗಳು ಹಾಗೂ ಚಿಕ್ಕ ಚಿಕ್ಕ ಗುಡಿಗಳ ಅವಶೇಷಗಳÀನ್ನು ಗುರುತಿಸುವುದು ಕಷ್ಟವೆನಿಸಿದರೂ, ಈ ಚಿಕ್ಕ ಮಂದಿರಗಳು ಮೈಲಾರಲಿಂಗ ಹಾಗೂ ಮಾಳಚಿಯರ ಪರಿವಾರ ದೇವತೆಗಳಾದ ರಣದಾಗ್ನಿ, ಕೋಮಾಲೆ, ಚಿಕ್ಕಯ್ಯ, ಜುಂಜಯ್ಯ, ಹೆಗ್ಗಡೆ ಮುಂತಾದವರಿಗಾಗಿ ನಿರ್ಮಿಸಿದವುಗಳಂತೆ ತೋರುತ್ತವೆ. ಮಾಳಚಿ ದೇವಾಲಯದ ಮುಂದೆ ಸಾಲಾಗಿ ಅಲ್ಲಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಪಾದಪೀಠಗಳನ್ನು ಕಾಣಬಹುದು. ದೇವಾಲಯದ ಪ್ರಾಕಾರದಲ್ಲಿ ಇಂತಹ ಮೂರು ಪಾದಪೀಠಗಳಿವೆ. ಪಾದಪೀಠಗಳು ಪ್ರಾಕಾರದ ಹೊರಗೂ ರಸ್ತೆಬದಿಯ ಹೊಲದಲ್ಲಿಯೂ ವಿಸ್ತರಿಸಿವೆ. ಇಂತಹ ಜೋಡುಪಾದ ಮುದ್ರೆಗಳನ್ನು ಹೆಡೆಬಿಚ್ಚಿದ ಹಾವುಗಳು ಸುತ್ತಿದಂತೆ ಕೆತ್ತಲಾಗಿದೆ. ಈ ಪ್ರಾಕಾರದ ಹಿಂಬದಿಯಲ್ಲಿ ಅಯ್ಯನ ಹೊಂಡವಿದ್ದು, ಇದರ ದಂಡೆಯ ಮೇಲೆ ಗಜಲಕ್ಷ್ಮಿ ಹಾಗೂ ಕೋಣನತಲೆ ಶಿಲ್ಪಗಳಿವೆ. ಗಜಲಕ್ಷ್ಮಿ ಶಿಲ್ಪವು ಅತ್ಯಂತ ಆಕರ್ಷಕವಾಗಿದ್ದು, ನಾಲ್ಕು ಆನೆಗಳ ಮಧ್ಯದಲ್ಲಿ ಕುಳಿತ ಗಜಲಕ್ಷ್ಮಿಯ ಮೇಲ್ಭಾಗದ ಎರಡು ಆನೆಗಳು ತಮ್ಮ ಸೊಂಡಿಲುಗಳಲ್ಲಿ ಕುಂಭಗಳನ್ನು ಹೊತ್ತು ದೇವಿಗೆ ಅಭಿಷೇಕ ಮಾಡುತ್ತಿವೆ. ಈ ಗಜಲಕ್ಷ್ಮಿ ಶಿಲ್ಪದ ಬಳಿಯಲ್ಲಿಯೆ ಕೋಣನ ತಲೆಯುಳ್ಳ ಶಿಲ್ಪವಿದೆ. ಹರವಾದ ಕಲ್ಲುಚಪ್ಪಡಿಯ ಮೇಲೆ ನೆಲಕ್ಕೆ ಒರಗಿದಂತೆ ಕಂಡುಬರುವ ಇದರ ನಾಲಿಗೆ ಹೊರಚಾಚಿದೆ. ಕೋಡುಗಳ ಮಧ್ಯದಲ್ಲಿ ಅರಳಿದ ಕಮಲವಿರುವ ಉಬ್ಬುಶಿಲ್ಪ ಇದಾಗಿದೆ. ಕೆರೆ ಕಟ್ಟೆಗಳ ಬಳಿಯಲ್ಲಿ ಜೋಡಾಗಿಯೇ ಕಂಡುಬರುವ ಇಂತಹ ಶಿಲ್ಪಗಳು ವನದುರ್ಗೆಯ  ಸಂಕೇತವನ್ನು ಪ್ರತಿನಿಧಿಸುತ್ತವೆ.
ದೇವಾಲಯ ಪ್ರಾಕಾರದ ಸುತ್ತಲೂ ಶಿಲೆಯ ಸಮುಚ್ಯಯದ ಪ್ರಾಕಾರ ನಿರ್ಮಿಸಿದ್ದು, ಅದು ಅಲ್ಲಲ್ಲಿ ಶಿಥಿಲಗೊಂಡಿದೆ. ದೇವಾಲಯಕ್ಕೆ ಪ್ರಾಕಾರದ ಒಳಗೆ ಪ್ರವೇಶಿಸಲು ಎತ್ತರವಾದ ಸ್ಥಂಭಗಳುಳ್ಳ ಆಕರ್ಷಕ ಮಕರ ತೋರಣವಿದೆ. ಎರಡು ಸ್ಥಂಭಗಳ ಮೇಲೆ ಅಡ್ಡಲಾಗಿ ಕೂಡಿಸಿದ ಪಟ್ಟಿಕೆಯ ಹೊರಮುಖದ ಮಕರತೋರಣದ ಮಧ್ಯದಲ್ಲಿ ಸವ್ಯ ಲಲಿತಾಸನದಲ್ಲಿ ಕುಳಿತಿರುವ ಮೂವರು ದೇವತೆಗಳನ್ನು ಖಂಡರಿಸಲಾಗಿದೆ. ಬದಿಯಲ್ಲಿ ಕುದುರೆ ಸವಾರರು ಒಬ್ಬ ಭಕ್ತೆ ಹಾಗೂ ಮೂವರು ಆನೆ ಸವಾರರಿದ್ದಾರೆ. ಈ ಮಕರ ತೋರಣದ ಒಂದು ಸ್ಥಂಭದಲ್ಲಿ ಕಲ್ಯಾಣ ಚಾಲುಕ್ಯ ದೊರೆ 1ನೇ ಸೋಮೇಶ್ವರನ ಆಳ್ವಿಕೆಯ ಕಾಲದ ಶಾಸನವಿದ್ದು, ಇದು ಮಹಾಸಾಮಂತ   ಜೋಮದೇವರಸನ ರಕ್ಷಕ ಇಂದಪಯ್ಯ ಈ ಮಕರ ತೋರಣವನ್ನು ನಿರ್ಮಿಸಿದನೆಂದು ಉಲ್ಲೇಖಿಸಿದೆ. ಇದರಿಂದಾಗಿ ಮಾಳಚಿ ದೇವಾಲಯವು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ, ನಂತರದಲ್ಲಿ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಈ ದೇವಾಲಯದ ಇತರೆ ಅಭಿವೃದ್ದಿಗಳಾಗಿರುವ ಸಂಗತಿಯನ್ನು ಗುರುತಿಸಬಹುದು.
“ಕಾಳಿಗೆ, ಕಾಳರಾಕ್ಷಸಿಗೆ, ರೌದ್ರೆಗೆ,
ಭೈರವಿ ಗುಗ್ರೇಗಾ ಮಹಾಕಾಳಿಗೆ,
ಕಾಳಯೋಗಿನಿಗೆ, ಮಾಲಿಚದೇವತೆಗಿನ್ದರಂ” ಎಂಬುದಾಗಿ ಇಲ್ಲಿನ ಶಾಸನವೊಂದು ಮಾಳಚಿದೇವಿಯ ವಿವಿಧ ರೂಪಗಳನ್ನು ವರ್ಣಿಸಿದೆ. ದೇವಿಹೊಸವೂರಿನ ಮಾಳಚಿದೇವಿ ಆ ಕಾಲದ ಪ್ರಸಿದ್ದ ಶಕ್ತಿದೇವತೆಯಾಗಿದ್ದು, ಸಹಜವಾಗಿಯೆ ಅಪಾರ ಭಕ್ತಸಮೂಹವನ್ನು ಹೊಂದಿದ್ದಳು. ಇವಳ ಆಶೀರ್ವಾದ ಪಡೆದು ಕೃತಾರ್ಥರಾಗಲು ಅರಸರು, ಸಾಮಂತರು, ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆಹೊತ್ತು ಹಲವಾರು ದಾನದತ್ತಿಗಳನ್ನು ನೀಡುತ್ತಿದ್ದರು. ಕಲ್ಯಾಣದ ಚಾಲುಕ್ಯ ದೊರೆ 2ನೇ ಜಗದೇಕಮಲ್ಲನ ಕಾಲದ ಇಲ್ಲಿನ ಶಾಸನವು ದಂಡನಾಯಕ ರೇಚರಸ ಬನವಾಸಿ-12000ವನ್ನು ಆಳುತ್ತಿದ್ದ ಉಲ್ಲೇಖವನ್ನು ಹೊಂದಿದೆ. ದಂಡನಾಯಕ ರೇಚರಸ ಮತ್ತು ಸುಂಕಾಧಿಕಾರಿ ದೇವಧರದಂಡನಾಯಕರು, ಅಲ್ಲಿನ ಮಹಾಜನ ಸಾಸಿರ್ವರ ಸಮ್ಮುಖದಲ್ಲಿ, ದೇವಿಯ ಪರ್ವದಂದು, ಅಗ್ರಹಾರ ದಿವ್ಯಾದ ಪೊಸವೂರಿನ ಮಾಳಚಿದೇವಿಯ ಉಯ್ಯಲ ಪರ್ವಕ್ಕೆ ಭೂದಾನ ಮಾಡಿ, ತನ್ನ ಹರಕೆ ತೀರಿಸಿದ್ದ ಸಂಗತಿಯನ್ನು ಉಲ್ಲೇಖಿಸಿದೆ. ಸಿಂಧರ ಅರಸನು ಇವಳ ಭಕ್ತನಾಗಿದ್ದ ಬಗ್ಗೆ, ಸುಂಕದಾನ ಮತ್ತು ಇನ್ನಿತರ ದಾನಗಳ ಬಗ್ಗೆ ಬೇರೆ ಶಾಸನಗಳಲ್ಲಿ ಉಲ್ಲೇಖನಗಳನ್ನು ಕಾಣಬಹುದು.
ರಾಷ್ಟ್ರಕೂಟರ ಕಾಲದಿಂದಲೂ ಅರಸರು, ಮಾಂಡಳೀಕರು, ಅಧಿಕಾರಿಗಳ ಪ್ರೋತ್ಸಾಹ ಹಾಗೂ ಮಹಾಜನ ಸಾಸಿರ್ವರ ನೇತೃತ್ವದಲ್ಲಿ ಪ್ರಸಿದ್ದ ಶಕ್ತಿದೇವತೆಯ ಆರಾಧನಾ ಕೇಂದ್ರ ಎನಿಸಿದ್ದ ಇದು ಕಲ್ಯಾಣದ ಚಾಲುಕ್ಯರು, ದೇವಗಿರಿಯ ಯಾದವ ದೊರೆಗಳ ಕಾಲದಲ್ಲಿ ಪ್ರಖ್ಯಾತಿಯ ಪರಾಕಾಷ್ಠೆ ತಲುಪಿತ್ತೆನ್ನಬಹುದು. ಆನಂತರದಲ್ಲಿ ಈ ಮಾಳಜಪೀಠ ಕ್ರಮೇಣವಾಗಿ ತನ್ನ ಪ್ರಖ್ಯಾತಿ ಕಳೆದುಕೊಂಡಿದ್ದಿರಬಹುದಾದರೂ, ಇಂದಿಗೂ ಅಪಾರ ಭಕ್ತ ಸಮೂಹವನ್ನು ಈ ದೇವಿ ಹೊಂದಿರುವುದಕ್ಕೆ ದೇವಾಲಯದಲ್ಲಿ ಈಗಲೂ ನಡೆಯುವ ಪೂಜೆ ಹಾಗೂ ಪರ್ವಗಳೇ ಸಾಕ್ಷಿಯಾಗಿವೆ.

ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಸೌಥ್ ಇಂಡಿಯನ್ ಇನ್‍ಸ್ಕ್ರಿಪ್ಸನ್ಸ್ : ಸಂಪುಟ 18, ನ್ಯೂಡೆಲ್ಲಿ, 1975.
2. ಸೂರ್ಯನಾಥ ಕಾಮತ್. (ಸಂ) ಧಾರವಾಡ ಜಿಲ್ಲಾ ಗೆಸೆಟಿಯರ್, ಬೆಂಗಳೂರು, 1995.
3. ಎಂ.ಬಿ. ನೇಗಿನಹಾಳ, ನೇಗಿನಹಾಳ ಪ್ರಬಂಧಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಮಹದೇವ. ಸಿ. ಹಾಗೂ ಇತರರು, ಕರ್ನಾಟಕ ದೇವಾಲಯ ಕೋಶ, ಹಾವೇರಿ ಜಿಲ್ಲೆ, ಹಂಪಿ, 1999.
5. ಭೋಜರಾಜ ಬ. ಪಾಟೀಲ, ನಾಗರಖಂಡ-70 ಒಂದು ಅಧ್ಯಯನ, ಆನಂದಪುರಂ, 1995.

  ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಹಾವೇರಿ-581110.

Thursday, April 9, 2015

ಬ್ರಾಹ್ಮಿ ಲಿಪಿ

Tuesday, February 24, 2015


ಬ್ರಾಹ್ಮಿ ಲಿಪಿ

ಭಾರತೀಯ ಲಿಪಿಗಳ ಮಾತೆ ಬ್ರಾಹ್ಮಿ

                  ಭಾರತದಲ್ಲಿ ಈವರೆಗೆ ಅರ್ಥೈಸಿರುವ  ಅತಿಪುರಾತನ ಲಿಪಿಗಳಲ್ಲಿ ಬ್ರಾಹ್ಮಿ ಪ್ರಮುಖವಾದುದು. ಅದಕ್ಕೆ ಮುಂಚೆ  ಚಿತ್ರಲಿಪಿಗಳು ಮತ್ತು ಆದಿಮಾನವನ ಬರಹಗಳು ಕಂಡುಬಂದಿವೆ. ಆದರೆ ಪೂರ್ಣವಾಗಿ ಅರ್ಥೈಸಲು ಆಗಿಲ್ಲ ಹರಪ್ಪ  ನಾಗರೀಕತೆ ಪ್ರದೇಶದಲ್ಲಿ ದೊರೆತಿರುವ ಅನೇಕ ಲಿಪಿಗಳು ವಿಶೇಷವಾಗಿ ಮಡಕೆ ಚೂರು ಮತ್ತು ಮುದ್ರೆಗಳೂ. ಅವುಗಳ  ಮೇಲಿನ ಬರಹಗಳನ್ನು ಪೂರ್ಣವಾಗಿ ತಿಳಿಯಲಾಗಿಲ್ಲ.  ಬಹುಶಃ ಅವೇ ಈ  ಬ್ರಾಹ್ಮಿಲಿಪಿಯ ಉಗಮಕ್ಕೆ ಕಾರಣ ವಾಗಿರಬಹುದು. ಈಗ ಹರಪ್ಪ ಲಿಪಿಗಳಿಗೂ ಬ್ರಾಹ್ಮಿ ಲಿಪಿಗೂ ಇರುವ  ಸಂಬಂಧ ಕುರಿತಾದ ಸಂಶೋಧನೆ ಜಾರಿಯಲ್ಲಿದೆ. ಆದರೂ ಎರಡೂ ಲಿಪಿಗಳಲ್ಲಿ ಬಹಳ ವ್ಯತ್ಯಾಸವಿದೆ.  ಹರಪ್ಪ  ಲಿಪಿಗಳು ಭಾವಸೂಚಕಗಳು ಅವು ತಮ್ಮದೆ ಆದ ಧ್ವನಿ ಪ್ರತಿನಿಧಿಸುತ್ತವೆ. ಭಾವವನ್ನು ಸೂಚಿಸುವ ಚಿತ್ರಲಿಪಿಗಳು.ಪ್ರತಿ ಅಕ್ಷರವೂ ಬಹು ಅರ್ಥ ಕೊಡಬಹುದು. ಆದರೆ ಬ್ರಾಹ್ಮಿ ಲಿಪಿಗಳಲ್ಲಿ ಪ್ರತಿ ಅಕ್ಷರವೂ  ಅರ್ಥ ಹೊಂದಿವೆ.ಮೂಲವನ್ನು ಅರಿಯುವ ಇನ್ನೊಂದು ವಿಧಾನವೆಂದರೆ ಬ್ರಾಹ್ಮಿ ಮತ್ತು ಜಗತ್ತಿನ ಇತರೆ ಲಿಪಿಗಳಿಗೆ ಇರುವ ಸಂಬಂಧ ತಿಳಿಯುವುದು..
ಬ್ರಾಹ್ಮಿ ಲಿಪಿಯು ಭಾರತದ ವಿವಿಧ ಪ್ರದೇಶಗಳ ಪ್ರಾದೇಶಿಕ ಭಾಷೆಗಳ ಲಿಪಿಗಳ ಮಾತೆ.  ಅದರಲ್ಲಿ ಎರಡು ವಿಧ. ಉತ್ತರ ಮತ್ತು ದಕ್ಷಿಣದ ಬ್ರಾಹ್ಮಿ.ಅಶೋಕನ ಬ್ರಾಹ್ಮಿಲಿಪಿಯನ್ನು  ಸಂಸ್ಕೃತಪ್ರಾಕೃತ ಮತ್ತು ಪಾಲಿ ಭಾಷೆಗಳನ್ನು ಬರೆಯಲು ಬಳಸಿದ್ದರು.. ಇನ್ನೊಂದು ದಕ್ಷಿಣದ  ತಮಿಳುಬ್ರಾಹ್ಮಿಅದರಿಂದಲೇ ದಕ್ಷಿಣಭಾರತದ ಭಾಷೆಗಳ ಲಿಪಿಗಳು ರೂಪಗೊಂಡವು. ಅವೆರಡೂ ಅಲ್ಲದೆ ಇನ್ನೊಂದು  ಕ್ರಿ.ಪೂರ್ವ ಅವಧಿಯಲ್ಲಿ ಅದೇ ಕಾಲದಲ್ಲಿ ಪ್ರಚಲಿತವಾಗಿದ್ದ ಲಿಪಿ ಇತ್ತು ಅದೇ ಖರೋಷ್ಠಿ. ಅದು ವಾಯವ್ಯಭಾರತ ಆಫ್ಘನಿಸ್ತಾನ ಮತ್ತು ಈಗಿನ ಪಾಕಿಸ್ತಾನ ಪ್ರದೇಶದಲ್ಲಿ ವ್ಯಾಪಕವಾಗಿತ್ತು .    
ಸಾಂಪ್ರದಾಯಿಕ ನಂಬುಗೆಯಂತೆ ಬ್ರಹ್ಮನೇ ಬ್ರಾಹ್ಮೀಲಿಪಿಯ ಜನಕ.ಬೌದ್ದರ ಲಲಿತ ವಿಸ್ತಾರ ಗ್ರಂಥದ ಪ್ರಕಾರ ಬುದ್ದನಿಗೆ ೬೪ ಲಿಪಿಗಳು ತಿಳಿದಿದ್ದವು.ಅದರಲ್ಲಿ ಬ್ರಾಹ್ಮೀ ಮತ್ತು ಖರೋಷ್ಠಿ ಸಹಾ ಸೇರಿವೆ. ಜೈನ ಗ್ರಂಥಗಳ ಪ್ರಕಾರ ಆದಿ ದೇವನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲನೆಯವಳಾದ ಬ್ರಾಹ್ಮಿಗೆ  ಲಿಪಿ ಮತ್ತು ಎರಡನೆಯವಳಿಗೆ ಗಣಿತ ಕಲಿಸಿದನು.ಅದರಿಂದಲೇ ಬ್ರಾಹ್ಮಿ ಎಂಬ ಹೆಸರು ಬಂದಿರಬಹುದು. ಅದರ ಕಾಲಮಾನ ಕ್ರಿ. ಪೂ. ೯ನೆಯ ಶತಮಾನ.
  
. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದವರೆಗೆ ಬ್ರಾಹ್ಮಿ ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳಿಗೆ ವಿದ್ವಾಂಸರು ವಿವಿಧ ಹೆಸರಿನಿಂದ ಕರೆಯುತಿದ್ದರು.ಲಾತ್‌ ,ಲಾಟ್‌( ಸಂಸ್ಕೃತದಲ್ಲಿ ಯಾಸ್ತ ಅಂದರೆ ಅವು ಹೆಚ್ಚಾಗಿ ಸ್ಥಂಭದಮೇಲೆ ಕಂಡುಬರುತಿದ್ದವು.) ದಕ್ಷಿಣ ಅಶೋಕನ್‌ ಇಂಡಿಯನ್‌ಪಾಲಿ, ಮೌರ್ಯನ್‌ ಇತ್ಯಾದಿ.  ಅದಕ್ಕೆ ಬ್ರಾಹ್ಮಿ ಎಂಬ ಹೆಸರಿನ ಸೂಚನೆ ಮೊದಲು ಬೌದ್ಧರ ಮತ್ತು ಜೈನರ ಗ್ರಂಥಗಳ ಮೂಲಕ ಬಂದಿತು.ಲಿಲಾವತಿಸಾರ ಎಂಬ ಗ್ರಂಥದ ಚೀನೀ ಅನುವಾದವಾದ ವಿಶ್ವ ಕೋಶ  ಫಾಯಾನ್‌ಚು ಲಿನ್‌” ’ನಲ್ಲಿ . ಉಲ್ಲೇಖವಾದುದನ್ನು ಟೆರೀನ್ ಡಿ ಲಕೌಪರೀ ಯು ಗಮನಿಸಿದ ಎಡದಿಂದ ಬಲಕ್ಕೆ ಬರೆಯುವ ( ಇಂಡೊ ಪಾಲಿ ಲಿಪಿ ಬ್ರಾಹ್ಮಿ) ಮತ್ತು ಬಲದಿಂದ ಎಡಕ್ಕ ಬರೆಯುವ ಲಿಪಿ ( ಬ್ಯಾಕ್ಟ್ರೊ ಪಾಲಿ, ಅದರಿಂದ ಖರೋಷ್ಟಿ )ಗುರುತಿಸಿಲಾಗಿದೆ.
                  ಬ್ರಾಹ್ಮಿ ಎಂಬ ಹೆಸರನ್ನು ಸ್ಥೂಲವಾಗಿ ಮತ್ತು ಅನುಕೂಲಕ್ಕಾಗಿ ಅಶೋಕನ ಲಿಪಿಗಳನ್ನು ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳನ್ನು 6ನೆಯ ಶತಮಾನದ ಗುಪ್ತರ ಅವಧಿಯವರೆಗೆ ಬಳಕೆ ಮಾಡಿದರು.ನಂತರ ವಿಭಿನ್ನವಾದ  ಪ್ರಾದೇಶಿಕ ಮತ್ತು ಸ್ಥಾನೀಯ ಲಿಪಿಗಳು ಅಭಿವೃದ್ಧಿ ಪಡೆದವು ಅವನ್ನು ಪ್ರತ್ಯೇಕ ಲಿಪಿಗಳೆಂದು ಪರಿಗಣಿಸಲಾಯಿತು. ಅವುಗಳು ಭೌಗೋಲಿಕ ವಿಭಿನ್ನತೆ ಹೊಂದಿದ್ದವು
  ಬ್ರಾಹ್ಮಿ ಲಿಪಿಯ ಮೂಲವು ಭಾರತೀಯ ಲಿಪಿಶಾಸ್ತ್ರದಲ್ಲಿ ಬಹು ಚರ್ಚಿತ ವಿಷಯವಾಗಿದೆ.  ಈ ಲಿಪಿಯ  ಮೂಲ  ಕುರಿತು    ಸ್ಥೂಲವಾಗಿ ಎರಡು ಅಭಿಪ್ರಾಯಗಳಿವೆ.
1.     ದೇಶೀಯ ಮೂಲ                2.     ವಿದೇಶಿ ಮೂಲ
    ವಿದ್ವಾಂಸರಾದ ಅಲೆಕ್ಜಾಂಡರ್‌ ಕನ್ನಿಂಗ್‌ಹ್ಯಾಮ್‌ಜಿ.ಎಚ್‌. ಓಜಾಆರ್‌.ಬಿ ಪಾಂಡೆ ಮೊದಲಾದವರ ಪ್ರಕಾರ ಬ್ರಾಹ್ಮಿಯು ದೇಶಿಯ ಜನ್ಯ ಲಿಪಿ.ಆದರೆ ಅದರ ಬೆಳವಣಿಗೆಯ ಕುರಿತು ನಿರ್ಧಿಷ್ಟ ವಿವರಣೆ ಇಲ್ಲ ಆಂಗ್ಡನ್‌.ಎಸ್‌. ಹಂಟರ್‌ಜಿ.ಆರ್ಕನ್ನಿಂಗ್‌ಹ್ಯಾಮ್ 1931,ರಲ್ಲಿ ಇಂಡಸ್‌ಲಿಪಿಯ ಮೂಲವನ್ನು ತಮಗೆ ದೊರಕಿದ ಒಂದು ಮುದ್ರೆಯ ಆಧರಿಸಿಅದರ   ಮೂಲಕ  ವಿವರಣೆ ನೀಡಲು ಯತ್ನಿಸಿದರು.ಇದು ಚಿತ್ರಲಿಪಿಯಾಧಾರಿತವಾಗಿದ್ದುಹ-ಹಸ್ತ ರ-ರಜ್ಜು ವ- ವೀಣೆಮ-ಮುಖ ಮೊದಲಾದ ಪದಗಳ ಮೊದಲ ಅಕ್ಷರಗಳು  ಸಂಕೇತವಾದವು.. ಈ ಲಿಪಿಯು ಅಶೋಕನ ಆಸ್ಥಾನದಲ್ಲಿ ಇದ್ದ  ವೈಯಾಕರಣಿಗಳ ಕೊಡುಗೆ ಎಂಬ ಸಿದ್ಧಾಂತ ಮಂಡಿಸಿದರು.ಎನ್‌.ಪಿ.  ರಷ್ಟೋಗಿಯವರು ವೇದ ಕಾಲದ ಜ್ಯಾಮಿತಿ ಚಿಹ್ನೆಗಳೇ ಬ್ರಾಹ್ಮಿ ಲಿಪಿಯ ಉಗಮಕ್ಕೆ ಕಾರಣ ಎಂಬ ವಾದ ಮಂಡಿಸಿದರು.ಡಾ. ಭಂಡಾರ್‌ಕರ್‌ ಅವರು ನವಶಿಲಾಯುಗದ ಕುಂಭಗಳ ಮೇಲೆ ಕಂಡು ಬರುವ ಚಿಹ್ನೆಗಳಿಂದ ಬ್ರಾಹ್ಮೀ ಜನಿಸಿರಬಹುದು ಎಂದಿರುವರು.
ಜೇಮ್ಸ್‌ ಪ್ರಿನ್ಸೆಪ್‌ನು ಮೊದಲ ಬಾರಿಗೆ ಬ್ರಾಹ್ಮಿಯ ಮೂಲ ಗ್ರೀಕ್‌ಲಿಪಿ ಎಂಬ ವಾದವನ್ನು ಮಂಡಿಸಿದ. ನಂತರ ಕೆ. ಒಟ್ಟೊಫ್ರೈಡ್‌ ಮುಲ್ಲರ್‌ಮತ್ತು ಜೆ ಹ್ಯಾವಲ್‌ರ ಅದನ್ನು ಪ್ರತಿಪಾದಿಸಿದರು. ಅವನು ಬ್ರಾಹ್ಮಿಯಆರು ಅಕ್ಷರಗಳು( ,,,ಥ )ಮತ್ತು ನ ಗ್ರೀಕ್‌ನಿಂದ ನಿಷ್ಪನ್ನವಾಗಿವೆ ಎಂಬುದನ್ನು  ಸಾಧಿಸಲು ಯತ್ನಿಸಿದನು. ಅವುಗಳ ಸಂವಾದಿ ಅಕ್ಷರಗಳನ್ನು ಗ್ರೀಕ್‌ನಲ್ಲಿ ಗುರುತಿಸಿದ. ಅದರಂತೆ ಇತರೆ ಅಕ್ಷರಗಳು ಖರೋಷ್ಟಿ ಮತ್ತು ಅರಾಮಿಕ್‌ ಲಿಪಿಗಳ ಮೂಲದವೆಂದು ಮಂಡಿಸಿದ. ಫಾಕ್‌ನ ಪ್ರಕಾರ ಅಶೋಕನ ಕಾಲದಲ್ಲಿ ಉದ್ದೇಶ ಪೂರ್ವಕವಾಗಿ ಖರೋಷ್ಟಿ ಮತ್ತು ಗ್ರೀಕ್‌ ಲಿಪಿ ಮಾದರಿಯಲ್ಲಿ ಬ್ರಾಹ್ಮಿ ಲಿಪಿ ರೂಪಿಸಲಾಯಿತು ಎಂದು ವಾದಿಸಿದ. ವಿಶೇಷವಾಗಿ ಬರಹದ ದಿಕ್ಕು,ಹ್ರಸ್ವ ಮತ್ತು ದೀರ್ಘ ಸ್ವರಗಳ ವ್ಯತ್ಯಾಸ, ಮತ್ತು ಕೆಲ ಅಕ್ಷರಗಳ ನಿರ್ಧಿಷ್ಟ ಸ್ವರೂಪ ವಿಶೇಷವಾಗಿ ಬ್ರಾಹ್ಮಿಯ ಮತ್ತು ಗ್ರೀಕ್‌ನ ತೀಟ ,ಬ್ರಾಹ್ಮಿಯ     ಮತ್ತು ಗ್ರೀಕ್‌   ಗಮ್ಮಾ ಗಳ ಸಾಮ್ಯತೆ ಯನ್ನು ಎತ್ತಿತೋರಿಸಿದ.
ಆದಾಗ್ಯೂ ಇವು ಅಪವಾದವಾಗಿರಬಹುದು ಮತ್ತು ಹ್ರಸ್ವ ಮತ್ತು ಧೀರ್ಘ ಸ್ವರಗಳ ಸಾಮ್ಯತೆಯು ಗ್ರೀಕ್‌ ಪ್ರಭಾವಕ್ಕೆ ಒಳಗಾಗುವ  ಸಾಧ್ಯತೆ ಕಡಿಮೆ. ಸ್ವರಗಳ ವ್ಯತ್ಯಾಸವು ದೇಶೀಯವಾಗಿಯೇ ಇರಬಹುದು ಕಾರಣ.
ಸ್ವರಗಳು

ಹ್ರಸ್ವ ಮತ್ತು ಧೀರ್ಘ ಸ್ವರಗಳು ವ್ಯತ್ಯಾಸವು  ಪೂರ್ಣವಾಗಿ ಮೂಲದ ತುಸು ಬದಲಾವಣೆಯಿಂದ ನಂಥೃ ರೂಪಿತವಾಗಿವೆ  ( ಆದರೆ ಗ್ರೀಕ್‌ ಸ್ವರಗಳುಅವುಗಳನ್ನು ಪೂರ್ಣವಾಗಿ ವಿಭಿನ್ನ ಸಂಬಂಧವಿಲ್ಲದ ಸಂಕೇತಗಳೇ ಪ್ರತಿನಿಧಿಸುತ್ತವೆ. (  (e)/ ()).ಸ್ವರಗಳ ಸಂಕೇತಗಳ ಸ್ವರೂಪವನ್ನು ವಿವೇಚಿಸಿದರೆ ಬ್ರಾಹ್ಮಿಯು ಗ್ರೀಕ್‌ಮೂಲದ್ದು ಎನ್ನುವ ವಾದ ಬಿದ್ದು ಹೋಗುತ್ತದೆ..

:  ಲೆನೊ ರ್ಮಾಂಟ್ 1875 ರಲ್ಲಿ  ಮತ್ತು ಡೀಕೆ  1877ರಲ್ಲಿ ಕೆಲವು ಬ್ರಾಹ್ಮಿ ಅಕ್ಷರಗಳು ಮತ್ತು  ಅವಕ್ಕೆ ಸಂವಾದಿಯಾದ ದಕ್ಷಿಣ ಅರೆಬಿಯಾದ ಹಿಮಾಯರಿಟಿಕ್‌ ಅಕ್ಷರಗಳ ನಡುವಿನ ಹೋಲಿಕೆಯನ್ನು ಗಮನಿಸಿದರು. ಐಸಾಕ್‌ಟೇಲರ್‌ನು ಅವುಗಳ ತುಲನಾತ್ಮಕ  ಕೋಷ್ಠಕವನ್ನೇ ತಯಾರಿಸಿದನು. ಅವನ ವಾದದ ಪ್ರಮುಖ ಅಂಶ ಲಿಪಿಗಳನ್ನು ಬರೆಯುವ ದಿಕ್ಕು.ಮತ್ತು ಕೆಲವು ಅಕ್ಷರಗಳ ಹೋಲಿಕೆ. ಬ್ರಹ್ಮಿಯ  ba   ಮತ್ತು ಸಬಿಯನ್‌ betda , daletma ಮತ್ತು memಇತ್ಯಾದಿ.  ಟೇಲರ್‌ ಐತಿಹಾಸಿಕ ಮತ್ತು ಭೌಗೋಳಿಕ ಆಧಾರದ ಮೇಲೆ ತನ್ನ ವಾದನ್ನು ಮಂಡಿಸಿದ.. “ಕ್ರಿ. ಪೂ. 10ನೆಯ ಮತ್ತು ಶತಮಾನದಿಂದ 3ನೆಯ ಶತಮಾನದ ವರೆಗೆ ಯೆಮೆನ್‌ ಭಾರತೀಯ ವಸ್ತುಗಳನ್ನು ಯುರೋಪಿನೊಡನೆ ವಿನಿಮಯ ಮಾಡಿಕೊಳ್ಳುವ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿತ್ತು”. ಆದ್ದರಿಂದ ಅಲ್ಲಿ ಭಾರತೀಯ ಮತ್ತು ಸಬಿಯನ ಅಕ್ಷರಗಳ ಚಲಾವಣೆಗೆ ಅವಕಾಶ ಹೆಚ್ಚಾಗಿದ್ದಿತು.ಈ ಎಲ್ಲ ಅನುಕೂಲಗಳ ಜೊತೆ ಈ ವಾದದಲ್ಲಿ ಕೆಲವು ದೋಷಗಳೂ ಇವೆ.ಬರಹದ ದಿಕ್ಕು ಕುರಿತಾದ ವಾದ ನಿಲ್ಲುವುದಿಲ್ಲ. ಅಲ್ಲದೆ ಎರಡರಲ್ಲೂ ಹೋಲಿಕೆ ಇರುವ ಕೆಲವು ಅಕ್ಷರಗಳು ಇರುವುದು ಬ್ರಾಹ್ಮಿಯು ಸೆಮಿಟಿಕ್‌ನಿಂದ ಜನಿಸಿತು ಎಂದು ಹೇಳಲು ಆಗುವುದಿಲ್ಲ ಅಲ್ಲದೇ ಅವೆರಡೂ ಒಂದು ಸಾಮಾನ್ಯವಾದ ಇನ್ನೊಂದು ಪುರಾರತನ ಲಿಪಿಯಿಂದ ಜನಿಸಿರಬಹುದು.ಅವುಗಳ ಚಾರಿತ್ರಿಕ ಮತ್ತು ಭೌಗೋಲಿಕ ಸಂಬಂಧದ ವಾದವೂ ಗಟ್ಟಿಯಾಗಿ ನಿಲ್ಲದು ಕಾರಣ ಅವುಗಳ ಪ್ರಾಚೀನತೆಯ ಬಗೆಗೆ ಇನ್ನೂ ಖಚಿತತೆ ಇಲ್ಲ.
ಫೊನಿಷಿಯನ್‌: ಉಲ್ರಿಚ್‌ ಫೆಡ್ರಿಕ್‌ಕೊಪ್‌  1821 ರಲ್ಲಿಐ ಇಂಡಿಕ್‌ ಲಿಪಿಗಳಿಗೂ ಮತ್ತು ಉತ್ತರ ಸೆಮಿಟಿಕ್‌ಲಿಪಿಗಳಿಗೂ ಇರುವ ಹೋಲಿಕೆ,,ಗಮನಿಸಿದ್ದನು.ಅದರ ಮೇಲೆ ಅಧಿಕೃತವಾಗಿ ಕೆಲಸ ಮಾಡಿದ್ದು ಅಲ್ಬರ್ಟ ವೇಬರ್‌. ಅವನು ಫೊನಿಷಿಯನ್‌ ಲಿಪಿ ಮತ್ತು ಬ್ರಾಹ್ಮಿಲಿಪಿಗಳ  ನಡುವಿನ ಹೋಲಿಕೆಯ ವಿವರ ಅಧ್ಯಯನ ಮಾಡಿದ. ಬುಹ್ಲರ್‌ ಉತ್ತರ ಸೆಮಿಟಿಕ್‌ ಲಿಪಿಗಳ ಗುಂಪಿನಿಂದ  ತುಸು ಬದಲಾಯಿಸಿ ಬ್ರಾಹ್ಮಿಲಿಪಿಗಳನ್ನು ರೂಪಿಸುವ ಯತ್ನದ ಅವನ ವಿಧಾನವನ್ನು ವಿದ್ವಾಂಸರು ತೀಷ್ಣವಾಗಿ ಟೀಕಿಸಿದರು.  ಒಝಾರ ಪ್ರಕಾರ ಈ ವಿಧಾನದಿಂದ ಯಾವುದೇ ಲಿಪಿಯಿಂದ ಮತ್ಯಾವುದೇ ಲಿಪಿಯನ್ನು ಪಡೆಯಲು ಸಾಧ್ಯ ಎಂದು ತೋರಿಸಿದರು .ಇನ್ನೊಂದು ಅಂಶವೆಂದರೆ ಸೆಮಿಟಿಕ್‌ಲಿಪಿಗಳನ್ನು  ಬಲದಿಂದ ಎಡಕ್ಕೆ ಬರೆಯುವರು. ಅದೇ ಬ್ರಾಹ್ಮಿ  ಲಿಪಿಯು ಎಡದಿಂದ ಬಲಕ್ಕೆ ಬರೆಯಲಾಗುವುದು.ಬುಹ್ಲರ್‌ತನ್ನ ವಾದದ ಆಧಾರವಾಗಿ ಮಧ್ಯಪ್ರದೇಶದ  ಎರಾನ್‌ನಲ್ಲಿ ದೊರೆತ ನಾಣ್ಯದ ಮೇಲಿನ ಬರಹದ ಉಲ್ಲೇಖ ನೀಡಿದ.ಅದರಲ್ಲಿಬರಹವು ಎಡದಿಂದ ಬಲಕ್ಕೆ ಇದೆ.ಆದರೆ ಇದು ಅತಿ ವಿರಳವಾದ ಸಂದರ್ಭ ಆದ್ದರಿಂದ ಸಾಮಾನ್ಯವಾದುದಲ್ಲ.ಆದರೆ ಇತ್ತೀಚೆಗೆ ದೊರೆತಿರುವ ಎರ್ರಾಗುಡಿ ಅಶೋಕನ ಶಾಸನ, ( ಆಂಧ್ರ ಪ್ರದೇಶ) ಮತ್ತು ಶ್ರೀಲಂಕಾದ ಗುಹೆಗಳಲ್ಲಿನ  ಬರಹಗಳು  ಬಲದಿಂದ ಎಡಕ್ಕೆ ಇವೆ.ಮತ್ತು ಇದರಿಂದ ಪುರಾತನ ಸೆಮಿಟಿಕ್‌ಲಿಪಿಗಳ ಬರಹದ ವಿಧಾನದ ಪ್ರಭಾವ ಇರುವುದು ಕಂಡು ಬರುವುದು. ಆದರೆ ಶ್ರೀಲಂಕಾದ ಬರಹಗಳ ಅಶೋಕನ ಕಾಲಕ್ಕಿಂತ ಈಚಿನವು ಆದ್ದರಿಂದದ ಅವು ಸ್ಥಳೀಯ ಬದಲಾವಣೆಗಳು ಎಂದು ಳ್ಳಬಹುದು. ಅಲ್ಲದೆ ಬರಹದ ದಿಕ್ಕು ಒಂದನ್ನೇ ಏಕಮಾತ್ರ ಅಂಶವಾಗಿ ಪರಿಗಣಿಸಬಾರದು . ಕಾರಣ ಅನೇಕ ಸೆಮಿಟಿಕ್‌ನಿಂದ ಹುಟ್ಟಿದ ಲಿಪಿಗಳನ್ನು ಕೂಡಾ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಬರೆಯಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಸೆಮೆಟಿಕ್‌ ಲಿಪಿಗಳಲ್ಲಿ  ಸ್ವರಗಳು ಇಲ್ಲ.  ಬ್ರಾಹ್ಮಿಯಲ್ಲಿ ಸ್ವತಂತ್ರ ಸ್ವರ ಸಂಕೇತಗಳಿವೆ.
 ಎ.ಸಿ. ಬರ್ನೆಲ್‌  1874ರಲ್ಲಿ ಈ ಸಿದ್ಧಾಂತವನ್ನು ಮುಂದಿಟ್ಟನು ಬ್ರಾಹ್ಮಿಯು ಅರಮೇಯಿಕ್‌ ಲಿಪಿ ಪ್ರಭಾವ ಹೊಂದಿದೆಯೇ ವಿನಃ  ಅದರಿಂದ ಜನಿಸಿದ್ದಲ್ಲ.ಅನೇಕ ಬ್ರಾಹ್ಮಿ ಅಕ್ಷರಗಳನ್ನು ಅರೆಮಿಕ್‌ನಿಂದ  ಫೊನಿಷಿಯನ್‌ಗಿಂತ ಹೆಚ್ಚಾಗಿ ರೂಪಿಸಬಹುದು.ಐತಿಹಾಸಿಕವಾಗಿ ಮತ್ತು ಕಾಲಾನುಗತವಾಗಿಯೂ ಈ ವಾದವು ಸಬಲವಾಗಿದೆ. ಅರಮೇಯಿಕ್ ಬಾಷೆ ಮತ್ತು ಲಿಪಿಯನ್ನು ವ್ಯಾಪಕವಾಗಿ  ಪೂರ್ವದ ಮತ್ತು ಇರಾನಿನ ಪ್ರದೇಶಗಳಲ್ಲಿ ಬಳಸಲಾಗುತಿತ್ತು.ಅಕಾಮೆನಿಯನ್ ಸಾಮ್ರಾಜ್ಯದ ಆಡಳಿತ ಭಾಷೆಯನ್ನಾಗಿ ಬಳಸಲಾಗುತಿತ್ತು. ಅದೂ ಅಲ್ಲದೆ ಆರು ಅರಾಮಿಕ್‌ಲಿಪಿಯಲ್ಲಿನ ಮೌರ್ಯರ ಶಾಸನಗಳು  ಈ  ವಾದಕ್ಕೆ ಬೆಂಬಲ ನೀಡುತ್ತವೆ.ಆದರೆ ಮೊದಲು ಖರೋಷ್ಠಿಯು ಹುಟ್ಟಿದನಂತರ ಅದರಿಂದ ಬ್ರಾಹ್ಮಿ ಜನಿಸಿತು ಎನ್ನುವುದು ಸರಿ ಎನಿಸುವುದಿಲ್ಲ ಕಾರಣ ಪೂರ್ಣ ಭಿನ್ನವಾದ ಲಿಪಿಯೊಂದು ರೂಪಗೊಳ್ಳುವುದು ಸಾಧ್ಯವಿಲ್ಲಆದ್ದರಿಂದ ಆ ವಾದ ನಿಲ್ಲುವುದಿಲ್ಲ.
ಮೇಲಿನ ಎಲ್ಲ ಚರ್ಚೆಯಿಂದ ವ್ಯಕ್ತವಾಗುವುದು ಏನೆಂದರೆ ಅದರ ಮೂಲವನ್ನು ಖಚಿತವಾಗಿ ಹೇಳಲಾಗುದು. ಅದಕ್ಕೆ ಇನ್ನೂ ಬಲವಾದ ಆಧಾರಗಳು ಅಗತ್ಯ.ಮೇಲ್ನೋಟದ ಹೋಲಿಕೆಯಿಂದ ಏನನ್ನು ನಿರ್ಧರಿಸಲಾಗುವುದು.. ಅನೇಕ ಸಾಧ್ಯತೆಗಳಿವೆ.ಅವೆರಡೂ ಒಂದೇ ಮೂಲದಿಂದ ಬಂದವಾಗಿರಬಹುದು ಅಥವ ಪರಸ್ಪರ ಪ್ರಬಾವ ಬೀರಿಬಹುದು. ಅವುಗಳ ಪ್ರಾದೇಶಿಕ  ಪ್ರಭಾವವು ವಿಕಾಸಕ್ಕೆ ಕಾರಣವಿರಬಹುದು . ಇವೆಲ್ಲದರಲ್ಲಿ ಅರಾಮಿಕ್‌ಮೂಲವೇ  ಹೆಚ್ಚು ಸಂಭವನೀಯ ಎನಿಸಿದೆ. ಆದರೂ ಪ್ರತಿ ಅಕ್ಷರದ ಉಗಮವನ್ನು ನಿರ್ಧರಿಸುವುದ ಸಾಧ್ಯವೆನಿಸುವುದಿಲ್ಲ.
ಬ್ರಾಹ್ಮಿಯ ಮೂಲದ ಬಗ್ಗೆ ಏನೆ ಚರ್ಚೆಇದ್ದರೂ ಆಧುನಿಕ ಭಾರತೀಯ ಭಾಷೆಗಳ ತಾಯಿ ಬ್ರಾಹ್ಮಿ ಎಂಬುದು ಸುಸ್ಪಷ್ಟ. ಅದನ್ನು ವರ್ಣಮಾಲೆಯೇ ದೃಢಪಡಿಸುವುದು
ಸ್ವರಗಳು
ಅಶೋಕನ ಕಾಲ  (  ಕ್ರಿ.ಪೂ.304–232 ) ದಿಂದಲೇ ನಮಗೆ ಖಚಿತವಾದ ಬ್ರಾಹ್ಮಿ ಲಿಪಿಗಳು ದೊರಕಿವೆ.

ಸ್ವರಗಳು 

ಕಾಲಾನುಕ್ರಮದಲ್ಲಿ  ದೀರ್ಘಾಕ್ಷರಗಳೂ ಸೇರಿದವು.

ಪ್ರಾಚೀನ ಅಶೋಕನ ಲಿಪಿಗಳಲ್ಲಿ ಆರು ಸ್ವರಗಳು ಮಾತ್ರ ಇವೆ. ಈ, ಊ ,ಋ ಏ, ಐ,  ಕಾಲುಕ್ರಮದಲ್ಲಿ ಬಂದು ಸೇರಿವೆ.ಅನುನಾಸಿಕ ಇದ್ದಿತು ಇ, ಉ, ಎ ಓ ಗಳನ್ನು ಸಂದರ್ಭಾನುಸಾರ ಹ್ರಸ್ವ ಅಥವ ಧೀರ್ಘ ಸ್ವರವಾಗಿ ಓದಿಕೊಳ್ಳ ಬೇಕಾಗುತಿತ್ತು.
ವರ್ಗೀಯ ವ್ಯಂಜನಗಳು ೨೫



ಅವರ್ಗೀಯ ವ್ಯಂಜನಗಳು  ೮

   ಅವರ್ಗೀಯ ವ್ಯಂಜನಗಳು  ೮
 ಬ್ರಾಹ್ಮೀ ಲಿಪಿಯನ್ನು ಮೂಲತಃ ಪ್ರಾಕೃತ ಭಾಷೆಯನ್ನು ಬರೆಯಲು ಬಳಸಿದರು. ಆದ್ದರಿಂದಮೊದಮೊದಲ ಲಿಪಿಯಲ್ಲಿ  ಋ. ಔ ಮತ್ತು ಳ ಅಕ್ಷರಗಳು ಕಂಡು ಬರುವುದಿಲ್ಲ
 ಈಗಿನ ರೂಪಾಂತರಿತ ಲಿಪಿಗಳ ಗ ಮತ್ತು ಸ ಗಳು ಮಾತ್ರ ತುಸು ಮಟ್ಟಿಗೆ ಮೂಲ ಅಕ್ಷರಗಳನ್ನು ಹೋಲುತ್ತವೆ.
ಕಾಗುಣಿತ  ಬಹು ಸರಳವಾಗಿ ರೂಪಿಸುತಿದ್ದರು ವ್ಯಂಜನಗಳಿಗೆ ಮೇಲೆ ಅಥವ ಕೆಳಗೆ ಎಡ,  ಅಥವಾ ಬಲ ಭಾಗದಲ್ಲಿ ಸಣ್ಣ ಗೆರೆಗಳನ್ನು ಸೇರಿಸಲಾಗುತಿತ್ತು.
  ಬ್ರಾಹ್ಮೀ ಲಿಪಿಯ ಆಯ್ದ ಅಕ್ಷರಗಳ ಬಳ್ಳಿ ( ಕಾಗುಣಿತ)

ಇದೇ ರೀತಿಯಲ್ಲಿ ಎಲ್ಲ ವ್ಯಂಜನಗಳಿಗೂ ಕಾಗುಣಿತವನ್ನು ಬರೆಯಬಹುದು
  ಒತ್ತಕ್ಷರಗಳಿಗೆ ಪ್ರತ್ಯೇಕ ಚಿಹ್ನೆಗಳಿರಲಿಲ್ಲ.
,ಯಾವುದೇ ಒತ್ತಕ್ಷರದ ಕೆಳಗೆ ಮೇಲಿನ ಅಕ್ಷರಕ್ಕ ಅಂಟಿಕೊಂಡಂತೆ ಚಿಕ್ಕದಾಗಿ ಬರೆಯುವುದರಿಂದ ಸಂಯುಕ್ತಾಕ್ಷರಗಳ ರಚನೆ ಯಾಗುವುದು
   
             
ಗುಹಾಶಾಸನದಲ್ಲಿನ ಒಂದು ಸಾಲು


ಭಾರತದಲ್ಲಿ ಕ್ರಿ. ಪೂ. ಸಹಸ್ರಾರುವರ್ಷಗಳಿಂದ ಸಮೃದ್ಧ ಸಾಹಿತ್ಯವಿದರೂ ಅವೆಲ್ಲ ಮೌಖಿಕವಾಗಿದ್ದವು. ವೇದಗಳ ಕಾಲ ಕ್ರಿ. ಪೂರ್ವ ೧೭೦೦ರಿಂದ ೧೧೦೦. ಆದರೆ ಅವು ಲಿಪಿಯಾಗಿ ಇಳಿಯಲಿಲ್ಲ. ರಾಮಾಯಣದ   ಕಾಲ ಕ್ರಿ. ಪೂ ೫ – ೪ ನೆಯ ಶತಮಾನ.  ಗ್ರೀಕ್‌    ಮಹಾಕಾವ್ಯಗಳೆರಡರನ್ನೂ ಒಟ್ಟುಗೂಡಿಸಿದರೂ  ಅದರ ಅರ್ಧದಷ್ಟೂ ಇಲ್ಲ. ಹಾಗಿದ್ದರೂ ಲಿಪಿ ಇರಲಿಲ್ಲ., ಅದೇ ಅವಧಿಯ ಕಾಳಿದಾಸ, ಪಾಣಿನಿ,  ಪತಂಜಲಿ ಮತ್ತು ಕೌಟಿಲ್ಯ ಕ್ರಿ. ಪೂ. ಶತಶತಮಮಾನಗಳ ಹಿಂದೆಯೆ  ಗ್ರಂಥ ರಚನೆ ಮಾಡಿದ್ದರೂ ನಮಗೆ ಲಿಪಿ ದೊರಕುವುದ ಮಾತ್ರ  ಅಶೋಕನ ಕಾಲದಿಂದ ಈಚೆಗೆ.ಕಾರಣ ಬರವಣಿಗೆ ನಿಷಿದ್ಧವೆನ್ನುವ ಅಂದಿನ ನಂಬಿಕೆ.  ಅಶೋಕನು ಬೌಧ್ಧ ಧರ್ಮವಾವಲಂಬಿಯಾದ ಮೇಲೆ ಆ ನಿಷೇಧದಿಂದ ಹೊರ ಬಂದು ಮೊದಲ ಬಾರಿಗೆ ಶಾಸನ ಗಳನ್ನು ಸ್ತಂಭ, ಗುಹೆ ಮತ್ತು ಬಂಡೆಗಳ ಮೇಲೆ ಬರೆಸ ತೊಡಗಿದ. ಆದ್ದರಿಂದ  ಅವೇ ನಮಗೆ ದೊರೆತಿರುವ ಲಿಪಿಯ ಅತಿಪ್ರಾಚೀನ ಮಾದರಿಗಳು. ಅವುಗಳ ಭಾಷೆ ಬೇರೆ ಬೇರೆ ಯಾದರೂ ಲಿಪಿ ಮಾತ್ರ ಒಂದೇ ಅದೇ ಬ್ರಾಹ್ಮೀಲಿಪಿ.  ಆ ಲಿಪಿಗಳು ಮುಂದೆ ಮಾರ್ಪಾಟು ಹೊಂದುತ್ತಾ  ಭಾರತ ಮತ್ತು ದಕ್ಷಿಣ ಏಷಿಯಾದಲ್ಲಿ ಅನೇಕ ಲಿಪಿಗಳಾಗಿ ರೂಪಗೊಂಡವು. ಬ್ರಾಹ್ಮೀ ಲಿಪಿಯ ಹಲವುಶಾಸನಗಳನ್ನು ಗಮನಿಸ ನಂತರ ಕ್ರಮೇಣ ಕನ್ನಡ ಲಿಪಿ  ಹಲವು ಹಂತದಲ್ಲಿ ಲಿಪಿ ವಿಕಾಸವಾದುದನ್ನು ಅರಿಯೋಣ.